ತಮಿಳುನಾಡು
Wikipedia ಇಂದ
| ತಮಿಳುನಾಡು | |
| ರಾಜಧಾನಿ - ಸ್ಥಾನ |
ಚೆನ್ನೈ - |
| ಅತಿ ದೊಡ್ಡ ನಗರ | ಚೆನ್ನೈ |
| ಜನಸಂಖ್ಯೆ (2004) - ಸಾಂದ್ರತೆ |
62,405,679 (6ನೇ) - 478/km² |
| ವಿಸ್ತೀರ್ಣ - ಜಿಲ್ಲೆಗಳು |
130,058 km² (11ನೇ) - 30 |
| ಸಮಯ ವಲಯ | IST (UTC+5:30) |
| ಸ್ಥಾಪನೆ - ರಾಜ್ಯಪಾಲ - ಮುಖ್ಯ ಮಂತ್ರಿ - ಶಾಸನಸಭೆ (ಸ್ಥಾನಗಳು) |
ನವೆಂಬರ್ ೧,೧೯೫೬ - ಸುರ್ಜಿತ್ ಸಿಂಗ್ ಬರ್ನಾಲ - ಎಮ್. ಕರುಣಾನಿಧಿ - Unicameral (235) |
| ಅಧಿಕೃತ ಭಾಷೆ(ಗಳು) | ತಮಿಳು |
| Abbreviation (ISO) | IN-TN |
| ಅಂತರ್ಜಾಲ ತಾಣ: www.tn.gov.in | |
|
ತಮಿಳುನಾಡು ರಾಜ್ಯದ ಮುದ್ರೆ |
|
ತಮಿಳುನಾಡು ಭಾರತದ ದಕ್ಷಿಣ ತುದಿಯಲ್ಲಿರುವ ರಾಜ್ಯ. ಚೆನ್ನೈ ತಮಿಳುನಾಡಿನ ರಾಜಧಾನಿ ಮತ್ತು ಅತಿ ದೊಡ್ಡ ನಗರವಾಗಿದೆ. ಇದಕ್ಕೆ ಹೊಂದಿಕೊಂಡಿರುವ ಪ್ರದೇಶಗಳೆಂದರೆ ಪಾಂಡಿಚೆರಿ, ಕೇರಳ, ಕರ್ನಾಟಕ ಮತ್ತು ಆಂಧ್ರ ಪ್ರದೇಶ. ದಕ್ಷಿಣಪೂರ್ವಕ್ಕೆ ಹಿಂದೂ ಮಹಾಸಾಗರದಲ್ಲಿ ಶ್ರೀಲಂಕಾ ರಾಷ್ಟ್ರವಿದೆ. ತಮಿಳುನಾಡು ಉತ್ತರದಲ್ಲಿ ಪೂರ್ವ ಘಟ್ಟಗಳಿಂದ, ಪಶ್ಚಿಮದಲ್ಲಿ ನೀಲ್ಗಿರಿ, ಆನಮಲೈ ಹಾಗು ಪಾಲಕ್ಕಾಡಿನಿಂದ, ಪೂರ್ವದಲ್ಲಿ ಬಂಗಾಳ ಕೊಲ್ಲಿಯಿಂದ, ಆಗ್ನೇಯದಲ್ಲಿ ಮನ್ನಾರ್ ಖಾರಿ, ಪಾಲ್ಕ್ ಜಲಸಂಧಿಯಿಂದ, ದಕ್ಷಿಣದಲ್ಲಿ ಹಿಂದು ಮಹಾಸಾಗರದಿಂದ ಸುತ್ತುವರೆಯಲ್ಪಟ್ಟಿದೆ.
ತಮಿಳುನಾಡು ವಿಸ್ತೀರ್ಣದಲ್ಲಿ ಭಾರತದ ಹನ್ನೊಂದನೆಯ ಅತಿ ದೊಡ್ಡ ರಾಜ್ಯವಾಗಿದೆ ಹಾಗು ಜನಸಂಖ್ಯೆಯಲ್ಲಿ ಏಳನೆಯ ಅತಿ ದೊಡ್ಡ ರಾಜ್ಯವಾಗಿದೆ. ತಮಿಳುನಾಡು ನಿವ್ವಳ ದೇಶೀಯ ಉತ್ಪನ್ನಕ್ಕೆ ಐದನೆಯ ಅತಿ ದೊಡ್ಡ ಕೊಡುಗೆ ನೀಡುವ ರಾಜ್ಯವಾಗಿದೆ ತಮಿಳುನಾಡು ಭಾರತದಲ್ಲಿ ಅತಿ ಹೆಚ್ಚು(೧೦.೫೬%) ವ್ಯಾಪಾರ ಉದ್ಯಮಗಳನ್ನು ಹೊಂದಿದೆ.
ಈ ಪ್ರದೇಶವು ಕನಿಷ್ಠ ಪಕ್ಷ ಕ್ರಿ.ಪೂ. ೧೫೦೦ದಿಂದ ತಮಿಳು ನಾಗರಿಕತೆಗೆ ನೆಲೆಬೀಡಾಗಿದೆ. ಇದಕ್ಕೆ ಆದಿಚನಲ್ಲೂರಲ್ಲಿ ಹಾಗು ಅದರ ಸುತ್ತಮುತ್ತಲು ಇರುವ ಪುರಾತತ್ವ ನಿವೇಶನಗಳೇ ಸಾಕ್ಷಿ. ಶಾಸ್ತ್ರೀಯ ಭಾಷೆಯಾದ ತಮಿಳು ಭಾಷೆಯು ಸುಮಾರು ೨೫೦೦ ವರ್ಷಗಳಿಂದ ಶಾಸನಗಳಲ್ಲಿ ಹಾಗು ಸಾಹಿತ್ಯದಲ್ಲಿ ಉಪಯೋಗಿಸಲ್ಪಡುತ್ತಿದೆ. ತಮಿಳುನಾಡು ಹಲವು ನೈಸರ್ಗಿಕ ಸಂಪನ್ಮೂಲಗಳಿಗೆ, ದ್ರಾವಿಡ ವಾಸ್ತುಶಿಲ್ಪ ಶೈಲಿಯ ಭವ್ಯವಾದ ಹಿಂದು ದೇವಾಲಯಗಳಿಗೆ, ಗಿರಿಧಾಮಗಳಿಗೆ, ಸಮುದ್ರತೀರದ ವಿಹಾರಧಾಮಗಳಿಗೆ, ತೀರ್ಥಯಾತ್ರಾ ಸ್ಥಳಗಳಿಗೆ ಹಾಗು ಐದು ಯುನೆಸ್ಕೋ ವಿಶ್ವ ಪಾರಂಪರಿಕ ನಿವೇಶನಗಳಿಗೆ ಬೀಡಾಗಿದೆ.
[ಬದಲಾಯಿಸಿ] ಶಿಕ್ಷಣ
[ಬದಲಾಯಿಸಿ] ಉಲ್ಲೇಖಗಳು
- ತಮಿಳುನಾಡು (ವಿಕಿಪೀಡಿಯ ಇಂಗ್ಲೀಷ್). ಮರುಕಳಿಸಿದ ದಿನಾಂಕ ೧೦ ಸೆಪ್ಟೆಂಬರ್ ೨೦೦೯.
ದಕ್ಷಿಣ ಭಾರತದ ರಾಜ್ಯಗಳುಕರ್ನಾಟಕ | ಆಂಧ್ರ ಪ್ರದೇಶ | ತಮಿಳುನಾಡು | ಕೇರಳ |
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ರಾಜ್ಯ
ಅರುಣಾಚಲ ಪ್ರದೇಶ | ಅಸ್ಸಾಂ | ಆಂಧ್ರ ಪ್ರದೇಶ | ಉತ್ತರ ಪ್ರದೇಶ | ಉತ್ತರಾಖಂಡ | ಒರಿಸ್ಸಾ | ಕರ್ನಾಟಕ | ಕೇರಳ | ಗುಜರಾತ್ | ಗೋವ | ಛತ್ತೀಸ್‍ಘಡ್ | ಜಮ್ಮು ಮತ್ತು ಕಾಶ್ಮೀರ | ಝಾರ್ಖಂಡ್ | ತಮಿಳುನಾಡು | ತ್ರಿಪುರ | ನಾಗಲ್ಯಂಡ್ | ಪಂಜಾಬ್ | ಪಶ್ಚಿಮ ಬಂಗಾಳ | ಬಿಹಾರ | ಮಣಿಪುರ | ಮಧ್ಯ ಪ್ರದೇಶ | ಮಹಾರಾಷ್ಟ್ರ | ಮಿಝೋರಂ | ಮೆಘಾಲಯ | ರಾಜಸ್ಥಾನ | ಸಿಕ್ಕಿಂ | ಹರಿಯಾಣ | ಹಿಮಾಚಲ ಪ್ರದೇಶ
ಕೇಂದ್ರಾಡಳಿತ ಪ್ರದೇಶಗಳು
ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು | ಚಂಡೀಗಡ | ದಮನ್ ಮತ್ತು ದಿಯು | ದಾದ್ರ ಮತ್ತು ನಗರ್ ಹವೆಲಿ | ಪುದುಚೇರಿ | ಲಕ್ಷದ್ವೀಪ | ದೆಹಲಿ (ರಾಷ್ಟ್ರೀಯ ಮುಖ್ಯ ಕ್ಷೇತ್ರ)