ಕರ್ಮ
===: ವ್ಯಾಖ್ಯಾನ ಈಶಾವಾಸ್ಯ ಉಪನಿಷತ್ {{ಪುಟ|೧]]
[ಬದಲಾಯಿಸಿ] ಮಂತ್ರ ೨
:
- ಕುರ್ವನ್ನೇವೇಹ ಕರ್ಮಾಣಿ|
- ಜಿಜೀವಿಷೇಚ್ಛತಂ ಸಮಾಃ |
- ಏವಂ ತ್ವಯಿ ನಾನ್ಯಥೇತೋಸ್ತಿ|
- ನ ಕರ್ಮ ಲಿಪ್ಯತೇ ನರೇ ||
- * ಪದ್ಯ ೨
- : ಕಾಯಕವು ಈ ಲೋಕದಲಿ ನಿಯಮ ;
- ಜಯಿಸು ನೀ ಬಾಳಿ ನೂರು ವರುಷ |
- ಆಯುವಿಕೆಗನ್ಯ ಮಾರ್ಗವೆ ಇಲ್ಲ ;
- ಬಯಕೆ ಇಲ್ಲದಗೆ ಕರ್ಮದಂಟಿಲ್ಲ ||
- (ಕಾಯಕ= ದುಡಿಮೆ; ಆಯುವಿಕೆಗೆ + ಅನ್ಯ ಮಾರ್ಗವೇ ಇಲ್ಲ; ಆಯುವಿಕೆಗೆ=ಆರಿಸಿಕೊಳ್ಳಲು;
ಬಯಕೆ ಇಲ್ಲದಗೆ=ಇಲ್ಲದವನಿಗೆ ಕರ್ಮದ ಅಂಟು ಇಲ್ಲ ; ಕರ್ಮ ಕೆಲಸ ಅಥವಾ ದುಡಿಮೆಯು ಈಲೋಕದಲ್ಲಿ ಮಾಡಲೇಬೇಕಾದ ನಿಯಮ - ಕರ್ತವ್ಯ; ಜಯಿಸು ನೀನು ಬಾಳಿ ನೂರು ವರ್ಷ; ಬಯಕೆ ಇಲ್ಲದವನಿಗೆ ಕರ್ಮದ ಅಂಟು ಇಲ್ಲ)
====ಭಗವದ್ಗೀತೆಯ ಕರ್ಮಯೋಗ ದ ಸಾರವನ್ನು ಒಂದೇ ಶ್ಲೋಕದಲ್ಲಿ ಹೇಳಿದೆ. ಪರಮಾತ್ಮನ ಸರ್ವವ್ಯಾಪಕತ್ವದ ಅರಿವನ್ನು ಅಂತರಂಗದಲ್ಲಿ ಹೊಂದಿ, ಅತಿಯಾಸೆ ಪಡದೆ ಕರ್ತವ್ಯ ದೃಷ್ಠಿಯಿಂದ ಮಾಡಿದ ಕರ್ಮವು, ಮನುಷ್ಯನಿಗೆ ಅಂಟದು. ಕಾಯಕವನ್ನು ಬಿಟ್ಟು ಆಯ್ಕೆ ಮಾಡಿಕೊಳ್ಳಲು ಅನ್ಯ ಅಥವಾ ಬೇರೆ ಮಾರ್ಗವೇ ಇಲ್ಲ. (ಏಕೆಂದರೆ ಬದುಕಿರುವವನು ಕೆಲಸಮಾಡದೆ ಒಂದು ಕ್ಷಣವೂ ಬದುಕಿರಲು ಆಗುವುದಿಲ್ಲ. - ಭಗವದ್ಗೀತೆ.) ಆದ್ದರಿಂದ ಆಶಾವಾದಿಯಾಗಿ, ಕರ್ತವ್ಯ ಮಾಡುತ್ತಾ ಪರೋಪಕಾರಿಯಾಗಿ (ತ್ಯಕ್ತೇನ)ನೂರು ವರುಷ ಆರೋಗ್ಯವಂತನಾಗಿ ಬಾಳುವ ಪ್ರಯತ್ನ ಮಾಡಬೇಕು. ಈ ಬಾಳಿಗೆ ಅರ್ಥವಿಲ್ಲವೆಂದುನಿರಾಶೆ ಸಲ್ಲದು.
- ಸಂಪ್ರದಾಯಿಕ ಅರ್ಥ:
ಕಾಯಕ ಅಥವಾ ಕರ್ಮ ಎಂದರೆ ಯಜ್ಞ , ಧಾರ್ಮಿಕ ಕ್ರಿಯೆ. ಆದರೆ ಸಂಸಾರಿಕರಿಗೆ-ಗೃಹಸ್ತರಿಗೆ, ಜೀವನ ನಿರ್ವಹಣೆಗೆ ಅಗತ್ಯವಾದ ಎಲ್ಲಾ ಕರ್ಮಗಳನ್ನೂ ಎಂದು ಕರ್ಮ ಪದಕ್ಕೆ ಅರ್ಥ ಮಾಡುವುದೇ ಸರಿ. (ಮೂಲದಲ್ಲಿ, ಇಹ ಕರ್ಮಾಣಿ ಈ ಲೋಕದ ಕರ್ಮಗಳನ್ನು ಎಂದು ಹೇಳಿದೆ. ಈ ಜಗತ್ತಿನಲ್ಲಿ ಬದುಕಿರಲು ಬೇಕಾದ ಎಲ್ಲಾ ಕರ್ಮಗಳು ಎಂದರೆ ದುಡಿಮೆ ಮತ್ತು ಇತರೆ ಕಾರ್ಯಗಳು )
[ಬದಲಾಯಿಸಿ] ಮಂತ್ರ ೩:
- ಅಸುರ್ಯಾ ನಾಮ ತೇ ಲೋಕಾ|
- ಅಂಧೇನ ತಮಸಾSSವೃತಾಃ |
- ತಾಂಸ್ತೇ ಪ್ರೇತ್ಯಾಭಿಗಚ್ಛಂತಿ|
- ಯೇ ಕೇ ಆತ್ಮ ಹನೋ ಜನಾಃ ||
- ಪದ್ಯ ೩:
- ಅಜ್ಞಾನ ತುಂಬಿರುವ |
- ಕತ್ತಲೆಯ ಲೋಕಕ್ಕೆ |
- ತಿರುತಿರುಗಿ ಬರುತಿಹರು|
- ಅರಿವಿರದ ಆತ್ಮ ಹನರು ||
- (ಅಜ್ಞಾನವು ತುಂಬಿರುವ ಕತ್ತಲೆಯ ಲೋಕಕ್ಕೆ ತರುತಿರುಗಿ - ಪುನಃ ಪನಃ ಬರುತ ಇಹರು ; ಬರುತ್ತಿರುವರು
- ಅರಿವು+ಇರದ ಆತ್ಮ ಹನರು - ಕೊಂದವರು)
- ಮೇಲೆ ಹೇಳಿದ ಕರ್ಮಯೋಗದ ರಹಸ್ಯವನ್ನು ಅರಿಯದವರು ಪನಃ ಪನಃ ಜನ್ಮವೆತ್ತಿ ಈ
ಲೋಕಕ್ಕೆ ಮರಳುತ್ತಾರೆ. ಆತ್ಮ ವಿಚಾರ ಮಾಡಿ ಪರಮಾತ್ಮ ತತ್ವವನ್ನು ಅರಿಯದಿರುವುದು ಆತ್ಮ ಹತ್ಯೆಯನ್ನು ಮಾಡಿಕೊಂಡಂತೆ ಎನ್ನುವುದು ಅಭಿಪ್ರಾಯ. ಆತ್ಮವನ್ನು ಯಾರೂ ಕೊಲ್ಲಲು ಸಾಧ್ಯವಿಲ್ಲ.
- ಈ ಮೇಲಿನ ಮೂರು ಮಂತ್ರಗಳಲ್ಲಿ ಜೀವನ ದರ್ಶನದ ಸಾರಾಂಶವನ್ನು ಹೇಳಿದೆ.
ನಂತರ ಆತ್ಮ ತತ್ವದ ವಿಚಾರ ಹೇಳಿದೆ. ಮುಂದಿನ ಪುಟ ೩ ಕ್ಕೆ ಆತ್ಮ ವಿಚಾರ (ಪುಟ ಕ್ಲಿಕ್ ಮಾಡಿ)