ಗೋಲ ಗುಮ್ಮಟ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಗೋಲ ಗುಮ್ಮಟ

ಇದು ಮಹಮದ್ ಆದಿಲ್ ಶಾ (ಆಳ್ವಿಕೆ: ೧೬೨೭-೧೬೫೭)ನ ಗೋರಿಯಾಗಿ ಕಟ್ಟಲಾದ ಸ್ಮಾರಕ. ಇದನ್ನು ೧೬೫೯ರಲ್ಲಿ ಪ್ರಸಿದ್ದ ವಾಸ್ತುಶಿಲ್ಪಿಗಳಾದ ಯಾಕುತ್ ಮತ್ತು ದಬೂಲ್ರವರು ನಿರ್ಮಿಸಿದ್ದಾರೆ. ಇದರ ಉದ್ದ ಮತ್ತು ಅಗಲ ೫೦ ಮೀ , ಹೊರಗಡೆ ಎತ್ತರ ೧೯೮ ಅಡಿ ಮತ್ತು ಒಳಗಡೆ ಎತ್ತರ ೧೭೫ ಅಡಿ ಇದ್ದು ಮೇಲಿನ ಗೋಲಾಕಾರದ ಗುಂಬಜ್ ೩೯ ಮೀ (೧೨೪ ಅಡಿ) ವ್ಯಾಸ ಹೊಂದಿದೆ.ಅದರಂತೆ ೮ ಅಂತಸ್ತುಗಳಿವೆ. ಇದು ವಿಶ್ವದ ಎರಡನೆ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್ (ಇಟಲಿಯ ರೋಮ್ ನಗರದ ಬೆಸಿಲಿಕಾ ಚರ್ಚ್ - ವಿಶ್ವದ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್). ಇದರ ವಿಶೇಷ ಆಕರ್ಷಣೆಯೆಂದರೆ ಇದರೊಳಗಿನ ಪ್ರಧಾನ ಕೊಠಡಿಯಲ್ಲಿ ಪ್ರತಿ ಶಬ್ದವೂ ಏಳು ಬಾರಿ ಪ್ರತಿಧ್ವನಿತವಾಗುತ್ತದೆ!ಹಾಗೆಯೆ ಇಲ್ಲಿರುವ "ಪಿಸುಗುಟ್ಟುವ ಶಾಲೆ"ಯಲ್ಲಿ ಅತಿ ಸಣ್ಣ ಶಬ್ದವೂ ೩೭ ಮಿ ದೂರದಲ್ಲಿ ಸ್ಪಷ್ಟವಾಗಿ ಕೇಳಿಬರುತ್ತದೆ. ಇದರ ಹತ್ತಿರ ಬಿಜಾಪುರ ಆದಿಲ್ ಶಾಹಿಗಳಿಗೆ ಸಂಭದಿಸಿದ ವಸ್ತು ಸಂಗ್ರಾಹಾಲಯವು ಇದೆ.


ಗೋಲ ಗುಮ್ಮಟ ಬಿಜಾಪುರದಲ್ಲಿ ಸ್ಥಿತವಾಗಿರುವ ಮೊಹಮ್ಮದ್ ಆದಿಲ್ ಶಾ (೧೬೨೭ - ೧೬೫೭) ಅವರ ಸಮಾಧಿ. ಬಿಜಾಪುರವಲ್ಲದೆ ಬೀದರ, ಗೊಲ್ಕೊಂಡ, ಗುಲ್ಬರ್ಗಾಗಳನ್ನೊಳಗೊಳ್ಳುವ ‘ಬಹುಮನಿ ದಾಯಾದಿಗಳಿಗೆ ಆವಾಜಿನ ಬಗ್ಗೆ ಒಂದು ಕಿವಿಯಷ್ಟು ಹೆಚ್ಚು ಮರ್ಜಿಯಿದ್ದಿರಬೇಕು. ಹೈದರಾಬಾದಿನ ಗೋಲ್ಕೊಂಡ ಕೋಟೆಯ ದ್ವಾರದಲ್ಲಿ ಚಪ್ಪಾಳೆಯಿಟ್ಟರೆ ಸಪ್ಪಳ ಮತ್ತೆ ಮತ್ತೆ ಆಚೀಚಿನ ಗೋಡೆಗಳನ್ನು ತಟ್ಟಿಕೊಂಡು ಗುಡ್ಡದ ಮೇಲಿನವರೆಗೆ ಸಾಗುವುದು ಕೇಳಿಸುತ್ತದೆ, ನೋಡಿ! ಕೋಟೆಯ ಹೆಬ್ಬಾಗಿಲಿನ ಛಾವಣಿಯಲ್ಲಿ ನಿಲ್ಲಿಸಿಕೊಂಡ ಗೈಡು ನಿಮಗೆ ಈ ಕುರಿತು ರೋಚಕವಾಗಿ ಕತೆ ಹೇಳುತ್ತಾನಲ್ಲ. ಕೂಡಲೆ ನಿಮ್ಮ ಮನಸ್ಸು ಊಹೆಗೆ ತೊಡಗುತ್ತದೆ. ಮೇಲೆ ‘ದಿವಾನಿಖಾಸನಲ್ಲಿರುವ ಸುಲ್ತಾನನಿಗೆ ದರವಾಜಗೆ ಬಂದವರ ಬಗ್ಗೆ ಬರೇ ಕೇಳಿಕೆಯಿಂದಲೇ ಸುಳಿವು ಹತ್ತುತ್ತದೆ. ಗೋಡೆಯೇ ಗೋಡೆಯಾದ ಖಿಲೆಗಳನ್ನು, ಗೋಡೆ ತಿರುವುವಲ್ಲೆಲ್ಲ ಬುರುಜುಗಳನ್ನು ಕಟ್ಟಿದ ಆ ಮಂದಿಗೆ ಜಾಗರೂಕತೆ ಅಂತ ಬೇರೆ ಕಲಿಸಲಿಕ್ಕುಂಟೆ?! ಇಲ್ಲಿ ಗೋಡೆ-ದೀವಾರಿಗೂ, ಬಂಡೆ-ಚಟ್ಟಾನಿಗೂ ಸದಾ ಹೋಶಿಯಾರಿದ್ದು ಎಚ್ಚರಿಸುವುದೇ ಕೆಲಸ. ಇದಕ್ಕೆ ಆಗಿಬರುವುದೇ ಸದ್ದು ಮತ್ತದರ ಮರುಕಳಿಕೆ.


ನಾವು ಈ ತನಕ ಮೂರ್ತಯಿಸಿರುವ ಜಗತ್ತಿಗೆ ಶಬ್ದಸಂವೇದಿ ಕಟ್ಟುಗೆಲಸಗಳು ಹೊಸತೇನಲ್ಲ. ಪುರಾತನ ಗ್ರೀಸಿನಲ್ಲಿಯೇ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯೋಗಗಳೂ, ಕಟ್ಟಡಗಳೂ ಜರುಗಿರುವುದರ ಪುರಾವೆಗಳಿವೆ. ಇನ್ನು ಈ ಕಾಲದ ಫಿಸಿಕ್ಸೋ- ‘ಅಕೌಸ್ಟಿಕ್ಸ ಎನ್ನುವ ಹೆಸರಿನಲ್ಲಿ ಈ ಅರಿವಿಗೊಂದು ಸ್ಪೆಷಲಿಟಿಯನ್ನೇ ರಚಿಸಿಬಿಟ್ಟಿದೆ. ಸದ್ದನ್ನು ‘ಡೆಸಿಬಲಗಳಲ್ಲಿ ಅಳೆದು- ಕೇಳಿಕೆಯ ಮಟ್ಟವನ್ನು ಹೆಚ್ಚಿಸುವುದು, ತಗ್ಗಿಸುವುದು, ಬರೇ ನಿಶಬ್ದವಾಗಬೇಕೆಂದರೆ ‘ನಿಜವಾಗಿ ಸದ್ದಡಗಿಸುವುದು, ಧ್ವನಿಯನ್ನು ಮುದ್ರಿಸಿಕೊಂಡು ಬೇಕೆಂದಾಗ ಕೇಳಿಸುವುದು. ಹೀಗೆ ಹತ್ತಾರು ಸಾಧ್ಯತೆಗಳು ನಮ್ಮೆದುರಿಗಿವೆ. ಇವತ್ತಿನ ಸುಸಜ್ಜಿತ ನಾಟಕರಂಗಗಳು ತಮ್ಮ ಮೇಲ್ಮೈಯಲ್ಲಿ ಶಬ್ದವನ್ನು ಸೂಕ್ಷ್ಮವಾಗಿ ಗ್ರಹಿಸುವ ಇಲ್ಲಾ ಪ್ರತಿಫಲಿಸುವ ಪದರಗಳನ್ನು ಹೊದ್ದಿರುವುದರಿಂದ ಕುಳಿತ ಶ್ರೋರ್ತೃಗಳಿಗೆ ಆಗುವ ಅನುಭವವೇ ಬೇರೆ. ಮೈಕು, ಸ್ಪೀಕರುಗಳಿಂದ ಸದ್ದು ಹೆಚ್ಚಿಸಿದ ಕೇಳಿಕೆ ಎಷ್ಟಿದ್ದರೂ ಕಳಪೆಯೇ. ಹಾಗೆ ಕೇಳಿಸಿತೆನ್ನುವುದು ಸಮಾಧಾನಕ್ಕೆ ಮಾತ್ರ.


ಕ್ರಿಸ್ತನಿಗೂ ನಾನೂರು ವರ್ಷಗಳಷ್ಟು ಮೊದಲಿನ ಗ್ರೀಸಿನಲ್ಲಿ ಸುಮಾರು ಹದಿನೈದು ಸಾವಿರ ಮಂದಿಯನ್ನು ಕಲೆಹಾಕಿ, ಎಲ್ಲರಿಗೂ ನಿಚ್ಚಳವಾಗಿ ಹಾಡು ಕೇಳಿಸುವ ರಂಗಸಾಲೆಗಳ ‘ಕಟ್ಟಡ ಪ್ರತೀತಿಯಿದ್ದಿತು. ಮತ್ತೊಮ್ಮೆ ಓದಿ. ನೂರಿನ್ನೂರಲ್ಲ, ಬರೋಬರಿ- ಹದಿನೈದು ಸಾವಿರ ಮಂದಿ! ಪಂದ್ರಹ್ ಹಜಾರ್ ಲೋಗ್!! ಹುಡುಗಾಟವೇನಲ್ಲ. ಹಾಗಂತ ಇದು ಅಸಂಭವವೇನಲ್ಲ. ಯೋಚಿಸಿ. ನಮ್ಮೆದುರಿಗಿರುವ ಕಹಳೆಯಂತಹ ಶಬ್ದವರ್ಧಕಗಳು ಈಚೀಚಿನ ರೂಢಿ. ನಾನಿಲ್ಲಿ ಹೇಳುತ್ತಿರುವುದು ಇಪ್ಪತ್ತೈದುನೂರು ವರ್ಷಗಳ ಹಿಂದಿನ ಖಬರು!! ರಂಗದ ಮೇಲಿನ ಆಡುಮಾತಿನ ಕೇಳಿಕೆಯ ಜೋರನ್ನು ಇನಿತೆತ್ತರಿಸದೆಯೇ- ಬರೇ ಕೇಳುಗರ ಸದ್ದನ್ನಷ್ಟೇ ತಗ್ಗಿಸಿ, ಇಡೀ ಸಭಿಕರನ್ನು ಹೆಚ್ಚು ಹೆಚ್ಚು ಆಲಿಕೆಗೆ ಅನುವುಗೊಳಿಸುವುದು ಈ ಗ್ರೀಕ್ ಆಂಫಿಥಿಏಟರುಗಳ ವಿನ್ಯಾಸದಲ್ಲಿನ ದಿಟದ ಮರ್ಮ ಅಂತ ಇವತ್ತು ಅನ್ನಲಾಗುತ್ತದೆ. ಐವತ್ತರಿಂದ ಅರವತ್ತು ಸಾಲುಮೆಟ್ಟಿಲುಗಳಲ್ಲಿ ನೋಡುಗರನ್ನು ನಡುರಂಗದ ಸುತ್ತ ಕುಳ್ಳಿರಿಸಿ, ಅಂತಿಮಪಂಕ್ತಿಯವನಿಗೂ ರಂಗ ಕಾಣುವ ಹಾಗೆ, ಕೇಳಿಸುವ ಹಾಗೆ ವಿನ್ಯಾಸ ಮಾಡುವುದೆಂದರೆ ತಮಾಷೆಯೆ? ಒಂದೊಂದೂ ಸಾಲಿನಲ್ಲಿರುವ ಕಡಿಮೆಯೆಂದರೂ ಇನ್ನೂರು ಮಂದಿಗೆ ಪರ‍್ಫಾರ್ಮೆನ್ಸು ಕಾಣಲೂ ಬೇಕು, ಕೇಳಲೂ ಬೇಕು!! ಪ್ರೇಕ್ಷಕರಲ್ಲಿ ಪರಸ್ಪರ ಪಿಸುಗುಟ್ಟಿ ಹುಟ್ಟುವ ಸದ್ದನ್ನು ಆದಷ್ಟು ಮಟ್ಟಿಗೆ ಅಲ್ಲೇ ಉಳಿಸಿ, ಆಚೀಚೆ ಹಬ್ಬದಂತೆ ಮಟ್ಟ ಹಾಕುವುದು ಯಾವುದೇ ರಂಗವಿನ್ಯಾಸದಲ್ಲಿ ಪ್ರಧಾನ ಅಂಶ. ಅವತ್ತಿನ ಗ್ರೀಕ್ ರಂಗಸಾಲೆಗಳ ಮೆಟ್ಟಿಲುಗಳನ್ನು ಸುಣ್ಣದ ಕಲ್ಲು ಹೊದೆಸಿ ಮಾಡುತ್ತಿದ್ದರಂತೆ. ಲೈಮುಗಲ್ಲಿಗೆ ಇನ್ನಿಲ್ಲದ ಶಬ್ದಗ್ರಾಹೀಗುಣವಿದೆ. ಅಂದರೆ ರಂಗಜನ್ಯ ಉನ್ನತಸ್ಪಂದನಗಳನ್ನು ಎಲ್ಲೆಲ್ಲೂ ಹೊಮ್ಮಿ, ಕೇಳುಗರ ಪಿಸುಗೊಣಗುಗಳ ನಿಮ್ನಸ್ಪಂದನಗಳನ್ನು ಹೀರಿಕೊಳ್ಳುವ ಚಾರಿತ್ರ್ಯ! ಮಾಫಿರಲಿ. ಇದನ್ನಿನ್ನು ಹೆಚ್ಚು ಸಲೀಸಾಗಿ ಹೇಳಲಾರೆ.


ಗೋಲ್ ಗುಂಬಜ್ ಬಿಜಾಪುರದ ಅತ್ಯಂತ ಆಕರ್ಷಕವಾದ ಸ್ಮಾರಕ. ಇದನ್ನು ಮುಹಮ್ಮದ್ ಆದಿಲ್ ಷಾ,(1627-56) ತನ್ನ ಸಮಾಧಿ ಹಾಗೂ ಸ್ಮಾರಕವಾಗಿ ನಿರ್ಮಿಸಿದನು. ಅದರ ಕಟ್ಟುವಿಕೆಯ ಹೊಣೆ ಹೊತ್ತವನು, ದಾಬುಲ್ ನ ಪ್ರಸಿದ್ಧ ವಾಸ್ತುಶಿಲ್ಪಯಾದ ಯಾಕುಬ್. ಗೋಲ್ ಗುಂಬಜ್ ನ ತಳಹದಿಯು 205 ಅಡಿಗಳ ಚಚ್ಚೌಕ. ಅದರ ಸುತ್ತಲೂ ಇರುವ ಗೋಡೆಗಳು 198 ಅಡಿ ಎತ್ತರವಾಗಿವೆ. ಈ ಗೋಡೆಗಳ ಮೇಲೆ ಗುಂಬಜವು ಕಣ್ಣಿಗೆ ಕಾಣುವ ಯಾವುದೇ ಆಸರೆಯೂ ಇಲ್ಲದೆ ನಿಂತಿದೆ. ಗೋಡೆಗಳಿಂದ ಸುತ್ತುವರಿಯಲ್ಪಟ್ಟ ಮತ್ತು ಗುಂಬಜದ ಕೆಳಗಿರುವ ವಿಶಾಲವಾದ ಹಾಲಿನ(ಹಾಲ್) ವಿಸ್ತೀರ್ಣವು 1833767 ಚದುರಡಿಗಳು. ಗೋಲ್ ಗುಂಬಜ್, ಜಗತ್ತಿನಲ್ಲಿರುವ ಅತ್ಯಂತ ದೊಡ್ಡ ಸಿಂಗಲ್ ಛೇಂಬರ್ ಸ್ಟ್ರಕ್ಚರ್ ಗಳಲ್ಲಿ ಒಂದು. ಇಲ್ಲಿರುವ ಗೋಡೆಗಳಲ್ಲಿ ಪ್ರತಿಯೊಂದರಲ್ಲಿಯೂ ಮೂರು ಕಮಾನುಗಳನ್ನು ರಚಿಸಲಾಗಿದೆ. ಗೋಲ್ ಗುಂಬಜ್ ನ ಮಧ್ಯದಲ್ಲಿರುವ ಗೋಳಾಕೃತಿಯ ಶಿಖರವು ಯಾವುದೇ ಕಂಬ ಅಥವಾ ರಚನೆಯನ್ನು ಆಧರಿಸಿ ನಿಂತಿಲ್ಲ. ರೋಮ್ ನಗರದಲ್ಲಿರುವ ಸೈಂಟ್ ಪೀಟರ್ ಬ್ಯಾಸಿಲಿಕಾದ ಡೋಮನ್ನು ಹೊರತುಪಡಿಸಿದರೆ, ಇದು ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದು. ಈ ಡೋಮ್ ನಿಂತಿರುವುದು ಪೆಂಡಾಂಟಿವ್ ಎಂಬ ತತ್ವದ ಮೇಲೆ. ಪರಸ್ಪರ ಕ್ರಾಸ್ ಆಗುವ ಕಮಾನುಗಳ ವ್ಯವಸ್ಥೆಯೇ ಈ ಡೋಮಿಗೆ ಆಧಾರವಾಗಿರುತ್ತದೆ. ಭಾರತದಲ್ಲಿ ಬೇರೆಲ್ಲಿಯೂ ಈ ಬಗೆಯ ರಚನೆಯಿಲ್ಲ.


ಕಾರ್ಡೋಬಾದಲ್ಲಿರುವ ಬೃಹತ್ ಮಸೀದಿಯಲ್ಲಿ ಮಾತ್ರ ಇಂತಹ ರಚನೆಯನ್ನು ಬಳಸಲಾಗಿದೆ. ಎತ್ತರದ ಬಿಂದುವಿನಲ್ಲಿ ಕೊನೆಯಾಗುವ ಎಂಟು ಕಮಾನುಗಳು, ನಿಯತವಾದ ಜಾಗಗಳಲ್ಲಿ ಒಂದನ್ನೊಂದು ಅರ್ಧಿಸುತ್ತವೆ. ಈ ಗುಂಬಜ್ ನಲ್ಲಿರುವ ಪ್ರತಿಧ್ವನಿಗುಣವು ಅದರ ವಿಶೇಷ ಲಕ್ಷಣಗಳಲ್ಲಿ ಒಂದು. ಇಲ್ಲಿ ಆಡಿದ ಮಾತು ಅಥವಾ ಮಾಡಿದ ಶಬ್ದವು ಹನ್ನೊಂದು ಬಾರಿ ಪ್ರತಿಧ್ವನಿಸುತ್ತದೆ. ಅದನ್ನು ಮೂವತ್ತೇಳು ಕಿಲೋಮೀಟರುಗಳ ದೂರದಿಂದ ಕೇಳಬಹುದು. ಹಾಲ್ ನಿಂದ 33.22 ಮೀಟರುಗಳ ಎತ್ತರದಲ್ಲಿ ಸುಮಾರು ಮೂರೂಕಾಲು ಅಡಿ ಅಗಲದ ಗ್ಯಾಲರಿಯಿದೆ. ಇದು ಗುಂಬಜಿನ ಒಳ ಪರಿಧಿಯ ಸುತ್ತಲೂ ವೃತ್ತಾಕಾರವಾಗಿ ಹರಡಿಕೊಂಡಿದೆ. ಇದನ್ನು ‘ಪಿಸುಗುಟ್ಟುವ ಗ್ಯಾಲರಿ’(ವಿಷ್ಪರಿಂಗ್ ಗ್ಯಾಲರಿ) ಎಂದು ಕರೆಯುತ್ತಾರೆ. ಏಕೆಂದರೆ, ಇಲ್ಲಿ ಅತ್ಯಂತ ಮೆಲುದನಿಯಲ್ಲಿ ಆಡಿದ ಮಾತನ್ನು ಕೂಡ ಗ್ಯಾಲರಿಯ ಒಂದು ತುದಿಯಿಂದ ಇನ್ನೊಂದು ತುದಿಯವರೆಗೂ ಕೇಳಬಹುದು. ಒಂದೇ ಒಂದು ಬಾರಿ ಗಟ್ಟಿಯಾಗಿ ಚಪ್ಪಾಳೆ ತಟ್ಟಿದರೆ, ಅದು ಹತ್ತು ಸಲ ಪ್ರತಿಧ್ವನಿಸುತ್ತದೆ. ಗುಂಬಜಿನ ಗೋಡೆಗಳ ಹೊರ ಭಾಗದ ಮೇಲೆ ಪಾರಿವಾಳಗಳು, ಆನೆಗಳು, ಕಮಲದಳಗಳು, ಮತ್ತು ಕಂಠಹಾರಗಳ ಸುಂದರವಾದ ಕೆತ್ತನೆ ಹಾಗೂ ಶಿಲ್ಪಗಳನ್ನು ನೋಡಬಹುದು. ಹಾಲಿನ ಮಧ್ಯದಲ್ಲಿರುವ ವೇದಿಕೆಯ ಮೇಲೆ, ಮುಹಮ್ಮದ್ ಆದಿಲ್ ಷಾ ಮತ್ತು ಅವನ ಬಂಧುಗಳ ಕೃತಕವಾದ ಸಮಾಧಿಗಳಿವೆ. ನಿಜವಾದ ಸಮಾಧಿಗಳು ನೆಲಮಾಳಿಗೆಯಲ್ಲಿ ಸುರಕ್ಷಿತವಾಗಿವೆ.