ವಿಷಯಕ್ಕೆ ಹೋಗು

ವಿಕೇಂದ್ರೀಕರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೇಂದ್ರೀಕರಣದಿಂದ ಕೆಲವೇ ಮಂದಿ ಅಧಿಕಾರ ನಿರ್ವಹಿಸುವ ಬದಲು ಅಧೀನ ಸಿಬ್ಬಂಧಿಗಳೆಲ್ಲರೂ ನಿರ್ವಹಿಸುವುದಕ್ಕೆ ವಿಕೇಂದ್ರೀಕರಣ ಎನ್ನುವರು.

ವ್ಯಾಖ್ಯೆ:

[ಬದಲಾಯಿಸಿ]

ಲೂಯಿಸ್ ಅಲೆನ್ ರವರ ಪ್ರಕಾರ "ವಿಕೇಂದ್ರೀಕರಣವೆಂದರೆ ಕೇಂದ್ರೀಯವಾಗಿ ತೆಗೆದುಕೊಳ್ಳಬಹುದಾದ ನಿರ್ಧಾರಗಳನ್ನು ಹೊರತುಪಡಿಸಿ,ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಕೆಳಹಂತದ ಎಲ್ಲಾ ವರ್ಗದವರಿಗೂ ನೀಡುವ ವ್ಯವಸ್ಥಿತ ಪ್ರಯತ್ನವಾಗಿದೆ.

ವಿಕೇಂದ್ರೀಕರಣದ ಪ್ರಾಮುಖ್ಯತೆಗಳು:

[ಬದಲಾಯಿಸಿ]
೧.ಶೀಘ್ರ ನಿರ್ಧಾರ ಸಾಧ್ಯ:
[ಬದಲಾಯಿಸಿ]

ವ್ಯವಸ್ಥಾಪಕರು ತಮ್ಮ ನಿಗದಿತ ಕಾರ್ಯಗಳಲ್ಲಿ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರರಾಗಿರುತ್ತಾರೆ.

ಇದು ಅಧಿಕಾರ & ಜವಬ್ದಾರಿಗಳನ್ನು ವ್ಯವಸ್ಥಾಪಕರಿಗೆ ಹಂಚಿಕೆ ಮಾಡುತ್ತದೆ.ಇದರಿಂದ ಅಧಿಕಾರ ಕೇಂದ್ರೀಕರಣ ನಿಲ್ಲುವುದು &ಆಡಳಿತದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯಾಗುವುದು.

೩.ಮೇಲಾಧಿಕಾರಿಗಳ ಕೆಲಸದ ಹೊರೆ ಕಡಿಮೆ:
[ಬದಲಾಯಿಸಿ]

ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಕೆಳಹಂತದವರೆಗೂ ಹಂಚಿಕೆಯಾಗುವುದರಿಂದ ಮೇಲಾಧಿಕಾರಿಗಳ ಕಾರ್ಯದ ಒತ್ತಡ ಕಡಿಮೆಯಾಗುತ್ತದೆ.

೪.ನೌಕರರಿಗೆ ಉತ್ತೇಜನ:
[ಬದಲಾಯಿಸಿ]

ನೌಕರರು ತಮ್ಮ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದರಿಂದ ಅವರಿಗೆ ಕರ್ತವ್ಯದಲ್ಲಿ ತೃಪ್ತಿ ದೊರಕುತ್ತದೆ.

೫.ಬೆಳವಣಿಗೆಗೆ ಸಹಕಾರಿ:
[ಬದಲಾಯಿಸಿ]

ಇದು ನೌಕರರಲ್ಲಿ ಸ್ಪರ್ಧಾ ಮನೋಭಾವ ಬೆಳೆಸುತ್ತದೆ.

೬.ನಿರ್ವಾಹಕ ವಿಕಸನ:
[ಬದಲಾಯಿಸಿ]

ಸರಿಯಾದ ಸಮಯಕ್ಕೆ,ಅಧೀನ ಸಿಬ್ಬಂಧಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡುತ್ತದೆ.