ವೇಲ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Lua error in package.lua at line 80: module 'Module:Pagetype/setindex' not found.

ವೇಲ್ಸ್
Cymru
Flag of ವೇಲ್ಸ್
Flag
Motto: [Cymru am byth ] Error: {{Lang}}: text has italic markup (help)
(English "Wales forever")
Anthem: ["Hen Wlad Fy Nhadau"] Error: {{Lang}}: text has italic markup (help)
(English "Land of my fathers")
Location of ವೇಲ್ಸ್ (inset – orange) in the United Kingdom (camel) in the European continent (white)
Location of ವೇಲ್ಸ್ (inset – orange)
in the United Kingdom (camel)

in the European continent (white)

Capital
and largest city
Cardiff, Caerdydd
National languagesWelsh (indigenous), English (most widely used)
Demonym(s)Welsh, Cymry
GovernmentDevolved Government in a Constitutional monarchy
• Monarch
Charles III
Carwyn Jones AM
Ieuan Wyn Jones AM
Gordon Brown MP
Peter Hain MP
LegislatureUK Parliament
National Assembly for Wales
Unification
1056
Area
• Total
20,779 km2 (8,023 sq mi)
Population
• 2008 estimate
3,004,6001
• 2001 census
2,903,085
• Density
140/km2 (362.6/sq mi)
GDP (PPP)2006 (for national statistics) estimate
• Total
US$85.4 billion
• Per capita
US$30,546
CurrencyPound sterling (GBP)
Time zoneUTC0 (GMT)
• Summer (DST)
UTC+1 (BST)
Calling code44
Internet TLD.uk2
 1. Office for National Statistics – UK population grows to more than 60 million
 2. Also .eu, as part of the European Union. ISO 3166-1 is GB, but .gb is unused.

ವೇಲ್ಸ್ /ˈweɪlz/  (ವೆಲ್ಷ್:Cymru;[೨] ಉಚ್ಚಾರಣೆ [ˈkəmrɨ]  ), ಯುನೈಟೆಡ್ ಕಿಂಗ್ಡಮ್[೩] ಭಾಗವಾದ ಒಂದು ದೇಶ. ಇದು ಪೂರ್ವಕ್ಕೆ ಇಂಗ್ಲೆಂಡ್ ನ್ನು ಹಾಗು ಪಶ್ಚಿಮಕ್ಕೆ ಅಟ್ಲಾಂಟಿಕ್ ಸಾಗರ ಹಾಗು ಐರಿಶ್ ಸಮುದ್ರಗಡಿಹೊಂದಿದೆ. ವೇಲ್ಸ್ ದೇಶವು ಮೂರು ದಶಲಕ್ಷ ಜನಸಂಖ್ಯೆಯನ್ನು ಹೊಂದಿರಬಹುದೆಂದು ಅಂದಾಜಿಸಲಾಗಿದೆ. ಜೊತೆಗೆ ದೇಶವು ಅಧಿಕೃತವಾಗಿ ದ್ವಿಭಾಷಿ ಯಾಗಿದೆ; ವೆಲ್ಷ್ ಹಾಗು ಇಂಗ್ಲಿಷ್ ಎರಡೂ ಭಾಷೆಗಳು ಸಮಾನ ಸ್ಥಾನಮಾನ ಪಡೆಯುವುದರ ಜೊತೆಗೆ ದೇಶದುದ್ದಕ್ಕೂ ದ್ವಿಭಾಷೀಯ ಸಂಕೇತಗಳು ರೂಢಿಯಲ್ಲಿದೆ. ವೇಲ್ಸ್ ನಲ್ಲಿರುವ ಅಧಿಕ ಜನರಿಗೆ, ಇಂಗ್ಲಿಷ್ ಒಂದೇ ಏಕೈಕ ಭಾಷೆಯಾಗಿದೆ. ಒಂದೊಮ್ಮೆ ವೆಲ್ಷ್ ಭಾಷೆಯು ಕ್ರಮವಾಗಿ ಕ್ಷೀಣತೆಯನ್ನು ಅನುಭವಿಸಿದರೂ ಸಹ ಇತ್ತೀಚಿನ ವರ್ಷಗಳಲ್ಲಿ ಪರಿಸ್ಥಿತಿಯು ಬದಲಾವಣೆ ಹೊಂದಿದೆ. ಆದಾಗ್ಯೂ, ಜನಸಂಖ್ಯೆಯಲ್ಲಿ 20% ಜನರು ಪ್ರಸಕ್ತ ವೆಲ್ಷ್ ಭಾಷೆಯನ್ನು ಮಾತನಾಡುತ್ತಾರೆಂದು ಅಂದಾಜಿಸಲಾಗಿದೆ.[೪][೫]

ಕಬ್ಬಿಣದ ಯುಗ ಹಾಗು ಮಧ್ಯ ಯುಗದ ಪ್ರಾರಂಭದಲ್ಲಿ, ವೇಲ್ಸ್ ನಲ್ಲಿ ಸೆಲ್ಟಿಕ್ ಬ್ರಿಟನ್ನರು ನೆಲೆಸಿದ್ದರು. 5ನೇ ಶತಮಾನದಲ್ಲಿ ರೋಮನ್ನರು ತಮ್ಮ ಸೈನ್ಯವನ್ನು ಬ್ರಿಟನ್ ನಿಂದ ಹಿಂದಕ್ಕೆ ಕರೆಸಿಕೊಂಡಾಗ ಒಂದು ವಿಶಿಷ್ಟವಾದ ವೆಲ್ಷ್ ರಾಷ್ಟ್ರೀಯ ವ್ಯಕ್ತಿತ್ವವು ಶತಮಾನಗಳಲ್ಲಿ ಅಸ್ತಿತ್ವಕ್ಕೆ ಬಂದಿತು. ವೇಲ್ಸ್ ಇಂದಿನ ಒಂದು ನವೀನ ಸೆಲ್ಟಿಕ್ ದೇಶ ವೆಂದು ಪರಿಗಣಿಸಲಾಗಿದೆ.[೬][೭][೮] ಕಳೆದ 13ನೇ ಶತಮಾನದಲ್ಲಿ, ಎಡ್ವರ್ಡ್ I ನಿಂದ ಲೇವೆಲ್ಯನ್ ಪರಾಭವದಿಂದಾಗಿ ವೇಲ್ಸ್ ಮೇಲೆ ಆಂಗ್ಲೋ-ನಾರ್ಮನ್ ವಿಜಯಯಾತ್ರೆಯು ಮುಕ್ತಾಯಗೊಂಡಿತು ಹಾಗೂ ಶತಮಾನಗಳ ಕಾಲದ ಇಂಗ್ಲಿಷ್ ನಿಯಂತ್ರಣವನ್ನು ತಂದಿತು. ವೇಲ್ಸ್‌ ತರುವಾಯ ಲಾಸ್ ಇನ್ ವೇಲ್ಸ್ ಆಕ್ಟ್ಸ್ 1535–1542ರ ಅನುಸಾರ ಇಂಗ್ಲೆಂಡ್ ನೊಂದಿಗೆ ಒಂದುಗೂಡಿತು. ಇದರಿಂದ ಹೊರಬಂದ ಕಾನೂನು ಅಸ್ತಿತ್ವವು ಇಂದು ಇಂಗ್ಲೆಂಡ್ ಅಂಡ್ ವೇಲ್ಸ್ ಎಂದು ಗುರುತಿಸಲ್ಪಡುತ್ತದೆ. ವಿಶಿಷ್ಟವಾದ ವೆಲ್ಷ್ ರಾಜಕೀಯ ವು 19ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದಿತು. ಜೊತೆಗೆ 1881ರ ವೆಲ್ಷ್ ಸಂಡೇ ಕ್ಲೋಸಿಂಗ್ ಆಕ್ಟ್ ವೇಲ್ಸ್ ಗೆ ಪ್ರತ್ಯೇಕವಾಗಿ ಅನ್ವಯಿಸಲಾದ ಮೊದಲ ಶಾಸನವಾಯಿತು.

ಕಳೆದ 1955ರಲ್ಲಿ, ಕಾರ್ಡಿಫ್ ನ್ನು ರಾಜಧಾನಿ ಯೆಂದು ಘೋಷಿಸಲಾಯಿತು, ಜೊತೆಗೆ 1999ರಲ್ಲಿ ನ್ಯಾಷನಲ್ ಅಸೆಂಬ್ಲಿ ಫಾರ್ ವೇಲ್ಸ್ ನ ಸ್ಥಾಪನೆಯಾಯಿತು. ಇದು ಹಸ್ತಾಂತರಗೊಂಡ ವಿಷಯಗಳ ಬಗ್ಗೆ ಜವಾಬ್ದಾರಿಯನ್ನು ವಹಿಸುತ್ತದೆ.

ರಾಜಧಾನಿ ಕಾರ್ಡಿಫ್, (ವೆಲ್ಷ್:Caerdydd) 317,500 ಜನರನ್ನು ಹೊಂದಿದ ವೇಲ್ಸ್ ನ ಅತ್ಯಂತ ದೊಡ್ಡ ನಗರ. ಕೆಲ ಅವಧಿಗೆ ಇದು ಜಗತ್ತಿನ ಅತ್ಯಂತ ದೊಡ್ಡ ಕಲ್ಲಿದ್ದಲ ಬಂದರಾಗಿತ್ತು [೯] ಹಾಗು, ವರ್ಲ್ಡ್ ವಾರ್ I ಗೆ ಕೆಲ ವರ್ಷಗಳ ಮುಂಚೆ, ಇದು ಲಂಡನ್ ಅಥವಾ ಲಿವರ್ ಪೂಲ್ ಗಿಂತ ಅಧಿಕವಾದ ಸರಕು ಸಾಗಣೆಯನ್ನು ನಿಭಾಯಿಸುತ್ತಿತ್ತು.[೧೦] ಮೂರನೇ-ಎರಡು ಭಾಗದಷ್ಟು ವೆಲ್ಷ್ ನ ಜನರು ಸೌತ್ ವೇಲ್ಸ್ ನಲ್ಲಿ ವಾಸಿಸುತ್ತಾರೆ, ಮತ್ತು ಕೆಲವರು ಪೂರ್ವದ ನಾರ್ತ್ ವೇಲ್ಸ್ ನಲ್ಲಿ ಕೇಂದ್ರೀಕೃತವಾಗಿದ್ದಾರೆ. "ವನ್ಯ....ಹಾಗು ಚಿತ್ರಸದೃಶವಾದ ಭೂದೃಶ್ಯಗಳಿಂದ ವೇಲ್ಸ್ ಹಲವು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.[೧೧][೧೨] ಕಳೆದ 19ನೇ ಶತಮಾನದ ಉತ್ತರಾರ್ಧದಿಂದ, ವೇಲ್ಸ್ "ಕವಿತೆಗಳ ಭೂಮಿ" ಎಂಬ ಜನಪ್ರಿಯ ವರ್ಚಸ್ಸನ್ನು ಗಳಿಸಿದೆ. ಇದು ಐಸ್ಟೆದ್ ಫಾಡ್ ಸಂಪ್ರದಾಯದ ಪುನರುಜ್ಜೀವನದಿಂದ ಉಂಟಾದ ಪರಿಣಾಮವಾಗಿದೆ.[೧೩] ನಟರು, ಹಾಡುಗಾರರು ಹಾಗು ಇತರ ಕಲಾವಿದರನ್ನು ಇಂದು ವೇಲ್ಸ್ ನಲ್ಲಿ ಗೌರವಿಸಲಾಗುತ್ತದೆ. ಇವರೆಲ್ಲರೂ ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಖ್ಯಾತಿಯನ್ನು ಪಡೆದಿರುತ್ತಾರೆ.[೧೪] ಲಂಡನ್ ನ ಹೊರತಾಗಿ UKಯಲ್ಲಿ ಕಾರ್ಡಿಫ್ ಅತ್ಯಂತ ದೊಡ್ಡ ಮಾಧ್ಯಮ ಕೇಂದ್ರ ವಾಗಿದೆ.[೧೫]

ಲೈವೆಲಿನ್ ದಿ ಗ್ರೇಟ್ 1216ರಲ್ಲಿ ಪ್ರಿನ್ಸಿಪಾಲಿಟಿ ಆಫ್ ವೇಲ್ಸ್ ಸ್ಥಾಪನೆ ಮಾಡಿದ. ಎಡ್ವರ್ಡಿಯನ್ ಕಾಂಕ್ವೆಸ್ಟ್ ನ ಕೇವಲ ನೂರು ವರ್ಷಗಳ ನಂತರ, 15ನೇ ಶತಮಾನದ ಪೂರ್ವದಲ್ಲಿ ಒವೈನ್ ಗ್ಲೈಂಡ್‌‌ವರ್ ಸ್ವಲ್ಪಮಟ್ಟಿಗೆ ಸ್ವಾತಂತ್ರವನ್ನು ಮರುಸ್ಥಾಪಿಸಿದ ನಂತರ ಆಧುನಿಕ ವೇಲ್ಸ್ ರೂಪುಗೊಂಡಿತು.[೧೬][೧೭] ಸಾಂಪ್ರದಾಯಿಕವಾಗಿ ಬ್ರಿಟಿಶ್ ರಾಜ ಮನೆತನವು "ಪ್ರಿನ್ಸ್ ಆಫ್ ವೇಲ್ಸ್" ಎಂಬ ಮರ್ಯಾದೆ ಬಿರುದನ್ನು ಆಳ್ವಿಕೆಯಲ್ಲಿದ್ದ ರಾಜನ ಪ್ರಧಾನ ವಾರಸುದಾರ ನಿಗೆ ನೀಡಿತು. ವೇಲ್ಸ್ ನ್ನು ಕೆಲವೊಂದು ಬಾರಿ "ವೇಲ್ಸ್ ನ ಸಂಸ್ಥಾನ", ಅಥವಾ ಕೇವಲ "ಸಂಸ್ಥಾನ" ಎಂದು ಸೂಚಿಸಲಾಗುತ್ತದೆ,[೧೮][೧೯] ಆದಾಗ್ಯೂ, ಇದಕ್ಕೆ ಯಾವುದೇ ನೂತನ ಭೌಗೋಳಿಕ ಅಥವಾ ಸಾಂವಿಧಾನಿಕ ಆಧಾರಗಳಿಲ್ಲ.

ಪದಮೂಲ[ಬದಲಾಯಿಸಿ]

ವೇಲ್ಸ್[ಬದಲಾಯಿಸಿ]

ಇಂಗ್ಲಿಷ್ ಹೆಸರಾದ ವೇಲ್ಸ್ ಎಂಬುದು ಜರ್ಮನಿಯ ಪದಗಳಾದ ವಲ್ಹ್ (ಏಕವಚನ) ಹಾಗು ವಾಲ್ಹ (ಬಹುವಚನ)ಎಂಬ ಪದಗಳಿಂದ ಹುಟ್ಟಿಕೊಂಡಿದೆ. ಇದು "ವಿದೇಶಿ" ಅಥವಾ "ಅಪರಿಚಿತ" ಎಂಬ ಅರ್ಥವನ್ನು ನೀಡುತ್ತವೆ. Ænglisc-ಮಾತನಾಡುತ್ತಿದ್ದ ಆಂಗ್ಲೋ-ಸ್ಯಾಕ್ಸನ್ ಜನರು ವಯೆಲಿಸ್ಕ್ ಎಂಬ ಪದವನ್ನು ಸೆಲ್ಟಿಕ್ ಬ್ರಿಟನ್ಸ್ ರನ್ನು ಉಲ್ಲೇಖಿಸುವ ಸಂದರ್ಭದಲ್ಲಿ ಹಾಗು ವೀಲಾಸ್ ಎಂದು ತಮ್ಮ ಪ್ರದೇಶಗಳನ್ನು ಕರೆಯಲು ಬಳಸುತ್ತಿದ್ದರು.

ಇದೇ ಶಬ್ದ ವ್ಯುತ್ಪತ್ತಿಯು ವಾಲ್ನಟ್ (ಅರ್ಥ "ವಿದೇಶಿ(ರೋಮನ್)ಬೀಜ") ಹಾಗು ಕಾರ್ನ್ ವಾಲ್ ಹಾಗು ವಾಲ್ಲೋನಿಯ ಎಂಬ ಪದಗಳಲ್ಲಿರುವ ವಾಲ್ ಎಂಬುದಕ್ಕೂ ಸಹ ಅನ್ವಯಿಸುತ್ತದೆ. ಓಲ್ಡ್ ಚರ್ಚ್ ಸ್ಲಾವೋನಿಕ್ ಸಹ ಜರ್ಮನಿಯಿಂದ ಪದವನ್ನು ಎರವಲು ಪಡೆಯುವುದರ ಜೊತೆಗೆ ವಾಲ್ಲಚಿಯ ಹಾಗು ಅದರ ಜನರು ವ್ಲಚ್ಸ್ ಎಂಬ ಹೆಸರುಗಳ ಹುಟ್ಟಿಗೆ ಕಾರಣವಾಗಿದೆ.[೨೦][೨೧][೨೨]

ಸಿಮ್ರು[ಬದಲಾಯಿಸಿ]

ಅವರಿಗಿರುವ ನೂತನ ವೆಲ್ಷ್ ಹೆಸರು ಸಿಮ್ರಿ, ಹಾಗು ಸಿಮ್ರು ಎಂಬುದು ವೆಲ್ಷ್ ನ "ಲ್ಯಾಂಡ್ ಆಫ್ ದಿ ಸಿಮ್ರಿ" ಎಂಬ ಪದದಿಂದ ಹುಟ್ಟಿದೆ. ಸಿಮ್ರಿ ಎಂಬ ವ್ಯುತ್ಪತ್ತಿಯು ಬ್ರಯ್ತೊನಿಕ್ ಪದ ಕಂಬ್ರೋಗಿ ಎಂಬುದರಿಂದ ಬಂದಿದೆ (ಪುನರ್ರಚನೆ). ಇದು "ದೇಶಬಾಂಧವ" ಎಂಬ ಅರ್ಥವನ್ನು ನೀಡುತ್ತದೆ, ಒಂದು ಅರ್ಥದಲ್ಲಿ "ಸಹ ಸ್ವದೇಶಿಗಳು" ಎಂಬುದನ್ನೂ ಸೂಚಿಸುತ್ತದೆ.[೨೩]

ಸಿಮ್ರಿ ಎಂಬ ಸ್ವ-ನಿಯುಕ್ತ ಪದವು, ರೋಮನ್ ಶಕೆಯ-ತರುವಾಯ ಉತ್ತರ ಇಂಗ್ಲೆಂಡ್ ಹಾಗು ದಕ್ಷಿಣ ಸ್ಕಾಟ್ಲ್ಯಾಂಡ್ ನ ಬ್ರಯ್ತೊನಿಕ್-ಮಾತನಾಡುವ ಜನರ ಜೊತೆಗಿನ ವೆಲ್ಷ್ ನ ಸಂಬಂಧದಿಂದ ಹುಟ್ಟಿಕೊಂಡಿದೆ,ಇವರು ಯರ್ ಹೆನ್ ಒಗ್ಲೆಡ್ ನ ಜನರು.(ಆಂಗ್ಲ:The Old North) ಅದರ ಮೂಲ ಬಳಕೆಯಲ್ಲಿ, ಇತರೆ ಎಲ್ಲರನ್ನೂ ಹೊರತುಪಡಿಸಿ ವೆಲ್ಷ್ ಹಾಗು "ಉತ್ತರದ ಜನರು" ಒಂದೇ ಜನರು ಎಂಬ ಸ್ವಯಂ-ಗ್ರಹಿಕೆಯನ್ನು ಉಂಟುಮಾಡುತ್ತದೆ.[೨೪] ನಿರ್ದಿಷ್ಟವಾಗಿ, ಈ ಪದವು ವೆಲ್ಷ್ ಹಾಗು ಉತ್ತರದ ಜನರು ಇಬ್ಬರಿಗೂ ಸದೃಶವಾದ ಪರಂಪರೆಯನ್ನು, ಸಂಸ್ಕೃತಿಯನ್ನು ಹಾಗು ಭಾಷೆಯನ್ನು ಹೊಂದಿರುವ ಕಾರ್ನಿಶ್ ಅಥವಾ ಬ್ರೆಟನ್ ಜನರಿಗೆ ಅನ್ವಯಿಸುವುದಿಲ್ಲ. ಈ ಪದವು ಬಹುಶಃ 7ನೇ ಶತಮಾನಕ್ಕೆ ಮುಂಚೆ ಸ್ವ-ವಿವರಣೆಯೊಂದಿಗೆ ಬಳಕೆಗೆ ಬಂದಿತು.[೨೫] ಇದನ್ನು ಕಾಡ್ವಾಲ್ಲೊನ್ ಅಪ್ ಕಾಡ್ಫ್ಯಾನ್ ನ ಪ್ರಶಂಸೆ ಮಾಡಿ ಬರೆದ ಪದ್ಯದಲ್ಲಿದೆಯೆಂದು ದೃಢಪಡಿಸಲಾಗಿದೆ ಬರಹ c. 633.[೨೬]

ವೆಲ್ಷ್ ಸಾಹಿತ್ಯ ದಲ್ಲಿ ಸಿಮ್ರಿ ಎಂಬ ಪದವನ್ನು, ವೆಲ್ಷ್ ನ್ನು ವಿವರಿಸಲು ಮಧ್ಯ ಯುಗದವರೆಗೂ ಬಳಸಲಾಗುತ್ತಿತ್ತು. ಇದಕ್ಕಿಂತ ಹಳೆಯದಾದ ಆದರೆ ಎಲ್ಲದಕ್ಕೂ ಅನ್ವಯಿಸುವ ಬ್ರಯ್ತೋನಿಏಡ್ ಎಂಬ ಪದವನ್ನು ಬ್ರಿಟೊನ್ನಿಕ್ ಜನರನ್ನು (ವೆಲ್ಷ್ ರನ್ನು ಸೇರಿ) ಬಣ್ಣಿಸಲು ಬಳಸಲಾಗುತ್ತಿತ್ತು. ಇದು ಒಂದು ಸಾಮಾನ್ಯ ಸಾಹಿತ್ಯಕ ಪದವಾಗಿ, c. 1100ವರೆಗೂ ಬಳಕೆಯಲ್ಲಿತ್ತು. ತರುವಾಯ ಸಿಮ್ರಿ ವೆಲ್ಷ್ ನ್ನು ಸೂಚಿಸಲು ಹೆಚ್ಚು ಬಳಸಲಾಗುತ್ತಿತ್ತು. ಸುಮಾರು 1560ರ ತನಕವೂ ಸಿಮ್ರಿ ಎಂಬ ಪದವನ್ನು ಮನಸೋಇಚ್ಛೆಯಿಂದ (ಸಿಮ್ರಿ)ಜನರನ್ನು ಕರೆಯಲು ಅಥವಾ ಅವರ ತಾಯ್ನಾಡನ್ನು(ಸಿಮ್ರು) ಸೂಚಿಸಲು ಬಳಸಲಾಗುತ್ತಿತ್ತು.[೨೩]

ಕ್ಯಾಂಬ್ರಿಯಾ ಎಂಬುದು ಹೆಸರಿನ ಲ್ಯಾಟಿನ್ ರೂಪಾಂತರ. ವೇಲ್ಸ್ ನ ಹೊರಭಾಗದ ನಾರ್ತ್ ವೆಸ್ಟ್ ಇಂಗ್ಲೆಂಡ್ ನಲ್ಲಿ ಈ ರೂಪಾಂತರವು ಕಂಬ್ರಿಯಾ ಎಂದು ಹೆಸರಿನಲ್ಲಿ ಉಳಿದುಕೊಂಡಿದೆ. ಇದು ಹಿಂದೊಮ್ಮೆ ಯರ್ ಹೆನ್ ಒಗ್ಲೆಡ್ ನ ಭಾಗವಾಗಿತ್ತು. ಇದನ್ನು ಭೂವಿಜ್ಞಾನದಲ್ಲಿ ಭೂವೈಜ್ಞಾನಿಕ ಅವಧಿಯನ್ನು ವರ್ಣಿಸಲು ಬಳಸಲಾಗುತ್ತದೆ(ಕ್ಯಾಂಬ್ರಿಯನ್ ಅವಧಿ) ಹಾಗು ವಿಕಸನದ ಅಧ್ಯಯನದಲ್ಲಿ, ಅತ್ಯಂತ ಸಂಕೀರ್ಣ ಪ್ರಾಣಿಗಳ ಗುಂಪುಗಳು ಉದಯಿಸಿದ ಅವಧಿಯನ್ನು ಸೂಚಿಸಲು ಬಳಸಲಾಗುತ್ತದೆ (ಕ್ಯಾಂಬ್ರಿಯನ್ ಸ್ಫೋಟನ) ಈ ರೂಪಾಂತರವು ಕೆಲವು ಬಾರಿ ಸಾಹಿತ್ಯದಲ್ಲೂ ಉಲ್ಲೇಖಿಸಲಾಗುತ್ತದೆ, ಬಹುಶಃ ಅತ್ಯಂತ ಗಮನಾರ್ಹವಾದುದೆಂದರೆ ಜಿಯೋಫ್ಫ್ರಿ ಆಫ್ ಮಾನ್ಮೌತ್ಹುಸಿಇತಿಹಾಸವಾದ ಹಿಸ್ಟೋರಿಯಾ ರೆಗುಂ ಬ್ರಿಟನ್ನಿಯೆ . ಇದರಲ್ಲಿ ಬರುವ ಕ್ಯಾಂಬರ್ ಎಂಬ ಪಾತ್ರವನ್ನು ಸಿಮ್ರುವಿನ ನಾಮಸೂಚಕ ರಾಜ ಎಂದು ವರ್ಣಿಸಲಾಗಿದೆ.

ಇದನ್ನು ಗತಕಾಲದ ಇತಿಹಾಸದ ಆಧಾರಗಳು ಹಾಗು ಕೆಲವು ನವೀನ ಬರಹಗಾರರು ಇಬ್ಬರೂ ಸಾಂದರ್ಭಿಕವಾಗಿ ಸೂಚಿಸುತ್ತಾರೆ. ಇದರ ಪ್ರಕಾರ ಸಿಮ್ರಿ 2ನೇ ಶತಮಾನ BCಯ ಸಿಂಬ್ರಿ ಅಥವಾ 7ನೇ ಶತಮಾನ BCಯ ಸಿಮ್ಮೆರಿಯನ್ಸ್ ಗೆ, ಉಚ್ಚಾರಣೆಯಲ್ಲಿ ಸದೃಶವಿರುವುದರಿಂದ ಯಾವುದೋ ರೀತಿಯಲ್ಲಿ ಸಂಬಂಧ ಕಲ್ಪಿಸಲಾಗಿದೆ. ಈ ರೀತಿಯಾದ ಉಲ್ಲೇಖಗಳನ್ನು ಪಂಡಿತರು ವ್ಯುತ್ಪತ್ತಿಶಾಸ್ತ್ರದ ಹಾಗು ಇತರ ಆಧಾರದ ಮೇಲೆ ತಳ್ಳಿ ಹಾಕಿದ್ದಾರೆ.[೨೭][೨೮]

ಇತಿಹಾಸ[ಬದಲಾಯಿಸಿ]

ಇತಿಹಾಸಪೂರ್ವದ ಉಗಮಗಳು[ಬದಲಾಯಿಸಿ]

ಬ್ರಯನ್ ಸೆಲ್ಲಿ ಡ್ದು, ಆಂಗ್ಲೆಸೆಯ್ ನಲ್ಲಿರುವ ನೀಅಲಿತಿಕ್ ಯುಗದ ನಂತರದ ಅರೆಯುಳ್ಳ ಒಂದು ಗೋರಿ.

ವೇಲ್ಸ್ ನಲ್ಲಿ ಕಡೇಪಕ್ಷ 29,000 ವರ್ಷಗಳಿಂದ ಆಧುನಿಕ ಮಾನವರು ನೆಲೆಗೊಂಡಿದ್ದಾರೆ.[೨೯] ಆದಾಗ್ಯೂ, ಕಳೆದ ಹಿಮಯುಗದ ಕೊನೆಯ ಭಾಗದಿಂದಲೂ ಮಾನವರ ಅಸ್ತಿತ್ವವು ಅಲ್ಲಿ ಮುಂದುವರೆದಿದೆ ( 12,000 ಹಾಗು 10,000ದ ನಡುವೆ ಬಿಫೋರ್ ಪ್ರೆಸೆಂಟ್ (BP)). ಆ ಸಂದರ್ಭದಲ್ಲಿ ಮಧ್ಯ ಯುರೋಪ್ ನಲ್ಲಿ ನೆಲೆಸಿದ್ದ ಮೆಸೋಲಿಥಿಕ್ (ಮಧ್ಯಶಿಲಾಯುಗ)ನ ಬೇಟೆಯನ್ನು-ಸಂಗ್ರಹಿಸುವವರು ಗ್ರೇಟ್ ಬ್ರಿಟನ್ ಗೆ ವಲಸೆ ಹೋದರು. ವೇಲ್ಸ್ 10,250 BPಯ ಸುಮಾರಿಗೆ ಹಿಮನದಿಗಳಿಂದ ಮುಕ್ತವಾಗಿತ್ತು. ಇದರಿಂದ 7,000 ದಿಂದ 6,000 BPಯವರೆಗೂ ಜನರು ಯೂರೋಪಿನ ಭೂಖಂಡದಿಂದ ಗ್ರೇಟ್ ಬ್ರಿಟನ್ ವರೆಗೂ ನಡೆದು ಹೋಗಲು ಸಾಧ್ಯವಾಯಿತು. ಇದೆಲ್ಲವೂ ನಂತರ ಸಮುದ್ರ ಮಟ್ಟದಲ್ಲಿ ಉಂಟಾದ ಹಿಮಗಡ್ಡೆಯ ಹೆಚ್ಚಳದಿಂದಾಗಿ ಗ್ರೇಟ್ ಬ್ರಿಟನ್ ಒಂದು ದ್ವೀಪವಾಗಿ ಮಾರ್ಪಡುವುದಕ್ಕೆ ಮುಂಚಿತವಾಗಿತ್ತು ಹಾಗು ಐರಿಶ್ ಸಮುದ್ರವು ವೇಲ್ಸ್ ಹಾಗು ಐರ್ಲ್ಯಾಂಡ್‌ನ್ನು ಪ್ರತ್ಯೇಕಿಸಲು ಉಗಮವಾಯಿತು.[೩೦][೩೧]

ಜಾನ್ ಡೇವಿಸ್ ಕ್ಯಾಂಟ್ರೆ'ರ್ ಗ್ವಯೆಲೋಡ್ ನ ಮುಳುಗಡೆ ಹಾಗು ಮಬಿನೋಗಿಯನ್ ನಲ್ಲಿ ಪ್ರಸ್ತಾಪಿಸಿರುವ ವೇಲ್ಸ್ ಹಾಗು ಐರ್ಲ್ಯಾಂಡ್ ನಡುವಿನ ನದಿಯು ಕಿರಿದಾಗಿತ್ತು ಹಾಗು ಕಡಿಮೆ ಆಳವನ್ನು ಹೊಂದಿದ್ದರ ಬಗೆಗಿನ ಕಥೆಗಳನ್ನು ಕಾಲ್ಪನಿಕವಾಗಿ ಚಿತ್ರಿಸಿದ್ದಾರೆ. ಆ ಕಥೆಗಳು ಈ ಕಾಲಕ್ಕೆ ದೂರದ ಜಾನಪದ ಸ್ಮರಣೆಗಳಾಗಿವೆ.[೩೦] ಪ್ರದೇಶವು ಅತ್ಯಂತ ಹೆಚ್ಚಿನ ಪ್ರಮಾಣದ ಕಾಡು ಬೆಳೆದಿತ್ತು. ಜೊತೆಗೆ ಜನಸಂಚಾರಕ್ಕೆ ಅಡ್ಡಿಯನ್ನು ಉಂಟುಮಾಡುತಿತ್ತು. ಗ್ರೇಟ್ ಬ್ರಿಟನ್‌ಗೆ ಜನರು ಐಬೇರಿಯನ್ ಪರ್ಯಾಯ ದ್ವೀಪದಿಂದ ಕೂಡ ದೋಣಿಗಳಲ್ಲಿ ಬರುತ್ತಿದ್ದರು.[೩೨]

ನವಶಿಲಾಯುಗವಸಾಹತುಗಾರರು ಸ್ಥಳೀಯ ಜನರೊಂದಿಗೆ ಬೆರೆತು ಕ್ರಮೇಣವಾಗಿ ಬೇಟೆ ಹಾಗು ಸಂಗ್ರಹಣೆಯಿಂದ ಕೂಡಿದ ತಮ್ಮ ಅಲೆಮಾರಿ ಜೀವನಶೈಲಿಯನ್ನು ಒಕ್ಕಲುತನಕ್ಕೆ ಬದಲಾವಣೆ ಮಾಡಿಕೊಂಡರು- ನವಶಿಲಾಯುಗದ ಕ್ರಾಂತಿ.[೩೦][೩೩] ಅವರು ಹುಲ್ಲುಗಾವಲನ್ನು ಸ್ಥಾಪಿಸಲು ಹಾಗು ಭೂಮಿಯಲ್ಲಿ ಕೃಷಿ ಮಾಡಲು ಕಾಡನ್ನು ಕತ್ತರಿಸುವುದರ ಜೊತೆಗೆ ಕುಂಬಾರಿಕೆ ಹಾಗು ವಸ್ತ್ರೋದ್ಯಮ ಮುಂತಾದ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದರು. ಇದರ ಜೊತೆಗೆ ಅವರು ಕ್ರಾಮ್ಲೆಕ್(ಲಂಬವಾಗಿ ನೆಟ್ಟ ಕಲ್ಲುಗಳ ಮೇಲೆ ಮಟ್ಟವಾಗಿ ಹಾಸಿದ ಚಪ್ಪಟೆಯ ದೊಡ್ಡ ಕಲ್ಲು ಬಂಡೆಗಳುಳ್ಳ ಸಮಾಧಿ) ಗಳನ್ನು ಕಟ್ಟಿದರು, ಉದಾಹರಣೆಗೆ ಪೆನ್ಟ್ರೆ ಇಫಾನ್, ಬ್ರಯನ್ ಸೆಲ್ಲಿ ಡ್ಡು ಹಾಗು ಪಾರ್ಕ್ ಕುಯೆಮ್ ದೊಡ್ಡ ಕಲ್ಲುಗುಡ್ಡೆ ಗಳನ್ನು 5500 BP ಹಾಗು 6000 BPಯ ನಡುವೆ ನಿರ್ಮಿಸಿದರು. ಇದನ್ನು ಸ್ಟೋನ್ಹೆಂಜ್ ಅಥವಾ ದಿ ಈಜಿಪ್ಷಿಯನ್ ಗ್ರೇಟ್ ಪಿರಮಿಡ್ ಆಫ್ ಗಿಜ ನಿರ್ಮಾಣವಾಗುವ 1,000 ದಿಂದ 1,500 ವರ್ಷಗಳ ಮುಂಚೆಯೇ ನಿರ್ಮಾಣ ಮಾಡಿದ್ದರು.[೩೪][೩೫][೩೬][೩೭][೩೮]

ಗ್ರೇಟ್ ಬ್ರಿಟನ್‌ನಾದ್ಯಂತ ವಾಸ ಮಾಡುವ ಜನರಿಗೆ ಸಮಾನವಾಗಿ, ಶತಮಾನಗಳು ಕಳೆದಂತೆ ವೇಲ್ಸ್‌ ಎಂದು ಹೆಸರಿನ ನಾಡಿನಲ್ಲಿ ವಾಸಿಸುತ್ತಿದ್ದ ಜನರು ವಲಸಿಗರೊಂದಿಗೆ ಹೊಂದಿಕೊಂಡು, ಕಂಚಿನ ಯುಗ ಹಾಗು ಕಬ್ಬಿಣ ಯುಗಸೆಲ್ಟಿಕ್ ಸಂಸ್ಕೃತಿಗಳ ಕಲ್ಪನೆಗಳನ್ನು ವಿನಿಮಯ ಮಾಡಿಕೊಂಡರು. ಬ್ರಿಟನ್ ರ ರೋಮನ್ ಆಕ್ರಮಣದ ಹೊತ್ತಿಗೆ, ನವೀನ ವೇಲ್ಸ್ ಎಂದು ಕರೆಯಲ್ಪಡುವ ಪ್ರದೇಶವನ್ನು ಡೆಸೆಆಂಗ್ಲಿ, ಒರ್ಡೋವೈಸೆಸ್, ಕಾರ್ನೋವೀ, ಡೆಮೇತೆ ಹಾಗು ಸಿಲುರೆಸ್ ಮುಂತಾದ ಬುಡಕಟ್ಟು ಜನಾಂಗದವರು ತಮ್ಮಲ್ಲೇ ಹಂಚಿಕೊಂಡು ಶತಮಾನಗಳ ತನಕ ಅಲ್ಲೇ ನೆಲೆಯೂರಿದ್ದರು.[೩೯]

ವಸಾಹತು ಸ್ಥಾಪನೆ[ಬದಲಾಯಿಸಿ]

AD 48ರಲ್ಲಿ ಮೊದಲ ಬಾರಿಗೆ ವೇಲ್ಸ್ ಪ್ರದೇಶದ ಬಗ್ಗೆ ಐತಿಹಾಸಿಕ ದಾಖಲೆಯನ್ನು ಮಾಡಲಾಗಿದೆ. ಆಗ್ನೇಯ ವೇಲ್ಸ್‌ನ ಸಿಲ್ಯೂರೆಸ್‌ಗಳ ದಾಳಿಗಳ ಹಿನ್ನೆಲೆಯಲ್ಲಿ, AD 47 ಹಾಗು 48ರಲ್ಲಿ, ರೋಮನ್ ಇತಿಹಾಸಜ್ಞ ಟಾಸಿಟಸ್, ಬ್ರಿಟಾನಿಯ ದ ಹೊಸ ರೋಮನ್ ಪ್ರಾಂತ್ಯದ ಗವರ್ನರ್ ಈಶಾನ್ಯ ವೇಲ್ಸ್ ನಲ್ಲಿ "ಡೆಸೆಆಂಗ್ಲಿಯ ಅಧೀನವನ್ನು ಸ್ವೀಕರಿಸಿದ್ದಾಗಿ" ದಾಖಲು ಮಾಡುತ್ತಾನೆ.[೪೦]

ಈಗಿನ ಸೌತ್ ವೇಲ್ಸ್ ಎಂದು ಕರೆಯಲ್ಪಡುವ ಪ್ರದೇಶದಲ್ಲಿ ಸುತ್ತಲೂ ರೋಮನ್ ಕೋಟೆಗಳ ಒಂದು ಸಾಲನ್ನು ಸ್ಥಾಪಿಸಿಲಾಗಿತ್ತು. ಇದು ಪಶ್ಚಿಮಕ್ಕೆ ಕಾರ್ಮರ್ಥೆನ್(ಕೇರ್ಫಿರ್ಡಿನ್ ;Latin: Maridunum) ವರೆಗೂ ವ್ಯಾಪಿಸಿದೆ, ಹಾಗು ಕಾರ್ಮಾರ್ಥೆನ್ ಶೈರ್ಡೊಲೌಕೊತಿಯಲ್ಲಿ ಚಿನ್ನದ ಗಣಿಗಾರಿಕೆ ಮಾಡಲಾಗುತ್ತಿತ್ತು. ರೋಮನ್ನರು ಪಶ್ಚಿಮದಾಚೆಗೂ ಸಾಗಿದ್ದರು ಎಂಬುದಕ್ಕೆ ಪುರಾವೆಗಳಿದೆ. ಅವರು ರೋಮನ್ ಸೈನ್ಯದ ಕೋಟೆಯನ್ನು ಕಾಯೇರ್ಲೆಯೋನ್ ನಲ್ಲಿ ಕಟ್ಟಿಸಿದ್ದರು. ಇದರಲ್ಲಿ ಭವ್ಯವಾದ ವರ್ತುಲ ರಂಗಸ್ಥಳ ವನ್ನು ಇಂದಿಗೂ ಬ್ರಿಟನ್‌ನಲ್ಲಿ ಸಂರಕ್ಷಿಸಲಾಗಿದೆ.

ರೋಮನ್ನರು ಉತ್ತರ ವೇಲ್ಸ್ ನಲ್ಲೂ ಕಾರ್ಯೋದ್ಯುಕ್ತರಾಗಿದ್ದರು ಹಾಗು ಮಧ್ಯಯುಗದ ವೆಲ್ಷ್ ಕಥೆ ಬ್ರಯುಡ್ವಿಡ್ ಮಕ್ಸೇನ್ ವ್ಲೆಡಿಗ್ (ಮಕ್ಸೇನ್ ವ್ಲೆಡಿಗ್ ನ ಕನಸು) ನಲ್ಲಿ, ಮ್ಯಾಗ್ನಸ್ ಮಾಕ್ಸಿಮಸ್ (ಮಕ್ಸೇನ್ ವ್ಲೆಡಿಗ್ ), ಕಡೆಯ ಪಶ್ಚಿಮ ರೋಮನ್ ಚಕ್ರವರ್ತಿಗಳಲ್ಲಿ ಒಬ್ಬ, ಸೇಗೊಂಟಿಯಂ ನ ವೆಲ್ಷ್ ಮುಖ್ಯಸ್ಥನ ಮಗಳಾದ ಎಲೆನ್ ಅಥವಾ ಹೆಲೆನ್‌ಳನ್ನು ಮದುವೆಯಾಗಿದ್ದ. ಇದೇ ಇಂದಿನ ಕಾಯೇರ್ನರ್ಫಾನ್.[೪೧] ರೋಮನ್ ಆಕ್ರಮಣದ ನಂತರ 4ನೇ ಶತಮಾನದಲ್ಲಿ ಕ್ರೈಸ್ತ ಧರ್ಮ ವನ್ನು ವೇಲ್ಸ್ ನಲ್ಲಿ ಪರಿಚಯಿಸಲಾಯಿತು.

ಬ್ರಿಟನ್ ನಿಂದ ರೋಮನ್ನರ ವಾಪಸಾತಿ ನಂತರ 410ರಲ್ಲಿ, ಹೆಚ್ಚಿನ ತಗ್ಗುಪ್ರದೇಶಗಳನ್ನು ವಿವಿಧ ಜರ್ಮನಿಯ ಬುಡಕಟ್ಟು ಜನಾಂಗದವರು ಅತಿಕ್ರಮಿಸಿಕೊಂಡಿದ್ದರು.[೪೨] ಆದಾಗ್ಯೂ, ಗ್ವಯ್ನೆಡ್, ಪೌಯಿಸ್, ಡೈಫೆಡ್ ಹಾಗು ಸಿಸಿಲ್ಗ್, ಮೊರ್ಗನ್ನ್ವಗ್, ಹಾಗು ಗ್ವೆಂಟ್ ಗಳು ಸ್ವತಂತ್ರ ವೆಲ್ಷ್ ವಾರಸುದಾರ ರಾಜ್ಯ ಗಳಾಗಿ ಉಗಮ ಹೊಂದಿದವು. ಅನುಕೂಲಕರವಾದ ಭೌಗೋಳಿಕ ವೈಶಿಷ್ಟ್ಯತೆಗಳಾದ ಒಳಪ್ರದೇಶ, ಪರ್ವತಗಳು, ಹಾಗು ನದಿಗಳಿಂದ ಹಾಗೂ ರೋಮನ್ ನಾಗರಿಕತೆಯ ಅಂತ್ಯದೊಂದಿಗೆ ಪತನಗೊಳ್ಳದ ಒಂದು ಸ್ಥಿತಿಸ್ಥಾಪಕತತ್ವ ಸಮಾಜದಿಂದಾಗಿ ಅವುಗಳ ಆಂಶಿಕ ಅಸ್ತಿತ್ವ ಸಾಧ್ಯವಾಯಿತು.

ಪಶ್ಚಿಮ ಸಾಮ್ರಾಜ್ಯದ ರೋಮನ್-ಬ್ರಿಟನ್ಸ್ ಹಾಗು ಅವರ ವಂಶಜರ ಈ ರೀತಿಯಾದ ಸ್ಥಿರ ಉಳಿವು, ವೇಲ್ಸ್ ಎಂದು ಕರೆಯಲ್ಪಡುವ ಈಗಿನ ಪ್ರದೇಶದ ಸ್ಥಾಪನೆಗೆ ಅಡಿಪಾಯ ಹಾಕಿತು. ತಗ್ಗು ಪ್ರದೇಶವನ್ನು ಕಳೆದುಕೊಂಡ ನಂತರ, ಇಂಗ್ಲೆಂಡ್‌ನ ಸಾಮ್ರಾಜ್ಯಗಳಾದ ಮರ್ಸಿಯ ಹಾಗು ನಾರ್ತ್ಉಂಬ್ರಿಯಾ, ಹಾಗು ನಂತರದಲ್ಲಿ ವೆಸ್ಸೆಕ್ಸ್ ಎಂದು ಕರೆಯಲ್ಪಡುತ್ತಿದ್ದ ರಾಜ್ಯಗಳು, ಇಬ್ಬರ ನಡುವಿನ ಗಡಿಯನ್ನು ನಿರ್ಧರಿಸುವಲ್ಲಿ ಪೌಯಿಸ್, ಗ್ವೆಂಟ್, ಹಾಗು ಗ್ವಯ್ನೆಡ್ ರಾಜ್ಯಗಳ ಜೊತೆ ಸೆಣೆಸಾಟ ನಡೆಸಿದವು.

ಆರನೇ ಮತ್ತು ಏಳನೇ ಶತಮಾನದ ಪೂರ್ವದಲ್ಲಿ, ಈಗಿನ ವೆಸ್ಟ್ ಮಿಡ್ ಲ್ಯಾಂಡ್ಸ್ ನ ಹೆಚ್ಚಿನ ಭಾಗವನ್ನು ಮರ್ಸಿಯ ಕ್ಕೆ ಬಿಟ್ಟುಕೊಟ್ಟ ನಂತರ, ಏಳನೇ ಶತಮಾನದ ಉತ್ತರಾರ್ಧದಲ್ಲಿ ಮತ್ತೆ ಮರಳಿ ಬಂದ ಪೌಯಿಸ್ ಮರ್ಸಿಯನ್ ಮುನ್ನಡೆಗೆ ಪ್ರತಿರೋಧವನ್ನು ಒಡ್ಡಿತು. ಮರ್ಸಿಯದ ಯೇಥೆಲ್ ಬಾಲ್ಡ್, ಆಗ ತಾನೇ ಹೊಂದಿದ ಭೂಮಿಯನ್ನು ರಕ್ಷಿಸಲು ಪ್ರಯತ್ನಿಸಿ ವಾಟ್'ಸ್ ಡೈಕ್ ನ್ನು ಕಟ್ಟಿಸಿದ. ಜಾನ್ ಡೇವಿಸ್ ನ ಪ್ರಕಾರ, ಈ ಪ್ರಯತ್ನವು ಪೌಯಿಸ್ ರಾಜ ಎಲಿಸೆಡ್ ಅಪ ಗ್ವಯ್ಲಾಗ್ ನೊಟ್ಟಿಗಿನ ಒಪ್ಪಂದದೊಂದಿಗೆ ನಡೆಯಿತು. ಆದಾಗ್ಯೂ, ಈ ಗಡಿಯು, ಉತ್ತರದಲ್ಲಿ ರಿವರ್ ಸೇವೆರ್ನ್ ನ ಕಣಿವೆಯಿಂದ ಡೀ ನದೀಮುಖವರೆಗೂ ವ್ಯಾಪಿಸಿ, ಒಸ್ವೆಸ್ಟ್ರಿ ಯನ್ನು (ವೆಲ್ಷ್:Croesoswallt) ಪೌಯಿಸ್‌ಗೆ ನೀಡಿತು.[೪೩]

ರಾಜ ಆಫಾ ಆಫ್ ಮರ್ಸಿಯಾ ಆಫಾ'ಸ್ ಡೈಕ್ ಎಂದು ಕರೆಯಲ್ಪಡುವ ಒಂದು ದೊಡ್ಡ ಮಣ್ಣಿನ ದಿಬ್ಬವನ್ನು ನಿರ್ಮಿಸುವುದಕ್ಕೆ ಸಲಹೆ ಪಡೆಯಲು ಮುಂದಾದನೆಂದು ತಿಳಿದುಬರುತ್ತದೆ (ವೆಲ್ಷ್ : ಕ್ಲಾವ್ಡ್ ಆಫಾ ). ಆಫಾ'ಸ್ ಡೈಕ್ ಬಗ್ಗೆ ಸಿರಿಲ್ ಫಾಕ್ಸ್ ರ ಅಧ್ಯಯನದ ಬಗ್ಗೆ ಡೇವಿಸ್ ಬರೆಯುತ್ತಾನೆ:

In the planning of it, there was a degree of consultation with the kings of Powys and Gwent. On the Long Mountain near Trelystan, the dyke veers to the east, leaving the fertile slopes in the hands of the Welsh; near Rhiwabon, it was designed to ensure that Cadell ap Brochwel retained possession of the Fortress of Penygadden." And for Gwent Offa had the dyke built "on the eastern crest of the gorge, clearly with the intention of recognizing that the River Wye and its traffic belonged to the kingdom of Gwent.[೪೩]

ಆದಾಗ್ಯೂ, ಡೈಕ್ ನ ನಿರ್ಮಾಣದ ಉದ್ದೇಶ ಹಾಗು ಅದರ ಉದ್ದ ಎರಡರ ಕುರಿತು ಫಾಕ್ಸ್‌ರ ವ್ಯಾಖ್ಯಾನದ ಬಗ್ಗೆ ಇತ್ತೀಚಿನ ಸಂಶೋಧನೆಗಳು ಪ್ರಶ್ನಿಸಿವೆ.[೪೪] ಆಫಾ'ಸ್ ಡೈಕ್ ವೆಲ್ಷ್ ಹಾಗು ಇಂಗ್ಲಿಷ್ ರ ನಡುವೆ ಒಂದು ದೊಡ್ಡ ಗಡಿಯಾಗಿ ಉಳಿದುಕೊಂಡಿದೆ. ಆದಾಗ್ಯೂ ಪರ್ಫೆಡ್‌ಲ್ಯಾಡ್ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಡೀ ಹಾಗು ಕಾನ್ವಿ ನಡುವಿನ ಪ್ರದೇಶವನ್ನು ವೆಲ್ಷ್ 12ನೇ ಶತಮಾನದಲ್ಲಿ ವಶಪಡಿಸಿಕೊಂಡಿತ್ತು. ಎಂಟನೇ ಶತಮಾನದ ಸುಮಾರಿಗೆ, ಆಂಗ್ಲೋ-ಸ್ಯಾಕ್ಸನ್ ರು ಒಳಗೊಂಡ ಪೂರ್ವದ ಗಡಿಭಾಗವನ್ನು ವಿಶಾಲವಾಗಿ ಸ್ಥಾಪನೆ ಮಾಡಲಾಗಿತ್ತು.

ಕಳೆದ 722ರ ಕಾರ್ನ್ವಾಲ್ ಹಾಗು 865ರ ಬ್ರಿಟಾನಿ ಯಶಸ್ವಿಯಾದ ಹಿನ್ನೆಲೆಯಲ್ಲಿ, ಬ್ರಿಟನ್ಸ್ ಆಫ್ ವೇಲ್ಸ್ ವೈಕಿಂಗ್ಸ್ ಜೊತೆ ಶಾಂತಿ ಒಪ್ಪಂದವನ್ನು ಮಾಡಿಕೊಂಡರು. ವೇಲ್ಸ್ ನ್ನು ಆಂಗ್ಲೋ-ಸ್ಯಾಕ್ಸನ್ ಆಕ್ರಮಣದಿಂದ ತಡೆಯುವ ಉದ್ದೇಶದಿಂದ ಆಂಗ್ಲೋ-ಸ್ಯಾಕ್ಸನ್ಸ್ ಆಫ್ ಮರ್ಸಿಯಾ ವಿರುದ್ಧ ಹೋರಾಡುತ್ತಿದ್ದ ಬ್ರಿಟನ್ಸ್‌ಗೆ ಸಹಾಯ ಮಾಡುವಂತೆ ನೋರ್ಸೆಮ್ಯಾನ್‌ಗೆ ಕೇಳಿಕೊಂಡರು.

AD 878ರಲ್ಲಿ ಬ್ರಿಟನ್ಸ್ ಆಫ್ ವೇಲ್ಸ್, ಮರ್ಸಿಯನ್ನರ ಆಂಗ್ಲೋ-ಸ್ಯಾಕ್ಸನ್ ಸೇನೆಯನ್ನು ನಾಶಮಾಡುವ ಉದ್ದೇಶದಿಂದ ಡೆನ್ಮಾರ್ಕ್‌ನ ವೈಕಿಂಗ್ಸ್ ಜೊತೆ ಒಂದಾಯಿತು. 722ರ ಕಾರ್ನ್ವಲ್ ನಂತೆಯೇ, ಸ್ಯಾಕ್ಸನ್ ರ ಈ ನಿರ್ಣಾಯಕ ಸೋಲಿನಿಂದಾಗಿ ವೇಲ್ಸ್‌ಗೆ, ಆಂಗ್ಲೋ-ಸ್ಯಾಕ್ಸನ್ ಆಕ್ರಮಣದಿಂದ ಕೆಲವು ದಶಕಗಳ ತನಕ ಮುಕ್ತಿ ದೊರೆಯಿತು. ಕಳೆದ 1063ರಲ್ಲಿ, ವೆಲ್ಷ್ ನ ರಾಜಕುಮಾರ ಗ್ರುಫ್ಫ್ಯಡ್ ಅಪ್ ಲೈವೆಲಿನ್ ಮರ್ಸಿಯ ವಿರುದ್ಧ ನಾರ್ವೇಜಿಯನ್ ವೈಕಿಂಗ್ಸ್ ಜೊತೆಗೆ ಮೈತ್ರಿ ಮಾಡಿಕೊಂಡ. ಇದು AD 878ರಷ್ಟೇ ಯಶಸ್ವಿಯಾಗುವುದರ ಜೊತೆಗೆ ಮರ್ಸಿಯಾದ ಸ್ಯಾಕ್ಸನ್ನರು ಸೋಲನ್ನನುಭವಿಸಿದರು. ಕಾರ್ನ್ವಲ್ ಹಾಗು ಬ್ರಿಟಾನಿ ಯಂತೆ, ಸ್ಯಾಕ್ಸನ್/ಫ್ರಾಂಕ್ಸ್ ವಿರುದ್ಧದ ವೈಕಿಂಗ್ ನ ಆಕ್ರಮಣಶೀಲತೆಯಿಂದ ಆಂಗ್ಲೊ-ಸ್ಯಾಕ್ಸನ್ಸ್/ಫ್ರಾಂಕರು ತಮ್ಮ ಸೆಲ್ಟಿಕ್ ನೆರೆ ದೇಶದವರ ಮೇಲೆ ಆಕ್ರಮಣ ಮಾಡುವ ಯಾವದೇ ಅವಕಾಶ ಅಂತ್ಯಗೊಂಡಿತು.

ಮಧ್ಯಯುಗದ ವೇಲ್ಸ್[ಬದಲಾಯಿಸಿ]

ಉತ್ತರ ವೇಲ್ಸ್ ನ ಸಂಸ್ಥಾನ 1267–1276.

ದಕ್ಷಿಣ ಹಾಗು ಉತ್ತರದ ಭಾಗಗಳು ಇಂಗ್ಲಿಷ್ ವಸಾಹತಿಗೆ ಸೇರಿಕೊಂಡಿತು, ಇದು ವೆಲ್ಷ್ ನಲ್ಲಿ ಲ್ಲೊಯೆಗಯ್ರ್ ಎಂಬ ಹೆಸರಿನಿಂದ ಕರೆಯಲ್ಪಟ್ಟಿತು (ನೂತನ ವೆಲ್ಷ್ ಲ್ಲೊಯೆಗ್ರ ). ಇದು ಮೂಲದಲ್ಲಿ ಮರ್ಸಿಯಾ ರಾಜ್ಯಕ್ಕೆ ಸೂಚಕವಾಗಿ ಹಾಗು ಸಂಪೂರ್ಣ ಇಂಗ್ಲೆಂಡ್ಗೆ ಸಂಬಂಧಪಟ್ಟಂತೆ ವ್ಯಾಖ್ಯಾನಿಸಲಾಯಿತು.[೪೫] ಈ ಭೂಪ್ರದೇಶದಲ್ಲಿ ಈಗ ಪ್ರಬಲರಾದ ಜರ್ಮನಿಯ ಬುಡಕಟ್ಟಿನವರನ್ನು ಏಕರೂಪವಾಗಿ ಸೆಸೋನ್ ಎಂದು ಕರೆಯಲಾಗುತ್ತಿತ್ತು., ಇದರರ್ಥ "ಸ್ಯಾಕ್ಸನ್ಸ್". ಆಂಗ್ಲೋ-ಸ್ಯಾಕ್ಸನ್ ರು ರೊಮನೊ-ಬ್ರಿಟಿಶ್ ರನ್ನು ವಾಲ್ಹ ಎಂದು ಸಂಬೋಧಿಸುತ್ತಿದ್ದರು. ಇದು 'ರೋಮನೀಕರಣಗೊಂಡ ವಿದೇಶಿ' ಅಥವಾ 'ಅಪರಿಚಿತ' ಎಂಬ ಅರ್ಥವನ್ನು ನೀಡುತ್ತದೆ.[೨೦]

ವೆಲ್ಷ್ ಗಳು ತಮ್ಮನ್ನು ತಾವು ಬ್ರೈತೋನಿಏಡ್ (ಬ್ರೈತನ್ಸ್ ಅಥವಾ ಬ್ರಿಟನ್ಸ್) ಮಧ್ಯಯುಗ ದ ವರೆಗೂ ಕರೆದುಕೊಳ್ಳುತ್ತಿದ್ದರು. ಆದಾಗೂ ಸಿಮ್ರು ಹಾಗು ವೈ ಸಿಮ್ರಿ ಎಂದು ಹೆಸರಿನ ಬಳಕೆಯು ಗೊಡೋಡಿನ್ ಆಫ್ ಅನೆಯಿರಿನ್ ನಲ್ಲಿ 633ರಷ್ಟು ಮುಂಚೆಯೇ ಕಂಡು ಬಂದಿದೆ. ಸುಮಾರು 930ರಲ್ಲಿ ಬರೆಯಲಾದ ಅರ್ಮೆಸ್ ಪ್ರೈಡೈನ್ ನಲ್ಲಿ, ಸಿಮ್ರಿ ಹಾಗು ಸಿಮ್ರೋ ಎಂಬ ಪದವನ್ನು ಹೆಚ್ಚುಕಡಿಮೆ 15 ಬಾರಿ ಬಳಸಲಾಗಿದೆ. ಆದಾಗ್ಯೂ ಸುಮಾರು 12ನೇ ಶತಮಾನದ ನಂತರ, ಬರವಣಿಗೆಗಳಲ್ಲಿ ಬ್ರೈತೋನಿಯೇಡ್ ನ ಬದಲಾಗಿ ಸಿಮ್ರಿ ಮೇಲುಗೈ ಸಾಧಿಸಿತು.

ಡೋಲಿಡ್ಲಾನ್ ಕೋಟೆ, ಇದನ್ನು 13ನೇ ಶತಮಾನದಲ್ಲಿ ಲೈವೆಲಿನ್ ಅಬ್ ಲೋರ್‌ವರ್ತ್, ಗ್ವೈನೆಡ್‌ಗೆ ಹೋಗುವ ಕಣಿವೆಯ ಮಾರ್ಗವೊಂದನ್ನು ವೀಕ್ಷಿಸಲು ಕಟ್ಟಿಸಿದ.

ವರ್ಷ 800ರ ತರುವಾಯ, ಸಾಲಾಗಿ ನಡೆದ ರಾಜಮನೆತನಗಳ ಮದುವೆಗಳು, ರೋದ್ರಿ ಮಾವ್ರ್ (ಆಳ್ವಿಕೆ. 844–877)ಗೆ ಗ್ವಯ್ನೆಡ್ ಹಾಗು ಪೌಯಿಸ್ ನ ಉತ್ತರಾಧಿಕಾರವನ್ನು ಪಡೆಯಲು ಸಹಾಯಮಾಡಿತು. ಅವನ ಮಕ್ಕಳು, ಮೂರು ಪ್ರಮುಖ ರಾಜ್ಯಮನೆತನಗಳನ್ನು ಸ್ಥಾಪಿಸಿದರು.( ಗ್ವಯ್ನೆಡ್ ಗೆ ಅಬೇರ್‌ಫ್ರಾ ನನ್ನು, ದೆಹೆಯುಬರ್ಥ್ ಗೆ ದಿನೇಫವ್ರ್, ಹಾಗು ಪೌಯಿಸ್ ಗೆ ಮಾತ್ರಫಾಲ್). ಪ್ರತಿಯೊಬ್ಬರೂ ಆಧಿಪತ್ಯಕ್ಕಾಗಿ ಇತರರ ವಿರುದ್ಧ ಪೈಪೋಟಿ ನಡೆಸಿದರು.

ರೋದ್ರಿಯ ಮೊಮ್ಮಗ ಹೈವೆಲ್ ಡಾ (ಆಳ್ವಿಕೆ. 900-950) ತನ್ನ ತಾಯಿಯ ಕಡೆಯಿಂದ ಹಾಗು ತಂದೆಯ ಕಡೆಯ ಉತ್ತರಾಧಿಕಾರದಿಂದ ಬಂದ ಡೈಫೆದ್ ಹಾಗು ಸಿಸಿಲ್ವಗ್ನಿಂದ ದೆಹೆಯುಬರ್ಥ್ ನ್ನು ಸ್ಥಾಪನೆ ಮಾಡಿದ. ಗ್ವಯ್ನೆಡ್ ಹಾಗು ಪೌಯಿಸ್‌ನಿಂದ ಅಬೇರ್‌ಫ್ರಾ ರಾಜಪ್ರಭುತ್ವವನ್ನು ಪದಚ್ಯುತಿಗೊಳಿಸಿದ. ಜೊತೆಗೆ ವೆಲ್ಷ್ ಕಾನೂನು930ರಲ್ಲಿ ಕ್ರೋಡೀಕರಿಸಿ, ಅಂತಿಮವಾಗಿ ರೋಮ್ ಗೆ ತೀರ್ಥಯಾತ್ರೆ ಕೈಗೊಂಡ (ಹಾಗು ಈ ಕಾನೂನು ನಿಯಮಾವಳಿಗಳಿಗೆ ಪೋಪ್ ಆಶೀರ್ವದಿಸಿದನೆಂಬ ಆಪಾದನೆಯೂ ಇದೆ). ದೆಹೆಯುಬರ್ಥ್ ಮರೆದುದ್ದ್ ಅಬ್ ಒವೈನ್(ಹೈವೆಲ್ ನ ಮೊಮ್ಮಗ) (ಆಳ್ವಿಕೆ. 986-999) ತಾತ್ಕಾಲಿಕವಾಗಿ (ಮತ್ತೊಮ್ಮೆ) ಗ್ವಯ್ನೆಡ್ ಹಾಗು ಪೌಯಿಸ್ ಮೇಲಿನ ಅಬೆರ್‌ಫ್ರಾನ ಹಿಡಿತವನ್ನು ತಪ್ಪಿಸಿದ.

ಮರೆದುದ್ದ್‌ನ ಮರಿ-ಮಗ (ಅವನ ಮಗಳು ರಾಜಕುಮಾರಿ ಅಂಗ್ಹರದ್ ಳ ಮೂಲಕ) ಗ್ರುಫಿಡ್ ಅಪ್ ಲೈವೆಲಿನ್ (ಆಳ್ವಿಕೆ. 1039-1063) ತನ್ನ ನೆಲೆಯಾದ ಪೌಯಿಸ್‌ನಿಂದ ತನ್ನ ಸೋದರಸಂಬಂಧಿಗಳ ರಾಜ್ಯವನ್ನು ಆಕ್ರಮಿಸಿ ತನ್ನ ಅಧಿಕಾರವನ್ನು ಇಂಗ್ಲೆಂಡ್‌ನ ಒಳಗೂ ವ್ಯಾಪಿಸಿದ. ಇತಿಹಾಸಜ್ಞ ಜಾನ್ ಡೇವಿಸ್ರ ಪ್ರಕಾರ ಗ್ರುಫಿಡ್"ಸಮಸ್ತ ವೇಲ್ಸ್ ನ ಭೂಪ್ರದೇಶವನ್ನು ಆಳಿದ ಏಕೈಕ ವೆಲ್ಷ್ ದೊರೆ... ಈ ರೀತಿಯಾಗಿ, ಸುಮಾರು 1057 ರಿಂದ 1063 ರಲ್ಲಿ ಅವನು ಸಾಯುವ ತನಕ, ಸಂಪೂರ್ಣವಾಗಿ ವೇಲ್ಸ್ ಗ್ರುಫುಡ್ ಅಪ್ ಲೈವೆಲಿನ್ ದೊರೆತನಕ್ಕೆ ಮಾನ್ಯತೆ ನೀಡಿತು. ಸುಮಾರು ಏಳು ವರ್ಷಗಳ ಅವಧಿಗೆ, ವೇಲ್ಸ್ ಒಂದೇ ರಾಜ್ಯವಾಗಿ, ಒಂದೇ ದೊರೆಯ ಆಳ್ವಿಕೆಯಲ್ಲಿತ್ತು. ಈ ಗಮನಾರ್ಹವಾದ ಸಾಧನೆಯನ್ನು ಅವನ ಪೂರ್ವಾಧಿಕಾರಿಗಳು ಅಥವಾ ಉತ್ತರಾಧಿಕಾರಿಗಳು ಮಾಡಿರಲಿಲ್ಲ." [೪೬] ಅಬೆರ್‌ಫ್ರಾ ಸಂತತಿಯ ಒವೈನ್ ಗ್ವೈನೆಡ್(1100–1170) ಪ್ರಿನ್ಸೆಪ್ಸ್ ವಾಲ್ಲೆನ್ಷಿಯಂ (ವೆಲ್ಷ್ ನ ರಾಜಕುಮಾರ) ಎಂಬ ಬಿರುದನ್ನು ಬಳಕೆ ಮಾಡಿದ ಮೊದಲ ವೆಲ್ಷ್ ರಾಜ. ಜಾನ್ ಡೇವಿಸ್ ಪ್ರಕಾರ ಈ ಮಹತ್ವವಾದ ಬಿರುದನ್ನು ಬರ್ವಿನ್ ಮೌನ್ಟನ್ಸ್ ನಲ್ಲಿ ಅವನಿಗೆ ದೊರೆತ ವಿಜಯದಿಂದಾಗಿ ನೀಡಲಾಯಿತು.[೪೭]

ಒವೈನ್ ಗ್ಲಯ್ನಡ್ವರ್ ನ ಪ್ರತಿಮೆ (c. 1354 or 1359 – c. 1416), ಪ್ರಿನ್ಸ್ ಆಫ್ ವೇಲ್ಸ್ ಎಂಬ ಬಿರುದನ್ನು ಹೊತ್ತ ಕಡೆಯ ಸ್ಥಳೀಯ ವೆಲ್ಷ್ ವ್ಯಕ್ತಿ.

ಅಬೆರ್‌ಫ್ರಾ ಸಾಮ್ರಾಜ್ಯದ ಔನ್ನತ್ಯವು ಒವೈನ್ ಗ್ವೈನೆಡ್ ಮೊಮ್ಮಗ ಲ್ಲಿವೆಲಿನ್ ಫಾರ್ (ದಿ ಗ್ರೇಟ್) (ಬಿ.1173–1240)ನ ಆಳ್ವಿಕೆಯಲ್ಲಿ ಕಂಡಿತು. 1215ರ ಮ್ಯಾಗ್ನ ಕಾರ್ಟ(ಮಹಾಸ್ವಾತಂತ್ರ ಶಾಸನ)ದಲ್ಲಿ ವಿನಾಯಿತಿಗಳನ್ನು ನೀಡಬೇಕೆಂದು ಸೆಣೆಸಾಟ ನಡೆಸಿದ. ಇದರ ಜೊತೆಗೆ 1216ರಲ್ಲಿ ನಡೆದ ಅಬೇರ್ಡೈಫಿ ಸಭೆಯಲ್ಲಿ ಇತರ ವೆಲ್ಷ್ ದೊರೆಗಳಿಂದ ಸ್ವಾಮಿನಿಷ್ಠೆಯ ಪ್ರತಿಜ್ಞೆಯನ್ನು ಪಡೆದು, ಮೊದಲ ವೇಲ್ಸ್ ರಾಜನಾದ. ಅವನ ಮೊಮ್ಮಗ ಲೈವೆಲಿನ್ II ಸಹ ಪ್ರಿನ್ಸ್ ಆಫ್ ವೇಲ್ಸ್ ಎಂಬ ಬಿರುದನ್ನು, 1267ರಲ್ಲಿ ನಡೆದ ಟ್ರೀಟಿ ಆಫ್ ಮೊಂಟ್ಗೋಮೆರಿ ಯಲ್ಲಿ ಹೆನ್ರಿ III ಯಿಂದ ಪಡೆದ. ಆದಾಗ್ಯೂ ನಂತರದಲ್ಲಿ, ಸಾಲಾಗಿ ವ್ಯಾಜ್ಯಗಳು ಹುಟ್ಟಿಕೊಂಡವು. ಇದರಲ್ಲಿ ಸಿಮೊನ್ ಡೆ ಮೊಂಟ್ಫೋರ್ಟ್ ನ ಮಗಳು ಹಾಗು ಲಿವೆಲೈನ್‌ನ ಪತ್ನಿ ಎಲೆಯನೋರ್ ಳ ಬಂಧನದಿಂದಾಗಿ ಎಡ್ವರ್ಡ್ I ಮಾಡಿದ ಮೊದಲ ಆಕ್ರಮಣದೊಂದಿಗೆ ಪರಾಕಾಷ್ಠೆಗೆ ಮುಟ್ಟಿತು.

ಕಾಯೇರ್ನರ್ಫಾನ್ ಕೋಟೆ

ಸೇನೆಯು ಸೋತ ಪರಿಣಾಮವಾಗಿ, 1277ರ ಟ್ರೀಟಿ ಆಫ್ ಅಬೇರ್ಕಾನ್ವಿ ಪ್ರಕಾರ ಲಿವೆಲೈನ್ ಇಂಗ್ಲೆಂಡ್‌ಗೆ ತನ್ನ ಸ್ವಾಮಿನಿಷ್ಠೆಯನ್ನು ತೋರಬೇಕಿತ್ತು. ಕೆಲ ಕಾಲದ ಮಟ್ಟಿಗೆ ಮಾತ್ರ ಶಾಂತಿಯು ನೆಲೆಸಿತ್ತು. ಜೊತೆಗೆ 1282ರ ಎಡ್ವರ್ಡಿಯನ್ ಆಕ್ರಮಣ ದಿಂದಾಗಿ, ವೆಲ್ಷ್ ರಾಜರುಗಳ ಆಳ್ವಿಕೆಯು ಸಂಪೂರ್ಣವಾಗಿ ಕೊನೆಗೊಂಡಿತು. ಲೈವೆಲಿನ್ ನಿಧನ ಹಾಗು ಅವನ ಸಹೋದರ ದೊರೆ ಡಾಫಿಡ್ನನ್ನು ಗಲ್ಲಿಗೇರಿಸಿದ ನಂತರ, ಉಳಿದಿದ್ದ ಕೆಲವು ವೆಲ್ಷ್ ದೊರೆಗಳು ತಮ್ಮ ಭೂಮಿಗಳಿಗಾಗಿಎಡ್ವರ್ಡ್ Iಗೆ ಗೌರವಾರ್ಪಣೆ ಮಾಡಿದರು. ಲೈವೆಲಿನ್‌ನ ತಲೆಯನ್ನು ಒಂದು ಈಟಿಗೆ ಸಿಕ್ಕಿಸಿ ಲಂಡನ್‌ಗೆ ಹೊತ್ತೊಯ್ಯಲಾಯಿತು; ಅವನ ಪುಟ್ಟ ಮಗಳಾದ ಗ್ವೆನ್ಲ್ಲಿಯನ್ ಳನ್ನು ಸೆಂಪ್ರಿಂಗಾಮ್ಪ್ರಿಯರಿ ಯಲ್ಲಿ ಕೂಡಿಹಾಕಲಾಯಿತು. ಅಲ್ಲಿ ಸಾವನ್ನಪ್ಪುವವರೆಗೆ ಐವತ್ತ ನಾಲ್ಕು ವರ್ಷಗಳ ಕಾಲ ಅಲ್ಲೇ ಉಳಿದಿದ್ದಳು.[೪೮]

ತನ್ನ ಪ್ರಭುತ್ವವನ್ನು ಕಾಯ್ದುಕೊಳ್ಳಲು ಎಡ್ವರ್ಡ್ ಭಾರಿ ಕಲ್ಲುಗಳಿಂದ ಕೋಟೆಗಳ ಒಂದು ಸರಣಿಯನ್ನೇ ನಿರ್ಮಿಸಿದ. ಬೆಯುಮರಿಸ್, ಕಾಯೇರ್ನರ್ಫಾನ್ ಹಾಗು ಕಾನ್ವಿ ಗಳನ್ನು ಮುಖ್ಯವಾಗಿ ವೆಲ್ಷ್ ಅರಮನೆಯನ್ನು ಹಾಗು ಪ್ರಧಾನ ಕಾರ್ಯಸ್ಥಾನಗಳಾಗಿದ್ದ ಗರ್ಥ್ ಸೆಲಿನ್, ಗ್ವೈನೆಡ್‌ನ ಉತ್ತರ ಕಡಲ ತೀರಕ್ಕಿದ್ದ ಅಬೇರ್ ಗರ್ಥ್ ಸೆಲಿನ್ ನ ಆಕರ್ಷಣೆಯನ್ನು ಮುಖ್ಯವಾಗಿ ಕಡಿಮೆ ಮಾಡುವ ದೃಷ್ಟಿಯಿಂದ ಕಟ್ಟಲಾಯಿತು.

ತನ್ನನ್ನು ತಾನು ಪ್ರಿನ್ಸ್ ಆಫ್ ವೇಲ್ಸ್ ಎಂದುಪೆನ್ಮಚ್ನೋ ದಾಖಲೆಯಲ್ಲಿ ಹೇಳಿಕೊಂಡಿರುವ ಮಡೋಗ್ ಅಪ್ ಲೈವೆಲಿನ್ 1294-5ರಲ್ಲಿ ನಡೆಸಿದ ಒಂದು ವಿಫಲ ಕ್ರಾಂತಿಯ ಒಂದು ಶತಮಾನದ ನಂತರ ಒವೈನ್ ಗ್ಲಿಂಡ್‌ವರ್ ಇಂಗ್ಲೆಂಡ್‌ನ ಹೆನ್ರಿ IV ನ ವಿರುದ್ಧ ದಂಗೆಯೇಳುವ ತನಕವೂ ಯಾವುದೇ ಪ್ರಮುಖ ದಂಗೆಗಳಿರಲಿಲ್ಲ. ಫ್ರಾನ್ಸ್, ಸ್ಪೇನ್ ಹಾಗು ಸ್ಕಾಟ್ಲ್ಯಾಂಡ್ ನ ಪ್ರತಿನಿಧಿಗಳ ಸಮ್ಮುಖದಲ್ಲಿ ಒವೈನ್ ನನ್ನು 1404ರಲ್ಲಿ ಜನಜನಿತವಾಗಿರುವಂತೆ ಪ್ರಿನ್ಸ್ ಆಫ್ ವೇಲ್ಸ್ ಎಂದು ಕಿರೀಟಧಾರಣೆ ಮಾಡಲಾಯಿತು. ಆತ ಮಾಚಿನ್‌ಲೆಥ್ಒಳಗೊಂಡಂತೆ ಹಲವು ವೆಲ್ಷ್ ನಗರಗಳಲ್ಲಿ ಸಂಸದೀಯ ಅಸೆಂಬ್ಲಿಗಳನ್ನು ನಡೆಸಿದ. ಆದಾಗ್ಯೂ, ಅಂತಿಮವಾಗಿ ಸ್ಥಾಪಕನ ವಿರುದ್ಧವೇ ಬಂಡಾಯ ಪ್ರಾರಂಭವಾಗಿ ಒವೈನ್ 1412ರಲ್ಲಿ ತಲೆಮರೆಸಿಕೊಂಡ ನಂತರ 1415ರಲ್ಲಿ ವೇಲ್ಸ್‌ ಗೆ ಅವಶ್ಯಕವಾಗಿದ್ದ ಶಾಂತಿಯನ್ನು ಮರುಸ್ಥಾಪಿಸಲಾಯಿತು.

ಆದಾಗ್ಯೂ, 1284ರಲ್ಲಿ ರುಡ್ಲಾನ್ ಶಾಸನದ ಅನುಸಾರ ವೇಲ್ಸ್‌ನ ವಿರುದ್ಧದ ಇಂಗ್ಲಿಷ್ ಆಕ್ರಮಣವು ನಡೆಯಿತಾದರೂ, 1536ರ ತನಕ ಯಾವುದೇ ಒಂದು ವಿಧ್ಯುಕ್ತ ಸಂಘಟನೆಯು ನಡೆದಿರಲಿಲ್ಲ,[೧೮]. ಇದಾದ ಸ್ವಲ್ಪ ಸಮಯದಲ್ಲೇ ರೂಪುಗೊಂಡ ವೆಲ್ಷ್ ಕಾನೂನು ಆಕ್ರಮಣದ ನಂತರ ವೇಲ್ಸ್ ನಲ್ಲಿ ಜಾರಿಗೆ ಬಂದಿತ್ತು. ಲಾಸ್ ಇನ್ ವೇಲ್ಸ್ ಆಕ್ಟ್ಸ್ 1535-1542ರ ಅನುಸಾರ ಇಂಗ್ಲಿಷ್ ಕಾನೂನು ಇದರ ಸ್ಥಾನದಲ್ಲಿ ಜಾರಿಗೆ ಬಂದಿತು.

ರಾಷ್ಟ್ರೀಯ ಪುನರುಜ್ಜೀವನ[ಬದಲಾಯಿಸಿ]

ಚಿತ್ರ:Cymdeithas-logo.svg
ಸಿಂಡೈತಾಸ್ ಯರ್ ಇಯಿತ್ ಜಿಮ್ರೆಗ್‌ನ ಲಾಂಛನ

20ನೇ ಶತಮಾನದಲ್ಲಿ, ವೇಲ್ಸ್ ತನ್ನ ರಾಷ್ಟ್ರೀಯ ಸ್ಥಾನಮಾನದಲ್ಲಿ ಒಂದು ಪುನರುಜ್ಜೀವನವನ್ನು ಕಂಡಿತು. UKಯ ಇತರ ಭಾಗಗಳಿಂದ ಹೆಚ್ಚಿನ ಸ್ವಾಯತ್ತತೆ ಹಾಗು ಸ್ವಾತಂತ್ರವನ್ನು ಪಡೆಯುವ ಸಲುವಾಗಿ ಪ್ಲೇಯಿಡ್ ಸಿಮ್ರುವನ್ನು 1925ರಲ್ಲಿ ರೂಪಿಸಲಾಯಿತು. 1955ರಲ್ಲಿ ಇಂಗ್ಲೆಂಡ್ ಹಾಗು ವೇಲ್ಸ್ ಎಂಬ ಪದವನ್ನು ಇಂಗ್ಲಿಷ್ ಕಾನೂನು ಅನ್ವಯಿಸುವ ಪ್ರದೇಶಗಳನ್ನು ಸೂಚಿಸಲು ಸಾಮಾನ್ಯವಾಗಿ ಬಳಸಲಾಗುತ್ತಿತ್ತು, ಜೊತೆಗೆಕಾರ್ಡಿಫ್ ನ್ನು ವೇಲ್ಸ್‌ ರಾಜಧಾನಿ ಯನ್ನಾಗಿ ಘೋಷಿಸಲಾಯಿತು. ಭಾಷೆಯು ಬೇಗನೆ ಅವನತಿ ಹೊಂದಬಹುದೆಂಬ ಅಂಜಿಕೆಗೆ ಉತ್ತರವಾಗಿ ಸಿಮ್‌ಡೈಥಾಸ್ ಯರ್ ಲೇಥ್ ಜಿಮ್ರಾಗ್ ನ್ನುಆಂಗ್ಲ:The Welsh Language Society 1962ರಲ್ಲಿ ರೂಪಿಸಲಾಯಿತು.

ರಾಷ್ಟ್ರೀಯತೆಯು ಬೆಳೆಯುತ್ತಾ ಹೋಯಿತು, ವಿಶೇಷವಾಗಿ 1965ರಲ್ಲಿ ಟ್ರೈವರಿನ್ ಕಣಿವೆ ಯ ಪ್ರವಾಹದಿಂದಾಗಿ, ಒಂದು ಜಲಾಶಯವನ್ನು ಕಟ್ಟಿ ಅದರಿಂದ ಇಂಗ್ಲಿಷ್ ನಗರವಾದ ಲಿವರ್ ಪೂಲ್ ಗೆ ನೀರನ್ನು ಪೂರೈಸುವ ಕಾರ್ಯವನ್ನು ಮಾಡಲಾಯಿತು. 36 ವೆಲ್ಷ್ ಮೆಂಬರ್ಸ್ ಆಫ್ ಪಾರ್ಲಿಮೆಂಟ್ (MPs) ನ ಪೈಕಿ 35 ಜನರು ವಿಧೇಯಕಕ್ಕೆ ವಿರುದ್ಧವಾಗಿ ಮತಹಾಕಿ, ಮತ್ತೊಬ್ಬರು ಮತ ಚಲಾಯಿಸದಿದ್ದರೂ, ಸಂಸತ್ತು ವಿಧೇಯಕಕ್ಕೆ ಅಂಗೀಕಾರ ನೀಡುವುದರ ಜೊತೆಗೆ ಕ್ಯಾಪೆಲ್ ಸೆಲಿನ್ ಗ್ರಾಮವನ್ನು ಮುಳುಗಿಸಲಾಯಿತು. ಇದು ತನ್ನದೇ ಆದ ವಿಷಯಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದಷ್ಟು ವೇಲ್ಸ್‌ನ ಬಲಹೀನತೆಯನ್ನು ಎತ್ತಿ ತೋರಿಸುತ್ತಿತ್ತು. ಇದಕ್ಕೆ ಕಾರಣ ವೆಸ್ಟ್‌ಮಿನಿಸ್ಟರ್ ಸಂಸತ್ತಿನಲ್ಲಿ ಇಂಗ್ಲಿಷ್ MPಗಳು ಅಧಿಕ ಸಂಖ್ಯಾ ಬಲವನ್ನು ಹೊಂದಿದ್ದರು.[೪೯] ಕಳೆದ 1966ರಲ್ಲಿ ಕಾರ್ಮರ್ಥೆನ್ ನ ಪಾರ್ಲಿಮೆಂಟಿನ ಸೀಟನ್ನುಗ್ವಿನ್‌ಫಾರ್ ಈವಾನ್ಸ್ ಉಪಚುನಾವಣೆಯಲ್ಲಿ ಗೆದ್ದರು. ಪ್ಲಾಯಿಡ್ ಸಿಮ್ರು ನ ಮೊದಲ ಪಾರ್ಲಿಮೆಂಟರಿ ಸೀಟ್ ಇದಾಗಿತ್ತು.[೫೦]

ಟ್ರೈವೆರಿನ್ ನಾಶದ ನೇರ ಪರಿಣಾಮವಾಗಿ ಫ್ರೀ ವೇಲ್ಸ್ ಆರ್ಮಿ ಹಾಗು ಮುದಿಯದ್ ಆಮ್ಡಿಫಿನ್ ಸಿಮ್ರು(MAC)ಆಂಗ್ಲ:Welsh Defence Movementಎರಡೂ ರೂಪುಗೊಳ್ಳುವುದರ ಜೊತೆಗೆ,[೫೧] 1963ರಿಂದಲೂ ಆಂದೋಳನಗಳನ್ನು ನಡೆಸಿದವು. ಕಳೆದ 1969ರಲ್ಲಿ ರಾಜಕುಮಾರ ಚಾರ್ಲ್ಸ್ ರನ್ನು ಪ್ರಿನ್ಸ್ ಆಫ್ ವೇಲ್ಸ್ ಎಂದು ಅಧಿಕಾರ ಸ್ಥಾಪನೆ ಮಾಡುವ ವರ್ಷದ ವರೆಗೂ, ಈ ಗುಂಪುಗಳು ಹಲವು ಬಾಂಬ್ ಸ್ಫೋಟಗಳಿಗೆ ಕಾರಣವಾಗಿದ್ದವು - ನೀರಿನ ಪೈಪುಗಳನ್ನು, ತೆರಿಗೆ ಹಾಗು ಇತರ ಕಚೇರಿಗಳನ್ನು ಜೊತೆಗೆ ಮಾಂಟ್ಗೋಮೆರಿಶೈರ್ಕ್ಲವ್ವೆಡಾಗ್, ನಲ್ಲಿ ಹೊಸ ಇಂಗ್ಲಿಷ್ ಬೆಂಬಲಿತ ಯೋಜನೆಗಾಗಿ ನಿರ್ಮಾಣವಾಗುತ್ತಿದ್ದ ಅಣೆಕಟ್ಟಿನ ಭಾಗವನ್ನು ನಾಶಮಾಡಿದ್ದವು.[೫೧] ಕಳೆದ 1967ರಲ್ಲಿ, ವೇಲ್ಸ್ ಅಂಡ್ ಬರ್ವಿಕ್ ಆಕ್ಟ್ 1746 ನ್ನು ವೇಲ್ಸ್‌ಗಾಗಿ ರದ್ದು ಮಾಡಲಾಯಿತು. ವೇಲ್ಸ್ ಗೆ ಒಂದು ಕಾನೂನು ವ್ಯಾಖ್ಯಾನದ ಜೊತೆಗೆ ಇಂಗ್ಲೆಂಡ್ ಜೊತೆಗಿನ ಗಡಿಗೆರೆಯನ್ನು ನಿರೂಪಿಸಲಾಯಿತು.

ಚಿತ್ರ:Cofiwch Dryweryn.jpg
ಕಾಪೆಲ್ ಸೆಲಿನ್ ನ ಅನಧಿಕೃತ ಗ್ರಾಫ್ಫಿತಿ ಸ್ಮಾರಕ, ಲಾನ್ರಿಸ್ಟಡ್ ಟ್ರವರಿನ್ನಲ್ಲಿ, ಅಬೇರಿಸ್ಟ್‌ವಿತ್ ನ ಸಮೀಪ [೫೨]

ಕಳೆದ 1979ರಲ್ಲಿ ವೇಲ್ಸ್ ಗೆ ಒಂದು ಶಾಸನ ಸಭೆಯನ್ನು ರೂಪಿಸುವ ಸಲುವಾಗಿ ಜನಾಭಿಪ್ರಾಯ ಸಂಗ್ರಹಣೆಯನ್ನು ಮಾಡಲಾಯಿತು (ನೋಡಿ ವೇಲ್ಸ್ ಜನಾಭಿಪ್ರಾಯ ಸಂಗ್ರಹ, 1979). ಇದರ "ನಕಾರಾತ್ಮಕ"ಮತಕ್ಕೆ ಹೆಚ್ಚಿನ ಬಹುಮತ ಬಂದಿತು. ಆದಾಗ್ಯೂ, ಕಳೆದ 1997ರಲ್ಲಿ ಇದೇ ವಿಚಾರವಾಗಿ ನಡೆದ ಒಂದು ಜನಾಭಿಪ್ರಾಯ ಸಂಗ್ರಹಣೆಯಲ್ಲಿ, ಒಂದು ಅತ್ಯಂತ ಸಣ್ಣ ಬಹುಮತಗಳ ಅಂತರದಿಂದ "ಒಪ್ಪಿಗೆ" ಸೂಚಿಸಲಾಯಿತು. ನ್ಯಾಷನಲ್ ಅಸೆಂಬ್ಲಿ ಫಾರ್ ವೇಲ್ಸ್ (ಸಿನುಲ್ಲಿಯದ್ ಸೆನೆದ್ಲೆತೋಲ್ ಸಿಮ್ರು ) ನ್ನು 1999ರಲ್ಲಿ ರೂಪಿಸಲಾಯಿತು (ಗವರ್ನಮೆಂಟ್ ಆಫ್ ವೇಲ್ಸ್ ಆಕ್ಟ್ 1998ನ ಪರಿಣಾಮವಾಗಿ). ಇದು ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ವೇಲ್ಸ್‌ಗೆ ಹೇಗೆ ಖರ್ಚು ಹಾಗೂ ಮೇಲ್ವಿಚಾರಣೆ ವಹಿಸಲಾಗುತ್ತದೆಂದು ನಿರ್ಧರಿಸುವ ಅಧಿಕಾರ ಹೊಂದಿದೆ (ಆದರೂ UK ಸಂಸತ್ತು, ವೆಲ್ಷ್ ಅಸೆಂಬ್ಲಿಯ ಅಧಿಕಾರಕ್ಕೆ ಮಿತಿಯನ್ನು ಒಡ್ಡುವ ಹಕ್ಕನ್ನು ಕಾಯ್ದುಕೊಂಡಿದೆ).

ಕಳೆದ 1998ರ ಕಾಯಿದೆಗೆ ಗವರ್ನಮೆಂಟ್ ಆಫ್ ವೇಲ್ಸ್ ಆಕ್ಟ್ 2006 ತಿದ್ದುಪಡಿ ತಂದಿತು. ಇದು ಅಸೆಂಬ್ಲಿಯ ಅಧಿಕಾರವನ್ನು ಹೆಚ್ಚಿಸಿತಲ್ಲದೆ, ಸ್ಕಾಟಿಷ್ ಸಂಸತ್ತು ಹಾಗು ಉತ್ತರ ಐರ್ಲ್ಯಾಂಡ್ ಅಸೆಂಬ್ಲಿಗೆ ಸಮಾನವಾಗಿ ಶಾಸನಾತ್ಮಕ ಅಧಿಕಾರವನ್ನು ನೀಡಿತು. ಕಳೆದ 2007ರ ಅಸೆಂಬ್ಲಿ ಚುನಾವಣೆಯ ಹಿನ್ನೆಲೆಯಲ್ಲಿ, ಒನ್ ವೇಲ್ಸ್ ಸರ್ಕಾರವನ್ನು ಪ್ಲಾಯಿಡ್ ಸಿಮ್ರು ಹಾಗು ವೆಲ್ಷ್ ಲೇಬರ್ ಪಾರ್ಟಿ ಯ ನಡುವೆ ಮೈತ್ರಿ ಒಪ್ಪಂದದ ಮೇರೆಗೆ ರೂಪಿಸಲಾಯಿತು. ಈ ಒಪ್ಪಂದದ ಪ್ರಕಾರ, ಒಂದು ವಿಧ್ಯುಕ್ತ ಸಭೆಯನ್ನು ಏರ್ಪಡಿಸಿ ವೇಲ್ಸ್‌ನಲ್ಲಿ ಮತ್ತಷ್ಟು ಹೆಚ್ಚುತ್ತಿರುವ ಕಾನೂನು ಹಾಗು ಆರ್ಥಿಕ ಸ್ವಾಯತ್ತತೆಯ ಬಗ್ಗೆ ಚರ್ಚಿಸಲು ತೀರ್ಮಾನಿಸಲಾಯಿತು. ವೆಲ್ಷ್ ಅಸೆಂಬ್ಲಿಗೆ ಸಂಪೂರ್ಣವಾಗಿ ಕಾನೂನು-ರೂಪಿಸುವ ಅಧಿಕಾರವನ್ನು ನೀಡಬೇಕೆಂಬ ಒಂದು ಜನಾಭಿಪ್ರಾಯ ಸಂಗ್ರಹಣೆಯ ಬಗ್ಗೆ ಭರವಸೆಯನ್ನು ಕೊಡಲಾಯಿತು "ಅಸೆಂಬ್ಲಿ ಅವಧಿಗೆ ಮುಂಚೆ ಅಥವಾ ಕೊನೆಯಲ್ಲಿ (2011ರಲ್ಲಿ), ಅದನ್ನು ಕಾರ್ಯಸಾಧ್ಯವಾಗಿಸಲು ನಿರ್ಧರಿಸಲಾಯಿತು". ಎರಡೂ ಪಕ್ಷದವರು "ಒಂದು ಪ್ರಾಮಾಣಿಕ ಉದ್ದೇಶದಿಂದ ಅಭಿಯಾನ ಮಾಡಿ ಈ ಜನಾಭಿಪ್ರಾಯ ಸಂಗ್ರಹಣೆಯನ್ನು ಯಶಸ್ವಿಯಾಗಿಸಲು" ಒಪ್ಪಿಗೆ ನೀಡಿದರು.[೫೩]

ಸರ್ಕಾರ ಮತ್ತು ರಾಜಕೀಯ[ಬದಲಾಯಿಸಿ]

ವೇಲ್ಸ್‌ನ ರಾಜ ಲಾಂಛನ.
ವೆಲ್ಷ್ ಪಾರ್ಲಿಮೆಂಟ್ ನ ಮೊದಲ ಮಂತ್ರಿ ಮಾರ್ಕ್ ಡ್ರೇಕ್ಫೋರ್ಡ್; ಮೇ 2021

ಸಂವಿಧಾನಾತ್ಮಕವಾಗಿ, ಯುನೈಟೆಡ್ ಕಿಂಗ್ಡಮ್ ಡೆ ಜೂರ್ ನ್ನು ಹೊಂದಿದೆ. ಒಂದೇ ಪರಮಾಧಿಕಾರವುಳ್ಳ ಸಂಸತ್ತು ಹಾಗು ವೆಸ್ಟ್ ಮಿನಿಸ್ಟರ್ ನಲ್ಲಿ ಸರ್ಕಾರವನ್ನು ಹೊಂದಿರುವ ಒಂದು ಏಕೀಕೃತ ರಾಷ್ಟ್ರ ವಾಗಿದೆ. ವೇಲ್ಸ್ ಹಾಗು ಸ್ಕಾಟ್ಲ್ಯಾಂಡ್ ನಲ್ಲಿ 1997ರಲ್ಲಿ ನಡೆಸಿದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಒಂದು ಸೀಮಿತ ರೂಪದ ಸ್ವಯಮಾಡಳಿತ ವನ್ನು ಎರಡೂ ರಾಷ್ಟ್ರಗಳಲ್ಲೂ ಸ್ಥಾಪಿಸಬೇಕೆಂದು ಅಭಿಪ್ರಾಯವು ವ್ಯಕ್ತವಾಯಿತು. ವೇಲ್ಸ್ ನಲ್ಲಿ, ಗವರ್ನಮೆಂಟ್ ಆಫ್ ವೇಲ್ಸ್ ಆಕ್ಟ್ 1998 ನ ಪರಿಣಾಮವಾಗಿ ವಿಕೇಂದ್ರೀಕರಣ ದ ಪ್ರಕ್ರಿಯೆಯು ಪ್ರಾರಂಭವಾಯಿತು. ಇದು ನ್ಯಾಷನಲ್ ಅಸೆಂಬ್ಲಿ ಫಾರ್ ವೇಲ್ಸ್ ನ ([Cynulliad Cenedlaethol Cymru] Error: {{Lang}}: text has italic markup (help))ಸ್ಥಾಪನೆಗೆ ನಾಂದಿಯಾಯಿತು.[೫೪] ವೇಲ್ಸ್ ನ ಪ್ರಮುಖ ಕಾರ್ಯದರ್ಶಿಯ ಅಧಿಕಾರವನ್ನು 1 ಜುಲೈ 1999ರಲ್ಲಿ ವಿಕೇಂದ್ರೀಕರಣದ ಸರ್ಕಾರಕ್ಕೆ ಹಸ್ತಾಂತರಿಸಲಾಯಿತು. ಜೊತೆಗೆ ಅಸೆಂಬ್ಲಿಗೆ ವೆಸ್ಟ್ ಮಿನಿಸ್ಟರ್ ಸರ್ಕಾರದ ಮುಂಗಡ ಪತ್ರವು ವಿಕೇಂದ್ರಿತ ಪ್ರದೇಶಗಳಲ್ಲಿ ಯಾವ ರೀತಿ ವ್ಯಯ ಮಾಡಿದೆ ಹಾಗೂ ಮೇಲ್ವಿಚಾರಣೆ ವಹಿಸಿದೆ ಎಂದು ನಿರ್ಧರಿಸುವ ಜವಾಬ್ದಾರಿ ನೀಡಿತು.[೫೫]

ಹಸ್ತಾಂತರಗೊಂಡ ಜವಾಬ್ದಾರಿಗಳಲ್ಲಿ ಕೃಷಿ, ಆರ್ಥಿಕ ಬೆಳವಣಿಗೆ, ಶಿಕ್ಷಣ, ಆರೋಗ್ಯ, ವಸತಿ, ಉದ್ಯಮ, ಸ್ಥಳೀಯ ಸರ್ಕಾರ, ಸಾಮಾಜಿಕ ಸೇವೆ, ಪ್ರವಾಸೋದ್ಯಮ, ಸಾರಿಗೆ ಹಾಗು ವೆಲ್ಷ್ ಭಾಷೆಯ ಅಭಿವೃದ್ಧಿಯು ಸೇರಿಕೊಂಡಿತ್ತು. ದಿ ನ್ಯಾಷನಲ್ ಅಸೆಂಬ್ಲಿ ಪರಮಾಧಿಕಾರವನ್ನು ಜೊತೆಗೆ ಮುಖ್ಯ ಶಾಸನಾತ್ಮಕ ಅಧಿಕಾರವನ್ನು ಹೊಂದಿಲ್ಲ, ಇದನ್ನು ವೆಸ್ಟ್ ಮಿನಿಸ್ಟರ್ ಸರಕಾರವು ಉಳಿಸಿಕೊಂಡಿದೆ. ಆದರೆ 2007ರಲ್ಲಿ ಗವರ್ನಮೆಂಟ್ ಆಫ್ ವೇಲ್ಸ್ ಆಕ್ಟ್ 2006 ಜಾರಿಗೆ ಬಂದ ಮೇಲೆ, ನ್ಯಾಷನಲ್ ಅಸೆಂಬ್ಲಿ ಮುಖ್ಯ ಶಾಸನವನ್ನು ಕೆಲವೊಂದು ನಿರ್ದಿಷ್ಟವಾದ ಸಂದರ್ಭಗಳಲ್ಲಿ ಅಸೆಂಬ್ಲಿ ಕ್ರಮಗಳೆಂದು ಅಂಗೀಕಾರ ನೀಡುವ ಅಧಿಕಾರಕ್ಕೆ ಅನುಮತಿ ಕೋರಬಹುದು.[೫೫] ಸೈದ್ಧಾಂತಿಕವಾಗಿ UK ಸಂಸತ್ತು, ನ್ಯಾಷನಲ್ ಅಸೆಂಬ್ಲಿ ಫಾರ್ ವೇಲ್ಸ್ ನ ಮೇಲೆ ಯಾವುದೇ ಸಮಯದಲ್ಲಿ ಅಧಿಕಾರ ಸ್ಥಾಪಿಸಬಹುದು ಅಥವಾ ರದ್ದುಪಡಿಸಲೂಬಹುದು.

ದಿ ಸೇನೆಡ್ ಕಟ್ಟಡ.

ಅಸೆಂಬ್ಲಿಯು 60 ಜನ ಸದಸ್ಯರಿಂದ ಕೂಡಿದೆ, ಇವರನ್ನು "ಅಸೆಂಬ್ಲಿ ಮೆಂಬರ್ಸ್ (AM)" ಎಂದು ಕರೆಯುತ್ತಾರೆ. ನಲವತ್ತು ಜನ AMಗಳನ್ನು ಫಸ್ಟ್ ಪಾಸ್ಟ್ ದಿ ಪೋಸ್ಟ್ ವಿಧಾನದಿಂದ ಆಯ್ಕೆ ಮಾಡಲಾಗುತ್ತದೆ. ಜೊತೆಗೆ 20 ಜನರನ್ನು 5 ವಿವಿಧ ಪ್ರದೇಶಗಳ ಪ್ರಾದೇಶಿಕ ಪಟ್ಟಿಯ ಮೂಲಕ ಅಡಿಷನಲ್ ಮೆಂಬರ್ ಸಿಸ್ಟಂ ನ ಮೂಲಕ ಆಯ್ಕೆ ಮಾಡಲಾಗುತ್ತದೆ. ಅತ್ಯಂತ ದೊಡ್ಡ ಪಕ್ಷವು ಫಸ್ಟ್ ಮಿನಿಸ್ಟರ್ ಆಫ್ ವೇಲ್ಸ್ ನ ಆಯ್ಕೆ ಮಾಡುತ್ತದೆ. ಇವರು ಸರಕಾರದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಾರೆ. ವೆಲ್ಷ್ ಅಸೆಂಬ್ಲಿ ಗವರ್ನಮೆಂಟ್ ಕಾರ್ಯಾಂಗ ವಾಗಿದೆ, ಹಾಗು ಅಸೆಂಬ್ಲಿಯು ತನ್ನ ಹೆಚ್ಚಿನ ಅಧಿಕಾರವನ್ನು ಅಸೆಂಬ್ಲಿ ಗವರ್ನಮೆಂಟ್‌ಗೆ ನಿಯೋಜಿಸುತ್ತದೆ. ಲಾರ್ಡ್ ರೋಜರ್ಸ್ ವಿನ್ಯಾಸದ ಹೊಸ ಅಸೆಂಬ್ಲಿ ಕಟ್ಟಡವನ್ನು ರಾಣಿ ಎಲಿಜಬತ್ II St ಡೇವಿಡ್'ಸ್ ಡೇ ಯಂದು (1 ಮಾರ್ಚ್) 2006ರಲ್ಲಿ ಉದ್ಘಾಟಿಸಿದರು.

60ಸ್ಥಾನಗಳಲ್ಲಿ 26ಸ್ಥಾನ ಗಳಿಸಿದಲೇಬರ್ ಪಾರ್ಟಿಯು ಕಾರ್ವಿನ್ ಜೋನ್ಸ್ ವೇಲ್ಸ್ ನ ಮೊದಲ ಸಚಿವ (2009 ರಿಂದ).[೫೬] ನ್ಯಾಷನಲ್ ಅಸೆಂಬ್ಲಿ ಫಾರ್ ವೇಲ್ಸ್ ಚುನಾವಣೆ, 2007ರ ನಂತರ, ವೆಲ್ಷ್ ಲೇಬರ್ ಹಾಗು ಪ್ಲಾಯಿಡ್ ಸಿಮ್ರು; ದಿ ಪಾರ್ಟಿ ಆಫ್ ವೇಲ್ಸ್, ಯುನೈಟೆಡ್ ಕಿಂಗ್ಡಮ್‌ನ ಉಳಿದ ಭಾಗಗಳಿಂದ ವೆಲ್ಷ್‌ನ ಸ್ವಾತಂತ್ರವನ್ನು ಬಯಸುವ ಈ ಎರಡೂ ಪಕ್ಷಗಳು ಒಂದು ಸ್ಥಿರವಾದ ಸರಕಾರವನ್ನು ರೂಪಿಸುವ ಉದ್ದೇಶದಿಂದ "ಐತಿಹಾಸಿಕವಾದ" ಒನ್ ವೇಲ್ಸ್ ಒಪ್ಪಂದದೊಂದಿಗೆ ಒಂದು ಮೈತ್ರಿ ಸಹಭಾಗಿತ್ವಕ್ಕೆ ಪ್ರವೇಶಿಸಿದವು.

ಅಸೆಂಬ್ಲಿಯಲ್ಲಿ ಎರಡನೇ ದೊಡ್ಡ ಪಕ್ಷವಾಗಿ 60 ರಲ್ಲಿ 14 ಸೀಟುಗಳನ್ನು ಹೊಂದಿರುವ, ಪ್ಲಾಯಿಡ್ ಸಿಮ್ರು ಪಕ್ಷವನ್ನು ಲಿಯನ್ ವಯ್ನ್ ಜೋನೆಸ್ ಮುನ್ನಡೆಸುತ್ತಾರೆ. ಇವರು ವೇಲ್ಸ್ ನ ಡೆಪ್ಯೂಟಿ ಫಸ್ಟ್ ಮಿನಿಸ್ಟರ್. ಪ್ಲಾಯಿಡ್ ಸಿಮ್ರು ಪಕ್ಷದ ಸದಸ್ಯ ಲಾರ್ಡ್ ಎಲಿಸ್-ಥಾಮಸ್ ಅಸೆಂಬ್ಲಿಯ ಸಭಾಧ್ಯಕ್ಷರಾಗಿದ್ದಾರೆ. ಇತರ ಪಕ್ಷಗಳೆಂದರೆ ಕನ್ಸರ್ವಟಿವ್ ಪಾರ್ಟಿ, ಹಾಲಿ 13 ಸೀಟುಗಳೊಂದಿಗೆ ನಿಷ್ಠಾವಂತ ಪ್ರತಿಪಕ್ಷ ವಾಗಿದೆ, ಹಾಗು ಲಿಬಿರಲ್ ಡೆಮೋಕ್ರಾಟ್ಸ್ ಆರು ಸೀಟುಗಳನ್ನು ಹೊಂದಿದೆ. "ಲಿಬ್ಡೆಮ್ಸ್" ಮೊದಲ ಅಸೆಂಬ್ಲಿಯಲ್ಲಿ ಲೇಬರ್ ಪಾರ್ಟಿಯ ಜೊತೆ ಮುಂಚೆ ಒಂದು ಮೈತ್ರಿ ಸರಕಾರವನ್ನು ರಚಿಸಿತ್ತು. ಒಬ್ಬ ಸ್ವತಂತ್ರ ಅಭ್ಯರ್ಥಿಯು ಸಹ ಇದ್ದಾರೆ.

ಹೌಸ್ ಆಫ್ ಕಾಮನ್ಸ್ - UK ಪಾರ್ಲಿಮೆಂಟಿನ ಕೆಳ ಮನೆ- ವೆಲ್ಷ್‌ನ ಚುನಾವಣಾಕ್ಷೇತ್ರಗಳಿಂದ ವೇಲ್ಸ್ ನ್ನು (646ರಲ್ಲಿ) 40 MPಗಳು ಪ್ರತಿನಿಧಿಸುತ್ತಾರೆ. ಲೇಬರ್ ಪಾರ್ಟಿಯು 40 ಸೀಟುಗಳಲ್ಲಿ 29ನ್ನು ಪ್ರತಿನಿಧಿಸುತ್ತದೆ.ಲಿಬಿರಲ್ ಡೆಮೊಕ್ರಾಟ್ಸ್ ನಾಲ್ಕು ಸೀಟುಗಳನ್ನು ಹೊಂದಿದೆ, ಪ್ಲಾಯಿಡ್ ಸಿಮ್ರು ಹಾಗು ಕನ್ಸರ್ವಟಿವ್ ಗಳು ತಲಾ ಮೂರು ಸೀಟುಗಳನ್ನು ಹೊಂದಿದ್ದಾರೆ.[೫೭] ಪ್ರಮುಖ ಕಾರ್ಯದರ್ಶಿ ಫಾರ್ ವೇಲ್ಸ್ UK ಸಚಿವ ಸಂಪುಟದಲ್ಲಿ ಕೂರುತ್ತಾರೆ ಹಾಗು ಇವರು ವೇಲ್ಸ್ ಗೆ ಸಂಬಂಧಪಟ್ಟ ವಿಚಾರಗಳನ್ನು ಪ್ರತಿನಿಧಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ವೇಲ್ಸ್ ನ ಜವಾಬ್ದಾರಿಯನ್ನು ಹೊತ್ತ ವೇಲ್ಸ್ ಕಚೇರಿಯು ಯುನೈಟೆಡ್ ಕಿಂಗ್ಡಮ್ ಸರಕಾರದ ಒಂದು ವಿಭಾಗವಾಗಿದೆ. ಪಾಲ್ ಮರ್ಫಿ ವೇಲ್ಸ್ ನ ರಾಜ್ಯ ಕಾರ್ಯದರ್ಶಿಯಾಗಿದ್ದಾರೆ. ಇವರು 24 ಜನವರಿ 2008ರಲ್ಲಿ ಪೀಟರ್ ಹೈನ್ ನ ಬದಲಿಗೆ ನೇಮಕಗೊಂಡರು. ಹೈನ್ ತಮ್ಮ ಲೇಬರ್ ಪಕ್ಷದ ಉಪನಾಯಕನ ಪ್ರಚಾರದಲ್ಲಿ ಲೇಬರ್ ಪಕ್ಷಕ್ಕೆ ಘೋಷಣೆ ಮಾಡಿರದ ದೇಣಿಗೆಗಳನ್ನು ಸ್ವೀಕರಿಸಿದ ಆರೋಪದ ತನಿಖೆಗೆ ಸಂಬಂಧಪಟ್ಟಂತೆ ಹೇನ್ ರಾಜೀನಾಮೆ ನೀಡಿದ್ದರು.

ವೇಲ್ಸ್ UK ಯುರೋಪಿಯನ್ ಒಕ್ಕೂಟದ ಒಂದು ವಿಶಿಷ್ಟ ಚುನಾಯಿತರ ಕ್ಷೇತ್ರವನ್ನು ಹೊಂದಿದೆ. ಇದಕ್ಕೆ ಮೆಂಬರ್ಸ್ ಆಫ್ ದಿ ಯುರೋಪಿಯನ್ ಪಾರ್ಲಿಮೆಂಟಿನ 4 ಸದಸ್ಯರು ಪ್ರತಿನಿಧಿಸುತ್ತಾರೆ.

ಸ್ಥಳೀಯ ಸರ್ಕಾರ[ಬದಲಾಯಿಸಿ]

ಕಾರ್ಡಿಫ್ ಸಿಟಿ ಹಾಲ್ ನ ಕ್ಲಾಕ್ ಟವರ್.

ಸ್ಥಳೀಯ ಸರಕಾರವನ್ನು ರಚಿಸುವ ಉದ್ದೇಶದಿಂದ, ವೇಲ್ಸ್‌ನ್ನು 1996ರಲ್ಲಿ 22 ಮಂಡಳಿ ಪ್ರದೇಶಗಳಾಗಿ ವಿಂಗಡಿಸಲಾಗಿದೆ. ಈ "ಏಕೀಕೃತ ಅಧಿಕೃತ ಮಂಡಳಿ"ಯು ಎಲ್ಲ ಸ್ಥಳೀಯ ಸರಕಾರಿ ಸೇವೆಗಳನ್ನು ಒದಗಿಸುವ ಜವಾಬ್ದಾರಿಯನ್ನು ಹೊಂದಿದೆ. [೫೮]

ಏಕೀಕೃತ ಅಧಿಕಾರವನ್ನು ಹೊಂದಿರುವ ಪ್ರದೇಶಗಳ ನಕ್ಷೆ

* ಚಿಹ್ನೆಯಿಂದ ಗುರುತುಪಡಿಸದ ವಿನಾ ಪ್ರದೇಶಗಳು ಕೌಂಟಿ ಎಂದು ಸೂಚಿತವಾಗಿದೆ ಅಥವಾ † (ಇದು ಕೌಂಟಿ ಬರೋಸ್).

ಇಂಗ್ಲಿಷ್ ನಿಂದ ಭಿನ್ನವಾಗಿರುವ ವೆಲ್ಷ್ ಭಾಷಾ ರೂಪಗಳನ್ನು ಆವರಣ ಚಿಹ್ನೆಯಲ್ಲಿ ನೀಡಲಾಗಿದೆ. .

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಒಟ್ಟಾರೆಯಾಗಿ ವೇಲ್ಸ್ ನಲ್ಲಿ ಐದು ನಗರಗಳಿವೆ: ಕಾರ್ಡಿಫ್, ನ್ಯೂಪೋರ್ಟ್ ಹಾಗು ಸ್ವಾನ್ಸೀ ನಗರಗಳ ಜೊತೆಗೆ, ಬಂಗೊರ್ ಹಾಗು St ಡೇವಿಡ್'ಸ್ ಸಮುದಾಯಗಳಿಗೂ ನಗರಗಳೆಂದು ಮನ್ನಣೆನೀಡಲಾಗಿದೆ.

ಕಾನೂನು[ಬದಲಾಯಿಸಿ]

ಇಂಗ್ಲೆಂಡ್, ಕಿಂಗ್ ಹೆನ್ರಿ VIII ನ ಆಳ್ವಿಕೆಯಲ್ಲಿ ಲಾಸ್ ಇನ್ ವೇಲ್ಸ್ ಆಕ್ಟ್ 1535 ಅನುಸಾರ ವೇಲ್ಸ್ ನ್ನು ಸಂಪೂರ್ಣವಾಗಿ ಸ್ವಾಧೀನಕ್ಕೆ ವಶಪಡಿಸಿಕೊಂಡಿತು. 15ನೇ ಶತಮಾನದವರೆಗೂ ನಡೆದ ಆಕ್ರಮಣದ ನಂತರ ನೇರವಾಗಿ ಇಂಗ್ಲಿಷ್ ಆಳ್ವಿಕೆಗೆ ಒಳ ಪಡದಿದ್ದ ದೂರದ ಪ್ರದೇಶಗಳಲ್ಲಿ ಇದಕ್ಕೆ ಮುಂಚೆ ವೆಲ್ಷ್ ಕಾನೂನು ಡಿ ಫಾಕ್ಟೋ ಅಸ್ತಿತ್ವದಲ್ಲಿತ್ತು. ವೇಲ್ಸ್ ಅಂಡ್ ಬರ್ವಿಕ್ ಆಕ್ಟ್ 1746 ನ ಪ್ರಕಾರ ಇಂಗ್ಲೆಂಡ್ ಗೆ ಅನ್ವಯಿಸುವ ಎಲ್ಲ ಕಾನೂನುಗಳು ತಾನೇತಾನಾಗಿ ವೇಲ್ಸ್ ಗೆ ಕೂಡ ಅನ್ವಯಿಸುತ್ತದೆ( ಹಾಗು ಬರ್ವಿಕ್-ಅಪಾನ್ -ಟ್ವೀಡ್, ಆಂಗ್ಲೋ-ಸ್ಕಾಟಿಷ್ ಗಡಿಯಲ್ಲಿರುವ ಒಂದು ಪಟ್ಟಣ). ಇದು ಕಾನೂನಲ್ಲಿ ಸ್ಪಷ್ಟವಾಗಿ ವಿಶದಪಡಿಸದ ಹೊರತಾಗಿ ಎಲ್ಲದಕ್ಕೂ ಅನ್ವಯಿಸುತ್ತದೆ. ಈ ಕಾಯಿದೆಯು, ವೇಲ್ಸ್ ಗೆ ಸಂಬಂಧಿಸಿದ ಹಾಗೆ, 1967ರಲ್ಲಿ ರದ್ದುಮಾಡಲಾಯಿತು. ಆದಾಗ್ಯೂ, ವೇಲ್ಸ್ ಹಾಗು ಇಂಗ್ಲೆಂಡ್, ಏಕೈಕ ಕಾನೂನು ಮುಖ್ಯ ಗುಣಗಳನ್ನು ಹೊಂದಿರುವುದರಿಂದ, ಸಮಾನವಾದ ಕಾನೂನು ವ್ಯವಸ್ಥೆಯನ್ನು ಹಂಚಿಕೊಳ್ಳುತ್ತವೆ - ವೇಲ್ಸ್‌ಗೆ ನೀಡಲಾದ ಸ್ವಾಯತ್ತತೆಗೆ ಅವಕಾಶ ಕಲ್ಪಿಸುವ ಸಲುವಾಗಿ ಕೆಲವು ಬದಲಾವಣೆಗಳನ್ನು ಹೊರತುಪಡಿಸಲಾಗಿದೆ. ಒಂದು ಅರ್ಥದಲ್ಲಿ, ಇಂಗ್ಲಿಷ್ ಕಾನೂನು ವೇಲ್ಸ್‌ನ ಕಾನೂನಾಗಿದೆ. (ನೋಡಿ ಇಂಗ್ಲೆಂಡ್ ಅಂಡ್ ವೇಲ್ಸ್ .)

ಇಂಗ್ಲಿಷ್ ಕಾನೂನನ್ನು ಒಂದು ಸರ್ವಸಮಾನ ಕಾನೂನು ವ್ಯವಸ್ಥೆಯೆಂದು ಪರಿಗಣಿಸಲಾಗಿದೆ. ಇದರಲ್ಲಿ ಯಾವುದೇ ಪ್ರಮುಖವಾದ ಕಾನೂನಿನ ಸಂಹಿತೆರಚನೆಯಿಲ್ಲ. ಜೊತೆಗೆ ಕಾನೂನಿನ ಪೂರ್ವ ನಿದರ್ಶನಗಳಿಗೆ ಬದ್ಥತೆ ಹೊಂದಿದ್ದು, ಪ್ರಚೋದನೆಗೆ ವಿರೋಧವಿದೆ. ಕಾನೂನಿನ ವ್ಯವಸ್ಥೆಯನ್ನು ಯುನೈಟೆಡ್ ಕಿಂಗ್ಡಮ್‌ನ ಸರ್ವೋಚ್ಚ ನ್ಯಾಯಾಲಯವು ನೇತೃತ್ವ ವಹಿಸಿರುವುದರ ಜೊತೆಗೆ ಕ್ರಿಮಿನಲ್ ಹಾಗು ಸಿವಿಲ್ ವ್ಯಾಜ್ಯಗಳಿಗೆ ಮೇಲ್ಮನವಿಯ ಉನ್ನತ ಕೋರ್ಟ್ ಎನಿಸಿದೆ.ದಿ ಸುಪ್ರೀಂ ಕೋರ್ಟ್ ಆಫ್ ಜ್ಯೂಡಿಕೇಚರ್ ಆಫ್ ಇಂಗ್ಲೆಂಡ್ ಅಂಡ್ ವೇಲ್ಸ್ ಒಂದು ಉನ್ನತವಾದ ವಿಚಾರಣೆಯ ನ್ಯಾಯಾಲಯ ಹಾಗು ಅಪೀಲು ನ್ಯಾಯಾಲಯ ವಾಗಿದೆ. ನ್ಯಾಯಾಲಯಗಳ ಮೂರು ವಿಭಾಗಗಳೆಂದರೆ ಕೋರ್ಟ್ ಆಫ್ ಅಪೀಲ್; ಹೈ ಕೋರ್ಟ್ ಆಫ್ ಜಸ್ಟೀಸ್ ಹಾಗು ಕ್ರೌನ್ ಕೋರ್ಟ್. ಸಣ್ಣಪುಟ್ಟ ಮೊಕದ್ದಮೆಗಳನ್ನು ಮ್ಯಾಜಿಸ್ಟ್ರೇಟ್ಸ್' ಕೋರ್ಟ್ ಅಥವಾ ಕೌಂಟಿ ಕೋರ್ಟ್ ನಲ್ಲಿ ವಿಚಾರಣೆ ಮಾಡಲಾಗುತ್ತದೆ.

ಕಳೆದ 2006ರ ವಿಕೇಂದ್ರೀಕರಣ ದ ನಂತರ, ವೆಲ್ಷ್ ಅಸೆಂಬ್ಲಿಯು UK ಸಂಸತ್ತಿನ ವ್ಯವಸ್ಥೆಯ ಹೊರಗೆ, ವೇಲ್ಸ್ ನ ಕೆಲವು ನಿರ್ದಿಷ್ಟ ಅವಶ್ಯಕತೆಗಳಿಗಾಗಿ ಕೆಲವು ಕಾನೂನು ಕರಡುಪ್ರತಿಗಳನ್ನು ತಯಾರಿಸಿ ಅದನ್ನು ಅನುಮೋದಿಸುವ ಅಧಿಕಾರವನ್ನು ಪಡೆದಿತ್ತು. ಎಲ್ಲ ಸಂಸತ್ತಿನ ಮಧ್ಯಸ್ಥಗಾರರು ಸಮ್ಮತಿ ಸೂಚಿಸಿದ ಹಾಗು ಲೆಜಿಸ್ಲೇಟಿವ್ ಕಾಂಪಿಟೆನ್ಸಿ ಆರ್ಡರ್ ನೀಡಿದ ಅಧಿಕಾರದ ಆಧಾರದ ಮೇಲೆ, ಅದು ಅಸೆಂಬ್ಲಿ ಮೆಷರ್ಸ್ ಹೆಸರಿನ ಕಾನೂನುಗಳನ್ನು ಅಂಗೀಕರಿಸುವ ಅಧಿಕಾರವನ್ನು ಆರೋಗ್ಯ ಹಾಗು ಶಿಕ್ಷಣದಂತಹ ನಿರ್ದಿಷ್ಟ ಕ್ಷೇತ್ರ ಗಳಲ್ಲಿ ಹೊಂದಿದೆ. ಮೇಲೆ ಹೇಳಿದಂತೆ, ಅಸೆಂಬ್ಲಿ ಮೆಷರ್ಸ್ ಪ್ರಾಥಮಿಕ ಶಾಸನದ ಒಂದು ಅಧೀನ ರೂಪವಾಗಿದೆ. UKಯ-ವ್ಯಾಪಕ ಆಕ್ಟ್ಸ್ ಆಫ್ ಪಾರ್ಲಿಮೆಂಟ್ ಗಿರುವಷ್ಟು ಅವಕಾಶದ ಕೊರತೆಯಿದೆ. ಆದರೆ ಪ್ರತಿ 'ಕಾಯ್ದೆ' ಯನ್ನು UK ಸಂಸತ್ತು ಅಥವಾ ರಾಯಲ್ ಅಸ್ಸೆಂಟ್‌ನಿಂದ ಅನುಮೋದನೆಯಿಲ್ಲದೆ ಅಂಗೀಕರಿಸಬಹುದು. ಈ ಪ್ರಾಥಮಿಕ ಶಾಸನದ ಮೂಲಕ, ವೆಲ್ಷ್ ಅಸೆಂಬ್ಲಿ ಗವರ್ನಮೆಂಟ್ ಹೆಚ್ಚು ನಿರ್ದಿಷ್ಟವಾದ ದ್ವಿತೀಯಕ ಕಾನೂನಿನ ಕರಡು ಪ್ರತಿಯನ್ನು ತಯಾರಿಸಬಹುದು. ವಿಕೇಂದ್ರೀಕರಣದ ಜೊತೆಗೆ, ಪುರಾತನವಾದ ಹಾಗು ಐತಿಹಾಸಿಕವಾದ ವೇಲ್ಸ್ ಹಾಗು ಚೆಸ್ಟರ್ ಕೋರ್ಟ್ ಸರ್ಕ್ಯೂಟ್‌ನ್ನು(ಸಂಚಾರಿ ನ್ಯಾಯಾಲಯ) ಸಹ ರದ್ದು ಮಾಡಲಾಯಿತು ಹಾಗು ಪ್ರತ್ಯೇಕವಾದ ವೆಲ್ಷ್ ಕೋರ್ಟ್ ಸರ್ಕ್ಯೂಟ್‌ನ್ನು ಅಸೆಂಬ್ಲಿ ಅನುಮೋದಿಸಿದ ಯಾವುದೇ ಮೆಷರ್ಸ್ ಗೆ ಅವಕಾಶ ನೀಡಲು ಸೃಷ್ಟಿಸಲಾಯಿತು.

ಭೌಗೋಳಿಕ ವಿವರಣೆ[ಬದಲಾಯಿಸಿ]

ವೇಲ್ಸ್ ನ ರಾಷ್ಟ್ರೀಯ ಉದ್ಯಾನಗಳ ನಕ್ಷೆ.

ವೇಲ್ಸ್ ಸೆಂಟ್ರಲ್-ವೆಸ್ಟ್ ಗ್ರೇಟ್ ಬ್ರಿಟನ್ ನ ಒಂದು ಪರ್ಯಾಯ ದ್ವೀಪ ದಲ್ಲಿ ಉಪಸ್ಥಿತವಿದೆ. ಅದರ ಭೂಪ್ರದೇಶದ ವ್ಯಾಪ್ತಿಯು 20,779 km2 (8,023 sq mi)ರಷ್ಟಿದೆ - ಇದರ ಗಾತ್ರವು ಮ್ಯಾಸಾಚುಸೆಟ್ಸ್, ಇಸ್ರೇಲ್, ಸ್ಲೊವೇನಿಯ ಅಥವಾ ಎಲ್-ಸಾಲ್ವಡೋರ್ ಗೆ ಸಮಾನವಾಗಿದೆ ಹಾಗು ಸ್ಕಾಟ್ಲ್ಯಾಂಡ್‌ನ ಭೂಪ್ರದೇಶದ ಕಾಲು ಭಾಗದಷ್ಟಿದೆ. ಇದರ ಉತ್ತರ-ದಕ್ಷಿಣ ಭಾಗ 274 km (170 mi)ದಷ್ಟಿದೆ ಹಾಗು ಪೂರ್ವ-ಪಶ್ಚಿಮ ಭಾಗ 97 km (60 mi) ದಷ್ಟಿದೆ. ವೇಲ್ಸ್ ನ್ನು ಇಂಗ್ಲೆಂಡ್ ಪೂರ್ವದಲ್ಲಿ ಸುತ್ತುವರೆದಿದೆ ಹಾಗು ಇತರ ಮೂರು ದಿಕ್ಕುಗಳಲ್ಲಿ ಸಮುದ್ರದಿಂದ ಆವೃತ್ತವಾಗಿದೆ: ದಕ್ಷಿಣಕ್ಕೆ ಮೋರ್ ಹಫ್ರೆನ್ (ಬ್ರಿಸ್ಟೊಲ್ ಕಾಲುವೆ), ಪಶ್ಚಿಮಕ್ಕೆ ಸೆಲ್ಟಿಕ್ ಸಮುದ್ರ ಹಾಗು ಉತ್ತರಕ್ಕೆ ಐರಿಶ್ ಸಮುದ್ರವಿದೆ. ಒಟ್ಟಾರೆಯಾಗಿ, ವೇಲ್ಸ್ ನಲ್ಲಿ 1,200 km (746 mi)ರಷ್ಟು ಕಡಲಂಚುಗಳಿವೆ. ವೆಲ್ಷ್ ನ ಪ್ರಧಾನ ಭೂಭಾಗದ ಆಚೆಗೆ ಹಲವಾರು ದ್ವೀಪ ಗಳಿವೆ. ಇದರಲ್ಲಿ ವಾಯುವ್ಯ ದಿಕ್ಕಿನಲ್ಲಿರುವ ವೈನ್ಯಸ್ ಮಾನ್ (ಅಂಗ್ಲೇಸೇಯ್) ದೊಡ್ಡ ದ್ವೀಪವೆನಿಸಿದೆ.

ಸ್ನೌಡಾನ್ (ಯರ್ ವಿಡ್‌ಫಾ), ಗ್ವಯ್ನೆಡ್, ವೇಲ್ಸ್ ನ ಅತ್ಯಂತ ಎತ್ತರದ ಪರ್ವತ

ವೇಲ್ಸ್ ನ ಹೆಚ್ಚಿನ ನಾನಾವಿಧದ ಭೂದೃಶ್ಯಗಳು ಬೆಟ್ಟದಾಕಾರವಾಗಿವೆ, ಉತ್ತರ ಹಾಗು ಪ್ರಧಾನ ಪ್ರದೇಶಗಳಲ್ಲಿ ಇದು ವಿಶೇಷವಾಗಿ ಕಂಡುಬರುತ್ತದೆ. ಪರ್ವತಗಳು ಕಳೆದ ಹಿಮಯುಗ, ಡೆವೆನೆಸಿಯನ್ ಹಿಮೀಕರಣ ದಲ್ಲಿ ರೂಪುಗೊಂಡಿತು. ವೇಲ್ಸ್ ನ ಅತಿ ಎತ್ತರದ ಪರ್ವತಗಳು ಸ್ನೌಡೋನಿಯ ನಲ್ಲಿದೆ (ಏರಿರೀ ). ಇದು ಸ್ನೌಡಾನ್ (ಯರ್ ವೈಡಾಫಾ )ನ್ನು ಒಳಗೊಂಡಿದೆ. 1,085 m (3,560 ft) ರಷ್ಟು ಎತ್ತರವನ್ನು ಹೊಂದಿರುವ ಇದು ವೇಲ್ಸ್ ನ ಅತಿ ಎತ್ತರದ ಶಿಖರವಾಗಿದೆ. 14 (ಅಥವಾ 15 ಇರಬಹುದು) 3,000 feet (914 m)ರಷ್ಟು ಎತ್ತರವಿರುವ ವೆಲ್ಷ್ ಪರ್ವತಗಳನ್ನು ಸಾಮೂಹಿಕವಾಗಿ ವೆಲ್ಷ್ 3000ಸ್ ಎಂದು ಕರೆಯಲಾಗುತ್ತದೆ. ಜೊತೆಗೆ ಇವುಗಳು ವಾಯುವ್ಯ ದಿಕ್ಕಿನ ಒಂದು ಸಣ್ಣ ಪ್ರದೇಶದಲ್ಲಿವೆ.

3000ಸ್ ಗಳ ಹೊರಗೆ ಸ್ನೌಡೋನಿಯದ ದಕ್ಷಿಣಕ್ಕಿರುವ ಆರನ್ ಪಾವ್‌ಡ್ವಿ 905ಮೀಟರ್ಸ್ ನೊಂದಿಗೆ (2,969 ft) ಅತಿ ಎತ್ತರದ ಪರ್ವತವಾಗಿದೆ. ಬ್ರೆಕಾನ್ ಬೆಅಕಾನ್ಸ್(ಬನ್ನೂ ಬ್ರಯ್ಚೆನಿಯಾಗ್ ) ದಕ್ಷಿಣದಲ್ಲಿದೆ (ಎತ್ತರದ ಪರ್ವತಶೃಂಗ ಪೆನ್-ವೈ-ಫ್ಯಾನ್886 m (2,907 ft)*, ಹಾಗು ಇವುಗಳನ್ನು ಮಧ್ಯ ವೇಲ್ಸ್ ನಲ್ಲಿ ಕ್ಯಾಂಬ್ರಿಯನ್ ಪರ್ವತ ಗಳು ಸೇರಿಕೊಳ್ಳುತ್ತವೆ. ಎರಡನೇಯದನ್ನು ಪಾಲೆಯೋಜೊಯಿಕ್ ಶಕೆಯ ಪ್ರಾರಂಭದ ಭೌಗೋಳಿಕ ಕಾಲಾವಧಿ, ಕ್ಯಾಂಬ್ರಿಯನ್ ನ ಮೇಲೆ ಹೆಸರಿಸಲಾಗಿದೆ.

ಕಳೆದ 19ನೇ ಶತಮಾನದ ಇಬ್ಬರು ಪ್ರಮುಖ ಭೂವಿಜ್ಞಾನಿ ಗಳಾದ ರೋಡೆರಿಕ್ ಮುರ್ಚಿಸನ್ ಹಾಗು ಆಡಂ ಸೆಡ್ವಿಕ್, ವೇಲ್ಸ್ ನ ಭೂವಿಜ್ಞಾನದ ಮೇಲೆ ನಡೆಸಿದ ತಮ್ಮ ಅಧ್ಯಯನವನ್ನು ಸ್ತರವಿಜ್ಞಾನ ಹಾಗು ಪ್ರಾಗ್ಜೀವ ವಿಜ್ಞಾನದ ಕೆಲವು ತತ್ವಗಳನ್ನು ಸ್ಥಾಪಿಸಲು ಬಳಕೆ ಮಾಡಿದರು. ಕೆಲವು ತಕರಾರುಗಳ ನಂತರ, ಪೆಲಿಯೋಜೊಯಿಕ್ ಶಕೆಯ ಮುಂದಿನ ಎರಡು ಅವಧಿಗಳಾದ ಆರ್ಡೋವಿಸಿಯನ್ಹಾಗು ಸಿಲುರಿಯನ್ ಶಕೆಗಳನ್ನು, ಈ ಪ್ರದೇಶದ ಪ್ರಾಚೀನ ಸೆಲ್ಟಿಕ್ ಬುಡಕಟ್ಟಿನ ಮೇಲೆ ಹೆಸರಿಸಲಾಗಿದೆ. ಕ್ಯಾಂಬ್ರಿಯನ್ ಬಂಡೆಗಳ ಕೆಳಗೆ ಹುದುಗಿದ್ದ ಹಳೆಯ ಬಂಡೆಗಳನ್ನು ಪ್ರಿ-ಕ್ಯಾಂಬ್ರಿಯನ್ ಎಂದು ಕರೆಯಲಾಗುತ್ತಿತ್ತು.

ವೇಲ್ಸ್ ನಲ್ಲಿ ಮೂರು ರಾಷ್ಟ್ರೀಯ ಉದ್ಯಾನವನಗಳಿವೆ: ಸ್ನೌಡೋನಿಯ, ಬ್ರೆಕಾನ್, ಬೇಕನ್ಸ್ ಹಾಗು ಪೆಮ್‌ಬ್ರೋಕ್‌ಶೈರ್ ಕೋಸ್ಟ್ ನಾಲ್ಕು ಏರಿಯಾಸ್ ಆಫ್ ಔಟ್ ಸ್ಟ್ಯಾಂಡಿಂಗ್ ನ್ಯಾಚುರಲ್ ಬ್ಯೂಟಿ (ಮಹೋನ್ನತ ನೈಸರ್ಗಿಕ ಸೌಂದರ್ಯವುಳ್ಳ ಪ್ರದೇಶಗಳು) ಸಹ ಇವೆ. ಈ ಪ್ರದೇಶಗಳು ಅಂಗ್ಲೇಸೇಯ್, ಕ್ಲ್ವಿಡಿಯನ್ ರೇಂಜ್, ಗೊವೆರ್ ಪೆನಿನ್ಸುಲ ಹಾಗು ವಯೆ ವ್ಯಾಲಿ ಯನ್ನು ಒಳಗೊಂಡಿದೆ. ಗೊವೆರ್ ಪರ್ಯಾಯದ್ವೀಪದ ಪ್ರದೇಶವನ್ನು 1956ರಲ್ಲಿ ಇಡೀ ಯುನೈಟೆಡ್ ಕಿಂಗ್ಡಮ್ ನಲ್ಲಿ ಕಂಡು ಬರುವ ಮೊದಲ ಏರಿಯ ಆಫ್ ಔಟ್ ಸ್ಟ್ಯಾಂಡಿಂಗ್ ನ್ಯಾಚುರಲ್ ಬ್ಯೂಟಿ ಎಂದು ನಾಮಕರಣ ಮಾಡಲಾಯಿತು.

ಟಾರ್ ಬೇ ಹಾಗು ತ್ರೀ ಕ್ಲಿಫ್ಸ್ ಬೇ, ಗೋವರ್( (ಗ್ವಯ್ರ್), ಸ್ವಾನ್ಸೀ.

ದಕ್ಷಿಣ ಹಾಗು ಪಶ್ಚಿಮ ವೇಲ್ಸ್ ನ ಹೆಚ್ಚಿನ ಕಡಲಂಚುಗಳನ್ನು ಹೆರಿಟೇಜ್ ಕೋಸ್ಟ್ ಎಂದು ಹೆಸರಿಸಲಾಗಿದೆ. ಗ್ಲಮೋರ್ಗನ್ ಹೆರಿಟೇಜ್ ಕೋಸ್ಟ್, ಗೊವೆರ್ ಪರ್ಯಾಯ ದ್ವೀಪ,ಪೆಮ್ಬ್ರೋಕ್ ಶೈರ್, ಕಾರ್ಮರ್ಥೆನ್‌ಶೈರ್, ಹಾಗು ಸೆರೆಡಿಜಿಯೊನ್ ಕಡಲಂಚುಗಳು ವಿಶೇಷವಾಗಿ ಪ್ರಚಂಡವಾಗಿರುವುದರ ಜೊತೆಗೆ ಆಕರ್ಷಕವಾಗಿವೆ. ಗೊವೆರ್, ಕಾರ್ಮರ್ಥೆನ್‌ಶೈರ್, ಪೆಮ್‌ಬ್ರೋಕ್‌ಶೈರ್ ಹಾಗು ಕಾರ್ಡಿಗನ್ ಬೇ ಎಲ್ಲವು ಸ್ವಚ್ಚವಾದ ನೀಲಿ ನೀರು, ಬಿಳಿ ಮಣ್ಣಿನ ಕಡಲದಂಡೆ ಹಾಗು ಮನಮೋಹಕ ಕಡಲ ಜೀವಿಗಳಿಂದ ಕೂಡಿದೆ. ಇಂತಹ ದೃಶ್ಯ ವೈಭವವನ್ನು ಹೊತ್ತ ವೇಲ್ಸ್‌ನ ಕಡಲಿಗೆ ಒಂದು ಕರಾಳ ಮುಖವೂ ಸಹ ಇದೆ; ವೇಲ್ಸ್ ನ ದಕ್ಷಿಣ ಹಾಗು ಪಶ್ಚಿಮ ಕಡಲುಗಳ ಜೊತೆಗೆ ಐರಿಶ್ ಹಾಗು ಕಾರ್ನಿಶ್ ಕಡಲುಗಳಲ್ಲಿ ಬೃಹತ್ತಾದ ಅಟ್ಲಾಂಟಿಕ್ ಸಾಗರದಿಂದ ಪಶ್ಚಿಮ ದಿಕ್ಕಿನಿಂದ ಬೀಸುವ ಗಾಳಿ/ದಕ್ಷಿಣ ದಿಕ್ಕಿನಿಂದ ಬೀಸುವ ಗಾಳಿಯು ವರ್ಷಾಂತರಗಳಲ್ಲಿ ಹಲವು ಹಡಗುಗಳನ್ನು ಮುಳುಗಿಸಿವೆ ಹಾಗೂ ಅಪಘಾತಕ್ಕೆ ಎಡೆ ಮಾಡಿಕೊಟ್ಟಿದೆ.

ಇಸವಿ 1859 ಅಕ್ಟೋಬರ್ 25ರ ರಾತ್ರಿ ಅಟ್ಲಾಂಟಿಕ್‌ನಲ್ಲಿ ಎದ್ದ ಚಂಡಮಾರುತವು ವೇಲ್ಸ್‌ನ ಸಮುದ್ರದಲ್ಲಿ 114 ಹಡಗುಗಳನ್ನು ನಾಶ ಮಾಡಿತು; ಆ ರಾತ್ರಿ ಸಂಭವಿಸಿದ ನೌಕಾಘಾತಗಳಲ್ಲಿ ಕಾರ್ನ್ವಾಲ್ ಹಾಗು ಐರ್ಲ್ಯಾಂಡ್‌ನ ಹಲವರು ಅದರ ಕಡಲಂಚಿನಲ್ಲಿ ಸಾವನ್ನಪ್ಪಿದರು. ವೇಲ್ಸ್‌ಗೆ ಕಾರ್ನ್ವಾಲ್, ಐರ್ಲ್ಯಾಂಡ್ ಹಾಗು ಬ್ರಿಟಾನಿ ಯ ಜೊತೆಗೆ ಸ್ವಲ್ಪಮಟ್ಟಿಗಿನ ಅಸೂಯೆಹುಟ್ಟದ ಖ್ಯಾತಿಯನ್ನು ಹೊಂದಿದೆ. ಅದೇನೆಂದರೆ ಕೆಲವು ಅತ್ಯಂತ ಹೆಚ್ಚಿನ ನೌಕಾಘಾತದ ಪ್ರಮಾಣವನ್ನು ಯುರೋಪ್ ನಲ್ಲಿ ಪ್ರತಿ ಚದುರ ಮೈಲಿಗೆ ಇದು ಹೊಂದಿದೆ. ಈ ನೌಕಾಘಾತದ ಪರಿಸ್ಥಿತಿಯು ವಿಶೇಷವಾಗಿ ಕೈಗಾರಿಕಾ ಶಕೆಯಲ್ಲಿ ತುಂಬಾ ಕೆಟ್ಟದಾಗಿತ್ತು. ಈ ಸಮಯದಲ್ಲಿ ಕಾರ್ಡಿಫ್ ಗೆ ಹೊರಟ ಹಡಗುಗಳು ಅಟ್ಲಾಂಟಿಕ್ ಚಂಡಮಾರುತದಲ್ಲಿ ಸಿಲುಕಿಕೊಂಡವು ಹಾಗು "ಕ್ರೂರ ಸಮುದ್ರ" ಜನರನ್ನು ಬಲಿ ತೆಗೆದುಕೊಂಡಿತು.

ವ್ರೆಕ್ಷ್ಹಾಮ್ ನಲ್ಲಿರುವ St ಗಿಲೆಸ್'ಸ್ ಚರ್ಚ್ ನ ಎತ್ತರವಾದ ಚೂಪು ಗೋಪುರ.

ಕಾರ್ನ್ವಾಲ್, ಬ್ರಿಟಾನಿ ಹಾಗು ಐರ್ಲ್ಯಾಂಡ್ ನಂತೆ, ನೈಋತ್ಯ ವೇಲ್ಸ್ ನ ಗೊವೆರ್, ಪೆಮ್ಬ್ರೋಕ್‌ಶೈರ್ ಹಾಗು ಕಾರ್ಡಿಗನ್ ಬೇಯ ಸ್ವಚ್ಚವಾದ ಶುದ್ಧ ನೀರು ಕಡಲ ಜೀವಿಗಳಾದ ಬಾಸ್ಕಿಂಗ್ ಷಾರ್ಕ್ ಗಳು, ಅಟ್ಲಾಂಟಿಕ್ ಕಂದು ನೀರುನಾಯಿ, ದಪ್ಪ ತೊಗಲಿನಂತಹ ಚಿಪ್ಪುಳ್ಳ ಕಡಲಾಮೆಗಳು, ಡಾಲ್ಫಿನ್ ಗಳು, ಕಡಲ ಹಂದಿಗಳು, ಜೆಲ್ಲಿ ಮೀನು, ಏಡಿಗಳು ಹಾಗು ಕಡಲೇಡಿ ಗಳನ್ನು ಆಕರ್ಷಿಸುತ್ತವೆ. ಪೆಮ್‌ಬ್ರೋಕ್‌ಶೈರ್ ಹಾಗು ಸೆರೆಡಿಜಿಯನ್ ಪ್ರದೇಶಗಳು ವಿಶೇಷವಾಗಿ ಬಾಟಲ್ ನೋಸ್ ಡಾಲ್ಫಿನ್ ಗಳಿಗಾಗಿ ಅಂತಾರಾಷ್ಟ್ರೀಯ ಮನ್ನಣೆಯನ್ನು ಗಳಿಸಿವೆ. ಕಾರ್ಡಿಗನ್ ಕೊಲ್ಲಿಯ ಮಧ್ಯದಲ್ಲಿರುವ ನ್ಯೂ ಕುಅಯ್ ಸಂಪೂರ್ಣ U.K.ಯಲ್ಲಿ ಬಾಟಲ್ ನೋಸ್ ಡಾಲ್ಫಿನ್‌ಗಳ ಬೇಸಿಗೆ ಆವಾಸಸ್ಥಾನವಾಗಿದೆ.

ವೇಲ್ಸ್ ಹಾಗು ಇಂಗ್ಲೆಂಡ್ ನಡುವಿನ ನೂತನ ಗಡಿಯನ್ನು, ಮಧ್ಯಯುಗಊಳಿಗಮಾನ್ಯ ಗಡಿಗೆರೆಯ ಆಧಾರದ ಮೇಲೆ 16ನೇ ಶತಮಾನದಲ್ಲಿ ಸ್ಪಷ್ಟವಾಗಿ ಚಿತ್ರಿಸಲಾಗಿತ್ತು. ಗಡಿ ರೇಖೆಯು (ಇದು ಆಫಾ'ಸ್ ಡೈಕ್ ನ್ನು ಉತ್ತರದ ಕಡಲಿನವರೆಗೆ 40 mi (64 km)ರಷ್ಟು ಹೆಚ್ಚುಕಡಿಮೆ ಹಿಂಬಾಲಿಸುತ್ತದೆ) ನೈಟನ್ ನ್ನು ಅದರ ರೈಲ್ವೆ ನಿಲ್ದಾಣದಿಂದ ವಿಭಜಿಸುತ್ತದೆ. ಅಕ್ಷರಶಃ ಚರ್ಚ್ ಸ್ಟೋಕ್ ನ್ನು ವೇಲ್ಸ್ ನ ಉಳಿದ ಭಾಗಗಳಿಂದ ತುಂಡರಿಸುತ್ತದೆ, ಹಾಗುಲ್ಯಾನಿಮೈನೆಚ್ ಹಳ್ಳಿಯ ಮೂಲಕ ನೇರವಾಗಿ ಇಬ್ಬಾಗಿಸುತ್ತದೆ (ಅಲ್ಲಿರುವ ಪಬ್ ವಾಸ್ತವವಾಗಿ ರೇಖೆಯನ್ನು ಆಚೆ ಈಚೆ ಹರಡುವಂತೆ ಮಾಡಿದೆ).

ಲಿನ್ ವೈ ಫ್ಯಾನ್ ಫಾರ್, ಬ್ರೆಕಾನ್ ಬೇಕನ್ಸ್, ರಾಷ್ಟ್ರೀಯ ಉದ್ಯಾನದೊಳಗಿನ ಲಿನ್ ವೈ ಫ್ಯಾನ್ ಫಾಚ್ ಸಮೀಪದ ಕಾರ್ಮರ್ಥೆನ್‌ಶೈರ್ ಪರ್ವತ ಶ್ರೇಣಿ
ಚಿತ್ರ:Hollywell.jpg
St ವೈನ್ ಫ್ರೈಡೆ'ಸ್ ವೆಲ್, ವೇಲ್ಸ್ ನ ಏಳು ಅದ್ಬುತಗಳಲ್ಲಿ ಒಂದು

ಸೆವೆನ್ ವಂಡರ್ಸ್ ಆಫ್ ವೇಲ್ಸ್ ಎಂಬುದು ಡಾಗರಲ್ (ಕ್ರಮಬದ್ದವಲ್ಲದ ಕವಿತೆ) ಪದ್ಯಗಳಲ್ಲಿ ಉಲ್ಲೇಖಿಸಲಾದ ವೇಲ್ಸ್ ನ ಏಳು ಭೌಗೋಳಿಕ ಹಾಗು ಸಾಂಸ್ಕೃತಿಕ ಹೆಗ್ಗುರುತುಗಳು. ಇವುಗಳನ್ನು ಬಹುಶಃ ಇಂಗ್ಲೆಂಡ್ ನ ಪ್ರವಾಸೋದ್ಯಮದಿಂದ ಪ್ರಭಾವಗೊಂಡು 18ನೇ ಶತಮಾನದ ಉತ್ತರಾರ್ಧದಲ್ಲಿ ಬರೆದಿರಬಹುದು.[೫೯] ಈ ಎಲ್ಲ ಅದ್ಬುತಗಳು ಉತ್ತರ ವೇಲ್ಸ್‌ನಲ್ಲಿವೆ: ಸ್ನೌಡಾನ್ (ಅತಿ ಎತ್ತರದ ಪರ್ವತ), ಗ್ರೆಸ್ಫೋರ್ಡ್ ಗಂಟೆಗಳು ( ಗ್ರೆಸ್ಫೋರ್ಡ್ ನಲ್ಲಿರುವ ಆಲ್ ಸೈಂಟ್ಸ್ ಎಂಬ ಮಧ್ಯಯುಗದ ಚರ್ಚ್ ನ ಘಂಟಾಮಾಲೆ), ಲ್ಲಾನ್ಗೊಲ್ಲೇನ್ ಸೇತುವೆ( ಅಫಾನ್ ಡೈಫರ್ಡ್ವಯ್ ನಲ್ಲಿರುವ ಡೀ ನದಿಯ ಮೇಲೆ 1347ರಲ್ಲಿ ಕಟ್ಟಲಾಯಿತು), St ವಿನೇಫ್ರೈಡ್'ಸ್ ವೆಲ್ ( ಫ್ಲಿಂಟ್ಶೈರ್ಟ್ರೆಫ್ಫಿನ್ನೋನ್ಹೋಲಿವೆಲ್ನಲ್ಲಿ ಯಾತ್ರಾಸ್ಥಳವಾಗಿ ಮಾರ್ಪಟ್ಟಿದೆ), ವ್ರೆಕ್ಸ್ ಹಾಮ್(ವ್ರೆಕ್ಸಾಮ್ ) ಎತ್ತರವಾದ ಚೂಪು ಗೋಪುರ(16ನೇ ಶತಮಾನದ ವ್ರೆಕ್ಸ್ ಹಾಮ್ ನ St. ಗೈಲ್ಸ್ ಚರ್ಚಿನ ಗೋಪುರ), ಓವರ್ ಟನ್ಯೂ ಮರಗಳು (ಓವರ್ ಟನ್-ಆನ್-ಡೀ ಯಲ್ಲಿರುವ St. ಮೇರೀಸ್ ಚರ್ಚಿನ ಹೊರಾಂಗಣದಲ್ಲಿರುವ ಪುರಾತನ ಯೂ ಮರಗಳು) ಹಾಗು 240 ft (73 m) ನಲ್ಲಿರುವ ಪಿಸ್ಟೈಲ್ ರಹೆಡರ್ - ಒಂದು ಎತ್ತರದ ಜಲಪಾತ ಈ ಎಲ್ಲ ಅದ್ಭುತಗಳು ಕವಿತೆಯ ಭಾಗವಾಗಿದೆ :

ಪಿಸ್ಟಿಲ್ ರೀಡರ್ ಎಂಡ್ ವ್ರೆಕ್ಸ್‌ಹಾಮ್ ಸ್ಟೀಪಲ್,
ಸ್ನೋಡೌನ್`ಸ್ ಮೌಂಟೇನ್ ವಿತೌಟ್ ಇಟ್ಸ್ ಪೀಪಲ್
ಓವರ್‌ಟನ್ ಯಿವ್ ಟ್ರೀಸ್,ಸೇಂಟ್ ವಿನ್‌ಫ್ರೈಡ್`ಸ್ ವೆಲ್ಸ್
ಲಾಂಗಲೋನ್ ಬ್ರಿಜ್ ಎಂಡ್ ಗ್ರೆಸ್‌ಪೋರ್ಡ್ ಬೆಲ್ಸ್

ಹವಾಮಾನ[ಬದಲಾಯಿಸಿ]

ಆರ್ಥಿಕ ವ್ಯವಸ್ಥೆ[ಬದಲಾಯಿಸಿ]

ಕಾರ್ಡಿಫ್ ವಿಶ್ವವಿದ್ಯಾಲಯದ ಪ್ರಧಾನ ಕಟ್ಟಡ.

ವೇಲ್ಸ್ ನ ಕೆಲವು ಭಾಗಗಳು 18ನೇ ಶತಮಾನದಿಂದೀಚೆಗೆ ಹಾಗು ಕೈಗಾರಿಕಾ ಕ್ರಾಂತಿ ಯ ಪ್ರಾರಂಭದಲ್ಲಿ ಬಹಳವಾಗಿ ಕೈಗಾರಿಕೀಕರಣಕ್ಕೊಳಗಾಗಿದೆ. ಕಲ್ಲಿದ್ದಲು, ತಾಮ್ರ, ಕಬ್ಬಿಣ, ಬೆಳ್ಳಿ, ಸೀಸ, ಹಾಗು ಚಿನ್ನ ಇವೆಲ್ಲವನ್ನೂ ವೇಲ್ಸ್ ನಲ್ಲಿ ಬೃಹತ್ಪ್ರಮಾಣದಲ್ಲಿ ಗಣಿಗಾರಿಕೆ ಮಾಡಲಾಗುತ್ತದೆ, ಹಾಗು ಸ್ಲೇಟು ಕಲ್ಲನ್ನು ಗಣಿಯಿಂದ ತೆಗೆಯಲಾಗುತ್ತದೆ. ಕಳೆದ 19ನೇ ಶತಮಾನದ ಉತ್ತರಾರ್ಧದಲ್ಲಿ, ಗಣಿಗಾರಿಕೆ ಹಾಗು ಲೋಹವಿಜ್ಞಾನ ವು ವೆಲ್ಷ್ ಆರ್ಥಿಕತೆ ಯ ಮೇಲೆ ಪ್ರಭಾವ ಬೀರುವುದರ ಜೊತೆಗೆ ದಕ್ಷಿಣ ಹಾಗು ಈಶಾನ್ಯ ವೇಲ್ಸ್ ನ ಕೈಗಾರಿಕಾ ಪ್ರದೇಶಗಳ ಭೂದೃಶ್ಯ ಹಾಗು ಸಮಾಜ ದ ರೂಪವನ್ನು ಮಾರ್ಪಾಡು ಮಾಡಿತು.

ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಿಂದ 1980ರ ಮಧ್ಯಭಾಗದವರೆಗೂ, ಗಣಿಗಾರಿಕೆ ಹಾಗು ಕಲ್ಲಿದ್ದಲ ರಫ್ತು ವೆಲ್ಷ್ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದವು. ಕಾರ್ಡಿಫ್ ಜಗತ್ತಿನ ಅತ್ಯಂತ ದೊಡ್ಡ ಕಲ್ಲಿದ್ದಲ ರಫ್ತು ಮಾಡುವ ನೆಲೆಯಾಗಿತ್ತು [೯] ಹಾಗು, ವರ್ಲ್ಡ್ ವಾರ್ I ಗೆ ಕೆಲ ವರ್ಷಗಳ ಮುಂಚೆ, ಇದು ಲಂಡನ್ ಅಥವಾ ಲಿವರ್ ಪೂಲ್‌ಗಿಂತ ಅಧಿಕವಾದ ಸರಕು ಸಾಗಣೆಯನ್ನು ನಿಭಾಯಿಸುತ್ತಿತ್ತು.[೧೦]

ಕಳೆದ 1970ರ ಪ್ರಾರಂಭದಿಂದ, ವೆಲ್ಷ್ ಆರ್ಥಿಕತೆಯು, ಅತಿ ಹೆಚ್ಚಿನ ಪುನರ್ರಚನೆಗೆ ಒಳಪಟ್ಟಿತು. ಸಾಂಪ್ರದಾಯಿಕ ಬೃಹತ್-ಕೈಗಾರಿಕೆಯಲ್ಲಿ ಅಸಂಖ್ಯಾತ ಉದ್ಯೋಗಗಳು ಕಾಣೆಯಾಗಿ ಅಂತಿಮವಾಗಿ ಲಘು ಕೈಗಾರಿಕೆಗಳು ಹಾಗು ಸೇವೆಗಳಿಗೆ ಬದಲಾದವು. ಈ ಅವಧಿಯಲ್ಲಿ ವೇಲ್ಸ್, UKನಲ್ಲಿ ಫಾರಿನ್ ಡೈರೆಕ್ಟ್ ಇನ್ವೆಸ್ಟ್‌ಮೆಂಟ್ (FDI) ನಿಂದ ಸಾಧಾರಣ ಮಟ್ಟಕ್ಕಿಂತ ಹೆಚ್ಚಿನ ಷೇರುಗಳನ್ನು ತನ್ನ ಕಡೆ ಸೆಳೆಯುವಲ್ಲಿ ಯಶಸ್ವಿಯಾಯಿತು. ಆದಾಗ್ಯೂ, ಹೆಚ್ಚಿನ ಹೊಸ ಕೈಗಾರಿಕೆಗಳು ಮುಖ್ಯವಾಗಿ ಕಾರ್ಖಾನೆಯ 'ಬ್ರಾಂಚ್ ಫ್ಯಾಕ್ಟರಿ ' ಮಾದರಿಯಂತಿತ್ತು. ಸಾಮಾನ್ಯವಾಗಿ ನಿಯತಕ್ರಮದಲ್ಲಿ ಸಭೆ ಯು ಕಡಿಮೆ ಕೌಶಲ್ಯ ಹೊಂದಿದ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುತ್ತಿತ್ತು. ಕಾರ್ಡಿಫ್ ನಲ್ಲಿ ನೆಲೆಯಾಗಿದ್ದ ಬ್ಯಾಂಕ್ ಆಫ್ ವೇಲ್ಸ್ ನ್ನು, 1971ರಲ್ಲಿ ಸ್ಥಾಪಿಸಲಾಯಿತು, ಆದರೆ ನಂತರ ಅದನ್ನು HBOS ವಶಕ್ಕೆ ತೆಗೆದುಕೊಂಡು ಮಾತೃಸಂಸ್ಥೆಯೊಂದಿಗೆ ಸೇರಿಸಿಕೊಳ್ಳಲಾಯಿತು.

ವೇಲ್ಸ್, ಆರ್ಥಿಕ ಮತ್ತು ಸಂಶೋಧನೆ ಹಾಗು ಅಭಿವೃದ್ಧಿ ಮುಂತಾದ ಔದ್ಯೋಗಿಕ ಕ್ಷೇತ್ರಗಳಲ್ಲಿ ಹೆಚ್ಚಿನ ಮೌಲ್ಯ ವರ್ಧಿತ ಉದ್ಯೋಗಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಅಥವಾ ತನ್ನೆಡೆ ಆಕರ್ಷಿಸುವಲ್ಲಿ ಶ್ರಮ ವಹಿಸಿತು.ಭಾಗಶಃ ಆರ್ಥಿಕ ಲಾಭ ತರುವ ಜನರ ಕೊರತೆಯು ಇದಕ್ಕೆ ಕಾರಣವೆನ್ನಲಾಗಿದೆ(ಉದಾಹರಣೆ ಜನಸಂಖ್ಯೆ) - ವೇಲ್ಸ್ ಗೆ ಒಂದು ದೊಡ್ಡ ನಗರ ಕೇಂದ್ರದ ಕೊರತೆಯಿದೆ ಹಾಗು ದಕ್ಷಿಣ ಪೂರ್ವ ವೇಲ್ಸ್ ನ ಹೊರತಾಗಿ, ಇಡೀ ದೇಶವು ವಿರಳ ಜನಸಾಂದ್ರತೆಯನ್ನು ಹೊಂದಿದೆ. UKಯ ಇತರ ಭಾಗಗಳಿಗೆ ಸಂಬಂಧಿಸಿದಂತೆ ಪ್ರತಿ ವ್ಯಕ್ತಿಯ ಆರ್ಥಿಕ ಸಂಪಾದನೆಯಿಂದ ಹೆಚ್ಚಿನ ಮೌಲ್ಯ ವರ್ಧಿತ ಉದ್ಯೋಗಗಳ ಕೊರತೆಯು ಬಿಂಬಿತವಾಗಿದೆ. - ಕಳೆದ 2002ರಲ್ಲಿ ಇದು ಸರಾಸರಿ EU25ನ 90%ನಷ್ಟಿತ್ತು ಹಾಗು UK ಸರಾಸರಿಯಲ್ಲಿ 80%ನಷ್ಟಿತ್ತು. ಆದಾಗ್ಯೂ, ಈ ದತ್ತಾಂಶಗಳನ್ನು ವ್ಯಾಖ್ಯಾನಿಸಬೇಕಾದರೆ ಹೆಚ್ಚಿನ ಗಮನ ವಹಿಸಬೇಕಾಗುತ್ತದೆ. ಇದು ಜೀವನ ವೆಚ್ಚದಲ್ಲಿ ಪ್ರಾದೇಶಿಕ ವ್ಯತ್ಯಾಸಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ವೇಲ್ಸ್ ಹಾಗೂ UKಯ ಹೆಚ್ಚಿನ ಸಮೃದ್ಧ ಭಾಗಗಳ ನಡುವಿನ ವಾಸ್ತವಿಕ ಜೀವನ ಮಟ್ಟಗಳ ನಡುವಿನ ಅಂತರ ನಿರ್ಧಾರವಾಗಿಲ್ಲ. ಕಳೆದ 2008ರಲ್ಲಿ, ವೇಲ್ಸ್ ಫೇರ್ ಟ್ರೇಡ್ ಸ್ಟೇಟಸ್ ಪ್ರಶಸ್ತಿಯನ್ನು ಗಳಿಸಿದ ಜಗತ್ತಿನ ಮೊದಲ ರಾಷ್ಟ್ರವಾಗಿ ಇತಿಹಾಸ ಸೃಷ್ಟಿಸಿತು.[೬೬]

ಚಿತ್ರ:Uk1pnd2000.jpg
ಬ್ರಿಟಿಶ್ ನ ಒಂದು ಪೌಂಡ್ ನಾಣ್ಯ (ಹಿಂಭಾಗದಲ್ಲಿ), ವೆಲ್ಷ್ ಡ್ರ್ಯಾಗನ್‌ನ ಚಿತ್ರ .

ಕಳೆದ 2002ರಲ್ಲಿ, ವೇಲ್ಸ್ ನ ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್ (ನಿವ್ವಳ ದೇಶೀಯ ಉತ್ಪನ್ನ)(GDP) ಕೇವಲ £26 ಶತಕೋಟಿ ಆಗಿತ್ತು ($48 ಶತಕೋಟಿ). ಇದು ಪ್ರತಿ ವ್ಯಕ್ತಿಗೆ £12,651 ನಷ್ಟು GDPಯನ್ನು ನೀಡಿತು ($19,546). ವೇಲ್ಸ್ ನ 2006ರ ನಿರುದ್ಯೋಗದ ಪ್ರಮಾಣವು 5.7% ನಷ್ಟಿತ್ತು - ಇದು UKಯ ಸರಾಸರಿ ಪ್ರಮಾಣಕ್ಕಿಂತ ಜಾಸ್ತಿಯಾಗಿತ್ತು, ಆದರೆ ಹೆಚ್ಚಿನ EU ರಾಷ್ಟ್ರಗಳಿಗಿಂತ ಕಡಿಮೆ ಪ್ರಮಾಣದಲ್ಲಿತ್ತು.

ಯುನೈಟೆಡ್ ಕಿಂಗ್ಡಮ್ ನ ಉಳಿದ ಎಲ್ಲ ಭಾಗಗಳಂತೆ, ವೇಲ್ಸ್ ನಲ್ಲಿ ಪೌಂಡ್ ಸ್ಟರ್ಲಿಂಗ್ ಚಲಾವಣೆಯಲ್ಲಿದೆ, ಇದನ್ನು £ ಚಿಹ್ನೆಯಿಂದ ಪ್ರತಿನಿಧಿಸಲಾಗುತ್ತದೆ. ಬ್ಯಾಂಕ್ ಆಫ್ ಇಂಗ್ಲೆಂಡ್ ನ್ನು, ಕಿಂಗ್ಡಮ್ ಆಫ್ ಇಂಗ್ಲೆಂಡ್‌ನ ಕೇಂದ್ರಬ್ಯಾಂಕ್ ಎಂದು ಪರಿಗಣಿಸಲಾಗಿದೆ ( ವೇಲ್ಸ್ ಕೂಡ ಭಾಗಿಯಾಗಿದೆ). ಇದು ಸಂಪೂರ್ಣ ಯುನೈಟೆಡ್ ಕಿಂಗ್ಡಮ್‌ನ ಕರೆನ್ಸಿಗೆ ಜವಾಬ್ದಾರಿಯಾಗಿದೆ. ಸ್ಕಾಟ್ಲ್ಯಾಂಡ್ ಹಾಗು ಉತ್ತರ ಐರ್ಲ್ಯಾಂಡ್ ನಲ್ಲಿರುವಂತೆ ವೇಲ್ಸ್‌ನಲ್ಲಿರುವ ಬ್ಯಾಂಕ್‌ಗಳು ಬ್ಯಾಂಕ್ ನೋಟುಗಳನ್ನು ನೀಡುವ ಹಕ್ಕನ್ನು ಹೊಂದಿರುವುದಿಲ್ಲ. ರಾಯಲ್ ಮಿಂಟ್ ಬಿಡುಗಡೆಮಾಡುವ ನಾಣ್ಯಗಳು ಸಂಪೂರ್ಣ UKಯಲ್ಲಿ ಚಲಾವಣೆಯಾಗುತ್ತವೆ. ಇದು 1980ರಿಂದಲೂ ದಕ್ಷಿಣ ವೇಲ್ಸ್ ನ ಲ್ಲಂಟ್ರಿಸಂಟ್ ನ ಏಕೈಕ ಸ್ಥಳದಲ್ಲಿ ನೆಲೆ ಹೊಂದಿದೆ. ಇದು 1968ರಿಂದಲೂ ಲಂಡನ್ಟವರ್ ಹಿಲ್ ಎಂಬ ಸ್ಥಳದಿಂದ ಕ್ರಮವಾಗಿ ತನ್ನ ಕಾರ್ಯಾಚರಣೆಯನ್ನು ನಿರ್ವಹಿಸುತ್ತಿದೆ.[೬೭] ಕಳೆದ 1971ರ ದಶಮಾಂಶೀಕರಣದಿಂದಲೂ, ಕಡೇಪಕ್ಷ UKಯಲ್ಲಿ ಚಲಾವಣೆಯಾಗುವ ಒಂದು ನಾಣ್ಯದಲ್ಲಾದರೂ ವೆಲ್ಷ್ ವಿನ್ಯಾಸವನ್ನು ಚಿತ್ರಿಸಲಾಗುತ್ತದೆ, ಉದಾಹರಣೆಗೆ, 1995 ಹಾಗು 2000 ದ ಒಂದು ಪೌಂಡ್ ನಾಣ್ಯ (ಎಡಬದಿಯಲ್ಲಿ ತೋರಿಸಲಾಗಿದೆ). ಆದಾಗ್ಯೂ, ಟಂಕಿಸಲಾದ ಯಾವುದೇ ನಾಣ್ಯಗಳ ಮೇಲೆ ವೇಲ್ಸ್ ನ ಹೆಸರಿರುವುದಿಲ್ಲ.[೬೮]

ಕಡಿಮೆ-ಗುಣಮಟ್ಟದ ಮಣ್ಣಿನಿಂದಾಗಿ, ವೇಲ್ಸ್ ನ ಹೆಚ್ಚಿನ ಪ್ರದೇಶಗಳು ಬೆಳೆ- ಬೆಳೆಯಲು ಸೂಕ್ತವಾಗಿಲ್ಲ, ಹಾಗು ಜಾನುವಾರುಗಳ ಸಾಕಾಣಿಕೆಯು ಸಾಂಪ್ರದಾಯಿಕವಾಗಿ ಕೃಷಿಯ ಮೇಲಿನ ಗಮನವಾಗಿದೆ. ವೆಲ್ಷ್ ಭೂದೃಶ್ಯ (ಮೂರು ರಾಷ್ಟ್ರೀಯ ಉದ್ಯಾನವನ ಗಳು ಇದನ್ನು ಸಂರಕ್ಷಿಸಿವೆ) ಹಾಗು 42 ಬ್ಲೂ ಫ್ಲಾಗ್ ಬೀಚ್ ಗಳು ಹಾಗು ವೇಲ್ಸ್ ನ ವಿಶಿಷ್ಟ ಸಂಸ್ಕೃತಿ, ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದು ಹಳ್ಳಿ ಗಾಡಿನ ಪ್ರದೇಶದ ಆರ್ಥಿಕತೆಯ ಅಭಿವೃದ್ಧಿಯಲ್ಲಿ ಒಂದು ವಿಶೇಷ ಪಾತ್ರವನ್ನು ವಹಿಸುತ್ತದೆ. [೨][ಶಾಶ್ವತವಾಗಿ ಮಡಿದ ಕೊಂಡಿ] ನೋಡಿ ಟೂರಿಸಂ ಇನ್ ವೇಲ್ಸ್

ಆರೋಗ್ಯರಕ್ಷಣೆ[ಬದಲಾಯಿಸಿ]

ಚಿತ್ರ:NHS logo in Wales.png
NHS ವೇಲ್ಸ್ ಲಾಂಛನ.

ವೇಲ್ಸ್ ನಲ್ಲಿ ಸಾರ್ವಜನಿಕ ಆರೋಗ್ಯ ರಕ್ಷಣೆಯನ್ನು NHS ವೇಲ್ಸ್ ಒದಗಿಸುತ್ತದೆ (ವೆಲ್ಷ್:GIG Cymru), ಇದನ್ನು ಮೂಲತಃ ಇಂಗ್ಲೆಂಡ್ ಹಾಗು ವೇಲ್ಸ್ ನ NHS ನ ವ್ಯವಸ್ಥೆಯ ಒಂದು ಭಾಗವಾಗಿ ನ್ಯಾಷನಲ್ ಹೆಲ್ತ್ ಸರ್ವೀಸ್ ಆಕ್ಟ್ 1946 ಸೃಷ್ಟಿ ಮಾಡಿತು. ಆದರೆ 1969ರಲ್ಲಿ ವೇಲ್ಸ್ ನಲ್ಲಿರುವ NHS ನ ಅಧಿಕಾರವು ವೇಲ್ಸ್ ನ ಪ್ರಮುಖ ಕಾರ್ಯದರ್ಶಿಗೆ ಹಸ್ತಾಂತರಗೊಂಡಿತು[೬೯]. ನಂತರ, NHS ವೇಲ್ಸ್ ನ ಜವಾಬ್ದಾರಿಯನ್ನು ವೆಲ್ಷ್ ಅಸೆಂಬ್ಲಿ ಗೆ ಹಾಗು ಕಾರ್ಯ ನಿರ್ವಾಹಕರಿಗೆ 1999ರ ವಿಕೇಂದ್ರೀಕರಣದ ಅನುಸಾರ ಹಸ್ತಾಂತರಿಸಲಾಯಿತು.

NHS ವೇಲ್ಸ್, ವೇಲ್ಸ್‌ನಲ್ಲಿ ಸಾರ್ವಜನಿಕ ಆರೋಗ್ಯ ರಕ್ಷಣೆಯನ್ನು ಒದಗಿಸುತ್ತದೆ ಹಾಗು 90,000 ಜನರನ್ನು ನೇಮಕ ಮಾಡಿಕೊಂಡಿದೆ. ಇದು ವೇಲ್ಸ್ ನ ಅತ್ಯಂತ ದೊಡ್ಡ ಕೆಲಸ ನೀಡುವ ಸಂಸ್ಥೆಯಾಗಿದೆ.[೭೦] ವೆಲ್ಷ್ ಸರ್ಕಾರದ ಶಾಸನಸಭೆಯಲ್ಲಿರುವ ಆರೋಗ್ಯ ಮತ್ತು ಸಾಮಾಜಿಕ ಸೇವೆಗಳ ಮಂತ್ರಿ, ವೇಲ್ಸ್‌‌ನಲ್ಲಿ ಆರೋಗ್ಯ ಮತ್ತು ಸಾಮಾಜಿಕ ಸೇವೆಗಳ ಸಂಪುಟ ದರ್ಜೆಯ ಜವಾಬ್ದಾರಿಯನ್ನು ಮಂತ್ರಿಮಂಡಲದಲ್ಲಿ ನಿರ್ವಹಿಸುತ್ತಾರೆ.

ಜನಸಂಖ್ಯಾಶಾಸ್ತ್ರ[ಬದಲಾಯಿಸಿ]

ಸ್ವಾನ್ಸೀ ವಾಣಿಜ್ಯ ಕೇಂದ್ರ ಹಾಗು ಸ್ವಾನ್ಸೀ ಕೊಲ್ಲಿ.ಸ್ವಾನ್ಸೀ ವೇಲ್ಸ್ ನ ಎರಡನೇ ಅತ್ಯಂತ ಜನಸಂಖ್ಯೆಯುಳ್ಳ ನಗರ

ಕಳೆದ 2001ರ ಯುನೈಟೆಡ್ ಕಿಂಗ್ಡಮ್ ನ ಜನಗಣತಿಯ ಪ್ರಕಾರ ವೇಲ್ಸ್ ನ ಜನಸಂಖ್ಯೆಯು 2,903,085ನಷ್ಟಿತ್ತು. ಇದು 2005ರ ಅಂದಾಜಿನ ಪ್ರಕಾರ 2,958,876ಕ್ಕೆ ಏರಿದೆ. ಹೆಚ್ಚಿನ ಜನಸಂಖ್ಯೆ ಹಾಗು ಕೈಗಾರಿಕಾ ಪ್ರದೇಶಗಳು ದಕ್ಷಿಣ ವೇಲ್ಸ್‌ನಲ್ಲಿದೆ. ಇದರಲ್ಲಿ ಕಾರ್ಡಿಫ್ (ಕಾಯೇರ್ಡಿಡ್ ), ಸ್ವಾನ್ಸೀ (ಅಬರ್ತಾವೆ ) ಹಾಗು ನ್ಯೂಪೋರ್ಟ್ (ಕಾಸ್ನೆವಯ್ಡ್ )ಹಾಗು ಸುತ್ತಮುತ್ತಲಿನ ಪ್ರದೇಶಗಳನ್ನು ಒಳಗೊಂಡಿದೆ. ಮತ್ತೊಂದು ಗಮನಾರ್ಹವಾದ ಜನಸಂಖ್ಯಾ ಸಾಂದ್ರತೆಯು ವ್ರೆಕ್ಸ್‌ಹ್ಯಾಮ್ (ವ್ರೆಕ್ಸಾಮ್ )ನ ಈಶಾನ್ಯ ಭಾಗಕ್ಕೆ ಕಂಡುಬರುತ್ತದೆ.

ಕಳೆದ 2001ರ ಜನಗಣತಿಯ ಪ್ರಕಾರ, 96%ನಷ್ಟು ಜನಸಂಖ್ಯೆಯು ಶ್ವೇತವರ್ಣೀಯ ಬ್ರಿಟೀಷ ರಾಗಿದ್ದರು, ಹಾಗು 2.1% ಶ್ವೇತ ವರ್ಣೀಯರಲ್ಲದವರಾಗಿದ್ದರು (ಮುಖ್ಯವಾಗಿ ಏಶಿಯನ್ ಮೂಲದವರಾಗಿದ್ದರು).[೭೧] ಹೆಚ್ಚಾಗಿ ಶ್ವೇತ ವರ್ಣೀಯರಲ್ಲದ ಗುಂಪುಗಳು ದಕ್ಷಿಣದ ಬಂದರು ನಗರಗಳಾದ ಕಾರ್ಡಿಫ್, ನ್ಯೂಪೋರ್ಟ್ ಹಾಗು ಸ್ವಾನ್ಸೀ ಯಲ್ಲಿ ಕೇಂದ್ರೀಕೃತಗೊಂಡಿದ್ದವು.

ವೆಲ್ಷ್ ಏಶಿಯನ್ ಸಮುದಾಯಗಳು ವರ್ಲ್ಡ್ ವಾರ್ II ನ ನಂತರ ಮುಖ್ಯವಾಗಿ ವಲಸೆಯ ಮುಖಾಂತರ ಬೆಳವಣಿಗೆಯಾದವು. ಇತ್ತೀಚಿಗೆ ವೇಲ್ಸ್ ನ ಹಲವು ಭಾಗಗಳಲ್ಲಿ ಪೋಲಂಡ್ ನಂತಹ EU ಅಂಗೀಕಾರ ಹೊಂದಿದ ರಾಷ್ಟ್ರ ಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಲಸಿಗರು ನೆಲೆಯೂರುತ್ತಿರುವುದು ಕಂಡು ಬರುತ್ತದೆ - ಆದಾಗ್ಯೂ ಕೆಲವು ಪೋಲಂಡ್ ಜನರು ವರ್ಲ್ಡ್ ವಾರ್ II ನ ನಂತರ ತಕ್ಷಣವೇ ವೇಲ್ಸ್‌ನಲ್ಲಿ ನೆಲೆಯೂರಿದ್ದರು.

ರೋಲ್ದ್ ದಹ್ಲ್ ಪ್ಲಾಸ್ಸ್, ಕಾರ್ಡಿಫ್.

ಕಳೆದ 2001ರ ಲೇಬರ್ ಫೋರ್ಸ್ ಸರ್ವೇಯ ಪ್ರಕಾರ, ವೇಲ್ಸ್‌ನ 72% ಜನರು ತಮ್ಮ ರಾಷ್ಟ್ರೀಯ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ವೆಲ್ಷ್ ಎಂದು ಪರಿಗಣಿಸುತ್ತಾರೆ ಹಾಗು ಮಿಕ್ಕ 7% ಜನ ತಮ್ಮನ್ನು ಸ್ವಲ್ಪ ಮಟ್ಟಿಗೆ ವೆಲ್ಷ್ ಎಂದು ಕರೆದುಕೊಳ್ಳುತ್ತಾರೆ (ವೆಲ್ಷ್ ಹಾಗು ಬ್ರಿಟಿಶ್ ಒಂದು ಸಾಮಾನ್ಯವಾದ ಸಂಯೋಜನೆಯಾಗಿತ್ತು). ಇತ್ತೀಚಿನ ಒಂದು ಅಧ್ಯಯನವು ವೆಲ್ಷ್ ಜನರಲ್ಲಿ 35% ವೆಲ್ಷ್ ನ ತಮ್ಮ ಹುಟ್ಟಿನ ವಂಶನಾಮವನ್ನು ಇರಿಸಿ ಕೊಂಡಿರುತ್ತಾರೆಂದು ಅಂದಾಜಿಸಲಾಗಿದೆ (5.4% ಇಂಗ್ಲಿಷ್ ಜನಸಂಖ್ಯೆಯು ಹಾಗು 1.6% ಸ್ಕಾಟಿಷ್ ಜನರು ಸಹ 'ವೆಲ್ಷ್' ಹೆಸರನ್ನೇ ಹೊಂದಿರುತ್ತಾರೆ).[೭೨] ಆದಾಗ್ಯೂ, ಕೆಲವು ಹೆಸರುಗಳು ಇಂಗ್ಲಿಷ್ ಪದಗಳೆಂದು ಪರಿಗಣಿಸಲಾಗಿದೆ (ಉದಾಹರಣೆಗೆ 'ಗ್ರೀನಾವೇ'). ಇದು ವೆಲ್ಷ್ ನ ಪದ 'ಗೊರೋನ್ ವೇ' ಯ ಅಶುದ್ಧ ರೂಪವಾಗಿರಬಹುದು. ವೇಲ್ಸ್ ನಲ್ಲಿ ಸಾಮಾನ್ಯವಾಗಿ ಕೇಳಿ ಬರುವ ಇತರ ಹೆಸರುಗಳೆಂದರೆ, 'ರಿಚರ್ಡ್ಸ್'. ಈ ಹೆಸರು ಬ್ರಿಟನ್ ನ ಇತರ ಭಾಗಗಳಲ್ಲಿ ಏಕಕಾಲಕ್ಕೆ ಹುಟ್ಟಿಕೊಂಡಿರಬಹುದು.

ಕಳೆದ 2002ರಲ್ಲಿ, BBC "ಇಂಗ್ಲಿಷ್ ಹಾಗು ವೆಲ್ಷ್ ಸಂತತಿಯಲ್ಲಿ ಅಂತರವನ್ನು ಹೊಂದಿದೆ" ಎಂಬ ಶೀರ್ಷಿಕೆಯನ್ನು ಬಳಕೆ ಮಾಡಿತು. ಇದು ಇಂಗ್ಲೆಂಡ್ ಹಾಗು ವೇಲ್ಸ್‌ನ ಮಾರುಕಟ್ಟೆ ಪಟ್ಟಣಗಳಲ್ಲಿ ಮಾನವ ಪರೀಕ್ಷೆಗಳ ವಂಶವಾಹಿ ಸಮೀಕ್ಷೆಯನ್ನು ವರದಿ ಮಾಡುವಾಗ ಈ ಶೀರ್ಷಿಕೆ ಬಳಸಿತು.[೭೩] ಬ್ರಯಾನ್ ಸೈಕ್ಸ್ ಹಾಗು ಸ್ಟೀಫನ್ ಒಪೇನ್‌ಹೈಮೆರ್ಮುಂತಾದ ಇತ್ತೀಚಿನ ಸಂಶೋಧಕರು, ಆಧುನಿಕ ದಿನದ ಇಂಗ್ಲಿಷ್ ಹಾಗು ವೆಲ್ಷ್‌ನ ಬಹುತೇಕ ಜನರು, ಬ್ರಿಟಿಶ್ ದ್ವೀಪಗಳಲ್ಲಿ ವಲಸಿಗರಾಗಿ ನೆಲೆಸಿದ ಮೆಸೋಲಿತಿಕ್ ಹಾಗು ನೀಅಲಿತಿಕ್ ಕಾಲಾವಧಿಗಳ ಜನರ ಜೊತೆಗೆ ಒಂದು ಸಾಮಾನ್ಯ ವಂಶಪರಂಪರೆಯನ್ನು ಹೊಂದಿದ್ದಾರೆಂದು ವಾದಿಸುತ್ತಾರೆ. ಆದಾಗ್ಯೂ ನ್ಯಾಷನಲ್ ಮ್ಯೂಸಿಯಂ ವೇಲ್ಸ್ ಈ ವಂಶವಾಹಿ ಅಧ್ಯಯನದಿಂದ ಹೊರಬಿದ್ದ ತೀರ್ಮಾನಗಳನ್ನು "ಅಸಂಭಾವ್ಯ" ವೆಂದು ಪರಿಗಣಿಸುತ್ತದೆ.[೮]

ಕಳೆದ 2001ರಲ್ಲಿ, ವೆಲ್ಷ್ ಜನಸಂಖ್ಯೆಯಲ್ಲಿ ಕಾಲು ಭಾಗದಷ್ಟು ಜನರು ವೇಲ್ಸ್‌ನಿಂದಾಚೆ ಜನಿಸಿದ್ದಾರೆ, ಮುಖ್ಯವಾಗಿ ಇಂಗ್ಲೆಂಡ್ ನಲ್ಲಿ; 3% ಜನರು UKಯ ಹೊರಭಾಗದಲ್ಲಿ ಜನಿಸಿರುತ್ತಾರೆ. ವೇಲ್ಸ್ ನಲ್ಲಿ ಹುಟ್ಟಿದ ಜನರ ಪ್ರಮಾಣವು ದೇಶದುದ್ದಕ್ಕೂ ಬೇರೆ ಬೇರೆಯಾಗಿದೆ. ಹೆಚ್ಚಿನ ಪ್ರಮಾಣ ಸೌತ್ ವೇಲ್ಸ್ ವ್ಯಾಲೀಸ್ನಲ್ಲಿ ಜನಿಸಿದ್ದರೆ, ಕಡಿಮೆ ಪ್ರಮಾಣ ಮಧ್ಯ ವೇಲ್ಸ್ ನಲ್ಲಿ ಹಾಗು ಈಶಾನ್ಯದ ಭಾಗಗಳಲ್ಲಿ ಹುಟ್ಟಿದ್ದಾರೆ. ಫ್ಲಿಂಟ್‌ಶೈರ್ ನಲ್ಲಿ ಕೇವಲ 51% ಹಾಗು ಪೌಯಿಸ್ ನಲ್ಲಿ 56% ಜನರಿಗೆ ಹೋಲಿಸಿದರೆ, ಬ್ಲೆನು ಗ್ವೆಂಟ್ ಹಾಗು ಮೆರ್ತ್ಯರ್ ಟೈಡ್ಫಿಲ್ ಎರಡರಲ್ಲೂ, 92% ಜನರು ವೆಲ್ಷ್-ಹುಟ್ಟಿನವರು.[೭೪] ಇದಕ್ಕೆ ಕಾರಣವೆಂದರೆ, ಈ ಸ್ಥಳಗಳಲ್ಲಿ ಹೆರಿಗೆಗೆ ಅನುಕೂಲವಾಗುವಂತಹ ಆಸ್ಪತ್ರೆಗಳ ಸೌಲಭ್ಯವು ಗಡಿಯಾಚೆ ಇಂಗ್ಲೆಂಡ್‌ನಲ್ಲಿತ್ತು[ಸೂಕ್ತ ಉಲ್ಲೇಖನ ಬೇಕು]. ಹೆಚ್ಚುಕಡಿಮೆ 1.75 ದಶಲಕ್ಷ ಅಮೆರಿಕನ್ನರು ತಾವು ವೆಲ್ಷ್ ಹುಟ್ಟಿನವರೆಂದು ಕರೆದುಕೊಂಡರೆ[೭೫], ಕೆನಡಾದ 2006ರ ಜನಗಣತಿಯ ಪ್ರಕಾರ 467,000 ಕೆನೆಡಿಯನ್ನರು ತಮ್ಮನ್ನು ತಾವು ವೆಲ್ಷ್ ಸಂತತಿಗೆ ಸೇರಿದವರೆಂದು ಕರೆದುಕೊಳ್ಳುತ್ತಾರೆ.[೭೬]

ಭಾಷೆಗಳು[ಬದಲಾಯಿಸಿ]

ವೆಲ್ಷ್ ನಲ್ಲಿ ಹಮ್ಮಿಕೊಳ್ಳಲಾಗುವ, ವೆಲ್ಷ್ ಸಂಸ್ಕೃತಿಯನ್ನು ಬಿಂಬಿಸುವ ವಾರ್ಷಿಕ ಐಸ್ಟೆದ್ ವಾಡ್ ಉತ್ಸವ.

ವೆಲ್ಷ್ ಹಾಗು ಇಂಗ್ಲಿಷ್ ಎರಡನ್ನು ಸಮಾನಾಂತರ ಭಾಷೆಗಳಾಗಿ ಬಳಕೆ ಮಾಡಬಹುದೆಂದು ವೆಲ್ಷ್ ಲಾಂಗ್ವೇಜ್ ಆಕ್ಟ್ 1993 ಹಾಗು ಗವರ್ನಮೆಂಟ್ ಆಫ್ ವೇಲ್ಸ್ ಆಕ್ಟ್ 1998 ರ ಕಾಯ್ದೆಗಳು ಅವಕಾಶ ಕಲ್ಪಿಸಿವೆ. ಆದಾಗ್ಯೂ, UKಯಲ್ಲಿ ಇಂಗ್ಲಿಷ್ ಒಂದೇ ಡಿ ಫ್ಯಾಕ್ಟೋ ಅಧಿಕೃತ ಸ್ಥಾನವನ್ನು ಹೊಂದಿದೆ (ನೋಡಿ ಲಾಂಗ್ವೇಜಸ್ ಆಫ್ ದಿ ಯುನೈಟೆಡ್ ಕಿಂಗ್ಡಮ್) ಹಾಗು ಇದು ಪ್ಲಾಯಿಡ್ ಸಿಮ್ರು ನಂತಹ ರಾಜಕೀಯ ಗುಂಪುಗಳು, ವೆಲ್ಷ್ ಭಾಷೆಯ ಉಳಿವಿಗೆ ಭರವಸೆಯನ್ನು ನೀಡುವ ಇಂತಹ ಶಾಸನಗಳು ಸಾಕೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಲು ದಾರಿಕಲ್ಪಿಸಿದೆ.[೭೭]

ವೇಲ್ಸ್ ನಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಹೆಚ್ಚುಕಡಿಮೆ ಎಲ್ಲರು ಮಾತನಾಡುತ್ತಾರೆ ಹಾಗು ಇದರಿಂದಾಗಿ ಡಿ ಫ್ಯಾಕ್ಟೋ ಪ್ರಮುಖ ಭಾಷೆಯಾಗಿದೆ (ನೋಡಿ ವೇಲ್ಸ್ ಇಂಗ್ಲಿಷ್) ಆದಾಗ್ಯೂ, ಉತ್ತರ ಹಾಗು ದಕ್ಷಿಣ ವೇಲ್ಸ್ ನ ಹಲವು ಭಾಗಗಳಲ್ಲಿ ಹೆಚ್ಚಿನ ಜನರು ವೆಲ್ಷ್ ಭಾಷೆಯನ್ನೇ ಪ್ರಥಮ ಭಾಷೆಯಾಗಿಬಳಕೆ ಮಾಡುತ್ತಾರೆ ಹಾಗು ಇಂಗ್ಲಿಷ್ ನ್ನು ದ್ವಿತೀಯ ಭಾಷೆಯಾಗಿ ಕಲಿಯಲಾಗುತ್ತದೆ. 21.7% ವೆಲ್ಷ್ ಜನರು ಕೆಲ ಮಟ್ಟಿಗೆ ವೆಲ್ಷ್ ಭಾಷೆಯಲ್ಲಿ ಮಾತನಾಡುತ್ತಾರೆ ಅಥವಾ ಓದುತ್ತಾರೆ (2001ರ ಜನಗಣತಿ ಆಧಾರಿತ), ಆದಾಗ್ಯೂ ಕೇವಲ 16% ಜನರು ಭಾಷೆಯನ್ನು ಮಾತನಾಡಲು, ಓದಲು ಹಾಗು ಬರೆಯಲು ಸಮರ್ಥರಾಗಿದ್ದಾರೆಂದು ಹೇಳಿಕೊಳ್ಳುತ್ತಾರೆ,[೧೮] ಇದು ಆಡುಮಾತಿನ ಹಾಗು ಸಾಹಿತ್ಯಕ ವೆಲ್ಷ್ ನ ನಡುವಿನ ಸಂಪೂರ್ಣ ವ್ಯತಾಸಕ್ಕೆ ಸಂಬಂಧಿಸಿದೆ. ಕಳೆದ 2004ರಲ್ಲಿ ನಡೆಸಲಾದ ಭಾಷಾ ಸಮೀಕ್ಷೆಯ ಪ್ರಕಾರ, 21.7% ಗಿಂತ ದೊಡ್ಡ ಪ್ರಮಾಣದ ಜನರು ಭಾಷೆಯ ಬಗ್ಗೆ ಜ್ಞಾನವನ್ನು ಹೊಂದಿರುವ ಬಗ್ಗೆ ಹೇಳಿಕೊಳ್ಳುತ್ತಾರೆ.[೭೮]

ಇಂದು ಅಲ್ಲಿ ಕೆಲವೇ ಕೆಲವು ವೆಲ್ಷ್ ಏಕಭಾಷಿ ಗಳಿದ್ದಾರೆ. ಚಿಕ್ಕ ಮಕ್ಕಳ ಜೊತೆಗೆ, ಕೆಲವು ವ್ಯಕ್ತಿಗಳು ಸಹ ಇಂಗ್ಲಿಷ್‌ನಲ್ಲಿ ಕಡಿಮೆ ನಿರರ್ಗಳತೆ ಹೊಂದುವುದರ ಜೊತೆಗೆ ತುಂಬಾ ವಿರಳವಾಗಿ ಮಾತನಾಡುತ್ತಾರೆ. ಇತ್ತೀಚಿಗೆ ಅಂದರೆ 20ನೇ ಶತಮಾನದ ಮಧ್ಯಭಾಗದವರೆಗೂ ಹಲವು ಏಕಭಾಷಿಕರು ಇದ್ದರು.[೭೯] ವೇಲ್ಸ್ ನ ರಸ್ತೆಯ ಸೂಚನಾ ಫಲಕಗಳು ಸಾಮಾನ್ಯವಾಗಿ ಇಂಗ್ಲಿಷ್ ಹಾಗು ವೆಲ್ಷ್ ಎರಡೂ ಭಾಷೆಗಳಲ್ಲಿರುತ್ತವೆ; ಎಲ್ಲೆಲ್ಲಿ ಸ್ಥಳದ ಹೆಸರುಗಳು ಎರಡು ಭಾಷೆಗಳಲ್ಲಿ ಬೇರೆಯಾಗಿರುತ್ತವೋ, ಅಂತಹ ಕಡೆಗಳಲ್ಲಿ ಎರಡೂ ಭಾಷೆಯ ರೂಪಗಳನ್ನು ಬಳಸಲಾಗುತ್ತದೆ (ಉದಾಹರಣೆಗೆ, ಕಾರ್ಡಿಫ್" ಹಾಗು "ಕಾಎರ್ಡೈಡ್"), ಯಾವುದನ್ನು ಮೊದಲು ಸೂಚಿಸಬೇಕು ಎಂಬ ನಿರ್ಧಾರವನ್ನು ಸ್ಥಳೀಯ ಅಧಿಕಾರಿಗಳ ನಿರ್ಧಾರಕ್ಕೆ ಬಿಡಲಾಗುತ್ತದೆ.

20ನೇ ಶತಮಾನದಲ್ಲಿ ಇಂಗ್ಲಿಷ್ ಅಥವಾ ವೇಲ್ಸ್ ಅಲ್ಲದೆ ಇತರ ಭಾಷೆಗಳನ್ನು ಮಾತನಾಡುವ ಹಲವು ಸಣ್ಣ ಸಮುದಾಯಗಳಿದ್ದವು, ಉದಾಹರಣೆಗೆ ಬೆಂಗಾಲಿ ಅಥವಾ ಕ್ಯಾಂಟೋನೀಸ್. ವಲಸೆಯ ಪರಿಣಾಮವಾಗಿ ಇವರುಗಳು ಅಲ್ಲಿ ನೆಲೆಯೂರಿದ್ದರು. ಈ ರೀತಿಯಾದ ಪ್ರಸಂಗಗಳು ಪ್ರತ್ಯೇಕವಾಗಿ ವೇಲ್ಸ್ ನ ಪಟ್ಟಣ ಪ್ರದೇಶಗಳಲ್ಲಿ ಮಾತ್ರ ಕಂಡು ಬರುತ್ತಿತ್ತು. ಇಟಲಿಸರ್ಕಾರವು ಇಟಲಿಯನ್ ಸಂತತಿಯನ್ನು ಹೊಂದಿರುವ ವೆಲ್ಷ್ ನಿವಾಸಿಗಳಿಗೆ ಇಟಾಲಿಯನ್ ಭಾಷೆಯನ್ನು ಕಲಿಸುವುದಕ್ಕೆ ಆರ್ಥಿಕ ಸಹಾಯವನ್ನು ನೀಡುತ್ತದೆ. ಇಂತಹ ಇತರ ಭಾಷೆಗಳಿಗೆ ಇಂಗ್ಲಿಷ್ ಹಾಗು ವೆಲ್ಷ್ ಭಾಷೆಗಿರುವಂತಹ ಕಾನೂನು ಸಮಾನತೆಯಿಲ್ಲ, ಆದಾಗ್ಯೂ ಸಾರ್ವಜನಿಕ ಸೇವಾ ಸಂಸ್ಥೆಗಳು, ನಿರ್ದಿಷ್ಟವಾದ ಅಗತ್ಯವಿರುವ ಕಡೆ ಅಲ್ಪ ಸಂಖ್ಯೆಯ ಜನಾಂಗೀಯ ಭಾಷೆಗಳಲ್ಲಿ ಮಾಹಿತಿ ಹಸ್ತಪತ್ರಿಕೆಗಳನ್ನು ನೀಡಬಹುದು. ಈ ವಿಧಾನವು ಯುನೈಟೆಡ್ ಕಿಂಗ್ಡಮ್ ನ ಬೇರೆ ಸ್ಥಳಗಳಲ್ಲೂ ನಡೆಯುತ್ತದೆ. ಕೋಡ್-ಸ್ವಿಚಿಂಗ್ ವೇಲ್ಸ್ ನ ಎಲ್ಲಾ ಭಾಗಗಳಲ್ಲೂ ಸಾಮಾನ್ಯವಾಗಿದೆ. ಹಾಗು ಇದರಿಂದ ಉಂಟಾದ ಪರಿಣಾಮಕ್ಕೆ ಹಲವಾರು ಹೆಸರುಗಳಿವೆ, ಉದಾಹರಣೆಗೆ "ವೆಂಗ್ಲಿಶ್" ಅಥವಾ (ಕಾಯೇರ್ನ್‌ಅರ್ಫಾನ್ ನಲ್ಲಿ) "ಕೋಫಿ".

ಧರ್ಮ[ಬದಲಾಯಿಸಿ]

ಪೆಮ್ಬ್ರೋಕ್‌ಶೈರ್ ನಲ್ಲಿರುವ St. ಡೇವಿಡ್‌ನ ಕೆತೆಡ್ರಲ್

ವೇಲ್ಸ್ ದೇಶದ ದೊಡ್ಡ ಧರ್ಮವೆಂದರೆ ಕ್ರೈಸ್ತಧರ್ಮ. 2001 ಜನಗಣತಿಯಲ್ಲಿ 72% ಜನಸಂಖ್ಯೆಯು ತಮ್ಮನ್ನು ತಾವು ಕ್ರೈಸ್ತರೆಂದು ವಿವರಿಸುತ್ತಾರೆ. ಪ್ರೆಸ್ಬಿಟರಿಯನ್ ಚರ್ಚ್ ಆಫ್ ವೇಲ್ಸ್ ಅತ್ಯಂತ ದೊಡ್ಡ ಧಾರ್ಮಿಕ-ಪಂಥವಾಗಿದೆ, ಇದು 18ನೇ ಶತಮಾನದ ವೆಲ್ಷ್ ಮೆಥೋಡಿಸ್ಟ್ ಪುನಶ್ಚೇತನ ದಿಂದ ಹುಟ್ಟಿಕೊಂಡಿತು. ಜೊತೆಗೆ 1811ರಲ್ಲಿ ಚರ್ಚ್ ಆಫ್ ಇಂಗ್ಲೆಂಡ್ ನಿಂದ ಬೇರ್ಪಟ್ಟಿತು. ಚರ್ಚ್ ಆಫ್ ವೇಲ್ಸ್ ಇದರ ನಂತರದ ಅತ್ಯಂತ ದೊಡ್ಡ ಧಾರ್ಮಿಕ ಪಂಥವೆನಿಸಿಕೊಂಡಿದೆ, ಹಾಗು ಆಂಗ್ಲಿಕನ್ ಮ್ಯೂನಿಯನ್ನ ವಿಭಾಗವಾಗಿದೆ. ಇದು ಕೂಡ ಚರ್ಚ್ ಆಫ್ ಇಂಗ್ಲೆಂಡ್‌ನ ಒಂದು ಭಾಗವಾಗಿತ್ತು, ಹಾಗು ವೆಲ್ಷ್ ಚರ್ಚ್ ಆಕ್ಟ್ 1914ರ ಅನುಸಾರ ಬ್ರಿಟಿಶ್ ಸರ್ಕಾರವು ಇದರ ಸ್ಥಾನಮಾನವನ್ನು ತೆಗೆಯಿತು. (ಕಾಯ್ದೆಯು 1920ರವರೆಗೂ ಜಾರಿಗೆ ಬಂದಿರಲಿಲ್ಲ).

ರೋಮನ್ ಕ್ಯಾಥೊಲಿಕ್ ಚರ್ಚ್ 3% ಜನಸಂಖ್ಯೆಯನ್ನು ಹೊಂದಿದ ನಂತರದ ಅತ್ಯಂತ ದೊಡ್ಡ ಧಾರ್ಮಿಕ ಪಂಥವಾಗಿದೆ. ವೇಲ್ಸ್ ನಲ್ಲಿ ಕ್ರೈಸ್ತಧರ್ಮವಲ್ಲದ ಇತರ ಧರ್ಮಗಳು ಕಡಿಮೆ ಸಂಖ್ಯೆಯಲ್ಲಿವೆ. ಇದು ಜನಸಂಖ್ಯೆಯ 1.5% ನಷ್ಟಿದೆ. 18% ಜನರು ಯಾವುದೇ ಧರ್ಮಕ್ಕೆ ಸೇರಿಲ್ಲವೆಂದು ಘೋಷಿಸಿಕೊಳ್ಳುತ್ತಾರೆ. ಅಪೋಸ್ಟೋಲಿಕ್ ಚರ್ಚ್ ತನ್ನ ವಾರ್ಷಿಕ ಅಪೋಸ್ಟೋಲಿಕ್ ಸಮಾವೇಶವನ್ನು ಪ್ರತಿ ವರ್ಷವೂ ಸ್ವಾನ್ಸೀನಲ್ಲಿ ಹಮ್ಮಿಕೊಳ್ಳುತ್ತದೆ, ಸಾಮಾನ್ಯವಾಗಿ ಆಗಸ್ಟ್ ತಿಂಗಳು. [[ಸೈಂಟ್ ಡೇವಿಡ್ ವೇಲ್ಸ್ ನ ಮಾರ್ಗದರ್ಶಕ ಸಂತ (ವೆಲ್ಷ್: ಡೆವಿ ಸಂತ್|ಸೈಂಟ್ ಡೇವಿಡ್ ವೇಲ್ಸ್ ನ ಮಾರ್ಗದರ್ಶಕ ಸಂತ (ವೆಲ್ಷ್: ಡೆವಿ ಸಂತ್]]). ಜೊತೆಗೆ St ಡೇವಿಡ್'ಸ್ ಡೇ ಯನ್ನು (ವೆಲ್ಷ್: ಡೈಯ್ಡ್ ಗ್ವಿಲ್ ಡೆವಿ ಸಂತ್) ಮಾರ್ಚ್ 1ರಂದು ಪ್ರತಿ ವರ್ಷವೂ ಆಚರಿಸಲಾಗುತ್ತದೆ.

ಕಳೆದ 1904ರಲ್ಲಿ, ಒಂದು ಧಾರ್ಮಿಕ ಜಾಗೃತಿ ಉಂಟಾಯಿತು (ಕೆಲವರು ಇದನ್ನು 1904-1905 ರ ಧರ್ಮ ಜಾಗೃತಿ ಅಥವಾ 1904ರ ಧರ್ಮ ಜಾಗೃತಿ ಎಂದು ಕರೆಯುತ್ತಾರೆ). ಇದು ಇವಾನ್ ರಾಬರ್ಟ್ಸ್ ನ ಇವ್ಯಾನ್ಜಲಿಸಂ(ಸುವಾರ್ತೆಯ ಭೋದನೆ)ನ ಮೂಲಕ ಹುಟ್ಟಿಕೊಂಡಿತು. ಇದು ವೇಲ್ಸ್ ನಲ್ಲಿ ಒಂದು ಬಿರುಗಾಳಿಯಂತೆ ಹಬ್ಬಿ ಅಸಂಖ್ಯಾತ ಜನರು ಸ್ವಇಚ್ಛೆಯಿಂದ ನಾನ್ ಕನ್ಫಾರ್ಮಿಸ್ಟ್(ಇಂಗ್ಲೆಂಡಿನ ಅಧಿಕೃತ ಆಂಗ್ಲಿಕನ್ ಚರ್ಚನ್ನು ಒಪ್ಪದ ಪಂಥ) ಹಾಗು ಆಂಗ್ಲಿಕನ್ ಕ್ರೈಸ್ತ ಧರ್ಮ ಕ್ಕೆ ಮತಾಂತರ ಮಾಡಿಕೊಂಡರು. ಇದಕ್ಕೆ ಕೆಲವೊಂದು ಬಾರಿ ಸಂಪೂರ್ಣ ಸಮುದಾಯಗಳು ಮತಾಂತರ ಹೊಂದುತ್ತಿದ್ದವು. ವೇಲ್ಸ್‌ನಲ್ಲಿರುವ ಇಂದಿನ ಹಲವು ಪೆನ್ಟಿಕಾಸ್ಟಲ್(ಪೆನ್ಟಿಕಾಸ್ಟ್ ಪಂಥ)ಚರ್ಚ್‌ಗಳು ಈ ಧಾರ್ಮಿಕ ಜಾಗೃತಿಯಿಂದ ಹುಟ್ಟಿಕೊಂಡಿವೆಯೆಂದು ಘೋಷಿಸುತ್ತವೆ.

ಇಸ್ಲಾಮ್ ವೇಲ್ಸ್ ನಲ್ಲಿರುವ ಅತ್ಯಂತ ದೊಡ್ಡ ಕ್ರೈಸ್ತ ಧರ್ಮೇತರ ಧರ್ಮವಾಗಿದೆ. 2001ರ ಜನಗಣತಿಯ ಪ್ರಕಾರ 30,000ಕ್ಕೂ ಹೆಚ್ಚಿನ ಮುಸ್ಲಿಮರು ವೇಲ್ಸ್ ನಲ್ಲಿದ್ದಾರೆಂದು ವರದಿ ಮಾಡಲಾಗಿದೆ. ದಕ್ಷಿಣ ವೇಲ್ಸ್ ನ ನಗರಗಳಾದ ನ್ಯೂಪೋರ್ಟ್, ಕಾರ್ಡಿಫ್ ಹಾಗು ಸ್ವಾನ್ಸೀ ನಲ್ಲಿ ಹಿಂದೂಗಳು ಹಾಗು ಸಿಖ್ ಸಮುದಾಯಗಳು ನೆಲೆಗೊಂಡಿವೆ. ಈ ನಡುವೆ ಪಶ್ಚಿಮದ ಹಳ್ಳಿಗಾಡಿನ ಪ್ರಾಂತ್ಯವಾದ ಸೆರೆಡಿಜಿಯೋನ್ ನಲ್ಲಿ ಹೆಚ್ಚಿನ ಬೌದ್ಧ ಧರ್ಮೀಯರು ಕೇಂದ್ರೀಕೃತವಾಗಿದ್ದಾರೆ. ಜೂಡೇಇಸಮ್ ವೇಲ್ಸ್ ನಲ್ಲಿ ಸ್ಥಾಪಿತವಾದ ಮೊದಲ ಕ್ರೈಸ್ತಧರ್ಮೇತರ ಮತವಾಗಿದೆ (ಪ್ರಿ-ರೋಮನ್ ಅನಿಮಿಸಮ್ ಹೊರತುಪಡಿಸಿ). ಆದಾಗ್ಯೂ 2001ನೇ ಇಸವಿಯ ಹೊತ್ತಿಗೆ ಕೇವಲ 2,000 ಜನರನ್ನು ಹೊಂದಿದ ಈ ಸಮುದಾಯವು ಅಳಿವಿನ ಅಂಚಿನಲ್ಲಿದೆ.[೮೦] ಪೇಗನಿಸಂ ಹಾಗು ವಿಕ್ಕಾ ತತ್ವಗಳು ಸಹ ವೇಲ್ಸ್‌ ನಲ್ಲಿ ಬೆಳವಣಿಗೆಯಾಗುತ್ತಿದೆ. ಕಳೆದ 2001ರ ಜನಗಣತಿಯ ಪ್ರಕಾರ, ಇಂಗ್ಲೆಂಡ್ ಹಾಗು ವೇಲ್ಸ್ ನಲ್ಲಿ 7,000 ವಿಕ್ಕನ್ಸ್ ಹಾಗು 31,000 ಪೇಗನ್ಸ್ ಇದ್ದಾರೆಂದು ವರದಿ ಮಾಡಲಾಗಿದೆ.[೮೧]

ಸಂಸ್ಕೃತಿ[ಬದಲಾಯಿಸಿ]

ಚಿತ್ರ:NationalLibraryOfWales.jpg
ಅಬೆರಿಸ್ಟ್‌ವಿತ್‌ನಲ್ಲಿರುವ ವೇಲ್ಸ್‌ನ ರಾಷ್ಟ್ರೀಯ ಗ್ರಂಥಾಲಯ

ವೇಲ್ಸ್ ತನ್ನ ಸ್ವಂತ ಭಾಷೆ, ಪದ್ಧತಿಗಳು, ರಜಾದಿನಗಳು ಹಾಗು ಸಂಗೀತದಲ್ಲಿ ಒಂದು ವಿಶಿಷ್ಟವಾದ ಸಂಸ್ಕೃತಿಯನ್ನು ಪಡೆದಿದೆ. ವೇಲ್ಸ್ ನ್ನು ಪ್ರಾಥಮಿಕವಾಗಿ ಒಂದು ಕೆಂಪು ವೆಲ್ಷ್ ಡ್ರ್ಯಾಗನ್ ನ ಚಿಹ್ನೆಯಿಂದ ಪ್ರತಿನಿಧಿಸಲಾಗುತ್ತದೆ ಆದರೆ ಇತರ ರಾಷ್ಟ್ರೀಯ ಲಾಂಛನಗಳು ಲೀಕ್ ಹಾಗು ಡ್ಯಾಫಡಿಲ್ ಗಳ ಚಿಹ್ನೆಗಳನ್ನೂ ಸಹ ಹೊಂದಿದೆ. ವೆಲ್ಷ್ ನಲ್ಲಿ ಲೀಕ್ಸ್ ನ್ನು (ಸೆನ್ನಿನ್) ಹಾಗು ಡ್ಯಾಫಡಿಲ್ ಗಳನ್ನು (ಸೆನ್ನಿನ್ ಪೆದ್ರ್, ಲಿಟ್. ಎಂದು ಕರೆಯುತ್ತಾರೆ "(ಸೈಂಟ್) ಪೀಟರ್'ಸ್ ಲೀಕ್ಸ್") ಹತ್ತಿರದ ಸಂಬಂಧವನ್ನು ಹೊಂದಿದೆ ಹಾಗು ಚಿಹ್ನೆಗಳನ್ನು ಒಂದರ ಬದಲಾಗಿ ಇನ್ನೊಂದನ್ನು ತಪ್ಪುತಿಳಿವಳಿಕೆಯಿಂದ ಬಳಕೆಯಾಗಿರುವ ಸಂಭವವಿದೆ. ಆದರೆ ಮೊದಲು ಯಾವುದು ಬಳಕೆ ಬಂತು ಎಂಬುದರ ಬಗ್ಗೆ ಮಾಹಿತಿ ಸ್ಪಷ್ಟವಾಗಿಲ್ಲ.

ಕಲೆ[ಬದಲಾಯಿಸಿ]

ವೇಲ್ಸ್ ನಲ್ಲಿ ಸೆಲ್ಟಿಕ್ ಕಲೆ ಯ ಹಲವು ಕೃತಿಗಳು ಪತ್ತೆಯಾಗಿವೆ.[೮೨] ಪೂರ್ವ ಮಧ್ಯಯುಗ ದ ಅವಧಿಯಲ್ಲಿ, ವೇಲ್ಸ್ ನ ಸೆಲ್ಟಿಕ್ ಕ್ರೈಸ್ತಧರ್ಮವು, ಬ್ರಿಟಿಶ್ ಐಲ್ಸ್ ನ ಇನ್ಸ್ಯುಲರ್ ಆರ್ಟ್ (ಪೂರ್ವ ಮಧ್ಯಯುಗದ ಬ್ರಿಟಿಶ್ ದ್ವೀಪದಲ್ಲಿ ಬಳಕೆಯಲ್ಲಿದ್ದ ಒಂದು ರೀತಿ ಲ್ಯಾಟಿನ್ ಕೈಬರಹ) ನಲ್ಲಿ ಭಾಗವಹಿಸಿತ್ತು ಹಾಗು ಬಹುಶಃ ವೆಲ್ಷ್ ಹುಟ್ಟಿನಸುವರ್ಣಾಕ್ಷರಗಳಿಂದ ಅಲಂಕೃತಗೊಂಡ ಹಸ್ತಪ್ರತಿಗಳು ಅಸ್ತಿತ್ವದಲ್ಲಿದ್ದವು. ಇದರಲ್ಲಿ 8ನೇ ಶತಮಾನದ ಹಿಯರ್ ಫೋರ್ಡ್ ಗಾಸ್ಪಲ್ಸ್ ಹಾಗು ಲಿಚ್ಫೀಲ್ಡ್ ಗಾಸ್ಪಲ್ಸ್ ಅತ್ಯಂತ ಗಮನಾರ್ಹವಾಗಿದೆ. ಕಳೆದ 11ನೇ ಶತಮಾನದ ರೈಸ್ಮಾರ್ಚ್ ಪಸಾಲ್ಟರ್ (ಈಗ ಡಬ್ಲಿನ್ ನಲ್ಲಿದೆ) St ಡೇವಿಡ್'ಸ್ ನಲ್ಲಿ ರಚಿಸಲಾದ ಒಂದು ನಿಸ್ಸಂಶಯವಾದ ವೆಲ್ಷ್ ಕೃತಿ. ಇದು ಅಸಾಧಾರಣವಾದ ವೈಕಿಂಗ್ ಪ್ರಭಾವವನ್ನು ಒಳಗೊಂಡ ಸ್ವಲ್ಪ ಮುಂಚಿನ ಇನ್ಸ್ಯುಲರ್ ಶೈಲಿಯನ್ನು ಪ್ರತಿಬಿಂಬಿಸುತ್ತದೆ.

ಕಳೆದ 16-18ನೇ ಶತಮಾನದ ಕೆಲವು ಅತ್ಯುತ್ತಮ ವೆಲ್ಷ್ ಕಲಾವಿದರು ಕೆಲಸಕ್ಕಾಗಿ ಬೇರೆಡೆ ಸ್ಥಳಾಂತರವಾದರು. ಆದರೆ 18ನೇ ಶತಮಾನದಲ್ಲಿ ಇಂಗ್ಲಿಷ್ ಕಲೆ ಯನ್ನು ಪ್ರಬಲಗೊಳಿಸಿದ ಭೂದೃಶ್ಯ ಚಿತ್ರಣದ ಕಲೆಯು, ಅವರನ್ನು ಮತ್ತೆ ತವರಿನಲ್ಲಿ ಉಳಿಯುವಂತೆ ಪ್ರೇರೇಪಿಸಿತು. ಜೊತೆಗೆ ವೆಲ್ಷ್‌ನ ನೈಸರ್ಗಿಕ ದೃಶ್ಯಾವಳಿಗಳನ್ನು ಚಿತ್ರಿಸಲು ಹೊರಗಿನಿಂದ ಕಲಾವಿದರ ಮಹಾಪೂರವೇ ಹರಿದುಬಂತು. ವೆಲ್ಷ್ ವರ್ಣಚಿತ್ರಕಾರ ರಿಚರ್ಡ್ ವಿಲ್ಸನ್ (1714–1782) ಪ್ರಮುಖ ಬ್ರಿಟಿಶ್ ಭೂದೃಶ್ಯ ಚಿತ್ರಗಾರನೆಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈತ ವೇಲ್ಸ್ ಭೂದೃಶ್ಯಗಳಿಗಿಂತ ಇಟಾಲಿಯನ್ ಭೂದೃಶ್ಯಗಳನ್ನು ಚಿತ್ರಿಸುವಲ್ಲಿ ಹೆಸರುವಾಸಿಯಾಗಿದ್ದಾನೆ, ಆದಾಗ್ಯೂ ಲಂಡನ್ ಗೆ ಭೇಟಿಯಿತ್ತಾಗ ಹಲವು ವರ್ಣಚಿತ್ರಗಳನ್ನು ರಚಿಸಿದ್ದಾನೆ.[೮೩]

ಥಾಮಸ್ ಜೋನ್ಸ್ ನ ದಿ ಬಾರ್ಡ್, 1774, (1742–1803)

ಕಳೆದ 20ನೇ ಶತಮಾನದವರೆಗೂ ತಮ್ಮ ಜೀವನೋಪಾಯಕ್ಕಾಗಿ ವೆಲ್ಷ್ ಮಾರುಕಟ್ಟೆಯ ಮೇಲೆ ಭರವಸೆಯಿಡಲು ಕಲಾವಿದರಿಗೆ ತುಂಬಾ ಕಷ್ಟವಾಗುತ್ತಿತ್ತು. ಕಳೆದ 1857ರ ಸಂಸತ್ತಿನ ಒಂದು ಕಾಯ್ದೆ ಯು ಯುನೈಟೆಡ್ ಕಿಂಗ್ಡಮ್ ನುದ್ದಕ್ಕೂ ಹಲವಾರು ಕಲಾ ಶಾಲೆಗಳನ್ನು ಸ್ಥಾಪಿಸುವುದಕ್ಕೆ ಕಾಯ್ದೆಯನ್ನು ರೂಪಿಸಿತು, ಹಾಗು 1865ರಲ್ಲಿ ಕಾರ್ಡಿಫ್ ಸ್ಕೂಲ್ ಆಫ್ ಆರ್ಟ್ ಪ್ರಾರಂಭವಾಯಿತು. ಕಲಾ ಪದವಿಯನ್ನು ಪಡೆದ ನಂತರವೂ ಪದವೀಧರ ಕಲಾವಿದರ ಕೆಲಸಕ್ಕಾಗಿ ವೇಲ್ಸ್‌ನ್ನು ತೊರೆಯುವುದು ಸಾಮಾನ್ಯವಾಯಿತು, ಆದರೆ ಬೆಟ್ವ್ಸ್-ವೈ-ಕೋಎದ್ ಕಲಾವಿದರ ಒಂದು ಜನಪ್ರಿಯ ಕೇಂದ್ರವಾಯಿತು ಹಾಗು ಕಲಾವಿದರ ಸಮೂಹವು ರಾಯಲ್ ಕ್ಯಾಂಬ್ರಿಯನ್ ಅಕ್ಯಾಡೆಮಿ ಯನ್ನು 1881ರಲ್ಲಿ ರೂಪಿಸಲು ಸಹಾಯ ಮಾಡಿತು.[೮೪] ಶಿಲ್ಪಿ ಸರ್ ವಿಲಿಯಮ್ ಗೋಸ್ಕೊಂಬೆ ಜಾನ್, ಲಂಡನ್ ನಲ್ಲೇ ನೆಲೆಯೂರಿದ್ದರೂ ಸಹ ವೆಲ್ಷ್ ಕಚೇರಿಗಳಿಗೆ ಹಲವು ಶಿಲ್ಪಕಲಾಕೃತಿಗಳನ್ನು ತಯಾರಿಸಿಕೊಟ್ಟರು. ಕ್ರಿಸ್ಟೋಫರ್ ವಿಲ್ಲಿಯಮ್ಸ್, ಲಂಡನ್ ನಲ್ಲೇ ನೆಲೆಯೂರಿದ್ದರೂ ಸಹ, ಆತನ ಕೃತಿಗಳು ವೆಲ್ಷ್‌ನೆಡೆಗಿನ ದೃಢ ನಿಶ್ಚಿತತೆಯನ್ನು ತೋರುತ್ತಿದ್ದವು. ಥಾಮಸ್ ಎ. ಸ್ಟೀಫನ್ಸ್ ಹಾಗು ಆಂಡ್ರ್ಯೂ ವಿಕಾರಿ ಭಾವಚಿತ್ರಕಾರರಾಗಿ ತಮ್ಮ ವೃತ್ತಿಯಲ್ಲಿ ಯಶಸ್ವಿಯಾದರು. ಇವರಿಬ್ಬರು ಅನುಕ್ರಮವಾಗಿ ಯುನೈಟೆಡ್ ಸ್ಟೇಟ್ಸ್ ಹಾಗು ಫ್ರಾನ್ಸ್ ನಲ್ಲಿ ನೆಲೆಸಿದ್ದರು. ಸರ್ ಫ್ರಾಂಕ್ ಬ್ರಾಂಗ್ವಯನ್ ವೆಲ್ಷ್ ಹುಟ್ಟಿನವರಾದರೂ, ವೇಲ್ಸ್ ನಲ್ಲಿ ಕಡಿಮೆ ಸಮಯವನ್ನು ಕಳೆದಿದ್ದರು.

ಜನಪ್ರಿಯ ವೆಲ್ಷ್ ವರ್ಣಚಿತ್ರಕಾರರಾದ, ಅಗಸ್ಟಸ್ ಜಾನ್ ಹಾಗು ಆತನ ಸಹೋದರಿ ಗ್ವೆನ್ ಜಾನ್, ಹೆಚ್ಚಿಗೆ ಲಂಡನ್ ಹಾಗು ಪ್ಯಾರಿಸ್ ನಲ್ಲಿ ವಾಸಿಸುತ್ತಿದ್ದರು; ಆದರೆ ಭೂದೃಶ್ಯ ಚಿತ್ರಗಾರ ಸರ್ ಕಯ್ಫಿನ್ ವಿಲ್ಲಿಯಮ್ ಹಾಗು ಪೀಟರ್ ಪ್ರೆನ್ಡರ್ಗಾಸ್ಟ್, ತಮ್ಮ ಜೀವಿತಾವಧಿಯಲ್ಲಿ ಹೆಚ್ಚಿನ ಸಮಯ ವೇಲ್ಸ್ ನಲ್ಲೇ ವಾಸವಾಗಿದ್ದರು. ಆದರೂ ಕಲಾ ಪ್ರಪಂಚದ ವೈಶಾಲ್ಯತೆಯ ಬಗ್ಗೆ ಇವರಿಬ್ಬರೂ ಹೆಚ್ಚಾಗಿ ತಿಳಿದಿದ್ದರು. ಸೆರಿ ರಿಚರ್ಡ್ಸ್ ಕಾರ್ಡಿಫ್ ನಲ್ಲಿ ವೆಲ್ಷ್ ಭೂದೃಶ್ಯ ಕಲೆಯ ಒಬ್ಬ ಶಿಕ್ಷಕನಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಜೊತೆಗೆ ಲಂಡನ್ ಗೆ ಸ್ಥಳಬದಲಾವಣೆ ಮಾಡಿಕೊಂಡ ನಂತರವೂ; ಸರಿಅಲಿಸಂ(ಅತಿ ವಾಸ್ತವಿಕತಾ ವಾದ- ಸ್ವಪ್ನದಲ್ಲಿರುವಂತೆ ಪ್ರತಿಮೆಗಳನ್ನು ಅಥವಾ ಕಲ್ಪನೆಗಳನ್ನು ತರ್ಕರಹಿತವಾಗಿ ಜೋಡಿಸುವ ಮೂಲಕ ನಿರೂಪಿಸುವ ಕಲಾಪ್ರಕಾರ) ನ ಒಳಗೊಂಡ ಅಂತರಾಷ್ಟ್ರೀಯ ಶೈಲಿಯ ಒಬ್ಬ ಸಾಂಕೇತಿಕ ವರ್ಣಚಿತ್ರಕಾರ. ಹಲವಾರು ಕಲಾವಿದರು ವೇಲ್ಸ್‌ಗೆ ಸ್ಥಳ ಬದಲಾವಣೆ ಮಾಡಿಕೊಂಡರು, ಇವರಲ್ಲಿ ಎರಿಕ್ ಗಿಲ್, ಲಂಡನ್-ಹುಟ್ಟಿನ ವೆಲ್ಷ್ ಕಲಾವಿದ ಡೇವಿಡ್ ಜೋನ್ಸ್, ಹಾಗು ಶಿಲ್ಪಿ ಜೋನ ಜೋನ್ಸ್ ಸೇರಿದ್ದಾರೆ. ದಿ ಕಾರ್ಡೋಮ ಗ್ಯಾಂಗ್ ಕವಿ ಡೈಲನ್ ಥಾಮಸ್ಹಾಗೂ ಸ್ವಾನ್ಸೀಯ ಕವಿ ಹಾಗು ಕಲಾವಿದ ವೆರ್ನೋನ್ ವಾಟ್ಕಿನ್ಸ್ನ ಸುತ್ತ ಗಮನಕೇಂದ್ರೀಕರಿಸಿದ ಒಂದು ಬೌದ್ಧಿಕ ಬಳಗವಾಗಿತ್ತು. ಇದರಲ್ಲಿ ವರ್ಣಚಿತ್ರಕಾರ ಆಲ್ಫ್ರೆಡ್ ಜೇನ್ಸ್ ಸೇರಿದ್ದಾರೆ. ಇಂದು ವೇಲ್ಸ್ ನಲ್ಲಿ ಪ್ರಪಂಚದ ಎಲ್ಲ ಕಡೆಗಳಂತೆ ಮಹಾ ವೈವಿಧ್ಯತೆಯ ಶೈಲಿಗಳ ಕಲೆಯು ತಯಾರಿಸಲಾಗುತ್ತದೆ.

ದಕ್ಷಿಣ ವೇಲ್ಸ್‌ನಲ್ಲಿ 18 ಹಾಗು 19ನೇ ಶತಮಾನ ಉತ್ತರಾರ್ಧದ ಹಲವಾರು ಗಮನಾರ್ಹ ಕುಂಬಾರಿಕೆ ಗಳಿವೆ. ಮೊದಲಿಗೆ ಕ್ಯಾಂಬ್ರಿಯನ್ ಪಾಟರಿ (1764–1870, "ಸ್ವಾನ್ಸೀ ಪಾಟರಿ" ಎಂದೂ ಪರಿಚಿತ) ಹಾಗು ಕಾರ್ಡಿಫ್ ಹತ್ತಿರದ ನಂಟ್ಗಾರ್ವ್ ಪಾಟರಿ, ಇದು 1813ರಿಂದ 1822ರವರೆಗೂ ಚಾಲ್ತಿಯಲ್ಲಿರುವುದರ ಜೊತೆಗೆ ಶುದ್ಧ ಪೋರ್ಸೆಲಿನ್ ನನ್ನು ತಯಾರಿಕೆ ಮಾಡುತ್ತಿತ್ತು. ಜೊತೆಗೆ 1920ರ ತನಕ ಉಪಯುಕ್ತವಾದ ಕುಂಬಾರಿಕೆಯ ತಯಾರಿಕೆಯಲ್ಲಿ ತೊಡಗಿತ್ತು. ಪೋರ್ಟ್ಮೇರಿಯನ್ ಪಾಟರಿ (1961ರಿಂದ) ವಾಸ್ತವಾಗಿ ವೇಲ್ಸ್ ನಲ್ಲಿ ತಯಾರಿಸಲಾಗಿಲ್ಲ.

ಕ್ರೀಡೆ[ಬದಲಾಯಿಸಿ]

ಕಾರ್ಡಿಫ್‌ನಲ್ಲಿರುವ ಮಿಲ್ಲೇನಿಯಂ ಕ್ರೀಡಾಂಗಣ.

ರಗ್ಬಿ ಯೂನಿಯನ್ ಹಾಗು ಫುಟ್ಬಾಲ್ ವೇಲ್ಸ್‌ನ ಅತ್ಯಂತ ಜನಪ್ರಿಯ ಕ್ರೀಡೆಗಳು. ವೇಲ್ಸ್, ಇತರ ಸಾಂವಿಧಾನಿಕ ದೇಶಗಳಂತೆ, ಫಿಫಾ ವರ್ಲ್ಡ್ ಕಪ್, ರಗ್ಬಿ ವರ್ಲ್ಡ್ ಕಪ್ ಹಾಗು ಕಾಮನ್ ವೆಲ್ತ್ ಪಂದ್ಯಾವಳಿ ಗಳಂತಹ ವಿಶ್ವದ ಪ್ರಮುಖ ಕ್ರೀಡಾ ಪಂದ್ಯಾವಳಿಗಳಲ್ಲಿ ಸ್ವತಂತ್ರ ಪ್ರಾತಿನಿಧ್ಯ ವಹಿಸಿದೆ (ಆದಾಗ್ಯೂ ಒಲಂಪಿಕ್ಸ್ ನಲ್ಲಿ ಗ್ರೇಟ್ ಬ್ರಿಟನ್ ನ ಮೂಲಕ ಪ್ರತಿನಿಧಿಸುತ್ತದೆ). ನ್ಯೂಜಿಲ್ಯಾಂಡ್ ನಂತೆ, ರಗ್ಬಿ ರಾಷ್ಟ್ರೀಯ ಐಕ್ಯತೆಯ ತಿರುಳಾಗಿದೆ, ಆದಾಗ್ಯೂ ಉತ್ತರ ವೇಲ್ಸ್ ನಲ್ಲಿ ಫುಟ್ಬಾಲ್ ಸಾಂಪ್ರದಾಯಿಕವಾಗಿ ಒಂದು ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ. ವೇಲ್ಸ್‌ಗೆ ರಗ್ಬಿ ಕ್ರೀಡೆಗೆ ತನ್ನದೇ ಆದ ಕಾರ್ಯನಿರ್ವಹಣಾ ಮಂಡಳಿಯಿದೆ ವೆಲ್ಷ್ ರಗ್ಬಿ ಯೂನಿಯನ್ ಹಾಗು ಫುಟ್ಬಾಲ್ ಗೆ ಫುಟ್ಬಾಲ್ ಅಸೋಸಿಯೇಶನ್ ಆಫ್ ವೇಲ್ಸ್ (ವಿಶ್ವದ ಮೂರನೇ ಹಳೆಯ ಸಂಸ್ಥೆ) ಹಾಗು ಇತರ ಕ್ರೀಡೆಗಳಿಗೂ ಸಹ ನಿರ್ವಹಣಾ ಮಂಡಳಿಗಳಿವೆ. ವೇಲ್ಸ್‌ನ ಹಲವು ಅಗ್ರ ಅಥ್ಲಿಟ್‌ಗಳು, ಪುರುಷ ಕ್ರೀಡಾಪಟುಗಳು ಹಾಗು ಮಹಿಳಾ ಕ್ರೀಡಾಪಟುಗಳಿಗೆ ಕಾರ್ಡಿಫ್‌ನಲ್ಲಿರುವ ವೇಲ್ಸ್ ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ ಹಾಗು ನ್ಯಾಷನಲ್ ಇನ್ಡೋರ್ ಅಥ್ಲೆಟಿಕ್ಸ್ ಸೆಂಟರ್ ನಲ್ಲಿ, ನ್ಯೂಪೋರ್ಟ್‌ನಲ್ಲಿರುವ ವೇಲ್ಸ್ ನ್ಯಾಷನಲ್ ವೆಲೋಡ್ರೋಮ್ ಹಾಗು ಸ್ವಾನ್ಸೀ ನಲ್ಲಿರುವ ವೇಲ್ಸ್ ನ್ಯಾಷನಲ್ ಪೂಲ್ ನಲ್ಲಿ ತರಬೇತಿ ನೀಡಲಾಗುತ್ತದೆ.

ದಿ ವೆಲ್ಷ್ ನ್ಯಾಷನಲ್ ರಗ್ಬಿ ಯುನಿಯನ್ ತಂಡ ವು ವಾರ್ಷಿಕ ಆರು ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸುತ್ತದೆ. ವೇಲ್ಸ್ ರಗ್ಬಿ ವರ್ಲ್ಡ್ ಕಪ್ ನ ಎಲ್ಲ ಪಂದ್ಯಾವಳಿಗಳಲ್ಲಿ ಭಾಗವಹಿಸಿ 1999ರ ಕ್ರೀಡಾ ಪಂದ್ಯಕ್ಕೆ ಆತಿಥೇಯ ನೀಡಿತು. ಜೊತೆಗೆ ಉದ್ಘಾಟನಾ ಸ್ಪರ್ಧೆಯಲ್ಲಿ ಮೂರನೇ ಸ್ಥಾನದೊಂದಿಗೆ ಉತ್ತಮ ಫಲಿತಾಂಶ ನೀಡಿತು. ವೆಲ್ಷ್ ತಂಡಗಳು ಯುರೋಪಿಯನ್ ಹೈನೆಕೆನ್ ಕಪ್ ಹಾಗು ಮ್ಯಾಗ್ನರ್ಸ್ ಲೀಗ್ (ರಗ್ಬಿ ಯುನಿಯನ್) ನಲ್ಲಿ ಐರ್ಲ್ಯಾಂಡ್ ಹಾಗು ಸ್ಕಾಟ್ಲ್ಯಾಂಡ್ ತಂಡಗಳ ಜೊತೆಯಲ್ಲಿ ಆಡುವುದರ ಜೊತೆಗೆ, EDF ಎನರ್ಜಿ ಕಪ್ ಹಾಗು ಯುರೋಪಿಯನ್ ಹೈನೆಕೆನ್ ಕಪ್ ನ್ನು ಸಹ ಆಡುತ್ತದೆ.

ಸಾಂಪ್ರದಾಯಿಕ ಕ್ಲಬ್ ತಂಡಗಳನ್ನು, 2003ರಲ್ಲಿ ಪ್ರಮುಖ ಸ್ಪರ್ಧೆಗಳಲ್ಲಿ ನಾಲ್ಕು ಪ್ರಾದೇಶಿಕ ತಂಡಗಳು ಬದಲಾವಣೆ ಮಾಡಿದವು. ಇದನ್ನು ನಂತರ ನಾಲ್ಕು ವೃತ್ತಿಪರ ಪ್ರದೇಶದ ತಂಡಗಳಾದ ಸ್ಕಾರ್ಲೆಟ್ಸ್, ಕಾರ್ಡಿಫ್ ಬ್ಲೂಸ್, ನ್ಯೂಪೋರ್ಟ್ ಗ್ವೆಂಟ್ ಡ್ರ್ಯಾಗನ್ಸ್ ಹಾಗು ಓಸ್ಪ್ರೆಯ್ಸ್ 2004ರಲ್ಲಿ ಬದಲಾವಣೆ ಮಾಡಿದವು. ಮಾಜಿ ಕ್ಲಬ್ ತಂಡಗಳು ಈಗ ಅರೆ-ವೃತ್ತಿಪರ ಕ್ಲಬ್ ಗಳಾಗಿ ತಮ್ಮ ಸ್ವಂತ ಲೀಗ್‌ನ್ನು ನಿರ್ವಹಿಸುವುದರ ಜೊತೆಗೆ ನಾಲ್ಕು ಪ್ರಾದೇಶಿಕ ತಂಡಗಳ ಜೊತೆ ಸಂಬಂಧವನ್ನು ಹೊಂದಿದೆ. ಅಂತರಾಷ್ಟ್ರೀಯ ಹಾಲ್ ಆಫ್ ಫೇಮ್ ನಲ್ಲಿ ವೇಲ್ಸ್ ನ ಹತ್ತು ಮಂದಿ ಸದಸ್ಯರಿದ್ದಾರೆ. ಇದರಲ್ಲಿ ಗಾರೆಥ್ ಎಡ್ವರ್ಡ್ಸ್, J.P.R. ವಿಲ್ಲಿಯಮ್ಸ್ ಹಾಗು ಗೆರಾಲ್ಡ್ ಡೇವಿಸ್ ಇವರಲ್ಲಿ ಸೇರಿದ್ದಾರೆ. ನ್ಯೂಪೋರ್ಟ್ ರಗ್ಬಿ ಕ್ಲಬ್ 1963ರ 'ಅಜೇಯ' ನ್ಯೂಜಿಲ್ಯಾಂಡ್ ರಗ್ಬಿ ತಂಡವನ್ನು ಸೋಲಿಸುವುದರೊಂದಿಗೆ ಒಂದು ಐತಿಹಾಸಿಕ ಗೆಲುವನ್ನು ಸಾಧಿಸಿತು. ಈ ನಡುವೆ ಲನೆಲ್ಲಿ ರಗ್ಬಿ ಕ್ಲಬ್ ಆಲ್ ಬ್ಲಾಕ್ಸ್ ತಂಡದ ವಿರುದ್ಧ ಅಕ್ಟೋಬರ್ 1972ರಲ್ಲಿ ಭರ್ಜರಿ ಜಯ ದಾಖಲಿಸಿತು.

ವೇಲ್ಸ್ ತನ್ನದೇ ಆದ ಫುಟ್ಬಾಲ್ ಲೀಗ್ ನ್ನು 1992ರಿಂದಲೂ ನಡೆಸುತ್ತಾ ಬಂದಿದೆ, ಆದಾಗ್ಯೂ, ಚಾರಿತ್ರಿಕ ಕಾರಣಗಳಿಂದಾಗಿ, ಎರಡು ವೆಲ್ಷ್ ಕ್ಲಬ್ ಗಳು (ಕಾರ್ಡಿಫ್ ಸಿಟಿ, ಹಾಗು ಸ್ವಾನ್ಸೀ ಸಿಟಿ)ಇಂಗ್ಲಿಷ್ ಫುಟ್ಬಾಲ್ ಲೀಗ್ ನಲ್ಲಿ ಆಡುತ್ತವೆ ಹಾಗು ಮತ್ತೆ ನಾಲ್ಕು ವೆಲ್ಷ್ ಕ್ಲಬ್‌ಗಳು ಅದರ ಪೂರಕ ಲೀಗ್ ಗಳಲ್ಲಿ ಭಾಗವಹಿಸುತ್ತವೆ. (ವ್ರೆಕ್ಸ್ಹಾಮ್, ನ್ಯೂಪೋರ್ಟ್ ಕೌಂಟಿ, ಮೆರ್ತಿರ್ ಟೈಡ್ಫಿಲ್, ಹಾಗು ಕಾಲ್ವಿನ್ ಬೇ).

ಇತ್ತೀಚಿನ ವರ್ಷಗಳಲ್ಲಿ ರಗ್ಬಿ ಲೀಗ್ ವೇಲ್ಸ್ ನಲ್ಲಿ ಹೊಸ ತಂಡಗಳು ಗಳಿಸುತ್ತಿರುವ ಜನಪ್ರಿಯತೆಯಿಂದಾಗಿ ಪುನಶ್ಚೇತನ ಹೊಂದಿವೆ.[೮೫] ವೇಲ್ಸ್ ನ ರಾಷ್ಟ್ರೀಯ ರಗ್ಬಿ ಲೀಗ್ ತಂಡ ವನ್ನು 1907ರಲ್ಲಿ ರೂಪಿಸಲಾಯಿತು. ಇದರೊಂದಿಗೆ ಇದು ರಾಷ್ಟ್ರೀಯ ತಂಡಗಳಲ್ಲೇ ಮೂರನೇ ಹಳೆಯ ತಂಡವೆಂದು ಖ್ಯಾತಿಯನ್ನು ಪಡೆದಿದೆ. ಕಳೆದ 1975ಕ್ಕೆ ಮುಂಚೆ ಹಾಗು 1980ರ ದಶಕದಲ್ಲಿವರ್ಲ್ಡ್ ಕಪ್ ನಲ್ಲಿ ಗ್ರೇಟ್ ಬ್ರಿಟನ್ ರಾಷ್ಟ್ರೀಯ ರಗ್ಬಿ ಲೀಗ್ ತಂಡ ಅದನ್ನು ಪ್ರತಿನಿಧಿಸಿತ್ತು. ಆದಾಗ್ಯೂ ತಂಡವು 1975, 1995 ಹಾಗು 2000ದ ಸ್ಪರ್ಧೆಗಳಲ್ಲಿ ಭಾಗವಹಿಸಿತ್ತು. ಕೊನೆಯ ಎರಡು ಸ್ಪರ್ಧೆಗಳಲ್ಲಿ ತಂಡವು ಸೆಮಿ-ಫೈನಲ್ಸ್ ಹಂತವನ್ನು ಪ್ರವೇಶಿಸಿತ್ತು. ಆದರೆ [[2008ರ ಪಂದ್ಯಾವಳಿಯಲ್ಲಿ ಹತ್ತು ಲಭ್ಯ ಸ್ಥಾನ|2008ರ ಪಂದ್ಯಾವಳಿ[[ಯಲ್ಲಿ ಹತ್ತು ಲಭ್ಯ ಸ್ಥಾನ]]]]ಗಳಿಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ಬ್ರಿಜ್‌ಎಂಡ್ ಮೂಲದ ವೃತ್ತಿಪರ ರಗ್ಬಿ ಲೀಗ್ ಕ್ಲಬ್ ಸೆಲ್ಟಿಕ್ ಕ್ರುಸೆಡರ್ಸ್ 2006ರಲ್ಲಿ ನ್ಯಾಷನಲ್ ಲೀಗ್ ಟು ಗೆ ಸೇರ್ಪಡೆಗೊಂಡಿತು. ತಂಡವನ್ನು 2008ರಲ್ಲಿ ನ್ಯಾಷನಲ್ ಲೀಗ್ ಒನ್ ಗೆ ಭಡ್ತಿ ನೀಡಲಾಯಿತು. ಇದರೊಂದಿಗೆ 2009ರಿಂದ ತಂಡವು ಸೂಪರ್ ಲೀಗ್ ನಲ್ಲಿ ಭಾಗವಹಿಸುತ್ತಿದೆ.

ಸೆಲ್ಟಿಕ್ ಕ್ರುಸೆಡರ್ಸ್ ವ್ರೆಕ್ಸ್ಹಾಮ್ ನಲ್ಲಿರುವ ರೇಸ್ ಕೋರ್ಸ್ ಗ್ರೌಂಡ್ ಗೆ 2010ರಲ್ಲಿ ಸ್ಥಳ ಬದಲಾವಣೆ ಮಾಡಿಕೊಳ್ಳುವುದರ ಜೊತೆಗೆ ಕ್ರುಸೆಡರ್ಸ್ ರಗ್ಬಿ ಲೀಗ್ ಎಂದು ತನ್ನ ಹೆಸರನ್ನು ಬದಲಾಯಿಸಿಕೊಂಡಿತು. ವೇಲ್ಸ್ ಈಗ ನೀತ್‌‍ನಲ್ಲಿ ನೆಲೆಹೊಂದಿರುವ ಎರಡನೇ ವೃತ್ತಿಪರ ರಗ್ಬಿ ಲೀಗ್ ಕ್ಲಬ್ ಆದ ಸೌತ್ ವೇಲ್ಸ್ ಸ್ಕಾರ್ಪಿಯನ್ಸ್ ಗೆ ತವರೂರಾಗಿದೆ. ಕ್ಲಬ್ ನೀತ್ ನಲ್ಲಿ ಸ್ಥಾಪಿತವಾಗಿದೆ. ಇವರು 2010ರ ಚಾಂಪಿಯನ್ಸ್ ಒನ್ ನಲ್ಲಿ ತಮ್ಮ ಮೊದಲ ಪಂದ್ಯವನ್ನು ಆಡಲಿದ್ದಾರೆ. ಬ್ರಿಜ್ ಎಂಡ್ ನಲ್ಲೇ ಸ್ಥಾಪಿಸ್ತವಾಗಿರುವ ಕ್ರುಸೆಡರ್ಸ್ ಕೊಲ್ಟ್ಸ್, ರಗ್ಬಿ ಲೀಗ್ ಕಾನ್ಫರೆನ್ಸ್ ನ ರಾಷ್ಟ್ರೀಯ ವಿಭಾಗಕ್ಕೆ ಆಡುತ್ತಾರೆ. ಕಳೆದ 2003ರಲ್ಲಿ ಪ್ರಾರಂಭವಾದ ರಗ್ಬಿ ಲೀಗ್ ಕಾನ್ಫರೆನ್ಸ್ ವೆಲ್ಷ್ ಪ್ರೀಮಿಯರ್ ಡಿವಿಷನ್‌ನಲ್ಲಿ ಎಂಟು ತಂಡಗಳು ಸ್ಪರ್ಧಿಸುತ್ತವೆ. ಬ್ರಿಜ್ ಎಂಡ್ ಬ್ಲೂ ಬುಲ್ಸ್ ಹಾಗು ಕಾರ್ಡಿಫ್ ಡೆಮಾನ್ಸ್ ತಂಡಗಳು ಅತ್ಯಂತ ಯಶಸ್ವೀ ತಂಡಗಳೆನಿಸಿಕೊಂಡಿವೆ.

ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ಹಾಗು ವೇಲ್ಸ್ ಒಂದೇ ತಂಡವಾಗಿ ಪ್ರತಿನಿಧಿಸುತ್ತವೆ. ಇದು ಇಂಗ್ಲೆಂಡ್ ಅಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ (ECB) ನ ಆಡಳಿತದಲ್ಲಿದೆ. ಇದರಲ್ಲಿ ಮತ್ತೊಂದು ಪ್ರತ್ಯೇಕ ವೇಲ್ಸ್ ತಂಡ ವಿದೆ, ಇದು ಸಾಂದರ್ಬಿಕವಾಗಿ ಸೀಮಿತ-ಓವರ್‌ಗಳ ಸ್ಥಳೀಯ ಸ್ಪರ್ಧೆಯಲ್ಲಿ ಭಾಗವಹಿಸುತ್ತವೆ. ಇಂಗ್ಲೆಂಡ್ ಹಾಗು ವೇಲ್ಸ್ ಕೌಂಟಿ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸುವ ಏಕೈಕ ವೆಲ್ಷ್ ಸ್ಪರ್ಧಿಯೆಂದರೆ ಗ್ಲಾಮೋರ್ಗನ್ ಕೌಂಟಿ ಕ್ರಿಕೆಟ್ ಕ್ಲಬ್. ಇಂಗ್ಲಿಷ್ ಮೈನರ್ ಕೌನ್ಟೀಸ್ಸ್ಪರ್ಧೆಯಲ್ಲಿ ಒಂದು ವೇಲ್ಸ್ ತಂಡವು ಭಾಗವಹಿಸುತ್ತದೆ. ಆದಾಗ್ಯೂ ಇತ್ತೀಚಿಗೆ ವೆಲ್ಷ್ ಆಟಗಾರರು (ಉದಾಹರಣೆಗೆ ಸೈಮನ್ ಜೋನ್ಸ್) ಇಂಗ್ಲೆಂಡ್ ತಂಡಕ್ಕೆ ಆಡಬೇಕೇ ಹೊರತು ಇಂಗ್ಲೆಂಡ್ ಹಾಗು ವೇಲ್ಸ್ ತಂಡಕ್ಕೆ ಅಲ್ಲ ಎಂಬ ಬಗ್ಗೆ ಚರ್ಚೆಗಳು ಉದ್ಭವಿಸಿವೆ.

ಬ್ಯಾಟ್ ಹಾಗು ಬಾಲ್ ನಿಂದ ಆಡುವ ವೇಲ್ಸ್ ನ ಮತ್ತೊಂದು ಕ್ರೀಡೆಯೆಂದರೆ ಬ್ರಿಟಿಶ್ ಬೇಸ್ ಬಾಲ್. ಈ ಆಟವು ಮುಖ್ಯವಾಗಿ ಕಾರ್ಡಿಫ್ ಹಾಗು ನ್ಯೂಪೋರ್ಟ್ ನಗರಗಳಿಗೆ ಮಾತ್ರ ಸೀಮಿತವಾಗಿದೆ. ಈ ಎರಡೂ ನಗರಗಳು ದೀರ್ಘವಾದ ಬೇಸ್ ಬಾಲ್ ಸಂಪ್ರದಾಯಗಳನ್ನು ಹೊಂದಿದೆ. ಈ ಆಟವು ವೆಲ್ಷ್ ಬೇಸ್ ಬಾಲ್ ಯೂನಿಯನ್ ನ ನಿಯಂತ್ರಣದಲ್ಲಿದೆ.

ಐಲ್ ಆಫ್ ಆಂಗ್ಲೇಸೇಯ್/ ವೈನಯ್ಸ್ ಮಾನ್ ಇಂಟರ್ ನ್ಯಾಷನಲ್ ಐಲ್ಯಾಂಡ್ ಗೇಮ್ಸ್ ಅಸೋಸಿಯೇಶನ್ ನ ಒಂದು ಸದಸ್ಯ ದ್ವೀಪವಾಗಿದೆ. ಕಳೆದ 2005ರಲ್ಲಿ ಶೆಟ್ಲ್ಯಾಂಡ್ ದ್ವೀಪದಲ್ಲಿ ಹಮ್ಮಿಕೊಳ್ಳಲಾದ ಕ್ರೀಡಾ ಪಂದ್ಯಾವಳಿಗಳಲ್ಲಿ, ಐಲ್ ಆಫ್ ಆಂಗ್ಲೇಸೇಯ್/ವೈನಯ್ಸ್ ಮಾನ್ 4 ಚಿನ್ನ, 2 ಬೆಳ್ಳಿ ಹಾಗು 2 ಕಂಚಿನ ಪದಕಗಳೊಂದಿಗೆ ಪದಕಗಳ ಪಟ್ಟಿಯಲ್ಲಿ 11ನೇ ಸ್ಥಾನ ಪಡೆಯಿತು.

ಚಿತ್ರ:WalesPNGRL.JPG
ಇಂಗ್ಲೆಂಡ್‌ನ ಕುಮುಲ್ಸ್ ಪ್ರವಾಸದಲ್ಲಿ ವೇಲ್ಸ್ ಪಪುವ ನ್ಯೂ ಜಿನಿಯ ವಿರುದ್ಧ ರಗ್ಬಿ ಲೀಗ್‌ನಲ್ಲಿ ಆಡಿತು. ಪಂದ್ಯವು ವೇಲ್ಸ್ ನ ಪರವಾಗಿ 50-10 ಅಂಕಗಳಿಂದ ಕೊನೆಗೊಂಡಿತು.

ವೇಲ್ಸ್ ನಲ್ಲಿ ಹಲವಾರು ವಿಶ್ವ ದರ್ಜೆಯ ಸ್ನೂಕರ್ ಆಟಗಾರರರಿದ್ದಾರೆ, ಉದಾಹರಣೆಗೆ ರೇಯ್ ರೆರ್ಡನ್, ಟೆರ್ರಿ ಗ್ರಿಫ್ಫಿಥ್ಸ್, ಮಾರ್ಕ್ ವಿಲ್ಲಿಯಮ್ಸ್, ಮ್ಯಾಥ್ಯೂ ಸ್ಟೀವನ್ಸ್ ಹಾಗು ರಯಾನ್ ಡೇ. ಕ್ರೀಡೆಯಲ್ಲಿ ಹೆಚ್ಚಿನ ಜನರು ಹವ್ಯಾಸದಿಂದ ಭಾಗವಹಿಸುತ್ತಾರೆ. ದೇಶದ ಒರಟಾದ ಭೂಪ್ರದೇಶವು ರಾಲಿ ಡ್ರೈವಿಂಗ್ ಗೆ ಅವಕಾಶ ಮಾಡಿಕೊಟ್ಟಿದೆ ಹಾಗು ವೇಲ್ಸ್ ವರ್ಲ್ಡ್ ರಾಲಿ ಚಾಂಪಿಯನ್ ಶಿಪ್ ನ ಅಂತಿಮ ಸ್ಪರ್ಧೆಗೆ ಆತಿಥ್ಯ ವಹಿಸಿದೆ. ಗ್ಲಮೋರ್ಗನ್ ಕೌಂಟರಿ ಕ್ರಿಕೆಟ್ ಸ್ಪರ್ಧೆಗಳಲ್ಲಿ ಸ್ಪರ್ಧಿಸುತ್ತದೆ ಹಾಗು ಕಾರ್ಡಿಫ್ ಡೆವಿಲ್ಸ್ ಬ್ರಿಟಿಶ್ ಐಸ್ ಹಾಕಿ ಯ ಒಂದು ಬಲಶಾಲಿ ತಂಡವಾಗಿತ್ತು. ವೇಲ್ಸ್ ಹಲವಾರು ಅಥ್ಲೆಟ್ ಗಳನ್ನೂ ಹುಟ್ಟುಹಾಕಿದೆ, ಇವರೆಲ್ಲರೂ ವಿಶ್ವದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಇವರಲ್ಲಿ 110 ಮೀ ಹರ್ಡಲ್ಸ್ ಓಟಗಾರ ಕೋಲಿನ್ ಜಾಕ್ಸನ್ ಸೇರಿದ್ದಾನೆ. ಈತ ಮಾಜಿ ವಿಶ್ವ ದಾಖಲೆಯನ್ನು ಹೊಂದುವುದರ ಜೊತೆಗೆ ಅಸಂಖ್ಯಾತ ಒಲಂಪಿಕ್, ವಿಶ್ವ ಹಾಗು ಯುರೋಪಿಯನ್ ಪದಕಗಳನ್ನು ಗೆದ್ದಿದ್ದಾನೆ. ಈತನ ಜೊತೆಗೆ ಟನ್ನಿ ಗ್ರೆಯ್-ಥಾಂಪ್ಸನ್ ಪ್ಯಾರಲಿಂಪಿಕ್ಸ್ ಚಿನ್ನದ ಪದಕಗಳನ್ನು ಗೆಲ್ಲುವುದರ ಜೊತೆಗೆ ಮ್ಯಾರಥಾನ್ ನಲ್ಲಿ ಯಶಸ್ವಿಯಾಗಿದ್ದಾಳೆ.

ವೇಲ್ಸ್ ಹಲವಾರು ವಿಶ್ವ ದರ್ಜೆಯ ಬಾಕ್ಸರ್ ಗಳನ್ನು ಹುಟ್ಟುಹಾಕಿದೆ. ಜೋ ಕಾಲ್ಜಾಗೆ, ಅರೆ-ವೆಲ್ಷ್, ಅರೆ-ಇಟಾಲಿಯನ್ ಹುಟ್ಟಿನ ಬಾಕ್ಸರ್ 1997ರಿಂದಲೂ WBOವರ್ಲ್ಡ್ ಸುಪರ್-ಮಿಡಲ್ ವೆಯಿಟ್ ಚಾಂಪಿಯನ್ ಎನಿಸಿಕೊಂಡಿದ್ದಾನೆ. ಈತ ಇತ್ತೀಚಿಗೆ WBA, WBC ಹಾಗು ರಿಂಗ್ ಮ್ಯಾಗಜಿನ್ ಸುಪರ್ ಮಿಡಲ್ ವೆಯಿಟ್ ಹಾಗು ರಿಂಗ್ ಮ್ಯಾಗಜಿನ್ ಲೈಟ್-ಹೆವಿವೆಯಿಟ್ ಪ್ರಶಸ್ತಿಗಳನ್ನು ಗಳಿಸಿದ್ದಾನೆ. ಮಾಜಿ ವಿಶ್ವ ಚಾಂಪಿಯನ್ ಗಳಲ್ಲಿ ಎನ್ಜೊ ಮ್ಯಾಕರಿನೆಲ್ಲಿ, ಗಾವಿನ್ ರೀಸ್, ಕೋಲಿನ್ ಜೋನ್ಸ್, ಹೊವರ್ಡ್ ವಿನ್ಸ್ಟೋನ್, ಪರ್ಸಿ ಜೋನ್ಸ್, ಜಿಮ್ಮಿ ವೈಲ್ಡೆ, ಸ್ಟೀವ್ ರೋಬಿನ್ಸನ್ ಹಾಗು ರಾಬಿ ರೇಗನ್ ಕೂಡ ಸೇರಿದ್ದಾರೆ.

ಇಬ್ಬರು ವೆಲ್ಷ್ ಚಾಲಕರು ಫಾರ್ಮ್ಯುಲಾ ಒನ್ ಚಾಂಪಿಯನ್ ಶಿಪ್ ನಲ್ಲಿ ಸ್ಪರ್ಧಿಸಿದ್ದಾರೆ: ಮೊದಲನೆಯವರು ಅಲನ್ ರೀಸ್ 1967ರ ಬ್ರಿಟಿಶ್ ಗ್ರಾಂಡ್ ಪ್ರಿಕ್ಸ್. ಈತ ಸ್ಪರ್ಧೆಯಲ್ಲಿ ಒಂಬತ್ತನೇ ಸ್ಥಾನ ಗಳಿಸುವುದರ ಜೊತೆಗೆ, ವಿಜೇತರಾದ ಜಿಮ್ ಕ್ಲಾರ್ಕ್ ಗಿಂತ ನಾಲ್ಕು ಅಂಕ ಹಿಂದಿದ್ದರು. ಈ ಇಬ್ಬರು ಚಾಲಕರಲ್ಲಿ ಟಾಮ್ ಪ್ರೈಸ್ ಗಮನ ಸೆಳೆದಿದ್ದಾರೆ, ಇವರು 1975ರ ಬ್ರಿಟಿಶ್ ಗ್ರಾಂಡ್ ಪ್ರಿಕ್ಸ್ ನಲ್ಲಿ ಎರಡನೇ ಸ್ಥಾನ ಗಳಿಸುವುದರ ಜೊತೆಗೆ ಪೋಲ್ ಸ್ಥಾನಕ್ಕೆ (ಮೋಟಾರ್ ರೇಸ್ ನ ಆರಂಭದಲ್ಲಿನ ಅತ್ಯಂತ ಅನುಕೂಲಕರವಾದ ಸ್ಥಾನ) ಅರ್ಹತೆಯನ್ನು ಪಡೆದಿದ್ದರು. ಕಾರ್ಯಕರ್ತ ಮಾರ್ಷಲ್ ಜಾನ್ಸೇನ್ ವ್ಯಾನ್ ವುರೆನ್ ಗೆ ಡಿಕ್ಕಿ ಹೊಡೆದು ಇಬ್ಬರೂ ಸಾವನ್ನಪ್ಪಿದಾಗ ಪ್ರೈಸ್ ವೃತ್ತಿಜೀವನವು ಮೊಟಕಾಯಿತು. ಫಾರ್ಮ್ಯುಲಾ ಒನ್ ಮಾದರಿಯಲ್ಲೇ, ವೇಲ್ಸ್ ವರ್ಲ್ಡ್ ರಾಲಿ ಚಾಂಪಿಯನ್ ಶಿಪ್ ನಲ್ಲಿ ಸ್ವಲ್ಪಮಟ್ಟಿಗಿನ ಗಮನವನ್ನು ಸೆಳೆದಿದೆ. ಜೊತೆಗೆ ಇಬ್ಬರು ಚಾಂಪಿಯನ್ ಶಿಪ್ ವಿಜೇತ ಸಹ-ಚಾಲಕರನ್ನು ತಯಾರು ಮಾಡಿದೆ, ನಿಕ್ಕಿ ಗ್ರಿಸ್ಟ್, ಈತ ಕಾಲಿನ್ ಮ್ಯಾಕ್ರೆ ಗೆ 1995ರ ಚಾಂಪಿಯನ್ ಶಿಪ್ ಗೆಲ್ಲುವಲ್ಲಿ ಸಹಾಯ ಮಾಡಿದ ಹಾಗು ಫಿಲ್ ಮಿಲ್ಲ್ಸ್, 2003ರ ಪ್ರಶಸ್ತಿಯನ್ನು ತನ್ನ ಮಡಿಲಿಗೆ ಹಾಕಿಕೊಳ್ಳುವಲ್ಲಿ ಪೀಟರ್ ಸೋಲ್ಬರ್ಗ್ ಗೆ ಸಹಾಯ ಮಾಡಿದ. ವೇಲ್ಸ್, ಬ್ರಿಟಿಶ್ ಹಾಗು ವಿಶ್ವ ರಾಲಿ ಚಾಂಪಿಯನ್ ಶಿಪ್ ನ ಅಂತಿಮ ಸುತ್ತಿನ ಪಂದ್ಯಕ್ಕೆ ಆತಿಥೇಯ ನೀಡುತ್ತಿದೆ.

ಫ್ರೆಡ್ಡಿ ವಿಲ್ಲಿಯಮ್ಸ್ ವಿಶ್ವ ಮೋಟಾರ್ ಸೈಕಲ್ ಸ್ಪೀಡ್‌ವೇನಲ್ಲಿ ಎರಡು ಬಾರಿ ಚಾಂಪಿಯನ್ ಆಗಿದ್ದಾರೆ - 1950ರಲ್ಲಿ ಹಾಗು 1953ರಲ್ಲಿ - ಹಾಗು ದೇಶವು ಒಂದು ವೃತ್ತಿಪರ ಸ್ಪೀಡ್‌ವೇ ತಂಡ ನ್ಯೂಪೋರ್ಟ್ ವಾಸ್ಪ್ಸ್ ನ್ನು ಒಳಗೊಂಡಿದೆ. ಕಾರ್ಡಿಫ್ಮಿಲ್ಲೇನಿಯಂ ಸ್ಟೇಡಿಯಂ ವಾರ್ಷಿಕ ಬ್ರಿಟಿಶ್ ಸ್ಪೀಡ್ ವೇ ಗ್ರಾಂಡ್ ಪ್ರಿಕ್ಸ್ನ ಆತಿಥ್ಯ ವಹಿಸುತ್ತದೆ. ಯುನೈಟೆಡ್ ಕಿಂಗ್ಡಮ್‌ನ ವರ್ಲ್ಡ್ ಚಾಂಪಿಯನ್‌ಶಿಪ್ ಸುತ್ತಿನ ಸ್ಪರ್ಧೆಯಾಗಿದೆ.

ಇತರ ಗಮನಾರ್ಹ ವೆಲ್ಷ್ ಕ್ರೀಡಾಪಟುಗಳಲ್ಲಿ 11 ಬಾರಿ ಚಿನ್ನದ ಪದಕ ಗೆದ್ದ ಪ್ಯಾರಲಿಂಪಿಕ್ಸ್ ಅಥ್ಲೆಟ್ ಟನ್ನಿ ಗ್ರೆಯ್-ಥಾಂಪ್ಸನ್, ಫುಟ್ಬಾಲ್ ಆಟಗಾರ ರಯಾನ್ ಗಿಗ್ಸ್- ಈತ ಇಂಗ್ಲಿಷ್ ಪ್ರೀಮಿಯರ್ ಶಿಪ್‌ನಲ್ಲಿ ಮಾಂಚೆಸ್ಟರ್ ಯುನೈಟೆಡ್ ತಂಡಕ್ಕಾಗಿ ಆಡುತ್ತಾನೆ, BDO ವಿಶ್ವ ಡಾರ್ಟ್ಸ್ ಚಾಂಪಿಯನ್ಸ್ ರಿಚಿ ಬರ್ನೆಟ್ ಹಾಗು ಮಾರ್ಕ್ ವೆಬ್ಸ್ಟರ್, ಬೀಜಿಂಗ್ 2008 ಒಲಂಪಿಕ್ ಚಿನ್ನದ ಪದಕ ವಿಜೇತರು ಹಾಗು ಅಂತಾರಾಷ್ಟ್ರೀಯ ಚಾಂಪಿಯನ್ ಸೈಕಲ್ ಸವಾರರಾದ ನಿಕೋಲ್ ಕುಕ್ (ರೋಡ್ ರೇಸ್), ಈಕೆ 2006 ಹಾಗು 2007ರ ಗ್ರಾಂಡೆ ಬೌಕ್ಲೆ - ಮಹಿಳೆಯರ ಟೂರ್ ಡಿ ಫ್ರಾನ್ಸ್ ನ ವಿಜೇತೆ. ಹಾಗು ಗೆರೈಂಟ್ ಥಾಮಸ್ (ಟೀಮ್ ಪರ್ಸ್ಯೂಟ್), ಈತ 2007ರ ಟೂರ್ ಡಿ ಫ್ರಾನ್ಸ್ ನಲ್ಲಿ ಪ್ರದರ್ಶನ ನೀಡಿದ. ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಶೂಟಿಂಗ್ ಪಂದ್ಯದಲ್ಲಿ ಚಿನ್ನ ಹಾಗು ಕಂಚಿನ ಪದಕ ವಿಜೇತರಾದ ಡೇವ್ ಫೆಲ್ಪ್ಸ್, ಬೀಜಿಂಗ್ 2008 ಒಲಂಪಿಕ್ ರಜತ ಪದಕ ವಿಜೇತ (10 ಕಿಮೀ ಮ್ಯಾರಥಾನ್)ಹಾಗು ಅಥೆನ್ಸ್ 2004 ಒಲಂಪಿಕ್ ಕಂಚಿನ ಪದಕ ವಿಜೇತ (1500 ಮೀ ಫ್ರೀ ಸ್ಟೈಲ್) ಈಜುಪಟು ಡೇವಿಡ್ ಡೇವಿಸ್, ಸೈಕ್ಲಿಸ್ಟ್ ಸೈಮನ್ ರಿಚರ್ಡ್ಸನ್, [[2008ರ ಬೇಸಿಗೆ ಪ್ಯಾರಲಿಂಪಿಕ್ಸ್‌ನಲ್ಲಿ ಎರಡು ಚಿನ್ನದ ಪದಕ ವಿಜೇತ(1 ಕಿಮೀ/೩ ಕಿಮೀ ಟೈಮ್ ಟ್ರಯಲ್) ಮುಂತಾದವರು ಸೇರಿದ್ದಾರೆ.{1/}|2008ರ ಬೇಸಿಗೆ ಪ್ಯಾರಲಿಂಪಿಕ್ಸ್‌ನಲ್ಲಿ ಎರಡು ಚಿನ್ನದ ಪದಕ ವಿಜೇತ(1 ಕಿಮೀ/೩ ಕಿಮೀ ಟೈಮ್ ಟ್ರಯಲ್) ಮುಂತಾದವರು ಸೇರಿದ್ದಾರೆ.{1/}[೮೬]]]

ಕಳೆದ 2006ರಿಂದ, ವೇಲ್ಸ್ ತನ್ನದೇ ಆದ ವೃತ್ತಿಪರ ಗಾಲ್ಫ್ ಪ್ರವಾಸವನ್ನು ಹಮ್ಮಿಕೊಳ್ಳುತ್ತಿದೆ, ಡ್ರ್ಯಾಗನ್ ಟೂರ್. ವೆಲ್ಷ್ ನ ಗಮನಾರ್ಹ ಗಾಲ್ಫ್ ಆಟಗಾರರೆಂದರೆ ಬ್ರಿಯನ್ ಹಗ್ಗೆಟ್, ಐಯಾನ್ ವೂಸ್ನಾಮ್, ಬ್ರಾಡ್ಲೆ ಡ್ರೆಡ್ಜ್ ಹಾಗು ಫಿಲಿಪ್ ಪ್ರೈಸ್. ನ್ಯೂಪೋರ್ಟ್ ನಲ್ಲಿರುವ ಸೆಲ್ಟಿಕ್ ಮ್ಯಾನರ್ 2010ರ ರೈಡರ್ ಕಪ್ ಗೆ ಆತಿಥೇಯ ನೀಡುತ್ತದೆ.

ವೇಲ್ಸ್ ಪರ್ವತಾರೋಹಣಕ್ಕೆ ಹೆಸರುವಾಸಿಯಾಗಿದೆ.

ವೇಲ್ಸ್ ನ್ನು ಸರ್ಫಿಂಗ್ ಪ್ರಾರಂಭಗೊಂಡ ಮೊದಲ ದೇಶವೆಂದು ಪರಿಗಣಿಸಲಾಗುತ್ತದೆ.[೮೭]

ಸಮ‌ೂಹ ಮಾಧ್ಯಮ[ಬದಲಾಯಿಸಿ]

ವೆಲ್ಷ್ ರಾಷ್ಟ್ರೀಯ ಮಾಧ್ಯಮಕ್ಕೆ ಕಾರ್ಡಿಫ್ ತವರೂರೆನಿಸಿದೆ. BBC ವೇಲ್ಸ್ ಕಾರ್ಡಿಫ್ ನಲ್ಲಿರುವ ಲಾನ್ಡಫ್ಫ್ ನಲ್ಲಿ ನೆಲೆಹೊಂದಿದೆ. ಇದು BBC ಒನ್ ಹಾಗು BBC ಟು ವಾಹಿನಿಗಳಿಗೆ ವೆಲ್ಷ್-ಆಧಾರಿತ ಕಾರ್ಯಕ್ರಮಗಳನ್ನು ನಿರ್ಮಿಸಿಕೊಡುತ್ತದೆ. BBC 2W, BBC ಟು ನ ವೆಲ್ಷ್ ಡಿಜಿಟಲ್ ರೂಪಾಂತರವಾಗಿದೆ, ಹಾಗು ವೇಲ್ಸ್ ಆಧಾರಿತ ನಿರ್ದಿಷ್ಟ ಕಾರ್ಯಕ್ರಮಗಳನ್ನು ಪ್ರತಿ ವಾರ ರಾತ್ರಿ 8.30pm ಹಾಗು 10pmವರೆಗೂ ಬಿತ್ತರಿಸುತ್ತದೆ. ITV UKಯ ಪ್ರಮುಖ ವಾಣಿಜ್ಯ ಪ್ರಸರಣಾ ವಾಹಿನಿಯು ವೆಲ್ಷ್-ಆಧಾರಿತ ಕಾರ್ಯಕ್ರಮಗಳನ್ನು ITV ವೇಲ್ಸ್ ಹೆಸರಿನಿಂದ ಪ್ರಸಾರ ಮಾಡುತ್ತದೆ. ಕಾರ್ಡಿಫ್ ನಲ್ಲಿರುವ ಕಲ್ವರ್ ಹೌಸ್ ಕ್ರಾಸ್ ನಲ್ಲಿ ವಾಹಿನಿಯ ಸ್ಟುಡಿಯೋ‌ಗಳು ನೆಲೆಗೊಂಡಿವೆ. ಕಾರ್ಡಿಫ್ ನ ಲಾನಿಶೆನ್ ನಲ್ಲಿ S4C ವಾಹಿನಿಯು ನೆಲೆಗೊಂಡಿದ್ದು ಇದು ಹೆಚ್ಚಾಗಿ ವೆಲ್ಷ್ ಭಾಷೆಯ ಕಾರ್ಯಕ್ರಮಗಳನ್ನು ಒತ್ತಡದ ಸಮಯಗಳಲ್ಲಿ ಪ್ರಸಾರ ಮಾಡುತ್ತದೆ, ಆದರೆ ಇತರ ಸಮಯದಲ್ಲಿ ಚಾನೆಲ್ 4 ಜೊತೆಗೆ ಇಂಗ್ಲಿಷ್-ಭಾಷೆಯ ವಿಷಯವನ್ನು ಹಂಚಿಕೊಳ್ಳುತ್ತದೆ. S4C ಡಿಜಿಡೋಲ್ (S4C ಡಿಜಿಟಲ್), ಇನ್ನೊಂದು ಭಾಗದಲ್ಲಿ, ಹೆಚ್ಚಾಗಿ ವೆಲ್ಷ್ ಕಾರ್ಯಕ್ರಮಗಳನ್ನೇ ಬಿತ್ತರಿಸುತ್ತದೆ. ಚ್ಯಾನಲ್ 4 ಹಾಗು ಚ್ಯಾನಲ್ 5 ಇದೀಗ ಡಿಜಿಟಲ್ ಟೆಲಿವಿಷನ್ ಹಾಗು ಉಪಗ್ರಹದ ಮೂಲಕ ದೇಶದ ಹೆಚ್ಚಿನ ಭಾಗಗಳಲ್ಲಿ ದೊರೆಯುತ್ತದೆ.

BBC ರೇಡಿಯೋ ವೇಲ್ಸ್, ವೇಲ್ಸ್ ನ ಏಕೈಕ ರಾಷ್ಟ್ರೀಯ ಇಂಗ್ಲಿಷ್-ಭಾಷಾ ಬಾನುಲಿ ಕೇಂದ್ರವಾಗಿದೆ. ಇದೇ ರೀತಿಯಲ್ಲಿ BBC ರೇಡಿಯೋ ಸಿಮ್ರು ವೇಲ್ಸ್ ನುದ್ದಕ್ಕೂ ವೆಲ್ಷ್ ಭಾಷೆಯಲ್ಲಿ ಕಾರ್ಯಕ್ರಮಗಳನ್ನು ಬಿತ್ತರಿಸುತ್ತದೆ. ವೇಲ್ಸ್ ನುದ್ದಕ್ಕೂ ಹಲವಾರು ಸ್ವತಂತ್ರ ಬಾನುಲಿ ಕೇಂದ್ರಗಳಿವೆ. ಇದರಲ್ಲಿ ರೆಡ್ ಡ್ರ್ಯಾಗನ್ FM, ರೇಡಿಯೋ ಕಾರ್ಡಿಫ್, ದಿ ವೇವ್, ಸ್ವಾನ್ಸೀ ಸೌಂಡ್, ಹಾರ್ಟ್ ಚೆಶೈರ್ ಅಂಡ್ ನಾರ್ತ್ ಈಸ್ಟ್ ವೇಲ್ಸ್, ಹಾರ್ಟ್ ನಾರ್ತ್ ವೇಲ್ಸ್ ಕೋಸ್ಟ್, ನೇಶನ್ ರೇಡಿಯೋ, 102.5 ರೇಡಿಯೋ ಪೆಮ್ಬ್ರೋಕೆಶೈರ್, 97.1 ರೇಡಿಯೋ ಕಾರ್ಮಾರ್ಥನ್ಶೈರ್, ಹಾರ್ಟ್ ಸಿಮ್ರು, ರೇಡಿಯೋ ಸೆರೆಡಿಜಿಯೋನ್ ಹಾಗು ರಿಯಲ್ ರೇಡಿಯೋ ಗಳು ಸೇರಿವೆ.

ಬ್ರಿಟನ್ ನಲ್ಲಿ ಮಾರಾಟವಾಗುವ ಹಾಗು ಓದಲ್ಪಡುವ ರಾಷ್ಟ್ರೀಯ ದಿನಪತ್ರಿಕೆಗಳೇ ವೇಲ್ಸ್‌ನಲ್ಲೂ ಸಹ ಹೆಚ್ಚಿಗೆ ಮಾರಾಟವಾಗುತ್ತವೆ ಹಾಗು ಓದಲ್ಪಡುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಸ್ಕಾಟ್ಲ್ಯಾಂಡ್ ನಲ್ಲಿ ಹಲವು ದಿನಪತ್ರಿಕೆಗಳನ್ನು ಸ್ಕಾಟಿಷ್ ಮೂಲದ ಹೆಸರುಗಳನ್ನೂ ನೀಡಿ ಮರುಮುದ್ರಿಸಲಾಗುತ್ತದೆ. ವೇಲ್ಸ್-ಮೂಲದ ದಿನಪತ್ರಿಕೆಗಳಲ್ಲಿ: ಸೌತ್ ವೇಲ್ಸ್ ಎಕೋ , ಸೌತ್ ವೇಲ್ಸ್ ಆರ್ಗಸ್ , ಸೌತ್ ವೇಲ್ಸ್ ಇವಿನಿಂಗ್ ಪೋಸ್ಟ್ , ಲಿವರ್ ಪೂಲ್ ಡೈಲಿ ಪೋಸ್ಟ್ (ವೆಲ್ಷ್ ಆವೃತ್ತಿ), ಹಾಗು ವೈ ಸಿಮ್ರೋ , ಒಂದು ವೆಲ್ಷ್ ಭಾಷಾ ಪ್ರಕಟಣೆಗಳು ಒಳಗೊಂಡಿವೆ. ವೆಸ್ಟರ್ನ್ ಮೇಲ್ , ಸೌತ್ ವೇಲ್ಸ್ ನ ಒಂದು ಪ್ರಮುಖ ಸ್ಥಳೀಯ ದಿನಪತ್ರಿಕೆಯಾಗಿದೆ. ಇದು ವೇಲ್ಸ್ ಆನ್ ಸಂಡೇ ಯಲ್ಲಿ ಒಂದು ಭಾನುವಾರದ ಆವೃತ್ತಿಯನ್ನು ಒಳಗೊಂಡಿದೆ. ಎರಡೂ ದಿನಪತ್ರಿಕೆಗಳನ್ನು UKಯ ಅತಿ ದೊಡ್ಡ ದಿನಪತ್ರಿಕಾ ಸಂಸ್ಥೆ ಟ್ರಿನಿಟಿ ಮಿರ್ರರ್ ಪ್ರಕಟಿಸುತ್ತದೆ. ವೆಸ್ಟರ್ನ್ ಮೇಲ್ ಹಾಗು ಸೌತ್ ವೇಲ್ಸ್ ಎಕೋ ಗಳು ಕಾರ್ಡಿಫ್ ನಗರ ಕೇಂದ್ರ ದ ಥಾಮ್ಸನ್ ಹೌಸ್ ನಲ್ಲಿ ತಮ್ಮ ಕಚೇರಿಗಳನ್ನು ಹೊಂದಿರುತ್ತವೆ.

ವೆಲ್ಷ್ ಭಾಷೆಯ ಮೊದಲ ದಿನಪತ್ರಿಕೆ, ವೈ ಬಿಡ್ 3 ಮಾರ್ಚ್ 2008ರಲ್ಲಿ ಪ್ರಾರಂಭ ಮಾಡುವ ಯೋಜನೆಯನ್ನು ಹೊಂದಲಾಗಿತ್ತು.[೮೮] ಆದಾಗ್ಯೂ, 15 ಫೆಬ್ರವರಿ 2008ರಲ್ಲಿ, ವೈ ಬಿಡ್ ದಿನಪತ್ರಿಕೆಯನ್ನು ಪ್ರಾರಂಭಿಸುವ ಯೋಜನೆಯನ್ನು ಆರ್ಥಿಕ ಸಮಸ್ಯೆಗಳಿಂದಾಗಿ ಕೈಬಿಡಲಾಗಿದೆ ಎಂದು ಘೋಷಿಸಲಾಯಿತು.[೮೯].

ಇಂಗ್ಲಿಷ್-ಭಾಷಾ ನಿಯತಕಾಲಿಕಗಳ ಜೊತೆಯಲ್ಲೇ, ಹಲವಾರು ವೆಲ್ಷ್-ಭಾಷಾ ವಾರಪತ್ರಿಕೆ ಹಾಗು ದಿನಪತ್ರಿಕೆಗಳನ್ನು ಪ್ರಕಟಿಸಲಾಗುತ್ತದೆ. ವೇಲ್ಸ್ ನಲ್ಲಿ ಸುಮಾರು 20 ಮುದ್ರಣ ಸಂಸ್ಥೆಗಳಿವೆ. ಇವುಗಳು ಹೆಚ್ಚಾಗಿ ಇಂಗ್ಲಿಷ್ ಶೀರ್ಷಿಕೆಗಳೊಂದಿಗೆ ಪ್ರಕಟಣೆ ಮಾಡುತ್ತವೆ. ಆದಾಗ್ಯೂ, ವೇಲ್ಸ್ ನಲ್ಲಿ ಪ್ರತಿ ವರ್ಷ ಸುಮಾರು 500-600 ಪುಸ್ತಕಗಳನ್ನು ಪ್ರಕಟಿಸಲಾಗುತ್ತದೆ.[೯೦][not in citation given]

ವಿಶೇಷವಾಗಿ, ಇತ್ತೀಚಿನ ಜನಪ್ರಿಯ ಕಲ್ಟ್ ಕ್ಲಾಸಿಕ್ ಸರಣಿಯ ಮರುರೂಪ ಡಾಕ್ಟರ್ ಹೂ ಕಾರ್ಯಕ್ರಮವು ವೇಲ್ಸ್ ನಲ್ಲಿ (BBC ವೇಲ್ಸ್) ರೂಪುಗೊಳ್ಳುವುದರ ಜೊತೆಗೆ ಹಲವು ಸಂಚಿಕೆಗಳು ಕಾರ್ಡಿಫ್ ನಲ್ಲಿ ಚಿತ್ರಿಸಲಾಗಿದೆ. ಹೆಚ್ಚಿನ ಚಿತ್ರೀಕರಣ ಹಾಗು ನಿರ್ಮಾಣವು ವೇಲ್ಸ್ ನ ಸ್ಥಳಗಳಲ್ಲಿ ಮಾಡಲಾಗಿದೆ. ಇದು ವಿಶ್ವವ್ಯಾಪಿಯಾಗಿ ಅತ್ಯಾಶ್ಚರಕರ ರೀತಿಯಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಅದರ ಸಂಪೂರ್ಣವಾದ ಮುಂದಿನ ಭಾಗ ಟಾರ್ಚ್ ವುಡ್ ನ್ನು ಜಾನ್ ಬರ್ರೌಮ್ಯಾನ್ ಒದಗಿಸಿದರು. ಡಾಕ್ಟರ್ ಹೂ ಜೊತೆಗೆ ತಳುಕು ಹಾಕಿಕೊಂಡಿರುವ ಇದನ್ನೂ ಸಹ ಕಾರ್ಡಿಫ್ ನಲ್ಲಿ ಚಿತ್ರೀಕರಿಸಲಾಗಿದೆ.

ಆಹಾರ ಪದ್ಧತಿ[ಬದಲಾಯಿಸಿ]

ವೇಲ್ಸ್ 80% ರಷ್ಟು ಭೂ ಪ್ರದೇಶವು ಬೇಸಾಯಕ್ಕೆ ಬಳಕೆಯಾಗುತ್ತದೆ. ಆದಾಗ್ಯೂ, ಇದರಲ್ಲಿ ಒಂದು ಸಣ್ಣ ಭಾಗವು ಮಾತ್ರ ಬೇಸಾಯಕ್ಕೆ ಯೋಗ್ಯವಾದ ಭೂಮಿಯಾಗಿದೆ; ಉಳಿದ ವಿಸ್ತಾರವಾದ ಭೂಮಿಯು ಸ್ಥಿರವಾದ ಹುಲ್ಲುಗಾವಲನ್ನು ಅಥವಾ ಕುರಿ ಹಾಗು ಹಸುಗಳು ಮುಂತಾದ ಪ್ರಾಣಿಗಳ ಹಿಂಡಿಗೆ ಮೇಯಲು ಇರುವ ಒರಟಾದ ನೆಲವಾಗಿದೆ. ಆದಾಗ್ಯೂ ಮಾಂಸದ ಹಸುಗಳು ಹಾಗು ಹೈನು ದನಗಳನ್ನು ವಿಶೇಷವಾಗಿ ಕಾರ್ಮರ್ಥೆನ್‌ಶೈರ್ ಹಾಗು ಪೆಮ್ಬ್ರೋಕ್‌ಶೈರ್ನಲ್ಲಿ ವ್ಯಾಪಕವಾಗಿ ಸಾಕಲಾಗುತ್ತದೆ. ವೇಲ್ಸ್ ಕುರಿ ಸಾಕಣೆಗೆ ಹೆಸರುವಾಸಿಯಾಗಿದೆ, ಹೀಗಾಗಿ ವೆಲ್ಷ್ ಅಡುಗೆಯಲ್ಲಿ ಸಾಂಪ್ರದಾಯಿಕವಾಗಿ ಕುರಿಮರಿಮಾಂಸವನ್ನು ಬಳಕೆ ಮಾಡಲಾಗುತ್ತದೆ.

ಕೆಲವೊಂದು ಸಾಂಪ್ರದಾಯಿಕ ಅಡುಗೆಗಳಲ್ಲಿ ಲಾವೆರ್ ಬ್ರೆಡ್ (ಸಮುದ್ರದ ಜೊಂಡಿನಲ್ಲಿ ತಯಾರಿಸಿದಂತಹದು), ಬಾರ ಬ್ರಿತ್ (ಹಣ್ಣಿನ ಬ್ರೆಡ್), ಕಾವ್ಲ್( ಕುರಿಮರಿಯ ಮಾಂಸದ ಭಕ್ಷ್ಯ) ಹಾಗು ಕಾವ್ಲ್ ಸೆನ್ನಿನ್ (ಲೀಕ್ ಸೂಪ್), ವೆಲ್ಷ್ ಕೇಕುಗಳು ಹಾಗು ವೆಲ್ಷ್ ಲ್ಯಾಂಬ್ ಗಳು ಸೇರಿವೆ. ಕೆಲವೊಂದು ಬಾರಿ ಬೆಳಗಿನ ಉಪಹಾರದಲ್ಲಿ ಮಾಂಸದ ತುಂಡಿನ ಜೊತೆಗೆ ಕಾಕಲ್ ಗಳನ್ನು ನೀಡಲಾಗುತ್ತದೆ. [೩]

ಕಳೆದ 2005ರ ನ್ಯಾಷನಲ್ ಕ್ಯೂಲಿನರಿ ಟೀಮ್ಸ್(ಪಾಕಶಾಲೆಯ ತಂಡಗಳು) ಲಕ್ಸಂಬರ್ಗ್ ನಲ್ಲಿ ನಡೆದ ಅಡುಗೆ ಸ್ಪರ್ಧೆಗಳಲ್ಲಿ ಕ್ಯೂಲಿನರಿ ವರ್ಲ್ಡ್ ಕಪ್ ನೊಂದಿಗೆ ಹಿಂದಿರುಗಿದವು. ತಂಡಗಳು ಎಂಟು ಚಿನ್ನ, 15 ಬೆಳ್ಳಿ ಹಾಗು ಏಳು ಕಂಚಿನ ಪದಕಗಳನ್ನು ಪಡೆಯುವುದರ ಜೊತೆಗೆ ವಿಶ್ವದಲ್ಲೇ 7ನೇ ಸ್ಥಾನವನ್ನು ಗಳಿಸಿದವು.[ಸೂಕ್ತ ಉಲ್ಲೇಖನ ಬೇಕು]

ಸಂಗೀತ[ಬದಲಾಯಿಸಿ]

ವೆಲ್ಷ್ ಸಪ್ರಾನೋ ಗ್ವೈನೆತ್ ಜೋನ್ಸ್

ನ್ಯಾಷನಲ್ ಐಸ್ಟೆದ್ ವಾಡ್ ವೆಲ್ಷ್ ನ ಪ್ರಮುಖ ಕಾವ್ಯ ಹಾಗು ಸಂಗೀತದ ಉತ್ಸವ. ಇದನ್ನು ಪ್ರತಿವರ್ಷ ವಿವಿಧ ಪಟ್ಟಣ ಅಥವಾ ನಗರದಲ್ಲಿ ಆಯೋಜಿಸಲಾಗುತ್ತದೆ. ಲ್ಲಾನ್ಗೊಲ್ಲೇನ್ ಅಂತಾರಾಷ್ಟ್ರೀಯ ಐಸ್ಟೆಡ್ ಫಾಡ್ ರಾಷ್ಟ್ರೀಯ ಐಸ್ಟೆಡ್ ಫಾಡ್‌ ಅನುಕರಣೆಯೇ ಆದರೂ ವಿಶ್ವದ ಗಾಯಕರು ಹಾಗು ಸಂಗೀತಗಾರರಿಗೆ ಪ್ರದರ್ಶನ ನೀಡಲು ಅವಕಾಶ ಒದಗಿಸುತ್ತದೆ.

ವೇಲ್ಸ್ ನ್ನು ಸಾಮಾನ್ಯವಾಗಿ "ಗೀತೆಯ ಭೂಮಿ" ಎಂದು ಕರೆಯಲಾಗಿದೆ. ಇದು ವಿಶೇಷವಾಗಿ ಹಾರ್ಪ್ ವಾದಕರು, ಪುರುಷ ಗಾಯನ ಮೇಳ ಗಳು, ಹಾಗು ಏಕವ್ಯಕ್ತಿ ಕಲಾವಿದರಿಗೆ ಪ್ರಸಿದ್ಧವಾಗಿದೆ. ಇವರಲ್ಲಿ ಸರ್ ಗೆರೈಂಟ್ ಇವಾನ್ಸ್, ಡೇಮ್ ಗ್ವಯ್ನೆತ್ ಜೋನ್ಸ್, ಡೇಮ್ ಆನ್ನೆ ಇವಾನ್ಸ್, ಡೇಮ್ ಮಾರ್ಗರೆಟ್ ಪ್ರೈಸ್, ಐವೊರ್ ನೋವೆಲ್ಲೋ, ಜಾನ್ ಕಾಲೆ, ಸರ್ ಟಾಮ್ ಜೋನ್ಸ್, ಚಾರ್ಲೆಟ್ ಚರ್ಚ್, ಬೋನ್ನಿ ಟೈಲರ್, ಬ್ರಯ್ನ್ ಟರ್ಫೆಲ್, ಡೊನ್ನ ಲೆವಿಸ್, ಮೇರಿ ಹಾಪ್ಕಿನ್, ಕ್ಯಾಥೆರಿನ್ ಜೆಂಕಿನ್ಸ್, ಮೆಯಿಕ್ ಸ್ಟೀವನ್ಸ್, ಡೇಮ್ ಶಿರ್ಲೆಯ್ ಬಸ್ಸೇಯ್, ಡಫ್ಫಿ, ಜೆಮ್ ಹಾಗು ಅಲೆಡ್ ಜೋನ್ಸ್ ಸೇರಿದ್ದಾರೆ.

ಕಳೆದ 1990ರ ಇಂಡಿ ವಾದ್ಯ ಮೇಳಗಳಾದ ಮಾನಿಕ್ ಸ್ಟ್ರೀಟ್ ಪ್ರೀಚರ್ಸ್, ಕ್ಯಾಟಟೋನಿಯ, ಸ್ಟೀರಿಯೋಫೋನಿಕ್ಸ್, ಫೀಡರ್, ಸುಪರ್ ಫರ್ರಿ ಅನಿಮಲ್ಸ್, ಹಾಗು ಗಾರ್ಕಿ'ಸ್ ಜೈಗೋಟಿಕ್ ಮಿನ್ಸಿ, ಹಾಗು ನಂತರದ ಗೋಲ್ಡಿ ಲುಕಿನ್' ಚೈನ್, ಮ್ಯಾಕ್ ಲಸ್ಕಿ, ದಿ ಆಟೋಮ್ಯಾಟಿಕ್, ಸ್ಟೀವ್ಲೆಸ್ ಹಾಗು ಲಾಸ್ ಕಾಂಪೆಸಿನೋಸ್! ಇವೆಲ್ಲವೂ ವೇಲ್ಸ್ ನಲ್ಲಿ ಹುಟ್ಟಿಕೊಂಡಿವೆ. ಇತರ, ಕೆಳ ಮೇನ್ ಸ್ಟ್ರೀಮ್ ವಾದ್ಯಮೇಳಗಳೂ ಸಹ ವೇಲ್ಸ್ ನಲ್ಲಿ ಹುಟ್ಟಿಕೊಂಡಿವೆ. ಉದಾಹರಣೆಗೆ ಸ್ಕಿನ್ ಡ್ರೆಡ್, ದಿ ಬ್ಲಾಕ್ ಔಟ್, ಲಾಸ್ಟ್ ಪ್ರಾಫೆಟ್ಸ್, ಕಿಡ್ಸ್ ಇನ್ ಗ್ಲಾಸ್ ಹೌಸಸ್, ಬುಲ್ಲೆಟ್ ಫಾರ್ ಮೈ ವ್ಯಾಲೆಂಟೈನ್, ಫ್ಯೂನರಲ್ ಫಾರ್ ಏ ಫ್ರೆಂಡ್ ಮುಂತಾದವುಗಳು 1970ರಲ್ಲಿ ಮ್ಯಾನ್ ವಾದ್ಯತಂಡಕ್ಕಿಂತ ಮೊದಲು ಬಂದವು. ಬೀಟಲ್ಸ್-ಪೋಷಿತ ಪವರ್ ಪಾಪ್ ತಂಡ ಬ್ಯಾಡ್ ಫಿಂಗರ್ ಸಹ ವೇಲ್ಸ್ ನಲ್ಲಿ ತನ್ನ ಮೂಲವನ್ನು ಹೊಂದಿದೆ (ತಂಡದ ಸ್ಥಾಪಕ ಪೀಟರ್ ಹಾಮ್ ಹಾಗು ಡ್ರಂ ವಾದಕ ಮೈಕ್ ಗಿಬ್ಬಿನ್ಸ್ ಇಬ್ಬರೂ ಸ್ವಾನ್ಸೀ ನಗರದವರು). ಜನಪ್ರಿಯ ನ್ಯೂ ವೇವ್/ಸಿಂಥ್ ಪಾಪ್ ತಂಡ ಸ್ಕ್ರಿಟ್ಟಿ ಪೋಲಿಟ್ಟಿ, ಗಾಯಕ/ಹಾಡುಬರಹಗಾರ ಹಾಗು ಕಾರ್ಡಿಫ್ ನ ಸ್ಥಳೀಯ ಗ್ರೀನ್ ಗಾರ್ಟ್ ಸೈಡ್ ಗೆ ಒಂದು ಮಾಧ್ಯಮವಾಗಿತ್ತು.

ಕ್ರಾಸ್ಡನ್ಟ್, ವೆಲ್ಷ್‌ನ ಒಂದು ಸಾಂಪ್ರದಾಯಿಕ ಜಾನಪದ ವಾದ್ಯ ತಂಡ.
ಇಂಟರ್ಸೆಲ್ಟಿಕ್ ಡೆ ಲೋರಿಯೆಂಟ್ ನ ಉತ್ಸವದಲ್ಲಿ ಸಾಂಪ್ರದಾಯಿಕ ವೆಲ್ಷ್ ಜಾನಪದ ಗಾಯಕ ಹಾಗು ಹಾರ್ಪ್ ವಾದಕ ಸಿಯನ್ ಜೇಮ್ಸ್ ನೇರಪ್ರದರ್ಶನದ ವೇದಿಕೆಯಲ್ಲಿ

ವೆಲ್ಷ್ ಸಾಂಪ್ರದಾಯಿಕ ಹಾಗು ಜಾನಪದ ಸಂಗೀತ ದ ಕ್ಷೇತ್ರವು ಪ್ರದರ್ಶಕರು ಹಾಗು ವಾದ್ಯ ತಂಡಗಳಾದ ಕ್ರಾಸ್ಡನ್ಟ್, ಕಾರ್ರೆಗ್ ಲಫಾರ್, ಫರ್ನ್ ಹಿಲ್, ಸಿಯಾನ್ ಜೇಮ್ಸ್, ರಾಬಿನ್ ಹುವ್ ಬೋವೆನ್, ಹಾಗು ದಿ ಹೆನ್ನೆಸ್ಸಿಸ್ ಮುಂತಾದವರಿಂದ ಮರು ಜೀವಂತಿಕೆ ಪಡೆದಿದೆ. ವೇಲ್ಸ್ ನಲ್ಲಿ ಸಾಂಪ್ರದಾಯಿಕ ಸಂಗೀತ ಹಾಗು ನೃತ್ಯವನ್ನು ಅಸಂಖ್ಯಾತ ಸಂಸ್ಥೆಗಳು ಬೆಂಬಲಿಸುತ್ತಿವೆ. ವೆಲ್ಷ್ ಫೋಕ್ ಸಾಂಗ್ ಸೊಸೈಟಿ (ಸೈಮ್ಡೈತಾಸ್ ಅಲವೊನ್ ಗ್ವೆರಿನ್ ಸಿಮ್ರು) ಹಲವಾರು ಹಾಡುಗಳ ಹಾಗು ರಾಗಗಳ ಸಂಗ್ರಹವನ್ನು ಪ್ರಕಟಣೆ ಮಾಡಿದೆ. ವೆಲ್ಷ್ ಫೋಕ್ ಡಾನ್ಸ್ ಸೊಸೈಟಿ (ಸೈಮ್ಡೈತಾಸ್ ಡಾನ್ಸ್ ವೆರಿನ್ ಸಿಮ್ರು) ರಾಷ್ಟ್ರೀಯ ಹವ್ಯಾಸಿ ನೃತ್ಯ ತಂಡಗಳ ಜಾಲವನ್ನು ಬೆಂಬಲಿಸುವುದರ ಜೊತೆಗೆ ಸಹಾಯಾರ್ಥ ವಿಷಯಕಗಳನ್ನು ಪ್ರಕಟಿಸುತ್ತದೆ.

ಸಾಂಪ್ರದಾಯಿಕ ವಾದ್ಯಗಳ ಒಂದು ಸಂಸ್ಥೆಯಾದ ಕ್ಲಿಯರ್, ವಾದ್ಯಗಳಾದ ಹಾರ್ಪ್, ಟೆಲ್ಯಿನ್ ಡೈರೆಸ್ (ಮೂರು ಹಾರ್ಪ್ ಗಳು), ಫಿಡಲ್ (ಪಿಟೀಲನ್ನು ಹೋಲುವ ಒಂದು ವಾದ್ಯ), ಕ್ರ್ವಥ್, ಪಿಬ್ಗಾರ್ನ್ (ಹಾರ್ನ್ ಪೈಪ್) ಹಾಗು ಇತರ ವಾದ್ಯಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಮ್ಮಟವನ್ನು ಆಯೋಜಿಸುತ್ತದೆ. ಸೆರ್ಡ್ ದಾಂಟ್ ಸಂಸ್ಥೆಯು ಪ್ರಾಥಮಿಕವಾಗಿ ಅದರ ವಿಶೇಷ ಹಾಡಿನ ಕಲೆಯನ್ನು ವಾರ್ಷಿಕ ಒಂದು-ದಿನದ ಉತ್ಸವವನ್ನು ಹಮ್ಮಿಕೊಳ್ಳುವ ಮೂಲಕ ಉತ್ತೇಜಿಸುತ್ತದೆ. ಸಾಂಪ್ರದಾಯಿಕ ಸಂಗೀತವನ್ನು ಅಭಿವೃದ್ಧಿ ಪಡಿಸುವ ಏಜೆನ್ಸಿಯಾದ ಟ್ರಕ್, ವೇಲ್ಸ್‌ನುದ್ದಕ್ಕೂ ಸಮುದಾಯಗಳಲ್ಲಿ ಯೋಜನೆಗಳನ್ನು ಹಮ್ಮಿಕೊಳ್ಳುವ ಮುಖಾಂತರ ಸಾಂಪ್ರದಾಯಿಕ ಸಂಗೀತದ ಪರವಾಗಿ ಸಮರ್ಥನೆ ಮಾಡುತ್ತದೆ. ವೆಲ್ಷ್ ಸ್ತೋತ್ರ ರಚನೆಗಾಗಿ, ಇತಿಹಾಸದ ವಾಚನಕ್ಕಾಗಿ, ಸಣ್ಣ ಐ ಸ್ಟೆದ್ ವಾಡ್(ವೆಲ್ಷ್ ಉತ್ಸವ) ಗಳಿಗೆ, ಇತಿಹಾಸದ ವಾಚನಕ್ಕೆ, ಹಾಗು ಪದ್ಯಗಳಿಗೆ ಸಹ ಸಂಸ್ಥೆಗಳಿವೆ. ಟೆಂಪ್ಲೇಟು:Fixbunching

2006ರಲ್ಲಿ ಜಾನ್ ಕಾಲೇ.

ಟೆಂಪ್ಲೇಟು:Fixbunching

ಬರ್ಟ್ರಂಡ್ ರಸೆಲ್, ಸಾಹಿತ್ಯಕ್ಕಾಗಿ 1950 ನೋಬಲ್ ಪ್ರಶಸ್ತಿ ಪಡೆದರು

ಟೆಂಪ್ಲೇಟು:Fixbunching

ವೇಲ್ಸ್ ನಲ್ಲಿರುವ 'ಸಿನ್ ರಾಕ್ ಜಿಮ್ರಾಗ್'(ವೆಲ್ಷ್ ಭಾಷಾ ರಾಕ್ ಶೈಲಿ) ಯಶಸ್ವಿಯಾಗುವುದರ ಜೊತೆಗೆ ರಾಕ್ ನಿಂದ ಹಿಡಿದು ಹಿಪ್-ಹಾಪ್ ನವರೆಗೆ ಎಲ್ಲ ಶೈಲಿಯನ್ನು ಪ್ರದರ್ಶಿಸಲಾಗುತ್ತದೆ. ಸ್ನೌಡೋನಿಯ ಡ ಮಧ್ಯಭಾಗದಲ್ಲಿರುವ ಡೋಲ್ಗೆಲ್ಲು 1992ರಿಂದಲೂ ವಾರ್ಷಿಕ ಸೇಸಿವ್ನ್ ಫಾವ್ರ್ (ದೊಡ್ಡ ಸಭೆ) ಉತ್ಸವವನ್ನು ನಡೆಸಿಕೊಂಡು ಬಂದಿದೆ. ಇದು ವೆಲ್ಷ್-ಭಾಷಾ ಸಂಗೀತ ಉತ್ಸವದಲ್ಲಿ ವೇಲ್ಸ್‌ನ ಅತ್ಯಂತ ದೊಡ್ಡ ಉತ್ಸವವಾಗಿ ಬೆಳವಣಿಗೆಯಾಗಿದೆ.

BBC ನ್ಯಾಷನಲ್ ಆರ್ಕೆಸ್ಟ್ರಾ ಆಫ್ ವೇಲ್ಸ್ ವೇಲ್ಸ್ ನಲ್ಲಿ ಹಾಗು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡುತ್ತದೆ. ಜಗದ್ವಿಖ್ಯಾತ ವೆಲ್ಷ್ ನ್ಯಾಷನಲ್ ಆಪರ, ಈಗ ತನ್ನ ಶಾಶ್ವತವಾದ ನೆಲೆಯನ್ನು ಕಾರ್ಡಿಫ್ ಬೇ ನಲ್ಲಿರುವ ವೇಲ್ಸ್ ಮಿಲ್ಲೇನಿಯಂ ಸೆಂಟರ್ ನಲ್ಲಿ ಕಂಡುಕೊಂಡಿದೆ. ನ್ಯಾಷನಲ್ ಯೂತ್ ಆರ್ಕೆಸ್ಟ್ರಾ ಆಫ್ ವೇಲ್ಸ್ ನಂತಹ ಮಾದರಿಯು ಜಗತ್ತಿನಲ್ಲೇ ಮೊದಲನೇಯದಾಗಿದೆ.

ಸಾಹಿತ್ಯ[ಬದಲಾಯಿಸಿ]

ಸಾರಿಗೆ[ಬದಲಾಯಿಸಿ]

M4 ಮೋಟರ್‌ವೇ ಹೊತ್ತೊಯ್ಯುವ ಸೆಕೆಂಡ್ ಸೇವೆರ್ನ್ ಕ್ರಾಸಿಂಗ್

ನಗರಗಳಿಗೆ ಸಂಪರ್ಕವನ್ನು ಕಲ್ಪಿಸುವ ಪ್ರಮುಖ ಹೆದ್ದಾರಿ ಹಾಗು ಸೌತ್ ವೇಲ್ಸ್ ಕರಾವಳಿಯ ಇತರ ನೆಲೆಗಳಿಗೆ M4 ಮೋಟಾರ್ ವೇ ಸಂಪರ್ಕ ಕೊಂಡಿಯಾಗಿದೆ. ಇದು ಇಂಗ್ಲೆಂಡ್ ಗೆ ಸಂಪರ್ಕ ಕಲ್ಪಿಸುವುದರ ಜೊತೆಗೆ ಅಂತಿಮವಾಗಿ ಲಂಡನ್ ಗೆ ಸಂಪರ್ಕ ಕಲ್ಪಿಸುತ್ತದೆ. ವೆಲ್ಷ್ ಪ್ರದೇಶದ ಮೋಟಾರು ಮಾರ್ಗವನ್ನು ವೆಲ್ಷ್ ಅಸೆಂಬ್ಲಿ ಗವರ್ನಮೆಂಟ್ ನಿರ್ವಹಿಸುತ್ತದೆ. ಇದು ಸೆಕೆಂಡ್ ಸೇವೆರ್ನ್ ಕ್ರಾಸಿಂಗ್ ನಿಂದ ಪಶ್ಚಿಮ ವೇಲ್ಸ್ ನಲ್ಲಿರುವ ಪೊಂಟ್ ಅಬ್ರಹಂ ವರೆಗೂ ಹಾದು ಹೋಗುವುದರ ಜೊತೆಗೆ ಕಾರ್ಡಿಫ್, ನ್ಯೂಪೋರ್ಟ್ ಹಾಗು ಸ್ವಾನ್ಸೀ ನಗರಗಳಿಗೆ ಸಂಪರ್ಕವನ್ನು ಕಲ್ಪಿಸುತ್ತವೆ.

ಉತ್ತರ ವೇಲ್ಸ್ ನಲ್ಲಿ A55 ಎಕ್ಸ್‌ಪ್ರೆಸ್ ವೇ, ಉತ್ತರ ವೇಲ್ಸ್‌ನ ಕರಾವಳಿ ಪ್ರದೇಶದ ಜೊತೆಗೂಡಿ ಇದೇ ರೀತಿಯಾದ ಸಂಪರ್ಕಗಳನ್ನು ಹೋಲಿ ಹೆಡ್ ಹಾಗು ಬಂಗೊರ್ ನಗರಗಳ ಜೊತೆಗೆ ವ್ರೆಕ್ಸಾಮ್ ಹಾಗು ಫ್ಲಿಂಟ್‌ಶೈರ್ ನಗರಗಳಿಗೆ ಕಲ್ಪಿಸುತ್ತದೆ. ಇದರ ಜೊತೆಗೆ ಇಂಗ್ಲೆಂಡ್ ಗೆ ಅದರಲ್ಲೂ ಪ್ರಮುಖವಾಗಿ ಚೆಸ್ಟರ್ ಗೆ ಸಂಪರ್ಕವನ್ನು ಕಲ್ಪಿಸುತ್ತದೆ. A470 ಉತ್ತರ-ದಕ್ಷಿಣ ವೇಲ್ಸ್ ಗೆ ಸಂಪರ್ಕವನ್ನು ಕಲ್ಪಿಸುವ ಪ್ರಮುಖ ಹೆದ್ದಾರಿ. ಇದು ಕಾರ್ಡಿಫ್ ನಿಂದ ಲಾನ್ಡುಡ್ನೋ ವರೆಗೂ ಹಾದು ಹೋಗುತ್ತದೆ.

ಕಾರ್ಡಿಫ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವೇಲ್ಸ್‌ನಲ್ಲಿರುವ ಏಕೈಕ ದೊಡ್ಡ ಹಾಗು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಾಗಿದೆ. ಇದು ಸ್ವದೇಶದಲ್ಲಿ ಹಾಗು ಯುರೋಪಿಯನ್ ಹಾಗು ಉತ್ತರ ಅಮೇರಿಕಾದ ಸ್ಥಳಗಳಿಗೆ ಸಂಪರ್ಕವನ್ನು ಒದಗಿಸುತ್ತದೆ. ಇದು ಕಾರ್ಡಿಫ್ ನಗರ ಕೇಂದ್ರ ದ ನೈಋತ್ಯ ದಿಕ್ಕಿನಲ್ಲಿ 12 miles (19 km), ವೇಲ್ ಆಫ್ ಗ್ಲಮೋರ್ಗನ್ ನಲ್ಲಿ ನೆಲೆಹೊಂದಿದೆ. ಕಳೆದ ಮೇ 2007ರಿಂದ, ಒಂದು ಸ್ಕಾಟಿಷ್ ಸಂಸ್ಥೆಯಾದ ಹೈಲ್ಯಾಂಡ್ ಏರ್ ವೇಸ್, ಅಂಗ್ಲೇಸೇಯ್ (ವ್ಯಾಲಿ) ಹಾಗು ಕಾರ್ಡಿಫ್ ನಡುವೆ ಆಂತರಿಕ ವಿಮಾನ ಹಾರಾಟ ನಡೆಸುತ್ತಿದೆ.

ಲ್ಯಾಂಡುಡ್ನೊ ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಆನ್ ಅರ್ರಿವ ಟ್ರೈನ್ಸ್ ವೇಲ್ಸ್ ಸೇವೆ

ದೇಶವು ಒಂದು ಗಮನಾರ್ಹವಾದ ರೈಲ್ವೇ ಸಂಪರ್ಕವನ್ನು ಹೊಂದಿದೆ. ಇದನ್ನು ವೆಲ್ಷ್ ಅಸೆಂಬ್ಲಿ ಗವರ್ನಮೆಂಟ್ ನಿರ್ವಹಿಸುತ್ತದೆ. ಜೊತೆಗೆ ಹಳೆ ರೈಲ್ವೇ ಮಾರ್ಗಗಳನ್ನು ಮತ್ತೆ ತೆರೆಯುವ ಕಾರ್ಯಕ್ರಮದ ಜೊತೆಗೆ ರೈಲಿನ ಬಳಕೆಯನ್ನು ವಿಸ್ತರಿಸುವ ಯೋಜನೆಯನ್ನು ಹೊಂದಿದೆ. ಕಾರ್ಡಿಫ್ ಸೆಂಟ್ರಲ್ ಹಾಗು ಕಾರ್ಡಿಫ್ ಕ್ವೀನ್ ಸ್ಟ್ರೀಟ್ ಅತ್ಯಂತ ನಿಬಿಡವಾದ ಮತ್ತು ಆಂತರಿಕ ಹಾಗು ರಾಷ್ಟ್ರೀಯ ಸಂಪರ್ಕವನ್ನು ಕಲ್ಪಿಸುವ ಪ್ರಮುಖ ಕೇಂದ್ರವಾಗಿದೆ. ಕಳೆದ 1960ರ ಬೀಚಿಂಗ್ ಕಟ್ಸ್ ಎಂದರೆ ಉಳಿದ ಹೆಚ್ಚಿನ ಜಾಲವು ಪೂರ್ವ-ಪಶ್ಚಿಮಾಭಿಮುಖ ಪ್ರಯಾಣಕ್ಕೆ ಇಂಗ್ಲೆಂಡ್‌ನಿಂದ ಬರಲು ಅಥವಾ ಹೋಗಲು ಸಜ್ಜುಗೊಳಿಸಲಾಗಿದೆ. ಉತ್ತರದಿಂದ ದಕ್ಷಿಣ ವೇಲ್ಸ್‌ಗೆ ಸಂಪರ್ಕ ಸೇವೆಯನ್ನು ಇಂಗ್ಲಿಷ್ ಪಟ್ಟಣಗಳಾದ ಚೆಸ್ಟರ್ ಹಾಗು ಶ್ರೂಸ್ ಬರಿ ಮೂಲಕ ನಿರ್ವಹಿಸಲಾಗುತ್ತದೆ. ವ್ಯಾಲಿ ಲೈನ್ಸ್ ಸೇವೆಗಳುಕಾರ್ಡಿಫ್ ನಿಂದ, ಸೌತ್ ವೇಲ್ಸ್ ವ್ಯಾಲಿಸ್ ಹಾಗು ಸುತ್ತಮುತ್ತಲ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದು ನಿತ್ಯ ಪ್ರಯಾಣದಲ್ಲಿ ಹೆಚ್ಚಿನ ಬಳಕೆಯಲ್ಲಿದೆ. ಅರೈವ ಟ್ರೈನ್ಸ್ ವೇಲ್ಸ್ ವೇಲ್ಸ್ ಒಳಗೆ ರೈಲು ಸೇವೆಗಳನ್ನು ಕೈಗೊಳ್ಳುವ ಪ್ರಮುಖ ನಿರ್ವಾಹಕ. ಇದು ವೇಲ್ಸ್ ನ ಒಳಗಡೆಯೇ ಕ್ರೀವ್, ಮ್ಯಾಂಚೆಸ್ಟರ್, ಬರ್ಮಿಂಗ್ಹಾಮ್ ಹಾಗು ಚೆಲ್ಟೆನ್ಹಾಮ್ ಮಾರ್ಗಗಳನ್ನು ನಿರ್ವಹಿಸುತ್ತವೆ. ವರ್ಜಿನ್ ಟ್ರೈನ್ಸ್ ಪಶ್ಚಿಮ ಕರಾವಳಿಯ ಮುಖ್ಯ ದಿಕ್ಕಿನ ಭಾಗವಾಗಿ ಉತ್ತರ ವೇಲ್ಸ್ ನಿಂದ ಲಂಡನ್ ವರೆಗೂ ಸಂಚಾರವನ್ನು ಕಲ್ಪಿಸುತ್ತವೆ. ಫಸ್ಟ್ ಗ್ರೇಟ್ ವೆಸ್ಟರ್ನ್ ಲಂಡನ್ನಿಂದ ಕಾರ್ಡಿಫ್ ನಗರಕ್ಕೆ ಹಾಗು ನ್ಯೂಪೋರ್ಟ್‌ಗೆ ಪ್ರತಿ ಅರ್ಧಗಂಟೆಗೊಮ್ಮೆ ಸೇವೆಗಳನ್ನು ನಿರ್ವಹಿಸುತ್ತದೆ. ಜೊತೆಗೆ ಒಂದು ಗಂಟೆಗೊಮ್ಮೆ ಸ್ವಾನ್ಸೀಗೆ ಮುಂದುವರೆಯುತ್ತದೆ. ಇದು ಕಾರ್ಡಿಫ್ ಹಾಗು ನ್ಯೂಪೋರ್ಟ್ ನಗರಗಳಿಂದ ದಕ್ಷಿಣ ಇಂಗ್ಲೆಂಡ್‌ಗೆ ಪ್ರಯಾಣಿಸುತ್ತದೆ. ಕ್ರಾಸ್ಸ್ ಕಂಟ್ರಿ ಸೇವೆಗಳನ್ನು ಕಾರ್ಡಿಫ್ ನಿಂದ ನಾಟಿಂಗ್ಹಾಮ್ ವರೆಗೂ ಹಾಗು ನ್ಯೂ ಕ್ಯಾಸಲ್ ಅಪಾನ್ ಟೈನೆ ಮೂಲಕ ವೆಸ್ಟ್ ಮಿಡ್ ಲ್ಯಾಂಡ್ಸ್, ಈಸ್ಟ್ ಮಿಡ್ ಲ್ಯಾಂಡ್ಸ್ ಹಾಗು ಯಾರ್ಕ್ಶೈರ್ ಗೆ ಒದಗಿಸಲಾಗುತ್ತದೆ.

ಐರ್ಲ್ಯಾಂಡ್ ಗೆ ನಿಯತವಾದ ದೋಣಿ ಸಂಪರ್ಕ ಸೇವೆಗಳು ಹೋಲಿ ಹೆಡ್ ಹಾಗು ಫಿಶ್ ಗಾರ್ಡ್ ನಿಂದ ಕಾರ್ಯ ನಿರ್ವಹಿಸುತ್ತವೆ. ಜೊತೆಗೆ ಸ್ವಾನ್ಸೀ ನಿಂದ ಕಾರ್ಕ್ ವರೆಗಿನ ಸೇವೆಯು ಮಾರ್ಚ್ 2010ರಿಂದ ಪುನರಾರಂಭಗೊಂಡಿದೆ.[೯೧] .

ರಾಷ್ಟ್ರೀಯ ಲಾಂಛನಗಳು[ಬದಲಾಯಿಸಿ]

ಫ್ಲಾಗ್ ಆಫ್ ವೇಲ್ಸ್ಪ್ರಿನ್ಸ್ ಕಾಡ್ವಾಲದರ್ಕೆಂಪು ಡ್ರ್ಯಾಗನ್ (ವೈ ಡಡ್ರೈಗ್ ಗೊಚ್) ನ ಜೊತೆಗೆ ಟ್ಯೂಡರ್ ನ ಹಸಿರು ಹಾಗು ಬಿಳಿ ಬಣ್ಣಗಳಿಂದ ಸಂಯೋಜಿತವಾಗಿದೆ. ಇದನ್ನು 1485ರಲ್ಲಿ ನಡೆದ ಬ್ಯಾಟಲ್ ಆಫ್ ಬೋಸ್ ವರ್ತ್ ನಲ್ಲಿ ಹೆನ್ರಿ VII ಬಳಕೆ ಮಾಡಿದ. ಇದನ್ನು ನಂತರ ಸರ್ಕಾರಿ ಮರ್ಯಾದೆಗಳೊಂದಿಗೆ ಸೇಂಟ್ ಪಾಲ್'ಸ್ ಕ್ಯಾಥೆಡ್ರಲ್ ಗೆ ತರಲಾಯಿತು. ಕೆಂಪು ಡ್ರ್ಯಾಗನ್‌ನ್ನು ನಂತರ ವೆಲ್ಷ್ ಸಂತತಿಯನ್ನು ಸೂಚಿಸುವುದಕ್ಕಾಗಿ ಟ್ಯೂಡರ್ ರಾಜನ ಸೇನೆಯಲ್ಲಿ ಸೇರ್ಪಡೆ ಮಾಡಲಾಯಿತು. ಇದನ್ನು 1959ರಲ್ಲಿ ವೆಲ್ಷ್ ನ ರಾಷ್ಟ್ರೀಯ ಧ್ವಜವೆಂದು ಅಧಿಕೃತವಾಗಿ ಪರಿಗಣಿಸಲಾಯಿತು. ಬ್ರಿಟಿಶ್ ಯೂನಿಯನ್ ಫ್ಲಾಗ್(ಒಕ್ಕೂಟ ಧ್ವಜ) ನಲ್ಲಿ ಸ್ಕಾಟ್ಲ್ಯಾಂಡ್, ಐರ್ಲ್ಯಾಂಡ್ ಹಾಗು ಇಂಗ್ಲೆಂಡ್ ನ ಧ್ವಜಗಳ ಸಂಯೋಜನೆಯಿದೆ ಆದರೆ ಇದರಲ್ಲಿ ವೆಲ್ಷ್‌ನ ಯಾವುದೇ ಪ್ರಾತಿನಿಧ್ಯವಿಲ್ಲ. ತಾಂತ್ರಿಕವಾಗಿ ಇದನ್ನು ಫ್ಲಾಗ್ ಆಫ್ ಇಂಗ್ಲೆಂಡ್‌ನಿಂದ ಪ್ರತಿನಿಧಿಸಲಾಗುತ್ತದೆ. 13ನೇ ಶತಮಾನದ ಆಕ್ರಮಣದ ಪರಿಣಾಮವಾಗಿ ವೇಲ್ಸ್ ನ್ನು 1535ರ ಲಾಸ್ ಇನ್ ವೇಲ್ಸ್ ಆಕ್ಟ್ ನಲ್ಲಿ ಸೇರಿಸಲಾಗಿದೆ.

ಡ್ಯಾಫೋಡಿಲ್ ಹಾಗು ಲೀಕ್ ಸಹ ವೇಲ್ಸ್ ನ ಲಾಂಛನಗಳಾಗಿವೆ. ಲೀಕ್ ಲಾಂಛನವು 16ನೇ ಶತಮಾನದಲ್ಲೇ ಬಳಕೆಗೆ ಬಂದಿತ್ತು, ಆದರೆ ಡ್ಯಾಫೋಡಿಲ್ ಡೇವಿಡ್ ಲಾಯ್ಡ್-ಜಾರ್ಜ್ ನ ಪ್ರೋತ್ಸಾಹದಿಂದ 19ನೇ ಶತಮಾನದಲ್ಲಿ ಜನಪ್ರಿಯತೆ ಗಳಿಸಿತು. ವೆಲ್ಷ್ ಲೀಕ್ (ಸೆನ್ ಹಿನೆನ್) ನ ಲಾಂಛನಕ್ಕೆ ಹಾಗು ಡ್ಯಾಫೋಡಿಲ್ (ಸೆನ್ ಹಿನೆನ್ ಬೆದ್ರ್ ಅಥವಾ St. ಪೀಟರ್ಸ್ ಲೀಕ್) ನ ಲಾಂಛನದ ನಡುವೆ ಗೊಂದಲ ಉಂಟಾಗಿದ್ದು ಇದಕ್ಕೆ ಕಾರಣವೆನ್ನಲಾಗಿದೆ. ಕಳೆದ 1916ರ ಒಂದು ವರದಿಯು ಲೀಕ್‌ಗೆ ಆದ್ಯತೆ ನೀಡಿತು. ಇದು ಬ್ರಿಟಿಶ್ £1 ನಾಣ್ಯಗಳ ಮೇಲೆ ಕಂಡುಬಂದಿತು.[೯೨]

"ಹೆನ್ ವ್ಲಾದ್ ಫೈ ನಹದು " (ಲ್ಯಾಂಡ್ ಆಫ್ ಮೈ ಫಾದರ್ಸ್"), ವೇಲ್ಸ್ ನ ರಾಷ್ಟ್ರಗೀತೆಯಾಗಿದೆ. ಇದನ್ನು ವೇಲ್ಸ್ ರಾಷ್ಟ್ರೀಯ ತಂಡವು ಪಾಲ್ಗೊಳ್ಳುವ ಫುಟ್ಬಾಲ್ ಅಥವಾ ರಗ್ಬಿ ಪಂದ್ಯಗಳಲ್ಲಿ ಹಾಗು ವೆಲ್ಷ್ ಅಸೆಂಬ್ಲಿಯ ಪ್ರಾರಂಭದಲ್ಲಿ ಹಾಗು ಇತರ ಅಧಿಕೃತ ಸಂದರ್ಭಗಳಲ್ಲಿ ನುಡಿಸಲಾಗುತ್ತದೆ. ಸೈಂಟ್ ಡೇವಿಡ್'ಸ್ ಡೇ, 1 ಮಾರ್ಚ್, ರಾಷ್ಟ್ರೀಯ ದಿನ ವಾಗಿದೆ,

ಇವನ್ನೂ ನೋಡಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

 1. Davies, John (1994). A History of Wales. London: Penguin. p. 100. ISBN 0-14-01-4581-8.
 2. ಕೆಲವೊಂದು ಸಂದರ್ಭಗಳಲ್ಲಿ "ಜಿಮ್ರು", "ಎನ್ಗಮ್ರು" ಅಥವಾ "ಚಿಮ್ರು" ಎಂದು ಸಹ ಉಚ್ಚರಿಸಲಾಗುತ್ತದೆ, ಏಕೆಂದರೆ ವೆಲ್ಷ್ ಭಾಷೆಯು ಪ್ರಾರಂಭದ ಸ್ವರ ರೂಪಾಂತರವನ್ನು ಹೊಂದಿದೆ - ನೋಡಿ ವೆಲ್ಷ್ ಶಬ್ದರೂಪ ರಚನಾ ಶಾಸ್ತ್ರ
 3. ದಿ ಕಂಟ್ರೀಸ್ ಆಫ್ ದಿ UK statistics.gov.uk, 10 ಅಕ್ಟೋಬರ್ 2008ರಲ್ಲಿ ಮರುಸಂಕಲಿಸಲಾಗಿದೆ
 4. "ವೆಲ್ಷ್ ಲಾಂಗ್ವೇಜ್ ಬೋರ್ಡ್ - ನಂಬರ್ ಆಫ್ ಸ್ಪೀಕರ್ಸ್". Archived from the original on 2010-05-24. Retrieved 2010-06-10.
 5. ಬ್ರಿಟಾನಿಯ - ಗೋ ಬ್ರಿಟಾನಿಯ! ಗೈಡ್ ಟು ವೇಲ್ಸ್ - ವೆಲ್ಷ್ ಲಾಂಗ್ವೇಜ್ ಗೈಡ್
 6. ಡೇವಿಸ್, ಜಾನ್, ಏ ಹಿಸ್ಟರಿ ಆಫ್ ವೇಲ್ಸ್ , ಪೆಂಗ್ವಿನ್, 1994, "ವೆಲ್ಷ್ ಆರಿಜಿನ್ಸ್", ಪುಟ. 54, ISBN 0-14-014581-8
 7. "Welsh Assembly Government: Minister promotes Wales' status as a Celtic nation". Welsh Assembly Government website. Welsh Assembly Government. 2002-09-16. Retrieved 2010-01-03.[ಶಾಶ್ವತವಾಗಿ ಮಡಿದ ಕೊಂಡಿ]
 8. ೮.೦ ೮.೧ "Who were the Celts? ... Rhagor". Amgueddfa Cymru – National Museum Wales website. Amgueddfa Cymru – National Museum Wales. 2007-05-04. Archived from the original on 2009-09-17. Retrieved 2009-10-14.
 9. ೯.೦ ೯.೧ "BBC NEWS". BBC News Wales website. BBC Wales. 2007-04-26. Retrieved 2008-10-11. {{cite web}}: Text "Coal Exchange to 'stock exchange'" ignored (help); Text "Wales" ignored (help)
 10. ೧೦.೦ ೧೦.೧ "Rhagor". Amgueddfa Cymru - National Museum Wales. Amgueddfa Cymru - National Museum Wales. 2007-04-18. Archived from the original on 2012-05-30. Retrieved 2008-10-11. {{cite web}}: Text "Cardiff - Coal and Shipping Metropolis of the World" ignored (help)
 11. The ವೆಲ್ಷ್ ಅಕ್ಯಾಡೆಮಿ ಎನ್ಸೈಕ್ಲೋಪೀಡಿಯಾ ಆಫ್ ವೇಲ್ಸ್ , ಕಾರ್ಡಿಫ್: ಯುನಿವರ್ಸಿಟಿ ಆಫ್ ವೇಲ್ಸ್ ಪ್ರೆಸ್ 2008. p.448.
 12. "ಫಾಸ್ಟ್ ಫ್ಯಾಕ್ಟ್ಸ್: ಹೋಂ: ವಿಸಿಟ್ ವೇಲ್ಸ್- ದಿ ವೆಲ್ಶ್ ಅಸೆಂಬ್ಲಿ ಗವರ್ನಮೆಂಟ್'ಸ್ ಟೂರಿಸಂ ಟೀಮ್". Archived from the original on 2006-10-08. Retrieved 2010-06-10.
 13. ದಿ ವೆಲ್ಷ್ ಅಕ್ಯಾಡೆಮಿ ಎನ್ಸೈಕ್ಲೋಪೀಡಿಯಾ ಆಫ್ ವೇಲ್ಸ್. ಕಾರ್ಡಿಫ್: ಯುನಿವರ್ಸಿಟಿ ಆಫ್ ವೇಲ್ಸ್ ಪ್ರೆಸ್ 2008
 14. ವೈ ದಿ ವೆಲ್ಷ್ ವಾಯ್ಸ್ ಇಸ್ ಸೊ ಮ್ಯೂಸಿಕಲ್, BBC ನ್ಯೂಸ್ , 8 ಜೂನ್ 2006. 17 ಮೇ 2008ರಲ್ಲಿ ಮರುಸಂಕಲಿಸಲಾಗಿದೆ.
 15. ಟಂಗ್ ಟೈಡ್, BBC ನ್ಯೂಸ್ . 17 ಮೇ 2008ರಲ್ಲಿ ಮರುಸಂಕಲಿಸಲಾಗಿದೆ
 16. Gwynfor, Evans (1974). Land of my Fathers. Y Lolfa Cyf., Talybont. pp. 240 & 241. ISBN 0 86243 265 0.
 17. Gwynfor, Evans (2000). The Fight for Welsh Freedom. Y Lolfa Cyf., Talybont. p. 87. ISBN 0 86243 515 32. {{cite book}}: Check |isbn= value: length (help)
 18. ೧೮.೦ ೧೮.೧ ೧೮.೨ Illustrated Encyclopedia of Britain. London: Reader's Digest. 1999. p. 459. ISBN 0-276-42412-3. A country and principality within the mainland of Britain ... about half a million
 19. The Oxford Illustrated Dictionary. Great Britain: Oxford University Press. 1976 [1975]. p. 949. Wales (-lz). Principality occupying extreme W. of central southern portion of Gt Britain
 20. ೨೦.೦ ೨೦.೧ Davies, John (1994). A History of Wales. London: Penguin. p. 71. ISBN 0-14-01-4581-8.
 21. Tolkien, John Ronald Reuel (1963). Angles and Britons: O'Donnell Lectures. Cardiff: University of Wales Press. pp. English and Welsh, an O'Donnell Lecture delivered at Oxford on Oct. 21, 1955. {{cite book}}: Unknown parameter |nopp= ignored (help)
 22. Gilleland, Michael (2007-12-12). "Laudator Temporis Acti: More on the Etymology of Walden". Laudator Temporis Acti website. Michael Gilleland. Retrieved 2008-10-29.
 23. ೨೩.೦ ೨೩.೧ Davies, John (1990), A History of Wales (First ed.), London: Penguin Group (published 1993), p. 71, ISBN 0-713-99098-8,ಏ ಹಿಸ್ಟರಿ ಆಫ್ ವೇಲ್ಸ್ , 400–800.
 24. Lloyd, John Edward (1911), "Note to Chapter VI, the Name "Cymry"", A History of Wales from the Earliest Times to the Edwardian Conquest, vol. I (Second ed.), London: Longmans, Green, and Co. (published 1912), pp. 191–192
 25. Phillimore, Egerton (1891), "Note (a) to The Settlement of Brittany", in Phillimore, Egerton (ed.), Y Cymmrodor, vol. XI, London: Honourable Society of Cymmrodorion (published 1892), pp. 97–101
 26. Davies, John (1990), A History of Wales (First ed.), London: Penguin Group (published 1993), p. 71, ISBN 0-713-99098-8, ಏ ಹಿಸ್ಟರಿ ಆಫ್ ವೇಲ್ಸ್ , 400–800. 'ಅರ್ ವಯ್ನೆಪ್ ಕೈಮ್ರಿ ಕಾಡ್ವಲ್ಲಾವ್ನ್ ವಾಸ್' ಎಂಬ ಪದ್ಯದ ಸಾಲನ್ನು ಹೊಂದಿದೆ.
 27. Hubert, Henri; Mauss, Marcel (1934), "What the Celts Were", The Rise of the Celts, London: K. Paul, Trench, Trubner, p. 25 – 26, ISBN 0-8196-0183-7
 28. Koch, John T., ed. (2005), "Cimbri and Teutones", Celtic Culture: A Historical Encyclopedia, ABL-CLIO (published 2006), p. 437, ISBN 9781851094400
 29. "Channel 4 - News - Red Lady skeleton 29,000 years old". Channel 4 website. Channel 4 - News. 2007-10-30. Archived from the original on 2009-12-19. Retrieved 2008-10-30 : see Red Lady of Paviland. {{cite web}}: Check date values in: |accessdate= (help)
 30. ೩೦.೦ ೩೦.೧ ೩೦.೨ Davies, John (1994). A History of Wales. London: Penguin. pp. 4–6. ISBN 0-14-01-4581-8.
 31. "Overview: From Neolithic to Bronze Age, 8000–800 BC (Page 1 of 6)". BBC History website. BBC. 2006-09-05. Retrieved 2008-08-05.
 32. "Genes link Celts to Basques". BBC News website. BBC. 2001-04-03. Retrieved 2008-08-05.
 33. "GGAT 72 Overviews" (PDF). A Report for Cadw by Edith Evans BA PhD MIFA and Richard Lewis BA. Glamorgan-Gwent Archaeological Trust. 2003. Retrieved 2008-12-30. {{cite web}}: Text "PDF" ignored (help); Text "p. 47" ignored (help)
 34. "Stones of Wales - Pentre Ifan Dolmen". Stone Pages website. Paola Arosio/Diego Meozzi. 2003. Retrieved 2008-11-17.
 35. "Stones of Wales - Bryn Celli Ddu Burial chamber". Stone Pages website. Paola Arosio/Diego Meozzi. 2003. Retrieved 2008-11-17.
 36. "Parc le Breos Burial Chamber; Parc CWM Long Cairn". The Royal Commission on the Ancient and Historical Monuments of Wales website. Royal Commission on the Ancient and Historical Monuments of Wales. 2006. Archived from the original on 2012-12-23. Retrieved 2008-10-24.
 37. "BBC Wales - History - Themes Prehistoric Wales: The Stone Age". BBC Wales website. BBC. 2008. Retrieved 2008-10-24.
 38. "Your guide to Stonehenge, the World's Favourite Megalithic Stone Circle". Stonehenge.co.uk website. Longplayer SRS Ltd (trading as www.stonehenge.co.uk). 2008. Archived from the original on 2012-10-02. Retrieved 2008-08-05.
 39. Davies, John (1994). A History of Wales. London: Penguin. p. 17. ISBN 0-14-01-4581-8.
 40. Davies, John (1994). A History of Wales. London: Penguin. pp. 26 & 27. ISBN 0-14-01-4581-8.
 41. ಮಧ್ಯಯುಗದ ಮೂಲ ವೆಲ್ಷ್ ಬರಹಕ್ಕಾಗಿ ನೋಡಿ, ಐಫಾರ್ ವಿಲ್ಲಿಯಮ್ಸ್ (ed.), ಬ್ರೆಯುಡ್‌ವಿಡ್ ಮ್ಯಾಕ್ಸೆನ್ (ಬಂಗೊರ್, 1920). ಕಥೆಯ ಬಗ್ಗೆ ಚರ್ಚೆ ಹಾಗು ಅದರ ಸನ್ನಿವೇಶಗಳು M.P. ಚಾರ್ಲ್ಸ್ ವರ್ತ್, ದಿ ಲಾಸ್ಟ್ ಪ್ರಾವಿನ್ಸ್ ನಲ್ಲಿ (ಗ್ರೆಗಿನಾಗ್ ಲೆಕ್ಚರ್ಸ್ ಸರಣಿ, 1948, 1949).
 42. ಏನ್ಷಿಯಂಟ್ ಬ್ರಿಟನ್ ಹ್ಯಾಡ್ ಅಪಾರ್ಟ್ಹೇಡ್-ಲೈಕ್ ಸೊಸೈಟಿ, ಸ್ಟಡಿ ಸಜೆಸ್ಟ್ಸ್. ನ್ಯಾಷನಲ್ ಜಿಯೋಗ್ರಾಫಿಕ್ ನ್ಯೂಸ್. ಜುಲೈ 21, 2006.
 43. ೪೩.೦ ೪೩.೧ Davies, John (1993). A History of Wales. London: Penguin. pp. 65–66. ISBN 0-14-01-4581-8.
 44. ಡೇವಿಡ್ ಹಿಲ್ ಮತ್ತು ಮಾರ್ಗರೆಟ್ ವರ್ತಿಂಗ್ಟನ್, ಆಫಾ'ಸ್ ಡೈಕ್: ಹಿಸ್ಟರಿ ಅಂಡ್ ಗೈಡ್ , ಟೆಂಪಸ್, ISBN 0-7524-1958-7
 45. ಲೊಯೆಜಿರ್ ಬಗ್ಗೆ ಮೊದಲ ಉದಾಹರಣೆಯನ್ನು 10ನೇ ಶತಮಾನ ಪ್ರಾರಂಭದ ಪ್ರವಾದಿಯ ಪದ್ಯ ಆರ್ಮೆಸ್ ಪ್ರಯ್ಡಿನ್ ನಲ್ಲಿ ಉಲ್ಲೇಖಿಸಲಾಗಿದೆ. ಇದು ಒಂದು ಸ್ಥಳದ ಹೆಸರಾಗಿ ತುಂಬಾ ತಡವಾಗಿ ಬೆಳಕಿಗೆ ಬಂತೆಂದು ತೋರುತ್ತದೆ, ಆದರೆ ಪ್ರಥಮಾ ವಿಭಕ್ತಿಯ ಬಹುವಚನ ಲೊಯೇಗ್ರಿಯ್ಸ್, "ಲ್ಲೋಯೇಜರ್‌ ಜನರು", ಮೊದಲು ಹುಟ್ಟಿಕೊಂಡ ಸಾಮಾನ್ಯ ಪದವಾಗಿದೆ. ಇಂಗ್ಲಿಷರನ್ನು ಕೆಲವೊಂದು ಬಾರಿ ಒಂದು ಅಸ್ತಿತ್ವವೆಂದು ಪೂರ್ವದ ಪದ್ಯಗಳಲ್ಲಿ ಸೂಚಿಸಲಾಗುತ್ತಿತ್ತು (ಸೆಸನ್ , ಇದು ಕರೆಯುವಂತೆ) ಆದರೆ ಕೇವಲ ಇಂಗ್ಲ್ (ಏಂಜಲ್ಸ್), ಐವಿಸ್ (ವೆಸೆಕ್ಸ್-ಜನ), ಮುಂತಾದವರನ್ನು ಸಾಮಾನ್ಯವಾಗಿ ಕರೆಯಲಾಗುತ್ತಿತ್ತು. ಲ್ಲೋಯೇಜರ್ ಮತ್ತು ಸಾಕ್ಸನ್ ಎಂದು ಇಂಗ್ಲೆಂಡ್ ಒಂದು ಸಾಮ್ರಾಜ್ಯವಾಗಿ ಹೊರಹೊಮ್ಮಿದ ಮೇಲೆ ಕರೆಯುವುದು ರೂಢಿಯಾಯಿತು. ಅದರ ಹುಟ್ಟಿಗೆ ಸಂಬಂಧ ಪಟ್ಟ ಹಾಗೆ,ಕೆಲವು ವಿದ್ವಾಂಸರು ಇದು ಕೇವಲ ಮರ್ಸಿಯಾವನ್ನು ಸೂಚಿಸಲು ಮಾತ್ರ ಬಳಕೆ ಮಾಡಲಾಗುತ್ತಿತ್ತು ಎಂದು ಹೇಳುತ್ತಾರೆ - ಆ ಅವಧಿಯ ಒಂದು ಬಲಶಾಲಿ ಸಾಮ್ರಾಜ್ಯ ಹಾಗು ಹಲವು ಶತಮಾನಗಳವರೆಗೆ ವೆಲ್ಷ್ ನ ಪ್ರಮುಖ ವೈರಿ. ಇದನ್ನು ನಂತರ ಸಂಪೂರ್ಣವಾದ ಇಂಗ್ಲೆಂಡ್ ನ ಹೊಸ ಸಾಮ್ರಾಜ್ಯಕ್ಕೆ ಬಳಕೆ ಮಾಡಲಾಯಿತು (ಉದಾಹರಣೆ ರಚೆಲ್ ಬ್ರೊಂವಿಚ್ (ed.), ಟ್ರಿಯೋಎಡ್ಡ್ ವೈನೈಸ್ ಪ್ರಯ್ಡಿನ್ , ಯುನಿವೆರ್ಸಿಟಿ ಆಫ್ ವೇಲ್ಸ್ ಪ್ರಸಸ್, 1987). "ದಿ ಲಾಸ್ಟ್ ಲ್ಯಾಂಡ್" ಹಾಗು ಇತರ ಕಾಲ್ಪನಿಕ ಅರ್ಥಗಳು, ಉದಾಹರಣೆಗೆ ಜಿಯೋಫ್ಫ್ರಿ ಆಫ್ ಮಾನ್ ಮೌತ್ ನ ರಾಜ ಲೋಕ್ರಿನು ಗೆ ಯಾವುದೇ ವ್ಯುತ್ಪತ್ತಿಯ ಆಧಾರಗಳಿಲ್ಲ. (ಚರ್ಚೆಯನ್ನು ಸಹ ನೋಡಿ, ಲೇಖನ 40)
 46. Davies, John (1993). A History of Wales. London: Penguin. p. 100. ISBN 0-14-01-4581-8.
 47. Davies, John (1993). A History of Wales. London: Penguin. p. 128. ISBN 0-14-01-4581-8.
 48. "ಟ್ರಿಬ್ಯೂಟ್ ಟು ಲಾಸ್ಟ್ ವೆಲ್ಷ್ ಪ್ರಿನ್ಸೆಸ್ಸ್",bbc.co.uk ದಿನಾಂಕ 12 ಜೂನ್ 2000, URL 5 ಮಾರ್ಚ್ 2007ರಲ್ಲಿ ಮರುಸಂಪಾದಿಸಲಾಗಿದೆ
 49. "BBC - Liverpool - Features - Flooding Apology". BBC website. BBC Wales. 2005-10-19. Retrieved 2008-10-18.
 50. Gwynfor, Evans (2000). The Fight for Welsh Freedom. Y Lolfa Cyf., Talybont. p. 152. ISBN 0 86243 515 32. {{cite book}}: Check |isbn= value: length (help)
 51. ೫೧.೦ ೫೧.೧ Clews, Roy (1980). To Dream of Freedom - The story of MAC and the Free Wales Army. Y Lolfa Cyf., Talybont. pp. 15, 21 & 26–31. ISBN 0 86243 586 2.
 52. ಉಲ್ಲೇಖ ದೋಷ: Invalid <ref> tag; no text was provided for refs named BBC Er Cof
 53. BBC ನ್ಯೂಸ್| ವೇಲ್ಸ್ | ಡೀಟೈಲ್ಸ್ ಆಫ್ ಲೇಬರ್-ಪ್ಲೈಡ್ ಅಗ್ರೀಮೆಂಟ್
 54. "UK Parliament -Parliament's role". United Kingdom Parliament website. United Kingdom Parliament. 2009-06-29. Retrieved 2009-09-01.
 55. ೫೫.೦ ೫೫.೧ "Welsh Assembly Government:Devolution timeline". Welsh Assembly Government website. Welsh Assembly Government. 2009. Retrieved 2009-08-31.[ಶಾಶ್ವತವಾಗಿ ಮಡಿದ ಕೊಂಡಿ]
 56. "WalesOnline - News - Politics - Politics News - Carwyn Jones officially nominated as First Minister". WalesOnline website. Welsh Media Ltd. 2009-12-09. Retrieved 2009-12-09.
 57. ರಿಸಲ್ಟ್ಸ್: ವೇಲ್ಸ್ BBC ನ್ಯೂಸ್ ಜೂನ್, 2005
 58. [೧] Archived 2014-05-30 ವೇಬ್ಯಾಕ್ ಮೆಷಿನ್ ನಲ್ಲಿ. ವೆಲ್ಷ್ ಅಸೆಂಬ್ಲಿ ಸರಕಾರ/ ಸ್ಥಳೀಯ ಅಧಿಕಾರಿಗಳು
 59. {0/ನೋಡಿ ಮಇಕ್ ಸ್ಟೀಫನ್ಸ್ (ed.), {1}ಕಂಪಾನ್ಯನ್ ಟು ವೆಲ್ಷ್ ಲಿಟರೇಚರ್. ಕ್ರಮಬದ್ಧವಲ್ಲದ ಪದ್ಯವನ್ನು ಇಂಗ್ಲಿಷ್ ನಲ್ಲಿ ರಚಿಸಲಾಗಿತ್ತು, ಬಹುಶಃ ಆಫಾ'ಸ್ ಡೈಕ್ ನ ಸುತ್ತಮುತ್ತಲಿನ ಪ್ರವಾಸಿಗರಿಗೆ ಅನುಕೂಲವಾಗುವಂತೆ ರಚಿಸಲಾಗಿತ್ತು.
 60. metoffice.com Archived 2006-02-07 ವೇಬ್ಯಾಕ್ ಮೆಷಿನ್ ನಲ್ಲಿ. – ತಾಪಮಾನ
 61. "Met Office:Regional Climate: Wales". Met Office website. Met Office. 2009. Archived from the original on 2012-01-13. Retrieved 2009-10-06.
 62. metoffice.gov.uk – ಬಿಸಿಲು
 63. metoffice.gov.uk – ಮಳೆ
 64. Clark, Ross (2006-10-28). "The wetter, the better". The Independent. Archived from the original on 2013-12-27. Retrieved 2009-09-02.
 65. Philip, Catherine (2005-07-28). "40 die as one year's rain falls in a day". London: The Times. Retrieved 2009-09-02.
 66. "ಆರ್ಕೈವ್ ನಕಲು". Archived from the original on 2010-01-22. Retrieved 2010-06-10.
 67. "www.royalmint.gov.uk". Royal Mint website. Royal Mint. 2008-08-01. Archived from the original on 2007-10-14. Retrieved 2008-09-02.
 68. "The New Designs Revealed". Royal Mint website. Royal Mint. 2008-09-30. Archived from the original on 2008-05-22. Retrieved 2008-10-11.
 69. ಇಂಟ್ರೋಡಕ್ಷನ್ ಟು NHS ವೇಲ್ಸ್ 1960'ಸ್ www.wales.nhs.uk
 70. ಇಂಟ್ರೋಡಕ್ಷನ್ ಟು NHS ವೇಲ್ಸ್ - ಸ್ಟ್ಯಾಫ್ www.wales.nhs.uk
 71. ನ್ಯಾಷನಲ್ ಸ್ಟ್ಯಾಟಿಸ್ಟಿಕ್ಸ್ ಆನ್ಲೈನ್
 72. wales.gov.uk
 73. "ಇಂಗ್ಲಿಷ್ ಅಂಡ್ ವೆಲ್ಷ್ ಆರ್ ರೇಸಸ್ ಅಪಾರ್ಟ್", BBC , 30 ಜೂನ್ 2002
 74. ನ್ಯಾಷನಲ್ ಸ್ಟ್ಯಾಟಿಸ್ಟಿಕ್ಸ್ ಆನ್ಲೈನ್
 75. 2006 ಸೆನ್ಸಸ್("U.S. Census Bureau 2006 Census Fact Sheet". Archived from the original on 2020-02-12. Retrieved 2010-06-10. {{cite web}}: Unknown parameter |547;&-ds_name= ignored (help))
 76. [88] ^ಎಥ್‌ನಿಕ್ ಆರಿಜಿನ್ಸ್ 2006 ಕೌಂಟ್ಸ್, ಫಾರ್ ಕೆನಡ, ಪ್ರೊವಿನ್ಸ್ ಅಂಡ್ ಟೆರಿಟರಿಸ್ - 20% ಸ್ಯಾಂಪಲ್ ಡಾಟಾ. ಸ್ಟ್ಯಾಟಿಸ್ಟಿಕ್ಸ್ ಕೆನಡಾ.
 77. ಏ ಬೈಲಿಂಗ್ವಲ್ ವೇಲ್ಸ್ Archived 2009-02-10 ವೇಬ್ಯಾಕ್ ಮೆಷಿನ್ ನಲ್ಲಿ., 27 ಏಪ್ರಿಲ್ 2008ರಲ್ಲಿ ಮರುಸಂಕಲನಗೊಂಡಿದೆ
 78. 2004 ವೆಲ್ಷ್ ಲಾಂಗ್ವೇಜ್ ಸರ್ವೇ Archived 2008-03-19 ವೇಬ್ಯಾಕ್ ಮೆಷಿನ್ ನಲ್ಲಿ., www.bwrdd-yr-iaith.org.uk, 28 ಏಪ್ರಿಲ್ 2008ರಲ್ಲಿ ಮರುಸಂಕಲನಗೊಂಡಿದೆ
 79. 41,155 (1951 ಸೆನ್ಸಸ್: ವೇಲ್ಸ್ ಟೋಟಲ್ ಮೋನೋ ಗ್ಲೋಟ್ಸ್)
 80. BBC - ವೇಲ್ಸ್ - ಹಿಸ್ಟರಿ ಆಫ್ ರಿಲೀಜನ್  : ಮಲ್ಟಿಕಲ್ಚರಲ್ ವೇಲ್ಸ್
 81. ರಿಲೀಜಸ್ ಪಾಪ್ಯುಲೆಷನ್ಸ್- ನ್ಯಾಷನಲ್ ಸ್ಟ್ಯಾಟಿಸ್ಟಿಕ್ಸ್ ಆನ್ಲೈನ್
 82. "ಸೆಲ್ಟಿಕ್ ಆರ್ಟ್ ಇನ್ ಐರನ್ ಏಜ್ ವೇಲ್ಸ್, NMOW". Archived from the original on 2010-01-13. Retrieved 2010-06-10.
 83. "NMOW, ವೆಲ್ಷ್ ಆರ್ಟಿಸ್ಟ್ಸ್ ಆಫ್ ದಿ 18th ಸೆಂಚುರಿ". Archived from the original on 2010-01-25. Retrieved 2010-06-10.
 84. "ರಾಯಲ್ ಕ್ಯಾಮ್ಬ್ರಿಯನ್ ಅಕ್ಯಾಡೆಮಿ". Archived from the original on 2011-05-23. Retrieved 2010-06-10.
 85. "ಆರ್ಕೈವ್ ನಕಲು". Archived from the original on 2010-03-13. Retrieved 2010-06-10.
 86. BBC ಸ್ಪೋರ್ಟ್ - ರಿಸಲ್ಟ್ಸ್- ಮಂಗಳವಾರ 9 ಸೆಪ್ಟೆಂಬರ್. 9 ಸೆಪ್ಟೆಂಬರ್ 2008ರಲ್ಲಿ ಮರುಸಂಕಲನಗೊಂಡಿದೆ
 87. ಸರ್ಫಿಂಗ್ ಇನ್ ವೇಲ್ಸ್
 88. "Welsh language paper is unveiled". BBC News. 20 June 2007. Retrieved 2007-08-27.
 89. "Daily Welsh newspaper abandoned". BBC News Online. 15 February 2008.
 90. http://www.aber.ac.uk/~merwww/english/lang/ವೆಲ್ಷ್[ಶಾಶ್ವತವಾಗಿ ಮಡಿದ ಕೊಂಡಿ] .htm
 91. "BBC News - Wales - South West Wales - Ferry relaunch delayed until 2010". BBC News website. BBC News. 2009-05-06. Retrieved 2009-06-21.
 92. ದಿ ವೆಲ್ಷ್ ಅಕ್ಯಾಡೆಮಿ ಎನ್ಸೈಕ್ಲೋಪೆಡಿಯ ಆಫ್ ವೇಲ್ಸ್ pp189

ಬಾಹ್ಯ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ವೇಲ್ಸ್&oldid=1168083" ಇಂದ ಪಡೆಯಲ್ಪಟ್ಟಿದೆ