ದುಶ್ಯಲಾ
ವಿಕಿಪೀಡಿಯ ಇಂದ
ದುಶ್ಶಲೆಯು ಭಾರತದ ಮಹಾಕಾವ್ಯವದ ಮಹಾಭಾರತದಲ್ಲಿ ದುರ್ಯೋಧನ ಮುಂತಾದ ನೂರು ಕೌರವರ ಒಬ್ಬಳೇ ತಂಗಿ. ಅವಳು ಸಿಂಧೂ ಮತ್ತು ಸೌವೀರ ದೆಶದ ಅರಸನಾದ ಜಯದ್ರಥನನ್ನು ಮದುವೆ ಆದಳು. ಈ ಜಯದ್ರಥನನ್ನು ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನು ಕೊಂದನು. ಕ್ಷೇತ್ರದ ಯುದ್ಧ ಮುಗಿದ ನಂತರ ಯುಧಿಷ್ಟಿರ (ಧರ್ಮರಾಯ)ನು ಅಶ್ವಮೇಧ ಯಾಗ ಮಾಡುತ್ತಿರುವಾಗ ಕಪ್ಪ ಸಂಗ್ರಹಿಸಲು ಅರ್ಜುನನು ಸಿಂಧೂದೇಶಕ್ಕೆ ಬಂದಾಗ ಅವನ ಜತೆಗೆ ಅವಳ ಮೊಮ್ಮಗನು ಯುದ್ಧ ಮಾಡಿದನು. ದುರ್ಯೋಧನನ ತಂಗಿಯನ್ನು ತನ್ನ ತಂಗಿಯಂತೆ ಪರಿಗಣಿಸಿ ಅವಳ ಮೇಲಿನ ಪ್ರೀತಿಯಿಂದ ಅವನನ್ನು ಕೊಲ್ಲದೆ ಸಿಂಧೂದೇಶದಿಂದ ಅರ್ಜುನನು ಹೊರಟು ಬಂದನು.