ಕೂಡಲ ಸಂಗಮ
ವಿಕಿಪೀಡಿಯ ಇಂದ
| ಕೂಡಲ ಸಂಗಮ | |
| ಕೂಡಲಸಂಗಮನಾಥ ದೇವಾಲಯದ ವಿಹಂಗಮ ನೋಟ ಕೂಡಲ ಸಂಗಮ , ಬಾಗಲಕೋಟೆ ಜಿಲ್ಲೆ | |
| ರಾಜ್ಯ - ಜಿಲ್ಲೆ |
ಕರ್ನಾಟಕ - ಬಾಗಲಕೋಟೆ |
| ನಿರ್ದೇಶಾಂಕಗಳು | |
| ವಿಸ್ತಾರ | km² |
| ಸಮಯ ವಲಯ | IST (UTC+5:30) |
| ಜನಸಂಖ್ಯೆ - ಸಾಂದ್ರತೆ |
- /ಚದರ ಕಿ.ಮಿ. |
| ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- ೫೮೭೧೧೫ - +೯೧ (೦) ೮೩೫೧ - ಕೆಎ-೨೯ |
| ಅಂತರ್ಜಾಲ ತಾಣ: ಕೂಡಲ ಸಂಗಮ http://www.bagalkot.nic.in/ ಕೂಡಲ ಸಂಗಮ | |
ಕೂಡಲ ಸಂಗಮ ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಅಣೆಕಟ್ಟಿನಿಂದ ಸುಮಾರು ೩೫ ಕಿ.ಮಿ.ದೂರದಲ್ಲಿದೆ. ಇದು ಬಸವಣ್ಣನವರ ಐಕ್ಯ ಸ್ಥಳವಾಗಿದ್ದು, ಲಿಂಗಾಯತ ಪಂಗಡದವರಿಗೆ ಪ್ರಮುಖ ಪುಣ್ಯಕ್ಷೇತ್ರವಾಗಿದೆ. ಬಸವಣ್ಣನವರು ಚಿಕ್ಕ ವಯಸ್ಸಿನಲ್ಲಿ ಇಲ್ಲಿಗೆ ಬಂದು ಈಶಾನ್ಯ ಗುರುಗಳೆಂದು ಖ್ಯಾತರಾಗಿರುವ ಪರಮಪೂಜ್ಯ ಜಾತವೇದ ಮುನಿಗಳಿಂದ ಶಿಕ್ಷಣ ಮತ್ತು ಮಾರ್ಗ ದರ್ಶನ್ ಪಡೆದರು. ಇಲ್ಲಿ ಕೃಷ್ಣ ನದಿ ಮತ್ತು ಘಟಪ್ರಭ ನದಿ ವಿಲೀನವಾಗಿ ಪೂರ್ವ ದಿಕ್ಕಿನಲ್ಲಿ ಆಂಧ್ರ ಪ್ರದೇಶ ರಾಜ್ಯದ ಶ್ರೀಶೈಲದ(ಇನ್ನೊಂದು ಪುಣ್ಯ ಕ್ಷೇತ್ರ) ಕಡೆಗೆ ಹರಿಯುತ್ತದೆ. ಕರ್ನಾಟಕ ಸರಕಾರವು ಇದನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಅಭಿವೃದ್ಧಿಗೊಳಿಸಿದೆ. ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರವು ಈ ಪುಣ್ಯಸ್ಥಳದ ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ.[೧]
ಪ್ರವಾಸೋದ್ಯಮ[ಬದಲಾಯಿಸಿ]
ಇಲ್ಲಿನ ಪ್ರಮುಖ ಪ್ರವಾಸ ಸ್ಥಳಗಳು ಇಂತಿವೆ:
- ಚಾಲುಕ್ಯ ಶೈಲಿಯಲ್ಲಿರುವ ಸಂಗಮನಾಥ ದೇವಾಲಯ
- ಬಸವೇಶ್ವರನ ಐಕ್ಯ ಲಿಂಗ
- ಬಸವ ಧರ್ಮ ಪೀಠದ ಮಹಾಮನೆ ಆವರಣ
- ಪೂಜಾವನ
- ಸಭಾಭವನ. ೬೦೦೦ ಜನರಿಗೆ ಸ್ಥಳಾವಕಾಶ ಇರುವ ಈ ಸಭಾಂಗಣದ ೪ ದ್ವಾರಗಳನ್ನು ಗಂಗಾಂಬಿಕೆ, ನೀಲಾಂಬಿಕೆ, ಚನ್ನಬಸವಣ್ಣ ಮತ್ತು ಅಕ್ಕ ನಾಗಮ್ಮ ಎಂದು ಹೆಸರಿಸಲಾಗಿದೆ.
- ಬಸವ ಗೋಪುರ/ಬಸವ ಅಂತರರಾಷ್ಟ್ರೀಯ ಕೇಂದ್ರ
- ವಸ್ತು ಸಂಗ್ರಹಾಲಯ - ಬಸವಾದಿ ಶರಣರ ಕಾಲದ ಶಿಲ್ಪಗಳು ಮತ್ತು ಕರ್ನಾಟಕದ ಇತಿಹಾಸಕ್ಕೆ ಸಂಬಂಧಪಟ್ಟ ವಸ್ತುಗಳ ಸಂಗ್ರಹ
ಆಧಾರ/ಉಲ್ಲೇಖ[ಬದಲಾಯಿಸಿ]
- ↑ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ, ೧೯೯೪.. ಕರ್ನಾಟಕ ಸರಕಾರ. ಮರುಕಳಿಸಿದ ದಿನಾಂಕ ೨೦೦೯ ಆಗಸ್ಟ್ ೨೧.