ಜೋಯ್ಡಾ
| ಜೋಯ್ಡಾ | |
| ರಾಜ್ಯ - ಜಿಲ್ಲೆ |
ಕರ್ನಾಟಕ - ಉತ್ತರ ಕನ್ನಡ |
| ನಿರ್ದೇಶಾಂಕಗಳು | |
| ವಿಸ್ತಾರ | km² |
| ಸಮಯ ವಲಯ | IST (UTC+5:30) |
| ಜನಸಂಖ್ಯೆ - ಸಾಂದ್ರತೆ |
- /ಚದರ ಕಿ.ಮಿ. |
| ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 581 186 - +08383 - |
ಜೋಯ್ಡಾ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದು ಕಗ್ಗಾಡಿನ ಪ್ರದೇಶ. ಕಾಳಿ ನದಿಗೆ ಸೂಪಾ ಸಮೀಪದಲ್ಲಿ ಸೂಪಾ ಅಣೆಕಟ್ಟನ್ನು ಕಟ್ಟಿದ ನಂತರ, ಸೂಪ ಎಂಬ ತಾಲೂಕು ಕೇಂದ್ರವು ಮುಳುಗಿಹೋಯಿತು. ಆಗ ತಾಲೂಕು ಕೇಂದ್ರವನ್ನು ಜೋಯಿಡಾ ಎಂಬ ಹಳ್ಳಿಗೆ ಬದಲಾಯಿಸಲಾಯಿತು. ಆದ್ದರಿಂದ, ಈ ಊರನ್ನು ಕೆಲವೊಮ್ಮೆ ಸೂಪಾ ಎಂದೂ ಕರೆಯುವುದುಂಟು. ಇದು ದಾಂಡೇಲಿಯಿಂದ ಸುಮಾರು ೨೨ ಕಿ.ಮಿ ದೂರದಲ್ಲಿದೆ. ಇದು ತಾಲೂಕು ಕೇಂದ್ರವಾದರೂ ಇನ್ನೂ ಹಿಂದುಳಿದ ಪ್ರದೇಶವಾಗಿದೆ.ಕರ್ನಾಟಕದ ಅತಿ ಹಿಂದುಳಿದ ತಾಲೂಕುಕೇಂದ್ರವೆಂದರೆ ಜೊಯಿಡಾವೇ ಇರಬಹುದು. ಕನ್ನಡ ಮತ್ತು ಕೊಂಕಣಿ ಇಲ್ಲಿನ ಪ್ರಮುಖ ಭಾಷೆಗಳು. ಸುತ್ತಲೂ ಕಾಡು, ಅಲ್ಲಲ್ಲಿ ಹಳ್ಳಿಗಳು, ಬುಡಕಟ್ಟು ಜನಾಂಗಗಳು, ಕಾಡುತ್ಪನ್ನ ನಂಬಿ ಬದುಕುವ ಇತರ ಜನರು ಈ ತಾಲೂಕಿನ ವೈಶಿಷ್ಟ್ಯ.
ಪರಿವಿಡಿ |
ಜನ ಜೀವನ [ಬದಲಾಯಿಸಿ]
ವಿಶಿಷ್ಟ ಸಂಸ್ಕೃತಿ ಹೊಂದಿರುವ ಕುಣಬಿ (ಅಥವಾ ಕುಡಬಿ) ಜನಾಂಗ ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸುಮಾರು ನಾಲ್ಕು ಶತಮಾನಗಳ ಹಿಂದೆ ಗೋವಾದಿಂದ ವಲಸೆ ಬಂದಿರುವ ಈ ಜನಾಂಗ ಮತ್ತು ಮರಾಠಿ ಜನಾಂಗದವರು ಇಂದಿಗೂ ತಮ್ಮ ಪುರಾತನ ಪದ್ದತಿಗಳನ್ನು ಉಳಿಸಿಕೊಂಡುಬಂದಿರುವುದು ಕಂಡುಬರುತ್ತದೆ.
ಪ್ರವಾಸಿ ತಾಣಗಳು [ಬದಲಾಯಿಸಿ]
ಇಲ್ಲಿನ ದಟ್ಟಕಾಡಿನ ತಾಣಗಳನ್ನು ಪ್ರವಾಸಿ ಸ್ಥಳಗಳಾಗಿ ಉಪಯೋಗಿಸಿಕೊಳ್ಳುವ ಯತ್ನ ಅಷ್ಟೇನೂ ಸಫಲವಾಗಿಲ್ಲವೆಂದೇ ಹೇಳಬೇಕು. ಜೋಯಡಾದಲ್ಲಿ ಉಳವಿ ದೇವಾಲಯ, ಸಿಂಥೇರಿ ರಾಕ್ಸ್, ಡಿಗ್ಗಿ, ಅಣಶಿ ಅಭಯಾರಣ್ಯ ಮೊದಲಾದ ಪ್ರವಾಸಿ ಸ್ಥಳಗಳಿವೆ. ಈ ಪ್ರದೇಶದಲ್ಲಿ ಅಪರೂಪದ ಹಲವು ಪ್ರಾಣಿ ಪಕ್ಷಿಗಳಿವೆ. ಮಂಗಟ್ಟೆ ಹಕ್ಕಿ, ಕಾಳಿಂಗ ಸರ್ಪ ಮೊದಲಾದ ಅಳಿವಿನಂಚಿನ ಜೀವ ಸಂಕುಲವಿದೆ.ಉಳವಿ ಹತ್ತಿರ ಗುಹೆಗಳಿದ್ದರೂ, ಅವುಗಳನ್ನು ನೋಡಲು ಅನುಕೂಲತೆಗಳು ಅಷ್ಟಕ್ಕಷ್ಟೆ. ಕಾಳಿ ನದಿ ದಡದಲ್ಲಿರುವ ಸಿಂಥೇರಿ ರಾಕ್ಸ್ ಹತ್ತಿರ ವಿಶಿಷ್ಟ ರೂಪದ ಕಲ್ಲುಗಳಿವೆ. ಕಾಳಿ ನದಿಯಲ್ಲಿ ರಿವರ್ ರಾಫ್ಟಿಂಗ್ ವ್ಯವಸ್ಥೆಯನ್ನು ಖಾಸಿಗಿ ರಿಸಾರ್ಟ್ ಸಹಭಾಗಿತ್ವದಲ್ಲಿ ಮಾಡಲಾಗಿದೆ.
ಸಂಪರ್ಕ [ಬದಲಾಯಿಸಿ]
ಜೋಯಿಡಾಕ್ಕೆ ಹುಬ್ಬಳ್ಳಿಯಿಂದ ದಾಂಡೇಲಿ ಮೂಲಕ ರಸ್ತೆ ಸಂಪರ್ಕವಿದೆ. ಅತ್ತ ಕಾರವಾರದಿಂದಲೂ ರಸ್ತೆ ಸಂಪರ್ಕವಿದೆ. ಸರಕಾರಿ ಬಸ್ ವ್ಯವಸ್ಥೆ ಇದ್ದರೂ, ಬಹಳ ಸಮಯದ ಅಂತವಿರುವುದರಿಂದ, ಖಾಸಗಿ ವಾಹನ ವ್ಯವಸ್ಥೆಇದ್ದರೆ ಉತ್ತಮ.
ತಂಗಲು ವ್ಯವಸ್ಥೆ [ಬದಲಾಯಿಸಿ]
ಜೋಯಿಡಾದಲ್ಲಿ ಸರಳ ವಸತಿಯು ಸರಕಾರಿ ಅತಿಥಿಗೃಹದಲ್ಲಿ ದೊರೆಯುತ್ತದೆ. ಖಾಸಗಿ ಹೋಟೆಲುಗಳು ಹತ್ತಿರದ ದಾಂಡೇಲಿಯಲ್ಲಿವೆ.