ಲೀಕ್
ಗೋಚರ
ಲೀಕ್, ಈರುಳ್ಳಿ ಮತ್ತು ಬೆಳ್ಳುಳ್ಳಿ ಜೊತೆಗೆ, ಪ್ರಸ್ತುತ ಆಮರಿಲಿಡೇಸಿಯಿ ಕುಟುಂಬ, ಆಲಿಯೋಯಿಡಿಯೆ ಉಪಕುಟುಂಬದಲ್ಲಿ ಇರಿಸಲಾಗಿರುವ, ಆಲಿಯಮ್ ಜಾತಿಗೆ ಸೇರಿದ ಒಂದು ತರಕಾರಿ. ಐತಿಹಾಸಿಕವಾಗಿ, ಲೀಕ್‍ಗಳಿಗೆ ಅನೇಕ ವೈಜ್ಞಾನಿಕ ನಾಮಗಳನ್ನು ಬಳಸಲಾಗಿತ್ತು, ಈಗ ಇವುಗಳನ್ನು ಆಲಿಯಮ್ ಆಂಪೆಲೊಪ್ರೇಸಮ್‍ನ ತಳಿಗಳೆಂದು ಪರಿಗಣಿಸಲಾಗುತ್ತದೆ. ಕೆಲವೊಮ್ಮೆ ತಪ್ಪಾಗಿ ಕಾಂಡ ಅಥವಾ ದಂಟು ಎಂದು ಕರೆಯಲ್ಪಡುವ ಎಲೆ ಕೋಶಗಳ ಕಟ್ಟು ಲೀಕ್ ಸಸ್ಯದ ತಿನ್ನಲರ್ಹ ಭಾಗವಾಗಿದೆ.