ರಾಜಯೋಗ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ರಾಜಯೋಗ ಹಿಂದೂಧರ್ಮದಲ್ಲಿ ಪ್ರತಿಪಾದಿಸಲ್ಪಟ್ಟ ನಾಲ್ಕು ಯೋಗಗಳಲ್ಲಿ ಒಂದು.ಸರಳವಾಗಿ ಹೇಳುವುದಾದರೆ ಮನಸ್ಸಿನ ಏಕಾಗ್ರತೆಯ ಮೂಲಕ ಜೀವಾತ್ಮನನ್ನು ಪರಮಾತ್ಮನಲ್ಲಿ ಒಂದುಗೂಡಿಸುವ ಯೋಗವೇ ರಾಜಯೋಗ.ರಾಜಯೋಗಕ್ಕೆ ಮುಖ್ಯವಾದ ಆಧಾರ ಗ್ರಂಥವು ಪಾತಂಜಲಯೋಗ ಸೂತ್ರವಾಗಿದೆ. ಆದುದರಿಂದ ಇದಕ್ಕೆ ಪಾತಂಜಲಯೋಗ ಎಂದೂ ಹೆಸರಿದೆ.ಯೋಗ ಎಂದರೆ ಚಿತ್ತವೃತ್ತಿಗಳನ್ನು ದೂರ ಮಾಡುವುದು.ಮನಸ್ಸಿನ ಬಾಹ್ಯವಾದ ವಿವಿಧ ವೃತ್ತಿಗಳನ್ನು ನಿರೋಧಮಾಡಿದಾಗ ಮನಸ್ಸು ಅಂತರ್ಮುಖಿಯಾಗಿ ಶುದ್ಢವಾಗುತ್ತದೆ.ಶುದ್ಧ ಮನಸ್ಸಿನಲ್ಲಿ ಏಕಾಗ್ರತೆಯ ಶಕ್ತಿ ಪೂರ್ಣವಾಗಿದ್ದು,ಇದರಿಂದ ಆತ್ಮ ಸಾಕ್ಷಾತ್ಕಾರ ಸಾದ್ಯವಾಗುತ್ತದೆ ಎಂದು ರಾಜಯೋಗದ ನಿಲುವು.

[ಬದಲಾಯಿಸಿ] ರಾಜಯೋಗ ಸಾಧನಾ ಸೋಪಾನಗಳು

ರಾಜಯೋಗದ ಸಾಧನೆಗೆ ಎಂಟು ವಿಧದ ಮೆಟ್ಟಿಲುಗಳನ್ನು ಹೇಳಿದ್ದಾರೆ.ಇದನ್ನು ಅಷ್ಟಾಂಗ ಸೋಪಾನಗಳು ಎಂದು ಹೇಳುತ್ತಾರೆ.೧) ಯಮ ೨) ನಿಯಮ ೩) ಆಸನ ೪) ಪ್ರಾಣಾಯಾಮ ೫) ಪ್ರತ್ಯಾಹಾರ ೬) ಧಾರಣಾ ೭) ಧ್ಯಾನ ೮) ಸಮಾಧಿ

[ಬದಲಾಯಿಸಿ] ಬಾಹ್ಯ ಸಂಪರ್ಕಗಳು

೧.http://www.dlshq.org/download/hinduismbk.htm#_VPID_68

[ಬದಲಾಯಿಸಿ] ಆಧಾರ ಗ್ರಂಥಗಳು

೧.ಹಿಂದೂಧರ್ಮದ ಪರಿಚಯ: ಏದುರ್ಕಳ ಶಂಕರನಾರಾಯಣ ಭಟ್

"http://kn.wikipedia.org/w/index.php?title=ರಾಜಯೋಗ&oldid=110138" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ