ಮಕಾವು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Macau Special Administrative Region of the People's Republic of China[೧]
中華人民共和國澳門特別行政區

Região Administrativa Especial de Macau da República Popular da China
Macau ದೇಶದ ಧ್ವಜ Macau ದೇಶದ Regional Emblem
ಧ್ವಜ Coat_of_arms
ರಾಷ್ಟ್ರಗೀತೆ: March of the Volunteers

Location of Macau

ರಾಜಧಾನಿ
22°10′N 113°33′E
freguesia (population) Freguesia de Nossa Senhora de Fátima
ಅಧಿಕೃತ ಭಾಷೆ(ಗಳು) Chinese, Portuguese[೨]
ಸರಕಾರ
 - Chief Executive Fernando Chui Sai On
 - President of the
Court of Final Appeal
Sam Hou Fai
 - President of the
Legislative Assembly
Lau Cheok Va
Establishment  
 - Portugal-administered trading post 1557 
 - Portuguese colony 1 December 1887 
 - Transfer of sovereignty to the PRC
20 December 1999 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ {{{area}}} ಚದರ ಕಿಮಿ ;  (224th)
  {{{areami²}}} ಚದರ ಮೈಲಿ 
 - ನೀರು (%) 0
ಜನಸಂಖ್ಯೆ  
 - 2009 (3rd qtr)ರ ಅಂದಾಜು 541,200[೩] (165th)
 - 2000ರ ಜನಗಣತಿ 431,000
 - ಸಾಂದ್ರತೆ {{{population_density}}} /ಚದರ ಕಿಮಿ ;  (1st)
{{{population_densitymi²}}} /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2006ರ ಅಂದಾಜು
 - ಒಟ್ಟು US$17,600 m (99th)
 - ತಲಾ  ([[ತಲಾವಾರು ಒಟ್ಟಾರೆ ಆಂತರಿಕ ಉತ್ಪನ್ನದ ಪಟ್ಟಿ|]])
ಮಾನವ ಅಭಿವೃದ್ಧಿ
ಸೂಚಿಕ
(2004)
Steady0.909[೪] (28th) – high
ಕರೆನ್ಸಿ Macanese pataca (MOP$) (MOP)
ಸಮಯ ವಲಯ MST (UTC+8)
ಅಂತರ್ಜಾಲ TLD .mo
ದೂರವಾಣಿ ಕೋಡ್ ++853

Coordinates: 22°10′00″N 113°33′00″E / 22.16667°N 113.55000°E / 22.16667; 113.55000

ಮಕಾವು ಸಂಕ್ಷಿಪ್ತ ವಿವರಣೆ[ಬದಲಾಯಿಸಿ]

ಮಕಾವು ವಿಶೇಷ ಆಡಳಿತದ ಪ್ರದೇಶ (Chinese: 澳門特別行政區; pinyin: Àomén Tèbié Xíngzhèngqū; Cantonese Yale: Oumun Dakbit Hangjeng Keui; ಪೋರ್ಚುಗೀಸ್:Região Administrativa Especial de Macau), ಸಾಮಾನ್ಯವಾಗಿ ಮಕಾವು ಅಥವಾ ಮಕಾವೊ ಎಂದು ಪರಿಚಿತ (pronounced /məˈkaʊ/, simplified Chinese: 澳门; traditional Chinese: 澳門; Mandarin Pinyin: Àomén; Jyutping: ou3 mun4). ಇದು ಪೀಪಲ್ಸ್ ರಿಪಬ್ಲಿಕ್ ಅಫ್ ಚೈನಾದ ಎರಡು ವಿಶೇಷ ಆಡಳಿತದ ಪ್ರದೇಶ ಗಳಲ್ಲಿ ಒಂದು; ಮತ್ತೊಂದು ಹಾಂಗ್ ಕಾಂಗ್. ಮಕಾವು ಪರ್ಲ್ ನದಿ ಮುಖಜ ಭೂಮಿಯ ಪಶ್ಚಿಮ ಭಾಗದಲ್ಲಿದೆ. ಇದು ಉತ್ತರ ಭಾಗದಲ್ಲಿ ಗೌಂಗ್‌ಡೊಂಗ್ ಪ್ರದೇಶದ ಗಡಿ ಭಾಗದಲ್ಲಿದೆ ಮತ್ತು ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ದಕ್ಷಿಣ ಚೀನಾ ಸಮುದ್ರಕ್ಕೆ ಅಭಿಮುಖವಾಗಿದೆ.[೫] ಈ ಪ್ರದೇಶವು ಬೆಳೆಯುತ್ತಿರುವ ಕೈಗಾರಿಕೆಗಳನ್ನು ಹೊಂದಿದೆ. ಅವುಗಳೆಂದರೆ ಟೆಕ್ಸ್‌ಟೈಲ್‌ಗಳು, ಎಲೆಕ್ಟ್ರಾನಿಕ್‌ ಸಾಧನಗಳು ಮತ್ತು ಆಟಿಕೆಗಳು ಮತ್ತು ಇದು ಒಂದು ಗಮನಾರ್ಹವಾದ ಪ್ರವಾಸಿ ಉದ್ಯಮವನ್ನು ಹೊಂದಿದೆ. ಇದು ಪ್ರಪಂಚದಲ್ಲಿ ಅತಿ ಶ್ರೀಮಂತವಾದ ನಗರಗಳಲ್ಲಿ ಒಂದು.[೬]

ಮಕಾವು ಚೀನಾದಲ್ಲಿನ ಮೊದಲ ಮತ್ತು ಅಂತಿಮವಾದ ಯುರೋಪಿಯನ್‌ ವಸಾಹತು ಪ್ರದೇಶ.[೭][೮] ಫೋರ್ಚುಗೀಸ್ ವರ್ತಕರು ಮಕಾವುನಲ್ಲಿ ಮೊದಲು ೧೬ನೇ ಶತಮಾನದಲ್ಲಿ ನೆಲೆಗೊಂಡರು ಮತ್ತು ಅನಂತರ ಪ್ರದೇಶವನ್ನು 20 ಡಿಸೆಂಬರ್ 1999ರಂದು ಚೀನಾಗೆ ಒಪ್ಪಿಸುವವರೆಗೆ ಆಡಳಿತ ನಡೆಸಿದರು. ಸೈನೋ-ಫೋರ್ಚುಗೀಸ್ ಜಂಟಿ ಘೋಷಣೆ ಮತ್ತು ಮಕಾವುವಿನ ಮೂಲ ಕಾನೂನು, ಮಕಾವು ಉನ್ನತ ಮಟ್ಟದ ಸ್ವತಂತ್ರ ಆಧಿಕಾರದಿಂದ ೨೦೪೯ರ ವರೆಗೆ, ಅಂದರೆ ಹಸ್ತಾಂತರದಿಂದ ಐವತ್ತು ವರ್ಷಗಳವರೆಗೆ, ಕಾರ್ಯ ನಿರ್ವಹಿಸುತ್ತದೆ ಎಂದು ಖಚಿತವಾಗಿ ನಿರ್ಣಯ ಮಾಡಿದೆ.[೯]

"ಒಂದು ದೇಶ, ಎರಡು ವ್ಯವಸ್ಥೆಗಳು" ಎಂಬ ಕಾಯಿದೆ ಆಡಿಯಲ್ಲಿ, ಸೆಂಟ್ರಲ್ ಪೀಪಲ್ಸ್ ಸರ್ಕಾರವು ಕ್ಷೇತ್ರದ ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರಗಳಿಗೆ ಹೊಣೆಯಾಗಿರುತ್ತದೆ, ಹಾಗೆ ಮಕಾವು ಅದರ ಸ್ವಂತ ಕಾನೂನು ವ್ಯವಸ್ಥೆ, ಪೋಲಿಸ್ ಪಡೆ, ಆರ್ಥಿಕ ವ್ಯವಸ್ಥೆ, ಕಸ್ಟಮ್ ಕಾಯಿದೆ, ವಲಸೆ ಕಾಯಿದೆ, ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳು ಮತ್ತು ಘಟನೆಗಳ ಪ್ರತಿನಿಧಿ/ಸದಸ್ಯರನ್ನು ನಿರ್ವಹಿಸುತ್ತಾ ಬಂದಿದೆ.[೯][೧೦]

ಶಬ್ದ ವ್ಯುತ್ಪತ್ತಿ ಶಾಸ್ತ್ರ[ಬದಲಾಯಿಸಿ]

Main article: Names of Macau

ಪೋರ್ಚುಗೀಸರು ಬಂದು ಉಳಿಯುವುದಕ್ಕಿಂತ ಮೊದಲು ೧೬ನೇ ಶತಮಾನದ ಆರಂಭದಲ್ಲಿ, ಮಕಾವು ಹೌಜಿಂಗ್ (Oyster Mirror/ಮೃದ್ವಂಗಿ ಕನ್ನಡಿ) ಅಥವಾ ಜಿಂಗ್‌ಹೈ (Mirror Sea/ಕನ್ನಡಿ ಸಮುದ್ರ) ಎಂದು ಪರಿಚಿತವಾಗಿತ್ತು. [೧೧] ಮಕಾವು ಹೆಸರು A-Ma Temple ನ ಮೂಲದಿಂದ ಹುಟ್ಟಿದೆ ಎಂದು ಭಾವಿಸಲಾಗಿದೆ(Chinese: 媽閣廟; Jyutping: Maa1 Gok3 Miu6). ೧೪೪೮ರಲ್ಲಿ ಕಟ್ಟಿದ ನೌಕಾ ಯಾತ್ರಿಕರ ಮತ್ತು ಮೀನುಗಾರರ ದೇವತೆ ಮಾಟ್ಸು ಗೆ ಅರ್ಪಿಸಲಾದ ಒಂದು ದೇವಸ್ಥಾನ ಅದು. ಪೋರ್ಚುಗೀಸರು ನಾವಿಕರು ದೇವಸ್ಥಾನದ ಪಕ್ಕದ ತೀರದಲ್ಲಿ ಬಂದು ಇಳಿದರು ಮತ್ತು ಆ ಸ್ಥಳದ ಹೆಸರನ್ನು ಕೇಳಿದಾಗ, ಅಲ್ಲಿನ ಸ್ಥಳಿಯರು "媽閣" (Jyutping: "Maa1 Gok3") ಉತ್ತರಿಸಿದರು ಎಂದು ಹೇಳಲಾಗುತ್ತದೆ. ಪೋರ್ಚುಗೀಸರು ಅನಂತರ ಆ ಪರ್ಯಾಯ ದ್ವೀಪವನ್ನು "ಮಕಾವು" ಎಂದು ಹೆಸರಿಸಿದರು.[೧೨] ಪ್ರಸ್ತುತದ ಚೈನೀಸ್ ಹೆಸರು 澳門 (Mandarin Pinyin: Àomén; Jyutping: Ou3 Mun4) "ಕಡಲ ಚಾಚು ಪ್ರವೇಶ ದ್ವಾರ" ಎಂದು ಅರ್ಥ ಕೊಡುತ್ತದೆ.

ಇತಿಹಾಸ[ಬದಲಾಯಿಸಿ]

ಮಕಾವುವಿನ ಇತಿಹಾಸ ಕ್ವಿನ್ ರಾಜ ಮನೆತನದಷ್ಟು (೨೨೧–೨೦೬ BC) ಹಿಂದಿನದು ಎಂದು ಗುರುತಿಸಲಾಗಿದೆ, ಈಗ ಮಕಾವು ಎಂದು ಕರೆಯಲ್ಪಡುವ ಪ್ರದೇಶವು ಆಗ ನನ್ಹಿ ಆಡಳಿತಾಧಿಕಾರಿಯ ಅಧಿಕಾರಾವಧಿಯಲ್ಲಿ ಪನ್ಯೂ ಕೌಂಟಿಯ ಆಡಳಿತ ವ್ಯಾಪ್ತಿಯ ಅಡಿಯಲ್ಲಿತ್ತು. (ಇಂದಿನ ಗುಯಂಗ್‌ಡುಂಗ್).[೧೧] ದಕ್ಷಿಣ ಸಾಂಗ್ ಮನೆತನದ ಕಾಲದಲ್ಲಿ ದಾಳಿಮಾಡುವ ಮಂಗೊಲ್ಸ್‌ನಿಂದ ರಕ್ಷಣೆ ಪಡೆಯಲು ಮಕಾವುಗೆ ಬಂದು ಸೇರಿ ಅಲ್ಲಿ ವಸತಿ ಮಾಡಿದ ಜನರು ಅಲ್ಲಿನ ಮೊದ ದಾಖಲಿತ ನಿವಾಸಿಗಳು.[೧೩] ಮಿಂಗ್ ಮನೆತನದ ಆಳ್ವಿಕೆಯ ಕಾಲದಲ್ಲಿ (೧೩೬೮–೧೬೪೪ AD), ಮೀನುಗಾರರು ಗುಯಂಗ್‌ಡುಂಗ್ ಮತ್ತು ಫ್ಯುಜಿಯನ್ ಕ್ಷೇತ್ರಗಳಿಂದ ಮಕಾವುವಿಗೆ ವಲಸೆ ಬಂದರು.

೧೬ನೆ ಶತಮಾನದಲ್ಲಿ ಪೋರ್ಚುಗೀಸರು ಬರುವವರೆಗೆ ಮಕಾವು ಒಂದು ಪ್ರಮಖ ವಸಾಹತುವಾಗಿ ಅಭಿವೃದ್ಧಿ ಹೊಂದಿರಲಿಲ್ಲ. [೧೪] ೧೫೩೫ರಲ್ಲಿ, ಪೋರ್ಚುಗೀಸ್ ವ್ಯಾಪಾರಿಗಳು ಮಕಾವುವಿನ ಬಂದರುಗಳಲ್ಲಿ ಹಡಗುಗಳಿಗೆ ಲಂಗರು ಹಾಕುವ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ನಡೆಸುವ ಹಕ್ಕನ್ನು ಪಡೆದು ಕೊಂಡರು. ಆದರೂ ತೀರದಲ್ಲಿ ವಾಸಿಸುವ ಹಕ್ಕನ್ನು ಪಡೆಯಲಿಲ್ಲ.[೧೫] ೧೫೫೨–೧೫೫೩ರ ಅಸುಪಾಸಿನಲ್ಲಿ, ಸಮುದ್ರದ ನೀರಿನಿಂದ ಒದ್ದೆಯಾದ ವಸ್ತುಗಳನ್ನು ಒಣಗಿಸುವ ಸಲುವಾಗಿ, ಕಡಲ ತೀರದಲ್ಲಿ ತಾತ್ಕಾಲಿಕವಾಗಿ ಉಗ್ರಾಣ ಷೆಡ್ಡುಗಳನ್ನು ನಿಲ್ಲಿಸುವ ಹಕ್ಕನ್ನು ಅವರು ಪಡೆದು ಕೊಂಡರು;[೧೬] ಅವರು ಸ್ವಲ್ಪ ಸಮಯದಲ್ಲೇ ಈಗ ನಾಮ್‌ವ್ಯಾನ್ ಎಂದು ಕರೆಯುವ ಪ್ರದೇಶದಲ್ಲಿ ಮೊತ್ತ ಮೊದಲಿನ ಕಲ್ಲಿನ ಮನೆಗಳನ್ನು ಕಟ್ಟಿದರು. ೧೫೫೭ರಲ್ಲಿ , ಬೆಳ್ಳಿಯ ೫೦೦ taelಗಳ ವಾರ್ಷಿಕ ಬಾಡಿಗೆಯನ್ನು ನೀಡುವುದರ ಮೂಲಕ, ಪೋರ್ಚುಗೀಸರು ಮಕಾವುವಿನಲ್ಲಿ ಒಂದು ಖಾಯಂ ವಸಹಾತುವನ್ನು ಸ್ಥಾಪಿಸಿದರು.[೧೬]

ಸೆಂ. ಪೌಲ್‌ನ ಪ್ರಧಾನ ಇಗರ್ಜಿಯ, ಅವಶೇಷಗಳು, ಜಾರ್ಜ್ ಚಿನ್ನೆರಿ ಮೂಲಕ (1774–1852). ಪ್ರಧಾನ ಇಗರ್ಜಿಯನ್ನು 1602ರಲ್ಲಿ ಕಟ್ಟಲಾಗಿತ್ತು ಮತ್ತು 1835ಯಲ್ಲಿ ಬೆಂಕಿಯಿಂದ ನಾಶವಾಯಿತು. ಇಂದು ದಕ್ಷಿಣ ದ ಕಲ್ಲಿನ ಮುಂಭಾಗ ಮಾತ್ರ ಉಳಿದಿದೆ.
ಮಕಾವು, ಸಿಎ. 1870

ವ್ಯಾಪಾರದಲ್ಲಿ ತೊಡಗಿಸಿ ಕೊಳ್ಳಲು ಹೆಚ್ಚು ಹೆಚ್ಚು ಮಕಾವುವಿನಲ್ಲಿ ಪೋರ್ಚುಗೀಸರು ನೆಲೆಗೊಂಡ ಹಾಗೆಲ್ಲಾ, ಅವರು ಸ್ವಂತ-ಆಡಳಿತಕ್ಕೆ ಬೇಡಿಕೆಗಳನ್ನು ಮಾಡಿದರು; ಆದರೆ ಇದು ೧೮೪೦ರ ವರೆಗೆ ನೆರವೇರಲಿಲ್ಲ.[೧೭] ೧೫೭೬ರಲ್ಲಿ, ಪೋಪ್ ಜಾರ್ಜ್ XIII ರೋಮನ್ ಕ್ಯಾಥೋಲಿಕ್ ಡಯಸಿಸ್ ಅಫ್ ಮಕಾವುವನ್ನು ಸ್ಥಾಪಿಸಿದರು.[೧೮] ೧೫೮೩ರಲ್ಲಿ, ಚೀನಾದ ಪ್ರಾಧಿಕಾರದ ಬಿಗಿ ಮೇಲ್ವಿಚಾರಣೆ ಆಡಿಯಲ್ಲಿ, ಪೋರ್ಚುಗೀಸ ರು ಮಕಾವುವಿನಲ್ಲಿ ಅವರ ಸಾಮಾಜಿಕ ಮತ್ತು ಆರ್ಥಿಕ ಘಟನೆಗಳಿಗೆ ಸಂಬಂಧಿಸಿದ ಹಲವು ವಿಷಯಗಳನ್ನು ನಿಭಾಯಿಸಲು ಒಂದು ಸೆನೆಟ್‌ನ್ನು ರಚಿಸಲು ಅನುಮತಿಸಲಾಯಿತು,[೧೯] ಆದರೆ ಅಲ್ಲಿ ಸಾರ್ವಭೌಮತೆಯ ವರ್ಗಾವಣೆಯಿರಲಿಲ್ಲ.[೧೩] ಮಕಾವು ಒಂದು ಬಂದರು ಆಗಿ ಅಭಿವೃದ್ಧಿ ಹೊಂದಿತು, ಆದರೆ ೧೭ನೆ ಶತಮಾನದಲ್ಲಿ ಅದನ್ನು ಜಯಗಳಿಸಲು ಡಚ್ಚ‌ರ ಪುನರಾವರ್ತಿತ ವಿಫಲ ಪ್ರಯತ್ನಗಳಿಗೆ ಮಕಾವು ಗುರಿಯಾಗಿತ್ತು.

ಅಫೀಮು ಯುದ್ಧದ (೧೮೩೯–೪೨) ನಂತರ, ಫೋರ್ಚುಗಲ್ ೧೮೫೧ ಮತ್ತು ೧೮೬೪ರಲ್ಲಿ ಕ್ರಮವಾಗಿ ತೈಪಾ ಮತ್ತು ಕೊಲೊಯೆನ್ ಗಳನ್ನು ವಶಪಡಿಸಿಕೊಂಡಿತು. ಡಿಸೆಂಬರ್ ೧, ೧೮೮೭ರಲ್ಲಿ ಕ್ವಿಂಗ್ ಮತ್ತು ಸೈನೋ-ಫೋರ್ಚುಗೀಸ್ ಸರ್ಕಾರ ಗೆಳೆತನ ಮತ್ತು ವಾಣಿಜ್ಯ ಒಪ್ಪಂದಕ್ಕೆ ಸಹಿ ಮಾಡಿದವು, ಅದರ ಆಡಿಯಲ್ಲಿ ಚೀನಾ ಲಿಸ್ಬನ್‌ನ ಪ್ರೋಟೊಕಾಲ್‌ನ ಹೇಳಿಕೆಗಳ ಜೊತೆ ಅನುಸರಣೆಯಲ್ಲಿ "ನಿರಂತರ ಆಕ್ರಮಣ ಮತ್ತು ಪೋರ್ಚುಗಲ್‌ನಿಂದ ಮಕಾವು ಸರ್ಕಾರ"ದ ಹಕ್ಕನ್ನು ಬಿಟ್ಟುಕೊಟ್ಟಿತು. ಪ್ರತ್ಯುತ್ತರವಾಗಿ, ಮಕಾವು ಸರ್ಕಾರ ಹಾಂಗ್‌ ಕಾಂಗ್‌ನ ಭಾರತೀಯ ಅಫೀಮು ಕಳ್ಳ ಸಾಗಣಿಕೆಗೆ ಸಹಕರಿಸಬೇಕು ಮತ್ತು ಆಮದು/ರಫ್ತಿನ ತೆರಿಗೆಯ ಮೂಲಕ ಚೀನಾ ಲಾಭಗಳನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಿಸಬೇಕಾಗಿತ್ತು. ಚೀನಾದೊಂದಿಗಿನ ಹಿಂದಿನ ಒಪ್ಪಂದ ಹೊರತಾಗಿ, ಎಂದಿಗೂ ಮಕಾವುವನ್ನು ಪರಾಭಾರೆ ಮಾಡಬಾರದು" ಎಂದು ಪೋರ್ಚುಗಲ್‌ಗೆ ನಿರ್ಬಂಧ ಪಡಿಸಿತು, ಆದ್ದರಿಂದ ಇದು ಫೋರ್ಚುಗಲ್ ಮತ್ತು ಫ್ರಾನ್ಸ್ ನಡುವಿನ (ಫ್ರೆಂಚ್ ಕಾಂಗೋ ಜೊತೆ ಮಕಾವು ಮತ್ತು ಗೀನಿಯಾದ ಪರಸ್ಪರ ಬದಲಾವಣೆಯ ಒಂದು ಸಾಧ್ಯತೆಗೆ ಸಂಬಂಧ ಪಟ್ಟಂತೆ) ಅಥವಾ ಇತರೆ ದೇಶಗಳ ನಡುವಿನ ಸಮಾಲೋಚನೆಗಳು ಮುಂದುವರಿಯುವುದಿಲ್ಲ ಎಂಬುದನ್ನು ಖಚಿತ ಪಡಿಸಿತು - ಅದರಿಂದ ಬ್ರಿಟಿಷ್ ವಾಣಿಜ್ಯ ಆಸಕ್ತಿಗಳು ಸುರಕ್ಷಿತವಾಗಿರುತ್ತವೆ; ಮಕಾವು ಆಧಿಕೃತವಾಗಿ ಪೋರ್ಚುಗಲ್‌ನ ಕ್ಷೇತ್ರವಾಯಿತು.[೧೩]"

೧೯೨೮ರಲ್ಲಿ, Xinhai ಕ್ರಾಂತಿಯು ಕ್ವಿಂಗ್ ಮನೆತನವನ್ನು ಪದಚ್ಯುತಿ ಗೊಳಿಸಿದ ನಂತರ, ಕ್ಯೊಮಿಂಟಾಂಗ್ (KMT) ಸರ್ಕಾರ ಅದು ಗೆಳೆತನ ಮತ್ತು ವಾಣಿಜ್ಯ ಒಪ್ಪಂದವನ್ನು ತೆಗೆದು ಹಾಕಿರುವುದಾಗಿ ಪೋರ್ಚುಗಲ್‌ಗೆ ಆಧಿಕೃತವಾಗಿ ತಿಳಿಸಿತು[೨೦]; ನಂತರ ಈ ಎರಡು ಬಣಗಳು ತೆಗೆದು ಹಾಕಿದ ಒಪ್ಪಂದದ ಬದಲಿಗೆ ಒಂದು ಹೊಸ ಸೈನೋ- ಫೋರ್ಚುಗೀಸ್ ಗೆಳೆತನ ಮತ್ತು ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಿದವು. ಇದರಲ್ಲಿ ಆಮದು ರಫ್ತು ಸುಂಕದ ಸಿದ್ಧಾಂತಗಳು ಮತ್ತು ವಾಣಿಜ್ಯ ಸಂಗತಿಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಕಾಳಜಿ ವಹಿಸುವ ಕೆಲವು ಕರಾರುಗಳನ್ನು ಮಾತ್ರ ರಚಿಸಲಾಯಿತು. ಆದರೆ ಈ ಹೊಸ ಒಪ್ಪಂದ ಮಾಕಾವುವಿನ ಏಕಸಾಮತ್ಯೆಯನ್ನು ಮಾರ್ಪಡಿಸಲಿಲ್ಲ ಮತ್ತು ಮಕಾವುವಿನ ಫೋರ್ಚುಗೀಸ್ ಸರ್ಕಾರ ಬದಲಾವಣೆಯಿಲ್ಲದೆ ಉಳಿಯಿತು.[೨೧]

೧೯೪೯ರಲ್ಲಿ ಪೀಪಲ್ಸ್ ರಿಪಬ್ಲಿಕ್ ಅಫ್ ಚೈನಾದ ಸ್ಥಾಪನೆಯ ನಂತರ, ಬಿಜಿಂಗ್ ಸರ್ಕಾರ ಗೆಳೆತನ ಮತ್ತು ವಾಣಿಜ್ಯದ ಸೈನೋ-ಫೋರ್ಚುಗೀಸ್ ಒಪ್ಪಂದವನ್ನು ವಿದೇಶಿಯರು ಚೀನಾದ ಮೇಲೆ ಹೇರಿದ ಒಂದು "ಅಸಮಾನ ಒಪ್ಪಂದ"ವೆಂದು, ಅದನ್ನು ಅಸಿಂಧು ಎಂದು ಘೋಷಿಸಿತು. ಆದ್ಯಾಗಿಯೂ, ಬೀಜಿಂಗ್ ಒಪ್ಪಂದದ ಪ್ರಶ್ನೆಯನ್ನು ತೀರ್ಮಾನಿಸಲು ಸಿದ್ಧವಿರಲಿಲ್ಲ, ಹಾಗೂ ಅದು ಪ್ರಶಸ್ತ ಸಮಯಕ್ಕಾಗಿ ಕಾಯುವ ತೀರ್ಮಾನ ತೆಗೆದುಕೊಂಡು, ಆ ಒಪ್ಪಂದವನ್ನು ಪ್ರಸ್ತುತದಲ್ಲಿರುವಂತೆಯೇ ಉಳಿಸಿಕೊಳ್ಳಲು ತೀರ್ಮಾನಿಸಿತು.[೨೨]

ಮುಖ್ಯ ಭೂಮಿ ಚೀನಾದಲ್ಲಿನ ಸಂಸ್ಕೃತಿಕ ಕ್ರಾಂತಿಯಿಂದ ಪ್ರಭಾವಗೊಂಡು ಮತ್ತು ಪೋರ್ಚುಗಲ್ ಸರ್ಕಾರದ ಜೊತೆಗಿನ ಒಟ್ಟಾರೆ ಅಸಮಾಧಾನದಿಂದ, ೧೯೬೬ರಲ್ಲಿ ಮಕಾವುನಲ್ಲಿ ದಂಗೆ ಶುರುವಾಯಿತು. ಅದರಲ್ಲಿ 12-3 ಘಟನೆ ಎಂದು ಕರೆಯಲ್ಪಡುವ ಘಟನೆ ಹೆಚ್ಚು ಗಂಭೀರವಾದದ್ದು. ಅದರಲ್ಲಿ ೬ ಜನ ಕೊಲ್ಲಲ್ಪಟ್ಟರು ಮತ್ತು ೨೦೦ಕ್ಕೂ ಹೆಚ್ಚು ಜನ ಗಾಯಗೊಂಡರು.[೨೩][೨೪] ೨೮ ಜನವರಿ ೧೯೬೭ರಂದು, ಪೋರ್ಚುಗೀಸ್ ಸರ್ಕಾರ ಆಧಿಕೃತ ಕ್ಷಮೆಯನ್ನು ಘೋಷಿಸಿತು.

ಲಿಬ್ಸನ್‌ನಲ್ಲಿ 1974ರಲ್ಲಿ ಸಲಜರ್ ಸರ್ವಾಧಿಕಾರ ಪತನದ ಸ್ವಲ್ಪ ಕಾಲದ ನಂತರ, ಹೊಸ ಪೋರ್ಚುಗೀಸ್ ಸರ್ಕಾರ ಅದು ತನ್ನ ಎಲ್ಲಾ ಕಡಲಾಚೆಯ ಒಡೆತನಗಳನ್ನು/ಸ್ವಾಧೀನಗಳನ್ನು ತ್ಯಜಿಸುವುದಾಗಿ ನಿರ್ಧರಿಸಿತು. ೧೯೭೬ರಲ್ಲಿ, ಲಿಬ್ಸನ್ ಮಕಾವುವನ್ನು ಒಂದು "ಪೋರ್ಚುಗೀಸ್ ಆಡಳಿತದ ಅಡಿಯ ಚೀನಾದ ಪ್ರಾಂತ್ಯ" ಎಂದು ಪುನರ್‌ ವ್ಯಾಖ್ಯಾನಿಸಿತು ಮತ್ತು ಆಡಳಿತದ ವಾಣಿಜ್ಯ ಮತ್ತು ಆರ್ಥಿಕ ಸ್ವತಂತ್ರ ಅಧಿಕಾರವನ್ನು ನೀಡಿತು. ಮೂರು ವರ್ಷದ ನಂತರ, ಪೋರ್ಚುಗಲ್ ಮತ್ತು ಚೀನಾ ಮಕಾವುವನ್ನು "(ತಾತ್ಕಾಲಿಕ) ಪೋರ್ಚುಗೀಸ್ ಆಡಳಿತ ದ ಅಡಿಯಲ್ಲಿ ಒಂದು ಚೀನಾದ ಪ್ರದೇಶ" ಎಂದು ಮನ್ನಣೆ ನೀಡಿದವು.[೧೩][೨೫] ಜೂನ್ ೧೯೮೬ರಲ್ಲಿ ಚೀನಾ ಮತ್ತು ಫೋರ್ಚುಗೀಸ್ ಸರ್ಕಾರ ಮಕಾವುವಿನ ಪ್ರಶ್ನೆಯ ಮೇಲೆ ಸಮಾಲೋಚನೆಗಳನ್ನು ಪ್ರಾರಂಭಿಸಿದವು. ಮುಂದಿನ ವರ್ಷ ಮಕಾವುವನ್ನು ಚೀನಾದ ಒಂದು ವಿಶೇಷ ಆಡಳಿತದ ಪ್ರದೇಶ (SAR) ಎಂದು ರಚಿಸಿ ಎರಡು ಸೈನೋ-ಪೋರ್ಚುಗೀಸ್ ಜಂಟಿ ಘೊಷಣೆಗೆ ಸಹಿ ಹಾಕಿದವು.[೨೬] ೨೦ ಡಿಸೆಂಬರ್ ೧೯೯೯ರಂದು, ಚೀನಾದ ಸರ್ಕಾರ ಮಕಾವು ಮೇಲೆ ಅಧಿಕೃತ ಏಕ ಸಾಮತ್ಯೆಯನ್ನು ಹೊಂದಿತು.[೨೭]

ಸರಕಾರ ಮತ್ತು ರಾಜಕೀಯ[ಬದಲಾಯಿಸಿ]

ಮಕಾವು ಸರ್ಕಾರದ ಕೇಂದ್ರ ಕಛೇರಿ, ಹಿಂದೆ 1999ರವರೆಗೆ ಗವರ್ನರ್ ಮನೆಯಾಗಿತ್ತು.
ಮಕಾವುವಿನ ಶಾಸನ ಸಭೆಯ ಕಛೇರಿ ಕಟ್ಟಡ.

ಸೈನೋ-ಫೋರ್ಚುಗೀಸ್ ಜಂಟಿ ಘೊಷಣೆ ಮತ್ತು ಮೂಲ ಕಾನೂನು, ಮಕಾವುವಿನ ಸಂವಿಧಾನ ೧೯೯೩ರಲ್ಲಿ ಚೀನಾದ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್‌‌ನಿಂದ ಘೋಷಿಸಲ್ಪಟ್ಟಿತು. ೧೯೯೯ರಲ್ಲಿ ಏಕಸಾಮ್ಯತೆಯನ್ನು ಚೀನಾಗೆ ವರ್ಗಾಯಿಸಿದ ನಂತರ ಕನಿಷ್ಟ ೫೦ ವರ್ಷಗಳಾದರೂ ಮಕಾವುವಿನ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆ, ಜೀವನ ಶೈಲಿ, ಹಕ್ಕುಗಳು, ಮತ್ತು ಸ್ವಾತಂತ್ರಗಳು ಬದಲಾಗದೆ ಹಾಗೆ ಉಳಿಯಬೇಕು ಎಂದು ಖಚಿತ ಪಡಿಸಿತು.[೯] "ಒಂದು ದೇಶ,ಎರಡು ವ್ಯವಸ್ಥೆಗಳು" ಸಿದ್ಧಾಂತದಡಿಯಲ್ಲಿ, ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರಗಳನ್ನು ಹೊರತು ಪಡಿಸಿ ಮಕಾವು ಎಲ್ಲಾ ಕ್ಷೇತ್ರಗಳಲ್ಲಿ ಒಂದು ಉನ್ನತ ಮಟ್ಟದ ಸ್ವತಂತ್ರ ಅಧಿಕಾರವನ್ನು ಅನುಭವಿಸುತ್ತದೆ.[೯] ಮಕಾವುವಿನ ಆಧಿಕಾರಿಗಳು, ಹೆಚ್ಚಾಗಿ PRC ಆಧಿಕಾರಿಗಳು, ಪ್ರತ್ಯೇಕ ಕಾರ್ಯಾಂಗ, ಶಾಸಕಾಂಗ, ಮತ್ತು ನ್ಯಾಯಾಂಗ ದ ಅಧಿಕಾರಗಳನ್ನು, ಹಾಗೆಯೇ ವಾಣಿಜ್ಯ ತೀರ್ಮಾನದ ಹಕ್ಕನ್ನು ಬಳಸುವುದರ ಮೂಲಕ ಮಕಾವುವನ್ನು ನಡೆಸುತ್ತಾರೆ.[೨೮] ಮಕಾವು ತನ್ನದೇ ಆದ ಸ್ವಂತ ನಾಣ್ಯಪದ್ಧತಿ, ತೆರಿಗೆ ಕ್ಷೇತ್ರ, ವಲಸೆ ಮತ್ತು ಗಡಿ ನಿಯಂತ್ರಣಗಳು, ಮತ್ತು ಪೋಲಿಸ್ ಬಣಗಳನ್ನು ಹೊಂದಿದೆ.[೨೯][೩೦]

ಮುಖ್ಯ ಕಾರ್ಯನಿರ್ವಾಹಕ ಆಧಿಕಾರಿ ಮಕಾವುವಿನಲ್ಲಿ ಸರ್ಕಾರದ ನಾಯಕತ್ವ ವಹಿಸುತ್ತಾರೆ. ಅವರನ್ನು ಕೇಂದ್ರ ಸರ್ಕಾರ ಒಂದು ಚುನಾವಣಾ ಕಮಿಟಿಯ ಶಿಫಾರಿಸ್ಸಿನ ಮೇಲೆ ನೇಮಕ ಮಾಡುತ್ತದೆ. ಅವರ ಮೂನ್ನೂರು ಸದಸ್ಯರನ್ನು ಸಂಸ್ಥೆ ಮತ್ತು ಸಮುದಾಯ ಮಂಡಲಿಗಳ ಮೂಲಕ ನಿರ್ಧರಿಸಲಾಗುತ್ತದೆ. ಕಮಿಟಿಯಲ್ಲಿಯೇ ಒಂದು ಚುನಾವಣೆಯಿಂದ ಶಿಫಾರಸ್ಸು ಮಾಡಲಾಗುತ್ತದೆ.[೩೧] ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯ ಮಂಡಲವು ಐದು ಪಾಲಿಸಿ ಕಾರ್ಯದರ್ಶಿಗಳನ್ನು ಹೊಂದಿರುತ್ತದೆ ಮತ್ತು ಇದಕ್ಕೆ ಸಲಹೆಗಾರರಾಗಿ ಏಳರಿಂದ ಹನ್ನೊಂದು ಸದಸ್ಯರಿರುವ ಕಾರ್ಯಾಂಗ ಸಮಿತಿ ಇರುತ್ತದೆ.[೩೨] ಡಿಸೆಂಬರ್ ೨೦, ೧೯೯೯ರ ಮಧ್ಯರಾತ್ರಿಯಲ್ಲಿ, ಜನರಲ್ ವಾಸ್ಕೋ ರೊಚಾ ವಿಯೆರಾರನ್ನು ಬದಲಿಸಿ ಸಮುದಾಯದ ನಾಯಕ ಮತ್ತು ಮಾಜಿ ಬ್ಯಾಂಕರ್ ಆದ ಎಡ್ಮುಂಡ್ ಹೊ ಹಾವು ವಾಹ್ ಮಕಾವು SARನ ಮೊದಲ ಮುಖ್ಯ ಕಾರ್ಯನಿರ್ವಾಹಕ ಆಧಿಕಾರಿಯಾದರು. ಅವರು ಈಗ ತಮ್ಮ ಎರಡನೆಯ ಅವಧಿಯ ಸೇವೆಯನ್ನು ಸಲ್ಲಿಸುತ್ತಿದ್ದಾರೆ.[೩೩] ಮುಖ್ಯ ನಿರ್ವಾಹಕ ಅಧಿಕಾರಿ ಮತ್ತು ಕ್ಯಾಬಿನೆಟ್ ಅವರ ಕಛೇರಿಗಳನ್ನು ಸೆಂ. ಲಾರೆನ್ಸ್ ಪ್ಯಾರಿಷ್ನ ಮೊದಲ ಪ್ರದೇಶದಲ್ಲಿ ಸ್ಥಾಪಿತವಾಗಿರುವ ಮಕಾವು ಸರ್ಕಾರದ ಕೇಂದ್ರ ಕಛೇರಿಗಳಲ್ಲಿ ಹೊಂದಿದ್ದಾರೆ.

ಪ್ರದೇಶದ ಶಾಸಕಾಂಗದ ಭಾಗ ಶಾಸನ ಸಭೆ. ಇದು ಒಂದು ೨೯-ಸದಸ್ಯ ಮಂಡಳಿ, ೧೨ ನೇರ ಚುನಾಯಿತ ಸದಸ್ಯರು, ಕ್ರಿಯಾತ್ಮಕ ಚುನಾವಣಾ ಕ್ಷೇತ್ರಗಳನ್ನು ಪ್ರತಿನಿಧಿಸುವ ಹತ್ತು ಪರೋಕ್ಷವಾಗಿ ಚುನಾಯಿತ ಸದಸ್ಯರು ಮತ್ತು ಮುಖ್ಯ ಕಾರ್ಯನಿರ್ವಾಹಕ ಆಧಿಕಾರಿ ಯಿಂದ ನೇಮಿಸಲ್ಪಟ್ಟ ಏಳು ಸದಸ್ಯರನ್ನು ಹೊಂದಿದೆ.[೩೪] ಯಾವುದೇ ಹದಿನೆಂಟು ಅಥವಾ ಹದಿನೆಂಟು ವರ್ಷದ ಮೇಲಿನ ಖಾಯಂ ನಿವಾಸಿಗಳು ನೇರ ಚುನಾವಣೆಗಳಲ್ಲಿ ಮತ ಚಲಾಯಿಸಲು ಆರ್ಹರು.[೩೫] ಪರೋಕ್ಷ ಚುನಾವಣೆ "ಕಾರ್ಪೊರೇಟ್ ಮತದಾರರು" ಎಂದು ನೋಂದಾಯಿತ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿದೆ ಮತ್ತು ವಿಸ್ತಾರವಾದ ಪ್ರಾದೇಶಿಕ ವಿಂಗಡನೆ, ಮುನಿಸಿಪಲ್ ಸಂಸ್ಥೆಗಳು ಮತ್ತು ಕೇಂದ್ರ ಸರ್ಕಾರ ಮಂಡಳಿಗಳಿಂದ ೩೦೦-ಸದಸ್ಯ ಚುನಾವಣೆ ಕಮಿಟಿಯನ್ನು ರಚಿಸಲಾಗುತ್ತದೆ.[೩೬] ಕಾನೂನು ವ್ಯವಸ್ಥೆಯ ಮೂಲ ಚೌಕಟ್ಟು ಫೋರ್ಚುಗೀಸ್ ಕಾನೂನು ಅಥವಾ ಪೋರ್ಚುಗೀಸ್ ಸಿವಿಲ್ ಕಾನೂನು ವ್ಯವಸ್ಥೆಯ ಮೇಲೆ ಆಧಾರವಾಗಿದೆ. ೧೯೯೯ರ ನಂತರ ಸಂರಕ್ಷಿತವಾಗಿಡಲಾಗಿದೆ. ಈ ಕ್ಷೇತ್ರವು ಉಚ್ಚ ನ್ಯಾಯಾಲಯವನ್ನು ಹೊಂದಿದ ತನ್ನ ಸ್ವಂತ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿದೆ. ನ್ಯಾಯಾಧಿಶರನ್ನು ಒಂದು ಕಮಿಟಿಯ ಮೂಲಕ ಆರಿಸಲಾಗುತ್ತದೆ ಮತ್ತು ಮುಖ್ಯ ನಿರ್ವಾಹಕ ಅಧಿಕಾರಿ ನೇಮಿಸುತ್ತಾರೆ. ನ್ಯಾಯಾಲಯಗಳಲ್ಲಿ ವಿದೇಶಿ ನ್ಯಾಯಾಧೀಶರು ಸೇವೆ ಸಲ್ಲಿಸಬಹುದು.[೩೭]

ಮಕಾವು ನ್ಯಾಯಾಲಯ ವ್ಯವಸ್ಥೆ[ಬದಲಾಯಿಸಿ]

 • ಮಕಾವು ಮೂರು-ಶ್ರೇಣಿಯ ನ್ಯಾಯಾಲಯ ವ್ಯವಸ್ಥೆಯನ್ನು ಹೊಂದಿದೆ: ಮೊದಲ ನಿದರ್ಶನ/ಪ್ರಸಂಗದ ನ್ಯಾಯಾಲಯ,
 • ಎರಡನೆ ನಿದರ್ಶನ ನ್ಯಾಯಾಲಯ ಮತ್ತು
 • ಅಂತಿಮ ಮನವಿಯ ನ್ಯಾಯಾಲಯ.[೩೮] ಫೆಬ್ರವರಿ ೨೦೦೯ರಲ್ಲಿ, ಶಾಸನ ಸಭೆ ಹಿಂತೆಗೆದುಕೊಂಡ ಭದ್ರತೆ ಶಾಸನದ ಮೇಲೆ ಅವಲಂಬಿತವಾದ ಒಂದು ಭದ್ರತೆ ಮಸೂದೆಯನ್ನು ಜಾರಿಗೊಳಿಸಿತು, ಮೊದಲು ಹಾಂಗ್‌ಕಾಂಗ್‌ನಲ್ಲಿ ಪರಿಚಯಿಸಲಾಗಿತ್ತು.[೩೯] ಪ್ರಜಾಪ್ರಭುತ್ವದ ಪರ ವಾದಿಸುವವರು ಈ ಮಸೂದೆ ದುರುಪಯೋಗಕ್ಕೆ ಅತ್ಯಂತ ಹೆಚ್ಚಿನ ಅವಕಾಶ ವನ್ನು ಹೊಂದಿರುವ ಕುರಿತು ಆತಂಕ ವ್ಯಕ್ತಪಡಿಸಿದರು, ಮತ್ತು ಈ ಮಸೂದೆ ಜಾರಿಯ ಪೂರ್ವದಲ್ಲಿ ಹಾಂಗ್‌ಕಾಂಗ್‌ನ ಪ್ರಜಾಪ್ರಭುತ್ವವಾದಿಗಳಿಗೆ ಮಕಾವುಗೆ ಪ್ರವೇಶ ನೀಡದ ಹಿನ್ನೆಲೆಯಲ್ಲಿ ಈ ಆತಂಕ ಇನ್ನೂ ಹೆಚ್ಚಾಯಿತು.[೪೦]

ಭೂಗೋಳಶಾಸ್ತ್ರ[ಬದಲಾಯಿಸಿ]

Main article: Geography of Macau
ಮಕಾವು ಪರ್ಯಾಯ ದ್ವೀಪ, ಕೊಟೈ, ತೈಪಾ ಮತ್ತು ಕೊಲೊಯನ್‌ಗಳನ್ನು ತೋರಿಸುವ, ಮಕಾವುವಿನ ನಕ್ಷೆ.
ಮಕಾವುವಿನಲ್ಲಿನ ಪೆನ್ಹಾ ಪರ್ವತದ ಭೂ ದೃಶ್ಯ.

ಮಕಾವು 60 kilometres (37 mi)ಹಾಂಗ್ ಕಾಂಗ್‌ ಮತ್ತು145 kilometres (90 mi) ಗ್ವಾಂಗ್‌ಜೌನಿಂದ ನೈಋತ್ಯ ಭಾಗದಲ್ಲಿ ಸ್ಥಾಪಿತವಾಗಿದೆ.[೫][೪೧] ಇದು ಸ್ವತಃ ಮಕಾವು ಪರ್ಯಾಯ ದ್ವೀಪವನ್ನು ಮತ್ತು ಟೈಪಾ ಮತ್ತು ಕೊಲೊಯನ್ ದ್ವೀಪಗಳನ್ನು ಹೊಂದಿದೆ. ಪರ್ಯಾಯ ದ್ವೀಪವು ಪೂರ್ವದಲ್ಲಿ ಝುಜಿಯಾಂಗ್ (ಪರ್ಲ್ ನದಿ) ನದಿಮುಖದಿಂದ ಮತ್ತು ಪಶ್ಚಿಮದಲ್ಲಿ ಕ್ಸಿಜಿಯಾಂಗ್ (ವೆಸ್ಟ್ ನದಿ)ಯಿಂದ ನಿರ್ಮಿತವಾಗಿದೆ.[೪೧] ಇದು ಮುಖ್ಯ ಭೂಮಿ ಚೀನಾದಲ್ಲಿ ಜುಹೈ ವಿಶೇಷ ಆರ್ಥಿಕ ಪ್ರಾಂತದ ಗಡಿಯಲ್ಲಿದೆ. ಮಕಾವು ಮತ್ತು ಚೀನಾದ ನಡುವಿನ ಮುಖ್ಯ ಗಡಿ ದಾಟುವ ಜಾಗವನ್ನು ಮಕಾವು ಕಡೆಯಿಂದ ಪೊರ್ಟಾಸ್ ಡೊ ಸೆರ್ಕೊ (ಅಡ್ಡಗೋಡೆ ಪ್ರವೇಶದ್ವಾರ) ಮತ್ತು ಜುಹೈ ಕಡೆಯಿಂದ ಗೊಂಗ್ಬೆಇ ಪೊರ್ಟ್ ಅಫ್ ಎಂಟ್ರಿ ಎಂದು ಕರೆಯಲಾಗುತ್ತದೆ.[೪೨]

ಮಕಾವು ಪರ್ಯಾಯ ಸ್ಥಳ ಮೂಲತಃ ಒಂದು ದ್ವೀಪ. ಆದರೆ ಮರಳು ದಿಣ್ಣೆ/ಪ್ರದೇಶ ಸೇರಿಕೆಯಿಂದಾಗಿ ಕ್ರಮೇಣ ಒಂದು ಕಿರಿದಾದ ಭೂಸಂಧಿ/ಭೂಭಾಗವಾಗಿ ಬದಲಾಯಿತು. ಹಾಗೆ ಮಕಾವು ಒಂದು ಪರ್ಯಾಯ ದ್ವೀಪವಾಗಿ ಬದಲಾಯಿತು. ೧೭ನೇ ಶತಮಾನದಲ್ಲಿನ ಭೂ ಸುಧಾರಣೆ ಮಕಾವುವನ್ನು ಬಹುವಾಗಿ ಸಮತಟ್ಟದ ಭೂಕ್ಷೇತ್ರದ ಒಂದು ಪರ್ಯಾಯ ದ್ವೀಪವಾಗಿ ಬದಲಿಸಿತು. ಹಲವು ಕಡಿದಾದ ಬೆಟ್ಟಗಳು ಇಂದಿಗೂ ಮೂಲ ಭೂ ಸಮೂಹದ ಗುರುತು ಸೂಚಿಸುತ್ತವೆ.[೪೧] ಅಲ್ಟೊ ಡೆ ಕೊಲೊಯೆನ್ ಮಕಾವುವಿನ ಅತಿ ಎತ್ತರವಾದ ಸ್ಥಳ, 170.6 metres (559.7 ft) ರಷ್ಟು ಮೇಲ್ಮಟ್ಟದಲ್ಲಿದೆ.[೫] ದಟ್ಟವಾದ ನಗರ ಪರಿಸರದ ಜೊತೆ, ಮಾಕಾವು ವ್ಯವಸಾಯ ಯೋಗ್ಯ ಭೂಮಿ, ಹುಲ್ಲುಗಾವಲುಗಳು, ಆರಣ್ಯ ಅಥವಾ ಕಾಡು ಪ್ರದೇಶವನ್ನು ಹೊಂದಿಲ್ಲ.

೭೫% ಮತ್ತು ೯೦% ನಡುವಿನ ಸರಾಸರಿ ತೇವಾಂಶದ ಜೊತೆಗೆ, ಮಕಾವು ತೇವದ ಉಪ ಉಷ್ಣವಲಯದ ಹವಾಗುಣವನ್ನು ಹೊಂದಿದೆ.[೪೩] ಕಾಲಕಾಲದ ಹವಾಗುಣವು ಗಮನಾರ್ಹವಾಗಿ ಮಳೆಮಾರುತಗಳಿಂದ ಪ್ರಭಾವಗೊಂಡಿದೆ, ಮತ್ತು ಬೇಸಿಗೆ ಮತ್ತು ಚಳಿಗಾಲದ ನಡುವೆ ಉಷ್ಣಾಂಶದಲ್ಲಿ ವ್ಯತ್ಯಾಸಗಳು ಗಮನಾರ್ಹವಾಗಿವೆ. ಮಕಾವುವಿನ ಸರಾಸರಿ ವಾರ್ಷಿಕ ಉಷ್ಣಾಂಶ 22.3 °C (72.1 °F).[೪೪] ಜುಲೈ ಅತಿ ಬೆಚ್ಚಗಿನ ತಿಂಗಳು, ಆಗ ಸರಾಸರಿ ಉಷ್ಣಾಂಶವು 28.6 °C (83.5 °F) ಇರುತ್ತದೆ. ಜನವರಿ ಅತಿ ತಂಪಾದ ತಿಂಗಳು, ಆಗಿನ ಸರಾಸರಿ ಉಷ್ಣಾಂಶ 14.5 °C (58.1 °F).[೪೩]

ಚೀನಾದ ದಕ್ಷಿಣ ತೀರ ಪ್ರದೇಶದಲ್ಲಿರುವ, ಸರಾಸರಿ ವಾರ್ಷಿಕ 2,030 millimetres (79.9 in) ಕೆಳಗೆ ಬೀಳುವಿಕೆಯೊಂದಿಗೆ, ಮಾಕಾವು ಹೇರಳವಾದ ಮಳೆಸುರಿತವನ್ನು ಹೊಂದಿದೆ.[೪೫] ಆದ್ಯಾಗಿಯೂ, ಮುಖ್ಯ ಭೂಮಿ ಚೀನಾದಿಂದ ಮಳೆ ಮಾರುತಗಳ ಕಾರಣದಿಂದ ಚಳಿಗಾಲ ಹೆಚ್ಚಾಗಿ ಶುಷ್ಕವಾಗಿರುತ್ತದೆ. ಅಕ್ಟೋಬರ್ ನಿಂದ ಡಿಸೆಂಬರ್ ವರೆಗಿನ ಮಕಾವುವಿನಲ್ಲಿ ಶರತ್ಕಾಲ, ಕಡಿಮೆ ತೇವಾಂಶದಿಂದ ಕೂಡಿದ ಸೂರ್ಯನ ಪ್ರಕಾಶದಿಂದ ತುಂಬಿ ಮತ್ತು ಬೆಚ್ಚಗಿರುತ್ತದೆ. ಚಳಿಗಾಲ (ಜನವರಿಯಿಂದ ಮಾರ್ಚ್‌ವರೆಗೆ) ಬೆಚ್ಚಗೆ ಮತ್ತು ಸೂರ್ಯನ ಪ್ರಕಾಶದಿಂದ ತುಂಬಿರುತ್ತದೆ. ಏಪ್ರಿಲ್‌ನಿಂದ ಜೂನ್‌ವರೆಗೆ ವಸಂತ ಋತುವಿನಲ್ಲಿ ತೇವಾಂಶ ಹೆಚ್ಚಾಗಲು ಪ್ರಾರಂಭವಾಗುತ್ತದೆ, ಮತ್ತು ಜುಲೈನಿಂದ ಸೆಪ್ಟೆಂಬರ್‌ವರೆಗಿನ ಬೇಸಿಗೆಯಲ್ಲಿ ಮಳೆ ಮತ್ತು ಒಮ್ಮೊಮ್ಮೆ ಚಂಡಮಾರುತದ ಜೊತೆ ಹವಾಗುಣ ಬೆಚ್ಚಗಿನಿಂದ ಬಿಸಿ ಮತ್ತು ತೇವವಾಗಿರುತ್ತದೆ.[೪೩]

Macauದ ಹವಾಮಾನ ದತ್ತಾಂಶ
ತಿಂಗಳು ಫೆ ಮಾ ಮೇ ಜೂ ಜು ಸೆ ಆಕ್ಟೋ ಡಿ ವರ್ಷ
Source: WMO - Macau[೪೬]

ಆರ್ಥಿಕತೆ[ಬದಲಾಯಿಸಿ]

Main article: Economy of Macau
ವೃತ್ತಿಯ ಪ್ರಕಾರ ವೃತ್ತಿನಿರತರ ಸಂಖ್ಯೆ 2007[೪೭]
ಉದ್ಯೋಗ ಸಂಖ್ಯೆ೦೦೦)
ಹಿರಿಯ ಆಧಿಕಾರಿಗಳು/ಕಾರ್ಯ ನಿರ್ವಾಹಕರು ೧೪.೬
ವೃತ್ತಿಪರರು ೯.೯
ತಂತ್ರಜ್ಞರು ೨೮.೧
ಗುಮಾಸ್ತರು ೮೩.೭
ಸೇವೆ & ಮಾರಾಟ ಕೆಲಸಗಾರರು ೬೩.೨
ವ್ಯವಸಾಯ/ಮೀನುಗಾರಿಕೆಯಲ್ಲಿ ಕೆಲಸಗಾರರು ೦.೮
ಕುಶಲಕರ್ಮ & ಸಮಾನರೂಪದ ಕೆಲಸಗಾರರು ೩೩.೭
ಮಕಾವು ಗೋಪುರ/ಸ್ತಂಭದ ರಾತ್ರಿ ನೋಟ, ಸಂಪರ್ಕ ಮತ್ತು ಮನೋರಂಜನಾ ಸ್ತಂಭ, ಅದು ಹಲವು ಹೋಟೆಲುಗಳು, ಚಿತ್ರಮಂದಿರಗಳು, ಪ್ಯಾಪಾರದ ಅಂಗಡಿ ಸಾಲುಗಳು ಮತ್ತು ವಿವಿಧ ರೀತಿಯ ಸಾಹಸ ಚಟುವಟಿಕೆಗಳನ್ನು ಹೊಂದಿದೆ.
ಮಕಾವುವಿನ ಕೇಂದ್ರ ವ್ಯವಹಾರ ಜಿಲ್ಲೆ.ತೋರಿಸಿದ ಕಟ್ಟಡ BNU ಸ್ತಂಭ.

ಮಕಾವುವಿನ ಆರ್ಥಿಕ ಸ್ಥಿತಿ ವ್ಯಾಪಕವಾಗಿ ಪ್ರವಾಸೋದ್ಯಮದ ಮೇಲೆ ಅವಲಂಬಿಸಿದೆ. ಪ್ರವಾಸೋದ್ಯಮದ ಹೆಚ್ಚಿನದು ಜೂಜಿನಡೆಗೆ ಸಂಪರ್ಕಿಸಿದೆ. ಮಕಾವುವಿನಲ್ಲಿ ಇತರೆ ಮುಖ್ಯ ಆರ್ಥಿಕ ಚಟುವಟಿಕೆಗಳೆಂದರೆ ರಫ್ತಿಗೆ ಹೊಂದಿಸುವ ಟೆಕ್ಸ್‌ಟೈಲ್ ಮತ್ತು ಗಾರ್ಮೆಂಟ್ ಉತ್ಪಾದನೆ, ಬ್ಯಾಂಕಿಂಗ್ ಮತ್ತು ಇತರೆ ಹಣಕಾಸು ಸೇವೆಗಳು.[೬] ಉಡುಪು ಕೈಗಾರಿಕೆ ರಪ್ತು ಸಂಪಾದನೆಗಳ ಸುಮಾರು ನಾಲ್ಕನೇ ಮೂರು ಅಂಶಗಳನ್ನು ಒದಗಿಸಿದೆ ಮತ್ತು ಆಟ, ಪ್ರವಾಸೋದ್ಯಮ ಮತ್ತು ಮನೋರಂಜನಾ ಕೈಗಾರಿಕೆ ಮಕಾವುವಿನ GDPಯ ೫೦% ಮತ್ತು ಮಕಾವು ಸರ್ಕಾರ ಆದಾಯದ ೭೦%ಗಿಂತ ಹೆಚ್ಚು ಒದಗಿಸುತ್ತವೆ ಎಂದು ಅಂದಾಜು ಮಾಡಲಾಗಿದೆ.[೩೨]

ಮಕಾವು WTOನ ಸ್ಥಾಪಿತ ಸದಸ್ಯ ಮತ್ತು ೧೨೦ಕ್ಕಿಂತ ಹೆಚ್ಚು ದೇಶಗಳು ಮತ್ತು ಧರ್ಮಗಳ ಜೊತೆ ಸಮೃದ್ಧ ಆರ್ಥಿಕ ಮತ್ತು ವವ್ಯಹಾರ ಸಂಬಂಧಗಳನ್ನು ಪಾಲಿಸುತ್ತದೆ/ನಿರ್ವಹಿಸುತ್ತದೆ,ವಿಶೇಷವಾಗಿ ಯುರೋಪಿಯನ್ ಒಕ್ಕೂಟ ಮತ್ತು ಪೋರ್ಚಿಗೀಸ್ ಭಾಷೆ ಮಾತನಾಡುವ ದೇಶಗಳ ಜೊತೆ, ಮಕಾವು IMFನ ಸದಸ್ಯ ಸಹ ಆಗಿದೆ.[೪೮] ವಿಶ್ವ ಬ್ಯಾಂಕ್ ಮಕಾವುವನ್ನು ಒಂದು ಹೆಚ್ಚು ಆದಾಯದ ಆರ್ಥಿಕ ವ್ಯವಸ್ಥೆ ಎಂದು ಪರಿಗಣಿಸುತ್ತದೆ [೪೯] ಮತ್ತು ೨೦೦೬ರಲ್ಲಿ ಪ್ರದೇಶದ GDP ಒಬ್ಬನಿಗೆ US$೨೮,೪೩೬ ಆಗಿತ್ತು. ವರ್ಗಾವಣೆಯ ನಂತರ ೧೯೯೯ರಲ್ಲಿ , ಚೀನಾದ ಪ್ರಯಾಣ/ಪ್ರವಾಸ ನಿರ್ಬಂಧನೆಗಳನ್ನು ಸಡಿಲ/ಸರಾಗ ಗೊಳಿಸಿದ ಕಾರಣದಿಂದ ಮುಖ್ಯಭೂಭಾಗದ ಪ್ರವಾಸಿಗರ ಸಂಖ್ಯೆಯಲ್ಲಿ ತ್ವರಿತವಾದ ಏರಿಕೆ ಆಯಿತು. ೨೦೦೧ರಲ್ಲಿ ಮಕಾವುವಿನ ಜೂಜು ಉದ್ಯಮದ ಉದಾರೀಕರಣದ ಜೊತೆಗೆ ಅದು ಮಹತ್ವವಾದ ಬಂಡವಾಳದ ಒಳಹರಿವನ್ನು ಪ್ರೇರಿಪಿಸಿತು, ಆರ್ಥಿಕ ವ್ಯವಸ್ಥೆಯ ಸರಾಸರಿ ಬೆಳವಣಿಗೆ ಧಾರಣೆ ೨೦೦೧ ಮತ್ತು ೨೦೦೬ರ ನಡುವೆ ವರ್ಷಕ್ಕೆ ಅಂದಾಜು ೧೩.೧%.[೫೦]

೨೦೦೬ರ ಅಂತರಾಷ್ಟ್ರೀಯ ಪ್ರವಾಸೋದ್ಯಮದ ಒಂದು ವಿಶ್ವ ಪ್ರವಾಸೋದ್ಯಮ ಸಂಸ್ಥೆಯ ವರದಿಯಲ್ಲಿ, ಮಕಾವು ಪ್ರವಾಸಿಗರ ಸಂಖ್ಯೆಯಲ್ಲಿ ೨೧ ನೇ ಸ್ಥಾನ ಮತ್ತು ಪ್ರವಾಸೋದ್ಯಮ ವರಮಾನ ರಸೀತಿಯಲ್ಲಿ ೨೪ನೇ ಸ್ಥಾನ ಪಡೆದಿದೆ.[೫೧] ೨೦೦೦ರಲ್ಲಿ ಮಕಾವುವಿಗೆ ೯.೧ ಮಿಲಿಯನ್ ಪ್ರವಾಸಿಗರ ಆಗಮನದಿಂದ, ೨೦೦೫ರಲ್ಲಿ ೧೮.೭ ಮಿಲಿಯನ್ ಪ್ರವಾಸಿಗರಿಗೆ ಮತ್ತು ೨೦೦೬ರಲ್ಲಿ ೨೨ ಮಿಲಿಯನ್ ಪ್ರವಾಸಿಗರಿಗೆ ಏರಿಕೆಯಾಗಿದೆ.[೫೨] ಸುಮಾರು ೫೦%ರಷ್ಟು ಆಗಮನ ಚೀನಾ ಮುಖ್ಯ ಭೂ ಭಾಗದಿಂದ ಮತ್ತು ಇತರೆ ೩೦%ರಷ್ಟು ಪ್ರವಾಸಿಗರು ಹಾಂಗ್‌ಕಾಂಗ್‌ನಿಂದ ಬರುತ್ತಿದ್ದಾರೆ. ಮಕಾವು ೨೦೦೭ರಲ್ಲಿ ೨೪ ಮತ್ತು ೨೫ ಮಿಲಿಯನ್‌ರಷ್ಟು ಪ್ರವಾಸಿಗರನ್ನು ಎದುರು ಗೊಳ್ಳುವ ನಿರೀಕ್ಷೆ ಇತ್ತು.[೫೩] ಪ್ರವಾಸಿಗರಿಗೆ ಅಡ್ಡಿಪಡಿಸುವ ಅಂಶವಾದ ಟ್ರಿಯಡ್ ಭೂಗತ ಹಿಂಸೆ, ವರ್ಗಾವಣೆಯ ತರುವಾಯ, ವಸ್ತುತಃ ಕಾಣೆಯಾಗಿದೆ. ಪ್ರವಾಸೋದ್ಯಮ ಕ್ಷೇತ್ರಕ್ಕೆ ಲಾಭವಾಗಿದೆ.[ಸೂಕ್ತ ಉಲ್ಲೇಖನ ಬೇಕು]

೧೯೬೨ರಿಂದ, ಸಂಪೂರ್ಣ ಹಕ್ಕಿನ ಪರವಾನಗಿಯನ್ನು ಸರ್ಕಾರದಿಂದ ಪಡೆದ Stanley HoSociedade de Turismo e Diversões de ಮಕಾವು ಜೂಜು ಉದ್ಯಮವನ್ನು ನಡೆಸುತ್ತಿದೆ. ೨೦೦೨ರಲ್ಲಿ ಸಂಪೂರ್ಣ ಹಕ್ಕು ಮುಕ್ತಾಯವಾಯಿತು, ಮತ್ತು ಲಾಸ್‌ ವೇಗಾಸ್‌ನಿಂದ ಹಲವು ಕ್ಯಾಸಿನೋ ಮಾಲೀಕರು ಮಾರುಕಟ್ಟೆಯನ್ನು ಪ್ರವೇಶಿಸುವ ಪ್ರಯತ್ನ ಮಾಡಿದರು. ಟೇಬಲ್ ಆಟಗಳ ಒಟ್ಟು ಸಂಖ್ಯೆಯ ಮಾಪನದಿಂದ ಪ್ರಪಂಚದ ಅತಿ ದೊಡ್ಡ ಕ್ಯಾಸಿನೋ ಆದ ಸ್ಯಾಂಡ್ಸ್ ಮಕಾವುವಿನ ೨೦೦೪ರಲ್ಲಿನ ಪ್ರಾರಂಭದಿಂದ,[೫೪] ಮತ್ತು ೨೦೦೬ ರಲ್ಲಿ ಪ್ರಾರಂಭವಾದ ವೈನ್ ಮಕಾವುದಿಂದಾಗಿ[೫೫] ಜೂಜಿನಿಂದ ಹುಟ್ಟುವ ಮಕಾವು ಕ್ಯಾಸಿನೋಗಳ ಒಟ್ಟು ಆದಾಯವು ಮೊದಲ ಬಾರಿಗೆ ಲಾಸ್ ವೇಗಾಸ್ ಪಟ್ಟಿಯ ಎಲ್ಲಾ ಕ್ಯಾಸಿನೋಗಳ ಆದಾಯವನ್ನು (ಪ್ರತಿಯೊಂದು ಸುಮಾರು $೬ ಬಿಲಿಯನ್),[೫೬][೫೭] ದಾಟಿತು. ಇದರಿಂದಾಗಿ ಮಕಾವು ಜಗತ್ತಿನ ಅತ್ಯಂತ ದೊಡ್ಡ ಜೂಜು ಕೇಂದ್ರವಾಗಿ ಮಾರ್ಪಟ್ಟಿತು.[೫೮] ೨೦೦೭ರಲ್ಲಿ, ವೆನೆಶಿಯನ್ ಮಕಾವು, ಆ ಸಮಯದಲ್ಲಿ ನೆಲದಿಂದ ಪ್ರಪಂಚದ ಅತಿ ದೊಡ್ಡ ಕಟ್ಟಡ (ಈಗ ನಾಲ್ಕನೆಯದು), ಅದು MGM ಗ್ರಾಂಡ್ ಮಕಾವು/ಎಂಜಿಎಂ ಮಕಾವು ನ ಅನುಸರಿಸಿ, ಸಾರ್ವಜನಿಕ ಪ್ರವೇಶಕ್ಕೆ ಅನುವುಮಾಡಿಕೊಟ್ಟಿತ್ತು. ಮುಂದಿನ ದಿನಗಳಲ್ಲಿ ಹಲವು ಇತರೆ ಹೋಟಲ್‌ ಕ್ಯಾಸಿನೋಗಳು ಆರಂಭವಾಗಲಿವೆ, ಅವುಗಳಲ್ಲಿ ಗ್ಯಾಲಕ್ಸಿ ಕೊಟೈ ಮೆಗಾರೆಸಾರ್ಟ್ ಮತ್ತು ಪೊಂಟೆ 16 ಸೇರಿವೆ.

ಮಕಾವುವಿನಲ್ಲಿ ಎಲ್ಲೆಡೆ ಕ್ಯಾಸೀನೊಗಳಿವೆ.ಇಲ್ಲಿ ಚಿತ್ರಿಸಿರುವವು ವೈನ್ನ್ ಮಕಾವು, ಕ್ಯಾಸೀನೊ ಲಿಸ್ಬೊಅ ಮತ್ತು ಗ್ರ್ಯಾಂಡ್ ಲಿಸ್ಬೊಅ

೨೦೦೨ರಲ್ಲಿ ಮಕಾವು ಸರ್ಕಾರ ಏಕಸಾಮ್ಯತೆಯನ್ನು ಮುಕ್ತಾಯಗೊಳಿಸಿತು ಮತ್ತು ಆರು ಕ್ಯಾಸಿನೋ ಕಾರ್ಯ ನಿರ್ವಹಿಸುವ ರಿಯಾಯಿತಿ/ಅನುದಾನಗಳು ಮತ್ತು ಉಪ ಅನುದಾನಗಳನ್ನು Sociedade de Turismo e Diversões de ಮಕಾವು, ವೈನ್ನ ರೆಸಾರ್ಟ್ , ಲಾಸ್ ವೆಗಾಸ್ ಸ್ಯಾಂಡ್ಸ್, ಗೆಲಾಕ್ಸಿ ಎಂಟರ್‌ಟೈನ್ಮೆಂಟ್ ಗ್ರುಪ್, MGM ಮಿರೇಜ್‌ನ ಮತ್ತು ಫ್ಯಾನ್ಸಿ ಹೋನ ಪಾಲುಗಾರಿಕೆ (ಸ್ಟಾನ್ಲೆ ಹೊನ ಮಗಳು), ಮತ್ತು ಮೆಲ್ಕೊ ಮತ್ತು PBLನ ಪಾಲುಗಾರಿಕೆಗಳಿಗೆ ಸಮ್ಮತಿಸಿತ್ತು. ಇಂದು STDMನ ಮೂಲಕ ೧೬ ಕ್ಯಾಸಿನೋಗಳು ಕಾರ್ಯ ನಿರ್ವಹಿಸುತ್ತಿವೆ ಮತ್ತು ಅವುಗಳು ಮಕಾವುವಿನಲ್ಲಿನ ಕ್ಯಾಸಿನೋ ಉದ್ದಿಮೆಯಲ್ಲಿ ಇಂದಿಗೂ ನಿರ್ಣಾಯಕವಾಗಿವೆ. ಆದರೆ ೨೦೦೪ರಲ್ಲಿ ಸ್ಯಾಂಡ್ಸ್ ಮಕಾವುವಿನ ಆರಂಭ ಹೊಸಯುಗದ ಪ್ರಾರಂಭವನ್ನು ಸೂಚಿಸಿತು.[೫೪][೫೯][೬೦]

ಮಕಾವು ಒಂದು ಸಮುದ್ರ ಪ್ರದೇಶದ ವಾಣಿಜ್ಯ ಕೇಂದ್ರ. ಜೊತೆಗೆ ಒಂದು ತೆರಿಗೆ ಧಾಮ ಮತ್ತು ವಿದೇಶಿ ವಿನಿಮಯ ನಿಯಂತ್ರಣ ಆಳ್ವಿಕೆಯಿಲ್ಲದ ಒಂದು ಮುಕ್ತ ಬಂದರು.[೬೧][೬೨][೬೩] ಮಕಾವುವಿನ ಆರ್ಥಿಕ ಪ್ರಾಧಿಕಾರಸಮುದ್ರ ಪ್ರದೇಶದ ವರಮಾನ/ಹಣಕಾಸನ್ನು ನಿಯಂತ್ರಿಸುತ್ತದೆ,[೬೪] ಹಾಗೇ ಮಕಾವು ವಾಣಿಜ್ಯ ಮತ್ತು ಬಂಡವಾಳ ನೆರವು ಸಂಸ್ಥೆ ಮಕಾವುನಲ್ಲಿ ಬಂಡವಾಳ ಹೂಡಿಕೆಗೆ ಸೇವೆಗಳನ್ನು ಒದಗಿಸುತ್ತದೆ.[೬೫] ೨೦೦೭ರಲ್ಲಿ, ಅದರ ಸರ್ಕಾರದ ಭದ್ರವಾದ ಹಣಕಾಸುಗಳನ್ನು ಒಂದು ದೊಡ್ಡ ನಿವ್ವಳ ಸಾಲಗಾರನ ಹಾಗೆ ಆಧಾರವಾಗಿಸಿ, ಮೂಡಿಸ್ ಇನ್ವೆಸ್ಟರ್ಸ್ ಸರ್ವೀಸ್ ಮಕಾವುವಿನ ವಿದೇಶಿ ಮತ್ತು ಸ್ಥಳೀಯ ನಾಣ್ಯಪದ್ಧತಿ ಸರ್ಕಾರ ನೀಡುವವ ಶ್ರೇಣಿಗಳನ್ನು 'A೧'ನಿಂದ 'Aa೩'ಗೆ ಉನ್ನತೀಕರಿಸಿತು. ಶ್ರೇಣಿ ನೀಡುವ ಸಂಸ್ಥೆ ಸಹ ಮಕಾವುವಿನ ವಿದೇಶಿ ನಾಣ್ಯದ ಬ್ಯಾಂಕ್ ಠೇವಣಿಯನ್ನು 'A೧'ನಿಂದ 'Aa೩'ಗೆ ಉನ್ನತೀಕರಿಸಿತು.[೬೬]

ಮಾಕಾವು ಮೂಲ ಕಾನೂನು ನಿಗದಿ ಪಡಿಸಿದಂತೆ, ಸರ್ಕಾರ ಆದಾಯದ ಮಿತಿಗಳ ಒಳಗೆ ವೆಚ್ಚವನ್ನು ಉಳಿಸಿಟ್ಟು ಕೊಳ್ಳುವ ಸಿದ್ಧಾಂತವನ್ನು ಅದರ ಬಜೆಟ್‌ ರಚನೆಯಲ್ಲಿ ಪಾಲಿಸುತ್ತದೆ. ಹಣಕಾಸಿನ ತುಲನೆಯನ್ನು ಸಾಧಿಸಲು ಶ್ರಮಿಸುತ್ತದೆ, ಆದಾಯಕ್ಕಿಂತ ಹೆಚ್ಚಾದ ಖರ್ಚುಗಳು ದೂರ ಮಾಡುತ್ತದೆ ಮತ್ತು ಅದರ ಒಟ್ಟು ಮೊತ್ತದ ಗೃಹ ವಸ್ತುಗಳ ಬೆಳವಣಿಗೆಯ ಪ್ರಮಾಣದ ಜೊತೆ ಬಜೆಟ್ ಅನುಗುಣವಾಗಿ ಪಾಲಿಸುತ್ತದೆ. ಮಕಾವು ವಿಶೇಷ ಆಡಳಿತದ ಪ್ರದೇಶದ ಎಲ್ಲಾ ಹಣಕಾಸು ಆದಾಯಗಳು ಸ್ವಂತ ಕ್ಷೇತ್ರವೇ ನಿರ್ವಹಿಸಬೇಕು ಮತ್ತು ನಿಯಂತ್ರಿಸಬೇಕು ಮತ್ತು ಕೇಂದ್ರ ಜನರ ಸರ್ಕಾರಕ್ಕೆ ಒಪ್ಪಿಸಬಾರದು. ಸೆಂಟ್ರಲ್ ಪೀಪಲ್ಸ್ ಸರ್ಕಾರವು ಮಕಾವು ವಿಶೇಷ ಆಡಳಿತದ ಪ್ರದೇಶದಲ್ಲಿ ಯಾವುದೇ ತೆರಿಗೆಗಳನ್ನು ವಿಧಿಸಬಾರದು.[೬೭]

ಜನಸಾಂದ್ರತೆ[ಬದಲಾಯಿಸಿ]

ನಿವಾಸಿಗಳ ಸಾಮಾನ್ಯ
ಮನೆಯಲ್ಲಿ ಮಾತನಾಡುವ ಭಾಷೆ[೬೮]
ಭಾಷೆ ಜನಸಂಖ್ಯೆ ಪ್ರತಿಶತ
ಕ್ಯಾಂಟನೀಯ ೮೫.೭%
ಇತರೆ ಚೈನೀಸ್ ಆಡುಭಾಷೆಗಳು [7] ^ [6]
ಪೊರ್ಚುಗೀಸರು ೦.೬%
ಮ್ಯಾಂಡೆರಿಯನ್ ೩.೨%
ಇಂಗ್ಲೀಷ್ ೧-೫
ಇತರೆ ೨.೩%
A-Ma ದೇವಸ್ಥಾನ, 1448ರಲ್ಲಿ ಕಟ್ಟಿದ ಮಾತ್ಸು ದೇವತೆಗೆ ಅರ್ಪಿಸಿದ ಒಂದು ದೇವಾಲಯ.
ಸೆಂ. ಪೌಲ್‌ಸ್ ನ ಹಾಳಾದ ಭಾಗ, ಮೂಲತಃ 1602ರಲ್ಲಿ ಕಟ್ಟಿದ ಸೆಂ. ಪೌಲ್ ಕೆಥೆಡ್ರಲ್ ಆಗಿದ್ದ ಕಟ್ಟಡದ ಮುಂಭಾಗ

ಪ್ರಪಂಚದಲ್ಲಿ ಮಕಾವು ಅತಿ ದಟ್ಟವಾದ ಜನಸಂಖ್ಯಾ ಕ್ಷೇತ್ರ. ಇದು ಪ್ರತಿ ಚದುರ ಕೀಲೊ ಮೀಟರ್‌ಗೆ ೧೮,೪೨೮ ವ್ಯಕ್ತಿಗಳ ಜನಸಂಖ್ಯಾ ಸಾಂದ್ರತೆಯನ್ನು ಹೊಂದಿದೆ (೪೭,೭೨೮/sq mi).[೬೯] ಮಕಾವುವಿನ ೯೫%ರಷ್ಟು ಜನಸಂಖ್ಯೆ ಚೀನಾದವರು; ೨%ರಷ್ಟು ಪೋರ್ಚುಗೀಸ್ ಮತ್ತು/ಅಥವಾ ಮಿಶ್ರ ಚೈನೀಸ್/ಫೋರ್ಚುಗೀಸ್ ವಂಶದವರು. ಇದು ಒಂದು ಬುಡಕಟ್ಟಿನ ಗುಂಪು ಆನೇಕ ವೇಳೆ ಇವರನ್ನು ಮಕಾನೀಸ್‌ ಎಂದು ಉಲ್ಲೇಖಿಸಲಾಗುತ್ತದೆ.[೬೮] ೨೦೦೬ರ ಗಣತಿಯ ಪ್ರಕಾರ, ೪೭%ರಷ್ಟು ನಿವಾಸಿಗಳು ಮುಖ್ಯ ಭೂಮಿ ಚೀನಾದಲ್ಲಿ ಜನಿಸಿದವರು. ಅವರಲ್ಲಿ ೭೪.೧% ರಷ್ಟು ಗುಯಂಗ್‌ಡೊಂಗ್ನಲ್ಲಿ ಮತ್ತು ೧೫.೨%ರಷ್ಟು ಫ್ಯುಜಿಯನ್ನಲ್ಲಿ. ಹಾಗೇ, ನಿವಾಸಿಗಳಲ್ಲಿ ೪೨.೫% ಮಕಾವುವಿನಲ್ಲಿ ಹುಟ್ಟಿದವರು, ಮತ್ತು ಹಾಂಗ್ ಕಾಂಗ್, ಫಿಲಿಫ್ಫೆನ್ಸ್ ಮತ್ತು ಪೋರ್ಚುಗ ಲ್‌ನಲ್ಲಿ ಜನಿಸಿದವರು ಕ್ರಮವಾಗಿ ೩.೭%, ೨.೦% ಮತ್ತು ೦.೩%.[೬೮]

ಮಕಾವು ಪ್ರಪಂಚದ ಅತಿ ಕಡಿಮೆ ಜನನ ಪ್ರಮಾಣವನ್ನು ಹೊಂದಿರುವ ಪ್ರದೇಶಗಳಲ್ಲಿ ಒಂದು. ಆದ್ದರಿಂದ ಇದರ ಜನಸಂಖ್ಯೆಯ ಬೇಳವಣಿಗೆಯು ಪ್ರಮುಖವಾಗಿ ಮುಖ್ಯ ಭೂಮಿ ಚೀನಾದಿಂದ ವಲಸೆಗಾರರು ಮತ್ತು ಸಮುದ್ರದಾಚೆಯ/ವಿದೇಶದ ಕೆಲಸಗಾರ ಒಳನುಗ್ಗುವಿಕೆಯ ಮೇಲೆ ಅವಲಂಬಿಸಿದೆ.[೭೦] ಯು.ಎಸ್. ಸೆಂಟ್ರಲ್ ಇಂಟಲಿಜೆನ್ಸ್ ಎಜೆನ್ಸಿ (CIA) ನಡೆಸಿದ ಒಂದು ಇತ್ತೀಚಿನ ಸಮೀಕ್ಷೆಯ ಪ್ರಕಾರ, ಸರಾಸರಿ ೮೪.೩೬ ವರ್ಷಗಳೊಂದಿಗೆ ಹುಟ್ಟಿನಲ್ಲಿ ಆಯುಷ್ಕಾಲಕ್ಕೆ ಮಕಾವು ಅಗ್ರ ದೇಶ/ಪ್ರದೇಶ,[೭೧] ಹಾಗೇ ಇದರ ಶಿಶು ಮರಣ ಪ್ರಮಾಣವು ಪ್ರಪಂಚದ ಕಡಿಮೆ ಪ್ರಮಾಣಗಳಲ್ಲಿ ಸ್ಥಾನ ಪಡೆದಿದೆ.[೭೨]

ಚೈನೀಸ್ (ಕಾಟೊನೆಸ್) ಮತ್ತು ಫೋರ್ಚುಗೀಸ್ ಎರಡೂ ಮಕಾವುವಿನ ಆಧಿಕೃತ ಭಾಷೆಗಳು.[೭೩] ಗುಣಮಟ್ಟದ ಮಕಾನೀಸ್‌ ಪೋರ್ಚುಗೀಸ್ ಯುರೋಪಿಯನ್ ಪೋರ್ಚುಗೀಸ್‌ಗೆ ತದ್ರೂಪವಾಗಿದೆ. ಇತರೆ ಭಾಷೆಗಳಾದ ಮ್ಯಾಂಡರಿನ್, ಇಂಗ್ಲೀಷ್ ಮತ್ತು ಹೊಕ್ಕಿಯನ್‌ಗಳನ್ನು ಸಹ ಕೇಲವು ಸ್ಥಳೀಯ ಸಮುದಾಯದವರು ಮಾತನಾಡುತ್ತಾರೆ.[೭೪] ಮಕಾನೀಸ್‌ ಭಾಷೆ, ಒಂದು ಪ್ರತ್ಯೇಕವಾದ/ವಿಶಿಷ್ಟವಾದ ಕ್ರೆಯೊಲ್ ಸಾಮಾನ್ಯವಾಗಿ ಪಟುವಾ ಎಂದು ಪರಿಚಿತ. ಇಂದಿಗೂ ಇದನ್ನು ಕೆಲವು ಡಜನ್‌ ಮಕಾನೀಸ್‌‌ ಮಾತನಾಡುತ್ತಾರೆ.[೭೫]

ಇಲ್ಲಿ ಅನೇಕ ಚಿನ್ಹೆಗಳು ಮತ್ತು ಸಂಸ್ಥೆಗಳು ಚೈನೀಸ್ ಮತ್ತು ಪೋರ್ಚುಗೀಸ್ ಹೆಸರುಗಳನ್ನು ಬಳಸಿಕೊಳ್ಳುತ್ತವೆಯಾದರೂ ಇಂಗ್ಲೀಷ್ ಇಲ್ಲಿ ಸಾಮಾನ್ಯ ಭಾಷೆಯಾಗುತ್ತಿದೆ.

ಮಕಾವುವಿನಲ್ಲಿರುವ ಹೆಚ್ಚಿನ ಚೈನೀಸ್‌ ಅವರ ಸ್ವಂತ ಸಂಪ್ರದಾಯ ಮತ್ತು ಸಂಸ್ಕೃತಿಯಿಂದ ಆಗಾಧವಾಗಿ ಪ್ರಭಾವ ಗೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರು ಚೈನೀಸ್ ಜನಪದ ಧರ್ಮದಲ್ಲಿ ಭಾಗವಹಿಸುತ್ತಾರೆ, ತಾವೋಯಿಸಂ, ಬೌದ್ಧ ಸಿದ್ದಾಂತ ಮತ್ತು ಕನ್‌ಫ್ಯೂಶಿಯ ನಿಸಮ್‌ಗಳ ನಂಬಿಕೆಗಳು ಅವರ ಜೀವನದಲ್ಲಿ ಒಂದು ಸಮಗ್ರ ಅಂಶವನ್ನು ರೂಪಿಸುತ್ತವೆ.[೩೨] ಮಕಾವು ಗಣನೀಯ ಗಾತ್ರದಲ್ಲಿ ಕ್ರೈಸ್ತ ಧರ್ಮವನ್ನು ಹೊಂದಿದೆ; ರೋಮನ್ ಕ್ಯಾಥೋಲಿಕ್‌ರು ಮತ್ತು ಪ್ರೊಟೆಸ್ಟೆಂಟ್ ಕ್ರಮವಾಗಿ ಜನಸಂಖ್ಯೆಯ ೭% ಮತ್ತು ೨%ರಷ್ಟು ಇದ್ದಾರೆ. ಜೊತೆಗೆ, ಜನಸಂಖ್ಯೆಯ ೧೭% ಮೂಲ ಮಹಯಾನ ಬೌದ್ಧಸಿದ್ಧಾಂತವನ್ನು ಅನುಸರಿಸುತ್ತಾರೆ.[೭೬]

ಮಕಾವು ಪ್ರವಾಸೋದ್ಯಮದ ಮೂಲಕ ನಡೆಯುವ ಆರ್ಥಿಕ ವ್ಯವಸ್ಥೆಯನ್ನು ಹೊಂದಿರುವುದರಿಂದ, ಕೆಲಸದ ತಂಡದ ೧೪.೬% ರೆಸ್ಟೊರೆಂಟ್‌ಗಳು ಮತ್ತು ಹೋಟೆಲ್‌ಗಳಲ್ಲಿ, ಮತ್ತು ೧೦.೩% ಜೂಜು ಉದ್ದಿಮೆಯಲ್ಲಿ ಕೆಲಸ ಮಾಡುತ್ತಿದ್ದಾರೆ.[೭೪] ಹಲವು ಕ್ಯಾಸೀನೊ ರೆಸಾರ್ಟ್‌ಗಳು ಆರಂಭ ಮತ್ತು ಇತರೆ ಪ್ರಮುಖ ನಿರ್ಮಾಣ ನಡೆಯುತ್ತಿರುವುದರಿಂದ, ಹಲವು ಕ್ಷೇತ್ರಗಳು ಗಮನಾರ್ಹವಾಗಿ ಕೆಲಸಗಾರರ ಅಭಾವವನ್ನು ಅನುಭವಿಸುತ್ತಿವೆ ಮತ್ತು ಸರ್ಕಾರ ಅಕ್ಕಪಕ್ಕದ ಪ್ರದೇಶಗಳಿದ ಕೆಲಸಗಾರರ ಅಮದನ್ನು ಅನ್ವೇಷಿಸುತ್ತಿದೆ.

ಇಲ್ಲಿಗೆ ಆಮದಾದ ಒಟ್ಟು ಜನರ ಸಂಖ್ಯೆಯು ೨೦೦೮ ರ ಸುಮಾರು ಎರಡನೇ ಚತುರ್ಥಾಂಶದ ಹೊತ್ತಿಗೆ ದಾಖಲೆಯ ೯೮,೫೦೫ ಆಗಿತ್ತು, ಮತ್ತು ಇದು ಮಕಾವುನ ಒಟ್ಟು ಕೆಲಸಗಾರರ ೨೫% ಭಾಗಕ್ಕಿಂತ ಹೆಚ್ಚಾಗಿತ್ತು.

ಅಗ್ಗದ ಆಮದು ಕೆಲಸಗಾರ ಒಳಹರಿವಿನ ಕಾರಣದಿಂದಾದ ಕೆಲಸದ ಅಭಾವದ ಬಗ್ಗೆ ಕೆಲವು ಸ್ಥಳೀಯ ಕೆಲಸಗಾರರು ದೂರುತ್ತಾರೆ. ಕಾನೂನು ಬಾಹಿರ ಕೆಲಸ ಅಸ್ತಿತ್ವದಲ್ಲಿದೆ ಎಂದು ಸಹ ಕೆಲವರು ಹೇಳುತ್ತಾರೆ.[೭೭] ಪ್ರದೇಶದಲ್ಲಿ ಆದಾಯದ ಅಸಮಾನತೆಯ ವಿಸ್ತರಣೆ ಇನ್ನೊಂದು ಕಾಳಜಿ. ಮಕಾವುವಿನ ಗಿನಿ ಕೋಎಫಿಷಿಯೆಂಟ್, ಇದು ಒಂದು ಕಡಿಮೆ ಮೌಲ್ಯ ಹೆಚ್ಚು ಸಮಾನನಾದ ಆದಾಯ ಹಂಚಿಕೆಯನ್ನು ಸೂಚಿಸುವ ಒಂದು ಜನಪ್ರಿಯ ವರಮಾನ ಅಸಮಾನತೆಯ ಮಾಪನ. ೧೯೯೮ ರಲ್ಲಿನ ೦.೪೩ ರಿಂದ ೨೦೦೬ ರಲ್ಲಿ ೦.೪೮ ಕ್ಕೆ ಏರಿತು. ಅಕ್ಕಪಕ್ಕದ ಪ್ರದೇಶಗಳಿಗಿಂತ ಇದು ಹೆಚ್ಚಾಗಿದೆ, ಉದಾಹರಣೆಗೆ ಮುಖ್ಯಭೂಮಿ ಚೀನಾ (೦.೪೪೭), ದಕ್ಷಿಣ ಕೊರಿಯಾ (೦.೩೧೬) ಮತ್ತು ಸಿಂಗಪುರ (೦.೪೨೫).[೭೮]

ಶಿಕ್ಷಣ ವ್ಯವಸ್ಥೆ[ಬದಲಾಯಿಸಿ]

Main article: Education in Macau
ಮಕಾವು ವಿಶ್ವವಿದ್ಯಾನಿಲಯದ ಆಡಳಿತದ ಕಟ್ಟಡ, ಪ್ರದೇಶದ ಮೊದಲ ಅಧುನಿಕ ವಿಶ್ವವಿದ್ಯಾನಿಲಯ.

ಅಲ್ಲಿನ ಸ್ಥಳೀಯ ನಿವಾಸಿಗರಿಗೆ ಹದಿನೈದು-ವರ್ಷ ಉಚಿತ ಶಿಕ್ಷಣದ ಕೊಡುಗೆ ಪ್ರಚಲಿತದಲ್ಲಿದೆ. ಅದು ಮೂರು-ವರ್ಷ ಶಿಶುವಿಹಾರ, ನಂತರ ಆರು-ವರ್ಷದ ಪ್ರಾಥಮಿಕ ಶಿಕ್ಷಣ ಮತ್ತು ಆರು-ವರ್ಷ ಮಾಧ್ಯಮಿಕ ಶಿಕ್ಷಣವನ್ನು ಒಳಗೊಂಡಿದೆ. ಕ್ಷೇತ್ರದ ಸಾಕ್ಷರತೆ ಮಟ್ಟ ೯೩.೫%. ಅನಕ್ಷರಸ್ಥರು ಹೆಚ್ಚಿನವರು ೬೫ ವರ್ಷ ಅಥವಾ ಮೇಲ್ಪಟ್ಟ ಹಿರಿಯ ನಿವಾಸಿಗಳು; ಯುವ ಪೀಳಿಗೆಯವರು ಉದಾಹರಣೆಗೆ ೧೫–೨೯ ವರ್ಷದ ಜನಸಂಖ್ಯೆ, ೯೯%ಗಿಂತ ಮೇಲ್ಪಟ್ಟ ಸಾಕ್ಷರತೆಯ ಮಟ್ಟವನ್ನು ಹೊಂದಿದೆ.[೬೮] ಪ್ರಚಲಿತವಾಗಿ, ಮಕಾವುವಿನಲ್ಲಿ ಒಂದೇ ಒಂದು ಶಾಲೆಯಿದೆ, ಅದರಲ್ಲಿ ಪೋರ್ಚಿಗೀಸ್ ಕಲಿಕೆಯ ಮಾಧ್ಯಮವಾಗಿದೆ.

ಮಕಾವು ತನ್ನದೇ ಆದ ಸ್ವಂತ ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆಯನ್ನು ಹೊಂದಿಲ್ಲ; ಮೂರನೆಯ ಮಟ್ಟದ್ದಲ್ಲದ ಶಾಲೆಗಳು ಬ್ರಿಟಿಷ್, ಚೈನೀಸ್ ಅಥವಾ ಪೋರ್ಚಿಗೀಸ್ ಶಿಕ್ಷಣ ವ್ಯವಸ್ಥೆಯನ್ನು ಅನುಸರಿಸುತ್ತವೆ. ಈಗ ಕ್ಷೇತ್ರದಲ್ಲಿ ೧೦ ಮೂರನೆಯ ಮಟ್ಟದ ಶಿಕ್ಷಣ ಸಂಸ್ಥೆಗಳಿವೆ. ಅವುಗಳಲ್ಲಿ ನಾಲ್ಕು ಸಾರ್ವಜನಿಕ ಶಾಲೆಗಳು.[೩೨] ೨೦೦೬ರಲ್ಲಿ, ಅಂತರಾಷ್ಟ್ರೀಯ ವಿದ್ಯಾರ್ಥಿ ನಿರ್ಧರಿಸುವಿಕೆ ಕಾರ್ಯಕ್ರಮ, ಇದು OECDಯಿಂದ ಸಂಘಟಿತವಾದ ೧೫-ವರ್ಷ-ವಯಸ್ಸಿನ ಶಾಲಾ ಮಕ್ಕಳ ತಾರ್ಕಿಕ ಕಾರ್ಯ ನಿರ್ವಹಣೆ/ಸಾಮರ್ಥ್ಯದ ಒಂದು ವಿಶ್ವವ್ಯಾಪಿ ಪರೀಕ್ಷೆ, ಇದರಲ್ಲಿ ಮಕಾವು ಐದನೆಯ ಮತ್ತು ಆರನೆಯ ಸ್ಥಾನವನ್ನು ಕ್ರಮವಾಗಿ ವಿಜ್ಞಾನ ಮತ್ತು ಗಣಿತದ ಸಮಸ್ಯೆ ಬಿಡಿಸುವುದರಲ್ಲಿ ಗಳಿಸಿತು.[೭೯] ಆದರೂ, ಮಕಾವು ವಿನ ಹೆಚ್ಚು ಆದಾಯದ ಪ್ರದೇಶಗಳಲ್ಲಿ ಶಿಕ್ಷಣ ಮಟ್ಟಗಳು ಕೆಳ ಹಂತದಲ್ಲಿವೆ. ೨೦೦೬ ಗಣತಿಯ ಪ್ರಕಾರ, ೧೪ ವರ್ಷ ಮತ್ತು ಮೇಲ್ಪಟ್ಟ ವಯಸ್ಸಿನ ನಿವಾಸಿ ಜನಸಂಖ್ಯೆಯಲ್ಲಿ, ಕೇವಲ ೫೧.೮% ಮಾಧ್ಯಮಿಕ ಶಿಕ್ಷಣ ಮತ್ತು ೧೨.೬% ಮೂರನೆಯ ಮಟ್ಟದ ಶಿಕ್ಷಣವನ್ನು ಹೊಂದಿದ್ದಾರೆ.[೬೮]

ಮಕಾವು ಮೂಲ ಕಾನೂನು ಅಧ್ಯಾಯ VI ಅನುಚ್ಛೇಧ ೧೨೧ ಆದೇಶಿಸಿದಂತೆ, ಮಕಾವು ಸರ್ಕಾರ, ತನ್ನದೇ ಸ್ವಂತ, ಶಿಕ್ಷಣದ ಕಾರ್ಯನೀತಿಗಳನ್ನು ವ್ಯವಸ್ಥಿತವಾಗಿ ನಿರೂಪಿಸಬೇಕು, ಶಿಕ್ಷಣ ವ್ಯವಸ್ಥೆ ಮತ್ತು ಅದರ ಆಡಳಿತ, ಬೋಧನೆಯ ಭಾಷೆ ನಿಧಿಗಳ ಹಂಚಿಕೆ, ಪರೀಕ್ಷೆ ವ್ಯವಸ್ಥೆ, ಶೈಕ್ಷಣಿಕ ಬೆಳವಣಿಗೆಯನ್ನು ಪ್ರೋತ್ಸಾಹಿಸುವ ಶಿಕ್ಷಣ ಆರ್ಹತೆ ಮತ್ತು ಶೈಕ್ಷಣಿಕ ಪ್ರಶಸ್ತಿಗಳ ವ್ಯವಸ್ಥೆಯ ಗುರುತಿಸುವಿಕೆಗಳಿಗೆ ಸಂಬಂಧಿಸಿದ ಕಾರ್ಯನೀತಿಗಳು ಅವುಗಳಲ್ಲಿ ಸೇರಿವೆ. ಸರ್ಕಾರ ಕಾನೂನು ಸಮ್ಮತಿಯ ಜೊತೆಗೆ, ಕ್ರಮೇಣವಾಗಿ ಒಂದು ಕಡ್ಡಾಯ ಶಿಕ್ಷಣ ವ್ಯವಸ್ಥೆ ಸ್ಥಾಪಿಸಿತು. ಸಮುದಾಯ ಸಂಸ್ಥೆಗಳು ಮತ್ತು ವ್ಯಕ್ತಿಗಳು, ಕಾನೂನು ಸಮ್ಮತಿಯ ಜೊತೆಗೆ, ಹಲವು ವಿಧಗಳ ಶೈಕ್ಷಣಿಕ ಉದ್ಯಮಗಳನ್ನು ನಡೆಸಬಹುದು.[೬೭]

ಆರೋಗ್ಯ ರಕ್ಷಣೆ[ಬದಲಾಯಿಸಿ]

ಮಕಾವುನಲ್ಲಿ ಒಂದು ಪ್ರಮುಖ ಸಾರ್ವಜನಿಕ ಆಸ್ಪತ್ರೆ, ಹಾಸ್ಪಿಟಲ್ ಕೊಂಡೆ ಎಸ್. ಜನವರಿಯೊ ಮತ್ತು ಒಂದು ಪ್ರಮುಖ ಖಾಸಗಿ ಆಸ್ಪತ್ರೆ ಹಾಸ್ಪಿಟಲ್ ಕಿಯಾಂಗ್ ವು ಸೇವೆ ಒದಗಿಸುತ್ತವೆ. ಎರಡೂ ಸಹ ಮಕಾವು ಪರ್ಯಾಯ ದ್ವೀಪದಲ್ಲಿ ಸ್ಥಾಪಿತವಾಗಿವೆ. ಹಾಗೇ ಕೊಟೈ ನಲ್ಲಿರುವ ಮಕಾವು ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯ ಅಸ್ಪತ್ರೆ ಹೆಸರಿನ ಒಂದು ವಿಶ್ವವಿದ್ಯಾನಿಲಯ ಅಸ್ಪತ್ರೆ ಸಹ ಕಾರ್ಯನಿರ್ವಹಿಸುತ್ತದೆ. ಆಸ್ಪತ್ರೆಗಳ ಜೊತೆಗೆ, ಅಲ್ಲಿನ ನಿವಾಸಿಗಳಿಗೆ ಉಚಿತ ಮೂಲಭೂತ/ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆ ಒದಗಿಸುವ ಹಲವು ಆರೋಗ್ಯ ಕೇಂದ್ರಗಳನ್ನು ಮಕಾವು ಹೊಂದಿದೆ. ಸಾಂಪ್ರದಾಯಿಕ ಚೈನೀಸ್ ವೈದ್ಯಶಾಸ್ತ್ರದಲ್ಲಿ ಸಮಾಲೋಚನೆ ಸಹ ಲಭ್ಯ.[೮೦]

ಪ್ರಸ್ತುತವಾಗಿ ಮಕಾವುವಿನ ಯಾವುದೇ ಆಸ್ಪತ್ರೆಯನ್ನು ಅಂತರಾಷ್ಟ್ರೀಯ ಆರೋಗ್ಯ ರಕ್ಷಣೆ ಅಂಗೀಕಾರದ ಮೂಲಕ ಸ್ವತಂತ್ರವಾಗಿ ಗೊತ್ತು ಮಾಡಿಲ್ಲ. ಮಕಾವುವಿನಲ್ಲಿ ಪಾಶ್ಚಿಮಾತ್ಯ-ಶೈಲಿಯ ವೈದ್ಯಕೀಯ ಶಾಲೆಗಳಿಲ್ಲ ಮತ್ತು ಹಾಗಾಗಿ ಮಕಾವುವಿನ ಎಲ್ಲಾ ಅಭಿಲಾಷೆ ಹೊಂದಿರುವ ವೈದ್ಯರು ಅವರ ಶಿಕ್ಷಣವನ್ನು ಮತ್ತು ಅರ್ಹತೆಯನ್ನು ಬೇರೆ ಕಡೆಯಿಂದ ಪಡೆಯಬೇಕು.[೩೨] ಸ್ಥಳೀಯ ದಾದಿಗಳು ಮಕಾವು ಪಾಲಿಟೆಕ್ನಿಕ್ ಇನ್‌ಸ್ಟಿಟ್ಯೂಟ್ ಮತ್ತು ಕಿಯಾಂಗ್ ವು ನರ್ಸಿಂಗ್ ಕಾಲೇಜಿನಲ್ಲಿ ತರಭೇತಿ ಪಡೆಯುತ್ತಾರೆ.[೮೧][೮೨] ಪ್ರಸ್ತುತವಾಗಿ ಮಕಾವುವಿನಲ್ಲಿ ಪ್ರಸವಶಾಸ್ತ್ರದಲ್ಲಿ ತರಭೇತಿ ಶಿಕ್ಷಣಗಳು ಇಲ್ಲ.

ಸಾರ್ವಜನಿಕ ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳ ನಡುವಿನ ಚಟುವಟಿಕೆಗಳನ್ನು ಸಂಘಟಿತವಾಗಿಸುವಲ್ಲಿ ಮಕಾವಿನ ಆರೋಗ್ಯ ಬ್ಯೂರೋ ಮುಖ್ಯವಾಗಿ ಹೊಣೆ ಹೊಂದಿದೆ ಮತ್ತು ವಿಶಿಷ್ಟವಾದ ಮತ್ತು ಪ್ರಾಥಮಿಕ ಆರೋಗ್ಯರಕ್ಷಣೆ ಸೇವೆಗಳ ಮೂಲಕ , ಹಾಗೇ ರೋಗ ನಿವಾರಕ ಮತ್ತು ಆರೋಗ್ಯ ಅಭಿವೃದ್ಧಿಗಳ ಮೂಲಕ ಪ್ರಜೆಗಳ ಆರೋಗ್ಯದ ಭರವಸೆ ಕೊಡುತ್ತದೆ.[೮೩] ಮಕಾವು ಖಾಯಿಲೆ ನಿಯಂತ್ರಕ ಮತ್ತು ನಿವಾರಕ ಕೇಂದ್ರ ೨೦೦೧ರಲ್ಲಿ ಸ್ಥಾಪಿತ ವಾಯಿತು. ಇದು ಮಕಾವುವಿನ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು, ಮತ್ತು ರಕ್ತ ಪೂರೈಕೆ ಕೇಂದ್ರಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತದೆ. ಇದು ಜನಸಂಖ್ಯೆಯನ್ನು ಭಾದಿಸುವ ಖಾಯಿಲೆಗಳ ಚಿಕಿತ್ಸೆ ಮತ್ತು ನಿವಾರಕ ಸಂಸ್ಥೆಯನ್ನು ಸಹ ನಿರ್ವಹಿಸುತ್ತದೆ, ಆಸ್ಪತ್ರೆಗಳು ಮತ್ತು ಖಾಸಗಿ ಆರೋಗ್ಯ ರಕ್ಷಣೆ ಒದಗಿಸುವವರಿಗೆ ಗೊತ್ತುವಳಿಗಳನ್ನು ನಿಗದಿ ಪಡಿಸುತ್ತದೆ ಮತ್ತು ಪರಾವನೆಗೆಗಳನ್ನು ನೀಡುತ್ತದೆ.[೮೪]

ಸಾರಿಗೆ[ಬದಲಾಯಿಸಿ]

Main article: Transport in Macau
ಟ್ರಿಶಾ ಮಕಾವುವಿನ ಒಂದು ಪ್ರಮುಖ ಸಾರ್ವಜನಿಕ ಸಾರಿಗೆ ವಿಧಾನವಾಗಿತ್ತು.ಆದರೆ, ಈಗ ಕೇವಲ ಪ್ರೇಕ್ಷಣೇಯ ಉದ್ದೇಶಕ್ಕೆ ಮಾತ್ರ.

ಮಕಾವುನಲ್ಲಿ ಸಾರಿಗೆ ಸಂಚಾರ ಎಡಬದಿಯಿಂದ ಚಲಿಸುತ್ತದೆ. ಮಕಾವು ಮಕಾವು ಪರ್ಯಾಯದ್ವೀಪ, ಕೊಟಾಯೈ, ತೈಪಾ ದ್ವೀಪ ಮತ್ತು ಕೊಲೊಯನ್ ದ್ವೀಪಗಳನ್ನು ಸಂಪರ್ಕಿಸುವ ಸುಸ್ಥಾಪಿತ ಸಾರ್ವಜನಿಕ ಸಾರಿಗೆ ಜಾಲವನ್ನು ಹೊಂದಿದೆ. ಮಕಾವುವಿನಲ್ಲಿ ಬಸ್ಸುಗಳು ಮತ್ತು ಟ್ಯಾಕ್ಸಿಗಳು ಸಾರ್ವಜನಿಕ ಸಾರಿಗೆಯ ಪ್ರಮುಖ ಬಗೆಗಳು. ಪ್ರಸ್ತುತವಾಗಿ ಎರಡು ಕಂಪನಿಗಳು, ಟ್ರ್ಯಾನ್ಸ್‌ಮ್ಯಾಕ್ ಮತ್ತು Transportas Companhia de ಮಕಾವು, ಮಕಾವುವಿನಲ್ಲಿ ಫ್ರ್ಯಾಂಚೈಸ್ಡ್ ಸಾರ್ವಜನಿಕ ಬಸ್ ಸೇವೆಗಳ ಕೆಲಸ ನಿರ್ವಹಿಸುತ್ತವೆ.[೮೫] ಸೈಕಲು ಮತ್ತು ರಿಕ್ಷಾದ ಒಂದು ಮಿಶ್ರ ವಾಹನ ಟ್ರಿಷಾ ಲಭ್ಯವಿದ್ದು, ಇದು ಪ್ರಮುಖವಾಗಿ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವ ಉದ್ದೇಶಗಳಿಗಾಗಿದೆ.

ಹೊರಬಂದರು ಫೆರ್ರಿ ಟರ್ಮಿನಲ್ ಗಡಿಯ ಉದ್ದಕ್ಕೂ ಮಕಾವು ಮತ್ತು ಹಾಂಗ್ ಕಾಂಗ್‌ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಸಾರಿಗೆ ಸೇವೆಯನ್ನು ಒದಗಿಸುತ್ತದೆ. ಹಾಗೆಯೇ ಆಂತರಿಕ ಬಂದರಿನಲ್ಲಿ ಯುಯೆಟ್ ಟುಂಗ್ ಟರ್ಮಿನಲ್ ಮಕಾವು ಮತ್ತು ಶೆಕಾವು ಮತ್ತು ಶೇಂಜೆನ್ ಸೇರಿದಂತೆ ಮುಖ್ಯಭೂಭಾಗ ಚೀನಾದಲ್ಲಿನ ನಗರಗಳ ನಡುವೆ ಪ್ರಯಾಣಿಸುವವರಿಗೆ ಸೇವೆ ಒದಗಿಸುತ್ತದೆ.[೮೬]

ಮಕಾವು ಒಂದು ಕ್ರಿಯಾಶೀಲ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹೊಂದಿದ್ದು ಅದು ಮಕಾವು ಅಂತರಾಷ್ಟ್ರೀಯ ವಿಮಾನನಿಲ್ದಾಣ ಎಂದು ಪರಿಚಿತವಾಗಿದೆ. ಅದು ತೈಪಾದ ಪೂರ್ವ ತುದಿಯಲ್ಲಿ ಮತ್ತು ಸಮುದ್ರದ ಹತ್ತಿರ ಸ್ಥಾಪಿತವಾಗಿದೆ. ಚೀನಾ ಮತ್ತು ತೈವಾನ್‌ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣವು ಪ್ರಮುಖ ಅಶಾಶ್ವತ ಕೇಂದ್ರ ಸ್ಥಾನಗಳಲ್ಲಿ ಒಂದಾಗಿ ಸೇವೆ ಸಲ್ಲಿಸುತ್ತಿತ್ತು. ಆದರೆ ಈಗ ಆ ಎರಡು ಪ್ರದೇಶಗಳ ನಡುವೆ ನೇರ ವಿಮಾನಗಳ ಪರಿಚಯದಿಂದ, ಈ ನಿಟ್ಟಿನಲ್ಲಿ ಪ್ರಯಾಣಿಕರ ಸಂಚಾರ ಕಡಿಮೆಯಾಗಿದೆ.[೮೭][೮೮] ಇದು ವೀವಾ ಮಕಾವು ಮತ್ತು ಏರ್ ಮಕಾವುವಿಗೆ ಪ್ರಾಥಮಿಕ ಕೇಂದ್ರಸ್ಥಾನವಾಗಿದೆ. ೨೦೦೬ರಲ್ಲಿ, ವಿಮಾನ ನಿಲ್ದಾಣವು ಸುಮಾರು ೫ ಮಿಲಿಯನ್‌ ಪ್ರಯಾಣಿಕರನ್ನು ನಿಭಾಯಿಸಿದೆ.[೮೯]

ಸಂಸ್ಕೃತಿ[ಬದಲಾಯಿಸಿ]

Main article: Culture of Macau
ಗುಯನ್ ಯಿನ್ ಮೂರ್ತಿ, ಗುಯನ್ ಯಿನ್ ಮತ್ತು ಹೋಲಿ ಮೇರಿ ದೇವತೆಗಳ ಸಂಪ್ರಾದಾಯಿಕ ಆಕಾರಗಳ ನಡುವಿನ ಒಂದು ಸಮ್ಮಿಶ್ರಣ.

ಚೈನೀಸ್ ಮತ್ತು ಪೋರ್ಚುಗೀಸ್‌ ಸಂಸ್ಕೃತಿಗಳ ಮಿಶ್ರಣ ಮತ್ತು ನಾಲ್ಕು ಶತಮಾನಗಳಿಗಿಂತ ಹೆಚ್ಚು ಧಾರ್ಮಿಕ ಸಂಪ್ರದಾಯಗಳ ಕಾರಣದಿಂದಾಗಿ ಅನುಕರಿಸಲಾಗದಷ್ಟು ರೀತಿಯ ರಜಾದಿನಗಳು ಮತ್ತು ಹಬ್ಬಗಳು ಮತ್ತು ಸಾಂಸ್ಕೃತಿಕ ಆಚರಣೆಗಳು ಇಲ್ಲಿಯ ಭಾಗವಾಗಿವೆ. ನವೆಂಬರ್‌ನಲ್ಲಿನ ಮಕಾವು ಗ್ಯ್ರಾಂಡ್ ಪ್ರಿಕ್ಸ್ ವರ್ಷದ ಅತಿ ದೊಡ್ಡ ಸಂದರ್ಭವಾಗಿದೆ. [೯೦] ಆಗ ಮಕಾವು ಪರ್ಯಾಯ ದ್ವೀಪದ ರಸ್ತೆಗಳನ್ನು ಮೊನಾಕೊ ಗ್ರ್ಯಾಂಡ್ ಪ್ರಿಕ್ಸ್‌ನ ಸಮ ರೂಪಗಳನ್ನು ಹೊಂದಿರುವ ಒಂದು ಮೋಟಾರು ಪಂದ್ಯದ ಹಾದಿ/ರೇಸ್ ಟ್ಯ್ರಾಕ್‌ಗಳಾಗಿ ಪರಿವರ್ತಿಸಲಾಗುತ್ತದೆ. ಮಾರ್ಚ್‌ನಲ್ಲಿ ಮಕಾವು ಆರ್ಟ್ಸ್ ಫೆಸ್ಟಿವಲ್,[೯೧] ಸೆಪ್ಟೆಂಬರ್‌ನಲ್ಲಿ ಅಂತರಾಷ್ಟ್ರೀಯ ಫೈರ್‌ವರ್ಕ್ಸ್ ಡಿಸ್ಪ್ಲೇ ಕಾನ್ಟೆಸ್ಟ್,[೯೨] ಆಕ್ಟೋಬರ್ ಮತ್ತು/ಅಥವಾ ನವೆಂಬರ್‌ನಲ್ಲಿ ಅಂತರಾಷ್ಟ್ರೀಯ ಮ್ಯೂಸಿಕ್ ಫೆಸ್ಟಿವಲ್,[೯೩] ಡಿಸೆಂಬರ್‌ನಲ್ಲಿ ಮಕಾವು ಅಂತರಾಷ್ಟ್ರೀಯ ಮ್ಯಾರಥನ್[೯೪] ಮಕಾವುವಿನ ಇತರೆ ವಾರ್ಷಿಕ ಸಂದರ್ಭಗಳು.

ಲಾರ್ಗೊ ಡೊ ಸೇನಡೋದಲ್ಲಿನ ಫೋರ್ಚುಗೀಸ್ ನೆಲೆಗಟ್ಟು (ಕ್ಯಾಲ್ಕ್ಯಾಡಾ)

ಚಾಂದ್ರಮಾನ ಚೈನೀಸ್ ಹೊಸ ವರ್ಷಅತಿ ಪ್ರಮುಖ ಸಾಂಪ್ರದಾಯಿಕ ಹಬ್ಬ ಮತ್ತು ಸಾಮಾನ್ಯವಾಗಿ ಇದರ ಆಚರಣೆ ಜನವರಿಯ ಕೊನೆಯಲ್ಲಿ ಅಥವಾ ಫೆಬ್ರವರಿ ಆರಂಭದಲ್ಲಿ ನಡೆಯುತ್ತದೆ.[೯೫][೯೬] ತೈಪಾದಲ್ಲಿನ ಪೊವು ತೈ ಅನ್ ದೇವಸ್ಥಾನ ಟೊವು ಟೆಯಿನ ಉತ್ಸವಕ್ಕೆ ಸ್ಥಳ. ಇದು ಫೆಬ್ರವರಿಯಲ್ಲಿನ ಭೂಮಿ ದೇವರ ಉತ್ಸವ. ಫ್ಯಾಶನ್ ಅಫ್ ಅವರ್ ಲಾರ್ಡ್‌ನ ಮೆರವಣಿಗೆ ಕ್ಯಾಥೋಲಿಕ್‌ರ ಒಂದು ಚಿರಪರಿಚಿತ ಧಾರ್ಮಿಕ ವಿಧಿ ಮತ್ತು ಮೆರವಣಿಗೆಯಾಗಿದೆ. ಇದು ಇಗ್ರೆಜಾ ಡೆ ಸ್ಯಾಂಟೋ ಅಗೊಸ್ಟೀನೋದಿಂದ ಇಗ್ರೆಜಾ ಡ ಸೆ ಕೆಥಡ್ರೆಲ್‌ವರೆಗೆ ಪ್ರಯಾಣಿಸುತ್ತದೆ. ಇದು ಸಹ ಫೆಬ್ರವರಿಯಲ್ಲಿ ನಡೆಯುತ್ತದೆ.[೪೧]

A-Ma ದೇವಸ್ಥಾನ, ಇಲ್ಲಿ ಮಾತ್ಸು ದೇವತೆಯನ್ನು ಆರಾಧಿಸಲಾಗುತ್ತದೆ. ಏಪ್ರಿಲ್‌ನಲ್ಲಿ A-Ma ಉತ್ಸವದ ಸಮಯದಲ್ಲಿ ಹಲವು ಭಕ್ತರೊಂದಿಗೆ ಇದು ಪೂರ್ಣ ರಂಗೇರಿರುತ್ತದೆ. ಡ್ರಂಕನ್ ಡ್ರಾಗನ್ ಉತ್ಸವದಲ್ಲಿ ನೃತ್ಯ ಮಾಡುವ ಡ್ರಾಗನ್‌ಗಳು ಮತ್ತು ಬಾಥಿಂಗ್ ಅಫ್ ಲಾರ್ಡ್ ಬುದ್ಧ ಉತ್ಸವ ದಲ್ಲಿ ಹೊಳೆಯುವ-ಸ್ವಚ್ಛ ಬುದ್ಧ ಮೂರ್ತಿಗಳು ಮೇ ತಿಂಗಳಿನಲ್ಲಿ ಸಾಮಾನ್ಯವಾಗಿವೆ. ಕೊಲೊಯನ್ ಹಳ್ಳಿಯಲ್ಲಿ, ತಾವೋಯಿಸ್ಟ್‌ ಟಾಮ್ ಕಾಂಗ್‌ ದೇವರನ್ನು ಸಹ ಅದೇ ದಿನದಂದು ಆರಾಧಿಸಲಾಗುತ್ತದೆ.[೪೧] ಡ್ರಗನ್ ಬೋಟ್ ಫೆಸ್ಟಿವಲ್ ನ್ನು ಜೂನ್‌ನಲ್ಲಿ ನ್ಯಾಮ್ ವ್ಯಾನ್ ಸರ‍ೊವರದಲ್ಲಿ ಆಟಕ್ಕೆ ತರಲಾಯಿತು ಮತ್ತು ಹಂಗರಿ ಘೊಸ್ಟ್ ಫೆಸ್ಟಿವಲ್ ಪ್ರತಿ ವರ್ಷ ಆಗಸ್ಟ್ ಕೊನೆ ಮತ್ತು/ಅಥವಾ ಸೆಪ್ಟೆಂಬರ್ ಆರಂಭದಲ್ಲಿರುತ್ತದೆ. ವರ್ಷದ ಎಲ್ಲಾ ಸಂದರ್ಭಗಳು ಮತ್ತು ಉತ್ಸವಗಳು ಡಿಸೆಂಬರ್‌ನಲ್ಲಿನ ವಿಂಟರ್ ಸೊಲಿಸ್ಟಿಸ್‌ನ ಜೊತೆ ಮುಕ್ತಾಯವಾಗುತ್ತದೆ.[೯೪]

ಮಕಾವುವಿನಲ್ಲಿ ಸ್ಥಳೀಯ ಆಹಾರಪದ್ಧತಿ ಕಾಂಟೊನೀಸ್ ಮತ್ತು ಪೋರ್ಚುಗೀಸ್ ಪಾಕಪದ್ಧತಿಗಳ ಸಮ್ಮಿಶ್ರಣವನ್ನು ಹೊಂದಿದೆ.[೯೭] ಹಲವು ವಿಶಿಷ್ಟ ಭಕ್ಷ್ಯಗಳು ಫೋರ್ಚುಗೀಸ್‌ ನಾವಿಕರ ಹೆಂಡತಿಯರು ಯುರೋಪಿಯನ್ ಭಕ್ಷ್ಯಗಳನ್ನು ಅನುಕರಿಸುವ ಪ್ರಯತ್ನದಲ್ಲಿ ಬಳಸುತ್ತಿದ್ದ ಮಸಾಲೆ ಪಧಾರ್ಥಗಳ ಸಮ್ಮಿಶ್ರಣಗಳ ಫಲಿತಾಂಶವಾಗಿವೆ. ಇವುಗಳಲ್ಲಿ ಬಳಸುವ ಆಹಾರ ಅಂಶಗಳು ಮತ್ತು ಮಸಾಲೆಗಳು ಯುರೋಪ್, ದಕ್ಷೀಣ್ ಆಮೆರಿಕ, ಆಫ್ರಿಕಾ, ಭಾರತ, ಮತ್ತು ಆಗ್ನೇಯ ಏಷ್ಯಾ, ಹಾಗೂ ಸ್ಥಳೀಯ ಚೈನೀಸ್ ಅಂಶಗಳನ್ನು ಒಳಗೊಂಡಿವೆ.[೯೮] ವಿಶಿಷ್ಟವಾಗಿ, ಮಕಾನೀಸ್ ಆಹಾರ ಹಲವು ಮಸಾಲೆ ಪದಾರ್ಥಗಳು ಮತ್ತು ಸ್ವಾದಗಳಾದ ಅರಿಶಿನ, ತೆಂಗಿನ ಹಾಲು, ದಾಲ್ಚಿನ್ನಿ ಮತ್ತು ಬಕಾಲ್ಹೌ, ಗಳನ್ನು ಒಳಗೊಂಡ ಅನುಭವಪೂರ್ಣ, ಅವು ವಿಶೇಷ ಸುಗಂಧ ಮತ್ತು ರುಚಿಗಳನ್ನು ನೀಡುತ್ತವೆ.[೯೯] ಗಿಲಿನ್ಹಾ ಎ ಪೋರ್ಚುಗೀಸಾ, ಗಿಲಿನ್ಹಾ ಎ ಆಫ್ರಿಕಾನಾ (ಆಫ್ರಿಕನ್‌ ಕೋಳಿ ಮಾಂಸ), ಬಕಾಲ್ಹೌ, ಮಕಾನೀ ಚಿಲ್ಲಿ ಶ್ರಿಂಪ್ಸ್ ಮತ್ತು ಸ್ಟಿರ್-ಫ್ರೈ ಏಡಿ ಮಸಾಲೆಗಳು ಇಲ್ಲಿನ ಪ್ರಸಿದ್ಧ ಭಕ್ಷ್ಯಗಳು. ಕತ್ತರಿಸಿದ ಹಂದಿಮಾಂಸದ ಬನ್, ಶುಂಠಿ ಹಾಲು ಮತ್ತು ಫೋರ್ಚುಗೀಸ್ ಶೈಲಿಯ ಮೊಟ್ಟೆ ತಿನಿಸುಗಳು ಮಕಾವುವಿನಲ್ಲಿ ತುಂಬಾ ಜನಪ್ರಿಯ.[೧೦೦]

ಮಕಾವು ಹಲವು ಐತಿಹಾಸಿಕ ಸಂಪತ್ತುಗಳನ್ನು ನಗರ ಪ್ರದೇಶಗಳಲ್ಲಿ ಸಂರಕ್ಷಿಸುತ್ತದೆ. ಮಕಾವುನ ಐತಿಹಾಸಿಕ ಕೇಂದ್ರವನ್ನು, ಇದು ಸುಮಾರು ಇಪ್ಪತೈದು ಐತಿಹಾಸಿಕ ಸ್ಮಾರಕಗಳು ಮತ್ತು ಸಾರ್ವಜನಿಕ ಚೌಕಗಳನ್ನು ಒಳಗೊಂಡಿದೆ. ಜುಲೈ ೧೫, ೨೦೦೫ರಂದು ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ನಡೆದ ವಿಶ್ವ ಸಂರಕ್ಷಣಾ ಕಮಿಟಿಯ ೨೯ನೆ ಅಧಿವೇಶನದ ಸಮಯದಲ್ಲಿ, UNESCOನಿಂದ ಒಂದು ವಿಶ್ವ ಸಂರಕ್ಷಣಾ ಸ್ಮಾರಕ ಎಂದು ಅಧಿಕೃತವಾಗಿ ಪಟ್ಟಿ ಮಾಡಲಾಯಿತು.[೧೦೧]

ಕ್ರೀಡೆ[ಬದಲಾಯಿಸಿ]

ಮಕಾವುನಲ್ಲಿ ಅತಿ ಹೆಚ್ಚು ಅಭ್ಯಾಸ ಮಾಡುವ ಕ್ರೀಡೆಗಳಲ್ಲಿ ಒಂದು ಪೋರ್ಚುಗೀಸರು ಬಿಟ್ಟು ಹೋದ ರಿಂಕ್ ಹಾಕಿ ಮಕಾವುವಿನ ರಾಷ್ಟ್ರೀಯ ತಂಡ ಏಷ್ಯಾದ ಅತಿ ಬಲಶಾಲಿ ತಂಡವಾಗಿದೆ ಮತ್ತು ಹಲವು ರಿಂಕ್ ಹಾಕಿ ಏಷಿಯನ್ ಚಾಂಪಿಯನ್‌ಶಿಪ್‌ ಪ್ರಶಸ್ತಿಗಳನ್ನು ಗಳಿಸಿದೆ. ಚೀನಾದ ಡಾಲಿಯನ್ ನಲ್ಲಿ 13ನೇ ಏಷಾಯನ್ ರೋಲರ್ ಹಾಕಿ ಚಾಂಪಿಯನ್‌ಶಿಪ್‌ ಅದು ಜಯಗಳಿಸಿದ ಇತ್ತೀಚಿನ ಚಾಂಪಿಯನ್‌ಶಿಪ್.
ಮಕಾವು ಯಾವಾಗಲೂ ರಿಂಕ್ ಹಾಕಿ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ B ವಿಭಾಗದಲ್ಲಿ ಭಾಗವಹಿಸುತ್ತದೆ.

ಅಂತರಾಷ್ಟ್ರೀಯ ಸಂಬಂಧಗಳು[ಬದಲಾಯಿಸಿ]

ಅವಳಿ ನಗರಗಳು — ಸಹೋದರ ನಗರಗಳು (友好城市)[ಬದಲಾಯಿಸಿ]

ಮಕಾವು ಇದರ ಜೊತೆಗೆ ಅವಳಿಯಾಗಿದೆ :

ಇವನ್ನೂ ಗಮನಿಸಿ[ಬದಲಾಯಿಸಿ]

Main article: Outline of Macau

ಆಕರಗಳು[ಬದಲಾಯಿಸಿ]

 1. As reflected in the Chinese text of the Macau emblem, the text of the Macau Basic Law, and the Macau Government Website, the full name of the territory is the Macau Special Administrative Region of the People's Republic of China. Although the convention of "Macau Special Administrative Region" and "Macau" can also be used.
 2. The Macau Basic Law states that the official languages are "Chinese and Portuguese." It does not explicitly specify the standard for "Chinese". While Standard Mandarin and Simplified Chinese characters are used as the spoken and written standards in mainland China, Cantonese and Traditional Chinese characters are the long-established de facto standards in Macau.
 3. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 4. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 5. ೫.೦ ೫.೧ ೫.೨ ಮಕಾವು ವಾರ್ಷಿಕ ಪುಸ್ತಕ ೨೦೦೭, ೪೭೫.
 6. ೬.೦ ೬.೧ ಚಾನ್, ೧೨-೧೩.
 7. ಫುಂಗ್, ೫.
 8. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 9. ೯.೦ ೯.೧ ೯.೨ ೯.೩ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 10. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 11. ೧೧.೦ ೧೧.೧ ಮಕಾವು ವಾರ್ಷಿಕ ಪುಸ್ತಕ ೨೦೦೭, ೫೧೭.
 12. ಫುಂಗ್, ೨೯೮.
 13. ೧೩.೦ ೧೩.೧ ೧೩.೨ ೧೩.೩ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 14. ಚಾನ್, ೩-೪.
 15. ಫುಂಗ್, ೫-೬.
 16. ೧೬.೦ ೧೬.೧ Fung, ೭.
 17. <ಮಕಾವುನ ಐತಿಹಾಸಿಕ ವ್ಯಕ್ತಿಗಳು>, CCTV ದಿಂದ.
 18. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 19. <ಮಕಾವುನ ಐತಿಹಾಸಿಕ ವ್ಯಕ್ತಿಗಳು> CCTV ದಿಂದ.
 20. ಮಕಾವು ವಾರ್ಷಿಕ ಪುಸ್ತಕ ೨೦೦೭, ೫೧೮.
 21. Fung, ೪೦೯-೪೧೦.
 22. Fung, ೪೧೦- ೪೧೧.
 23. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 24. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 25. Fung, ೪೧೮.
 26. Fung, ೪೨೪.
 27. ಮಕಾವು ವಾರ್ಷಿಕ ಪುಸ್ತಕ ೨೦೦೭, ೫೧೯-೫೨೦.
 28. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 29. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 30. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 31. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 32. ೩೨.೦ ೩೨.೧ ೩೨.೨ ೩೨.೩ ೩೨.೪ Macau 2007 Yearbook. Government Information Bureau of Macau SAR. 2007. ISBN 978-99937-56-09-5. 
 33. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 34. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 35. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 36. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 37. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 38. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 39. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 40. ೪೧.೦ ೪೧.೧ ೪೧.೨ ೪೧.೩ ೪೧.೪ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 41. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 42. ೪೩.೦ ೪೩.೧ ೪೩.೨ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 43. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 44. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 45. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 46. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 47. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 48. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 49. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 50. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 51. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 52. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 53. ೫೪.೦ ೫೪.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 54. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 55. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 56. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 57. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 58. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 59. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 60. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 61. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 62. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 63. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 64. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 65. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 66. ೬೭.೦ ೬೭.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 67. ೬೮.೦ ೬೮.೧ ೬೮.೨ ೬೮.೩ ೬೮.೪ Global Results of By-Census 2006. Statistics and Census Service (DSEC) of the Macau Government. 2007. 
 68. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 69. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 70. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 71. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 72. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 73. ೭೪.೦ ೭೪.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 74. Fernandes, Senna (2004). Maquista Chapado: Vocabulary and Expressions in Macau's Portuguese Creole. Macau: Miguel de and Alan Baxter. 
 75. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 76. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 77. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 78. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 79. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 80. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 81. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 82. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 83. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 84. ಮಕಾವು ವಾರ್ಷಿಕ ಪುಸ್ತಕ ೨೦೦೭, ೪೫೩-೪೫೪.
 85. ಮಕಾವು ವಾರ್ಷಿಕ ಪುಸ್ತಕ ೨೦೦೭,೪೫೮.
 86. Chan, ೫೮.
 87. Fung, ೧೯೮.
 88. ಮಕಾವು ವಾರ್ಷಿಕ ಪುಸ್ತಕ೨೦೦೭, ೪೬೭-೪೬೮.
 89. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 90. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 91. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 92. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 93. ೯೪.೦ ೯೪.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 94. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 95. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 96. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 97. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 98. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 99. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 100. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 101. ಪ್ರಿಫೆಚುರಾ.Sp - ವಿಕೇಂದ್ರೀಕೃತ ಸಹಕಾರ
 102. ಅಂತರರಾಷ್ಟ್ರೀಯ ಸಂಬಂಧಗಳು - ಸಾವೋ ಪಾಲೋ ಸಿಟಿ ಹಾಲ್ - ಅಧಿಕೃತ ಸಹೋದರ ನಗರಗಳು

ಗ್ರಂಥಸೂಚಿ[ಬದಲಾಯಿಸಿ]

 • Chan, S. S. (2000). The Macau Economy. Publications Centre, University of Macau. ISBN 99937-26-03-6. 
 • Fung, Bong Yin (1999). Macau: a General Introduction (in Chinese). Joint Publishing (H.K.) Co. Ltd. ISBN 962-04-1642-2. 
 • Godinho, Jorge (2007). Macau business law and legal system. LexisNexis, Hong Kong. ISBN 9789628937271. 
 • Government Information Bureau (2007). Macau Yearbook 2007. Government Information Bureau of the Macau SAR. ISBN 978-99937-56-09-5. 

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

 • Cremer (Editor) (1988). Macau: City of Commerce and Culture. Univ of Washington Pr. ISBN 0295966084. 
 • De Pina-Cabral (2002). Between China and Europe - Person, Culture and Emotion in Macau. Berg Publishers. ISBN 0826457495. 
 • Eayrs, James (2003). Macau Foreign Policy and Government Guide. International Business Publications, USA. ISBN 0739764519. 

ಹೊರಗಿನ ಕೊಂಡಿಗಳು[ಬದಲಾಯಿಸಿ]

ಈ ಲೇಖನ ಚೀನೀ ಭಾಷೆಯ ಪದಗಳನ್ನು ಹೊಂದಿದೆ. ಸರಿಯಾದ ಪ್ರದರ್ಶನ ಬೆಂಬಲವಿಲ್ಲದೆದ್ದರೆ ನಿಮಗೆ ಚೀನೀ ಅಕ್ಷರಗಳು ಬದಲಿಗೆ ಪ್ರಶ್ನಾರ್ಥಕ ಚಿನ್ಹೆ, ಚೌಕಗಳು ಅಥವಾ ಇನ್ನಾವುದೇ ಚಿನ್ಹೆಗಳು ಕಾಣಬಹುದು.
ಸರ್ಕಾರ
ಸಾಮಾನ್ಯ ಮಾಹಿತಿ
ಪ್ರವಾಸ
ವಿಶೇಷ ಶಿಕ್ಷಣ ಮತ್ತು ಮಗುವಿನ ಬೆಳವಣಿಗೆ
ಕ್ರೀಡೆ
 1. REDIRECT Template:Province-level divisions of China

ಟೆಂಪ್ಲೇಟು:Dependent and other territories of Asia

 1. REDIRECTTemplate:States and territories of East Asia

ಟೆಂಪ್ಲೇಟು:Sino-Tibetan-speaking ಟೆಂಪ್ಲೇಟು:Community of Portuguese Language Countries (CPLP)

"https://kn.wikipedia.org/w/index.php?title=ಮಕಾವು&oldid=655447" ಇಂದ ಪಡೆಯಲ್ಪಟ್ಟಿದೆ