ಸಂಪಾದನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂಪಾದನೆಯು ಮಾಹಿತಿಯನ್ನು ತಿಳಿಸಲು ಬಳಸಲಾಗುವ ಬರಹ, ಫೋಟೋಗ್ರಫಿ, ದೃಶ್ಯ, ಶ್ರವ್ಯ, ಹಾಗೂ ಚಲನಚಿತ್ರ ಮಾಧ್ಯಮಗಳನ್ನು ಆಯ್ಕೆಮಾಡಿ ಸಿದ್ಧಗೊಳಿಸುವ ಪ್ರಕ್ರಿಯೆ. ಸಂಪಾದನೆಯ ಪ್ರಕ್ರಿಯೆಯು ದೋಷರಹಿತ, ಸಮಂಜಸ, ನಿಖರ ಹಾಗೂ ಪೂರ್ಣ ಕೃತಿಯನ್ನು ಸೃಷ್ಟಿಸುವ ಉದ್ದೇಶದಿಂದ ಮಾಡಲಾದ ತಿದ್ದುಪಡಿ, ಸಂಕ್ಷೇಪಣ, ವ್ಯವಸ್ಥೆಗೊಳಿಸುವಿಕೆ, ಮತ್ತು ಅನೇಕ ಇತರ ಮಾರ್ಪಾಡುಗಳನ್ನು ಒಳಗೊಳ್ಳಬಹುದು.[೧]

ಸಂಪಾದನೆಯ ಪ್ರಕ್ರಿಯೆಯು ಹಲವುವೇಳೆ ಸ್ವತಃ ಕೃತಿಗಾಗಿ ಲೇಖಕನ ಕಲ್ಪನೆಯಿಂದ ಆರಂಭವಾಗಿ, ಕೃತಿಯು ಸೃಷ್ಟಿಯಾದಂತೆ ಲೇಖಕ ಮತ್ತು ಸಂಪಾದಕ ನಡುವಿನ ಸಹಯೋಗವಾಗಿ ಮುಂದುವರಿಯುತ್ತದೆ. ಸಂಪಾದನೆಯು ಸೃಜನಾತ್ಮಕ ಕೌಶಲಗಳು, ಮಾನವ ಸಂಬಂಧಗಳು ಮತ್ತು ವಿಧಾನಗಳ ನಿಖರ ಸಮೂಹವನ್ನು ಒಳಗೊಳ್ಳಬಹುದು.[೨][೩]

ಉಲ್ಲೇಖಗಳು[ಬದಲಾಯಿಸಿ]

  1. Mamishev, Alexander, Williams, Sean, Technical Writing for Teams: The STREAM Tools Handbook, Institute of Electrical and Electronics Engineers, John Wiley & Sons. Inc., Hoboken, 2009, p. 128.
  2. "Encarta Dictionary definition of "editing"". Archived from the original on 22 October 2009. {{cite web}}: Unknown parameter |dead-url= ignored (help)
  3. "Encarta Dictionary definition of "editor"". Archived from the original on 6 February 2009. {{cite web}}: Unknown parameter |dead-url= ignored (help)
"https://kn.wikipedia.org/w/index.php?title=ಸಂಪಾದನೆ&oldid=923671" ಇಂದ ಪಡೆಯಲ್ಪಟ್ಟಿದೆ