ಕೀಟ
ವಿಕಿಪೀಡಿಯ ಇಂದ
ಕೀಟಗಳು ಕೈಟಿನ್‍ಯುಕ್ತ ಬಾಹ್ಯಕವಚ, ಮೂರು ಭಾಗಗಳಿರುವ ದೇಹ (ತಲೆ, ಎದೆಗಾಪು, ಮತ್ತು ಕಿಬ್ಬೂಟ್ಟೆ), ಮೂರು ಜೊತೆ ಅವಿಭಕ್ತ ಕಾಲುಗಳು, ಸಂಯುಕ್ತ ನೇತ್ರಗಳು, ಮತ್ತು ಎರಡು ಸ್ಪರ್ಶತಂತುಗಳನ್ನು ಹೊಂದಿರುವ, ಸಂಧಿಪದಿ ವಿಭಾಗದಲ್ಲಿನ ಜೀವಿಗಳ ಒಂದು ವರ್ಗ. ಅವುಗಳು, ಮಿಲಿಯಕ್ಕಿಂತ ಹೆಚ್ಚು ವಿವರಿಸಲಾದ ಜಾತಿಗಳನ್ನು ಒಳಗೊಂಡಿರುವ ಮತ್ತು ಎಲ್ಲ ಪರಿಚಿತ ಜೀವಿಗಳ ಪೈಕಿ ಅರ್ಧಕ್ಕಿಂತ ಹೆಚ್ಚನ್ನು ಪ್ರತಿನಿಧಿಸುವ ಅತ್ಯಂತ ವೈವಿಧ್ಯಮಯ ಪ್ರಾಣಿ ಗುಂಪುಗಳ ಪೈಕಿ ಒಂದೆನಿಸಿವೆ. ಅಸ್ತಿತ್ವದಲ್ಲಿರುವ ಜಾತಿಗಳ ಸಂಖ್ಯೆ ಆರು ಮತ್ತು ಹತ್ತು ಮಿಲಿಯದ ನಡುವಿದೆ ಎಂದು ಅಂದಾಜಿಸಲಾಗಿದೆ ಮತ್ತು ಸಂಭವನೀಯವಾಗಿ ಭೂಮಿಯ ಮೇಲಿನ ವಿಬಿನ್ನ ಮೆಟಜ಼ೋವಾ ಜೀವರೂಪಗಳ ಶೇಕಡ ೯೦ಕ್ಕಿಂತ ಹೆಚ್ಚಿನಷ್ಟನ್ನು ಪ್ರತಿನಿಧಿಸುತ್ತವೆ.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |