ಅಫಜಲ್ಪುರ
Wikipedia ಇಂದ
ಅಫಜಲ್ಪುರ ಕರ್ನಾಟಕದ ಗುಲ್ಬರ್ಗ ಜಿಲ್ಲೆಯ ಒಂದು ಪಂಚಾಯತಿ ಪಟ್ಟಣ ಮತ್ತು ತಾಲೂಕು ಕೇಂದ್ರ.
ಪರಿವಿಡಿ |
[ಬದಲಾಯಿಸಿ] ಭೌಗೋಲಿಕ ವಿವರಗಳು
- ಅಕ್ಷಾಂಶ / ರೇಖಾಂಶ : ೧೭.೨ ಡಿಗ್ರಿ ಉತ್ತರ ಮತ್ತು ೭೬.೩೫ ಡಿಗ್ರಿ ಉತ್ತರ.
- ಸಮುದ್ರಮಟ್ಟದಿಂದ ಸರಾಸರಿ ಎತ್ತರ : ೪೦೮ ಮೀಟರುಗಳು.
- ಕ್ಷೇತ್ರಫಲ : ೩ ಚದರ ಕಿ.ಮೀ
- ಅಕ್ಕಪಕ್ಕದ ತಾಲೂಕುಗಳು : ಆಳಂದ್ ಉತ್ತರಕ್ಕೆ, ಗುಲ್ಬರ್ಗ ಪೂರ್ವಕ್ಕೆ, ಜೇವರ್ಗಿ ಮತ್ತು ಸಿಂದಗಿ (ಬಿಜಾಪುರ ಜಿಲ್ಲೆ) ದಕ್ಷಿಣಕ್ಕೆ, ಇಂಡಿ (ಬಿಜಾಪುರ ಜಿಲ್ಲೆ) ಪಶ್ಷಿಮಕ್ಕೆ, ಮತ್ತು ಮಹಾರಾಷ್ಟ್ರದ ಅಕ್ಕಲಕೋಟೆ ಉತ್ತರ-ಪಶ್ಷಿಮಕ್ಕೆ
ಭೀಮಾ ಮತ್ತು ಅಮರ್ಗಾ ನದಿಗಳು ಈ ತಾಲೂಕಿನಲ್ಲಿ ಹರಿಯುತ್ತವೆ.
[ಬದಲಾಯಿಸಿ] ಜನಸಂಖ್ಯಾ ಅಂಕಿ ಅಂಶ
೨೦೦೧ರ ಜನಗಣತಿ ಯ ಪ್ರಕಾರ ಅಫಜಲ್ಪುರದ ಜನಸಂಖ್ಯೆ ೧೯,೧೧೪. ಇದರಲ್ಲಿ ೫೨% ಶೇಕಡಾ ಪುರುಷರು ಮತ್ತು ಬಾಕಿ ೪೮% ಸ್ತ್ರೀಯರು. ಇಲ್ಲಿಯ ೫೪% ಸರಾಸರಿ ಸಾಕ್ಷರತೆ ಭಾರತದ ಸಾಕ್ಷರತಾ ಪ್ರಮಾಣಕ್ಕಿಂತ (೫೯.೫%) ಕಡಿಮೆಯಿದೆ. ೬೦% ಪುರುಷರು ಮತ್ತು ೪೦% ಸ್ತ್ರೀಯರು ಅದರಲ್ಲಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ ೬ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ೧೫%ರಷ್ಟಿದ್ದಾರೆ.
[ಬದಲಾಯಿಸಿ] ಪ್ರೇಕ್ಷಣೀಯ ಸ್ಥಳಗಳು
- ಅಫಝಲಖಾನನ ಮಸೀದಿ
- ಈವತಹಳ್ಳಿ ಮತ್ತು ಉಡೇಹಾನ - ಇಲ್ಲಿ ಪ್ರಾಚೀನ ಅವಶೇಷಗಳಿವೆ.
- ಮರ್ಜಿ ಪೀರ್ ದರ್ಗಾ (ಭೀಮಾ ಮತ್ತು ಅಮರ್ಗಾ ನದಿಗಳ ಸಂಗಮದಲ್ಲಿದೆ)

