ತಾಜ್ ಮಹಲ್

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ತಾಜ್ ಮಹಲ್

ತಾಜ್ ಮಹಲ್ ಭಾರತದ ಆಗ್ರಾ ನಗರದಲ್ಲಿ ಇರುವ ಸ್ಮಾರಕ. ಇದನ್ನು ಮೊಘಲ್ ಸಾಮ್ರಾಜ್ಯದ ಚಕ್ರವರ್ತಿ ಷಾ ಜಹಾನ್ ತನ್ನ ರಾಣಿ ಅರ್ಜುಮನ್ ಬಾನು ಬೇಗಮ್ (ನಂತರ ಮಮ್ತಾಜ್ ಮಹಲ್) ಳ ಗೋರಿಯಾಗಿ ಮತ್ತು ಆಕೆಯ ಸ್ಮರಣಾರ್ಥ ಕಟ್ಟಿಸಿದ್ದು. ಸ್ಮಾರಕವನ್ನು ಕಟ್ಟಲು ೨೩ ವರ್ಷಗಳು ಬೇಕಾದವು (೧೬೩೦-೧೬೫೩).

"ತಾಜ್ ಮಹಲ್" ಎಂಬ ಹೆಸರಿನ ವ್ಯುತ್ಪತ್ತಿ ಏನೆಂದು ಸರಿಯಾಗಿ ತಿಳಿದುಬಂದಿಲ್ಲ. ಷಾ ಜಹಾನನ ಆಸ್ಥಾನದ ಕಡತಗಳಲ್ಲಿ ಇದರ ಪ್ರಸ್ತಾಪ "ಮಮ್ತಾಜ್ ಮಹಲಳ ರೌಜಾ" (ರೌಜಾ ಎಂದರೆ ಗೋರಿ) ಎಂದಷ್ಟೆ ಇದೆ. "ತಾಜ್" ಎಂಬುದು ರಾಣಿಯ ಹೆಸರಾದ ಮಮ್ತಾಜ್ ಎಂಬುದರ ಚುಟುಕುರೂಪ ಇದ್ದೀತು. ಜನಪ್ರಿಯ ವಾಡಿಕೆಯಲ್ಲಿ ಕೆಲವರು ಇದನ್ನು ಕರೆಯುವುದು "ವಾಹ್! ತಾಜ್!" ಎಂದು.

ತಾಜಾ, ಎಂದೆಂದಿಗೂ ಹೊಚ್ಚ ಹೊಸತಾಗಿಯೇ ಇರುವ, ಮಹಲು, ಕಟ್ಟಡ, ಆದ್ದರಿಂದ ಎಂದೆಂದಿಗೂ ಹೊಚ್ಚಹೊಸತಾಗಿಯೇ ಇರುವ ಸುಂದರ ಕಟ್ಟಡ ಎಂದು ಕವಿ ದ ರಾ ಬೇಂದ್ರೆಯವರು ಬಣ್ಣಿಸುತ್ತಾರೆ.

ಪರಿವಿಡಿ

[ಬದಲಾಯಿಸಿ] ನಿರ್ಮಾಣ

ಭಾರತ ಮತ್ತು ಏಷ್ಯಾ ಖಂಡದ ಇತರ ದೇಶಗಳಿಂದ ತರಿಸಲಾದ ಅನೇಕ ವಸ್ತುಗಳನ್ನು ಇದರ ನಿರ್ಮಾಣಕ್ಕೆ ಉಪಯೋಗಿಸಲಾಯಿತು. ವಸ್ತುಗಳ ಸಾಗಾಣಿಕೆಗಾಗಿ ೧೦೦೦ ಕ್ಕೂ ಹೆಚ್ಚು ಆನೆಗಳು ಉಪಯೋಗವಾದವು. ಶ್ವೇತ ಅಮೃತಶಿಲೆಯನ್ನು ರಾಜಸ್ಥಾನದಿಂದ ತರಿಸಲಾಯಿತು. ವಿವಿಧ ರೀತಿಯ ಹರಳುಗಳು ಚೀನಾ, ಶ್ರೀಲಂಕಾ, ಅಫ್ಘಾನಿಸ್ತಾನ್ ಮತ್ತು ಅರಬ್ ರಾಷ್ಟ್ರಗಳಿಂದ ಬಂದವು. ಅಮೃತಶಿಲೆಯ ಗೋಡೆಗಳಲ್ಲಿ ಒಟ್ಟು ೨೮ ರೀತಿಯ ವಿವಿಧ ರೀತಿಯ ಹರಳುಗಳನ್ನು ಕೂರಿಸಲಾಗಿದೆ. ತಾಜ್ ಮಹಲ್ ನ ನಿರ್ಮಾಣಕ್ಕೆ ತಗುಲಿದ ಒಟ್ಟು ವೆಚ್ಚ ೪ ಕೋಟಿ ರೂಪಾಯಿಗಳು (ಆಗಿನ ಕಾಲದಲ್ಲಿ ಒಂದು ಗ್ರಾಂ ಚಿನ್ನದ ಬೆಲೆ ೧.೩ ರೂಪಾಯಿ!)

ಹೊರಗೋಡೆಯ ವಿಶದವಾದ ಚಿತ್ರ

[ಬದಲಾಯಿಸಿ] ವಿನ್ಯಾಸ

ತಾಜ್ ಮಹಲ್ ಮತ್ತು ಸುತ್ತಲ ಉದ್ಯಾನಗಳನ್ನು ಸೇರಿಸಿದರೆ ಒಟ್ಟಾರೆ ಸ್ಥಳದ ಅಳತೆ ೧೯೦೦ x ೧೯೦೦ ಅಡಿ. ತಾಜ್ ನ ವಿನ್ಯಾಸದಲ್ಲಿ ಐದು ಮುಖ್ಯ ಭಾಗಗಳಿವೆ:

  • ದರ್ವಾಜಾ - ಮುಖ್ಯ ದ್ವಾರ
  • ಬಗೀಚಾ - ಉದ್ಯಾನ, ಮೊಘಲ್ ಉದ್ಯಾನಗಳ ಮಾದರಿಯಲ್ಲಿ ಚಾರ್‍ಬಾಗ್ (ನಾಲ್ಕು ಭಾಗಗಳಾಗಿ ವಿಂಗಡಿಸಿದ ವಿನ್ಯಾಸವನ್ನು ಹೊಂದಿದೆ)
  • ಮಸ್ಜಿದ್ - ಮಸೀದಿ
  • ಜವಾಬ್ ಅಥವಾ ಮೆಹಮಾನ್ ಖಾನಾ - ಅತಿಥಿ ಗೃಹ
  • ಗೋರಿ - ಮಮ್ತಾಜ್ ಮಹಲಳ ಗೋರಿ
ತಾಜ್ ಮಹಲ್ ನ ವಿನ್ಯಾಸ

ಮುಖ್ಯದ್ವಾರದಿಂದ ಒಳಬಂದ ಕೂಡಲೆ ಉದ್ಯಾನಕ್ಕೆ ಪ್ರವೇಶ ದೊರಕುತ್ತದೆ. ಉದ್ಯಾನ ೧೦೦೦ x ೧೦೦೦ ಅಡಿ ಅಳತೆಯಿದ್ದು ಮಧ್ಯದಲ್ಲಿ ನೀರಿನ ಕೊಳವನ್ನು ಹೊಂದಿದೆ. ಉದ್ಯಾನದ ಇನ್ನೊಂದು ತುದಿಯಲ್ಲಿ ತಾಜ್ ಮಹಲ್ ನ ಮುಖ್ಯ ಕಟ್ಟಡವಿದೆ (ಗೋರಿ). ತಾಜ್ ನ ಪಶ್ಚಿಮಕ್ಕೆ (ಮೆಕ್ಕಾ ದ ದಿಕ್ಕಿನಲ್ಲಿ) ಒಂದು ಮಸೀದಿ ಇದೆ. ಪೂರ್ವಕ್ಕೆ, ಮಸೀದಿಯ ಆಕಾರವನ್ನೇ ಹೊಂದಿದ್ದು ಒಟ್ಟಾರೆ ನಿರ್ಮಾಣದ ಸಮರೂಪತೆಗಾಗಿ ನಿರ್ಮಿಸಲಾದ ಕಟ್ಟಡವಿದೆ - ಇದಕ್ಕೆ ಜವಾಬ್ ಎಂದು ಹೆಸರು. ಇದನ್ನೇ ಅತಿಥಿಗೃಹವಾಗಿಯೂ ಉಪಯೋಗಿಸಲಾಗುತ್ತಿತ್ತು.

ತಾಜ್ ನ ಮುಖ್ಯ ದ್ವಾರ

ತಾಜ್ ಮಹಲ್ ನ ಮುಖ್ಯ ಕಟ್ಟಡ ಎತ್ತರಿಸಿದ ಅಡಿಪಾಯದ ಮೇಲೆ ನಿಂತಿದೆ. ಅದರ ಸುತ್ತಲೂ ನಾಲ್ಕೂ ಮೂಲೆಗಳಲ್ಲಿ ಗೋಪುರಗಳಿವೆ (ಮಿನಾರೆಟ್). ಈ ಗೋಪುರಗಳು ಸ್ವಲ್ಪವೇ ಮಟ್ಟಿಗೆ ತಾಜ್ ಮಹಲ್ ನಿಂದ ಹೊರಕ್ಕೆ ಬಾಗಿವೆ (ಭೂಕಂಪವಾದರೆ ತಾಜ್ ಮಹಲ್ ನ ಮೇಲೆ ಅವು ಬೀಳದಿರಲೆಂದು ಹೀಗೆ ಕಟ್ಟಲಾಯಿತು). ಮೊಘಲ್ ಸಾಮ್ರಾಜ್ಯದ ಬಹುಪಾಲು ಎಲ್ಲ ವಿನ್ಯಾಸಗಳಂತೆ ಇಲ್ಲಿಯೂ ಪರ್ಷಿಯಾ ದೇಶದ ಶಿಲ್ಪಕಲೆಯ ಪ್ರಭಾವವನ್ನು ಕಾಣಬಹುದು.

ತಾಜ್ ಮಹಲ್ ನ ಸೌಂದರ್ಯದ ರಹಸ್ಯದ ಬಗ್ಗೆ ಅನೇಕ ಪ್ರತಿಪಾದನೆಗಳಿವೆ. ಒಂದು ಕಾರಣ ಅದರ ಸಮರೂಪತೆ ಮತ್ತು ಸುಂದರವಾದ ಆಯಾಮಗಳು. ಇನ್ನೊಂದು ಕಾರಣವೆಂದರೆ ದಿನದ ಬೇರೆ ಬೇರೆ ಸಮಯಗಳಲ್ಲಿ ತಾಜ್ ಮಹಲ್ ನೋಡುಗರ ಮನಸ್ಸಿನಲ್ಲಿ ವಿವಿಧ ಭಾವಗಳನ್ನು ಮೂಡಿಸಬಲ್ಲದು. ಮೃದುವಾದ ಶ್ವೇತವಾದ ಅಮೃತಶಿಲೆಯಿಂದ ಕಟ್ಟಲ್ಪಟ್ಟ ತಾಜ್‍ನ ರೂಪ ಸೂರ್ಯನ ಬೆಳಕು ಬದಲಾದಂತೆಯೂ ಬದಲಾಗುತ್ತದೆ. ಸೂರ್ಯೋದಯ, ಮಧ್ಯಾಹ್ನ, ಮುಸ್ಸಂಜೆ ಮತ್ತು ರಾತ್ರಿ - ಹೀಗೆ ಬೇರೆಬೇರೆ ಕಾಲದಲ್ಲಿ ಬೇರೆಬೆರೆ ರೀತಿಗಳಲ್ಲಿ ಸುಂದರವಾಗಿ ಕಾಣುತ್ತದೆ. ಹುಣ್ಣಿಮೆಯ ಬೆಳದಿಂಗಳಿನಲ್ಲಿ ತಾಜ್ ಎಲ್ಲಕ್ಕಿಂತ ಸುಂದರವಾಗಿ ಕಾಣುತ್ತದೆ ಎಂದು ಜನಪ್ರಿಯ ನಂಬಿಕೆ. ಹುಣ್ಣಿಮೆಯಲ್ಲಿ ತಾಜ್ ನ ಸೌಂದರ್ಯವನ್ನು ರವೀಂದ್ರನಾಥ ಠಾಗೋರ್ "ಅನಂತತೆಯ ಮುಖದ ಮೇಲಿನ ಕಣ್ಣೀರು" ಎಂದು ವರ್ಣಿಸಿದ್ದಾರೆ.

ಉದ್ಯಾನದಿಂದ ತಾಜ್ ನ ನೋಟ

ಷಾ ಜಹಾನ್ ನಿಧನನಾದ ಮೇಲೆ ಆತನನ್ನು ಮಮ್ತಾಜ್ ಮಹಲಳ ಪಕ್ಕದಲ್ಲಿಯೇ ಹೂಳಲಾಯಿತು.

೧೯ ನೆಯ ಶತಮಾನದ ಕೊನೆಯ ಹೊತ್ತಿಗೆ ತಾಜ್ ಮಹಲ್ ನ ಕೆಲವು ಭಾಗಗಳು ಕುಸಿಯತೊಡಗಿದ್ದವು. ಬ್ರಿಟಿಷ್ ವೈಸ್‍ರಾಯ್ ಲಾರ್ಡ್ ಕರ್ಜನ್ ರ ಆಡಳಿತದ ಕಾಲದಲ್ಲಿ ಈ ಭಾಗಗಳನ್ನು ರಿಪೇರಿ ಮಾಡಲಾಯಿತು.

೧೯೮೩ ರಲ್ಲಿ ತಾಜ್ ಮಹಲ್ ಅನ್ನು ಯುನೆಸ್ಕೋ ಪ್ರಪಂಚ ಸಂಸ್ಕೃತಿ ಕ್ಷೇತ್ರ ಎಂದು ಘೋಷಿಸಿದೆ.


[ಬದಲಾಯಿಸಿ] ತಾಜ್ ಮಹಲ್ ಹಿಂದೂ ದೇವಸ್ಥಾನ ಅಥವಾ ಕಟ್ಟಡವಾಗಿತ್ತೇ?

ತಾಜ್ ಮಹಲ್ ಇದರ ಮೂಲ ಹೆಸರು ತೇಜೋ ಮಹಾಲಯ ಎಂದು P.N.Oak ಎಂಬ ಇತಿಹಾಸಕಾರ ವಾದಿಸುತ್ತಾರೆ.

[ಬದಲಾಯಿಸಿ] ಬಾಹ್ಯ ಸಂಪರ್ಕಗಳು

ಭಾರತದ ವಿಶ್ವ ಪರಂಪರೆಯ ತಾಣಗಳು
ಅಜಂತಾ ಗುಹೆಗಳು | ಆಗ್ರಾ ಕೋಟೆ | ಎಲಿಫೆಂಟಾ ಗುಹೆಗಳು | ಎಲ್ಲೋರಾ ಗುಹೆಗಳು | ಕಾಜಿರಂಗ ರಾಷ್ಟ್ರೀಯ ಉದ್ಯಾನ | ಕಾಲ್ಕಾ-ಶಿಮ್ಲಾ ಪರ್ವತ ರೈಲುಮಾರ್ಗ | ಕುತುಬ್ ಮಿನಾರ್ ಮತ್ತದರ ಸ್ಮಾರಕಗಳು | ಕೆಂಪು ಕೋಟೆ | ಕೇವಲಾದೇವ್ ರಾಷ್ಟ್ರೀಯ ಉದ್ಯಾನ | ಕೋನಾರ್ಕ್ ಸೂರ್ಯ ದೇವಾಲಯ | ಖಜುರಾಹೋದ ಸ್ಮಾರಕಗಳ ಸಮೂಹ | ಚಂಪಾನೇರ್-ಪವಾಗಢ್ ಪುರಾತತ್ವ ಉದ್ಯಾನ | ಛತ್ರಪತಿ ಶಿವಾಜಿ ಟರ್ಮಿನಸ್ | ತಾಜ್ ಮಹಲ್ | ದಾರ್ಜೀಲಿಂಗ್ ಪರ್ವತ ರೈಲುಮಾರ್ಗ | ನಂದಾದೇವಿ ರಾಷ್ಟ್ರೀಯ ಉದ್ಯಾನಮತ್ತು ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನಗಳು | ನೀಲಗಿರಿ ಪರ್ವತ ರೈಲುಮಾರ್ಗ | ಪಟ್ಟದಕಲ್ಲಿನ ಸ್ಮಾರಕಗಳ ಸಮೂಹ | ಫತೇಪುರ್ ಸಿಕ್ರಿ | ಬಾಮ್ ಜೀಸಸ್ ಬೆಸಿಲಿಕಾ ಮತ್ತಿತರ ಚರ್ಚ್‌ಗಳು | ಭೀಮ್‌ಬೇಟ್ಕಾದ ಶಿಲಾಶ್ರಯಗಳು | ಮಹಾ ಚೋಳ ದೇವಾಲಯಗಳು | ಮಹಾಬಲಿಪುರಂ‌ನ ಸ್ಮಾರಕಗಳ ಸಮೂಹ | ಮಹಾಬೋಧಿ ದೇವಾಲಯ ಸಂಕೀರ್ಣ | ಮಾನಸ್ ವನ್ಯಜೀವಿ ಧಾಮ | ಸಾಂಚಿಯ ಬೌದ್ಧ ಸ್ಮಾರಕಗಳು | ಸುಂದರಬನ್ಸ್ ರಾಷ್ಟ್ರೀಯ ಉದ್ಯಾನ | ಹಂಪೆಯ ಸ್ಮಾರಕಗಳ ಸಮೂಹ | ಹುಮಾಯೂನನ ಸಮಾಧಿ

ಬಾಲಾಜಿಈ ಜಾಗದಲ್ಲಿ ಬರೆಯಲ್ಪಟ್ಟದ್ದು ವಿಕೀಕರಣ ಆಗುವುದಿ[[ಮೀಡಿಯ:[[Example.ogg]] == == ಶಿರೋಲೇಖ == '''ದಪ್ಪಗಿನ ಅಚ್ಚು''' == ]]ಲ್ಲ

ವೈಯಕ್ತಿಕ ಉಪಕರಣಗಳು