ಉಳವಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಉಳವಿ ಕ್ಷೇತ್ರವು ವೀರಶೈವರ ಪವಿತ್ರ ಯಾತ್ರಾ ಸ್ಥಳವಾಗಿದೆ. ಇಲ್ಲಿ ಪ್ರಖ್ಯಾತ ಚನ್ನಬಸವೇಶ್ವರ ದೇವಾಲಯವಿದೆ. ಇದು ಕಾರವಾರದಿಂದ ಸುಮಾರು ೭೫ ಕಿ.ಮೀ. ದೂರದಲ್ಲಿದೆ.

ಉಳವಿ ಲಿಂಗಾಯತ ಜನರ ಒಂದು ಪ್ರಮುಖ ಯಾತ್ರಾಸ್ಥಳವಾಗಿದೆ. ಲಿಂಗಾಯತ ಜನರು ಬಹುವಾಗಿ ಗೌರವಿಸುವ ಚನ್ನಬಸವಣ್ಣನವರ ಸಮಾಧಿ ಇಲ್ಲಿ ಇದೆ. ೧೨ ನೇ ಶತಮಾನದಲ್ಲಿ, ಚನ್ನಬಸವಣ್ಣನವರು ಸಾಯುವ ಮೊದಲು ಕಲ್ಯಾಣ ದಿಂದ ಉಳವಿಗೆ ಬಂದರು. ಚನ್ನಬಸವಣ್ಣನ ತಾಯಿ ಮತ್ತು ಬಸವಣ್ಣನ ಸೋದರಿ ಅಕ್ಕ ನಾಗಲಾಂಬಿಕೆ ಹೆಸರಿನಲ್ಲಿರುವ ಗುಹೆಯು ಈ ಪವಿತ್ರ ಸಮಾಧಿಗೆ ಹತ್ತಿರದಲ್ಲಿ ಇದೆ. ಉಳವಿ ಜಾತ್ರೆಗೆ ಕರ್ನಾಟಕದ ಎಲ್ಲೆಡೆಯಿಂದ ಭಕ್ತರು ಬರುತ್ತಾರೆ.

ಉಳವಿಯು ಪಶ್ಚಿಮ ಘಟ್ಟಗಳಲ್ಲಿ ಇದ್ದು ಇಲ್ಲಿನ ದಟ್ಟ ಕಾಡುಗಳಲ್ಲಿ ಹುಲಿ, ಚಿರತೆ, ಆನೆ, ಸಾರಂಗ, ನಾಗರಹಾವು ಮತ್ತು ಇತರ ವನ್ಯಜೀವಿಗಳಿವೆ.



ಹತ್ತಿರದ ಸ್ಥಳಗಳು: ದಾಂಡೇಲಿ, ಧಾರವಾಡ, ಹುಬ್ಬಳ್ಳಿ.

ಸಾರಿಗೆ: ಸ್ವಂತ ವಾಹನದಲ್ಲಿ ಪ್ರಯಾಣ ಮಾಡುವುದು ಉತ್ತಮ. ಹುಬ್ಬಳ್ಳಿ, ಚಿತ್ರದುರ್ಗ, ಹಾವೇರಿ ಮತ್ತು ಬೆಳಗಾವಿಯಿಂದ ಬಸ್ಸುಗಳಿವೆ.

ಸಿಂಥೇರಿ ಬಂಡೆ, ಕಾಳಿ ನದಿ, ಅಣಸಿ ಮೀಸಲು ಅರಣ್ಯ , ಸೂಪಾ ಅಣೆಕಟ್ಟು ಇಲ್ಲಿನ ಇತರ ನೋಡತಕ್ಕ ಸ್ಥಳಗಳು.










ಉಳವಿ ಚನ್ನಬಸವೇಶ್ವರ ದೇವಾಲಯ.jpg

"http://kn.wikipedia.org/w/index.php?title=ಉಳವಿ&oldid=299231" ಇಂದ ಪಡೆಯಲ್ಪಟ್ಟಿದೆ