ಭಾರತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
ಚು Reverted edits by 89.240.239.31 (talk) to last revision by Xqbot
೯ ನೇ ಸಾಲು: ೯ ನೇ ಸಾಲು:
|symbol_type=ಭಾರತದ ರಾಷ್ಟ್ರೀಯ ಚಿಹ್ನೆ
|symbol_type=ಭಾರತದ ರಾಷ್ಟ್ರೀಯ ಚಿಹ್ನೆ
|national_motto=''"[[ಸತ್ಯಮೇವ ಜಯತೆ]]" ''<small>([[ಸಂಸ್ಕೃತ]])</small><br /> {{lang|sa|सत्यमेव जयते}}&nbsp; <small>([[ದೇವನಾಗರಿ]])<br />"ಸತ್ಯವೇ ಜಯಿಸುತ್ತದೆ"<ref>{{cite web|url=http://www.india.gov.in/knowindia/state_emblem.php|title=State Emblem -''Inscription''|accessdate=2007-06-17|publisher=[[ರಾಷ್ಟ್ರೀಯ ಮಾಹಿತಿ ಕೇಂದ್ರ|ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್ ಐ ಸಿ)]]}}</ref></small>
|national_motto=''"[[ಸತ್ಯಮೇವ ಜಯತೆ]]" ''<small>([[ಸಂಸ್ಕೃತ]])</small><br /> {{lang|sa|सत्यमेव जयते}}&nbsp; <small>([[ದೇವನಾಗರಿ]])<br />"ಸತ್ಯವೇ ಜಯಿಸುತ್ತದೆ"<ref>{{cite web|url=http://www.india.gov.in/knowindia/state_emblem.php|title=State Emblem -''Inscription''|accessdate=2007-06-17|publisher=[[ರಾಷ್ಟ್ರೀಯ ಮಾಹಿತಿ ಕೇಂದ್ರ|ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್ ಐ ಸಿ)]]}}</ref></small>
|image_map=India in its region (undisputed).svg
|image_map=India (orthographic projection).svg
|alt_map=Image of globe centered on India, with India highlighted.
|alt_map=Image of globe centered on India, with India highlighted.
|map_width=220px
|map_width=220px

೦೩:೫೩, ೨೬ ಡಿಸೆಂಬರ್ ೨೦೧೨ ನಂತೆ ಪರಿಷ್ಕರಣೆ

ಭಾರತ ಗಣರಾಜ್ಯ
भारत गणराज्य
Republic of India
Horizontal tricolour flag (deep saffron, white, and green). In the center of the white is a navy blue wheel with 24 spokes.
Flag
Three lions facing left, right,and toward viewer, atop a frieze containing a galloping horse, a 24-spoke wheel, and an elephant. Underneath is a motto "सत्यमेव जयते".
ಭಾರತದ ರಾಷ್ಟ್ರೀಯ ಚಿಹ್ನೆ
Motto: "ಸತ್ಯಮೇವ ಜಯತೆ" (ಸಂಸ್ಕೃತ)
सत्यमेव जयते  (ದೇವನಾಗರಿ)
"ಸತ್ಯವೇ ಜಯಿಸುತ್ತದೆ"[೧]
Anthem: ಜನ ಗಣ ಮನ[೨]
National Song[೪]
Vande Mataram
I bow to thee, Mother
[೩]
Image of globe centered on India, with India highlighted.
Capitalನವ ದೆಹಲಿ
Largest cityಮುಂಬೈ
Official languages
Constitutionally recognised
languages
Demonym(s)Indian
Governmentಸಂಯುಕ್ತ ಗಣತಂತ್ರ
ಸಂಸದೀಯ ಪ್ರಜಾತಂತ್ರ[೮]
ಪ್ರತಿಭಾ ಪಾಟೀಲ್
ಹಮೀದ್ ಅನ್ಸಾರಿ
ಮನಮೋಹನ್ ಸಿಂಗ್
ಎಸ್ ಎಚ್ ಕಪಾಡಿಯ
LegislatureSansad
ರಾಜ್ಯಸಭೆ
ಲೋಕಸಭೆ
ಸ್ವಾತಂತ್ರ 
• ಘೋಷಿತ
೧೫ ಆಗಸ್ಟ್ ೧೯೪೭
೨೬ ಜನವರಿ ೧೯೫೦
• Water (%)
9.56
Population
• ೨೦೦೮ estimate
1,147,995,904 (೨ನೆಯ)
• ೨೦೦೧ census
1,028,610,328[೯]
GDP (PPP)೨೦೦೮ estimate
• Total
$3.288 ಟ್ರಿಲಿಯನ್[೧೦] ()
• Per capita
$2,762[೧೦] (೧೧೮)
GDP (nominal)೨೦೦೮ estimate
• Total
$1.209 ಟ್ರಿಲಿಯನ್[೧೦]
• Per capita
$1,016[೧೦]
Gini (2004)36.8[೧೧]
Error: Invalid Gini value
HDI (2008)0.609
medium · 132
Currencyಭಾರತದ ರೂಪಾಯಿ (Rp) (INR)
Time zoneUTC+5:30 (IST)
• Summer (DST)
UTC+5:30 (ಆಚರಣೆಯಲ್ಲಿ ಇಲ್ಲ)
Driving sideleft
Calling code91
Internet TLD.in
Non-numbered Footnotes:

ಭಾರತ ಅಥವಾ ಇಂಡಿಯಾ ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ದೇಶ. ಅಧಿಕೃತ ಹೆಸರು: ಭಾರತ ಗಣರಾಜ್ಯ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದು ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವವಾಗಿದೆ. ಭಾರತವು ೧೨೧ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ. ಕೊಳ್ಳುವ ಶಕ್ತಿಯ ಮೇರೆಗೆ, ಪ್ರಪಂಚದ ನಾಲ್ಕನೇ ಅತಿ ದೊಡ್ಡ ಆರ್ಥಿಕ ವ್ಯವಸ್ಥೆಯನ್ನು ಹೊಂದಿದೆ.

ಶಿರೋಲೇಖ

ಭಾರತದ ಈಗಿನ ಜನಸ೦ಖ್ಯೆ ೧೨೧ ಕೋಟಿ

ಹೆಸರಿನ ಉಗಮ

ಭಾರತ ಎಂಬ ಹೆಸರು "ಭರತವರ್ಷ" ಎಂಬ ಹೆಸರಿನಿಂದ ಉಗಮಗೊಂಡದ್ದು. ಪುರಾತನ ಪೌರಾಣಿಕ ಆಕರಗಳಿಂದಲೂ ಈ ಹೆಸರು ಭಾರತಕ್ಕೆ ಸೂಚಿತವಾಗಿದೆ. ಭಾರತ ಎಂಬ ಈ ಹೆಸರು ಮಹಾರಾಜಾ ದುಶ್ಯಂತನ ಪುತ್ರನಾದ ಭರತ ಮಹಾರಾಜನ ಹೆಸರಿನಿನ್ದ ಬ೦ದದ್ದು. "ಇಂಡಿಯಾ" ಎಂಬ ಹೆಸರು ಸಿಂಧೂ ನದಿಯ ಇದರ ಪರ್ಷಿಯನ್ ರೂಪಾಂತರ "ಇಂಡಸ್" ಎಂಬುದರಿಂದ ಬಂದದ್ದು. ಭಾರತವನ್ನು ನಿರ್ದೇಶಿಸಲು ಉಪಯೋಗಿಸಲಾಗಿರುವ ಇತರ ಹೆಸರುಗಳಲ್ಲಿ ಒಂದು ಹಿಂದುಸ್ಥಾನ.

ಚರಿತ್ರೆ

ಮುಖ್ಯ ಲೇಖನ: ಭಾರತದ ಇತಿಹಾಸ

ಭಾರತದಲ್ಲಿ ಜನವಸತಿಯ ಮೊದಲ ಕುರುಹುಗಳೆಂದರೆ ಈಗಿನ ಮಧ್ಯ ಪ್ರದೇಶ ರಾಜ್ಯದ ಬಿಂಭೇಟ್ಕಾದಲ್ಲಿ ದೊರೆತಿರುವ ಶಿಲಾಯುಗದ ಪಳೆಯುಳಿಕೆಗಳು. ಸುಮಾರು ೯೦೦೦ ವರ್ಷಗಳ ಹಿಂದೆ ನಾಗರೀಕತೆಯ ಕುರುಹುಗಳು ಕಂಡು ಬಂದು ಕ್ರಿ.ಪೂ ೨೬೦೦ ರಿಂದ ಕ್ರಿ.ಪೂ. ೧೯೦೦ ರ ವರೆಗೆ ಸಿಂಧೂ ನಾಗರೀಕತೆ ಅಸ್ತಿತ್ವದಲ್ಲಿತ್ತು.

ನಂತರ ವೇದಗಳನ್ನು ಆಧರಿಸಿ ಹಿಂದೂ ಧರ್ಮ ಬೆಳೆಯಿತು.ಅಗಾ ನಾನು ಎಂಬಾ ಬೌದ್ಧ ಧರ್ಮ ಮತ್ತು ಜೈನ ಧರ್ಮಗಳು ಸಹ ಉಗಮಗೊಂಡವು. ಕ್ರಿ.ಪೂ ೫೦೦ ರ ನಂತರ ಅನೇಕ ಸ್ವತಂತ್ರ ರಾಜ್ಯಗಳು ತಲೆಯೆತ್ತಲಾರಂಬಿಸಿದವು. ಮೌರ್ಯ ಸಾಮ್ರಾಜ್ಯ ಬಾರತವನ್ನು ಸರಿಸುಮಾರಾಗಿ ಒಗ್ಗೂಡಿಸಿದ ಮೊದಲ ಸಾಮ್ರಾಜ್ಯ. ನಂತರ ಗುಪ್ತ ಸಾಮ್ರಾಜ್ಯ ಭಾರತದ "ಚಿನ್ನದ ಯುಗ"ದಲ್ಲಿ ಆಡಳಿತ ನಡೆಸಿತು. ಈ ಕಾಲದಲ್ಲಿ ಸಾಹಿತ್ಯ, ವಿಜ್ಞಾನ, ತತ್ವಶಾಸ್ತ್ರ ಮೊದಲಾದ ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಭಾರತ ಸಾಧಿಸಿತು.

ಎರಡನೆಯ ಸಹಸ್ರಮಾನದ ಆರಂಭದಲ್ಲಿ ಅನೇಕ ಮುಸ್ಲಿಮ್ ರಾಜರ ದಾಳಿ ಆರಂಭವಾಗಿ ೧೨ ನೆಯ ಶತಮಾನದಿಂದ ಮುಂದಕ್ಕೆ ಉತ್ತರ ಭಾರತದ ಅನೇಕ ಭಾಗಗಳು ಮತ್ತು ದಕ್ಷಿಣ ಭಾರತದ ಕೆಲ ಭಾಗಗಳು ಮುಸ್ಲಿಮ್ ಆಡಳಿತಕ್ಕೆ ಒಳಗಾದವು (ಉದಾಹರಣೆಗೆ ದೆಹಲಿ ಸುಲ್ತಾನೇಟ್, ಬಹಮನಿ ಸುಲ್ತಾನರು, ಮೊಘಲ್ ಸಾಮ್ರಾಜ್ಯ).

೧೭ ನೆಯ ಶತಮಾನದಿಂದ ಮುಂದಕ್ಕೆ ಪೋರ್ಚುಗೀಸ್, ಫ್ರೆಂಚ್ ಮತ್ತು ಬ್ರಿಟಿಷ್ ವ್ಯಾಪಾರಿಗಳು ಭಾರತಕ್ಕೆ ಬರಲಾರಂಭಿಸಿದರು. ಹಂಚಿಹೋಗಿದ್ದ ಭಾರತದ ರಾಜಕೀಯ ಪರಿಸ್ಥಿತಿಯ ಲಾಭ ಪಡೆದು ಭಾರತದ ಅನೇಕ ಪ್ರದೇಶಗಳನ್ನು ಇವರು ವಶಪಡಿಸಿಕೊಳ್ಳಲಾರಂಭಿಸಿದರು. ಎಲ್ಲರಿಗಿಂತ ಪ್ರಬಲವಾಗಿ ಬೆಳೆದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಹೆಚ್ಚು ಕಡಿಮೆ ಸಂಪೂರ್ಣ ಭಾರತದ ಮೇಲೆ ಆಧಿಪತ್ಯ ಸ್ಥಾಪಿಸಿತು. ೧೮೫೭ ರಲ್ಲಿ ಭಾರತದ ಅನೇಕ ರಾಜ್ಯಗಳು ಬ್ರಿಟಿಷರ ವಿರುದ್ಧ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡವು. ಇದರ ನಂತರ ನೇರ ಬ್ರಿಟಿಷ್ ಆಡಳಿತಕ್ಕೆ ಭಾರತ ಸಾಗಿತು.

ಸ್ವಲ್ಪ ಕಾಲದಲ್ಲಿಯೇ ಭಾರತ ಸ್ವಾತಂತ್ರ್ಯ ಚಳುವಳಿ ಆರಂಭವಾಗಿ ಆಗಸ್ಟ್ ೧೫, ೧೯೪೭ ರಲ್ಲಿ ಭಾರತ ಸ್ವಾತಂತ್ರ್ಯ ಪಡೆಯಿತು. ಸ್ವಾತಂತ್ರ್ಯಾ ನಂತರ ನೆರೆಯ ದೇಶಗಳೊಂದಿಗೆ ಒಟ್ಟು ನಾಲ್ಕು ಯುದ್ಧಗಳು ನಡೆದಿವೆ. ೧೯೭೪ ರಲ್ಲಿ ಭಾರತ ಅಣುಶಕ್ತಿ ಉತ್ಪಾದನಾ ಸಾಮರ್ಥ್ಯವನ್ನು ಪಡೆಯಿತು. ೧೯೭೫ ರಿಂದ ೭೭ ರ ವರೆಗೆ ಇಂದಿರಾ ಗಾಂಧಿಯವರ ಸರ್ಕಾರದಲ್ಲಿ ತುರ್ತು ಪರಿಸ್ಥಿತಿ ಏರ್ಪಟ್ಟಿತ್ತು. ೯೦ ರ ದಶಕದಿಂದ ಆರ್ಥಿಕ ಉದಾರೀಕರಣ ನೀತಿಯನ್ನು ಭಾರತ ಪಾಲಿಸುತ್ತಾ ಬಂದಿದೆ.

ಟಿರುನೆಲ್ವೆಲಿ

ಸರ್ಕಾರ ಮತ್ತು ರಾಜಕೀಯ

ಮುಖ್ಯ ಲೇಖನ: ಭಾರತ ಸರ್ಕಾರ

ಭಾರತ ಒಂದು ಪ್ರಜಾತಾಂತ್ರಿಕ ಗಣರಾಜ್ಯ. ಕೇಂದ್ರ ಸರ್ಕಾರದ ಕೆಳಗೆ ರಾಜ್ಯ ಸರ್ಕಾರಗಳು ಕೆಲಸ ಮಾಡುವ ರಾಜಕೀಯ ವ್ಯವಸ್ಥೆಯನ್ನು ಭಾರತ ಹೊಂದಿದೆ. ಭಾರತದ ಪ್ರಥಮ ಪ್ರಜೆ ಭಾರತದ ಅಧ್ಯಕ್ಷರು. ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಮತದಾರ ಸಮುದಾಯಗಳ ಮೂಲಕ ಪರೋಕ್ಷವಾಗಿ ಐದು ವರ್ಷಗಳ ಅವಧಿಗಳಿಗೆ ಚುನಾಯಿಸಲಾಗುತ್ತದೆ. ಸಾಂವಿಧಾನಿಕವಾಗಿ ಅಧ್ಯಕ್ಷರು ಪ್ರಥಮ ಪ್ರಜೆಯಾಗಿದ್ದರೂ, ಸರ್ಕಾರದಲ್ಲಿ ಅತಿ ಹೆಚ್ಚು ಅಧಿಕಾರವುಳ್ಳ ಸ್ಥಾನ ಭಾರತದ ಪ್ರಧಾನ ಮಂತ್ರಿಗಳದ್ದು. ಲೋಕಸಭೆಯಲ್ಲಿ ಬಹುಮತ ಹೊಂದಿರುವ ರಾಜಕೀಯ ಪಕ್ಷ ಅಥವಾ ಪಕ್ಷಗಳ ಮೈತ್ರಿತ್ವ ಪ್ರಧಾನ ಮಂತ್ರಿಯನ್ನು ಚುನಾಯಿಸುತ್ತದೆ. ಪ್ರಧಾನ ಮಂತ್ರಿಗಳು ತಮ್ಮ ಸಹಾಯಕ್ಕೆ ಮಂತ್ರಿಮಂಡಲ (ಅಥವಾ "ಸಂಪುಟ") ವನ್ನು ಏರ್ಪಡಿಸುತ್ತಾರೆ.

ಭಾರತದ ಸಂಸತ್ತಿನ ಎರಡು ಸದನಗಳೆಂದರೆ ಲೋಕಸಭೆ ಮತ್ತು ರಾಜ್ಯಸಭೆ. ಲೋಕಸಭೆಯ ಸದಸ್ಯರು ನೇರ ಚುನಾವಣೆಗಳಲ್ಲಿ ಚುನಾಯಿತರಾದರೆ, ರಾಜ್ಯಸಭೆಯ ಸದಸ್ಯರನ್ನು ಪರೋಕ್ಷವಾಗಿ ಚುನಾಯಿಸಲಾಗುತ್ತದೆ.

ಭಾರತದ ಈಗಿನ ಪ್ರಧಾನ ಮಂತ್ರಿಗಳು ಕಾಂಗ್ರೆಸ್ ಪಕ್ಷದ ಡಾ. ಮನಮೋಹನ್ ಸಿಂಗ್. ರಾಷ್ಟ್ರಪತಿ ಪ್ರಣವ್ ಮುಖರ್ಜಿ[[].

ಭೂಗೋಳ

ಭಾರತದ ನಕ್ಷೆ

ಭಾರತದ ಭೌಗೋಳಿಕ ಭಾಗಗಳಲ್ಲಿ ಮುಖ್ಯವಾದವು:

ಭಾರತದಲ್ಲಿ ಹರಿಯುವ ಮುಖ್ಯವಾದ ನದಿಗಳಲ್ಲಿ ಕೆಲವೆಂದರೆ ಸಿಂಧೂ, ಗಂಗಾ, ಬ್ರಹ್ಮಪುತ್ರ, ಯಮುನಾ, ನರ್ಮದಾ, ಗೋದಾವರಿ, ಕೃಷ್ಣಾ, ಕಾವೇರಿ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು

ಭಾರತವನ್ನು ಕೆಳಗಿನ ಮುಖ್ಯ ಭಾಗಗಳಾಗಿ ವಿಂಗಡಿಸಲಾಗಿದೆ:

  • ೨೮ ರಾಜ್ಯಗಳು
  • ೬ ಕೇಂದ್ರಾಡಳಿತ ಪ್ರದೇಶಗಳು
  • ರಾಷ್ಟ್ರೀಯ ರಾಜಧಾನಿ: ನವದೆಹಲಿ
ಭಾರತದ ರಾಜ್ಯಗಳು

ರಾಜ್ಯಗಳು

  1. ಆಂಧ್ರ ಪ್ರದೇಶ
  2. ಅರುಣಾಚಲ ಪ್ರದೇಶ
  3. ಅಸ್ಸಾಮ್
  4. ಬಿಹಾರ್
  5. ಚತ್ತೀಸ್‍ಗಢ
  6. ಗೋವ
  7. ಗುಜರಾತ್
  8. ಹರ್ಯಾಣಾ
  9. ಹಿಮಾಚಲ ಪ್ರದೇಶ
  10. ಜಮ್ಮು ಮತ್ತು ಕಾಶ್ಮೀರ
  11. ಜಾರ್ಖಂಡ್
  12. ಕರ್ನಾಟಕ
  13. ಕೇರಳ
  14. ಮಧ್ಯ ಪ್ರದೇಶ
  1. ಮಹಾರಾಷ್ಟ್ರ
  2. ಮಣಿಪುರ
  3. ಮೇಘಾಲಯ
  4. ಮಿಜೋರಮ್
  5. ನಾಗಾಲ್ಯಾಂಡ್
  6. ಒರಿಸ್ಸಾ
  7. ಪಂಜಾಬ್
  8. ರಾಜಸ್ಥಾನ
  9. ಸಿಕ್ಕಿಮ್
  10. ತಮಿಳುನಾಡು
  11. ತ್ರಿಪುರ
  12. ಉತ್ತರಾಖಂಡ
  13. ಉತ್ತರ ಪ್ರದೇಶ
  14. ಪಶ್ಚಿಮ ಬಂಗಾಳ

ಕೇಂದ್ರಾಡಳಿತ ಪ್ರದೇಶಗಳು:

ರಾಜಧಾನಿ: ನವದೆಹಲಿ.

ಆರ್ಥಿಕ ವ್ಯವಸ್ಥೆ

ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ವ್ಯವಸ್ಥೆಯನ್ನು ಭಾರತ ಹೊಂದಿದ್ದು, ಒಟ್ಟು ರಾಷ್ಟ್ರೀಯ ಉತ್ಪಾದನೆಯ ದೃಷ್ಟಿಯಿಂದ ಪ್ರಪಂಚದಲ್ಲಿ ಹನ್ನೆರಡನೆಯ ಸ್ಥಾನವನ್ನು ಹೊಂದಿದೆ. ಕೊಳ್ಳುವ ಶಕ್ತಿಯ ಮೇರೆಗೆ ನಾಲ್ಕನೆಯ ಸ್ಥಾನವನ್ನು ಹೊಂದಿದೆ. ಆದರೆ ಭಾರತದ ಜನಸಂಖ್ಯೆಯನ್ನು ಗಮನಿಸಿ ಸರಾಸರಿ ಒಬ್ಬ ವ್ಯಕ್ತಿಯ ಆದಾಯ ಸುಮಾರು ವರ್ಷಕ್ಕೆ ೧೧,೦೦೦ ರೂಪಾಯಿಗಳಷ್ಟು. ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಬೆಳೆದ ನಂತರ ಭಾರತೀಯ ಮಧ್ಯಮ ವರ್ಗ ಹೆಚ್ಚುತ್ತಾ ಬಂದಿದೆ.

ಭಾರತದ ಮುಖ್ಯ ವೃತ್ತಿಗಳಲ್ಲಿ ಕೆಲವೆಂದರೆ ಕೃಷಿ, ಬಟ್ಟೆಗಳ ತಯಾರಿಕೆ, ಪೆಟ್ರೋಲಿಯಮ್ ಉತ್ಪನ್ನಗಳು, ಮಾಹಿತಿ ತಂತ್ರಜ್ಞಾನ, ಚಿತ್ರಗಳು ಹಾಗೂ ಕುಶಲ ಕೆಲಸಗಾರಿಕೆ. ವಾರ್ಷಿಕವಾಗಿ ಸುಮಾರು ೨೦ ಲಕ್ಷ ಅಂತಾರಾಷ್ಟ್ರೀಯ ಪ್ರವಾಸಿಗಳು ಭಾರತಕ್ಕೆ ಬರುತ್ತಾರೆ.

ಭಾರತದೊಂದಿಗೆ ಹೆಚ್ಚಾಗಿ ಅಂತಾರಾಷ್ಟ್ರೀಯ ವ್ಯಾಪಾರ ನಡೆಸುವ ದೇಶ-ಸಂಸ್ಥೆಗಳೆಂದರೆ ಅಮೆರಿಕದ ಸಂಯುಕ್ತ ಸಂಸ್ಥಾನ, ಯುರೋಪಿಯನ್ ಒಕ್ಕೂಟ, ಚೀನಾ ಮತ್ತು ಜಪಾನ್.

ಜನಸಂಖ್ಯಾ ಅಂಕಿ ಅಂಶಗಳು

ಭಾರತ ಪ್ರಪಂಚದಲ್ಲಿ ಎರಡನೆ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಭಾರತೀಯ ಸಮಾಜದಲ್ಲಿ ಭಾಷೆ, ಧರ್ಮ, ಜಾತಿ ಮೊದಲಾದ ಅನೇಕ ಅಂಶಗಳು ವಿವಿಧ ಪಾತ್ರಗಳನ್ನು ವಹಿಸುತ್ತವೆ. ಭಾರತದ ನಾಲ್ಕು ಅತಿ ದೊಡ್ಡ ನಗರಗಳೆಂದರೆ ಮುಂಬೈ, ದೆಹಲಿ, ಕೋಲ್ಕಾಟಾ (ಕಲ್ಕತ್ತೆ) ಮತ್ತು ಚೆನ್ನೈ.

ಭಾರತದ ಸಾಕ್ಷರತಾ ಪ್ರಮಾಣ ಶೇ. ೬೪.೮.

ಧರ್ಮದ ದೃಷ್ಟಿಯಿಂದ, ಜನಸಂಖ್ಯೆಯ ವಿಂಗಡಣೆ ಹೀಗಿದೆ: ಹಿಂದೂ (೮೦.೫ %), ಮುಸ್ಲಿಮ್ (೧೩.೪ %), ಕ್ರೈಸ್ತ (೨.೩೩ %), ಸಿಖ್ (೧.೮೪ %), ಬೌದ್ಧ (೦.೭೬ %), ಜೈನ (೦.೪ %). ಭಾರತದಲ್ಲಿರುವ ಇತರ ಧಾರ್ಮಿಕ ವರ್ಗಗಳಲ್ಲಿ ಕೆಲವೆಂದರೆ ಯಹೂದಿ, ಪಾರಸಿ, ಅಹ್ಮದಿ ಮತ್ತು ಬಹಾ-ಈ.

ಭಾರತದಲ್ಲಿರುವ ಎರಡು ಮುಖ್ಯ ಭಾಷಾ ಬಳಗಗಳೆಂದರೆ ಉತ್ತರ ಭಾರತದ ಇಂಡೋ-ಆರ್ಯನ್ ಭಾಷಾ ಬಳಗ ಮತ್ತು ದಕ್ಷಿಣ ಭಾರತದ ದ್ರಾವಿಡ ಭಾಷಾ ಬಳಗ. ಭಾರತ ೨೨ ಅಧಿಕೃತ ಭಾಷೆಗಳನ್ನು ಹೊಂದಿದೆ.

ಉಲ್ಲೇಖಗಳು

  1. "State Emblem -Inscription". ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್ ಐ ಸಿ). Retrieved 2007-06-17.
  2. "National Anthem - Know India portal". ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್ ಐ ಸಿ). 2007. Retrieved 2007-08-31.
  3. "National Song - Know India portal". National Informatics Centre(NIC). 2007. Retrieved 2009-06-11.
  4. "Constituent Assembly of India — Volume XII". Constituent Assembly of India: Debates. parliamentofindia.nic.in, National Informatics Centre. 1950-01-24. Retrieved 2007-06-29. The composition consisting of the words and music known as Jana Gana Mana is the National Anthem of India, subject to such alterations in the words as the Government may authorise as occasion arises; and the song Vande Mataram, which has played a historic part in the struggle for Indian freedom, shall be honoured equally with Jana Gana Mana and shall have equal status with it.
  5. "The Union: Official Language". Ministry of Home Affairs, ಭಾರತ ಸರ್ಕಾರ. ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್ ಐ ಸಿ). 2007. Retrieved 2009-06-11.
  6. "Notification No. 2/8/60-O.L., dated 27 April, 1960". Ministry of Home Affairs, ಭಾರತ ಸರ್ಕಾರ. ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್ ಐ ಸಿ). Retrieved 2009-06-11.
  7. "Official Languages Resolution, 1968". Ministry of Home Affairs, Government of India. ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್ ಐ ಸಿ). Retrieved 2009-06-11..
  8. ೮.೦ ೮.೧ "India at a Glance". Know India Portal. ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್ ಐ ಸಿ). Retrieved 2007-12-07.
  9. "India at a glance: Population". Census of India, 2001. Government of India. Retrieved 2009-04-25.
  10. ೧೦.೦ ೧೦.೧ ೧೦.೨ ೧೦.೩ "India". International Monetary Fund. Retrieved 2009-04-22.
  11. "Field Listing — Distribution of family income — Gini index". The World Factbook. CIA. 15 May 2008. Retrieved 2008-06-06.
  12. "Total Area of India" (PDF). Country Studies, India. Library of Congress Federal Research Division. December 2004. Retrieved 2007-09-03. The country's exact size is subject to debate because some borders are disputed. The Indian government lists the total area as 3,287,260 square kilometres and the total land area as 3,060,500 square kilometres; the United Nations lists the total area as 3,287,263 square kilometres and total land area as 2,973,190 square kilometres.

Current Population Of India 1,065,070,607 (July 2004 est.) Population Density of India 324 persons per square kilometre

Age structure 0 to 14 years 31.7% (male 173,869,856; female 164,003,915) 15 to 64 years 63.5% (male 349,785,804; female 326,289,402) 65 years and over 4.8% (male 25,885,725; female 25,235,905) (2004 estimate)

Median age Total 24.4 years Male 24.4 years female 24.4 years (2004 est.) Population growth rate 1.44% (2004 est.) Birth rate 22.8 births/1,000 population (2004 est.) Death rate 8.38 deaths/1,000 population (2004 est.) Net migration rate -0.07 migrant(s)/1,000 population (2004 est.) Infant mortality rate Total 57.92 deaths/1,000 live births Female 57.29 deaths/1,000 live births (2004 est.) Male 58.52 deaths/1,000 live births

Life expectancy at birth Total population 63.99 years Male 63.25 years Female 64.77 years (2004 est.) Total fertility rate 2.85 children born/woman (2004 est.)

HIV / AIDS Adult prevalence rate 0.8% (2001 est.) People living with HIV / AIDS 3.97 million (2001 est.) Deaths because of HIV / AIDS 310,000 (2001 est.)

Nationality Noun Indian(s) Adjective Indian

Ethnic groups Indo-Aryan 72% Dravidian 25% Mongoloid and other's 3% (2000)

Religions Hindu 81.3% Muslim 12% Christian 2.3% Sikh 1.9% Other groups including Buddhist, Jain, Parsi 2.5% (2000)

Languages English enjoys associate status but is the most important language for national, political, and commercial communication; Hindi is the official language and primary tongue of 30% of the people; there are 14 other official languages: Bengali, Telugu, Marathi, Tamil, Urdu, Gujarati, Malayalam, Kannada, Oriya, Punjabi, Assamese, Kashmiri, Sindhi, and Sanskrit; Hindustani is a popular variant of Hindi/Urdu spoken widely throughout northern India but is not an official language.

Literacy Rate (Definition: Age 15 and over that can read and write) Total Population 59.5% Male 70.2% Female 48.3% (2003 est.)

ಬಾಹ್ಯ ಸಂಪರ್ಕಗಳು

ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA

"https://kn.wikipedia.org/w/index.php?title=ಭಾರತ&oldid=304065" ಇಂದ ಪಡೆಯಲ್ಪಟ್ಟಿದೆ