ಜನಮೇಜಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಜನಮೇಜಯನು ಮಹಾಭಾರತದ ಕತೆಯಲ್ಲಿ ಕುರು ವಂಶದ ರಾಜ, ಪರೀಕ್ಷಿತರಾಜನ ಮಗನು; ಪರೀಕ್ಷಿತ ರಾಜನು ಅಭಿಮನ್ಯುವಿನ ಮಗ , ಅರ್ಜುನನ ಮೊಮ್ಮಗ. ವ್ಯಾಸಮಹರ್ಷಿಗಳ ಶಿಷ್ಯರಾದ ವೈಶಂಪಾಯನರು ಹೇಳಿದ ಮಹಾಭಾರತದ ಕತೆ ಯ ಕೇಳುಗನು ಇವನು.

ತಕ್ಷಕನೆಂಬ ನಾಗನಿಂದ ತನ್ನ ತಂದೆ ಪರೀಕ್ಷಿತನು ಸತ್ತದ್ದರಿಂದ ಇವನು ನಾಗರನ್ನೆಲ್ಲಾ ನಾಶ ಮಾದಲು ಸರ್ಪಯಜ್ಞವನ್ನು ಕೈಗೊಂಡನು. ಆ ಸಮಯದಲ್ಲಿ ವೈಶಂಪಾಯನರು ಭರತನಿಂದಾರಂಭಿಸಿ ಕೌರವ ಪಾಂಡವರ ನಡುವಿನ ಯುದ್ಧದವರೆಗಿನ ಅವನ ಹಿರಿಯರ ಕತೆಯನ್ನು ಹೇಳಿದರು.

ಬಾಲಕನಾದ ಆಸ್ತಿಕ ಮುನಿಯು ಸರ್ಪಗಳನ್ನೆಲ್ಲ ನಾಶ ಪಡಿಸುವ ಯಜ್ಞಕ್ಕೆ ಅಡ್ಡಿಯಾದನು . ಅವನ ತಂದೆ ಒಬ್ಬ ಬ್ರಾಹ್ಮಣ , ತಾಯಿ ನಾಗಕುಲದವಳು. ಜ್ಞಾನಿಯಾದ ಆತನ ಮಾತುಗಳನ್ನು ಕೇಳಿ ತಕ್ಷಕನನ್ನು ಬಿಡುಗಡೆ ಮಾಡಿದನು , ಸರ್ಪಯಜ್ಞವನ್ನು ನಿಲ್ಲಿಸಿ ನಾಗಕುಲದವರೊಂದಿಗೆ ದ್ವೇಷವನ್ನು ಕೈಬಿಟ್ಟನು. ನಂತರ ಕುರು ಕುಲದವರು ಮತ್ತು ನಾಗ ಕುಲದವರು ಶಾಂತಿಯಿಂದ ಬಾಳಿದರು.

"http://kn.wikipedia.org/w/index.php?title=ಜನಮೇಜಯ&oldid=280806" ಇಂದ ಪಡೆಯಲ್ಪಟ್ಟಿದೆ