ದ್ವೈತ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Icono aviso borrar.png
ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: {{{1}}}

ಹಿಂದೂ ತತ್ತ್ವಶಾಸ್ತ್ರ
ಸರಣಿಯ ಲೇಖನ
aum symbol
ಪಂಥಗಳು
ಸಾಂಖ್ಯ · ನ್ಯಾಯ
ವೈಶೇಷಿಕ · ಯೋಗ
ಪೂರ್ವ ಮೀಮಾಂಸಾ · ವೇದಾಂತ
ವೇದಾಂತ ಪಂಥಗಳು
ಅದ್ವೈತ · ವಿಶಿಷ್ಟಾದ್ವೈತ
ದ್ವೈತ
ಪ್ರಮುಖ ವ್ಯಕ್ತಿಗಳು
ಕಪಿಲ · ಗೋತಮ
ಕಣಾದ · ಪತಂಜಲಿ
ಜೈಮಿನಿ · ವ್ಯಾಸ
ಮಧ್ಯಕಾಲೀನ
ಆದಿಶಂಕರ · ರಾಮಾನುಜ
ಮಧ್ವ · ಮಧುಸೂದನ
ವೇದಾಂತ ದೇಶಿಕ · ಜಯತೀರ್ಥ
ಆಧುನಿಕ
ರಾಮಕೃಷ್ಣ · ರಮಣ
ವಿವೇಕಾನಂದ · ನಾರಾಯಣ ಗುರು
ಅರವಿಂದ ·ಶಿವಾನಂದ

ದ್ವೈತ ಮತವು ಮಧ್ವಾಚಾರ್ಯರಿಂದ ಪ್ರವರ್ತಿತವಾಗಿದೆ.ಇದರ ಸಿದ್ಧಾಂತಗಳು ಮೊದಲೇ ಇದ್ದುವಾದರೂ ಅದನ್ನು ಕ್ರೋಡೀಕರಿಸಿ ಸಿದ್ದಾಂತ ರೂಪದಲ್ಲಿ ಮಂಡಿಸಿದವರು ಮಧ್ವಾಚಾರ್ಯರು.ದ್ವೈತ ಎಂದರೆ ಎರಡು ಎಂದರ್ಥ.ಈ ಮತದಲ್ಲಿ ಜೀವ,ಜಗತ್ತು,ಪರಮಾತ್ಮಇವರ ಒಳಗೆ ಇಹ ಮತ್ತು ಪರಗಳಲ್ಲಿ ಪಾರಮಾರ್ಥಿಕವಾದ ಭೇದವಿದೆ ಎಂಬುದನ್ನು ಪ್ರತಿಪಾದಿಸಲಾಗಿದೆ.

ದ್ವೈತ ದರ್ಶನ[ಬದಲಾಯಿಸಿ]

ದ್ವೈತಮತದ ಸಿದ್ಧಾಂತಗಳು[ಬದಲಾಯಿಸಿ]

ದ್ವೈತಮತದ ಸಿದ್ಧಾಂತಗಳನ್ನು ಸ್ಥೂಲವಾಗಿ ಹೀಗೆ ಹೇಳಬಹುದು. ೧) ಭಗವಂತನು ಸರ್ವಶಕ್ತನೂ,ಸರ್ವೋತ್ತಮನೂ ಆಗಿದ್ದು ಜೀವ-ಜಗತ್ತುಗಳ ನಿಮಿತ್ತಕಾರಕನಾಗಿದ್ದರೂ ಅವುಗಳಿಂದ ಪ್ರತ್ಯೇಕನಾಗಿರುತ್ತಾನೆ. ೨) ಜೀವರುಗಳು(ಆತ್ಮ) ಅಸಂಖ್ಯಾತ ಮತ್ತು ಅನಾದಿಯಾಗಿದ್ದು ಭಗವಂತನಿಂದ ಬೇರೆಯೇ ಆಗಿರುತ್ತಾರೆ. ಜೀವರುಗಳು ಯಾವಕಾಲಕ್ಕೂ ಭಗವಂತನೊಡನೆ (ಪರಮಾತ್ಮ)ನೊಡನೆ ಒಂದಾಗುವುದಿಲ್ಲ.ಭಗವಂತನು ಜೀವಿಗಳ ಅಂತರ್ಯಾಮಿಯಾಗಿರುತ್ತಾನೆ.ಜೀವಿಗಳ ಒಳಗೆ ಪರಸ್ಪರ ಭೇದವಿದೆ. ೩) ದ್ವೈತಮತದ ಪ್ರಕಾರ ಮೋಕ್ಷ ಎಂದರೆ ಜೀವನಿಗೆ ತನ್ನ ಅನಾದಿ ಅಜ್ಞಾನವು ಹೋಗಿ ಸ್ವಭಾವ ಜ್ಞಾನವಾಗುವುದೇ ಆಗಿದ್ದು ಸಂಸಾರದ ಬಂಧನದಿಂದ ಬಿಡುಗಡೆಯಾಗಿದೆ.ಜೀವರುಗಳೆಲ್ಲಾ ಮುಕ್ತಿಗೆ ಅರ್ಹರಾಗಿರದೆ ಅವರವರ ಯೋಗ್ಯತೆಗೆ ಅನುಗುಣವಾಗಿ ಮುಕ್ತಿ ಪ್ರಾಪ್ತವಾಗುತ್ತದೆ. ಮುಕ್ತಿಯ ನಂತರ ಜೀವನು ಭಗವಂತನಲ್ಲಿ ಲೀನವಾಗದೆ ಬೇರೆಯೇ ಆಗಿ ಉಳಿದು ಮುಕ್ತಿಯ ಸುಖ-ಆನಂದಗಳನ್ನು ತನ್ನ ಗುಣ ಯೋಗ್ಯತೆ ಅನುಗುಣವಾಗಿ ಅನುಭವಿಸುತ್ತಾನೆ. ೪) ದ್ವೈತ ಮತ ಅನುಸಾರ ಕರ್ಮ,ಜ್ಞಾನ,ಭಕ್ತಿಗಳು ಬೇರೆ ಬೇರೆಯಾಗಿರದೆ ಮೋಕ್ಷ ಸಾಧನೆಯ ಮೂರು ಹಂತಗಳಾಗಿವೆ.ಕರ್ಮ,ಜ್ಞಾನಗಳಿಂದ ಭಕ್ತಿ ಮೂಡಿ ಭಕ್ತಿಯಿಂದ ಮೋಕ್ಷ ಪ್ರಾಪ್ತಿಯಾಗುವುದು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

http://www.dlshq.org/download/hinduismbk.htm#_VPID_97

ಹೆಚ್ಚಿಗೆ ಓದಲು[ಬದಲಾಯಿಸಿ]


ಆಧಾರ ಗ್ರಂಥಗಳು[ಬದಲಾಯಿಸಿ]

೧.ಹಿಂದೂಧರ್ಮದ ಪರಿಚಯ: ಎದುರ್ಕಳ ಶಂಕರನಾರಾಯಣ ಭಟ್

"http://kn.wikipedia.org/w/index.php?title=ದ್ವೈತ&oldid=482269" ಇಂದ ಪಡೆಯಲ್ಪಟ್ಟಿದೆ