ಕುದರಿ ಸಾಲವಾಡಗಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕುದರಿ ಸಾಲವಾಡಗಿ
ಕುದರಿ ಸಾಲವಾಡಗಿ
village
Population
 (೨೦೧೨)
 • Total೧೫೦೦

ಕುದರಿ ಸಾಲವಾಡಗಿ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿದೆ.

ಭೌಗೋಳಿಕ[ಬದಲಾಯಿಸಿ]

ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಹವಾಮಾನ[ಬದಲಾಯಿಸಿ]

  • ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು
  • ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
  • ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
  • ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.

ಜನಸಂಖ್ಯೆ[ಬದಲಾಯಿಸಿ]

ಗ್ರಾಮದಲ್ಲಿ ಜನಸಂಖ್ಯೆ(2011) ಸುಮಾರು 8,128 ಇದೆ. ಅದರಲ್ಲಿ 4,203 ಪುರುಷರು ಮತ್ತು 3,925 ಮಹಿಳೆಯರು ಇದ್ದಾರೆ.

ಸಾಂಸ್ಕೃತಿಕ[ಬದಲಾಯಿಸಿ]

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಕಲೆ ಮತ್ತು ಸಂಸ್ಕೃತಿ[ಬದಲಾಯಿಸಿ]

ಉತ್ತರ ಕರ್ನಾಟಕದ ಊಟ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.

ಧರ್ಮ[ಬದಲಾಯಿಸಿ]

ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.

ಭಾಷೆ[ಬದಲಾಯಿಸಿ]

ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.

ದೇವಾಲಯ[ಬದಲಾಯಿಸಿ]

  • ಶ್ರೀ ಮಹಾಲಕ್ಷ್ಮಿ ದೇವಾಲಯ
  • ಶ್ರೀ ದುರ್ಗಾದೇವಿ ದೇವಾಲಯ
  • ಶ್ರೀ ಮಲ್ಲಿಕಾರ್ಜುನ ದೇವಾಲಯ
  • ಶ್ರೀ ಬಸವೇಶ್ವರ ದೇವಾಲಯ
  • ಶ್ರೀ ವೆಂಕಟೇಶ್ವರ ದೇವಾಲಯ
  • ಶ್ರೀ ಪಾಂಡುರಂಗ ದೇವಾಲಯ
  • ಶ್ರೀ ಹಣಮಂತ ದೇವಾಲಯ

ಮಸೀದಿ[ಬದಲಾಯಿಸಿ]

ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ನೀರಾವರಿ[ಬದಲಾಯಿಸಿ]

ಗ್ರಾಮದ ಪ್ರತಿಶತ 50 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಕೃಷಿ ಮತ್ತು ತೋಟಗಾರಿಕೆ[ಬದಲಾಯಿಸಿ]

ಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು ೭೫% ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ ಕೇವಲ ೧೫% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ ೮೫% ಭೂಮಿ ಮಳೆಯನ್ನೇ ಅವಲಂಭಿಸಿದೆ.

ಆರ್ಥಿಕತೆ[ಬದಲಾಯಿಸಿ]

ಗ್ರಾಮದಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ.

ಉದ್ಯೋಗ[ಬದಲಾಯಿಸಿ]

ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.

ಬೆಳೆ[ಬದಲಾಯಿಸಿ]

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಸಸ್ಯ[ಬದಲಾಯಿಸಿ]

ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.

ಪ್ರಾಣಿ[ಬದಲಾಯಿಸಿ]

ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.

ಹಬ್ಬ[ಬದಲಾಯಿಸಿ]

ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಶಿಕ್ಷಣ[ಬದಲಾಯಿಸಿ]

  • ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುದರಿ ಸಾಲವಾಡಗಿ
  • ಸರ್ಕಾರಿ ಪ್ರೌಢ ಶಾಲೆ, ಕುದರಿ ಸಾಲವಾಡಗಿ
  • ಸರಕಾರಿ ಆಶ್ರಮ ಶಾಲೆ, ಕುದರಿ ಸಾಲವಾಡಗಿ

ಸಾಕ್ಷರತೆ[ಬದಲಾಯಿಸಿ]

ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.

ರಾಜಕೀಯ[ಬದಲಾಯಿಸಿ]

ಗ್ರಾಮವು ವಿಜಯಪುರ ಲೋಕಸಭಾ ಕ್ಷೇತ್ರ ಮತ್ತು ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.

ಗ್ರಾಮದ ಮುಖಂಡರಾದ ದಿ.ಕುಮಾರಗೌಡ ಪಾಟೀಲರು ಮಾಜಿ ಶಾಸಕರು. ಅದರಂತೆ ರಾಜುಗೌಡ(ಭೀಮನಗೌಡ) ಬಸನಗೌಡ ಪಾಟೀಲ ರಾಜಕೀಯ ಧುರೀಣರಾಗಿದ್ದಾರೆ.

ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ದೇವರ ಹಿಪ್ಪರಗಿ ಮತಕ್ಷೇತ್ರ(2018)ದಲ್ಲಿ 1,07,407 ಪುರುಷರು, 99,773 ಮಹಿಳೆಯರು ಸೇರಿ ಒಟ್ಟು 2,07,180 ಮತದಾರರಿದ್ದಾರೆ.

ಕ್ಷೇತ್ರದ ಇತಿಹಾಸ

ಪುಣ್ಯಕ್ಷೇತ್ರವಾಗಿ ಪ್ರಸಿದ್ಧಿ ಪಡೆದ ದೇವರ ಹಿಪ್ಪರಗಿ ಗ್ರಾಮ ವಿಜಯಪುರ - ಗುಲ್ಬರ್ಗಾ ಹೆದ್ದಾರಿಯಲ್ಲಿದೆ. ಮೂರು ತಾಲೂಕುಗಳನ್ನೊಳಗೊಂಡಿರೋ ಈ ವಿಧಾನಸಭಾ ಕ್ಷೇತ್ರವಾಗಿದೆ. 2008ರಲ್ಲಿ ಈ ಕ್ಷೇತ್ರದ ಹೆಸರು ದೇವರ ಹಿಪ್ಪರಗಿ ಎಂದು ಬದಲಾಯಿತು. ಮುಂಚೆ ಹೂವಿನಹಿಪ್ಪರಗಿ ಕ್ಷೇತ್ರವಾಗಿತ್ತು. ಬಸವನ ಬಾಗೇವಾಡಿ ತಾಲ್ಲೂಕಿನ ನಿಡಗುಂದಿ ಹೋಬಳಿ ಕೈಬಿಟ್ಟು, ಸಿಂದಗಿ ತಾಲ್ಲೂಕಿನ ದೇವರ ಹಿಪ್ಪರಗಿ ಹೋಬಳಿಯನ್ನು ಈ ಕ್ಷೇತ್ರದಲ್ಲಿ ಸೇರಿಸಲಾಯಿತು.

ತಾಳಿಕೋಟೆ ಕ್ಷೇತ್ರದ ಭಾಗವಾಗಿದ್ದ ಹಳ್ಳಿಗಳೆಲ್ಲ ಸೇರಿ 1967ರಲ್ಲಿ ರಚನೆಗೊಂಡ ಹೂವಿನಹಿಪ್ಪರಗಿ ಕ್ಷೇತ್ರ, 2008ರ ಕ್ಷೇತ್ರ ಮರುವಿಂಗಡಣೆ ಹಂತದಲ್ಲಿ ದೇವರಹಿಪ್ಪರಗಿ ಕ್ಷೇತ್ರವಾಗಿ ರೂಪುಗೊಂಡಿದೆ. 11 ಚುನಾವಣೆ ಕಂಡಿರುವ ಈ ಕ್ಷೇತ್ರದಲ್ಲಿ ಐದು ಬಾರಿ ಶಾಸಕರಾಗಿ, ಸಚಿವರಾಗಿ ಅಧಿಕಾರ ನಡೆಸಿದ ಬಿ.ಎಸ್‌. ಪಾಟೀಲ ಸಾಸನೂರ ಅವರು ಕ್ಷೇತ್ರದ ಅರ್ಧ ಸಮಯವನ್ನು ತಾವೇ ವಿಧಾನಸಭೆಯಲ್ಲಿ ಕಳೆದಿದ್ದಾರೆ. ಜನತಾಪಕ್ಷ ಶಾಸಕರಾಗಿ ರಾಜಕೀಯ ಆರಂಭಿಸಿದ್ದ ಬಿ.ಎಸ್‌. ಪಾಟೀಲ ಸಾಸನೂರು ನಂತರ ನಾಲ್ಕು ಬಾರಿ ಕಾಂಗ್ರೆಸ್‌ ಪಕ್ಷ ಶಾಸಕರಾಗಿ ಒಟ್ಟು ಐದು ಬಾರಿ ವಿಧಾನಸಭೆಯಲ್ಲಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಎ.ಎಸ್.ಪಾಟೀಲ(ನಡಹಳ್ಳಿ) ಸತತ 2013 ಮತ್ತು 2008ರಲ್ಲಿ ಎರಡು ಬಾರಿ ಗೆದ್ದಿದ್ದಾರೆ. ಬಿ.ಎಸ್.ಪಾಟೀಲ(ಸಾಸನೂರ)ರು ಒಟ್ಟು 6 ಸಲ ಸ್ಪರ್ಧಿಸಿ 4 ಬಾರಿ ಆಯ್ಕೆಯಾಗಿ ವೀರಪ್ಪ ಮೊಯಿಲಿ ಅವರ ಸಂಪುಟದಲ್ಲಿ ಆರೋಗ್ಯ ಖಾತೆ ಹಾಗೂ ಎಸ್.ಎಂ. ಕೃಷ್ಣ ಸಂಪುಟದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾಗಿದ್ದರು. ಶಿವಪುತ್ರಪ್ಪ ದೇಸಾಯಿ ಅವರು ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಭೂಸೇನಾ ಮತ್ತು ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದರು. ಶಿವಪುತ್ರಪ್ಪ ದೇಸಾಯಿ 5 ಬಾರಿ ಸ್ಪರ್ಧಿಸಿ 3 ಬಿ.ಎಸ್.ಪಾಟೀಲ(ಸಾಸನೂರ)ನ್ನು ಸೋಲಿಸಿ ಆಯ್ಕೆಯಾಗಿದ್ದು ಹಾಗೂ ಇಬ್ಬರು ಸಂಬಂಧಿಕರಾಗಿದ್ದು ವಿಶೇಷವಾಗಿದೆ. ಶಿವಪುತ್ರಪ್ಪ ದೇಸಾಯಿಯವರು ಉಗ್ರಾಣ ನಿಗಮದ ಮಾಜಿ ಅಧ್ಯಕ್ಷರು. 1978ರಿಂದ 2004ವರೆಗೆ ಶಿವಪುತ್ರಪ್ಪ ದೇಸಾಯಿ ಹಾಗೂ ಬಿ.ಎಸ್.ಪಾಟೀಲ(ಸಾಸನೂರ) ನಡುವೆ ಸ್ಪರ್ಧೆ ಏರ್ಪಟ್ಟಿತ್ತು.

ಬಿ.ಎಸ್.ಪಾಟೀಲ(ಸಾಸನೂರ) 1978ರಲ್ಲಿ ಜನತಾ ಪಕ್ಷದಿಂದ ಹಾಗೂ 1983ರಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. ನಂತರ 1986ರಲ್ಲಿ ಚುನಾವಣೆ ಎದುರಾಯಿತು. ಇದು ಮಾವ-ಅಳಿಯನ ಆಖಾಡಕ್ಕೆ ಸಾಕ್ಷಿಯಾಗಿತ್ತು. ಜನತಾ ಪಕ್ಷದಿಂದ ಸ್ಪರ್ಧಿಸಿದ ಅಳಿಯ ಶಿವಪುತ್ರಪ್ಪ ದೇಸಾಯಿ, ಮಾವ ಸಾಸನೂರ ಅವರ ಹ್ಯಾಟ್ರಿಕ್ ಸಾಧನೆಗೆ ಬ್ರೇಕ್ ನೀಡಿದ್ದರು. ಮತ್ತೆ 1989ರಲ್ಲಿ ಮಾವ ಬಿ.ಎಸ್.ಪಾಟೀಲ(ಸಾಸನೂರ) ಅಳಿಯ ಶಿವಪುತ್ರಪ್ಪ ದೇಸಾಯಿ ಅವರನ್ನು 15395 ಮತಗಳಿಂದ ಪರಾಭವಗೊಳಿಸಿದ್ದರು. ನಂತರ 1994ರಲ್ಲಿ ಅದೇ ಪಕ್ಷದಿಂದ ಶಿವಪುತ್ರಪ್ಪ ದೇಸಾಯಿ ತಮ್ಮ ಮಾವನನ್ನು 12427 ಮತಗಳಿಂದ ಸೋಲಿಸಿದರು. 1999ರಲ್ಲಿ ಎದುರಾದ ಚುನಾವಣೆಯಲ್ಲಿ ಪುನಃ ಬಿ.ಎಸ್.ಪಾಟೀಲ(ಸಾಸನೂರ) ಅಳಿಯನನ್ನು ಪರಾಭಗೊಳಿಸಿದರೆ, 2004ರಲ್ಲಿ ನಡೆದ ಚುನಾವಣೆಯಲ್ಲಿ ಮುಯ್ಯಿಗೆ ಮುಯ್ಯಿ ಎಂಬಂತೆ ಶಿವಪುತ್ರಪ್ಪ ದೇಸಾಯಿ ಅವರು ಮತ್ತೆ ಮಾವನನ್ನು ಸೋಲಿಸಿದ್ದರು.

ಕ್ಷೇತ್ರದ ವಿಶೇಷತೆ

  • ಬಸವನ ಬಾಗೇವಾಡಿ, ಸಿಂದಗಿ ಮತ್ತು ಮುದ್ದೇಬಿಹಾಳ ಮೂರು ತಾಲೂಕುಗಳನ್ನೊಳಗೊಂಡಿರೋ ವಿಧಾನಸಭಾ ಕ್ಷೇತ್ರವಾಗಿದೆ.
  • ಬಿ.ಎಸ್.ಪಾಟೀಲ(ಸಾಸನೂರ)ರು ವೀರಪ್ಪ ಮೊಯಿಲಿ ಅವರ ಸಂಪುಟದಲ್ಲಿ ಆರೋಗ್ಯ ಖಾತೆ ಹಾಗೂ ಎಸ್.ಎಂ. ಕೃಷ್ಣ ಸಂಪುಟದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾಗಿದ್ದರು.
  • ಶಿವಪುತ್ರಪ್ಪ ದೇಸಾಯಿ ಅವರು ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಭೂಸೇನಾ ನಿಗಮ ಮತ್ತು ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದರು.
  • ಶಿವಪುತ್ರಪ್ಪ ದೇಸಾಯಿ ಮತ್ತು ಬಿ.ಎಸ್.ಪಾಟೀಲ(ಸಾಸನೂರ)ರು ಮಾವ-ಅಳಿಯನ ಆಖಾಡಕ್ಕೆ ಸಾಕ್ಷಿಯಾಗಿತ್ತು.
  • ಬಿ.ಎಸ್.ಪಾಟೀಲ(ಸಾಸನೂರ)ರು ಒಟ್ಟು 6 ಸಲ ಸ್ಪರ್ಧಿಸಿ 4 ಬಾರಿ ಆಯ್ಕೆಯಾಗಿದ್ದಾರೆ.
  • ಶಿವಪುತ್ರಪ್ಪ ದೇಸಾಯಿಯವರು ಒಟ್ಟು 5 ಸಲ ಸ್ಪರ್ಧಿಸಿ 3 ಬಾರಿ ಆಯ್ಕೆಯಾಗಿದ್ದಾರೆ. ಒಟ್ಟಾರೆಯಾಗಿ 1978 - 2008ರವರೆಗೆ ಸುಮಾರು 3 ದಶಕಗಳ ಕಾಲ ಮಾವ-ಅಳಿಯನ ಆಖಾಡಕ್ಕೆ ಸಾಕ್ಷಿಯಾಗಿತ್ತು.
  • ಎ.ಎಸ್.ಪಾಟೀಲ(ನಡಹಳ್ಳಿ) ಸತತ 2008 ಮತ್ತು 2013ರಲ್ಲಿ ಎರಡು ಬಾರಿ ಗೆದ್ದಿದ್ದಾರೆ.

ಜನಪ್ರತಿನಿಧಿಗಳ ವಿವರ

ವರ್ಷ ವಿಧಾನ ಸಭಾ ಕ್ಷೆತ್ರ ವಿಜೇತ ಪಕ್ಷ ಮತಗಳು ಉಪಾಂತ ವಿಜೇತ ಪಕ್ಷ ಮತಗಳು
ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ ಕರ್ನಾಟಕ ರಾಜ್ಯ
2018 ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ ಸೋಮನಗೌಡ ಪಾಟೀಲ ಬಿ.ಜೆ.ಪಿ 48245 ರಾಜುಗೌಡ ಪಾಟೀಲ ಜೆ.ಡಿ.ಎಸ್. 44892
2013 ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ ಎ.ಎಸ್.ಪಾಟೀಲ(ನಡಹಳ್ಳಿ) ಕಾಂಗ್ರೇಸ್ 36231 ಸೋಮನಗೌಡ ಪಾಟೀಲ ಬಿ.ಜೆ.ಪಿ 28135
2008 ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ ಎ.ಎಸ್.ಪಾಟೀಲ(ನಡಹಳ್ಳಿ) ಕಾಂಗ್ರೇಸ್ 54879 ಬಸನಗೌಡ ಪಾಟೀಲ(ಯತ್ನಾಳ) ಬಿ.ಜೆ.ಪಿ 23986
2004 ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರ ಶಿವಪುತ್ರಪ್ಪ ದೇಸಾಯಿ ಬಿ.ಜೆ.ಪಿ 39224 ಬಿ.ಎಸ್.ಪಾಟೀಲ(ಸಾಸನೂರ) ಕಾಂಗ್ರೇಸ್ 32927
1999 ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರ ಬಿ.ಎಸ್.ಪಾಟೀಲ(ಸಾಸನೂರ) ಕಾಂಗ್ರೇಸ್ 46088 ಶಿವಪುತ್ರಪ್ಪ ದೇಸಾಯಿ ಜೆ.ಡಿ.ಯು 28492
1994 ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರ ಶಿವಪುತ್ರಪ್ಪ ದೇಸಾಯಿ ಜೆ.ಡಿ. 35849 ಬಿ.ಎಸ್.ಪಾಟೀಲ(ಸಾಸನೂರ) ಕಾಂಗ್ರೇಸ್ 23422
1989 ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರ ಬಿ.ಎಸ್.ಪಾಟೀಲ(ಸಾಸನೂರ) ಕಾಂಗ್ರೇಸ್ 36588 ಶಿವಪುತ್ರಪ್ಪ ದೇಸಾಯಿ ಜೆ.ಡಿ. 21193
1985 ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರ ಶಿವಪುತ್ರಪ್ಪ ದೇಸಾಯಿ ಜೆ.ಎನ್.ಪಿ 31748 ಬಿ.ಎಸ್.ಪಾಟೀಲ(ಸಾಸನೂರ) ಕಾಂಗ್ರೇಸ್ 27949
1983 ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರ ಬಿ.ಎಸ್.ಪಾಟೀಲ(ಸಾಸನೂರ) ಕಾಂಗ್ರೇಸ್ 30320 ಬಸನಗೌಡ ಲಿಂಗನಗೌಡ ಪಾಟೀಲ ಜೆ.ಎನ್.ಪಿ 17872
1978 ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರ ಬಿ.ಎಸ್.ಪಾಟೀಲ(ಸಾಸನೂರ) ಜೆ.ಎನ್.ಪಿ 26814 ಕುಮಾರಗೌಡ ಪಾಟೀಲ ಕಾಂಗ್ರೇಸ್(ಐ) 22531
ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರ ಮೈಸೂರು ರಾಜ್ಯ
1972 ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರ ಕೆ.ಡಿ.ಪಾಟೀಲ(ಉಕ್ಕಲಿ) ಎನ್.ಸಿ.ಓ. 18331 ಎಲ್.ಆರ್.ನಾಯಕ ಕಾಂಗ್ರೇಸ್ 12855
1967 ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರ ಗದಿಗೆಪ್ಪಗೌಡ ಪಾಟೀಲ ಕಾಂಗ್ರೇಸ್ 15189 ಹೆಚ್.ಕೆ.ಮಾರ್ತಂಡಪ್ಪ ಎಸ್.ಡಬ್ಲೂ.ಎ 7050
1962 ತಾಳಿಕೋಟ ವಿಧಾನಸಭಾ ಕ್ಷೇತ್ರ ಜಿ.ಎನ್.ಪಾಟೀಲ ಕಾಂಗ್ರೇಸ್ ಅವಿರೋದ ಆಯ್ಕೆ
1957 ತಾಳಿಕೋಟ ವಿಧಾನಸಭಾ ಕ್ಷೇತ್ರ ಕುಮಾರಗೌಡ ಪಾಟೀಲ ಪಕ್ಷೇತರ 15200 ಶರಣಯ್ಯ ವಸ್ತದ ಕಾಂಗ್ರೇಸ್ 12804
ಬಾಗೇವಾಡಿ-ಹಿಪ್ಪರಗಿ ವಿಧಾನಸಭಾ ಕ್ಷೇತ್ರ ಬಾಂಬೆ ರಾಜ್ಯ
1951 ಬಾಗೇವಾಡಿ-ಹಿಪ್ಪರಗಿ ವಿಧಾನಸಭಾ ಕ್ಷೇತ್ರ ಶಂಕರಗೌಡ ಪಾಟೀಲ ಕಾಂಗ್ರೇಸ್ 17752 ಸಾವಳಗೆಪ್ಪ ನಂದಿ ಕೆ.ಎಂ.ಪಿ.ಪಿ 5507

ಗ್ರಾಮ ಪಂಚಾಯತಿ[ಬದಲಾಯಿಸಿ]

  • ಗ್ರಾಮ ಪಂಚಾಯತಿ, ಕುದರಿ ಸಾಲವಾಡಗಿ

ದೂರವಾಣಿ ವಿನಿಮಯ ಕೇಂದ್ರ[ಬದಲಾಯಿಸಿ]

  • ದೂರವಾಣಿ ವಿನಿಮಯ ಕೇಂದ್ರ, ಕುದರಿ ಸಾಲವಾಡಗಿ

ಅಂಚೆ ಕಚೇರಿ[ಬದಲಾಯಿಸಿ]

  • ಅಂಚೆ ಕಚೇರಿ, ಕುದರಿ ಸಾಲವಾಡಗಿ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ[ಬದಲಾಯಿಸಿ]

  • ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಕುದರಿ ಸಾಲವಾಡಗಿ

ಹಾಲು ಉತ್ಪಾದಕ ಸಹಕಾರಿ ಸಂಘ[ಬದಲಾಯಿಸಿ]

  • ಹಾಲು ಉತ್ಪಾದಕ ಸಹಕಾರಿ ಸಂಘ, ಕುದರಿ ಸಾಲವಾಡಗಿ

ಪ್ರಾಥಮಿಕ ಆರೋಗ್ಯ ಕೇಂದ್ರ[ಬದಲಾಯಿಸಿ]

  • ಪ್ರಾಥಮಿಕ ಆರೋಗ್ಯ ಕೇಂದ್ರ, ಕುದರಿ ಸಾಲವಾಡಗಿ

ಉಚಿತ ಪ್ರಸಾದನಿಲಯ[ಬದಲಾಯಿಸಿ]

  • ಮೆಟ್ರಿಕ್ ಪುರ್ವ ಬಾಲಕರ ಉಚಿತ ಪ್ರಸಾದನಿಲಯ, ಕುದರಿ ಸಾಲವಾಡಗಿ

ವಿಜಯಪುರ