ಮುರುಗಲ ಎಣ್ಣೆ
ಮುರುಗಲ ಎಣ್ಣೆಯನ್ನು ಮುರುಗಲ ಬೀಜದಿಂದ ತೆಗೆಯುತ್ತಾರೆ. ಮುರುಗಲ ಮರವನ್ನು ಪುನರ್ಪುಳಿ ಮರ ಎಂದು ಕರೆಯುತ್ತಾರೆ. ಮುರುಗಲ ಮರ ಗಟ್ಟಿಫೆರ (Guttifera)ಸಸ್ಯ ಕುಟುಂಬಕ್ಕೆ ಸೇರಿದ ಮರ. ಇದರ ಸಸ್ಯಶಾಸ್ತ್ರ ಹೆಸರು ಗರ್ಸಿನಿಯ ಇಂಡಿಕಾ (Garcinia indica).
- ಸಂಸ್ಕೃತ=ರರ್ಕ್ತಪುರಕ್(Rakta purak)ವೃಕ್ಷ ಮಲ(वृक्षामला)
- ಹಿಂದಿ=ಕೊಲಿಮ್
- ಮಲಯಾಳಂ= ಕಾತ್ತಾಂಪಿ(കാട്ടമ്പി-kaattampi),ಕೊಕ್ಕಮ್(കൊക്കം-kokkam ),ಪುನ್ನಮ್ ಪುಲಿ
- ತಮಿಳು=ಮುರ್ಗಲ್(murgal)
- ಮರಾಠಿ=ಬೆರಣ್ಡ (भेरंड- bheranda),ಕೊಕುಮ್(kokum),ರತಂಬ(Ratamba),( रातंबी- ratambi), (तांबडा आंबा- tambada amba)
- ಒರಿಯ=ತಿಂತಲಿ(Tintali),ತಿಂತುಲಿ(Tintuli)
- ಕೊಂಕಣಿ=ಭಿರಿಂಡಿ(भिरींड-bhirind),ಕೊಕಮ್(कोकम-kokam)
- ಗುಜರಾತಿ=ಕೊಕಮ್(કોકમ-Kokam)
- ತೆಲುಗು=ಮುರುಗಲ(murugala),ಕೊಕುಮ್(kokum)
- ಸಾಧಾರಣ ಹೆಸರು=Kokam, Goa butter tree, Kokum butter tree, Mangosteen
ಭಾರತದಲ್ಲಿ ಮುರುಗಲ ಮರದ ಆವಾಸ
[ಬದಲಾಯಿಸಿ]ಮುರುಗಲ ಮರದ ಹುಟ್ಟು ಸ್ಥಾವರ ದಕ್ಷಿಣ ಭಾರತ ದೇಶದ ಪಶ್ಚಿಮ ತೀರ ಪ್ರಾಂತ [೩]. ಇದು ಮೈಸೂರಿನ ಪಶ್ಚಿಮ ಕಣಿವೆ ಉಷ್ಣವಲಯ/ಮಲೆನಾಡು ಅರಣ್ಯಗಳಲ್ಲಿ ಬೆಳೆಯುತ್ತವೆ. ಕೂರ್ಗ್ (coorg), ವೈನೆಡ್ (wyneed), ಖಾಸಿ (khasi), ಜೈನ್ ತಲ ಬೆಟ್ಟದ ಪ್ರಾಂತ (jaintal), ಪಶ್ಚಿಮ ಬಂಗಾಲ, ನಿಕೋಬಾರ್ ದ್ವೀಪಗಳು, ಮತ್ತು ಅಸ್ಸಾಂಪ್ರಾಂತ್ಯಗಳಲ್ಲಿ ಬೆಳೆಯುತ್ತಿರುವ ಮರ. ಸಮುದ್ರದ ಮಟ್ಟದಿಂದ ೬ಸಾವಿರ ಅಡಿ ಎತ್ತರ ಇಳಿಜಾರಿನಿಂದ ಸಮುದ್ರತಟದವರೆಗೆ ವ್ಯಾಪ್ತಿ ಹೊಂದಿವೆ . ಗೋವಾ, ಮಹಾರಾಷ್ಟ್ರ,ಮತ್ತು ಕರ್ನಾಟಕಗಳು ಮುರುಗಲ ತೋಟಗಳ ಬೆಳೆವಣಿಗೆಗೆ ಅನುಕೂಲವಾದ ತಾಣಗಳು.[೧]
ಮರ
[ಬದಲಾಯಿಸಿ]ಇದು ದೊಡ್ಡ ಪ್ರಮಾಣದ ಗಾತ್ರದ ,ನಿತ್ಯ ಹರಿದ್ವರ್ಣದ,ತೊಗಲು ಬೀಳು ಕೊಂಬೆಗಳಿರುವ ಚೆಲುವಿನ ಮರ. ಮರ ೧೫ ನಿಂದ ೧೮ ಮೀಟರುಗಳಷ್ಟು ಎತ್ತರ ಬೆಳೆಯುತ್ತದೆ. ಎಲೆಗಳು ೫.೫-೮ ಸೆಂ.ಮೀ,ಉದ್ದ,೨.೫-೩.೦ಸೆಂ.ಮೀ ಗಳ ಅಗಲವಿದ್ದು, ದೀರ್ಘ ವೃತ್ತಾಕಾರ, ನಿಡುನಾಲ್ಮೂಲೆಯಾಗಿ, ಈಟಿ ವೊನೆ ಹೊಂದಿರುತ್ತವೆ. ಎಲೆಗಳು ಮುದುರು ಹಸಿರು ಬಣ್ಣದಲ್ಲಿ ಇರುತ್ತವೆ. ಹೂಗಳು ಬೊಜ್ಜಿನ ತರಹ ಇದ್ದು ಕಪ್ಪು /ಪಿಂಕು ಬಣ್ಣದವಾಗಿರುತ್ತವೆ. ಹೂವುಗಳು ಒಬ್ಬಂಟಿಯಾಗಿ ಅಥವಾ ವಿಸ್ತರಿಸಿದ ಗೊಂಚಲಾಗಿ ಇರುತ್ತವೆ. ಹಣ್ಣುಗಳು ಗೋಳಾಕಾರ ವಾಗಿ ನಿಂಬೆಹಣ್ಣು ಪ್ರಮಾಣದಲ್ಲಿರುತ್ತವೆ. ಹಣ್ಣು ಕಂದು ವರ್ಣದಲ್ಲಿದ್ದು, ಅಡ್ಡಳತೆ ೨.೫-೩.೦ಸೆಂ.ಮೀ.ಇರುತ್ತದೆ. ಹಣ್ಣಿನ ಒಳಗೆ ೬-೮ವಿತ್ತನಗಳು ಇರುತ್ತವೆ. ಹಣ್ಣು ರುಚಿಯಾಗಿರುತ್ತದೆ [೨]. ವಿತ್ತನವು ಹಣ್ಣಿನಲ್ಲಿ ೨೦-೨೩% ಪ್ರಮಾಣದಲ್ಲಿ ಇರುತ್ತದೆ. ವಿತ್ತನದಲ್ಲಿ ಇರುವ ಎಣ್ಣೆಯ ಪ್ರಮಾಣ ೨೩-೨೬%.ಒಂದು ಮರದಿಂದ, ಒಂದು ವರ್ಷಕ್ಕೆ ೬೦-೮೦ಕಿಲೋ ಫಲ ಬರುತ್ತದೆ, ವಿತ್ತನ ಆದರೆ (seed) ೧೦-೧೫ ಕಿಲೋಗಳಷ್ಟು ಬರುತ್ತದೆ. ಹೂ ಬಿಡುವ ಸಮಯ ನವಂಬರು-ಫೆಬ್ರವರಿ ತಿಂಗಳವರೆಗೆ, ಫಸಲು ಬರುವ ಸಮಯ ಏಪ್ರಿಲ್-ಮೇ ತಿಂಗಳುಗಳಲ್ಲಿ. ವಿತ್ತನದಲ್ಲಿ ಬೀಜ (kernel) ಪ್ರಮಾಣ ೬೦%.ಬೀಜ (kernel)ದಲ್ಲಿ ಎಣ್ಣೆ ೪೪% ಇರುತ್ತದೆ. ಬೀಜದಲ್ಲಿ ಪ್ರೊಟೀನ್ ಪ್ರತಿಶತ ೧೭.೦ಇರುತ್ತದೆ.
ಉತ್ಪಾದನೆ
[ಬದಲಾಯಿಸಿ]ಹಣ್ಣಾದ ಮೇಲೆ ಕೊಂಬೆಗಳನ್ನು ಝಾಡಿಸಿ, ಇಲ್ಲಂದರೆ, ಉದ್ದವಾದ ಕೋಲಿನಿಂದ ಒಡೆದು ಹಣ್ಣು ಕೆಳಗೆ ಬೀಳುವ ಹಾಗೆ ಮಾಡುವರು. ಹಣ್ಣನ್ನು ಬಡಿಗೆಯಿಂದ ಒಡೆದು ವಿತ್ತನವನ್ನು ಬೆರ್ಪಡಿಸುವರು ಮತ್ತು ವಿತ್ತನವನ್ನು ಸುತ್ತಿಗೆಗಳಿಂದ ಒಡೆದು, ವಿತ್ತನ ಮೇಲಿದ್ದ ಹೊಟ್ಟು/ಸಿಪ್ಪೆ ಯನ್ನು ತೆಗೆಯಲಾಗುತ್ತದೆ. ಹಿಂದಿನ ಕಾಲದಲ್ಲಿ ಬೀಜ/ತಿರುಳನ್ನು ನೀರಿನ ಜೊತೆ ಸೇರಿಸಿ ಚೆನ್ನಾಗಿ ಬಿಸಿ ಮಾಡುವುದರಿಂದ/ಕುದಿಸುವುದರಿಂದ, ಎಣ್ಣೆ ವಿತ್ತನದಿಂದ ಬೇರೆಯಾಗಿ ನೀರಿನ ಮೇಲೆ ತೇಲಾಡುತ್ತದೆ. ತೇಲಿದ ಎಣ್ಣೆ/ಕೊಬ್ಬನ್ನು ಬೇರ್ಪಡಿಸುತ್ತಾರೆ. ಇಂದಿನ ಕಾಲ ಎಣ್ಣೆ ಯಂತ್ರಗಳಿಂದ (ಎಕ್ಸುಪೆಲ್ಲರು) ಮತ್ತು ಸಾಲ್ವೆಂಟ್ ಪ್ಲಾಂಟ್ ಸಹಾಯದಿಂದ ಎಣ್ಣೆ/ಕೊಬ್ಬನ್ನು ತೆಗೆಯಲಾಗುತ್ತದೆ[೪].
ಎಣ್ಣೆ-ನಿರ್ದಿಷ್ಟ ವಿವರಣೆ
[ಬದಲಾಯಿಸಿ]ಎಣ್ಣೆಯಲ್ಲಿ ಸಂತೃಪ್ತ ಕೊಬ್ಬಿನ ಆಮ್ಲಗಳು ೫೮-೬೦% ತನಕ ಇರುವುದರಿಂದ ಎಣ್ಣೆಯ ದ್ರವೀಭವನ ಉಷ್ಣೋಗ್ರತೆ ೪೧-೪೨೦C ಇರುತ್ತದೆ. ಅದರಿಂದ ಇದು ಸಾಧಾರಣ ಪರಿಸರ ಉಷ್ಣೊಗ್ರತೆ ಹತ್ತಿರ ಘನಸ್ಥಿತಿಯಲ್ಲಿ ಇರುತ್ತದೆ. ಅದಕ್ಕೆ ಮುರುಗಲ ಎಣ್ಣೆಯನ್ನು ಮುರುಗಲ/ಕೊಕುಮ್ ಕೊಬ್ಬು (kokum fat), ಕೊಕುಮ್ ಬೆಣ್ಣೆ (kokum butter) ಎಂದು ಕರೆಯಲಾಗುತ್ತದೆ. ಸಂತೃಪ್ತ ಕೊಬ್ಬಿನ ಆಮ್ಲಗಳು ಹೆಚ್ಚು ಇರುವುದರಿಂದ, ಎಣ್ಣೆ/ಕೊಬ್ಬು ಅಯೋಡಿನ್ ಮೌಲ್ಯ ಕಡಿಮೆ ಯಾಗಿ ೩೨ ನಿಂದ ೪೦ ಮಧ್ಯೆ ಇರುತ್ತದೆ.
ಮುರುಗಲ ಎಣ್ಣೆ/ಕೊಬ್ಬು ಭೌತಿಕ ಧರ್ಮಗಳು[೫][೧]
ಭೌತಿಕ ಲಕ್ಷಣ | ಪರಿವಿಡಿ ಮಿತಿ |
ವಕ್ರಿಭವನ ಸೂಚಕ600Cవద్ద | 1.4565-1.4575 |
ಅಯೋಡಿನ್ ಮೌಲ್ಯ | 32±2-40 |
ಸಪೊನಿಫಿಕೆಸನ್ ಮೌಲ್ಯ/ಸಂಖ್ಯೆ | 187-191±2 |
ಅನ್ ಸಪೋನಿಫಿಯಬುಲ್ ಪದಾರ್ಥ | 1.0-2.0ಗರಿಷ್ಟವಾಗಿ |
ದ್ರವೀಭವನ ಉಷ್ಣೋಗ್ರತೆ | 41-420C |
ವಿಶಿಷ್ಟ ಗುರುತ್ವ | ೦.898-0.914 |
ಪೆರಾಕ್ಸೈಡ್ ಬೆಲೆ ಮಿ.ಗ್ರಾ/ಕಿಲೋ | ೪.೦ ಗರಿಷ್ಟವಾಗಿ |
ಮುರುಗಲ ಎಣ್ಣೆಯಲ್ಲಿ ಉತ್ಕರ್ಷಣ ನಿರೋಧಕವಾದ ವಿಟಮಿನ್ 'E' ಸಾಕಷ್ಟು ಪ್ರಮಾಣದಲ್ಲಿದೆ. ಅದರಿಂದ ಎಣ್ಣೆ ತ್ವರಿತವಾಗಿ ಕೆಡುವುದಿಲ್ಲ. ಒಮೇಗಾ-೩ ಕೊಬ್ಬಿನ ಆಮ್ಲ ಕೆಲವು ಮುರುಗಲ ಎಣ್ಣೆಯಲ್ಲಿ ೨.೦% ತನಕ ಇರುತ್ತದೆ. ಒಂದೇ ದ್ವಿ ಬಂಧವಿರುವ ಒಲಿಕ್ ಸಂತೃಪ್ತ ಕೊಬ್ಬಿನ ಆಮ್ಲ ಎಣ್ಣೆಯಲ್ಲಿ ೪೦-೪೨% ವರೆಗೆ ಇರುತ್ತದೆ. ಸಂತೃಪ್ತ ಕೊಬ್ಬಿನ ಆಮ್ಲಗಳಲ್ಲಿ ಸ್ಟಿಯರಿಕ್ ಕೊಬ್ಬಿನ ಆಮ್ಲ ೫೦-೫೬% ವರೆಗೆ ಇರುತ್ತದೆ. ಒಮ್ಮೆಮ್ಮೆ ೬೦% ತನಕ ಇರುತ್ತದೆ.
ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳ ಪಟ್ಟಿ[೫][೧]
ಕೊಬ್ಬಿನ ಆಮ್ಲ | ಶೇಕಡ |
ಮಿರಿಸ್ಟಿಕ್ ಆಮ್ಲ(C14:0) | 1.2 |
ಪಾಮಿಟಿ ಆಮ್ಲ(C16:0 | 2.5-5.3 |
ಸ್ಟಿಯರಿಕ್ ಆಮ್ಲ(C18:0) | 52-56 |
ಒಲಿಕ್ ಆಮ್ಲ(C18:1) | 39.4-41.5 |
ಲಿನೊಲೆನಿಕ್ ಆಮ್ಲ(C18:3) | 1.7 |
ಮಾರ್ಗರ್ ಆಮ್ಲ(C17:0) | 0-5 |
ಅರಚಿಡಿಕ್ ಆಮ್ಲ(C20:0) | 0-5 |
ಮುರುಗಲ ಎಣ್ಣೆ/ಬೆಣ್ಣೆ ಪ್ರಯೋಜನಗಳು
[ಬದಲಾಯಿಸಿ]- ಚಾಕೋಲೆಟ್ ತಯಾರಿಕೆಯಲ್ಲಿ ಕೊಕೋ ಬಟ್ಟರ್ ಗೆ ಬದಲಾಗಿ ಮುರುಗಲ ಬೆಣ್ಣೆಯನ್ನು ಉಪಯೋಗಿಸ ಬಹುದು.[೬]
- ಸಾಬೂನ್ ,ಮೇಣದ ಬತ್ತಿ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
- ಕಾಸ್ಮೋಟಿಕ್ಸು ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ[೭].
ಚಿತ್ರಶಾಲೆ
[ಬದಲಾಯಿಸಿ]-
ಮರ
-
ಹೂ ವೊಗ್ಗು
-
ಎಲೆ-ಹಣ್ಣು
-
ಎಲೆ-ಕಾಯಿ-ಹಣ್ಣು
-
ಹಣ್ಣು-ತೊಗಟೆ
-
ಒಣಗಿಸಿದ ಹಣ್ಣು
ಉಲ್ಲೇಖನಗಳು
[ಬದಲಾಯಿಸಿ]- ↑ ೧.೦ ೧.೧ ೧.೨ ೧.೩ SEA HandBOOk -2009,by The Solvent Extractors' Association of India
- ↑ ೨.೦ ೨.೧ http://www.flowersofindia.net/catalog/slides/Kokam.html
- ↑ http://theepicentre.com/spice/kokum/
- ↑ http://www.novodboard.com/Kokum-Eng.pdf.
- ↑ ೫.೦ ೫.೧ "ಆರ್ಕೈವ್ ನಕಲು". Archived from the original on 2014-02-20. Retrieved 2013-10-17.
- ↑ [೧]Application of kokum (Garcinia indica) fat as cocoa butter improver in chocolate.B Maheshwari, S Yella Reddy,Journal of the Science of Food and Agriculture (Impact Factor: 1.44). 01/2005; 85(1):135 - 140. DOI:10.1002/jsfa.1967
- ↑ http://trade.indiamart.com/details.mp?offer=1843698291