ಅರ್ಜುನ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಈ ಲೇಖನ ಮಹಾಭಾರತದ ಅರ್ಜುನನ ಬಗ್ಗೆ. ಇದೇ ಹೆಸರಿನ ಕನ್ನಡ ಚಲನಚಿತ್ರಕ್ಕೆ ಈ ಪುಟವನ್ನು ನೋಡಿ
ಶ್ರೀಕೃಷ್ಣನ ವಿಶ್ವರೂಪ ದರ್ಶನವನ್ನು ಪಡೆಯುತ್ತಿರುವ ಅರ್ಜುನ

ಅರ್ಜುನನು ಹಿಂದು ಪುರಾಣಗಳಲ್ಲಿ ಒಂದಾದ ಮಹಾಭಾರತದ ನಾಯಕರಲ್ಲಿ ಒಬ್ಬನು. ಅರ್ಜುನ ಎಂದರೆ 'ಕಾಂತಿಯುತ', 'ಪ್ರಕಾಶಿಸುವ', 'ಬೆಳ್ಳಿ' ಎಂದರ್ಥ. ಅಂದರೆ ಬೆಳಕಿನಷ್ಟು ಪರಿಶುದ್ಧ ಎಂದರ್ಥ. ೫ ಜನ ಪಾಂಡವ ಸಹೋದರರಲ್ಲಿ ಮೂರನೆಯವನೇ ಅರ್ಜುನ. ಅರ್ಜುನನು ಪಾಂಡು ರಾಜನ ಮೊದಲನೆಯ ಪತ್ನಿಯಾದ ಕುಂತಿಯ ಕೊನೆಯ ಮಗ.

ಅರ್ಜುನನು ಓರ್ವ ನುರಿತ ಬಿಲ್ಲುಗಾರನಾಗಿದ್ದನು ಹಾಗೂ ಈತನು ಪಾಂಡವರು ಹಾಗೂ ಅವರ ವಿರೋಧಿಗಳಾದ ದೃತರಾಷ್ಟ್ರನ ಮಕ್ಕಳಾದ ಕೌರವರ ಹೋರಾಟದಲ್ಲಿ ಪ್ರಧಾನ ಪಾತ್ರವನ್ನು ವಹಿಸಿದನು. ಯುದ್ಧದಲ್ಲಿ ಶತ್ರು ಪಾಳಯದಲ್ಲಿರುವ ತನ್ನ ಸಂಬಂಧಿಗಳ ಕೊಲೆಯನ್ನು ತನ್ನ ಕೈಯ್ಯಾರೆ ಮಾಡಬೇಕಾಗುತ್ತದೆ ಎಂದು ಅರ್ಜುನನು ಮೊದಲಿಗೆ ಯುದ್ಧದಲ್ಲಿ ಭಾಗವಹಿಸಲು ನಿರಾಸಕ್ತನಾಗಿದ್ದನು. ಅರ್ಜುನನ ಈ ನಿವುಲನ್ನು ಬದಲಯಿಸುವಂತೆ ಆತನ ಸಾರಥಿಯೂ, ಆಪ್ತ ಮಿತ್ರನೂ ಆಗಿದ್ದ ಶ್ರೀಕೃಷ್ಣ ಪರಮಾತ್ಮನು ಮನವೊಲಿಸಿದನು. ಯುದ್ಧದಲ್ಲಿ ಅಡಕವಾಗಿರುವ ವಿಷಯಗಳು, ಧೈರ್ಯ, ಯೋಧನೋರ್ವನ ಕರ್ತವ್ಯ, ಮಾನವ ಜೀವನದ ಹಾಗೂ ಆತ್ಮದ ಸ್ವಭಾವ ಹಾಗೂ ದೇವರುಗಳ ಪಾತ್ರ ಇವೇ ಮುಂತಾದವುಗಳಿಂದ ಕೂಡಿದ್ದ ಇವರ ನಡುವಿನ ಸಂಭಾಷಣೆಯು ಮಹಾಭಾರತದ ಅತೀ ಪ್ರಾಮುಖ್ಯ ಪ್ರಸಂಗಗಳಲ್ಲಿ ಒಂದಾದ ಭಗವದ್ಗೀತೆಯವಸ್ತುವಾಗಿದೆ. ಕೌರವರ ಕಡೆಯಲ್ಲಿ ಈತನ ಪರಮ ಪ್ರತಿಸ್ಫರ್ಧಿಯಾದ ಕರ್ಣನನ್ನು ಕೊಲ್ಲುವುದರಲ್ಲಿ ಅರ್ಜುನನು ಪ್ರಮುಖ ಪಾತ್ರವನ್ನು ವಹಿಸಿದ್ದನು.

ಪರ್ಷಿಯಾದ ಪುರಾಣ ಕಥೆಗಳಲ್ಲಿ ಬರುವ "ಆರ್ಶ್, ದಿ ಆರ್ಚರ್" ದಂತಕಥೆಯು ಅರ್ಜುನನ ಕಥೆಯೊಂದಿಗೆ ಗಮನ ಸೆಳೆಯುವ ಸಾದೃಶ್ಯವನ್ನು ಹೊಂದಿದೆಯೆಂದು ಆಗಾಗ್ಗೆ ಪ್ರತಿಪಾದಿಸುತ್ತಾರೆ. ಇದು ಭಾರತ ಹಾಗೂ ಪರ್ಷಿಯಾ ದೇಶಗಳು ಸಮಾನ ಪರಂಪರೆಯನ್ನು ಹಂಚಿಕೊಂಡಿದ್ದುದರ ನೆನವರಿಕೆಯೆಂದು ಕೆಲವರು ಹೇಳುತ್ತಾರೆ.

ಪರಿವಿಡಿ

ಜನನ [ಬದಲಾಯಿಸಿ]

ರತಿಯಲ್ಲಿ ಎಂದಾದರೂ ತೃಪ್ತಿ ಪಡೆದರೆ ಸಾವು ಬರುವುದೆಂಬ ಶಾಪಕ್ಕೆ ಪಾಂಡು ರಾಜನು ಗುರಿಯಾಗಿದ್ದನು. ಇದರಿಂದಾಗಿ ಆತನಿಗೆ ಮಗುವಿನ ತಂದೆಯಾಗಲು ಸಾಧ್ಯವಾಗಲಿಲ್ಲ. ಈತನ ಮೊದಲ ಹೆಂಡತಿಯಾದ ಕುಂತಿಯು ಅವಿವಾಹಿತೆಯಾಗಿದ್ದಾಗ, ದೂರ್ವಾಸ ಮುನಿಗಳು ಅವಳಿಗೆ ಇಷ್ಟವಾದ ದೇವತೆಯನ್ನು ಪ್ರಾರ್ಥಿಸಿದರೆ ಆ ದೇವತೆಯಿಂದ ಮಗುವು ಪ್ರಾಪ್ತಿಯಾಗುವಂತೆ ವರ ನೀಡಿದ್ದರು. ಪಾಂಡು ಹಾಗೂ ಕುಂತಿ ಈ ವರದ ಸದುಪಯೋವನ್ನು ಪಡೆಯಲು ನಿಶ್ಛಯಿಸಿದರು. ಕುಂತಿ ಯಮ ಧರ್ಮರಾಯ, ವಾಯು, ಇಂದ್ರ ದೇವತೆಗಳನ್ನು ಪ್ರಾರ್ಥಿಸಿದಳು ಹಾಗೂ ಮೂರು ಮಕ್ಕಳನ್ನು ಪಡೆದಳು. ಇವರಲ್ಲಿ ಮೂರನೆಯ ಮಗನು ಇಂದ್ರನ ವರಪ್ರಸಾದವಾಗಿ ಅರ್ಜುನನು ಜನಿಸಿದನು.

ವ್ಯಕ್ತಿತ್ವ [ಬದಲಾಯಿಸಿ]

ಹಿತಕರವಾದ ಹಾಗೂ ಎಲ್ಲ್ಲ ರೀತಿಯಲ್ಲೂ ಸಂಪೂರ್ಣವಾದ ವ್ಯಕ್ತಿತ್ವವುಳ್ಳ, ಅರೋಗ್ಯಕರ ದೇಹದಲ್ಲಿ ಉತ್ತಮ ಸ್ವಾಸ್ಥ್ಯವುಳ್ಳ ಮನಸ್ಸನ್ನು ಹೊಂದಿದ, ಯಾವುದೇ ತಾಯಿ, ಮಡದಿ, ಸ್ನೇಹಿತನು ತನ್ನ ಜೀವನದಲ್ಲಿ ಇಂಥಾ ವ್ಯಕ್ತಿಯನ್ನು ಹೊಂದಲು ಹೆಮ್ಮೆ ಪಡುತ್ತಾರೋ ಅಂತಹ ವ್ಯಕ್ತಿತ್ವ ಅರ್ಜುನನದ್ದು ಎಂದು ಮಹಾಭಾರತದಲ್ಲಿ ಚಿತ್ರಿಸಲಾಗಿದೆ. ಬಲಶಾಲಿಯಾದ, ಅತ್ಯಂತ ಸುಂದರನಾದ; ಹೆಂಗಳೆಯರ ಮನಸೂರೆ ಮಾಡುವಂತಹ ಇಂದ್ರ ಪುತ್ರ ಅರ್ಜುನನು ನಾಲ್ಕು ಬಾರಿ ವಿವಾಹವಾಗಿದ್ದನು ಎಂದು ವಿವರಿಸಿದ್ದಾರೆ. ಅರ್ಜುನನು ಓರ್ವ ಸತ್ಯಸಂಧ ಹಾಗೂ ಅತ್ಯಂತ ನಿಷ್ಠಾವಂತ ಸ್ನೇಹಿತನಾಗಿದ್ದನು (ಧೀರ ಯೋಧ ಸಾತ್ಯಕಿ ಈತನ ಆಪ್ತ ಮಿತ್ರನಾಗಿದ್ದನು). ಈತನ ಭಾವನಾಗಿದ್ದ ಶ್ರೀಕೃಷ್ಣನ ಜೊತೆ ಆಜೀವನ ಸಹೃದಯ ಸಂಬಂಧವನ್ನು ಹೊಂದಿದ್ದನು. ಕುರುಕ್ಷೇತ್ರ ಯುದ್ಧದ ಬಗ್ಗೆ ಈತನಿಗಿದ್ದ ಸಂದೇಹದಿಂದ ಈತನು ಸೂಕ್ಷ್ಮನೂ ಹಾಗೂ ಪರಹಿತ ಚಿಂತನೆಯುಳ್ಳವನು ಎಂದು ತಿಳಿಯುತ್ತದೆ. ಇದೇ ಸಂದರ್ಭದಲ್ಲಿ ಶ್ರೀಕೃಷ್ಣನು ಈತನಿಗೆ ಭಗವದ್ಗೀತೆಯ ಭೋಧನೆಯನ್ನು ಮಾಡಿದನು. ಅತೀ ಕಾರ್ಯನಿಷ್ಠನಾಗಿದ್ದ ಅರ್ಜುನನು ಒಮ್ಮೆ ಬ್ರಾಹ್ಮಣನೋರ್ವನಿಗೆ ಸಹಾಯ ಮಾಡದೇ ಇರುವುದರ ಬದಲಾಗಿ ವನವಾಸ ಹೋಗಲು ನಿರ್ಧರಿಸಿದನು.

ಶ್ರಮಶೀಲ ವಿದ್ಯಾರ್ಥಿ [ಬದಲಾಯಿಸಿ]

ಅರ್ಜುನನು ಓರ್ವ ಮಹಾಯೋಧನೆಂದೇ ಕರೆಯಲ್ಪಡುತ್ತಾನೆ. ಈ ಯೋಧನ ಜೀವನದ ಬುನಾದಿ ಬಹಳ ಸಣ್ಣ ವಯಸ್ಸಿನಲ್ಲೇ ಹಾಕಲಾಯಿತು. ಅತ್ಯುನ್ನತ ಹಾಗೂ ಶ್ರದ್ಧಾಶೀಲ ವಿದ್ಯಾರ್ಥಿಯಾಗಿದ್ದ ಅರ್ಜುನನು, ಗುರುಗಳಾದ ದ್ರೋಣಾಚಾರ್ಯರು ಕಲಿಸಿಕೊಟ್ಟ ಸಕಲ ವಿದ್ಯೆಗಳಲ್ಲಿ ಪರಿಣತಿ ಹೊಂದಿ, ಅತಿ ಬೇಗನೇ "ಅತಿರಥ" (ಅತ್ಯುನ್ನತ ಯೋಧ)ಎಂಬ ಬಿರುದನ್ನು ಗಳಿಸಿದನು.ಈತನ ವಿದ್ಯಾರ್ಜನೆಯಲ್ಲಿನ ಏಕಾಗ್ರತೆಯು ಪ್ರತಿಯೋರ್ವ ಶಾಲಾಬಾಲಕನಿಗೂ ತಿಳಿದಿದೆ. ಒಮ್ಮೆ ದ್ರೋಣಾಚಾರ್ಯರು ತಮ್ಮ ವಿದ್ಯಾರ್ಥಿಗಳಿಗೆ ಪರೀಕ್ಷೆಯೊಂದನ್ನು ಒಡ್ಡಿದರು. ಮರದ ಕೊಂಬೆಯಲ್ಲಿ ಒಂದು ಮರದ ಹಕ್ಕಿಯನ್ನು ಇಳಿಯಬಿಟ್ಟು, ವಿದ್ಯಾರ್ಥಿಗಳನ್ನು ಅಲ್ಲಿಗೆ ಕರೆದರು. ಮರದ ಹಕ್ಕಿಯ ಕಣ್ಣಿಗೆ ಗುರಿಹೂಡಿದ ನಂತರ ವಿದ್ಯಾರ್ಥಿಗಳನ್ನು ಒಬ್ಬೊಬ್ಬರಾಗಿ, ನಿನಗೆ ಏನೇನು ಕಾಣಿಸುತ್ತಿದೆ ಎಂದು ಕೇಳಿದರು. ಆಗ ಒಬ್ಬೊಬ್ಬರು ತನಗೆ ಉದ್ಯಾನವನ, ಹೂವುಗಳು, ಮರದ ಕೊಂಬೆ ಹಾಗೂ ಇಳಿಯಬಿಟ್ಟಿದ್ದ ಮರದ ಹಕ್ಕಿಯು ಕಾಣಿಸುತ್ತಿದೆ ಎಂದರು. ಆ ವಿದ್ಯಾರ್ಥಿಗಳನ್ನು ಪಕ್ಕಕ್ಕೆ ನಿಲ್ಲಿಸುತ್ತಿದ್ದರು. ಅರ್ಜುನನಿಗೆ ಈ ಪ್ರಶ್ನೆಯನ್ನು ಕೇಳಿದಾಗ ಆತನು ನನಗೆ ಹಕ್ಕಿಯ ಕಣ್ಣು ಮಾತ್ರ ಕಾಣಿಸುತ್ತಿದೆ ಎಂದನು. ಈ ಘಟನೆಯು ಅರ್ಜುನನ ಏಕಾಗ್ರತೆಯ ಒಂದು ನಿದರ್ಶನವಾಗಿದೆ.

ದ್ರೌಪದಿ [ಬದಲಾಯಿಸಿ]

ಕಾರ್ಯಬದ್ಧ [ಬದಲಾಯಿಸಿ]

ವೈವಾಹಿಕ ಕರಾರುಗಳು [ಬದಲಾಯಿಸಿ]

ಗಾಂಡೀವ [ಬದಲಾಯಿಸಿ]

ಮಯಸಭೆ [ಬದಲಾಯಿಸಿ]

ವನವಾಸದಲ್ಲಿ [ಬದಲಾಯಿಸಿ]

ಅರ್ಜುನನು ತನ್ನ ಅಣ್ಣನ ಅಜ್ಞಾಪರಿಪಾಲಕನು.ವನವಾಸದ ಕಾಲದಲ್ಲಿ ಯುಧಿಷ್ಠಿರನು ಅರ್ಜುನನ್ನು ಮುಂದಿನ ಯುದ್ಧದ ಸಿದ್ಧತೆಗಾಗಿ ಶಸ್ತ್ರಾಸ್ತ್ರಗಳನ್ನು ಸಂಪಾದಿಸಲು ಇಂದ್ರ ನ ಕುರಿತು ತಪಸ್ಸನ್ನು ಮಾಡಲು ನಿರ್ದೇಶಿಸಿದನು.ಅದರಂತೆ ಅತ್ಯಂತ ಪರಾಕ್ರಮಿಯಾದ ಅರ್ಜುನನು ಉತ್ತರದಿಕ್ಕಿನಕಡೆಗೆ ಪ್ರಯಾಣಮಾಡಿ ಅನೇಕ ಪರ್ವತ,ನದಿ,ಕಾನನಗಳನ್ನು ದಾಟಿ ಹಗಲುರಾತ್ರಿಗಳ ವಿವೇಚನೆಇಲ್ಲದೆ ಆಯಾಸದ ಪರಿವಿಲ್ಲದೆ ನೆಡೆದು ಇಂದ್ರಕೀಲಪರ್ವತವನ್ನು ಸೇರಿದನು.ಆ ಪ್ರದೇಶವು ಸಾಮಾನ್ಯ ಮಾನವನಿಗೆ ತಲುಪಲಸಾಧ್ಯವಾಗಿದ್ದಿತು.ಅದು ಮಹಾತಪಸ್ವಿಗಳ ಸ್ಥಾನವಾಗಿದ್ದಿತು.ಅಲ್ಲಿ ಅವನು ಇಂದ್ರನ ದರ್ಶನ ಪಡೆದು ಅವನ ಅದೇಶದಂತೆ ಶಿವನನ್ನು ಕುರಿತು ತಪಸ್ಸನ್ನಾಚರಿಸಲುಪಕ್ರಮಿಸಿದನು.ಅವನು ಹಿಮವತ್ಪರ್ವತದ ತಪ್ಪಲಿಗೆ ಬಂದು ಘೋರತಪಸ್ಸನ್ನಾಚರಿಸಿದನು.ಅವನ ತಪಸ್ಸಿಗೆ ಮೆಚ್ಚಿದ ಶಿವನು ಬೇಡನ ವೇಷದಲ್ಲಿ ಬಂದು ಅರ್ಜುನನೊಡನೆ ಯುದ್ಧಕ್ಕೆ ನಿಂತನು .ಇವರೀರ್ವರ ನಡುವಿನ ಯುದ್ಧವು ಅತ್ಯಂತ ಘೋರವಾಗಿದ್ದಿತೆಂದು ಪುರಾಣಕಥೆಗಳಿಂದ ತಿಳಿದುಬರುತ್ತದೆ ಹಾಗು ಆ ಯುದ್ಧವು ಕಿರಾತಾರ್ಜನೇಯ ಯುದ್ಧವೆಂದು ಪ್ರಸಿದ್ಧಿಯಾಗಿದೆ.ಪರಶಿವನೆಂದು ತಿಳಿಯದೆ ಅವನೊಡನೆ ಯುದ್ಧಮಾಡಿ ಸೋತ ಅರ್ಜುನನ ಸಾಹಸಕ್ಕೆ ಮೆಚ್ಚಿದ ಶಿವನು ಅವನಿಗೊಲಿದು ಅವನು ಬೇಡಿದ ಪಾಶುಪತಾಸ್ತ್ರ ವನ್ನು ಕರುಣಿಸಿದನು.ಇದಾದನಂತರ ಅರ್ಜುನನಿಗೆ ಅಷ್ಟದಿಕ್ಪಾಲಕರು ತಾವೇ ಸ್ವತಃ ಬಂದು ಅನೇಕ ದಿವ್ಯಾಸ್ತಗಳನ್ನು ಕರುಣಿಸಿದರು.ಸ್ವರ್ಗ ದ ಅಧಿಪತಿಯಾದ ಇಂದ್ರನು ಸ್ವರ್ಗಲೋಕಕ್ಕೆ ಕರೆದುಕೊಂಡು ಹೋಗಿ ಅನೇಕ ವಿದ್ಯೆಗಳನ್ನು(ಯುದ್ಧದ ಹಾಗು ಸಂಗೀತನಾಟ್ಯಗಳ) ತಿಳೆಸಿ ಮಹಾಶಕ್ತಿಯುಳ್ಳ ದಿವ್ಯಾಸ್ತಗಳನ್ನು ಕೊಟ್ಟನು.ಅಪ್ಸರೆಯರಲ್ಲಿ ಒಬ್ಬಳಾದ ಊರ್ವಶಿಯು ತನ್ನ ಕಾಮೇಚ್ಚೆಯನ್ನು ಅರ್ಜುನನೊಂದಿಗೆ ವ್ಯಕ್ತಪಡಿಸಿ ದಳು.ಇಂದ್ರಿಯಜಿತನಾದ ಅರ್ಜುನನು ನಿರಾಕರಿಸಿದ್ದಕ್ಕಾಗಿ ಕೋಪಗೊಂಡು ಅರ್ಜುನನನ್ನು ನಪುಂಸಕನೆಂದು ಖ್ಯಾತಿಹೊಂದುವಂತೆ ಶಪಿಸಿದಳು.ಆದರೆ ಮುಂದೆ ಇದರಿಂದ ಅರ್ಜುನನಿಗೆ ಉಪಕಾರವೇ ಆಯಿತು.ಹೀಗೆ ವನವಾಸಕಾಲದಲ್ಲಿ ಅರ್ಜುನನು ಮುಂಬರುವ ಯುದ್ಧಕ್ಕಾಗಿ ಸಕಲ ಅಸ್ತ್ರಾಸ್ರಗಳ ಸಿದ್ಧತೆ ಹೊಂದಿ ಭೂಲೋಕಕ್ಕೆ ಬಂದು ತನ್ನ ಸೋದರರನ್ನು ಸೇರಿದನು.ಇಲ್ಲಿ ಅವನ ಅನೇಕ ಗುಣಗಳು ವ್ಯಕ್ತವಾಗಿದೆ.ಅಂಥ ಕಠಿಣ ವನವಾಸಕಾಲದಲ್ಲೂ ಸಂಯಮ,ಗುರುಹಿರಿಯರ ಅಜ್ಞಾಪರಿಪಾಲನೆ,ಗುರಿಸಾಧಿಸುವ ಛಲ,ಕಷ್ಟಸಹಿಷ್ಣುತೆ,ಪರಾಕ್ರಮ,ಭಕ್ತಿ,ನಮ್ರತೆ,ಜಿತೇಂದ್ರಿಯತ್ವ ಹೀಗೆ ಅರ್ಜುನನು ಸದ್ಜುಣ ಹಾಗು ಸದಾಚಾರದ ಮೂರ್ತಿಯೇ ಅಗಿದ್ದನೆಂದು ಇದರಿಂದ ತಿಳಿಯಬಹುದಾಗಿದೆ.

ಅರ್ಜುನ ಮತ್ತು ಆಂಜನೇಯ [ಬದಲಾಯಿಸಿ]

ಯುದ್ಧದ ಪ್ರಾರಂಭ [ಬದಲಾಯಿಸಿ]

ಭಗವದ್ಗೀತೆ [ಬದಲಾಯಿಸಿ]

ಕುರುಕ್ಷೇತ್ರ ಯುದ್ಧ [ಬದಲಾಯಿಸಿ]

ಕರ್ಣನ ಸ್ಫ಼ಂಕಾರ್ [ಬದಲಾಯಿಸಿ]

ಜಯದ್ರಥನ ಸಂಹಾರ [ಬದಲಾಯಿಸಿ]

ಶ್ರೀ ಕೃ‍‍‍‍ ಸಂಧಾನ ಅಧವಾ ದಮ ರಾಜ್ಯ ಸಂಪ್ದಾನೆ

ಯುದ್ಧದ ನಂತರ [ಬದಲಾಯಿಸಿ]

ಅರ್ಜುನನ ಇತರ ನಾಮಗಳು [ಬದಲಾಯಿಸಿ]

ಮಹಾಭಾತರತದಲ್ಲಿ ಅರ್ಜುನನಿಗೆ ಹತ್ತು ಹೆಸರುಗಳಿವೆಯೆಂದು ಹೇಳಿದೆ:

  • ಅರ್ಜುನ
  • ಕಿರೀಟಿ
  • ಗುಡಾಕೇಶ: ಗುಡಾಕ ಎಂದರೆ ನಿದ್ರೆ. ಗುಡಾಕೇಶ ಎಂದರೆ ನಿದ್ರೆಯನ್ನು ಗೆದ್ದವನೆಂದರ್ಥ.
  • ಜಿಷ್ಣು
  • ಧನಂಜಯ
  • ಪಾರ್ಥ
  • ಫಾಲ್ಗುಣ
  • ವಿಜಯ
  • ವಿಭತ್ಸು
  • ಶ್ವೇತವಾಹನ
  • ಸವ್ಯಸಾಚಿ: ಯಾರು ತಮ್ಮ ಎರಡೂ ಕೈಗಳಿಂದ ಬಿಲ್ವಿದ್ಯೆ ಪ್ರದರ್ಶಿಸಬಲ್ಲರೋ ಅವರಿಗೆ ಸವ್ಯಸಾಚಿ ಎಂಬುದು ಅನ್ವರ್ಥಕ ನಾಮ.

ಕಣ್ಣಪ್ಪ : ಅರ್ಜುನನ ಪುನರವತಾರವೇ? [ಬದಲಾಯಿಸಿ]

ಉಲ್ಲೇಖಗಳು [ಬದಲಾಯಿಸಿ]

"http://kn.wikipedia.org/w/index.php?title=ಅರ್ಜುನ&oldid=329128" ಇಂದ ಪಡೆಯಲ್ಪಟ್ಟಿದೆ