ಮಂಜು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೋಡದ ರೂಪದಲ್ಲಿ ಮಂಜು

ಮಂಜು ವಾತಾವರಣದಲ್ಲಿ ಭೂಮಿಯ ಮೇಲ್ಮೈಯಲ್ಲಿ ಅಥವಾ ಅದರ ಹತ್ತಿರ ನೇತಾಡುವ, ಕಣ್ಣಿಗೆ ಕಾಣಿಸುವ ಮೋಡ ನೀರಿನ ಹನಿಗಳು ಅಥವಾ ಐಸು ಹರಳುಗಳನ್ನು ಹೊಂದಿರುತ್ತದೆ.[೧] ಮಂಜನ್ನು ಕಡಿಮೆ ಎತ್ತರದ ಮೋಡದ ಪ್ರಕಾರವೆಂದು ಪರಿಗಣಿಸಬಹುದು ಮತ್ತು ಹತ್ತಿರದ ಜಲಕಾಯಗಳು, ಸ್ಥಳಾಕೃತಿ, ಮತ್ತು ಗಾಳಿಯ ಪರಿಸ್ಥಿತಿಗಳಿಂದ ಹೆಚ್ಚು ಪ್ರಭಾವಿತವಾಗಿರುತ್ತದೆ. ಪ್ರತಿಯಾಗಿ, ಮಂಜು ಹಡಗು ರವಾನೆ, ಪ್ರಯಾಣ, ಮತ್ತು ಯುದ್ಧದಂತಹ ಅನೇಕ ಮಾನವ ಚಟುವಟಿಕೆಗಳ ಮೇಲೆ ಪ್ರಭಾವ ಬೀರಿದೆ.

ಗಾಳಿಯ ತಾಪಮಾನ ಮತ್ತು ಇಬ್ಬನಿ ಬಿಂದು ನಡುವಿನ ವ್ಯತ್ಯಾಸ 2.5 °C ಗಿಂತ ಕಡಿಮೆಯಿದ್ದಾಗ ಮಂಜಿನ ರಚನೆಯಾಗುತ್ತದೆ.

ನೀರಿನ ಆವಿಯು ಗಾಳಿಯಲ್ಲಿ ನೇತಾಡುವ ಬಹಳ ಸಣ್ಣ ದ್ರವನೀರಿನ ಹನಿಗಳಾಗಿ ಘನೀಕರಿಸಿದಾಗ ಮಂಜಿನ ರಚನೆಯಾಗುವುದು ಶುರುವಾಗುತ್ತದೆ. ನೀರಿನ ಆವಿಯು ಗಾಳಿಗೆ ಸೇರ್ಪಡೆಯಾಗುವ ಬಗೆಗಳ ಆರು ಉದಾಹರಣೆಗಳೆಂದರೆ ಮೇಲ್ಮುಖ ಚಲನೆಯ ಪ್ರದೇಶಗಳಲ್ಲಿ ಗಾಳಿಯ ಒಮ್ಮುಖವಾಗುವಿಕೆಯಿಂದ; ಮೇಲಿನಿಂದ ಬೀಳುತ್ತಿರುವ ಅವಕ್ಷೇಪನ ಅಥವಾ ವರ್ಗಾ; ಮಹಾಸಾಗರಗಳು, ಜಲಕಾಯಗಳು, ಅಥವಾ ಒದ್ದೆ ನೆಲದಿಂದ ಹಗಲಿನ ಸಮಯದ ಶಾಖ ನೀರನ್ನು ಆವಿಯಾಗಿಸುವುದರಿಂದ; ಸಸ್ಯಗಳಿಂದ ಬಾಷ್ಪವಿಸರ್ಜನೆ; ಬೆಚ್ಚಗಿನ ನೀರಿನ ಮೇಲೆ ತಂಪಾದ ಅಥವಾ ಒಣ ಗಾಳಿ ಚಲಿಸುವುದರಿಂದ; ಮತ್ತು ಪರ್ವತಗಳ ಮೇಲೆ ಮೇಲೇರುತ್ತಿರುವ ಗಾಳಿಯಿಂದ. ನೀರಿನ ಆವಿಯು ಮೋಡಗಳನ್ನು ರಚಿಸಲು ಸಾಮಾನ್ಯವಾಗಿ ಧೂಳು, ಐಸು, ಮತ್ತು ಉಪ್ಪಿನಂತಹ ಘನೀಕರಣ ಕೇಂದ್ರಗಳ ಮೇಲೆ ಘನೀಕರಿಸಲು ಆರಂಭವಾಗುತ್ತದೆ. ಅದರ ಎತ್ತರದ ಸಂಬಂಧಿ ಮೋಡಪದರದಂತೆ, ಮಂಜು ತಂಪಾದ, ಸ್ಥಿರ ವಾಯು ದ್ರವ್ಯರಾಶಿಯು ಬೆಚ್ಚಗಿನ ವಾಯು ದ್ರವ್ಯರಾಶಿಯ ಕೆಳಗೆ ಸಿಕ್ಕಿಹಾಕಿಕೊಂಡಾಗ ರೂಪಗೊಳ್ಳುವ ಪ್ರವೃತ್ತಿ ಹೊಂದಿರುವ ಸ್ಥಿರ ಮೋಡ ರಾಶಿಯಾಗಿದೆ.

ಹನಿಗಳ ಸಾರತೆಯನ್ನು ಅವಲಂಬಿಸಿ, ಮಂಜಿನಲ್ಲಿ ಗೋಚರತೆಯು ಮುಸುಕಿನ ಕಾಣುವಿಕೆಯಿಂದ ಹಿಡಿದು ಬಹುತೇಕ ಶೂನ್ಯ ಗೋಚರತೆವರೆಗೆ ಇರಬಹುದು. ಬಹು ವಾಹನ ಢಿಕ್ಕಿಗಳು ಸೇರಿದಂತೆ, ವಿಶ್ವಾದ್ಯಂತ ಹೆದ್ದಾರಿಗಳ ಮೇಲಿನ ಮಂಜಿನ ಪರಿಸ್ಥಿತಿಗಳಿಂದಾಗುವ ಅಪಘಾತಗಳಿಂದ ಪ್ರತಿ ವರ್ಷ ಅನೇಕ ಜೀವಗಳು ಹೋಗುತ್ತವೆ. ವಾಯುಯಾನ ಪ್ರಯಾಣ ಉದ್ಯಮವು ಮಂಜು ಪರಿಸ್ಥಿತಿಗಳ ತೀವ್ರತೆಯಿಂದ ಪ್ರಭಾವಿತವಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. "The international definition of fog consists of a suspended collection of water droplets or ice crystal near the Earth's surface ..." Fog and Boundary Layer Clouds: Fog Visibility and Forecasting. Gultepe, Ismail, ed. Reprint from Pure and Applied Geophysics Vol 164 (2007) No. 6-7. ISBN 978-3-7643-8418-0. p. 1126; see Google Books Accessed 2010-08-01.
"https://kn.wikipedia.org/w/index.php?title=ಮಂಜು&oldid=799018" ಇಂದ ಪಡೆಯಲ್ಪಟ್ಟಿದೆ