ವಿಶಿಷ್ಟಾದ್ವೈತ
ಹಿಂದೂ ಸಿದ್ಧಾಂತ ಸರಣಿಯ ಲೇಖನ |
|
| ಪಂಥಗಳು | |
|---|---|
| ಸಾಂಖ್ಯ · ನ್ಯಾಯ | |
| ವೈಶೇಷಿಕ · ಯೋಗ | |
| ಪೂರ್ವ ಮೀಮಾಂಸಾ · ವೇದಾಂತ | |
| ವೇದಾಂತ ಪಂಥಗಳು | |
| ಅದ್ವೈತ · ವಿಶಿಷ್ಟಾದ್ವೈತ | |
| ದ್ವೈತ | |
| ಪ್ರಮುಖ ವ್ಯಕ್ತಿಗಳು | |
| ಕಪಿಲ · ಗೋತಮ | |
| ಕಣಾದ · ಪತಂಜಲಿ | |
| ಜೈಮಿನಿ · ವ್ಯಾಸ | |
| ಮಧ್ಯಕಾಲೀನ | |
| ಆದಿಶಂಕರ · ರಾಮಾನುಜ | |
| ಮಧ್ವ · ಮಧುಸೂದನ | |
| ವೇದಾಂತ ದೇಶಿಕಾ · ಜಯತೀರ್ಥ | |
| ಆಧುನಿಕ | |
| ರಾಮಕೃಷ್ಣ · ರಮಣ | |
| ವಿವೇಕಾನಂದ · ನಾರಾಯಣ ಗುರು | |
| ಅರವಿಂದ ·ಶಿವಾನಂದ | |
ವಿಶಿಷ್ಟಾದ್ವೈತ ಸಿದ್ಧಾಂತವು ರಾಮಾನುಜಾಚಾರ್ಯರಿಂದ ಪ್ರವರ್ಧಮಾನಕ್ಕೆ ಬಂದಿದೆ.ಇದರ ಹಿಂದೆಯೇ ಇದನ್ನು ನಾಥಮುನಿಮುಂತಾದವರು ಪ್ರತಿಪಾದಿಸಿದ್ದರು.ಇದು ಮುಖ್ಯವಾಗಿ ತಮಿಳುನಾಡಿನ ಆಳ್ವಾರರುಗಳ ಅನುಭವಗಳು,ಪ್ರಸ್ಥಾನತ್ರಯ,ಭಾಗವತಮತ್ತು ಪಂಚರಾತ್ರ ಆಗಮ ಎಂಬ ಗ್ರಂಥಗಳ ಆಧಾರದಿಂದ ಪ್ರತಿಪಾದಿಸಲ್ಪಟ್ಟಿದೆ.ಇದು ಅದ್ವೈತಮತದ ಬ್ರಹ್ಮ-ಜೀವ-ಜಗತ್ತು ಈ ಸಂಬಂಧದ ಸಿದ್ಧಾಂತವನ್ನು ಒಪ್ಪದೆ ಅದರದೇ ಆದ ಹೊಸ ನಿಲುವನ್ನು ನೀಡಿರುವ ಮತವಾಗಿರುತ್ತದೆ.
ವಿಶಿಷ್ಟಾದ್ವೈತ ಎಂದರೆ ವಿಷೇಶಣಗಳಿಂದ ಕೂಡಿರುವ ಆದ್ವೈತ ಎಂದು ಅರ್ಥ.ಎರಡಿಲ್ಲದೆ ಒಂದೇ ಆಗಿರುವುದು ಬ್ರಹ್ಮ.'ಚಿತ್' ಮತ್ತು 'ಅಚಿತ್ ' ಎಂಬ ವಿಷೇಶಣಗಳಿಂದ ಕೂಡಿ ಏಕಮೇವಾದ್ವಿತೀಯವಾಗಿದೆ ಎಂಬುದು ಇದರ ಮೂಲ ತತ್ವವಾಗಿದೆ.
[ಬದಲಾಯಿಸಿ] ವಿಶಿಷ್ಟಾದ್ವೈತದ ಪ್ರಮುಖ ಸಿದ್ಧಾಂತಗಳು
ವಿಶಿಷ್ಟಾದ್ವೈತ ಸಿದ್ಧಾಂತದಲ್ಲಿ ಬ್ರಹ್ಮ,ಚಿತ್,ಅಚಿತ್ಎಂಬ ಮೂರು ತತ್ವಾಂಶಗಳು ಇವೆ.ಬ್ರಹ್ಮ ಎಂದರೆ ಪರವಸ್ತು,ದೇವರು,ಪರಮಾತ್ಮ.ಚಿತ್ ಎಂದರೆ ಆತ್ಮ.ಅಚಿತ್ ಎಂದರೆ ಜಡವಸ್ತು.ಚಿತ್ ಮತ್ತು ಅಚಿತ್ ಬ್ರಹ್ಮನ ಶರೀರಗಳಾಗುತ್ತದೆ.ಈ ಶರೀರದಿಂದ ಕೂಡಿದ ಬ್ರಹ್ಮನು ಒಬ್ಬನೇ ಆಗಿದ್ದಾನೆ.ಚಿತ್ ಮತ್ತು ಅಚಿತ್ ಬ್ರಹ್ಮನಿಂದ ಬೇರೆಯಾದರೂ ಅವನಿಗೆ ಅಧೀನವಾಗಿವೆ.
ಈ ಸಿದ್ಧಾಂತದಲ್ಲಿ ಹೇಳಲಾಗಿರುವ ಬ್ರಹ್ಮನನ್ನು ಈಶ್ವರನೆಂದೂ ಕರೆಯಲಾಗಿದ್ದು,೧)ಬ್ರಹ್ಮ ಮತ್ತು ಈಶ್ವರ ಒಂದೇ ಆಗಿದ್ದು ಈಶ್ವರನೇ ಬ್ರಹ್ಮ. ೨) ಈಶ್ವರನು ಅಂತರ್ಯಾಮಿ. ೩) ಈಶ್ವರನು ಸರ್ವಕರ್ಮಗಳಿಗೂ ಅತೀತನು,ಪರಮಪುರುಷನು,ಪೂರ್ಣನು.ಅವನೇ ಜಗತ್ಪತಿ.
ಜೀವ ಅಥವಾ ಆತ್ಮ ಚಿತ್ ಸ್ವರೂಪವನ್ನು ಹೊಂದಿದ್ದು ಬ್ರಹ್ಮನ ಅಂಶನಾಗಿರುತ್ತಾನೆ.ಜೀವನು ಇಚ್ಛೆ,ಜ್ಙ್ಞಾನ ಮತ್ತು ಕ್ರಿಯೆಗಳಿಂದ ಕೂಡಿರುತ್ತಾನೆ.ಬ್ರಹ್ಮನಿಂದ ಬೇರೆಯೇ ಅಗಿದ್ದು,ಪರತಂತ್ರನು.ಜೀವನು ಸತ್ಯನಾಗಿದ್ದು,ಅಣು ಸ್ವರೂಪನಾಗಿ ಹೃದಯದಲ್ಲಿರುತ್ತಾನೆ.ಜೀವರುಗಳು ಅನಂತ.
ಜಗತ್ತು ಅಚಿತ್ ಅಥವಾ ಜಡವಸ್ತುವಿನಿಂದಾಗಿದೆ.ಜಗತ್ತನ್ನು ಮತ್ತು ಚರಾಚರ ವಸ್ತುಗಳನ್ನು ಸೃಷ್ಟಿಮಾಡಿರುವ ಈಶ್ವರ ಜಗತ್ತಿನ ಆಧಾರನಾಗಿರುತ್ತಾನೆ.ಜೀವನಂತೆ ಜಗತ್ತು ಕೂಡಾ ಸತ್ಯವಾಗಿದ್ದು ಭಗವಂತನಿಂದ ಭಿನ್ನವಾಗಿದ್ದರೂ ಅವನ ಶಕ್ತಿಯಿಂದ ಕೂಡಿರುತ್ತದೆ.
[ಬದಲಾಯಿಸಿ] ಬಾಹ್ಯ ಸಂಪರ್ಕಗಳು
- Biographies of Ramanuja and Vedanta Desika
- Ramanuja and VisishtAdvaita
- more information
- Advaita and VisishtAdvaita
- more information
[ಬದಲಾಯಿಸಿ] ಆಧಾರ ಗ್ರಂಥಗಳು
೧.ಹಿಂದೂಧರ್ಮದ ಪರಿಚಯ: ಏದುರ್ಕಳ ಶಂಕರನಾರಾಯಣ ಭಟ್