ಭಟ್ಕಳ
| ಭಟ್ಕಳ | |
| ರಾಜ್ಯ - ಜಿಲ್ಲೆ |
ಕರ್ನಾಟಕ - ಉತ್ತರ ಕನ್ನಡ |
| ನಿರ್ದೇಶಾಂಕಗಳು | |
| ವಿಸ್ತಾರ - ಎತ್ತರ |
5.23 km² - 3 ಮೀ. |
| ಸಮಯ ವಲಯ | IST (UTC+5:30) |
| ಜನಸಂಖ್ಯೆ (2001) - ಸಾಂದ್ರತೆ |
31774 - 6075.33/ಚದರ ಕಿ.ಮಿ. |
| ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 581 320 - +08385 - KA-47 |
ಭಟ್ಕಳ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದು ಮಂಗಳೂರು ಮತ್ತು ಮುಂಬೈ ಮಧ್ಯದಲ್ಲಿ ಚಲಿಸುವ ಕೊಂಕಣ ರೈಲ್ವೆಯ ಪ್ರಮುಖ ನಿಲ್ದಾಣಗಳಲ್ಲಿ ಒಂದಾಗಿದೆ.
ಇದು ಐತಿಹಾಸಿಕ ನಗರ. ಜೈನರ ನೆಲೆಬೀಡು. ಇಲ್ಲಿ ವಿಶ್ವವಿಖ್ಯಾತ ಮುರುಡೇಶ್ವರ ದೇವಸ್ಥಾನವಿದೆ. ಇಲ್ಲಿ ವಿಶ್ವದ ಎರಡನೇ ಅತಿ ದೊಡ್ದ ಶಿವನ ಮೂರ್ತಿಯು ಸಹ ಇದೆ, ಇದೊಂದು ಪುಣ್ಯ ಸ್ಥಳವಾಗಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಪ್ರಕೃತಿ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ. ಈ ಸ್ಥಳದ ಏಳ್ಗೆಯ ಮೂಲ ಕಾರಣಿಕರ್ತರು ಆರ್.ಎನ್.ಶೆಟ್ಟಿಯವರು. ಐತಿಹಾಸಿಕ ಸ್ಥಳವಾದ ಹಾಡುಹಳ್ಳಿ ಅಂದರೆ ಆಗಿನ ಸಂಗೀತಪುರ ಇರುವುದು ಇಲ್ಲಿಯೇ, ಇಲ್ಲಿ ೨೪ ತೀರ್ಥಂಕರರ ವಿಗ್ರಹಗಳಿವೆ ಹಾಗೂ ಸುಂದರ ಪದ್ಮಾವತಿ ದೇವಿಯ ದೇವಾಲಯ,ಚಂದ್ರಗಿರಿ ಬೆಟ್ಟವಿದೆ. ಕನ್ನಡದ ಕರ್ಣಾಟಕ ಶಬ್ದಾನುಶಾಸನ ಬರೆದ ಜೈನ ಮುನಿ ಭಟ್ಟಾಕಳಂಕ ಹಾಡುವಳ್ಳಿ ಗ್ರಾಮದವನು. ಚೆನ್ನಭೈರದೇವಿಯು ನೆಲೆಸಿದ್ದು,ಜೈನರ ತಾಣ ಎಂದೇ ಗುರುತಿಸಿಕೊಂಡಿದ್ದು, ಇದಕ್ಕೆ ಕುರುಹಾಗಿ ತಾಲೂಕಿನ ಸುತ್ತಮುತ್ತಲಲ್ಲಿ ಸುಮಾರು ೩೦ ಕ್ಕು ಹೆಚ್ಚು ಜೈನ ಬಸದಿಗಳಿವೆ. ಉದಾ: ಮೋಹಿನಿ ಬಸದಿ, ಚಂದ್ರಾನಂದ ಬಸದಿ, ಪಾರ್ಶ್ವನಾಥ ಬಸದಿ ಮೊದಲಾದವುಗಳು. ಇನ್ನೊಂದು ವಿಶೇಷವೆಂದರೆ ಈ ತಾಲೂಕಿನ ಗ್ರಾಮದೇವ ಚನ್ನಪಟ್ಟಣದ ಹನುಮಂತ ದೇವ. ಈ ದೇವಾಲಯದ ಅಷ್ಟದಿಕ್ಕುಗಳಲ್ಲಿಯು ಹನುಮ ದೇವನ ವಿಗ್ರಹಗಳಿವೆ. ಕೋಟೆ ಹನುಮಂತ,ಕುದುರೆ ಬೀರಪ್ಪ ಹನುಮಂತ ಮೊದಲಾದವುಗಳು. ಭಟ್ಕಳದಿಂದ ಸುಮಾರು ೨೦ ಕಿ.ಮೀ ಸಮುದ್ರ ಮಾರ್ಗವಾಗಿ ಕ್ರಮಿಸಿದರೆ ನೇತ್ರಾಣಿ ದ್ವೀಪವಿದೆ, ಇದೊಂದು ಸುಂದರ ಪ್ರವಾಸಿ ತಾಣ. ಈಗ ಇದು ಸೇನೆಯ ತರಬೇತಿಗೆ ನಿಯೋಜಿತವಾಗಿದೆ. ಸುಂದರವಾದ ಲೈಟ್ ಹೌಸ್ ಸಹ ಇದೆ. ಇಲ್ಲಿನ ಮುಂಡಳ್ಳಿ, ಕರಿಕಲ್, ಮುರುಡೇಶ್ವರದ ಕಡಲ ಕಿನಾರೆಗಳು, ಕಡವಿನಕಟ್ಟೆ ಅಣೆಕಟ್ಟು ನೋಡುಗರ ಕಂಗಳಿಗೆ ಮುದವನ್ನೀಯುತ್ತವೆ. ಮುಂಡಳ್ಳಿ, ಕಡವಿನಕಟ್ಟೆ, ಅಳ್ವೇಕೋಡಿಯಲ್ಲಿ ಶಕ್ತಿ ದೇವತೆಯಾದ ದುರ್ಗಾಪರಮೇಶ್ವರಿ ನೆಲೆಸಿದ್ದು ಇಲ್ಲಿನ ಜನರ ಹಿತವ ಕಾಪಾಡುತಿದ್ದಾಳೆ. ಮುರುಡೇಶ್ವರ ಮಾರ್ಗವಾಗಿ ಕ್ರಮಿಸುವಾಗ ಹೆದ್ದಾರಿಯ ನಡುವೆ ಸಿಗುವ ಶಿರಾಲಿಯಲ್ಲಿ ಚಿತ್ರಾಪುರ ಮಠವಿದೆ. ಇದೊಂದು ಐತಿಹಾಸಿಕ ಸ್ಥಳವಾಗಿದೆ. ಚಿತ್ರಾಪುರದಿಂದ ೩-೪ ಕಿ.ಮೀ ದೂರದಲ್ಲಿರುವ ಪಂಚವಟಿಯ ಉದ್ಯಾನ, ಗೋಶಾಲೆಯಲ್ಲಿರುವ ವಿವಿಧ ತಳಿಯ ಗೋವುಗಳು ನೋಡುಗರ ಕಂಗಳಿಗೆ ರಸದೌತಣವನ್ನು ನೀಡುತ್ತದೆ. ವಿಜಯನಗರದ ಸಾಮಂತ ಕೆಳದಿಯ ವೆಂಕಟಪ್ಪನಾಯಕ ಭಟ್ಕಳವನ್ನು ಆಳಿದ್ದ ಎನ್ನುವುದಕ್ಕೆ ಹಲವು ಕುರುಹುಗಳು, ಶಾಸನಗಳು ದೊರೆಯುತ್ತವೆ.