ಭೀಷ್ಮ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ರಾಜ ರವಿವರ್ಮ ಅವರಿಂದ ಭೀಷ್ಮ ತನ್ನ ಪ್ರತಿಜ್ಞೆಯನ್ನು ಮಾಡುತ್ತಿರುವ ದೃಷ್ಯದ ಚಿತ್ರಣ

ಭೀಷ್ಮ ಮಹಾಭಾರತದಲ್ಲಿ ಒಂದು ಪಾತ್ರ. ಈತ ಶಂತನು ಮತ್ತು ಗಂಗೆಯರ ಪುತ್ರ. ಶಂತನು ಚಕ್ರವರ್ತಿಗೆ ಗಂಗೆಯಲ್ಲಿ ಜನಿಸಿದ ಎಂಟು ಪುತ್ರರಲ್ಲಿ ಕೊನೆಯವ. ದೇವವ್ರತ ಈತನ ಮೊದಲ ಹೆಸರು. ಅಷ್ಟವಸುಗಳಲ್ಲೊಬ್ಬನಾದ ಇವನು ವಸಿಷ್ಠ ಮುನಿಯ ಶಾಪದಿಂದ ಭೂಮಿಯಲ್ಲಿ ಅವತರಿಸುತ್ತಾನೆ.ಈತನು ಶಾಸ್ತ್ರಜ್ಞಾನವನ್ನು ದೇವರಿಷಿ ಬ್ರಹಸ್ಪತಿ ಮೊದಲಾದವರಿಂದ ಕಲಿತನು. ಶಸ್ತ್ರ ವಿದ್ಯೆಯನ್ನು ಋಷಿ ಭಾರದ್ದ್ವಾಜರಿಂದ ಕಲಿತನು. ತನ್ನ ತಂದೆ ಶಂತನುವಿನ ಸುಖಕ್ಕೋಸ್ಕರ ಆಜೀವನ ಬ್ರಹ್ಮಚರ್ಯ ಪಾಲಿಸುವ ಭೀಷ್ಮ ಪ್ರತಿಜ್ಞೆ ಮಾಡುತ್ತಾನೆ. ತನ್ನ ಸಚ್ಚಾರಿತ್ರ್ಯ ಹಾಗೂ ನಿಷ್ಠೆಯಿಂದಾಗಿ ಬಹುಶಃ ಶ್ರೀಕೃಷ್ಣನ ನಂತರ ಮಹಾಭಾರತದ ಅತ್ಯಂತ ಗೌರವಾನ್ವಿತ ವ್ಯಕ್ತಿಯೆಂದೆನಿಸಿಕೊಳ್ಳುತ್ತಾನೆ."http://kn.wikipedia.org/w/index.php?title=ಭೀಷ್ಮ&oldid=317496" ಇಂದ ಪಡೆಯಲ್ಪಟ್ಟಿದೆ