ಮಾವು
Wikipedia ಇಂದ
| ಮಾವು | |||||||||||||
|---|---|---|---|---|---|---|---|---|---|---|---|---|---|
ಮಾವಿನ ಮರ ಮತ್ತು ಕಾಯಿ
|
|||||||||||||
| ವೈಜ್ಞಾನಿಕ ವಿಂಗಡಣೆ | |||||||||||||
|
|||||||||||||
|
|
|||||||||||||
| About 35 species, including: Mangifera altissima Mangifera applanata Mangifera caesia Mangifera camptosperma Mangifera casturi Mangifera decandra Mangifera foetida Mangifera gedebe Mangifera griffithii Mangifera indica Mangifera kemanga Mangifera laurina Mangifera longipes Mangifera macrocarpa Mangifera mekongensis Mangifera odorata Mangifera pajang Mangifera pentandra Mangifera persiciformis Mangifera quadrifida Mangifera siamensis Mangifera similis Mangifera swintonioides Mangifera sylvatica Mangifera torquenda Mangifera zeylanica |
ಮಾವು (ಮ್ಯಾಗ್ನಿಫೆರ ಇಂಡಿಕ)ಉಷ್ಣವಲಯದಲ್ಲಿ ಪ್ರಪಂಚದೆಲ್ಲೆಡೆ ವ್ಯಾಪಕವಾಗಿ ಕಂಡು ಬರುವ ಮರ.ಇದರ ದಾರುವಿಗಿಂತ ಹಣ್ಣೇ ಪ್ರಸಿದ್ಢ.ಇದರ ೩೦ ಕ್ಕಿಂತಲೂ ಹೆಚ್ಚು ತಳಿಗಳು ಪ್ರಚಲಿತವಿದೆ.ಇದು ಸುಮಾರು ೪೦೦೦ ವರ್ಷಗಳಿಂದಲೂ ಭಾರತದಲ್ಲಿ ವ್ಯವಸಾಯದಲ್ಲಿದ್ದು,ಸುಮಾರು ೧೭ ಮತ್ತು ೧೮ನೇ ಶತಮಾನದಲ್ಲಿ ಯುರೋಪ್ನ ಪ್ರವಾಸಿಗರು ಇದನ್ನು ಪಶ್ಚಿಮದ ಉಷ್ಣವಲಯ ದೇಶಗಳಲ್ಲಿ ಪ್ರಸರಿಸಿದರು.
ಪರಿವಿಡಿ |
[ಬದಲಾಯಿಸಿ] ಸಸ್ಯಶಾಸ್ತ್ರೀಯ ವರ್ಗೀಕರಣ
ಮಾವು ಅನಕಾರ್ಡಿಯೆಸೆಕುಟುಂಬಕ್ಕೆ ಸೇರಿದ್ದು,ಇದರ ಸಸ್ಯಕುಲ(Genus)ಮ್ಯಾಗ್ನಿಫೆರಆಗಿರುತ್ತದೆ.ಭಾರತದಲ್ಲಿ ವ್ಯಾಪಕವಾಗಿರುವ ತಳಿ ಸಸ್ಯನಾಮ ಮ್ಯಾಗ್ನಿಫೆರ ಇಂಡಿಕ ಆಗಿದೆ.
[ಬದಲಾಯಿಸಿ] ಸಸ್ಯ ಗುಣ ಲಕ್ಷಣಗಳು
ಮಾವು ದೊಡ್ಡಪ್ರಮಾಣದ ನಿತ್ಯಹರಿದ್ವರ್ಣಮರ.ಅಚ್ಚ ಹಸಿರಿನ ದಟ್ಟವಾದ ಎಲೆಗಳು ಇದ್ದು,ಇದು ತೇವಾಂಶವಿರುವ ಮಿಶ್ರಪರ್ಣಪಾತಿ(Mixed Deciduous)ಹಾಗೂ ಅರೆ ನಿತ್ಯಹರಿದ್ವರ್ಣ(Semi evergreen)ಕಾಡುಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ.ಇಂತಹ ಕಾಡುಗಳಲ್ಲಿ ಬೆಳೆಯುವ ಮಾವು ಎತ್ತರೆವಾಗಿ ಸುಮಾರು ೬೦ ಅಡಿಗಳವರೇಗೂ ಬೆಳೆಯುತ್ತದೆ.ಇದರ ದಾರುವು ಮೃದುವಾಗಿದ್ದು ಮರಗೆಲಸಕ್ಕೆ ಸುಲಭವಾಗಿರುತ್ತದೆಯಾದರೂ ಬಾಳಿಕೆಯುತವಲ್ಲ.ಇದನ್ನು ಪದರಹಲಗೆ(plywood)ತಯಾರಿಕೆಯಲ್ಲಿ,ಕೆಲವು ತತ್ಕಾಲೀನ ಉಪಯೋಗದ ಕೆಲಸಗಳಿಗೆ ಹಲಗೆಗಳಾಗಿ ಉಪಯೋಗಿಸಬಹುದು.ಕಸಿ ಮಾಡಲ್ಪಟ್ಟ ಅನೇಕ ತಳಿಗಳು ಕೇವಲ ರುಚಿಕರ ಹಣ್ಣಿಗಾಗಿ ಬೆಳೆಸಲ್ಪಡುತ್ತವೆ.
[ಬದಲಾಯಿಸಿ] ಉಪಯೋಗಗಳು
ಮಾವಿನ ಹಣ್ಣು ಅತ್ಯಂತ ರುಚಿಕರವಾಗಿದ್ದು,ಪ್ರಪಂಚದಾದ್ಯಂತ ಬೇಡಿಕೆಯಲ್ಲಿದೆ.ಮಾವಿನ ಹಣ್ಣಿನ ಅನೇಕ ತಳಿಗಳಿದ್ದು ಪ್ರತಿವರುಷವೂ ಹೊಸತಾದ ತಳಿಗಳನ್ನು ಸೃಷ್ಟಿಸುತ್ತಲೇ ಇದ್ದಾರೆ.ಇದರಲ್ಲಿ ಹೆಚ್ಚಿನವುಗಳು ತಿನ್ನಲು ಯೋಗ್ಯವಾದವುಗಳಾಗಿದ್ದು,ಕೆಲವು ಪಾನೀಯ ತಯಾರಿಕೆ ಉಪಯುಕ್ತ.ಕಾಡು ಮಾವಿನ ಜಾತಿಗಳಲ್ಲಿ ಕೆಲವು ಉಪ್ಪಿನಕಾಯಿತಯಾರಿಕೆಗೆ ಬಳಸಲ್ಪಡುತ್ತಿದೆ.
[ಬದಲಾಯಿಸಿ] ಮಾವಿನ ತಳಿಗಳು
- ರಸಪೂರಿ
- ಮಲ್ಗೋವ
- ಬಾದಾಮ್
- ಮಲ್ಲಿಕ
- ನೆಕ್ಕರೆ
- ತೊತಾಪುರಿ
- ಅಪ್ಪೆಮಿಡಿ
- ನೀಲಂ
[ಬದಲಾಯಿಸಿ] ಆಧಾರ
೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ