ಹಲಸು

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಹಲಸು
ಹಲಸಿನ ಮರ ಮತ್ತು ಕಾಯಿ
ಹಲಸಿನ ಮರ ಮತ್ತು ಕಾಯಿ
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: ಸಸ್ಯ
ವಿಭಾಗ: ಹೂ ಬಿಡುವ ಸಸ್ಯ
ತರಗತಿ: ಮ್ಯಾಗ್ನೋಲಿಯೊಪ್ಸಿಡ
ವರ್ಗ: ರೋಸೆಲ್ಸ್
ಕುಟುಂಬ: ಮೊರಾಸಿಯೆ
ಪ್ರಜಾತಿ: ಆರ್ಟೋಕಾರ್ಪಸ್
ಜಾತಿ: ಆರ್ಟೋಕಾರ್ಪಸ ಇಂಟೆಗ್ರಿಫೋಲಿಯ
ದ್ವಿಪದಿ ನಾಮ
Artocarpus heterophyllus
Lam.

ಹಲಸು (ತುಳು:ಪೆಲಕಾಯಿ)ನಿತ್ಯಹರಿದ್ವರ್ಣದ ದೊಡ್ಡ ಪ್ರಮಾಣದ ಮರ.ಇದು ಕರ್ನಾಟಕದ ದಕ್ಷಿಣ ಭಾಗದಲ್ಲಿ ಎಲ್ಲಾ ಕಡೆ,ಮಲೆನಾಡು ಮತ್ತು ಕರಾವಳಿಯ ಕಾಡುಗಳಲ್ಲಿಯೂ ಕೂಡಾ ವ್ಯಾಪಕವಾಗಿ ಬೆಳೆಯುತ್ತದೆ.ಇದು ವರ್ಷಪೂರ್ತಿ ದಟ್ಟನೆಯ ಕಡು ಹಸಿರು ಎಲೆಗಳನ್ನು ಹೊಂದಿದ್ದು,ಎಲೆಗಳು ೧೦ ರಿಂದ ೨೦ ಸೆ.ಮೀ ಉದ್ದವಿರುತ್ತದೆ.

ಹಲಸಿನ ಮರದ ತೊಗಟೆ

ಪರಿವಿಡಿ

[ಬದಲಾಯಿಸಿ] ಸಸ್ಯಶಾಸ್ತ್ರೀಯ ವರ್ಗೀಕರಣ

ಇದು ಮೊರಸಿಯೆಕುಟುಂಬಕ್ಕೆ ಸೇರಿದ್ದು ಆರ್ಟೋಕಾರ್ಪಸ್ ಇಂಟೆಗ್ರಿಫೋಲಿಯ(Artocarpus heterophyllus?)ವರ್ಗಕ್ಕೆ ಸೇರಿದುದಾಗಿದೆ.

[ಬದಲಾಯಿಸಿ] ವೈಶಿಷ್ಟ್ಯಗಳು

ಇದರ ಕಾಯಿ ದೊಡ್ಡದಾಗಿದ್ದು,೫ ಕಿ.ಗ್ರಾಂ.ನಿಂದ ೪೦ ಕಿ.ಗ್ರಾಂ.ಗಿಂತಲೂ ಹೆಚ್ಚು ತೂಗುತ್ತದೆ.ಹಣ್ಣಿನಲ್ಲಿ ಒಂದು ರೀತಿಯ ಮೇಣವಿರುತ್ತದೆ.ಕಾಯಿಯ ಹೊರಭಾಗ ಮುಳ್ಳಿನಿಂದ ಕೂಡಿರುತ್ತದೆ.ಹಣ್ಣಿನ ಒಳಗೆ ತುಂಬಾ ಸೊಳೆಗಳಿದ್ದು, ಸಿಹಿಯಾಗಿರುತ್ತದೆ. ಹಣ್ಣಿನಲ್ಲಿ ಎರಡು ವಿಧವಿದೆ. ೧. ಬಕ್ಕೆ ೨.ಬೊಳುವ.

[ಬದಲಾಯಿಸಿ] ಉಪಯೋಗಗಳು

ಇದರ ಹಣ್ಣಿನಿಂದ ಹಲವಾರು ಖಾದ್ಯಗಳನ್ನು ತಯಾರಿಸುತ್ತಾರೆ.ಹಣ್ಣನ್ನು ಸಂಸ್ಕರಿಸಿ ವಿದೇಶಗಳಿಗೆ ರಫ್ತು ಕೂಡಾ ಮಾಡುತ್ತಾರೆ.ಇದರ ದಾರು ಹಳದಿ ಬಣ್ಣ ಹೊಂದಿದೆ.ಒಣಗಿದಂತೆ ಕಂದು ಬಣ್ಣಕ್ಕೆ ತಿರುಗುತ್ತದೆ.ಸಾದಾರಣ ಹೊಳಪು ಬರುತ್ತದೆ.ಇದರ ಕಟ್ಟಿಗೆಯನ್ನು ಹೋಮ ಹವನಾದಿಗಳಿಗೆ ಉಪಯೋಗಿಸುತ್ತಾರೆ.

[ಬದಲಾಯಿಸಿ] ಆಧಾರ

೧.ವನಸಿರಿ:ಅಜ್ಜಂಪುರ ಕೃಷ್ಣಮೂರ್ತಿ ಇದರಿಂದ ಮನೆಯ ಉಪಯೋಗದ ಫರ್ನಿಚರ್ ಮಾಡಲು ಬಳಸುತ್ತರೆ.

"http://kn.wikipedia.org/wiki/%E0%B2%B9%E0%B2%B2%E0%B2%B8%E0%B3%81" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು