ಟೊಮೇಟೊ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಈ ಲೇಖನವನ್ನು Tomato ಆಂಗ್ಲ ಪುಟದಿಂದ ಅನುವಾದ ಮಾಡಬೇಕಿದೆ. ನೀವೂ ಸಹಾಯ ಮಾಡಬಹುದು.

Tomato
ವೈಜ್ಞಾನಿಕ ವರ್ಗೀಕರಣ
Kingdom: Plantae
Subkingdom: Tracheobionta
Division: Magnoliophyta
Class: Magnoliopsida
Subclass: Asteridae
Order: Solanales
Family: Solanaceae
Genus: Solanum
Species: S. lycopersicum
ದ್ವಿಪದ ಹೆಸರು
Solanum lycopersicum
L.

ಟೊಮೇಟೊ (ಸೊಲ್ಯಾನಮ್ ಲೈಕೋಪರ್ಸಿಕಮ್) ಸೋಲನೇಸಿ ಕುಟುಂಬಕ್ಕೆ ಸೇರಿದ ಒಂದು ಗಿಡ. ಮೂಲ - ಮಧ್ಯ ಅಮೇರಿಕ ಹಾಗೂ ದಕ್ಷಿಣ ಅಮೇರಿಕ. ಇದು ಅಲ್ಪಾಯುಶಿ ಗಿಡ - ವರ್ಷಕ್ಕೊಮ್ಮೆ ಬೆಳೆಯಲಾಗುತ್ತದೆ. ೧ - ೩ ಮೀ ಎತ್ತರ ಬೆಳೆಯುವ ಈ ಗಿಡ ತೆಳು ಕಾಂಡವನ್ನು ಹೊಂದಿದ್ದು ಉಳಿದ ಗಿಡಗಳ ಮೇಲೆ ಸುಲಭವಾಗಿ ಹರಡಿಕೊಳ್ಳುತ್ತದೆ. ಇದರ ಎಲೆಗಳು ೧೦-೨೫ ಸೆ ಮೀ ಉದ್ದವಿದ್ದು, ಎಲೆಗಳ ಮಧ್ಯೆ ತೆಲು ಪದರಗಳಿದ್ದು, ೮ ಸೆ ಮೀ ನಷ್ಟು ಅಗಲವುಳ್ಳ ೫ - ೯ ಎಲೆಗಳ ಗುಂಪಿನಂತೆ ಕಾಣಸಿಗುತ್ತವೆ.

ಟೊಮೇಟೊ ಎಂಬ ಪದ Nahuatl ಭಾಷೆಯಿಂದ ಉಗಮಿಸಿದ ಪದ.

ಇತಿಹಾಸ[ಬದಲಾಯಿಸಿ]

ಆರಂಭಿಕ ಇತಿಹಾಸ[ಬದಲಾಯಿಸಿ]

ತರಕಾರಿ ಬೆಳೆಗಳ ಮಧ್ಯೆ ಟೊಮೇಟೊ

ಆಂಡ್ರ್ಯೂ ಎಫ್ ಸ್ಮಿತ್ ರವರ "ದಿ ಟೊಮೇಟೋ ಇನ್ ಅಮೇರಿಕ ಪುಸ್ತಕದ ಪ್ರಕಾರ ಟೊಮೇಟೋ ದಕ್ಷಿಣ ಅಮೇರಿಕದ ಎತ್ತರ ಪ್ರದೇಶಗಳಿಂದ ಬಂದದ್ದು. ಆದರೆ ಸ್ಮಿತ್ ಸ್ಪ್ಯಾನಿಶ್ ದಕ್ಷಿಣ ಅಮೇರಿಕದಲ್ಲಿ ಕಾಲಿಡುವ ಮುಂಚೆ ಟೋಮೇಟೋ ಕೃಷಿ ನಡೆಯುತ್ತಿದ್ದ ಬಗ್ಗೆ ಯಾವುದೇ ಪುರಾವೆಯೂ ಇಲ್ಲವೆಂದು ಕೂಡ ಬರೆದಿದ್ದರು. ಆದರೆ ಇತರ ಸಂಶೋಧಕರು ಈ ವಿಷಯವನ್ನು ಅಲ್ಲಗೆಳೆದಿದ್ದಾರೆ. ಪೆರುವಿನಲ್ಲಿ ಈಗ ಕೃಷಿ ಮಾಡಲಾಗುವ ಹಣ್ಣುಗಳಿಗೂ ಹೆಚ್ಚಿನ ಐತಿಹಾಸಿಕ ಪುರಾವೆ ಇಲ್ಲದ್ದರಿಂದ. ಹೆಚ್ಚಿನ ಕೃಷಿ ಜ್ಞಾನ ಯೂರೋಪಿಯನ್ನರು ಬಂದ ಮೇಲೆ ನಶಿಸಿ ಹೋಯಿತಂತೆ.

ಅದೇನಿದ್ದರೂ, ಟೊಮೇಟೊ ಹೇಗೋ ದಕ್ಷಿಣ ಅಮೇರಿಕಕ್ಕೆ ಹೊರಗಿನಿಂದ ಬಂದದ್ದು ಎಂದು ಹೇಳಲಾಗುತ್ತದೆ. ಮಾಯಾ ಮತ್ತು ಇತರ ಪಂಗಡಗಳ ಜನ ಈ‌ ಹಣ್ಣನ್ನು ಅಡುಗೆಯಲ್ಲುಪಯೋಗಿಸುತ್ತಿದ್ದರಂತೆ. ದಕ್ಷಿಣ ಮೆಕ್ಸಿಕೊದಲ್ಲಿ ೧೬ನೇ ಶತಮಾನದಲ್ಲಿ ಇದನ್ನು ಬೆಳೆಸುತ್ತಿದ್ದರಂತೆ.

ಸ್ಪೇಯ್ನ್ ನಲ್ಲಿ[ಬದಲಾಯಿಸಿ]

ದಕ್ಷಿಣ ಅಮೇರಿಕವನ್ನು ಸ್ಪೇಯ್ನಿನವರು ಆಕ್ರಮಿಸಿದಾಗ, ಕೆರಿಬ್ಬಿಯನ್ನ ಅವರ ಕಾಲೋನಿಗಳಲ್ಲಿ ಟೊಮೇಟೊ ವಿತರಿಸಿದರು. ಫಿಲಿಪ್ಪೀನ್ಸ್ ದೇಶಕ್ಕೆ ಕೂಡ ಇದನ್ನು ತೆಗೆದುಕೊಂಡು ಹೋದರು. ಅಲ್ಲಿಂದ ಏಶಿಯಾ ಖಂಡಕ್ಕೂ ಬಂದಿತೆಂದು ಹೇಳಲಾಗುತ್ತದೆ.

ಸ್ಪೇಯ್ನಿನವರು ಯೂರೋಪಿಗೂ ಟೊಮೇಟೊ ತಂದರು. ಅಲ್ಲಿನ ವಾತಾವರಣಕ್ಕೆ ಅದು ಹುಲುಸಾಗಿ ಬೆಳೆಯಿತು, ೧೫೪೦ನೇ ಇಶವಿಯಷ್ಟೊತ್ತಿಗೆ ಬೇಸಾಯ ಪ್ರಾರಂಭವಾಗಿತ್ತು. ಸ್ಪೇಯ್ನಿನಲ್ಲಿ ೧೬೦೦ ಸಮಯದಲ್ಲಿ ಆಗಲೇ ಸಾಕಷ್ಟು ಅಡುಗೆಗಳಲ್ಲಿ ಟೊಮೇಟೋ ಬಳಸಲಾಗುತ್ತಿತ್ತು.

ಟೊಮೇಟೋ ದಾಖಲೆಗಳು[ಬದಲಾಯಿಸಿ]

ಗೊರ್ಡೊನ್ ಗ್ರಹಾಮ್, ಇಂಗ್ಲೆಂಡ್, ಒಕ್ಲೊಹೋಮ (೧೯೮೬) ಬೆಳೆದ 3.51 kg ತೂಕವಿರುವ ಟೊಮೇಟೊ ಇದುವರೆಗೂ ಅತ್ಯಂತ ಭಾರವಾಗಿರುವ ಟೊಮೇಟೊ. ಅತಿ ದೊಡ್ಡ ಟೊಮೆಟೊ ಗಿಡ 'ಸನ್ ಗೋಲ್ಡ್' ಅನ್ನು ಇಂಗ್ಲೆಂಡಿನ ನ್ಯೂಟ್ರಿಕಲ್ಚರ್ ಕಂಪನಿಯು ೨೦೦೦ ಇಸವಿಯಲ್ಲಿ ಬೆಳೆಸಿದೆ. ಇದರ ಉದ್ದ ೧೯.೮ ಮೀ (೬೫ ಅಡಿ) ಯಾಗಿದೆ.

ಇದರಿಂದ ಹೃದಯದ ತೊಂದರೆಗೆ ಲಂಡನ್ನಿನಲ್ಲಿ ಮಾತ್ರೆತಯಾರಿಸುವ ಬಗ್ಗೆ ಪ್ರಯೋಗ ನಡೆಯುತ್ತಿದೆ

ಔಷಧೀಯ ಗುಣ[ಬದಲಾಯಿಸಿ]

ಹೃದಯದ ರಕ್ತ ನಾಳದಲ್ಲಿರುವ ಕೊಬ್ಬು ನಿವಾರಣೆಗೆ ಟೊಮೆಟೋ ಸಾರದ ಮಾತ್ರೆ ಉಪಯೋಗಕರ. ಚರ್ಚೆಪುಟ:ಟೊಮೇಟೊ

ಕರ್ನಾಟಕ ಮತ್ತು ಟೊಮೇಟೋ[ಬದಲಾಯಿಸಿ]

ಕರ್ನಾಟಕದ ಟೊಮೇಟೋ

ಕರ್ನಾಟಕದಲ್ಲಿ ಬೆಂಗಳೂರಿನ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಅಭಿವೃದ್ಧಿಪಡಿಸಿರುವ ‘ಅರ್ಕಾರಕ್ಷಕ್‌’ ಟೊಮೆಟೊ ಬೆಳೆ ರೈತರ ಪಾಲಿಗೆ ವರದಾನವಾಗಿದೆ.ಅರ್ಕಾರಕ್ಷಕ್‌ ಟೊಮೆಟೊ ತಳಿಯು ಅತಿ ಹೆಚ್ಚು ಇಳುವರಿ ನೀಡುವ ಹಾಗೂ ಮೂರು ಮುಖ್ಯ ರೋಗಗಳನ್ನು ತಡೆಯುವ ಸಾಮರ್ಥ್ಯವುಳ್ಳ ತಳಿ ಇದು ಎಂದು ಈ ತಳಿಯನ್ನು ಅಭಿವೃದ್ಧಿಪಡಿಸಿರುವ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ.ಎ.ಟಿ. ಸದಾಶಿವ ಹೇಳುತ್ತಾರೆ.ಟೊಮೆಟೊ ಬೆಳೆಗೆ ಬರುವ ಸೊರುಗು ರೋಗ, ಎಲೆಮುರುಟು ರೋಗ ಹಾಗೂ ಎಲೆಚುಕ್ಕೆ ರೋಗಗಳನ್ನು ತಡೆಯುವ ಶಕ್ತಿ ಅರ್ಕಾರಕ್ಷಕ್‌ ತಳಿಗಿದೆ ಎನ್ನುತ್ತಾರೆ.

  • ಈ ತಳಿಯಿಂದಹೆಕ್ಟೇರ್‌ಗೆ 40 ರಿಂದ 50 ಸಾವಿರ ಟನ್‌ (?) ಇಳುವರಿ ದೊರೆಯುತ್ತದೆ. ಗಿಡವೊಂದಕ್ಕೆ ಕನಿಷ್ಠ 10 ರಿಂದ 12 ಕೆ.ಜಿ ಫಸಲು ಸಿಗುತ್ತದೆ. ಎಂದರೆ ಒಂದು ಎಕರೆಗೆ ೧೬/16 ಸಾವಿರ ಟನ್ !!.ಗಾತ್ರ ಹಾಗೂ ಆಕಾರ , ಹಣ್ಣಿನ ಬಣ್ಣ ಆಕರ್ಷಣೀಯವೂ ಆಗಿದ್ದು ಮತ್ತು ಗಟ್ಟಿಯಾಗಿದ್ದು ಮಾರಾಟಕ್ಕೆ ಅನುಕೂಲಕರವಾಗಿದೆ. ಫಸಲು ಕೊಯ್ದ ನಂತರ 15–20 ದಿನಗಳಷ್ಟು ಕಾಲ ಕೆಡದೇ ಉಳಿಯುವ ಸಾಮರ್ಥ್ಯವನ್ನು ಹೊಂದಿದೆ. ಆಧುನಿಕ ಬೇಸಾಯ ಪದ್ಧತಿಯಿಂದ ಕಡಿಮೆ ನೀರಿದ್ದರೂ ಇದನ್ನು ಬೆಳೆಯಬಹುದು.
ಬೀಜವನ್ನು ತಂದು 25 ದಿನಗಳ ಕಾಲ ನರ್ಸರಿಯಲ್ಲಿ ಬೆಳೆಸಿದ ನಂತರ ನಾಟಿ ಮಾಡಬೇಕು. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಅಭಿವೃದ್ಧಿ ಪಡಿಸಿರುವ ಔಷಧಿಯನ್ನು ತಿಂಗಳಿಗೊಮ್ಮೆ ಸಿಂಪರಣೆ ಮಾಡಬೇಕು.ಸಾಲಿನಿಂದ ಸಾಲಿಗೆ ನಾಲ್ಕು ಅಡಿಗಳ ಅಂತರವಿರಬೇಕು. ಗಿಡದಿಂದ ಗಿಡಕ್ಕೆ 2 ಅಡಿಗಳ ಅಂತರದಂತೆ ಒಂದು ಎಕರೆಯಲ್ಲಿ ಅಂದಾಜು 6 ಸಾವಿರ ಗಿಡಗಳನ್ನು ನಾಟಿ ಮಾಡಬೇಕು (ವಿಜ್ಞಾನಿ ಡಾ.ಎ.ಟಿ. ಸದಾಶಿವ).ಟೊಮೆಟೊ ಬೆಳೆಯಲು ಹನಿ ನೀರಾವರಿಗೆ ವೆಚ್ಚ ಬರಬಹುದು. ಇದಕ್ಕೆ ಸರ್ಕಾರ ಶೇ 90 ರಷ್ಟು ಸಬ್ಸಿಡಿ ನೀಡುವುದು.ಇತರೆ ಕೃಷಿ ವೆಚ್ಚ ಸೇರಿ ಆಧುನಿಕ ಕೃಷಿಗೆ ಎಕರೆಗೆ ₨ 4 ಲಕ್ಷ ಆಗಬಹುದು (2014).ಬೆಂಗಳೂರು ಸಂಶೋಧನಾ ಸಂಸ್ಥೆಯಲ್ಲಿ ಈ ಟೊಮೆಟೊ ಬೀಜ ಅರ್ಧ ಬೆಲೆಗೆ ಸಿಗುತ್ತದೆ. 10 ಗ್ರಾಂಗೆ ₨ 300 ನಿಗದಿ ಪಡಿಸಿದ್ದಾರೆ (2014).ಅರ್ಕಾರಕ್ಷಕ್‌’ ಟೊಮೆಟೊ ಬೆಳೆಯನ್ನು ಹೆನ್ನಾಗರದ ಪ್ರಗತಿಪರ ರೈತ ಹಾಗೂ ಹಾಪ್‌ಕಾಮ್‌್ಸ ನಿರ್ದೇಶಕ ಎಂ.ಬಾಬು ಅವರ ಐದು ಎಕರೆ ಜಮೀನಿನಲ್ಲಿ ಬೆಳೆಯಲಾಗಿದ್ದು ಭರ್ಜರಿ ಬೆಳೆ ತೆಗೆದಿದ್ದಾರೆ(2014)
  • [ಚಿತ್ರ:Kg-as-vegetable-prices-surge-in-delhi.jpg ಕರ್ನಾಟಕದ ಟೊಮೇಟೋ]
  • [ಚಿತ್ರ:Image0140.jpg|thumb|right|ಕರ್ನಾಟಕದ ಟೊಮೇಟೊ]

ಭಾರತದಲ್ಲಿ ಬೆಳೆ[ಬದಲಾಯಿಸಿ]

ಭಾರತದಲ್ಲಿ ಟೊಮೆಟೊ ಬೆಳೆಯನ್ನು ಸುಮಾರು 880 ಸಾವಿರ ಹೆಕ್ಟೇರ್‌ ಭೂ ವಿಸ್ತೀರ್ಣದಲ್ಲಿ ಬೆಳೆಯಲಾಗುತ್ತದೆ. ಪ್ರತಿ ಹೆಕ್ಟೇರ್‌ಗೆ 20.7 ಮೆಟ್ರಿಕ್ ಟನ್ ಸರಾಸರಿ ಉತ್ಪತ್ತಿಯಿಂದ ಒಟ್ಟು 18,227 ಸಾವಿರ ಮೆಟ್ರಿಕ್ ಟನ್ ಉತ್ಪಾದನೆಯೊಂದಿಗೆ ವಿಶ್ವದ ಒಟ್ಟು ಉತ್ಪಾದನೆಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ.

ಅಡುಗೆಗೆ ಮಾತ್ರವಲ್ಲದೇ ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಕಾರಣ, ಟೊಮೆಟೊಗೆ ಎಲ್ಲಾ ಕಾಲದಲ್ಲಿಯೂ ಬೇಡಿಕೆ ಇದ್ದದ್ದೇ. ಹೀಗೆ ಬಹು ಬೇಡಿಕೆಯಿರುವ ಟೊಮೆಟೊಗೆ ಕಾಯಿ ಕೊರೆಯುವ ಹುಳುಗಳು ಬಹು ದೊಡ್ಡ ಸವಾಲು. ಈ ಕೀಟಗಳು ಸುಮಾರು ಶೇ 50ಕ್ಕಿಂತಲೂ ಹೆಚ್ಚು ಬೆಳೆನಾಶಪಡಿಸಿ ದೊಡ್ಡ ಮೊತ್ತದ ನಷ್ಟ ಉಂಟುಮಾಡುತ್ತದೆ.

ಬಾರತದಲ್ಲಿ ಕೀಟ ಬಾಧೆ ಮತ್ತು ಪರಿಹಾರ[ಬದಲಾಯಿಸಿ]

ಕೀಟಗಳ ಜೀವನ ಪರಿಚಯ 1. ತಂಬಾಕು ಎಲೆ ತಿನ್ನುವ ಹುಳು (ಸ್ಪೊಡಾಪ್ಟರ ಲಿಟೂರ) : ಮೊಟ್ಟೆಯೊಡೆದ ಚಿಕ್ಕ ಮರಿಹುಳುಗಳು (ಕ್ಯಾಟರ್‌ಪಿಲ್ಲರ್ / ಲಾರ್ವ) 3.5 ರಿಂದ 4 ಸೆಂಟಿ ಮೀಟರ್ ಉದ್ದವಿರುತ್ತದೆ, ನಂತರ ಬೆಳೆಯುತ್ತ ಸುಮಾರು 3 ರಿಂದ 4 ಇಂಚು ಉದ್ದವಾಗುತ್ತದೆ. ಇದರ ಕಡು ಹಸಿರು ಬಣ್ಣದ ದೇಹ ಕಂದು ಮಚ್ಚೆಗಳಿಂದ ಕೂಡಿರುತ್ತದೆ. ಈ ಹುಳು ಸುಮಾರು 20 ರಿಂದ 25 ದಿನಗಳಲ್ಲಿ ತನ್ನ ಪ್ರೌಢಾವಸ್ಥೆಯಿಂದ ಕೋಶಾವಸ್ಥೆಗೆ ಹೋಗುತ್ತದೆ. ಕೋಶಾವಸ್ಥೆಯ 6 ರಿಂದ 8 ದಿನಗಳ ನಂತರ ಪತಂಗವಾಗಿ ಹೊರಬರುತ್ತದೆ. ಹೊರಬಂದ ಪತಂಗಗಳು ಸಂತಾನಾಭಿವೃದ್ಧಿಯಲ್ಲಿ ತೊಡಗಿಕೊಳ್ಳುತ್ತವೆ. ಸುಮಾರು 500 ರಿಂದ 3 ಸಾವಿರಗಳಷ್ಟು ಮೊಟ್ಟೆಗಳನ್ನು ಗುಂಪು ಗುಂಪಾಗಿ ಇಡುವ ಹೆಣ್ಣು ಪತಂಗ ಅವುಗಳನ್ನು ತನ್ನ ಬಾಲದ ತುದಿಯ ಕೂದಲುಗಳಿಂದ ಮುಚ್ಚುತ್ತದೆ. ಈ ರೀತಿ ಮುಚ್ಚಲಾದ ಮೊಟ್ಟೆಗಳು ಭಕ್ಷಕ ಕೀಟಗಳಿಂದ ರಕ್ಷಣೆ ಪಡೆದುಕೊಳ್ಳುತ್ತವೆ.

2. ಅಮೆರಿಕನ್ ಬೋಲ್ ವರ್ಮ್ (ಹೆಲಿಕೊವರ್ಪ ಅರ್ಮಿಜರ): ಇವು ತನ್ನ ಜೀವಿತಾವಧಿಯಲ್ಲಿ ಸುಮಾರು 500ರಷ್ಟು ಮೊಟ್ಟೆಗಳನ್ನು ಇಡುತ್ತವೆ. ಚಿಕ್ಕ ಮುತ್ತಿನಾಕಾರದ (0.4 ಮಿ.ಮೀ. ನಿಂದ 0.6 ಮಿ.ಮೀ.) ಮೊಟ್ಟೆಗಳನ್ನು ಒಂದೊಂದಾಗಿ ಗಿಡದ ಮೇಲ್ಭಾಗ ಮತ್ತು ಎಲೆಗಳ ಹಿಂಭಾಗದಲ್ಲಿ ಮತ್ತು ಹೂಗಳ ಮೇಲೆ ಇಡುತ್ತವೆ. ಮೊಟ್ಟೆಯೊಡೆದು ಚಿಕ್ಕ ಮರಿಹುಳು (ಕ್ಯಾಟರ್‌ಪಿಲ್ಲರ್ / ಲಾರ್ವ)ಗಳ ದೇಹ ಹಳದಿ ಅಥವಾ ಹಸಿರು ಬಣ್ಣದಿಂದ ಕೂಡಿದ್ದು,1.5 ಮಿ.ಮೀ. ನಷ್ಟು ಉದ್ದವಿರುತ್ತದೆ.

ನಂತರ ಬೆಳೆಯುತ್ತ 6 ಹಂತಗಳಲ್ಲಿ ಸುಮಾರು 15 ರಿಂದ 17 ದಿನಗಳಲ್ಲಿ 30 ರಿಂದ 32 ಮಿ.ಮೀ. ಉದ್ದವಾಗುತ್ತದೆ. ವಯಸ್ಕ ಹುಳುವಿನ ದೇಹ ಕಡು ಹಳದಿ ಅಥವಾ ಹಸಿರು ಬಣ್ಣದ ದೇಹದ ಮೇಲ್ಭಾಗವು ಕಂದು ಪಾರ್ಶ್ವ ಗೆರೆಗಳಿಂದ ಕೂಡಿರುತ್ತದೆ. ಈ ಹುಳು ಸುಮಾರು 20 ರಿಂದ 25 ದಿನಗಳಲ್ಲಿ ತನ್ನ ಪ್ರೌಢಾವಸ್ಥೆಯಿಂದ ಕೋಶಾವಸ್ಥೆಗೆ ಹೋಗುತ್ತದೆ. ಕೋಶಾವಸ್ಥೆಯ 6 ರಿಂದ 8 ದಿನಗಳ ನಂತರ ಪತಂಗವಾಗಿ ಹೊರಬರುತ್ತದೆ. ಹೊರಬಂದ ಪತಂಗಗಳು ಸಂತಾನಾಭಿವೃದ್ಧಿಯಲ್ಲಿ ತೊಡಗಿಕೊಳ್ಳುತ್ತವೆ.

ಹಾನಿಯ ಲಕ್ಷಣಗಳು[ಬದಲಾಯಿಸಿ]

ಮೊಟ್ಟೆಯಿಂದ ಹೊರಬಂದ ಚಿಕ್ಕ ಮರಿಹುಳುಗಳು ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುತ್ತವೆ, ನಂತರ ಗಿಡದ ಮೊಗ್ಗು, ಹೂಗಳನ್ನು ತಿನ್ನುತ್ತವೆ. ಕಾಯಿ ಕಟ್ಟುತ್ತಿದ್ದಂತೆ ಕಾಯಿಯ ಮೇಲೆ ದಾಳಿಮಾಡುತ್ತವೆ, ಕಾಯಿ ಕೊರೆದು ತಿನ್ನುತ್ತದೆ, ಹಾಗೆ ತನ್ನ ದೇಹದ ಅರ್ಧ ಭಾಗದಷ್ಟು ಮಾತ್ರ ಕಾಯಿಯ ಒಳಗೆ ರಂಧ್ರ ಕೊರೆದು ತಿನ್ನುತ್ತದೆ ಮತ್ತು ತನ್ನ ತ್ಯಾಜ್ಯ ಹೊರಹಾಕುತ್ತದೆ, ಹೊರಹಾಕಿದ ತ್ಯಾಜ್ಯ ಕಾಯಿಯೊಂದಿಗೆ ಕೊಳೆತು ಕೆಟ್ಟ ವಾಸನೆ ಬರುತ್ತದೆ. ಇಂತಹ ಟೊಮೆಟೊ ಮಾರುಕಟ್ಟೆಯ ಮೌಲ್ಯ ಕಳೆದುಕೊಳ್ಳುತ್ತವೆ. ಈ ಕೀಟಗಳು ಎಳೆಯ ಕಾಯಿಯಿಂದ ಹಿಡಿದು ಸಂಪೂರ್ಣ ಹಣ್ಣಾದ ಎಲ್ಲಾ ಹಂತದ ಕಾಯಿಗಳನ್ನು ಕೊರೆದು ತಿನ್ನುತ್ತವೆ. ಹೀಗಾಗಿ ಇಳುವರಿಯು ಗಣನೀಯವಾಗಿ ಕಡಿಮೆಯಾಗುತ್ತದೆ. ಅಧ್ಯಯನದ ಪ್ರಕಾರ, ಶೇ 20 ರಿಂದ 35 ಬೆಳೆ ಹಾನಿ ಮತ್ತು ನಷ್ಟದ ಪ್ರಮಾಣ ದಾಖಲಾಗಿದೆ. ಈ ಕೀಟಗಳು ವರ್ಷದಾದ್ಯಂತ ಬೆಳೆಯ ಎಲ್ಲಾ ಹಂತಗಳಲ್ಲಿ ಬರುತ್ತವೆ. ಚಿಕ್ಕಬಳ್ಳಾಪುರ, ಚಿಂತಾಮಣಿ, ದೇವನಹಳ್ಳಿ, ಹೊಸಕೋಟೆ, ಮಾಲೂರು, ಬಂಗಾರಪೇಟೆ, ಕೆ.ಜಿ.ಎಫ್., ಕೋಲಾರ, ಬೆಂಗಳೂರು ಗ್ರಾಮಾಂತರ ತಾಲ್ಲೂಕಿನ ಹಳ್ಳಿಗಳಲ್ಲಿ, ಪ್ರತಿ ವರ್ಷವೂ ಈ ಕೀಟಗಳು ಕಾಣಸಿಕ್ಕಿವೆ. ಮಾತ್ರವಲ್ಲದೆ ಇಳುವರಿಯು ಗಣನೀಯವಾಗಿ ಕಡಿಮೆಯಾಗುತ್ತದೆ.

ಕೀಟಗಳ ನಿರ್ವಹಣೆ[ಬದಲಾಯಿಸಿ]

ಬೇಸಿಗೆಯಲ್ಲಿ, ಆಳವಾಗಿ ಉಳುಮೆ ಮಾಡಬೇಕು. ಈ ರೀತಿ ಮಾಡುವುದರಿಂದ ಮಣ್ಣಿನಲ್ಲಿ ಹುದುಗಿರುವ ಹುಳುಗಳು, ಕೋಶಾವಸ್ಥೆಯ ಕೀಟಗಳು ಸಹ ಮೇಲೆ ಬರುತ್ತವೆ. ಇವುಗಳನ್ನು ಕೀಟ ಭಕ್ಷಕಪಕ್ಷಿಗಳು ಹೆಕ್ಕಿ ತಿನ್ನುತ್ತವೆ ಮತ್ತು ಸೂರ್ಯನ ಬಿಸಿಲಿನ ಶಾಖದಿಂದಲೂ ಹುಳುಗಳು ಸಾಯುತ್ತವೆ.

ಗಿಡಗಳ ಮೇಲೆ ಕಾಣುವ ಕೀಟಗಳನ್ನು ಹಿಡಿದು ನಾಶಪಡಿಸುವುದು. ಈ ಕೀಟಗಳು ಎಲೆಯ ಕೆಳಭಾಗದಲ್ಲಿ ಹೂಗಳ ಹತ್ತಿರ ಇಡುವ ಮೊಟ್ಟೆಗಳನ್ನು ಗುರುತಿಸಿ ನಾಶಪಡಿಸುವುದು. ಟೊಮೆಟೊ ಸುತ್ತ ಅಡೆ ಸಾಲು ಬೆಳೆಯಾಗಿ ಹರಳು ಅಥವಾ ತಂಬಾಕು ಅಥವಾ ಮುಸುಕಿನ ಜೋಳ ಅಥವಾ ಸೇವಂತಿಗೆ ಹೂ ಬೆಳೆದರೆ, ಈ ಕೀಟಗಳು ಹರಳು ಅಥವಾ ಸೇವಂತಿಗೆ ಹೂ ಗಿಡಗಳಿಗೆ ಹೆಚ್ಚು ಆಕರ್ಷಿತವಾಗುತ್ತದೆ ಮತ್ತು ಟೊಮೆಟೊ ಬೆಳೆಗೆ ಹಾನಿ ಕಡಿಮೆಯಾಗುತ್ತದೆ.

ಸಾರಜನಕಯುಕ್ತ (ಯೂರಿಯಾ) ರಸಗೊಬ್ಬರದ ಬಳಕೆ ಕಡಿಮೆ ಮಾಡಬೇಕು. ಸಾರಜನಕ ಹೆಚ್ಚಾದರೆ, ಗಿಡಗಳು ದಟ್ಟವಾಗಿ ಬೆಳೆದು ಕೀಟಗಳಿಗೆ ಉತ್ತಮ ಆಹಾರವಾಗುತ್ತದೆ. ಮೋಹಕ ಅಥವಾ ಆಕರ್ಷಿತ ಬಲೆ (ಮಾರುಕಟ್ಟೆಯಲ್ಲಿ ಲಭ್ಯ) ಅಳವಡಿಸಿದರೆ ಪತಂಗಗಳು ಬಂದು ಈ ಬಲೆಯೊಳಗೆ ಬೀಳುತ್ತವೆ.

ಟ್ರೈಕೋಗ್ರಾಮ ಎಂಬ ಪರಾವಲಂಬಿ ದುಂಬಿಗಳು ಟ್ರೈಕೋಕಾರ್ಡ್ ರೂಪದಲ್ಲಿ ಮಾರುಕಟ್ಟೆಯಲ್ಲಿ ಲಭ್ಯ, ಇವುಗಳನ್ನು ಎಕರೆಗೆ 1.5 ಸೀ. ಸೀ. ಕಾರ್ಡ್‌ಗಳನ್ನು ಗಿಡಗಳಿಗೆ ಕಟ್ಟಬಹುದು. ಟ್ರೈಕೋಗ್ರಾಮ ದುಂಬಿಯು, ಈ ಹುಳುಗಳ ಮೊಟ್ಟೆಯ ಒಳಗೆ ತನ್ನ ಮೊಟ್ಟೆಯಿಡುತ್ತವೆ ಹಾಗೂ ಟ್ರೈಕೋಗ್ರಾಮ ಮೊಟ್ಟೆಯಿಂದ ಹೊರಬಂದ ಮರಿದುಂಬಿಹುಳುಗಳು ಈ ಹುಳುಗಳ ಮೊಟ್ಟೆಯನ್ನು ಒಳಗಿನಿಂದಲೇ ತಿಂದು ಬೆಳೆಯುತ್ತವೆ. ಹಾಗಾಗಿ ಈ ಹುಳುಗಳ ಮೊಟ್ಟೆ ನಾಶವಾಗಿ ಈ ಕೀಟಗಳ ನಿಯಂತ್ರಣವಾಗುತ್ತದೆ.

ನ್ಯೂಕ್ಲಿಯರ್ ಪಾಲಿ ಹೈಡ್ರೋಸಿಸ್ ವೈರಸ್‌ ಅನ್ನು ಶೇ 2ರಷ್ಟು ಹಾಕಬೇಕು. ಇದು ಮಾರುಕಟ್ಟೆಯಲ್ಲಿ ಲಭ್ಯ. ಪ್ರತಿ ಲೀಟರ್ ನೀರಿಗೆ 1 ಮೀ.ಲೀ. ಬೆರೆಸಿ ಸಿಂಪಡಿಸಬಹುದು.ಬೇವಿನ ಬೀಜಗಳನ್ನು ನೆನೆಸಿದ ದ್ರಾವಣ ಅಥವಾ ಬೇವಿನ ಎಣ್ಣೆ 5–10 ಮೀ.ಲೀ. ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬಹುದು.

ಪ್ರಕೃತಿಗೆ ಹಾನಿಯಾಗದ ಹಾಗೆ ಅತ್ಯಂತ ಕಡಿಮೆ ರಾಸಾಯನಿಕಗಳನ್ನು ಬಳಸಿ ಕೀಟಗಳ ನಿರ್ವಹಣೆ ಮಾಡಬೇಕು ಮತ್ತು ಕೀಟಗಳ ಸಂಖ್ಯೆ ಕಡಿಮೆ ಇರುವಾಗಲೇ ಹತೋಟಿ ಕ್ರಮ ಕೈಗೊಳ್ಳುವುದು ಉತ್ತಮ. 4ಸ್ಪೀನೋಸಾಡ್ ಅಥವಾ ಫ್ಲೂಬೆಂಡಾಮೈಡ್ ಅಥವಾ ಇಂಡಾಕ್ಸಾಕಾರ್ಬ್ 0.5 ರಿಂದ 0.8 ಮಿ.ಲೀ. ಅಥವಾ ಕ್ವೀನಾಲ್ಫಾಸ್ 1 ಮೀ.ಲೀ. ಅಥವಾ ಪಾಸಲೋನ್ 1.3 ಮೀ.ಲೀ. ಯಾವುದಾದರೂ ಒಂದನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬಹುದು

ನೋಡಿ[ಬದಲಾಯಿಸಿ]

ಹೊರಗಿನ ಸಂಪರ್ಕಗಳು ಹಾಗೂ ಉಲ್ಲೇಖಗಳು[ಬದಲಾಯಿಸಿ]

"http://kn.wikipedia.org/w/index.php?title=ಟೊಮೇಟೊ&oldid=530246" ಇಂದ ಪಡೆಯಲ್ಪಟ್ಟಿದೆ