ಜೈನ ಧರ್ಮ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಜೈನ ಧರ್ಮದ ಪ್ರಥಮ ತೀರ್ಥಂಕರ ಋಷಭದೇವ ಹಾಗೂ ಕೊನೆಯ ತೀರ್ಥಂಕರ ವರ್ಧಮಾನ ಮಹಾವೀರಸ್ವಾಮಿಯ ಶಿಲ್ಪ.

ಜೈನ ಧರ್ಮ ಭಾರತದಲ್ಲಿ ಉಗಮಿಸಿದ ಒಂದು ಧರ್ಮ. ಈ ಧರ್ಮದ ತತ್ತ್ವಶಾಸ್ತ್ರದ ಪ್ರಕಾರ ಇದು ವಿಶ್ವದ ಅನಂತ ಸತ್ಯಗಳ ಮೇಲೆ ಆಧಾರಿತ ಧರ್ಮ. ಪಾರಂಪರಿಕ ನಂಬಿಕೆಯ ಅನುಸಾರ, ಋಷಭದೇವ ಈ ಸತ್ಯಗಳನ್ನು ಮೊದಲು ಅರಿದವ. ಈ ಅರಿವನ್ನು ಪಡೆದವರು ತೀರ್ಥಂಕರರೆಂದು ಕರೆಯಲ್ಪಡುತ್ತಾರೆ. ಋಷಭದೇವನ ನಂತರ ಬಂದ ೨೩ ತೀರ್ಥಂಕರರಲ್ಲಿ ಕೊನೆಯವ ವರ್ಧಮಾನ ಮಹಾವೀರ.

ಪರಿವಿಡಿ

ಶಬ್ಧ ಉತ್ಪತ್ತಿ [ಬದಲಾಯಿಸಿ]

ಜೈನ ಎಂದರೆ 'ಜಿನ'ಎಂಬ ಶಬ್ಧದಿಂದ ಉತ್ಪತ್ತಿಯಾದ ಶಬ್ದವಾಗಿದ್ದು ಜಿನ ಎಂದರೆ' ಗೆದ್ದವನು' ಎಂದು ಹೇಳಬಹುದು.ಕರ್ಮದ ಕಟ್ಟನ್ನು ಮುರಿದು ಸಂಸಾರವನ್ನು ದಾಟಿ ಮುಕ್ತಿಯನ್ನು ಪಡೆದವ ಜೀವರಿಗೆ 'ಜಿನರು' ಎಂದು ಹೆಸರು.ಜಿನರಿಂದ ಉಪದೇಶಿಸಲ್ಪಟ್ಟ ಧರ್ಮವೇ ಜೈನಧರ್ಮ.

ಜೈನ ತತ್ವಗಳು [ಬದಲಾಯಿಸಿ]

ಜೈನ ಧರ್ಮದಲ್ಲಿ ಸತ್ಯ,ನೀತಿ,ಉತ್ತಮ ನಡವಳಿಕೆಗಳಿಗೆ ಹೆಚ್ಚಿನ ಪ್ರಧಾನ್ಯತೆ ಇದೆ.ಅಹಿಂಸೆ ಮತ್ತು ದಯೆ ಇವುಗಳು ಮೂಲಸೂತ್ರಗಳು.ಜೈನ ದರ್ಶನದ ಪ್ರಕಾರ ಜಗತ್ತು ಮತ್ತು ಜೀವ (ಆತ್ಮ) ಅನಾದಿಯಾದುದು.ಜೀವರುಗಳ ಹುಟ್ಟು,ಸಾವು,ಸುಖ,ದು:ಖಗಳಿಗೆ ಕರ್ಮವೇ ಕಾರಣವಾಗಿದ್ದು ಕರ್ಮವೂ ಅನಾದಿಯಾಗಿರುತ್ತದೆ. ಆದರೆ ಸಮ್ಯಕ್ ದರ್ಶನ,ಸಮ್ಯಕ್ ಜ್ಞಾನ,ಸಮ್ಯಕ್ ಚಾರಿತ್ರ್ಯ ಎಂಬ 'ರತ್ನತ್ರಯ'ಗಳ ಸಾಧನೆಯ ಸಹಾಯದಿಂದ ಕರ್ಮದ ಕಟ್ಟು(ಸಂಸಾರ ಬಂಧ)ಗಳಿಂದ ಮುಕ್ತರಾಗಬಹುದು.ಇದರೊಂದಿಗೆ ಜೈನರು ಪಾಲಿಸಬೇಕಾದ ಪಂಚವ್ರತಗಳನ್ನು ಹೇಳಲಾಗಿದೆ.ಅವುಗಳು ಅಹಿಂಸೆ,ಸತ್ಯ,ಆಸ್ತೇಯ,ಬ್ರಹ್ಮಚರ್ಯಮತ್ತು ಅಪರಿಗ್ರಹ.ಜೈನ ಧರ್ಮ ದೇವರನ್ನು ಜಗತ್ತಿನ ಕರ್ತೃ ಎಂದು ಒಪ್ಪುವುದಿಲ್ಲವಾದರೂ ಕರ್ಮಬಂಧಗಳಿಂದ ಮುಕ್ತರಾದ ಪಂಚಪರಮೇಷ್ಠಿಗಳ ಪೂಜೆ,ಆರಾಧನೆ ನಡೆಯುತ್ತದೆ.

ರತ್ನತ್ರಯಗಳು [ಬದಲಾಯಿಸಿ]

ಜೈನ ದರ್ಶನ [ಬದಲಾಯಿಸಿ]

ಜೈನಧರ್ಮದಲ್ಲಿ ಕರ್ಮ ವಿಚಾರ [ಬದಲಾಯಿಸಿ]

ಬಾಹ್ಯ ಸಂಪರ್ಕಗಳು [ಬದಲಾಯಿಸಿ]

ಆಧಾರ ಗ್ರಂಥಗಳು [ಬದಲಾಯಿಸಿ]

೧.ಹಿಂದೂಧರ್ಮದ ಪರಿಚಯ: ಏದುರ್ಕಳ ಶಂಕರನಾರಾಯಣ ಭಟ್

"http://kn.wikipedia.org/w/index.php?title=ಜೈನ_ಧರ್ಮ&oldid=317442" ಇಂದ ಪಡೆಯಲ್ಪಟ್ಟಿದೆ