ಮುರುಗಲ ಹಣ್ಣು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕೆಂಪು ಮುರುಗಲ ಹಣ್ಣು

ಮುರುಗಲ ಹಣ್ಣು ಅಥವಾ ಪುನರ್ಪುಳಿ ಅಥವಾ ಕೋಕಂ ಒಂದು ಜಾತಿಯ ಹಣ್ಣು. ಇದು ಪಶ್ಚಿಮ ಘಟ್ಟಗಳಲ್ಲಿ ಕಂಡು ಬರುತ್ತದೆ. ಇದು ಹುಳಿ ಮತ್ತು ಸಿಹಿಯ ಮಿಶ್ರಣವಾದಂತಹ ರುಚಿಯನ್ನು ಹೊಂದಿರುತ್ತದೆ. ಇವುಗಳಲ್ಲಿ ಎರಡು ವಿಧದ ಬಣ್ಣದ ಹಣ್ಣುಗಳ ಮರಗಳಿವೆ - ಕೆಂಪು ಮತ್ತು ಬಿಳಿ. ಅವುಗಳಲ್ಲಿ ಬಿಳಿಯ ಅಂದರೆ ತೆಳು ಹಳದಿ ಬಣ್ಣದ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೆಚ್ಚಾಗಿ ಫೆಬ್ರವರಿ-ಮಾರ್ಚ್ ನಲ್ಲಿ ಹೂ ಬಿಟ್ಟು, ಏಪ್ರಿಲ್-ಮೇ ತಿಂಗಳಿನಲ್ಲಿ ಕಾಯಿ, ಹಣ್ಣು ಆಗಲು ಪ್ರಾರಂಭವಾಗುತ್ತವೆ.

ಔಷಧೀಯ ಗುಣಗಳು[ಬದಲಾಯಿಸಿ]

ಪಿತ್ತದಿಂದ ಉಂಟಾಗುವ ಅನಾರೋಗ್ಯಗಳಿಗೆ ಮುರುಗಲ ಹಣ್ಣು ಪರಿಣಾಮಕಾರಿಯಾಗಿದೆ. ಹಣ್ಣು ಸಿಗುವ ಸಮಯದಲ್ಲಿ ಅಲ್ಲದೇ, ಈ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಇಟ್ಟು ಬೇಕಾದಾಗ ಬಳಸಿಕೊಳ್ಳಬಹುದು. ಈ ಹಣ್ಣಿನ ರಸಕ್ಕೆ ಸ್ವಲ್ಪ ಉಪ್ಪು ಸ್ವಲ್ಪ ಸಕ್ಕರೆ ಸೇರಿಸಿ ವಾರಕ್ಕೆ ಒಮ್ಮೆ ಕುಡಿಯುವುದರಿಂದ ದೇಹದ ತೂಕ ಕಡಿಮೆ ಆಗುತ್ತದೆ.ಕೆಮ್ಮಣ್ಣು ನೀರಲ್ಲಿ ನೆನೆಸಿಟ್ಟು ಅದರ ತಿಳಿ ಯನ್ನು ದಿನಕ್ಕ್ಕೆ ಮೂರು ನಾಲ್ಕು ಬಾರಿ ಕುಡಿಯುವುದರಿಂದಲೂ ಪಿತ್ಹ ದಿಂದ ಬರುವ ಎಲ್ಲಾ ತೊಂದರೆ ಶಮನ ಗೊಳ್ಳುತ್ತದೆ..