ವೀರಶೈವ
ವೀರಶೈವ ಧರ್ಮವು ಭಾರತದ ಒಂದು ಮುಖ್ಯವಾದ ಹಿಂದೂ ಧರ್ಮದ ಪಂಥವಾಗಿದೆ. ಶ್ರೀಮದ್ ಜಗದ್ಗುರು ರೇಣುಕಾದಿ ಪಂಚಾಚಾರ್ಯರಿಂದ ಸ್ಥಾಪಿತವಾದ ಈ ಧರ್ಮವು ಭಾರತದ ಹಲವು ಪ್ರಾಂತಗಳಲ್ಲಿ ಬೆಳದಿದೆ. ಈ ಧರ್ಮವನ್ನು ಶಿವಾದ್ವೈತ ಅಥವಾ ಷಟ್ಸ್ಥಳ ಸಿದ್ಧಾಂತ ದರ್ಶನವೆಂದು ಕರೆಯುವರು. ಲಿಂಗಾಯತ ಮತ್ತು ವೀರಶೈವ ಬೇರೆ ಬೇರೆ. ಲಿಂಗಾಯತವು ವಿಶ್ವಗುರು ಬಸವಣ್ಣನವರಿಂದ ಸ್ಥಾಪಿತವಾದ ಸ್ವತಂತ್ರ ಅವೈದಿಕ ಧರ್ಮ.
ಪರಿವಿಡಿ |
[ಬದಲಾಯಿಸಿ] ಇತಿಹಾಸ
ವೇದಗಳ ಕಾಲದಿಂದ ವೀರಶೈವ ಧರ್ಮವು ಇತಿಹಾಸ ಹೊಂದಿದೆ. ಸಾಮವೇದದಲ್ಲಿ ಈ ಧರ್ಮದ ಬಗ್ಗೆ ಹೇಳಲಾಗಿದ್ದು ೨೮ ಶಿವಾಗಮಗಳು ಷಟ್‌ಸ್ಥಲ ಸಿದ್ಧಾಂತ ಪ್ರತಿಪಾದಿಸುವು ಆದ್ಯ ಶಂಕರಾಚಾರ್ಯರಿಗೆ ಶ್ರೀಶೈಲ ಪೀಠದ ಶ್ರೀ ವಾಗೀಶ ಪಂಡಿತಾರಧ್ಯ ಶಿವಾಚಾರ್ಯರು ಶಿವಾದ್ವೈತ ಭೋದಿಸಿದರು. ಚಂದ್ರಗುಪ್ತ ಮೌರ್ಯನಿಂದ ಶ್ರೀ ಚಂದ್ರಮೌಳಿ ಶಿವಾಚಾರ್ಯರಿಗೆ ಕಾಶಿಯಲ್ಲಿ ಇರುವ ಶ್ರೀ ಜಗದ್ಗುರು ವಿಶ್ವಾರಾಧ್ಯ ಪೀಠಕ್ಕೆ ಮಠವನ್ನು ಕಟ್ಟಿಸಿದನು ಮತ್ತು ಮೊಘಲ ಸಾಮ್ರಾಟ ಹುಮಾಯನನು ಕಾಶಿ ಪೀಠಕ್ಕೆ ವಿಶ್ವನಾಥ ಮಂದಿರದಿಂದ ಗಂಗಾ ತಟದವರೆಗೆ ಭೂದಾನ ಮಾಡಿದನು. ಹೀಗೆ ಕಲ್ಯಾಣ ಚಾಲುಕ್ಯರು, ಶಾತವಾಹನ, ವಿಜಯನಗರ, ಕೇಳದಿ ಮತ್ತು ಮೈಸೂರು ಅರಸರಿಂದ ರಾಜ್ಯಮನ್ನಣೆಯನ್ನು ಪಡೆದು ಭಾರತಾದ್ಯಂತ ಸೂಮಾರು ೫೦೦೦ ಮಠಗಳನ್ನು ಹೊಂದಿ ಲಾಕುಳ, ಪಾಶುಪತ, ಕಾಳಾಮುಖ, ನಾಥ, ನಾಯನಾರ ಕಾಶ್ಮೀರ ಶೈವ ಮತಗಳನ್ನು ತನ್ನ ಗರ್ಭದಲ್ಲಡಗಿಸಿಕೊ೦ಡು ವಿಶ್ವಧರ್ಮ ಬೆಳದಿದೆ.
[ಬದಲಾಯಿಸಿ] ನಂಬಿಕೆಗಳು
ಶ್ರೀಮದ್ವೀರಶೈವ ಧರ್ಮ ಸ್ಥಾಪಕರಾದ ಶ್ರೀ ಜಗದ್ಗುರು ಪಂಚಾಚಾರ್ಯರು ಶಿವನ ಪಂಚಮುಖಗಳಾದ ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ ಮತ್ತು ಈಶನ್ಯ ಉಧ್ಭವಿಸಿದರೇಂದು ನಂಬಿಕೆ. ಹೀಗಾಗಿ ಇವರ ಪೀಠಗಳು ಕಾಶಿ (ಉ.ಪ), ರಂಭಾಪುರಿ (ಕರ್ನಾಟಕ), ಶ್ರೀಶೈಲ (ಆ.ಪ), ಉಜ್ಜಯಿನಿ (ಕರ್ನಾಟಕ) ಮತ್ತು ಕೇದಾರ (ಉತ್ತರಾಂಚಲ)ದಲ್ಲಿ ಶೈವ ಜ್ಯೋತಿರ್ಲಿಂಗ ಇವೆ. ಇವೇ ಪಂಚಪೀಠಗಳು.
[ಬದಲಾಯಿಸಿ] ಧರ್ಮಕ್ಷೇತ್ರಗಳು
ಕಾಶಿ, ಶ್ರೀಶೈಲ, ಕೇದಾರ, ಉಜ್ಜಯಿನಿ, ರಂಭಾಪುರಿ, ಯಡೆಯೂರು, ಸಿದ್ಧಗಂಗೆ,ಮತ್ತು ಸೋಲಾಪೂರ. ಇದಲ್ಲದೇ ನೇಪಾಳ, ಶ್ರೀಲಂಕಾ, ಭೂತಾನಿನಲ್ಲಿ ಮಠಗಳನ್ನು ಹೊಂದಿದೆ.
[ಬದಲಾಯಿಸಿ] ಬಾಹ್ಯ ಸಂಪರ್ಕಗಳು
- ವಿಚಾರಮಂಟಪ.ನೆಟ್ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಸರ್ವಜ್ಞರ ವಚನಗಳು