ವಿಷಯಕ್ಕೆ ಹೋಗು

ಮುರುಗಲ ಹಣ್ಣು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಪುನರ್ಪುಳಿ ಇಂದ ಪುನರ್ನಿರ್ದೇಶಿತ)
Garcinia indica
Kokum fruits, seeds, pulp and rinds
Conservation status
Scientific classification e
ಸಾಮ್ರಾಜ್ಯ: ಸಸ್ಯ
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: ಯೂಡೈಕಾಟ್‍ಗಳು
ಏಕಮೂಲ ವರ್ಗ: ರೋಸಿಡ್ಸ್
ಗಣ: ಮ್ಯಾಲ್ಪಿಘಿಯಾಲೆಸ್
ಕುಟುಂಬ: ಕ್ಲೂಸಿಯೇಸೀ
ಕುಲ: ಗಾರ್ಸೀನಿಯಾ
ಪ್ರಜಾತಿ:
G. indica
Binomial name
Garcinia indica
A kokum tree soon to be ready for harvest
ಕೋಕಂ ಹಣ್ಣುಗಳ ಒಣಗಿಸಿದ ಸಿಪ್ಪೆ
The vessel on the left contains syrup which is obtained from the vessel containing kokum rinds, on the right. The syrup is used to make kokum sherbet.

ಮುರುಗಲ ಹಣ್ಣು, ಕೋಕಂ ಅಥವಾ ಪುನರ್ಪುಳಿ ಬೆಳೆಯು ಭಾರತದ ಪಶ್ಚಿಮಘಟ್ಟ ಪ್ರದೇಶಗಳ ನಿತ್ಯಹರಿದ್ವರ್ಣ ಕಾಡುಗಳಲ್ಲಿ ನೈಸರ್ಗಿಕವಾಗಿ ಬೆಳೆಯುತ್ತಿದ್ದು ನೆಡುತೋಪು ಬೆಳೆಯಾಗಿ ಬೆಳೆಯಲು ಸೂಕ್ತವಾದ ಅಪ್ರಧಾನ ಹಣ್ಣು ಅಥವಾ ಸಾಂಬಾರು ಬೆಳೆ. ಇದರ ಉಗಮ ಸ್ಥಾನ ಭಾರತ. ವೈಜ್ಞಾನಿಕವಾಗಿ ಇದನ್ನು ಗಾರ್ಸಿನಿಯಾ ಇಂಡಿಕ ಎಂದು ಕರೆಯಲಾಗುತ್ತಿದ್ದು ಇದು ಗಟ್ಟಿಫೆರೆ ಕುಟುಂಬಕ್ಕೆ ಸೇರಿದೆ. ಇದು ಶೀಘ್ರವಾಗಿ ೧೦-೧೫ ಮೀ. ಎತ್ತರಕ್ಕೆ ಬೆಳೆಯುವ ಗಡಸು ಮರವಾಗಿದ್ದು, ಬಾಗಿರುವ ರೆಂಬೆಗಳನ್ನು ಹೊಂದಿರುತ್ತದೆ.[]

ಮುರುವನ ಹುಳಿ, ಮೂರ್ಗಿನಹುಳಿ ಮರ, ಬಿರಿಂಡ ಪರ್ಯಾಯನಾಮಗಳು. ಉಪಾಗಿ (ಮಂತುಳ್ಳಿ), ಮಂಗೊಸ್ಟೀನ್, ದೇವನಹುಳಿ, ದೇವಗರಿಗೆ ಮುಂತಾದ ಮರಗಳಿಗೆ ಹತ್ತಿರ ಸಂಬಂಧಿಯಾದ ಇದು ಅವುಗಳಂತೆಯೇ ಗಾರ್ಸೀನಿಯ ಎಂಬ ಜಾತಿಗೆ ಸೇರಿದೆ. ಕರ್ನಾಟಕದ ಮತ್ತು ಕೇರಳದ ವೈನಾಡಿನ ಕಾಡುಗಳಲ್ಲಿ ಇದು ಸ್ವಾಭಾವಿಕವಾಗಿ ಬೆಳೆಯುತ್ತದೆ. ಮಹಾರಾಷ್ಟ್ರದ ಕೊಂಕಣ ಸೀಮೆಯಲ್ಲೂ ತಮಿಳುನಾಡಿನ ನೀಲಗಿರಿ ಶ್ರೇಣಿಗಳಲ್ಲೂ ಇದನ್ನು ಬೆಳೆಸುವುದುಂಟು.

ಸಸ್ಯ ವಿವರಣೆ

[ಬದಲಾಯಿಸಿ]

ಮಧ್ಯಮ ಗಾತ್ರದ ಮರ ಇದು; ಸುಮಾರು 10 ಮೀ ಎತ್ತರಕ್ಕೆ ಬೆಳೆಯುತ್ತದೆ. ಹಣ್ಣುಗಳು 2-4 ಸೆಂಮೀ ವ್ಯಾಸದ ಚೆಂಡುಗಳಂತಿವೆ. ಮಾಗಿದಾಗ ಕಡುನೀಲಿ ಬಣ್ಣ ತಳೆಯುತ್ತವೆ. ಒಳಗೆ ರಸಭರಿತ ತಿರುಳೂ 5-8 ಬೀಜಗಳೂ ಇವೆ. ಹಣ್ಣಿಗೆ ಸುವಾಸನಾಯುಕ್ತ ಸ್ವಾದವೂ ಸಿಹಿಮಿಶ್ರಿತ ಹುಳಿ ರುಚಿಯೂ ಉಂಟು. ಹಣ್ಣಿನ ಸಿಪ್ಪೆಯನ್ನು ತಿರುಳಿನ ರಸದಲ್ಲಿ ಕೆಲಕಾಲ ನೆನೆಯಿಕ್ಕಿ ತೆಗೆದು ಬಿಸಿಲಿನಲ್ಲಿ ಒಣಗಿಸಿ ಕೋಕಮ್ ಎಂಬ ಹುಳಿಯನ್ನು ತಯಾರಿಸಲಾಗುತ್ತದೆ.[] ಇದರಲ್ಲಿ ಶೇ. 10 ಮ್ಯಾಲಿಕ್ ಆಮ್ಲ, ಕೊಂಚ ಮೊತ್ತದ ಸಿಟ್ರಿಕ್ ಅಥವಾ ಟಾರ್ಟಾರಿಕ್ ಆಮ್ಲ ಇದೆ.

ಉಪಯೋಗ

[ಬದಲಾಯಿಸಿ]

ಕೋಕಂ ತಿರುಳನ್ನು ಹುಣಸೆ ಹುಳಿಗೆ ಪರ್ಯಾಯವಾಗಿ ಬಳಸಬಹುದು.[] ಪ್ರತಿ ೧೦೦ ಗ್ರಾಂ ತಿರುಳಿನಿಂದ ೮೦ ಗ್ರಾಂ ತೇವಾಂಶ, ೨.೪ ಗ್ರಾಂ ಆಂತೊಸಯನಿನ್, ೧.೦ ಗ್ರಾಂ ಸಸಾರಜನಕ, ೧.೭ ಗ್ರಾಂ ಟ್ಯಾನಿನ್, ೪.೧ ಗ್ರಾಂ ಸಕ್ಕರೆ, ೧.೪ ಗ್ರಾಂ ಕಚ್ಚಾಕೊಬ್ಬು, ೦.೯ ಗ್ರಾಂ ಪೆಕ್ಟಿನ್ ಮತ್ತು ೫.೯ ಗ್ರಾಂ ಆರ್ಗಾನಿಕ್ ಆಮ್ಲ ದೊರೆಯುತ್ತದೆ.[] ಇದನ್ನು ಆಹಾರದಲ್ಲಿ ಬಳಕೆ ಮಾಢಬಹುದು. ಸಿರಪ್‌, ಪಾನೀಯ, ಸಾರು, ತಂಬುಳಿಗಳ ರೂಪದಲ್ಲಿ ಬಳಸುತ್ತಾರೆ. ಮಹಾರಾಷ್ಟ್ರದ ಕೊಂಕಣ್‌ ಪ್ರದೇಶ ಮತ್ತು ಗೋವಾಗಳಲ್ಲಿ ಹಣ್ಣಿನ ಸಿಪ್ಪೆಯನ್ನು ಅಡುಗೆಯಲ್ಲಿ ವ್ಯಾಪಕವಾಗಿ ಬಳಸುತ್ತಾರೆ. ಹಣ್ಣಿಗೆ ಬಾಯಾರಿಕೆ ನೀಗುವ ವಿಶೇಷ ಗುಣವಿದೆ. ಮಣ್ಣಿನ ಪಾತ್ರೆಯಲ್ಲಿ ಪುನರ್ಪುಳಿ ಹಣ್ಣಿನ ಒಣ ಸಿಪ್ಪೆಗಳನ್ನು ಹಾಕಿಟ್ಟು, ಹತ್ತಿಬಟ್ಟೆಯಿಂದ ಮಡಕೆಯ ಬಾಯನ್ನು ಬಿಗಿದಿಟ್ಟರೆ ಮೂರು ವರುಷವಾದರೂ ತಾಜಾ ಆಗಿಯೇ ಉಳಿಯುತ್ತದೆ ಎನ್ನಲಾಗಿದೆ.[]

ಮೂರ್ಗಿನಹುಳಿಹಣ್ಣಿನ ಬೀಜದಿಂದ ಕೋಕಮ್ ಬೆಣ್ಣೆಯನ್ನು ಪಡೆಯಬಹದು. ಖಾದ್ಯಯೋಗ್ಯವಾಗಿರುವ ಈ ಬೆಣ್ಣೆಯನ್ನು ಹಾಗೆಯೇ ಸೇವಿಸುವುದಲ್ಲದೆ ತುಪ್ಪದೊಂದಿಗೆ ಮಿಶ್ರಮಾಡಿ ಬಳಸುವುದುಂಟು. ಇದು ಶಕ್ತಿವರ್ಧಕ, ತಂಪುಕಾರಕ, ಪ್ರತಿಬಂಧಕವೆಂದು ಹೆಸರಾಗಿದೆ. ಇದನ್ನು ಮುಲಾಮಿನ ರೂಪದಲ್ಲಿ ಕೈ, ತುಟಿ ಬಿರುಕುಗಳ ಚಿಕಿತ್ಸೆಯಲ್ಲಿ ಉಪಯೋಗಿಸುವುದಿದೆ. ಬೆಣ್ಣೆ ತೆಗೆದಮೇಲೆ ಉಳಿಯುವ ಹಿಂಡಿ ಗೊಬ್ಬರವಾಗಿ ಉಪಯುಕ್ತ.

ಹಣ್ಣು ಜಂತುನಾಶಕ, ಹೃದಯೋತ್ತೇಜಕವಾಗಿದೆಯಲ್ಲದೆ ಮೂಲವ್ಯಾಧಿ, ಆಮಶಂಕೆಗಳಿಗೂ ಔಷಧಿಯಾಗಿದೆ. ಹಣ್ಣಿನ ರಸ ಪಿತ್ತಹರ.

ಪುನರ್ಪುಳಿ ಮರ ನವೆಂಬರ್-ಫೆಬ್ರವರಿಯಲ್ಲಿ ಹೂವು ಬಿಟ್ಟು ಏಪ್ರಿಲ್-ಮೇ ತಿಂಗಳಲ್ಲಿ ಹಣ್ಣುಗಳು ಕೊಯ್ಲಿಗೆ ಸಿದ್ದವಾಗುತ್ತವೆ. ಸುಮಾರು ೧೫ ವರ್ಷಗಳ ಮರ ೩೦-೫೦ ಕಿ.ಗ್ರಾಂ ಹಣ್ಣು ನೀಡಬಲ್ಲದು. ದುಂಡಾದ ಮಾಗಿದ ಹಣ್ಣುಗಳು ೨.೫-೩.೦ ಸೆಂ.ಮೀ. ವ್ಯಾಸ ಹೊಂದಿದ್ದು ದಟ್ಟ ಕೆಂಪು/ನೇರಳೆಬಣ್ಣ ಮತ್ತು ತಿರುಳಿನಲ್ಲಿ ೩-೮ ದೊಡ್ಡ ಬೀಜಗಳಿರುತ್ತವೆ. ಕೋಕಂನಲ್ಲಿ ಗಂಡು ಮತ್ತು ಹೆಣ್ಣು ಮರಗಳಿದ್ದು ಗಂಡು ಮರದಲ್ಲಿ ಕಾಯಿ ಕಚ್ಚುವುದಿಲ್ಲ. ಆದರೆ ಬೀಜದ ಸಸಿಗಳಿಂದ ತೋಟ ಮಾಡಿದರೆ ಹೆಣ್ಣು ಹೂವುಗಳ ಪರಾಗ ಸ್ಪರ್ಶ ಕ್ರಿಯೆಗೆ ಗಂಡು ಮರಗಳು ಅಗತ್ಯ. ವಾಣಿಜ್ಯ ಉದ್ದೇಶದ ತೋಟಗಳಲ್ಲಿ ಸಾಮಾನ್ಯವಾಗಿ ಕಸಿಗಿಡಗಳನ್ನು ಬಳಸುತ್ತಾರೆ. ಕೋಕಂನಲ್ಲಿ ಬೀಜದಿಂದ ಬೆಳೆಸಿದ ಬೇರುಗಿಡಗಳಿಗೆ ಹೆಣ್ಣು ಗಿಡಗಳಿಂದ ತಂದ ೯ ತಿಂಗಳ ಬೆಳವಣಿಗೆಯ ಕಸಿಕೊಂಬೆಗಳನ್ನು ಉಪಯೋಗಿಸಿ ಮೆದುಕಾಂಡಕಸಿ ಮಾಡಿ ಕಸಿಗಿಡಗಳನ್ನು ಬೆಳೆಸುತ್ತಾರೆ. ಅಕ್ಟೋಬರ್ ತಿಂಗಳು ಕಸಿಕಟ್ಟಲು ಸೂಕ್ತ ಕಾಲ. ಒಂದು ಎಕರೆ ಪ್ರದೇಶಕ್ಕೆ ೬ ಮೀ. x ೬ ಮೀ. ಅಂತರದಲ್ಲಿ ೧೧೦-೧೧೫ ಕಸಿ ಗಿಡಗಳು ಬೇಕಾಗುತ್ತವೆ.[]

ಛಾಯಾಂಕಣ

[ಬದಲಾಯಿಸಿ]

ಬಾಹ್ಯಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Ved, D.; Saha, D.; Ravikumar, K.; Haridasan, K. (2015). "Garcinia indica". IUCN Red List of Threatened Species. 2015: e.T50126592A50131340. doi:10.2305/IUCN.UK.2015-2.RLTS.T50126592A50131340.en. Retrieved 19 November 2021.
  2. "ರೆಸೋನೆನ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ". Retrieved 13 June 2020.
  3. Ron Herbst; Sharon Tyler Herbst (2015). The Deluxe Food Lover's Companion, 2nd edition. Barron's Educational Series. ISBN 978-1-4380-7621-8.
  4. K. V. Peter (Editor); V.K. Raju (author); M. Reni (author) (17 August 2001). Handbook of Herbs and Spices. Elsevier. pp. 207–213. ISBN 978-1-85573-645-0. {{cite book}}: |author1= has generic name (help)
  5. https://vijaykarnataka.com/lifestyle/health/surprising-health-benefits-of-drinking-kokum-juice-every-day/articleshow/72394772.cms
  6. "ಫ್ರಜಾವಾಣಿ ವರದಿ". Retrieved 13 June 2020.
  7. "ಮುರುಗಲ ಹಣ್ಣು ಬೆಳುಯುವ ವಿಧಾನ".
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: