ಹಿಪೊಕ್ರೇಟ್ಸ್
Hippocrates of Kos | |
---|---|
![]() | |
ಜನನ | ca. ೪೬೦ BC |
ಮರಣ | ca. ೩೭೭ BC (aged around ೮೩) |
ಇತರೆ ಹೆಸರುಗಳು | Greek: Ἱπποκράτης |
ಉದ್ಯೋಗ | Physician |
ಹಿಪ್ಪೊಕ್ರೇಟ್ಸ್ ಆಫ್ ಕಾಸ್ ಅಥವಾ ಹಿಪ್ಪೊಕ್ರೇಟ್ಸ್ ಆಫ್ ಕಾಸ್ (ca . ೪೬೦ ಕ್ರಿಸ್ತಪೂರ್ವ – ca. ೩೭೦ ಕ್ರಿಸ್ತಪೂರ್ವ) - ಗ್ರೀಕ್: {{|Ἱπποκράτης}}; ಹಿಪ್ಪೊಕ್ರೇಟ್ಸ್ ಎಂಬುವವನು ಪೆರಿಕಲ್ಸ್ ಯುಗದ (ಪ್ರಾಚೀನ ಅಥೆನ್ಸ್) ಗೆ ಸಂಬಂಧಿಸಿದ ಪ್ರಾಚೀನ ಗ್ರೀಕ್ ನ ವೈದ್ಯನಾಗಿದ್ದಾನೆ. ಅಲ್ಲದೇ ಇವನನ್ನು ವೈದ್ಯಕೀಯ ಇತಿಹಾಸದಲ್ಲಿ ಮಹೋನ್ನತ ವ್ಯಕ್ತಿ ಎಂದು ಪರಿಗಣಿಸಲಾಗಿದೆ. ಇವನನ್ನು ವೈದ್ಯಶಾಸ್ತ್ರದ ಪಾಶ್ಚಿಮಾತ್ಯ ಪಿತಾಮಹ[೨][೩][೪] ನೆಂದು ಕರೆಯಲಾಗುತ್ತದೆ. ವೈದ್ಯಶಾಸ್ತ್ರದ ಹಿಪೊಕ್ರೆಟಿಕ್ ಶಾಲೆಯನ್ನು ಸ್ಥಾಪಿಸುವ ಮೂಲಕ ಈ ಕ್ಷೇತ್ರಕ್ಕೆ ಅವನ ಶಾಶ್ವತ ಕೊಡುಗೆಗಳನ್ನು ಗುರುತಿಸಿ ಈ ಮನ್ನಣೆ ನೀಡಲಾಗಿದೆ. ಈ ಬೌದ್ಧಿಕ ಶಾಲೆಯು, ಪ್ರಾಚೀನ ಗ್ರೀಸ್ ನ ವೈದ್ಯಶಾಸ್ತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನುಂಟುಮಾಡಿತು. ಸಾಂಪ್ರದಾಯಿಕವಾಗಿ ಸಂಬಂಧ ಹೊಂದಿದ್ದ ಇತರ ಕ್ಷೇತ್ರಗಳಿಗಿಂತ ಇದನ್ನು ಭಿನ್ನವಾದ ಶಿಕ್ಷಣ ವಿಷಯವಾಗಿ ಸ್ಥಾಪಿಸಲಾಯಿತು. (ಗಣನೀಯವಾಗಿ ಮಾಟಮಂತ್ರ ಮತ್ತು ತತ್ತ್ವಶಾಸ್ತ್ರ), ಈ ರೀತಿಯಾಗಿ ವೈದ್ಯಶಾಸ್ತ್ರವನ್ನು ವೃತ್ತಿಯಾಗಿಸಿದ.[೫][೬]
ಆದರೂ, ಕಾರ್ಪಸ್ ನ ಬರಹಗಾರರ ಸಾಧನೆಯು, ಹಿಪೊಕ್ರೆಟಿಕ್ ವೈದ್ಯಶಾಸ್ತ್ರದ ವೃತ್ತಿಗಾರರು, ಮತ್ತು ಹಿಪ್ಪೊಕ್ರೇಟ್ಸ್ ನ ಕಾರ್ಯಗಳು ಹೆಚ್ಚಾಗಿ ಸಂಮಿಶ್ರಿತವಾಗಿವೆ; ಆದ್ದರಿಂದ ಹಿಪ್ಪೊಕ್ರೇಟ್ಸ್ ಏನನ್ನು ಯೋಚಿಸಿದ್ದ, ಬರೆದ ಮತ್ತು ಮಾಡಿದ ಎಂಬುದರ ಬಗ್ಗೆ ಸ್ವಲ್ಪ ಮಟ್ಟಿಗೆ ಮಾತ್ರ ತಿಳಿದಿದೆ. ಆದಾಗ್ಯೂ, ಹಿಪ್ಪೊಕ್ರೇಟ್ಸ್ ನನ್ನು ಸಾಮಾನ್ಯವಾಗಿ ಪ್ರಾಚೀನ ವೈದ್ಯರ ಮಾದರಿ ಎಂಬಂತೆ ಚಿತ್ರಿಸಲಾಗುತ್ತದೆ. ವಿಶೇಷವಾಗಿ, ಅವನು ಪ್ರಾಯೋಗಿಕ ವೈದ್ಯಶಾಸ್ತ್ರದ ಕ್ರಮಬದ್ಧವಾದ ಅಧ್ಯಯನವನ್ನು ಅಭಿವೃದ್ಧಿಪಡಿಸಿದ ಹಿರಿಮೆಗೆ ಪಾತ್ರನಾಗಿದ್ದಾನೆ. ಮುಂಚಿನ ಶಾಲೆಗಳ ಚಿಕಿತ್ಸಾ ಜ್ಞಾನವನ್ನು ಒಟ್ಟಿಗೆ ಸೇರಿಸುವ ಮೂಲಕ ಮತ್ತು ಹಿಪೊಕ್ರೆಟಿಕ್ ಪ್ರಮಾಣ, ಕಾರ್ಪಸ್ ಮತ್ತು ಇತರ ಕೆಲಸಗಳ ಮೂಲಕ ವೈದ್ಯರಿಗೆ ವೃತ್ತಿಯನ್ನು ಅಭ್ಯಾಸಮಾಡಲು ನಿಗದಿ ಮಾಡಿದ.[೫][೭]
ಜೀವನ ಚರಿತ್ರೆ[ಬದಲಾಯಿಸಿ]

- ಹಿಪ್ಪೊಕ್ರೇಟ್ಸ್ ಸುಮಾರು ೪೬೦ ಕ್ರಿಸ್ತಪೂರ್ವ ಯಲ್ಲಿ ಗ್ರೀಕ್ ನಲ್ಲಿರುವ ಕಾಸ್ (Cos) ಐಲೆಂಡ್ ನಲ್ಲಿ ಜನಿಸಿದನು. ಪ್ರಖ್ಯಾತ ವೈದ್ಯನಾದನು ಹಾಗು ವೈದ್ಯಶಾಸ್ತ್ರದ ಶಿಕ್ಷಕನಾದ ಎಂದು ಇತಿಹಾಸಕಾರರು ಒಪ್ಪಿಕೊಂಡಿದ್ದಾರೆ. ಇತರ ಜೀವನ ಚರಿತ್ರೆಯ ಮಾಹಿತಿಗಳು ಸುಳ್ಳೆಂದು ತೋರುತ್ತವೆ (ಲೆಜಂಡ್ಸ್ಅನ್ನು ನೋಡಿ ).[೮]
- ಎಫೆಸಸ್ ನ ಸೊರಾನಸ್ , ಎಂಬ ೨ನೇ ಶತಮಾನದ ಗ್ರೀಕ್ ಸ್ತ್ರೀ ರೋಗತಜ್ಞ,[೯] ಹಿಪ್ಪೊಕ್ರೇಟ್ಸ್ ನ ಮೊದಲನೆಯ ಜೀವನ ಚರಿತ್ರೆಕಾರನಾಗಿದ್ದು, ಹಿಪ್ಪೊಕ್ರೇಟ್ಸ್ ವೈಯಕ್ತಿಕ ಜೀವನದ ಬಹುಪಾಲು ಮಾಹಿತಿ ಯ ಮೂಲವಾಗಿದ್ದಾನೆ. ಹಿಪ್ಪೊಕ್ರೇಟ್ಸ್ ನ ಬಗ್ಗೆ ಮಾಹಿತಿಯನ್ನು ಅರಿಸ್ಟಾಟಲ್ ನ ಬರಹಗಳಲ್ಲೂ ನೋಡಬಹುದು. ಇದು ೪ನೇ ಶತಮಾನದ ಕ್ರಿಸ್ತಪೂರ್ವಗೆ ಸೇರಿದೆ. ೧೦ ನೇ ಶತಮಾನದ AD ಸುಡಾ ದಲ್ಲೂ ಅಲ್ಲದೇ ೧೨ನೇ ಶತಮಾನದ ADಗೆ ಸೇರಿದ ಜಾನ್ ಜೆಟ್ಜೆಸ್ ನ ಬರಹಗಳಲ್ಲೂ ಹಿಪ್ಪೋಕ್ರೇಟ್ಸ್ ಬಗ್ಗೆ ಮಾಹಿತಿಗಳನ್ನು ನೋಡಬಹುದು.[೫][೧೦]
- ಹಿಪ್ಪೊಕ್ರೇಟ್ಸ್ ನ ತಂದೆ ಹೆರಾಕ್ಲೈಡ್ಸ್ ಎಂಬ ವೈದ್ಯನಾಗಿದ್ದು; ಅವನ ತಾಯಿ ಟೈಸನೆಯ ಮಗಳಾದ ಪ್ರ್ಯಾಕ್ಸಿಟೆಲಾ ಎಂಬುವವಳು ಎಂದು ಸೊರಾನಸ್ ಬರೆದಿದ್ದಾನೆ. ಹಿಪ್ಪೊಕ್ರೇಟ್ಸ್ ನ ಇಬ್ಬರು ಮಕ್ಕಳಾದ, ಥೆಸ್ಸಾಲುಸ್ ಮತ್ತು ಡ್ರ್ಯಾಕೊ ಮತ್ತು ಅವನ ಅಳಿಯನಾದ ಪೊಲಿಬಸ್, ಎಂಬುವವರು ಅವನ ವಿದ್ಯಾರ್ಥಿಗಳಾಗಿದ್ದರು. ಅನಂತರದ ವೈದ್ಯನಾದ ಗ್ಯಾಲೆನ್ ನ ಪ್ರಕಾರ, ಪೊಲಿಬಸ್ ಹಿಪ್ಪೊಕ್ರೇಟ್ಸ್ ನ ನಿಜವಾದ ಉತ್ತರಾಧಿಕಾರಿಯಾಗಿದ್ದಾನೆ. ಥೆಸ್ಸಾಲುಸ್ ಮತ್ತು ಡ್ರ್ಯಾಕೊ ಇಬ್ಬರಿಗೂ ಹಿಪ್ಪೊಕ್ರೇಟ್ಸ್ ಎಂಬ ಹೆಸರಿನ ಮಕ್ಕಳಿದ್ದರು.[೧೧][೧೨]
ಹಿಪ್ಪೊಕ್ರೇಟ್ಸ್ ಅವನ ತಂದೆ ಮತ್ತು ಅಜ್ಜನಿಂದ ವೈದ್ಯಕೀಯವನ್ನು ಕಲಿತುಕೊಂಡನು ಹಾಗು ಇತರ ವಿಷಯಗಳನ್ನು ಡೆಮೊಕ್ರಿಟಸ್ ಮತ್ತು ಜಾರ್ಜಿಯಸ್ ನೊಂದಿಗೆ ಅಧ್ಯಯನ ಮಾಡಿದ. ಹಿಪ್ಪೊಕ್ರೇಟ್ಸ್ ಬಹುಶಃ ಕಾಸ್ ನಲ್ಲಿರುವ ಆಸ್ಕ್ ಲೆಪಿಯನ್ ದೇವಾಲಯದಲ್ಲಿ ತರಬೇತಿ ಪಡೆದ. ಅಲ್ಲದೇ ಥ್ರೇಸಿಯನ್ ವೈದ್ಯ ಸೆಲಿಂಬ್ರಿಯಾದ ಹೆರೊಡಿಕಸ್ ಎಂಬುವವನಿಂದ ಪಾಠಗಳನ್ನು ಕಲಿತುಕೊಂಡನು. ಪ್ಲೇಟೋ ನ ಸಂಭಾಷಣೆಯಾದ ಪ್ರೊಟೊಗೊರಸ್ , ಹಿಪ್ಪೊಕ್ರೇಟ್ಸ್ ನನ್ನು ಹೆಸರಿಸಲಾದ ಏಕಮಾತ್ರ ಸಮಕಾಲೀನ ಉದಾಹರಣೆಯಾಗಿದೆ. ಇದರಲ್ಲಿ ಪ್ಲೇಟೋ ಹಿಪ್ಪೊಕ್ರೇಟ್ಸ್ ನನ್ನು " ಕಾಸ್ ನ ಹಿಪ್ಪೊಕ್ರೇಟ್ಸ್ , ದಿ ಆಸ್ಕ್ಲೀಪೈಡ್" ಎಂದು ವಿವರಿಸಿದ್ದಾನೆ.[೧೩][೧೪] ಹಿಪ್ಪೊಕ್ರೇಟ್ಸ್ ಜೀವನ ಪೂರ್ತಿ ವೈದ್ಯಶಾಸ್ತ್ರವನ್ನು ಬೋಧಿಸಿದನು ಮತ್ತು ಅಭ್ಯಾಸ ಮಾಡಿದನು. ಅಲ್ಲದೇ ಥೆಸ್ಸಲಿ, ಥ್ರೇಸ್, ಮತ್ತು ಮ್ಯಾರ್ಮರ ಸಮುದ್ರ ದಷ್ಟು ಪ್ರಯಾಣ ಬೆಳೆಸಿದ್ದಾನೆ.[೧೨] ಬಹುಶಃ ಅವನು ೮೩ ಅಥವಾ ೯೦ ವರ್ಷದವನಿದ್ದಾಗ ಲ್ಯಾರಿಸ್ಸಾ ದಲ್ಲಿ ಮೃತನಾದನು. ಆದರೂ ಕೆಲವು ಮೂಲಗಳು ಅವನು ಸುಮಾರು ೧೦೦ ವರ್ಷಗಳ ವರೆಗೆ ಬದುಕಿದ್ದನು ಎಂದು ಹೇಳುತ್ತವೆ; ಅವನ ಸಾವಿನ ಬಗ್ಗೆ ಅನೇಕ ವಿವರಣೆಗಳಿವೆ.[೧೨]
ಹಿಪೊಕ್ರೆಟಿಕ್ ಸಿದ್ಧಾಂತ[ಬದಲಾಯಿಸಿ]
On the Sacred Disease[೧೫]
ಹಿಪ್ಪೊಕ್ರೇಟ್ಸ್ , ಕಾಯಿಲೆಗಳು ಸಹಜವಾಗಿ ಬರುತ್ತವೇ ಹೊರತು ಮೂಢ ನಂಬಿಕೆ ಮತ್ತು ದೇವರುಗಳ ಫಲವಾಗಿ ಬರುವುದಿಲ್ಲ ಎಂದು ನಂಬಿದ ಮೊದಲನೆಯ ವ್ಯಕ್ತಿಯೆಂಬ ಹಿರಿಮೆಗೆ ಪಾತ್ರನಾಗಿದ್ದಾನೆ. ಹಿಪ್ಪೊಕ್ರೇಟ್ಸ್, ತತ್ತ್ವಶಾಸ್ತ್ರ ಮತ್ತು ವೈದ್ಯಕೀಯವನ್ನು ಒಟ್ಟಿಗೆ ಸೇರಿಸಿದ್ದರಿಂದ ಪೈಥಾಗರಸ್ ನ ಅನುಯಾಯಿಗಳಿಂದ ಮನ್ನಣೆ ಪಡೆದುಕೊಂಡ.[೧೬] ಅವನು, ಕಾಯಿಲೆಗಳು ದೇವರು ಕೊಟ್ಟ ಶಿಕ್ಷೆಯಲ್ಲ, ಅವು ಪರಿಸರಕ್ಕೆ ಸಂಬಂಧಿಸಿದ ಅಂಶಗಳಿಂದ, ಆಹಾರ ಕ್ರಮದಿಂದ, ಜೀವನ ಕ್ರಮದಿಂದ ಬರುವಂತಹವುಗಳಾಗಿದೆ ಎಂದು ನಂಬುವ ಮೂಲಕ ಮತ್ತು ವಾದಿಸುವ ಮೂಲಕ ವೈದ್ಯಕೀಯದ ವಿಷಯವನ್ನು ಧರ್ಮದಿಂದ ಬೇರ್ಪಡಿಸಿದನು. ವಾಸ್ತವವಾಗಿ ಸಂಪೂರ್ಣ ಹಿಪೊಕ್ರೆಟಿಕ್ ಕಾರ್ಪಸ್‌ನಲ್ಲಿ ಒಂದೇ ಒಂದು ಅತೀಂದ್ರಿಯ ರೋಗವನ್ನು ಹೆಸರಿಸಲಾಗಿಲ್ಲ. ಆದರೂ ಹಿಪ್ಪೊಕ್ರೇಟ್ಸ್, ರಸಧಾತುಸಿದ್ಧಾಂತ ದಂತಹ ತಪ್ಪು ಅಂಗರಚನಾ ಶಾಸ್ತ್ರ ಮತ್ತು ಶರೀರ ವಿಜ್ಞಾನವೆಂದು ಈಗ ಪರಿಗಣಿಸಲಾಗುವ ವಿಷಯಗಳ ಆಧಾರದ ಮೇಲಿನ ಅನೇಕ ನಿಶ್ಚಿತ ಅಭಿಪ್ರಾಯಗಳೊಡನೆ ಕಾರ್ಯನಿರ್ವಹಿಸಿದ್ದಾನೆ.[೧೭][೧೮][೧೯]
ವೈದ್ಯಕೀಯದ ಪ್ರಾಚೀನ ಗ್ರೀಕ್ ಶಾಲೆಗಳನ್ನು ಕಾಯಿಲೆಗಳನ್ನು ಹೇಗೆ ನಿಭಾಯಿಸುವುದು ಎಂಬುದರ ಮೇಲೆ ವಿಂಗಡಿಸಲಾಯಿತು ( ಕ್ನೈಡಿಯನ್ ಮತ್ತು ಕೋನ್ ಗಳಾಗಿ). ಔಷಧ ವೈದ್ಯಶಾಸ್ತ್ರದ ಕ್ನೈಡಿಯನ್ ಶಾಲೆಯು ರೋಗವನ್ನು ಪತ್ತೆ ಮಾಡುವುದರ ಮೇಲೆ ಹೆಚ್ಚು ಗಮನಹರಿಸಿತು. ಹಿಪ್ಪೊಕ್ರೇಟ್ಸ್ ನ ಕಾಲದಲ್ಲಿ ವೈದ್ಯಶಾಸ್ತ್ರವು ಮಾನವನ ಅಂಗರಚನಾ ಶಾಸ್ತ್ರ ಮತ್ತು ಶರೀರ ವಿಜ್ಞಾನದ ಬಗ್ಗೆ ಏನನ್ನು ತಿಳಿದುಕೊಂಡಿರಲಿಲ್ಲ, ಏಕೆಂದರೆ ಗ್ರೀಕ್ ನ ಟ್ಯಾಬೋ ಮಾನವನ ಅಂಗವಿಚ್ಛೇದನವನ್ನು ನಿಷೇಧಿಸಿತ್ತು. ಒಂದು ಕಾಯಿಲೆ ಸಂಭವವಿರುವ ಅನೇಕ ರೋಗ ಲಕ್ಷಣಗಳನ್ನು ಉಂಟುಮಾಡುತ್ತಿದ್ದ ಕಾರಣ , ಕ್ನೈಡಿಯನ್ ಶಾಲೆ ವಿಂಗಡಿಸುವಲ್ಲಿ ವಿಫಲವಾಯಿತು.[೨೦] ಹಿಪೊಕ್ರೆಟಿಕ್ ಶಾಲೆ ಅಥವಾ ಕೋನ್ ಶಾಲೆ , ಸಾಮಾನ್ಯ ರೋಗ ನಿರ್ಣಯಗಳನ್ನು ಮತ್ತು ಜಡ ಚಿಕಿತ್ಸೆಗಳನ್ನು ಅನ್ವಯಿಸುವುದರ ಮೂಲಕ ಅತ್ಯಂತ ಯಶಸ್ಸನ್ನು ಗಳಿಸಿತು. ಇದು ರೋಗ ನಿರ್ಣಯದ ಬಗ್ಗೆ ಗಮನ ಹರಿಸದೆ , ರೋಗಿಯ ಆರೈಕೆ ಮತ್ತು ರೋಗದ ಮುನ್ನರಿವಿನ ಬಗ್ಗೆ ಗಮನಹರಿಸಿತು. ಇದು ಪರಿಣಾಮಕಾರಿಯಾಗಿ ರೋಗವನ್ನು ಗುಣಪಡಿಸುವುದಲ್ಲದೇ, ಪ್ರಾಯೋಗಿಕ ವೃತ್ತಿಯಲ್ಲಿ ಮಹತ್ತರವಾದ ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಿತು.[೨೧][೨೨]
ಹಿಪೊಕ್ರೆಟಿಕ್ ವೈದ್ಯಕೀಯಶಾಸ್ತ್ರ ಮತ್ತು ಅದರ ತತ್ತ್ವಶಾಸ್ತ್ರವನ್ನು ಆಧುನಿಕ ವೈದ್ಯಕೀಯಶಾಸ್ತ್ರದಿಂದ ಬಹಳ ಹಿಂದೆಯೇ ತೆಗೆದುಹಾಕಲಾಗಿದೆ. ಪ್ರಸ್ತುತದಲ್ಲಿ, ವೈದ್ಯನು ನಿರ್ದಿಷ್ಟವಾಗಿ ರೋಗವನ್ನು ನಿರ್ಧರಿಸುವುದರ ಮೇಲೆ ಹಾಗು ವಿಶೇಷ ಗುಣಲಕ್ಷಣವುಳ್ಳ ಚಿಕಿತ್ಸೆಯ ಮೇಲೆ ಗಮನಹರಿಸುತ್ತಿದ್ದಾನೆ. ಇವೆರೆಡನ್ನು ಕ್ನೈಡಿಯನ್ ಶಾಲೆಯು ಅನುಸರಿಸಿತ್ತು. ಹಿಪ್ಪೊಕ್ರೇಟ್ಸ್ ನ ದಿನದಿಂದ ವೈದ್ಯಕೀಯ ಚಿಂತನೆಯಲ್ಲಿ ಉಂಟಾದ ಸ್ಥಾನಪಲ್ಲಟವು ಕಳೆದ ಎರಡು ಸಹಸ್ರಮಾನಗಳಲ್ಲಿ ತೀವ್ರ ಟೀಕೆಯನ್ನು ಉಂಟುಮಾಡಿತು. ಹಿಪೊಕ್ರೆಟಿಕ್ ಚಿಕಿತ್ಸೆಯ ಜಡತ್ವವು ತೀವ್ರ ಖಂಡನೆಗಳ ವಸ್ತುವಾಯಿತು. ಉದಾಹರಣೆಗೆ ಫ್ರೆಂಚ್ ವೈದ್ಯನಾದ M. S. ಹೌಡಾರ್ಟ್ , ಹಿಪೊಕ್ರೆಟಿಕ್ ಚಿಕಿತ್ಸೆಯನ್ನು " ಸಾವಿನ ಮೇಲೆ ಧ್ಯಾನಮಾಡುವುದು" ಎಂದು ಕರೆದಿದ್ದಾನೆ.[೨೩]
ರಸಧಾತುಸಿದ್ಧಾಂತ ಮತ್ತು ವಿಷಮ ಸ್ಥಿತಿ[ಬದಲಾಯಿಸಿ]
ಹಿಪೊಕ್ರೆಟಿಕ್ ಶಾಲೆಯು, ಎಲ್ಲಾ ರೋಗಗಳು ದೇಹದಲ್ಲಿ ನಾಲ್ಕು ರಸಧಾತುಗಳ ಅಸಮತೋಲನದಿಂದ ಬರುತ್ತವೆ ಎಂಬುದನ್ನು ಪ್ರತಿಪಾದಿಸಿತು - ಆರೋಗ್ಯದಲ್ಲಿರುವ ದ್ರವವು ಪ್ರಮಾಣದಲ್ಲಿ (ಪೆಪ್ಸಿಸ್ ) ಸಹಜವಾಗಿ ಸಮನಾಗಿರರುತ್ತದೆ.[೨೪] ನಾಲ್ಕು ರಸಧಾತುಗಳಾದ, ರಕ್ತ, ಕರಿಪಿತ್ತರಸ, ಹಳದಿ ಪಿತ್ತರಸ ಮತ್ತು ಶ್ಲೇಷ್ಮ, ಸಮತೋಲನ ಸ್ಥಿತಿಯಲ್ಲಿ (ಡೈಸ್ರೇಸಿಯ , ಇದರ ಅರ್ಥ "ಕೆಟ್ಟ ಮಿಶ್ರಣ")ಇಲ್ಲದಿದ್ದಾಗ, ವ್ಯಕ್ತಿಯು ರೋಗಕ್ಕೀಡಾಗಬಹುದು ಮತ್ತು ಈ ಸಮತೋಲನ ಹೇಗಾದರೂ ಮರುಸ್ಥಾಪನೆಯಾಗುವ ತನಕ ಇದೇ ಸ್ಥಿತಿ ಮುಂದುವರೆಯಬಹುದು. ಹಿಪೊಕ್ರೆಟಿಕ್ ಚಿಕಿತ್ಸೆಯು ಈ ಸಮತೋಲನದ ಮರುಸ್ಥಾಪನೆಯನ್ನು ನಿರ್ದೇಶಿಸುತ್ತದೆ. ಉದಾಹರಣೆಗೆ, ಶ್ಲೇಷ್ಮವು ಹೆಚ್ಚಾಗಿದ್ದಾಗ ಸಿಟ್ರಸ್ ಬಳಸುವುದು ಲಾಭದಾಯಕವಾಗಿದೆ ಎನ್ನಲಾಗುತ್ತದೆ.[೨೫]
ವಿಷಮ ಸ್ಥಿತಿ ಯು ಹಿಪೊಕ್ರೆಟಿಕ್ ವೈದ್ಯಶಾಸ್ತ್ರದಲ್ಲಿರುವ ಮತ್ತೊಂದು ಪ್ರಮುಖ ಪರಿಕಲ್ಪನೆಯಾಗಿದೆ. ಇದು ರೋಗದ ಪ್ರಗತಿಯಲ್ಲಿ ಕಾಯಿಲೆಯು ಮಿತಿ ಮೀರಬಹುದು ಮತ್ತು ರೋಗಿಯು ಸಾವಿಗೀಡಾಗಬಹುದು ಅಥವಾ ವಿರುದ್ಧ ಪರಿಸ್ಥಿತಿ ಉಂಟಾಗಬಹುದು ಹಾಗು ಸಹಜ ಪ್ರಕ್ರಿಯೆಗಳು ರೋಗಿಯನ್ನು ಗುಣಮುಖನಾಗಿಸಬಹುದು. ವಿಷಮಸ್ಥಿತಿಯ ನಂತರ, ರೋಗವು ಮರುಕಳಿಸಬಹುದು , ಇದರಿಂದಾಗಿ ಮತ್ತೊಂದು ವಿಷಮ ಸ್ಥಿತಿಯನ್ನು ನಿರ್ಧರಿಸಬೇಕಾಗುತ್ತದೆ. ಸಿದ್ಧಾಂತದ ಪ್ರಕಾರ, ವಿಷಮಸ್ಥಿತಿಯು ವಿಷಮಾವಸ್ಥೆಯ ದಿನಗಳಲ್ಲಿ ಉಂಟಾಗುತ್ತದೆ, ಇದು ರೋಗ ಬಂದ ನಂತರ ಒಂದು ನಿರ್ದಿಷ್ಟ ಕಾಲದಲ್ಲಿ ಉಂಟಾಗಬಹುದು ಎಂದು ನಿರೀಕ್ಷಿಸಲಾಗಿರುತ್ತದೆ. ಒಂದು ವೇಳೆ ವಿಷಮಾವಸ್ಥೆಯ ದಿನಕ್ಕೆ ದೂರದ ದಿನದಲ್ಲಿ ವಿಷಮಸ್ಥಿತಿಯು ಉಂಟಾದರೆ , ರೋಗ ಮರುಕಳಿಸಬಹುದು ಎಂದು ನಿರೀಕ್ಷಿಸಲಾಗುತ್ತದೆ. ಈ ಕಲ್ಪನೆಯು ಹಿಪ್ಪೊಕ್ರೇಟ್ಸ್‌ನೊಂದಿಗೆ ಹುಟ್ಟಿರಬಹುದಾಗಿದ್ದರೂ, ಇದು ಅವನಿಗಿಂತ ಮುಂಚೆಯೇ ಹುಟ್ಟಿರಬಹುದಾದ ಸಾಧ್ಯತೆಯಿದೆ[೨೬]

ಹಿಪೊಕ್ರೆಟಿಕ್ ವೈದ್ಯಶಾಸ್ತ್ರವು ಸಾಧಾರಣ ಮತ್ತು ಜಡವಾಗಿತ್ತು. ಚಿಕಿತ್ಸಾಕ್ರಮವು "ಪ್ರಕೃತಿಯ ಗುಣಪಡಿಸುವ ಶಕ್ತಿ" (" ಲ್ಯಾಟಿನ್ ನಲ್ಲಿ ವಿಸ ಮೆಡಿಕ್ಯಾಟ್ರಿಕ್ಸ್ ನೇಚರ್ ") ಯ ಮೇಲೆ ಆಧರಿತವಾಗಿತ್ತು. ಈ ಸಿದ್ಧಾಂತದ ಪ್ರಕಾರ, ದೇಹವು ಸ್ವಯಂ ನಾಲ್ಕು ರಸಧಾತುಗಳನ್ನು ಮರುಸಮತೋಲನಾ ಸ್ಥಿತಿಗೆ ತರುವ ಹಾಗು ಅದಾಗಿಯೇ ಗುಣವಾಗಬಲ್ಲ (ಫಿಸಿಸ್ ) ಶಕ್ತಿಯನ್ನು ಹೊಂದಿರುತ್ತದೆ.[೨೪] ಹಿಪೊಕ್ರೆಟಿಕ್ ಚಿಕಿತ್ಸೆಯು ಈ ಸಹಜವಾದ ಪ್ರಕ್ರಿಯೆಯನ್ನು ಸುಲಭವಾಗಿಸುವ ಕಡೆಗೆ ಹೆಚ್ಚು ಗಮನಹರಿಸಿದೆ. ಇದುವರೆವಿಗೆ, ಹಿಪ್ಪೊಕ್ರೇಟ್ಸ್, " ವಿಶ್ರಾಂತಿ ಮತ್ತು ನಿಶ್ಚಲಗೊಳಿಸುವಿಕೆಯು ಪ್ರಮುಖ ಮಹತ್ವವನ್ನು ಹೊಂದಿವೆ" ಎಂದು ನಂಬಿದ್ದನು.[೨೭] . ಸಾಮಾನ್ಯವಾಗಿ, ಹಿಪೊಕ್ರೆಟಿಕ್ ವೈದ್ಯಶಾಸ್ತ್ರವು ರೋಗಿಗೆ ಅತ್ಯಂತ ಕರುಣಾಮಯವಾಗಿತ್ತು; ಚಿಕಿತ್ಸೆಯು ಸೌಮ್ಯವಾಗಿತ್ತು ಹಾಗು ರೋಗಿಯನ್ನು ಸ್ವಚ್ಛವಾಗಿರಿಸುವುದರ ಕಡೆಗೆ ಹಾಗು ಸೂಕ್ಷ್ಮಜೀವಿರಹಿತವಾಗಿಸುವ ಕಡೆಗೆ ಹೆಚ್ಚು ಮಹತ್ವವನ್ನು ನೀಡಿತ್ತು. ಉದಾಹರಣೆಗೆ, ಸ್ವಚ್ಛವಾದ ನೀರು ಅಥವಾ ವೈನ್ ಅನ್ನು ಮಾತ್ರ ಗಾಯಗಳ ಮೇಲೆ ಬಳಸಬೇಕಿತ್ತು. ಆದರೂ "ಶುಷ್ಕ" ಚಿಕಿತ್ಸೆಗೆ ಆದ್ಯತೆಯನ್ನು ನೀಡಬಹುದಾಗಿದೆ. ಆಪ್ಯಾಯಮಾನ ಮುಲಾಮುಗಳನ್ನು ಕೆಲವೊಮ್ಮೆ ಬಳಸಲಾಗುತ್ತಿತ್ತು.[೨೮]
ಹಿಪ್ಪೊಕ್ರೇಟ್ಸ್ ಔಷಧಗಳನ್ನು ಬಳಸಲು ಹಾಗು ವಿಶೇಷವಾದ ಚಿಕಿತ್ಸೆಯಲ್ಲಿ ತೊಡಗಿಕೊಳ್ಳಲು ಹಿಂಜರಿಯುತ್ತಿದ್ದ. ಇದು ತಪ್ಪು ಆಯ್ಕೆಯೆಂದು ರುಜುವಾತಾಯಿತು. ಸಾಮಾನ್ಯೀಕರಿಸಿದ ಚಿಕಿತ್ಸೆಯು ಸಾಮಾನ್ಯೀಕರಿಸಲಾದ ರೋಗ ನಿರ್ಧಾರ ಕ್ರಮವನ್ನು ಅನುಸರಿಸಿತು.[೨೮][೨೯] ಆದರೂ, ಪರಿಣಾಮಕಾರಿಯಾದ ಔಷಧವನ್ನು ಕೆಲವೊಂದು ನಿರ್ದಿಷ್ಟ ಸಂದರ್ಭಗಳಲ್ಲಿ ಬಳಸಲಾಗುತ್ತಿತ್ತು.[೩೦] ಈ ಜಡ ಚಿಕಿತ್ಸಾಕ್ರಮವು ಮೂಳೆ ಮುರಿದುಹೋದಂತಹ ಸರಳವಾದ ಅಸ್ವಸ್ಥತೆಗಳನ್ನು ಗುಣಪಡಿಸುವಲ್ಲಿ ಅತ್ಯಂತ ಯಶಸ್ವಿಯಾಯಿತು. ಇದಕ್ಕೆ ಅಸ್ಥಿ ವ್ಯವಸ್ಥೆಯನ್ನು ಎಳೆಯಲು ಹಾಗು ಗಾಯವಾದ ಸ್ಥಳದ ಮೇಲೆ ಒತ್ತಡವನ್ನು ಕಡಿಮೆ ಮಾಡಲು ಅಂಗಕರ್ಷಣಅಗತ್ಯವಿರುತ್ತದೆ. ಹಿಪೊಕ್ರೆಟಿಕ್ ಬೆಂಚು ಮತ್ತು ಇತರ ಸಾಧನಗಳನ್ನು ಈ ಗುರಿಸಾಧನೆಗೆ ಬಳಸಲಾಗುತ್ತದೆ.
ಮುನ್ನರಿವಿಗೆ ಹೆಚ್ಚು ಮಹತ್ವವನ್ನು ನೀಡುವುದು ಹಿಪೊಕ್ರೆಟಿಕ್ ವೈದ್ಯಶಾಸ್ತ್ರದ ಶಕ್ತಿಗಳಲ್ಲಿ ಒಂದಾಗಿದೆ. ಹಿಪ್ಪೊಕ್ರೇಟ್ಸ್ ನ ಕಾಲದಲ್ಲಿ, ವೈದ್ಯಕೀಯ ಚಿಕಿತ್ಸೆಯು ಅಪಕ್ವವಾಗಿತ್ತು. ಅಲ್ಲದೇ ರೋಗವನ್ನು ನಿರ್ಣಯಿಸುವುದು ಹಾಗು ವಿಸ್ತೃತ ಪೂರ್ವಚರಿತ್ರೆಗಳಿಂದ ಸಂಗ್ರಹಿಸಿದ ದತ್ತಾಂಶದ ಆಧಾರದ ಮೇಲೆ ಅದು ವಿಷಮಸ್ಥಿತಿಗೆ ತಲುಪದಂತೆ ತಡೆಯುವುದು ವೈದ್ಯರು ಮಾಡಬಹುದಾಗಿದ್ದ ಉತ್ತಮ ಕೆಲಸವಾಗಿತ್ತು.[೧೯][೩೧]
ವೃತ್ತಿಪರತೆ[ಬದಲಾಯಿಸಿ]

ಹಿಪೊಕ್ರೆಟಿಕ್ ವೈದ್ಯಶಾಸ್ತ್ರವು ಅದರ ಕಠಿಣವಾದ ವೃತ್ತಿಪರತೆ, ಶಿಸ್ತು ಹಾಗು ಕಠಿಣವಾದ ಅಭ್ಯಾಸಕ್ಕೆ ಹೆಸರಾಗಿದೆ.[೩೩] ವೈದ್ಯರನ್ನು ಕುರಿತ ಹಿಪ್ಪೊಕ್ರೆಟಿಕ್ ಕೃತಿಯಲ್ಲಿ ವೈದ್ಯರು ಯಾವಾಗಲು ಸ್ವಚ್ಛವಾಗಿರಬೇಕು, ಪ್ರಾಮಾಣಿಕರಾಗಿರಬೇಕು, ಶಾಂತಸ್ವಭಾವದಿಂದಿರಬೇಕು, ಅರ್ಥಮಾಡಿಕೊಳ್ಳಬಲ್ಲವನಾಗಿರಬೇಕು ಹಾಗು ಗಂಭೀರವಾಗಿರಬೇಕು ಎಂದು ಶಿಫಾರಸು ಮಾಡುತ್ತದೆ. ಹಿಪೊಕ್ರೆಟಿಕ್ ವೈದ್ಯನು ವೃತ್ತಿಯ ಎಲ್ಲ ಅಂಶಗಳ ಮೇಲೆ ಎಚ್ಚರಿಕೆಯಿಂದ ಗಮನಹರಿಸುತ್ತಾನೆ. ಅವನು ಪ್ರಾಚೀನ ಶಸ್ತ್ರಚಿಕಿತ್ಸಾ ಕೊಠಡಿ ಯಲ್ಲಿ ದೀಪ ವ್ಯವಸ್ಥೆ, ಸಿಬ್ಬಂದಿ, ಸಲಕರಣೆಗಳು, ರೋಗಿಯ ಸ್ಥಿತಿ ಹಾಗು ಬ್ಯಾಂಡೇಜ್ ಮಾಡುವ ಹಾಗೂ ಮುರಿದ ಮೂಳೆಗೆ ಪಟ್ಟಿಕಟ್ಟುವ ವಿಧಾನಗಳ ಬಗ್ಗೆ ಸಂಪೂರ್ಣ ವಿವರಣೆಗಳನ್ನು ಅನುಸರಿಸುತ್ತಾನೆ.[೩೪] ಅವನ ಬೆರಳಿನ ಉಗುರುಗಳನ್ನು ನಿಖರವಾದ ಉದ್ದದವರೆಗೆ ಮಾತ್ರ ಇಟ್ಟುಕೊಂಡಿರುತ್ತಾನೆ.[೩೫]
ಹಿಪೊಕ್ರೆಟಿಕ್ ಶಾಲೆಯು ವೀಕ್ಷಣೆ ಮತ್ತು ದಾಖಲೆ ಸಂಗ್ರಣೆಯ ವೈದ್ಯಕೀಯ ಸಿದ್ಧಾಂತಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿತು. ಈ ಸಿದ್ಧಾಂತಗಳು, ವೈದ್ಯರು ಅವರ ಆವಿಷ್ಕಾರಗಳನ್ನು ಮತ್ತು ಅವರ ವೈದ್ಯಕೀಯ ವಿಧಾನಗಳನ್ನು ಸ್ಪಷ್ಟವಾಗಿ ಮತ್ತು ವಸ್ತುನಿಷ್ಠವಾಗಿ ದಾಖಲಿಸಿಡಬೇಕು ಎಂದು ತಿಳಿಸುತ್ತದೆ. ಇದರಿಂದಾಗಿ ಈ ದಾಖಲೆಗಳು ವರ್ಗಾವಣೆಯಾಗಿ ಇತರೆ ವೈದ್ಯರು ಇದನ್ನು ಬಳಸಬಹುದು.[೧೨] ಹಿಪ್ಪೊಕ್ರೇಟ್ಸ್, ಚರ್ಮದ ಬಣ್ಣ, ನಾಡಿ, ಜ್ವರ, ನೋವುಗಳು, ಚಲನೆ ಮತ್ತು ದೇಹಶುದ್ಧಿಯಂತಹ ಅನೇಕ ಲಕ್ಷಣಗಳ ಬಗ್ಗೆ ಎಚ್ಚರಿಕೆಯ, ನಿಯಮಿತವಾದ ಟಿಪ್ಪಣಿಯನ್ನು ಮಾಡುತ್ತಾನೆ.[೩೧] ಅವನು, ರೋಗದ ಪೂರ್ವಚರಿತ್ರೆಯನ್ನು ಪಡೆಯುವಾಗ ಒಂದುವೇಳೆ ರೋಗಿ ಸುಳ್ಳುಹೇಳಿದರೆ ,ರೋಗಿಯ ನಾಡಿಯ ಮಿಡಿತವನ್ನು ಅಳತೆಮಾಡುತ್ತಿದ್ದನೆಂದು ಹೇಳಲಾಗಿದೆ .[೩೬] ಹಿಪ್ಪೊಕ್ರೇಟ್ಸ್, ವೈದ್ಯಕೀಯ ವೀಕ್ಷಣೆಯನ್ನು ಕೌಟುಂಬಿಕ ಇತಿಹಾಸ ಮತ್ತು ಪರಿಸರದವರೆಗೆ ವಿಸ್ತರಿಸಿದನು.[೩೭] "ಅವನಿಗೆ ವೈದ್ಯಕೀಯ ಶಾಸ್ತ್ರವು ವೈದ್ಯಕೀಯ ತಪಾಸಣೆ ಮತ್ತು ವೀಕ್ಷಣೆಯ ಕಲೆಯಾಗಿದೆ".[೧೯] ಈ ಕಾರಣದಿಂದಾಗಿ, ಅವನನ್ನು ಹೆಚ್ಚು ಸೂಕ್ತವಾಗಿ " ರೋಗಿಯ ನೇರಪರೀಕ್ಷೆ(ಕ್ಲಿನಿಕಲ್)ಯ ವೈದ್ಯಶಾಸ್ತ್ರದ ದ ಪಿತಾಮಹ"ನೆಂದು ಕರೆಯಲಾಗಿದೆ.[೩೮]
ವೈದ್ಯಶಾಸ್ತ್ರಕ್ಕೆ ಕೊಟ್ಟ ನೇರ ಕೊಡುಗೆಗಳು[ಬದಲಾಯಿಸಿ]

ಹಿಪ್ಪೊಕ್ರೇಟ್ಸ್ ಮತ್ತು ಅವನ ಅನುಯಾಯಿಗಳು ಅನೇಕ ಕಾಯಿಲೆಗಳನ್ನು ಮತ್ತು ವೈದ್ಯಕೀಯ ಸ್ಥಿತಿಗತಿಗಳನ್ನು ಮೊದಲು ವಿವರಿಸಿದರು. ಅವನು , ಬೆರಳುಗಳು ರೂಪವಿಕೃತಿ ಬಗ್ಗೆ ಮೊದಲ ವಿವರಣೆ ನೀಡಿದ ಗೌರವವನ್ನು ಸಂಪಾದಿಸಿದ. ಇದು ಹುಣ್ಣಾಗುವ ದೀರ್ಘಕಾಲದ ಶ್ವಾಸಕೋಶ ಕಾಯಿಲೆಯನ್ನು ,ಶ್ವಾಸಕೋಶದ ಕ್ಯಾನ್ಸರ್ ಮತ್ತು ಸೈನಾಟಿಕ್ ಹೃದಯರೋಗವನ್ನು ನಿರ್ಧರಿಸಲು ಸಹಾಯವಾಗುವ ಅತ್ಯಂತ ಪ್ರಮುಖ ರೋಗಲಕ್ಷಣವಾಗಿದೆ. ಈ ಕಾರಣದಿಂದಾಗಿ ರೂಪವಿಕೃತಿಗೊಂಡ ಬೆರಳುಗಳನ್ನು ಕೆಲವೊಮ್ಮೆ "ಹಿಪೊಕ್ರೆಟಿಕ್ ಬೆರಳುಗಳು" ಎಂದು ಉಲ್ಲೇಖಿಸಲಾಗುತ್ತದೆ.[೩೯] ಹಿಪ್ಪೊಕ್ರೇಟ್ಸ್ , ಮುನ್ನರಿವು ನಲ್ಲಿ ಹಿಪೊಕ್ರೆಟಿಕ್ ಮುಖ ವನ್ನು ವಿವರಿಸಿದ ಮೊದಲನೆಯ ವೈದ್ಯನಾಗಿದ್ದಾನೆ. ಶೇಕ್ಸ್‌ಪಿಯರ್, ಈ ವಿವರಣೆಯನ್ನು ಹೆನ್ರಿV ಯ ಅಂಕ II ರ ದೃಶ್ಯ iii ರಲ್ಲಿ ಫಾಲ್ ಸ್ಟಫ್ ನ ಸಾವನ್ನು ಬರೆಯುವಾಗ ಪ್ರಾಸಂಗಿಕವಾಗಿ ಪ್ರಸ್ತಾಪಿಸಿದ್ದಾನೆ.[೪೦][೪೧]
ಹಿಪ್ಪೊಕ್ರೇಟ್ಸ್ , ರೋಗಗಳನ್ನು ಉಲ್ಬಣಗೊಂಡ, ದೀರ್ಘಕಾಲದ, ಸ್ಥಳೀಯ ಮತ್ತು ಸಾಂಕ್ರಾಮಿಕ ರೋಗಗಳೆಂದು ವರ್ಗೀಕರಿಸಲು ಪ್ರಾರಂಭಿಸಿದ. ಅಲ್ಲದೇ "ಉಲ್ಬಣಗೊಂಡ, ಮರುಕಳಿಸುವ, ಶಮನ, ನಿರ್ಧಾರಕ ಸ್ಥಿತಿ, ರೋಗದ ಉಲ್ಬಣ, ಕೊನೆಯ ಘಟ್ಟ, ಮತ್ತು ಚೇತರಿಕೆ ಯಂತಹ ಪದಗಳನ್ನು ಬಳಸಿದ."[೩೧][೪೨] ಹಿಪ್ಪೊಕ್ರೇಟ್ಸ್ ನ ಮತ್ತೊಂದು ಪ್ರಮುಖ ಕೊಡುಗೆಯನ್ನು , ಅವನ ರೋಗಲಕ್ಷಣಶಾಸ್ತ್ರ, ದೈಹಿಕ ಆವಿಷ್ಕಾರಗಳು, ಶಸ್ತ್ರಚಿಕಿತ್ಸೆ ಮತ್ತು ಎದೆಗೂಡಿನಲ್ಲಿ ಕೀವುಶೇಖರಣೆಯ ಮುನ್ನರಿವಿನ ವಿವರಣೆಗಳಲ್ಲಿ ಕಂಡುಬರುತ್ತದೆ. ಉದಾಹರಣೆಗೆ , ಎದೆಯ ಕವಾಟದ ಒಳಪದರದಲ್ಲಿ ಕೀವಾಗುವುದು. ಅವನ ಬೋಧನೆಗಳು ಶ್ವಾಸಕೋಶದ ವೈದ್ಯಶಾಸ್ತ್ರ ಮತ್ತು ಶಸ್ತ್ರಚಿಕಿತ್ಸೆಯ ಇಂದಿನ ದಿನದ ವಿದ್ಯಾರ್ಥಿಗಳಿಗೆ ಪ್ರಸ್ತುತವಾಗಿದೆ.[೪೩] ಹಿಪ್ಪೊಕ್ರೇಟ್ಸ್ , ದಾಖಲಿಸಲಾದ ಮೊಟ್ಟ ಮೊದಲನೆಯ ಎದೆಯ ಶಸ್ತ್ರಚಿಕಿತ್ಸಕನಾಗಿದ್ದಾನೆ. ಅಲ್ಲದೇ ಅವನ ಆವಿಷ್ಕಾರಗಳು ಇನ್ನೂ ಕ್ರಮಬದ್ಧವಾಗಿವೆ.[೪೩]
ವೈದ್ಯಶಾಸ್ತ್ರದ ಹಿಪೊಕ್ರೆಟಿಕ್ ಶಾಲೆ,ಅದರ ವೈದ್ಯಶಾಸ್ತ್ರದ ದುರ್ಬಲ ಸಿದ್ದಾಂತದ ಹೊರತಾಗಿಯೂ, ಮಾನವನ ಗುದನಾಳದ ವ್ಯಾಧಿಗಳನ್ನು ಹಾಗು ಅದರ ಚಿಕಿತ್ಸೆಗಳನ್ನು ಚೆನ್ನಾಗಿ ವಿವರಿಸಿದೆ. ಮೂಲವ್ಯಾಧಿ, ಉದಾಹರಣೆಗೆ, ಇದು ಪಿತ್ತರಸ ಮತ್ತು ಶ್ಲೇಷ್ಮ ಹೆಚ್ಚಾಗುವುದರಿಂದ ಉಂಟಾಗುತ್ತದೆ ಎಂದು ನಂಬಿದ್ದರೂ ಕೂಡ , ಇದನ್ನು ಹಿಪೊಕ್ರೆಟಿಕ್ ವೈದ್ಯರು ತುಲನಾತ್ಮಕವಾಗಿ ಅತ್ಯಂತ ಮುಂದುವರೆದ ರೀತಿಯಲ್ಲಿ ಚಿಕಿತ್ಸೆ ನೀಡಿದ್ದಾರೆ.[೪೪][೪೫] ಕಾಟರಿ(ಕಬ್ಬಿಣದ ಬರೆಕಡ್ಡಿ) ಮತ್ತು ಛೇದನ ಗಳನ್ನು ಆದ್ಯ ವಿಧಾನಗಳ ಜೊತೆಯಲ್ಲಿ ಹಿಪೊಕ್ರೆಟಿಕ್ ಕಾರ್ಪಸ್ ನಲ್ಲಿ ವಿವರಿಸಲಾಗಿದೆ: ಮೂಲವ್ಯಾಧಿಯನ್ನು ಬಿಗಿಯುವುದು ಹಾಗು ಬಿಸಿ ಕಬ್ಬಿಣದ ಮೂಲಕ ಒಣಗಿಸುವುದು. ವಿವಿಧ ಮುಲಾಮುಗಳನ್ನು ಹಚ್ಚುವಂತಹ ಇತರ ಚಿಕಿತ್ಸೆಗಳನ್ನು ಸೂಚಿಸಲಾಗಿದೆ.[೪೬][೪೭] ಇಂದು, "ಚಿಕಿತ್ಸೆಯು [ಮೂಲವ್ಯಾಧಿಗಳಿಗೆ] ಸುಡುವುದು, ಬಿಗಿಯುವುದು, ಮತ್ತು ಕತ್ತರಿಸಿಹಾಕುವುದನ್ನು" ಇನ್ನೂ ಒಳಗೊಂಡಿವೆ.[೪೪] ಅಲ್ಲದೇ ಕಾರ್ಪಸ್‌ನಲ್ಲಿ ವಿವರಿಸಲಾದ ಪ್ರಾಕ್ಟಸ್ಕೋಪಿಯ ಕೆಲವೊಂದು ಮೂಲಭೂತ ಪರಿಕಲ್ಪನೆಗಳು ಇನ್ನೂ ಬಳಕೆಯಲ್ಲಿವೆ.[೪೪][೪೫] ಉದಾಹರಣೆಗೆ, ಗುದನಾಳ ಒಳಗನ್ನಡಿ(ಸ್ಪೆಕ್ಯುಲಮ್)ಯ ಬಳಕೆ. ಇದು ಸಾಮಾನ್ಯವಾದ ವೈದ್ಯಕೀಯ ಸಾಧನವಾಗಿದ್ದು, ಹಿಪೊಕ್ರೆಟಿಕ್ ಕಾರ್ಪಸ್ ನಲ್ಲಿ ಚರ್ಚಿಸಲಾಗಿದೆ.[೪೫] ಇದು ಅಂತರ್ದರ್ಶಕಕ್ಕೆ ಹಿಂದೆ ದಾಖಲಿತವಾಗಿದ್ದ ಉದಾಹರಣೆಯನ್ನು ನೀಡುತ್ತದೆ.[೪೮][೪೯]
ಹಿಪೊಕ್ರೆಟಿಕ್ ಕಾರ್ಪಸ್[ಬದಲಾಯಿಸಿ]

ಹಿಪೊಕ್ರೆಟಿಕ್ ಕಾರ್ಪಸ್ (ಲ್ಯಾಟಿನ್: ಕಾರ್ಪಸ್ ಹಿಪೊಕ್ರೆಟಿಕಮ್ ) ಎಂಬುದು ಪ್ರಾಚೀನ ಗ್ರೀಸ್ ನಿಂದ ತೆಗೆದುಕೊಂಡ ಅಯಾನಿಕ್ ಗ್ರೀಕ್ ಭಾಷೆಯಲ್ಲಿ ಬರೆಯಲಾದ ಹಿಂದಿನ ಸುಮಾರು ಎಪ್ಪತ್ತು ವೈದ್ಯಕೀಯ ಲೇಖನಗಳ ಸಂಗ್ರಹವಾಗಿದೆ. ಹಿಪೊಕ್ರೆಟೀಸನೇ ಕಾರ್ಪಸ್ ನ ಕರ್ತೃ ಎಂಬ ಪ್ರಶ್ನೆಗೆ ಸಮಗ್ರ ಉತ್ತರವನ್ನು ನೀಡಲಾಗಿಲ್ಲ ,[೫೦] ಆದರೆ ಸಂಪುಟವನ್ನು ಬಹುಶಃ ಅವನ ವಿದ್ಯಾರ್ಥಿಗಳು ಮತ್ತು ಅನುಯಾಯಿಗಳು ತಯಾರಿಸಿದ್ದಾರೆ.[೫೧] ವಸ್ತುವಿನ ವಿಭಿನ್ನತೆಯಿಂದಾಗಿ, ಬರವಣಿಗೆಯ ಶೈಲಿಗಳಿಂದಾಗಿ ಹಾಗು ರಚನೆಯ ಸ್ಪಷ್ಟ ದಿನಾಂಕದಿಂದಾಗಿ, ವಿದ್ವಾಂಸರು ಹಿಪೊಕ್ರೆಟಿಕ್ ಕಾರ್ಪಸ್ ಕೇವಲ ಒಬ್ಬ ವ್ಯಕ್ತಿಯಿಂದ ರಚಿತವಾಗಿಲ್ಲ ಎಂದು ನಂಬಿದ್ದಾರೆ(ಎರ್ಮೆರಿನ್ಸ್ ಹತ್ತೊಂಭತ್ತು ಜನ ಲೇಖಕರು ಎಂದು ಸೂಚಿಸುತ್ತದೆ).[೩೦] ಕಾರ್ಪಸ್ ಪ್ರಾಚೀನತೆಯಲ್ಲಿ ಹಿಪ್ಪೊಕ್ರೇಟ್ಸ್ ನನ್ನು ಚಿತ್ರಿಸುತ್ತದೆ. ಅಲ್ಲದೇ ಇದರ ಬೋಧನೆಗಳು ಅವನ ತತ್ವಗಳನ್ನು ಅನುಸರಿಸುತ್ತವೆ;ಆದ್ದರಿಂದ ಇದು ಇವನ ಹೆಸರಿನಲ್ಲಿಯೆ ಪ್ರಸಿದ್ಧವಾಯಿತು. ಇದು ಕಾಸ್ ನ ಗ್ರಂಥಾಲಯದ ಅವಶೇಷವಾಗಿದೆ, ಅಥವಾ ಅಲೆಗ್ಸಾಂಡ್ರಿಯ ಯದಲ್ಲಿ ಕ್ರಿಸ್ತಪೂರ್ವ ೩ನೇ ಶತಮಾನದಲ್ಲಿ ಒಟ್ಟುಮಾಡಿದ ಸಂಗ್ರಹವಾಗಿದೆ.[೧೩][೩೪]
ಹಿಪೊಕ್ರೆಟಿಕ್ ಕಾರ್ಪಸ್ , ಪಠ್ಯಪುಸ್ತಕಗಳನ್ನು , ಉಪನ್ಯಾಸಗಳನ್ನು, ಸಂಶೋಧನೆ, ಟಿಪ್ಪಣಿ ಮತ್ತು ಯಾವುದೇ ನಿರ್ದಿಷ್ಟ ಕ್ರಮದಲ್ಲಿರದ ವೈದ್ಯಶಾಸ್ತ್ರದ ಮೇಲೆ ಬರೆಯಲಾದ ತತ್ತ್ವಶಾಸ್ತ್ರದ ವಿಭಿನ್ನ ಪ್ರಬಂಧಗಳನ್ನು ಒಳಗೊಂಡಿದೆ .[೫೦][೫೨] ಈ ಲೇಖನಗಳನ್ನು ವಿಭಿನ್ನ ಶ್ರೋತೃಗಳಿಗಾಗಿ , ವಿಶೇಷತಜ್ಞರಿಗೆ ಮತ್ತು ವೃತ್ತಿಪರರಲ್ಲದವರಿಗೂ ಬರೆಯಲಾಗಿದೆ. ಅಲ್ಲದೇ ಅವುಗಳನ್ನು ಕೆಲವೊಮ್ಮೆ ವಿರುದ್ಧ ದೃಷ್ಟಿಕೋನದಿಂದಲು ಬರೆಯಲಾಗಿದೆ;ಕಾರ್ಪಸ್ ನ ಲೇಖನಗಳ ನಡುವೆ ಗಮನಾರ್ಹ ವೈರುದ್ಯಗಳನ್ನು ನೋಡಬಹುದು.[೫೩] ಕಾರ್ಪಸ್ ನ ಪ್ರಬಂಧಗಳಲ್ಲಿ ಪ್ರಮುಖವಾದ ಪ್ರಬಂಧಗಳು ಕೆಳಕಂಡಂತಿವೆ: ದಿ ಹಿಪೊಕ್ರೆಟಿಕ್ ಓತ್ ; ದಿ ಬುಕ್ ಆಫ್ ಪ್ರೊಗ್ನಾಸ್ಟಿಕ್ಸ್ ; ಆನ್ ರೆಗಿಮೆನ್ ಇನ್ ಅಕ್ಯುಟ್ ಡಿಸೀಸಸ್ ; ಆಫರಿಸಮ್ಸ್ ; ಆನ್ ಏರ್ಸ, ವಾಟರ್ಸ್ ಅಂಡ್ ಪ್ಲೇಸ್ಸ್ ; ಇನ್ ಸ್ಟ್ರುಮೆಂಟ್ಸ್ ಆಫ್ ರಿಡಕ್ಷನ್ ; ಆನ್ ದಿ ಸೇಕ್ರಿಡ್ ಡಿಸೀಸ್ ; ಇತ್ಯಾದಿ.[೩೦]
ಹಿಪೊಕ್ರೆಟಿಕ್ ಓಥ್ (ಹಿಪೊಕ್ರೆಟಿಕ್ ಪ್ರಮಾಣ)[ಬದಲಾಯಿಸಿ]
ಹಿಪೊಕ್ರೆಟಿಕ್ ಓಥ್ ಎಂಬುದು, ವೈದ್ಯಕೀಯ ವೃತ್ತಿಯ ನೀತಿನಿಯಮಗಳ ಮೇಲೆ ಬರೆಯಲಾದ ಮೂಲ ದಾಖಲೆಯಾಗಿದೆ. ಇದು ಪ್ರಾಚೀನತೆಯಲ್ಲಿ ಹಿಪ್ಪೊಕ್ರೇಟ್ಸ್ ನನ್ನು ಚಿತ್ರಿಸಿದರೂ ಕೂಡ, ಹೊಸ ಮಾಹಿತಿಯು ಇದನ್ನು ಅವನ ಮರಣದ ನಂತರ ಬರೆಯಲಾಗಿದೆ ಎಂಬುದನ್ನು ತೋರಿಸುತ್ತದೆ. ಇದು ಬಹುಶಃ ಹಿಪೊಕ್ರೆಟಿಕ್ ಕಾರ್ಪಸ್ ನ ಅತ್ಯಂತ ಜನಪ್ರಿಯ ದಾಖಲೆಯಾಗಿದೆ. ಇತ್ತೀಚೆಗೆ ಈ ದಾಖಲೆಯ ಲೇಖಕನ ಸತ್ಯಾಸತ್ಯತೆಯು ಸೂಕ್ಷ್ಮ ಪರಿಶೀಲನೆಗೆ ಒಳಪಟ್ಟಿದೆ. ಈ ಪ್ರಮಾಣವನ್ನು ಅದರ ಮೂಲ ರೂಪದಲ್ಲಿ ಇಂದು ವಿರಳವಾಗಿ ಬಳಸುತ್ತಿದ್ದರೂ, ಇದು ಉತ್ತಮ ವೈದ್ಯಕೀಯ ವೃತ್ತಿಯನ್ನು ಮತ್ತು ನೈತಿಕತೆಯನ್ನು ವ್ಯಾಖ್ಯಾನಿಸುವ ಇತರೆ ಹೋಲಿಕೆಯ ಪ್ರಮಾಣಗಳಿಗೆ ಮತ್ತು ಕಾನೂನುಗಳಿಗೆ ಬುನಾದಿಯಾಗಿ ಕೆಲಸ ಮಾಡುತ್ತದೆ. ಇಂತಹ ಜನ್ಯಪದಗಳನ್ನು ಇಂದು ವೈದ್ಯಕೀಯ ಪದವೀಧರರು ವೈದ್ಯಕೀಯ ವೃತ್ತಿಯನ್ನು ಪ್ರವೇಶಿಸುವಾಗ ಕ್ರಮಬದ್ಧವಾಗಿ ತೆಗೆದುಕೊಳ್ಳುತ್ತಾರೆ.[೧೩][೫೪][೫೫]
ಪರಂಪರೆ[ಬದಲಾಯಿಸಿ]

ಹಿಪ್ಪೊಕ್ರೇಟ್ಸ್ ನನ್ನು " ವೈದ್ಯಶಾಸ್ತ್ರದ ಪಿತಾಮಹ"ನೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ.[೫೧] ಅವನ ಕೊಡುಗೆಗಳು ವೈದ್ಯಶಾಸ್ತ್ರದ ವೃತ್ತಿಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿತು; ಆದರೆ ಅವನ ಮರಣದ ನಂತರ ಮುನ್ನಡೆಯು ಸ್ಥಗಿತಗೊಂಡಿತು.[೫೬] ಹಿಪ್ಪೊಕ್ರೇಟ್ಸ್ ಎಷ್ಟೊಂದು ಗೌರವಕ್ಕೆ ಪಾತ್ರನಾಗಿದ್ದಾನೆಂದರೆ, ಅವನ ಬೋಧನೆಗಳನ್ನು ಅತ್ಯಂತ ಮಹತ್ತರವಾಗಿ ಪರಿಗಣಿಸಲಾಯಿತು. ಅಲ್ಲದೇ ದೀರ್ಘಕಾಲದವರೆಗೂ ಅವನ ವಿಧಾನಗಳ ಬಗ್ಗೆ ಯಾವುದೇ ಗಮನಾರ್ಹ ಮುನ್ನಡೆಗಳು ಕಂಡುಬರಲಿಲ್ಲ.[೧೩][೨೭] ಹಿಪ್ಪೊಕ್ರೇಟ್ಸ್ ನ ಮರಣದ ನಂತರದ ಶತಮಾನಗಳನ್ನು ಮತ್ತಷ್ಟು ಮುನ್ನಡೆಯ ಬದಲಿಗೆ ವಿರುದ್ಧಗತಿಯ ಚಲನೆಯಿತ್ತು. ಉದಾಹರಣೆಗೆ, ಫಿಲ್ಡಿಂಗ್ ಗ್ಯಾರಿಸನ್ ನ ಪ್ರಕಾರ " ಹಿಪೊಕ್ರೆಟಿಕ್ ಕಾಲದ ನಂತರ, ಪ್ರಾಯೋಗಿಕ ಪೂರ್ವ ಚರಿತ್ರೆಗಳ ಮಾಹಿತಿಯನ್ನು ತೆಗೆದುಕೊಳ್ಳುವ ಅಭ್ಯಾಸವು ನಿಂತುಹೋಯಿತು...", .[೫೭]
ಹಿಪ್ಪೊಕ್ರೇಟ್ಸ್ ನಂತರ ಬಂದ ಪ್ರಮುಖ ವೈದ್ಯನೆಂದರೆ ಗ್ಯಾಲೆನ್. ಇವನು ಗ್ರೀಕ್ ನವನಾಗಿದ್ದು ೧೨೯ ರಿಂದ ೨೦೦ ADವರೆಗೆ ಬದುಕಿದ್ದನು. ಗ್ಯಾಲೆನ್ ಮುನ್ನಡೆ ಮತ್ತು ಹಿನ್ನಡೆಯ ಮೂಲಕ ಹಿಪ್ಪೋಕ್ರೇಟಿಕ್ ವೈದ್ಯಶಾಸ್ತ್ರವನ್ನು ಅವಿಸ್ಮರಣೀಯವಾಗಿಸಿದನು.[೫೮] ಮಧ್ಯ ಯುಗದಲ್ಲಿ, ಅರಬ್ ಜನರು ಹಿಪೊಕ್ರೆಟಿಕ್ ವಿಧಾನಗಳನ್ನು ಅಳವಡಿಸಿಕೊಂಡರು.[೫೯] ಯುರೋಪಿಯನ್ ಪುನರುದಯ ದ ನಂತರ, ಹಿಪೊಕ್ರೆಟಿಕ್ ವಿಧಾನಗಳು ಯುರೋಪ್ ನಲ್ಲಿ ಮತ್ತೆ ಪುನಶ್ಚೇತನ ಪಡೆಯಿತು ಹಾಗು ಇದು ೧೯ನೇ ಶತಮಾನದಲ್ಲಿ ಮತ್ತಷ್ಟು ವಿಸ್ತರಣೆಗೊಂಡಿತು. ಸಿಡೆನ್ ಹ್ಯಾಮ್, ಹರ್ಬರ್ಡನ್, ಚಾರ್ಕಾಟ್ ಮತ್ತು ಒಸ್ಲರ್ ಎಂಬುವವರು ಹಿಪ್ಪೊಕ್ರೇಟ್ಸ್ ನ ಕಠಿಣವಾದ ಪ್ರಾಯೋಗಿಕ ವಿಧಾನಗಳನ್ನು ಬಳಸಿಕೊಂಡರು. ಫ್ರೆಂಚ್ ವೈದ್ಯನಾದ ಹೆನ್ರಿ ಹಚರ್ಡ್, ಈ ಪುನಶ್ಚೇತನಗಳು " ಆಂತರಿಕ ವೈದ್ಯಶಾಸ್ತ್ರದ ಸಂಪೂರ್ಣ ಇತಿಹಾಸವನ್ನು" ನಿರ್ಮಿಸುತ್ತದೆ ಎಂದು ಹೇಳಿದ್ದಾನೆ.[೬೦]
ಚಿತ್ರಗಳು[ಬದಲಾಯಿಸಿ]

ಅರಿಸ್ಟಾಟಲ್ ನ ಹೇಳಿಯ ಪ್ರಕಾರ, ಹಿಪ್ಪೊಕ್ರೇಟ್ಸ್ "ದಿ ಗ್ರೇಟ್ ಹಿಪ್ಪೊಕ್ರೇಟ್ಸ್" ಎಂದು ಹೆಸರಾಗಿದ್ದನು[೬೧] ಅವನ ಸ್ವಭಾವಕ್ಕೆ ಸಂಬಂಧಿಸಿದಂತೆ, ಹಿಪ್ಪೊಕ್ರೇಟ್ಸ್ ನನ್ನು ಮೊಟ್ಟ ಮೊದಲನೆಯ ಬಾರಿಗೆ "ಕರುಣಾಳುವಿನಂತೆ, ಸಂಭಾವಿತ, ಹಿರಿಯ ನಾಡ ವೈದ್ಯ" ನಂತೆ ಚಿತ್ರಿಸಲಾಗಿತ್ತು . ನಂತರ "ಕಟ್ಟುನಿಟ್ಟಿನ ಮತ್ತು ನಿಷೇಧಕನಂತೆ" ಚಿತ್ರಿಸಲಾಯಿತು.[೧೩] ಅವನನ್ನು ನಿರ್ದಿಷ್ಟವಾಗಿ ಅತ್ಯಂತ ಬುದ್ಧಿವಂತಿಕೆಯ ಸೂಕ್ಷ್ಮ ಗ್ರಹಿಕೆಯ ವ್ಯಕ್ತಿ ಹಾಗು ವಿಶೇಷವಾಗಿ ಅತ್ಯಂತ ಪ್ರಯೋಗಶೀಲ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಫ್ರಾನ್ಸಿಸ್ ಆಡಮ್ಸ್, ಅವನನ್ನು "ಸಂಪೂರ್ಣವಾಗಿ, ಅನುಭವದ ಮತ್ತು ಸಾಮಾನ್ಯ ತಿಳುವಳಿಕೆಯ ವೈದ್ಯ" ಎಂದು ವಿವರಿಸಿದ್ದಾನೆ.[೨೦]
ಬುದ್ಧಿವಂತ ಹಿರಿಯ ವೈದ್ಯನಂತಿರುವ ಅವನ ಚಿತ್ರವು ಅವನ ಪ್ರತಿಮೆಗಳಿಂದ ಬಲಪಟ್ಟಿದೆ. ಈ ಪ್ರತಿಮೆಯು ಸುಕ್ಕಾದ ಮುಖದ ಮೇಲೆ ದೊಡ್ಡ ಗಡ್ಡವನ್ನು ಹೊಂದಿದೆ. ಆ ಕಾಲದ ಅನೇಕ ವೈದ್ಯರು ತಮ್ಮ ಕೂದಲನ್ನು ಜುಪಿಟರ್ ಅಥವಾ ಆಸ್ಕ್ ಲೆಪಿಸ್ ನಂತೆ ಬಿಡುತ್ತಿದ್ದರು. ಇದೇ ಪ್ರಕಾರ, ನಾವು ಹೊಂದಿರುವ ಹಿಪ್ಪೊಕ್ರೇಟ್ಸ್ ನ ಪ್ರತಿಮೆಗಳು ಈ ದೇವತೆಗಳ ಚಿತ್ರಗಳನ್ನು ಮಾರ್ಪಡಿಸಲಾದ ಆವೃತ್ತಿಗಳಾಗಿವೆ.[೫೬] ಹಿಪ್ಪೊಕ್ರೇಟ್ಸ್ ಮತ್ತು ಅವನು ವ್ಯಕ್ತಪಡಿಸಿದ ನಂಬಿಕೆಗಳನ್ನು ವೈದ್ಯಕೀಯ ಕ್ಷೇತ್ರದ ಆದರ್ಶಗಳೆಂದು ಪರಿಗಣಿಸಲಾಗುತ್ತದೆ. ವೈದ್ಯಕೀಯ ಇತಿಹಾಸದಲ್ಲಿ ತಜ್ಞನಾಗಿದ್ದ ಫಿಲ್ಡಿಂಗ್ ಗ್ಯಾರಿಸನ್, "ಎಲ್ಲಕ್ಕಿಂತ ಮಿಗಿಲಾದ ಅವನು, ಮನಸ್ಸಿನ , ಹೊಂದಿಕೊಳ್ಳುವ, ವಿಮರ್ಶಾತ್ಮಕ, ಸರಿತೂಗಿಸುವ ವರ್ತನೆಯ ಮಾದರಿಯಾಗಿದ್ದಾನೆ, ಯಾವಾಗಲು ತಪ್ಪಿನ ಮೂಲಗಳಿಗಾಗಿ ಹುಡುಕುತ್ತಿದ್ದ. ಇದು ವೈಜ್ಞಾನಿಕ ಆಸಕ್ತಿಗೆ ಬೇಕಾದ ಅತಿ ಮುಖ್ಯ ಅಂಶವಾಗಿದೆ" ಎಂದು ತಿಳಿಸಿದ್ದಾನೆ.[೬೦] ಎ ಶಾರ್ಟ್ ಹಿಸ್ಟ್ರಿ ಆಫ್ ಮೆಡಿಸನ್ ನ ” ಪ್ರಕಾರ ಅವನ ವ್ಯಕ್ತಿತ್ವವು ಆದರ್ಶ ವೈದ್ಯನಾಗಿ ಸಾರ್ವಕಾಲಿಕವಾಗಿ ಉಳಿಯುತ್ತದೆ. ಅವನ ಸಾವಿನ ನಂತರ ವೈದ್ಯಕೀಯ ವೃತ್ತಿಗೆ ಅವನು ಸ್ಫೂರ್ತಿಯಾಗಿದ್ದಾನೆ.[೬೨]
ದಂತಕತೆಗಳು(ಐತಿಹ್ಯಗಳು)[ಬದಲಾಯಿಸಿ]
Aphorisms i.1.
ಹಿಪ್ಪೊಕ್ರೇಟ್ಸ್ ಜೀವನದ ಬಗೆಗಿರುವ ಬಹುಪಾಲು ಕಥೆಗಳು ಸುಳ್ಳುಕಥೆಗಳಾಗಿ ಕಾಣುತ್ತವೆ. ಏಕೆಂದರೆ ಅವುಗಳು ಐತಿಹಾಸಿಕ ಸಾಕ್ಷಿಗಳೊಂದಿಗೆ ಹೊಂದಿಕೆಯಾಗುವುದಿಲ್ಲ. ಅಲ್ಲದೇ ಅವಿಸೆನ್ನಾ ಮತ್ತು ಸಾಕ್ರಿಟಿಸ್ ನಂತಹ ಇತರ ವ್ಯಕ್ತಿಗಳ ಬಗ್ಗೆ ಐತಿಹ್ಯಗಳ ಮೂಲವನ್ನು ಸೂಚಿಸುತ್ತ, ಇದೇ ರೀತಿಯ ಅಥವಾ ಹೋಲಿಕೆಯ ಕಥೆಗಳನ್ನು ಹೇಳಲಾಗಿದೆ. ಅಲ್ಲದೇ ಅವನು ಬದುಕಿದ್ದ ಕಾಲದಲ್ಲಿಯೂ ಹಿಪ್ಪೊಕ್ರೇಟ್ಸ್ ನ ಪ್ರಖ್ಯಾತಿಯು ಮಹತ್ತರವಾಗಿತ್ತು ಮತ್ತು ಪವಾಡಸದೃಶ ರೋಗಚಿಕಿತ್ಸೆಯ ಕಥೆಗಳು ಹುಟ್ಟಿಕೊಂಡವು. ಉದಾಹರಣೆಗೆ, ಹಿಪ್ಪೊಕ್ರೇಟ್ಸ್, ಅಥೆನ್ಸ್ ನಲ್ಲಿ ಪ್ಲೇಗ್ ಹರಡಿದ್ದ ಸಂದರ್ಭದಲ್ಲಿ ಅಥೇನಿಯನ್ನರನ್ನು "ಸೋಂಕು ನಿವಾರಕ" ವೆಂಬಂತೆ ಬೆಂಕಿಗಳನ್ನು ಉರಿಸುವ ಮೂಲಕ ಮತ್ತು ಇತರ ಚಿಕಿತ್ಸೆಗಳಲ್ಲಿ ತೊಡಗಿಸುವ ಮೂಲಕ ಗುಣಪಡಿಸಿದನು. ಹಿಪ್ಪೊಕ್ರೇಟ್ಸ್, ಪರ್ಡಿಕಸ್ ಎಂಬ ಮ್ಯಾಸಿಡೋನಿಯನ್ ರಾಜನ, "ಪ್ರೇಮ ರೋಗ"ವನ್ನು ಗುಣಪಡಿಸಿದ ಎಂಬ ಕಥೆಯಿದೆ. ಈ ಮಾಹಿತಿಗಳನ್ನು ಯಾವ ಇತಿಹಾಸಕಾರರು ದೃಢೀಕರಿಸಿಲ್ಲ ,ಅದ್ದರಿಂದ ಇವು ನಡೆದಿರಲು ಸಾಧ್ಯವಿಲ್ಲ.[೬೩][೬೪][೬೫]

ಇವನ ಬಗ್ಗೆ ಇರುವ ಮತ್ತೊಂದು ಐತಿಹ್ಯವು, ಹಿಪ್ಪೊಕ್ರೇಟ್ಸ್ ಹೇಗೆ ಆರ್ಟಾಕ್ಸರಕ್ಸಸ್ ನ್ಯಾಯಾಲಯವನ್ನು ಒಮ್ಮೆ ಭೇಟಿಮಾಡಬೇಕೆಂಬ , ಪರ್ಶಿಯಾದ ರಾಜನ ಔಪಚಾರಿಕ ಮನವಿಯನ್ನು ತಳ್ಳಿಹಾಕಿದ ಎಂಬುದಕ್ಕೆ ಸಂಬಂಧಿಸಿದೆ.[೬೭] ಇದರ ತರ್ಕಬದ್ಧತೆಯನ್ನು ಪ್ರಾಚೀನ ಮೂಲಗಳು ಒಪ್ಪಿಕೊಂಡಿವೆ. ಆದರೆ ಕೆಲವು ಆಧುನಿಕ ಮೂಲಗಳು ನಿರಾಕರಿಸಿವೆ , ಆದ್ದರಿಂದ, ಇದು ವಿವಾದಾತ್ಮಕವಾಗಿ ಉಳಿದಿದೆ.[೬೮] ಮತ್ತೊಂದು ಕಥೆ , ಡೆಮೊಕ್ರಿಟಸ್ ಹುಚ್ಚನಾಗಿದ್ದಿರಬೇಕು , ಏಕೆಂದರೆ ಅವನು ಎಲ್ಲಾ ವಿಷಯಕ್ಕೂ ನಗುತ್ತಿದ್ದ. ಆದ್ದರಿಂದ ಅವನನ್ನು ಗುಣಪಡಿಸಲು ಹಿಪ್ಪೊಕ್ರೇಟ್ಸ್ ನಲ್ಲಿಗೆ ಕಳುಹಿಸಲಾಯಿತು ಎಂದು ಹೇಳುತ್ತದೆ. ಅವನು ಕೇವಲ ಸಂತೋಷದ ಮನಸ್ಥಿತಿಯನ್ನು ಹೊಂದಿದ್ದಾನೆಂಬುದನ್ನು ಹಿಪ್ಪೊಕ್ರೇಟ್ಸ್ ಗುರುತಿಸಿದನು. ಡೆಮೊಕ್ರಿಟಸ್ , ನನ್ನು ಆಗಿನಿಂದ "ನಗುತ್ತಿರುವ ತತ್ತ್ವಜ್ಞಾನಿ" ಎಂದೇ ಕರೆಯಲಾಯಿತು.[೬೯]
ಹಿಪ್ಪೊಕ್ರೇಟ್ಸ್ ನ ಎಲ್ಲಾ ಕಥೆಗಳು ಅವನನ್ನು ಸಕಾರಾತ್ಮಕ ರೀತಿಯಲ್ಲಿ ಚಿತ್ರಿಸಿಲ್ಲ. ಒಂದು ಐತಿಹ್ಯದಲ್ಲಿ ಹಿಪ್ಪೊಕ್ರೇಟ್ಸ್ , ಗ್ರೀಸ್ ನಲ್ಲಿರುವ ಕಾಯಿಲೆ ಉಪಶಮನದ ದೇವಸ್ಥಾನಕ್ಕೆ ಬೆಂಕಿಯನ್ನು ಹಚ್ಚಿದ ನಂತರ ಅಲ್ಲಿಂದ ಓಡಿಹೋದನೆಂದು ಹೇಳಲಾಗಿದೆ. ಎಫೆಸಸ್ ನ ಸೊರಾನಸ್ ಎಂಬ ವೈದ್ಯ, ಈ ಕಥೆಯ ಮೂಲಕರ್ತ, ನಿಡೋಸ್ನ ದೇವಸ್ಥಾನದ ಹೆಸರನ್ನು ನೀಡುತ್ತಾನೆ. ಆದರೂ ಶತಮಾನಗಳ ನಂತರ, ಬೈಸನ್ ಟೈನ್ ಗ್ರೀಕ್ ವ್ಯಾಕರಣಗಾರನಾದ ಜಾನ್ ಜೆಟ್ಜೆಸ್, ಹಿಪ್ಪೊಕ್ರೇಟ್ಸ್ ಅವನ ಸ್ವಂತ ದೇವಸ್ಥಾನವಾದ ಕಾಸ್ ನ ದೇವಸ್ಥಾನವನ್ನು ಸುಟ್ಟುಹಾಕಿದ. ಏಕೆಂದರೆ ವೈದ್ಯಕೀಯ ಜ್ಞಾನದ ಏಕಸ್ವಾಮ್ಯವನ್ನು ಕಾಯ್ದುಕೊಳ್ಳಲು ಹೀಗೆ ಮಾಡಿದ ಎಂದು ಊಹಿಸಿದ. ಈ ಮಾಹಿತಿಯು ಹಿಪ್ಪೊಕ್ರೇಟ್ಸ್ ನ ವ್ಯಕ್ತಿತ್ವದ ಸಾಂಪ್ರದಾಯಿಕ ಮಾಹಿತಿಗಳಿಗೆ ವಿರುದ್ಧವಾಗಿದೆ. ಇತರ ಐತಿಹ್ಯಗಳು ಅಗಸ್ಟಸ್ ನ ಸೋದರನ ಮಗನಿಂದ ಅವನ ಪುನರುತ್ಥಾನದ ಬಗ್ಗೆ ತಿಳಿಸುತ್ತವೆ;ಅವನ ಸಾಧನೆಯನ್ನು ಹಿಪ್ಪೊಕ್ರೇಟ್ಸ್ ನ ಪ್ರತಿಮೆಯ ನಿರ್ಮಾಣದಿಂದ ಹಾಗು ಅವನ ಗೌರವಾರ್ಥ ರೋಮ್ ನಲ್ಲಿ ಪ್ರಾಧ್ಯಾಪಕತ್ವವನ್ನು ಸ್ಥಾಪಿಸುವ ಮೂಲಕ ಮಾಡಲಾಯಿತು.[೧೨][೬೩][೬೫][೭೦]
ವಂಶಾನ್ವೇಷಣ[ಬದಲಾಯಿಸಿ]
ಹಿಪ್ಪೊಕ್ರೇಟ್ಸ್ ನ ಪ್ರಸಿದ್ಧ ವಂಶಾನ್ವೇಷಣವು ಅವನ ತಂದೆಯ ವಂಶಜರು ಆಸ್ಕ್ ಲೆಪಿಸ್ ಮತ್ತು ತಾಯಿಯ ಪೂರ್ವಿಕರು ಹರಾಕಲ್ಸ್ ಎಂಬುದನ್ನು ನೇರವಾಗಿ ಪತ್ತೆಮಾಡಿದೆ.[೩೦] ಟ್ಜೆಟ್ಜೆಸ್ ನ ಚಿಲೈಡ್ಸ್ ನ ಪ್ರಕಾರ , ಹಿಪ್ಪೊಕ್ರೇಟ್ಸ್ ನ ಆನೆನ್ತಫೆಲ್ II :[೭೧]

೧. ಹಿಪ್ಪೊಕ್ರೇಟ್ಸ್ II. “ ವೈದ್ಯಶಾಸ್ತ್ರದ ಪಿತಾಮಹ”
೨. ಹರ್ಕ್ಲೈಡ್ಸ್
೪. ಹಿಪ್ಪೊಕ್ರೇಟ್ಸ್ I.
೮. ಗ್ನೊಸಿಡಿಕಸ್
೧೬. ನೆಬ್ರುಸ್
೩೨. ಸೊಸ್ಟ್ರ್ಯಾಟಸ್ III.
೬೪. ಥಿಯೋಡೋರಸ್ II.
೧೨೮. ಸೊಸ್ಟ್ರ್ಯಾಟಸ್, II.
೨೫೬. ಥಿಡೊರಸ್
೫೧೨. ಕ್ಲಿಯೊಮೈಟ್ಯಾಡ್ಸ್
೧೦೨೪. ಕ್ರಿಸಮಿಸ್
೨೦೪೮. ಡಾರ್ಡಾನಸ್
೪೦೯೬. ಸೊಸ್ಟ್ಯಾಟಸ್
೮೧೯೨. ಹಿಪ್ಪೊಲುಚಸ್
೧೬೩೮೪. ಪೊಡಲಿರಿಯಸ್
೩೨೭೬೮. ಆಸ್ಕ್ ಲೆಪಿಸ್
ಸಮಾನ ನಾಮಧಾರಿ[ಬದಲಾಯಿಸಿ]
ಕೆಲವು ರೋಗದ ಗುಣಲಕ್ಷಣಗಳನ್ನು ಮತ್ತು ಗುರುತುಗಳನ್ನು ಮೊಟ್ಟಮೊದಲನೆಯ ಬಾರಿಗೆ ವಿವರಿಸಿದವನು ಹಿಪ್ಪೊಕ್ರೇಟ್ಸ್ ಎಂದು ನಂಬಲಾಗಿದ್ದರಿಂದ ಅವನ ನಂತರ ಈ ರೋಗದ ಗುಣಲಕ್ಷಣಗಳಿಗೆ ಮತ್ತು ಗುರುತುಗಳಿಗೆ ಅವನ ಹೆಸರನ್ನೇ ಇಡಲಾಯಿತು. ಹಿಪೊಕ್ರೆಟಿಕ್ ಫೇಸ್ ಎಂಬುದು, ಸಾವಿನಿಂದಾಗಿ ಅಥವಾ ದೀರ್ಘಕಾಲದ ರೋಗದಿಂದಾಗಿ, ಅಧಿಕ ವಿಸರ್ಜನೆಯಿಂದಾಗಿ, ಹೆಚ್ಚು ಹೊಟ್ಟೆ ಹಸಿವಿನಿಂದಾಗಿ ಹಾಗು ಇತ್ಯಾದಿಗಳಿಂದಾಗಿ ಮುಖಭಾವದಲ್ಲಿ ಉಂಟಾಗುವ ಬದಲಾವಣೆಯಾಗಿದೆ. ಕ್ಲಬ್ಬಿಂಗ್, ಬೆರಳುಗಳ ಮತ್ತು ಉಗುರುಗಳ ವಿಕೃತರೂಪವಾಗಿದ್ದು, ಇದನ್ನು ಹಿಪೊಕ್ರೆಟಿಕ್ ಬೆರಳುಗಳು ಎಂದು ಕರೆಯಲಾಗುತ್ತದೆ. ಹಿಪೊಕ್ರೆಟಿಕ್ ಸಕ್ಯುಷನ್ ಎಂಬುದು ಹೈಡ್ರೊಪೆನ್ಯುಮಾಥೋರಾಕ್ಸ್ ಅಥವಾ ಪೈಯೊಪೆನ್ಯುಮಾಥೋರಾಕ್ಸ್ ನ ಆಂತರಿಕ ಸಿಡಿಯುವ ಶಬ್ದವಾಗಿದೆ. ಹಿಪೊಕ್ರೆಟಿಕ್ ಬೆಂಚ್ (ಇದು ಮುರಿದ ಮೂಳೆಯನ್ನು ಸರಿಯಾಗಿ ಜೋಡಿಸುವ ಚಿಕಿತ್ಸೆಯಲ್ಲಿ ಎಳೆತವನ್ನು ಬಳಸುವ ಸಾಧನವಾಗಿದೆ) ಮತ್ತು ಹಿಪೊಕ್ರೆಟಿಕ್ ಕ್ಯಾಪ್-ಆಕಾರದ ಬ್ಯಾಂಡೇಜ್ ಗಳು ಹಿಪ್ಪೊಕ್ರೇಟ್ಸ್ ನ ಹೆಸರನ್ನು ಇಟ್ಟಂತಹ ಎರಡು ಸಾಧನಗಳಾಗಿವೆ.[೭೨] ಹಿಪೊಕ್ರೆಟಿಕ್ ಕಾರ್ಪಸ್ ಮತ್ತು ಹಿಪೊಕ್ರೆಟಿಕ್ ಓತ್(ಪ್ರಮಾಣ) ಗಳು ಕೂಡ ಅವನ ಸಮಾನನಾಮಧಾರಿಯಾಗಿವೆ. ಹಿಪೊಕ್ರ್ಯಾಸ್ ಎಂಬ ಪಾನೀಯವನ್ನು ಕೂಡ ಹಿಪ್ಪೊಕ್ರೇಟ್ಸ್ ಕಂಡುಹಿಡಿದಿದ್ದಾನೆ ಎಂದು ನಂಬಲಾಗಿದೆ. ರಿಸಸ್ ಸ್ಯಾರ್ಡೋನಿಕಸ್, ಮುಖದ ಸ್ನಾಯುಗಳ ಸೆಡೆತವನ್ನು ಹಿಪೊಕ್ರೆಟಿಕ್ ನಗು ಎಂದು ಕರೆಯಬಹುದು.
ಆಧುನಿಕ ಯುಗದಲ್ಲಿ, ಚಂದ್ರನ ಮೈಮೇಲೆ ಕಂಡುಬರುವ ಬಟ್ಟಲಿನಾಕಾರದ ಕುಳಿಗೆ ಹಿಪ್ಪೊಕ್ರೇಟ್ಸ್ ಎಂದು ಹೆಸರಿಡಲಾಗಿದೆ. ಹಿಪೊಕ್ರೆಟಿಕ್ ಮ್ಯೂಸಿಯಂ, ಇದು ಕಾಸ್ ನ ಗ್ರೀಕ್ ಐಲ್ಯಾಂಡ್ ನಲ್ಲಿರುವ ಮ್ಯೂಸಿಯಂ ಆಗಿದ್ದು, ಇದನ್ನು ಅವನಿಗೆ ಸಮರ್ಪಿಸಲಾಗಿದೆ. ಹ್ಯಾರಿ ಪಾಟರ್ಸರಣಿಯಲ್ಲಿ ,ಅರ್ಥರ್ ವೆಸ್ಲೆ ಯ ವಾರ್ಡ್‌ನ ಪ್ರಧಾನ ಪರ್ಯಾಯ ಔಷಧಿಯ ಹೆಸರು ಹಿಪ್ಪೊಕ್ರೇಟ್ಸ್ ಸ್ಮೆತ್ವಿಕ್ ಎಂದಾಗಿದೆ. ದಿ ಹಿಪ್ಪೊಕ್ರೇಟ್ಸ್ ಪ್ರಾಜೆಕ್ಟ್ ಎಂಬುದು ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ವೈದ್ಯಕೀಯ ಕೇಂದ್ರದ ಕಾರ್ಯಕ್ರಮವಾಗಿದ್ದು , ಇದು ತಂತ್ರಜ್ಞಾನದ ಬಳಕೆಯ ಮೂಲಕ ಶಿಕ್ಷಣವನ್ನು ವರ್ಧಿಸುವುದಾಗಿದೆ. ಪ್ರಾಜೆಕ್ಟ್ ಹಿಪ್ಪೊಕ್ರೇಟ್ಸ್ ( "HI gh P erfO rmance C omputing for R obot-A ssisTE d Surgery ಯ ಪ್ರಥಮಾಕ್ಷರವಾಗಿದೆ") ಎಂಬುದು ಗಣಕ ವಿಜ್ಞಾನದ ಕ್ಯಾರ್ನಿಗ್ ಮೆಲಾನ್ ಸ್ಕೂಲ್ ಮತ್ತು ಶ್ಯಾಡಿಸೈಡ್ ವೈದ್ಯಕೀಯ ಕೇಂದ್ರದ ಪ್ರಯತ್ನವಾಗಿದ್ದು, ಇದನ್ನು "ಮುಂದಿನ ಪೀಳಿಗೆಯ ಕಂಪ್ಯೂಟರ್ ನೆರವಿನಿಂದ ಶಸ್ತ್ರಚಿಕಿತ್ಸೆ ನಡೆಸುವ ರೊಬೋಟ್ ಗಳಿಗಾಗಿ , ಮುಂದಿನ ಯೋಜನೆಯನ್ನು ಹಾಗು ಅನುಕರಣೆ ಮತ್ತು ನಿರ್ವಾಹಣೆಯ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು" ಇದನ್ನು ಕೈಗೊಳ್ಳಲಾಗಿದೆ.[೭೩] ಕೆನಡಿಯನ್ ಹಿಪೊಕ್ರೆಟಿಕ್ ರೆಜಿಸ್ಟ್ರಿ ಮತ್ತು ಅಮೇರಿಕನ್ ಹಿಪೊಕ್ರೆಟಿಕ್ ರೆಜಿಸ್ಟ್ರಿ , ವೈದ್ಯರ ಸಂಸ್ಥೆಗಳಾಗಿದ್ದು, ಹಿಪೊಕ್ರೆಟಿಕ್ ಪ್ರಮಾಣದ ಮೂಲ ತತ್ತ್ವಗಳನ್ನು ಬದಲಾಗುತ್ತಿರುವ ಸಾಮಾಜಿಕ ಕಾಲದಲ್ಲಿ ಉಲ್ಲಂಘಿಸುವಂತಿಲ್ಲ ಎಂದು ಹೇಳುವ ಮೂಲಕ ಅವನ ತತ್ತ್ವಗಳನ್ನು ಎತ್ತಿಹಿಡಿಯುತ್ತಿವೆ.
ಟಿಪ್ಪಣಿಗಳು[ಬದಲಾಯಿಸಿ]
- ↑ National Library of Medicine 2006
- ↑ nlm.nih.gov/pubmed/ 18392218 ಯೂಸ್ ಫುಲ್ ನೋನ್ ಅಂಡ್ ಅನ್ ನೋನ್ ವ್ಯೂಸ್ ಆಫ್ ದಿ ಫಾದರ್ ಆಫ್ ಮಾರ್ಡನ್ ಮೆಡಿಸನ್, ಹಿಪ್ಪೊಕ್ರೇಟ್ಸ್ ಅಂಡ್ ಹಿಸ್ ಡೆಮೊಕ್ರಿಟಸ್.[ಶಾಶ್ವತವಾಗಿ ಮಡಿದ ಕೊಂಡಿ], U.S. ನ ವೈದ್ಯಕೀಯ ಶಾಸ್ತ್ರದ ರಾಷ್ಟ್ರೀಯ ಗ್ರಂಥಾಲಯ.
- ↑ com/encyclopedia_761576397/Hippocrates.html ಹಿಪ್ಪೊಕ್ರೇಟ್ಸ್, ಮೈಕ್ರೋಸಾಫ್ಟ್ ಎನ್ ಕಾರ್ಟ ಆನ್ ಲೈನ್ ಎನ್ ಸೈಕ್ಲಪೀಡಿಯ ೨೦೦೬. ಮೈಕ್ರೋಸಾಫ್ಟ್ ಕಾರ್ಪೊರೇಷನ್ ೨೦೦೯-೧೦-೩೧.
- ↑ Strong, W.F.; Cook, John A. (July 2007), manipal.edu/ gmj/issues/ jul07/ strong.php "Reviving the Dead Greek Guys" ([ಮಡಿದ ಕೊಂಡಿ]), Global Media Journal, Indian Edition, ISSN: 1550-7521
{{citation}}
: Check|url=
value (help) - ↑ ೫.೦ ೫.೧ ೫.೨ Garrison 1966, pp. 92–93
- ↑ Nuland 1988, p. 5
- ↑ Garrison 1966, p. 96
- ↑ Nuland 1988, p. 4
- ↑ Britannica 2006
- ↑ Nuland 1988, p. 7
- ↑ Adams 1891, p. 19
- ↑ ೧೨.೦ ೧೨.೧ ೧೨.೨ ೧೨.೩ ೧೨.೪ Margotta 1968, p. 66
- ↑ ೧೩.೦ ೧೩.೧ ೧೩.೨ ೧೩.೩ ೧೩.೪ Martí-Ibáñez 1961, pp. 86–87
- ↑ Plato & 380 B.C.
- ↑ Plato & 400 B.C.
- ↑ Adams 1891, p. 4
- ↑ Jones 1868, p. 11
- ↑ Nuland 1988, pp. 8–9
- ↑ ೧೯.೦ ೧೯.೧ ೧೯.೨ Garrison 1966, pp. 93–94
- ↑ ೨೦.೦ ೨೦.೧ Adams 1891, p. 15
- ↑ Margotta 1968, p. 67
- ↑ Leff & Leff 1956, p. 51
- ↑ Jones 1868, pp. 12–13
- ↑ ೨೪.೦ ೨೪.೧ Garrison 1966, p. 99
- ↑ Boylan 2006
- ↑ Jones 1868, pp. 46, 48, 59
- ↑ ೨೭.೦ ೨೭.೧ Margotta 1968, p. 73
- ↑ ೨೮.೦ ೨೮.೧ Garrison 1966, p. 98
- ↑ Singer & Underwood 1962, p. 35
- ↑ ೩೦.೦ ೩೦.೧ ೩೦.೨ ೩೦.೩ Encyclopedia Britannica 1911 ಉಲ್ಲೇಖ ದೋಷ: Invalid
<ref>
tag; name "britannica" defined multiple times with different content - ↑ ೩೧.೦ ೩೧.೧ ೩೧.೨ Garrison 1966, p. 97
- ↑ [68]
- ↑ Garrison 1966
- ↑ ೩೪.೦ ೩೪.೧ Margotta 1968, p. 64
- ↑ Rutkow 1993, pp. 24–25
- ↑ Martí-Ibáñez 1961, p. 88
- ↑ Margotta 1968, p. 68
- ↑ Leff & Leff 1956, p. 45
- ↑ Schwartz, Richards & Goyal 2006
- ↑ Singer & Underwood 1962, p. 40
- ↑ Margotta 1968, p. 70
- ↑ Martí-Ibáñez 1961, p. 90
- ↑ ೪೩.೦ ೪೩.೧ Major 1965
- ↑ ೪೪.೦ ೪೪.೧ ೪೪.೨ Jóhannsson 2005, p. 11
- ↑ ೪೫.೦ ೪೫.೧ ೪೫.೨ Jani 2005, pp. 24–25
- ↑ Jóhannsson 2005, p. 12
- ↑ Mann 2002, pp. 1, 173
- ↑ Shah 2002, p. 645
- ↑ NCEPOD 2004, p. 4
- ↑ ೫೦.೦ ೫೦.೧ Singer & Underwood 1962, p. 27
- ↑ ೫೧.೦ ೫೧.೧ Hanson 2006
- ↑ Rutkow, p. 23
- ↑ Singer & Underwood 1962, p. 28
- ↑ Jones 1868, p. 217
- ↑ ಬುಕರತ್ ಔರ್ ಉಸ್ಕಿ ತಸ್ನೀಫ್ ಹ್ಯಾಕಿಮ್ ಸೈಯದ್ ಜಿಲ್ಲರ್ ರಹಮಾನ್ ಅವರಿಂದ ಟಿಬಿಯಾ ಕಾಲೇಜಿನ ನಿಯತಕಾಲಿಕೆ, ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯ , ಅಲಿಗಢ, ಭಾರತ, ೧೯೬೬, p. ೫೬-೬೨.
- ↑ ೫೬.೦ ೫೬.೧ Garrison 1966, p. 100
- ↑ Garrison 1966, p. 95
- ↑ Jones 1868, p. 35
- ↑ Leff & Leff 1956, p. 102
- ↑ ೬೦.೦ ೬೦.೧ Garrison 1966, p. 94
- ↑ Jones 1868, p. 38
- ↑ Singer & Underwood 1962, p. 29
- ↑ ೬೩.೦ ೬೩.೧ Adams 1891, pp. 10–11
- ↑ Jones 1868, p. 37
- ↑ ೬೫.೦ ೬೫.೧ Smith 1870, p. 483
- ↑ [161]
- ↑ Pinault 1992, p. 1
- ↑ Adams 1891, pp. 12–13
- ↑ Internet Encyclopedia of Philosophy 2006
- ↑ Jones 1868, p. 24
- ↑ Adams 1891
- ↑ Fishchenko & Khimich 1986
- ↑ Project Hippocrates 1995
ಉಲ್ಲೇಖಗಳು[ಬದಲಾಯಿಸಿ]
Find more about ಹಿಪೊಕ್ರೇಟ್ಸ್ at Wikipedia's sister projects | |
![]() |
Definitions and translations from Wiktionary |
![]() |
Media from Commons |
![]() |
Learning resources from Wikiversity |
![]() |
Quotations from Wikiquote |
![]() |
Source texts from Wikisource |
![]() |
Textbooks from Wikibooks |


- Adams, Francis (1891), The Genuine Works of Hippocrates, New York: William Wood and Company.
- Boylan, Michael (2006), Hippocrates, Internet Encyclopedia of Philosophy, retrieved September 28, 2006.
- Britannica Concise Encyclopedia (2006), Soranus of Ephesus, Encyclopædia Britannica, Inc., archived from the original on ಅಕ್ಟೋಬರ್ 12, 2007, retrieved December 17, 2006.
- Encyclopedia Britannica (1911), HIPPOCRATES, vol. V13, Encyclopedia Britannica, Inc., p. 519, archived from the original on ಆಗಸ್ಟ್ 22, 2011, retrieved October 14, 2006.
- Garrison, Fielding H. (1966), History of Medicine, Philadelphia: W.B. Saunders Company.
- Fishchenko, AIa; Khimich, SD (1986), "Modification of the Hippocratic cap-shaped bandage", Klin Khir, 1 (72). PMID ೩೯೫೯೪೩೯
- Hanson, Ann Ellis (2006), Hippocrates: The "Greek Miracle" in Medicine, Lee T. Pearcy, The Episcopal Academy, Merion, PA 19066, USA, archived from the original on ಫೆಬ್ರವರಿ 8, 2007, retrieved December 17, 2006
- Hippocrates (2006), On the Sacred Disease, Internet Classics Archive: The University of Adelaide Library, archived from the original on September 26, 2007, retrieved December 17, 2006.
- Internet Encyclopedia of Philosophy (2006), Democritus, The University of Tennessee at Martin, retrieved December 17, 2006.
- Jani, P.G. (2005), "Management of Haemorrhoids: A Personal Experience", East and Central African Journal of Surgery, 10 (2): 24–28.
- Jóhannsson, Helgi Örn (2005), Haemorrhoids: Aspects of Symptoms and Results after Surgery, Uppsala University, ISBN 91-554-6399-1.
- Jones, W. H. S. (1868), Hippocrates Collected Works I, Cambridge Harvard University Press, retrieved September 28, 2006.
- Leff, Samuel; Leff, Vera. (1956), From Witchcraft to World Health, ಲಂಡನ್ and Southampton: Camelot Press Ltd..
- Mann, Charles V. (2002), Surgical Treatment of Haemorrhoids, Springer, ISBN 1852334967.
- Major, Ralph H. (1965), Classic Descriptions of Disease, Springfield, Illinois.
- Margotta, Roberto (1968), The Story of Medicine, New York: Golden Press.
- Martí-Ibáñez, Félix (1961), A Prelude to Medical History, New York: MD Publications, Inc., Library of Congress ID: 61-11617.
- National Library of Medicine (2006), Images from the History of Medicine, National Institutes of Health, archived from the original on ಮಾರ್ಚ್ 10, 2007, retrieved December 17, 2006.
- National Library of Medicine (2000), Objects of Art: Tree of Hippocrates, National Institutes of Health, retrieved December 17, 2006.
- NCEPOD (2004), Scoping our practice, London: National Confidential Enquiry into Patient Outcome and Death, ISBN 0-9539249-3-3
{{citation}}
: Check|isbn=
value: checksum (help). - Nuland, Sherwin B. (1988), Doctors, Knopf, ISBN 0394551303.
- Pinault, Jody Robin (1992), Hippocratic Lives and Legends, Leiden: Brill Academic Publishers, ISBN 9004095748
{{citation}}
: Unknown parameter|DUPLICATE DATA: place=
ignored (help). - Plato (2006), Protagoras, Internet Classics Archive: The University of Adelaide Library, archived from the original on ಜುಲೈ 28, 2011, retrieved December 17, 2006.
- Project Hippocrates (1995), Project Hippocrates, Center for Medical Robotics and Computer Assisted Surgery, Carnegie Mellon School of Computer Science, retrieved December 30, 2006.
- Rutkow, Ira M. (1993), Surgery: An Illustrated History, ಲಂಡನ್ and Southampton: Elsevier Science Health Science div, ISBN 0-801-6-6078-5.
- Schwartz, Robert A.; Richards, Gregory M.; Goyal, Supriya (2006), Clubbing of the Nails, WebMD, retrieved September 28, 2006.
- Shah, J (2002), "Endoscopy through the ages", BJU International, London: Academic Surgical Unit and Department of Urology, Imperial College School of Medicine, St. Mary's Hospital, 89 (7): 645–652, doi:10.1046/j.1464-410X.2002.02726.x, PMID 11966619
{{citation}}
: More than one of|given1=
and|first1=
specified (help); More than one of|number=
and|issue=
specified (help); More than one of|surname1=
and|last1=
specified (help). - Singer, Charles; Underwood, E. Ashworth (1962), A Short History of Medicine, New York and Oxford: Oxford University Press, Library of Congress ID: 62-21080.
- Smith, William (1870), Dictionary of Greek and Roman Biography and Mythology, vol. 2, Boston: Little, Brown, and Company, retrieved December 23, 2006
ಮುಂದಿನ ಓದಿಗಾಗಿ[ಬದಲಾಯಿಸಿ]
- ವೆಸ್ಲೆ D. ಸ್ಮಿತ್. ಹಿಪ್ಪೋಕ್ರೇಟ್ಸ್ ಎನ್ ಸೈಕ್ಲಪೀಡಿಯ ಬ್ರಿಟಾನಿಕಾ ಆನ್ ಲೈನ್ ನಿಂದ ಉಚಿತವಾದ ಸಂಪೂರ್ಣ ವಿಷಯದ ಲೇಖನ. ೨೦೦೮ ರ ಸೆಪ್ಟೆಂಬರ್ ೧೯ ರಂದು ಕೊನೆಯ ಬಾರಿ ಮರುಸಂಪಾದಿಸಲಾಯಿತು.
- Adams, Francis (translator) [1891] (1994), Works by Hippocrates, The Internet Classics Archive: Daniel C. Stevenson, Web Atomics © 1994–2000, archived from the original on 2011-01-06, retrieved 2010-10-06
{{citation}}
:|given1=
has generic name (help); Unknown parameter|original date=
ignored (help). - Jori, Alberto (1996), Medicina e medici nell'antica Grecia. Saggio sul 'Perì téchnes' ippocratico, Bologna (Italy): il Mulino.
- Kalopothakes, M. D. (1857), An essay on Hippocrates, Philadelphia: King and Baird Printers.
- Lopez, Francesco (2004), Il pensiero olistico di Ippocrate. Percorsi di ragionamento e testimonianze. Vol. I, Cosenza (Italy): Edizioni Pubblisfera.
- ಪ್ಲಿನೀ ದಿ ಎಲ್ಡರ್, ನ್ಯಾಚುರಲ್ ಹಿಸ್ಟ್ರಿ: ಪುಸ್ತಕ XXIX. ,ಜಾನ್ ಬಾಸ್ಟಾಕ್ ನಿಂದ ಅನುವಾದಿಸಲಾಗಿದೆ. ಮೂಲ ಪಠ್ಯವನ್ನು ಪರ್ಸೀಯಸ್ ಪ್ರೋಗ್ರಾಮ್ ನಲ್ಲಿ ನೋಡಿ .
- Smith, Wesley D. (1979), Hippocratic Tradition, Cornell Univ Pr, ISBN 0-8014-1209-9
- ಫಸ್ಟ್ ಪ್ರಿಂಟೆಡ್ ಎಡಿಷನ್ಸ್ ಆಫ್ ದಿ ಹಿಪೊಕ್ರೆಟಿಕ್ ಕಲೆಕ್ಷನ್ Archived 2012-05-23 ವೇಬ್ಯಾಕ್ ಮೆಷಿನ್ ನಲ್ಲಿ. ಅಟ್ ದಿ ಬಿಬ್ಲಿಯೋಥೆಕ್ ಇಂಟರ್ ಯುನಿವರ್ಸಿಟೈರ್ ದೆ ಮೆಡಿಸನ್ ಆಫ್ ಪ್ಯಾರಿಸ್ (BIUM) ಸ್ಟಡೀಸ್ ಅಂಡ್ ಡಿಜಿಟಿಸ್ಡ್ ಟೆಕ್ಸ್ಟ್ ಬೈ ದಿ BIUM (ಬಿಬ್ಲಿಯೋಥೆಕ್ ಇಂಟರ್ಯುನಿವರ್ಸಿಟೈರ್ ದೆ ಮೆಡಿಸನ್ ಅಟ್ ಡಿ'ಒಡೊಂಟೊಲಾಜಿ, ಪ್ಯಾರೀಸ್) ಇದರ ಡಿಜಿಟಲ್ ಗ್ರಂಥಾಲಯ Medic@ Archived 2014-10-07 ವೇಬ್ಯಾಕ್ ಮೆಷಿನ್ ನಲ್ಲಿ. ಅನ್ನು ನೋಡಿ.
'''
- Pages with reference errors
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- Articles with invalid date parameter in template
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from May 2010
- CS1 errors: URL
- Harv and Sfn no-target errors
- Pages with unresolved properties
- Articles with hatnote templates targeting a nonexistent page
- Articles containing Ancient Greek (to 1453)-language text
- CS1 errors: ISBN
- CS1 errors: unsupported parameter
- CS1 errors: redundant parameter
- CS1 errors: generic name
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಕ್ರಿ.ಪೂ.460 ರ ಜನನಗಳು
- ಕ್ರಿಸ್ತಪೂರ್ವ 370 ರ ಸಾವುಗಳು
- ಪ್ರಾಚೀನ ಗ್ರೀಕ್ ವೈದ್ಯರು
- ಪ್ರಾಚೀನ ಗ್ರೀಕ್ ನ ವಿಜ್ಞಾನದ ಬರಹಗಾರರು
- ಪ್ರಾಚೀನ ಮಾನವಿಕ ಪಂಡಿತರು
- ಪ್ರಾಚೀನ ಕೋನ್ ಗಳು
- ಕ್ರಿಸ್ತಪೂರ್ವ 5 ನೇ ಶತಮಾನದ ಗ್ರೀಕ್ ಜನರು
- ಕ್ರಿಸ್ತಪೂರ್ವ 4 ನೇ ಶತಮಾನದ ಗ್ರೀಕ್ ಜನರು
- ಥೆಸ್ಸಲಿಯಲ್ಲಿ ಪ್ರಾಚೀನ ಗ್ರೀಕರು
- ಅಯಾನಿಕ್ ಗ್ರೀಕ್ ಬರಹಗಾರರು
- ವೈದ್ಯಕೀಯ ವಿಜ್ಞಾನದ ಇತಿಹಾಸದಲ್ಲಿನ ವ್ಯಕ್ತಿಗಳು
- ವೈದ್ಯಕೀಯ
- Pages using ISBN magic links