ವಿಷಯಕ್ಕೆ ಹೋಗು

ಗುಲಾಬಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟೆಂಪ್ಲೇಟು:Redirectshere ಟೆಂಪ್ಲೇಟು:Redirectshere

Rose
Rosa bracteata
Scientific classification
ಸಾಮ್ರಾಜ್ಯ:
Plantae
Division:
ವರ್ಗ:
ಗಣ:
ಕುಟುಂಬ:
ಉಪಕುಟುಂಬ:
ಕುಲ:
Rosa

Species

Between 100 and 150, see list

ಗುಲಾಬಿ ಯು ರೋಸೇಸಿ ವಂಶದೊಳಗೆ ಬರುವ ರೋಸಾ ಕುಲದ ಒಂದು ದೀರ್ಘಕಾಲಿಕ, ಹೂವಿನ ಪೊದೆಸಸ್ಯ ಅಥವಾ ಬಳ್ಳಿಯಾಗಿದ್ದು, ಅದು 100ಕ್ಕೂ ಹೆಚ್ಚಿನ ಜಾತಿಗಳನ್ನು ಒಳಗೊಂಡಿದೆ ಹಾಗೂ ವೈವಿಧ್ಯಮಯ ಬಣ್ಣಗಳಲ್ಲಿ ದೊರೆಯುತ್ತದೆ. ನೆಟ್ಟಗೆ ನಿಲ್ಲುವ ಪೊದೆಸಸ್ಯಗಳು ಮತ್ತು ಯಾವುದಾದರೂ ಆಸರೆಯ ಮೇಲೇರುವ ಅಥವಾ ಹಬ್ಬುವ ಸಸ್ಯಗಳನ್ನು ಮತ್ತು ಈ ಜಾತಿಯು ಒಳಗೊಂಡಿದ್ದು, ಕಾಂಡಗಳ ಮೇಲೆ ಅಲ್ಲಲ್ಲಿ ಚೂಪಾದ ಮುಳ್ಳುಗಂತಿಗಳು (ಸಣ್ಣ ಮುಳ್ಳುಗಳು) ಇರುತ್ತವೆ. ಇವುಗಳಲ್ಲಿ ಬಹುತೇಕ ಸಸ್ಯಗಳು ಏಷ್ಯಾಕ್ಕೆ ಸೇರಿದ್ದರೆ, ಅಲ್ಪ ಸಂಖ್ಯೆಯ ಜಾತಿಗಳು ಯುರೋಪ್, ಉತ್ತರ ಅಮೆರಿಕಾ ಮತ್ತು ವಾಯವ್ಯ ಆಫ್ರಿಕಾದ ಮೂಲದವಾಗಿವೆ. ವೈವಿಧ್ಯಮಯ ಜಾತಿಯ ಗುಲಾಬಿ ಹೂಗಳ ಸೌಂದರ್ಯ ಹಾಗೂ ಪರಿಮಳದ ಕಾರಣದಿಂದಾಗಿ ಮೂಲಸಸ್ಯಗಳು, ತಳಿಗಳು ಹಾಗೂ ಮಿಶ್ರತಳಿಗಳನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ. [] ಎಲೆಗಳು ಕಾಂಡದ ಎರಡೂ ಪಕ್ಕದಲ್ಲಿ ಪರ್ಯಾಯವಾಗಿ ಜೋಡಿಸಲ್ಪಟ್ಟಿದ್ದು, ಗರಿಯಂತೆ ಸಂಯುಕ್ತವಾಗಿರುವ ಈ ಎಲೆಗಳ ಬಿಡಿ ಎಲೆಗಳು ಅಥವಾ ಪರ್ಣಕಗಳು ಅಂಡಾಕಾರದಲ್ಲಿದ್ದು, ಅವುಗಳ ಅಂಚುಗಳು ಚೂಪಾಗಿರುತ್ತದೆ. ಈ ಗಿಡದ ಮೆದು ತಿರುಳಿನಂತಹ, ತಿನ್ನಲು ಯೋಗ್ಯವಾದ ಹಣ್ಣನ್ನು ಗುಲಾಬಿ ಹಣ್ಣು ಎಂದು ಕರೆಯಲಾಗುತ್ತದೆ. ಗುಲಾಬಿ ಗಿಡಗಳ ಗಾತ್ರದಲ್ಲಿ ವೈವಿಧ್ಯತೆ ಕಂಡುಬರುತ್ತದೆ. ಕುಬ್ಜಾಕಾರದ, ಚಿಕಣಿ ಗಾತ್ರದ ಗುಲಾಬಿಗಳಿಂದ ಮೊದಲ್ಗೊಂಡು 20 ಮೀಟರ್‌ಗಳಷ್ಟು ಎತ್ತರದವರೆಗೂ ಹಬ್ಬಬಲ್ಲ ಏರುಬಳ್ಳಿಯವರೆಗೂ ಈ ಗಿಡಗಳ ಗಾತ್ರ-ವೈವಿಧ್ಯತೆಯಿದೆ. ವಿಶ್ವಾದ್ಯಂತದ ವಿವಿಧ ಭಾಗಗಳಿಂದ ಬರುವ ಗುಲಾಬಿ ಜಾತಿಗಳು ಸುಲಭವಾಗಿ ಸಂಕರೀಕೃತಗೊಂಡು, ಉದ್ಯಾನದ ವೈವಿಧ್ಯಮಯ ಗುಲಾಬಿಗಳಾಗಿ ಹೊರಹೊಮ್ಮಿವೆ. ರೋಸ್ ಎಂಬ ಹೆಸರು ಫ್ರೆಂಚ್‌ ಮೂಲದಿಂದ ಬಂದಿದೆ. ಲ್ಯಾಟಿನ್ ಹೆಸರಾದ ರೋಸಾ ದಿಂದ ತನ್ನ ಹೆಸರನ್ನು ರೋಸ್‌ ಗಳಿಸಿಕೊಂಡಿದ್ದು, ಇದನ್ನು ಕೂಡಾ ಗ್ರೀಕ್‌ನ ರೋಡಿಯನ್‌ ನಿಂದ (ವ್ರೋಡಿಯನ್ ಎಂಬ ಉಪಭಾಷೆಯಿಂದ), ಹಳೆಯ ಪರ್ಷಿಯನ್ ವುರ್ಡಿ "ಹೂವು" ಎಂಬುದರಿಂದ, ಆಸ್ಕನ್‌ ಭಾಷೆಯಿಂದ ಎರವಲು ಪಡೆದಿದೆ. (ಹೋಲಿಕೆ: ಅವೆಸ್ಟ್. ವಾರ್ದಾ , ಸೊಗ್ಡಿಯನ್ ವಾರ್ದ್‌ , ಪರ್ಥಿಯನ್ ವಾರ್ ).[][] ಗುಲಾಬಿ ಹೂವುಗಳನ್ನು ಆವಿಯ ಪ್ರಕ್ರಿಯೆಗೆ ಒಳಪಡಿಸಿ ಸಂಗ್ರಹಿಸಲಾಗುವ ಸಾರತೈಲವಾದ ಗುಲಾಬಿಯ ಅತ್ತರ್‌ ಶತಶತಮಾನಗಳಿಂದಲೂ ಸುಗಂಧದ್ರವ್ಯಗಳಲ್ಲಿ ಬಳಸಲ್ಪಡುತ್ತಿದೆ. ಗುಲಾಬಿ ತೈಲದಿಂದ ತಯಾರಿಸಲ್ಪಡುವ ಗುಲಾಬಿ ನೀರು ಅಥವಾ ಪನ್ನೀರನ್ನು ಏಷ್ಯಾದ ಮತ್ತು ಮಧ್ಯಪ್ರಾಚ್ಯ ದೇಶಗಳ ಆಹಾರ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಬಹು ಸಾಮಾನ್ಯವಾಗಿ ಗುಲಾಬಿಯ ದಳಗಳ ಸಾರದಿಂದ ತಯಾರಿಸಲ್ಪಡುವ ಗುಲಾಬಿ ಷರಬತ್‌ಗೆ ಫ್ರೆಂಚರು ಪ್ರಸಿದ್ಧಿ ಪಡೆದಿದ್ದಾರೆ. ಸಂಯುಕ್ತ ಸಂಸ್ಥಾನಗಳಲ್ಲಿ ಸದರಿ ಫ್ರೆಂಚ್ ಗುಲಾಬಿ ಷರಬತ್‌ ಅಥವಾ ಪಾಕವನ್ನು ಗುಲಾಬಿ ದೋಸೆಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಗುಲಾಬಿ ಹಣ್ಣುಗಳನ್ನು ಕೆಲವೊಮ್ಮೆ ಮುರಬ್ಬ, ಜೆಲ್ಲಿ ಮತ್ತು ಹಣ್ಣಿನ ಮುರಬ್ಬ ಇವೇ ಮೊದಲಾದವುಗಳನ್ನು ತಯಾರಿಸಲು ಅಥವಾ ಚಹಾದೊಂದಿಗೆ ಕುದಿಸಲು ಬಳಸುತ್ತಾರೆ. ಗುಲಾಬಿ ಹಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ C ಜೀವಸತ್ವದ ಅಂಶವನ್ನು ಹೊಂದಿರುವುದೇ ಇದಕ್ಕೆ ಮೂಲಕಾರಣ. ಅಷ್ಟೇ ಅಲ್ಲ, ಅವುಗಳ ರಸವನ್ನು ಹಿಂಡಿ ಮತ್ತು ಶೋಧಿಸಿ, ಗುಲಾಬಿ ಹಣ್ಣುಗಳ ಪಾಕ ಅಥವಾ ಷರಬತ್‌ನ್ನು ತಯಾರಿಸುತ್ತಾರೆ. ಗುಲಾಬಿ ಹಣ್ಣುಗಳ ಬೀಜದ ಎಣ್ಣೆಯನ್ನು ತಯಾರಿಸಲೂ ಸಹ ಗುಲಾಬಿ ಹಣ್ಣುಗಳನ್ನು ಬಳಸಲಾಗುತ್ತದೆ. ಈ ತೈಲವನ್ನು ತ್ವಚಾ ಸಂರಕ್ಷಕ ಉತ್ಪನ್ನಗಳು ಹಾಗೂ ಕೆಲವೊಂದು ಪ್ರಸಾದನ ಉತ್ಪನ್ನಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ.

ಸಸ್ಯಶಾಸ್ತ್ರ

[ಬದಲಾಯಿಸಿ]
ಸಂಪೂರ್ಣವಾಗಿ ಅರಳಿರುವ ಗುಲಾಬಿ ಹೂವಿನ ನಿಕಟಚಿತ್ರ
ರೋಸಾ ಕೆನೈನಾ ಕಾಯಿಗಳು

ಬಹುತೇಕ ಜಾತಿಯ ಗುಲಾಬಿ ಸಸ್ಯದ ಎಲೆಗಳು 5-15 ಸೆಂಟಿಮೀಟರುಗಳಷ್ಟು ಉದ್ದವಿದ್ದು, ಗರಿಯಂತಹ ಸ್ವರೂಪವನ್ನು ಹೊಂದಿರುವುದರೊಂದಿಗೆ (3ರಿಂದ)5-9(ರಿಂದ13)ರಷ್ಟು ಪರ್ಣಕಗಳು ಅಥವಾ ಕಿರು ಎಲೆಗಳನ್ನು ಮತ್ತು ಬುಡದ ಕಾವಿನೆಲೆಗಳನ್ನು ಒಳಗೊಂಡಿರುತ್ತವೆ. ಬಹುತೇಕ ಗುಲಾಬಿ ಸಸ್ಯಗಳು ಪತನಶೀಲ (ಕಾಲಕಾಲಕ್ಕೆ ಎಲೆ ಉದುರುವ) ಗುಣವನ್ನು ಹೊಂದಿದ್ದರೂ ಸಹ, ಕೆಲವೊಂದು ಜಾತಿಗಳು (ಅದರಲ್ಲೂ ಆಗ್ನೇಯ ಏಷ್ಯಾದಲ್ಲಿರುವ ಜಾತಿಗಳು) ನಿತ್ಯ ಹರಿದ್ವರ್ಣವಾಗಿರುತ್ತವೆ ಅಥವಾ ಅದಕ್ಕೆ ಸಮೀಪದಲ್ಲಿರುತ್ತವೆ. ಬಹುತೇಕ ಜಾತಿಯ ಗುಲಾಬಿಗಳ ಹೂವುಗಳು ಐದು ದಳಗಳನ್ನು ಹೊಂದಿದ್ದರೂ, ರೋಸಾ ಸೆರೀಷಿಯಾ ಜಾತಿಗೆ ಸೇರಿದ ಗುಲಾಬಿಯ ಹೂಗಳು ಸಾಮಾನ್ಯವಾಗಿ ಕೇವಲ ನಾಲ್ಕು ದಳಗಳನ್ನು ಹೊಂದಿರುತ್ತವೆ. ಪ್ರತಿಯೊಂದು ದಳವೂ ಎರಡು ಸ್ಪಷ್ಟವಾದ ಹಾಲೆಗಳಾಗಿ ವಿಭಜಿಸಲ್ಪಟ್ಟಿದ್ದು, ಸಾಮಾನ್ಯವಾಗಿ ಅದು ಬಿಳಿ ಅಥವಾ ನೆಸುಗೆಂಪು ಬಣ್ಣದಲ್ಲಿರುತ್ತದೆ. ಕೆಲವೊಂದು ಜಾತಿಗಳಲ್ಲಿ ಅದು ಹಳದಿ ಅಥವಾ ಕೆಂಪು ಬಣ್ಣದಲ್ಲೂ ಇರುತ್ತದೆ. ದಳಗಳ ಅಡಿಯಲ್ಲಿ ಪುಷ್ಪಪಾತ್ರೆಯ ಐದು ದಳಗಳಿರುತ್ತವೆ (ಅಥವಾ ರೋಸಾ ಸೆರೀಷಿಯಾ ಜಾತಿಯ ಕೆಲವೊಂದು ಸಸ್ಯಗಳಲ್ಲಿ ನಾಲ್ಕು ಇರುತ್ತವೆ). ಮೇಲಿನಿಂದ ನೋಡಿದಾಗ ಅವು ದೃಷ್ಟಿಗೆ ಗೋಚರವಾಗುವಷ್ಟು ಉದ್ದವಾಗಿರಬಹುದು ಮತ್ತು ದುಂಡಗಿನ ದಳಗಳ ಪರ್ಯಾಯ ಸ್ಥಳಗಳಲ್ಲಿ ಹಸಿರು ಬಿಂದುಗಳಂತೆ ಅವು ಕಾಣಿಸಬಹುದು. ಅಂಡಾಶಯವು ಪುಷ್ಪಪಾತ್ರೆಯ ಕೆಳಭಾಗದಲ್ಲಿದ್ದು, ಹೂವಿನ ದಳಗಳು ಹಾಗೂ ಪುಷ್ಪಪಾತ್ರೆಯ ದಳಗಳ ಅಡಿಯಿಂದ ಹೊರಹೊಮ್ಮುವಂತಿರುತ್ತದೆ. ಗುಲಾಬಿಯ ಗೊಂಚಲು ಹಣ್ಣು ಒಂದು ಗುಂಡಗಿನ ಸ್ವರೂಪದಲ್ಲಿದ್ದು, ಅದಕ್ಕೆ ಗುಲಾಬಿ ಹಣ್ಣು ಎಂದೇ ಕರೆಯಲಾಗುತ್ತದೆ. ತೆರೆದ-ಮುಖದ ಹೂವುಗಳನ್ನು ವಿಕಸಿಸುವ ಗುಲಾಬಿ ಜಾತಿಗಳು ಪರಾಗಸ್ಪರ್ಶ ಮಾಡುವ ಜೇನುನೊಣಗಳು ಮತ್ತು ಇತರ ಕೀಟಗಳಿಂದ ಆಕರ್ಷಿಸಲ್ಪಡುತ್ತವೆ. ಹೀಗಾಗಿ ಹಣ್ಣುಗಳನ್ನು ಉತ್ಪಾದಿಸುವಲ್ಲಿ ಇವು ಹೆಚ್ಚು ಸೂಕ್ತವಾಗಿ ಕಂಡುಬರುತ್ತವೆ. ಅನೇಕ ಸ್ವದೇಶಿ ತಳಿಗಳು ತುಂಬಾ ಬಿಗಿಯಾದ ದಳಗಳ ಜೋಡಣೆಯನ್ನು ಹೊಂದಿರುತ್ತವೆಯಾದ್ದರಿಂದ, ಪರಾಗಸ್ಪರ್ಶ ಪ್ರಕ್ರಿಯೆಗೆ ಅವು ಅವಕಾಶವನ್ನು ಕಲ್ಪಿಸುವುದಿಲ್ಲ. ಬಹುತೇಕ ಗುಲಾಬಿ ಜಾತಿಗಳ ಗುಲಾಬಿ ಹಣ್ಣುಗಳು ಕೆಂಪಗಿದ್ದರೂ ಸಹ, ಕೆಲವೊಂದು ಜಾತಿಗಳು (ಉದಾ: ರೋಸಾ ಪಿಂಪಿನೆಲ್ಲಿಫೋಲಿಯಾ ) ಗಾಢ ನೇರಳೆಯಿಂದ ಕಪ್ಪಗಿನವರೆಗಿನ ಬಣ್ಣದ ಹಣ್ಣುಗಳನ್ನು ಹೊಂದಿರುತ್ತವೆ. ಪ್ರತಿ ಹಣ್ಣೂ ಸಹ ಹೈಪ್ಯಾಂಥಿಯಮ್ ಎಂಬ, ಮೆದುತಿರುಳಿನ ಹೊರಪದರವನ್ನು ಒಳಗೊಂಡಿರುತ್ತದೆ. ಸೂಕ್ಷ್ಮವಾಗಿದ್ದರೂ ಬಾಗದ ರೋಮಗಳಿರುವ ಮಾತೃಕೆಯಲ್ಲಿ ಅಳವಡಿಸಿದಂತಿರುವ 5 ರಿಂದ 160 "ಬೀಜಗಳನ್ನು" (ತಾಂತ್ರಿಕವಾಗಿ ಹೇಳುವುದಾದರೆ ಬಿರಿಯದ ಹಣ್ಣುಗಳು ಎಂದು ಕರೆಯಲ್ಪಡುವ ಏಕ-ಬೀಜದ ಒಣಹಣ್ಣುಗಳನ್ನು) ಹೈಪ್ಯಾಂಥಿಯಮ್ ಹೊಂದಿರುತ್ತದೆ. ಕೆಲವೊಂದು ಜಾತಿಗಳ, ಅದರಲ್ಲೂ ನಾಯಿ ಗುಲಾಬಿ (ರೋಸಾ ಕೆನೈನಾ ) ಮತ್ತು ರೂಗೋಸಾ ಗುಲಾಬಿ (ರೋಸಾ ರೂಗೋಸಾ ) ಜಾತಿಗಳ ಗುಲಾಬಿ ಹಣ್ಣುಗಳು C ಜೀವಸತ್ವದಿಂದ ಸಮೃದ್ಧವಾಗಿದ್ದು, ಬೇರಾವುದೇ ಸಸ್ಯಕ್ಕೆ ಹೋಲಿಸಿದಾಗ ಅತಿ ಸಮೃದ್ಧವಾದ C ಜೀವಸತ್ವದ ಮೂಲಗಳೆನಿಸಿವೆ. ದಳಗಳು ಮೇಣದಂತಹ ಹೊರಪೊರೆಯನ್ನು ಹೊಂದಿದ್ದು, ಅದು ಒಂದು ಎಲೆಯಂತೆ ಕೆಲಸ ಮಾಡುತ್ತದೆ. ಹಾಡುಹಕ್ಕಿಗಳು ಮತ್ತು ಅರಗುರೆಕ್ಕೆ ಹಕ್ಕಿಗಳಂತಹ ಹಣ್ಣು-ತಿನ್ನುವ ಹಕ್ಕಿಗಳಿಂದ ಈ ಗುಲಾಬಿ ಹಣ್ಣುಗಳು ತಿನ್ನಲ್ಪಟ್ಟು, ನಂತರ ಅವುಗಳ ಹಿಕ್ಕೆಗಳ ಮೂಲಕ ಹಣ್ಣಿನ ಬೀಜಗಳು ಎಲ್ಲೆಡೆ ಪ್ರಸಾರವಾಗುತ್ತವೆ. ಕೆಲವೊಂದು ಹಕ್ಕಿಗಳು, ನಿರ್ದಿಷ್ಟವಾಗಿ ಹೇಳುವುದಾದರೆ ಫಿಂಚ್‌ ಎಂದು ಕರೆಯಲ್ಪಡುವ ಹಾಡುಹಕ್ಕಿಗಳೂ ಸಹ ಈ ಬೀಜಗಳನ್ನು ತಿನ್ನುತ್ತವೆ.

ಗುಲಾಬಿ ಮುಳ್ಳುಗಳು

ಗುಲಾಬಿಯ ಕಾಂಡವೊಂದರಾದ್ಯಂತ ಕಂಡುಬರುವ ಚೂಪಾದ ರಚನೆಗಳನ್ನು ಸಾಮಾನ್ಯವಾಗಿ "ಮುಳ್ಳುಗಳು" ಎಂದು ಕರೆಯಲಾಗುತ್ತದೆ. ಆದರೆ ಅವು ವಾಸ್ತವವಾಗಿ ಹೊರತೊಗಟೆಯ (ಕಾಂಡದ ಅಂಗಾಂಶದ ಹೊರಭಾಗದ ಪದರ) ಹೊರಬೆಳವಣಿಗೆಗಳಾಗಿದ್ದು ಅವನ್ನು ಮುಳ್ಳುಗಂತಿಗಳು ಎನ್ನಲಾಗುತ್ತದೆ. ನಿಜವಾದ ಮುಳ್ಳುಗಳು, ಉದಾಹರಣೆಗೆ ಸಿಟ್ರಸ್ ಅಥವಾ ಪೈರಕ್ಯಾಂಟಾ ದಂತಹ ಜಾತಿಗಳು ಹೊರಹೊಮ್ಮಿಸುವ ಮುಳ್ಳುಗಳು, ರೂಪಾಂತರಗೊಂಡ ಕಾಂಡಗಳಾಗಿದ್ದು, ಅವು ಯಾವಾಗಲೂ ಒಂದು ಗೆಣ್ಣಿನ ಭಾಗದಲ್ಲಿ ಹುಟ್ಟುತ್ತವೆ. ಸ್ವತಃ ಇಂತಹ ಮುಳ್ಳಿನ ಉದ್ದದಾದ್ಯಂತ ಗೆಣ್ಣುಗಳು ಮತ್ತು ಅಂತರಗೆಣ್ಣುಗಳು ಇರುತ್ತವೆ. ಗುಲಾಬಿಯ ಮುಳ್ಳುಗಂತಿಗಳು ವಿಶಿಷ್ಟವಾದ ಕುಡುಗೋಲಿನಾಕಾರದ ಕೊಕ್ಕೆಗಳನ್ನು ಹೊಂದಿದ್ದು, ಗುಲಾಬಿಯು ಬೆಳೆಯುವಾಗ ಮತ್ತೊಂದು ಸಸ್ಯ ಅಥವಾ ಮರವನ್ನು ಅವಲಂಬಿಸುವಲ್ಲಿ ಅವು ನೆರವಾಗುತ್ತವೆ. ರೋಸಾ ರೂಗೋಸಾ ಮತ್ತು R. ಪಿಂಪಿನೆಲ್ಲಿಫೋಲಿಯಾ ದಂತಹ ಕೆಲವೊಂದು ಜಾತಿಗಳು ದಟ್ಟವಾಗಿ ಜೋಡಣೆಗೊಂಡ ನೇರವಾದ ಮುಳ್ಳುಗಳನ್ನು ಹೊಂದಿರುತ್ತವೆ. ಪ್ರಾಯಶಃ ಇದು ಪ್ರಾಣಿಗಳು ತನ್ನನ್ನು ತಿನ್ನದಿರಲೆಂದು ಗಿಡಗಳು ಮಾಡಿಕೊಂಡ ಒಂದು ರೂಪಾಂತರವಿರಬಹುದು ಅಥವಾ ಪ್ರಾಯಶಃ ಗಾಳಿಯಲ್ಲಿ ತೂರಿಬರುವ ಮರಳು ಕಣವನ್ನು ಹಿಡಿದಿಟ್ಟುಕೊಳ್ಳಲು ಮಾಡಿಕೊಂಡ ರೂಪಾಂತರವೂ ಇರಬಹುದು. ಹೀಗೆ ಮಾಡುವುದರಿಂದ ಮಣ್ಣಿನ ಸವಕಳಿಯ ಪ್ರಮಾಣವನ್ನು ಕಡಿಮೆಗೊಳಿಸಿ, ತಮ್ಮ ಬೇರುಗಳನ್ನು ರಕ್ಷಿಸಿಕೊಳ್ಳುವ ವ್ಯವಸ್ಥೆಯೂ ಇದಾಗಿರಬಹುದು (ಈ ಎರಡೂ ಜಾತಿಗಳೂ ಕಡಲತೀರ ಪ್ರದೇಶಗಳ ಮರುಳುದಿಣ್ಣೆಗಳಲ್ಲಿ ಸ್ವಾಭಾವಿಕವಾಗಿಯೇ ಬೆಳೆಯುತ್ತವೆ). ಮುಳ್ಳುಗಂತಿಗಳು ಇಷ್ಟು ಪ್ರಮಾಣದಲ್ಲಿದ್ದರೂ ಸಹ ಜಿಂಕೆಗಳು ಗುಲಾಬಿಗಳನ್ನು ಆಗಿಂದಾಗ್ಗೆ ತಿನ್ನುತ್ತಲೇ ಇರುತ್ತವೆ. ಕೆಲವೊಂದು ಜಾತಿಗಳ ಗುಲಾಬಿಗಳಲ್ಲಿ ಕೇವಲ ನೆಪಮಾತ್ರದ ಮುಳ್ಳುಗಂತಿಗಳಿದ್ದು, ಅವು ಯಾವುದೇ ಚೂಪಾದ ತುದಿಯನ್ನು ಹೊಂದಿರುವುದಿಲ್ಲ.

ಗುಲಾಬಿ ಚಿಗುರೆಲೆಗಳು

.

ಜಾತಿಗಳು

[ಬದಲಾಯಿಸಿ]
ರೋಸಾ ಮಲ್ಟಿಫ್ಲೋರಾ

ಗುಲಾಬಿಯ ಕೆಲವೊಂದು ಪ್ರಾತಿನಿಧಿಕ ಜಾತಿಗಳು ಹೀಗಿವೆ:

ಪಿಡುಗುಗಳು ಮತ್ತು ರೋಗಗಳು

[ಬದಲಾಯಿಸಿ]

ಗುಲಾಬಿಗಳು ಹಲವಾರು ರೋಗಗಳಿಗೆ ತುತ್ತಾಗುತ್ತವೆ. ಅವುಗಳೆಂದರೆ, ಗುಲಾಬಿ ಬೂಸ್ಟು (ಫ್ರಾಗ್ಮಿಡಿಯಂ ಮ್ಯೂಕ್ರೋನೇಟಂ ), ಗುಲಾಬಿ ಕಪ್ಪುಚುಕ್ಕೆ ಮತ್ತು ಸೂಕ್ಷ್ಮ ಶಿಲೀಂಧ್ರ. ಗುಲಾಬಿ ಗಿಡದ ಮೇಲೆ ಶಿಲೀಂಧ್ರ ರೋಗದ ಒಂದು ಸೋಂಕು ಕಾಣಿಸಿಕೊಂಡಾಗ ಅದನ್ನು ವಾಸಿಮಾಡಲು ಪ್ರಯತ್ನಿಸುವುದಕ್ಕಿಂತ, ಶಿಲೀಂಧ್ರನಾಶಕ ಸಿಂಪಡಣೆಯಂತಹ ಮುಂಜಾಗ್ರತಾ ಕ್ರಮವನ್ನು ಅನುಸರಿಸುವುದರಿಂದ, ಗುಲಾಬಿಯಲ್ಲಿ ಕಂಡುಬರುವ ಶಿಲೀಂಧ್ರ ರೋಗಗಳನ್ನು ಅತ್ಯುತ್ತಮವಾಗಿ ನಿವಾರಿಸಬಹುದು. ಒಂದು ವೇಳೆ ರೋಗವು ತಗುಲಿರುವುದು ಗೋಚರಿಸುವಂತಿದ್ದರೆ, ಅದರ ವಾಸ್ತವಿಕ ಸೋಂಕನ್ನು ಹಿಮ್ಮೆಟ್ಟಿಸಲಾಗದಿದ್ದರೂ, ಗುಲಾಬಿ ಸಸ್ಯದ ಸಮರುವಿಕೆ (ಕತ್ತರಿಸುವಿಕೆ) ಹಾಗೂ ಶಿಲೀಂಧ್ರನಾಶಕಗಳ ಬಳಕೆಯಿಂದ ರೋಗದ ಹರಡುವಿಕೆಯನ್ನು ತಗ್ಗಿಸಬಹುದು. ಇತರ ಸಸ್ಯಗಳಿಗೆ ಹೋಲಿಸಿದರೆ ಗುಲಾಬಿಯ ಕೆಲವೊಂದು ಪ್ರಕಾರಗಳು ಶಿಲೀಂಧ್ರ ರೋಗಗಳಿಗೆ ತುತ್ತಾಗುವುದು ಗಣನೀಯವಾಗಿ ಕಡಿಮೆ ಎಂದು ಹೇಳಬಹುದು. ಗುಲಾಬಿಗೆ ಮಾರಕವಾಗಿರುವ ಪ್ರಮುಖವಾದ ಕೀಟದ ಪಿಡುಗೆಂದರೆ ಎಲೆಕೊರಕ (ಹಸಿರುಹೇನು). ಇದು ಗಿಡದ ರಸವನ್ನೆಲ್ಲಾ ಹೀರಿ ಅದನ್ನು ದುರ್ಬಲಗೊಳಿಸುತ್ತದೆ. (ಕೆಂಗಂದು ಜೀರುಂಡೆಗಳು ಎಲೆಕೊರಕಗಳನ್ನು ಬೇಟೆಯಾಡಿ ತಿನ್ನುವುದರಿಂದ, ಗುಲಾಬಿ ಉದ್ಯಾನಗಳಲ್ಲಿ ಅವುಗಳ ಇರುವಿಕೆಗೆ ಒತ್ತಾಸೆ ನೀಡಬೇಕು). ಗುಲಾಬಿಯ ಕೀಟನಾಶಕಗಳ ಸಿಂಪಡಣೆಯನ್ನು ಕೆಲವೊಮ್ಮೆ ಶಿಫಾರಸು ಮಾಡಲಾಗುತ್ತದೆಯಾದರೂ, ಅದರಿಂದಾಗಿ ಕೆಲವೊಂದು ಪ್ರಯೋಜನಕರ ಕೀಟಗಳೂ ಸಹ ಹಾನಿಗೊಳಗಾಗಬಹುದು. ಅದ್ದರಿಂದ ನಷ್ಟದ ಪ್ರಮಾಣವನ್ನು ತಗ್ಗಿಸುವ ದೃಷ್ಟಿಯಿಂದ ಸಿಂಪಡಣೆಯ ಕಾರ್ಯವನ್ನು ಎಚ್ಚರದಿಂದ ನಡೆಸಬೇಕು. ಲೆಪಿಡೋಪ್ಟೆರಾ (ಚಿಟ್ಟೆ ಮತ್ತು ದೀಪದ ಹುಳು) ಜಾತಿಯ ಕೆಲವೊಂದು ಮರಿಹುಳುಗಳು (ಬಾಲದ ಮರಿಗಳು) ಗುಲಾಬಿಗಳನ್ನು ಆಹಾರ ಸಸ್ಯವಾಗಿಯೂ ಬಳಸುತ್ತವೆ; ಗುಲಾಬಿಗಳನ್ನು ತಿನ್ನುವ ಲೆಪಿಡೋಪ್ಟೆರಾ ಜಾತಿಯ ಮರಿಹುಳುಗಳ ಪಟ್ಟಿಯನ್ನು ನೋಡಿ.

ಬಳಕೆಗಳು

[ಬದಲಾಯಿಸಿ]

ಗುಲಾಬಿಗಳು ತಮ್ಮಲ್ಲಿನ ಹೂವುಗಳಿಗಾಗಿ ಪ್ರಸಿದ್ಧಿ ಪಡೆದಿವೆ. ಹೂಬಿಡುವ ಪೊದೆಸಸ್ಯಗಳಾಗಿರುವ ಗುಲಾಬಿಗಳು ಜನಪ್ರಿಯ, ಉದ್ಯಾನದ ಪೊದೆಸಸ್ಯಗಳಾಗಿವೆ. ಅತಿ ಜನಪ್ರಿಯವಾಗಿರುವ ಮತ್ತು ಸಾಮಾನ್ಯವಾಗಿ ಮಾರಾಟವಾಗುವ ಹೂ ಬೆಳೆಗಾರರ ಹೂವುಗಳಲ್ಲಿ ಅವು ಒಂದಾಗಿರುವುದರಿಂದ, ಕತ್ತರಿಸಿದ ಹೂವುಗಳಂತೆಯೂ ಅವುಗಳನ್ನು ಬೆಳೆಯಲಾಗುತ್ತದೆ. ಕೆಲವು ಗುಲಾಬಿಗಳನ್ನು ಅವುಗಳ ಸುವಾಸಿತ ಎಲೆ ಗೊಂಚಲುಗಳಿಗಾಗಿಯೇ ಬೆಳೆಸಲಾಗುತ್ತದೆ. ಅವುಗಳೆಂದರೆ, ರೋಸಾ ರೂಬಿಗಿನೋಸಾ, ಅಲಂಕಾರಿಕ ಮುಳ್ಳುಗಳು, ರೋಸಾ ಸೆರೀಷಿಯಾ ಅಥವಾ ಅವುಗಳ ಅಲಂಕಾರಿಕ ಹಣ್ಣು ರೋಸಾ ಮೊಯೆಸೈ. ಸುಗಂಧ ದ್ರವ್ಯಗಳ ಉದ್ಯಮದಲ್ಲಿ ಗುಲಾಬಿಗಳಿಗೆ ಹೆಚ್ಚಿನ ಮೌಲ್ಯವಿದೆ. ಗುಲಾಬಿಗಳ ಅತ್ತರ್‌ನ್ನು ಗುಲಾಬಿಯ ಹೂವುಗಳಿಂದ ಭಟ್ಟಿ ಇಳಿಸಿ ತೆಗೆಯಲಾಗುತ್ತದೆ. ಕೆಲವೊಂದು ಜಾತಿಗಳ ಹಣ್ಣಾದ ಗುಲಾಬಿ ಹಣ್ಣು C ಜೀವಸತ್ವದ ಒಂದು ಕಿರುಮೂಲವಾಗಿ ಬಳಸಲ್ಪಡುತ್ತದೆ. ಗುಲಾಬಿಗಳನ್ನು ಬೇಲಿಯ ಸ್ವರೂಪದಲ್ಲಿಯೂ ಮತ್ತು ಆಟದ ರಕ್ಷಣೆಯ ಕಾರಣಗಳಿಗೂ ಬೆಳೆಸಬಹುದು.

1870ರ ದಶಕದಲ್ಲಿನ, ಬಲ್ಗೇರಿಯಾದ ಕಝನ್‌ಲಕ್ ಪಟ್ಟಣದ ಸಮೀಪವಿರುವ ರೋಸ್‌ ವ್ಯಾಲಿಯಲ್ಲಿನ ಗುಲಾಬಿ-ಕುಯಿಲು; ಆಸ್ಟ್ರೋ-ಹಂಗರಿಯಾದ ಪ್ರವಾಸಿಗ ಎಫ್.ಕನಿಟ್ಜ್‌ ಮಾಡಿರುವ ನಕಾಶೆ ಕೆತ್ತನೆ.

ಕಸಿ ಮಾಡುವಿಕೆಯಿಂದ ಅಥವಾ ಕತ್ತರಿಸಿದ ಕಾಂಡಗಳನ್ನು ನೆಡುವ ವಿಧಾನದಿಂದ ತೋಟಗಾರಿಕೆ ಗುಲಾಬಿಗಳ ಮಾದರಿ ರೂಪಗಳನ್ನು ಹುಟ್ಟಿಸಬಹುದು. ತಳಿಗಳನ್ನು ಅವುಗಳ ಹೂವುಗಳಿಗಾಗಿ ಆಯ್ಕೆಮಾಡಲಾಗುತ್ತದೆ. ದೃಢತೆಯನ್ನು ಒದಗಿಸುವ ಮೂಲಕಾಂಡವೊಂದರ ಮೇಲೆ ಅವುಗಳನ್ನು ಕಸಿಮಾಡಬಹುದು ಅಥವಾ (ಹಳೆಯ ಉದ್ಯಾನ ಗುಲಾಬಿಗಳಂತೆ) ತಮ್ಮದೇ ಬೇರುಗಳನ್ನು ಬೆಳೆಸಿಕೊಳ್ಳಲೂ ಬಿಡಬಹುದು. ಬೆಳವಣಿಗೆಯ ಋತುವಿನ ಅವಧಿಯಲ್ಲಿ ಗುಲಾಬಿಗಳಿಗೆ ದಿನವೊಂದಕ್ಕೆ 5 ಗಂಟೆಗಳಷ್ಟು ಅವಧಿಯವರೆಗೆ ನೇರ ಬಿಸಿಲಿನ ಅಗತ್ಯವಿರುತ್ತದೆ. ಹೂ ಬಿಡುವಿಕೆ ಪ್ರಾರಂಭವಾದ ನಂತರ ಇಬ್ಬನಿಗೆ ಒಡ್ಡಿಕೊಂಡಾಗ, ಗುಲಾಬಿಗಳು ಚಳಿಗಾಲದಲ್ಲಿ ಜಡಸ್ಥಿತಿಯ ಹಂತಕ್ಕೆ ಪ್ರವೇಶಿಸುತ್ತವೆ. ಗುಲಾಬಿಯ ಸಾವಿರಾರು ತಳಿಗಳು ಹಾಗೂ ಮಿಶ್ರತಳಿಗಳನ್ನು ಹುಟ್ಟುಹಾಕಿ, ಉದ್ಯಾನದ ಬಳಕೆಗಾಗಿ ಆಯ್ಕೆಮಾಡಲಾಗಿದ್ದು, ಅವುಗಳಲ್ಲಿ ಬಹುಪಾಲು ತಳಿಗಳು ಜೋಡಿ-ಪುಷ್ಪಗಳ ತಳಿಗಳಾಗಿರುವುದೇ ಅಲ್ಲದೇ ಅವುಗಳ ಬಹುತೇಕ ಅಥವಾ ಎಲ್ಲಾ ಕೇಸರಗಳೂ ಹೆಚ್ಚುವರಿ ದಳಗಳಾಗಿ ಹಠಾತ್‌ ಬದಲಾವಣೆಗೆ ಒಳಗಾಗಿರುತ್ತವೆ. 19ನೇ ಶತಮಾನದ ಅರಂಭದಲ್ಲಿ ಫ್ರಾನ್ಸ್‌ನ ಜೋಸೆಫೀನ್ ಸಾಮ್ರಾಜ್ಞಿಯು ಮ್ಯಾಲ್ಮೇಷನ್‌ನಲ್ಲಿನ ತನ್ನ ಗುಲಾಬಿ ಉದ್ಯಾನಗಳಲ್ಲಿ ಗುಲಾಬಿ ತಳಿಗಳ ಬೆಳೆಸುವಿಕೆಯ ಪ್ರಕ್ರಿಯೆಯನ್ನು ಪ್ರೋತ್ಸಾಹಿಸಿದಳು. 1840ರಷ್ಟು ಹಿಂದೆಯೇ, ಒಂದು ಸಾವಿರಕ್ಕೂ ಮೀರಿದ ಸಂಖ್ಯೆಯ ಗುಲಾಬಿಯ ವೈವಿಧ್ಯಮಯ ತಳಿಗಳು, ಪ್ರಕಾರಗಳು ಹಾಗೂ ಜಾತಿಗಳ ಒಂದು ಸಂಗ್ರಹಾಗಾರವು ಅಸ್ತಿತ್ವಕ್ಕೆ ಬಂತು. ಇಂಗ್ಲೆಂಡ್‌ನಲ್ಲಿರುವ, ಆರಂಭಿಕ ವಿಕ್ಟೋರಿಯನ್‌ ಯುಗದ ಒಂದು ಉದ್ಯಾನದ ಸಮಾಧಿ ಮತ್ತು ಸಸ್ಯಾಲಯವಾದ ಅಬ್ನೆ ಪಾರ್ಕ್‌ ಸಮಾಧಿಗಾಗಿ ಲಾಡಿಜಸ್‌ ನರ್ಸರಿಯ ವತಿಯಿಂದ ಒಂದು ಗುಲಾಬಿ ತೋಟವನ್ನು ಹುಟ್ಟುಹಾಕಿದಾಗ ಇದು ಕಾರ್ಯಸಾಧ್ಯವಾಯಿತು. ಗುಲಾಬಿ ಹೂವಿನ ಗಾತ್ರ ಮತ್ತು ಬಣ್ಣಕ್ಕೆ ಸಾರ್ವತ್ರಿಕವಾಗಿ ಒತ್ತುನೀಡಿದ ಇಪ್ಪತ್ತನೇ ಶತಮಾನದ ಗುಲಾಬಿ ತಳಿ ಉತ್ಪಾದಕರು, ದೊಡ್ಡ ಗಾತ್ರದ, ಆಕರ್ಷಕವಾಗಿರುವ, ಸ್ವಲ್ಪವೇ ಅಥವಾ ಸುವಾಸನೆಯೇ ಇರದ ಹೂವುಗಳನ್ನು ಉತ್ಪಾದಿಸಿದರು. ವಿಪರ್ಯಾಸವೆಂಬಂತೆ, ಅನೇಕ ಕಾಡು ಗುಲಾಬಿಗಳು ಹಾಗೂ "ಹಳೆಯ-ಶೈಲಿಯ" ಗುಲಾಬಿಗಳು ತೀವ್ರವಾದ ಸಿಹಿ ಪರಿಮಳವನ್ನು ಹೊಂದಿರುತ್ತವೆ. ಸಮಶೀತೋಷ್ಣ ಹವಾಗುಣದಲ್ಲಿ ಗುಲಾಬಿಗಳು ಹುಲುಸಾಗಿ ಬೆಳೆಯುತ್ತವೆ.ಏಷ್ಯಾದ ಜಾತಿಗಳನ್ನು ಆಧರಿಸಿರುವ ಗುಲಾಬಿ ತಳಿಗಳು ತಮ್ಮದೇ ಮೂಲ ಉಪ-ಉಷ್ಣವಲಯದ ಪರಿಸರಗಳಲ್ಲಿ ಚೆನ್ನಾಗಿ ಬೆಳೆಯುತ್ತವೆ. ಕೆಲವೊಂದು ಜಾತಿಗಳು ಹಾಗೂ ತಳಿಗಳು ಉಷ್ಣವಲಯದ ಹವಾಮಾನದಲ್ಲಿ, ಅದರಲ್ಲೂ ವಿಶೇಷವಾಗಿ, ಸೂಕ್ತವಾದ ಮೂಲಕಾಂಡಗಳಿಗೆ ಅವುಗಳನ್ನು ಕಸಿಮಾಡಿದಾಗ, ಹುಲುಸಾಗಿ ಬೆಳೆಯುತ್ತವೆ. ಉದ್ಯಾನ ಗುಲಾಬಿಗಳನ್ನು ವರ್ಗೀಕರಿಸಲು ಯಾವುದೇ ಏಕ ವರ್ಗೀಕರಣ ವ್ಯವಸ್ಥೆಯಿಲ್ಲ. ಆದಾಗ್ಯೂ, ಒಟ್ಟಾರೆಯಾಗಿ ಗುಲಾಬಿಗಳನ್ನು ಮೂರು ಪ್ರಮುಖ ಗುಂಪುಗಳಲ್ಲಿ ಒಂದರಲ್ಲಿ ಇರಿಸಲಾಗಿದೆ:

ಕಾಡು ಗುಲಾಬಿಗಳು

[ಬದಲಾಯಿಸಿ]

ಮೇಲೆ ಪಟ್ಟಿ ಮಾಡಲಾದ ಜಾತಿಗಳು ಹಾಗೂ ಅವುಗಳ ಕೆಲವೊಂದು ಮಿಶ್ರತಳಿಗಳು ಕಾಡು ಗುಲಾಬಿಗಳಲ್ಲಿ ಸೇರಿವೆ.

ಹಳೆಯ ಉದ್ಯಾನ ಗುಲಾಬಿಗಳು

[ಬದಲಾಯಿಸಿ]

ಹಳೆಯ ಉದ್ಯಾನ ಗುಲಾಬಿಗಳಲ್ಲಿ ಬಹುಪಾಲನ್ನು ಈ ಕೆಳಕಂಡ ಗುಂಪುಗಳಲ್ಲಿ ಒಂದರೊಳಗೆ ವರ್ಗೀಕರಿಸಲಾಗಿದೆ: ಸಾರ್ವತ್ರಿಕವಾಗಿ ಹೇಳುವುದಾದರೆ, ಯುರೋಪ್ ಮೂಲದ ಅಥವಾ ಮೆಡಿಟರೇನಿಯನ್ ಮೂಲದ ಹಳೆಯ ಉದ್ಯಾನ ಗುಲಾಬಿಗಳು ಒಂದು ಸಲ ಹೂಬಿಡುವ ಕಾಡಿನ ಪೊದೆಸಸ್ಯಗಳಾಗಿದ್ದು ಗಮನಾರ್ಹ ಪ್ರಮಾಣದ ಪರಿಮಳವನ್ನು ಹೊಂದಿರುವ, ಮುಖ್ಯವಾಗಿ ಬಿಳಿ, ನಸುಗೆಂಪು ಮತ್ತು ಕೆಂಪು ಛಾಯೆಗಳ ಜೋಡಿ-ಪುಷ್ಪಿ ಹೂವುಗಳನ್ನು ಅರಳಿಸುತ್ತವೆ. ಈ ಪೊದೆಸಸ್ಯಗಳ ಕಿರು ಎಲೆಗಳು ಅಥವಾ ಪರ್ಣಕಗಳು ಹೆಚ್ಚಿನ ರೀತಿಯಲ್ಲಿ ರೋಗ-ನಿರೋಧಕ ಶಕ್ತಿಯನ್ನು ಹೊಂದಿದ್ದು, ಎರಡು-ವರ್ಷ-ಹಳೆಯದಾದ ಬಿದಿರುಗಳ ಮೇಲೆ ಅವು ಸಾಮಾನ್ಯವಾಗಿ ಹೂ ಬಿಡುತ್ತವೆ.

'ಆಲ್ಬಾ ಸೆಮಿಪ್ಲೆನಾ', ಒಂದು ಆಲ್ಬಾ ಗುಲಾಬಿ

ಆಲ್ಬಾ

[ಬದಲಾಯಿಸಿ]

"ಬಿಳಿ ಗುಲಾಬಿಗಳು" ಅಕ್ಷರಶಃ R. ಅರ್ವೆನ್ಸಿಸ್‌ ಮತ್ತು ಸನಿಹದ ಸಹವರ್ತಿಯಾದ R. ಆಲ್ಬಾ ದಿಂದ ಹುಟ್ಟಿಕೊಂಡಿವೆ. ಪ್ರಾಯಶಃ, ರೋಮನ್ನರು ಗ್ರೇಟ್‌ ಬ್ರಿಟನ್‌ಗೆ ತಂದ ಹಳೆಯ ಉದ್ಯಾನ ಗುಲಾಬಿಗಳಲ್ಲಿ ಈ ಕೆಲವೂ ಸೇರಿವೆ. ಈ ಪೊದೆಸಸ್ಯಗಳು ವರ್ಷಕ್ಕೊಮ್ಮೆ ವಸಂತ ಋತುವಿನಲ್ಲಿ ಹೂಬಿಡುತ್ತವೆ. ಹೂವುಗಳು ಬಿಳಿ ಅಥವಾ ಪೇಲವವಾದ ನಸುಗೆಂಪು ಬಣ್ಣದಲ್ಲಿರುತ್ತವೆ. ಈ ಪೊದೆಸಸ್ಯಗಳು ಆಗಿಂದಾಗ್ಗೆ ಬೂದು-ಹಸಿರಿನ ಎಲೆಗೊಂಚಲನ್ನು ಹೊಂದಿರುವುದೇ ಅಲ್ಲದೇ, ಬೆಳೆಯುವಾಗ ಹಬ್ಬುವಿಕೆಯ ಸ್ವಭಾವವನ್ನು ಹೊರಹೊಮ್ಮಿಸುತ್ತವೆ. ಉದಾಹರಣೆಗಳು: 'ಆಲ್ಬಾ ಸೆಮಿಪ್ಲೀನಾ', 'ಯಾರ್ಕ್‌ನ ಬಿಳಿ ಗುಲಾಬಿ '.

1790ರ ಮುಂಚಿನ ಗ್ಯಾಲಿಕಾ ಗುಲಾಬಿ 'ಚಾರ್ಲ್ಸ್‌ ಡಿ ಮಿಲ್ಸ್‌,'

ಗ್ಯಾಲಿಕಾ

[ಬದಲಾಯಿಸಿ]

ಗ್ಯಾಲಿಕಾ ಅಥವಾ ಪ್ರಾವಿನ್ಸ್‌ ಗುಲಾಬಿಗಳು ಅತ್ಯಂತ ಹಳೆಯ ವರ್ಗಕ್ಕೆ ಸೇರಿವೆ. ಕೇಂದ್ರೀಯ ಮತ್ತು ದಕ್ಷಿಣ ಯುರೋಪ್‌ನ ಮೂಲದಿಂದ ಬಂದಿರುವ R. ಗ್ಯಾಲಿಕಾ ದಿಂದ ಅವುಗಳನ್ನು ಅಭಿವೃದ್ಧಿಪಡಿಸಲಾಗಿದೆ. ಔಷಧ ವ್ಯಾಪಾರಿಯ ಗುಲಾಬಿ ಎಂದು ಕರೆಯಲ್ಪಡುವ R. ಗ್ಯಾಲಿಕಾ ಅಫಿಷಿನೇಲಿಸ್‌ ಪ್ರಕಾರವನ್ನು ಮಧ್ಯಯುಗದಲ್ಲಿ ಕ್ರೈಸ್ತ ಸನ್ಯಾಸಿಗಳ ಸಸ್ಯ ಸಂಗ್ರಹಾಲಯದಲ್ಲಿ ಬೆಳೆಸಲಾಗುತ್ತಿತ್ತು. ಈ ಗುಲಾಬಿಯೇ ಲ್ಯಾಂಕಾಸ್ಟರ್‌ನ ಕೆಂಪು ಗುಲಾಬಿ ಎಂಬುದಾಗಿ ಇಂಗ್ಲಿಷ್‌ ಇತಿಹಾಸದಲ್ಲಿ ಪ್ರಸಿದ್ಧಿ ಪಡೆಯಿತು.ಅಪರೂಪವಾಗಿ 4 ಅಡಿಗಳಿಗಿಂತಲೂ ಹೆಚ್ಚು ಎತ್ತರವಿರುವ ಕುಬ್ಜ ಪೊದೆಸಸ್ಯಗಳ ಮೇಲೆ, ಬೇಸಿಗೆ ಕಾಲದಲ್ಲಿ ಗ್ಯಾಲಿಕಾಗಳು ಹೂಬಿಡುತ್ತವೆ. ಒಂದು-ಸಲ ಹೂಬಿಡುವ ಬಹುತೇಕ ಇತರ ಹಳೆಯ ಉದ್ಯಾನ ಗುಲಾಬಿಗಳಂತಿರದ ಗ್ಯಾಲಿಕಾ ವರ್ಗವು, ಕೆಂಪು, ಕೆಂಗಂದು ಮತ್ತು ಗಾಢವಾದ ನೇರಳೆಯಂತಿರುವ ಕಡುಗೆಂಪಿನ ಛಾಯೆಗಳನ್ನು ಒಳಗೊಂಡಿದೆ.ಉದಾಹರಣೆಗಳು: 'ಕಾರ್ಡಿನಲ್ ಡಿ ರಿಚೆಲ್ಯೂ', 'ಚಾರ್ಲ್ಸ್‌ ಡಿ ಮಿಲ್ಸ್‌', 'ರೋಸಾ ಮುಂಡಿ' (R. ಗ್ಯಾಲಿಕಾ ವರ್ಸಿಕಲರ್ ).

'ಶರತ್ಕಾಲದ ದಮಾಸ್ಕ್‌'('ಕ್ವಾಟ್ರೇ ಸೈಸನ್ಸ್‌')

ದಮಾಸ್ಕ್

[ಬದಲಾಯಿಸಿ]

ಪ್ರಾಚೀನ ಕಾಲದಲ್ಲಿನ (ರೋಸಾ ಮೊಸ್ಚಾಟಾ x ರೋಸಾ ಗ್ಯಾಲಿಕಾ ) x ರೋಸಾ ಫೆಡ್‌ಷೆಂಕೋನಾ ಪ್ರಭೇದಗಳ ನಡುವಣ ನೈಸರ್ಗಿಕ ಮಿಶ್ರತಳಿಯಿಂದ ಇದು ಉದ್ಭವಿಸಿದೆ.[]1254ಕ್ಕೂ ನೂರಾರು ವರ್ಷಗಳ ಹಿಂದೆಯೇ, ಯುರೋಪ್‌ನಲ್ಲಿ ಕಡೇ ಪಕ್ಷ ಒಂದು ದಮಾಸ್ಕ್‌ ಗುಲಾಬಿಯ ಅಸ್ತಿತ್ವವಿತ್ತು ಎಂಬುದಕ್ಕೆ ಪ್ರಾಚೀನ ರೋಮನ್ನರ ಹಸಿ ಭಿತ್ತಿಚಿತ್ರಗಳಲ್ಲಿ ಸಾಕ್ಷಿಯಿದೆಯಾದರೂ, 1254 ಮತ್ತು 1276ರ ನಡುವೆ ಪರ್ಷಿಯಾದಿಂದ ಯುರೋಪ್‌ಗೆ ದಮಾಸ್ಕ್‌ ಗುಲಾಬಿಗಳನ್ನು ತಂದ ಕೀರ್ತಿ ರಾಬರ್ಟ್‌ ಡಿ ಬ್ರೈಗೆ ಸಲ್ಲುತ್ತದೆ. ಬೇಸಿಗೆಯ ದಮಾಸ್ಕ್‌ಗಳು ಬೇಸಿಗೆಯಲ್ಲಿ ಒಮ್ಮೆ ಅರಳುತ್ತವೆ.ಶರತ್ಕಾಲದ ಅಥವಾ ಎಲ್ಲಾ ಋತುಗಳ ದಮಾಸ್ಕ್‌ಗಳು ನಂತರ ಮತ್ತೊಮ್ಮೆ ಅರಳುತ್ತವೆ ಮತ್ತು ಅವು ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ಕಾಲಗಳಲ್ಲಿ ಹೂಬಿಡುವ ಏಕೈಕ ಹಳೆಯ ಯುರೋಪಿಯನ್ ಗುಲಾಬಿಗಳಾಗಿವೆ.ಅವ್ಯವಸ್ಥಿತವಾಗಿ ಹಬ್ಬುವ ಬೆಳವಣಿಗೆ ಸ್ವಭಾವ ಮತ್ತು ತೀಕ್ಷ್ಣವಾದ ಮುಳ್ಳುಗಳನ್ನು ಒಳಗೊಳ್ಳುವ ದೃಷ್ಟಿಯಿಂದ, ಉದ್ದವಾದ ಮತ್ತು ತೆಳ್ಳನೆಯ ಕಾಂಡವನ್ನು ಹೊಂದಲು ಈ ಪೊದೆಸಸ್ಯಗಳು ಬಯಸುತ್ತವೆ. ಹೂವುಗಳು ಗ್ಯಾಲಿಕಾ ಪ್ರಕಾರಗಳಿಗಿಂತ ಹೆಚ್ಚು ಸಡಿಲವಾಗಿರುವ ದಳ ರಚನೆಯನ್ನು ಹೊಂದಿದ್ದು, ತೀಕ್ಷ್ಣವಾದ, ಕಟುವಾಸನೆಯ ಪರಿಮಳವನ್ನು ಹೊಂದಿರುತ್ತವೆ. ಉದಾಹರಣೆಗಳು: 'ಇಸ್‌ಪಹಾನ್', 'ಮ್ಯಾಡಮ್ ಹಾರ್ಡಿ'.

ಸೆಂಟಿಫೋಲಿಯಾ ಅಥವಾ ಪ್ರಾವೆನ್ಸ್‌

[ಬದಲಾಯಿಸಿ]

ಸೆಂಟಿಫೋಲಿಯಾ ಗುಲಾಬಿಗಳು ಹದಿನೇಳನೇ ಶತಮಾನದಲ್ಲಿ ನೆದರ್‌ಲೆಂಡ್ಸ್‌ನಲ್ಲಿ ಮೈದಳೆದವು. ಅವುಗಳು ಹೊಂದಿರುವ "ಒಂದು ನೂರು ದಳಗಳು" ಅವುಗಳಿಗೆ ನೀಡಲಾಗಿರುವ ಹೆಸರಿಗೆ ಮೂಲಕಾರಣ. ಈ ಗುಲಾಬಿಗಳ ಆಕಾರವು ಗೋಳಾಕಾರದಲ್ಲಿರುವುದರಿಂದ ಅವುಗಳನ್ನು "ಕೋಸು" (ಕ್ಯಾಬೇಜ್) ಗುಲಾಬಿಗಳು ಎಂದೂ ಕರೆಯಲಾಗುತ್ತದೆ. ದಮಾಸ್ಕ್‌ ಗುಲಾಬಿಗಳನ್ನು ಆಲ್ಬಾ ಗುಲಾಬಿಗಳೊಂದಿಗೆ ಸಂಕರಿಸಿದ ಪರಿಣಾಮವಾಗಿ ಮೈದಳೆದಿರುವ ಸೆಂಟಿಫೋಲಿಯಾ ಗುಲಾಬಿಗಳೆಲ್ಲವೂ ಒಮ್ಮೆ ಮಾತ್ರ ಹೂಬಿಡುತ್ತವೆ. ವಿವಿಧ ಗಾತ್ರಗಳು ಹಾಗೂ ಸ್ವರೂಪಗಳ ರೂಪಾಂತರಗಳನ್ನು ಉತ್ಪತ್ತಿ ಮಾಡುವೆಡೆಗಿನ ಅವುಗಳ ಒಲವಿನಿಂದಾಗಿ ಈ ವರ್ಗವು ಗಮನ ಸೆಳೆದಿದ್ದು, ಪಾಚಿ ಗುಲಾಬಿಗಳು ಹಾಗೂ ಪ್ರಪ್ರಥಮ ಚಿಕಣಿ ಗುಲಾಬಿಗಳಲ್ಲಿ ಕೆಲವೊಂದನ್ನು ಈ ವರ್ಗವು ಒಳಗೊಂಡಿದೆ (ಕೆಳಗೆ ನೋಡಿ). ಉದಾಹರಣೆಗಳು: 'ಸೆಂಟಿಫೋಲಿಯಾ', 'ಪಾಲ್ ರಿಕೌಲ್ಟ್‌'.

ಮೂಲತಃ ಸೆಂಟಿಫೋಲಿಯಾ ವರ್ಗಕ್ಕೆ ಸೇರಿರುವ ಗುಲಾಬಿಗಳ (ಅಥವಾ ಕೆಲವೊಮ್ಮೆ ದಮಾಸ್ಕ್‌ ಗುಲಾಬಿಗಳ) ರೂಪಾಂತರಗಳಾಗಿರುವ ಪಾಚಿ ಗುಲಾಬಿಗಳು, ಕಾಂಡಗಳು ಹಾಗೂ ಪುಷ್ಪಪಾತ್ರೆಯ ದಳಗಳ ಮೇಲೆ ಒಂದು ಪಾಚಿಯುಕ್ತ ಗಂತಿ ಅಥವಾ ಬುಗುಟೆಯನ್ನು ಹೊಂದಿದ್ದು, ಈ ಗಂತಿಯನ್ನು ಉಜ್ಜಿದಾಗ ಒಂದು ಕಾಡಿನ ವಾತಾವರಣದ ಅಥವಾ ಗುಗ್ಗುಳದಂತಹ ಆಹ್ಲಾದಕರ ಪರಿಮಳವು ಹೊರಹೊಮ್ಮುತ್ತದೆ. ಈ ಒಂದು ಅನನ್ಯ ಲಕ್ಷಣದಿಂದಾಗಿಯೇ ಪಾಚಿ ಗುಲಾಬಿಗಳನ್ನು ಬೆಳೆಸಲಾಗುತ್ತದೆ. ಆದರೆ, ಹೊಸ ಗುಲಾಬಿ ವರ್ಗೀಕರಣಗಳ ಅಭಿವೃದ್ಧಿಯೆಡೆಗೆ ಒಂದು ಗುಂಪಾಗಿ ಅವು ಯಾವುದೇ ಕೊಡುಗೆಯನ್ನು ನೀಡಿಲ್ಲ ಎನ್ನಬಹುದು. ಸೆಂಟಿಫೋಲಿಯಾದ ಹಿನ್ನೆಲೆಯನ್ನು ಹೊಂದಿರುವ ಪಾಚಿ ಗುಲಾಬಿಗಳು ಒಮ್ಮೆ ಮಾತ್ರ ಹೂಬಿಡುವ ಗುಣ ಹೊಂದಿರುತ್ತವೆ. ಕೆಲವೊಂದು ಪಾಚಿ ಗುಲಾಬಿಗಳು ಮತ್ತೆ ಮತ್ತೆ ಹೂಬಿಡುವ ಗುಣವನ್ನು ಪ್ರದರ್ಶಿಸುವ ಮೂಲಕ, ತಮ್ಮಲ್ಲಿನ ಶರತ್ಕಾಲದ ದಮಾಸ್ಕ್‌ ಗುಲಾಬಿಗಳ ಗುಣ-ಪ್ರಮಾಣವನ್ನು ಸೂಚಿಸುತ್ತವೆ. ಉದಾಹರಣೆ: 'ಸಾಮಾನ್ಯ ಪಾಚಿ' (ಸೆಂಟಿಫೋಲಿಯಾ-ಪಾಚಿ), 'ಆಲ್‌ಫ್ರೆಡ್ ಡಿ ದಾಲ್ಮಾಸ್' (ಶರತ್ಕಾಲದ ದಮಾಸ್ಕ್ ಪಾಚಿ).

ಪೋರ್ಟ್‌ಲೆಂಡ್‌

[ಬದಲಾಯಿಸಿ]

ಚೈನಾ ಗುಲಾಬಿಗಳು ಹಾಗೂ ಯುರೋಪ್‌ನ ಗುಲಾಬಿಗಳ ನಡುವಿನ ಸಂಕರೀಕರಣದಿಂದಾಗಿ ಮೈದಳೆದ ಮೊದಲ ಗುಂಪೇ ಪೋರ್ಟ್‌ಲೆಂಡ್‌ ಗುಲಾಬಿಗಳು ಎಂದು ಬಹಳ ಕಾಲದಿಂದ ಭಾವಿಸಲಾಗಿತ್ತು. ಆದರೆ, ಲಯೋನ್ಸ್‌ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ಕೈಗೊಳ್ಳಲಾದ DNA ವಿಶ್ಲೇಷಣೆಯು ಇದನ್ನು ಅಲ್ಲಗಳೆದಿದೆ. ಮೂಲ ಪೋರ್ಟ್‌ಲೆಂಡ್‌ ಗುಲಾಬಿಗಳು ಚೈನಾ ಗುಲಾಬಿಗಳ ವಂಶಾವಳಿಯನ್ನು ಹೊಂದಿಲ್ಲ; ಆದರೆ ಶರತ್ಕಾಲದ ದಮಾಸ್ಕ್‌/ಗ್ಯಾಲಿಕಾ ಗುಲಾಬಿಗಳ ವಂಶ ಪರಂಪರೆಯನ್ನು ಇವು ಪ್ರತಿನಿಧಿಸುತ್ತವೆ ಎಂದು ಸದರಿ ವಿಶ್ಲೇಷಣೆಯು ನಿರೂಪಿಸಿದೆ.[] 1775ರ ಸುಮಾರಿಗೆ R. ಪೀಸ್ತಾನಾ ಅಥವಾ 'ಸ್ಕಾರ್ಲೆಟ್ ಫೋರ್ ಸೀಸನ್ಸ್‌' ಎಂಬ ಹೆಸರಿನಿಂದ ಜನಜನಿತವಾಗಿದ್ದ ಗುಲಾಬಿಯೊಂದನ್ನು (ಈಗ ಅವು ಕೇವಲ 'ಪೋರ್ಟ್‌ಲೆಂಡ್‌ ಗುಲಾಬಿ' ಎಂದೇ ಪ್ರಸಿದ್ಧ) ಇಟಲಿಯಿಂದ ಸ್ವೀಕರಿಸಿದ ಪೋರ್ಟ್‌ಲೆಂಡ್‌ನ ಡ್ಯೂಕ್‌ನ ಹೆಂಡತಿಯ (ಡಚೆಸ್ ಆಫ್ ಪೋರ್ಟ್‌ಲೆಂಡ್‌) ಹೆಸರನ್ನೇ ಈ ಗುಲಾಬಿಗಳಿಗೆ ಇಡಲಾಗಿದೆ. ಆ ಒಂದು ಗುಲಾಬಿಯಿಂದಲೇ ಪೋರ್ಟ್‌ಲೆಂಡ್‌ ಗುಲಾಬಿಗಳ ಸಂಪೂರ್ಣ ವರ್ಗವನ್ನು ಅಲ್ಲಿಂದ ಅಭಿವೃದ್ಧಿಪಡಿಸಲಾಯಿತು. ಮಿಶ್ರವರ್ಣದ ಯುರೋಪ್‌-ಶೈಲಿಯ ಹೂವುಗಳನ್ನು ಒಳಗೊಂಡ, ಮತ್ತೆ ಮತ್ತೆ ಹೂಬಿಡುವ ಗುಲಾಬಿಗಳ ಮೊದಲ ವರ್ಗಕ್ಕೆ ಸೇರಿರುವ ಈ ಸಸ್ಯಗಳು, ಪುಟ್ಟದಾಗಿರುವ ಮತ್ತು ಪೊದೆಸಸ್ಯದಂತೆ ಇರುವ ಗುಣವನ್ನು ವ್ಯಕ್ತಪಡಿಸುವುದರ ಜೊತೆಗೆ, ಅವುಗಳ ಹೂಗಳ ತೊಟ್ಟುಗಳೂ ಸಹ ಅದಕ್ಕೆ ತಕ್ಕಂತೆಯೇ ಪುಟ್ಟದಾಗಿರುತ್ತವೆ. ಉದಾಹರಣೆ: 'ಜೇಮ್ಸ್ ವೀಚ್', 'ರೋಸ್ ಡಿ ರೆಶ್ಚ್', 'ಕೋಮ್ಟ್‌ ಡಿ ಚೇಂಬೌರ್ಡ್‌'.

'ಪಾರ್ಸನ್ಸ್‌ ಪಿಂಕ್‌ ಚೈನಾ' ಅಥವಾ 'ಓಲ್ಡ್‌ ಬುಷ್', "ಸ್ಟಡ್‌ ಚೈನಾ ಗುಲಾಬಿಗಳಲ್ಲಿ" ಒಂದು

ರೋಸಾ ಚೈನೆನ್ಸಿಸ್ ನ್ನು ಆಧರಿಸಿರುವ ಚೈನಾ ಗುಲಾಬಿಗಳನ್ನು ಸಾವಿರಾರು ವರ್ಷಗಳಿಂದಲೂ ಪೂರ್ವ ಏಷ್ಯಾದಲ್ಲಿ ಬೆಳೆಯಲಾಗುತ್ತಿತ್ತು. 1700ರ ದಶಕದ ಅಂತ್ಯಭಾಗದಲ್ಲಿ ಅವು ಅಂತಿಮವಾಗಿ ಪಶ್ಚಿಮ ಯುರೋಪ್‌ನ್ನು ತಲುಪಿದವು. ಇಂದಿನ ಮಿಶ್ರತಳಿ ಗುಲಾಬಿಗಳ ಪೈಕಿ ಅನೇಕವುಗಳಿಗೆ ಅವು ಮೂಲಸಸ್ಯಗಳಾಗಿರುವುದಲ್ಲದೇ,[] ಹೂವಿನ ಸ್ವರೂಪಕ್ಕೆ ಒಂದು ಬದಲಾವಣೆಯನ್ನೂ ತಂದಿವೆ ಎಂದು ಹೇಳಬಹುದು.[] ಮೇಲೆ ನಮೂದಿಸಲಾದ ಯುರೋಪ್‌ನ ಗುಲಾಬಿ ವರ್ಗಗಳೊಂದಿಗೆ ಹೋಲಿಸಿದಾಗ, ಸಣ್ಣ ರೆಂಬೆಗಳ ಹಾಗೂ ಶೀತಕ್ಕೆ ಹೆಚ್ಚು ಸಂವೇದಿಯಾಗಿರುವ ಪೊದೆಸಸ್ಯಗಳ ಮೇಲಿನ ಕಡಿಮೆ ಪರಿಮಳದ, ಚಿಕ್ಕದಾದ ಹೂಗಳನ್ನು ಚೈನಾದ ಗುಲಾಬಿಗಳು ಹೊಂದಿದ್ದವು. ಇಷ್ಟಾಗಿಯೂ, ಬೇಸಿಗೆಯಾದ್ಯಂತ ಮತ್ತು ಶರತ್ಕಾಲದ ಅಂತ್ಯದವರೆಗೆ ಹೂಬಿಡುತ್ತಲೇ ಇರುವ ವಿಸ್ಮಯಕಾರಕ ಸಾಮರ್ಥ್ಯವನ್ನು ಅವು ಹೊರಹೊಮ್ಮಿಸಿದವು. ತನ್ಮೂಲಕ ಅವುಗಳ ಐರೋಪ್ಯ ಸಹವರ್ತಿಗಳಿಗಿಂತ ಬೇರೆಯದೇ ಆದ ಗುಣವನ್ನು ಪ್ರದರ್ಶಿಸಿದವು ಎಂದು ಹೇಳಬಹುದು. ಇದರಿಂದಾಗಿ, 1800ರ ದಶಕದ ಆರಂಭದಲ್ಲಿ ಸಂಕರೀಕರಣದ ಅಥವಾ ಮಿಶ್ರತಳಿ ಹುಟ್ಟುಹಾಕುವ ಉದ್ದೇಶಗಳಿಗಾಗಿ ಇವುಗಳನ್ನೇ ಹೆಚ್ಚು ಹೆಚ್ಚು ಬಯಸುವ ಪರಿಸ್ಥಿತಿ ನಿರ್ಮಾಣವಾಯಿತು. ಯುರೋಪ್‌ನ ಗುಲಾಬಿಗಳು ಅರಳಿಕೊಂಡ ನಂತರ ಮಸುಕಾಗುವ ಸ್ವಭಾವವನ್ನು ಹೊಂದಿದ್ದವು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ, ಕಾಲಾನಂತರದಲ್ಲಿ "ಬಿಸಿಲುಗಂದು" ಪ್ರಕ್ರಿಯೆಗೆ ಈಡಾಗುವ ಅಥವಾ ಕಪ್ಪಾಗುವ ಕಡೆಗೆ ಒಲವು ತೋರಿದ್ದರಿಂದಲೂ ಚೈನಾ ಗುಲಾಬಿಗಳ ಹೂವುಗಳು ಗಮನಾರ್ಹವಾಗಿದ್ದವು.[] ಪ್ರದರ್ಶನ ಭಾಗ್ಯವನ್ನು ಕಾಣುತ್ತಿರುವ ಇಂದಿನ ಗುಲಾಬಿಗಳು ತಮ್ಮ ಸ್ವರೂಪವನ್ನು ಚೈನಾ ಗುಲಾಬಿಗಳ ವಂಶವಾಹಿಗಳಿಂದ ಪಡೆದಿವೆ ಮತ್ತು ಅರಳುವ ಸಮಯದಲ್ಲಿ ಬಿಚ್ಚಿ ಹರಡಿಕೊಳ್ಳುವ ತೆಳುವಾದ ಮೊಗ್ಗುಗಳನ್ನೂ ಸಹ ಚೈನಾ ಗುಲಾಬಿಗಳು ತಂದಿವೆ ಎನ್ನಬಹುದು.[] ಗ್ರಹಾಂ ಸ್ಟುವರ್ಟ್‌ ಥಾಮಸ್‌ ಪ್ರಕಾರ, ಚೈನಾ ಗುಲಾಬಿಗಳ ವರ್ಗದ ಮೇಲೆಯೇ ಆಧುನಿಕ ಗುಲಾಬಿಗಳು ನಿರ್ಮಾಣಗೊಂಡಿವೆ.[] ಹದಿನೆಂಟನೇ ಶತಮಾನದ ಅಂತ್ಯದಲ್ಲಿ ಮತ್ತು ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ನಾಲ್ಕು "ಸ್ಟಡ್‌ ಚೈನಾ" ಗುಲಾಬಿಗಳನ್ನು (1792ರಲ್ಲಿ ಬಂದ 'ಸ್ಲೇಟರ್ಸ್ ಕ್ರಿಮ್ಸನ್ ಚೈನಾ', 1793ರಲ್ಲಿ ಬಂದ 'ಪಾರ್ಸನ್ಸ್ ಪಿಂಕ್ ಚೈನಾ', 1809ರಲ್ಲಿ ಬಂದ 'ಹ್ಯೂಮ್ಸ್ ಬ್ಲಷ್ ಟೀ-ಸೆಂಟೆಡ್ ಚೈನಾ' ಮತ್ತು 1824ರಲ್ಲಿ ಬಂದ 'ಪಾರ್ಕ್ಸ್ ಯೆಲ್ಲೋ ಟೀ-ಸೆಂಟೆಡ್ ಚೈನಾ') ಯುರೋಪ್‌ಗೆ ತರಲಾಯಿತು ಎಂಬುದು ಒಂದು ಪರಂಪರಾನುಗತ ಅಭಿಪ್ರಾಯವಾಗಿದೆ. ವಾಸ್ತವವಾಗಿ ಈ ಸಂಖ್ಯೆ ಇನ್ನೂ ಹೆಚ್ಚಿದ್ದು, ಚಹಾ ಗುಲಾಬಿಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಕಡೇಪಕ್ಷ ಐದು ಚೈನಾ ಗುಲಾಬಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು.[] ಇದರಿಂದಾಗಿ ಮತ್ತೆ ಮತ್ತೆ ಹೂಬಿಡುವ ಹಳೆಯ ಉದ್ಯಾನ ಗುಲಾಬಿಗಳ ಮತ್ತು ನಂತರದಲ್ಲಿ ಆಧುನಿಕ ಉದ್ಯಾನದ ಗುಲಾಬಿಗಳ ಮೊದಲ ವರ್ಗಗಳ ಸೃಷ್ಟಿಯಾಯಿತು. ಉದಾಹರಣೆಗಳು: 'ಓಲ್ಡ್‌ ಬ್ರಷ್ ಚೈನಾ', 'ಮ್ಯುಟಾಬಿಲಿಸ್' (ಚಿಟ್ಟೆ ಗುಲಾಬಿ).

ಚಹಾ ಗುಲಾಬಿ 'ಶ್ರೀಮತಿ ಡ್ಯುಡ್ಲೆ ಕ್ರಾಸ್' (ಪಾಲ್ 1907)

ಮೂಲ "ಚಹಾ-ಪರಿಮಳದ ಚೈನಾದ ಗುಲಾಬಿಗಳು" (ರೋಸಾ x ಓಡೊರೇಟಾ ) ಪೂರ್ವದೇಶಗಳ ತಳಿಗಳಾಗಿದ್ದು, R. ಚೈನೆನ್ಸಿಸ್ ಮತ್ತು ತಿಳಿ-ಹಳದಿ ಹೂವುಗಳನ್ನು ಹೊಂದಿರುವ ಏಷ್ಯಾದ ಒಂದು ಬೃಹತ್, ಹಬ್ಬುವ ಗುಲಾಬಿ ಜಾತಿಯಾದ R. ಜೈಗ್ಯಾಂಟಿಯಾ ನಡುವಿನ ಸಂಕರಣದ ಫಲವಾಗಿ ರೂಪುಗೊಂಡ ಮಿಶ್ರತಳಿಗಳನ್ನು ಪ್ರತಿನಿಧಿಸುತ್ತವೆ ಎಂದು ನಂಬಲಾಗಿತ್ತು. 1800ರ ದಶಕದ ಆರಂಭದಲ್ಲಿ ಅವುಗಳ ಪರಿಚಯವಾಗುತ್ತಿದ್ದಂತೆಯೇ, ವಿಶೇಷವಾಗಿ ಫ್ರಾನ್ಸ್‌ನಲ್ಲಿನ ತಳಿಗಾರರು ಅವುಗಳೊಂದಿಗಿನ ಕೆಲಸದಲ್ಲಿ ತೊಡಗಿಸಿಕೊಂಡು, ಮೊದಲು ಚೈನಾದ ಗುಲಾಬಿಗಳೊಂದಿಗೆ, ನಂತರ ಬರ್ಬನ್‌ಗಳು ಹಾಗೂ ನಾಯ್ಸೆಟ್‌ಗಳೊಂದಿಗೆ ಅವುಗಳನ್ನು ಸಂಕರೀಕರಿಸಿದರು. ಚಹಾ ಗುಲಾಬಿಗಳು ಪದೇ ಪದೇ ಹೂಬಿಡುವ ಗುಲಾಬಿಗಳಾಗಿದ್ದು, ಚೈನೀಸ್‌ ಕಪ್ಪು ಚಹಾವನ್ನು ನೆನಪಿಗೆ ತರುವ ಪರಿಮಳವನ್ನು ಹೊಂದಿರುವುದರಿಂದ (ಎಲ್ಲ ಸಮಯಗಳಲ್ಲೂ ಇದು ವಾಸ್ತವಿಕ ಸಂಗತಿಯಲ್ಲದಿದ್ದರೂ ಸಹ) ಆ ಹೆಸರನ್ನು ಪಡೆದುಕೊಂಡಿವೆ. ಚಹಾ ಗುಲಾಬಿಗಳ ಬಣ್ಣಗಳ ಶ್ರೇಣಿಯಲ್ಲಿ ಬಿಳಿ, ನಸುಗೆಂಪು ಮತ್ತು (ಈ ಸಮಯದ ನವೀನತೆಯಾದ) ಹಳದಿಯಿಂದ ಕಿತ್ತಳೆಯ ಎಳೆಗೆಂಪು ಬಣ್ಣದವರೆಗಿನ ಬಣ್ಣದ ಛಾಯೆಗಳು ಸೇರಿಕೊಂಡಿವೆ. ಅನೇಕ ತಳಿಗಳ ಒಂದೊಂದು ಹೂವುಗಳೂ ಅರೆ-ಲೋಲಕದಂತಿದ್ದು, ಕೃಶವಾಗಿರುವ ಹೂತೊಟ್ಟುಗಳ ಕಾರಣದಿಂದಾಗಿ ತೂಗಾಡುತ್ತಿರುತ್ತವೆ. "ವಿಶಿಷ್ಟವಾದ" ಚಹಾ ಗುಲಾಬಿಯೊಂದರಲ್ಲಿ, ಮೊನಚಾಗಿರುವ ಮೊಗ್ಗುಗಳು ಉನ್ನತ-ಮಧ್ಯಭಾಗದ ಹೂವುಗಳನ್ನು ಹೊಮ್ಮಿಸುತ್ತವೆ. ಈ ಹೂವುಗಳು ಸುರುಳಿಯಾಕಾರದಲ್ಲಿ ಬಿಚ್ಚಿ ಹರಡಿಕೊಳ್ಳುತ್ತವೆ ಮತ್ತು ದಳಗಳು ಅಂಚಿನ ಭಾಗದಲ್ಲಿ ಹಿಂದಕ್ಕೆ ಸುತ್ತಿಕೊಳ್ಳುತ್ತವೆ. ಇದರಿಂದಾಗಿ ದಳವು ಚೂಪಾದ ತುದಿಯನ್ನು ಹೊಂದಿರುವಂತೆ ಕಾಣುತ್ತದೆ. ಹೀಗಾಗಿ ಚಹಾ ಗುಲಾಬಿಗಳು ಇಂದಿನ "ಶಿಷ್ಟ" ಹೂಬೆಳೆಗಾರರ ಗುಲಾಬಿ ಸ್ವರೂಪದ ಸೃಷ್ಟಿಕರ್ತರಾಗಿವೆ. ಗುಲಾಬಿ ಇತಿಹಾಸಕಾರರಾದ ಬ್ರೆಂಟ್ ಡಿಕರ್‌ಸನ್‌ ಪ್ರಕಾರ, ಚಹಾ ಗುಲಾಬಿಯ ವರ್ಗೀಕರಣವು ಸಸ್ಯಶಾಸ್ತ್ರಕ್ಕೆ ಋಣಿಯಾಗಿರುವಂತೆಯೇ ಮಾರಾಟಗಾರಿಕೆಗೂ ಋಣಿಯಾಗಿದೆ. ಏಕೆಂದರೆ, 19ನೇ ಶತಮಾನದ ಸಸ್ಯತೋಟದ ಮಾರಾಟಗಾರರು ತಮ್ಮ ಏಷ್ಯಾ-ಆಧರಿತ ತಳಿಗಳಲ್ಲಿ ಬಯಸಿದ ಚಹಾ ಹೂವಿನ ಸ್ವರೂಪ ಕಂಡುಬಂದರೆ, ಆ ತಳಿಗೆ "ಚಹಾ ಗುಲಾಬಿಗಳು" ಎಂಬುದಾಗಿಯೂ, ಒಂದು ವೇಳೆ ಕಾಣಬರದಿದ್ದರೆ "ಚೈನಾ ಗುಲಾಬಿಗಳು" ಎಂಬುದಾಗಿಯೂ ಹಣೆಪಟ್ಟಿ ಕಟ್ಟುತ್ತಿದ್ದರು.[] ಚೈನಾ ಗುಲಾಬಿಗಳಂತೆ ಚಹಾ ಗುಲಾಬಿಗಳೂ ಸಹ ಶೀತದ ಹವಾಗುಣವನ್ನು ಸಹಿಸುವುದಿಲ್ಲ. ಉದಾಹರಣೆಗಳು: 'ಲೇಡಿ ಹಿಲ್ಲಿಂಗ್ಡನ್', 'ಮೆಮಾನ್ ಕೊಶೆಟ್‌'.

ಬರ್ಬನ್ ಗುಲಾಬಿ 'ಕ್ಲೈಂಬಿಂಗ್ ಸಾವನಿರ್ ಡಿ ಲಾ ಮ್ಯಾಲ್ಮೇಷನ್‌',(ಬೆಲ್ಯೂಝ್‌ 1843/ಬೆನೆಟ್‌ 1893)

ಬರ್ಬನ್

[ಬದಲಾಯಿಸಿ]

ಹಿಂದೂ ಮಹಾಸಾಗರದಲ್ಲಿನ ಮಡಗಾಸ್ಕರ್‌ ತೀರಪ್ರದೇಶದ ಆಚೆಗಿರುವ ಲಿಟ್ಲ್‌ ಡಿ ಬರ್ಬನ್‌ನಲ್ಲಿ (ಈಗ ಅದನ್ನು ರೀಯೂನಿಯನ್ ಎಂದು ಕರೆಯಲಾಗುತ್ತದೆ) ಬರ್ಬನ್‌ಗಳು ಸೃಷ್ಟಿಯಾದವು. ಪ್ರಾಯಶಃ ಅವು, ಶರತ್ಕಾಲದ ದಮಾಸ್ಕ್‌ ಹಾಗೂ 'ಹಳೆಯ ನಸುಗೆಂಪು' ಬಣ್ಣದ ಚೈನಾ ಗುಲಾಬಿಗಳ ನಡುವಿನ ಸಂಕರೀಕರಣದ ಫಲವಾಗಿ ರೂಪುಗೊಂಡಿರಬಹುದಾಗಿದೆ. ಈ ಎರಡೂ ಬಗೆಗಳನ್ನೂ ಸದರಿ ದ್ವೀಪದಲ್ಲಿ ಬೇಲಿಯ ಸಾಮಗ್ರಿಗಳಾಗಿ ಸಾಧಾರಣವಾಗಿ ಬಳಸಲಾಗುತ್ತಿತ್ತು. ಬಲವಾಗಿ ಬೆಳೆದಿರುವ, ಆಗಾಗ ಅರೆಯಾಗಿ-ಹಬ್ಬುವ ಪೊದೆಸಸ್ಯಗಳ ಮೇಲೆ ಅವು ಮತ್ತೆ ಮತ್ತೆ ಹೂಬಿಡುವ ಸ್ವಭಾವ ಹೊಂದಿದ್ದು, ಅವುಗಳ ಎಲೆಗೊಂಚಲುಗಳು ಹೊಳಪಿನಿಂದ ಕೂಡಿದ್ದರೆ, ಜಲ್ಲೆಗಳು ನೇರಳೆ ಛಾಯೆಯಲ್ಲಿರುತ್ತವೆ. 1823ರಲ್ಲಿ ಅವು ಫ್ರಾನ್ಸ್‌ನಲ್ಲಿ ಮೊದಲಿಗೆ ಪರಿಚಯಿಸಲ್ಪಟ್ಟವು. ಉದಾಹರಣೆಗಳು: 'ಲೂಯಿಸ್ ಒಡಿಯರ್', 'ಮೇಡಂ. ಪಿಯರೆ ಓಗರ್', 'ಝೆಫಿರೈನ್ ಡ್ರೌಹಿನ್'.

ನಾಯ್ಸೆಟ್ ಗುಲಾಬಿ 'ಡೆಸ್ಪ್ರೆಝ್ ಎ ಫ್ಲ್ಯೂರ್ಸ್ ಜೌನ್ಸ್‌' (ಡೆಸ್ಪ್ರೆಝ್ 1830)

ನಾಯ್ಸೆಟ್

[ಬದಲಾಯಿಸಿ]

ದಕ್ಷಿಣ ಕರೊಲಿನಾದ ಜಾನ್‌ ಚಾಂಪ್ನೀಸ್ ಎಂಬ ಭತ್ತದ ಬೆಳೆಗಾರನೊಬ್ಬನಿಂದ ಬಿತ್ತಲ್ಪಟ್ಟ ಒಂದು ಮಿಶ್ರತಳಿಯ ಮೊಳಕೆ ಸಸಿಯಾಗಿ ಮೊಟ್ಟಮೊದಲ ನಾಯ್ಸೆಟ್‌ ಗುಲಾಬಿಯು ಮೈದಳೆಯಿತು. 'ಪಾರ್ಸನ್ಸ್ ಪಿಂಕ್‌' ಎಂಬ ಚೈನಾ ಗುಲಾಬಿ ಹಾಗೂ ಶರತ್ಕಾಲದಲ್ಲಿ ಹೂಬಿಡುವ ಕಸ್ತೂರಿ ಗುಲಾಬಿ (ರೋಸಾ ಮೊಸ್ಚಾಟಾ ) ಇದರ ಸೃಷ್ಟಿಕರ್ತರಾಗಿದ್ದವು. ಇದರ ಸಂಕರೀಕರಣದ ಫಲವಾಗಿ, ವಸಂತ ಕಾಲದಿಂದ ಶರತ್ಕಾಲದವರೆಗೆ ಚಿಕ್ಕ ಚಿಕ್ಕ ನಸುಗೆಂಪು ಬಣ್ಣದ ಹೂವುಗಳನ್ನು ಒಳಗೊಂಡ ಬೃಹತ್ ಗೊಂಚಲುಗಳನ್ನು ಬಿಡುವ, ಬಲವಾಗಿ ಬೆಳೆದು ಹಬ್ಬುವ ಗುಲಾಬಿಯು ಮೈದಳೆಯಿತು. ತನ್ನ ('ಚಾಂಪ್ನೀಸ್ ಪಿಂಕ್ ಕ್ಲಸ್ಟರ್' ಎಂಬ ಹೆಸರಿನ) ಗುಲಾಬಿಯ ಮೊಳಕೆ ಸಸಿಗಳನ್ನು ಫಿಲಿಪ್ ನಾಯ್ಸೆಟ್‌ ಎಂಬ ತನ್ನ ತೋಟಗಾರಿಕಾ ಸ್ನೇಹಿತನಿಗೆ ಚಾಂಪ್ನೀಸ್ ಕಳಿಸಿದ. ಇದಕ್ಕೆ ಪ್ರತಿಯಾಗಿ ಆ ಸ್ನೇಹಿತ ಪ್ಯಾರಿಸ್‌ನಲ್ಲಿನ ತನ್ನ ಸೋದರ ಲೂಯಿಸ್‌ಗೆ ಗಿಡಗಳನ್ನು ಕಳಿಸಿದ. ಆಗ, 1817ರಲ್ಲಿ ಲೂಯಿಸ್‌ 'ಬ್ಲಷ್ ನಾಯ್ಸೆಟ್‌'ನ್ನು ಪರಿಚಯಿಸಿದ. ಮೊಟ್ಟಮೊದಲ ನಾಯ್ಸೆಟ್‌ಗಳು ಚಿಕ್ಕ-ಹೂವುಗಳನ್ನು ಹೊಂದಿದ್ದು, ಚಳಿಯನ್ನು ಸಮರ್ಥವಾಗಿ ತಡೆದುಕೊಳ್ಳಬಲ್ಲ ಏರುಬಳ್ಳಿಗಳಾಗಿದ್ದವು. ಆದರೆ ನಂತರದಲ್ಲಿ ಚಹಾ ಗುಲಾಬಿಯ ವಂಶವಾಹಿಗಳನ್ನು ಬೆರಕೆ ಮಾಡಿದ ಕಾರಣದಿಂದಾಗಿ, ಚಹಾ-ನಾಯ್ಸೆಟ್‌ ಉಪವರ್ಗವೊಂದು ಸೃಷ್ಟಿಯಾಯಿತು. ಈ ವರ್ಗದ ಸಸ್ಯಗಳಲ್ಲಿ ದೊಡ್ಡದಾದ ಹೂವುಗಳು, ಸಣ್ಣದಾದ ಗೊಂಚಲುಗಳು ಮತ್ತು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವ ಚಳಿ ಸಹಿಷ್ಣುತೆಯು ಕಂಡುಬಂತು.ಉದಾಹರಣೆಗಳು: 'ಬ್ಲಷ್ ನಾಯ್ಸೆಟ್', 'ಮೇಡಮ್.ಆಲ್‌ಫ್ರೆಡ್ ಕ್ಯಾರೈರೆ' (ನಾಯ್ಸೆಟ್‌), 'ಮರಿಕಲ್ ನೀಲ್' (ಚಹಾ-ನಾಯ್ಸೆಟ್‌).(ನಾಯ್ಸೆಟ್‌ ಗುಲಾಬಿಗಳ ಕುರಿತಾದ ಜರ್ಮನ್ ಲೇಖನಗಳನ್ನು ನೋಡಿ).

ಸಾರ್ವಕಾಲಿಕ ಮಿಶ್ರತಳಿ

[ಬದಲಾಯಿಸಿ]
ಸಾರ್ವಕಾಲಿಕ ಮಿಶ್ರತಳಿ ಗುಲಾಬಿ 'ಲಾ ರೀನ್' (ಲಾಫೆ 1844)

ಸಾರ್ವಕಾಲಿಕ ಮಿಶ್ರತಳಿ (ಹೈಬ್ರೈಡ್ಸ್‌ ರೆಮೊಂಟ್ಯಾಂಟ್ಸ್‌ ನ್ನು 'ಮತ್ತೆ ಅರಳುವ ಮಿಶ್ರತಳಿಗಳು' ಎಂದು ತಪ್ಪಾಗಿ ಭಾಷಾಂತರಿಸಲ್ಪಟ್ಟದ್ದು) ಎಂದು ಕರೆಯಲ್ಪಡುವ, ಗುಲಾಬಿಗಳ ಪ್ರಭಾವೀ ವರ್ಗವೊಂದು ವಿಕ್ಟೋರಿಯಾ ಯುಗದ ಇಂಗ್ಲೆಂಡ್‌ನಲ್ಲಿ 1838ರಲ್ಲಿ ಹೊರಹೊಮ್ಮಿತು. ವರ್ಷದಲ್ಲಿ ಒಂದಕ್ಕಿಂತ ಹೆಚ್ಚುಬಾರಿ ಹೂಬಿಡುವ ಏಷ್ಯಾದ ಗುಲಾಬಿಗಳನ್ನು ಹಳೆಯ ಯುರೋಪಿನ ವಂಶ ಪರಂಪರೆಗಳ ಗುಲಾಬಿಗಳೊಂದಿಗೆ ಯಶಸ್ವಿಯಾಗಿ ವಿಲೀನಗೊಳಿಸಿದ ಫಲವಾಗಿ ರೂಪುಗೊಂಡ ಮೊಟ್ಟಮೊದಲ ಗುಲಾಬಿಗಳಾಗಿದ್ದವು ಅವು.ಮರು-ಅರಳುವಿಕೆಯು ಒಂದು ಗೌಣ ಅಥವಾ ಪ್ರಭಾವಿಯಲ್ಲದ ಸ್ವಭಾವವಾಗಿರುವುದರಿಂದ, ಏಷ್ಯಾ/ಯುರೋಪ್‌ನ ಮಿಶ್ರತಳಿಗಳ (ಚೈನಾ ಗುಲಾಬಿಗಳ ಮಿಶ್ರತಳಿ, ಬರ್ಬನ್‌ ಗುಲಾಬಿಗಳ ಮಿಶ್ರತಳಿ, ನಾಯ್ಸೆಟ್‌ ಗುಲಾಬಿಗಳ ಮಿಶ್ರತಳಿ) ಮೊದಲ ಪೀಳಿಗೆಯು ಹತೋಟಿಗೆ ಸಿಗದೆ ಅಥವಾ ತಮ್ಮ ಪಟ್ಟುಬಿಡದೆ ಒಂದು ಸಲ ಮಾತ್ರವೇ ಹೂಬಿಡುವ ಸ್ವಭಾವವನ್ನು ಹೊಂದಿದ್ದವು. ಆದರೆ ಈ ಗುಲಾಬಿಗಳನ್ನು ಸ್ವತಃ ಅವುಗಳೊಂದಿಗೆ ಅಥವಾ ಚೈನಾ ಗುಲಾಬಿಗಳೊಂದಿಗೆ ಅಥವಾ ಚಹಾ ಗುಲಾಬಿಗಳೊಂದಿಗೆ ಮರು-ಸಂಕರಿಸಿದಾಗ, ಅವುಗಳ ಕೆಲವೊಂದು ಸಂತತಿಯು ಒಂದಕ್ಕಿಂತ ಹೆಚ್ಚು ಬಾರಿ ಹೂಬಿಡುವುದು ಕಂಡುಬಂತು.ಹೀಗಾಗಿ, ಸಾರ್ವಕಾಲಿಕ ಮಿಶ್ರತಳಿಗಳು ಒಂದು ರೀತಿಯ ಕಲಬೆರಕೆಯ ಸ್ವರೂಪವನ್ನು ಹೊಂದಿದ್ದವು. ಹೆಚ್ಚು ವ್ಯಾಪ್ತಿಯ ಬರ್ಬನ್‌ ಗುಲಾಬಿಗಳಿಂದ ಮೊದಲ್ಗೊಂಡು, ಚೈನಾ, ಚಹಾ, ದಮಾಸ್ಕ್‌, ಗ್ಯಾಲಿಕ್‌ ಗುಲಾಬಿಗಳ ಕಲಬೆರಕೆಯೊಂದಿಗೆ ಮತ್ತು ಕಡಿಮೆ ವ್ಯಾಪ್ತಿಯ ನಾಯ್ಸೆಟ್, ಆಲ್ಬಾ ಮತ್ತು ಕಡೆಗೆ ಸೆಂಟಿಫೋಲಿಯಾ ಗುಲಾಬಿಗಳನ್ನು ಸೇರಿಸಿಕೊಂಡು ರೂಪಿಸಿದ ಒಂದು ಅಡಕುಚೀಲದ ವರ್ಗವಾಗಿ ಅದು ರೂಪುಗೊಂಡಿತ್ತು.[೧೦] ಆ ಸಮಯದಲ್ಲಿ, ಉತ್ತರ ಯುರೋಪ್‌ನ ಅತ್ಯಂತ ಜನಪ್ರಿಯ, ಉದ್ಯಾನದ ಮತ್ತು ಹೂತೋಟಗಾರರ ಗುಲಾಬಿಗಳಾಗಿ ಅವು ರೂಪುಗೊಂಡವು. ಏಕೆಂದರೆ, ನವಿರಾದ ಚಹಾ ಗುಲಾಬಿಗಳು ಶೀತದ ಹವಾಮಾನದಲ್ಲಿ ಚೆನ್ನಾಗಿ ಬೆಳೆಯುವುದಿಲ್ಲ ಮತ್ತು ಸಾರ್ವಕಾಲಿಕ ಮಿಶ್ರತಳಿಗಳ ಅತಿ ದೊಡ್ಡದಾದ ಹೂವುಗಳು ಸ್ಪರ್ಧಾತ್ಮಕ ಪ್ರದರ್ಶನಗಳೆಂಬ ಹೊಸ ವಿದ್ಯಮಾನಗಳಿಗೆ ಸೂಕ್ತವಾಗಿ ಹೊಂದಿಕೊಳ್ಳುತ್ತಿದ್ದುದರಿಂದ ಈ ಪರಿಸ್ಥಿತಿ ಕಂಡುಬಂತು.ಸದರಿ ಹೆಸರಿನಲ್ಲಿರುವ "ಸಾರ್ವಕಾಲಿಕ" ಎಂಬ ಪದವೇ ಮತ್ತೆ ಮತ್ತೆ ಹೂಬಿಡುವುದರ ಕುರಿತು ಸುಳಿವುಗಳನ್ನು ನೀಡುತ್ತದೆ. ಆದರೆ ಈ ವರ್ಗದ ಅನೇಕ ಬಗೆಗಳ ಮತ್ತೆ ಮತ್ತೆ ಹೂಬಿಡುವ ಸ್ವಭಾವವು ದುರ್ಬಲವಾಗಿತ್ತು. ಅಂದರೆ, ವಸಂತಕಾಲದಲ್ಲಿ ಮಿತಿಮೀರಿ ಹೂಬಿಡುವುದು, ಇದಾದ ನಂತರ ಬೇಸಿಗೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿದಂತೆ ಹೂಬಿಡುವುದು ಅಥವಾ ಮುಂದಿನ ವಸಂತಕಾಲದವರೆಗೆ ಹೂವನ್ನೇ ಬಿಡದಿರುವುದು ಇವೇ ಮೊದಲಾದವು ಈ ವರ್ಗದ ಸ್ವಭಾವವಾಗಿತ್ತು. ಸೀಮಿತವಾಗಿದ್ದ ಬಣ್ಣದ ವರ್ಣವ್ಯಾಪ್ತಿಯ (ಬಿಳಿ, ನಸುಗೆಂಪು, ಕೆಂಪು) ಕಾರಣದಿಂದ ಮತ್ತು ವಿಶ್ವಾಸಾರ್ಹವಾದ ಪುನರಾವರ್ತಿತ-ಹೂಬಿಡುವಿಕೆಯು ಇಲ್ಲವಾದ್ದರಿಂದ, ಸಾರ್ವಕಾಲಿಕ ಮಿಶ್ರತಳಿಗಳು ಕೊನೆಗೆ ತಮ್ಮದೇ ಸ್ವಂತದ ಕುಲಕ್ಕೆ ಸೇರಿದ ಮಿಶ್ರತಳಿ ಚಹಾ ಗುಲಾಬಿಗಳಿಂದ ನಿಸ್ತೇಜಗೊಳಿಸಲ್ಪಟ್ಟವು.ಉದಾಹರಣೆಗಳು: 'ಫರ್ಡಿನೆಂಡ್‌ ಪಿಚರ್ಡ್‌', 'ರಿನೈನ್ ಡೆಸ್ ವಯೋಲೆಟ್ಸ್‌', 'ಪಾಲ್ ನೆಯ್ರಾನ್'.

ಕಸ್ತೂರಿ ಮಿಶ್ರತಳಿ

[ಬದಲಾಯಿಸಿ]
ಮಿಶ್ರ ತಳಿ ಕಸ್ತೂರಿ ಗುಲಾಬಿ 'ಮೂನ್‌ಲೈಟ್‌' (ಪೆಂಬರ್ಟನ್ 1913)

20ನೇ ಶತಮಾನದ ಮೊದಲ ದಶಕಗಳಲ್ಲಿ, ಕಸ್ತೂರಿ ಮಿಶ್ರತಳಿಯ ಗುಂಪನ್ನು ಮೊಟ್ಟಮೊದಲು ರೆ. ಜೋಸೆಫ್ ಪೆಂಬರ್ಟನ್ ಎಂಬ ಓರ್ವ ಬ್ರಿಟಿಷ್‌ ಗುಲಾಬಿ ತೋಟಗಾರ ಅಭಿವೃದ್ಧಿಪಡಿಸಿದರು. 1896ರಲ್ಲಿ ಪೀಟರ್‌ ಲ್ಯಾಂಬರ್ಟ್‌ ಎಂಬುವವರು ಕೈಗೊಂಡಿದ್ದ 'ಅಗ್ಲೈಯಾ' ಎಂಬ ಬೆರಕೆ-ತಳಿಯನ್ನು ಇದು ಆಧರಿಸಿತ್ತು. ಈ ಗುಲಾಬಿಯ ಮೊಳಕೆ ಸಸಿಯಾದ 'ಟ್ರೈಯರ್‌'ನ್ನು ಈ ವರ್ಗದ ಅಡಿಪಾಯ ಎಂದು ಪರಿಗಣಿಸಲಾಗಿದೆ.ಕೆಲವೊಂದು ಸೃಷ್ಟಿಕರ್ತ ಅಥವಾ ಮೂಲ ಸಸ್ಯಗಳು ಅಜ್ಞಾತವಾಗಿರುವುದರಿಂದಾಗಿ, ಈ ವರ್ಗದ ತಳಿಶಾಸ್ತ್ರವು ಒಂದು ರೀತಿಯಲ್ಲಿ ಅಸ್ಪಷ್ಟವಾಗಿದೆ.ಆದರೂ ಸಹ, ರೋಸ್‌ ಮಲ್ಟಿಫ್ಲೋರಾ ವು ಒಂದು ಸೃಷ್ಟಿಕರ್ತ ಸಸ್ಯವಾಗಿ ಗುರುತಿಸಲ್ಪಟ್ಟಿದ್ದು, R. ಮೊಸ್ಚಾಟಾ (ಕಸ್ತೂರಿ ಗುಲಾಬಿ) ಪ್ರಕಾರವು ಆ ಹೆಸರು ಸೂಚಿಸುವ ಪ್ರಮಾಣಕ್ಕಿಂತ ಕಡಿಮೆ ಪ್ರಾಧಾನ್ಯತೆ ಹೊಂದಿದೆ ಎಂದು ಪರಿಗಣಿಸಲಾಗಿದ್ದರೂ ಕೂಡಾ ಇದರ ಪರಂಪರೆಯಲ್ಲೇ ಸೇರಿಕೊಂಡಿದೆ. ಕಸ್ತೂರಿ ಮಿಶ್ರತಳಿಗಳು ರೋಗ-ನಿರೋಧಕತೆಯುಳ್ಳ, ವರ್ಷದಲ್ಲಿ ಒಂದಕ್ಕಿಂತ ಹೆಚ್ಚುಬಾರಿ ಹೂಬಿಡುವ ಮತ್ತು ಗೊಂಚಲಿನಲ್ಲಿ ಹೂಬಿಡುವ ತಳಿಗಳಾಗಿದ್ದು, ಅವುಗಳ ಗುಣವಿಶೇಷವಾದ ಪ್ರಬಲ "ಕಸ್ತೂರಿ" ಪರಿಮಳವನ್ನು ಹೊಂದಿರುತ್ತವೆ.[೧೧][೧೨]'ಬಫ್‌ ಬ್ಯೂಟಿ' ಮತ್ತು 'ಪೆನೆಲೋಪ್‌' ಇದರ ಉದಾಹರಣೆಗಳಲ್ಲಿ ಸೇರಿವೆ.

ಬರ್ಮುಡಾದ "ನಿಗೂಢ" ಗುಲಾಬಿಗಳು

[ಬದಲಾಯಿಸಿ]

ಹಲವಾರು ಡಜನ್‌ಗಳಷ್ಟು "ಗೋಚರಿತ" ಗುಲಾಬಿಗಳ ಒಂದು ಗುಂಪನ್ನು ಬರ್ಮುಡಾದಲ್ಲಿ ಕಡೇಪಕ್ಷ ಒಂದು ಶತಮಾನದಿಂದ ಬೆಳೆಯಲಾಗುತ್ತಿದೆ.ಉಷ್ಣವಲಯ ಮತ್ತು ಅರೆ-ಉಷ್ಣವಲಯದ ಪ್ರಾಂತ್ಯಗಳಲ್ಲಿ ಗುಲಾಬಿಗಳನ್ನು ಬೆಳೆಯುತ್ತಿರುವವರಿಗೆ ಇವು ಗಣನೀಯ ಮೌಲ್ಯ ಮತ್ತು ಪ್ರಯೋಜನವನ್ನು ತಂದುಕೊಟ್ಟಿವೆ. ಏಕೆಂದರೆ, ಹೆಚ್ಚು ಉಷ್ಣಾಂಶವಿರುವ, ಆರ್ದ್ರತೆಯ ಪ್ರದೇಶಗಳಲ್ಲಿನ ಗುಲಾಬಿ ಕೃಷಿಗೆ ಅನಿಷ್ಟದಂತೆ ಬಂದೆರಗಿ, ಬಿಸಿ ಮತ್ತು ಆರ್ದ್ರತೆಯ ಹವಾಮಾನಗಳೆರಡರಲ್ಲೂ ಬೆಳೆಯಬಲ್ಲ ನೆಮಟೋಡ್ ವರ್ಗದ ಹುಳುಗಳು ಒಡ್ಡುವ ಹಾನಿ ಮತ್ತು ಶಿಲೀಂಧ್ರ ರೋಗಗಳೆರಡಕ್ಕೂ ಈ ಗುಲಾಬಿಗಳು ಹೆಚ್ಚು ಪ್ರತಿರೋಧಕತೆಯನ್ನು ಒಡ್ಡುತ್ತವೆ. ಈ ಗುಲಾಬಿಗಳಲ್ಲಿ ಬಹುತೇಕವಾದವು ಭರವಸೆದಾಯಕವಾದ ಹಳೆಯ ಉದ್ಯಾನ ಗುಲಾಬಿ ತಳಿಗಳಾಗಿರುವುದರಿಂದಲೇ ಕೃಷಿ ಚಟುವಟಿಕೆ ಅಥವಾ ನಂತರದಲ್ಲಿನ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿನ ಬಳಕೆಯಿಂದ ಅವುಗಳನ್ನು ಹೊರಗಿಟ್ಟಿಲ್ಲ.ಅವುಗಳ "ಸೂಕ್ತ" ಚರಿತ್ರಾರ್ಹ ಹೆಸರುಗಳು ಕಳೆದುಹೋಗಿರುವುದರಿಂದ ಅವು "ನಿಗೂಢ ಗುಲಾಬಿಗಳು" ಎಂದೇ ಕರೆಯಲ್ಪಟ್ಟಿವೆ. ಪರಂಪರಾನುಗತವಾಗಿ ಬಂದಿರುವ ನಂಬಿಕೆಯು ಸೂಚಿಸುವ ಅಥವಾ ನಿದೇಶಿಸುವ ಪ್ರಕಾರ, ಅವು ಮರು-ಆವಿಷ್ಕರಿಸಲ್ಪಟ್ಟ ಉದ್ಯಾನದ ಮಾಲೀಕನ ಹೆಸರನ್ನೇ ಅವುಗಳಿಗೂ ಇಡಲಾಗಿದೆ.

ರೂಗೋಸಾ ಮಿಶ್ರತಳಿ

[ಬದಲಾಯಿಸಿ]
ರೂಗೋಸಾ ಗುಲಾಬಿ 'ಬ್ಲಾಂಕ್ ಡಬಲ್ ಡಿ ಕೌಬರ್ಟ್‌' (ಕೊಚೆಟ್‌ 1893)

R.ರೂಗೋಸಾ ಜಾತಿಯಿಂದ ಹುಟ್ಟಿರುವ, ಬಲವಾಗಿ ಬೆಳೆದ ಈ ಗುಲಾಬಿಗಳು ಅತೀವ ಪ್ರಮಾಣದ ಸಹಿಷ್ಣುತೆಯೊಂದಿಗೆ ಅದ್ಭುತವಾದ ರೋಗ-ನಿರೋಧಕತೆಯನ್ನು ಹೊಂದಿವೆ.ಈ ಪ್ರಕಾರದ ಬಹುತೇಕ ಗುಲಾಬಿಗಳು ಅತೀವವಾದ ಸುವಾಸನೆಯನ್ನು ಹೊಂದಿದ್ದು, ಪುನರಾವರ್ತಿತ ಹೂವುಗಳನ್ನು ಬಿಡುವ ಸಸ್ಯಗಳಾಗಿವೆ ಮತ್ತು ಅತಿರೇಕವಿಲ್ಲದ ಬಹುದಳಗಳ ಹೂವುಗಳನ್ನು ಹೊಂದಿರುತ್ತವೆ. ಸುಕ್ಕುಗಟ್ಟಿದ ಎಲೆಗಳನ್ನು ಹೊಂದಿರುವುದು ರೂಗೋಸಾ ಮಿಶ್ರತಳಿಯ ಗುಲಾಬಿಯೊಂದರ ನಿರ್ದಿಷ್ಟ ಗುಣಲಕ್ಷಣವಾಗಿದೆ. ಆದರೆ ಕೆಲವೊಂದು ಮಿಶ್ರತಳಿಗಳಲ್ಲಿ ಈ ಗುಣವು ಕಾಣಬರುವುದಿಲ್ಲ.ಈ ಗುಲಾಬಿಗಳು ಆಗಿಂದಾಗ್ಗೆ ಗುಲಾಬಿ ಹಣ್ಣುಗಳನ್ನು ಬಿಡುತ್ತವೆ.ಇದರ ಉದಾಹರಣೆಗಳಲ್ಲಿ 'ಹನ್ಸಾ' ಮತ್ತು 'ರೊಸೇರಯೇ ಡಿ ಐ 'ಹೇ' ಸೇರಿವೆ.

ಗುಲಾಬಿಗಳಲ್ಲಿ (ಸ್ಕಾಟ್ಸ್, ಸ್ವೀಟ್ ಬ್ರೈಯರ್‌ನಂತಹ) ಕೆಲವೊಂದು ಚಿಕ್ಕ ವರ್ಗಗಳೂ ಮತ್ತು ಹಳೆಯ ಗುಲಾಬಿಗಳ (ಐರ್‌ಶೈರ್, ಕ್ಲೈಂಬಿಂಗ್ ಚೈನಾ, ಲೆವಿಗೇಟಾ, ಸೆಂಪರ್‌ವಿರೆನ್ಸ್, ಬೌರ್‌ಸಾಲ್ಟ್‌, ಕ್ಲೈಂಬಿಂಗ್ ಟೀ, ಮತ್ತು ಕ್ಲೈಂಬಿಂಗ್ ಬರ್ಬನ್‌ ಸೇರಿದಂತೆ) ಕೆಲವೊಂದು ಏರುಬಳ್ಳಿಯ ವರ್ಗಗಳೂ ಇವೆ.ಏರುಬಳ್ಳಿ ಮತ್ತು ಪೊದೆಸಸ್ಯದ ಸ್ವರೂಪಗಳೆರಡನ್ನೂ ಹೊಂದಿರುವ ವರ್ಗಗಳನ್ನು ಒಮ್ಮೊಮ್ಮೆ ಒಟ್ಟಿಗೆ ಸೇರಿಸಲಾಗಿದೆ.

ಆಧುನಿಕ ಉದ್ಯಾನ ಗುಲಾಬಿಗಳು

[ಬದಲಾಯಿಸಿ]
ಚಿತ್ರ:Rose at University of the Pacific.JPG
ಪೆಸಿಫಿಕ್ ವಿಶ್ವವಿದ್ಯಾಲಯದಲ್ಲಿನ (ಸಂಯುಕ್ತ ಸಂಸ್ಥಾನಗಳು) ಒಂದು ಆಧುನಿಕ ಉದ್ಯಾನ ಗುಲಾಬಿ.

ಅನೇಕ ಆಧುನಿಕ ಗುಲಾಬಿಗಳು ತಮ್ಮ ವಂಶ ಪರಂಪರೆಯಲ್ಲಿ ಹಳೆಯ ಉದ್ಯಾನ ಗುಲಾಬಿಗಳನ್ನು ಹೊಂದಿರುವುದರಿಂದ ಮತ್ತು ಅವುಗಳ ಸ್ವರೂಪವು ಬಹಳಷ್ಟು ಬದಲಾಗುತ್ತಾ ಹೋಗುವುದರಿಂದ, ಆಧುನಿಕ ಗುಲಾಬಿಗಳ ವರ್ಗೀಕರಣವು ಕೊಂಚ ಗೊಂದಲಮಯವಾಗಿ ಕಾಣಿಸಬಹುದು. ಗುಲಾಬಿಗಳ ಬೆಳವಣಿಗೆ ಹಾಗೂ ಹೂಬಿಡುವ ಗುಣಲಕ್ಷಣಗಳ ಆಧಾರದ ಮೇಲೆ ವರ್ಗೀಕರಣಗಳನ್ನು ಕೈಗೊಳ್ಳಬಹುದು. ಉದಾಹರಣೆಗೆ, "ದೊಡ್ಡ-ಹೂವುಗಳ ಪೊದೆಸಸ್ಯ", "ಮತ್ತೆ ಮತ್ತೆ ಹೂಬಿಡುವ, ದೊಡ್ಡ-ಹೂವುಗಳ ಪೊದೆಸಸ್ಯ", "ಗೊಂಚಲು-ಹೂವುಗಳ", "ಹಬ್ಬುವ, ಮತ್ತೆ ಮತ್ತೆ ಹೂಬಿಡುವ" ಅಥವಾ "ವ್ಯಾಪಿಸಿರುವ ಪದೇ ಪದೇ ಹೂಬಿಡದ" ಗುಲಾಬಿಗಳು ಎಂಬುದು ಈ ಗುಣಲಕ್ಷಣಗಳ ಪಟ್ಟಿಗೆ ಸೇರಿತ್ತವೆ. ಆಧುನಿಕ ಉದ್ಯಾನ ಗುಲಾಬಿಗಳ ಅತಿ ಗಮನಾರ್ಹ ಮತ್ತು ಜನಪ್ರಿಯ ವರ್ಗೀಕರಣಗಳಲ್ಲಿ ಈ ಕೆಳಗಿನವು ಸೇರಿಕೊಂಡಿವೆ:

ಮಿಶ್ರತಳಿ ಚಹಾ

[ಬದಲಾಯಿಸಿ]
ಒಂದು 'ಮೆಮೋರಿಯಂ' ಮಿಶ್ರ ತಳಿ ಚಹಾ ಗುಲಾಬಿ (ವಾನ್ ಅಬ್ರಾಮ್ಸ್‌ 1962)

1800ರ ದಶಕದ ಅಂತ್ಯದಲ್ಲಿ ಚಹಾ ಗುಲಾಬಿಗಳೊಂದಿಗೆ ಸಾರ್ವಕಾಲಿಕ ಮಿಶ್ರತಳಿಗಳನ್ನು ಸಂಕರೀಕರಿಸುವ ಮೂಲಕ, ಆಧುನಿಕ ಗುಲಾಬಿಗಳ ಇತಿಹಾಸವನ್ನಾವರಿಸಿರುವ ಅಚ್ಚುಮೆಚ್ಚಿನ ಗುಲಾಬಿಯಾಗಿರುವ ಮಿಶ್ರತಳಿ ಚಹಾ ಗುಲಾಬಿಗಳು ಪ್ರಾರಂಭದಲ್ಲಿ ಸೃಷ್ಟಿಸಲ್ಪಟ್ಟವು. 1867ರಲ್ಲಿ ಸೃಷ್ಟಿಸಲ್ಪಟ್ಟ 'ಲಾ ಫ್ರಾನ್ಸ್‌' ವರ್ಗವು ಗುಲಾಬಿಗಳ ಒಂದು ಹೊಸ ವರ್ಗದ ಮೊಟ್ಟಮೊದಲ ಸೂಚನೆ ಎಂದು ವಿಶ್ವಾದ್ಯಂತ ಅಂಗೀಕರಿಸಲ್ಪಟ್ಟಿದೆ. ಮಿಶ್ರತಳಿ ಚಹಾ ಗುಲಾಬಿಗಳು ತಮ್ಮ ಎರಡೂ ಮೂಲಸಸ್ಯಗಳ ನಡುವಿನ ಮಧ್ಯದ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತವೆ. ಅಂದರೆ, ಅವು ಚಹಾ ಗುಲಾಬಿಗಳಿಗಿಂತ ಹೆಚ್ಚು ಸಹಿಷ್ಣುಗಳಾಗಿರುತ್ತವೆ, ಆದರೆ ಸಾರ್ವಕಾಲಿಕ ಮಿಶ್ರತಳಿಗಳಿಗಿಂತ ಕಡಿಮೆ ಸಹಿಷ್ಣುಗಳಾಗಿರುತ್ತವೆ. ಅಷ್ಟೇ ಅಲ್ಲ, ಅವು ಸಾರ್ವಕಾಲಿಕ ಮಿಶ್ರತಳಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಯಾವಾಗಲೂ ಹೂಬಿಡುತ್ತಿರುತ್ತವೆ, ಆದರೆ ಈ ಪ್ರಮಾಣ ಚಹಾ ಗುಲಾಬಿಗಳಿಗಿಂತ ಕಡಿಮೆಯಿರುತ್ತದೆ. ದೊಡ್ಡದಾದ, ಉನ್ನತ-ಮಧ್ಯಭಾಗದ ಮೊಗ್ಗುಗಳೊಂದಿಗೆ ಹೂವುಗಳು ಚೆನ್ನಾಗಿ-ರೂಪುಗೊಂಡಿದ್ದು, ಹೂಬಿಡುವ ಪ್ರತಿಯೊಂದು ಕಾಂಡದ ತುದಿಯಲ್ಲೂ ಒಂದು ಸುಂದರವಾದ ಹೂವು ವಿಶಿಷ್ಟವಾಗಿ ಸ್ಥಿತವಾಗಿರುತ್ತದೆ. ಬಿಗಿಯಾಗಿ ನೆಟ್ಟಗೆ ನಿಲ್ಲುವ ಈ ಪೊದೆಸಸ್ಯಗಳು ವಿರಳವಾಗಿ ಜೋಡಿಸಲ್ಪಟ್ಟ ಎಲೆಗಳನ್ನು ಹೊಂದಿದ್ದು, ಅದನ್ನೇ ಈಗ ಭೂದೃಶ್ಯದ ತೋಟಗಾರಿಕೆಯಲ್ಲಿ ಒಂದು ಬಾಧ್ಯತೆಯನ್ನಾಗಿ ಕಾಣಲಾಗುತ್ತದೆ. ಮಿಶ್ರತಳಿ ಚಹಾ ಗುಲಾಬಿಗಳು 20ನೇ ಶತಮಾನದ ಉದ್ಯಾನ ಗುಲಾಬಿಗಳ ಅತ್ಯಂತ ಜನಪ್ರಿಯವಾದ ಏಕೈಕ ವರ್ಗವಾಗಿ ರೂಪುಗೊಂಡಿದ್ದವು. ಇಂದು, ಇತರ ಅನೇಕ ಗುಲಾಬಿ ವರ್ಗಗಳಿಗಿಂತ ಈ ವರ್ಗವು ಹೆಚ್ಚಿನ ಪ್ರಮಾಣದಲ್ಲಿ ಉನ್ನತ ನಿರ್ವಹಣೆಯನ್ನು ಅಥವಾ ಪೋಷಣೆಯನ್ನು ಬಯಸುತ್ತವೆ ಎಂಬ ಅವುಗಳ ಖ್ಯಾತಿಯೇ ಅದಕ್ಕೆ ಮುಳುವಾಗಿದೆ. ಹೀಗಾಗಿ, ತೋಟಗಾರರ ವಲಯದಲ್ಲಿ ಮಿಶ್ರತಳಿ ಚಹಾ ಗುಲಾಬಿಯ ಜನಪ್ರಿಯತೆಯು ಕುಸಿದಿದ್ದು, ಭೂದೃಶ್ಯ ತೋಟಗಾರರೂ ಸಹ ಕಡಿಮೆ-ಪೋಷಣೆ ಅಥವಾ ನಿರ್ವಹಣೆಯ "ಭೂದೃಶ್ಯ ತೋಟಗಾರಿಕಾ" ಗುಲಾಬಿಗಳ ಕಡೆಗೇ ಒಲವು ತೋರಿಸುತ್ತಿದ್ದಾರೆ. ಆದಾಗ್ಯೂ, ಮಿಶ್ರತಳಿ ಚಹಾ ಗುಲಾಬಿಯು ಪುಷ್ಪೋದ್ಯಮದ ಶಿಷ್ಟ ಗುಲಾಬಿಯಾಗಿ ಉಳಿದುಕೊಂಡಿದ್ದು, ಔಪಚಾರಿಕ ಸನ್ನಿವೇಶಗಳಲ್ಲಿನ ಸಣ್ಣಪುಟ್ಟ ಉದ್ಯಾನಗಳಲ್ಲಿ ಈಗಲೂ ಅದೇ ಮಾನ್ಯತೆ ಪಡೆದಿದೆ. ಉದಾಹರಣೆಗಳು: 'ಪೀಸ್' (ಹಳದಿ), 'ಮಿಸ್ಟರ್ ಲಿಂಕನ್ (ಕೆಂಪು), 'ಡಬಲ್ ಡಿಲೈಟ್‌' (ದ್ವಿ-ವರ್ಣ ಕೆನೆ ಮತ್ತು ಕೆಂಪು).

ಪರ್ನೇಷಿಯಾನ

[ಬದಲಾಯಿಸಿ]
ಪರ್ನೇಷಿಯಾನ ಗುಲಾಬಿ 'ಸೊಲೈಲ್ ದಿ ಓರ್', ಅದರ ವರ್ಗದಲ್ಲೇ ಮೊದಲನೆಯದು (ಪರ್ನೆಟ್ 1900)

ಆಸ್ಟ್ರಿಯಾದ ಹಳೆಯ ಸುವಾಸಿತ ಕಾಡುಗುಲಾಬಿಯಿಂದ (ರೋಸಾ ಫೀಟಿಡಾ ) ಪಡೆದ ವಂಶವಾಹಿಗಳನ್ನು, 1990ರಲ್ಲಿ ತಾನು ಪರಿಚಯಿಸಿದ 'ಸೊಲೀಲ್ ಡಿ ಒರ್'ನೊಂದಿಗೆ ಸೇರಿಸಲು ಫ್ರೆಂಚ್‌ ತಳಿಗಾರ ಜೋಸೆಫ್ ಪೆರ್ನೆಟ್-ಡಚರ್ ಮೊಟ್ಟಮೊಡಲ ಬಾರಿಗೆ ಗುಲಾಬಿಗಳ ಮೊದಲ ವರ್ಗವನ್ನು ಹುಟ್ಟುಹಾಕಿದ. ಇದರಿಂದಾಗಿ ಗುಲಾಬಿಗಳಿಗೆ ಸಂಪೂರ್ಣ ಹೊಸತಾದ ವರ್ಣಶ್ರೇಣಿಯೇ ದಕ್ಕಿದಂತಾಯಿತು. ದಟ್ಟ ಹಳದಿ, ಕಿತ್ತಳೆಯ ಎಳೆಗೆಂಪು ಬಣ್ಣ, ತಾಮ್ರ, ಕಿತ್ತಳೆ, ಅಪ್ಪಟ ಕಡುಗೆಂಪು ಬಣ್ಣ, ಹಳದಿ ದ್ವಿವರ್ಣಗಳು, ಲ್ಯಾವೆಂಡರ್, ಬೂದು ಮತ್ತು ಕೊನೆಗೆ ಕಂದು ಬಣ್ಣದ ಛಾಯೆಗಳೂ ಸಹ ಈಗ ಸಾಧ್ಯವಾದವು. ಮೂಲತಃ ಒಂದು ಪ್ರತ್ಯೇಕ ವರ್ಗವಾಗಿ ಪರಿಗಣಿಸಲ್ಪಟ್ಟಿದ್ದ ಪರ್ನೇಷಿಯಾನಗಳು ಅಥವಾ ಫೀಟಿಡಾ ಮಿಶ್ರತಳಿಗಳು, 1930ರಲ್ಲಿ ಮಿಶ್ರತಳಿ ಚಹಾಗಳಲ್ಲಿ ಅಧಿಕೃತವಾಗಿ ವಿಲೀನಗೊಂಡವು. 20ನೇ ಶತಮಾನದಲ್ಲಿ ಕಂಡುಬಂದ ಸ್ಕೈರಾಕೆಟ್‌ ಮಿಶ್ರತಳಿ ಚಹಾ ಗುಲಾಬಿಯ ಜನಪ್ರಿಯತೆಗೆ ಈ ಹೊಸ ವರ್ಣಶ್ರೇಣಿಯು ಹೆಚ್ಚಿನ ಕಾಣಿಕೆಯನ್ನೇ ನೀಡಿದರೂ, ಈ ಬಣ್ಣಗಳು ದುಬಾರಿ ಬೆಲೆಯನ್ನೇ ತೆರಬೇಕಾಗಿ ಬಂತು. ಏಕೆಂದರೆ, ರೋಗದ ಪ್ರಭಾವಕ್ಕೆ ಈಡಾಗುವ, ಪರಿಮಳವಿಲ್ಲದ ಹೂಗಳನ್ನು ಬಿಡುವ ಮತ್ತು ಸಮರುವಿಕೆಯನ್ನು ಸಹಿಸದಿರುವ ಗುಣಲಕ್ಷಣಗಳನ್ನು ತನ್ನ ವಂಶಸ್ಥರಿಗೆ ರೋಸಾ ಫೀಟಿಡಾ ತಳಿಯು ವರ್ಗಾಯಿಸಿತು.

ಪಾಲಿಯಾಂಥಾ

[ಬದಲಾಯಿಸಿ]

ಈ ಪದವನ್ನು ಗ್ರೀಕ್‌ ಭಾಷೆಯ "ಪಾಲಿ" (ಅನೇಕ) ಮತ್ತು "ಆಂಥಸ್" (ಹೂವು) ಎಂಬ ಪದಗಳಿಂದ ಪಡೆಯಲಾಗಿದ್ದು, "ಅನೇಕ-ಹೂವುಗಳ" ಗುಲಾಬಿಗಳು ಎಂಬುದು ಇದರ ಅಕ್ಷರಶಃ ಅರ್ಥವಾಗಿದೆ. ಪೂರ್ವ ಏಷ್ಯಾದ (ರೋಸಾ ಚೈನೆನ್ಸಿಸ್ ಮತ್ತು R. ಮಲ್ಟಿಫ್ಲೋರಾ ) ಜಾತಿಗಳ ನಡುವೆ ಸಂಕರೀಕರಣ ನಡೆಸಿದಾಗ ಮೂಲತಃ ಮೈದಳೆದ ಪಾಲಿಯಾಂಥಾಗಳು, ಮಿಶ್ರತಳಿ ಚಹಾಗಳ ಜೊತೆಜೊತೆಗೇ 1800ರ ದಶಕದ ಅಂತ್ಯಭಾಗದಲ್ಲಿ ಫ್ರಾನ್ಸ್‌ನಲ್ಲಿ ಮೊದಲು ಕಾಣಿಸಿಕೊಂಡವು. ಮೋಟುಗಾತ್ರದ ಗಿಡಗಳಂತಿದ್ದ ಅವುಗಳಲ್ಲಿ ಕೆಲವು ಒತ್ತೊತ್ತಾಗಿದ್ದರೆ, ಮತ್ತೆ ಕೆಲವು ಹರಡಿಕೊಳ್ಳುವ ಸ್ವಭಾವವನ್ನು ಹೊಂದಿದ್ದು ದೊಡ್ಡದಾದ ಹೂಗೊಂಚಲಿನಲ್ಲಿರುವ ಚಿಕ್ಕ ಚಿಕ್ಕ (ಸರಾಸರಿ 1" ವ್ಯಾಸವನ್ನು ಹೊಂದಿರುವ), ಬಿಳಿ, ನಸುಗೆಂಪು ಹಾಗೂ ಕೆಂಪು ಬಣ್ಣಗಳ ಹೂಗಳನ್ನು ಹೊಮ್ಮಿಸಿದ್ದವು. ಅವು ಹೊಂದಿದ್ದ ಸಮೃದ್ಧಿಯಾಗಿರುವ ಹೂವುಗಳೇ ಅವುಗಳು ಪಡೆದ ಕೀರ್ತಿಗೆ ಸಮರ್ಥನೆಯಾಗಿದ್ದವು. ಆರೋಗ್ಯಕರ ಪಾಲಿಯಾಂಥಾ ಪೊದೆಸಸ್ಯವು ವಸಂತಕಾಲದಿಂದ ಶರತ್ಕಾಲದವರೆಗೂ ಅಕ್ಷರಶಃ ಹೂವುಗಳಿಂದಲೇ ಆವರಿಸಲ್ಪಟ್ಟಿದ್ದು, ಸನಿಹದ ಭೂದೃಶ್ಯದಲ್ಲಿ ವರ್ಣದ ಒಂದು ಅಮೋಘ ಪರಿಣಾಮವನ್ನೇ ಸೃಷ್ಟಿಸುತ್ತದೆ. ಪಾಲಿಯಾಂಥಾ ಗುಲಾಬಿಗಳನ್ನು ಈಗಲೂ ಕಡಿಮೆ-ನಿರ್ವಹಣೆ ಅಥವಾ ಪೋಷಣೆಯ, ರೋಗ-ನಿರೋಧಕತೆಯುಳ್ಳ ಉದ್ಯಾನ ಗುಲಾಬಿಗಳಾಗಿ ಪರಿಗಣಿಸಲಾಗಿದ್ದು ಈ ಕಾರಣದಿಂದಲೇ ಅವು ಜನಪ್ರಿಯತೆಯನ್ನು ಕಾಯ್ದುಕೊಂಡಿವೆ. ಉದಾಹರಣೆಗಳು: "ಸೆಸಿಲಿ ಬ್ರನ್ನೆರ್", "ದಿ ಫೇರಿ", "ರೆಡ್ ಫೇರಿ","ಪಿಂಕ್ ಫೇರಿ".

ಫ್ಲೋರಿಬಂಡ

[ಬದಲಾಯಿಸಿ]
ರೋಸಾ 'ಬೊರುಸ್ಸಿಯಾ', ಒಂದು ಆಧುನಿಕ ಪುಷ್ಪಗಚ್ಛಿ ಗುಲಾಬಿ

ಮಿಶ್ರತಳಿ ಚಹಾಗಳೊಂದಿಗೆ ಪಾಲಿಯಾಂಥಾಗಳನ್ನು ಸಂಕರಿಸುವುದರಲ್ಲಿನ ಮೌಲ್ಯವನ್ನು ಗುಲಾಬಿ ತಳಿಗಾರರು ಬೇಗನೇ ಕಂಡುಕೊಂಡರು. ಏಕೆಂದರೆ ಈ ಪದ್ಧತಿಯಿಂದಾಗಿ ಪಾಲಿಯಾಂಥಾದ ಸಮೃದ್ಧಿ ಹಾಗೂ ಮಿಶ್ರತಳಿ ಚಹಾ ಗುಲಾಬಿಯ ಹೂವುಗಳ ಸೌಂದರ್ಯ ಮತ್ತು ವರ್ಣಶ್ರೇಣಿಯನ್ನೊಳಗೊಂಡ ಗುಲಾಬಿಗಳನ್ನು ಸೃಷ್ಟಿಸಲು ಸಾಧ್ಯವಾಯಿತು. 1909ರಲ್ಲಿ, ಪಾಲಿಯಾಂಥಾ/ಮಿಶ್ರತಳಿ ಚಹಾಗಳ ಮೊಟ್ಟಮೊದಲ ಸಂಕರಿತ ರೂಪವಾದ 'ಗ್ರಸ್ ಆನ್ ಆಚೆನ್' ಸೃಷ್ಟಿಸಲ್ಪಟ್ಟಿತು. ಇದು ತನ್ನೆರಡೂ ಮೂಲಸಸ್ಯಗಳ ನಡುವಿನ, ಮಧ್ಯಮಾರ್ಗದ ಗುಣಲಕ್ಷಣಗಳನ್ನು ಹೊಂದಿತ್ತು. ದೊಡ್ಡದಾದ, ಅತಿ ಸುಂದರಾಕೃತಿಯ ಹೂವುಗಳು ಹಾಗೂ ಮಿಶ್ರತಳಿ-ಚಹಾ ಗುಲಾಬಿಯಂತಹ ಬೆಳವಣಿಗೆಯನ್ನು ಹೊಂದಿರುವುದರಿಂದಾಗಿ, ಪಾಲಿಯಾಂಥಾಗಳು ಹಾಗೂ ಮಿಶ್ರತಳಿ ಚಹಾಗಳಂತಹ ಗುಲಾಬಿಗಳಿಂದ ಈ ಹೊಸ ಗುಲಾಬಿಗಳು ಪ್ರತ್ಯೇಕವಾಗಬೇಕಾಗಿ ಬಂತು. ಹೀಗಾಗಿ, ಲ್ಯಾಟಿನ್‌ ಭಾಷೆಯಲ್ಲಿ "ಅನೇಕ-ಹೂಬಿಡುವ" ಎಂಬ ಅರ್ಥವನ್ನು ನೀಡುವ ಫ್ಲೋರಿಬಂಡ ಎಂಬ ಹೊಸತೊಂದು ವರ್ಗವೇ ಸೃಷ್ಟಿಯಾಯಿತು. ವಿಶಿಷ್ಟ ಮಾದರಿಯ ಫ್ಲೋರಿಬಂಡ ಗುಲಾಬಿಗಳು ಬಳುಕಾಡದ ಪೊದೆಸಸ್ಯಗಳನ್ನು ಒಳಗೊಂಡಿದ್ದು, ಸಾಧಾರಣ ಮಟ್ಟದ ಮಿಶ್ರತಳಿ ಚಹಾಗಿಂತ ಚಿಕ್ಕದಾಗಿ ಮತ್ತು ಪೊದೆಪೊದೆಯಾಗಿ ಬೆಳೆಯುತ್ತದೆ. ಆದರೆ, ಇದು ಸಾಧಾರಣ ಮಟ್ಟದ ಪಾಲಿಯಾಂಥಾಗಿಂತ ಕಡಿಮೆ ಒತ್ತೊತ್ತಾಗಿ ಹಾಗೂ ಒಡ್ಡೊಡ್ಡಾಗಿ ಹರಡಿಕೊಂಡಿರುತ್ತದೆ. ಹೂವುಗಳು ಮಿಶ್ರತಳಿ ಚಹಾಗಳಿಗಿಂತ ಚಿಕ್ಕದಾಗಿದ್ದರೂ, ದೊಡ್ಡದಾದ ಗೊಂಚಲುಗಳಲ್ಲಿ ಸೇರಿಕೊಂಡಿರುತ್ತವೆ. ಹೀಗಾಗಿ ಹೂವಿನ ಅತ್ಯುತ್ತಮವಾದ ಪ್ರಭಾವ ಅಥವಾ ವಾತಾವರಣವನ್ನು ಅವು ಹೂತೋಟದಲ್ಲಿ ಹೊರಹೊಮ್ಮಿಸುತ್ತವೆ. ಎಲ್ಲಾ ಮಿಶ್ರತಳಿ ಚಹಾ ವರ್ಣಗಳಲ್ಲಿ ಕಾಣಿಸಿಕೊಳ್ಳುವ ಫ್ಲೋರಿಬಂಡಗಳು ಮಿಶ್ರತಳಿ ಚಹಾ ಆಕಾರದ ಶಿಷ್ಟ ಹೂವುಗಳನ್ನು ಹೊಮ್ಮಿಸುತ್ತವೆ. ಕೆಲವೊಮ್ಮೆ ಗೊಂಚಲಿನಲ್ಲಿ-ಹೂಬಿಡುವ ತಮ್ಮ ಸ್ವಭಾವದಿಂದಾಗಿ ಅವು ಮಿಶ್ರತಳಿ ಚಹಾಗಳಿಂದಲೂ ಪ್ರತ್ಯೇಕವಾಗಿ ನಿಲ್ಲುತ್ತವೆ. ಇಂದು, ಸಾರ್ವಜನಿಕ ಉದ್ಯಾನವನಗಳು ಹಾಗೂ ಅದೇ ಬಗೆಯ ಜಾಗಗಳಲ್ಲಿನ ಬೃಹತ್ ನೆಡುವಿಕೆ ಕಾರ್ಯಕ್ರಮಗಳಲ್ಲಿ ಅವುಗಳನ್ನು ಈಗಲೂ ಬಳಸಲಾಗುತ್ತಿದೆ. ಉದಾಹರಣೆಗಳು: 'ಡೈಂಟಿ ಮೆಯ್ಡ್‌', 'ಐಸ್‌ಬರ್ಗ್‌', 'ಟಸ್ಕನ್ ಸನ್'.

ಗ್ರ್ಯಾಂಡಿಫ್ಲೋರ

[ಬದಲಾಯಿಸಿ]

ಗ್ರ್ಯಾಂಡಿಫ್ಲೋರಗಳು ("ದೊಡ್ಡ-ಹೂವುಗಳ" ಎಂಬುದಕ್ಕಿರುವ ಲ್ಯಾಟಿನ್ ಹೆಸರು) 1900ರ ದಶಕದ ಮಧ್ಯಭಾಗದಲ್ಲಿ ಸೃಷ್ಟಿಸಲ್ಪಟ್ಟ ಗುಲಾಬಿಗಳ ವರ್ಗವಾಗಿದ್ದವು. ಮಿಶ್ರತಳಿ ಚಹಾ ಗುಲಾಬಿಗಳು ಮತ್ತು ಫ್ಲೋರಿಬಂಡಾಗಳ ನಡುವಿನ ಹಿಮ್ಮಿಶ್ರ-ಸಂಕರೀಕರಣಗಳನ್ನು ಸೂಚಿಸಲು, ಅದರಲ್ಲೂ ನಿರ್ದಿಷ್ಟವಾಗಿ 1954ರಲ್ಲಿ ಪರಿಚಯಗೊಂಡ 'ಕ್ವೀನ್ ಎಲಿಜಬೆತ್' ಗುಲಾಬಿಯಂತಹ, ಎರಡರಲ್ಲಿ ಯಾವ ಪಂಗಡಕ್ಕೂ ಸೇರದವುಗಳನ್ನು ಸೂಚಿಸಲು ಗ್ರ್ಯಾಂಡಿಫ್ಲೋರ ವರ್ಗವನ್ನು ಸೃಷ್ಟಿಸಲಾಯಿತು.[೧೩] ಮಿಶ್ರತಳಿ ಚಹಾ ಗುಲಾಬಿಗಳು ಅಥವಾ ಫ್ಲೋರಿಬಂಡಗಳಿಗಿಂತಲೂ ಗ್ರ್ಯಾಂಡಿಫ್ಲೋರ ಪೊದೆಸಸ್ಯಗಳು ವಿಶಿಷ್ಟವಾಗಿ ದೊಡ್ಡದಾಗಿದ್ದು, ಫ್ಲೋರಿಬಂಡ ತಳಿಯೊಂದರಂತೆ ಮೂರರಿಂದ ಐದರಷ್ಟು ಚಿಕ್ಕ ಗೊಂಚಲುಗಳಲ್ಲಿ ಬಿಟ್ಟಿರುವ, ಮಿಶ್ರತಳಿ ಚಹಾ-ಶೈಲಿಯ ಹೂಗಳನ್ನು ಒಳಗೊಂಡಿರುತ್ತವೆ. 1950ರಿಂದ 1980ರ ದಶಕದವರೆಗೆ ಗ್ರ್ಯಾಂಡಿಫ್ಲೋರಗಳು ಒಂದಷ್ಟು ಜನಪ್ರಿಯತೆಯನ್ನು ಕಂಡವಾದರೂ, ಇಂದು ಅವು ಮಿಶ್ರತಳಿ ಚಹಾ ಗುಲಾಬಿಗಳು ಅಥವಾ ಫ್ಲೋರಿಬಂಡಗಳಷ್ಟೇನೂ ಜನಪ್ರಿಯವಾಗಿಲ್ಲ. ಉದಾಹರಣೆಗಳು: 'ಕ್ವೀನ್ ಎಲಿಜಬೆತ್', 'ಕೊಮಾಂಚೆ', 'ಮಾಂಟೆಝುಮಾ'.

ಚಿಕಣಿ ಗಾತ್ರದ ತಳಿಗಳು

[ಬದಲಾಯಿಸಿ]
ಟೆರಾಕೋಟಾ ಹೂಕುಂಡದಲ್ಲಿರುವ ಮೀಲ್ಯಾಂಡೈನ್ (ಒಂದು ಚಿಕಣಿ ಗಾತ್ರದ ಗುಲಾಬಿ)

ಗ್ಯಾಲಿಕಾಗಳು, ಸೆಂಟಿಫೋಲಿಯಾಗಳು ಇವೇ ಮೊದಲಾದ ಹಳೆಯ ಉದ್ಯಾನ ಗುಲಾಬಿಗಳ ಎಲ್ಲಾ ವರ್ಗಗಳೂ ಅನುಗುಣವಾದ ಚಿಕಣಿ ಗಾತ್ರದ ತಳಿಗಳನ್ನು ಹೊಂದಿದ್ದವು. ತಮ್ಮ ವರ್ಗದ ದೊಡ್ಡ ತಳಿಗಳಂತೆಯೇ ಈ ಚಿಕಣಿ ಗಾತ್ರದ ತಳಿಗಳೂ ಸಹ ಒಮ್ಮೆ ಮಾತ್ರ ಹೂಬಿಡುತ್ತಿದ್ದವು. ಪ್ರಮಾಣಬದ್ಧ-ಗಾತ್ರದ ಪ್ರಭೇದಗಳಲ್ಲಿ ನಡೆಯುವಂತೆಯೇ, ಚಿಕಣಿ ಗಾತ್ರದ ಹಳೆಯ ಉದ್ಯಾನ ಗುಲಾಬಿಗಳನ್ನು ಮತ್ತೆ ಮತ್ತೆ ಹೂಬಿಡುವ ಏಷ್ಯಾದ ಜಾತಿಗಳೊಂದಿಗೆ ಸಂಕರೀಕರಿಸಿದ ಫಲವಾಗಿ ಯಾವಾಗಲೂ ಹೂಬಿಡುತ್ತಿರುವ ಚಿಕಣಿ ಗಾತ್ರದ ಗುಲಾಬಿಗಳು ಮೈದಳೆದವು.ಇಂದು, ಸಣ್ಣ ಪುಟ್ಟ ರೆಂಬೆಗಳುಳ್ಳ, ಮತ್ತೆ ಮತ್ತೆ ಹೂಬಿಡುವ ಪೊದೆಸಸ್ಯಗಳಿಂದ ಚಿಕಣಿ ಗಾತ್ರದ ಗುಲಾಬಿಗಳು ಪ್ರತಿನಿಧಿಸಲ್ಪಟ್ಟಿವೆ. ಈ ಪೊದೆಸಸ್ಯಗಳು 6" ರಿಂದ 36"ವರೆಗೆ ಉದ್ದವಾಗಿದ್ದು, ಬಹುತೇಕ ಪ್ರಕಾರಗಳು 12"–24"ನಷ್ಟು ಎತ್ತರದ ಶ್ರೇಣಿಯಲ್ಲಿ ಬರುತ್ತವೆ. ಮಿಶ್ರತಳಿ ಚಹಾ ಗುಲಾಬಿಯ ಎಲ್ಲಾ ಬಣ್ಣಗಳಲ್ಲೂ ಹೂವುಗಳು ಅರಳುತ್ತವೆ. ಅನೇಕ ಪ್ರಭೇದಗಳು ಉನ್ನತ-ಮಧ್ಯಭಾಗದ ಮಿಶ್ರತಳಿ ಚಹಾ ಹೂವಿನ ಶಿಷ್ಟ ಆಕಾರವನ್ನೂ ಅನುಸರಿಸುತ್ತವೆ. ಪುಷ್ಪೋದ್ಯಮವು ಚಿಕಣಿ ಗಾತ್ರದ ಹೂವುಗಳನ್ನು ಮನೆಯ ಗಿಡಗಳ ಸ್ವರೂಪದಲ್ಲಿ ಮಾರುಕಟ್ಟೆಗೆ ಪರಿಚಯಿಸುತ್ತದೆ ಮತ್ತು ಮಾರಾಟ ಮಾಡುತ್ತದೆ. ಆದರೆ, ಈ ಸಸ್ಯಗಳು ಬಹುತೇಕವಾಗಿ ಉಷ್ಣವಲಯದ ಪ್ರದೇಶಗಳಿಗೆ ಸೇರಿದ ಹೊರಾಂಗಣ ಪೊದೆಸಸ್ಯಗಳ ಕುಲದಲ್ಲಿ ಹುಟ್ಟಿವೆ ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳುವುದು ಮುಖ್ಯ. ಹೀಗಾಗಿ, ಬಹುತೇಕ ಚಿಕಣಿ ಗಾತ್ರದ ಗುಲಾಬಿ ಪ್ರಭೇದಗಳು ಬದುಕುಳಿಯಲು ಶೀತಲ ಜಡಸ್ಥಿತಿಯ ವರ್ಷಾವಧಿಯು ಅಗತ್ಯವಾಗಿರುತ್ತದೆ. (ಉದಾಹರಣೆಗಳು: ಪೆಟೈಟ್ ಡಿ ಹಾಲೆಂಡೆ (ಚಿಕಣಿ ಗಾತ್ರದ ಸೆಂಟಿಫೋಲಿಯಾ, ಒಮ್ಮೆ ಹೂಬಿಡುವುದು), ಕಪ್‌ಕೇಕ್ (ಆಧುನಿಕ ಚಿಕಣಿ ಗಾತ್ರದ ಪ್ರಭೇದ, ಮತ್ತೆ ಮತ್ತೆ ಹೂಬಿಡುವುದು).)

ಏರುವ ಮತ್ತು ಹಬ್ಬುವ ಪ್ರಭೇದಗಳು

[ಬದಲಾಯಿಸಿ]
ರೋಸಾ 'ಝೆಫಿರೈನ್ ಡ್ರೌಹಿನ್', ಒಂದು ಏರುಬಳ್ಳಿಯ ಬರ್ಬನ್ ಗುಲಾಬಿ (ಬಿಝೊಟ್ 1868)

ಚಿಕಣಿ ಗಾತ್ರದ ಗುಲಾಬಿಗಳಲ್ಲಿ ಕಂಡುಬರುವಂತೆ,ಮೇಲೆ ತಿಳಿಸಿದ ಗುಲಾಬಿಗಳ ಹಳೆಯ ಮತ್ತು ಆಧುನಿಕವಾಗಿರುವ ಎಲ್ಲಾ ವರ್ಗಗಳೂ "ಏರುವ" ನಮೂನೆಗಳನ್ನು ಹೊಂದಿದ್ದು, ಸದರಿ ಪೊದೆಸಸ್ಯಗಳ ಜಲ್ಲೆಗಳು ಎಂದಿನ ("ಪೊದೆ") ನಮೂನೆಗಳಿಗಿಂತ ಹೆಚ್ಚು ಉದ್ದವಾಗಿ ಬೆಳೆಯುವುದೇ ಅಲ್ಲದೆ ಹೆಚ್ಚು ಬಾಗುವಿಕೆಯ ಸ್ವಭಾವವನ್ನು ಹೊಂದಿರುತ್ತವೆ. ಹಳೆಯ ಉದ್ಯಾನಗುಲಾಬಿಗಳಲ್ಲಿ, ಇದು ಕೇವಲ ಅನೇಕ ತಳಿಗಳು ಹಾಗೂ ಪ್ರಭೇದಗಳು ತೋರುವ ಸ್ವಾಭಾವಿಕ ಬೆಳವಣಿಗೆಯ ಸ್ವಭಾವವಾಗಿದೆ. ಆದರೂ, ಅನೇಕ ಆಧುನಿಕ ಗುಲಾಬಿಗಳಲ್ಲಿ, ಅನೈಚ್ಛಿಕ ಅಥವಾ ತನ್ನಷ್ಟಕ್ಕೆ ತಾನೇ ಆಗುವ ರೂಪಾಂತರಗಳ ಪರಿಣಾಮವಾಗಿ, ಏರುವ ಪ್ರಭೇದದ ಗುಲಾಬಿಗಳು ಮೈದಳೆಯುತ್ತವೆ. ಉದಾಹರಣೆಗೆ, 'ಕ್ಲೈಂಬಿಂಗ್ ಪೀಸ್‌' ಎಂಬ ಪ್ರಭೇದವು ಒಂದು "ಏರುವ ಮಿಶ್ರತಳಿ ಚಹಾ ಗುಲಾಬಿಯಾಗಿ" ಆಗಿ ಸೂಚಿಸಲ್ಪಟ್ಟಿದೆ. ಏಕೆಂದರೆ, ಅದರ ಕಾಂಡಗಳ ಉದ್ದವಾಗಿರುವ ಮತ್ತು ಬಾಗುವಿಕೆಯ ಸ್ವಭಾವವನ್ನು ಅಂದರೆ, "ಏರುವಿಕೆಯ ಲಕ್ಷಣವನ್ನು" ಹೊರತುಪಡಿಸಿದರೆ, ತಳಿವಿಜ್ಞಾನದ ಪ್ರಕಾರ ಈ ಪ್ರಭೇದವು 'ಪೀಸ್‌' ಮಿಶ್ರತಳಿಯ ಚಹಾ ಗುಲಾಬಿಯ ಎಂದಿನ ಸಾಮಾನ್ಯ ನಮೂನೆಯ ತದ್ರೂಪಿಯಾಗಿದೆ. ಏರುವ ನಮೂನೆಯ ಬಹುತೇಕ ಗುಲಾಬಿಗಳು ಸುಮಾರು 8'–20'ನಷ್ಟು ಎತ್ತರಕ್ಕೆ ಬೆಳೆಯುವುದಲ್ಲದೇ, ಮತ್ತೆ ಮತ್ತೆ ಹೂಬಿಡುವ ಗುಣವನ್ನು ಪ್ರದರ್ಶಿಸುತ್ತವೆ. ಹಬ್ಬುವ ನಮೂನೆಯ ಗುಲಾಬಿಗಳು ತಾಂತ್ರಿಕವಾಗಿ ಬೇರೆಯದೇ ವರ್ಗಕ್ಕೆ ಸೇರಿದ್ದರೂ, ಏರುವ ನಮೂನೆಯ ಗುಲಾಬಿಗಳೊಂದಿಗೆ ಆಗಾಗ ಒಟ್ಟಿಗೆ ಸೇರಿಸಲ್ಪಡುತ್ತವೆ. ಅವು ಕೂಡಾ ಉದ್ದವಾದ, ಬಾಗುವ ಜಲ್ಲೆಗಳನ್ನು ಪ್ರದರ್ಶಿಸಿದರೂ, ನಿಜವಾದ ಏರುವ ನಮೂನೆಗಳಿಂದ ಎರಡು ಬಗೆಗಳಲ್ಲಿ ಪ್ರತ್ಯೇಕಿಸಲ್ಪಡುತ್ತವೆ. ಅವುಗಳೆಂದರೆ, ದೊಡ್ಡದಾಗಿರುವ ಒಟ್ಟಾರೆ ಗಾತ್ರ (20'–30'ಯಷ್ಟು ಎತ್ತರವಾಗಿರುವುದು ಸಾಮಾನ್ಯವಾಗಿದೆ) ಮತ್ತು ಒಂದು ಸಲ ಮಾತ್ರ ಹೂಬಿಡುವ ಸ್ವಭಾವ. ಏರುವ ನಮೂನೆಯ ಗುಲಾಬಿಗಳು ಹಾಗೂ ಹಬ್ಬುವ ನಮೂನೆಯ ಗುಲಾಬಿಗಳೆರಡೂ ಐವಿ, ಕ್ಲೆಮ್ಯಾಟಿಸ್ ಅಥವಾ ವಿಸ್ಟೇರಿಯಾಗಳಂತೆ ನಿಜವಾದ ಬಳ್ಳಿಗಳಲ್ಲ. ಆಧಾರಗಳಿಗೆ ತಾವೇ ಸ್ವತಃ ಅಂಟಿಕೊಂಡು ಬೆಳೆಯುವ ಸಾಮರ್ಥ್ಯವು ಅವಕ್ಕಿರುವುದಿಲ್ಲ. ಆದ್ದರಿಂದ ಬಳ್ಳಿ ಚಪ್ಪರಗಳು ಹಾಗೂ ಲತಾ ಮಂಟಪಗಳ ಮೇಲೆ ಅವು ಹಬ್ಬಲು ಯಾರಾದರೊಬ್ಬರು ಹಬ್ಬಿಸಿ ಕಟ್ಟಬೇಕಾಗಾಗುತ್ತದೆ. ಉದಾಹರಣೆಗಳು: 'ಬ್ಲೇಝ್' (ಮತ್ತೆ ಮತ್ತೆ ಹೂಬಿಡುವ ಏರುವ ಪ್ರಭೇದ), 'ಅಮೆರಿಕನ್ ಪಿಲ್ಲರ್' (ಒಮ್ಮೆ ಮಾತ್ರ ಹೂಬಿಡುವ ಹಬ್ಬುವ ಪ್ರಭೇದ).

ಇಂಗ್ಲಿಷ್ / ಡೇವಿಡ್ ಆಸ್ಟಿನ್

[ಬದಲಾಯಿಸಿ]

ಗುಲಾಬಿಗಳ ಒಂದು ಪ್ರತ್ಯೇಕ ವರ್ಗ ಎಂಬುದಾಗಿ ಯಾವುದೇ ಅಧಿಕೃತ ಗುಲಾಬಿ ಪ್ರಾಧಿಕಾರದಿಂದ ಅಧಿಕೃತವಾಗಿ ಗುರುತಿಸಲ್ಪಟ್ಟಿಲ್ಲವಾದರೂ, ಗ್ರಾಹಕರು ಮತ್ತು ಚಿಲ್ಲರೆ ವ್ಯಾಪಾರಿಗಳು ಇಂಗ್ಲಿಷ್ (ಇದಕ್ಕೆ ಡೇವಿಡ್ ಆಸ್ಟಿನ್ ಎಂದೂ ಹೆಸರಿದೆ) ಗುಲಾಬಿಗಳಿಗೆ ಈ ರೀತಿಯ ಮೀಸಲು ಸ್ಥಾನವೊಂದನ್ನು ನೀಡುತ್ತಲೇ ಬಂದಿದ್ದಾರೆ.1960ರ ದಶಕದಲ್ಲಿ, ಇಂಗ್ಲೆಂಡ್‌ಶ್ರಾಪ್‌ಷೈರ್ಡೇವಿಡ್ ಆಸ್ಟಿನ್ ಇದರ ಕುರಿತಾದ ಅಭಿವೃದ್ಧಿ ಚಟುವಟಿಕೆಗಳನ್ನು ಪ್ರಾರಂಭಿಸಿದ. ಹಳೆಯ ಉದ್ಯಾನ ಗುಲಾಬಿಗಳನ್ನು ಆಧುನಿಕ ಮಿಶ್ರತಳಿ ಚಹಾ ಗುಲಾಬಿಗಳು ಹಾಗೂ ಫ್ಲೋರಿಬಂಡಗಳ ಜೊತೆ ಸಂಕರೀಕರಿಸುವ ಮೂಲಕ, ಹಳೆಯ ಉದ್ಯಾನ ಗುಲಾಬಿಗಳಲ್ಲಿನ ಆಸಕ್ತಿಯನ್ನು ಪುನರುದ್ದೀಪಿಸಲು ಅವನು ಬಯಸಿದ್ದ. ಶಿಷ್ಟ ಸ್ವರೂಪದ ಗ್ಯಾಲಿಕಾ , ಆಲ್ಬಾ ಮತ್ತು "ದಮಾಸ್ಕ್" ಗುಲಾಬಿಗಳ ಪ್ರೇರಕ ನಮೂನೆಗಳಾಗಿರುವ, ಹಳೆಯ-ಮಾದರಿಯ ಆಕಾರಗಳು ಹಾಗೂ ಪರಿಮಳಗಳೊಂದಿಗಿನ, ಆದರೆ ಮತ್ತೆ ಮತ್ತೆ ಹೂಬಿಡುವ ಗುಣಲಕ್ಷಣಗಳು ಹಾಗೂ ದೊಡ್ಡದಾದ ಆಧುನಿಕ ವರ್ಣಶ್ರೇಣಿಯೊಂದಿಗಿನ ಆಧುನಿಕ ಮಾದರಿಯ ಹೂವುಗಳನ್ನು ಒಳಗೊಂಡಿರುವ ಗುಲಾಬಿಗಳ ಹೊಸ ಗುಂಪೊಂದನ್ನು ಸೃಷ್ಟಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು. "ಇಂಗ್ಲಿಷ್" ಗುಲಾಬಿಗಳ ಪಂಗಡವನ್ನು ಸೃಷ್ಟಿಸುವ ತನ್ನ ಧ್ಯೇಯದಲ್ಲಿ ಆಸ್ಟಿನ್ ಬಹುತೇಕ ಯಶಸ್ವಿಯಾದ. ಈಗ ಈ ಗುಲಾಬಿಗಳು ನೂರಾರು ಸಂಖ್ಯೆಯ ಪ್ರಭೇದಗಳನ್ನು ಹೊಂದಿದ್ದು, ತೋಟಗಾರಿಕೆಯಲ್ಲಿ ತೊಡಗುವ ಸಾರ್ವಜನಿಕರಿಂದ ಅವುಗಳಿಗೆ ಬೆಚ್ಚನೆಯ ಸ್ವಾಗತ ಸಿಕ್ಕಿರುವುದೇ ಅಲ್ಲದೇ, ಗ್ರಾಹಕರಿಗೂ ಸಹ ಅವು ವ್ಯಾಪಕವಾಗಿ ದೊರೆಯುತ್ತವೆ. ಹೊಸ ಹೊಸ ಪ್ರಭೇದಗಳು ನಿಯಮಿತವಾಗಿ ಬಿಡುಗಡೆಯಾಗುತ್ತಿರುವುದರೊಂದಿಗೆ, ಡೇವಿಡ್ ಆಸ್ಟಿನ್ ಗುಲಾಬಿಗಳು ಚುರುಕಾದ ಬೆಳವಣಿಗೆಯನ್ನು ಕಂಡಿವೆ.ಶಿಷ್ಟ ಸ್ವರೂಪದ ಹಳೆಯ ಉದ್ಯಾನ ಗುಲಾಬಿಗಳ ವಿಶಿಷ್ಟ ಚಳಿ-ಸಹಿಷ್ಣುತೆ ಮತ್ತು ರೋಗ-ನಿರೋಧಕತೆಯು ಈ ಪ್ರಕ್ರಿಯೆಯಲ್ಲಿ ಅತ್ಯಂತ ಹೆಚ್ಚಿನ ರೀತಿಯಲ್ಲಿ ಸಮನ್ವಯತೆಯನ್ನು ಸಾಧಿಸಿದೆ ಎಂಬುದನ್ನು ಇಲ್ಲಿ ಗಮನಿಸಬೇಕು. ಆಧುನಿಕ ಮಿಶ್ರತಳಿ ಚಹಾ ಗುಲಾಬಿಗಳು ಹಾಗೂ ಫ್ಲೋರಿಬಂಡಗಳಿಗೆ ಬಂದೆರಗುವ ಕೆಲವೊಂದು ರೋಗದ ಸಮಸ್ಯೆಗಳಿಗೆ ಇಂಗ್ಲಿಷ್ ಗುಲಾಬಿಗಳು ಈಡಾಗುತ್ತವೆ ಮತ್ತು USDA 5ನೇ ವಲಯದ ಉತ್ತರಲ್ಲಿರುವ ಕೆಲವೊಂದು ಗುಲಾಬಿಗಳು ಸಹಿಷ್ಣುಗಳಲ್ಲ. ಉದಾಹರಣೆಗಳು: 'ಮೇರಿ ರೋಸ್,' 'ಗ್ರಹಾಂ ಥಾಮಸ್', 'ತಮೋರಾ'.

ಕೆನಡಾದ ಸಹಿಷ್ಣು ಗುಲಾಬಿಗಳು

[ಬದಲಾಯಿಸಿ]

ಕೆನಡಾದಲ್ಲಿನ ಚಳಿಗಾಲದ ತೀವ್ರಸ್ವರೂಪದ ಹವಾಮಾನ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು ಈ ಗುಲಾಬಿಗಳನ್ನು ಅಭಿವೃದ್ಧಿಪಡಿಸಲಾಯಿತು. ಮ್ಯಾನಿಟೋಬಾದ ಮಾರ್ಡೆನ್‌ನಲ್ಲಿನ ಮಾರ್ಡೆನ್ ಸಂಶೋಧನಾ ಕೇಂದ್ರದಲ್ಲಿ ಮತ್ತು ಒಟ್ಟಾವಾದಲ್ಲಿನ ಪ್ರಾಯೋಗಿಕ ತೋಟದಲ್ಲಿ (ಮತ್ತು ನಂತರ ಎಲ್' ಅಸಂಪ್ಷನ್ ಕ್ಯೂಬೆಕ್‌ನಲ್ಲಿ) ಈ ಗುಲಾಬಿಗಳನ್ನು ಕೆನಡಾದ ಕೃಷಿ ಇಲಾಖೆಯು ಅಭಿವೃದ್ಧಿಪಡಿಸಿತು. ಈ ಎರಡು ಪ್ರಮುಖ ಕಾರ್ಯಕ್ರಮಗಳನ್ನು ಪಾರ್ಕ್‌ಲೆಂಡ್‌ ಸರಣಿ ಮತ್ತು ಎಕ್ಸ್‌ಪ್ಲೋರರ್ ಸರಣಿ ಎಂದು ಕರೆಯಲಾಗುತ್ತದೆ. ಈ ಕಾರ್ಯಕ್ರಮಗಳು ಈಗ ಸ್ಥಗಿತಗೊಂಡಿವೆಯಾದರೂ, ಉಳಿದಿರುವ ಸಸ್ಯಗಳ ದಾಸ್ತಾನನ್ನು ಕೆನಡಾದ ಕಲಾವಿದರ ಶ್ರೇಣಿಯ ಮೂಲಕ ಖಾಸಗಿ ತಳಿಗಾರರು ಸ್ವಾಧೀನಕ್ಕೆ ತೆಗದುಕೊಂಡಿದ್ದಾರೆ. ಬಹುತೇಕವಾಗಿ ಕೆನಡಾದ ಸ್ಥಳೀಯ ಜಾತಿಗಳು ಮತ್ತು ಹೆಚ್ಚು ನವಿರಾದ ಗುಲಾಬಿಗಳ ಮಿಶ್ರತಳಿಯಿಂದ ಪಡೆಯಲಾಗಿರುವ ಈ ಸಸ್ಯಗಳು ಶೀತದ ಹವಾಮಾನಕ್ಕೆ ಅತೀವವಾದ ಸಹಿಷ್ಣುತೆಯನ್ನು ತೋರಿಸುವುದಲ್ಲದೇ ಕೆಲವೊಂದು ಸಸ್ಯಗಳು -45Cವರೆಗೂ ಚಳಿಯನ್ನು ತಡೆದುಕೊಳ್ಳುತ್ತವೆ. ಉದಾಹರಣೆಗಳಲ್ಲಿ 'ಮಾರ್ಡೆನ್ ಬೆಲ್ಲೆ', 'ವಿನ್ನಿಪೆಗ್ ಪಾರ್ಕ್ಸ್' ಮತ್ತು 'ಕಥ್‌ಬೆರ್ಟ್‌ ಗ್ರಾಂಟ್‌' ಇವೇ ಮೊದಲಾದವುಗಳು ಸೇರಿವೆ. ಕೆನಡಾದ ಇತರ ಗಮನಾರ್ಹ ತಳಿಗಾರರಲ್ಲಿ ಜಾರ್ಜಸ್‌ ಬಗ್ನೆಟ್ ಮತ್ತು ರಾಬರ್ಟ್‌ ಎರ್‌ಸ್ಕೈನ್‌ ಸೇರಿದ್ದಾರೆ.

ಭೂದೃಶ್ಯ ಗುಲಾಬಿಗಳು

[ಬದಲಾಯಿಸಿ]
ಪೊದೆಸಸ್ಯ ಗುಲಾಬಿಯೊಂದರ ಒಂದು ಉದಾಹರಣೆ.

ಇವು ಗುಲಾಬಿಯ ಆಧುನಿಕ ವರ್ಗವಾಗಿದ್ದು, ಮುಖ್ಯವಾಗಿ ಸಾಮೂಹಿಕ ಆಹ್ಲಾದದಾಯಕತೆಯನ್ನು ಬಿಂಬಿಸಲು ಇವನ್ನು ಬೆಳೆಸಲಾಗುತ್ತದೆ. ಒಟ್ಟು ಸಂಗ್ರಹರೂಪವಾಗಿ ಅವುಗಳನ್ನು ಪೊದೆಸಸ್ಯ ಗುಲಾಬಿಗಳೆಂದು ಕರೆಯಲಾಗುತ್ತದೆ.20ನೇ ಶತಮಾನದ ಅಂತ್ಯಭಾಗದಲ್ಲಿ, ಸಾಂಪ್ರದಾಯಿಕ ಮಿಶ್ರತಳಿ ಚಹಾ ಮತ್ತು ಫ್ಲೋರಿಬಂಡ ಗುಲಾಬಿ ಪ್ರಭೇದಗಳು, ತೋಟಗಾರರು ಮತ್ತು ಭೂದೃಶ್ಯ ತೋಟಗಾರರ ಪ್ರೋತ್ಸಾಹವನ್ನು ಕಳೆದುಕೊಳ್ಳಬೇಕಾಗಿ ಬಂತು. ಈ ಪ್ರಭೇದಗಳು ಆಗಾಗ ತೊಂದರೆಗೆ ಒಳಗಾಗುತ್ತಿದ್ದುದು ಹಾಗೂ ಅಸಂಖ್ಯಾತ ಕ್ರಿಮಿಕೀಟಗಳು ಮತ್ತು ರೋಗದ ಸಮಸ್ಯೆಗಳಿಗೆ ಈ ಸಸ್ಯಗಳು ತೀವ್ರವಾಗಿ ಈಡಾಗುತ್ತಿದ್ದುದು ಇದಕ್ಕೆ ಕಾರಣವಾಗಿತ್ತು. ಹೀಗಾಗಿ, "ಭೂದೃಶ್ಯದ" ಗುಲಾಬಿಗಳು ಎಂದು ಕರೆಯಲ್ಪಡುವ ಗುಲಾಬಿಗಳು ಗ್ರಾಹಕರ ಬಯಕೆಯನ್ನು ತಣಿಸುವ ಉದ್ದೇಶದಿಂದಲೇ ಅಭಿವೃದ್ಧಿಗೊಂಡವು. ಉದ್ಯಾನ ಗುಲಾಬಿಯೊಂದಕ್ಕೆ ಇರಬೇಕಾದ ಬಣ್ಣ, ಸ್ವರೂಪ ಮತ್ತು ಪರಿಮಳ ಇವೇ ಮೊದಲಾದ ಅಂಶಗಳೇ ಅಲ್ಲದೇ, ಕಡಿಮೆ ಪೋಷಣೆ-ನಿರ್ವಹಣೆ ಮತ್ತು ಸುಲಭವಾಗಿ ಆರೈಕೆ ಮಾಡಬಹುದಾದ ಅಂಶಗಳೆಲ್ಲವನ್ನೂ ಅವು ಒಳಗೊಂಡಿರುವುದು ಇದಕ್ಕೆ ಕಾರಣ. ಬಹುತೇಕ ಭೂದೃಶ್ಯ ಗುಲಾಬಿಗಳು ಈ ಕೆಳಕಂಡ ಗುಣಲಕ್ಷಣಗಳನ್ನು ಹೊಂದಿವೆ:

  • ಉತ್ತಮ ರೋಗ ನಿರೋಧಕತೆ
  • ಕಡಿಮೆ ಪ್ರಮಾಣದಲ್ಲಿರುವ ಬೆಳೆಯುವ ಸ್ವಭಾವ, ಸಾಮಾನ್ಯವಾಗಿ 60 ಸೆಂಮೀ (24 ಇಂಚು)ಗಿಂತ ಕೆಳಗಿರುತ್ತದೆ
  • ಮತ್ತೆ ಮತ್ತೆ ಹೂಬಿಡುತ್ತದೆ
  • ರೋಗ ಮತ್ತು ಕೀಟ ನಿರೋಧಕತೆ
  • ಚೂಷಕಗಳಂತೆ ಮತ್ತೊಂದು ಆಧಾರವನ್ನು ಅವಲಂಬಿಸದೇ, ಸ್ವತಃ ತಮ್ಮದೇ ಬೇರಿನ ಮೇಲೆ ಬೆಳೆಯುತ್ತವೆ.

ಹೊಸ ಭೂದೃಶ್ಯ ಗುಲಾಬಿಗಳ ಪ್ರಭೇದಗಳ ತಳಿ-ಬೆಳೆಸುವಿಕೆಯಲ್ಲಿ ತೊಡಗಿಸಿಕೊಂಡಿರುವ ಪ್ರಮುಖ ಪಕ್ಷಕಾರರೆಂದರೆ: ವೆರ್ನರ್ ನೋಕ್ (ಜರ್ಮನಿ), ಮೆಡಿಲ್ಯಾಂಡ್ ರೋಸಸ್ (ಫ್ರಾನ್ಸ್), ಬೂಟ್‌ ಅಂಡ್ ಕಂ. (ನೆದರ್ಲೆಂಡ್ಸ್‌), ಮತ್ತು ವಿಲಿಯಂ ರ್ಯಾಡ್ಲರ್ (USA). ಕಾರ್ಪೆಟ್‌ ಗುಲಾಬಿಗಳೆಂದೇ ಖ್ಯಾತವಾಗಿರುವ ಫ್ಲವರ್ ಕಾರ್ಪೆಟ್ ಗುಲಾಬಿಗಳು, ಭೂದೃಶ್ಯ ಗುಲಾಬಿಗಳ ಗುಂಪಿನ ಸಂಪೂರ್ಣ ಶ್ರೇಣಿಯನ್ನೇ ಬದಲಿಸಿವೆ. 1990ರಲ್ಲಿ ವೆರ್ನರ್ ನೋಕ್‌ನಿಂದ ಮೊಟ್ಟಮೊದಲ ಬಾರಿಗೆ ಈ ಗುಲಾಬಿಗಳು ಪರಿಚಿತಗೊಂಡಾಗ, ವಿಶ್ವದಲ್ಲಿನ ಅತ್ಯಂತ ಕಠಿಣತಮ ಪರೀಕ್ಷೆಗಳಲ್ಲಿ ಒಂದಾದ, ಜರ್ಮನಿಯಲ್ಲಿನ ಆಲ್‌ ಡ್ಯೂಷ್‌ಲೆಂಡ್ ರೋಸ್‌ ಟೆಸ್ಟರ್ಸ್‌ ಸಂಸ್ಥೆಯಿಂದ ನೀಡಲ್ಪಟ್ಟ ಅತ್ಯುನ್ನತ ಪ್ರಶಸ್ತಿಯನ್ನು ಪಡೆದುಕೊಂಡವು.ಈ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ 43 ಪ್ರಭೇದಗಳ ಪೈಕಿ, ಮತ್ತು ಎಲ್ಲಾ ಪರೀಕ್ಷೆಗಳ ಸರಾಸರಿಯ ಪೈಕಿ, ರೋಗಕ್ಕೆ ಪ್ರತಿರೋಧಕತೆಯನ್ನು ಒಡ್ಡುವುದಕ್ಕೆ ಸಂಬಂಧಿಸಿದಂತೆ ಇದು ಸುಮಾರು 200 ಬಾರಿ ತೀರ್ಮಾನಿಸಲ್ಪಟ್ಟಿದೆ. ಇದು ಸದರಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಏಕೈಕ ಪ್ರಭೇದವಾಗಿರುವುದಷ್ಟೇ ಅಲ್ಲದೇ, ಆ ಸಮಯದಲ್ಲಿ ಗುಲಾಬಿಯೊಂದಕ್ಕೆ ನೀಡಲಾದ ಅತ್ಯಂತ ಹೆಚ್ಚಿನ ಅಂಕಗಳನ್ನು, ಅಂದರೆ 100ರ ಪೈಕಿ 85.5 ಅಂಕಗಳನ್ನು ಪಡೆದುಕೊಂಡಿದೆ. ರೋಗ ನಿರೋಧಕತೆಗೆ ಸಂಬಂಧಿಸಿ 20 ಅಂಕಗಳ ಪೈಕಿ 18.3 ಅಂಕಗಳನ್ನು ಪಡೆದುಕೊಂಡಿದೆ. ಈ ಗುಲಾಬಿಗಳು ಜಾಗತಿಕವಾಗಿ ಲಭ್ಯವಿದ್ದು, ಇದುವರೆಗೂ ಹುಟ್ಟುಹಾಕಲಾದ ಭೂದೃಶ್ಯ ಗುಲಾಬಿ ಗುಂಪುಗಳ ಪೈಕಿ ಅತ್ಯುತ್ತಮವೆನಿಸಿಕೊಂಡಿವೆ.

ಕಾರ್ಪೆಟ್‌ ಗುಲಾಬಿಗಳು

[ಬದಲಾಯಿಸಿ]

ಮತ್ತೊಮ್ಮೆ, ಡೇವಿಡ್‌ ಆಸ್ಟಿನ್‌ನಂತೆಯೇ ಈ ಗುಲಾಬಿಗಳನ್ನೂ ಯಾವುದೇ ಅಧಿಕೃತ ಗುಲಾಬಿ ಪ್ರಾಧಿಕಾರವು ಗುಲಾಬಿಗಳ ಒಂದು ಪ್ರತ್ಯೇಕ ವರ್ಗವಾಗಿ ಅಧಿಕೃತವಾಗಿ ಗುರುತಿಸದಿರಬಹುದು. ಆದರೆ ಕಾರ್ಪೆಟ್‌ ಗುಲಾಬಿಗಳು (ಫ್ಲವರ್ ಕಾರ್ಪೆಟ್‌ ಎಂದೂ ಅವು ಹೆಸರಾಗಿವೆ) ಗ್ರಾಹಕರು, ಭೂದೃಶ್ಯ ತೋಟಗಾರರು ಹಾಗೂ ಪುಷ್ಪೋದ್ಯಮದಿಂದ ಗುರುತಿಸಲ್ಪಟ್ಟಿವೆ. ವೆರ್ನರ್ ನೋಕ್‌ (ಜರ್ಮನಿ) ರೋಗ ನಿರೋಧಕ ಗುಲಾಬಿಗಳಿಗೆ ಸಂಬಂಧಿಸಿದ ತನ್ನ ತಳಿಸೃಷ್ಟಿ ಕಾರ್ಯವನ್ನು 1965ರಲ್ಲಿ ಪ್ರಾರಂಭಿಸಿದ.ಗುಲಾಬಿಗಳ ಕುರಿತು ಅತೀವವಾದ ಉತ್ಕಟತೆಯನ್ನು ಆತ ಹೊಂದಿದ್ದರೂ, ಎಲ್ಲಾ ಬಗೆಯ ರೋಗಗಳನ್ನು ಒಳಗೊಂಡಿರುವ ಗುಲಾಬಿಗಳು ದೀರ್ಘಕಾಲದವರೆಗೆ ತೋಟಗಾರರ ಮೆಚ್ಚುಗೆಯನ್ನು ಗಳಿಸುತ್ತವೆ ಎಂಬುದನ್ನು ನಂಬಲು ಆತ ಸಿದ್ಧನಿರಲಿಲ್ಲ. 1989ರಲ್ಲಿ ಫ್ಲವರ್ ಕಾರ್ಪೆಟ್‌ ಪಿಂಕ್‌ ಎಂಬ ತನ್ನ ಮೊದಲ ಫ್ಲವರ್ ಕಾರ್ಪೆಟ್‌ ಗುಲಾಬಿಯನ್ನು ಆತ ಪರಿಚಯಿಸಿದ.ಸಾಟಿಯಿಲ್ಲದ ರೋಗ ಸಹಿಷ್ಣುತೆಯ ಜೊತೆಗೆ, ಹೆಚ್ಚೂ ಕಮ್ಮಿ ಯಾವುದೇ ಗುಲಾಬಿಯೂ ತೋರ್ಪಡಿಸದ, ಸುದೀರ್ಘ ಅವಧಿಯವರೆಗೆ (ಹವಾಮಾನವನ್ನು ಆಧರಿಸಿ 5 ರಿಂದ 9 ತಿಂಗಳವರೆಗೆ) ಹೂಬಿಡುವ ಸ್ವಭಾವವನ್ನು ಈ ಗುಲಾಬಿಯು ಹೊಂದಿತ್ತು. ಯಾವುದೇ ಅಲಂಕಾರಿಕ ಉದ್ದೇಶದ ಸಮರುವಿಕೆ (ಕತ್ತರಿಸುವಿಕೆ) ಅಗತ್ಯವೂ ಇದಕ್ಕಿರಲಿಲ್ಲ; ಕೇವಲ ಉದ್ದಹಿಡಿಯ ಕತ್ತರಿಗಳು, ಹೆರೆಗತ್ತರಿಗಳನ್ನು ಬಳಸಿಕೊಂಡು ಅಥವಾ ಟ್ರಾಕ್ಟರ್ ನೀಳಕೊಯ್ತದ (1/3 ಭಾಗದಷ್ಟು ಅಥವಾ ಮಣ್ಣಿನ ಮಟ್ಟದವರೆಗೆ ಕತ್ತರಿಸಿದರೂ ಬಾಧಕವಿಲ್ಲ) ವಿಧಾನದಲ್ಲಿ ಈ ಗುಲಾಬಿಗಳನ್ನು ಕತ್ತರಿಸಬಹುದಿತ್ತು. ಅಷ್ಟೇ ಅಲ್ಲ, ಇವೆಲ್ಲವನ್ನೂ ಸೊಗಸಾದ, ಹುಲುಸಾಗಿರುವ ಉಜ್ವಲ ಹಸಿರಿನ ಎಲೆಗೊಂಚಲಿನ ಮೇಲೆ ಮಾಡಬಹುದಿತ್ತು.

ನಿರಂತರವಾದ ಅಭಿವೃದ್ಧಿ ಮತ್ತು ಸದೃಢವಾದ ತಳಿಸೃಷ್ಟಿ ಕಾರ್ಯಕ್ರಮವೊಂದರಿಂದಾಗಿ ಬಿಳಿ, ಆಪಲ್‌ಬ್ಲಾಸಂ, ಕೆಂಪು, ಹಳದಿ, ಹೊಂಬಣ್ಣ ಮತ್ತು ಹವಳದ ಬಣ್ಣವೇ ಮೊದಲಾದ ವಿವಿಧ ವರ್ಣಗಳ ಫ್ಲವರ್ ಕಾರ್ಪೆಟ್‌ ಗುಲಾಬಿಗಳು ಲಭ್ಯವಾದವು. ಈ ಅವಧಿಯಲ್ಲಿ ಅವನ ಮಗ ರೀನ್‌ಹಾರ್ಡ್‌ ನೋಕ್‌ನ ನಾಯಕತ್ವದಡಿಯಲ್ಲಿ ತಳಿಸೃಷ್ಟಿ ಕಾರ್ಯವು ಮುಂದುವರಿಯಿತು. 2007ರಲ್ಲಿ ಕಂಡುಬಂದ ಮುಂದಿನ ತಳಿಸೃಷ್ಟಿಯಲ್ಲಿ ಫ್ಲವರ್ ಕಾರ್ಪೆಟ್ ಪಿಂಕ್ ಸುಪ್ರೀಮ್, ಕೇಸರಿ-ಕಡುಗೆಂಪು ಮತ್ತು ಕಿತ್ತಲೆ ಹಳದಿ ಬಣ್ಣದೊಂದಿಗಿನ ಆತನ ಹೊಸ ಪೀಳಿಗೆಯ ತಳಿಗಳು ಪರಿಚಯಗೊಂಡವು. ಮೇಲೆ ಹೆಸರಿಸಲಾದ ಎಲ್ಲ ವಿಶಿಷ್ಟ ಲಕ್ಷಣಗಳ ಜೊತೆಗೆ, 42Cವರೆಗಿನ ಬಿಸಿಯಾದ ಹವಾಮಾನದ ಸನ್ನಿವೇಶಗಳಲ್ಲೂ ಈ ಗುಲಾಬಿಗಳು ನಿರಾಳವಾಗಿರುತ್ತವೆ.

ಸಮರುವಿಕೆ

[ಬದಲಾಯಿಸಿ]
ಚಿತ್ರ:Rose3800ppx.jpg
ಈ ಗುಲಾಬಿ ಪೊದೆಯನ್ನು ಸದ್ಯದ ಸ್ವರೂಪಕ್ಕೆ ಕತ್ತರಿಸಲಾಗಿದೆ

ಗುಲಾಬಿಯ ಸಮರುವಿಕೆಯು ಒಂದು ತೋಟಗಾರಿಕಾ ಕಲಾಸ್ವರೂಪ ಎಂದು ಕೆಲವೊಮ್ಮೆ ಗುರುತಿಸಲಾಗಿದೆ. ಯಾವ ಬಗೆಯ ಗುಲಾಬಿಯನ್ನು ಸಮರಬೇಕು, ಸಮರುವ ಹಿಂದಿರುವ ಕಾರಣವೇನು ಮತ್ತು ಸಮರುವಿಕೆಗಾಗಿ ಆಯ್ದುಕೊಂಡ ಸಮಯವು ವರ್ಷದ ಯಾವ ಕಾಲದಲ್ಲಿ ಬರುತ್ತದೆ ಎಂಬುದನ್ನು ಈ ಪ್ರಕ್ರಿಯೆಯು ಹೆಚ್ಚಾಗಿ ಅವಲಂಬಿಸಿರುತ್ತದೆ. ಕಟ್ಟುನಿಟ್ಟಾಗಿ ಐರೋಪ್ಯ ವಂಶಪರಂಪರೆಯಿಂದ ಬಂದ ಬಹುತೇಕ ಹಳೆಯ ಉದ್ಯಾನ ಗುಲಾಬಿಗಳು (ಆಲ್ಬಾಗಳು, ದಮಾಸ್ಕ್‌ಗಳು, ಗ್ಯಾಲಿಕಾಗಳು ಇತ್ಯಾದಿ) ವರ್ಷಕ್ಕೊಮ್ಮೆ ಹೂಬಿಡುವ ಪೊದೆಸಸ್ಯಗಳಾಗಿದ್ದು, ವಸಂತಋತುವಿನ ಅಂತ್ಯದಲ್ಲಿ ಅಥವಾ ಬೇಸಿಗೆಯ ಆರಂಭದಲ್ಲಿ ಎರಡು-ವರ್ಷ-ಹಳೆಯ (ಅಥವಾ ಹಳೆಯದಾದ) ಜಲ್ಲೆಗಳ ಮೇಲೆ ಇವುಗಳ ಹೂವುಗಳು ಅರಳುತ್ತವೆ. ಇಂಥಾ ಸನ್ನಿವೇಶದಲ್ಲಿ ಅವುಗಳ ಸಮರುವಿಕೆಯ ಅಗತ್ಯತೆಗಳು ತೀರಾ ಕನಿಷ್ಟವಾಗಿರುತ್ತವೆ ಮತ್ತು ಅವನ್ನೇ ಹೋಲುವ ಲೈಲ್ಯಾಕ್ ಅಥವಾ ಫಾರ್ಸಿತಿಯಾನಂತಹ ಯಾವುದೇ ಪೊದೆಸಸ್ಯಗಳಿಗೆ ಹೋಲಿಸಿದಾಗ ಈ ಅಗತ್ಯತೆಗಳು ಒಟ್ಟಾರೆಯಾಗಿ ಅದೇ ರೀತಿಯಲ್ಲಿರುತ್ತವೆ. ಸಾರ್ವತ್ರಿಕವಾಗಿ ಹೇಳುವುದಾದರೆ, ಹೊಸ ಹೊಸ ಜಲ್ಲೆಗಳಿಗೆ ಅವಕಾಶ ಕಲ್ಪಿಸಲು ಕೇವಲ ಹಳತಾದ, ಬಡಕಲಾಗಿರುವ ಜಲ್ಲೆಗಳನ್ನಷ್ಟೇ ಸಮರಿಹಾಕಬೇಕು.ಒಂದು ವರ್ಷ ಹಳೆಯದಾದ ಜಲ್ಲೆಗಳನ್ನು ಎಂದಿಗೂ ಸಮರಿಹಾಕಬಾರದು. ಏಕೆಂದರೆ ಹಾಗೆ ಮಾಡುವುದರಿಂದ ಮುಂದಿನ ವರ್ಷದ ಹೂವಿನ ಮೊಗ್ಗುಗಳು ತೊಡೆದುಹಾಕಲ್ಪಡುತ್ತವೆ. ಸಸ್ಯದ ಒಟ್ಟಾರೆ ಎತ್ತರ ಅಥವಾ ಅಗಲವನ್ನು ಕಡಿಮೆ ಮಾಡುವ ದೃಷ್ಟಿಯಿಂದ, ಹೂವುಗಳು ಮುಸುಕಾದ ನಂತರ ತಕ್ಷಣವೇ ಆ ಪೊದೆಸಸ್ಯಗಳನ್ನು ಹಗುರವಾಗಿ ಸಮರಿಹಾಕಬಹುದು. ಸಾರ್ವತ್ರಿಕವಾಗಿ ಹೇಳುವುದಾದರೆ, ಆಧುನಿಕ ಮಿಶ್ರತಳಿಗಳಿಗೆ ಹೋಲಿಸಿದಾಗ ಹಳೆಯ ಉದ್ಯಾನ ಗುಲಾಬಿಗಳ ಸಮರುವಿಕೆಯ ಅಗತ್ಯತೆಗಳು ತುಂಬಾ ಕಡಿಮೆ ಪ್ರಯಾಸಕರವಾಗಿದೆ ಮತ್ತು ವ್ಯವಸ್ಥಿತವಾಗಿದೆ ಎಂದು ಹೇಳಬಹುದು. ಮಿಶ್ರತಳಿ ಚಹಾ ಗುಲಾಬಿಗಳು, ಫ್ಲೋರಿಬಂಡಗಳು, ಗ್ರ್ಯಾಂಡಿಫ್ಲೋರಗಳು, ಆಧುನಿಕ ಚಿಕಣಿ ಗಾತ್ರದ ಗುಲಾಬಿಗಳು ಹಾಗೂ ಇಂಗ್ಲಿಷ್‌ ಗುಲಾಬಿಗಳನ್ನು ಒಳಗೊಂಡಂತೆ, ಆಧುನಿಕ ಮಿಶ್ರತಳಿಗಳು ಒಂದು ಸಂಕೀರ್ಣ ಆನುವಂಶಿಕ ಹಿನ್ನೆಲೆಯನ್ನು ಹೊಂದಿದ್ದು, ಅದು ಹೆಚ್ಚೂಕಮ್ಮಿ ಯಾವಾಗಲೂ ಚೈನಾ ಗುಲಾಬಿಗಳನ್ನು (R. ಚೈನೆನ್ಸಿಸ್ ) ಒಳಗೊಳ್ಳುತ್ತದೆ. ಚೈನಾ ಗುಲಾಬಿಗಳು ಆರ್ದ್ರತೆಯನ್ನುಳ್ಳ ಉಪ-ಉಷ್ಣವಲಯದ ಪ್ರಾಂತ್ಯಗಳಿಂದ ಬಂದ ನಿತ್ಯಬೆಳೆಯುವ, ನಿತ್ಯಹೂಬಿಡುವ ಗುಲಾಬಿಗಳಾಗಿದ್ದು, ಬೆಳೆಯುವ ಋತುವಿನ ಅವಧಿಯಲ್ಲಿ ಉತ್ಪತ್ತಿಯಾಗುತ್ತಿದ್ದ ಯಾವುದೇ ಹೊಸ ಸಸ್ಯಕ ಬೆಳೆಯ ಮೇಲೆ ಒಂದೇ ಸಮನೆ ಹೂಬಿಡುತ್ತಿದ್ದವು. ಅವುಗಳ ಆಧುನಿಕ ಮಿಶ್ರತಳಿ ಸಂತತಿಗಳು ಅದೇ ಸ್ವರೂಪದ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತವೆ. ಹಳೆಯ ಉದ್ಯಾನ ಗುಲಾಬಿಗಳಂತಿರದ ಆಧುನಿಕ ಮಿಶ್ರತಳಿಗಳು, ಬೆಳವಣಿಗೆಯ ಋತುವಿನ ಅವಧಿಯಲ್ಲಿ ಹುಟ್ಟಿಕೊಳ್ಳುವ ಯಾವುದೇ ಹೊಸ ಜಲ್ಲೆಗಳ ಮೇಲೆ ಒಂದೇ ಸಮನೆ (ಹಿಮದಿಂದ ನಿಲ್ಲಿಸಲ್ಪಡುವವರೆಗೂ) ಹೂಬಿಡುತ್ತವೆ. ಆದ್ದರಿಂದ, ಹೂಬಿಡುವ ಸಾಮರ್ಥ್ಯವೆಲ್ಲಾ ಮುಗಿದುಹೋಗಿರುವ ಯಾವುದೇ ಕಾಂಡವನ್ನು ಸಮರಿಹಾಕುವುದು ಅವುಗಳಿಗೆ ಅತ್ಯಗತ್ಯವಾಗಿರುತ್ತದೆ. ಹೊಸ ಬೆಳವಣಿಗೆಯನ್ನು ಹುಟ್ಟಿಸುವ ಕಡೆಗೆ ಹಾಗೂ ತನ್ಮೂಲಕ ಹೊಸ ಹೂವುಗಳ ಅರಳುವಿಕೆಯ ಕಡೆಗೆ ಸಸ್ಯದ ಶಕ್ತಿಯನ್ನು ತಿರುಗಿಸಲು ಈ ಕ್ರಮ ಅಗತ್ಯವಾಗಿರುತ್ತದೆ. ಇದಕ್ಕೆ ಹೆಚ್ಚುವರಿಯಾಗಿ, ಶೀತದ ಚಳಿಯ ಹವಾಮಾನದಲ್ಲಿ ನೆಡಲ್ಪಟ್ಟ ಆಧುನಿಕ ಮಿಶ್ರತಳಿಗಳಿಗೆ ಹೆಚ್ಚೂಕಮ್ಮಿ ಸಾರ್ವತ್ರಿಕವಾಗಿ, ವಸಂತಋತುವಿನ ಆರಂಭದಲ್ಲಿ ಒಂದು "ಗಡುಸಾದ" ವಾರ್ಷಿಕ ಸಮರುವಿಕೆಯ (ಇದರಿಂದಾಗಿ ಎಲ್ಲಾ ಜಲ್ಲೆಗಳ ಎತ್ತರವೂ 8"–12"ರಷ್ಟಕ್ಕೆ ಇಳಿಯುತ್ತದೆ) ಅಗತ್ಯವಿರುತ್ತದೆ. ಅವುಗಳ ಸಂಕೀರ್ಣ ಚೈನಾ ಗುಲಾಬಿಯ ಹಿನ್ನೆಲೆಯ ಕಾರಣದಿಂದಾಗಿ, ಆಧುನಿಕ ಮಿಶ್ರತಳಿಗಳು ಐರೋಪ್ಯ ಹಳೆಯ ಉದ್ಯಾನ ಗುಲಾಬಿಗಳಷ್ಟು ಶೀತಸಹಿಷ್ಣುಗಳಲ್ಲ. ಜೊತೆಗೆ, ಚಳಿಗಾಲದ ಕಡಿಮೆ ಉಷ್ಣತೆಗಳು ಒಡ್ಡಲ್ಪಟ್ಟ ಜಲ್ಲೆಗಳನ್ನು ಒಮ್ಮೊಮ್ಮೆ ಇಂಗಿಸುತ್ತವೆ ಅಥವಾ ಸಾಯಿಸುತ್ತವೆ. ವಸಂತಋತುವಿನಲ್ಲಿ ಅವುಗಳನ್ನು ಸಮರಿಹಾಕದೇ ಹಾಗೇ ಬಿಟ್ಟರೆ, ಹಾನಿಗೊಳಗಾದ ಈ ಜಲ್ಲೆಗಳು ಸದರಿ ಪೊದೆಸಸ್ಯದ ಬೇರಿನ ಭಾಗದವರೆಗೂ ಇಂಗುತ್ತಾ ಅಥವಾ ಸಾಯುತ್ತಾ ಹೋಗಿ, ಕೊನೆಗೆ ದುರ್ಬಲವಾದ, ರೂಪ ಕಳೆದುಕೊಂಡ ಸಸ್ಯದ ರೂಪದಲ್ಲಿ ತೋರುತ್ತವೆ. ಮಿಶ್ರತಳಿ ಚಹಾ ಗುಲಾಬಿಗಳು, ಫ್ಲೋರಿಬಂಡಗಳು ಇತ್ಯಾದಿಗಳ ವಾರ್ಷಿಕ "ಗಡುಸಾದ" ಸಮರುವಿಕೆಯನ್ನು ಸಾಮಾನ್ಯವಾಗಿ ವಸಂತಋತುವಿನ ಆರಂಭದಲ್ಲಿ ಮಾಡಬೇಕು. ಬಹುತೇಕ ತೋಟಗಾರರು ಅಥವಾ ಮಾಲಿಗಳು ಈ ಸಮರುವಿಕೆಯನ್ನು ಫಾರ್ಸಿತಿಯಾ ಪೊದೆಸಸ್ಯಗಳು ಹೂಬಿಡುವ ಸಮಯದಲ್ಲಿಯೇ ಮಾಡುತ್ತಾರೆ. ಒಂದು ಸಸ್ಯಕ ಮೊಗ್ಗಿಗಿಂತ ಮೇಲಿರುವ ಭಾಗದಲ್ಲಿ ಜಲ್ಲೆಗಳನ್ನು ಕತ್ತರಿಸಬೇಕು (ಜಲ್ಲೆಯೊಂದರ ಮೇಲೆ ಹಿಂದೊಮ್ಮೆ ಎಲೆಯೊಂದು ಬೆಳೆದಿದ್ದರ ಗುರುತನ್ನು ಆಧರಿಸಿ ಈ ಬಿಂದುವನ್ನು ಗುರುತಿಸಬಹುದು). ಹಳೆಯ ಉದ್ಯಾನ ಗುಲಾಬಿಗಳು ಹಾಗೂ ಆಧುನಿಕ ತಳಿಗಳೆರಡರಲ್ಲೂ ಯಾವುದೇ ದುರ್ಬಲ, ಹಾನಿಗೊಳಗಾದ ಅಥವಾ ರೋಗಗ್ರಸ್ತ ಭಾಗವನ್ನು ಸಂಪೂರ್ಣವಾಗಿ ಸಮರಿಹಾಕಬೇಕು. ಅದು ವರ್ಷದ ಯಾವುದೇ ಕಾಲವಾಗಿದ್ದರೂ ಅದನ್ನು ಹಾಗೆಯೇ ಬಿಡಬಾರದು. ಯಾವುದೇ ಗುಲಾಬಿಯ ಯಾವುದೇ ಸಮರುವಿಕೆಯನ್ನು ಕೂಡಾ ಇದೇ ರೀತಿ ಮಾಡಬಹುದು. ಸಸ್ಯಕ ಮೊಗ್ಗೊಂದರ ಮೇಲ್ಭಾಗದಲ್ಲಿ ಸುಮಾರು ನಲವತ್ತು ಡಿಗ್ರಿ ಕೋನದಲ್ಲಿ ಕತ್ತರಿಸುವಿಕೆಯನ್ನು ಮಾಡಬೇಕು. ಇದರಿಂದಾಗಿ ಸಮರುವಿಕೆಗೆ ಒಳಗಾದ ಕಾಂಡವು ಅತಿ ಶೀಘ್ರವಾಗಿ ಹೊಸ ಊತಕವನ್ನು ಬೆಳೆಸಿಕೊಳ್ಳಲು ಹಾಗೂ ಕತ್ತರಿಸಿದ ಭಾಗದ ಮೇಲೆ ತೇವಾಂಶವು ಸಂಗ್ರಹವಾಗುವುದನ್ನು ತಗ್ಗಿಸಲೂ ಸಹ ಇದು ಸಹಾಯಕವಾಗುತ್ತದೆ. ಇಲ್ಲದಿದ್ದರೆ ಅದು ರೋಗದ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಗುಲಾಬಿಯ ಎಲ್ಲಾ ಸಾರ್ವತ್ರಿಕೆ ಸಮರುವಿಕೆಗಾಗಿ (ಅಣಿ ಮಾಡುವಿಕೆಗೆ ಹೂವುಗಳನ್ನು ಕತ್ತರಿಸುವುದೂ ಸೇರಿದಂತೆ), ಚೂಪಾದ ಸಮರುಗತ್ತರಿ ಅಥವಾ ಕಸಿಗತ್ತರಿಗಳನ್ನು (ಕೈಯಲ್ಲಿ ಹಿಡಿಯುವ, ಕುಡುಗೋಲು-ಅಲಗುಳ್ಳ ಕಸಿಗತ್ತರಿಗಳನ್ನು) ಬಳಸಬೇಕು. 1/2" ಅಥವಾ ಅದಕ್ಕಿಂತ ಕಡಿಮೆ ವ್ಯಾಸದ ಯಾವುದೇ ಬೆಳೆತವನ್ನು ಕತ್ತರಿಸಲು ಇವನ್ನು ಬಳಸಬಹುದು. 1/2"ಗಿಂತ ಹೆಚ್ಚಿನ ದಪ್ಪವನ್ನು ಹೊಂದಿರುವ ಜಲ್ಲೆಗಳಿಗಾಗಿ ಮರದ ಗಣೆಯ ಕತ್ತರಿಗಳು ಅಥವಾ ಒಂದು ಸಣ್ಣ ಕೈಗರಗಸವನ್ನು ಸಾಮಾನ್ಯವಾಗಿ ಹೆಚ್ಚು ಪರಿಣಾಮಕಾರಿಯಾಗಿವೆ. ಏಕೆಂದರೆ, ಇಂಥಾ ಸನ್ನಿವೇಶಗಳಲ್ಲಿ ಸಮರುಗತ್ತರಿಗಳು ಹಾನಿಗೊಳಗಾಗಬಹುದು ಅಥವಾ ಮುರಿಯಬಹುದು.

ಒಣಗಿದ ಹೂವನ್ನು ತೆಗೆಯುವಿಕೆ

[ಬದಲಾಯಿಸಿ]

ಗುಲಾಬಿ ಪೊದೆಸಸ್ಯಗಳು ಹೂಬಿಡುವ ಋತುವಿನ ಅವಧಿಯಲ್ಲಿ, ಆಕರ್ಷಣೆ ಕಳೆದುಕೊಂಡ, ಮಸುಕಾದ, ಸುರುಟಿಕೊಂಡಿರುವ ಅಥವಾ ಬಣ್ಣವನ್ನು ಕಳೆದುಕೊಂಡಿರುವ ಅವುಗಳ ಯಾವುದೇ ಹೂವುಗಳನ್ನು ಕೈಯಿಂದ ತೆಗೆದುಹಾಕುವ ಸರಳ ಅಭ್ಯಾಸವನ್ನು "ಒಣಗಿದ ಹೂವನ್ನು ತೆಗೆಯುವಿಕೆ" ಎನ್ನುತ್ತಾರೆ. ಹಣ್ಣಿನ ಉತ್ಪಾದನೆಗಿಂತ ಮಿಗಿಲಾಗಿ, ಸಸ್ಯವು ತನ್ನ ಶಕ್ತಿ ಮತ್ತು ಸಂಪನ್ಮೂಲಗಳನ್ನು ಹೊಸ ಕವಲುಗಳು ಹಾಗೂ ಹೂವುಗಳ ಕಡೆಗೆ ಕೇಂದ್ರೀಕರಿಸಲು ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ಅಭ್ಯಾಸವನ್ನು ಕೈಗೊಳ್ಳಲಾಗುತ್ತದೆ. ಒಂದು ವೇಳೆ ಕಳೆಗುಂದಿದ ಹೂವುಗಳು ಅಸಹ್ಯಕರವಾಗಿ ಕಾಣುತ್ತಿದ್ದರೆ ಸೌಂದರ್ಯಾರಾಧನೆಯ ಉದ್ದೇಶಗಳಿಗಾಗಿಯೂ ಒಣಗಿದ ಹೂವನ್ನು ತೆಗೆಯಬಹುದು. ಈ ಪ್ರಕ್ರಿಯೆಗೆ ಗುಲಾಬಿಗಳು ವಿಶೇಷವಾಗಿ ಸ್ಪಂದಿಸುತ್ತವೆ. ಒಣಗಿದ ಹೂವುಗಳನ್ನು ತೆಗೆಯುವಾಗ, ಕೇವಲ ಹೂವಿನ ತಳವನ್ನು ಮಾತ್ರವೇ ಅಲ್ಲದೇ, ಮೊದಲ 5-ಪರ್ಣಕಗಳ ಎಲೆಯ ಕೆಳಗಿನ ಕಾಂಡದವರೆಗೆ ತೆಗೆಯಬೇಕು. ಇದರಿಂದಾಗಿ ಮುಂದಿನ ಕವಲೊಡೆಯುವಿಕೆ ಹಾಗೂ ಹೂವಿನ ಉತ್ಪಾದನೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಒಣಗಿದ ಹೂವನ್ನು ತೆಗೆಯುವ ಅಭ್ಯಾಸದಿಂದಾಗಿ ಗುಲಾಬಿಗಳ ವಿವಿಧ ಪ್ರಭೇದಗಳ ಮೇಲೆ ಬಗೆಬಗೆಯ ಪರಿಣಾಮಗಳುಂಟಾಗುತ್ತವೆ. ಹಳೆಯ ಉದ್ಯಾನ ಗುಲಾಬಿಗಳಿರಲಿ ಅಥವಾ ಹೆಚ್ಚು ಆಧುನಿಕವಾದ ಮಿಶ್ರತಳಿ ಪ್ರಭೇದಗಳಿರಲಿ, ನಿರಂತರ ಹೂಬಿಡುವ ಪ್ರಭೇದಗಳಲ್ಲಿ ಒಣಗಿದ ಹೂವನ್ನು ತೆಗೆಯುವುದರಿಂದ ಸದರಿ ಗುಲಾಬಿ ಸಸ್ಯವು ಹೊಸ ಕವಲುಗಳು, ಎಲೆಗಳು ಮತ್ತು ಹೂವುಗಳನ್ನು ನಿರಂತರವಾಗಿ ರೂಪಿಸುತ್ತಲೇ ಹೋಗುತ್ತದೆ. "ಒಮ್ಮೆ ಮಾತ್ರವೇ ಹೂಬಿಡುವ" (ಅವು ಪ್ರತಿ ಋತುವಿನಲ್ಲೂ ಒಮ್ಮೆ ಮಾತ್ರವೇ ಹೂಬಿಡುತ್ತವೆ) ಪ್ರಭೇದಗಳಲ್ಲಿ ಮುಂದಿನ ಹೂಬಿಡುವ ಋತುವು ಬರುವವರೆಗೂ ಹೊಸ ಹೂವುಗಳು ಕಾಣಿಸಿಕೊಳ್ಳುವುದಿಲ್ಲವಾದರೂ, ಒಣಗಿದ ಹೂವನ್ನು ತೆಗೆಯುವ ಕ್ರಮದಿಂದಾಗಿ ಸಸ್ಯವು ಹೊಸ ಹಸಿರು ಬೆಳವಣಿಗೆಯನ್ನು ರೂಪಿಸುವ ಪರಿಣಾಮವನ್ನು ಕಾಣಬಹುದು. ಬಹುತೇಕ ಗುಲಾಬಿ ತೋಟಗಾರರು ಅಥವಾ ಮಾಲಿಗಳು ತಮ್ಮ ಗುಲಾಬಿ ಸಸ್ಯಗಳನ್ನು ಬಲಿಷ್ಠವಾಗಿ, ನವಚೈತನ್ಯದೊಂದಿಗೆ ಮತ್ತು ಉತ್ಪಾದನಾಶೀಲವಾಗಿ ಇರಿಸಿಕೊಳ್ಳಲು ಒಣಗಿದ ಹೂವನ್ನು ತೆಗೆಯುವ ಅಭ್ಯಾಸವನ್ನು ಬಳಸುತ್ತಾರೆ. ಇದು ಗುಲಾಬಿ ಸಸ್ಯಗಳ ಬೆಳವಣಿಗೆಯನ್ನು ಚುರುಕಾಗಿಸುತ್ತದೆ. ಆದರೆ, ಉತ್ತಮವಾದ ಗುಲಾಬಿ ಹಣ್ಣುಗಳನ್ನು ಉತ್ಪತ್ತಿಮಾಡುವ ರೋಸಾ ಗ್ಲೌಕಾ ಅಥವಾ ರೋಸಾ ಮೊಯೆಸೈಯಂತಹ ಜಾತಿಗುಲಾಬಿಗಳನ್ನು ಒಣಗಿದ ಹೂವು ತೆಗೆಯುವ ಪ್ರಕ್ರಿಯೆಗೆ ಒಳಪಡಿಸಬಾರದು.

ಇತಿಹಾಸ

[ಬದಲಾಯಿಸಿ]

ತನ್ನ ಸೌಂದರ್ಯದಿಂದಾಗಿ ಯಾವಾಗಲೂ ಉತ್ತಮ ಮೌಲ್ಯವನ್ನು ಗಳಿಸಿಕೊಂಡೇ ಬಂದಿರುವ ಗುಲಾಬಿಯು, ಸಂಕೇತಗಳ ಸುದೀರ್ಘ ಇತಿಹಾಸವನ್ನೇ ಹೊಂದಿದೆ.ಪ್ರಾಚೀನ ಕಾಲದ ಗ್ರೀಕರು ಮತ್ತು ರೋಮನ್ನರು ಗುಲಾಬಿಯನ್ನು ಅಫ್ರೋಡೈಟ್‌ ಮತ್ತು ವೀನಸ್‌ ಎಂದು ಉಲ್ಲೇಖಿಸಲ್ಪಡುವ ತಂತಮ್ಮ ಪ್ರೇಮದೇವತೆಯರೊಂದಿಗೆ ಗುರುತಿಸಿದ್ದಾರೆ. ರೋಮ್‌ನಲ್ಲಿ, ರಹಸ್ಯವಾದ ಅಥವಾ ಗೋಪ್ಯವಾದ ವಿಷಯಗಳ ಚರ್ಚೆಯು ನಡೆಯುತ್ತಿದ್ದ ಕೋಣೆಯ ಬಾಗಿಲ ಮೇಲೆ ಕಾಡುಗುಲಾಬಿಯೊಂದನ್ನು ಇರಿಸಲಾಗುತ್ತಿತ್ತು. ಸಬ್ ರೋಸಾ ಅಥವಾ "ಗುಲಾಬಿಯ ಕೆಳಗೆ" ಎಂಬ ಪದಗುಚ್ಛವು ರಹಸ್ಯವನ್ನು ಕಾಪಾಡುವುದು ಎಂಬ ಅರ್ಥವನ್ನು ನೀಡುತ್ತದೆ. ಇದು ಸದರಿ ಪ್ರಾಚೀನ ರೋಮನ್ನರ ಪರಿಪಾಠದಿಂದ ಮೈದಳೆದಿದೆ. ಹಿಂದಿನ ಕಾಲದ ಕ್ರಿಶ್ಚಿಯನ್ನರು ಗುಲಾಬಿಯ ಐದು ದಳಗಳನ್ನು ಕ್ರಿಸ್ತನಿಗಾದ ಐದು ಗಾಯಗಳೊಂದಿಗೆ ಸಮೀಕರಿಸಿದ್ದಾರೆ ಅಥವಾ ಗುರುತಿಸಿಕೊಂಡಿದ್ದಾರೆ. ಈ ವ್ಯಾಖ್ಯಾನವಿದ್ದಾಗ್ಯೂ, ಅವರ ನಾಯಕರುಗಳು ಇದನ್ನು ಪರಿಗ್ರಹಿಸಲು ಹಿಂದುಮುಂದು ನೋಡಿದರು. ಏಕೆಂದರೆ, ಇದು ರೋಮನ್ನರ ದೌರ್ಜನ್ಯಗಳು ಹಾಗೂ ಅನಾಗರಿಕ ಮತಾಚರಣೆಯೊಂದಿಗೆ ಸಂಬಂಧ ಹೊಂದಿದೆ ಎಂಬುದು ಅವರ ಅಭಿಪ್ರಾಯವಾಗಿತ್ತು. ಅಂತಿಮವಾಗಿ ಕೆಂಪು ಗುಲಾಬಿಯನ್ನು ಕ್ರಿಶ್ಚಿಯನ್ ಹುತಾತ್ಮರುಗಳ ರಕ್ತದ ಒಂದು ಸಂಕೇತವಾಗಿ ಸ್ವೀಕರಿಸಲಾಯಿತು. ಕಾಲಕ್ರಮೇಣ ಗುಲಾಬಿಗಳು ವರ್ಜಿನ್ ಮೇರಿಯೊಂದಿಗೂ (ಯೇಸು ಕ್ರಿಸ್ತನ ತಾಯಿಯಾದ ಮೇರಿ ಕನ್ಯೆ) ಗುರುತಿಸಲ್ಪಟ್ಟವು. ಚೈನಾದಿಂದ ಬಂದ ಸಾರ್ವಕಾಲಿಕವಾಗಿ ಅರಳುವ ಗುಲಾಬಿಗಳು 1800ರ ದಶಕದಲ್ಲಿ ಯುರೋಪ್‌ನಲ್ಲಿ ಪರಿಚಯವಾಗುವುದರೊಂದಿಗೆ, ಗುಲಾಬಿ ಸಂಸ್ಕೃತಿಯು ತನ್ನದೇ ಆದ ನೆಲೆಯನ್ನು ಕಂಡುಕೊಂಡಿತು. ಪ್ರಸ್ತುತ ಗುಲಾಬಿಗಳ ಸಾವಿರಾರು ಪ್ರಭೇದಗಳು ಲಭ್ಯವಿದ್ದು, ಹೂವಿನ ಆಕಾರ, ಗಾತ್ರ, ಪರಿಮಳ ಮತ್ತು ಮುಳ್ಳುಗಂತಿಗಳು ಇಲ್ಲದಿರುವಿಕೆಯ ಗುಣಲಕ್ಷಣಗಳಿಗಾಗಿ ಅವುಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಹೂಕುಂಡವೊಂದರಲ್ಲಿನ ಗುಲಾಬಿಗಳು, ರೆನೋಯ್‌ರ್‌ ರಚಿಸಿರುವ ಕೋಸು ಗುಲಾಬಿಯ ವರ್ಣಚಿತ್ರ

ಕಲಾವಿದರು ಗುಲಾಬಿಯನ್ನು ಆಗಿಂದಾಗ್ಗೆ ಅಭಿವ್ಯಕ್ತಗೊಳಿಸಿದ್ದಾರೆ. ಲಕ್ಸೆಂಬರ್ಗ್‌ನಲ್ಲಿ ಹುಟ್ಟಿದ ಬೆಲ್ಜಿಯಾದ ಕಲಾವಿದನಾದ ಪಿಯರೆ-ಜೋಸೆಫ್ ರೆಡೌಟೆಯು ಗುಲಾಬಿಗಳ ಒಂದಷ್ಟು ಅತಿವಿಸ್ತೃತ ವರ್ಣಚಿತ್ರಗಳನ್ನು ರಚಿಸಿದ್ದಾನೆ. ಹೆನ್ರಿ ಫ್ಯಾಂಟಿನ್-ಲೆಟೌರ್ ಕೂಡಾ ಸ್ಥಿರ ಜೀವಗಳನ್ನು ಯಥೇಚ್ಛವಾಗಿ ಚಿತ್ರಿಸಿರುವ ಓರ್ವ ವರ್ಣಚಿತ್ರಕಾರನಾಗಿದ್ದು, ಗುಲಾಬಿಗಳನ್ನು ಒಳಗೊಂಡಂತೆ ನಿರ್ದಿಷ್ಟವಾಗಿ ಹೂವುಗಳನ್ನು ಚಿತ್ರಿಸಿದ್ದಾನೆ. 'ಫ್ಯಾಂಟಿನ್-ಲೆಟೌರ್' ಗುಲಾಬಿಗೆ ಈ ಕಲಾವಿದನ ಹೆಸರನ್ನೇ ಇಡಲಾಗಿದೆ. ಕ್ಲೌಡೆ ಮೊನೆಟ್, ಪಾಲ್ ಸಿಝೇನ್ ಮತ್ತು ಪಿಯರೆ-ಅಗಸ್ಟೆ ರೆನೊಯರ್ ಇವರೇ ಮೊದಲಾದವರನ್ನು ಒಳಗೊಂಡಂತೆ ಇತರ ಚಿತ್ರಪ್ರಭಾವ ನಿರೂಪಣಾವಾದಿಗಳು ತಮ್ಮ ಇತರ ಕಲಾಕೃತಿಗಳ ಪಟ್ಟಿಯಲ್ಲಿ ಗುಲಾಬಿಗಳ ವರ್ಣಚಿತ್ರಗಳನ್ನೂ ಹೊಂದಿದ್ದಾರೆ.

ಜನಪ್ರಿಯ ಸಂಸ್ಕೃತಿ

[ಬದಲಾಯಿಸಿ]
ಕೆಂಪು ಗುಲಾಬಿಗಳು
ಕೆಟಲೋನಿಯಾದಲ್ಲಿ ಸಂತ ಜಾರ್ಜ್‌ರ ದಿನದಂದು ಗುಲಾಬಿ ಹೂಗಳನ್ನು ಮಾರುತ್ತಿರುವುದು

ಗುಲಾಬಿಗಳು ಅನಾದಿಕಾಲದಿಂದಲೂ ಪ್ರೇಮ ಮತ್ತು ಸೌಂದರ್ಯದ ಸಂಕೇತಗಳಾಗಿವೆ. ಐಸಿಸ್ ಮತ್ತು ಅಫ್ರೋಡೈಟ್‌ ದೇವತೆಗಳೂ ಸೇರಿದಂತೆ ದೇವತೆಗಳಿಗೆ ಗುಲಾಬಿಯು ಪವಿತ್ರವಾದ ಹೂವಾಗಿತ್ತು ಮತ್ತು ವರ್ಜಿನ್ ಮೇರಿಯ ಒಂದು ಸಂಕೇತಯಾಗಿಯೂ ಇದನ್ನು ಬಳಸಲಾಗುತ್ತದೆ. ನಾನಾ ಬಗೆಯ ಭಾಷೆಗಳಲ್ಲಿ (ಪ್ರಣಯದ ಭಾಷೆಗಳು, ಗ್ರೀಕ್‌ ಮತ್ತು ಪೋಲಿಷ್‌ನಂಥ ಭಾಷೆಗಳಲ್ಲಿ) 'ಗುಲಾಬಿ' ಎಂದರೆ ನಸುಗೆಂಪು ಅಥವಾ ಕೆಂಪು ಎಂದೇ ಅರ್ಥ. ಗುಲಾಬಿಯು ಇಂಗ್ಲೆಂಡ್‌ ಹಾಗೂ ಸಂಯುಕ್ತ ಸಂಸ್ಥಾನಗಳ[೧೪] ರಾಷ್ಟ್ರೀಯ ಪುಷ್ಪವಾಗಿರುವುದರ ಜೊತೆಗೆ ಇಂಗ್ಲೆಂಡ್‌ ರಗ್ಬಿ ಹಾಗೂ ರಗ್ಬಿ ಫುಟ್‌ಬಾಲ್‌ ಯೂನಿಯನ್‌ನ ಚಿಹ್ನೆಯೂ ಆಗಿದೆ. ಇದು ಇಂಗ್ಲೆಂಡ್ನಲ್ಲಿನ ಯಾರ್ಕ್‌ಷೈರ್ ಮತ್ತು ಲ್ಯಾಂಕಾಷೈರ್‌ ಪ್ರಾಂತ್ಯಗಳ ಪ್ರಾಂತೀಯ ಪುಷ್ಪವೂ (ಕ್ರಮವಾಗಿ ಬಿಳಿ ಗುಲಾಬಿ ಮತ್ತು ಕೆಂಪು ಗುಲಾಬಿ) ಆಗಿದೆ. ಅದೇ ರೀತಿಯಲ್ಲಿ ಕೆನಡಾದಲ್ಲಿನ ಆಲ್ಬರ್ಟಾ (ಕಾಡುಗುಲಾಬಿ) ಮತ್ತು ಪಾಕಿಸ್ತಾನದಲ್ಲಿನ ಇಸ್ಲಾಮಾಬಾದ್ ರಾಜಧಾನಿ ಪ್ರದೇಶಗಳಿಗೂ ಇದು ಪ್ರಾಂತೀಯ ಪುಷ್ಪವಾಗಿದೆ. USನ ನಾಲ್ಕು ಸಂಸ್ಥಾನಗಳಿಗೆ ಇದು ಸಂಸ್ಥಾನಿಕ ಪುಷ್ಪವಾಗಿದೆ. ಅವುಗಳ ವಿವರ ಹೀಗಿದೆ: ಐಯೋವಾ ಮತ್ತು ಉತ್ತರ ಡಕೋಟಾ (R. ಆರ್ಕನ್‌ಸಾನಾ), ಜಾರ್ಜಿಯಾ (R. ಲೇವಿಗೇಟಾ ), ಮತ್ತು ನ್ಯೂಯಾರ್ಕ್‌[೧೫] (ಸಾರ್ವತ್ರಿಕವಾಗಿ ರೋಸಾ ). ಒರೆಗಾಂವ್‌ನ ಪೋರ್ಟ್‌ಲೆಂಡ್‌ ತಾನು ಹೊಂದಿರುವ ಅಡ್ಡಹೆಸರು ಅಥವಾ ಉಪನಾಮಗಳಲ್ಲಿ "ಗುಲಾಬಿಗಳ ನಗರ" ಎಂಬುದನ್ನು ಪರಿಗಣಿಸಿದ್ದು, ವಾರ್ಷಿಕ ಗುಲಾಬಿ ಉತ್ಸವವನ್ನು ಅದು ಆಯೋಜಿಸುತ್ತದೆ. ಐದು ಅಥವಾ ಹತ್ತು ವಿಭಾಗಗಳನ್ನು (ಗುಲಾಬಿಯ ಐದು ದಳಗಳು ಹಾಗೂ ಪುಷ್ಪಪಾತ್ರೆಯ ಐದು ದಳಗಳನ್ನು ಇದು ಪ್ರತಿನಿಧಿಸುತ್ತದೆ) ಅಥವಾ ಅದರ ಗುಣಕಗಳಷ್ಟು ವಿಭಾಗಗಳನ್ನು ಒಳಗೊಂಡಿರುವ ದುಂಡಗಿನ ಕಿಟಕಿಗಳ (ಚಕ್ರದ ಕಡ್ಡಿಗಳಂಥ) ವಿನ್ಯಾಸಕ್ಕಾಗಿ ಗುಲಾಬಿಗಳನ್ನು ಆಗಾಗ ಆಧಾರವಾಗಿ ಪರಿಗಣಿಸಲಾಗುತ್ತದೆ. ಆದಾಗ್ಯೂ, ಬಹುತೇಕ ಗೋಥಿಕ್ ಶೈಲಿಯ ದುಂಡಗಿನ ಕಿಟಕಿಗಳು ಮತ್ತಷ್ಟು ವಿವರಗಳಿಂದ ಕೂಡಿದ್ದು, ಮೂಲತಃ ಚಕ್ರ ಮತ್ತು ಇತರ ಸಂಕೇತಗಳನ್ನು ಪ್ರಾಯಶಃ ಆಧರಿಸಿದ್ದವು. ಕೆಂಪು ಗುಲಾಬಿಯೊಂದು (ಕೈನಲ್ಲಿ ಹಿಡಿದುಕೊಂಡಿರುವ ಶೈಲಿಯಲ್ಲಿರುವುದು) ಸಮಾಜವಾದ ಅಥವಾ ಸಾಮಾಜಿಕ ಪ್ರಜಾಸತ್ತೆಯ ಸಂಕೇತವಾಗಿದೆ: ಬ್ರಿಟಿಷ್, ಐರಿಷ್, ಫ್ರೆಂಚ್, ಸ್ಪ್ಯಾನಿಷ್, ಪೋರ್ಚುಗೀಸ್, ನಾರ್ವೆ ದೇಶ, ಡ್ಯಾನಿಷ್‌, ಸ್ವೀಡಿಷ್, ಫಿನ್ನಿಷ್, ಬ್ರೆಝಿಲಿಯನ್, ಡಚ್‌ ಮತ್ತು ಇತರ ಐರೋಪ್ಯ ಕಾರ್ಮಿಕ, ಸಮಾಜವಾದಿ ಅಥವಾ ಸಾಮಾಜಿಕ ಪ್ರಜಾಸತ್ತೆಯ ಪಕ್ಷಗಳು ಗುಲಾಬಿಯನ್ನು ತಮ್ಮ ಚಿಹ್ನೆಯನ್ನಾಗಿ ಬಳಸುತ್ತವೆ. 1968ರ ಮೇ ತಿಂಗಳಲ್ಲಿ ಪ್ಯಾರಿಸ್‌ನಲ್ಲಿ ನಡೆದ ಬೀದಿಬದಿಯ ಪ್ರತಿಭಟನೆಯಲ್ಲಿ, ಪ್ರತಿಭಟನಕಾರರು ಬಿಲ್ಲೆಯಂತೆ (ಬ್ಯಾಡ್ಜ್‌ನಂತೆ) ಧರಿಸಲು ಕೆಂಪು ಗುಲಾಬಿಯನ್ನು ಬಳಸಿದಂದಿನಿಂದ ಇದು ಮೈದಳೆಯಿತು. IIನೇ ಜಾಗತಿಕ ಸಮರದ ಅವಧಿಯಲ್ಲಿ ಬಿಳಿ ಗುಲಾಬಿಯು ಜರ್ಮನಿಯಲ್ಲಿ ಅಹಿಂಸಾತ್ಮಕ ಪ್ರತಿಭಟನಾ ಗುಂಪಾಗಿತ್ತು. ಕೆಂಪುಗುಲಾಬಿಗಳ ಗುಚ್ಛವನ್ನು ಪ್ರೇಮವನ್ನು ವ್ಯಕ್ತಪಡಿಸಲು ಬಳಸಲಾಗುತ್ತದೆ. ಅನೇಕ ದೇಶಗಳಲ್ಲಿ ಪ್ರೇಮಿಗಳ ದಿನದ ಕೊಡುಗೆಯಾಗಿ ಇದನ್ನು ಬಳಸಲಾಗುತ್ತದೆ. ಕೆಟಲೋನಿಯಾದಲ್ಲಿ ಸಂತ ಜಾರ್ಜ್‌ರ ದಿನದಂದು ಜನಗಳ ನಡುವೆ, ಅದರಲ್ಲೂ ವಿಶೇಷವಾಗಿ ಪ್ರೇಮಿಗಳ ನಡುವೆ ಗಾಢಕೆಂಪಿನ ಗುಲಾಬಿಗಳು ಕೊಡುಗೆಗಳ ರೂಪದಲ್ಲಿ ವಿನಿಮಯವಾಗುತ್ತವೆ. ಯುರೋಪ್‌ನ ಕಪ್ಪು ಮೇರಿಕನ್ಯೆಯರಲ್ಲಿ (ಬ್ಲ್ಯಾಕ್ ಮಡೋನ್ನಾ) ಒಬ್ಬಳಾದ ಮಾಂಟ್‌ಸೆರ್ರಾಟ್‌ ಪವಿತ್ರಕನ್ಯೆಗೆ ಅರ್ಪಿಸಲಾಗುವ ವಿರೋಲೈ ಎಂಬ ಸ್ತುತಿಗೀತೆಯು, "ರೋಸಾ ದಿ' ಏಬ್ರಿಲ್, ಮೊರೆನಾ ಡಿ ಲಾ ಸೆರ್ರಾ..." ಎಂಬ ಪದಗಳಿಂದ ಪ್ರಾರಂಭವಾಗುತ್ತದೆ (ಏಪ್ರಿಲ್‌ ಗುಲಾಬಿಯೇ, ಪರ್ವತಶ್ರೇಣಿಯ ನಸುಗಪ್ಪು ಮಹಿಳೆಯೇ ...). ಆದ್ದರಿಂದ ಈ ಪವಿತ್ರಕನ್ಯೆಯು ಕೆಲವೊಮ್ಮೆ "ರೋಸಾ ದಿ' ಏಬ್ರಿಲ್" ಎಂದೂ ಕರೆಯಲ್ಪಡುತ್ತಾಳೆ. ಈ ರೀತಿಯಲ್ಲಿ ಕೆಂಪು ಗುಲಾಬಿಯು ಕೆಟಲೋನಿಯಾದ ಒಂದು ಅನಧಿಕೃತ ಚಿಹ್ನೆಯಾಗಿ ಅಥವಾ ಸಂಕೇತವಾಗಿ ವ್ಯಾಪಕವಾಗಿ ಸ್ವೀಕರಿಸಲ್ಪಟ್ಟಿದೆ.[೧೬]

ಉಲ್ಲೇಖಗಳು

[ಬದಲಾಯಿಸಿ]

ಸುಗಂಧದ್ರವ್ಯ

[ಬದಲಾಯಿಸಿ]

ಗುಲಾಬಿಯ ಸುಗಂಧದ್ರವ್ಯವನ್ನು ಗುಲಾಬಿಗಳ ಅತ್ತರ್‌ನಿಂದ ಅಥವಾ ಗುಲಾಬಿ ತೈಲದಿಂದ ತಯಾರಿಸಲಾಗುತ್ತದೆ. ಬಾಷ್ಪಶೀಲ ಸಾರತೈಲಗಳ ಮಿಶ್ರಣವಾಗಿರುವ ಇದನ್ನು ಗುಲಾಬಿಗಳ ಜಜ್ಜಿದ ದಳಗಳನ್ನು ಹಬೆಯ ಭಟ್ಟಿ ಇಳಿಸುವಿಕೆಯ ವಿಧಾನದ ಸಹಾಯದಿಂದ ಪಡೆಯಲಾಗುತ್ತದೆ. ಪರ್ಷಿಯಾದಲ್ಲಿ (ಸ್ವತಃ ಗುಲಾಬಿ ಎಂಬ ಪದವೇ ಪರ್ಷಿಯಾದ ಮೂಲದಿಂದ ಬಂದಿದೆ) ಹುಟ್ಟಿಕೊಂಡ ಈ ಕಲಾಕೌಶಲವು ನಂತರ ಅರೇಬಿಯಾ ಮತ್ತು ಭಾರತಗಳ ಮೂಲಕ ಹಬ್ಬಿತು. ಆದರೆ ಇಂದಿನ ದಿನಗಳಲ್ಲಿ ಈ ಸುಗಂಧದ್ರವ್ಯದ ಉತ್ಪಾದನೆಯ ಸುಮಾರು 70% ರಿಂದ 80%ರಷ್ಟು ಪಾಲು ಬಲ್ಗೇರಿಯಾದಲ್ಲಿನ ಕಝನ್‌ಲಕ್ ಸಮೀಪವಿರುವ ರೋಸ್‌ ವ್ಯಾಲಿಯಲ್ಲಿಯೇ ಆಗುತ್ತದೆ. ಕೆಲವೊಂದು ಭಾಗವು ಇರಾನ್‌ನಲ್ಲಿನ ಕಮ್‌ಸಾರ್‌ನಲ್ಲಿ ಹಾಗೂ ಜರ್ಮನಿಯಲ್ಲಿ ಉತ್ಪಾದಿಸಲ್ಪಡುತ್ತದೆ.[ಸಾಕ್ಷ್ಯಾಧಾರ ಬೇಕಾಗಿದೆ] ಕಮ್‌ಸಾರ್‌ನಿಂದ ಬರುವ ಇರಾನಿನ ಪನ್ನೀರಿನಿಂದ ಮೆಕ್ಕಾದಲ್ಲಿನ ಕಾಬಾವನ್ನು ಪ್ರತಿವರ್ಷವೂ ತೊಳೆಯಲಾಗುತ್ತದೆ. ಬಲ್ಗೇರಿಯಾ, ಇರಾನ್ ಮತ್ತು ಜರ್ಮನಿಗಳಲ್ಲಿ ದಮಾಸ್ಕ್‌ ಗುಲಾಬಿಗಳನ್ನು (ರೋಸಾ ದಮಾಸೀನಾ 'ಟ್ರೈಗಿಂಟಿಪೆಟಲಾ') ಬಳಸಲಾಗುತ್ತದೆ. ಫ್ರೆಂಚ್‌ ಗುಲಾಬಿ ತೈಲದ ಉದ್ಯಮದಲ್ಲಿ ರೋಸಾ ಸೆಂಟಿಫೋಲಿಯಾ ಬಳಕೆಯಾಗುತ್ತದೆ. ನಸು ಹಳದಿ ಅಥವಾ ಹಳದಿ-ಬೂದು ಬಣ್ಣದಲ್ಲಿರುವ ತೈಲವನ್ನು ಕೆಲವೊಮ್ಮೆ 'ಗುಲಾಬಿಯ ಪರಿಶುದ್ಧ' ತೈಲ ಎಂದು ಕರೆಯಲಾಗುತ್ತದೆ. ಗುಲಾಬಿ ತೈಲವನ್ನು ಅದರ ದುರ್ಬಲರೂಪಗಳಿಂದ ಅಥವಾ ಸಾರಹೀನ ರೂಪಗಳಿಂದ ಪ್ರತ್ಯೇಕಿಸಲು ಹೀಗೆ ಕರೆಯಲಾಗುತ್ತದೆ. ಹೂವುಗಳ ತೂಕದ ಸುಮಾರು ಮೂರು ಸಾವಿರದನೇ ಒಂದು ಭಾಗ ಅಥವಾ ಆರು ಸಾವಿರದನೇ ಒಂದು ಭಾಗದಷ್ಟು ತೂಕದ ತೈಲವನ್ನು ಸಾರತೆಗೆಯಲಾಗುತ್ತದೆ. ಉದಾಹರಣೆಗೆ, ಒಂದು ಗ್ರಾಂನಷ್ಟು ಗುಲಾಬಿ ತೈಲವನ್ನು ಉತ್ಪಾದಿಸಲು ಸುಮಾರು ಎರಡು ಸಾವಿರ ಹೂವುಗಳು ಬೇಕಾಗುತ್ತವೆ. ಗುಲಾಬಿಗಳ ಅತ್ತರಿನ ಪ್ರಮುಖ ಘಟಕಾಂಶಗಳೆಂದರೆ, ಸುವಾಸಿತ ಮದ್ಯಸಾರಗಳಾದ ಜಿರಾನಿಯೋಲ್ ಹಾಗೂ l-ಸಿಟ್ರೋನೆಲ್ಲೋಲ್, ಮತ್ತು ವಾಸನೆಯಿಲ್ಲದ ಒಂದು ಕಲ್ಲೆಣ್ಣೆ ಮೇಣವಾಗಿರುವ ಗುಲಾಬಿ ಕರ್ಪೂರ. β-ದಮಾಸೀನೋನ್‌ ಕೂಡಾ ಪರಿಮಳಕ್ಕೆ ಗಣನೀಯ ಪ್ರಮಾಣದ ಕೊಡುಗೆಯನ್ನು ನೀಡುತ್ತದೆ.

ಜಿರಾನಿಯೋಲ್ (C10H18O)

ಗಮನಾರ್ಹ ಗುಲಾಬಿ ಬೆಳೆಗಾರರು

[ಬದಲಾಯಿಸಿ]

ಅಮೆರಿಕಾದ ಗುಲಾಬಿ ರಾಜಧಾನಿ

[ಬದಲಾಯಿಸಿ]

ಟೆಕ್ಸಾಸ್‌ನಲ್ಲಿನ ಟೈಲರ್‌ ಪ್ರದೇಶವು ಗುಲಾಬಿ-ಬೆಳೆಯುವ ಉದ್ಯಮದಲ್ಲಿ ಬೃಹತ್ತಾದ ಪಾತ್ರವನ್ನು ವಹಿಸುವುದರಿಂದ ಅದಕ್ಕೆ "ಅಮೆರಿಕಾದ ಗುಲಾಬಿ ರಾಜಧಾನಿ" ಎಂಬ ಅಡ್ಡಹೆಸರು ಅಥವಾ ಉಪನಾಮವನ್ನು ಇಡಲಾಗಿದೆ. ರಾಷ್ಟ್ರದ ಅತಿದೊಡ್ಡ ಪುರಸಭಾ ಗುಲಾಬಿ ಉದ್ಯಾನವನ್ನು ಒಳಗೊಂಡಿರುವುದಕ್ಕೆ ಹೆಮ್ಮೆಪಡುವ ಈ ಪ್ರದೇಶವು, ಪ್ರತಿವರ್ಷದ ಅಕ್ಟೋಬರ್ ತಿಂಗಳಲ್ಲಿ ಆಯೋಜಿಸುವ ಟೆಕ್ಸಾಸ್ ಗುಲಾಬಿ ಮೇಳದಲ್ಲಿ ಸಾವಿರಾರು ವೀಕ್ಷಕರು ಪಾಲ್ಗೊಳ್ಳುತ್ತಾರೆ.

ವ್ಯಕ್ತಿಗಳು

[ಬದಲಾಯಿಸಿ]

ಈ ವಲಯಕ್ಕೆ ನಿರ್ದಿಷ್ಟವಾದ ಕೊಡುಗೆಗಳನ್ನು ನೀಡಿರುವುದಕ್ಕೆ ಸಂಬಂಧಿಸಿದಂತೆ ಕೆಲವೊಂದು ಗುಲಾಬಿ ಬೆಳೆಗಾರರು ಖ್ಯಾತರಾಗಿದ್ದಾರೆ. ಅವರುಗಳೆಂದರೆ:

ಚಿತ್ರಸಂಪುಟ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. http://www.britannica.com/EBchecked/topic/509710/rose
  2. "ಆರ್ಕೈವ್ ನಕಲು". Archived from the original on 2008-08-21. Retrieved 2009-10-29.
  3. "ಆರ್ಕೈವ್ ನಕಲು". Archived from the original on 2008-09-18. Retrieved 2009-10-29.
  4. ಐವಾಟ H, ಕೇಟೋ T, ಓನೋ S, "ಟ್ರೈಪೇರೆಂಟಲ್ ಆರಿಜಿನ್ ಆಫ್ ದಮಾಸ್ಕ್ ರೋಸಸ್," ಜೀನ್ 259: 53–59 (2000)
  5. "ಆರ್ಕೈವ್ ನಕಲು". Archived from the original on 2008-07-05. Retrieved 2009-10-29.
  6. "ರೋಸಾ ಚೈನೆನ್ಸಿಸ್". Archived from the original on 2014-04-07. Retrieved 2009-10-29.
  7. ೭.೦ ೭.೧ ೭.೨ ೭.೩ ಚೈನಾ ಗುಲಾಬಿಗಳು. ಗುಲಾಬಿ ಕೊಯ್ಯುವಿಕೆ
  8. "ಆರ್ಕೈವ್ ನಕಲು". Archived from the original on 2009-08-20. Retrieved 2009-10-29.
  9. "ಆರ್ಕೈವ್ ನಕಲು". Archived from the original on 2009-12-02. Retrieved 2009-10-29.
  10. "ಆರ್ಕೈವ್ ನಕಲು". Archived from the original on 2010-01-23. Retrieved 2009-10-29.
  11. Filiberti, Daphne. "Hybrid Musks".
  12. Bardon, Paul. "Hybrid Musks". Archived from the original on 2009-09-25. Retrieved 2009-10-29.
  13. http://www.gardenmob.com/blog1/2006/07/13/the-great-roses-queen-elizabeth/ The Great Roses: Queen Elizabeth
  14. "National Flower of the United States". Retrieved 2008-02-04.
  15. "New York State Flower". Retrieved 2007-10-01.
  16. ಎಸ್ಕೊಲೋನಿಯಾ ಡಿ ಮಾಂಟ್‌ಸೆರಾಟ್‌ - ಎಲ್ ವಿರೊಲಾಯ್‌
  17. ಮ್ಯಾಗಿ ಓಸ್ಟರ್, ದಿ ರೋಸ್ ಬುಕ್ , ರೊಡೇಲ್ ಪ್ರೆಸ್, 1994, p. 22

ಇದನ್ನೂ ನೋಡಿರಿ

[ಬದಲಾಯಿಸಿ]

ಹೊರಗಿನ ಕೊಂಡಿಗಳು

[ಬದಲಾಯಿಸಿ]

Data related to Rosa at Wikispecies

"https://kn.wikipedia.org/w/index.php?title=ಗುಲಾಬಿ&oldid=1228363" ಇಂದ ಪಡೆಯಲ್ಪಟ್ಟಿದೆ