ರಾಮನಗರ

ವಿಕಿಪೀಡಿಯ ಇಂದ
(ರಾಮನಗರ ಜಿಲ್ಲೆ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ರಾಮನಗರ
India-locator-map-blank.svg
Red pog.svg
ರಾಮನಗರ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ರಾಮನಗರ ಜಿಲ್ಲೆ
ನಿರ್ದೇಶಾಂಕಗಳು 12.72° N 77.3° E
ವಿಸ್ತಾರ
 - ಎತ್ತರ
 km²
 - 747 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
79,365
 - /ಚದರ ಕಿ.ಮಿ.
This article is about the municipality in India. For its namesake district, see Ramanagar district.
ರಾಮನಗರ
Silk city
City
ರಾಮನಗರ is located in Karnataka
ರಾಮನಗರ
ರಾಮನಗರ
Location in Karnataka, India
Coordinates: 12°43′23″N 77°17′10″E / 12.723°N 77.286°E / 12.723; 77.286Coordinates: 12°43′23″N 77°17′10″E / 12.723°N 77.286°E / 12.723; 77.286
Country  India
State ಕರ್ನಾಟಕ
District ರಾಮನಗರ
ಎತ್ತರ ೭೪೭
ಜನಸಂಖ್ಯೆ (2001)
 • Total ೭೯,೩೬೫
Languages
 • Official ಕನ್ನಡ
ಸಮಯ ವಲಯ IST (UTC+5:30)

ರಾಮನಗರ ಕರ್ನಾಟಕದ ಒಂದು ಜಿಲ್ಲಾ ಕೇಂದ್ರ. ಈ ಮೊದಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗವಾಗಿದ್ದ ರಾಮನಗರ ೨೦೦೭ರಲ್ಲಿ ಪ್ರತ್ಯೇಕ ಜಿಲ್ಲೆಯಾಯಿತು. ರಾಮನಗರವು ರೇಷ್ಮೆ ನಗರವೆಂದು ಖ್ಯಾತಿಗಳಿಸಿದೆ. ರಾಮನಗರ ಜಿಲ್ಲೆಯಲ್ಲಿನ ತಾಲ್ಲೂಕುಗಳೆಂದರೆ ಚನ್ನಪಟ್ಟಣ, ರಾಮನಗರ, ಮಾಗಡಿ, ಕನಕಪುರ.

ರಾಮನಗರದ ವಿಶೇಷತೆ[ಬದಲಾಯಿಸಿ]

  • ಕರ್ನಾಟಕಕ್ಕೆ ಮೂವರು ಮುಖ್ಯಮಂತ್ರಿಗಳನ್ನು ನೀಡಿದ ಜಿಲ್ಲೆಯಾಗಿದೆ. ಅವರೆಂದರೆ ವಿಧಾನ ಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ, ಮೊಟ್ಟ ಮೊದಲ ಕನ್ನಡದ ಪ್ರಧಾನಿಯೆಂಬ ಹೆಗ್ಗಳಿಕೆಗೆ ಪಾತ್ರವಾದ ಹೆಚ್.ಡಿ.ದೇವೇಗೌಡ, ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪುತ್ರ ಹೆಚ್.ಡಿ.ಕುಮಾರಸ್ವಾಮಿ ರಾಮನಗರ ಜಿಲ್ಲೆಯ ಪ್ರಮುಖ ಸ್ಥಳಗಳೆಂದರೆ ಜಾನಪದ ಲೋಕ , ಕೆಂಗಲ್, ದೊಡ್ಡ ಮಳೂರು.
  • ರಾಮನಗರ ಮಿನಿ ವಿಧಾನ ಸೌಧ ವನ್ನು ಹೊಂದಿದೆ. ಹೆಚ್ಚಾಗಿ ಬೆಟ್ಟ ಗುಡ್ಡಗಳಿಂದ ಕೂಡಿದ ಪ್ರದೇಶವಾಗಿದೆ. ರಾಮನಗರ - ಇದು ಹಿಂದಿಯ 'ಶೋಲೆ' ಖ್ಯಾತಿಯ ರೇಷ್ಮೆ ಸೀಮೆ! ರೇಷ್ಮೆ ನಗರ ರಾಮನಗರ ಬೆಂಗಳೂರಿನಿಂದ ೪೭ ಕಿಲೋಮೀಟರು ದೂರದಲಿದ್ದು, ನೈರುತ್ಯ ದಿಕ್ಕಿನಲ್ಲಿದೆ.
  • ಇದು ರಾಮನಗರ ಜಿಲ್ಲೆಯ ಜಿಲ್ಲಾಕೇಂದ್ರ. ಕರ್ನಾಟಕ ರಾಜ್ಯದ ಇತರೆ ಭಾಗಗಳಂತೆ ಇದೂ ಕೂಡ ಗಂಗ, ಚೋಳ, ಹೊಯ್ಸಳ ಹಾಗು ಮೈಸೂರು ರಾಜರ ಆಳ್ವಿಕೆಗೆ ಒಳಪಟ್ಟಿತ್ತು ಆದರೆ ಈ ಪಟ್ಟಣ ಏಕಾಏಕಿ ಪ್ರಸಿದ್ದಿಗೆ ಬಂದದ್ದು ಸುಮಾರು 70ರ ದಶಕದಲ್ಲಿ ಇಲ್ಲಿ ನಡೆದ 'ಶೋಲೆ' ಚಲನ ಚಿತ್ರದ ಚಿತ್ರೀಕರಣದಿಂದ.

ರಾಮನಗರದ ಬೆಟ್ಟ ಪ್ರದೇಶ[ಬದಲಾಯಿಸಿ]

  • ರಾಮನಗರವು, ಶಿವರಾಮಗಿರಿ, ಸೋಮಗಿರಿ, ಕೃಷ್ಣಗಿರಿ, ಯತಿರಾಜಗಿರಿ, ರೇವಣ ಸಿದ್ದೇಶ್ವರ, ಸಿಡಿಲಕಲ್ಲು ಹಾಗು ಜಲ ಸಿದ್ದೇಶ್ವರ ಎಂಬ 7 ಭವ್ಯ ಬೆಟ್ಟಗಳಿಂದ ಸುತ್ತುವರಿದಿದೆ. ಇಲ್ಲಿ ರೇಷ್ಮೆಯನ್ನು ಹೆಚ್ಚಾಗಿ ಬೆಳೆಯುವುದರಿಂದ ಈ ಊರು ರೇಷ್ಮೆ ನಗರವೆಂದೂ ಹೆಸರುವಾಸಿ. ವಿಶ್ವ ವಿಖ್ಯಾತ ಮೈಸೂರು ರೇಷ್ಮೆ ಸೀರೆಗಳನ್ನು ರಾಮನಗರದ ರೇಷ್ಮೆಯನ್ನು ಬಳಸಿಯೇ ನೇಯಲಾಗುತ್ತದೆ.
  • ಪ್ರಕೃತಿ ಪ್ರೇಮಿಗಳಿಗೆ ಖುಷಿ ಕೊಡುವ ವಿಚಾರವೆಂದರೆ ಇಲ್ಲಿರುವ ಬೆಟ್ಟಗಳು ಈಗ ಅಳಿವಿನಂಚಿನಲ್ಲಿರುವ ಹಳದಿ ಕುತ್ತಿಗೆಯ ಬುಲ್ ಬುಲ್ ಹಾಗು ಉದ್ದ ಕೊಕ್ಕಿನ ರಣಹದ್ದುಗಳಿಗೆ ಮನೆಯಾಗಿರುವುದು. ಇಲ್ಲೇ ಜಾನಪದ ಲೋಕವಿದ್ದು ಕರ್ನಾಟಕದ ಜಾನಪದ ಕಲೆ ಹಾಗು ಸಂಸೃತಿಗೆ ಸಂಬಂದ್ದಪಟ್ಟ ಸಣ್ಣ ವಸ್ತು ಸಂಗ್ರಹಾಲಯವನ್ನು ಇಲ್ಲಿ ನೋಡಬಹುದು.
  • ಈ ಪ್ರದೇಶ ಬೆಟ್ಟಗಳಿಂದ ಸುತ್ತುವರಿದಿದ್ದು ಪರ್ವತಾರೋಹಣ ಪ್ರಿಯರಿಗೆ ಹೇಳಿ ಮಾಡಿಸಿದ ತಾಣವಾಗಿದೆ ಹಾಗೂ ಇದು ಈ ಪ್ರದೇಶದ ಪ್ರವಾಸೋದ್ಯಮಕ್ಕೂ ಆಸರೆಯಾಗಿದೆ. ರಾಮನಗರ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವುದರಿಂದ ಇಲ್ಲಿಗೆ ಈ ಎರಡೂ ನಗರಗಳಿಂದ ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು.


Karnataka-icon.jpg
ಕರ್ನಾಟಕದ ಜಿಲ್ಲೆಗಳು
ಬಾಗಲಕೋಟೆ | ಬೆಂಗಳೂರು ನಗರ ಜಿಲ್ಲೆ | ಬೆಂಗಳೂರು ಗ್ರಾಮಾಂತರ | ಬೆಳಗಾವಿ | ಬಳ್ಳಾರಿ | ಬೀದರ್ | ಬಿಜಾಪುರ | ಚಾಮರಾಜನಗರ | ಚಿಕ್ಕಮಗಳೂರು | ಚಿಕ್ಕಬಳ್ಳಾಪುರ | ಚಿತ್ರದುರ್ಗ | ದಕ್ಷಿಣ ಕನ್ನಡ | ದಾವಣಗೆರೆ | ಧಾರವಾಡ | ಗದಗ | ಗುಲ್ಬರ್ಗ | ಹಾಸನ | ಹಾವೇರಿ | ಕೊಡಗು | ಕೋಲಾರ | ಕೊಪ್ಪಳ | ಮಂಡ್ಯ | ಮೈಸೂರು | ಯಾದಗಿರಿ | ರಾಯಚೂರು | ರಾಮನಗರ | ಶಿವಮೊಗ್ಗ | ತುಮಕೂರು | ಉಡುಪಿ | ಉತ್ತರ ಕನ್ನಡ
"http://kn.wikipedia.org/w/index.php?title=ರಾಮನಗರ&oldid=542759" ಇಂದ ಪಡೆಯಲ್ಪಟ್ಟಿದೆ