ಕರ್ನಾಟಕದ ಜಿಲ್ಲೆಗಳು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
೨೦೦೭ರ ಹೆಚ್ಚಳಕ್ಕೆ ಮುಂಚಿನ ಕರ್ನಾಟಕದ ೨೭ ಜಿಲ್ಲೆಗಳು

ಕರ್ನಾಟಕ ರಾಜ್ಯದಲ್ಲಿ ೩೦ ಜಿಲ್ಲೆಗಳಿವೆ. ಕೆಳಗಿನ ಜನಸಂಖ್ಯಾ ಅಂಕಿ-ಅಂಶಗಳು ಭಾರತದ ೨೦೦೧ರ ಜನಗಣತಿಯನ್ನು ಆಧರಿಸಿವೆ, ಹಾಗೂ ೧೯೯೧ ರ ಜನಗಣತಿಯಿಂದ ಶೇಕಡಾ ಹೆಚ್ಚಳವನ್ನು ಸಹ ಕೆಳಗೆ ತೋರಿಸಲಾಗಿದೆ. ಕರ್ನಾಟಕ ರಾಜ್ಯ (ಜನಸಂಖ್ಯೆ: ೫,೨೭,೩೩,೯೫೮ -- ೧೯೯೧ ರಿಂದ ಶೇ. ಹೆಚ್ಚಳ ೧೭.೨೫)

ಜಿಲ್ಲೆಗಳು[ಬದಲಾಯಿಸಿ]

ಆಡಳಿತವನ್ನು ಸುಲಭಗೊಳಿಸಲು ೩೦ ಜಿಲ್ಲೆಗಳನ್ನು ಕೆಳಗೆ ಕಂಡ ವಿಭಾಗಗಳಲ್ಲಿ ವಿಂಗಡಿಸಲಾಗಿದೆ

 • ಬೆಳಗಾವಿ ವಿಭಾಗ
  • ೧೦.ಬಾಗಲಕೋಟ (೧೬,೫೨,೨೩೨, ೧೮.೮೪%),(ವಿಸ್ತೀರ್ಣ:೬೫೯೪ ಚ.ಕಿಮಿ)
  • ೧೧.ಬೆಳಗಾವಿ (೪೨,೦೭,೨೬೪, ೧೭.೪೦%),(ವಿಸ್ತೀರ್ಣ:೧೩೪೧೫ ಚ.ಕಿಮಿ)
  • ೧೨.ಬಿಜಾಪುರ (೧೮,೦೮,೮೬೩, ೧೭.೬೩%),(ವಿಸ್ತೀರ್ಣ:೧೦೪೭೫ ಚ.ಕಿಮಿ)
  • ೧೩.ಧಾರವಾಡ (೧೬,೦೩,೭೯೪, ೧೬.೬೫%),(ವಿಸ್ತೀರ್ಣ:೪೨೩೦ ಚ.ಕಿಮಿ)
  • ೧೪.ಗದಗ (೯,೭೧,೯೫೫ ೧೩.೧೪%),(ವಿಸ್ತೀರ್ಣ:೪೬೫೭ ಚ.ಕಿಮಿ)
  • ೧೫.ಹಾವೇರಿ (೧೪,೩೭,೮೬೦, ೧೩.೨೯%),(ವಿಸ್ತೀರ್ಣ:೪೮೫೧ ಚ.ಕಿಮಿ)
  • ೧೬.ಉತ್ತರ ಕನ್ನಡ (೧೩,೫೩,೨೯೯, ೧೦.೯೦%),(ವಿಸ್ತೀರ್ಣ:೧೦೨೯೧ ಚ.ಕಿಮಿ)
 • ಗುಲ್ಬರ್ಗ ವಿಭಾಗ
  • ೧೭.ಬಳ್ಳಾರಿ (೨೦,೨೫,೨೪೨, ೨೨.೩೦%),(ವಿಸ್ತೀರ್ಣ:೮೪೧೯ ಚ.ಕಿಮಿ)
  • ೧೮.ಬೀದರ (೧೫,೦೧,೩೭೪, ೧೯.೫೬%),(ವಿಸ್ತೀರ್ಣ:೫೪೪೮ ಚ.ಕಿಮಿ)
  • ೧೯.ಗುಲ್ಬರ್ಗ (೩೧,೨೪,೮೫೮, ೨೧.೦೨%),(ವಿಸ್ತೀರ್ಣ:೧೬೨೨೪ ಚ.ಕಿಮಿ)
  • ೨೦.ಕೊಪ್ಪಳ (೧೧,೯೩,೪೯೬, ೨೪.೫೭%),(ವಿಸ್ತೀರ್ಣ:೮೪೫೮ ಚ.ಕಿಮಿ)
  • ೨೧.ರಾಯಚೂರು (೧೬,೪೮,೨೧೨, ೨೧.೯೩%),(ವಿಸ್ತೀರ್ಣ:೫೫೫೯ ಚ.ಕಿಮಿ)
  • ೨೨.ಯಾದಗಿರಿ (ಹೊಸದಾಗಿ ಸೃಷ್ಟಿಯಾಗಿದೆ)
 • ಮೈಸೂರು ವಿಭಾಗ
  • ೨೩.ಚಾಮರಾಜನಗರ (೯,೬೪,೨೭೫, ೯.೧೬%),(ವಿಸ್ತೀರ್ಣ:೫೬೮೫ ಚ.ಕಿಮಿ)
  • ೨೪.ಚಿಕ್ಕಮಗಳೂರು (೧೧,೩೯,೧೦೪, ೧೧.೯೮%),(ವಿಸ್ತೀರ್ಣ:೭೨೦೧ ಚ.ಕಿಮಿ)
  • ೨೫.ದಕ್ಷಿಣ ಕನ್ನಡ (೧೮,೯೬,೪೦೩, ೧೪.೫೧%),(ವಿಸ್ತೀರ್ಣ:೪೮೪೩ ಚ.ಕಿಮಿ)
  • ೨೬.ಹಾಸನ (೧೭,೨೧,೩೧೯, ೯.೬೬%),(ವಿಸ್ತೀರ್ಣ:೬೮೧೪ ಚ.ಕಿಮಿ)
  • ೨೭.ಕೊಡಗು (೫,೪೫,೩೨೨, ೧೧.೬೪%),(ವಿಸ್ತೀರ್ಣ:೪೧೦೨ ಚ.ಕಿಮಿ)
  • ೨೮.ಮಂಡ್ಯ (೧೭,೬೧,೭೧೮, ೭.೧೪%),(ವಿಸ್ತೀರ್ಣ:೪೯೬೧ ಚ.ಕಿಮಿ)
  • ೨೯.ಮೈಸೂರು (೨೬,೨೪,೯೧೧, ೧೫.೦೪%),(ವಿಸ್ತೀರ್ಣ:೬೨೬೯ ಚ.ಕಿಮಿ)
  • ೩೦.ಉಡುಪಿ(೧,೦೯,೪೯೪, ೬.೮೮%),(ವಿಸ್ತೀರ್ಣ:೩೫೯೮ ಚ.ಕಿಮಿ)

ಜಿಲ್ಲಾ ಕೇಂದ್ರಕ್ಕೆ ಸಾಗರ ಸೂಕ್ತ[ಬದಲಾಯಿಸಿ]

ಸಾಗರ ನಗರವನ್ನು ಕೇಂದ್ರವಾಗಿಟ್ಟುಕೊಂಡು ಸಾಗರ ಜಿಲ್ಲೆಯನ್ನು ರಚಿಸುವುದು ಅತ್ಯಂತ ಸೂಕ್ತ. ಶಿವಮೊಗ್ಗ-ಭದ್ರಾವತಿ ಅವಳಿ ನಗರಗಳನ್ನು ಬಿಟ್ಟರೆ ಸಾಗರ ನಗರವು ಪ್ರಸ್ತುತ ಜಿಲ್ಲೆಯಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಎರಡನೇ ಅತಿದೊಡ್ಡ ನಗರ . ಮತ್ತು ರಾಷ್ಟ್ರೀಯ ಹೆದ್ದಾರಿ 206ರ ಮದ್ಯದಲ್ಲಿದ್ದು, ರೆವಿನ್ಯೂ ಉಪವಿಭಾಗದ ಕೇಂದ್ರವಾಗಿರುತ್ತದೆ. ಈ ಉಪ ವಿಭಾಗಕ್ಕೆ ಸಾಗರ, ಸೊರಬ, ಹೊಸನಗರ, ಶಿಕಾರಿಪುರ ತಾಲ್ಲೂಕುಗಳು ಸೇರ್ಪಡೆಯಾಗಿರುತ್ತವೆ.

ಸಾಗರ ನಗರದಲ್ಲಿ ಡಿಗ್ರಿ ಕಾಲೇಜುಗಳು, ಪಾಲಿಟೆಕ್ನಿಕ್ ಕಾಲೇಜು, ಕಾನೂನು ಕಾಲೇಜು, ರಂಗಮಂದಿರ, ಆಧುನಿಕ ಶೈಲಿಯ ರೈಲ್ವೆ ನಿಲ್ದಾಣ, ಜಿಲ್ಲಾಮಟ್ಟದ ಮಾದರಿಯಲ್ಲಿ ಕಂದಾಯ ಉಪವಿಭಾಗದ ಕಚೇರಿ, ವಿಭಾಗಮಟ್ಟದ ಮೆಸ್ಕಾಂ, ಜಿಲ್ಲಾ ಪಂಚಾಯತ್ ಎಂಜನಿಯರಿಂಗ್, ಅರಣ್ಯ ವಿಭಾಗದ ಕಚೇರಿಗಳು, RTO ಕಚೇರಿ, ಕ್ರೀಡಾಂಗಣ, ಭವ್ಯವಾದ ಪ್ರವಾಸಿ ಮಂದಿರಗಳು ತಲೆ ಎತ್ತಿ ನಿಂತು ಸಾಗರ ನಗರವನ್ನು ಸುಂದರವಾದ ನಗರವನ್ನಾಗಿ ಮಾಡಿವೆ.

ವಿಶ್ವವಿಖ್ಯಾತ ಜೋಗ್‌ಫಾಲ್ಸ್, ಸಿಗಂದೂರು, ವರದಹಳ್ಳಿ ಇಕ್ಕೇರಿ, ಕೆಳದಿ, ಮುಂತಾದ ಪ್ರೇಕ್ಷಣೀಯ ಸ್ಥಳಗಳ ನೆಲೆವೀಡಾಗಿದ್ದು, ಪ್ರವಾಸಿಗರ ಮನಸೆಳೆಯುವ ಅತ್ಯಾಕರ್ಷಕ ಹಸಿರು ಹೊದಿಕೆಯ ಮಲೆನಾಡಿನ ಕೇಂದ್ರವಾಗಿದೆ. ಮಾರುಕಟ್ಟೆ ಕೇಂದ್ರ ಕೂಡ.

ಕಾಗೋಡು ಸತ್ಯಾಗ್ರಹ, ಉಳುವವನೇ ಭೂಮಿಯ ಒಡೆಯ ಮುಂತಾದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಹೋರಾಟದ ಪುಣ್ಯಭೂಮಿಯಾದ ಸಾಗರವು ಇತಿಹಾಸ ಪ್ರಸಿದ್ಧವಾಗಿದೆ. ಶಿವಮೊಗ್ಗ ಜಿಲ್ಲೆ ವಿಭಜಿಸಿ ಸಾಗರ, ಸೊರಬ, ಹೊಸನಗರ,ಶಿಕಾರಿಪುರ ತಾಲ್ಲೂಕುಗಳನ್ನೊಳಗೊಂಡ `ಸಾಗರ ಜಿಲ್ಲೆ~ಯನ್ನು ರಚಿಸುವುದು ಆದ್ಯತೆ,ಅರ್ಹತೆಯ ದೃಷ್ಟಿಯಿಂದಲೂ ಮತ್ತು ನ್ಯಾಯದ ದೃಷ್ಟಿಯಿಂದಲೂ ಸಮಂಜಸವಾಗಿರುತ್ತದೆ.

ಕರ್ನಾಟಕ ರಾಜ್ಯದ ಒಟ್ಟು ವಿಸ್ತೀರ್ಣ:೧೯೧೭೯೧ ಚ.ಕಿಮಿ.

Karnataka-icon.jpg
ಕರ್ನಾಟಕದ ಜಿಲ್ಲೆಗಳು
ಬಾಗಲಕೋಟೆ | ಬೆಂಗಳೂರು ನಗರ ಜಿಲ್ಲೆ | ಬೆಂಗಳೂರು ಗ್ರಾಮಾಂತರ | ಬೆಳಗಾವಿ | ಬಳ್ಳಾರಿ | ಬೀದರ್ | ಬಿಜಾಪುರ | ಚಾಮರಾಜನಗರ | ಚಿಕ್ಕಮಗಳೂರು | ಚಿಕ್ಕಬಳ್ಳಾಪುರ | ಚಿತ್ರದುರ್ಗ | ದಕ್ಷಿಣ ಕನ್ನಡ | ದಾವಣಗೆರೆ | ಧಾರವಾಡ | ಗದಗ | ಗುಲ್ಬರ್ಗ | ಹಾಸನ | ಹಾವೇರಿ | ಕೊಡಗು | ಕೋಲಾರ | ಕೊಪ್ಪಳ | ಮಂಡ್ಯ | ಮೈಸೂರು | ಯಾದಗಿರಿ | ರಾಯಚೂರು | ರಾಮನಗರ | ಶಿವಮೊಗ್ಗ | ತುಮಕೂರು | ಉಡುಪಿ | ಉತ್ತರ ಕನ್ನಡ