ಕೃಷ್ಣ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕೃಷ್ಣ
ದೇವನಾಗರಿ कृष्ण
ಸಂಸ್ಕೃತ ಲಿಪ್ಯಂತರಣ Kṛṣṇa
ಸಂಲಗ್ನತೆ Full incarnation of Vishnu (Svayam Bhagavan)[೧][೨][೩][೪][೫]
ನೆಲೆ Goloka Vrindavana, Gokula, Dwarka, Vaikuntha [೩]
ಮಂತ್ರ Om Namo Narayanaye, Om Namo Bhagavate Vasudevaye, Om Vishnave Namah, Hare Krishna Mantra
ಆಯುಧ ಸುದರ್ಶನ ಚಕ್ರ
ಒಡನಾಡಿ Rukmini, Satyabhama, Jambavati, Kalindi, Mitravinda, Nagnajiti, Bhadra, Lakshmana, Radha
Mount ಗರುಡ
Texts ಭಾಗವತ ಪುರಾಣ, ವಿಷ್ಣು ಪುರಾಣ, ಮಹಾಭಾರತ, ಭಗವದ್ಗೀತೆ

ಶ್ರೀಕೃಷ್ಣ ಸಾಂಪ್ರದಾಯಿಕ ಹಿಂದೂ ಧರ್ಮೀಯರ ನಂಬಿಕೆಯಂತೆ ವಿಷ್ಣುವಿನ ಹತ್ತು ಅವತಾರಗಳಲ್ಲಿ ಒಬ್ಬ. ದೇವಕಿ ಮತ್ತು ವಸುದೇವ ಕೃಷ್ಣನ ತಂದೆ ತಾಯಿಗಳು. ರಾಕ್ಷಸನಾದ ಕಂಸ ಕೃಷ್ಣನ ಸೋದರ ಮಾವ. ಕಂಸ ಕೃಷ್ಣನಿಂದಲೇ ಮರಣ ಹೊಂದುತ್ತಾನೆ. ಮಹಾಭಾರತದಲ್ಲಿ ಕೃಷ್ಣನ ಪಾತ್ರವನ್ನು ಸೂತ್ರಧಾರನ ಪಾತ್ರಕ್ಕೆ ಹೋಲಿಸಲಾಗಿದೆ. ಕೃಷ್ಣಾವತಾರದ ಕಥೆ ಮಹಾಭಾರತದ ಉದ್ದಕ್ಕೂ ಕಂಡು ಬರುತ್ತದೆ. ಕಂಸ, ಶಿಶುಪಾಲ, ಮೊದಲಾದವರನ್ನು ಕೊಲ್ಲುವ ಕೃಷ್ಣ ಪಾಂಡವರ ಮಿತ್ರ. ಪಗಡೆಯಾಟದ ಸಂದರ್ಭದಲ್ಲಿ ದ್ರೌಪದಿಯ ವಸ್ತ್ರಾಪಹರಣವನ್ನು ತಡೆಯುವ ಕೃಷ್ಣ ಮಹಾಭಾರತ ಯುದ್ಧದಲ್ಲಿ ಅರ್ಜುನನ ಸಾರಥಿಯಾಗಿ ಪಾಲ್ಗೊಳ್ಳುತ್ತಾನೆ. ಈ ಸಂದರ್ಭದಲ್ಲಿ ಯುದ್ಧ ಬೇಡವೆಂದು ನಿರಾಕರಿಸುವ ಅರ್ಜುನನಿಗೆ ಕೃಷ್ಣ ಮಾಡುವ ಉಪದೇಶವೇ ಹಿಂದೂಗಳ ಪವಿತ್ರ ಗ್ರಂಥವಾದ ಭಗವದ್ಗೀತೆ ಎಂದು ಪ್ರಸಿದ್ಧವಾಗಿದೆ.

 • ಮಹಾವಿಷ್ಣು ಕೃಷ್ಣನ ಅವತಾರ ತಾಳುವುದಕ್ಕೆ ಭೃಗು ಮಹರ್ಷಿಯ ಶಾಪವೇ ಕಾರಣ ಎನ್ನಲಾಗಿದೆ. ಒಮ್ಮೆ ದೇವತೆಗಳಿಗೂ ಅಸುರರಿಗೂ ೧೦೦ವರ್ಷಗಳ ಕಾಲ ಯುದ್ದವಾಗಿ ಅನೇಕ ಮಂದಿ ಅಸುರರು ಮೃತ ಹೊಂದಿದರು. ಆಗ ಅಸುರರ ಗುರುವಾದ ಶುಕ್ರಾಚಾರ್ಯ ಶಕ್ತ್ಯಾಯುಧಗಳನ್ನು ಪಡೆಯಲು ಕೈಲಾಸಕ್ಕೆ ಹೋದನು. ಅಸುರರೆಲ್ಲ ಶುಕ್ರನ ತಾಯಿಯಾದ ಕಾವ್ಯಮಾತಾಳಲ್ಲಿ ಆಶ್ರಯ ಪಡೆದಿದ್ದರು. ಅವರನ್ನೇಲ್ಲ ಸಾಯಿಸಲು ದೇವೇಂದ್ರನು ಮಹಾವಿಷ್ಣುವಿನ ಸಹಾಯ ಕೋರಿದನು. ಆಗ ಮಹಾವಿಷ್ಣು ತನ್ನ ಲೋಕಕ್ಕೆ ಸಹಾಯ ಮಾಡುವ ದೃಷ್ಟಿಯಿಂದ ಸುದರ್ಶನ ಚಕ್ರದಿಂದ ಕಾವ್ಯಮಾತಾಳ ತಲೆ ಕತ್ತರಿಸಿದನು. ಹೆಣ್ಣೊಬ್ಬಳ ಕೊಂದ ಮಹಾವಿಷ್ಣುವಿನ ಮೇಲೆ ಭೃಗು ಮಹರ್ಷಿಯು ಕ್ರೋಧಗೊಂಡು 'ಭೂಮಿ ಮೇಲೆ ಮನುಷ್ಯನಾಗಿ ಹುಟ್ಟು' ಎಂದು ಶಪಿಸುತ್ತಾನೆ. ಅದರಿಂದಾಗಿ ಮಹಾವಿಷ್ಣು ಶ್ರೀಕೃಷ್ಣನಾಗಿ ಭೂಮಿ ಮೇಲೆ ಹುಟ್ಟುತ್ತಾನೆ.

ಕೃಷ್ಣನ ಇತರ ಹೆಸರುಗಳು[ಬದಲಾಯಿಸಿ]

 • ಅಚಲ: ಅಲಗಾಡದವ
 • ಅಚ್ಯುತ: ಚ್ಯುತಿಯಿಲ್ಲದವ
 • ಅಸುರಾರಿ : ರಾಕ್ಷಸರಿಗೆ ಶತೃ
 • ಕಾಲದೇವ: ಯಮನನ್ನು ಮೀರಿಸಿದವ
 • ಗಿರಿಧರ: ಗಿರಿಯನ್ನು ಎತ್ತಿದವ (ಗೋವರ್ಧನ)
 • ಗೋಪಾಲ: ಗೋವುಗಳನ್ನು ಪಾಲಿಸಿದವ
 • ಗೋವಿಂದ: ಹಸುಗಳನ್ನು ರಕ್ಷಿಸುವವ
 • ಚಕ್ರಧಾರಿ: ಚಕ್ರಾಯುಧವನ್ನು ಧರಿಸಿದವ
 • ದಾಮೋದರ:
 • ದ್ವಾರಕಾಧೀಶ: ದ್ವಾರಕಾನಗರಕ್ಕೆ ಒಡೆಯ
 • ದ್ವಾರಕಾನಾಥ: ದ್ವಾರಕಾನಗರಕ್ಕೆ ಒಡೆಯ
 • ಘನಶ್ಯಾಮ:
 • ಜಗನ್ನಾಥ: ಜಗತ್ತಿನ odaya
 • ಜನಾರ್ದನ: ಎಲ್ಲರಿಗೂ ವರವನ್ನು ಕೊಡುವನು
 • ನಂದಗೋಪಾಲ: ನಂದ ಗೋಪನ ಮಗ
 • ಪತೀತಪಾವನ: (?) ಪಾಪಿಗಳನ್ನು ಉದ್ದರಿಸುವವನು
 • ಪರಬ್ರಹ್ಮ: ಬ್ರಹ್ಮನ ತಂದೆ
 • ಪಾಂಡುರಂಗ:
 • ಪಾರ್ಥಸಾರಥಿ: ಅರ್ಜುನನ ಸಾರಥಿ
 • ಮಧುಸೂದನ: ಮಧು ಎಂಬ ರಾಕ್ಷಸನನ್ನು ನಾಶ ಮಾಡಿದವ
 • ಮಾಧವ: ವಸಂತ ಋತು ತರುವವ (?)ಲಕ್ಷ್ಮಿಯ ಒಡೆಯ, ವಿಷ್ಣು : ಮಾ =ಲಕ್ಷ್ಮಿ -ಧವ =ಒಡೆಯ, ಪತಿ (ವಿಕ್ಷನರಿ)
 • ಮುಕುಂದ: ಮುಕ್ತಿಯನ್ನು ಕೊಡುವವ
 • ಮುಖಿಲ: (?) (ಚರ್ಚೆ)
 • ಯೋಗೇಶ್ವರ: ಯೋಗಿಗಳ ನಾಥ
 • ವಾಸುದೇವ: ವಸುದೇವನ ಮಗ
 • ಶ್ಯಾಮಸುಂದರ: ಕಪ್ಪು ವರ್ಣದವ
 • ಹೃಷೀಕೇಶ: ಹೃಷಿಕಗಳನ್ನು(ಇಂದ್ರಿಯ) ಹಿಡಿದಿಟ್ಟವ
 • ಕೇಶವ:
 • ಪುರುಷೋತ್ತಮ : ಪುರುಷರಲ್ಲೇ ಅತ್ಯುತ್ತಮನಾದವನು
 • ನವನೀತ : ತಾಜ ಬೆಣ್ಣೆಯಂತವನು
 • ಸುದರ್ಶನ : ಸುದರ್ಶನ ಚಕ್ರ ಹೊಂದಿದವ
 • ಮುರಳಿ : ಕೊಳಲನ್ನು ಹೊಂದಿದವ
 • ಮುರಾರಿ :
 • ವೇಣುಗೋಪಾಲ : ಕೊಳಲನ್ನು ನುಡಿಸುವವ

ಉಲ್ಲೇಖಗಳು[ಬದಲಾಯಿಸಿ]

 1. Bhagavata Purana (10.2.9): Lord Vishnu Instructs his Yogamaya, Goddess Durga to take birth as daughter of Yasoda and confirms that he himself shall descend on Earth with his six opulences as the son of Devaki
 2. In Mahabharata Vanaparvan (12.46,47), < a href="">Krishna</a> says to Arjuna,"O invincible one, you are Nara and I am Narayana, and we, the sages Nara-Narayana, have come to this world at proper time.." In the same Parva, chapter 30 (verse 1), Shiva says to Arjuna "In former birth you were Nara and with Narayana as your companion, performed austerities for thousands of years at Badari".
 3. ೩.೦ ೩.೧ Bhagavata Purana (11.7.18), Uddhava praises Lord Krishna: "O Lord, feeling weary of material life and tormented by its distresses, I now surrender unto You because You are the perfect master. You are the unlimited, all-knowing Supreme God, whose personal supreme abode is Vaikuṇṭha which is free from all disturbances. In fact, You are known as Narayaṇa, the true friend of all living beings.
 4. Mahabharata, Udyoga Parva 49.20
 5. Bhagavata Purana (1.3.28)

ಬಾಹ್ಯ ಸಂಪರ್ಕಗಳು[ಬದಲಾಯಿಸಿ]ವಿಷ್ಣುವಿನ ಅವತಾರಗಳು

HinduSwastika.svg
ಮತ್ಸ್ಯ | ಕೂರ್ಮ | ವರಾಹ | ನರಸಿಂಹ | ವಾಮನ | ಪರಶುರಾಮ | ರಾಮ | ಕೃಷ್ಣ | ಬಲರಾಮ | ಬುದ್ಧ | ಕಲ್ಕಿ


ಹಿಂದೂ ಧರ್ಮ | ಹಿಂದೂ ಪುರಾಣ | ಇತಿಹಾಸ HinduSwastika.svg
ದೇವತೆಗಳು: ಶಿವ | ಬ್ರಹ್ಮ | ವಿಷ್ಣು | ರಾಮ | ಕೃಷ್ಣ | ಗಣೇಶ | ಕಾರ್ತಿಕೇಯ | ಹನುಮಂತ | ಲಕ್ಷ್ಮಣ | ಇಂದ್ರ | ಸೂರ್ಯ
ಗಾಯತ್ರಿ | ಸರಸ್ವತಿ | ಲಕ್ಷ್ಮಿ | ಪಾರ್ವತಿ | ಚಾಮುಂಡೇಶ್ವರಿ | ಕಾಳಿ | ಸೀತೆ | ವೈಷ್ಣೋ ದೇವಿ | ರಾಧೆ

ಇತರ ದೇವತೆಗಳು

ಧರ್ಮಗ್ರಂಥಗಳು: ವೇದಗಳು | ಉಪನಿಷತ್ತುಗಳು | ಪುರಾಣಗಳು | ರಾಮಾಯಣ | ಮಹಾಭಾರತ | ಭಾಗವತ


( ಟೆಂಪ್ಲೇಟಿನಲ್ಲಿ ದಶಾವತಾರ ದ ೧೧ ಹೆಸರಿದೆ- ಅದರಲ್ಲಿ 'ಬಲರಾಮ ದಶಾವತಾರದಲ್ಲಿ ಸೇರುವುದಿಲ್ಲ -ಅವನು ಆದಿಶೇಷನ ಅವತಾರವೆಂದು ಹೇಳುವರು)

"http://kn.wikipedia.org/w/index.php?title=ಕೃಷ್ಣ&oldid=529210" ಇಂದ ಪಡೆಯಲ್ಪಟ್ಟಿದೆ