ಒರಿಸ್ಸಾ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಒರಿಸ್ಸಾ
Map of India with the location of ಒರಿಸ್ಸಾ highlighted.
ರಾಜಧಾನಿ
 - ಸ್ಥಾನ
ಭುವನೇಶ್ವರ್
 - 20.15° N 85.50° E
ಅತಿ ದೊಡ್ಡ ನಗರ ಭುವನೇಶ್ವರ್
ಜನಸಂಖ್ಯೆ (2001)
 - ಸಾಂದ್ರತೆ
36,706,920 (11th)
 - 236/km²
ವಿಸ್ತೀರ್ಣ
 - ಜಿಲ್ಲೆಗಳು
155,707 km² (9th)
 - 30
ಸಮಯ ವಲಯ IST (UTC+5:30)
ಸ್ಥಾಪನೆ
 - ರಾಜ್ಯಪಾಲ
 - ಮುಖ್ಯ ಮಂತ್ರಿ
 - ಶಾಸನಸಭೆ (ಸ್ಥಾನಗಳು)
ಜನವರಿ ೧, ೧೯೪೯
 - ಮುರಳೀಧರ ಚಂದ್ರಕಾಂತ್ ಬಂಡಾರೆ
 - ನವೀನ್ ಪಟ್ನಾಯಕ್
 - Unicameral (147)
ಅಧಿಕೃತ ಭಾಷೆ(ಗಳು) ಒರಿಯಾ
Abbreviation (ISO) IN-OR
ಅಂತರ್ಜಾಲ ತಾಣ: www.orissa.gov.in
Orissa Logo.gif

ಒರಿಸ್ಸಾ ರಾಜ್ಯದ ಮುದ್ರೆ

ಒರಿಸ್ಸಾ - ಭಾರತದ ಆಗ್ನೇಯ ತೀರದಲ್ಲಿರುವ ರಾಜ್ಯ. ಈ ರಾಜ್ಯದ ರಾಜಧಾನಿ ಭುವನೇಶ್ವರ. ಮಹಾಭಾರತದ ಕಾಲದಲ್ಲಿ "ಕಳಿಂಗ" ಎಂದು ಪ್ರಖ್ಯಾತವಾದ ನಾಡು ಇಂದಿನ ಒರಿಸ್ಸ. ಒರಿಸ್ಸಾ ಬ್ರಿಟೀಷ್ ಇಂಡಿಯಾದ ಒಂದು ಪ್ರಾಂತ್ಯವಾಗಿ ೧ ಎಪ್ರಿಲ್ ೧೯೩೬ರಲ್ಲಿ ರಚಿಸಲಾಯಿತು ಮತ್ತು ಮುಖ್ಯವಾಗಿ ಒರಿಯಾ ಮಾತಾಡುವ ಜನರಿಂದ ಕೂಡಿತ್ತು. ಆದ್ದರಿಂದ ೧ ಎಪ್ರಿಲ್ ಅನ್ನು ಉತ್ಕಲ ದಿವಸವನ್ನಾಗಿ ಆಚರಿಸಲಾಗುತ್ತದೆ.

ಒರಿಸ್ಸಾ ವಿಸ್ತೀರ್ಣದಲ್ಲಿ ಭಾರತದ ಒಂಬತ್ತನೆಯ ಅತಿ ದೊಡ್ಡ ರಾಜ್ಯವಾಗಿದೆ ಹಾಗು ಜನಸಂಖ್ಯೆಯಲ್ಲಿ ಹನ್ನೊಂದನೆಯ ಅತಿ ದೊಡ್ಡ ರಾಜ್ಯವಾಗಿದೆ. ಒರಿಯಾ ರಾಜ್ಯದ ಆಡಳಿತ ಭಾಷೆಯಾಗಿದೆ ಹಾಗು ಅತಿ ಹೆಚ್ಚು ಉಪಯೋಗಿಸಲ್ಪಡುವ ಭಾಷೆಯಾಗಿದೆ. ಒರಿಸ್ಸಾ ತುಲನಾತ್ಮಕವಾಗಿ ಸಮತಟ್ಟಾದ ಕರಾವಳಿಯನ್ನು (ಸುಮಾರು ೪೮೦ಕಿ.ಮೀ.) ಹೊಂದಿದೆ ಪಾರಾದೀಪ್ ನಲ್ಲಿ ಪ್ರಮುಖ ಬಂದರನ್ನು ಹೊಂದಿದೆ. ಕಡಮೆಯಗಲದ ಸಮತಟ್ಟಾದ ಕರಾವಳಿಯು ಹಾಗು ಮಹಾನದಿಯ ಮುಖಜ ಭೂಮಿಯು ಬಹುಪಾಲು ಜನಸಂಖ್ಯೆಗೆ ಆಶ್ರಯವಾಗಿದೆ. ಒರಿಸ್ಸಾದ ಒಳನಾಡು ಗುಡ್ಡಗಾಡುಗಳಿಂದ ಕೂಡಿದ್ದು ನಿಬಿಡವಲ್ಲದಾಗಿದೆ. ರಾಜ್ಯದ ಅತಿ ಎತ್ತರದ ಸ್ಥಳ ದೇವಮಾಲಿಯಾಗಿದೆ. ಜಗತ್ತಿನ ಅತಿ ಉದ್ದವಾದ ಅಣೆಕಟ್ಟುಗಳಲ್ಲಿ ಒಂದಾದ ಹಿರಾಕುಡ್ ಅಣೆಕಟ್ಟು ಒರಿಸ್ಸಾದಲ್ಲಿದೆ.

ಒರಿಸ್ಸಾ ತೀವ್ರವಾದ ಚಂಡಮಾರುತಗಳಿಗೀಡಾಗಿದೆ. ಪ್ರಸ್ತುತ ಈ ರಾಜ್ಯಕ್ಕೆ ಒಡಿಸ್ಸಾ ಎಂದು ಮರುನಾಮಕರಣ ಮಾಡಲಾಗಿದೆ.








"http://kn.wikipedia.org/w/index.php?title=ಒರಿಸ್ಸಾ&oldid=258555" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು