ಕರ್ಮಯೋಗ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಕರ್ಮಯೋಗ ಹಿಂದೂಧರ್ಮದಲ್ಲಿ ಹೇಳಲ್ಪಟ್ಟ ನಾಲ್ಕು ಯೋಗಗಳಲ್ಲಿ ಕರ್ಮಯೋಗವೂ ಒಂದು.'ಕರ್ಮ' ಎಂಬ ಶಬ್ದವು 'ಕೃ' ಎಂಬ ಧಾತುವಿನಿಂದ ಹುಟ್ಟಿರುತ್ತದೆ.'ಕೃ' ಎಂದರೆ ಮಾಡುವುದು,ವ್ಯವಹರಿಸುವುದು ಮುಂತಾಗಿ ಅರ್ಥಗಳಿವೆ. ಹಾಗಾಗಿ ಕರ್ಮ ಎಂದರೆ ಕೆಲಸ ಎಂದು ತಾತ್ಪರ್ಯವಾಗುತ್ತದೆ.ಹಿಂದೂಧರ್ಮದಲ್ಲಿ ಪ್ರತಿಪಾದಿಸಿದಂತೆ ಪ್ರತಿಯೊಬ್ಬ ಜೀವಿಯೂ ತನ್ನ ಬದುಕಿಗೆ ಸಂಬಂಧಪಟ್ಟಂತೆ ಯಾವುದಾದರೂ ಕರ್ಮ ಮಾಡುತ್ತಲೇ ಇರುತ್ತಾನೆ. ಈ ಕರ್ಮಗಳಿಂದ ಜೀವಿಗೆ ತಾನು ಮಾಡಿದ ಕೆಲಸಕ್ಕೆ ಸರಿಯಾಗಿ ಒಳ್ಳೆಯ ಅಥವಾ ಕೆಟ್ಟ ಪ್ರತಿಫಲ ದೊರೆಯುತ್ತದೆ.ಈ ರೀತಿ ಕೆಲಸಗಳನ್ನು ಮಾಡುತ್ತಾ ಅದಕ್ಕೆ ಪ್ರತಿಫಲಗಳನ್ನು ಪಡೆಯುತ್ತಾ ಜೀವಿಯು 'ಕರ್ಮಬಂಧ'ಕ್ಕೆ ಒಳಗಾಗುತ್ತಾನೆ.ಇದರಿಂದಾಗಿ ಮತ್ತೆ ಮತ್ತೆ ಹುಟ್ಟು ಸಾವುಗಳ ಚಕ್ರಕ್ಕೆ ಸಿಲುಕುತ್ತಾನೆ.ತಾನು ಮಾಡುವ ಕೆಲಸಗಳಿಂದ ಯಾವಾಗ 'ಕರ್ಮಬಂಧ'ಕ್ಕೆ ಸಿಲುಕುವುದಿಲ್ಲವೋ ಆಗ ಜೀವಿಯು ಕರ್ಮಮುಕ್ತನಾಗುತ್ತಾನೆ.ಒಂದೆಡೆ ಕೆಲಸಗಳು ಜೀವಿಯನ್ನು ಕರ್ಮಬಂಧಕ್ಕೆ ಒಳಪಡಿಸಿದರೆ ಅದೇ ಕೆಲಸ ಸರಿಯಾಗಿ ನಿರ್ವಹಿಸಲ್ಪಟ್ಟಾಗ ಜೀವಿಯ ಕರ್ಮವಿಮೋಚನೆಗ ಸಾಧನವಾಗುತ್ತದೆ.ಈ ರೀತಿ ಜೀವಿಯು ಮಾಡುವ ಕೆಲಸಗಳನ್ನು ಕರ್ಮಬಂಧಕ್ಕೆ ಸಿಲುಕದಂತೆ ಮಾಡಿ ಅದೇ ಕೆಲಸಗಳು ಜೀವಿಯ ಆತ್ಮಸಾಕ್ಷಾತ್ಕಾರಕ್ಕೆ,ಮುಕ್ತಿಗೆ ಸಾಧನವನ್ನಾಗಿಸುವುದೇ ಕರ್ಮಯೋಗ.

ಪರಿವಿಡಿ

ಕರ್ಮಯೋಗದ ಮುಖ್ಯ ತತ್ವಗಳು [ಬದಲಾಯಿಸಿ]

ಕರ್ಮಯೋಗಿಯ ಗುಣಯೋಗ್ಯತೆಗಳು [ಬದಲಾಯಿಸಿ]

ಕರ್ಮಯೋಗದ ಸಾಧನೆಗಳು [ಬದಲಾಯಿಸಿ]

ಬಾಹ್ಯ ಸಂಪರ್ಕಗಳು [ಬದಲಾಯಿಸಿ]

ಆಧಾರ ಗ್ರಂಥಗಳು [ಬದಲಾಯಿಸಿ]

೧.ಹಿಂದೂಧರ್ಮದ ಪರಿಚಯ: ಏದುರ್ಕಳ ಶಂಕರನಾರಾಯಣ ಭಟ್

"http://kn.wikipedia.org/w/index.php?title=ಕರ್ಮಯೋಗ&oldid=319322" ಇಂದ ಪಡೆಯಲ್ಪಟ್ಟಿದೆ