ವಿಷಯಕ್ಕೆ ಹೋಗು

ತೆಂಗಿನ ಹಾಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತೆಂಗಿನ ಹಾಲು.

ತೆಂಗಿನ ಹಾಲು ಬೆಳೆದ ತೆಂಗಿನಕಾಯಿಯ ತಿರುಳಿನಿಂದ ಪಡೆಯುವ ಸಿಹಿಯಾದ, ಹಾಲಿನಂಥ, ಬಿಳಿ ಅಡುಗೆ ಪದಾರ್ಥವಾಗಿದೆ. ಈ ಹಾಲಿಗೆ ಬಣ್ಣ ಮತ್ತು ಉತ್ತಮ ರುಚಿಯು ಅದರಲ್ಲಿರುವ ಹೆಚ್ಚಿನ ಪ್ರಮಾಣದ ಎಣ್ಣೆ ಮತ್ತು ಸಕ್ಕರೆ ಅಂಶಗಳಿಂದ ಬರುತ್ತದೆ. ತೆಂಗಿನ ಹಾಲು ಮತ್ತು ತೆಂಗಿನ ನೀರು (ಎಳನೀರು) ಬೇರೆ ಬೇರೆಯಾಗಿವೆ, ತೆಂಗಿನ ನೀರು ಟೊಳ್ಳು ತೆಂಗಿನಕಾಯಿಯೊಳಗೆ ನೈಸರ್ಗಿಕವಾಗಿ ಕಂಡುಬರುವ ದ್ರವವಾಗಿದೆ.[೧]

ತಯಾರು ಮಾಡುವಿಕೆ[ಬದಲಾಯಿಸಿ]

ಎರಡು ಪ್ರಕಾರದ ತೆಂಗಿನ ಹಾಲು ಇದೆ: ದಪ್ಪಗಿನ ಮತ್ತು ತೆಳ್ಳಗಿನ . ದಪ್ಪಗಿನ ಹಾಲನ್ನು ತುರಿದ ತೆಂಗಿನಕಾಯಿ ತಿರುಳನ್ನು ಚೀಸ್‌-ಬಟ್ಟೆಯ ಮೂಲಕ ನೇರವಾಗಿ ಹಿಂಡುವುದರಿಂದ ತಯಾರಿಸಲಾಗುತ್ತದೆ. ಹಿಂಡಿದ ತೆಂಗಿನಕಾಯಿ ತಿರುಳನ್ನು ನಂತರ ಬೆಚ್ಚಗಿನ ನೀರಿನಲ್ಲಿ ನೆನೆಸಿ, ಎರಡನೇ ಅಥವಾ ಮೂರನೇ ಬಾರಿ ಹಿಂಡಿದ ನಂತರ ಬರುವುದೇ ತೆಳ್ಳಗಿನ ತೆಂಗಿನ ಹಾಲು. ದಪ್ಪಗಿನ ಹಾಲನ್ನು ಮುಖ್ಯವಾಗಿ ಸಿಹಿತಿಂಡಿಗಳನ್ನು ಮತ್ತು ರುಚಿಕರ ಸಾಸ್‌ಗಳನ್ನು ತಯಾರಿಸಲು ಬಳಸಲಾಗುತ್ತದೆ. ತೆಳ್ಳಗಿನ ಹಾಲನ್ನು ಸೂಪ್‌ಗಳಲ್ಲಿ ಮತ್ತು ಸಾಮಾನ್ಯ ಅಡುಗೆಯಲ್ಲಿ ಬಳಸಲಾಗುತ್ತದೆ. ಈ ವ್ಯತ್ಯಾಸವನ್ನು ಸಾಮಾನ್ಯವಾಗಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಾಡಲಾಗುವುದಿಲ್ಲ ಏಕೆಂದರೆ ಇಲ್ಲಿ ತಾಜಾ ತೆಂಗಿನ ಹಾಲನ್ನು ಸಾಮಾನ್ಯವಾಗಿ ತಯಾರಿಸುವುದಿಲ್ಲ, ಬದಲಿಗೆ ಹೆಚ್ಚಿನ ಗ್ರಾಹಕರು ತೆಂಗಿನ ಹಾಲನ್ನು ಡಬ್ಬಿಗಳಲ್ಲಿ ಖರೀದಿಸುತ್ತಾರೆ. ಡಬ್ಬಿಗಳಲ್ಲಿ ರಕ್ಷಿಸಿಟ್ಟ ತೆಂಗಿನ ಹಾಲಿನ ತಯಾರಕರು ದಪ್ಪಗಿನ ಮತ್ತು ತೆಳ್ಳಗಿನ ಹಾಲನ್ನು ಮಿಶ್ರಮಾಡಿ, ಭರ್ತಿಮಾಡಲು ನೀರನ್ನು ಸೇರಿಸುತ್ತಾರೆ.

ಹಾಲಿನ ಬ್ರ್ಯಾಂಡ್ ಮತ್ತು ಅವಧಿಯ ಆಧಾರದಲ್ಲಿ, ದಪ್ಪಗಿನ, ಹೆಚ್ಚು ಪೇಸ್ಟ್-ರೀತಿಯ ಘನತ್ವವು ಡಬ್ಬಿಯ ಮೇಲ್ಭಾಗಕ್ಕೆ ತೇಲಿಕೊಂಡು ಹೋಗಿ ಸಂಗ್ರಹವಾಗುತ್ತದೆ ಮತ್ತು ಇದನ್ನು ಕೆಲವೊಮ್ಮೆ ಬೇರ್ಪಡಿಸಿ, ತೆಂಗಿನ ಹಾಲಿನ ಬದಲಿಗೆ ತೆಂಗಿನ ಕೆನೆ ಬೇಕಾಗುವ ಪಾಕವಿಧಾನಗಳಲ್ಲಿ ಬಳಸಲಾಗುತ್ತದೆ. ಡಬ್ಬಿಯನ್ನು ತೆರೆಯುವುದಕ್ಕಿಂತ ಮೊದಲು ಕುಲುಕಿದರೂ ಕೆನೆ-ರೀತಿಯ ದಪ್ಪನೆಯ ಹಾಲು ಸಿಗುತ್ತದೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಾರಾಟ ಮಾಡುವ ಕೆಲವು ಬ್ರ್ಯಾಂಡ್‌ಗಳು ಹಾಲು ಡಬ್ಬಿಯೊಳಗೆ ಬೇರ್ಪಡದಂತೆ ತಡೆಗಟ್ಟಲು ದಪ್ಪಗೊಳಿಸುವ ಅಂಶಗಳನ್ನು ಸೇರಿಸುತ್ತವೆ, ಏಕೆಂದರೆ ಈ ಹಾಲಿನ ಬೇರ್ಪಡುವಿಕೆಯು ತೆಂಗಿನ ಹಾಲಿನ ಬಗ್ಗೆ ತಿಳಿಯದವರು ಹಾಲು ಕೆಟ್ಟುಹೋಗಿರಬಹುದೆಂದು ತಪ್ಪಾಗಿ ಭಾವಿಸುವಂತೆ ಮಾಡುತ್ತದೆ.

ಒಮ್ಮೆ ತೆರೆದ ನಂತರ ತೆಂಗಿನ ಹಾಲಿನ ಡಬ್ಬಿಗಳನ್ನು ರೆಫ್ರಿಜರೇಟರಿನಲ್ಲಿಡಬೇಕು ಮತ್ತು ಅವು ಸಾಮಾನ್ಯವಾಗಿ ಕೆಲವು ದಿನಗಳವರೆಗೆ ಮಾತ್ರ ಬಳಸಲು ಸೂಕ್ತವಾಗಿರುತ್ತವೆ. ಇಲ್ಲದಿದ್ದರೆ ಆ ಹಾಲು ಹುಳಿಯಾಗಿ, ಸುಲಭದಲ್ಲಿ ಕೆಟ್ಟುಹೋಗಬಹುದು.

ತುರಿದ ತೆಂಗಿನಕಾಯಿಯನ್ನು ಎಣ್ಣೆ ಮತ್ತು ವಾಸನೆಯ ಅಂಶಗಳನ್ನು ಹೀರಿಕೊಳ್ಳುವ ಬಿಸಿ ನೀರು ಅಥವಾ ಹಾಲಿನೊಂದಿಗೆ ಸಂಸ್ಕರಿಸುವ ಮೂಲಕ ತೆಂಗಿನ ಹಾಲನ್ನು ಮನೆಯಲ್ಲೇ ತಯಾರಿಸಬಹುದು. ಇದು ಸರಿಸುಮಾರು 17%ನಷ್ಟು ಕೊಬ್ಬಿನಾಂಶವನ್ನು ಹೊಂದಿರುತ್ತದೆ. ರೆಫ್ರಿಜರೇಟರಿನಲ್ಲಿಟ್ಟು ಸ್ವಲ್ಪ ಕಾಲ ಹಾಗೆಯೇ ಬಿಟ್ಟಾಗ, ತೆಂಗಿನ ಕೆನೆಯು ಮೇಲ್ಭಾಗಕ್ಕೆ ಹೋಗಿ, ಹಾಲಿನಿಂದ ಬೇರ್ಪಡುತ್ತದೆ.

ತೆಂಗಿನ ಹಾಲನ್ನು ಹಸಿಯಾಗಿ ಹಾಗೆಯೇ ಕುಡಿಯಲಾಗುತ್ತದೆ ಅಥವಾ ಚಹಾ, ಕಾಫೀ ಇತ್ಯಾದಿಗಳಲ್ಲಿ ಪ್ರಾಣಿಯ ಹಾಲಿನ ಬದಲಿಗೆ ಪರ್ಯಾಯ ಪದಾರ್ಥವಾಗಿಯೂ ಬಳಸಲಾಗುತ್ತದೆ. ತಾಜಾ ತೆಂಗಿನ ಹಾಲು ದನದ ಹಾಲಿನಂತೆ ಘನತ್ವ ಮತ್ತು ಸ್ವಲ್ಪ ಪ್ರಮಾಣದ ಸಿಹಿ ರುಚಿಯನ್ನು ಹೊಂದಿರುತ್ತದೆ. ಸೂಕ್ತ ರೀತಿಯಲ್ಲಿ ತಯಾರಿಸಿದ್ದರೆ, ಈ ಹಾಲು ತೆಂಗಿನಕಾಯಿಯ ವಾಸನೆಯನ್ನು ಹೊಂದಿರುವುದಿಲ್ಲ ಅಥವಾ ತುಂಬಾ ಮಬ್ಬಾಗಿರುತ್ತದೆ. ಸಮಶೀತೋಷ್ಣವಲಯದ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇದನ್ನು ವಿಶೇಷವಾಗಿ ಪ್ರಾಣಿಗಳ ಹಾಲಿಗೆ ಅಲರ್ಜಿ ಹೊಂದಿರುವವರು ಅಥವಾ ಸಸ್ಯಾಹಾರಿಗಳು ಬಳಸುತ್ತಾರೆ. ಸಾಮಾನ್ಯವಾಗಿ ಬ್ರೆಡ್ ಬೇಯಿಸಲು ಮತ್ತು ಮೊಸರಿನ ಪರ್ಯಾಯ ಪದಾರ್ಥವನ್ನು ತಯಾರಿಸಲು ಇದನ್ನು ಹಣ್ಣಿನೊಂದಿಗೆ ಮಿಶ್ರಮಾಡಬಹುದು.

ಅಡುಗೆ[ಬದಲಾಯಿಸಿ]

ಇಂಡೋನೇಷಿಯಾದ ಲೊಂಬೊಕ್‌ನಲ್ಲಿ ಸೆರಾಬಿಯನ್ನು ತಯಾರಿಸಲು ಕರಿಯುವ ಬಾಣಲೆಗೆ ತೆಂಗಿನ ಹಾಲನ್ನು ಸುರಿಯುತ್ತಿರುವುದು.

ತೆಂಗಿನ ಹಾಲು ಉಷ್ಣವಲಯದ ಹೆಚ್ಚಿನ ಪಾಕವಿಧಾನಗಳಲ್ಲಿ ಬಳಸುವ ಒಂದು ಸಾಮಾನ್ಯ ಘಟಕವಾಗಿದೆ, ಹೆಚ್ಚು ಗಮನಾರ್ಹವಾಗಿ ಆಗ್ನೇಯ ಏಷ್ಯಾ (ವಿಶೇಷವಾಗಿ ಬರ್ಮಿಸೆ, ಕಾಂಬೋಡಿಯನ್, ಫಿಲಿಪಿನೊ, ಇಂಡೋನೇಷಿಯನ್, ಮಲೇಷಿಯನ್, ಸಿಂಗಾಪುರಿಯನ್ ಮತ್ತು ಥೈ), ಅಲ್ಲದೆ ಬ್ರೆಜಿಲಿಯನ್, ಕ್ಯಾರಿಬ್ಬಿಯನ್, ಪಾಲಿನೇಷಿಯನ್, ಭಾರತೀಯ ಮತ್ತು ಶ್ರೀಲಂಕನ್ ಪಾಕವಿಧಾನಗಳು. ಶೈತ್ಯೀಕರಿಸಿದ ತೆಂಗಿನ ಹಾಲು ದೀರ್ಘಕಾಲದವರೆಗೆ ತಾಜಾ ಆಗಿ ಉಳಿಯುತ್ತದೆ, ಇದು ಕರಿ ಮತ್ತು ಇತರ ಖಾರವಾದ ಪದಾರ್ಥಗಳೊಂದಿಗೆ ತೆಂಗಿನ ವಾಸನೆಯು ಪೈಪೋಟಿ ನಡೆಸದ ಪದಾರ್ಥಗಳಲ್ಲಿ ಮುಖ್ಯವಾಗಿರುತ್ತದೆ.

ತೆಂಗಿನ ಹಾಲು ಹೆಚ್ಚಿನ ಇಂಡೋನೇಷಿಯನ್, ಮಲೇಷಿಯನ್ ಮತ್ತು ಥೈ ಕರಿಗಳಲ್ಲಿ ಮುಖ್ಯ ಘಟಕವಾಗಿರುತ್ತದೆ. ಕರಿ ಸಾಸ್ ಮಾಡಲು, ತೆಂಗಿನ ಹಾಲನ್ನು ಮೊದಲು ಹೆಚ್ಚು ಬಿಸಿಯಲ್ಲಿ ಬೇಯಿಸಿ ಹಾಲು ಮತ್ತು ಕೆನೆಯನ್ನು ವಿಭಜಿಸಬೇಕು ಹಾಗೂ ಎಣ್ಣೆಯು ಬೇರ್ಪಡುವಂತೆ ಮಾಡಬೇಕು. ನಂತರ ಕರಿ ಪೇಸ್ಟ್ಅನ್ನು ಹಾಗೂ ಯಾವುದೇ ಇತರ ಮಸಾಲೆ, ಮಾಂಸ, ತರಕಾರಿ ಮತ್ತು ಖಾದ್ಯಾಲಂಕಾರಗಳನ್ನು ಸೇರಿಸಬೇಕು.

ಇಂಡೋನಿಷಿಯಾದಲ್ಲಿ ಅಕ್ಕಿಯ ಹಿಟ್ಟಿನೊಂದಿಗೆ ತೆಂಗಿನ ಹಾಲು ಸೆರಾಬಿ ಸಾಂಪ್ರದಾಯಿಕ ಕೇಕ್‌ನಲ್ಲಿರುವ ಪ್ರಮುಖ ಘಟಕವಾಗಿದೆ.

ಬ್ರೆಜಿಲ್‌ನಲ್ಲಿ ಇದನ್ನು ಹೆಚ್ಚಾಗಿ ಈಶಾನ್ಯ ಪಾಕಶಾಸ್ತ್ರಗಳಲ್ಲಿ ಬಳಸಲಾಗುತ್ತದೆ, ಸಾಮಾನ್ಯವಾಗಿ ಸಮುದ್ರ-ಆಹಾರದ (ಸೀಗಡಿ ಮತ್ತು ಕಡಲೇಡಿ ವಲ್ಕವಂತಪ್ರಾಣಿಗಳು ಹಾಗೂ ಮೀನುಗಳು) ಭಕ್ಷ್ಯಗಳಲ್ಲಿ ಮತ್ತು ಸಿಹಿತಿಂಡಿಗಳಲ್ಲಿ. ವಿಶೇಷವಾಗಿ, ಬಹಿಯಾದ ಕೆಲವು ಭಕ್ಷ್ಯಗಳು ತೆಂಗಿನ ಹಾಲು ಮತ್ತು ತಾಳೆ ಎಣ್ಣೆ ಎರಡನ್ನೂ ಬಳಸುತ್ತವೆ.

ತೆಂಗಿನ ಹಾಲನ್ನು ಸಾಂಪ್ರದಾಯಿಕ ಡೈರಿ ಉತ್ಪನ್ನಗಳ ಹೆಚ್ಚಿನ ಪರ್ಯಾಯಗಳಿಗೆ (ಉದಾ, ಡೈರಿಯಲ್ಲದ "ಹಾಲು", "ಮೊಸರು", "ಕೆನೆ" ಮತ್ತು "ಐಸ್ ಕ್ರೀಮ್") ಒಂದು ಸಸ್ಯಾಹಾರಿ ಪದಾರ್ಥವಾಗಿಯೂ ಬಳಸಲಾಗುತ್ತದೆ.

ಆರೋಗ್ಯದ ಮೇಲಾಗುವ ಪರಿಣಾಮಗಳು[ಬದಲಾಯಿಸಿ]

coconut milk, canned
Nutritional value per serving
Serving size 100g
ಆಹಾರ ಚೈತನ್ಯ 197 kJ (47 kcal)
ಶರ್ಕರ ಪಿಷ್ಟ 2.81g
ಕೊಬ್ಬು 21.33g
- saturated 18.915g
Protein 2.02g
Vitamin C 1 mg (1%)
ಕ್ಯಾಲ್ಸಿಯಂ 18 mg (2%)
ಕಬ್ಬಿಣ ಸತ್ವ 3.30 mg (25%)
ಮೆಗ್ನೇಸಿಯಂ 46 mg (13%)
ರಂಜಕ 96 mg (14%)
ಪೊಟಾಸಿಯಂ 220 mg (5%)
ಸೋಡಿಯಂ 13 mg (1%)
Percentages are roughly approximated
using US recommendations for adults.
Source: USDA Nutrient Database

ತೆಂಗಿನ ಹಾಲನ್ನು ಆಯುರ್ವೇದದಲ್ಲಿ ತುಂಬಾ ಆರೋಗ್ಯಪೂರ್ಣವಾದುದೆಂದು ಪರಿಗಣಿಸಲಾಗುತ್ತದೆ ಮತ್ತು ಆಧುನಿಕ ದಿನಗಳಲ್ಲಿ ಇದು ವಿಪರೀತ ಲಿಪಿಡ್-ಅಂಶವಿದ್ದರೆ ಅದನ್ನು ಸರಿದೂಗಿಸುವ ಗುಣಗಳನ್ನು ಮಾತ್ರವಲ್ಲದೆ ಜಠರ-ಕರುಳಿನ ಪ್ರದೇಶದಲ್ಲಿ ಸೂಕ್ಷ್ಮಜೀವಿ-ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆಯೆಂದು ಕಂಡುಹಿಡಿಯಲಾಗಿದೆ.[೨][೩] ಇದನ್ನು ಬಾಯಿಯ ಹುಣ್ಣು‌ಗಳನ್ನು ಗುಣಪಡಿಸಲೂ ಬಳಸಲಾಗುತ್ತದೆ.[೪] ಇಲಿಗಳ ಬಗೆಗಿನ ಅಧ್ಯಯನದಲ್ಲಿ, ಎರಡು ತೆಂಗಿನಕಾಯಿ ಆಧಾರಿತ ತಯಾರಿಕೆಗಳನ್ನು (ತೆಂಗಿನ ಹಾಲಿನ ಹಸಿ ಬಿಸಿ ನೀರಿನ ಸಾರ ಮತ್ತು ಎಳನೀರು) ಔಷಧ-ಉಂಟುಮಾಡುವ ಜಠರ ಹುಣ್ಣಾಗುವಿಕೆಯ ಮೇಲೆ ಅವುಗಳ ರಕ್ಷಣಾತ್ಮಕ ಪರಿಣಾಮಗಳಿಗಾಗಿ ಅಧ್ಯಯನ ಮಾಡಲಾಯಿತು.[೫] ಎರಡೂ ಅಂಶಗಳು ಹುಣ್ಣಾಗುವಿಕೆಯ ವಿರುದ್ಧ ರಕ್ಷಣೆಯನ್ನು ಒದಗಿಸುತ್ತವೆ, ತೆಂಗಿನ ಹಾಲು 54%ನಷ್ಟು ಮತ್ತು ಎಳನೀರು 39%ನಷ್ಟು ಇಳಿತವನ್ನು ಉಂಟುಮಾಡುತ್ತವೆ. ಆದರೆ, ಹೆಚ್ಚು ಪರ್ಯಾಪ್ತ ಕೊಬ್ಬು ಮತ್ತು ಸಕ್ಕರೆ ಅಂಶವನ್ನು ಹೊಂದಿರುವುದರಿಂದ ತೆಂಗಿನ ಹಾಲು ಹೃದಯರಕ್ತನಾಳದ ತೊಂದರೆ ಇರುವವರಿಗೆ ಅಷ್ಟೊಂದು ಉತ್ತಮವಾದ ಆಹಾರವಲ್ಲ.

ಆಲ್ಕೊಹಾಲ್[ಬದಲಾಯಿಸಿ]

ಸೋಲೊಮನ್ ದ್ವೀಪಗಳ ರೆನ್ನೆಲ್ ದ್ವೀಪದಲ್ಲಿ, ಸ್ಥಳೀಯ ಮನೆಯಲ್ಲಿ ಮಾಡುವ ಬಿಯರ್ಅನ್ನು ತೆಂಗಿನ ಹಾಲು, ಕಿಣ್ವ ಮತ್ತು ಸಕ್ಕರೆಯನ್ನು ತೊಟ್ಟಿಯೊಂದರಲ್ಲಿ ಕಿಣ್ವನಕ್ಕೆ ಗುರಿಪಡಿಸಿ, ಅದನ್ನು ಪೊದೆಯಲ್ಲಿ ಒಂದು ವಾರದವರೆಗೆ ಅಡಗಿಸುವ ಮೂಲಕ ತಯಾರಿಸಲಾಗುತ್ತದೆ. ಆ ತೆಂಗಿನ-ರಮ್ಅನ್ನು ದಿ ಸ್ವೀಟ್‌ನ ಪೊಪ್ಪ ಜೋಯ್ ಹಾಡಿನಲ್ಲಿ ಸೂಚಿಸಲಾಗಿದೆ.

ಬ್ರೆಜಿನ್‌ನಲ್ಲಿ, ತೆಂಗಿನ ಹಾಲನ್ನು ಬಾಟಿಡ ಡಿ ಕೋಕೊ ಎಂಬ ಕಾಕ್‌ಟೇಲ್ಅನ್ನು ತಯಾರಿಸಲು ಸಕ್ಕರೆ ಮತ್ತು ಕಚಾಕ ಒಂದಿಗೆ ಮಿಶ್ರಮಾಡಲಾಗುತ್ತದೆ.

ಸಸ್ಯ ಬೆಳವಣಿಗೆಯಲ್ಲಿನ ಬಳಕೆ[ಬದಲಾಯಿಸಿ]

1943ರಲ್ಲಿ, ಜೊಹಾನ್ನೆಸ್ ವ್ಯಾನ್ ಓವರ್‌ಬೀಕ್ ತೆಂಗಿನ ಹಾಲು ಸಸ್ಯದ ಬೆಳವಣಿಗೆಯನ್ನು ಸಕ್ರಿಯವಾಗಿ ಉತ್ತೇಜಿಸುತ್ತದೆಂದು ಕಂಡುಹಿಡಿದರು. ಈ ಹಾಲಿನಲ್ಲಿ ಹಲವಾರು ಅಂಶಗಳು, ಮುಖ್ಯವಾಗಿ ಜಿಯಾಟಿನ್ ಎಂಬ ಸೈಟೊಕಿನಿನ್, ಇರುವುದು ಇದಕ್ಕೆ ಕಾರಣ ಎಂಬುದನ್ನು ನಂತರ ಕಂಡುಹಿಡಿಯಲಾಯಿತು. ಇದು ಮೂಲಂಗಿಯಂತಹ ಕೆಲವು ಸಸ್ಯಗಳ ಬೆಳವಣಿಗೆಯನ್ನು ವೇಗಗೊಳಿಸುವುದಿಲ್ಲ.[೬] ಗೋಧಿಯು ಬೆಳೆಯುವ ತಲಾಧಾರಕ್ಕೆ 10%ನಷ್ಟು ತೆಂಗಿನ ಹಾಲನ್ನು ಸೇರಿಸುವುದರಿಂದ ಬೆಳೆಯಲ್ಲಿ ಗಮನಾರ್ಹ ಮಟ್ಟದ ಸುಧಾರಣೆಯು ಕಂಡುಬರುತ್ತದೆ.[೭]

ಪಾನೀಯಗಳು[ಬದಲಾಯಿಸಿ]

ದಕ್ಷಿಣದ ಚೀನಾ ಮತ್ತು ಥೈವಾನ್‍‌ನಲ್ಲಿ, ಸಿಹಿಗೊಳಿಸಿದ ತೆಂಗಿನ ಹಾಲನ್ನು ಚಳಿಗಾಲದಲ್ಲಿ ಮತ್ತು ಬೇಸಿಗೆಯಲ್ಲಿ ಒಂದು ಪಾನೀಯವಾಗಿ ಕೊಡಲಾಗುತ್ತದೆ. ಇದನ್ನು ತೆಂಗಿನ ಹಾಲನ್ನು ತಯಾರಿಸುವಾಗ ಸಕ್ಕರೆ ಮತ್ತು ಕುದಿಸಿದ ಅಥವಾ ತಾಜಾ ಹಾಲನ್ನು ಸೇರಿಸುವ ಮೂಲಕ ಮಾಡಲಾಗುತ್ತದೆ. ತಾಜಾ ಅಥವಾ ಕುದಿಸಿದ ಹಾಲನ್ನು 1:1 ಅನುಪಾತದಲ್ಲಿ ನೀರಿನೊಂದಿಗೆ ಮಿಶ್ರಮಾಡಿ ನಂತರ, ಪ್ರತಿ ಕಪ್‌ಗೆ ಒಂದು ಚಮಚ ಮಂದಗೊಳಿಸಿದ ಹಾಲು ಅಥವಾ ಸಕ್ಕರೆಯನ್ನು ಸೇರಿಸಿ ತಯಾರಿಸುವ ತೆಂಗಿನ ಹಾಲು ಮತ್ತೊಂದು ಚೈನೀಸ್ ಪಾನೀಯವಾಗಿದೆ. ಅವುಗಳನ್ನು ತಂಪಾಗಿಸಿ ಕುಡಿಯಲು ಕೊಡಲಾಗುತ್ತದೆ. ಇದನ್ನು ಹಾಗೆಯೇ ಕುಡಿಯಲೂ ಸಹ ರುಚಿಕರವಾಗಿರುತ್ತದೆ ಅಥವಾ ನೀರಿನೊಂದಿಗೆ ಹದಗೊಳಿಸಿಯೂ ಕುಡಿಯಬಹುದು.

ತೆಂಗಿನ ಹಾಲನ್ನು ಒಂದು ಘಟಕವಾಗಿ ಬಳಸುವ ಪಾನೀಯಗಳೆಂದರೆ -

 • ಪಿನಾ ಕೊಲಾಡ ಮತ್ತು ಅದರ ಆಲ್ಕೊಹಾಲಿಕ್-ಅಲ್ಲದ ಪಾನೀಯ ವರ್ಜಿನ್ ಪಿನಾ ಕೊಲಾಡ (ತೆಂಗಿನ ಕೆನೆಯನ್ನೂ ಸಹ ಬಳಸಲಾಗುತ್ತದೆ)
 • ಕೋಕ್ವಿಕೊ ಕಾನ್ ರಾನ್

ಇವನ್ನೂ ಗಮನಿಸಿ‌[ಬದಲಾಯಿಸಿ]

 • ತೆಂಗಿನ ಕೆನೆ
 • ಕೆನೆಗೊಳಿಸಿದ ತೆಂಗಿನಕಾಯಿ
 • ಗಿಡದ ಹಾಲು
 • ತೆಂಗಿನ ಹಾಲನ್ನು ಬಳಸುವ ಭಕ್ಷ್ಯಗಳ ಪಟ್ಟಿ

ಉಲ್ಲೇಖಗಳು‌‌[ಬದಲಾಯಿಸಿ]

 1. "ಕೊಕೊನಟ್ ಮಿಲ್ಕ್ | ಡಿಫೈನ್ ಕೊಕೊನಟ್ ಮಿಲ್ಕ್ ಅಟ್ Dictionary.com". Archived from the original on 2012-10-26. Retrieved 2011-05-05.
 2. http://www.mapi.com/en/newsletters/coconut_ayurveda.html
 3. "ಅನ್‌ಟೈಟಲ್ಡ್ -1" (PDF). Archived from the original (PDF) on 2015-11-06. Retrieved 2011-05-05.
 4. "15 ಇಫೆಕ್ಟಿವ್ ಹೋಮ್ ರೆಮೆಡೀಸ್ ಫಾರ್ ಕ್ಯೂರಿಂಗ್ ಮೌತ್ ಅಲ್ಸರ್ಸ್ - ಮೌತ್ ಅಲ್ಸರ್ಸ್ ಹೋಮ್ ರೆಮೆಡಿ". Archived from the original on 2008-12-29. Retrieved 2011-05-05.
 5. ನೇಲಿ RO, ವೋಯಿಕಿ OA. (2008). ಆಂಟಿಅಲ್ಸರೋಜೆನಿಕ್ ಇಫೆಕ್ಟ್ಸ್ ಆಫ್ ಕೊಕೊನಟ್ (ಕೋಕೋಸ್ ನ್ಯೂಸಿಫೆರಾ) ಎಕ್ಸ್‌ಟ್ರ್ಯಾಕ್ಟ್ ಇನ್ ರ‌್ಯಾಟ್ಸ್. ಫೈಟೋತರ್ ರೆಸ್ . 22 :970-972.
 6. David W. S. Mok, Machteld C. Mok (1994). Cytokinins: Chemistry, Activity, and Function. CRC Press. p. 8. ISBN 0849362520. (ಎವೈಲೇಬಲ್ ಫ್ರಮ್ ಗೂಗಲ್ ಬುಕ್ಸ್)
 7. Y. P. S. Bajaj (1990). Wheat. Springer. ISBN 3540518096.

ಬಾಹ್ಯ ಕೊಂಡಿಗಳು‌‌[ಬದಲಾಯಿಸಿ]