ಸಭಾಪತಿ (ಸ್ಪೀಕರ್)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಭಾಪತಿ (ಸ್ಪೀಕರ್ ) ಎಂಬ ಹೆಸರನ್ನು ಒಂದು ಪರ್ಯಾಲೋಚಕ ಸಭೆಯ ಅಧ್ಯಕ್ಷ ಸ್ಥಾನದಲ್ಲಿ ಕೂರುವವರಿಗೆ (ಆ ಸ್ಥಾನಕ್ಕೆ) ಇಡಲಾಗಿದ್ದು, ವಿಶೇಷವಾಗಿ ಶಾಸಕಾಂಗದ ಮುಖ್ಯಸ್ಥನನ್ನು ಈ ಹೆಸರಿನಿಂದ ಕರೆಯಲಾಗುತ್ತದೆ. ಸಭಾಪತಿಯ ಆಡಳಿತಾತ್ಮಕ ಪಾತ್ರವು ಚರ್ಚೆಗಳಿಗೆ ಮಧ್ಯಸ್ಥಿಕೆ ವಹಿಸುವುದಾಗಿದೆ. ನಿಯಮಗಳಿಗನುಸಾರವಾಗಿ ಕಾರ್ಯನಿರ್ವಹಿಸುವುದು, ಜತೆಗೆ ಮತಗಳ ಫಲಿತಾಂಶವನ್ನು ಪ್ರಕಟಿಸುವುದು (ಘೋಷಿಸುವುದು) ಮತ್ತು ಇತರೇ ಇದಕ್ಕೆ ಸಂಬಂಧಪಟ್ಟ ಕಾರ್ಯಗಳನ್ನು ನಿರ್ವಹಿಸುವುದಾಗಿದೆ. ಶಾಸನಸಭೆಯಲ್ಲಿ ಯಾರು ಮಾತನಾಡಬೇಕು ಮತ್ತು ಯಾವ ಸದಸ್ಯರು ಸಭೆಯ ಶಿಸ್ತನ್ನು ಉಲ್ಲಂಘಿಸಿದ್ದಾರೆ ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಸಭಾಪತಿ ಹೊಂದಿರುತ್ತಾರೆ. ಕೆಲವೊಮ್ಮೆ ಔಪಚಾರಿಕ ಹಾಗೂ ಇತರೆ ಸಂದರ್ಭಗಳಲ್ಲಿ ಸಭಾಪತಿ ಸಹ ಸದಸ್ಯರಲ್ಲಿ ಒಬ್ಬರಂತೆ ಪ್ರತಿನಿಧಿಸಬಹುದಾಗಿದ್ದು, ಅವರ ಧ್ವನಿಗೂ ಸಹ ಮಹತ್ವವಿರುತ್ತದೆ.

ಸ್ಪೀಕರ್ ಎಂಬ ಪದವನ್ನು 1377ರಲ್ಲಿ ಪ್ರಥಮ ಬಾರಿಗೆ ಥಾಮಸ್ ಡೆ ಹಂಗರ್‌ಫೋರ್ಡ್ ನ ಆಡಳಿತಾವಧಿಯಲ್ಲಿ ಇಂಗ್ಲೆಂಡ್ ಪಾರ್ಲಿಮೆಂಟ್‌ನಲ್ಲಿ ಮುದ್ರಿತಗೊಂಡಿತು. ಹೆಚ್ಚಿನ ಇತರೆ ಸಂಸ್ಕೃತಿಗಳು, ಇತರೆ ವಿಧಗಳಲ್ಲಿ ಬಳಸಿದವು, ಮುಖ್ಯವಾಗಿ ಇದರ ಭಾಷಾಂತರವಾಗಿ ಸಭಾಪತಿ (ಚೇರ್ ಮನ್ ಅಥವಾ ಪ್ರೆಸಿಡೆಂಟ್), ಅಧ್ಯಕ್ಷ ಎಂದು ಬಳಸಲ್ಪಟ್ಟಿವೆ. ಕೆನಡಿಯನ್ ಫ್ರೆಂಚ್‌ನಲ್ಲಿ ಹೌಸ್‌ ಆಫ್ ಕಾಮನ್ಸ್ ಅಥವಾ ಶಾಸಕಾಂಗದ ಸಭಾಪತಿಯನ್ನು ಪ್ರೆಸಿಡೆಂಟ್ (ಅಧ್ಯಕ್ಷ) ಎಂದೇ ಕರೆಯುತ್ತದೆ. ಸಭೆಯಲ್ಲಿ ಸ್ಪೀಕರ್ ಸಾಮಾನ್ಯವಾಗಿ ಲೋಕಸಭೆಯಲ್ಲಿ ಪುರುಷರಾಗಿದ್ದರೆ ಮಿಸ್ಟರ್ ಸ್ಪೀಕರ್ ಎಂದೂ, ಮಹಿಳೆಯಾಗಿದ್ದರೆ ಮ್ಯಾಡಮ್ ಸ್ಪೀಕರ್ ಎಂದೂ ನಮೂದಿಸುತ್ತಾರೆ (ಕರೆಯುತ್ತಾರೆ).

ಸಭಾಪತಿ ಇಲ್ಲದಿದ್ದ ಪಕ್ಷದಲ್ಲಿ ಸದಸ್ಯರಲ್ಲಿ ಯಾರಾದರೂ ತಾತ್ಕಾಲಿಕವಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ ಇಲ್ಲವೇ ಉಪಸಭಾಪತಿ ಆ ಸ್ಥಾನವನ್ನು ಅಲಂಕರಿಸುತ್ತಾರೆ.

ನಿಯಮಗಳು[ಬದಲಾಯಿಸಿ]

ಅವನ ಸಮದರ್ಶಿತ್ವ ವ್ಯಾಪಕವಾದ ಅವನ ಅಧಿಕಾರದಷ್ಟೇ ಮುಖ್ಯವಾದದ್ದು. ಅಧ್ಯಕ್ಷನಾಗಿ ಆರಿಸಲ್ಪಟ್ಟ ಕೂಡಲೆ ಅವನು ತನ್ನ ರಾಜಕೀಯ ಪಕ್ಷ ಅಥವಾ ಕೂಟದ ಸಂಬಂಧವನ್ನು ತ್ಯಜಿಸುತ್ತಾನೆ; ನ್ಯಾಯವಾದ ನಿರ್ಣಯ ಹೊರಬೀಳಬೇಕಾದರೆ ನಾನಾ ಪಕ್ಷಗಳಿಂದ ಸಂಸತ್ತಿನಲ್ಲಿ ಪ್ರತಿಯೊಂದು ಪಕ್ಷದವರ ಅಭಿಪ್ರಾಯಕ್ಕೂ ಅವನು ಸಮಾನ ಮನ್ನಣೆ ಗೌರವಗಳನ್ನು ಕೊಡಬೇಕಾಗುತ್ತದೆ. ನಡೆವ ಚರ್ಚೆಯಲ್ಲಿ ತನ್ನ ವೈಯಕ್ತಿಕ ಒಲವು ಅಭಿಪ್ರಾಯಗಳಿಗೆ ಎಡೆಗೊಡುವಂತಿಲ್ಲ. ಸಭೆಯಲ್ಲಿ ಸದಸ್ಯರು ನ್ಯಾಯಸಮ್ಮತರೀತಿಯಲ್ಲಿ ತಮ್ಮ ನಿಶ್ಚಿತಾಭಿಪ್ರಾಯಗಳನ್ನು ಮಂಡಿಸಲು ಅವಕಾಶ ಕೊಡುವುದು ಅವನ ಪ್ರಥಮ ಕರ್ತವ್ಯವಾದ್ದರಿಂದ, ಉದ್ರೇಕಗೊಂಡು ವಿನಯಮೀರಿ ಮಾತನಾಡುವುದು, ವೈಯಕ್ತಿಕದೂಷಣೆ, ಅವಾಚ್ಯಶಬ್ದಗಳ ಪ್ರಯೋಗ, ಅನಾವಶ್ಯಕ ಟೀಕೆ ಮುಂತಾದ ಅಕ್ರಮಗಳನ್ನು ಸಂವಿಧಾನ ತನಗೆ ಕೊಟ್ಟಿರುವ ಅಧಿಕಾರಬಲದಿಂದ ತಡೆಗಟ್ಟುತ್ತಾನೆ. ಪಕ್ಷಾತೀತನಾಗಿರುವುದರಿಂದ ಅವನು ಚರ್ಚೆಗಳಲ್ಲಿ ಭಾಗವಹಿಸುವದೇ ಇಲ್ಲ. ಮತದಾನದಲ್ಲಿ ಪಕ್ಷಗಳು ನೀಡಿದ ಮತಗಳು ಸಮಸಂಖ್ಯೆಯಲ್ಲಿದ್ದರೆ, ಆಗ ಮಾತ್ರ ತನ್ನ ನಿರ್ಧಾರಕ ಅಭಿಮತವನ್ನು (ಕ್ಯಾಸ್ಟಿಂಗ್ ವೋಟ್) ನೀಡುತ್ತಾನೆ; ಆದರೆ ಆಗಲೂ ವಿಷಯದ ಯುಕ್ತತೆ ಅಥವಾ ಯೋಗ್ಯತೆಯ ವಿಚಾರವಾಗಿ ತನ್ನ ಅಭಿಪ್ರಾಯ ನೀಡಲು ಅವನಿಗೆ ಅಧಿಕಾರವಿಲ್ಲ.ಹೀಗೆ ಅಧ್ಯಕ್ಷ ಶಾಸನಸಭೆಯ ಪ್ರತಿನಿಧಿ; ಸಭೆಯ ಸ್ವಾತಂತ್ರ್ಯ ಗೌರವಗಳ ಸಂಕೇತ. ಶಾಸನಸಭೆ ಪ್ರಜೆಗಳ ಪ್ರತಿನಿಧಿಯಾಗಿರುವುದರಿಂದ ಅಧ್ಯಕ್ಷ ಒಂದು ದೃಷ್ಟಿಯಲ್ಲಿ ರಾಷ್ಟ್ರಸ್ವಾತಂತ್ರ್ಯವನ್ನೇ ಪ್ರತಿನಿಧಿಸುತ್ತಾನೆ. ಆದ್ದರಿಂದ ಅವನ ಸ್ಥಾನ ಅತ್ಯಂದ ಘನವಾದದ್ದು, ಗೌರವಯುತವಾದದ್ದು, ಆ ಸ್ಥಾನವನ್ನಲಂಕರಿಸುವವನು ಸುವ್ಯಕ್ತವಾದ ಸಾಮಥ್ರ್ಯ ಮತ್ತು ನಿಷ್ಪಕ್ಷಪಾತಗಳನ್ನು ಹೊಂದಿರಬೇಕು.

ಯುನೈಟೆಡ್ ಕಿಂಗ್‌ಡಮ್ ಮತ್ತು ಇತರೆ "ವೆಸ್ಟ್‌ಮಿನಿಸ್ಟರ್ ಪದ್ಧತಿಯ" ದೇಶಗಳು[ಬದಲಾಯಿಸಿ]

ವೆಸ್ಟ್‌ಮಿನಿಸ್ಟರ್-ಪದ್ಧತಿ ಇರುವ ಸದನಗಳಲ್ಲಿ, ಸ್ಪೀಕರ್ ಚರ್ಚೆಗಳ ಮತವನ್ನು ಹಾಕುವ ಹಕ್ಕನ್ನು ಹೊಂದಿರುವುದಿಲ್ಲ. ಆದರೆ ಈ ಸಂದರ್ಭದಲ್ಲಿ ಎರಡೂ ಕಡೆಗಳಿಂದ ಮತಗಳು ಸಮನಾಗಿ ಬಂದಲ್ಲಿ ಸ್ಪೀಕರ್ ಮತ ಚಲಾಯಿಸಬಹುದಾಗಿದೆ. ಯುನೈಟೆಡ್ ಕಿಂಗ್ ಡಮ್ ಮತ್ತು ರಿಪಬ್ಲಿಕ್ ಆಫ್ ಐರ್ಲೆಂಡ್ (ಗಣರಾಜ್ಯ ಐರ್ಲೆಂಡ್)ನಂತಹ ಕೆಲ ದೇಶಗಳಲ್ಲಿ ಸಭೆಗಳನ್ನು ನಡೆಸುವಾಗ ಸ್ಪೀಕರ್ ನಿಷ್ಪಕ್ಷಪಾತವಾಗಿ ವರ್ತಿಸಬೇಕು ಜತೆಗೆ ಯಾವುದೇ ಪಕ್ಷದ ಪರವಾಗಿರದೇ ತಟಸ್ಥ ನೀತಿಯನ್ನು ಅನುಸರಿಸಬೇಕು. ಹಾಗೂ ತನ್ನ ಪಕ್ಷಕ್ಕೆ ರಾಜೀನಾಮೆಯನ್ನು ಸಲ್ಲಿಸಬೇಕು. ಸರ್ಕಾರವು ಪಥನಗೊಳ್ಳದಂತೆ ರಕ್ಷಿಸುವ ಒಂದೇ ಉದ್ದೇಶದಿಂದ ಸ್ಪೀಕರ್ ಮತ ಚಲಾವಣೆಯನ್ನು ಮಾಡಬಹುದಾಗಿದೆ. ಮತ್ತು ಅದನ್ನು ಪ್ರಶ್ನಿಸುವಂತಿಲ್ಲ (ಯು.ಕೆ.ನಲ್ಲಿ) ಅಥವಾ ತನ್ನಿಂದ ತಾನೆ ಚುನಾವಣೆಯನ್ನು ಘೋಷಿಸಿ ಮರುಚುನಾವಣೆಯನ್ನು ಅಣಿಗೊಳಿಸುವುದು (ಐರ್ಲೆಂಡ್‌ನಲ್ಲಿ). ಈ ಸಭೆಗಳು ಆದಾಗ್ಯೂ ಸ್ಪೀಕರ್ ಸಾಮಾನ್ಯವಾಗಿ ಸದನದ ಸದಸ್ಯರಿಂದ ಆಯ್ಕೆಯಾಗುತ್ತಾರೆ ಮತ್ತು ಆಯ್ಕೆ ಮಾಡುವ ಸಂದರ್ಭದಲ್ಲಿ ಇವರಿಗೆ ಜಾರಿ ಮಾಡಿದ ವಿಪ್ ಅನ್ವಯಿಸುವುದಿಲ್ಲ. ಯುನೈಟೆಡ್ ಕಿಂಗ್ ಡಮ್ ನಲ್ಲಿ ಸಾಮಾನ್ಯವಾಗಿ ಎರಡು ಅತಿ ದೊಡ್ಡ ಪಕ್ಷಗಳಿಂದ ಸ್ಪೀಕರ್ ಆಯ್ಕೆಯಾಗಲ್ಪಡುತ್ತಾರೆ.

ಈ ಸಭಾನಿಯಮಾವಳಿಗಳು ಎಲ್ಲ ದೇಶಗಳಿಗೂ ಅನ್ವಯವಾಗುವುದಿಲ್ಲ. ಕೆನಡಾದಲ್ಲಿ ದೊಡ್ಡ ಪಕ್ಷಗಳು ವಾಡಿಕೆಯಂತೆ ಸದಸ್ಯರನ್ನು ಸ್ಪೀಕರ್ ವಿರುದ್ಧ ನಿಲ್ಲಿಸಿ ಮರು ಚುನಾವಣೆಗೆ ಆಗ್ರಹಿಸುತ್ತಾರೆ. ಆಸ್ಟ್ರೇಲಿಯಾದಲ್ಲಿ ಸಭಾಪತಿ ಸ್ಥಾನವು ಪಕ್ಷಪಾತ ಸ್ಥಾನದಲ್ಲಿದೆ. ಯು.ಕೆ.ಯಲ್ಲಿರುವ ಈ ಸ್ಥಾನದ ನಿಷ್ಪಕ್ಷಪಾತತೆಯ ಕುರಿತು ಸೆನೇಟ್‌ನ ಕ್ಲರ್ಕ್ ಇದು ಸ್ಪೀಕರ್‌ನ ಸ್ಥಾನದಲ್ಲಿರುವವರ ಮತನೀಡುವ ಹಕ್ಕನ್ನು ಕಿತ್ತುಕೊಂಡಂತೆ ಎಂದು ಟೀಕಿಸಿದ್ದಾರೆ.[೧]

ವೆಸ್ಟ್ ಮಿನಿಸ್ಟರ್ ಪದ್ಧತಿಯ ಪಾರ್ಲಿಮೆಂಟ್ ಗಳ ಮೇಲ್ಮನೆಗಳಲ್ಲಿ ಆಡಳಿತಾಧಿಕಾರಿ ಭಿನ್ನವಾಗಿ ಕಾರ್ಯನಿರ್ವಹಿಸುತ್ತಾರೆ. ಲಾರ್ಡ್ಸ್ ನ ಬ್ರಿಟಿಷ್ ಹೌಸ್ನಲ್ಲಿ ಭಿನ್ನವಾದ ಸಭೆಗಳನ್ನು ನಡೆಸಲಾಗುತ್ತದೆ. ಈ ಅಧಿಕಾರಿಯನ್ನು ಇಂಗ್ಲೆಂಡ್ ಪಾರ್ಲಿಮೆಂಟ್ ನ ಕೆಳಮನೆಯಲ್ಲಿ ಸ್ಪೀಕರ್ ಎಂದೇ ಸಂಭೋದಿಸಲಾಗುತ್ತದೆ. ಅಥವಾ ಭಿನ್ನವಾದ ಹೆಸರಿನಲ್ಲಿ ಕರೆಯಲಾಗುತ್ತದೆ ಅದೆಂದರೆ, ಪ್ರೆಸಿಡೆಂಟ್ (ಅಧ್ಯಕ್ಷ) ಎಂದು ಆಸ್ಟ್ರೇಲಿಯಾದ ಮೇಲ್ಮನೆಯಲ್ಲಿ ಕರೆಯುತ್ತಾರೆ.

ಅಮೆರಿಕಾ ಸಂಯುಕ್ತ ಸಂಸ್ಥಾನ[ಬದಲಾಯಿಸಿ]

ಅಮೆರಿಕಾ ಸಂಯುಕ್ತ ಸಂಸ್ಥಾನದ ಜನಪ್ರತಿನಿಧಿಗಳ ಭವನ, ಮತ್ತು ಶಾಸನ ಸಭೆ ಮತ್ತು ಸರ್ಕಾರಿ ಸಮಾಲೋಚನಾ ಸಭೆಗಳಲ್ಲಿ ಸಭಾಪತಿಯು ಸಾಮಾನ್ಯವಾಗಿ ಸದಸ್ಯರಿಂದ ಬಹುಮತದ ಮೂಲಕ ಆರಿಸಲ್ಪಟ್ಟು ಸಭೆಯ ನಾಯಕರಾಗಿ ಕೆಲಸ ಮಾಡುತ್ತಾರೆ. ಸಭಾಪತಿಯು ಪ್ರಾಮಾಣಿಕ ಹಾಗೂ ನಿಷ್ಪಕ್ಷಪಾತಿಯಾಗಿದ್ದಾರೆಂದರೂ ತಮ್ಮ ಸ್ವಂತ ಪಕ್ಷದ ಕಾರ್ಯಸೂಚಿಗಳನ್ನು ಬೆಂಬಲಿಸುತ್ತಾರೆ. ಆಚರಣೆಯಲ್ಲಿ ಸಭಾಪತಿಯು ಇಡೀ ಸಂಸತ್ತನ್ನು ಪ್ರತಿನಿಧಿಸಿದರೂ ಶಾಸನ ರೀತ್ಯಾ ಆಡಳಿತದಲ್ಲಿರುವ ಪಕ್ಷದ ಪರವಾಗಿ ಧ್ವನಿಯೆತ್ತುತ್ತಾರೆ.

ಇಲ್ಲೊಂದು ಸಭಾಪತಿಗಳು ಸಭಾಧ್ಯಕ್ಷರಾಗಿರದ ಒಂದು ಘಟನೆಯಿದೆ. ನ್ಯೂಯಾರ್ಕ್ ನಗರದಲ್ಲಿ ’ನ್ಯೂಯಾರ್ಕ್ ನಗರ ಏಕಸಭಾ ಶಾಸನ ಸಭೆ’ ಯು ತನ್ನ ಸಭಾಧ್ಯಕ್ಷರನ್ನಾಗಿ ಒಬ್ಬರು ಸಾರ್ವಜನಿಕ ನ್ಯಾಯವಾದಿಯನ್ನು ಹೊಂದಿತ್ತು. ಇವರನ್ನು, ನಗರದ ಜನರು ಮತದಾನದ ಮೂಲಕ ಆಯ್ಕೆ ಮಾಡಿದ ನಗರ ಸಬಾಧ್ಯಕ್ಷರು ಎಂದು ಕರೆಯುತ್ತಿದ್ದರು. ಒಬ್ಬ ಸಾರ್ವಜನಿಕ ನ್ಯಾಯವಾದಿ ರಚನೆಯಿಂದಾಗಿ ನಗರದ ಶಾಸನ ಪತ್ರ ಅಥವಾ ಸಂವಿಧಾನ ಪುನರ್‍ ಪರಿಶೀಲನೆಗೊಳಪಟ್ಟಿತು ಮತ್ತು ನಗರ ಶಾಸನ ಸಭಾಪತಿ ಹುದ್ದೆಯ ರಚನೆಯಾಯಿತು. ಸಭಾಪತಿಯು ಬಹುಮತದಿಂದ ಶಾಸನ ಸಭೆಯ ನಾಯಕನನ್ನಾಗಿ ಆರಿಸಲಾಯಿತು.

ಜನಪ್ರತಿನಿಧಿಗಳ ಶಾಸನ ಸಭೆಯ ಸಭಾಪತಿಗಳು ಅಧ್ಯಕ್ಷರ ನಂತರದ ಸ್ಥಾನ ಹೊಂದಿರುತ್ತಾರೆ. ಸಂಯುಕ್ತ ಸಂಸ್ಥಾನದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಆಡಳಿತದಲ್ಲಿ ಅಸಮರ್ಥರಾದರೆ ಸಭಾಪತಿಗಳೇ ದೇಶದ ಅಧ್ಯಕ್ಷರಾಗುತ್ತಾರೆ. ಆದರೆ ಕೆಲವು ಚಿಂತಕರು ಈ ರೀತಿಯ ಸರಣಿ ಅಧಿಕಾರ ಅವಕಾಶ ವಿಧಾನವು ಅಸಂವಿಧಾನಿಕವಾಗಿದೆಯೆಂದು ವಾದಿಸುತ್ತಾರೆ.[೨]

ಅಮೆರಿಕ ಸಂಯುಕ್ತ ಸಂಸ್ಥಾನದ ಜನಪ್ರತಿನಿಧಿಗಳ ಶಾಸನ ಸಭೆಯ ಈಗಿನ ಸಭಾಪತಿಗಳು ’ಜಾನ್ ಬೋಯ್ನರ್‍’ ಆಗಿದ್ದಾರೆ.

ಸಂವಿಧಾನದ ಪ್ರಕಾರ ಸಭಾಪತಿಯು ಸಂಸತ್ತಿಗೆ ಆಯ್ಕೆಗೊಂಡ ಸದಸ್ಯನೇ ಆಗಿರಬೇಕಿಲ್ಲ. ಸಂಸತ್ ಸದಸ್ಯರಲ್ಲದವರು ಕೂಡಾ ಸಭಾಪತಿ ಸ್ಥಾನಕ್ಕೆ ಆಯ್ಕೆಯಾಗಬಹುದು.

ಭಾರತದಲ್ಲಿ ಅಧ್ಯಕ್ಷಸ್ಥಾನ[ಬದಲಾಯಿಸಿ]

ಭಾರತದಲ್ಲಿ ಅಧ್ಯಕ್ಷಸ್ಥಾನ ತನ್ನದೇ ಆದ ವೈಶಿಷ್ಟ್ಯವನ್ನು ಪಡೆದಿದೆ. ಇಲ್ಲಿ ಅಧ್ಯಕ್ಷರು ಹೊಂದಿರುವಷ್ಟು ಅಧಿಕಾರವನ್ನು ಬ್ರಿಟಿಷ್ ಕಾಮನ್‍ವೆಲ್ತ್ ರಾಷ್ಟ್ರ ಸಮುದಾಯದ ಇತರ ಯಾವ ರಾಷ್ಟ್ರವೂ ಹೊಂದಿಲ್ಲ. ಲೋಕಸಭೆಯ ರಚನೆ, ಕಾರ್ಯಕ್ರಮ ಮುಂತಾದವುಗಳಿಗೆ ಇಂಗ್ಲೆಂಡಿನ ಕಾಮನ್ಸ್ ಸಭೆಯನ್ನೇ ಮಾದರಿಯಾಗಿ ಇಟ್ಟುಕೊಳ್ಳಲಾಗಿದೆ. ಆದರೂ ಅಧ್ಯಕ್ಷನ ಅಧಿಕಾರವ್ಯಾಪ್ತಿ ಹೆಚ್ಚಾಗಿರುವುದಕ್ಕೆ ಕಾರಣ- ಮೊದಲಲ್ಲೆ ಅಧ್ಯಕ್ಷಸ್ಥಾನವನ್ನಲಂಕರಿಸಿದ ಇಬ್ಬರು ಭಾರತೀಯರ ದಿಟ್ಟತನ ಮತ್ತು ಸಾಹಸ. 1925ರಲ್ಲಿ ಕೇಂದ್ರ ಶಾಸನಸಭೆಯ ಅಧ್ಯಕ್ಷಸ್ಥಾನಕ್ಕೆ ಚುನಾವಣೆ ನಡೆದಾಗ, ಸರ್ಕಾರದ ಬೆಂಬಲ ಪಡೆದಿದ್ದ ತನ್ನ ಪ್ರತಿಸ್ಪರ್ಧಿಯನ್ನು ಎರಡು ವೋಟುಗಳಿಂದ ಸೋಲಿಸಿ ವಿಠಲ್‍ಭಾಯ್ ಪಟೇಲರು ಅಧ್ಯಕ್ಷರಾದರು. ಸರ್ಕಾರದಿಂದ ಸೂಚಿಸಲ್ಪಟ್ಟ ಸ್ಪರ್ಧಿಯನ್ನೇ ಸೋಲಿಸಿದ್ದರಿಂದ ಇನ್ನು ಮುಂದೆ ತಾವು ಶಾಸನಸಭೆಗೆ ಮಾತ್ರ ಜವಾಬ್ದಾರರೆಂದೂ ಬೇರೆ ಯಾರಿಗೂ ಅಧೀನರಲ್ಲವೆಂದೂ ಸಾಧಿಸಿದರು. ಸಭೆಯ ಕಾರ್ಯಕಲಾಪಗಳಲ್ಲಿ ಸರ್ಕಾರದ ಕಾರ್ಯಾಂಗದ ಕೈವಾಡ ನಿಂತುಹೋಯಿತು. ರಾಷ್ಟ್ರರಕ್ಷಣೆಗೆ ಸಂಬಂಧಪಟ್ಟ ಮಸೂದೆಯೊಂದನ್ನು ಚರ್ಚೆಗೆ ತೆಗೆದುಕೊಳ್ಳಬೇಕೆಂದು ಸರಕಾರದಿಂದ ಸೂಚನೆ ಬಂದಾಗ, ಅದನ್ನು ತೆಗೆದುಕೊಳ್ಳುವುದು ಬಿಡುವುದು ತಮ್ಮ ವಿವೇಚನೆಗೆ ಸಂಬಂಧಿಸಿದ್ದೆಂದು ತಿಳಿಸಿ ಅಧ್ಯಕ್ಷರು ಅದನ್ನು ತಳ್ಳಿಹಾಕಿದರು. ತಮ್ಮ ಕೆಲವು ತೀರ್ಮಾನಗಳನ್ನು ಸರ್ಕಾರದ ಪಕ್ಷ ಬಹಿರಂಗವಾಗಿ ಹಳಿಯುತ್ತಿದ್ದುದನ್ನು ಕಂಡು, ಪ್ರತ್ಯೇಕವಾಗಿ ವಿಧಿಗನುಸಾರವಾದ ಸೂಚನೆಯನ್ನು ಸಭೆಯಲ್ಲಿ ಮಂಡಿಸದೆ ಆ ರೀತಿ ಟೀಕಿಸುವುದು ಸಭೆಯ ಗೌರವಕ್ಕೆ ಕುಂದುಂಟು ಮಾಡುತ್ತದೆಂದು ತಿಳಿಸಿದರು. ಸಭೆಯಲ್ಲಿ, ಅದಕ್ಕೆ ಸೇರಿದ ಆವರಣದಲ್ಲಿ, ಶಿಸ್ತುಭದ್ರತೆಗಳನ್ನು ಕಾಪಾಡುವುದು ತಮ್ಮ ಸ್ವಂತ ಅಧಿಕಾರವ್ಯಾಪ್ತಿಗೆ ಒಳಪಟ್ಟಿಯೆಂಬುದನ್ನು ಸಾಧಿಸಿದರು. ಶಾಸಕಾಂಗದ ಕಚೇರಿಯ ಅಧಿಕಾರಿಗಳು ತಮ್ಮ ಹತೋಟಿಯಲ್ಲಿರಬೇಕು, ಆಡಳಿತದ ಬೇರೆ ಯಾವ ಶಾಖೆಯೂ ಅವರ ಮೇಲೆ ಪ್ರಭಾವ ಬೀರದಂತಿರಬೇಕು ಎಂಬ ನೀತಿಯನ್ನು ಸಮರ್ಥಿಸಿ, 1928ರಲ್ಲಿ ಸರ್ಕಾರ ಅದನ್ನು ಅನುಮೋದಿಸುವಂತೆ ಮಾಡಿದರು.

ಮಾವ್ಲಂಕರ್ ಕಾಲ[ಬದಲಾಯಿಸಿ]

ಮಾವ್ಲಂಕರ್ ಅಧ್ಯಕ್ಷರಾಗಿದ್ದ ಕಾಲ ಶಾಸನಸಭೆಯ ಘನತೆ ಗೌರವಗಳ ಬೆಳವಣಿಗೆಯಲ್ಲಿ ಇನ್ನೊಂದು ಸ್ಮರಣೀಯ ಘಟ್ಟ. 1946: ಭಾರತೀಯರ ಸ್ವಾತಂತ್ರ್ಯ ಸಮರದ ಅಂತಿಮಕಾಲ. ಆಗ ಇವರು ಕೇಂದ್ರ ಶಾಸನಸಭೆಯ ಅಧ್ಯಕ್ಷರಾಗಿ ಚುನಾಯಿತರಾದರು. ಸ್ಪೀಕರ್ ಎಂಬ ಹೆಸರು ಪ್ರಯೋಗಕ್ಕೆ ಬಂದುದು 1947ರಲ್ಲಿ ಸ್ವಾತಂತ್ರ್ಯಘೋಷಣೆಯಾದ ಅನಂತರ. ರಾಜ್ಯವ್ಯವಸ್ಥಾಸಭೆಯೇ (ಕಾನ್‍ಸ್ಟಿಟ್ಯುಎಂಟ್ ಅಸೆಂಬ್ಲಿ) ಶಾಸನಸಭೆಯ ಕಾರ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಅವರೇ ಅಧ್ಯಕ್ಷರಾಗಿ ಮುಂದುವರಿದರು. ಲೋಕಸಭೆ, ರಾಜ್ಯಸಭೆಗಳ ರಚನೆಯಾದಮೇಲೆ 1956ರ ಮೇ 27ರಲ್ಲಿ ಲೋಕಸಭೆಯ ಅಧ್ಯಕ್ಷರಾದರು. ಹೊಸ ಸಂವಿಧಾನಕ್ಕನುಸಾರವಾಗಿ ಲೋಕಸಭೆ ನಿರ್ಮಾಣವಾದ ಆ ಪರ್ವಕಾಲದಲ್ಲಿ ನಾಲ್ಕು ವರ್ಷ (1956ರ ವರೆಗೆ) ಅಧ್ಯಕ್ಷರಾಗಿದ್ದು ಆ ಸ್ಥಾನದ ಘನತೆ ಗೌರವಗಳನ್ನು ಭದ್ರಪಡಿಸಿದರು. ಭಾರತ ಸಂವಿಧಾನಕ್ಕನುಗುಣವಾಗಿ ಅಧ್ಯಕ್ಷರ ಅಧಿಕಾರಕ್ಕೆ ರೂಪುಕೊಟ್ಟವರು ಅವರು. ಭಾರತ ಸಂವಿಧಾನದಲ್ಲಿ ಶಾಸನಸಭೆಯ ರಚನೆ ಕಾರ್ಯಕಲಾಪಗಳ ವಿಷಯವಾಗಿ ನಿರ್ದಿಷ್ಟನಿಯಮಗಳಿವೆ. ಅಧ್ಯಕ್ಷಸ್ಥಾನಕ್ಕೆ ಸಂಬಂಧಿಸಿದ ನಿಯಮಗಳನ್ನು ರೂಪಿಸುವುದರಲ್ಲಿ ಮಾವ್ಲಂಕರ್‍ರವರ ಕೈವಾಡವೇ ಹೆಚ್ಚು. ಅಧ್ಯಕ್ಷರ ವಿಷಯದಲ್ಲಿ ಇತರ ಅನೇಕ ದೇಶಗಳಲ್ಲಿ- ಇಂಗ್ಲೆಂಡಿನಲ್ಲೂ-ಅನುಕರಣೆಯಲ್ಲಿರುವ ಆಡಂಬರದ ಶಿಷ್ಟಾಚಾರಗಳನ್ನು ತೆಗೆದುಹಾಕಿ, ಭಾರತಸಂಸ್ಕøತಿಗನುಗುಣವಾದ ಸರಳತೆಯನ್ನು ಆಚರಣೆಗೆ ತರಲಾಗಿದೆ. ಅವರು ಇಂಥ ಉಡುಪನ್ನೇ ಧರಿಸಬೇಕೆಂಬ ನಿಯಮವಿಲ್ಲ. 1946ರಲ್ಲಿ ತಾವು ಅಧ್ಯಕ್ಷರಾಗಿ ಬಂದಕೂಡಲೆ ಮಾವ್ಲಂಕರರು ಅಧಿಕಾರ ಸೂಚಕವಾಗಿ ಧರಿಸಬೇಕಾಗಿದ್ದ ಕೃತಕ ತಲೆಗೂದಲ ಕುಲಾವಿಯನ್ನು (ವಿಗ್) ತ್ಯಜಿಸಿದರು. ಅಧ್ಯಕ್ಷರು ಸಭೆಗೆ ಬರುತ್ತಿದ್ದಾರೆಂಬುದನ್ನು ಶಿಸ್ತುಪಾಲನಾಧಿಕಾರಿಯೊಬ್ಬ ಶ್ರುತಪಡಿಸುತ್ತಾನೆ. ಕೂಡಲೆ ಎಲ್ಲರೂ ಎದ್ದುನಿಲ್ಲುತ್ತಾರೆ. ತಮ್ಮ ಪೀಠದ ಹತ್ತಿರ ಬಂದಕೂಡಲೆ ಅಧ್ಯಕ್ಷರು ಎಲ್ಲರಿಗೂ ಬಾಗಿ ವಂದಿಸಿ ಕೂತುಕೊಳ್ಳುತ್ತಾರೆ. ಅನಂತರ ಎಲ್ಲರೂ ಕೂರುತ್ತಾರೆ. ಶಿಸ್ತುಪಾಲನಾಧಿಕಾರಿ ಸಮವಸ್ತ್ರ ಧರಿಸಿರುತ್ತಾನೆ. ಆದರೆ ಅವನ ಕೈಲಿ ಅಧಿಕಾರದಂಡ (ಮೇಸ್) ಇಲ್ಲ.

ಇಂತಹುದೇ ಹುದ್ದೆ[ಬದಲಾಯಿಸಿ]

ಎರಡು ಸಭೆಗಳಿದ್ದಲ್ಲಿ (ಉಭಯ ಸದನ) ಮೇಲ್ಮನೆಯ ಸಭಾಪತಿಯು ಇಂತಹುದೇ ಕಾರ್ಯ ನಿರ್ವಹಿಸಿದರೂ ಬೇರೆ ಹೆಸರಿನಿಂದ ಕರೆಯುತ್ತಾರೆ.

ಮೇಲ್ಮನೆಗೆ ಯಾವಾಗ ಸೆನೆಟ್ ಎಂದು ಕರೆದರೋ, ಅಲ್ಲಿನ ಸಭಾಪತಿಗೆ ಕೂಡಾ ಸೆನೆಟ್ ನ ಅಧ್ಯಕ್ಷರೆಂದು ಕರೆದರು. ಆಸ್ಟ್ರೇಲಿಯಾ, ಚಿಲಿ, ಸಂಯುಕ್ತ ಸಂಸ್ಥಾನ ಮತ್ತು ಇತರ ದೇಶಗಳು ’ಅಧ್ಯಕ್ಷರು’ ಎಂಬ ಹೆಸರಿನ ಸಭಾಪತಿಗಳ ನಾಯಕತ್ವದಲ್ಲಿ ನಡೆಯುವ ಮೇಲ್ಮನೆ ಹೊಂದಿವೆ. ಅಮೇರಿಕಾದ ಕೆಲವು ಗಣರಾಜ್ಯಗಳಲ್ಲಿ ದೇಶದ ಉಪಾಧ್ಯಕ್ಷು ಮೇಲ್ಮನೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಾರೆ.

ಈ ವ್ಯವಸ್ಥೆಯು ವಿಶ್ವವ್ಯಾಪಿಯಾಗಿರುವದಿಲ್ಲ. ಕೆಲವು ಮೇಲ್ಮನೆಗಳು ಕೆನಡಾವನ್ನೊಳಗೊಂಡು ಮತ್ತು ಅನೇಕ ಸಂಯುಕ್ತ ಸಂಸ್ಥಾನ ರಾಷ್ಟ್ರಗಳು (ಟೆನ್ನೆಸ್ಸೀ ಒಳಗೊಂಡು) ಸಭಾಪತಿಯನ್ನು ಹೊಂದಿದ್ದಾರೆ.

ಯುನಿಟೆಡ್ ಕಿಂಗ್‌ಡಮ್ ದೇಶದಲ್ಲಿ ಇತ್ತೀಚಿನ ದಿನಗಳವರೆಗೆ, ಹೌಸ್ ಆಫ್ ಲಾರ್ಡ್ಸ್‌ನ ಕ್ಯಾಬಿನೆಟ್ ದರ್ಜೆಯ ಸದಸ್ಯರಾಗಿದ್ದ ಮತ್ತು ನ್ಯಾಯಾಂಗ ವಿಭಾಗದ ಮುಖ್ಯಸ್ಥರಾಗಿದ್ದ ಲಾರ್ಡ್ ಚಾನ್ಸಲರ್‌ರವರು ಸಭಾಧ್ಯಕ್ಷರಾಗಿರುತ್ತಾರೆ. ಸಭಾಪತಿಯು ಸಾಮಾನ್ಯವಾಗಿ ಹೊಂದಿರುವ ಸಂಸತ್ ಸದಸ್ಯರ ಶಿಸ್ತನ್ನು ನಿಯಂತ್ರಿಸುವ ಅಧಿಕಾರವನ್ನು ಲಾರ್ಡ್ ಚಾನ್ಸಲರ್‍ರವರು ಹೊಂದಿರುವುದಿಲ್ಲ. (ಜುಲೈ 4, 2006 ರಂದು ಕಛೇರಿ ನಿಯಮಗಳನ್ನು ಸುಧಾರಣೆ ಮಾಡಲಾಯಿತು ಮತ್ತು ಬಾರೋನೆಸ್ ಹೇಮನ್ ಅವರು ವೂಲ್ಸಾಕ್ ಅವರನ್ನು ಪ್ರಥಮ ಲಾರ್ಡ್ ಸ್ಪೀಕರ್ ಅನ್ನಾಗಿ ಆಯ್ಕೆಮಾಡಿದರು) (ಬದಲಾವಣೆಗೊಳಪಟ್ಟ ನಿಯಮಗಳಿಗೊಳಪಟ್ಟು ಸಭಾಪತಿಗಳ ಕಛೇರಿ ಉಳಿದುಕೊಂಡಿತು.)

ವ್ಹೆಲ್ಶ್ ವಿಧಾನಸಭೆ ಮತ್ತು ಸ್ಕಾಟಿಷ್ ಲೋಕಸಭೆಗಳು ಸಭಾನಾಯಕ ಅಧಿಕಾರವನ್ನು ಹೊಂದಿದ್ದು, ಇವರು ಸಭಾಪತಿಗಳಂತೆಯೇ ಕಾರ್ಯ ನಿರ್ವಹಿಸುತ್ತಾರೆ.

ಪ್ರಸ್ತುತವಾಗಿ ಅಧಿಕಾರದಲ್ಲಿರುವ ಸ್ಪೀಕರ್‌ಗಳ ಪಟ್ಟಿ[ಬದಲಾಯಿಸಿ]

ದೇಶ ಶಾಸಕಾಂಗ (ಅಥವಾ ಶಾಸನ ಸಭೆ) ಸ್ಥಾನ (ಕರ್ತವ್ಯದಲ್ಲಿರುವವರು)
ಆಸ್ಟ್ರೇಲಿಯಾ ಆಸ್ಟ್ರೇಲಿಯನ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್‌ ಹ್ಯಾರಿ ಜೆಂಕಿನ್ಸ್
ಬೋಟ್ಸ್‌ವಾನಾ ಬೋಟ್ಸ್‌ವಾನಾ ರಾಷ್ಟ್ರೀಯ ವಿಧಾನಸಭೆ ಸ್ಪೀಕರ್‌ ಮಾರ್ಗರೆಟ್ ನಶಾ
ಬಲ್ಗೇರಿಯಾ ಬಲ್ಗೇರಿಯಾ ರಾಷ್ಟ್ರೀಯ ವಿಧಾನಸಭೆ ಚೇರ್‌ಪರ್ಸನ್‌ ಸೆಟ್ಸ್‌ಕಾ ಸಚೇವಾ
ಕೆನಡಾ ಕೇನಡಾ ಹೌಸ್ ಆಫ್ ಕಾಮನ್ಸ್ ಸ್ಪೀಕರ್‌ ಪೀಟರ್ ಮಿಲ್ಲಿಕೆನ್
 ಆಲ್ಬರ್ಟಾ ಅಲ್ಬರ್ಟಾ ಶಾಸಕಾಂಗ ಸಭೆ ಸ್ಪೀಕರ್‌ ಕೆನ್ ಕೋವಾಲ್ಸ್‌ಕಿ
 ಬ್ರಿಟೀಷ್‌ ಕೊಲಂಬಿಯಾ ಬ್ರಿಟೀಷ್ ಕೊಲಂಬಿಯಾ ಶಾಸಕಾಂಗ ಸಭೆ ಸ್ಪೀಕರ್‌ ಬಿಲ್ ಬ್ಯಾರಿಸೋಫ್
 ಮ್ಯಾನಿಟೋಬಾ ಮ್ಯಾನಿಟೋಬಾ ಶಾಸಕಾಂಗ ಸಭೆ ಸ್ಪೀಕರ್‌ ಜಾರ್ಜ್ ಹಿಕ್ಸ್
 »ನ್ಯೂ ಬ್ರೂನ್ಸ್‌ವಿಕ್ ನ್ಯೂ ಬ್ರೂನ್ಸ್‌ವಿಕ್ ಶಾಸಕಾಂಗ ಸಭೆ ಸ್ಪೀಕರ್‌ ರಾಯ್ ಬಾಡ್ರ್ಯೂ
 »ನ್ಯೂಫೌಂಡ್‌ಲ್ಯಾಂಡ್ ಮತ್ತು ಲ್ಯಾಬ್ರಡಾರ್ ನ್ಯೂಫೌಂಡ್‌ಲ್ಯಾಂಡ್ ಮತ್ತು ಲ್ಯಾಬ್ರಡಾರ್‌ನ ಹೌಸ್ ಆಫ್ ಅಸೆಂಬ್ಲಿ ಸ್ಪೀಕರ್‌ ರೋಜರ್ ಫಿಡ್ಜೆರಾಲ್ಡ್
 »ನಾರ್ಥ್‌ವೆಸ್ಟ್ ಟೆರಿಟರೀಸ್ ನಾರ್ಥ್‌ವೆಸ್ಟ್ ಟೆರಿಟರೀಸ್‌ನ ಶಾಸಕಾಂಗ ಸಭೆ ಸ್ಪೀಕರ್‌ ಪಾಲ್ ಡೋಲೆರೀ
 ನೊವಾ ಸ್ಕಾಟಿಯಾ ನೊವಾ ಸ್ಕಾಟಿಯಾ ಹೌಸ್‌ ಆಫ್ ಅಸೆಂಬ್ಲಿ‌ ಸ್ಪೀಕರ್‌ ಗಾರ್ಡೀ ಗೋಸ್
 ನುನಾವಟ್ ನುನಾವಟ್ ಶಾಸಕಾಂಗ ಸಭೆ ಸ್ಪೀಕರ್‌ ಜೇಮ್ಸ್ ಆರೆಕ್
 ಒಂಟಾರಿಯೊ ಒಂಟಾರಿಯೊ ಶಾಸಕಾಂಗ ಸಭೆ ಸ್ಪೀಕರ್‌ ಸ್ಟೀವ್ ಪೀಟರ್ಸ್
 »ಪ್ರಿನ್ ಎಡ್ವರ್ಡ್ ಐಲ್ಯಾಂಡ್ ಪ್ರಿನ್ ಎಡ್ವರ್ಡ್ ಐಲ್ಯಾಂಡ್ ಶಾಸಕಾಂಗ ಸಭೆ ಸ್ಪೀಕರ್‌ ಕ್ಯಾಥಲೀನ್ ಎಂ. ಕೇಸೀ
 ಸಾಸ್‌ಕಷೆವನ್ ಸಾಸ್‌ಕಷೆವನ್ ಶಾಸಕಾಂಗ ಸಭೆ ಸ್ಪೀಕರ್‌ ಡಾನ್ ಟಾಥ್
 ಕ್ಯೂಬೆಕ್ ಕ್ಯೂಬೆಕ್ ರಾಷ್ಟ್ರೀಯ ವಿಧಾನಸಭೆ ಅಧ್ಯಕ್ಷ/ರಾಷ್ಟ್ರಪತಿ ವ್ಯೋನ್ ವ್ಯಾಲಿಯರ್ಸ್
 »ಯುಕಾನ್ ಯುಕಾನ್ ಶಾಸಕಾಂಗ ಸಭೆ ಸ್ಪೀಕರ್‌ ಟೆಡ್ ಸ್ಟ್ಯಾಫೆನ್
ಚೀನಾ ನ್ಯಾಶನಲ್ ಪೀಪಲ್ಸ್ ಕಾಂಗ್ರೆಸ್ ಚೇರ್ಮನ್ ಆಫ್ ದ ಸ್ಟ್ಯಾಂಡಿಂಗ್ ಕಮಿಟಿ ವ್ಯು ಬ್ಯಾಂಗ್ವೋ
 ಹಾಂಗ್‌ಕಾಂಗ್ ನ್ಯಾಶನಲ್ ಕೌನ್ಸಿಲ್ ಆಫ್ ಹಾಂಗ್‌ಕಾಂಗ್‌ ಅಧ್ಯಕ್ಷ/ರಾಷ್ಟ್ರಪತಿ ತ್ಸಾಂಗ್ ಯುಕ್ ಸಿಂಗ್
 ಮಕಾವು ಮಕಾವು ಶಾಸಕಾಂಗ ಸಭೆ ಅಧ್ಯಕ್ಷ/ರಾಷ್ಟ್ರಪತಿ ಸುಸಾನಾ ಚೌ
ಕ್ರೊವೇಷ್ಯಾ ಕ್ರೊವೇಷ್ಯಾ ಸಂಸತ್ತು (ಸಬೋರ್) ಅಧ್ಯಕ್ಷ/ರಾಷ್ಟ್ರಪತಿ ಲೂಕಾ ಬೆಬಿಕ್
ಡೆನ್ಮಾರ್ಕ್‌ ಡೆನ್‌ಮಾರ್ಕ್ ಸಂಸತ್ತು (ಫೋಕೆಟಿನ್‌ಗೆಟ್) ಸ್ಪೀಕರ್‌ ಥೋರ್ ಪೆಡರ್ಸನ್
ಇಸ್ಟೊನಿಯಾ ರಿಜಿಕೋಗು ಸ್ಪೀಕರ್‌ ಎನೆ ಎರ್ಗ್‌ಮಾ
ಫಿನ್‌ಲ್ಯಾಂಡ್ ಫಿನ್‌ಲ್ಯಾಂಡ್ ಸಂಸತ್ತು (eduskunta/riksdagen) ಸ್ಪೀಕರ್‌ ಸೌಲಿ ನೀನಿಸ್ಟೋ
ಫ್ರಾನ್ಸ್‌‌ ರಾಷ್ಟ್ರೀಯ ವಿಧಾನಸಭೆ (Assemblée Nationale) ಅಧ್ಯಕ್ಷ/ರಾಷ್ಟ್ರಪತಿ ಬರ್ನಾರ್ಡ್ ಅಕೋಯರ್
ಘಾನಾ ಘಾನಾ ಸಂಸತ್ತು ಸ್ಪೀಕರ್‌ ಮಿಸೆಸ್ ಜಸ್ಟೀಸ್ ಜಾಯ್ಸ್ ಅಡೆಲಿನ್ ಬಾಂಫರ್ಡ್- ಅಡ್ಡೋ
ಜರ್ಮನಿ ಬಂಡೆಸ್ಟಾಗ್‌ ಅಧ್ಯಕ್ಷ/ರಾಷ್ಟ್ರಪತಿ ನೋರ್ಬರ್ಟ್ ಲ್ಯಾಮರ್ಟ್
ಗ್ರೀಸ್‌ ವೌಲಿ ಸ್ಪೀಕರ್‌ ಫಿಲಿಪೋಸ್ ಪೆಟ್ಸಾಲ್ನಿಕೊಸ್
ಹಂಗೇರಿ ಹಂಗೇರಿ ರಾಷ್ಟ್ರೀಯ ವಿಧಾನಸಭೆ (Magyar Köztársaság Országgyűlése) ಸ್ಪೀಕರ್‌ ಲಾಸ್ಲೊ ಕೋವರ್
ಭಾರತ ಲೋಕಸಭೆ ಸ್ಪೀಕರ್‌ ಮೀರಾ ಕುಮಾರ್
ಇಂಡೊನೇಷಿಯಾ ಪೀಪಲ್ಸ್ ರೆಪ್ರೆಸೆಂಟೇಟಿವ್ ಕೌನ್ಸಿಲ್ (Dewan Perwakilan Rakyat) ಸ್ಪೀಕರ್‌ ಮರ್ಝೂಕಿ ಅಲೀ
ಐರ್ಲೆಂಡ್ Dáil Éireann Ceann Comhairle (ಕೌನ್ಸಿಲ್ ಮುಖ್ಯಸ್ಥ) ಸೀಮಸ್ ಕಿರ್ಕ್
ಇರಾನ್‌ ಮಜ್ಲಿಸ್ ಆಫ್ ಇರಾನ್ ಸ್ಪೀಕರ್‌ ಅಲಿ ಲರಿಜಾನಿ
ಇಸ್ರೇಲ್‌ ನೆಸೆಟ್ ಸ್ಪೀಕರ್‌ ರ್ಯೂವೆನ್ ರಿವ್ಲಿನ್
ಕೊಸೊವೊ ಕೊಸೊವೊ ಶಾಸಕಾಂಗ ಸಭೆ ಚೇರ್ಮನ್ ಜಾಕಪ್ ಕ್ರಸ್ನಿಕಿ
ಲಾಟ್ವಿಯಾ Saeima ಸ್ಪೀಕರ್‌ ಸೋಲ್ವಿಟಾ ಅಬೋಲ್ಟಿನಾ
ಲೆಬೆನಾನ್ ಲೆಬೆನಾನ್ ಸಂಸತ್ತು ಸ್ಪೀಕರ್‌ ನಭಿ ಬೆರ್ರಿ
ಲೀಚನ್‌ಸ್ಟೀನ್‌ ಲ್ಯಾಂಡ್‌ಟ್ಯಾಗ್ ಆಫ್ ಲಿಚನ್‌ಸ್ಟೀನ್‌ ಸ್ಪೀಕರ್‌ ಅರ್ಥರ್ ಬ್ರೂನ್‌ಹಾರ್ಟ್
ಮೆಸಿಡೋನಿಯಾ ಅಸೆಂಬ್ಲಿ ಆಫ್ ದ ರಿಪಬ್ಲಿಕ್ ಆಫ್ ಮೆಸಿಡೋನಿಯಾ ಸ್ಪೀಕರ್‌ ಟ್ರಾಜ್ಕೋ ವೆಲ್ಜನೊವ್ಸ್‌ಕಿ
ಮಲೇಷಿಯಾ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಆಫ್ಹ್ ಮಲೇಷಿಯಾ (Dewan Rakyat) ಸ್ಪೀಕರ್‌ ಟಾನ್ ಶ್ರೀ ಪಂಡಿಕರ್ ಅಮಿನ್ ಮುಲಿಯಾ
ಮಾಲ್ಟಾ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಆಫ್ ಮಾಲ್ಟಾ ಸ್ಪೀಕರ್‌ ಮೈಖೆಲ್ ಫ್ರೆಂಡೋ
ಮೆಕ್ಸಿಕೊ ಚೇಂಬರ್ ಆಫ್ ಡೆಪ್ಯುಟೀಸ್ (Cámara de Diputados) ಅಧ್ಯಕ್ಷ/ರಾಷ್ಟ್ರಪತಿ ರುಥ್ ಝವಲೆಟಾ ಸಲ್ಗಾಡೋ
ಮಾಲ್ಡೋವಾ ಸಂಸತ್ತು ಅಧ್ಯಕ್ಷ/ರಾಷ್ಟ್ರಪತಿ ಮರಿಯನ್ ಲೂಪೂ
ಮಾಂಟೆನಿಗ್ರೊ ಮಾಂಟೆನಿಗ್ರೋ ಅಸೆಂಬ್ಲಿ ಅಧ್ಯಕ್ಷ/ರಾಷ್ಟ್ರಪತಿ ರ್ಯಾಂಕೋ ಕ್ರಿವೊಕಪಿಕ್
ನೆದರ್ಲ್ಯಾಂಡ್ಸ್ ನೆದರ್‌ಲ್ಯಾಂಡ್ಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ ಅಧ್ಯಕ್ಷ/ರಾಷ್ಟ್ರಪತಿ ಜೆರ್ಡಿ ವೆರ್ಬೀಟ್
ನ್ಯೂಜಿಲೆಂಡ್‌ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ ಸ್ಪೀಕರ್‌ ಡಾ ಲಾಕ್ವುಡ್ ಸ್ಮಿಥ್
ನೈಜೀರಿಯಾ ನೈಜೀರಿಯಾ ರಾಷ್ಟ್ರೀಯ ವಿಧಾನಸಭೆ ಸ್ಪೀಕರ್‌ ಬದಲಾಗಿ ಅಮಿನು ಬೆಲ್ಲೊ ಮಸಾರಿ
ಪಾಕಿಸ್ತಾನ ಪಾಕಿಸ್ತಾನ ರಾಷ್ಟ್ರೀಯ ವಿಧಾನಸಭೆ ಸ್ಪೀಕರ್‌ ಡಾ. ಫೆಮಿದಾ ಮಿರ್ಜಾ
ಫಿಲಿಫೈನ್ಸ್‌ ಫಿಲಿಫೈನ್ಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ ಸ್ಪೀಕರ್‌ ಫೆಲಿಶಿಯಾನೊ ಬೆಲ್‌ಮೊಂಟ್
ಪೋಲೆಂಡ್ ಸೆಜಮ್ ಆಫ್ ದ ರಿಪಬ್ಲಿಕ್ ಆಫ್ ಪೋಲ್ಯಾಂಡ್ ಮಾರ್ಷಲ್ ಗ್ರೆಗೋಜ್ ಶೇಟಿನಾ
ರೊಮಾನಿಯ ಚೇಂಬರ್ ಆಫ್ ಡೆಪ್ಯೂಟೀಸ್ ಆಫ್ ರೊಮ್ಯಾನಿಯಾ ಅಧ್ಯಕ್ಷ/ರಾಷ್ಟ್ರಪತಿ ರಾಬರ್ಟಾ ಅನಾಸ್ಟೇಸ್
ರಷ್ಯಾ ಸ್ಟೇಟ್ ಡುಮಾ ಚೇರ್ಮನ್ ಬೋರಿಸ್ ಗ್ರಿಸ್ಲೋವ್
ಸರ್ಬಿಯಾ ರಿಪಬ್ಲಿಕ್ ಆಫ್ ಸರ್ಬಿಯಾದ ರಾಷ್ಟ್ರೀಯ ವಿಧಾನಸಭೆ ಅಧ್ಯಕ್ಷ/ರಾಷ್ಟ್ರಪತಿ ಸ್ಲೆವಿಕಾ ಡ್ಯೂಕಿಕ್ ಡೆಜಾನೊವಿಕ್
ಸಿಂಗಪೂರ್‌‌ ಸಿಂಗಪೂರ್ ಸಂಸತ್ತು ಸ್ಪೀಕರ್‌ ಹಲಿಮಾ ಯಾಕೊಬ್
ಸೊಲೊಮಾನ್ ದ್ವೀಪಗಳು ಸೊಲೊಮನ್ ದ್ವೀಪಗಳ ರಾಷ್ಟ್ರೀಯ ಸಂಸತ್ತು ಸ್ಪೀಕರ್‌ ಸರ್ ಪೀಟರ್ ಕೊನಿಲೋರಿಯಾ
ದಕ್ಷಿಣ ಆಫ್ರಿಕಾ ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ವಿಧಾನಸಭೆ ಸ್ಪೀಕರ್‌ ಮ್ಯಾಕ್ಸ್ ಸಿಲುಲು
ದಕ್ಷಿಣ ಕೊರಿಯಾ ದಕ್ಷಿಣ ಕೋರಿಯಾದ ರಾಷ್ಟ್ರೀಯ ವಿಧಾನಸಭೆ ಸ್ಪೀಕರ್‌ ಪಾರ್ಕ್ ಹೀಟೇ
ಸ್ಪೇನ್ ಕಾಂಗ್ರೆಸ್ ಆಫ್ ಡೆಪ್ಯೂಟೀಸ್ (Congreso de los Diputados) ಅಧ್ಯಕ್ಷ/ರಾಷ್ಟ್ರಪತಿ ಜೋಸ್ ಬೋನೊ
ಶ್ರೀಲಂಕಾ ಶ್ರೀಲಂಕಾ ಸಂಸತ್ತು ಸ್ಪೀಕರ್‌ ಚಮಲ್ ರಾಜಪಕ್ಸಾ
ಸುರಿನಾಮೆ ಸುರಿನಾಮೆ ರಾಷ್ಟ್ರೀಯ ವಿಧಾನಸಭೆ (De Nationale Assemblee) ಚೇರ್ಮನ್ ಜೆನ್ನಿಫರ್ ಸಿಮನ್ಸ್
ಸ್ವೀಡನ್‌‌ ಸಂಸತ್ತು ಸ್ವೀಡನ್ (Riksdag) ಸ್ಪೀಕರ್‌ ಪರ್ ವೆಸ್ಟ್‌ಬರ್ಗ್
ತೈವಾನ್‌ ಲೆಜಿಸ್ಲೇಟಿವ್ ಯುವಾನ್ ಅಧ್ಯಕ್ಷ/ರಾಷ್ಟ್ರಪತಿ ವಾಂಗ್ ಚಿನ್ ಪ್ಯಾಂಗ್
ಥೈಲೆಂಡ್‌‌ ಥೈಲ್ಯಾಂಡ್‌ನ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ ಅಧ್ಯಕ್ಷ/ರಾಷ್ಟ್ರಪತಿ ಚಾಯ್ ಚಿಡ್ಸೋಬ್
ಉಕ್ರೇನ್ ವೆರ್ಕೋವ್ನಾ ರಾಡಾ ಚೇರ್ಮನ್ ವೊಲೊಡಿಮಿಉರ್ ಲಿಟ್ವಿನ್
ಯುನೈಟೆಡ್‌ ಕಿಂಗ್‌ಡಮ್ ಯುನೈಟೆಡ್‌ ಕಿಂಗ್‌ಡಂನ ಹೌಸ್‌ ಆಫ್‌ ಕಾಮನ್ಸ್‌ ಸ್ಪೀಕರ್‌ ಜಾನ್ ಬೆರ್ಕೋ
 ಐಲ್‌ ಆಫ್ ಮ್ಯಾನ್‌ ಹೌಸ್ ಆಫ್ ಕೀಸ್ ಸ್ಪೀಕರ್‌ ಸ್ಟೀವ್ ರೋಡಾನ್
 ಉತ್ತರ ಐರ್ಲೆಂಡ್‌‌ ಉತ್ತರ ಐಲ್ಯಾಂಡ್ ಅಸೆಂಬ್ಲಿ ಸ್ಪೀಕರ್‌ ವಿಲಿಯಮ್ ಹೇ
 ಸ್ಕಾಟ್‌ಲ್ಯಾಂಡ್ ಸ್ಕಾಟಿಶ್ ಸಂಸತ್ತು ಅಧ್ಯಕ್ಷರು ಅಲೆಕ್ಸ್ ಫರ್ಗ್ಯೂಸನ್
 ವೇಲ್ಸ್ ನ್ಯಾಷನಲ್ ಅಸೆಂಬ್ಲಿ ಆಫ್ ವೇಲ್ಸ್ ಅಧ್ಯಕ್ಷರು ಡೇಫಿಡ್ ಎಲಿಸ್-ಥಾಮಸ್
ಅಮೆರಿಕಾ ಸಂಯುಕ್ತ ಸಂಸ್ಥಾನ ಅಮೆರಿಕಾ ಸಂಯುಕ್ತ ಸಂಸ್ಥಾನ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ ಸ್ಪೀಕರ್‌ ಜಾನ್ ಬೋನರ್
ಉರುಗ್ವೆ ಉರುಗ್ವೆಯ ಚೇಂಬರ್ ಆಫ್ ಡೆಪ್ಯೂಟೀಸ್ ಅಧ್ಯಕ್ಷ/ರಾಷ್ಟ್ರಪತಿ ಇವಾನಿ ಪೆಸ್ಸಾಡಾ
ವನೌತು ವನೌತು ಸಂಸತ್ತು ಸ್ಪೀಕರ್‌ ಜಾರ್ಜ್ ಅಂಡ್ರೇ ವೆಲ್ಸ್[೩]
ಜಿಂಬಾಬ್ವೆ ಜಿಂಬಾಬ್ವೆ ಹೌಸ್‌ ಆಫ್ ಅಸೆಂಬ್ಲಿ‌ ಸ್ಪೀಕರ್‌ ಲವ್‌ಮೋರ್ ಮೋಯೊ

ತೀರ್ಮಾನ ಮಾಡುವಿಕೆ[ಬದಲಾಯಿಸಿ]

ಯಾವ ಅನುಕ್ರಮದಲ್ಲಿ ವಿಷಯಗಳನ್ನು ಚರ್ಚೆಗೆ ತೆಗೆದುಕೊಳ್ಳಬೇಕೆಂಬುದನ್ನು ಅಧ್ಯಕ್ಷರು ನಿರ್ಧರಿಸುತ್ತಾರೆ. ಇದರಲ್ಲಿ ಅನೇಕವೇಳೆ ಸಭೆಯ ಮುಖ್ಯಸ್ಥನ (ಲೀಡರ್ ಆಫ್ ದಿ ಹೌಸ್) ಅಭಿಪ್ರಾಯವನ್ನೂ ತೆಗೆದುಕೊಳ್ಳುತ್ತಾರೆ. ಸಭೆಯಲ್ಲಿ ಆಗಬೇಕಾದ ಕಾರ್ಯವೆಷ್ಟಿದೆಯೆಂಬುದನ್ನು ಗಮನಿಸಿ, ಅದಕ್ಕೆ ಅನುಸಾರವಾಗಿ ಸಭೆಯ ಅಧಿವೇಶನ ಪ್ರತಿನಿತ್ಯ ಯಾವಕಾಲದಲ್ಲಿ, ಎಷ್ಟುದಿನ ನಡೆಯಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಅನೇಕ ಸಂದರ್ಭಗಳಲ್ಲಿ ಸದಸ್ಯರ ಭಾಷಣದ ಕಾಲವನ್ನೂ ನಿರ್ಣಯಿಸುತ್ತಾರೆ. ಸದಸ್ಯರು ಪ್ರಶ್ನೆಗಳ ಯುಕ್ತಾಯುಕ್ತತೆ, ಸೂಕ್ತಕಾಲ ಇವನ್ನೆಲ್ಲ, ನಿರ್ಧರಿಸುವವರು ಅಧ್ಯಕ್ಷರು. ಸಭಿಕರು ಮುಂದೊಡ್ಡುವ ಗೊತ್ತುವಳಿಗಳ, ತಿದ್ದುಪಡಿಗಳ ವಿಚಾರದಲ್ಲೂ ಹೀಗೆಯೇ. ಸ್ಥಾಯೀನಿಬಂಧನೆಗಳ ರಚನೆಯಲ್ಲೂ ಲೋಕಸಭೆ ಅಧ್ಯಕ್ಷರ ಅಭಿಪ್ರಾಯಕ್ಕೆ ಹೆಚ್ಚು ಮನ್ನಣೆಕೊಟ್ಟಿದೆ. ಸಭೆಯಲ್ಲಿ ಅಧ್ಯಕ್ಷರ ವರ್ತನೆಯ ಬಗ್ಗೆ ಖಂಡನಾಸೂಚನೆಯನ್ನು ಮಂಡಿಸುವುದಕ್ಕೆ ಸದಸ್ಯರಿಗೆ ಅವಕಾಶವಿದೆ. ಆದರೆ ಇದು ಗುರುತರವಾದ ಲೋಪವಾಗಿರಬೇಕು. ರಾಷ್ಟ್ರದ ಹಿತಕ್ಕೆ, ಸಭೆಯ ಗೌರವಕ್ಕೆ, ಕುಂದುತರುವಂಥಾದ್ದಾಗಿರಬೇಕು. ಇಂಥ ಸೂಚನೆ ಬಂದಿರುವುದು ಒಂದೇ ಸಲ, 1954ರ ಡಿಸೆಂಬರ್ 18ನೆಯ ದಿನ. ಅದರ ಮಂಡನೆಗೆ ಕಾರಣ ಕ್ಷುಲ್ಲಕವಾಗಿತ್ತು. ಆಗ ಜವಾಹರ್‍ಲಾಲ್ ನೆಹರೂರವರು ಕೆರಳಿ, ಮಂಡಿಸಿದವರನ್ನೂ ಅವರ ಬೆಂಬಲಿಗರನ್ನೂ ಉಗ್ರವಾಗಿ ಖಂಡಿಸಿ, ಇಂಥ ಸೂಚನೆಗಳಿಗೆ ಅವಕಾಶವೇನೋ ಇದೆ, ಆದರೆ ಅಧ್ಯಕ್ಷಸ್ಥಾನದ ಗೌರವ, ಶಾಸನಸಭೆಯ ಗೌರವ, ರಾಷ್ಟ್ರ ಗೌರವ- ಇವುಗಳಿಗೆ ಧಕ್ಕೆಯಾಗದಂತೆ ಆ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳುವುದು ಹೇಯ ಕಾರ್ಯ ಎಂದು ಹೇಳಿದರು.

ಪ್ರಾಂತ್ಯ ಶಾಸನಸಭೆಗಳು[ಬದಲಾಯಿಸಿ]

ಪ್ರಾಂತ್ಯ ಶಾಸನಸಭೆಗಳಲ್ಲಿ ಅಧ್ಯಕ್ಷಸ್ಥಾನ ಅಷ್ಟೊಂದು ದೋಷರಹಿತವಾಗಿಲ್ಲ. ಪಕ್ಷಪ್ರತಿಪಕ್ಷಗಳ ಒತ್ತಾಯ, ಸರ್ಕಾರದ ಕೈವಾಡ ಮುಂತಾದ ಕಾರಣಗಳಿಂದ ಅಲ್ಲಿನ ಅಧ್ಯಕ್ಷರ ಕಾರ್ಯ ಸುಗಮವಾಗಿಲ್ಲ. ಆದರೆ ಉಚ್ಚ ಸಂಪ್ರದಾಯಗಳನ್ನು ಬೆಳೆಸಿಕೊಂಡು ಬಂದು, ಹೊರದೇಶಗಳೂ ಮೆಚ್ಚುವಂತೆ ಕಾರ್ಯನಡೆಸುತ್ತ ಬಂದಿರುವ ಲೋಕಸಭಾಧ್ಯಕ್ಷರ ಮೇಲ್ಪಂಕ್ತಿಯಿಂದ ಅಲ್ಲೂ ಪರಿಸ್ಥಿತಿ ಉತ್ತಮಗೊಳ್ಳುತ್ತದೆಂಬುದರಲ್ಲಿ ಸಂಶಯವಿಲ್ಲ.

ಇವನ್ನೂ ಗಮನಿಸಿ[ಬದಲಾಯಿಸಿ]

ಜಾತಿ ವಿಶಿಷ್ಟವಾದ
 • ಕಾಂಗ್ರೆಸ್‌ನ ರಾಷ್ಟ್ರಾಧ್ಯಕ್ಷ
 • ಆಳ್ವಿಕೆಯ ಕೂಟದ ರಾಷ್ಟ್ರಾಧ್ಯಕ್ಷ
 • ರಾಷ್ಟ್ರೀಯ ಕೂಟದ ರಾಷ್ಟ್ರಾಧ್ಯಕ್ಷ
 • ಶಾಸನ ಸಭೆಯ ರಾಷ್ಟ್ರಾಧ್ಯಕ್ಷ
 • ಸಭಾಸದನದ ಸಭಾಧ್ಯಕ್ಷ
 • ಕೂಟ ಸಭಾಸದನದ ಸಭಾಧ್ಯಕ್ಷ
 • ಸಾಮಾನ್ಯರ ಸಭಾಸದನದ ಸಭಾಧ್ಯಕ್ಷ
 • ಪ್ರತಿನಿಧಿಗಳ ಸಭಾಸದನದ ಸಭಾಧ್ಯಕ್ಷ
 • ಆಳ್ವಿಕೆಯ ಕೂಟದ ಸಭಾಧ್ಯಕ್ಷ
 • ರಾಷ್ಟ್ರೀಯ ಕೂಟದ ಸಭಾಧ್ಯಕ್ಷ
 • ಶಾಸನ ಸಭೆಯ ಸಭಾಧ್ಯಕ್ಷ
ನಿರ್ದಿಷ್ಟ
 • ಕ್ಯಾನೆಡದ ಶಾಸನ ಸಭೆಯ ಸಭಾಧ್ಯಕ್ಷ
 • ಒಂಟೊರಿಯೋದ ಆಳ್ವಿಕೆಯ ಕೂಟದ ಸಭಾಧ್ಯಕ್ಷ
 • ಪ್ಯಾಲೆಸ್ಟೀನಿಯದ ಆಳ್ವಿಕೆಯ ಪರಿಷತ್ತಿನ ಸಭಾಧ್ಯಕ್ಷ
 • ಕ್ಯಾಥಾಯೊರ್ಲೆಚ್ (ಐರಿಷ್‌ನ ಶಾಸನ ಸಭೆಯ ಸಭಾಧ್ಯಕ್ಷ)
 • ಸಭಾಧ್ಯಕ್ಷ ಅಧಿಪತಿ (ಸಂಯುಕ್ತ ರಾಜ್ಯದ ಅಧಿಪತಿಗಳ ಸಭಾಸದನದ ಸಭಾಧ್ಯಕ್ಷ)
 • ಶಾಸನ ಸಭೆಯ ಮೇಲ್ವಿಚಾರಕ, ಪೊಲ್ಯಾಂಡ್
 • ಯುರೋಪಿನ ಸಂಸತ್ತಿನ ರಾಷ್ಟ್ರಾಧ್ಯಕ್ಷ
 • ಕ್ಯುಬೆಕ್‌ನ ರಾಷ್ಟ್ರೀಯ ಕೂಟದ ರಾಷ್ಟ್ರಾಧ್ಯಕ್ಷ
 • ರೊಮಾನಿಯದ ಶಾಸನ ಸಭೆಯ ರಾಷ್ಟ್ರಾಧ್ಯಕ್ಷ
 • ಸಂಯುಕ್ತ ರಾಷ್ಟ್ರಗಳ ಶಾಸನ ಸಭೆಯ ಚುನಾವಣೆಯ ಮತಗಟ್ಟೆ ಅಧಿಕಾರಿ
ಐತಿಹಾಸಿಕ
 • ಕಾನೂನು ಸಭಾಧ್ಯಕ್ಷ

ಸಾಹಿತ್ಯ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. ದಿ ಆಸ್ಟ್ರೇಲಿಯನ್. (2010-08-31). ಮತದಾರರ ಮೇಲೆ ಸ್ವತಂತ್ರ ಸಭಾಧ್ಯಕ್ಷ ಯೋಗ್ಯವಲ್ಲ, ಶಾಸನ ಸಭೆಯ ಗುಮಾಸ್ತರು ಎಚ್ಚರಿಕೆ ನಿಡುತ್ತಾರೆ. ಮರುಕಳಿಸಲಾಯಿತು 2010-08-31.
 2. ಅಖಿಲ್ ರೀಡ್ ಅಮರ್ ಹಾಗೂ ವಿಕ್ರಮ್ ಅಮರ್ ಅನ್ನು ನೋಡಿ, ರಾಷ್ಟ್ರಾಧ್ಯಕ್ಷನ ಉತ್ತರಾಧಿಕಾರದ ನಿಯಮ ಸಂಸತ್ತಿನ ಅನುಗುಣವಾಗಿದಿಯೆ? , 48 ಸ್ಟಾನ್. ಎಲ್. ರೆವ್. 113 (1995). ಸಂಯುಕ್ತ ರಾಷ್ಟ್ರಗಳ ರಾಷ್ಟ್ರಾಧ್ಯಕ್ಷ ಉತ್ತರಾಧಿಕಾರದ ಹಾದಿಯಲ್ಲಿನ ಸೇರ್ಪಡೆಗಳಲ್ಲಿ ಈ ಸಮಸ್ಯೆಯನ್ನು ಚರ್ಚಿಸಲಾಗಿದೆ.
 3. "01 September confirmed as date for Vanuatu Presidential Election". Islands Business. 2009-09-02. Archived from the original on 2012-02-23. Retrieved 2009-08-20.