ವಿಷಯಕ್ಕೆ ಹೋಗು

ರಷ್ಯಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ರಶಿಯಾ ಇಂದ ಪುನರ್ನಿರ್ದೇಶಿತ)
ರೂಸಿ ಒಕ್ಕೂಟ
Российская Федерация
ರೊಸ್ಸಿಯ್ಸ್ಕಾಯ ಫ್ಯೆದೆರಾತ್ಸಿಯ
Flag of ರಷ್ಯ
Flag
Coat of arms of ರಷ್ಯ
Coat of arms
Anthem: Государственный гимн Российской Федерации  (ರಷ್ಯನ್ ಭಾಷೆ)
ಗೊಸುದರ್ಸ್ತ್‌ವೆನ್ನಿ ಗಿಮ್ನ್ ರಸಿಸ್ಕೊಯ್ ಫೆಡರಾತ್ಸಿ  
ರೂಸಿ ಒಕ್ಕೂಟದ ರಾಷ್ಟ್ರಗೀತೆ
Location of ರಷ್ಯ
Capitalಮಾಸ್ಕೋ
Largest cityರಾಜಧಾನಿ
Official languagesರಷ್ಯನ್ ದೇಶದ ಅಧಿಕೃತ ಭಾಷೆ; ೨೭ ಇತರೆ
Ethnic groups
79.8% ರಷ್ಯನ್
3.8% ಟಟಾರ್
2.0% ಯುಕ್ರೇನಿನ ಜನ
1.2% ಬಷ್ಕಿರ್
೧೩.೨% ಇತರರು[]
GovernmentFederal ಅರೆ-ಅಧ್ಯಕ್ಷೀಯ ಗಣರಾಜ್ಯ
ಡಿಮಿಟ್ರಿ ಮೆಡ್ವೆಡೆವ್
ವ್ಲಾದಿಮಿರ್ ಪೂತಿನ್
LegislatureFederal Assembly
Federation Council
ದೂಮ
ಸ್ಥಾಪನೆ
8621
882
1169
1263
• ಜಾರ್ ಆಡಳಿತ
1547
1721
7 November 1917
1922
• ರೂಸಿ ಒಕ್ಕೂಟ
25 December 1991
• Water (%)
13[]
Population
• 2008 estimate
142,008,838[] (9th)
• 2002 census
145,166,731[]
GDP (PPP)2008 estimate
• Total
$2,261 trillion[]
• Per capita
$15,922[]
GDP (nominal)2008 estimate
• Total
$1,676 trillion[]
• Per capita
$11,807[]
Gini (2005)40.5[]
Error: Invalid Gini value
HDI (2005)Increase 0.806
Error: Invalid HDI value · 73rd
Currencyರೂಬಲ್ (RUB)
Time zoneUTC+2 to +12
• Summer (DST)
UTC+3 to +13
Driving sideright
Calling code+7
Internet TLD.ru (.su reserved), (.рф2 2009)
  1. The Russian Federation is one of the successors to earlier forms of continuous statehood, starting from the 9th Century AD when Rurik, a Viking warrior, established Novgorod, traditionally taken as the beginning of Russian statehood.
  2. The .рф Top-level domain will be available for use in the Russian Federation in the second quarter of 2009 and will only accept domains which use the Cyrillic alphabet.[]

ರಷ್ಯೆ ಅಥವಾ ರಷ್ಯಾ ಅಥವಾ ರಷ್ಯ ಅಥವಾ ರೂಸ್ (ಪ್ರಥಮ ವಿಭಕ್ತಿ: ರೂಸು) (ರೂಸಿ: Россия), ಅಧಿಕೃತವಾಗಿ ರೂಸಿ ಒಕ್ಕೂಟ (ರೂಸಿ: Российская Федерация)

,[][೧೦] ಉತ್ತರ ಯುರೇಷಿಯಾ (ಯುರೋಪ್‌ ಹಾಗೂ ಏಷ್ಯಾ ಒಟ್ಟಿಗೆ)[೧೧] ದಲ್ಲಿರುವ ಒಂದು ದೇಶ. ಇದೊಂದು 83 ಬಿಡಿ ಸಂಸ್ಥಾನಗಳನ್ನು ಹೊಂದಿರುವ ಅರೆ-ಅಧ್ಯಕ್ಷೀಯ ಒಕ್ಕೂಟವಾಗಿದೆ. ರಷ್್ಯತನ್ನ ಭೂಗಡಿಗಳನ್ನು ಈ ದೇಶಗಳೊಂದಿಗೆ ಹಂಚಿಕೊಂಡಿದೆ (ವಾಯುವ್ಯದಿಂದ ಆಗ್ನೇಯದವರೆಗೆ) : ನಾರ್ವೆ, ಫಿನ್‌ಲ್ಯಾಂಡ್‌, ಎಸ್ಟೊನಿಯಾ, ಲಾಟ್ವಿಯಾ, ಲಿಥುವೇನಿಯಾ (ಕಲಿನಿನ್‌ಗ್ರಾಡ್‌‌ ಓಬ್ಲಸ್ಟ್‌‌ ಮೂಲಕ), ಪೋಲೆಂಡ್‌ (ಕಲಿನಿನ್‌ಗ್ರಾಡ್‌‌ ಓಬ್ಲಸ್ಟ್‌‌ ಮೂಲಕ), ಬೆಲಾರೂಸ್, ಉಕ್ರೇನ್, ಜಾರ್ಜಿಯಾ, ಅಜರ್ಬೈಜಾನ್, ಕಜಕ್‌ಸ್ತಾನ್‌, ಚೀನಾ, ಮಂಗೋಲಿಯಾ ಮತ್ತು ಉತ್ತರ ಕೊರಿಯಾ. ಹಾಗೆಯೇ ಈ ದೇಶದ ಸಮುದ್ರ ತಡಿಯ ಗಡಿಗಳು ಜಪಾನ್‌ (ಓಖೋಟ್ಸ್ಕ್‌ ಸಮುದ್ರದಿಂದ ), ದಕ್ಷಿಣ ಕೊರಿಯಾ (ಜಪಾನ್‌ ಸಮುದ್ರದಿಂದ), ಸ್ವೀಡನ್‌ (ಬಾಲ್ಟಿಕ್ ಸಮುದ್ರದಿಂದ), ತುರ್ಕಿ (ಕಪ್ಪು ಸಮುದ್ರದಿಂದ), ಮತ್ತು ಯುನೈಟೆಡ್‌ ಸ್ಟೇಟ್ಸ್‌ (ಬೇರಿಂಗ್‌ ಜಲಸಂಧಿಯಿಂದ) ಗಳಿಂದ ಸುತ್ತುವರೆದಿದೆ. ೧೭ ಮಿಲಿಯನ್ ಚದರ ಕಿಮಿ ವಿಸ್ತೀರ್ಣದೊಂದಿಗೆ ರಷ್ಯಾ, ವಿಶ್ವದ ಅತಿ ದೊಡ್ಡ ದೇಶವಾಗಿದ್ದು, ೧೪೨ ಮಿಲಿಯನ್‌ ಜನರಿಂದ ಕೂಡಿ, ಜನಸಂಖ್ಯೆಯ ಪ್ರಮಾಣದಲ್ಲಿ ೯ನೆಯ ಅತಿ ದೊಡ್ಡ ದೇಶವಾಗಿದೆ.[] ಇದು ಯೂರೋಪ್‌ನ ೪೦% ಭಾಗವನ್ನು ಒಟ್ಟಾರೆಯಾಗಿ ವಿಸ್ತರಿಸಿದ್ದು, ೧೧ ಕಾಲಮಾನಗಳಲ್ಲಿ ವ್ಯಾಪಿಸಿ, ವಿವಿಧ ಮಾದರಿಯ ಪರಿಸರ ಹಾಗೂ ಭೂಲಕ್ಷಣಗಳನ್ನು ಹೊಂದಿದೆ. ರಷ್ಯಾದಲ್ಲಿ ವಿಶ್ವದಲ್ಲೇ ಅತಿ ಹೆಚ್ಚಿನ ಪ್ರಮಾಣದ ಖನಿಜ ಮತ್ತು ಶಕ್ತಿ ಸಂಪನ್ಮೂಲಗಳ[೧೨] ನಿಕ್ಷೇಪಗಳಿವೆ, ಹಾಗಾಗಿ ಶಕ್ತಿ ಸಂಪನ್ಮೂಲದಲ್ಲಿ ಮಹಾ ಶಕ್ತಿ ಎಂದೂ ಹೆಸರಾಗಿದೆ.ಇದು ವಿಶ್ವದ ಅತಿ ದೊಡ್ಡ ಅರಣ್ಯ ನಿಕ್ಷೇಪವನ್ನು ಹೊಂದಿದ್ದು ಇಲ್ಲಿನ ಸರೋವರಗಳು ಸರಿ ಸುಮಾರು ನಾಲ್ಕನೇ ಒಂದು ಭಾಗದಷ್ಟು ವಿಶ್ವದ ಘನೀಕೃತವಲ್ಲದ ಶುದ್ಧನೀರ[೧೩] ನ್ನು ಹೊಂದಿದೆ.

೩ನೇ ಮತ್ತು ೮ನೇ ಶತಮಾನ [೧೧] ಗಳಲ್ಲಿ ಯೂರೋಪ್‌ನ ಒಂದು ಗಮನಾರ್ಹ ಸಮೂಹವಾಗಿ ಹೊರ ಹೊಮ್ಮಿದ ಪೂರ್ವ ಸ್ಲಾವ್ ಜನರು‌‌ಗಳಿಂದ ಈ ದೇಶದ ಇತಿಹಾಸವು ಆರಂಭವಾಗಿತ್ತು. ಒಂದು ಉದಾತ್ತ ವೈಕಿಂಗ್ ಯೋಧ ವರ್ಗ ಹಾಗೂ ಅವರ ವಂಶಸ್ಥರಿಂದ ಸ್ಥಾಪಿತ ಕಿವಾನ್‌ ರುಸ್‌ ಎಂಬ ಪ್ರಥಮ ಸ್ಲಾವ್‌ ರಾಜ್ಯವಾಗಿ 9ನೇ ಶತಮಾನದಲ್ಲಿ ಹೊರಹೊಮ್ಮಿ, ಬೈಜಾಂಟೈನ್‌ ಸಾಮ್ರಾಜ್ಯವನ್ನು ಅನುಸರಿಸಿ ೯೮೮[೧೪] ರಲ್ಲಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಿತು. ಇದರಿಂದಾಗಿ ಬೈಜಾಂಟೈನ್‌ ಮತ್ತು ಸ್ಲಾವ್‌ ಸಂಸ್ಕೃತಿಗಳ ಸಂಯೋಜನೆಯಾಗಿ ಮುಂದಿನ ಸಹಸ್ರಮಾನದ ರಷ್ಯಾದ ಸಂಸ್ಕೃತಿಯಾಗಿ ಹೊರಹೊಮ್ಮಿತು. ಅಂತಿಮವಾಗಿ ಕಿವಾನ್‌ ರುಸ್‌ ವಿಭಜನೆಯಾಗಿ ಬಹಳಷ್ಟು ಸಣ್ಣ ಬಿಡಿ ಸಂಸ್ಥಾನಗಳಾಗಿ ಒಡೆಯಿತು. ಕಿವಾನ್‌ ರುಸ್‌ನ ನಂತರ ಶಕ್ತಿಶಾಲಿ ರಾಜ್ಯ ಮಾಸ್ಕೋ ಆಗಿತ್ತು. ಇದು ರಷ್ಯಾದ ಒಗ್ಗೂಡುವಿಕೆ ಹಾಗೂ ಸುವರ್ಣ ತಂಡದ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಶಕ್ತಿಯಾಗಿತ್ತು. ಮಾಸ್ಕೋ ಹಂತಹಂತವಾಗಿ ಅಕ್ಕಪಕ್ಕದ ರಷ್ಯಾದ ಸಂಸ್ಥಾನಗಳನ್ನು ಒಗ್ಗೂಡಿಸುತ್ತಾ ಕಿವಾನ್‌ ರುಸ್‌ನ ಸಾಂಸ್ಕೃತಿಕ ಹಾಗೂ ರಾಜಕೀಯ ಸಂಪ್ರದಾಯಗಳಲ್ಲಿ ಮೇಲುಗೈ ಸಾಧಿಸಿತು. ೧೮ನೇ ಶತಮಾನದ ವೇಳೆಗೆ, ಆಕ್ರಮಣ, ವಿಸ್ತರಣೆ ಹಾಗೂ ಭೂಶೋಧನೆಗಳಿಂದಾಗಿ ರಾಷ್ಟ್ರವು ಬಹಳ ವಿಸ್ತಾರವಾಗಿ, ಪೋಲೆಂಡ್‌ನಿಂದ ಪೂರ್ವದಿಕ್ಕಿನಲ್ಲಿ ಪೆಸಿಫಿಕ್‌ ಮಹಾಸಾಗರ ಹಾಗೂ ಅಲಾಸ್ಕಾಗಳನ್ನೆಲ್ಲಾ ಒಳಗೊಂಡು ಇತಿಹಾಸದಲ್ಲಿನ ೩ನೇ ಅತಿ ದೊಡ್ಡ ಚಕ್ರಾಧಿಪತ್ಯ ಎನಿಸಿ ರಷ್ಯಾದ ಚಕ್ರಾಧಿಪತ್ಯ ಎನಿಸಿಕೊಳ್ಳುವ ಮಟ್ಟಿಗೆ ಬೆಳೆಯಿತು.

ರಷ್ಯಾವು ವಿಶ್ವದಾದ್ಯಂತ ಅಧಿಕಾರ ಮತ್ತು ಪ್ರಭಾವವನ್ನು ರಷ್ಯಾದ ಚಕ್ರಾಧಿಪತ್ಯದ ಕಾಲದಿಂದ ಹಿಡಿದು, ಸೋವಿಯೆತ್‌ ಒಕ್ಕೂಟದ ಅಗ್ರ ಸದಸ್ಯವಾಗಿ, ವಿಶ್ವದ ಪ್ರಪ್ರಥಮ ಹಾಗೂ ಅತಿ ದೊಡ್ಡ ಸಂವಿಧಾನಾತ್ಮಕ ಸಮಾಜವಾದಿ ಆಡಳಿತ ಮತ್ತು ಮನ್ನಣೆ ಪಡೆದ ಉತ್ಕೃಷ್ಠ ಶಕ್ತಿ ಎನಿಸಿತು. ಕಲೆ ಹಾಗೂ ವಿಜ್ಞಾನದ[೧೧] ಪ್ರತಿ ಮಗ್ಗಲುಗಳಲ್ಲಿ ರಷ್ಯಾ ಉತ್ಕೃಷ್ಠತೆಯ ಬಗ್ಗೆ ದೀರ್ಘ ಪರಂಪರೆಯ ಹೆಗ್ಗಳಿಕೆ ಹೊಂದಿದೆ. ರಷ್ಯನ್‌ ಒಕ್ಕೂಟವನ್ನು ೧೯೯೧ರಲ್ಲಿ ಸೋವಿಯತ್‌ ಒಕ್ಕೂಟದ ವಿಭಜನೆಯ ನಂತರ ಸ್ಥಾಪಿಸಲಾಯಿತು. ಆದರೂ ಇದನ್ನು ಸೋವಿಯತ್‌ ಒಕ್ಕೂಟ[೧೫] ದ ಅಧಿಕೃತ ಪ್ರತಿನಿಧಿಯೆಂದೇ ಈಗಲೂ ಪರಿಗಣಿಸಲಾಗುತ್ತಿದೆ. ಇದು ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ಪ್ರಪಂಚದಲ್ಲಿ ಎಂಟನೇ ಸ್ಥಾನ, ಖರೀದಿ ಸಾಮಾರ್ಥ್ಯ ಸಮತೆಯಲ್ಲಿ ಆರನೇ ಸ್ಥಾನ ಹಾಗು ಸೇನಾ ಆಯವ್ಯಯದಲ್ಲಿ ಎಂಟನೇ ಸ್ಥಾನ ಹೊಂದಿದೆ. ಈ ದೇಶವು ಐದು ಗಣ್ಯ ಅಣ್ವಸ್ತ್ರ ಸಮರ್ಥ ದೇಶಗಳಲ್ಲಿ ಒಂದಾಗಿದೆ. ಸಮೂಹ ವಿನಾಶಕ ಶಸ್ತ್ರಾಸ್ತ್ರಗಳ[೧೬] ಬೃಹತ್‌ ಸಂಗ್ರಹವನ್ನೇ ಹೊಂದಿದೆ. ರಷ್ಯಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವ ಹೊಂದಿದೆಯಲ್ಲದೇ, G8, APEC ಹಾಗೂ SCOಗಳ ಸದಸ್ಯತ್ವ ಹೊಂದಿದೆ. ಸ್ವತಂತ್ರ ರಾಷ್ಟ್ರಗಳ ಕಾಮನ್‌ವೆಲ್ತ್‌ನ ಅಗ್ರಗಣ್ಯ ಸದಸ್ಯನಾಗಿದೆ.

ಭೂಗೋಳ

[ಬದಲಾಯಿಸಿ]

ಭೂಲಕ್ಷಣ, ಹವಾಗುಣ, ಆಹಾರ ವ್ಯವಸ್ಥೆ ಮತ್ತು ಮಣ್ಣಿನ ಲಕ್ಷಣಗಳು ಬಹಳ ದೂರ[೧೭] ವ್ಯಾಪಿಸಿವೆ. ಉತ್ತರದಿಂದ ದಕ್ಷಿಣದವರೆಗೂ ಪೂರ್ವ ಯೂರೋಪಿನ ಬಯಲುಗಳು ಟುಂಡ್ರಾ, ಕೋನಿಫೆರಸ್‌ ಅರಣ್ಯ (ಟೈಗಾ), ಮಿಶ್ರ ಮತ್ತು ವಿಶಾಲಪರ್ಣಿ ಕಾಡುಗಳು, ಹುಲ್ಲುಗಾವಲು (ಚಪ್ಪಟೆ ಮೈದಾನ), ಮತ್ತು ಅರೆ-ಮರಳುಗಾಡು (ಕ್ಯಾಸ್ಪಿಯನ್‌ ಸಮುದ್ರದ ಅಂಚುಗಳು)ಗಳಲ್ಲಿ ಅನುಕ್ರಮವಾಗಿ ಆವೃತವಾಗಿವೆ. ಇದು ಆಹಾರ ವ್ಯವಸ್ಥೆಯ ಬದಲಾವಣೆಗಳಿಗನುಗುಣವಾಗಿ, ಹವಾಗುಣದಲ್ಲಿ ಆಗುವ ಬದಲಾವಣೆಯನ್ನು ಸೂಚಿಸುತ್ತದೆ. ಸೈಬೀರಿಯಾವು ಸಹಾ ಇದೇ ಮಾದರಿಯ, ಆದರೆ ಕೇವಲ ಟೈಗಾದ ಅನುಕ್ರಮವನ್ನು ಹೊಂದಿದೆ. ಈ ರಾಷ್ಟ್ರವು 23 ವಿಶ್ವ ಪರಂಪರೆಯ ಸ್ಮಾರಕ ಕ್ಷೇತ್ರಗಳನ್ನು[೧೮] ಹಾಗೂ 40 UNESCO ಜೀವಮಂಡಲ ನಿಕ್ಷೇಪ[೧೯] ಗಳನ್ನೂ ಹೊಂದಿದೆ.

ಭೂಲಕ್ಷಣ

[ಬದಲಾಯಿಸಿ]

ರಷ್ಯಾದ ಎರಡು ವಿಶಾಲವಾದ ಮಿತಿಗಳು ಸುಮಾರು ಭೂಮಿತಿಯ ರೇಖೆಯುದ್ದಕ್ಕೂ 8,000 km (5,000 mi)ಯಷ್ಟು ಅಗಲವಾಗಿವೆ. ಈ ಮಿತಿಗಳು ಹೀಗಿವೆ : ಪೋಲೆಂಡ್‌ ಗಡಿಯಲ್ಲಿ ಗ್ಟಾನ್ಸ್‌ಕ್‌ ಕೊಲ್ಲಿಯಿಂದ ವಿಸ್ತುಲಾ ಖಾರಿಯನ್ನು ಪ್ರತ್ಯೇಕಿಸುವ 60 km ಉದ್ದದ (40-mi ಉದ್ದ) ದ್ವೀಪಕಲ್ಪದ ಚಾಚು; ಮತ್ತು ಕುರಿಲ್‌ ದ್ವೀಪಗಳ ಆಗ್ನೇಯಕ್ಕೆ ಅತಿ ದೂರದಲ್ಲಿ, ಜಪಾನ್‌ನ ಹೊಕ್ಕೈಡೊ ದ್ವೀಪದಿಂದ ಕೆಲ ಮೈಲುಗಳಷ್ಟು ದೂರ. ರೇಖಾಂಶದಲ್ಲಿ ಅತ್ಯಂತ ದೂರದ ಮಿತಿಗಳು ಸುಮಾರು 6,600 km (4,100 mi) ಭೂಮಿತಿ ರೇಖೆಯುದ್ದಕ್ಕೂ ಇವೆ. ಈ ಮಿತಿಗಳೆಂದರೆ ಪಶ್ಚಿಮದಲ್ಲಿ ಅದೇ ಚಾಚು; ಪೂರ್ವದಲ್ಲಿ ದೊಡ್ಡ ಡಯೋಮೀಡ್‌ ದ್ವೀಪ (ಓಸ್ಟ್ರಾವ್‌ ರಟ್ಮನೊವಾ).ರಷ್ಯನ್‌ ಒಕ್ಕೂಟವು 11 ಕಾಲಮಾನಗಳಷ್ಟು ವ್ಯಾಪಿಸಿದೆ.

ಜರಾಯ್ಸಕ್ ಸಮೀಪದ ಒಳನಾಡಿ ಕೇಂದ್ರ ರಷ್ಯಾ, ಮಾಸ್ಕೋ ಒಬ್ಲಾಸ್ಟ್
ತಗನ್ರಾಗ್ ಬಳಿಯ ಯಾಚ್ಟಿಂಗ್, ರೊಸ್ತೊವ್ ಬ್ಲಾಸ್ಟ್

ರಷ್ಯಾವು ವಿಶ್ವದ ಅತಿ ಹೆಚ್ಚಿನ ಅರಣ್ಯ ನಿಕ್ಷೇಪಗಳನ್ನು[೧೩] ಹೊಂದಿ "ಯೂರೋಪ್‌ನ ಶ್ವಾಸಕೋಶ" ಎಂಬ ಹೆಸರು ಪಡೆದಿದೆ.[೨೦] ಇಂಗಾಲದ ಡಯಾಕ್ಸೈಡ್‌ನ ಹೀರಿಕೆಯಲ್ಲಿ ಅಮೆಜಾನ್ ಮಳೆಕಾಡಿನ ನಂತರದ ಸ್ಥಾನ ಪಡೆದಿದೆ. ಇದು ಕೇವಲ ಯೂರೋಪ್‌ಗೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಅಗಾಧ ಪ್ರಮಾಣದ ಆಕ್ಸಿಜನ್‌ ಬಿಡುಗಡೆ ಮಾಡುತ್ತದೆ. ವಿಶ್ವದ 3 ಸಾಗರಗಳನ್ನು ಹೊಂದಿರುವ ಕಾರಣ — ಅಟ್ಲಾಂಟಿಕ್‌, ಆರ್ಕ್‌ಟಿಕ್‌ ಮತ್ತು ಪೆಸಿಫಿಕ್‌ — ರಷ್ಯಾದ ಮೀನುಗಾರರ ಪಡೆಯು ವಿಶ್ವದ ಮೀನು ಪೂರೈಕೆಗೆ ಪ್ರಧಾನ ಕೊಡುಗೆದಾರನಾಗಿದೆ.[೨೧] ವಿಶ್ವದಲ್ಲೇ ಉತ್ತಮವಾದ ಕ್ಯಾವಿಯರ್‌ಗಳಿಗೆ ಕ್ಯಾಸ್ಪಿಯನ್‌ ಮೂಲವಾಗಿದೆ.

ರಷ್ಯಾವು ಅಧಿಕ ಪ್ರಮಾಣದ ಬಯಲನ್ನು ಹೊಂದಿದ್ದು, ಮುಖ್ಯವಾಗಿ ದಕ್ಷಿಣದಲ್ಲಿ ಚಪ್ಪಟೆ ಮೈದಾನ ಮತ್ತು ಉತ್ತರದಲ್ಲಿ ಅರಣ್ಯಗಳಿದ್ದು, ಉತ್ತರ ಕರಾವಳಿಯುದ್ದಕ್ಕೂ ಟುಂಡ್ರಾಗಳನ್ನು ಹೊಂದಿದೆ. ದಕ್ಷಿಣ ಅಂಚಿನ ಉದ್ದಕ್ಕೂ ಕಾಕಾಸಸ್‌ (ಎಲ್‌ಬ್ರಸ್‌ ಪರ್ವತ, ರಷ್ಯಾದ ಮತ್ತು ಯೂರೋಪ್‌ನ ಅತ್ಯುನ್ನತ ಬಿಂದುವಿರುವ5,642 m (18,510 ft)ಗಳನ್ನೂ ಸೇರಿಸಿ) ಮತ್ತು ಅಲ್ಟೈ, ಮತ್ತು ಪೂರ್ವಭಾಗದಲ್ಲಿ, ವರ್ಕೋಯಾನ್ಸ್ಕ್‌ ಸಾಲು ಅಥವಾ ಕಂಚಟ್ಕಾದ ಅಗ್ನಿಪರ್ವತ ಪರ್ವತ ಶ್ರೇಣಿಗಳಿವೆ. ಉರಲ್‌ ಪರ್ವತಗಳು, ಖನಿಜ ನಿಕ್ಷೇಪಗಳಲ್ಲಿ ಶ್ರೀಮಂತವಾಗಿದ್ದು, ಯೂರೋಪ್‌ ಮತ್ತು ಏಷ್ಯಾಗಳನ್ನು ವಿಭಜಿಸುವ ಉತ್ತರ-ದಕ್ಷಿಣ ಪಟ್ಟಿಯಾಗಿದೆ. ರಷ್ಯಾವು ವಿಶ್ವದ 10% ಕೃಷಿಯೋಗ್ಯ ಭೂಮಿಯನ್ನು ಹೊಂದಿದೆ.[೨೨]

ಪಶ್ಚಿಮ ಸೈಬೀರಿಯಾ ಬಯಲು, ವಸ್ಯುಗನ್ ನಜಿ, ಟಾಮ್ಸ್ಕ್ ಒಬ್ಲಾಸ್ಟ್
ಸರನ್ಪೌಲ್, ಖಾಂಟಿ-ಮಾನ್ಸಿ ಸ್ವಯಮಾಡಳಿತ ಪ್ರಾಂತ್ಯ

ರಷ್ಯಾವು ಆರ್ಕ್‌ಟಿಕ್‌ ಮತ್ತು ಪೆಸಿಫಿಕ್‌ ಮಹಾಸಾಗರಗಳು, ಹಾಗೂ ಬಾಲ್ಟಿಕ್‌ ಸಮುದ್ರ, ಅಜೋವ್‌ ಸಮುದ್ರ, ಕಪ್ಪು ಮತ್ತು ಕ್ಯಾಸ್ಪಿಯನ್‌ ಸಮುದ್ರ[] ಗಳೂ ಸೇರಿದಂತೆ 37,000 ಕಿಲೋಮೀಟರು(23,000 mi)ಗಳಿಗೂ ಹೆಚ್ಚಿನ ವಿಸ್ತಾರವಾದ ಕರಾವಳಿಯನ್ನು ಹೊಂದಿದೆ. ಬೇರೆಂಟ್ಸ್‌ ಸಮುದ್ರ, ಶ್ವೇತ ಸಮುದ್ರ, ಕಾರಾ ಸಮುದ್ರ, ಲ್ಯಾಪ್‌ಟೆವ್‌ ಸಮುದ್ರ, ಪೂರ್ವ ಸೈಬೀರಿಯನ್‌ ಸಮುದ್ರ, ಚುಕ್ಚಿ ಸಮುದ್ರ, ಬೇರಿಂಗ್‌ ಸಮುದ್ರ, ಓಕೋಟ್ಸ್ಕ್‌‌ ಸಮುದ್ರ ಮತ್ತು ಜಪಾನ್‌ ಸಮುದ್ರಗಳು ರಷ್ಯಾದೊಂದಿಗೆ ಸಂಪರ್ಕ ಹೊಂದಿವೆ. ಇಲ್ಲಿರುವ ಪ್ರಮುಖ ದ್ವೀಪಗಳು ಮತ್ತು ದ್ವೀಪ ಸಮೂಹಗಳೆಂದರೆ ನೊವಾಯಾ ಜೆಮ್ಲ್ಯಾ, ಫ್ರಾನ್ಜ್‌ ಜೋಸೆಫ್‌ ಲ್ಯಾಂಡ್‌, ಸೆವೆರ್ನಾಯಾ ಜೆಮ್ಲ್ಯಾ, ನವ ಸೈಬೀರಿಯನ್‌ ದ್ವೀಪಗಳು, ರ್ಯಾಂಗೆಲ್‌ ದ್ವೀಪ, ಕುರಿಲ್‌ ದ್ವೀಪಗಳು ಮತ್ತು ಸಖಾಲಿನ್‌. ಡಯೋಮೀಡ್‌ ದ್ವೀಪಗಳು (ರಷ್ಯಾದ ನಿಯಂತ್ರಣದಲ್ಲಿ ಒಂದು, ಇನ್ನೊಂದು ಯುನೇಟೆಡ್‌ ಸ್ಟೇಟ್ಸ್‌‌ ನಿಯಂತ್ರಣದಲ್ಲಿದೆ) ಕೇವಲ ಮೂರು ಕಿಲೋಮೀಟರ್‌ಗಳ(1.9 mi) ಅಂತರದಲ್ಲಿವೆ, ಮತ್ತು ಹೊಕ್ಕಾಯ್ಡೋನಿಂದ ಕುನಶಿರ್‌ ದ್ವೀಪವು ಸುಮಾರು ಇಪ್ಪತ್ತು ಕಿಲೋಮೀಟರ್‌(12 mi)ಗಳಷ್ಟು ದೂರದಲ್ಲಿದೆ.

ರಷ್ಯಾದಲ್ಲಿ ಸಾವಿರಾರು ನದಿಗಳು ಮತ್ತು ಒಳನಾಡಿನ ಕೆರೆಗಳಿರುವುದರಿಂದ, ವಿಶ್ವದ ಅತಿಹೆಚ್ಚಿನ ಪ್ರಮಾಣದ ಭೂಮಟ್ಟದ ಜಲಮೂಲಗಳನ್ನು ಹೊಂದಿರುವ ಹೆಗ್ಗಳಿಕೆ ಹೊಂದಿದೆ. ರಷ್ಯಾದ ಶುದ್ಧಜಲಮೂಲಗಳಲ್ಲಿ ಅತಿ ದೊಡ್ಡದು ಹಾಗೂ ಪ್ರಮುಖವಾದುದೆಂದರೆ ಬೈಕಲ್‌ ಸರೋವರ . ಇದು ವಿಶ್ವದ ಆಳದ, ನಿರ್ಮಲ, ಬಹಳಷ್ಟು ಪ್ರಾಚೀನ ಹಾಗೂ ಹೆಚ್ಚು ವಿಶಾಲವಾದ ಶುದ್ಧನೀರಿನ ಸರೋವರ.[೨೩] ಬೈಕಲ್‌ ಸರೋವರವೊಂದರ ಮೇಲ್ಮೈ ಶುದ್ಧನೀರಿನ ಪ್ರಮಾಣವೇ ಇಡೀ ವಿಶ್ವದ ಐದನೇ ಒಂದು ಭಾಗದಷ್ಟಿದೆ.[೨೪] ಉಳಿದ ಪ್ರಮುಖ ಸರೋವರಗಳೆಂದರೆ ಯೂರೋಪ್‌ನ ಅತಿ ದೊಡ್ಡ ಸರೋವರಗಳಾದ ಲಡೋಗಾ ಸರೋವರ ಮತ್ತು ಒನೇಗಾ ಸರೋವರ. ರಷ್ಯಾದ 100,000 ನದಿಗಳ ಪೈಕಿ,[೨೫] ವೋಲ್ಗಾ ಅತ್ಯಂತ ಪ್ರಸಿದ್ಧ.ವೋಲ್ಗಾ ಯುರೋಪ್‌ನ ಅತಿ ಉದ್ದನೆಯ ನದಿಯಾಗಿ ಹೆಸರುವಾಸಿಯಾಗಿರವುದಲ್ಲದೆ, ರಷ್ಯಾದ ಇತಿಹಾಸದಲ್ಲಿ ವಹಿಸಿದ ಪಾತ್ರವೂ ಇದಕ್ಕೆ ಪ್ರಮುಖ ಕಾರಣ.ರಷ್ಯಾವು ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಕಲ್ಲಿದ್ದಲು, ದೇವದಾರು ಮತ್ತು ಖನಿಜ ನಿಕ್ಷೇಪಗಳು[][೨೬] ಸೇರಿದಂತೆ, ಇತರ ಯಾವುದೇ ರಾಷ್ಟ್ರವೂ ಹೊಂದಿರದಷ್ಟು ನೈಸರ್ಗಿಕ ಸಂಪನ್ಮೂಲಗಳ ವಿಶಾಲವಾದ ನೆಲೆಯನ್ನು ಹೊಂದಿದೆ.

ಹವಾಗುಣ

[ಬದಲಾಯಿಸಿ]

ರಷ್ಯನ್‌ ಒಕ್ಕೂಟದ ಹವಾಗುಣವು ಅನೇಕ ನಿರ್ಣಾಯಕ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ರಾಷ್ಟ್ರದ ಬೃಹತ್‌ ಗಾತ್ರದಿಂದಾಗಿ ಮತ್ತು ಸಮುದ್ರ ತೀರದಿಂದ ಬಹಳ ದೂರವಿರುವುದರಿಂದ ಪ್ರಧಾನವಾಗಿ ತೇವಾಂಶದಿಂದ ಕೂಡಿದ ಖಂಡಾಂತರ ಮತ್ತು ಶೀತವಲಯ‌ ಹವಾಗುಣಗಳನ್ನು ಹೊಂದಿದೆ. ಟುಂಡ್ರಾ ಮತ್ತು ಆಗ್ನೇಯ ದಿಕ್ಕಿನ ತುತ್ತ ತುದಿಯ ಭಾಗಗಳನ್ನು ಬಿಟ್ಟರೆ ಉಳಿದಂತೆ ಯೂರೋಪ್‌ಗೆ ಮತ್ತು ಏಷ್ಯಾಗೆ ಸೇರಿದ ರಷ್ಯಾದ ಎರಡೂ ವಿಭಾಗಗಳಲ್ಲಿ ಈ ಹವಾಗುಣ ಸಾಮಾನ್ಯವಾಗಿರುತ್ತದೆ.[೧೭] ಅತ್ತ ದಕ್ಷಿಣದಲ್ಲಿರುವ ಪರ್ವತಗಳು ಹಿಂದೂ ಮಹಾಸಾಗರದಿಂದ ಬರುವ ಬಿಸಿಗಾಳಿಯನ್ನು ತಡೆದರೆ, ಇತ್ತ ಪಶ್ಚಿಮ ಮತ್ತು ಉತ್ತರ ದಿಕ್ಕಿನಲ್ಲಿರುವ ಬಯಲು ಪ್ರದೇಶಗಳು ದೇಶದ ಮೇಲೆ ಆರ್ಕ್‌ಟಿಕ್‌ ಮತ್ತು ಅಟ್ಲಾಂಟಿಕ್‌ ಪ್ರಭಾವ ಬೀರುನಂತೆ ಮಾಡಿವೆ.[೨೭]

ಇಡೀ ಭೂಪ್ರದೇಶದುದ್ದಕ್ಕೂ ಕೇವಲ ಎರಡು ಪ್ರತ್ಯೇಕ ಋತುಗಳಿವೆ - ಚಳಿಗಾಲ ಮತ್ತು ಬೇಸಿಗೆ; ವಸಂತ ಮತ್ತು ಶರತ್ಕಾಲಗಳು ಕೇವಲ ತೀವ್ರ ಚಳಿಗಾಲ ಮತ್ತು ತೀವ್ರ ಬೇಸಿಗೆ ಕಾಲ[೨೭] ದ ನಡುವಿನ ಬದಲಾವಣೆಯ ಅಲ್ಪಾವಧಿಯಲ್ಲಿ ತೋರುತ್ತವೆ. ತೀವ್ರ ಶೀತದ ತಿಂಗಳೆಂದರೆ ಜನವರಿ(ತೀರ ಪ್ರದೇಶಗಳಲ್ಲಿ - ಫೆಬ್ರವರಿ), ತೀವ್ರ ಬೇಸಿಗೆಯೆಂದರೆ ವಾಡಿಕೆಯಂತೆ ಜುಲೈನಲ್ಲಿರುತ್ತದೆ.ಉಷ್ಣತೆಯಲ್ಲಿನ ಬೃಹತ್‌ ಪ್ರಮಾಣದ ವ್ಯತ್ಯಾಸ ಸಹಜ. ಚಳಿಗಾಲದಲ್ಲಿ ದಕ್ಷಿಣದಿಂದ ಉತ್ತರಕ್ಕೆ ಹಾಗೂ ಪಶ್ಚಿಮದಿಂದ ಪೂರ್ವಕ್ಕೆ ಉಷ್ಣತೆ ಕಡಿಮೆಯಾಗುತ್ತಾ ಹೋಗುತ್ತದೆ.[೧೭] ಬೇಸಿಗೆ ಕಾಲವು ಸಾಕಷ್ಟು ಉಷ್ಣತೆ ಮತ್ತು ತೇವಾಂಶವನ್ನು ಹೊಂದಿರುತ್ತದೆ. ಸೈಬೀರಿಯಕ್ಕೂ ಇದು ಅನ್ವಯಿಸುತ್ತದೆ. ಸೋಚಿಯ ಸುತ್ತಮುತ್ತಲಿನ ಕಪ್ಪು ಸಮುದ್ರದ ಕರಾವಳಿಯ ಚಿಕ್ಕ ಭಾಗವು ಸಮಶೀತೋಷ್ಣ ಹವಾಗುಣವನ್ನು ಹೊಂದಿದೆ.[೨೮] ಖಂಡಾಂತರ ಒಳನಾಡು ತೀವ್ರ ಒಣಪ್ರದೇಶವಾಗಿದೆ.

ಇತಿಹಾಸ

[ಬದಲಾಯಿಸಿ]

ಪ್ರಾಚೀನ ಅವಧಿ

[ಬದಲಾಯಿಸಿ]
ಕುರ್ಗನ್ ಊಹನೆ: ದಕ್ಷಿಣ ರಷ್ಯಾ ಇಂಡೋ-ಯುರೋಪ್ ಜನರ ಉರ್ ಹೈಮಾಟ್

ಪ್ರಾಗೈತಿಹಾಸಿಕ ಕಾಲದಲ್ಲಿ ದಕ್ಷಿಣ ರಷ್ಯಾದ ವಿಸ್ತಾರವಾದ ಚಪ್ಪಟೆ ಮೈದಾನಗಳು ಅಸಂಘಟಿತ ಅಲೆಮಾರಿ ಕುರುಬರ ಬುಡಕಟ್ಟುಗಳ ವಾಸಸ್ಥಾನವಾಗಿತ್ತು . ಸಾಂಪ್ರದಾಯಿಕ ಪ್ರಾಚೀನತೆಯಲ್ಲಿ ಪಾಂಟಿಕ್‌ ಚಪ್ಪಟೆ ಮೈದಾನ ಸಿಥಿಯಾ ಎಂದು ಕರೆಸಿಕೊಳ್ಳುತ್ತಿತ್ತು.[೨೯] ಚಪ್ಪಟೆ ಮೈದಾನ ನಾಗರೀಕತೆಗಳ ಅವಶೇಷಗಳು 20ನೇ ಶತಮಾನದ ಕಾಲದಲ್ಲಿ ಪತ್ತೆಯಾದವು ಐಪಾಟೊವೊ,[೨೯] ಸಿಂತಾಷ್ಟಾ,[೩೦] ಅರ್ಕಾಯಿಂ,[೩೧] ಮತ್ತು ಪೆಜಿರಿಕ್‌.[೩೨] 8ನೇ ಶತಮಾನದಿಂದೀಚೆಗೆ BC, ಗ್ರೀಕ್‌ ವ್ಯಾಪಾರಿಗಳು ಸಾಂಪ್ರದಾಯಿಕ ನಾಗರೀಕತೆಯನ್ನು ಟನಾಯ್ಸ್‌ ಮತ್ತು ಫನಾಗೊರಿಯಾ[೩೩] ಮಾರುಕಟ್ಟೆಗಳಿಗೆ ತಂದರು. ಮೂರು ಮತ್ತು ಆರನೇ ಶತಮಾನBC ಗಳ ನಡುವೆ, ಬೋಸ್ಫೋರನ್‌ ಸಾಮ್ರಾಜ್ಯವು, ಗ್ರೀಕ್‌ ವಸಾಹತುಗಳ ಉತ್ತರಾಧಿಕಾರಿಯಾದ ಹೆಲೆನಿಸ್ಟಿಕ್‌ ರಾಜ್ಯ ವ್ಯವಸ್ಥೆ ವು [೩೪] ಹುನ್‌ಗಳು ಮತ್ತು ತುರ್ಕಿಯ ಆವರ್‌ಗಳು ಮುಂತಾದ ಸಮರೋತ್ಸಾಹಿ ಬುಡಕಟ್ಟುಗಳ ಅಲೆಮಾರಿ ಆಕ್ರಮಣ[೩೫] ಗಳಿಂದಾಗಿ ಕಂಗೆಟ್ಟಿತು. ಖಾಜರ್‌ಗಳು ಎಂದು ಹೆಸರಾದ ತುರ್ಕಿ ಜನರು, ಕ್ಯಾಸ್ಪಿಯನ್‌ ಮತ್ತು ಕಪ್ಪು ಸಮುದ್ರಗಳ ನಡುವಿರುವ ಕೆಳ ವೋಲ್ಗಾ ಜಲಾನಯನ ಪ್ರದೇಶದ ಚಪ್ಪಟೆ ಮೈದಾನ ಗಳನ್ನು 8ನೇ ಶತಮಾನ[೩೬] ದವರೆಗೆ ಆಳಿದರು.

ವರಾಂಗಿಯನ್ನರು ಆಗಮಿಸಿದ ಸಂದರ್ಭದಲ್ಲಿ ಯುರೋಪಿಯನ್ ರಷ್ಯಾದಲ್ಲಿದ್ದ ಸಂಸ್ಕೃತಿಯ ಅಂದಾಜು ನಕ್ಷೆ

ಸ್ಲಾವಿಕ್‌ ಬುಡಕಟ್ಟಿನವರು ಆಧುನಿಕ ರಷ್ಯನ್ನರ ಪೂರ್ವಜರು, ಕೆಲ ತಜ್ಞರ ಪ್ರಕಾರ ಗಿಡಮರಗಳಿಂದ ತುಂಬಿದ್ದ ಪಿನ್ಸ್ಕ್‌ ಮಾರ್ಷಸ್‌[೩೭] ಇವರ ಮೂಲ ವಾಸಸ್ಥಾನವಾಗಿತ್ತು . ಜರ್ಮೇನಿಕ್‌ ಬುಡಕಟ್ಟಿನ ಜನರ ವಲಸೆಯಿಂದ ಖಾಲಿಯಾದ ಸ್ಥಳಕ್ಕೆ ಚಲಿಸಿದ ಪ್ರಾಚೀನ ಪೂರ್ವ ಸ್ಲಾವ್‌ಗಳು ಎರಡು ಪ್ರತ್ಯೇಕ ದಿಕ್ಕಿನಲ್ಲಿ ಕ್ರಮೇಣವಾಗಿ ಪಶ್ಚಿಮ ರಷ್ಯಾದಲ್ಲಿ ನೆಲೆಗೊಂಡರು: ಒಂದು ಗುಂಪು ಕಿಯೆವ್‌ನಿಂದ ಈಗಿನ ಸುಜ್‌ಡಲ್‌ ಮತ್ತು ಮುರೊಮ್‌ ಕಡೆಗೆ ಮತ್ತು ಇನ್ನೊಂದು ಪೊಲೊಟ್‌ಸ್ಕ್‌ನಿಂದ ನೊವ್‌ಗೊರೊಡ್‌ ಮತ್ತು ರೊಸ್ಟೊವ್‌ ಕಡೆಗೆ[೩೮] ಹೋದರು. 7ನೇ ಶತಮಾನದ ನಂತರ, ಪೂರ್ವ ಸ್ಲಾವ್‌ಗಳು ಪಶ್ಚಿಮ ರಷ್ಯಾ[೩೮] ದಲ್ಲಿ ಬಹುಸಂಖ್ಯಾತರಾದರು ಮತ್ತು ನಿಧಾನವಾಗಿ ಅಲ್ಲದೇ ಶಾಂತಿಯುತವಾಗಿ ಮೆರ್ಯಾಗಳು,[೩೯] ಮುರೋಮಿಯನ್‌ಗಳು,[೪೦] ಹಾಗೂ ಮೆಷ್‌ಚೆರಾ[೪೧] ಗಳೂ ಸೇರಿದಂತೆ ಸ್ಥಳೀಯ ಫಿನ್ನೊ-ಉಗ್ರಿಕ್‌ ಬುಡಕಟ್ಟಿನವರೊಂದಿಗೆ ಮಿಳಿತಗೊಂಡರು.

ಕಿವಾನ್‌ ರುಸ್‌'

[ಬದಲಾಯಿಸಿ]
11ನೇ ಶತಮಾನದ ಕಿವಾನ್‌ ರುಸ್‌

ರಷ್ಯಾ, ಉಕ್ರೇನ್‌ ಮತ್ತು ಬೆಲಾರಸ್‌ಗಳ ಹಿಂದಿನ ಸಾಮ್ರಾಜ್ಯವಾಗಿ ಕಿವಾನ್‌ ರುಸ್‌ 9ನೇ ಶತಮಾನದಲ್ಲಿ ಸ್ಥಾಪನೆಯಾಯಿತು. "ವೈಕಿಂಗ್‌ಗಳು" ಎಂದು ಪಶ್ಚಿಮ ಮತ್ತು "ವರಂಗಿಯೆನ್ಸ್‌" ಎಂದು ಪೂರ್ವ ಯೂರೋಪ್‌[೪೨] ನಲ್ಲಿ ಕರೆಸಿಕೊಂಡ ಸ್ಕಾಂಡಿನೇವಿಯಾದ ನಾರ್ಸ್‌ಮನ್‌ಗಳು ಉತ್ತರ ಯೂರೋಪ್‌ನ ಪರ್ಯಟನ ಸಮಯದಲ್ಲಿ ಜೊತೆಗೂಡಿ ಕಡಲ್ಗಳ್ಳತನ ಮತ್ತು ವ್ಯಾಪಾರಗಳೆರಡನ್ನು ಮಾಡಿದರು. 9ನೇ ಶತಮಾನದ ಮಧ್ಯಭಾಗದಲ್ಲಿ ಬಾಲ್ಟಿಕ್‌ ಸಮುದ್ರ ಪೂರ್ವಭಾಗದಿಂದ ಕಪ್ಪು ಮತ್ತು ಕ್ಯಾಸ್ಪಿಯನ್‌ ಸಮುದ್ರಗಳ[೪೩] ಜಲಮಾರ್ಗದುದ್ದಕ್ಕೂ ಯಾನ ಕೈಗೊಂಡರು. ರಷ್ಯಾದ ಪ್ರಾಚೀನ ಚರಿತ್ರೆಯ ಪ್ರಕಾರ, ರುರಿಕ್‌ ಎಂಬ ಹೆಸರಿನ ಓರ್ವ ವರಂಗಿಯನ್‌ (ಕೊನುಂಗ್‌ ಅಥವಾ ಕ್ನ್ಯಾಜ್‌ ) ನವ್‌ಗೋರೊಡ್‌ನ ರಾಜನಾಗಿ ಸುಮಾರು 860[೧೪] ನೇ ಇಸವಿಯಲ್ಲಿ ಆಯ್ಕೆಯಾದನು; ಆತನ ಉತ್ತರಾಧಿಕಾರಿಗಳು ದಕ್ಷಿಣಕ್ಕೆ ಸಂಚರಿಸಿ ಕಿಯೆವ್‌[೪೪] ವರೆಗೆ ತಮ್ಮ ಆಡಳಿತವನ್ನು ವಿಸ್ತರಿಸಿದರು. ಇಲ್ಲಿ ಈ ಹಿಂದೆ ಖಾಜರ್‌ಗಳು[೪೫] ಆಡಳಿತ ನಡೆಸಿದ್ದರು.

10ರಿಂದ 11ನೇ ಶತಮಾನಗಳ ಅವಧಿಯಲ್ಲಿ ಕಿವಾನ್‌ ರುಸ್‌' ಯೂರೋಪ್‌[೪೬] ನಲ್ಲೇ ಅತ್ಯಂತ ದೊಡ್ಡ ಹಾಗೂ ಸಮೃದ್ಧ ರಾಜ್ಯವಾಯಿತು. ವ್ಲಾಡಿಮಿರ್‌ ಮಹಾಶಯ (980-1015) ಮತ್ತು ಆತನ ಮಗ ಯರೊಸ್ಲಾವ್‌ I ಮಹಾ ಚತುರ (1019–1054) ರ ಆಳ್ವಿಕೆಗಳು ಕಿಯೆವ್‌ಸುವರ್ಣ ಯುಗ ಎನಿಸಿಕೊಂಡವು. ಇದೇ ಸಮಯದಲ್ಲಿ ಸಾಂಪ್ರದಾಯಿಕ ಕ್ರೈಸ್ತ ಧರ್ಮವನ್ನು ಸ್ವೀಕರಿಸಲಾಯಿತು ಮತ್ತು ರುಸ್‌ಕಯಾ ಪ್ರವ್ಡಾ ಎಂಬ ಪ್ರಥಮ ಪೂರ್ವ ಸ್ಲಾವಿಕ್‌ ಲಿಖಿತ ನ್ಯಾಯ ನಿಯಮಾವಳಿಗಳನ್ನು ರಚಿಸಲಾಯಿತು.

11 ಮತ್ತು 12ನೇ ಶತಮಾನಗಳಲ್ಲಿ, ಕಿಪ್‌ಚಕ್‌ ಗಳಂತಹಾ ಹಾಗೂ ಪೆಛೆನೆಗ್‌ಗಳು ಅಲೆಮಾರಿ ತುರ್ಕಿಯ ಬುಡಕಟ್ಟಿನ ಜನರ ನಿರಂತರ ಹಠಾತ್‌ ದಾಳಿಗಳು, ಸ್ಲಾವಿಕ್‌ ಜನರನ್ನು ಸಾಮೂಹಿಕವಾಗಿ ಉತ್ತರದ, ಸುರಕ್ಷಿತ ದಟ್ಟಅರಣ್ಯ ಪ್ರದೇಶಗಳೆಡೆ ಅದರಲ್ಲೂ ವಿಶೇಷವಾಗಿ ಜೇಲ್‌ಸ್ಯೆ[೪೭] ಎಂಬ ಪ್ರದೇಶದ ಕಡೆಗೆ, ವಲಸೆ ಹೋಗುವ ಹಾಗೆ ಮಾಡಿತು. ಯುರೇಷ್ಯಾದ ಇನ್ನಿತರ ಭಾಗಗಳ ಹಾಗೆ, ಈ ಪ್ರದೇಶಗಳೂ ಸಹಾ ಮಂಗೋಲಿಯನ್ನರ ದಾಳಿಪೀಡಿತವಾದವು. ಈ ದಾಳಿ[೪೮] ಯಿಂದಾಗಿ ಜನಸಂಖ್ಯೆ ಅರ್ಧಕ್ಕಿಂತಲೂ ಹೆಚ್ಚಿಗೆ ಅಳಿಯಿತು. ಟಾಟರ್‌ಗಳು ಎಂದು ಹೆಸರಾದ ಈ ದಾಳಿಕೋರರು, ನಂತರ ಸುವರ್ಣ ತಂಡ ಎಂಬ ರಾಜ್ಯವನ್ನು ಕಟ್ಟಿದರು, ರಷ್ಯಾದ ವಿಶಾಲ ಪ್ರದೇಶವನ್ನು ಕೊಳ್ಳೆ ಹೊಡೆದುದಲ್ಲದೇ, ದಕ್ಷಿಣ ಮತ್ತು ಮಧ್ಯ ರಷ್ಯಾಗಳನ್ನು ಮೂರು ಶತಮಾನಗಳಿಗೂ ಹೆಚ್ಚಿನ ಕಾಲ ಆಳಿದರು. ಮಂಗೋಲರ ಆಡಳಿತ ರಾಜ್ಯದ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆ[೪೯] ಯನ್ನು ಕುಂಠಿತಗೊಳಿಸಿತು. ಆದರೂ, ನವ್‌ಗೊರೊಡ್‌ ಗಣರಾಜ್ಯವು ಪೊಸ್ಕೊವ್‌ನೊಂದಿಗೆ ಸ್ವಲ್ಪ ಮಟ್ಟಿನ ಸ್ವಯಂ ಆಡಳಿತವನ್ನು ಮಂಗೋಲ್‌ ಯೋಕ್‌ನ ಕಾಲದಲ್ಲಿ ಪಡೆದುಕೊಂಡಿತು ಹಾಗೂ ದೇಶದ ಉಳಿದ ಭಾಗವನ್ನು ಆವರಿಸಿದ್ದ ಅಮಾನವೀಯ ಕೃತ್ಯಗಳಿಂದ ಪಾರಾಯಿತು. ಅಲೆಕ್ಸಾಂಡರ್‌ ನೆವ್‌ಸ್ಕಿ ನೇತೃತ್ವದಲ್ಲಿ, ನವ್‌ಗೊರೊಡಿಯನ್ನರು ಪ್ರದೇಶವನ್ನು ವಸಾಹತುವನ್ನಾಗಿ ಮಾಡಿಕೊಳ್ಳಬೇಕೆಂದಿದ್ದ ಜರ್ಮನಿಯ ಧಾರ್ಮಿಕ ಯೋಧರನ್ನು ಹಿಮ್ಮೆಟ್ಟಿಸಿದರು. ಅಂತಿಮವಾಗಿ, ದೇಶವನ್ನು ಸಮಷ್ಟಿಯಾಗಿ ಆಳುತ್ತಿದ್ದ ಅರಸು ಮನೆತನದ ಸದಸ್ಯರ ಆಂತರಿಕ ವೈಮನಸ್ಯದಿಂದಾಗಿ ಕಿವಾನ್‌ ರುಸ್‌ ಒಂದು ವಿಭಜಿತ ದೇಶವಾಯಿತು. ಈಶಾನ್ಯದಲ್ಲಿ ವ್ಲಾಡಿಮಿರ್‌ -ಸುಜ್‌ಡಲ್‌, ವಾಯುವ್ಯದಲ್ಲಿ ನವ್‌ಗೊರೊಡ್‌ ಮತ್ತು ನೈಋತ್ಯದಲ್ಲಿ ಗಲಿಷಿಯ-ವೊಲ್ಹಿನಿಯಾಗಳಿಗೆ ಅನುಕೂಲವಾಗಲೆಂಬಂತೆ ಕಿಯೆವ್‌ನ ಪ್ರಾಬಲ್ಯ ಕುಸಿತ ಕಂಡಿತು. 13ನೇ ಶತಮಾನದಲ್ಲಿನ ಸುವರ್ಣ ತಂಡದ ಆಕ್ರಮಣವೇ ಅಂತಿಮ ಹೊಡೆತವಾಗಿ 1240[೫೦][೫೧] ರಲ್ಲಿ ಕಿಯೆವ್‌ ನಾಶವಾಯಿತು. ಗಲಿಷಿಯ-ವೊಲ್ಹಿನಿಯಾವು ಪೋಲೆಂಡ್‌-ಲಿಥುವೇನಿಯಾದ ಕಾಮನ್‌ವೆಲ್ತ್‌ನಲ್ಲಿ ಲೀನವಾದರೆ, ಕಿಯೆವ್‌ನ ಪರಿಧಿಯಲ್ಲಿದ್ದ ಮಂಗೋಲ್‌ -ಪ್ರಾಬಲ್ಯದ ವ್ಲಾಡಿಮಿರ್‌ -ಸುಜ್‌ಡಲ್‌ ಮತ್ತು ಸ್ವತಂತ್ರ ನವೊಗೊರೊಡ್‌ ಗಣರಾಜ್ಯ, ಆಧುನಿಕ ರಷ್ಯಾ ದೇಶ ರೂಪುಗೊಳ್ಳಲು ತಳಹದಿಯಾದವು.[೧೪]

ಮಾಸ್ಕೋದ ಗ್ರಾಂಡ್‌ ಡ್ಯೂಕಿ ಮತ್ತು ರಷ್ಯಾದ ತ್ಸಾರ್‌ ಪ್ರಭುತ್ವ

[ಬದಲಾಯಿಸಿ]
ರಷ್ಯಾ ಇತಿಹಾಸದ ಮಧ್ಯಯುಗ ನೋಟ

ಕಿವಾನ್‌ ರುಸ್‌ನ ಉತ್ತಾರಾಧಿಯಾಗಿ ನಂತರ ಬಂದ ಶಕ್ತಿಶಾಲಿ ರಾಜ್ಯವೆಂದರೆ ಮಾಸ್ಕೋದ ಗ್ರಾಂಡ್‌ ಡ್ಯೂಕಿ. ತ್ವೆರ್‌ ಮತ್ತು ನವ್‌ಗೊರೊಡ್‌ಗಳಂತಹಾ ಎದುರಾಳಿಗಳನ್ನು ವಶಪಡಿಸಿಕೊಂಡು, ಅಂತಿಮವಾಗಿ ಆಧುನಿಕ ರಷ್ಯಾ ರಾಷ್ಟ್ರಕ್ಕೆ ತಳಹದಿಯಾಯಿತು. 1453ರಲ್ಲಿ ಕಾನ್‌ಸ್ಟಂಟಿನೋಪಲ್‌ ನ ಕುಸಿತದ ನಂತರ, ಮಾಸ್ಕೋ ತನ್ನನ್ನು ಪೂರ್ವ ರೋಮನ್‌ ಸಾಮ್ರಾಜ್ಯ ಪರಂಪರೆಯ ಉತ್ತರಾಧಿಕಾರಿಯೆಂದು ಘೋಷಿಸಿತು. 14ನೇ ಶತಮಾನದ ಆರಂಭದಲ್ಲಿ ಮಂಗೋಲರು-ಟಾಟರ್‌ಗಳುಗಳ ಆಳ್ವಿಕೆಯಲ್ಲಿಯೇ, ಅವರ ಮೌನ ಸಮ್ಮತಿಯೊಂದಿಗೆ, ಮಾಸ್ಕೋದ ಡ್ಯೂಕಿ(ಅಥವಾ "ಮಸ್ಕೋವೈ")ಯು ಪಶ್ಚಿಮ ರಷ್ಯಾದ ಮೇಲೆ ತನ್ನ ಪ್ರಭಾವವನ್ನು ಸಾಧಿಸಿತು. ರಷ್ಯಾದ ಸಂಪ್ರದಾಯವಾದಿ ಚರ್ಚ್‌ ಮತ್ತು ಸಂತ ರಡೊನೆಜ್ಹ್‌ನ ಸರ್ಜಿಯಸ್‌ರ ಧರ್ಮಜಾಗೃತಿ ಪ್ರಯತ್ನಗಳ ಬೆಂಬಲದೊಂದಿಗೆ, ಕುಲಿಕೊವೊ ಕಾಳಗದಲ್ಲಿ (1380) ರಷ್ಯಾ ಮಂಗೋಲರು-ಟಾಟರ್‌ಗಳನ್ನು ಸೋಲಿಸಿತು. ಐವಾನ್‌ III (ಐವಾನ್‌ ಮಹಾಶಯ )ನು ಅಂತಿಮವಾಗಿ ಟಾಟರ್‌ ಆಕ್ರಮಣಕೋರರ ನಿಯಂತ್ರಣವನ್ನು ಕಿತ್ತೊಗೆದು, ಸುತ್ತಮುತ್ತಲಿನ ಪ್ರದೇಶಗಳನ್ನು ಮಾಸ್ಕೋದ ಆಡಳಿತಕ್ಕೆ ಸೇರಿಸಿಕೊಂಡನು. "ರಷ್ಯಾಗಳ ಗ್ರಾಂಡ್‌ ಡ್ಯೂಕ್‌"[೫೨] ಎಂಬ ಬಿರುದು ಪಡೆದವರಲ್ಲಿ ಈತನೇ ಪ್ರಥಮ.

ನಿಜ್ನಿ ಕೊಟ್ಲಿಯಲ್ಲಿ ತ್ಜಾರ್ ಗಳ ಜೊತೆ ಬೊಲೊಟ್ನಿಕೋವ್ ನ ಸಮರ

ಐವಾನ್‌ IV (ಐವಾನ್‌ ರಣಭಯಂಕರ ) 1547ರಲ್ಲಿ ಅಧಿಕೃತವಾಗಿ ರಷ್ಯಾದ ಪ್ರಥಮ ತ್ಸಾರ್‌ ಆಗಿ ಪಟ್ಟಾಭಿಷಿಕ್ತನಾದ. ತನ್ನ ದೀರ್ಘ ಆಳ್ವಿಕೆಯಲ್ಲಿ, ಐವಾನ್‌ IV ವೋಲ್ಗಾ ನದಿಯ ಬಳಿ ಇದ್ದ (ಖಾಜನ್‌, ಅಸ್ತ್ರಖಾನ್‌) ಟಾಟರ್‌ ಖಾನೇಟ್‌ಗಳನ್ನು ಸ್ವಾಧೀನಪಡಿಸಿಕೊಂಡು ರಷ್ಯಾವನ್ನು ಬಹು ಜನಾಂಗೀಯ ಮತ್ತು ಬಹುಮತಪಂಥಿಯ ರಾಷ್ಟ್ರವನ್ನಾಗಿ ಪರಿವರ್ತಿಸಿದ. ಐವಾನ್‌ IV ಕಾನೂನು ನಿಯಮಾವಳಿ(1550ರ ಸುಡೆನ್‌ಬಿಕ್‌)ಗಳನ್ನು ಪ್ರಚುರಪಡಿಸಿದ, ರಷ್ಯಾದ ಪ್ರಥಮ ಊಳಿಗಮಾನ್ಯ ಪ್ರತಿನಿಧಿ ಸಂಸ್ಥೆ (ಜೆಮ್ಸ್ಕಿ ಸೋಬರ್‌) ಮತ್ತು ಗ್ರಾಮೀಣ ಪ್ರದೇಶ[೫೩][೫೪] ಗಳಲ್ಲಿ ಸ್ಥಳೀಯ ಸ್ವಯಮಾಡಳಿತವನ್ನು ಪರಿಚಯಿಸಿದ. ಆದರೆ ಪೋಲೆಂಡ್‌, ಲಿಥುವೇನಿಯಾ, ಮತ್ತು ಸ್ವೀಡನ್‌ಗಳ ಒಕ್ಕೂಟದ ವಿರುದ್ಧ ಬಾಲ್ಟಿಕ್‌ ತೀರಪ್ರದೇಶ ಮತ್ತು ಸಮುದ್ರ ವ್ಯಾಪಾರ[೫೫] ಕ್ಕೆ ಸಂಬಂಧಿಸಿದಂತೆ ನಡೆಸಿದ ದೀರ್ಘಕಾಲೀನ ಹಾಗೂ ಲಿವೋನಿಯನ್‌ ಸಮರದ ಅಪಜಯದ ಕಪ್ಪುಚುಕ್ಕೆಯನ್ನು ಐವಾನ್‌ IVನ ಆಡಳಿತ ಹೊಂದಿದೆ. ಸೇನೆಯ ನಷ್ಟಗಳು, ಸಾಂಕ್ರಾಮಿಕ ರೋಗಗಳು ಮತ್ತು ಅಲ್ಪ ಫಸಲಿನಿಂದಾಗಿ[೫೬] ರಾಷ್ಟ್ರವು ದುರ್ಬಲಗೊಂಡಿತು, ಹಾಗೂ ಕ್ರಿಮೇನ್‌ ಟಾಟರ್‌ಗಳು ಮಾಸ್ಕೋವನ್ನು ಸುಟ್ಟು ಹಾಕುವಷ್ಟು [೫೭] ಶಕ್ತರಾದರು. ಅನೇಕ ಕ್ರಿಮೇನ್‌ ಸಮರಗಳು ಬಹುಪಾಲು ಗುಲಾಮರಿಂದಾದ ದಾಳಿಗಳಾಗಿದ್ದವು.[೫೮] ದಾಳಿಗಳ ಪಟ್ಟಿಯನ್ನು ರಷ್ಯಾ-ಕ್ರಿಮೇನ್‌ ಸಮರಗಳು[೫೯] ನಲ್ಲಿ ನೋಡಿ. 1600ರ ಆದಿಯಲ್ಲಿ ಬಂದ ಕಷ್ಟ ಕಾಲದಲ್ಲಿ ಐವಾನ್‌ನ ಮಕ್ಕಳ ಮರಣ, 1601–1603ರ ಕ್ಷಾಮಗಳು[೬೦] ಒಟ್ಟು ಸೇರಿ ಅಂತಃಕಲಹ ಹಾಗೂ ಪರಕೀಯರ ಹಸ್ತಕ್ಷೇಪಗಳಿಗೆ ಎಡೆಮಾಡಿಕೊಟ್ಟವು.[೬೧] 17ನೇ ಶತಮಾನದ ಮಧ್ಯಭಾಗದಲ್ಲಿ, ಚುಕ್‌ಚಿ ದ್ವೀಪಕಲ್ಪದಲ್ಲಿ ಪೆಸಿಫಿಕ್‌ ಕರಾವಳಿ ಮತ್ತು ಅಮುರ್‌ ನದೀತೀರದುದ್ದಕ್ಕೂ ಪೂರ್ವ ಸೈಬೀರಿಯಾದಲ್ಲಿ ರಷ್ಯಾದ ವಸಾಹತುಗಳಿದ್ದವು. 1648ರಲ್ಲಿ ಏಷ್ಯಾ ಮತ್ತು ಉತ್ತರ ಅಮೇರಿಕಾ ನಡುವಿನ ಬೇರಿಂಗ್‌ ಜಲಸಂಧಿ ರಷ್ಯಾದ ಪರಿಶೋಧಕರ ಕಣ್ಣಿಗೆ ಬಿದ್ದಿತು.

ಸಾಮ್ರಾಜ್ಯಶಾಹಿ ರಷ್ಯಾ

[ಬದಲಾಯಿಸಿ]
1721ರಲ್ಲಿ ಮಹಾನ್ ಪೀಟರ್ ರಷ್ಯಾ ಸಾಮ್ರಾಜ್ಯದ ಅಸ್ತಿತ್ವವನ್ನು ಘೋಷಿಸಿದನು.

ರೊಮಾನೋವ್‌ ರಾಜವಂಶದ ಪೀಟರ್‌ I (ಮಹಾನ್‌ ಪೀಟರ್‌ )ನ ಆಳ್ವಿಕೆಯಲ್ಲಿ, ರಷ್ಯನ್‌ ಸಾಮ್ರಾಜ್ಯ ವಿಶ್ವಶಕ್ತಿಯಾಯಿತು. 1682ರಿಂದ 1725ವರೆಗೆ ಆಳ್ವಿಕೆ ನಡೆಸಿದ ಪೀಟರ್‌ ಮಹಾನ್‌ ಉತ್ತರ ಸಮರದಲ್ಲಿ ಸ್ವೀಡನ್‌ದೇಶವನ್ನು ಸೋಲಿಸಿ, ಪಶ್ಚಿಮ ಕರೇಲಿಯಾ ಮತ್ತು ಇಂಗ್ರಿಯಾ (ಕಷ್ಟ ಕಾಲ[೬೨] ದಲ್ಲಿ ರಷ್ಯಾ ಕಳೆದುಕೊಂಡ ಎರಡು ಪ್ರದೇಶಗಳು ),ಎಸ್ಟ್‌ಲ್ಯಾಂಡ್‌, ಮತ್ತು ಲಿವ್‌ಲ್ಯಾಂಡ್‌ಗಳನ್ನು ಬಲಪೂರ್ವಕ ವಶಪಡಿಸಿಕೊಂಡು ಸಮುದ್ರ ಮತ್ತು ಸಮುದ್ರ ವ್ಯಾಪಾರ[೬೩] ಕ್ಕೆ ಸುರಕ್ಷಿತ ಮಾರ್ಗ ಕಂಡುಕೊಂಡನು. ಇಂಗ್ರಿಯಾದಲ್ಲಿಯೇ ಪೀಟರ್‌ ಸೇಂಟ್‌ ಪೀಟರ್ಸ್‌ಬರ್ಗ್‌ ಎಂಬ ರಾಜಧಾನಿ ಸ್ಥಾಪಿಸಿದನು. ಪೀಟರ್‌ನ ಸುಧಾರಣೆಗಳು ಗಮನಾರ್ಹವಾಗಿ ಪಾಶ್ಚಿಮಾತ್ಯ ಯೂರೋಪಿಯನ್‌‌ ಸಾಂಸ್ಕೃತಿಕ ಪ್ರಭಾವಗಳಿಗೆ ರಷ್ಯಾವನ್ನು ಒಡ್ಡಿದವು. 1762ರಿಂದ 1796ರವರೆಗೆ ಆಳ್ವಿಕೆ ನಡೆಸಿದ ಕ್ಯಾಥರೀನ್‌ II (ಮಹಾನ್‌ ಕ್ಯಾಥರೀನ್‌ )ಳು, ರಷ್ಯಾವನ್ನು ಯುರೋಪ್‌ನ ಪ್ರಧಾನ ಶಕ್ತಿಗಳಲ್ಲಿ ಒಂದಾಗಿ ಮಾಡುವ ಪ್ರಯತ್ನವನ್ನು ಮುಂದುವರೆಸಿಪಡೆು . ಪ್ರಷ್ಯಾ ಮತ್ತು ಆಸ್ಟ್ರಿಯಾಗಳೊಂದಿಗೆ, ಫ್ರಾನ್ಸ್‌ನ ನೆಪೋಲಿಯನ್‌ ವಿರುದ್ಧ ನಿಂತು ಎದುರಾಳಿ ಪೋಲೆಂಡ್‌-ಲಿಥುವೇನಿಯಾಗಳನ್ನು ವಿಭಜನೆಗಳ ಸರಣಿಯಲ್ಲಿ ಮಣಿಸಿ, ಪಶ್ಚಿಮದಲ್ಲಿ ದೊಡ್ಡ ವಸಾಹತುಗಳ ಮೇಲಿನ ನಿಯಂತ್ರಣವನ್ನು ಹೊಂದಿತು. ರಷ್ಯಾ- ತುರ್ಕಿ ಸಮರದಲ್ಲಿನ ವಿಜಯದಿಂದಾಗಿ, 19ನೇ ಶತಮಾನದ ಆರಂಭದಲ್ಲಿ ರಷ್ಯಾ ಗಮನಾರ್ಹ ಪ್ರಮಾಣದಲ್ಲಿ ವಸಾಹತುಗಳನ್ನು ಟ್ರಾನ್ಸ್‌ಕಾಕೇಷ್ಯಾ ಪ್ರದೇಶದಲ್ಲಿ ಹೊಂದಿತು. ನೆಪೋಲಿಯನ್‌ 1812ರಲ್ಲಿ ತನ್ನ ವೈಭವದ ಪರಮಾವಧಿಯಲ್ಲಿ ನಡೆಸಿದ ರಷ್ಯಾ ಆಕ್ರಮಣವು ಹೀನಾಯ ಸೋಲು ಕಂಡಿತು. ಪಟ್ಟುಬಿಡದ ವಿರೋಧ ಹಾಗೂ ರಷ್ಯನ್‌ ಚಳಿಗಾಲದ ವಿಪರೀತ ಶೀತಹವೆಯಿಂದಾಗಿ ಆತ ದಾರುಣವಾದ ಸೋಲು ಕಾಣಬೇಕಾಯಿತು. ಈ ಹೋರಾಟದಲ್ಲಿ 95%ಗೂ ಅಧಿಕ ಪ್ರಮಾಣದಲ್ಲಿ ಆತನ ಸೇನೆ ನಾಶ ಹೊಂದಿತು.[೬೪] 1825ರ ಡಿಸೆಂಬರಿಸ್ಟ್‌ ದಂಗೆಯಲ್ಲಿ, ನೆಪೋಲಿಯನ್‌ ಸಮರಗಳ ಸೈನ್ಯಾಧಿಕಾರಿಗಳು ಉದಾರಸಿದ್ಧಾಂತಗಳನ್ನು ರಷ್ಯಾನಲ್ಲಿ ಪುನರುಜ್ಜೀವನಗೊಳಿಸಿ ತ್ಸಾರ್‌ನ ಅಧಿಕಾರವನ್ನು ಮೊಟಕುಗೊಳಿಸಲು ವ್ಯರ್ಥ ಪ್ರಯತ್ನ ನಡೆಸಿದರು. ಇದಾದ ನಂತರ ಅನೇಕ ದಶಕಗಳ ಮಟ್ಟಿಗೆ ರಾಜಕೀಯ ದಮನನೀತಿಗಳು ಚಾಲ್ತಿಯಲ್ಲಿದ್ದವು.

ಮಾಸ್ಕೋದಿಂದ ಹಿಮ್ಮೆಟ್ಟಿದ ನೆಪೋಲಿಯನ್
1866ರ ರಷ್ಯಾ ಸಾಮ್ರಾಜ್ಯ ಮತ್ತು ಅದರ ಪ್ರಭಾವ ವಲಯ

ದಾಸ್ಯಪದ್ಧತಿಯ ಮುಂದುವರಿಕೆ ಮತ್ತು ಮೊದಲನೆಯ ನಿಕಾಲಸ್ ನ ಸಾಂಪ್ರದಾಯಿಕ ನೀತಿಗಳು ಹತ್ತೊಂಬತ್ತನೆಯ ಶತಮಾನದ ಮಧ್ಯದಲ್ಲಿ ರಷ್ಯಾದ ಅಭಿವೃದ್ದಿಗೆ ಅಡ್ಡಿಯೊಡ್ಡಿದವು. ನಿಕಾಲಸ್‌ನ ಉತ್ತರಾಧಿಕಾರಿಯಾದ ಎರಡನೆಯ ಅಲೆಕ್ಸಾಂಡರ್ (1855–1881) 1861ರಲ್ಲಿ ದಾಸ್ಯಪದ್ಧತಿಯ ರದ್ದತಿಯೂ ಸೇರಿದಂತೆ ಪ್ರಮುಖವಾದ ಸುಧಾರಣೆಗಳನ್ನು ಕೈಗೊಂಡನು; ಈ "ಮಹತ್ಬದ ಸುಧಾರಣೆಗಳು" ಔದ್ಯಮೀಕರಣಕ್ಕೆ ಪ್ರೇರಣೆ ನೀಡಿದವು. ಆದಾಗ್ಯೂ, ಮೂರನೆಯ ಅಲೆಕ್ಸಾಂಡರ್‌ ಹಾಗೂ ತನ್ನ ಪುತ್ರ ಎರಡನೆಯ ನಿಕಾಲಸ್‌ನ ರಾಜ್ಯಭಾರದ ಅವಧಿಯಲ್ಲಿ ಹಲವು ಸಾಮಾಜಿಕ-ಆರ್ಥಿಕ ಘರ್ಷಣೆಗಳು ಬಿಗಡಾಯಿಸಿದ್ದವು. ಕೈಗಾರಿಕಾ ಕಾರ್ಖಾನೆಗಳಲ್ಲಿನ ಕಠೋರ ವಾತಾವರಣವು ಕ್ರಾಂತಿಕಾರಿ ಸಮಾಜವಾದಿ ಚಳುವಳಿಗಾಗಿ ಜನಸ್ತೋಮದ ಬೆಂಬಲ ದೊರೆಯುವಂತೆ ಮಾಡಿತು. ಜನವರಿ 1905ರಲ್ಲಿ, ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಮುಷ್ಕರ ಹೂಡುತ್ತಿದ್ದ ಕಾರ್ಮಿಕರು ಸುಧಾರಣೆಗಳಿಗಾಗಿ ಶಾಂತಿಯುತವಾಗಿ ಧರಣಿ ಹೂಡುತ್ತಿದ್ದರೂ ಸೇನಾಪಡೆಗಳಿಂದ ಗುಂಡು ಹಾರಿಸಲಾಗಿ ನೂರಾರು ಜನರು ಸತ್ತರು ಹಾಗೂ ಗಾಯಗೊಂಡಿದ್ದರು. ಶುರುವಿನಲ್ಲಿ ಜನರ ಬೆಂಬಲ ಹೊಂದಿದ್ದ ರಷ್ಯಾ-ಜಪಾನಿ ಸಮರದಲ್ಲಿನ ಸಿಜಾರನ ಸೇನೆಯ ಹೀನಾಯ ವೈಪಲ್ಯ ಮತ್ತು "ರಕ್ತ ಸಿಕ್ತ ರವಿವಾರ" ಎಂಬ ಘಟನೆಯು, 1905ರ ರಷ್ಯಾ ಚಳುವಳಿಯ ಕಿಡಿ ಹಚ್ಚಿತು. ಚಳುವಳಿಯನ್ನು ಸೇನೆಯು ಶೀಘ್ರದಲ್ಲಿ ಮೆಟ್ಟಿಹಾಕಿದಾಗ್ಯೂ ಮತ್ತು ಎರಡನೆಯ ನಿಕಾಲಸ್ ತನ್ನ ಹೆಚ್ಚಿನ ಅಧಿಕಾರವನ್ನು ಹಿಡಿದಿಟ್ಟುಕೊಂಡಿದ್ದರೂ ಕೂಡ, ಸಭೆಗಳಲ್ಲಿ ವಾಕ್ ಸ್ವಾತಂತ್ಯ, ರಾಜಕೀಯ ಪಕ್ಷಗಳ ಸಕ್ರಮ ಮತ್ತು ಚುನಾಯಿತ ಶಾಸಕರ ಸಭೆ ಡುಮಾ ಸೇರಿದಂತೆ ಪ್ರಮುಖ ಸುಧಾರಣೆಗಳಿಗೆ ತಾನು ಅನುಮತಿ ನೀಡಲೇಬೇಕಾಯಿತು; ಅದಾಗ್ಯೂ, ಕೈಗಾರಿಕಾ ಕಾರ್ಮಿಕರ ಜೀವನಗಳಲ್ಲಿ ಚೇತರಿಕೆ ಕಂಡುಕೊಳ್ಳುವ ಹಲವು ಆಸೆಗಳು ಈಡೇರದೆ ಉಳಿದವು. ರಷ್ಯಾದಲ್ಲಿ ಬರ-ಕ್ಷಾಮಗಳು ಆಗಾಗ್ಗೆ ಸಂಭವಿಸುತ್ತಿದ್ದವು; ಕ್ಷಾಮವು ಪ್ರತಿ 10-13 ವರ್ಷಗಳಲ್ಲಿ ಸಂಭವಿಸುತ್ತಿತ್ತು. 1891-92ರ ಕ್ಷಾಮವು ಸುಮಾರು ಅರ್ಧ ಮಿಲಿಯನ್‌ಗಳಷ್ಟು ಜನರನ್ನು ಬಲಿತೆಗೆದುಕೊಂಡಿತು.[೬೫] ಕಾಲರಾ ಸಾಂಕ್ರಾಮಿಕಗಳು ಎರಡು ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಬಲಿತೆಗೆದುಕೊಂಡವು.[೬೬]

ರಷ್ಯಾ ತನ್ನ ಮಿತ್ರ ಸರ್ಬಿಯಾದ ಬೆಂಬಲಕ್ಕೆ ನಿಂತುಮೊದಲನೆಯ ವಿಶ್ವ ಸಮರ ಪ್ರವೇಶಿಸಿ, ತನ್ನ ಮೈತ್ರಿಗಳಿಂದ ಪ್ರತ್ಯೇಕಿತವಾಗಿದ್ದಾಗಲೂ, ಮೂರು ಕಡೆಯಿಂದಲೂ ಸಮರ ಮಾಡಿತು. ರಷ್ಯಾಗೆ ಸಮರ ಬೇಕಾಗಿರಲಿಲ್ಲ, ಆದರೂ ಯುರೋಪಿನಾದ್ಯಂತ ಜರ್ಮನಿಯ ಸಾಮ್ರಾಜ್ಯಕ್ಕೆ ಪರ್ಯಾಯವೊಂದು ಬೇಕಿತ್ತು. 1916ರಲ್ಲಿ ಸೇನೆಯು ಸೋಲುಂಡಾಗ್ಯೂ, ಹೆಚ್ಚುತ್ತಿರುವ ಸಮರದ ಖರ್ಚುಗಳು, ಸಮರದಲ್ಲಿಯ ಸಾವು ನೋವುಗಳು (ಪರಸ್ಪರ ಸಖ್ಯ ಹೊಂದಿದ್ದ ಪ್ರಬಲ ದೇಶಗಳಲ್ಲಿ ರಷ್ಯಾ ಅತಿ ಹೆಚ್ಚು ನಾಗರಿಕ ಮತ್ತು ಸೇನಾ ಸಾವು ನೋವು ಕಂಡಿತು) ಮತ್ತು ಉನ್ನತ ಹುದ್ದೆಗಳಲ್ಲಿದ್ದವರ ಭ್ರಷ್ಟಾಚಾರ ಮತ್ತು ವಿದ್ರೋಹದ ಕಥೆಗಳ ಕಾರಣ, ಸಾಮ್ರಾಜ್ಯದ ಬಗ್ಗೆ ಜನರಿಗೆ ಮೊದಲೇ ಇದ್ದ ಅಪನಂಬಿಕೆಯು ಇನ್ನಷ್ಟು ಹೆಚ್ಚಾಗಿ, 1917ರ ರಷ್ಯಾ ಚಳುವಳಿಯ ಕಿಡಿಯನ್ನು ಹಚ್ಚಿತು. ಕಾರ್ಮಿಕರು, ರೈತರು ಹಾಗೂ ರೈತರಾಗಿದ್ದ ರಷ್ಯಾದ ಸೇನಾ ಸಿಬ್ಬಂದಿಯವರಿಂದ ದೇಶಾದ್ಯಂತ ಹಲವಾರು ದಂಗೆಗಳ ಸರಣಿಗಳು ಆಯೋಜಿತವಾಗಿದ್ದವು. ಹಲವಾರು ದಂಗೆಗಳನ್ನು ಸೋವಿಯತ್ ಎಂಬ ಪ್ರಜಾ-ಚುನಾಯಿತ ಪರಿಷತ್ತುಗಳು ಆಯೋಜಿಸಿ ನಡೆಸಿದವು.ಫೆಬ್ರುವರಿ ಕ್ರಾಂತಿಯು ರಷ್ಯಾದ ರಾಜ್ಯಭಾರವನ್ನು ಹೊರಗಟ್ಟಿ, ಇದರ ಜಾಗದಲ್ಲಿ ಸ್ವಯಂಘೋಷಿತ ಹಂಗಾಮಿ ಸರ್ಕಾರವೆಂಬ ಹಲವು ರಾಜಕೀಯ ಪಕ್ಷಗಳ ಸಮ್ಮಿಶ್ರ ಕೂಟವು ಬಂದಿತು. ಈ ಪರಿತ್ಯಾಗದೊಂದಿಗೆ ರಷ್ಯಾದಲ್ಲಿ ಸಾಮ್ರಾಜ್ಯಶಾಹಿಯ ಅಂತ್ಯವಾಗಿ, ನಿಕಾಲಸ್ ಮತ್ತು ಅವನ ಪರಿವಾರದವರನ್ನು ಕಾರಾವಾಸದಲ್ಲಿರಿಸಿ ನಂತರ ನಾಗರಿಕ ಸಮರದ ವೇಳೆ ಮರಣದಂಡನೆ ನಡೆಸಲಾಯಿತು. ಶುರುವಿನಲ್ಲಿ ಸೋವಿಯತ್‌ರ ಬೆಂಬಲವನ್ನು ಪಡೆದರೂ ಸಹ, ಹಂಗಾಮಿ ಸರ್ಕಾರವು ಫೆಬ್ರುವರಿ ಕ್ರಾಂತಿಗೆ ಕಾರಣವಾದಂತಹ ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ವಿಫಲವಾಯಿತು. ವ್ಲಾಡಿಮಿರ್ ಲೆನಿನ್ ನಾಯಕತ್ವದಲ್ಲಿ ನಡೆದ ಅಕ್ಟೋಬರ್ ಕ್ರಾಂತಿ ಎಂಬ ಎರಡನೆಯ ಕ್ರಾಂತಿಯು, ಹಂಗಾಮಿ ಸರ್ಕಾರವನ್ನು ಹೊರಗಟ್ಟಿ ವಿಶ್ವದಲ್ಲೇ ಮೊದಲ ಸಮಾಜವಾದಿ ದೇಶವನ್ನು ಸ್ಥಾಪಿಸಿತು.

ಸೋವಿಯತ್ ರಷ್ಯಾ

[ಬದಲಾಯಿಸಿ]
USSR ಸ್ಥಾಪಕ ಹಾಗೂ ಬೊಲ್ಶೆವಿಕ್ ಗಳ ನಾಯಕ ವ್ಲಾಡಿಮಿರ್ ಲೆನಿನ್

ಅಕ್ಟೋಬರ್ ಕ್ರಾಂತಿಯ ಬಳಿಕ, ಹೊಸ ಆಡಳಿತ ಹಾಗೂ ಸಮಾಜವಾದಿ ಕ್ರಾಂತಿಕಾರಿಗಳ, ಮೆನ್ಷೆವಿಕ್‌ಗಳ ಮತ್ತು ಶ್ವೇತ ಚಳುವಳಿಗಳ ನಡುವೆ ನಾಗರಿಕ ಸಮರ ನಡೆಯಿತು. ಬ್ರೆಸ್ಟ್-ಲಿಟೊವ್ಸ್ಕ್ ಒಡಂಬಡಿಕೆಯು ಮೊದಲನೆಯ ವಿಶ್ವ ಸಮರದಲ್ಲಿ ಕೇಂದ್ರೀಯ ಬಲಗಳೊಂದಿಗೆ ಕದನಗಳನ್ನು ಅಂತ್ಯಗೊಳಿಸಿತು. ಈ ಒಡಂಬಡಿಕೆಗೆ ಸಹಿ ಹಾಕಿದ ರಷ್ಯಾ ಉಕ್ರೇನ್, ಪೊಲಿಷ್, ಬಾಲ್ಟಿಕ್ ಪ್ರಾಂತ್ಯಗಳನ್ನು ಹಾಗೂ ಫಿನ್ಲೆಂಡ್‌ನ್ನು ಕಳೆದುಕೊಂಡಿತು. ಮಿತ್ರ ಪಡೆಯು ವಾಮಪಕ್ಷ ವಿರೋಧಿ ಶಕ್ತಿಗಳ ಬೆಂಬಲಕ್ಕಾಗಿ ಸೇನಾ ಹಸ್ತಾಕ್ಷೇಪವನ್ನು ನಡೆಸಿತು ಹಾಗೂ ಬಲ್ಷೆವಿಕ್ ಮತ್ತು ಶ್ವೇತ ಚಳುವಳಿಗಳೆರಡೂ ಪರಸ್ಪರ ದೇಶ ಬಹಿಷ್ಕಾರ ಹಾಗೂ ಮರಣದಂಡನಾ ಶಿಕ್ಷೆಗಳನ್ನು ನಡೆಸಿದವು; ಇದನ್ನು ಕ್ರಮವಾಗಿ ಕೆಂಪು ಆತಂಕವಾದ ಮತ್ತು ಶ್ವೇತ ಆತಂಕವಾದ ಎನ್ನಲಾಯಿತು.1921ರ ಕ್ಷಾಮವು ಸುಮಾರು ಐದು ಮಿಲಿಯನ್ ಜನರನ್ನು ಬಲಿ ತೆಗೆದುಕೊಂಡಿತು.[೬೭] ರಷ್ಯಾ ನಾಗರಿಕ ಸಮರದ ಅಂತ್ಯದಲ್ಲಿ, ಸುಮಾರು 20 ಮಿಲಿಯನ್ ಜನರು ಸತ್ತು, ರಷ್ಯಾದ ಆರ್ಥಿಕತೆ ಮತ್ತು ಮೂಲಭೂತ ಸೌಕರ್ಯಗಳ ಸರ್ವನಾಶವಾಗಿತ್ತು. ನಾಗರಿಕ ಸಮರದಲ್ಲಿ ಗೆದ್ದ ನಂತರ, ರಷ್ಯಾದ SFSR ಮೂರು ಸೋವಿಯತ್ ದೇಶಗಳೊಂದಿಗೆ ಒಗ್ಗೂಡಿ ಡಿಸೆಂಬರ್ 1922, 30ರಂದು ಸೋವಿಯತ್‌ ಒಕ್ಕೂಟದ ರಚನೆ ಮಾಡಿಕೊಂಡಿತು. ಸೋವಿಯತ್‌ ಒಕ್ಕೂಟ ರಚಿಸಿದ 15 ದೇಶಗಳ ಪೈಕಿ, ಭೌಗೋಳಿಕವಾಗಿ ಮತ್ತು USSR ನ ಜನಸಂಖ್ಯೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚಿನಂಶವನ್ನು ಹೊಂದಿರುವ ಅತಿದೊಡ್ಡ ಗಣರಾಜ್ಯ ರಷ್ಯಾದ ಸೋವಿಯತ್ ಸಂಯುಕ್ತ ಸಮಾಜವಾದಿ ಗಣರಾಜ್ಯ, ತನ್ನ 69-ವರ್ಷಗಳ ಇತಿಹಾಸದುದ್ದಕ್ಕೂ ಸೋವಿಯತ್‌ ಒಕ್ಕೂಟದ ಮೇಲೆ ತನ್ನ ಪ್ರಾಬಲ್ಯವನ್ನು ಮೆರೆಯಿತು; ಕೆಲವೊಮ್ಮೆ USSR ಅನ್ನು ತಪ್ಪಾಗಿ "ರಷ್ಯಾ" ಎನ್ನಲಾಗುತ್ತಿತ್ತು ಮತ್ತು ಅಲ್ಲಿನ ಜನತೆಯನ್ನು "ರಷ್ಯನ್ನರು" ಎನ್ನಲಾಗುತ್ತಿತ್ತು.

1924ರಲ್ಲಿ ಲೆನಿನ್ ಸಾವಿನ ನಂತರ, ಜೊಸೆಫ್‌ ಸ್ಟಾಲಿನ್ ತನ್ನ ಅಧಿಕಾರವನ್ನು ದೃಢಪಡಿಸಿಕೊಂಡು, ಸರ್ವಾಧಿಕಾರಿಯಾದನು. ಅವನು ಸಬಲ ಆರ್ಥಿಕತೆ, ಹೆಚ್ಚು-ಕಡಿಮೆ ಗ್ರಾಮೀಣ ಸ್ಥಿತಿಯಲ್ಲಿದ್ದ ದೇಶದಲ್ಲಿ ತ್ವರಿತ ಔದ್ಯಮೀಕರಣ ಮತ್ತು ಕೃಷಿಯ ಕ್ರೋಢೀಕರಣಕ್ಕೆ ಒತ್ತು ನೀಡಿದನು. ಈ ಕ್ರಮಗಳು ಸೋವಿಯತ್‌ ಒಕ್ಕೂಟವನ್ನು ಕೃಷಿ ಪ್ರಧಾನ ಆರ್ಥಿಕತೆಯಿಂದ ಒಂದು ಪ್ರಮುಖ ಕೈಗಾರಿಕಾ ಪ್ರಬಲ ರಾಷ್ಟ್ರವನ್ನಾಗಿ ಮಾರ್ಪಾಟು ಮಾಡಿದವು.ಆದರೂ, ಈ ಮಾರ್ಪಾಡಿಗಾಗಿ ಬಹಳ ಬೆಲೆ ತೆರಬೇಕಾಯಿತು. ಇವನ ಕಠಿಣ ನೀತಿಗಳಿಂದಾಗಿ ಮಿಲಿಯನ್‌ಗಳಷ್ಟು ಜನರು ಸತ್ತರು. (ನೋಡಿ: ಗುಲಾಗ್‌, ಡಿಕುಲಕೈಸೇಷನ್‌, ಸೋವಿಯತ್‌ ಒಕ್ಕೂಟದಲ್ಲಿ ಜನಸಂಖ್ಯೆಯ ಸ್ಥಳಾಂತರ, 1932–1933ರ ಸೋವಿಯತ್ ಕ್ಷಾಮ ಮತ್ತು ಮಹಾ ಆತಂಕವಾದ).

]

ಚಿತ್ರ:Gagarin space suite.jpg
ಬಾಹ್ಯಾಕಾಶಕ್ಕೆ ಮೊದಲ ಮಾನವ, ಯೂರಿ ಗಗಾರಿನ್

22 ಜೂನ್ 1941ರಂದು ನಾಜಿ ಜರ್ಮನಿಯು ಸೋವಿಯತ್‌ ಒಕ್ಕೂಟದ ಮೇಲೆ ಮಾನವ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಪ್ರಮಾಣದ ಹಾಗೂ ಪ್ರಬಲವಾಗಿದ್ದಂತಹ ಆಕ್ರಮಣ ನಡೆಸಿತು,[೬೮] ಇದು ಎರಡನೆಯ ವಿಶ್ವಸಮರವೆಂಬ ಬೃಹತ್ ರಂಗಕ್ಕೆ ಎಡೆಮಾಡಿಕೊಟ್ಟಿತು. ಶುರುವಿನಲ್ಲಿ ಜರ್ಮನಿಯ ಸೇನೆಯು ಸಾಕಷ್ಟು ಯಶಸ್ಸು ಗಳಿಸಿತಾದರೂ, ಮಾಸ್ಕೋ ನಗರದ ಹೊರವಲಯವನ್ನು ತಲುಪಿದ ಬಳಿಕ ಸೋಲುಗಳಿಗೆ ಈಡಾಯಿತು ಮತ್ತು 1942-1943ರ ಚಳಿಗಾಲದಲ್ಲಿ ನಡೆದ ಸ್ಟಾಲಿನ್‌ಗ್ರಾಡ್ ಸಮರದಲ್ಲಿ ಮೊದಲ ಪ್ರಮುಖ ಸೋಲುಂಡಿತು. [147] 1944-45ರಲ್ಲಿ ಸೋವಿಯತ್ ಸೇನೆಯು ಪೂರ್ವ ಯೂರೋಪ್‌ ಮೂಲಕ ದಂಡಯಾತ್ರೆ ನಡೆಸಿ ಮೇ 1945ರಲ್ಲಿ ಬರ್ಲಿನ್‌ನನ್ನು ವಶಪಡಿಸಿಕೊಂಡಿತು.ಈ ಘರ್ಷಣೆಯಲ್ಲಿ, ಸೋವಿಯತ್ ಸೇನೆ ಹಾಗೂ ನಾಗರಿಕರ ಸಾವಿನ ಪ್ರಮಾಣವು ಕ್ರಮವಾಗಿ 10.6 ಮಿಲಿಯನ್ ಮತ್ತು 15.9 ಮಿಲಿಯನ್ ಆಗಿತ್ತು,[149] ಎರಡನೆಯ ವಿಶ್ವ ಸಮರದಲ್ಲಿನ ಸಾವುನೋವುಗಳಲ್ಲಿ ಅರ್ಧದಷ್ಟು ಲೆಕ್ಕವಾಗಿತ್ತು. ಸೊವಿಯತ್‌ನ ಆರ್ಥಿಕತೆ ಮತ್ತು ಮೂಲಭೂತ ಸೌಕರ್ಯಗಳು ಹೆಚ್ಚು ಪ್ರಮಾಣದಲ್ಲಿ ನಾಶಗೊಂಡಿದ್ದವು[೬೯] ಆದರೂ, ಸೋವಿಯತ್‌ ಒಕ್ಕೂಟವು ಪ್ರಬಲ ರಾಷ್ಟ್ರವೆಂದು ಒಪ್ಪಿಗೆಯಾಗಿ ಹೊರಹೊಮ್ಮಿತು. ಸಮರದ ನಂತರ ಕೆಂಪು ಸೇನೆಯು ಜರ್ಮನಿಯ ಪೂರ್ವಾರ್ಧವನ್ನೂ ಸೇರಿಸಿ ಪೂರ್ವ ಯೂರೋಪ್‌ ನ್ನು ಆಕ್ರಮಿಸಿಕೊಂಡಿತು; ಸ್ಟಾಲಿನ್ ಈ ಉಪರಾಜ್ಯಗಳಲ್ಲಿ ಸಮಾಜವಾದಿ ಸರ್ಕಾರಗಳನ್ನು ಸ್ಥಾಪಿಸಿದನು. ವಿಶ್ವದಲ್ಲಿ ಎರಡನೆಯ ಪರಮಾಣು ಶಸ್ತ್ರ ಹೊಂದಿದ ರಾಷ್ಟ್ರವಾಗಿ, USSR ವಾರ್ಸಾ ಒಡಂಬಡಿಕೆ ಮೈತ್ರಿಯನ್ನು ಸ್ಥಾಪಿಸಿ, ವಿಶ್ವದ ಮೇಲೆ ಪ್ರಾಬಲ್ಯ ಮೆರೆಯಲು ಅಮೆರಿಕಾದೊಂದಿಗೆ ಪೈಪೋಟಿಯನ್ನು ನಡೆಸಿತು; ಇದಕ್ಕೆ ಶೀತಲ ಸಮರವೆನ್ನಲಾಯಿತು.

ಸ್ಟಾಲಿನ್ ಸಾವಿನ ನಂತರ, ಸ್ಟಾಲಿನ್‌ನನ್ನು ಟೀಕಿಸಿದ ರಷ್ಯಾದ ನಾಯಕ ನಿಕಿತಾ ಖ್ರುಷ್ಚೆವ್ ಸ್ಟಾಲಿನ್ ನ ಉಸಿರುಕಟ್ಟಿಸುವಂತಹ ನೀತಿಗಳನ್ನು ಸಡಿಲಗೊಳಿಸಿದನು. ಇವನು ಡಿ-ಸ್ಟಾಲಿನ್‌ವಾದವೆಂಬ ಸ್ಟಾಲಿನ್‌ವಾದಿ ರಾಜಕೀಯ ವ್ಯವಸ್ಥೆಯ ನಿರ್ಮೂಲನ ಪ್ರಕ್ರಿಯೆಯನ್ನು ಶುರುಗೊಳಿಸಿ ಗುಲಾಗ್ ಕಾರ್ಮಿಕ ಠಿಕಾಣಿಗಳನ್ನು ರದ್ದುಗೊಳಿಸಿ, ಮಿಲಿಯನ್‌ಗಟ್ಟಲೆ ಕೈದಿಗಳನ್ನು ಬಿಡುಗಡೆಗೊಳಿಸಿದನು.[153] ಸೋವಿಯತ್‌ ಒಕ್ಕೂಟ ಸ್ಪುಟ್ನಿಕ್ ಎಂಬ ವಿಶ್ವದಲ್ಲಿನ ಮೊದಲ ಕೃತಕ ಉಪಗ್ರಹವನ್ನು ಉಡ್ಡಯನಗೊಳಿಸಿತು ಹಾಗೂ ರಷ್ಯಾದ ಗಗನಯಾತ್ರಿ ಯುರಿ ಗಗರಿನ್ ವೊಸ್ಟಾಕ್ 1 ಎಂಬ ಮೊದಲ ಮಾನವಸಹಿತ ಬಾಹ್ಯಾಕಾಶ ಯಾನದಲ್ಲಿ ಭೂಮಿಯ ಸುತ್ತ ಬಾಹ್ಯಾಕಾಶ ಪ್ರಯಾಣ ನಡೆಸಿದ ಮೊದಲ ಮಾನವನೆನೆಸಿಕೊಂಡನು.ತುರ್ಕಿಯಲ್ಲಿ ಅಮೆರಿಕಾದ ಜುಪಿಟರ್ ಕ್ಷಿಪಣಿಗಳು ಮತ್ತು ಕ್ಯೂಬಾದಲ್ಲಿ ಸೋವಿಯತ್ ಕ್ಷಿಪಣಿಗಳು ಸ್ಥಾಪಿಸಲಾದ ವಿಚಾರಕ್ಕೆ ಸಂಬಂಧಿಸಿ ಉಭಯ ರಾಷ್ಟ್ರಗಳ ನಡುವೆ ಜಗಳಗಳಾಗಿ, ಅಮೆರಿಕಾದೊಂದಿಗೆ ಉದ್ರಿಕ್ತತೆ ತೀವ್ರಗೊಂಡಿತು. ಖ್ರುಷ್ಚೆವ್ ವಜಾಗೊಂಡ ನಂತರ, ಸಾಮೂಹಿಕ ನಾಯಕತ್ವದ ಆಡಳಿತದ ಇನ್ನೊಂದು ಅವಧಿ ನಡೆಯಿತು, ನಂತರ 1970ರ ದಶಕದಲ್ಲಿ ಲಿಯೊನಿಡ್ ಬ್ರೆಜ್ನೆವ್ ಸೋವಿಯತ್ ರಾಜಕೀಯ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನಮಾನಗಳನ್ನು ಕಲ್ಪಿಸಿಕೊಂಡನು. ಬ್ರೆಜ್ನೆವ್ ಆಡಳಿತದ ಅವಧಿಯಲ್ಲಿ ಆರ್ಥಿಕತೆಯ ಸ್ಥಗಿತ ಮತ್ತು ಅಫ್ಘಾನಿಸ್ತಾನದಲ್ಲಿ ಸೋವಿಯತ್ ಸಮರ, ಆರ್ಥಿಕ ಮೂಲಗಳನ್ನು ಖರ್ಚುಮಾಡಿ ಯಾವುದೇ ಆರ್ಥಪೂರ್ಣ ಸೇನಾ ಮತ್ತು ರಾಜಕೀಯ ಫಲಿತಾಂಶಗಳನ್ನೀಯದೆ ಸುಮ್ಮನೆ ಎಳೆಯುತ್ತಿತ್ತು. ಕಡೆಗೆ, ವಿಶ್ವಾದ್ಯಂತ ವಿರೋಧ ಮತ್ತು ಸೋವಿಯತ್ ಜನತೆಯ ರಾಜಕೀಯ ಬೆಂಬಲದ ಕೊರತೆಯಿಂದಾಗಿ, 1989ರಲ್ಲಿ ಅಫ್ಘಾನಿಸ್ತಾನದಿಂದ ಸೋವಿಯತ್ ಸೇನೆಯನ್ನು ಹಿಂಪಡೆಯಲಾಯಿತು.ಅಮೆರಿಕಾದಲ್ಲಿ ಸೋವಿಯತ್‌-ವಿರೋಧಿ ವಾಗ್ಸಮರ, SDI ಪ್ರಸ್ತಾಪ ಮತ್ತು ಸೆಪ್ಟೆಂಬರ್ 1983ರಲ್ಲಿ ಸೋವಿಯತ್‌ರಿಂದ ಸಿಡಿಸಲಾದ ಕೊರಿಯನ್ ಏರ್ಲೈನ್ಸ್ ೦೦೭ ವಿಮಾನ - ಈ ವಿಚಾರಗಳನ್ನು ಕುರಿತು 1980ರ ಶುರುವಿನಲ್ಲಿ ಸೋವಿಯತ್ ಒಕ್ಕೂಟ ಹಾಗೂ ಅಮೆರಿಕಾದ ನಡುವೆ ಉದ್ರಿಕ್ತತೆಯು ಹಚ್ಚಾಯಿತು. 1985ರಿಂದ ಮುಂದಕ್ಕೆ, ಮಿಖಾಯಿಲ್ ಗೊರ್ಬಚೆವ್ ದೇಶವನ್ನು ಆಧುನೀಕರಣಗೊಳಿಸಲು ಗ್ಲಾಸ್ನೊಸ್ಟ್ (ಮುಕ್ತತೆ) ಮತ್ತು ಪೆರೆಸ್ಟ್ರೊಯಿಕಾ (ಪುನರ್ನಿಮಾಣ) ಎಂಬ ಎರಡು ನೀತಿಗಳನ್ನು ಜಾರಿಗೊಳಿಸಿದರು. USSRನ ಆರ್ಥಿಕತೆ ವಿಭಜನೆಯ ಮುಂಚೆ ವಿಶ್ವದಲ್ಲಿಯೇ ಎರಡನೇ ದೊಡ್ಡ ಆರ್ಥಿಕತೆಯಾಗಿತ್ತು. [155]. ತನ್ನ ಕೊನೆಯ ವರ್ಷಗಳಲ್ಲಿ, ದಿನಸಿ ಅಂಗಡಿಗಳಲ್ಲಿ ಕಿರಾಣಿಗಳ ಆಭಾವ, ಭಾರೀ ಪ್ರಮಾಣದ ಕೊರತೆಯ ಬಜೆಟ್ ಮತ್ತು ಹಣ ಪೂರೈಕೆ ಹೆಚ್ಚಾಗಿ ಹಣದುಬ್ಬರ - ಈ ಕಾರಣಗಳಿಂದಾಗಿ ಆರ್ಥಿಕತೆಗೆ ಬಹಳ ತೊಂದರೆಯಾಯಿತು.[157] ಆಗಸ್ಟ್ 1991ರಲ್ಲಿ, ಸೋವಿಯತ್ ಒಕ್ಕೂಟವನ್ನು ಉಳಿಸುವ ಉದ್ದೇಶ ಹೊತ್ತಿದ, ಗೊರ್ಬಚೆವ್ ವಿರುದ್ಧ ನಡೆಸಿ ವಿಫಲವಾದ ಸೇನಾ ದಂಗೆ ಸೋವಿಯತ್‌ ಒಕ್ಕೂಟದ ಕುಸಿತಕ್ಕೆ ನಾಂದಿಯಾಯಿತು.ರಷ್ಯಾದಲ್ಲಿ ಬೊರಿಸ್ ಯೆಲ್ಟ್ಸಿನ್ ಅಧಿಕಾರಕ್ಕೆ ಬಂದು ಸಮಾಜವಾದಿ ಆಡಳಿತಕ್ಕೆ ಅಂತ್ಯ ಸೂಚಿಸಿದರು. USSR ಡಿಸೆಂಬರ್ 1991ರಲ್ಲಿ ಹದಿನೈದು ಸ್ವತಂತ್ರ ಗಣರಾಜ್ಯಗಳಾಗಿ ಭಾಗಗೊಂಡು ಅಧಿಕೃತವಾಗಿ ವಿಭಜನೆಗೊಂಡಿತು. ಜೂನ್ 1991ರಲ್ಲಿ ನಡೆದ ರಷ್ಯಾದ ಇತಿಹಾಸದಲ್ಲೇ ಮೊದಲ ಬಾರಿಗೆ ನೇರವಾದ ರಾಷ್ಟ್ರಪತಿ ಚುನಾವಣೆಯಲ್ಲಿ, ಬೊರಿಸ್ ಯೆಲ್ಟ್ಸಿನ್ ರಷ್ಯಾದ ಅಧ್ಯಕ್ಷರಾಗಿ ಚುನಾಯಿತರಾದರು.

ರಷ್ಯನ್‌ ಒಕ್ಕೂಟ

[ಬದಲಾಯಿಸಿ]
ರಷ್ಯಾ ಸಂಸ್ಥಾನದ 1140ನೇ ವಾರ್ಷಿಕೋತ್ಸವ (2002)

USSRನ ವಿಭಜನೆಯ ವೇಳೆ ಹಾಗೂ ಆನಂತರದ ಕಾಲದಲ್ಲಿ ಖಾಸಗೀಕರಣ, ಮಾರುಕಟ್ಟೆ ಮತ್ತು ವಹಿವಾಟು ಸುಧಾರೀಕರಣ ಕ್ರಮಗಳೂ ಸೇರಿದಂತೆ ವ್ಯಾಪಕ ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿರುವಾಗ [೭೦] ರಷ್ಯಾದ ಆರ್ಥಿಕತೆಯು ದೊಡ್ಡ ಬಿಕ್ಟಟ್ಟಿನ ಸ್ಥಿತಿಯಲ್ಲಿ ಸಾಗುತ್ತಿತ್ತು. ಈ ಅವಧಿಯಲ್ಲಿ ಉತ್ಪಾದನೆ ಸಂಕುಚಿತಗೊಂಡಿತ್ತು, 1990ರಿಂದ 1995ರ ಕೊನೆಯ ತನಕ GDP 50% ರಷ್ಟು ಇಳಿತ ಕಂಡಿದ್ದು ಕೈಗಾರಿಕಾ ಉತ್ಪಾದನೆಯ ಪ್ರಮಾಣವೂ ಸಹ 50% ರಷ್ಟು ಇಳಿತ ಕಂಡಿತ್ತು. [161][163] ರಷ್ಯಾ, ಅಮೆರಿಕಾ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಶಿಫಾರಸಿನ ಮೇಲೆ, "ಷಾಕ್ ತೆರಪಿ"ಯ ರೀತಿಯಲ್ಲಿ ಆಧಾರಭೂತವಾದ, ಮಾರುಕಟ್ಟೆ-ಆಧಾರಿತ ಸುಧಾರಣೆಯೊಂದಿಗೆ ಮುಂದುವರೆಯುವುದು ಎಂಬುದನ್ನು ಯೆಲ್ಟ್ಸಿನ್ ಅಕ್ಟೋಬರ್ 1991ರಲ್ಲಿ ಘೋಷಿಸಿದರು. [165][167] ಬೆಲೆ ನಿಯಂತ್ರಣಗಳನ್ನು ರದ್ದುಗೊಳಿಸಲಾಯಿತು ಮತ್ತು ಖಾಸಗೀಕರಣವನ್ನು ಶುರುಗೊಳಿಸಲಾಯಿತು. ಮಿಲಿಯನ್‌ನಷ್ಟು ಜನರು ಬಡತನಕ್ಕೊಳಗಾದರು. ವಿಶ್ವ ಬ್ಯಾಂಕಿನ ಪ್ರಕಾರ, ಕೊನೆಯ ಸೋವಿಯತ್ ಯುಗದಲ್ಲಿ 1.5% ರಷ್ಟು ಜನಸಂಖ್ಯೆಯು ಬಡತನದಲ್ಲಿ ಜೀವನ ನಡೆಸುತ್ತಿದ್ದರೆ, 1993ರ ಮಧ್ಯದಲ್ಲಿ 39% ರಿಂದ 49ರಷ್ಟು ಜನಸಂಖ್ಯೆಯು ಬಡತನದಲ್ಲಿ ಜೀವನ ನಡೆಸುತ್ತಿತ್ತು.[169] ವೇತನಗಳ ಪಾವತಿಯಲ್ಲಿ ವಿಳಂಬಗಳು ಒಂದು ಅಂತ್ಯ ಕಾಣದ ಸಮಸ್ಯೆಯಾಗಿ, ಮಿಲಿಯನ್‌ಗಳಷ್ಟು ಜನರು ತಿಂಗಳುಗಳ-ವರ್ಷಗಳ ನಂತರ ತಮ್ಮ ವೇತನಗಳನ್ನು ಪಡೆಯುವಷ್ಟು ವಿಳಂಬವಾಗುತ್ತಿತ್ತು.ವಿಭಜನಾ ಸಮಯದಲ್ಲಿ USSRನ ಜನಸಂಖ್ಯೆಯ ಅರ್ಧದಷ್ಟನ್ನು ಮಾತ್ರ ಹೊಂದಿದ್ದರೂ ಕೂಡ, ರಷ್ಯಾ USSRನ ಬಾಹ್ಯ ಋಣಗಳನ್ನು ತೀರಿಸುವ ಹೊಣೆಯನ್ನು ರಷ್ಯಾ ಕೈಗೆತ್ತಿಕೊಂಡಿತು.[೭೧] ಖಾಸಗೀಕರಣ ಪ್ರಕ್ರಿಯೆಯು ಹೆಚ್ಚಾಗಿ ಉದ್ದಿಮೆಗಳ ಸ್ವಾಮ್ಯತೆಯನ್ನು ರಾಜ್ಯದ ಅಂಗಗಳಿಂದ ಸರ್ಕಾರ ಮತ್ತು ಮಾಫಿಯಾದೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಗಳ ಗುಂಪಿಗೆ ಹಸ್ತಾಂತರಗೊಳಿಸಿತ್ತು. ಆಗಾಗ್ಗೆ, ಹಿಂಸಾತ್ಮಕ ಅಪರಾಧಿ ಗುಂಪುಗಳು ಹತ್ಯೆ-ಸುಲಿಗೆಗಳನ್ನು ಮಾಡಿ, ರಾಜ್ಯಸ್ವಾಮ್ಯದ ಉದ್ದಿಮೆಗಳನ್ನು ತಮ್ಮದಾಗಿಸಿಕೊಂಡವು. ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರ ದೈನಿಕ ಜೀವನ ನಿಯಮದಂತಾಯಿತು. ಬೃಹತ್ ಪ್ರಮಾಣದ ಬಂಡವಾಳ ಪಲಾಯನದಲ್ಲಿ ಹಲವಾರು ಹೊಸದಾಗಿ ಶ್ರೀಮಂತರಾದ ದೊಂಬಿಕೋರರು ಮತ್ತು ಉದ್ಯಮಿಗಳು ಬಿಲಿಯನ್‌ಗಟ್ಟಲೆ ನಗದು-ಆಸ್ತಿಪಾಸ್ತಿಯನ್ನು ದೇಶದ ಹೊರಗೆ ಒಯ್ದರು.[173] ದೀರ್ಘಕಾಲದ ವ್ಯಾಕುಲದೊಂದಿಗೆ ಸಾಮಾಜಿಕ ಅಧೋಗತಿಯೂ ಬೆರೆತುಕೊಂಡಿತ್ತು. ಸಾಮಾಜಿಕ ಸೇವಾ ವ್ಯವಸ್ಥೆಯು ಕುಸಿದು, ಜನ್ಮ ಪ್ರಮಾಣ ಕಡಿಮೆಯಾಗಿ ಮೃತ್ಯು ಪ್ರಮಾಣ ಹೆಚ್ಚಾಯಿತು. 1990ರ ದಶಕದ ಶುರುವಿನಲ್ಲಿ ಮತ್ತು ಮಧ್ಯದಲ್ಲಿ ತೀವ್ರ ಯದೃಚ್ಛೆ ತಾಂಡವ ನಾಟ್ಯವಾಡುತ್ತಿತ್ತು.ಅಪರಾಧಿ ಗುಂಪುಗಳು ಮತ್ತು ಸಂಘಟಿತ ಅಪರಾಧಗಳು ಎಲ್ಲೆಯಿಲ್ಲದೆ ನಡೆಯುತ್ತಿದ್ದು, ಕೊಲೆ ಮತ್ತು ಇತರೆ ಹಿಂಸಾಸ್ವರೂಪದ ಅಪರಾಧಗಳು ಕೈಮೀರಿ ಹೋಗುತ್ತಿದ್ದವು.[೭೨]

] 1993ರ ಸಾಂವಿಧಾನಿಕ ಬಿಕ್ಕಟ್ಟು ಅಕ್ಟೋಬರ್ ಕ್ರಾಂತಿಯ ನಂತರ ಮಾಸ್ಕೋದಲ್ಲಿ ನಡೆದ ಅತಿಹೀನ ನಾಗರಿಕ ಕಲಹಕ್ಕೆ ಕಾರಣವಾಯಿತು.[179] ತಮ್ಮ ಅಧಿಕಾರವನ್ನು ವೃದ್ಧಿಸಿ, ಜನಪ್ರಿಯವಲ್ಲದ ಆರ್ಥಿಕ ಸುಧಾರಣೆಗಳನ್ನು ಜಾರಿಗೊಳಿಸುವ ಯತ್ನವನ್ನು ವಿರೋಧಿಸಿದ ದೇಶದ ಶಾಸಕರ ಸಭೆಯನ್ನು ಅಧ್ಯಕ್ಷ ಬೊರಿಸ್ ಯೆಲ್ಟ್ಸಿನ್ ಕಾನೂನುಬಾಹಿರವಾಗಿ[181] ವಿಸರ್ಜಿಸಿದರು; ಇದಕ್ಕೆ ಉತ್ತರವಾಗಿ ಶಾಸಕರು ಶ್ವೇತ ಭವನದೊಳಗೆ ಬೀಗ ಹಾಕಿದ್ದುಕೊಂಡು, ಯೆಲ್ಟ್ಸಿನ್‌ರನ್ನು ವಜಾಗೊಳಿಸಿ, ಹೊಸ ಅಧ್ಯಕ್ಷರನ್ನು ಚುನಾಯಿಸಿದರು.ಯೆಲ್ಟ್ಸಿನ್ ಸರ್ಕಾರದ ವಿರುದ್ಧದ ಪ್ರಮುಖ ಪ್ರತಿಭಟನೆಗಳು ನೂರಾರು ಸಾವುಗಳಲ್ಲಿ ಪರಿಣಮಿಸಿತು. ಸೇನಾ ಬೆಂಬಲದೊಂದಿಗೆ, ಯೆಲ್ಟ್ಸಿನ್ ಸೇನೆಯನ್ನು ಕಳುಹಿಸಿ ಸಂಸದ್ ಭವನಕ್ಕೆ ಮುತ್ತಿಗೆ ಹಾಕಿಸಿ, ಟ್ಯಾಂಕ್ ಹಾಗೂ ಫಿರಂಗಿಗಳನ್ನು ಬಳಸಿ ಅದರೊಳಗಿದ್ದವರನ್ನು ಹೊರಗಟ್ಟಿಸಿದರು.

1990ರ ದಶಕದಲ್ಲಿ ಉತ್ತರ ಕಾಕಸಸ್‌ನಲ್ಲಿ ಸಶಸ್ತ್ರ ಜನಾಂಗೀಯ ಘರ್ಷಣೆಗಳು ನಡೆಯುತ್ತಿದ್ದವು. ಇಂತಹ ಘರ್ಷಣೆಗಳು ಸಂಯುಕ್ತತೆಯ ವಿರುದ್ದ ತಲೆಯೆತ್ತಿದ ಇಸ್ಲಾಮಿ ಪ್ರತ್ಯೇಕತಾವಾದ ಅಥವಾ ಸ್ಥಳೀಯ ಗುಂಪುಗಳ ನಡುವೆ ಜನಾಂಗೀಯ ಘರ್ಷಣೆಗಳತ್ತ ತಿರುಗಿದವು.1990ರ ದಶಕದಲ್ಲಿ ಚೆಚೆನ್ ಪ್ರತ್ಯೇಕತಾವಾದಿಗಳು ಸ್ವಾತಂತ್ರ್ಯ ಘೋಷಿಸಿದಾಗಿಂದಲೂ, ಹಲವಾರು ವಿವಿಧ ಚೆಚೆನ್ ಬಂಡಾಯ ಗುಂಪುಗಳು ಮತ್ತು ರಷ್ಯಾದ ಸೇನೆಯ ನಡುವೆ ಸಣ್ಣ ಪ್ರಮಾಣದಲ್ಲಿ ಗೆರಿಲ್ಲಾ ಸಮರ (ಮೊದಲನೆಯ ಚೆಚೆನ್ ಸಮರ, ಎರಡನೆಯ ಚೆಚೆನ್ ಯುದ್ಧ) ನಡೆದಿದ್ದವು. ಚೆಚೆನ್ ಪ್ರತ್ಯೇಕತಾವಾದಿಗಳಿಂದ ನಾಗರೀಕರ ವಿರುದ್ಧದ ಆತಂಕವಾದೀ ಹಲ್ಲೆ, ಇದರಲ್ಲಿ ಪ್ರಮುಖವಾದದ್ದು ಮಾಸ್ಕೋ ರಂಗಮಂದಿರ ಒತ್ತೆಯಾಳು ಬಿಕ್ಕಟ್ಟು ಮತ್ತು ಬೆಸ್ಲಾನ್ ಶಾಲೆಯ ಮುತ್ತಿಗೆ, ನೂರಾರು ಸಾವುಗಳಿಗೆ ಕಾರಣವಾಗಿ ವಿಶ್ವದ ಗಮನವನ್ನು ತನ್ನತ್ತ ಸೆಳೆಯಿತು. ಹೆಚ್ಚು ಕೊರೆತೆಯ ಬಜೆಟ್ ಮತ್ತು 1997ರ ಏಷ್ಯಾದ ಹಣಕಾಸು ಬಿಕ್ಕಟ್ಟು 1998ರ ಹಣಕಾಸು ಬಿಕ್ಟಟ್ಟಿಗೆ ಕಾರಣವಾಗಿ[183] GDP ಇನ್ನಷ್ಟು ಕುಸಿಯಲು ಕಾರಣವಾಯಿತು.[185] 31 ಡಿಸೆಂಬರ್ 1999ರಂದು ಬೊರಿಸ್ ಯೆಲ್ಟ್ಸಿನ್ ಅಧ್ಯಕ್ಷ ಹುದ್ದಗೆ ರಾಜೀನಾಮೆ ನೀಡಿ, ಇತ್ತೀಚೆಗೆ ಪ್ರಧಾನ ಮಂತ್ರಿಯಾಗಿ ನೇಮಕಗೊಂಡಿರುವ ವ್ಲಾಡಿಮಿರ್ ಪುಟಿನ್‌ರಿಗೆ ಅಧಿಕಾರ ಹಸ್ತಾಂತರಗೊಳಿಸಿದರು; ಪುಟಿನ್ 2000ರ ಚುನಾವಣೆಯಲ್ಲಿ ಜಯಗಳಿಸಿದರು.ಚೆಚೆನ್ ಬಂಡುಕೋರರನ್ನು ಚೆಚ್ಚಿಹಾಕಿ ಪುಟಿನ ಅಪಾರ ಜನಪ್ರಿಯತೆ ಗಳಿಸಿದರು, ಆದಾಗ್ಯೂ ಈಗಲೂ ಸಹ ಅಗಾಗ್ಗೆ ಉತ್ತರ ಕಾಕಸಸ್‌ ಆದ್ಯಂತ ಹಿಂಸಾಚಾರ ಮರುಕಳಿಸುತ್ತಿರುತ್ತದೆ. ಹಚ್ಚಿದ ತೈಲ ಬೆಲೆ ಮತ್ತು ಶುರುವಿನಲ್ಲಿ ದುರ್ಬಲ ನಗನಾಣ್ಯ ಪದ್ಧತಿ, ಜೊತೆಗೆ ಏರುತ್ತಿರುವ ಸಾಂಸಾರಿಕ ಬೇಡಿಕೆ, ಬಳಕೆ ಮತ್ತು ಹೂಡಿಕೆಗಳು ಆರ್ಥಿಕತೆಯು ಸತತ ಒಂಬತ್ತು ವರ್ಷಗಳ ಕಾಲ ಬೆಳೆಯುವಂತೆ ಮಾಡಿವೆ, ಹಾಗಾಗಿ ಜೀವನದ ಗುಣಮಟ್ಟವನ್ನು ಸುಧಾರಿಸಿ ವಿಶ್ವರಂಗದಲ್ಲಿ ರಷ್ಯಾದ ಪ್ರಾಬಲ್ಯ ಹೆಚ್ಚಲು ನೆರವಾಯಿತು.[] ಪುಟಿನ್ ಸರ್ಕಾರವು ಕೈಗೊಂಡ ಸುಧಾರಣಾ ಕ್ರಮಗಳನ್ನು ಪಶ್ಚಿಮ ರಾಷ್ಟ್ಗಗಳು ಪ್ರಜಾಪರವಲ್ಲವೆಂದು ಟೀಕಿಸಿದರೂ,[೭೩] ಪುಟಿನ್‌ರ ನಾಯಕತ್ವದಡಿ ಸುವ್ಯವಸ್ಥೆ, ಸ್ಥಿರತೆ ಮತ್ತು ಪ್ರಗತಿಯು ರಷ್ಯಾದ್ಯಂತ ಜನಪ್ರಿಯತೆ ಗಳಿಸಿಕೊಟ್ಟಿದೆ.[೭೪] 7 ಮಾರ್ಚ್ 2008ರಂದು ಡ್ಮಿಟ್ರಿ ಮೆಡ್ವೆಡೆವ್ ರಷ್ಯಾದ ಅಧ್ಯಕ್ಷರಾಗಿ, ಪುಟಿನ್ ಪ್ರಧಾನ ಮಂತ್ರಿಯಾದರು.

ಸರ್ಕಾರ ಮತ್ತು ರಾಜಕೀಯ

[ಬದಲಾಯಿಸಿ]
ಕ್ರೆಮ್ಲಿನ್ ಸೆನೆಟ್ ಗೆ ಪ್ರವೇಶ, ಮಾಸ್ಕೋ ಕ್ರೆಮ್ಲಿನ್ ನ ಭಾಗ ಮತ್ತು ರಷ್ಯಾ ಅಧ್ಯಕ್ಷರ ಕಾರ್ಯೋಪಯುಕ್ತ ಮನೆ

1993 ರಷ್ಯಾದ ಸಂವಿಧಾನದ ಬಿಕ್ಕಟ್ಟು ನಂತರ, 12 ಡಿಸೆಂಬರ್ 1993ರಂದು ಜನಮತ ಸಂಗ್ರಹದ ಮೂಲಕ ಅಂಗೀಕರಿಸಲಾದ ರಾಷ್ಟ್ರೀಯ ಸಂವಿಧಾನದ ಪ್ರಕಾರ, ರಷ್ಯಾ ಒಂದು ಸಂಯುಕ್ತಗೊಳಿಸಿಕೆ ಮತ್ತು ವಿಧ್ಯುಕ್ತವಾಗಿ ಅರೆ-ಅಧ್ಯಕ್ಷೀಯ ಗಣರಾಜ್ಯ, ಇದರಲ್ಲಿ ಅಧ್ಯಕ್ಷರು ರಾಷ್ಟ್ರದ ಮುಖ್ಯಸ್ಥರಾಗಿರುತ್ತಾರೆ[೭೫] ಮತ್ತು ಪ್ರಧಾನ ಮಂತ್ರಿಯು ಸರ್ಕಾರದ ಮುಖ್ಯಸ್ಥರಾಗಿರುತ್ತಾರೆ. ರಷ್ಯನ್‌ ಒಕ್ಕೂಟವು ಮೂಲಭೂತವಾಗಿ ಪ್ರತಿನಿಧಿ ಪ್ರಜಾಪ್ರಭುತ್ವವಾಗಿ ನಿರ್ಮಾಣವಾಗಿದೆ. ಕಾರ್ಯಾಂಗ ಅಧಿಕಾರವು ಸರ್ಕಾರದಂದ ಚಲಾಯಿತವಾಗುತ್ತದೆ.[195] ಶಾಸನ ಅಧಿಕಾರವು ಸಂಯುಕ್ತ ಸಭೆಯ ಎರಡು ಕೊಠಡಿಗಳೊಂದಿಗಿರುತ್ತದೆ.[197] ರಷ್ಯನ್‌ ಒಕ್ಕೂಟದ ಸಂವಿಧಾನ ನಿರೂಪಿಸಿರುವ ಪರಿಶೀಲನೆಗಳು ಮತ್ತು ಸಮತೋಲನಗಳ ವ್ಯವಸ್ಥೆಯು ಸರ್ಕಾರವನ್ನು ನಿಯಂತ್ರಿಸುತ್ತದೆ, ಇದು ರಷ್ಯಾದ ಸರ್ವೋಚ್ಚ ಕಾನೂನು ಪತ್ರವಾಗಿ ಮತ್ತು ರಷ್ಯನ್ ಒಕ್ಕೂಟದ ಜನತೆಗಾಗಿ ಒಂದು ಸಾಮಾಜಿಕ ಗುತ್ತಿಗೆಯಾಗಿರುತ್ತದೆ.

ಚಿತ್ರ:Dmitry Medvedev and Vladimir Putin edit.jpg
ಅಧ್ಯಕ್ಷ ದ್ಮಿಟ್ರಿ ಮೆಡ್ವೆಡೆವ್ ಮತ್ತು ಪ್ರಧಾನಿ ವ್ಲಾಡಿಮಿರ್ ಪುಟಿನ್

ಸಂಯುಕ್ತ ಸರ್ಕಾರವು ಮೂರು ಶಾಖೆಗಳನ್ನು ಹೊಂದಿದೆ:

ಸಂವಿಧಾನದ ಪ್ರಕಾರ, ನ್ಯಾಯಾಲಯದಲ್ಲಿ ಸಾಂವಿಧಾನಿಕ ನ್ಯಾಯವು ಎಲ್ಲಾ ಪ್ರಜೆಗಳ ಸಮಾನತೆಯನ್ನು ಅವಲಂಬಿಸಿದೆ,[199] ನ್ಯಾಯಾಧೀಶರು ಸ್ವತಂತ್ರವಾಗಿರುತ್ತಾರೆ ಮತ್ತು ಕೇವಲ ಕಾನೂನಿನಡಿ ಮಾತ್ರ ಆಧೀನರಾಗಿರುತ್ತಾರೆ,[201] ವಿಚಾರಣೆಗಳು ಮುಕ್ತವಾಗಿದ್ದು ಆರೋಪಿಗೆ ಒಬ್ಬ ವಕೀಲರನ್ನೂ ಒದಗಿಸಿಕೊಡಲಾಗುವುದು.[203] 1996ರಿಂದಲೂ, ರಷ್ಯಾ ರಷ್ಯಾದಲ್ಲಿ ಮರಣದಂಡನಾ ಶಿಕ್ಷೆಯ ಮೇಲೆ ತಾತ್ಕಾಲಿಕ ನಿಷೇಧವನ್ನು ಹೇರಿದೆ, ಆದಾಗ್ಯೂ ಈ ರೀತಿಯ ಶಿಕ್ಷೆಯನ್ನು ಕಾನೂನು ಬಹಿಷ್ಕರಿಸಿಲ್ಲ.

ಅಧ್ಯಕ್ಷರು ಜನಮತದ ಮೂಲಕ ಆರು ವರ್ಷಗಳ ಅವಧಿಗೆ ಚುನಾಯಿತರಾಗಿರುತ್ತಾರೆ[೭೬] (ಎರಡನೆಯ ಅವಧಿಗೆ ಅರ್ಹರಾಗಿದ್ದರೂ ಸಾಂವಿಧಾನಿಕವಾಗಿ ಸತತ ಮೂರನೆಯ ಅವಧಿಗೆ ಬರಲು ಅನರ್ಹರಾಗಿರುತ್ತಾರೆ);[೭೭] ಕಳೆದ 2 ಮಾರ್ಚ್ 2008ರಂದು ಚುನಾವಣೆಯು ನಡೆದಿತ್ತು. ಸರ್ಕಾರದಲ್ಲಿರುವ ಮಂತ್ರಾಲಯಗಳು ಪ್ರಧಾನಿ ಹಾಗೂ ಅವರ ನಿಯೋಗಿಗಳನ್ನು, ಮಂತ್ರಿಗಳನ್ನು ಹಾಗೂ ಆಯ್ಕೆಯಾದ ಕೆಲವು ವ್ಯಕ್ತಿಗಳನ್ನು ಹೊಂದಿರುತ್ತವೆ; ಇವರೆಲ್ಲರನ್ನೂ ಪ್ರಧಾನಿಯ ಶಿಫಾರಸಿನ ಮೇಲೆ ಅಧ್ಯಕ್ಷರು ನೇಮಿಸುವರು (ಪ್ರಧಾನಿಯ ನೇಮಕಾತಿಗೆ ರಾಜ್ಯ ಡುಮಾದ ಅನುಮೋದನೆಯ ಅಗತ್ಯವಿದೆ). ಸಂಯುಕ್ತ ಸಭೆಯು ರಾಷ್ಟ್ರೀಯ ಶಾಸಕಾಂಗವಾಗಿರುತ್ತದೆ, ಇದರಲ್ಲಿ ಎರಡು ಕೊಠಡಿಗಳುಂಟು; 450-ಸದಸ್ಯರುಳ್ಳ ರಾಜ್ಯ ಡುಮಾ[೭೮] ಮತ್ತು 176-ಸದಸ್ಯರುಳ್ಳ ಸಂಯುಕ್ತ ಪರಿಷತ್ತು. ರಷ್ಯಾದಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಪೈಕಿ ಯುನೈಟೆಡ್ ರಷ್ಯಾ, ಸಮುದಾಯ ಸ್ವಾಮ್ಯವಾದಿ (ಕಮ್ಯೂನಿಸ್ಟ್‌) ಪಕ್ಷ, ರಷ್ಯಾ ಉದಾರೀ ಗಣರಾಜ್ಯ (ಲಿಬೆರಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ರಷ್ಯಾ) ಮತ್ತು ಕಾನೂನು ರಷ್ಯಾ.

ಉಪ ವಿಭಾಗಗಳು

[ಬದಲಾಯಿಸಿ]
ಸಂಯುಕ್ತ ಪ್ರಾಂತ್ಯಗಳು

ರಷ್ಯನ್‌ ಒಕ್ಕೂಟ 83 ಸಂಯುಕ್ತ ಪ್ರಾಂತ್ಯಗಳನ್ನು ಹೊಂದಿದೆ.[೭೯] ಸಂಯುಕ್ತ ಪರಿಷತ್ತು ಈ ಪ್ರಾಂತ್ಯಗಳಿಗೆ ಸಮಾನ ಪ್ರಾತಿನಿಧ್ಯವುಂಟು —ಪ್ರತಿ ಪ್ರಾಂತ್ಯಕ್ಕೆ ಇಬ್ಬರು ಪ್ರತಿನಿಧಿಗಳುಂಟು.[೮೦] ಆದಾಗ್ಯೂ, ಅವುಗಳಿಗೆ ಲಭಿಸಿರುವ ಸ್ವಾಯತ್ತತೆಯ ಪ್ರಮಾಣದಲ್ಲಿ ವ್ಯತ್ಯಾಸವಿರುತ್ತದೆ.

  • 46 ಪ್ರಾಂತ್ಯಗಳು (ಪ್ರಾಂತ್ಯಗಳು): ಸಾಮಾನ್ಯ ತರಹದ ಸಂಯುಕ್ತ ಪ್ರಾಂತ್ಯಗಳು, ಕೇಂದ್ರ ಸರ್ಕಾರ-ನಿಯೋಜಿತ ರಾಜ್ಯಪಾಲ ಹಾಗೂ ಸ್ಥಳೀಯವಾಗಿ ಚುನಾಯಿತ ಶಾಸಕಾಂಗವನ್ನು ಹೊಂದಿರುತ್ತದೆ.
  • 21 ಗಣರಾಜ್ಯಗಳು: ಅಲ್ಪಮಟ್ಟದ ಸ್ವಾಯತ್ತತೆ ಹೊಂದಿರುತ್ತವೆ; ಪ್ರತಿಯೊಂದಕ್ಕೂ ತನ್ನದೇ ಆದ ಸಂವಿಧಾನ, ಅಧ್ಯಕ್ಷ ಮತ್ತು ಸಂಸತ್ತನ್ನು ಹೊಂದಿರುತ್ತದೆ.ಗಣರಾಜ್ಯಗಳೂ ರಷ್ಯನ್ ಭಾಷೆಯ ಜೊತೆಗೆ ತಮ್ಮದೇ ಆದ ಅಧಿಕೃತ ಭಾಷೆಯನ್ನು ಸ್ಥಾಪಿಸಿಕೊಳ್ಳಬಹುದಾಗಿದೆ, ಆದರೆ ಅಂತಾರಾಷ್ಟ್ರೀಯ ವಿಚಾರಗಳಲ್ಲಿ ಈ ಗಣರಾಜ್ಯಗಳನ್ನು ಸಂಯುಕ್ತ ಸರ್ಕಾರವು ಪ್ರತಿನಿಧಿಸುತ್ತದೆ. ಗಣರಾಜ್ಯಗಳು ಕೆಲವು ನಿರ್ದಿಷ್ಟ ಜನಾಂಗೀಯ ಅಲ್ಪಸಂಖ್ಯಾತರಿಗೆ ತಾಣವಾಗಿರುತ್ತದೆ.
  • ನೈನ್ ಕ್ರಾಯಿ (ಸೀಮೆ): ಪ್ರಾಂತ್ಯಗಳಂತೆಯೇ ಇವೂ ಸಹ. "ಸೀಮೆ" ಬಿರುದು ಐತಿಹಾಸಿಕವಾಗಿದ್ದು, ಮೂಲತ: ಸೀಮಾಂತ್ಯ ವಲಯಗಳಿಗೆ ಹಾಗೂ ನಂತರ ಸ್ವಾಯತ್ತತೆ ಹೊಂದಿರುವ ಪ್ರಾಂತ್ಯ ಅಥವಾ ಸ್ವಾಯತ್ತತೆ ಹೊಂದಿರುವ ಒಬ್ಲಾಸ್ಟ್‌ಗಳನ್ನು ಹೊಂದಿರುವ ಆಡಳಿತ ವಿಭಾಗಗಳಿಗೂ ಅನ್ವಯಿಸಬಹುದು.
  • ನಾಲ್ಕು ಸ್ವಾಯತ್ತತೆ ಹೊಂದಿರುವ ಪ್ರಾಂತ್ಯಗಳು (ಸ್ವಾಯತ್ತತೆ ಹೊಂದಿರುವ ಜಿಲ್ಲೆಗಳು): ಜನಾಂಗೀಯ ಅಲ್ಪಸಂಖ್ಯಾತರಿಗಾಗಿ ಸೃಷ್ಟಿಸಲಾದ ಪ್ರಾಂತ್ಯಗಳ ಹಾಗೂ ಕ್ರೈಸ್ ಗಳೊಳಗೇ ಮೂಲತ: ಸ್ವಾಯತ್ತತೆ ಹೊಂದಿರುವ ಇರುವಿಕೆಗಳು, 1990ರ ದಶಕದಲ್ಲಿ ಅವುಗಳ ಸ್ಥಿತಿಯನ್ನು ಸಂಯುಕ್ತ ಪ್ರಾಂತ್ಯಕ್ಕೆ ಏರಿಸಲಾಯಿತು. ಚುಕೊಟ್ಕಾ ಸ್ವಾಯತ್ತತೆಯುಳ್ಳ ಒಕ್ರುಗ್ ಹೊರತುಪಡಿಸಿ, ಉಳಿದ ಎಲ್ಲಾ ಸ್ವಾಯತ್ತತೆ ಹೊಂದಿದ ಒಕ್ರುಗ್‌ಗಳು ಆಡಳಿತದಲ್ಲಿ ಒಂದು ಕ್ರಾಯಿ ಅಥವಾ ಒಂದು ಅವು ಇರುವಂತಹ ಪ್ರಾಂತ್ಯನ ಅಧೀನವಾಗಿಯೇ ಇರುತ್ತವೆ.
  • ಒಂದು ಸ್ವಾಯತ್ತತೆ ಹೊಂದಿರುವ ಪ್ರಾಂತ್ಯ (ಯಹೂದಿ ಸ್ವಾಯತ್ತತೆ ಹೊಂದಿರುವ ಒಬ್ಲಾಸ್ಟ್‌): ಮೂಲತ: ಸ್ವಾಯತ್ತತೆ ಹೊಂದಿರುವ ಪ್ರಾಂತ್ಯಗಳು ಕ್ರಾಯಿಗಳಿಗೆ ಆಧೀನವಾದ ಆಡಳಿತ ಘಟಕಗಳಾಗಿದ್ದವು. 1990ರಲ್ಲಿ, ಯಹೂದಿ ಸ್ವಾಯತ್ತತೆ ಹೊಂದಿದ ಒಬ್ಲಾಸ್ಟ್ ಹೊರತುಪಡಿಸಿ ಉಳಿದವೆಲ್ಲವೂ ಗಣರಾಜ್ಯ ಸ್ಥಿತಿಗೆ ಉನ್ನತೀಕರಿಸಲಾದವು.
  • ಎರಡು ಸಂಯುಕ್ತ ನಗರಗಳು (ಮಾಸ್ಕೋ ಮತ್ತು ಸೇಂಟ್ ಪೀಟರ್ಸ್‌ಬರ್ಗ್): ಪ್ರತ್ಯೇಕ ವಲಯಗಳಂತೆ ನಡೆಯುವ ಪ್ರಮುಖ ನಗರಗಳಾಗಿವೆ.
ಸಂಯುಕ್ತ ಜಿಲ್ಲೆಗಳು ಹಾಗೂ ಆರ್ಥಿಕ ವಲಯಗಳು

ಸಂಯುಕ್ತ ಪ್ರಾಂತ್ಯಗಳನ್ನು ಏಳು ಸಂಯುಕ್ತ ಜಿಲ್ಲೆಗಳಾಗಿ ವಿಂಗಡಿಸಲಾಗಿದ್ದು, ಪ್ರತಿಯೊಂದು ಜಿಲ್ಲೆಗೂ ರಷ್ಯಾದ ಅಧ್ಯಕ್ಷರಿಂದ ನೇಮಕವಾಗಿರುವ ಒಬ್ಬ ದೂತನ ಆಡಳಿತದಲ್ಲಿರುತ್ದದೆ.[೮೧] ಸಂಯುಕ್ತ ಪ್ರಾಂತ್ಯಗಳಿಗಿಂತಲೂ ಭಿನ್ನವಾಗಿ, ಸಂಯುಕ್ತ ಜಿಲ್ಲೆಗಳು ಸರ್ಕಾರದ ಉಪರಾಷ್ಟ್ರೀಯ ಮಟ್ಟದ್ದಲ್ಲ, ಬದಲಿಗೆ ಸಂಯುಕ್ತ ಸರ್ಕಾರದ ಆಡಳಿತ ಮಟ್ಟದ್ದಾಗಿದೆ. ಸಂಯುಕ್ತ ಜಿಲ್ಲೆಗಳ ದೂತರು ಸಂಯುಕ್ತ ಪ್ರಾಂತ್ಯಗಳು ಮತ್ತು ಸಂಯುಕ್ತ ಸರ್ಕಾರಗಳ ನಡುವೆ ಸಂಪರ್ಕಾಧಿಕಾರಿಗಳಾಗಿರುತ್ತಾರೆ ಮತ್ತು ಸಂಯುಕ್ತ ಪ್ರಾಂತ್ಯಗಳು ಸಂಯುಕ್ತ ಕಾನೂನು-ನಿಯಮಗಳನ್ನು ಪಾಲಿಸುವಂತೆ ನೋಡಿಕೊಳ್ಳುವುದು ಇವರ ಜವಾಬ್ದಾರಿಯಾಗಿರುತ್ತದೆ.

ರಷ್ಯಾ ಒಕ್ಕೂಟದ ಪ್ರಜೆಗಳ ಕೇಂದ್ರ ನಕ್ಷೆ

ವಿದೇಶಿ ಸಂಬಂಧಗಳು ಮತ್ತು ಸೇನೆ

[ಬದಲಾಯಿಸಿ]
2008 BRIC ರಾಷ್ಟ್ರಗಳ ನಾಯಕರು: (ಎಡದಿಂದ ಬಲಕ್ಕೆ) ಭಾರತದ ಮನಮೋಹನ್ ಸಿಂಗ್, ರಷ್ಯಾದ ದ್ಮಿಟ್ರಿ ಮೆಡ್ವೆಡೆವ್, ಚೀನಾದ ಹು ಜಿಂತಾವೊ ಮತ್ತು ಬ್ರೆಜಿಲ್ ನ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ.

ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ರಷ್ಯನ್ ಒಕ್ಕೂಟವು ಹಿಂದಿನ ಸೋವಿಯತ್ ಒಕ್ಕೂಟದ ಕಾನೂನುಬದ್ಧ ದಾಯಿತ್ವವನ್ನು ಹೊಂದಿರುವಂತೆ ಪರಿಗಣಿಸಲಾಗಿದೆ.[೧೫] ರಷ್ಯಾ USSRನ ಎಲ್ಲಾ ಅಂತಾರಾಷ್ಟ್ರೀಯ ಬದ್ಧತೆಗಳನ್ನು ಮುಂದುವರೆಸುತ್ತಿದೆ ಹಾಗೂ ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತಿನಲ್ಲಿರುವ USSRನ ಖಾಯಂ ಸದಸ್ಯತ್ವವನ್ನು ತನ್ನದಾಗಿಸಿಕೊಂಡು, ಅನ್ಯ ಅಂತಾರಾಷ್ಟ್ರೀಯ ಸಂಘಟನೆಗಳಲ್ಲಿ USSRನ ಸದಸ್ಯತ್ವವನ್ನು, ಅಂತಾರಾಷ್ಟ್ರೀಯ ಒಡಂಬಡಿಕೆಗಳಡಿಯಿರುವ ಹಕ್ಕು-ಕಟ್ಟುಪಾಡುಗಳನ್ನು, ಆಸ್ತಿ-ಋಣಗಳನ್ನು ತನ್ನದಾಗಿಸಿಕೊಂಡಿದೆ.ರಷ್ಯಾ ಬಹುಮುಖಿ ವಿದೇಶ ನೀತಿಯನ್ನು ಹೊಂದಿದೆ. ಅದು 178 ದೇಶಗಳೊಂದಿಗೆ ರಾಜತಾಂತ್ರಿಕೆ ಸಂಬಂಧಗಳನ್ನು ಇಟ್ಟುಕೊಂಡಿದೆ[when?][220] ಮತ್ತು 140 ದೂತಾವಾಸಗಳಿವೆ.[೮೨] ರಷ್ಯಾದ ವಿದೇಶಾಂಗ ನೀತಿಯನ್ನು ಅಧ್ಯಕ್ಷರು ನಿರ್ಧರಿಸಿ ವಿದೇಶಾಂಗ ಸಚಿವಾಲಯವು ಜಾರಿಗೊಳಿಸುತ್ತದೆ.[೮೩]

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಐದು ಖಾಯಂ ಸದಸ್ಯರಲ್ಲಿ ಒಂದಾಗಿರುವ ರಷ್ಯಾ, ಅಂತಾರಾಷ್ಟ್ರೀಯ ಶಾಂತಿ-ಭದ್ರತೆಗಳ ಪಾಲನೆಯಲ್ಲಿ ಪ್ರಮುಖ ಪಾತ್ರ ವಹಿಸಿ, ಅಂತಾರಾಷ್ಟ್ರೀಯ ಘರ್ಷಣೆಗಳನ್ನು ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಮಧ್ಯಪ್ರಾಚ್ಯದ ಚತುಷ್ಕ, ಉತ್ತರ ಕೊರಿಯಾದೊಂದಿಗೆ ಷಟ್ಪಕ್ಷೀಯ ಮಾತುಕತೆಗಳು ನಡೆಸಿ, ಕೊಸೊವೊ ಘರ್ಷಣೆಯ ಪರಿಹಾರವನ್ನು ಉತ್ತೇಜಿಸಿ ಮತ್ತು ಪರಮಾಣು ಶಸ್ತ್ರ ಪ್ರಸರಣ ಸಮಸ್ಯೆಯ ಬಗೆಹರಣದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದೆ. ಉದ್ಯಮಶೀಲ ರಾಷ್ಟ್ರಗಳ ಎಂಟರ ಗುಂಪು (G8) ರಷ್ಯಾ ಸಹ ಸದಸ್ಯವಾಗಿದೆ, ಜೊತೆಗೆ ಯೂರೋಪ್‌ ಪರಿಷತ್ತು, OSCE ಮತ್ತು APEC ಗುಂಪುಗಳ ಸದಸ್ಯವೂ ಆಗಿದೆ. CIS, EurAsEC, CSTO ಮತ್ತು SCO ಮುಂತಾದ ವಲಯವಾರು ಸಂಘಟನೆಗಳಲ್ಲಿ ರಷ್ಯಾ ಪ್ರಮುಖ ಪಾತ್ರ ವಹಿಸಿದೆ. ಮಾಜಿ ಅಧ್ಯಕ್ಷ (ಇಂದಿನ ಪ್ರಧಾನಿ) ವ್ಲಾಡಿಮಿರ್‌ ಪುಟಿನ್ ರಷ್ಯಾ ಮತ್ತು EU ನಡುವೆ ನಾಲ್ಕು ಸಾಮಾನ್ಯ ಅಂತರಗಳ ಸ್ಥಾಪನೆಯೂ ಸೇರಿದಂತೆ ರಾಜತಾಂತ್ರಿಕ ಸಹಯೋಗ, ಜೊತೆಗೆ ಹಲವಾರು ಪ್ರಮಾಣಗಳ ಏಕೀಕರಣದ ಪ್ರಸ್ತಾಪವನ್ನು ಸಮರ್ಥಿಸಿದ್ದರು.[೮೪] ಸೋವಿಯತ್‌ ಒಕ್ಕೂಟವು ಕುಸಿದಾಗಿನಿಂದಲೂ, ರಷ್ಯಾ NATOದೊಂದಿಗೆ ಸ್ನೇಹಮಯವಾದರೂ ಲವಲವಿಕೆಯ ಸಂಬಂಧಗಳು ಇಟ್ಟುಕೊಂಡು ಬಂದಿದೆ. 26 ಮಿತ್ರ ದೇಶಗಳೊಂದಿಗೆ ರಷ್ಯಾ ಒಗ್ಗೂಡಿ ಜಂಟಿ ಸಹಕಾರಕ್ಕಾಗಿ ಕಾರ್ಯ ನಿರ್ವಹಿಸಲು 2002ರಲ್ಲಿ NATO-ರಷ್ಯಾ ಪರಿಷತ್ತಿನ ರಚನೆಯಾಯಿತು.[೮೫]

ಕಜಕ್ ಸ್ತಾನದಲ್ಲಿ ನಡೆದ ಅಭ್ಯಾಸದಲ್ಲಿ ರಷ್ಯಾ ಪ್ಯಾರಾಟ್ರೂಪರ್ ಗಳು

ರಷ್ಯಾ ವಿದೇಶಗಳಲ್ಲಿರುವ ಸೋವಿಯತ್ ಆಸ್ತಿಗಳನ್ನು ತನ್ನದಾಗಿಸಿಕೊಂಡಿತು ಹಾಗೂ ಸೋವಿಯತ್‌ ಒಕ್ಕೂಟದ ಉತ್ಪಾದನಾ ಘಟಕಗಳು ಮತ್ತು ರಕ್ಷಣಾ ಕೈಗಾರಿಕೆಗಳು ರಷ್ಯಾದಲ್ಲಿವೆ.[೮೬] ರಷ್ಯಾದ ಸೇನೆಯು ಭೂ ಸೇನೆ, ನೌಕಾ ಪಡೆ ಮತ್ತು ವಾಯು ಪಡೆಗಳಾಗಿ ವಿಂಗಡಿಸಲಾಗಿದೆ. ಜೊತೆಗೆ ಸೇವೆಯ ಮೂರು ಸ್ವತಂತ್ರ ಅಂಗಗಳೂ ಸಹ ಇವೆ: ರಣನೈತಿಕ ರಾಕೆಟ್ ಪಡೆ, ಸೇನಾ ಬಾಹ್ಯಾಕಾಶ ಪಡೆ ಮತ್ತುವಾಯುಗಾಮಿ ಪಡೆ 2006ರಲ್ಲಿ, ಸೇನೆಯಲ್ಲಿ ಸಕ್ರಿಯ ಸೇವೆಯಲ್ಲಿ 1.037 ಮಿಲಿಯನ್ ನೌಕರರಿದ್ದರು.[೮೭]

ರಷ್ಯಾ ವಿಶ್ವದಲ್ಲೇ ಅತಿಹೆಚ್ಚು ಪರಮಾಣು ಶಸ್ತ್ರಗಳ ದಾಸ್ತಾನುಗಳನ್ನು ಇಟ್ಟುಕೊಂಡಿದೆ. ಇದು ಎರಡನೆಯ ಅತಿಹೆಚ್ಚು ಪ್ರಕ್ಷೇಪಕ ಕ್ಷಿಪಣಿ ಜಲಾಂತರಗಾಮಿಗಳ ದಾಸ್ತಾನು ಹೊಂದಿದೆ ಮತ್ತು ಅಮೆರಿಕಾ ಹೊರತುಪಡಿಸಿ, ಆಧುನಿಕ ರಣನೈತಿಕ ಬಾಂಬರ್ ಪಡೆಯನ್ನು ಹೊಂದಿರುವ ದೇಶವಾಗಿದೆ.[೧೬] ಈ ದೇಶವು ಹೆಚ್ಚಿನ ಪ್ರಮಾಣದಲ್ಲಿ ಸಂಪೂರ್ಣವಾಗಿ ಸ್ಥಳೀಯ ಶಸ್ತ್ರಗಳ ಉದ್ಯಮವನ್ನು ಹೊಂದಿದ್ದು, ಅದರ ಸೇನಾ ಉಪಕರಣಗಳನ್ನು ತಾನೇ ಉತ್ಪಾದಿಸುತ್ತದೆ. ರಷ್ಯಾ ವಿಶ್ವದಲ್ಲೇ ಅತಿಹೆಚ್ಚು ಪ್ರಮಾಣದ ಶಸ್ತ್ಗಗಳ ಪೂರೈಕದಾರನಾಗಿದೆ, 2001ರಿಂದಲೂ ಈ ಸ್ಥಾನವನ್ನು ಕಾಯ್ದಿರಿಸಿಕೊಂಡಿದ್ದು, ವಿಶ್ವಾದ್ಯಂತ ಶಸ್ತ್ರಗಳ ಮಾರಾಟದಲ್ಲಿ ಸುಮಾರು % 30ರಷ್ಟು ಪಾಲು ರಷ್ಯಾದ್ದು,[೮೮] ಸುಮಾರು 80 ದೇಶಗಳಿಗೆ ಶಸ್ತ್ರಗಳನ್ನು ರಫ್ತು ಮಾಡಿದೆ.[೮೯] ಸೋವಿಯತ್ ನೀತಿಯ ಅನುಸಾರ, 2007ರ ಮುಂಚೆ, 18-27 ವಯಸ್ಸಿನ ಎಲ್ಲಾ ಪುರುಷ ನಾಗರಿಕರಿಗೆ ಎರಡು ವರ್ಷಗಳ ಕಾಲ ಕಡ್ಡಾಯ ಸೇನೆ ಸೇವೆಗಾಗಿ ಸೇರ್ಪಡೆಯಾಗಬೇಕಿತ್ತು.ಇದರೊಂದಿಗೆ ಹಲವಾರು ಸಮಸ್ಯೆಗಳಿದ್ದವು, ಉದಾಹರಣೆಗೆ ಡೆಡೊವಿಸ್ ಚಿನಾ (ಸಾಂಸ್ಥಿಕ ಭೌತಿಕ ಮತ್ತು ಮಾನಸಿಕ ಹೀಯಾಳಿಕೆ), ಈ ಕಾರಣಕ್ಕಾಗಿ ಸಶಸ್ತ್ರ ಪಡೆಗಳು ಸೈನಿಕ ಸೇವಾ ಅವಧಿಯನ್ನು 2007ರಲ್ಲಿ 18 ತಿಂಗಳುಗಳಿಗೆ ಆನಂತರ 2008ರಲ್ಲಿ 12 ತಿಂಗಳುಗಳಿಗೆ ಕಡಿಮೆಗೊಳಿಸಿದವು, ಜೊತೆಗೆ 2010ರೊಳಗೆ ಗುತ್ತಿಗೆ ಸೇವಾ ಸೈನಿಕರ ಪ್ರಮಾಣವನ್ನು ಸಶಸ್ತ್ ಪಡೆಗಳ ಸಿಬ್ಬಂದಿಯ ೭೦% ಕ್ಕೆ ಹಚ್ಚಿಸುವ ಯೋಜನೆಯಿದೆ.[] ಕೊನೆಯ ಆರು ವರ್ಷಗಳಲ್ಲಿ ರಷ್ಯಾದ ರಕ್ಷಣಾ ವೆಚ್ಚವು ನಾಲ್ಕು ಪಟ್ಟು ಹೆಚ್ಚಾಗಿದೆ.[೯೦] 2008ರಲ್ಲಿ ಅಧಿಕೃತ ಸರ್ಕಾರಿ ಸೇನಾ ಖರ್ಚು $40 ಬಿಲಿಯನ್ ಆಗಿ, ವಿಶ್ವದಲ್ಲೇ ಎಂಟನೆಯ ಅತಿಹೆಚ್ಚು ಖರ್ಚಾಗಿದೆ,[೯೧] ಅಮೆರಿಕಾದ ಗುಪ್ತಪಡೆಯೂ ಸೇರಿದಂತೆ ವಿವಿಧ ಮೂಲಗಳು[೯೨] ಮತ್ತು ಅಂತಾರಾಷ್ಟ್ರೀಯ ರಣತಂತ್ರ ಅಧ್ಯಯನಾ ಸಂಸ್ಥೆಯ ಪ್ರಕಾರ,[೮೭] ರಷ್ಯಾದ ಸೇನಾ ಖರ್ಚು ಇನ್ನಷ್ಟೂ ಹೆಚ್ಚಾಗಿರುವಂತೆ ಅಂದಾಜು ಮಾಡಿದೆ.[೯೩] ಪ್ರಸ್ತುತ, ಸೇನೆಯು ಹಚ್ಚಿನ ಪ್ರಮಾಣದಲ್ಲಿ ಶಸ್ತ್ರಗಳ ಆಧುನೀಕರಣಕ್ಕೆ ಒಳಗಾಗುತ್ತಿದ್ದು, 2006ರಿಂದ 2015ರ ಅವಧಿಯಲ್ಲಿ ಸೇನಾ ಉಪಕರಣಗಳಿಗಾಗಿ ಸುಮಾರು $200 ಬಿಲಿಯನ್ ಖರ್ಚು ಮಾಡಲಿದೆ.[೯೪]

ಹಾಲಿ ರಕ್ಷಣಾ ಮಂತ್ರಿ ಅನಾಟೊಲಿ ಸರ್ಡ್ಯುಕೊವ್ ನೇತೃತ್ವದಲ್ಲಿ ಸೇನೆಯ ಸಂಘಟನೆ ಮತ್ತು ದಕ್ಷತೆಯನ್ನು ಉನ್ನತೀಕರಿಸಲು ಹಚ್ಚು ಪ್ರಮಾಣದ ಸುಧಾರಣೆಗಳು ನಡೆಯುತ್ತಿವೆ.[೯೫] ಅವರ ಸುಧಾರಣಾ ಕಾರ್ಯಕ್ರಮದ ಹಿಂದಿನ ಉದ್ದೇಶ ಹೆಚ್ಚು ಪ್ರಮಾಣದಲ್ಲಿ ಜನತಾ ಸಂಘಟಿತ ಸೇನೆಯನ್ನು ಸಣ್ಣ ಪ್ರಮಾಣದ ಗುತ್ತಿಗೆ ಸೇನೆಯನ್ನಾಗಿ ಪರಿವರ್ತಿಸುವುದು.[೯೬] ಸರ್ಡ್ಯುಕೊವ್ ಕೇಂದ್ರೀಯ ಆಡಳಿತದಲ್ಲಿನ ಸಿಬ್ಬಂದಿಯ ಪ್ರಮಾಣವನ್ನು % 30ರಷ್ಟು ಕಡಿಮೆಗೊಳಿಸುವರು, ಇದರಿಂದ ಜನರಲ್‌ಗಳು ಮತ್ತು ಕರ್ನಲ್‌ಗಳು ಅಲಂಕರಿಸಿರುವ ಹೆಚ್ಚು ಹುದ್ದೆಗಳು ಮಾಯವಾಗುವ ಸಾಧ್ಯತೆಗಳಿವೆ.[೯೫] ರಷ್ಯಾದ ಅಧಿಕಾರಿ ಕಾರ್ಜ್‌ಗಳ ಸಂಖ್ಯೆಯಲ್ಲಿ ಕಡಿತ ಮಾಡಲು ಇಚ್ಛಿಸುತ್ತಾರೆ. ಪ್ರಸ್ತುತ ಪ್ರತಿ ಇಬ್ಬರು ಮನುಷ್ಯರಿಗೆ ಒಬ್ಬ ಅಧಿಕಾರಿಯಿದ್ದಾರೆ. ಸುಧಾರಣೆಯ ನಂತರ ಪ್ರತಿ 15 ಜನರಿಗೆ ಒಬ್ಬ ಅಧಿಕಾರಿಯಿರಬೇಕು, ಪಾಶ್ಚಿಮಾತ್ಯ ಸೇನೆಗಳಲ್ಲಿಯ ತರಹ. ಈ ಸುಧಾರಣೆಯ ಅರ್ಥ 200,000 ನೌಕರಿಗಳ ನಷ್ಟ ಮತ್ತು ಇದು "ಹಳೆಯ ಹುಲಿಗಳಿಂದ" ತೀವ್ರ ರಾಜಕೀಯ ವಿರೋಧವನ್ನು ಎದುರಿಸುತ್ತಿದೆ.[೯೭] ಈ ಒತ್ತಡದ ಕಾರಣ ಈ ಕಡಿತಗಳನ್ನು ಜಾರಿಗೊಳಿಸುವ ಇಸವಿಯನ್ನು 2012ರಿಂದ to 2016ಕ್ಕೆ ಮುಂದೂಡಲಾಗಿದೆ.[೯೭] ತೀವ್ರ ಹಾಗು ದೀರ್ಘಕಾಲದಿಂದ ಇರುವ ರಷ್ಯಾದ ಅಸಮರ್ಪಕ ರಕ್ಷಣಾ ಔದ್ಯಮಿಕ ಪ್ರಾಪ್ತಿ ನೀತಿ ಹಾಗೂ ಇತರೆ ಪ್ರಕರಣಗಳ ಬಗೆಹರಿಸುವಿಕೆಯು ಸರ್ಡ್ಯುಕೊವ್‌ರ ಪ್ರಮುಖ ಧ್ಯೇಯವಾಗಿದೆ.[೯೫]

ಆರ್ಥಿಕತೆ

[ಬದಲಾಯಿಸಿ]
2006ರ ತಲಾ ಪ್ರಾದೇಶಿಕ ಉತ್ಪನ್ನ (ದಪ್ಪ ಅಕ್ಷರದಲ್ಲಿರುವುದು ಹೆಚ್ಚು ಎಂಬರ್ಥ)

1990ರ ದಶಕದಲ್ಲಿ ಎಲ್ಲಾ ಹಿಂದಿನ ಸೋವಿಯತ್ ದೇಶಗಳನ್ನು ಆವರಿಸಿದ ಆರ್ಥಿಕ ಬಿಕ್ಕಟ್ಟು, 1930ರ ದಶಕದಲ್ಲಿ ಅಮೆರಿಕಾ ಮತ್ತು ಪಶ್ಚಿಮ ಯುರೋಪ್ ದೇಶಗಳಲ್ಲಿ ಸಂಭವಿಸಿದ ಮಹಾ ಕುಸಿತದ ಎರಡರಷ್ಟಿತ್ತು.[೯೮][೯೯] 1998ರ ಆರ್ಥಿಕ ಬಿಕ್ಕಟ್ಟಿಗೂ ಮುಂಚೆ, ರಷ್ಯಾದ GDP 1990ರ ದಶಕದ ಶುರುವಿನಲ್ಲಿದ್ದರ ಅರ್ಧದಷ್ಟಿತ್ತು.[೯೯] ಶತಮಾನದ ತಿರುವಿನಿಂದಲೂ, ತೈಲ ಬೆಲೆ ಏರಿಕೆ, ಹೆಚ್ಚಾದ ವಿದೇಶಿ ಬಂಡವಾಳ, ಹೆಚ್ಚಾದ ಸಾಂಸಾರಿಕ ಬಳಕೆ ಮತ್ತು ಹೆಚ್ಚಿದ ರಾಜಕೀಯ ಸ್ಥಿರತೆಯು ರಷ್ಯಾದ ಆರ್ಥಿಕ ಬೆಳವಣಿಗೆಗೆ ಸಹಾಯವಾಗಿದೆ. ರಷ್ಯಾ 2007ರ ಅಂತ್ಯದಲ್ಲಿ ಸತತವಾಗಿ ಒಂಬತ್ತನೆಯ ವರ್ಷ ಬೆಳವಣಿಗೆಯನ್ನು ಕಂಡಿತು, 1998ರ ಹಣಕಾಸು ಬಿಕ್ಕಟ್ಟು ನಂತರ ಸರಾಸರಿ ವಾರ್ಷಿಕ ೭% ರಷ್ಟು ಬೆಳವಣಿಗೆಯನ್ನು ಕಂಡಿತು. 2007ರಲ್ಲಿ ರಷ್ಯಾದ GDP $2.076 ಟ್ರಿಲಿಯನ್ ಆಗಿತ್ತು (est. PPP), ವಿಶ್ವದಲ್ಲೇ ಆರನೆಯ ಅತಿ ಹೆಚ್ಚು ಪ್ರಮಾಣದ ಬೆಳವಣಿಗೆಯಾಗಿದ್ದು, GDP ಹಿಂದಿನ ವರ್ಷಕ್ಕಿಂತಲೂ 8.೧ %ರಷ್ಟು ವೃದ್ಧಿಸಿತ್ತು.ಬೆಳವಣಿಗೆಯ ಹಿಂದೆ, ತೈಲ ಮತ್ತು ಖನಿಜದ ತೆರವು ಮತ್ತು ರಫ್ತಿಗಿಂತಲೂ ಹೆಚ್ಚಾಗಿ, ವಹಿವಾಟೇತರ ಸೇವೆಗಳು ಮತ್ತು ಸ್ಥಳೀಯ ಮಾರುಕಟ್ಟೆಗಾಗಿ ಸರಕು-ಸಾಮಗ್ರಿಗಳ ಮಾರಾಟವಿತ್ತು.[] 2008ರ ಶುರುವಿನಲ್ಲಿ ರಷ್ಯಾದಲ್ಲಿ ಸರಾಸರಿ ವೇತನ ಪ್ರತಿ ತಿಂಗಳಿಗೆ $ 640 ಆಗಿತ್ತು, ಇದು 2000ರ ಇಸವಿಯಲ್ಲಿ $೮೦ರಿಂದ ಹೆಚ್ಚಾಗಿತ್ತು.[೧೦೦] 2007ರಲ್ಲಿ ಹೆಚ್ಚುಕಡಿಮೆ 14 %ರಷ್ಟು ರಷ್ಯನ್ನರು ಬಡತನ ರೇಖೆಯ ಕೆಳಗೆ ಇದ್ದರು,[೧೦೧] 1998ರ ಸೋವಿಯತೋತ್ತರದ ಆರ್ಥಿಕ ಕುಸಿತದ ಅವಧಿಯಲ್ಲಿ 40% ರಿಂದ ಕಡಿಮೆಯಾಗಿತ್ತು.[೧೦೨] 2007ರಲ್ಲಿ ರಷ್ಯಾದಲ್ಲಿನ ನಿರುದ್ಯೋಗದ ಪ್ರಮಾಣ % 6ರಷ್ಟಿತ್ತು, 1999ರಲ್ಲಿ 12.4 % ರಿಂದ ಇಳಿತವಾಗಿದೆ.[೧೦೩][೧೦೪]

ರೋಸ್ನೆಟ್ ಪೆಟ್ರೋಲ್ ತಾಣಅನಿಲ ರಫ್ತಿನಲ್ಲಿ ರಷ್ಯಾಕ್ಕೆ ಜಗತ್ತಿನಲ್ಲಿ ಅಗ್ರ ಸ್ಥಾನ ಮತ್ತು ತೈಲ ರಫ್ತಿನಲ್ಲಿ ಎರಡನೇ ಸ್ಥಾನ
Soyuz TMA-2 launch.jpg Soyuz TMA-2 ಉಡಾವಣಾ ಸ್ಥಳಕ್ಕೆ ಹೋಗಿದೆ, ಇಷ್ಟರಲ್ಲೇ ಬಾಹ್ಯಾಕಾಶ ಯಾತ್ರಿಗಳನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೊತ್ತೊಯ್ಯಲಿದೆ.

ರಷ್ಯಾ ವಿಶ್ವದಲ್ಲೇ ಹೆಚ್ಚು ಪ್ರಮಾಣದ ನೈಸರ್ಗಿಕ ಅನಿಲ ನಿಕ್ಷೇಪಗಳು, ಎರಡನೆಯ ಅತಿಹೆಚ್ಚು ಇದ್ದಿಲಿನ ನಿಕ್ಷೇಪಗಳು ಮತ್ತು ಎಂಟನೆಯ ಅತಿ ಹೆಚ್ಚು ತೈಲ ನಿಕ್ಷೇಪಗಳು ಹೊಂದಿದೆ. ಇದು ವಿಶ್ವದಲ್ಲಿ ಅತಿಹೆಚ್ಚು ನೈಸರ್ಗಿಕ ಅನಿಲದ ರಫ್ತುದಾರ ಹಾಗೂ ಎರಡನೆಯ ಅತಿಹೆಚ್ಚು ತೈಲ ರಫ್ತುದಾರನಾಗಿದೆ. ರಷ್ಯಾದ ರಫ್ತಿನ 80% ಕ್ಕೂ ಹೆಚ್ಚು ಅಂಶವು ತೈಲ, ನೈಸರ್ಗಿಕ ಅನಿಲ, ಲೋಹಗಳು ಮತ್ತು ಮರದ ಚೌಬೀನೆಗಳದ್ದಾಗಿದೆ.[] ಆದಾಗ್ಯೂ, 2003ರಿಂದ, ಆಂತರಿಕ ಮಾರುಕಟ್ಟೆಗಳು ಸದೃಢಗೊಳ್ಳುತ್ತಿದ್ದ ಕಾರಣ, ನೈಸರ್ಗಿಕ ಸಂಪನ್ಮೂಲಗಳ ರಫ್ತು ಇಳಿಮುಖ ಕಂಡಿತು. ಇಂಧನದ ಬೆಲೆಗಳು ಹೆಚ್ಚಾಗಿದ್ದಾಗ್ಯೂ, ತೈಲ ಮತ್ತು ಅನಿಲವು ರಷ್ಯಾದ GDPಯ ಕೇವಲ ಶೇಖಡಾ 5.7ರಷ್ಟು ಮಾತ್ರ ತುಂಬಿಸುತ್ತದೆ ಮತ್ತು 2011ರೊಳಗೆ ಇದು 3.7% ಕ್ಕೆ ಇಳಿಯಲಿದೆ ಎಂದು ಸರ್ಕಾರವು ಅಂದಾಜು ಮಾಡಿದೆ.[೧೦೫] ರಷ್ಯಾ ತನ್ನ ಆರ್ಥಿಕ ವೃದ್ಧಿಯಲ್ಲಿ ಇತರೆ ಹೆಚ್ಚು ಸಂಪನ್ಮೂಲಗಳುಳ್ಳ ದೇಶಗಳಿಗಿಂತಲೂ ಹೆಚ್ಚು ಮುನ್ನಡೆ ಸಾಧಿಸಿದೆ, ಇದರ ಕಾರಣ ದೀರ್ಘ ಸಂಪ್ರದಾಯದ ಶಿಕ್ಷಣ, ವಿಜ್ಞಾನ ಮತ್ತು ಉದ್ಯಮಗಳು.[೧೦೬] ದೇಶವು ಯೂರೋಪ್‌ನ ಇತರೆ ದೇಶಗಳಿಗಿಂತಲೂ ಹೆಚ್ಚು ಉನ್ನತ ಶಿಕ್ಷಣ ಪದವೀಧರರನ್ನು ಹೊಂದಿದೆ.[೧೦೭]

2001ರಲ್ಲಿ ಆಯ್ದುಕೊಳ್ಳಲಾದ ನೇರ ಮತ್ತು ಸರಳ ಕಂದಾಯ ನೀತಿಯು ಜನರ ಮೇಲಿನ ಕಂದಾಯದ ಹೊರೆಯನ್ನು ಕಡಿಮೆಗೊಳಿಸಿತು ಮತ್ತು ರಾಜಸ್ವವನ್ನು ಬಹುಪಟ್ಟು ಹೆಚ್ಚಿಸಿತು.[೧೦೮] ರಷ್ಯಾ ಸಮತಟ್ಟಾದ ವೈಯಕ್ತಿಕ ಕಂದಾಯ ದರವನ್ನು % 13ಕ್ಕೆ ನಿಗದಿಪಡಿಸಿದೆ. ಮರ್ಸರ್ ಮಾನವ ಸಂಪನ್ಮೂಲ ಸಲಹಾ ಸಂಸ್ಥೆ ಎಂಬ ಹೂಡಿಕೆ ಸೇವಾ ಸಂಸ್ಥೆಯ ಸಮೀಕ್ಷೆಯ ಪ್ರಕಾರ,ಸಂಯುಕ್ತ ಅರಬ್ ಒಕ್ಕೂಟ ವ್ಯವಸ್ಥೆಯ ನಂತರ, ವ್ಯವಸ್ಥಾಪಕರಿಗಾಗಿ ಎರಡನೆಯ ಅತ್ಯಂತ ಆಕರ್ಷಕ ವೈಯಕ್ತಿಕ ಕಂದಾಯ ವ್ಯವಸ್ಥೆಯನ್ನು ಹೊಂದಿರುವ ದೇಶವಾಗಿದೆ.[೧೦೯][೧೧೦] ಸಂಯುಕ್ತ ಬಜೆಟ್ 2001ನೆಯ ಇಸವಿಯಿಂದಲೂ ಹೆಚ್ಚುವರಿ ಸ್ಥಿತಿಯನ್ನೇ ಕಾಯ್ದುಕೊಂಡು 2007ರಲ್ಲಿ % 6ರಷ್ಟು GDPಯೊಂದಿಗೆ ಕೊನೆಗೊಂಡಿತು. ಕಳೆದ ಹಲವಾರು ವರ್ಷಗಳಿಂದಲೂ, ಸೋವಿಯತ್-ಯುಗದ ಸಾರ್ವಭೌಮತ್ವ ಋಣವನ್ನು ಪ್ಯಾರಿಸ್ ಕ್ಲಬ್ ಸಾಲದಾತರಿಗೆ ಮತ್ತು IMFಗೆ ನೀಡಲು, ರಷ್ಯಾ ತನ್ನ ತೈಲ ರಾಜಸ್ವವನ್ನು ರಷ್ಯಾ ಸಂಯುಕ್ತದ ಸ್ಥಿರತಾ ನಿಧಿಯಿಂದ ಬಳಸಿದೆ. ತೈಲ ರಫ್ತು ವ್ಯಾಪಾರವು ರಷ್ಯಾಗೆ ತನ್ನ ವಿದೇಶಿ ವಿನಿಮಯ ನಿಕ್ಷೇಪಗಳನ್ನು 1999ರಲ್ಲಿ $12 ಬಿಲಿಯನ್ ಇಂದ 1 ಆಗಸ್ಟ್ 2008ರಂದಿನ $597.3 ಶತಲಕ್ಷಕ್ಕೆ ವೃದ್ದಿಸುವಂತೆ ಮಾಡಿದೆ, ವಿಶ್ವದಲ್ಲಿಯೇ ಮೂರನೆಯ ಅತಿ ಹೆಚ್ಚು ನಿಕ್ಷೇಪವಾಗಿದೆ.[೧೧೧] ದೇಶವು ಹಿಂದೆ ಇದ್ದ ಭಾರೀ ವಿದೇಶೀ ಋಣವನ್ನು ಕಡಿಮೆಗೊಳಿಸಲು ಶಕ್ಯವಾಗಿದೆ.[೧೧೨]

ಯುರೋಪ್ ಗೆ ಅನಿಲ್ ಮತ್ತು ತೈಲ ಪೂರೈಸುವ ಪ್ರಮುಖ ದೇಶ ರಷ್ಯಾ [293]

ದೇಶದ ಆರ್ಥಿಕ ಬೆಳವಣಿಗೆಯು ಭೌಗೋಳಿಕವಾಗಿ ಸಮಾನಾಗಿಲ್ಲ, ಮಾಸ್ಕೋ ಪ್ರಾಂತ್ಯ ದೇಶದ GDPಗೆ ಸೂಕ್ತವಲ್ಲದ, ಅತಿಹೆಚ್ಚು ಪ್ರಮಾಣದ ಕೊಡುಗೆಯನ್ನು ನೀಡುತ್ತಿದೆ.[೧೧೩] ರಷ್ಯಾದ ಹೆಚ್ಚುವರಿ ವಲಯಗಳು, ಅದೂ ಸೈಬೀರಿಯಾದಲ್ಲಿರುವಂತಹ ಗ್ರಾಮಾಂತರ ಮತ್ತು ದೇಶೀಯ ಸಮುದಾಯಗಳು, ಬಹಳ ಹಿಂದುಳಿದಿವೆ.ಆದಾಗ್ಯೂ, ಮಧ್ಯಮ ವರ್ಗದ ಜನಸಂಖ್ಯೆಯು 2000ರಲ್ಲಿ ಕೇವಲ ಎಂಟು ಮಿಲಿಯನ್ ಇದ್ದದ್ದು 2006ರಲ್ಲಿ 55 ಮಿಲಿಯನ್‌ಗೆ ಏರಿದೆ.[೧೧೪] ಅಮೆರಿಕಾದ ನಂತರ ರಷ್ಯಾ ಅತಿಹೆಚ್ಚು ಶತಕೋಟ್ಯಾಧೀಶರನ್ನು ಹೊಂದಿದೆ, 2007ರಲ್ಲಿ 50 ಶತಕೋಟ್ಯಾಧೀಶರು ಸೇರ್ಪಡೆಯಾಗಿ ಒಟ್ಟು 110 ಶತಕೋಟ್ಯಾಧೀಶರಾಗಿದ್ದರು.[೧೧೫]

ಕಳೆದ ಐದು ವರ್ಷಗಳಿಂದ, ನಿಶ್ಚಿತ ಬಂಡವಾಳ ಹೂಡಿಕೆಯು ಪ್ರತಿ ವರ್ಷಕ್ಕೆ 10 % ರಷ್ಟು ವಾಸ್ತವಿಕ ಲಾಭವನ್ನು ಹಾಗೂ ವೈಯಕ್ತಿಕ ಆದಾಯಗಳು 12% ರಷ್ಟು ವಾಸ್ತವಿಕ ಲಾಭವನ್ನು ಗಳಿಸಿವೆ.ಈ ಅವಧಿಯಲ್ಲಿ, ಬಡತನವು ಕಡಿಮೆಯಾಗುತ್ತ, ಮಧ್ಯಮ ವರ್ಗವು ಹೆಚ್ಚಾಗುತ್ತಿದೆ. ರಷ್ಯಾ 1998ರ ಹಣಕಾಸು ಬಿಕ್ಕಟ್ಟಿನ ನಂತರ ತನ್ನ ಅಂತಾರಾಷ್ಟ್ರೀಯ ಹಣಕಾಸು ಸ್ಥಿತಿಯನ್ನು ಉತ್ತಮಗೊಳಿಸಿದೆ.[] ರಷ್ಯಾದ ಬೆಳವಣಿಗೆಯ ಪ್ರಮುಖ ಕಾರಣ ಉತ್ಪಾದಕತೆಯಲ್ಲಿ ಸದೃಢ ಬೆಳವಣಿಗೆ, ವಾಸ್ತವಿಕ ವೇತನಗಳು ಮತ್ತು ಬಳಕೆ.[೧೧೬] ರಷ್ಯಾ 1999ರಿಂದಲೂ ದೃಢ ಆರ್ಥಿಕತೆಯನ್ನು ಹೊಂದಿದ್ದಾಗ್ಯೂ, ವಿಶ್ವ ಬ್ಯಾಂಕ್ ರಷ್ಯಾದ ಆರ್ಥಿಕತೆಯ ಮುಂದಿರುವ ಹಲವಾರು ಸವಾಲುಗಳನ್ನು ಪಟ್ಟಿ ಮಾಡಿದೆ: ಆರ್ಥಿಕತೆಯ ವೈವಿಧ್ಯತೆ, ಸಣ್ಣ ಮತ್ತು ಮಧ್ಯಮ-ಪ್ರಮಾಣದ ಉದ್ದಿಮೆಗಳಿಗೆ ಪ್ರೋತ್ಸಾಹ, ಮಾನವ ಸಂಪನ್ಮೂಲಗಳ ಸಂಪಾದನೆ ಮತ್ತು ಸಾಂಸ್ಥಿಕ ಆಡಳಿತವನ್ನು ಉತ್ತಮಗೊಳಿಸುವುದು.[೨೬] ಹಣದುಬ್ಬರವು 2006ರಲ್ಲಿ 9% ರಷ್ಟಿದ್ದದ್ದು 2007ರ ಅಂತ್ಯದಲ್ಲಿ 12% ಕ್ಕೆ ಉಬ್ಬಿತು. ಏರುತ್ತಿರುವ ಆಹಾರದ ಬೆಲೆಗಳೆಂಬ ಪ್ರಮುಖ ಕಾರಣದಿಂದ ಹಣದುಬ್ಬರದ ಪ್ರವೃತ್ತಿಯು 2008ರ ಮೊದಲ ತ್ರೈಮಾಸಿಕದಲ್ಲಿಯೂ ಮುಂದುವರೆಯಿತು.[][೧೦೧] ಆರ್ಥಿಕ ಬೆಳವಣಿಗೆಗೆ ಪ್ರಮುಖ ವಿಘ್ನವಾಗಿರುವುದು ಬಹಳ ವರ್ಷಗಳಿಂದಲೂ ಕಡೆಗಾಣಿಸಲಾದ ವಿಚಾರವಾಗಿರುವ ಮೂಲಭೂತ ಸೌಕರ್ಯಗಳ ಸಮಸ್ಯೆ.[೧೧೭] 2020ರೊಳಗೆ $1 ಟ್ರಿಲಿಯನ್ ಮೊತ್ತವನ್ನು ಮೂಲಭೂತ ಸೌಕರ್ಯಕ್ಕಾಗಿ ಹೂಡಲಿದೆ ಎಂದು ಸರ್ಕಾರ ತಿಳಿಸಿದೆ.[೧೧೮]

ಜನಗಣತಿ

[ಬದಲಾಯಿಸಿ]
ಜನಾಂಗೀಯ ಸಂಯೋಜನೆ (2002)[೧೧೯]
ರಷ್ಯನ್ನರು 79.8%
ಟಾಟರ್‌ಗಳು 3.8%
ಉಕ್ರೇನಿಯನ್ನರು 2.0%
ಚುವಾಷ್ 1.1%
ಚೆಚೆನ್ ಜನರು 0.9%
ಅರ್ಮೆನೀಯರು 0.8%
ಇತರೆ/ಅನಿರ್ದಿಷ್ಟ 10.3%
1991ರಿಂದ 2008 ಜನವರಿ ವರೆಗಿನ ಜನಸಂಖ್ಯೆ. ನಿವಾಸಿಗಳ ಸಂಖ್ಯೆ ದಶಲಕ್ಷದಲ್ಲಿ [315]

ರಷ್ಯನ್‌ ಒಕ್ಕೂಟವು ವೈವಿಧ್ಯಮಯ, ಬಹು-ಜನಾಂಗೀಯ ಸಮಾಜವಾಗಿದ್ದು, ಸುಮಾರು 160 ವಿವಿಧ ಜನಾಂಗೀಯ ಗುಂಪುಗಳು ಮತ್ತು ದೇಶೀಯ ಗುಂಪುಗಳಿಗೆ ತಾಣವಾಗಿದೆ.[೧೨೦] ರಷ್ಯಾದ ಜನಸಂಖ್ಯೆಯು ಹೆಚ್ಚಾಗಿದ್ದರೂ ಸಹ, ದೇಶವು ಭಾರೀ ವಿಸ್ತೀರ್ಣವನ್ನು ಹೊಂದಿರುವ ಕಾರಣ ಅದರ ಸಾಂಧ್ರತೆ ಕಡಿಮೆ.[೧೨೧] ಯೂರೋಪೀಯ ರಷ್ಯಾದಲ್ಲಿ ಉರಾಳ್ ಪರ್ವತ ಶ್ರೇಣಿಯ ಬಳಿ ಹಾಗೂ ನೈಋತ್ಯ ಸೈಬೀರಿಯಾ ವಲಯಗಳಲ್ಲಿ ಜನಸಾಂದ್ರತೆಯು ಅತಿಹೆಚ್ಚಾಗಿರುತ್ತದೆ. ಪ್ರಾಥಮಿಕ ಅಂದಾಜಿನ ಪ್ರಕಾರ, ರಷ್ಯನ್‌ ಒಕ್ಕೂಟ on 1 ಜನವರಿ 2009ರಂದು ರಷ್ಯಾ ಒಕ್ಕೂಟದ ನಿವಾಸಿಗಳ ಸಂಖ್ಯೆಯು 141,903,979ರಷ್ಟಿತ್ತು. 2008ರಲ್ಲಿ, ಜನಸಂಖ್ಯೆಯು 121,400 ಅಥವಾ 0.085% ರಷ್ಟು ಕಡಿಮೆಯಾಯಿತು.(2007ರಲ್ಲಿ - 212,000 ಅಥವಾ 0.15% ರಷ್ಟು ಮತ್ತು 2006ರಲ್ಲಿ - 532,600 ಅಥವಾ 0.37 %ರಷ್ಟು). 2008ರಲ್ಲಿ ವಲಸೆ ಪ್ರವೃತ್ತಿಯು 2.7% ರಷ್ಟು ಹೆಚ್ಚುತ್ತಲೇ ಇತ್ತು, 281,615 ವಲಸಿಗರು ರಷ್ಯನ್‌ ಒಕ್ಕೂಟಕ್ಕೆ ಆಗಮಿಸಿದರು, ಇದರಲ್ಲಿ % 95ರಷ್ಟು ಜನರು CIS ದೇಶಗಳಿಂದ ಬಂದರು, ಇವರಲ್ಲಿ ಬಹುಪಾಲು ರಷ್ಯನ್ನರು ಅಥವಾ ರಷ್ಯನ್ ಭಾಷಿಕರು.[][೧೨೨] ರಷ್ಯನ್ ವಲಸಿಗರ ಸಂಖ್ಯೆಯು 16% ರಷ್ಟು ಕಡಿಮೆಯಾಗಿ, 39,508ಕ್ಕೆ ಇಳಿಯಿತು, ಇವುಗಳಲ್ಲಿ 66% ರಷ್ಟು ಜನರು ಅನ್ಯ CIS ದೇಶಗಳಿಗೆ ಹೋದರು. ರಷ್ಯಾದಲ್ಲಿನ ಹಿಂದಿನ ಸೋವಿಯತ್ ರಾಜ್ಯಗಳಿಂದ ಸುಮಾರು 10 ಮಿಲಿಯನ್ ಅಕ್ರಮ ವಲಸಿಗರು ಸಹ ಇದ್ದಾರೆ.[೧೨೩] ಸರಿಸುಮಾರು 116 ಮಿಲಿಯನ್ ಜನಾಂಗೀಯ ರಷ್ಯನ್ನರು ರಷ್ಯಾದಲ್ಲಿ ವಾಸಿಸುತ್ತಿದ್ದಾರೆ[೧೨೪] ಮತ್ತು ಸುಮಾರು 20 ಮಿಲಿಯನ್‌ಗೂ ಹೆಚ್ಚು ಜನರು ಅಂದಿನ ಸೋವಿಯತ್‌ ಒಕ್ಕೂಟದ ಭಾಗವಾಗಿದ್ದ ಗಣರಾಜ್ಯದಲ್ಲಿ, ಬಹುಮಟ್ಟಿಗೆ ಉಕ್ರೇನ್ ಮತ್ತು ಕಜಖ್‌ಸ್ತಾನ್‌ದಲ್ಲಿ ವಾಸಿಸುತ್ತಿದ್ದಾರೆ.[೧೨೫]

ಜನಸಂಖ್ಯೆಯ 73% ರಷ್ಟು ನಗರ ವಲಯಗಳಲ್ಲಿ ವಾಸಿಸುತ್ತದೆ.[೧೨೬] 2002 ಜನಗಣತಿಯ ಪ್ರಕಾರ, ರಷ್ಯಾದ ಅತಿ ದೊಡ್ಡ ನಗರಗಳು ಮಾಸ್ಕೋ (10,126,424 ನಿವಾಸಿಗಳು) ಮತ್ತು ಸೇಂಟ್ ಪೀಟರ್ಸ್‌ಬರ್ಗ್‌ (4,661,219 ನಿವಾಸಿಗಳು). ಹನ್ನೊಂದು ಇತರೆ ನಗರಗಳು ಒಂದರಿಂದ ಎರಡು ಮಿಲಿಯನ್ ನಿವಾಸಿಗಳನ್ನು ಹೊಂದಿವೆ: ಚೆಲ್ಯಾಬಿನಸ್ಕ್, ಕಜಾನ್, ನೊವೊಸಿಬಿರ್ಸ್ಕ್‌, ನಿಜ್ನಿ ನವ್‌ಗೊರೊಡ್‌, ಒಮಸ್ಕ್, ಪೆರ್ಮ್, ರಾಸ್ಟೊವ್-ಆನ್-ಡಾನ್, ಸಾಮರಾ, ಊಫಾ, ವೊಲ್ಗೊಗ್ರಾಡ್ ಮತ್ತು ಎಕಟೆರಿನ್‌ಬರ್ಗ್.

ರಷ್ಯಾದ ಜನಸಂಖ್ಯೆಯು ಅತಿ 1991ರಲ್ಲಿ ಅತಿ ಹೆಚ್ಚು ಅಂದರೆ 148,689,000ದಷ್ಟಿತ್ತು, ಆದರೆ 90ರ ದಶಕದ ಮಧ್ಯದಲ್ಲಿ ತೀವ್ರವಾಗಿ ಕಡಿಮೆಯಾಗುತ್ತಾ ಬಂದಿತು.[೧೨೭] ಈ ಇಳಿತವು ನಿಧಾನಿಸಿ ಕಳೆದ ಇತ್ತೀಚಿಗಿನ ವರ್ಷಗಳಲ್ಲಿ ಜಡವಾಗಿದೆ, ಕಾರಣ ಕಡಿಮೆಯಾದ ಮರಣ ಪ್ರಮಾಣ, ಹೆಚ್ಚಿದ ಜನನ ಪ್ರಮಾಣ ಮತ್ತು ಹೆಚ್ಚಿದ ವಲಸೆ. 2008ರಲ್ಲಿ ಮೃತ್ಯುಗಳ ಸಂಖ್ಯೆಯು ಜನನಗಳ ಸಂಖ್ಯೆಗಿಂತಲೂ 363,500ರಷ್ಟು ಹೆಚ್ಚಿತ್ತು.2007ರಲ್ಲಿ ಸಂಭವಿಸಿದ 477,700 ಮತ್ತು 2006ರಲ್ಲಿ 687,100 ಮೃತ್ಯುಗಳಿಗಿಂತಲೂ ಕಡಿಮೆಯಾಗಿದೆ.[][೧೨೨] ರಷ್ಯಾದ ಸಂಯುಕ್ತ ರಾಜ್ಯ ಅಂಕಿ-ಅಂಶ ಸೇವಾ ಸಂಸ್ಥೆಯು ಪ್ರಕಟಿಸಿದ ಮಾಹಿತಿಯ ಪ್ರಕಾರ, 2007ರಲ್ಲಿ ಸಂಭವಿಸಿದ ಸಾವಿನ ಪ್ರಮಾಣವು 2006ಕ್ಕೆ ಹೋಲಿಸಿದಲ್ಲಿ 4% ರಷ್ಟು ಕಡಿಮೆಯಾಗಿತ್ತು, ಸುಮಾರು 2 ಮಿಲಿಯನ್ ಸಾವುಗಳು ಸಂಭವಿಸಿದ್ದು, ಜನ್ಮ ಪ್ರಮಾಣವು 8.3% ವರ್ಷ-ವರ್ಷಕ್ಕೆ ಹೆಚ್ಚಾಗಿ ಅಂದಾಜು 1.6 ಮಿಲಿಯನ್ ಜನನಗಳಾದವು.[೧೨೮] ಹೆಚ್ಚು ಮರಣ ಪ್ರಮಾಣ ಮತ್ತು ಕಡಿಮೆ ಜನನ ಪ್ರಮಾಣವೇ ರಷ್ಯಾದ ಜನಸಂಖ್ಯೆ ಇಳಿಕೆಗೆ ಪ್ರಮುಖ ಕಾರಣ.ರಷ್ಯಾದಲ್ಲಿಯ ಜನನ ಪ್ರಮಾಣವನ್ನು ಇತರೇ ಯುರೋಪಿನ ದೇಶಗಳಲ್ಲಿನ ಜನನ ಪ್ರಮಾಣಕ್ಕೆ ಹೋಲಿಸಬಹುದಾದರೂ (2008ರಲ್ಲಿ ಪ್ರತಿ 1000 ಜನರಿಗೆ 12.1)[೧೨೨] ಯುರೋಪ್ ಒಕ್ಕೂಟ ಸರಾಸರಿ ಪ್ರತಿ 1000ಕ್ಕೆ 9.90)[೧೨೯] ಇದರ ಜನಸಂಖ್ಯೆಯು ಹೆಚ್ಚು ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ, ಕಾರಣ ಮರಣ ಪ್ರಮಾಣದ ಬಹಳ ಹೆಚ್ಚು ದರ. (2008ರಲ್ಲಿ, )[೧೨೨] ಯೂರೋಪ್ ಒಕ್ಕೂಟದ ಸರಾಸರಿ ಪ್ರತಿ 1000ಕ್ಕೆ 10.28ಕ್ಕೆ ಹೋಲಿಸಿದರೆ ರಷ್ಯಾದದಲ್ಲಿ ಮೃತ್ಯು ದರವು ಪ್ರತಿ 1000 ಜನರಿಗೆ 14.7 % ರಷ್ಟಿತ್ತು).[೧೩೦] ಆದಾಗ್ಯೂ, ರಷ್ಯಾದ ಆರೋಗ್ಯ ಸಚಿವಾಲಯದ ಅಂದಾಜಿನ ಪ್ರಕಾರ 2011ರೊಳಗೆ ಮರಣ ಪ್ರಮಾಣ ಜನನ ಪ್ರಮಾಣವನ್ನು ಸಮತಟ್ಟುತ್ತದೆ, ಏಕೆಂದರೆ ಫಲವಂತಿಕೆಯ ಪ್ರಮಾಣದಲ್ಲಿ ಹೆಚ್ಚಳ ಮತ್ತು ಮರ್ತ್ಯತೆಯ ಇಳಿತ.[೧೩೧]


ಶಿಕ್ಷಣ

[ಬದಲಾಯಿಸಿ]

ರಷ್ಯಾದಲ್ಲಿ ಎಲ್ಲಾ ಸಂವಿಧಾನದತ್ತ ಪ್ರಜೆಗಳಿಗೆ ಉಚಿತ ಶಿಕ್ಷಣ ವ್ಯವಸ್ಥೆಯಿದೆ,[೧೩೪] ಮತ್ತು ಸಾಕ್ಷರತೆ ಪ್ರಮಾಣ ೯೯.೪% ರಷ್ಟಿದೆ.[] ಉನ್ನತ ಶಿಕ್ಷಣದ ಪ್ರವೇಶ ಸ್ಪರ್ಧಾತ್ಮಕವಾಗಿದೆ.[೧೩೫] ಶಿಕ್ಷಣದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಿರುವುದರಿಂದಾಗಿ; ವೈದ್ಯಕೀಯ, ಗಣಿತ, ವಿಜ್ಞಾನ ಮತ್ತು ಬಾಹ್ಯಾಕಾಶ ಮತ್ತು ವಾಯುಯಾನ ಸಂಶೋಧನೆಯಲ್ಲಿ ರಷ್ಯಾ ಇಂದು ಉನ್ನತ ಸ್ಥಾನದಲ್ಲಿದೆ.[೧೩೬][೧೩೭]

ಸ್ಪರ್ಧಾತ್ಮ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಉಚಿತವಾಗಿ ಉನ್ನತ ಶಿಕ್ಷಣ ಪಡೆಯುವ ಸಾರ್ವತ್ರಿಕ ಹಕ್ಕನ್ನು ರಷ್ಯಾ ಸಂವಿಧಾನ ನೀಡಿದೆ.[೧೩೮] ವಿದ್ಯಾರ್ಥಿಗಳ ಶಿಕ್ಷಣ ಶುಲ್ಕದಲ್ಲಿ ಒಂದು ನಿರ್ದಿಷ್ಟ ಭಾಗ ಅಥವಾ ಪ್ರತಿ ಸಂಸ್ಥೆಯ ಕೆಲವು ವಿದ್ಯಾರ್ಥಿಗಳ ಶಿಕ್ಷಣ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿರುವುದರಿಂದ ಈ ನೀತಿಯನ್ನು ನಿರ್ಣಾಯಕವೆಂದು ಪರಿಗಣಿಸಲಾಗಿದೆ. ಈ ಹಿಂದೆ, ಉಳ್ಳವರಿಗೆ ಮಾತ್ರ ಉನ್ನತ ಶಿಕ್ಷಣ ಎಂಬ ಆರೋಪವಿತ್ತು. ಇದಕ್ಕೆ ಪೂರಕವಾಗಿ, ವಿದ್ಯಾರ್ಥಿಗಳಿಗೆ ಸಣ್ಣ ಪ್ರಮಾಣದ ಪ್ರೋತ್ಸಾಹ ಧನ ಮತ್ತು ಉಚಿತ ವಾಸ್ತವ್ಯ ವ್ಯವಸ್ಥೆ ನೀಡಲಾಗುತ್ತಿದೆ. ಸಂಯುಕ್ತ ಸರ್ಕಾರದ ಮತ್ತು ಪ್ರಾಂತೀಯ ಸಂಸ್ಥೆಗಳ ಮುಂಗಡ ಪತ್ರಗಲ್ಲಿ ಈ ಎಲ್ಲಾ ಸಂಸ್ಥೆಗಳಿಗೆ ಹಣಕಾಸು ಒದಗಿಸಲಾಗುತ್ತದೆ; ಶಿಕ್ಷಕರಿಗೆ ಸಮರ್ಪಕ ವೇತನ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಮತ್ತು ಸೌಲಭ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಂಸ್ಥೆಗಳಿಗೆ ಸಾಧ್ಯವಾಗದೇ ಇರುವುದು ಕಂಡು ಬಂದಿದೆ.[೧೩೯] ರಾಷ್ಟ್ರೀಯ ಮಟ್ಟದ ಕೆಲವು ಶಿಕ್ಷಣ ಸಂಸ್ಥೆಗಳು ಈ ಸಮಸ್ಯೆಯನ್ನು ಬಗೆಹರಿಸಲೆಂದು ವಾಣಿಜ್ಯದ ಹಾದಿಯನ್ನು ಹಿಡಿದಿವೆ, ಅಲ್ಲದೆ ಈ ಚಾಳಿ ಕ್ರಮೇಣವಾಗಿ ಬೆಳೆಯುತ್ತಿದೆ.[೧೪೦] ಹೈ ಟೆಕ್ ಮತ್ತು ಬೆಳೆಯುತ್ತಿರುವ ಕೈಗಾರಿಕೆಗಳು ಮತ್ತು ಆರ್ಥಿಕ ಕ್ಷೇತ್ರಗಳ ಅಗತ್ಯಗಳಿಗೆ ಸ್ಪಂದನ ಮತ್ತು ಪ್ರತಿಭಾವಂತ ಕೆಲಸಗಾರರನ್ನು ಪೂರೈಸುವುದಕ್ಕಾಗಿ ಹಲವು ಖಾಸಗೀ ಉನ್ನತ ಶಿಕ್ಷಣ ಸಂಸ್ಥೆಗಳು ಮುಂದೆ ಬಂದಿವೆ.[೧೩೯]

ಆರೋಗ್ಯ

[ಬದಲಾಯಿಸಿ]

ರಷ್ಯಾದ ಸಂವಿಧಾನ ಎಲ್ಲಾ ಪ್ರಜೆಗಳಿಗೂ ಸಾರ್ವತ್ರಿಕ ಉಚಿತ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸಿದೆ.[೧೪೧] ಆದರೆ ನೈಜ ಸಂಗತಿಯೆಂದರೆ, ಉಚಿತ ಆರೋಗ್ಯ ಸೌಲಭ್ಯಗಳನ್ನು ನಿರ್ಬಂಧಿಸಿದ ಸಂದರ್ಭಗಳೂ ಹಿಂದೆ ಇದ್ದವು, ಉದಾಹರಣೆಗೆ ಪ್ರೊಪಿಸ್ಕಾ ಆಳ್ವಿಕೆಯಲ್ಲಿ [೧೪೨][೧೪೩] ಜಗತ್ತಿನ ಇತರಾವುದೇ ದೇಶಕ್ಕೆ ತಲಾ [368][೧೪೪] ಹೋಲಿಸಿದರೆ ರಷ್ಯಾದಲ್ಲಿ ಹೆಚ್ಚು ವೈದ್ಯರಿದ್ದಾರೆ, ಆಸ್ಪತ್ರೆಗಳಿವೆ, ಅಂತೆಯೇ ಆರೋಗ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರ ಸಂಖ್ಯೆ ಕಡಿಮೆಯೇನಿಲ್ಲ. ಸೋವಿಯತ್ ಒಕ್ಕೂಟ ಪತನವಾದಾಗಿನಿಂದ ಸಾಮಾಜಿಕ, ಆರ್ಥಿಕ ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳಾಗಿ ರಷ್ಯಾದ ಜನರ ಆರೋಗ್ಯ ಗಣನೀಯವಾಗಿ ಇಳಿದಿದೆ.[೧೪೫] 2007ರ ವೇಳೆಗೆ ರಷ್ಯಾದ ಪುರುಷರ ಮತ್ತು ಮಹಿಳೆಯರ ಸರಾಸರಿ ಆಯುರ್ನಿರೀಕ್ಷೆ 61.5 ಮತ್ತು 73.9 ವರ್ಷಗಳಿತ್ತು.[೧೪೬] ರಷ್ಯಾದಲ್ಲಿ ಜನನವಾದಾಗ ಸರಾಸರಿ ಆಯುರ್ ನಿರೀಕ್ಷೆ 67.7 ವರ್ಷ. ಇದು ಯುರೋಪ್ ಒಕ್ಕೂಟದ ಒಟ್ಟು ಆಯುರ್ನಿರೀಕ್ಷೆಗಿಂತ 10.8 ವರ್ಷ ಕಡಿಮೆ.[೧೪೭] ಕೆಲಸದಲ್ಲಿ ತೊಡಗಿರುವ ಪುರುಷರು ಸಾಕಷ್ಟು ಮುನ್ನಚ್ಚರಿಕೆ (ಉದಾಹರಣೆಗೆ, ಕುಡಿತ, ಒತ್ತಡ, ಧೂಮಪಾನ, ಅನೈತಿಕ ಚಟುವಟಿಕೆಗಳು, ಹಿಂಸಾತ್ಮಕ ಅಪರಾಧ)ವಹಿಸದೆ ಪ್ರಾಣ ಹಾನಿ ಮಾಡಿಕೊಳ್ಳುತ್ತಿರುವುದು ಪುರುಷರಲ್ಲಿನ ಆಯುರ್ನಿರೀಕ್ಷೆಯ ಪ್ರಮಾಣ ಇಳಿಯಲು ಪ್ರಮುಖ ಕಾರಣ. ರಷ್ಯಾದ ಪುರುಷರಲ್ಲಿ 1991ರಿಂದ ಪ್ರಾಣಹಾನಿ 60% ಹೆಚ್ಚಿದೆ, ಇದು ಯುರೋಪ್ ಗಿಂತ ನಾಲ್ಕರಿಂದ ಐದು ಪಟ್ಟು ಹೆಚ್ಚು.[೧೪೮] ಪುರುಷರು ಮತ್ತು ಮಹಿಳೆಯರ ನಡುವಣ ಆಯುರ್ನಿರೀಕ್ಷೆಯಲ್ಲಿ ಬಹಳಷ್ಟು ವ್ಯತ್ಯಾಸವಿರುವುದು ಮತ್ತು ಎರಡನೇ ಮಹಾ ಸಮರದ ಶಾಶ್ವತ ಪರಿಣಾಮ ಇದಕ್ಕೆ ಪ್ರಮುಖ ಕಾರಣ. ಎರಡನೇ ಮಹಾ ಸಮರದಲ್ಲಿ ರಷ್ಯಾ ಬೇರಾವುದೇ ದೇಶಕ್ಕಿಂತಲೂ ಹೆಚ್ಚಿನ ಜನರನ್ನು ಕಳೆದುಕೊಂಡದ್ದರಿಂದಾಗಿ ಲಿಂಗ ಅಸಮತೋಲನ ಇಂದಿಗೂ ಹಾಗೆಯೇ ಉಳಿದಿದೆ ಮತ್ತು ಪ್ರತಿ ಮಹಿಳೆಗೆ 0.859ರಷ್ಟೇ ಪುರುಷರಿದ್ದಾರೆ.[]

ಹೃದಯ ಸಂಬಂಧಿ ರೋಗಗಳಿಂದ ಒಟ್ಟು 56.7 % ಮಂದಿ ಮೃತಪಟ್ಟಿದ್ದರೆ, ಕೆಲಸ ಮಾಡುವ ವಯಸ್ಸಿರುವ 30% ರಷ್ಟು ಜನ ಇದೇ ಕಾಯಿಲೆಯಿಂದ ಬಳಲುತ್ತಿದ್ದಾರೆ. ಸುಮಾರು 16 ದಶಲಕ್ಷ ಜನ ಹೃದಯ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದು, ರಷ್ಯಾ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ. ಈ ವಿಷಯದಲ್ಲಿ, ಉಕ್ರೇನ್ ಮೊದಲ ಸ್ಥಾನದಲ್ಲಿದೆ.[೧೪೮] ನರಹತ್ಯೆ, ಆತ್ಮಹತ್ಯೆ ಮತ್ತು ಕ್ಯಾನ್ಸರ್ ನಿಂದ ಸಂಭವಿಸಿದ ಮರಣ ಪ್ರಮಾಣ ಕಡಿಮೆಯೇನಲ್ಲ.[೧೪೯] 2007ರಲ್ಲಿ ರೊಮಿರ್ ಮಾನಿಟರಿಂಗ್ ಅವರು ನಡೆಸಿದ ಸಮೀಕ್ಷೆ ಪ್ರಕಾರ, 52% ಪುರುಷರು ಮತ್ತು 15% ಮಹಿಳೆಯರು ಧೂಮಪಾನ ಮಾಡುತ್ತಾರೆ. ತಂಬಾಕು ಸೇವನೆಯ ಪರಿಣಾಮ ಪ್ರತಿ ವರ್ಷ 2,60,000 ಜನರು ಸಾವನ್ನಪ್ಪುತ್ತಿದ್ದಾರೆ.[೧೫೦] ಸೋವಿಯತ್ ಯುಗದಲ್ಲಿ HIV/AIDS ಇರಲೇ ಇಲ್ಲ, ಆದರೆ ಸೋವಿಯತ್ ಪತನದ ನಂತರ ಮಾದಕ ವಸ್ತುಗಳ ಸೇವನೆ ಸ್ಫೋಟಕ ಪ್ರಮಾಣದಲ್ಲಿ ಏರಿ, ಏಡ್ಸ್ ಬಹು ವೇಗವಾಗಿ ಹಬ್ಬಿತು.[೧೫೧] ಅಧಿಕೃತ ಅಂಕಿ ಅಂಶಗಳ ಪ್ರಕಾರ, ಪ್ರಸ್ತುತ ರಷ್ಯಾದಲ್ಲಿ 3,64,000 HIV ಪೀಡಿತರಿದ್ದಾರೆ, ಆದರೆ ಸ್ವತಂತ್ರ ಸಮೀಕ್ಷೆಗಳ ಪ್ರಕಾರ ಈ ಸಂಖ್ಯೆ ಗಣನೀಯವಾಗಿ ಇನ್ನೂ ಹೆಚ್ಚಿದೆ.[೧೫೨] ಈ ರೋಗದೊಂದಿಗೆ ಹೋರಾಡುವುದಕ್ಕಾಗಿ ಸರ್ಕಾರ ವೆಚ್ಚವನ್ನು ಏರಿಸಿದ್ದು, 2006ರಲ್ಲಿ HIV ನಿಯಂತ್ರಣಕ್ಕೆಂದೇ 20 ಪಟ್ಟಿನಷ್ಟು ಅನುದಾನ ಹೆಚ್ಚಿಸಿದೆ.[೧೫೩] ಸೋವಿಯತ್ ಪತನದ ನಂತರ ಕ್ಷಯದಿಂದಾಗಿಯೂ ಕೆಲವರು ಸಾವನ್ನಪ್ಪಿದರು, ಇವೆರಡೂ ನಾಟಕೀಯವಾಗಿ ಏರಿತು, ಅಲ್ಲದೆ ಇದು ಪ್ರಮುಖವಾಗಿ ಕೈದಿಗಳಲ್ಲಿ ವ್ಯಾಪಕವಾಗಿ ಹಬ್ಬಿತು.[೧೫೪]

1990-2001ರ ಅವಧಿಯಲ್ಲಿ 15ರಿಂದ 54 ವರ್ಷ ವಯಸ್ಸಿನೊಳಗಿನವರಲ್ಲಿ ಅರ್ಧದಷ್ಟು (52%)ಜನ ಮರಣ ಹೊಂದಲು ಕುಡಿತವೇ ಕಾರಣ ಎಂದು ಅಧ್ಯಯನ ಹೇಳಿದೆ. ಇದೇ ಜನಸಂಖ್ಯೆಯನ್ನು ಹೋಲಿಸಿದರೆ, ಜಗತ್ತಿನ ಇತರ ಭಾಗಗಳಲ್ಲಿ 4% ಮರಣ ಸಂಭವಿಸಿದೆ.[೧೫೫]

ರಷ್ಯಾದ ಜನಸಂಖ್ಯಾ ಬಿಕ್ಕಟ್ಟನ್ನು ನಿವಾರಿಸಿ, ಜನನ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಷ್ಯಾ ಸರ್ಕಾರ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ, ಮತ್ತು ಸಮಸ್ಯೆಗಳನ್ನು ಬಗೆಹರಿಸಿ ವಲಸಿಗರನ್ನು ಆಕರ್ಷಿಸುವುದೂ ಇದರ ಉದ್ದೇಶ. ಜನಿಸುವ ಪ್ರತಿ ಮಗುವಿಗೆ ಬೆಂಬಲವಾಗಿ ಪ್ರತಿ ತಿಂಗಳು ನೀಡುತ್ತಿದ್ದ ಸಂಭಾವನೆಯನ್ನು 2007ರಲ್ಲಿ ಸರ್ಕಾರ ದ್ವಿಗುಣಗೊಳಿಸಿದೆ, ಮತ್ತು ಎರಡನೇ ಮಗುವಿಗೆ ಜನನ ನೀಡುವ ಪ್ರತಿ ಮಹಿಳೆಗೆ ಪಾರಿತೋಷಕವಾಗಿ 250,000 ರೂಬಲ್ಸ್ (ಅಂದಾಜು 10,000 ಅಮೆರಿಕನ್ $)ನೀಡುತ್ತಿದೆ.[೧೫೬] USSR ಪತನದ ನಂತರ, 2007ರಲ್ಲಿ ರಷ್ಯಾದಲ್ಲಿ ಅತಿ ಹೆಚ್ಚು ಜನನ ಪ್ರಮಾಣ ದಾಖಲಾಗಿದೆ.[೧೫೭] 2008-2009ರಲ್ಲಿ ಪ್ರಸವ ಪೂರ್ವ ಕೇಂದ್ರಗಳಲ್ಲಿ ಸರ್ಕಾರ 20 ಶತಲಕ್ಷ ರೂಬಲ್ಸ್ ಬಂಡಾವಳ ಹೂಡಲಿದೆ ಎಂದು ರಷ್ಯಾದ ಮೊದಲ ಉಪ ಪ್ರಧಾನಿ ಘೋಷಿಸಿದ್ದಾರೆ. ದೇಶದ ಜನಸಂಖ್ಯೆಯನ್ನು ಬಲಪಡಿಸುವುದಕ್ಕಾಗಿ ವಲಸೆ ಬರುವುದು ಅಗತ್ಯ ಎಂಬ ಅನಿಸಿಕೆ ಜನರಲ್ಲಿ ಹೆಚ್ಚಾಗುತ್ತಿದೆ.[೧೫೮]

ರಷ್ಯಾ ಭಾಷೆ ಮಾತನಾಡುವ ದೇಶಗಳು

ರಷ್ಯಾದಲ್ಲಿರುವ 160 ಜನಾಂಗೀಯ ಗುಂಪುಗಳು ಸುಮಾರು 100 ಭಾಷೆಗಳನ್ನು ಮಾತನಾಡುತ್ತವೆ.[೧೧] 2002ರ ಸಮೀಕ್ಷೆ ಪ್ರಕಾರ, 142.6 ದಶಲಕ್ಷ ಜನರು ರಷ್ಯನ್ ಭಾಷೆ, 5.3 ದಶಲಕ್ಷ ಮಂದಿ ಟಾಟರ್ ಮತ್ತು 2.9 ದಶಲಕ್ಷ ಮಂದಿ ಜರ್ಮನ್ ಭಾಷೆ ಮಾತನಾಡುತ್ತಾರೆ.[೧೫೯] ರಷ್ಯನ್ ದೇಶದ ಏಕಮಾತ್ರ ಅಧಿಕೃತ ಭಾಷೆ, ಆದರೂ ಎರಡನೇ ಭಾಷೆಯಾಗಿ ಮಾತೃಭಾಷೆಯನ್ನು ವೈಯಕ್ತಿಕವಾಗಿ ಬಳಸುವ ಹಕ್ಕನ್ನು ಪ್ರಜೆಗಳಿಗೆ ರಷ್ಯಾ ಸಂವಿಧಾನ ನೀಡಿದೆ.[೧೬೦][405] ರಷ್ಯನ್ ಭಾಷೆ ವ್ಯಾಪಕವಾಗಿ ಚೆಲ್ಲಾಪಿಲ್ಲಿಯಾಗಿದ್ದರೂ, ರಷ್ಯಾದುದ್ದಕ್ಕೂ ಒಂದೇ ತೆರನಾಗಿದೆ. ರಷ್ಯಾದಲ್ಲಿ ಭೌಗೋಳಿಕವಾಗಿ ಯುರೇಷಿಯಾ ಭಾಷೆ ವ್ಯಾಪಕವಾಗಿ ಹಬ್ಬಿದೆ ಮತ್ತು ಆದರೆ ಜನರು ಹಳೇ ರಷ್ಯನ್ ಭಾಷೆ[೧೬೧] ಯಲ್ಲೇ ಹೆಚ್ಚಾಗಿ ಸಂಭಾಷಿಸುತ್ತಾರೆ. ರಷ್ಯನ್ ಭಾಷಿಕರು ಇಂಡೋ-ಯುರೋಪ್ ಭಾಷೆ ಕುಟುಂಬಕ್ಕೆ ಸೇರಿದವರಾಗಿದ್ದು, ಹಳೇ ರಷ್ಯಾ ಭಾಷೆಯ ಪ್ರತಿನಿಧಿಗಳೂ ಹೌದು; ಬೆಲಾರುಸಿಯನ್ ಮತ್ತು ಉಕ್ರೇನಿಯನ್ (ಮತ್ತು ರುಸಿನ್ ಕೂಡ ಇರಬಹುದು).10ನೇ ಶತಮಾನದ ನಂತರ ಹಳೇ ಪೂರ್ವ ರಷ್ಯಾಹಳೇ ರಷ್ಯಾ ಲಿಖಿತ ಉದಾಹರಣೆಗಳನ್ನು ಸೇರಿಸಲಾಗಿದೆ.[೧೬೨]

ಜಗತ್ತಿನ ವಿಜ್ಞಾನ ಸಾಹಿತ್ಯಗಳೂ ಕ್ರಮೇಣವಾಗಿ ರಷ್ಯನ್ ಭಾಷೆಯಲ್ಲೂ ಪ್ರಕಟಣೆ ಕಂಡಿವೆ. ಜಗತ್ತಿನ ಜ್ಢಾನ ಭಂಡಾರವನ್ನು ಸಂಕೇತಗಳ ಮೂಲಕ ಸಂಗ್ರಹಣೆ ಮಾಡುವುದರಲ್ಲಿ ರಷ್ಯಾ ಕೂಡ ತೊಡಗಿಸಿಕೊಂಡಿದೆ. ಜಗತ್ತಿನ 60% ರಿಂದ 70ರಷ್ಟು ಮಾಹಿತಿಗಳು ರಷ್ಯನ್ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಕಟವಾಗುತ್ತವೆ.[೧೬೩] ವಿಶ್ವ ಸಂಸ್ಥೆ ಅಂಗೀಕರಿಸಿದ ಆರು ಅಧಿಕೃತ ಭಾಷೆಗಳಲ್ಲಿ ರಷ್ಯನ್ ಭಾಷೆ ಕೂಡ ಒಂದು.

ಸೋವಿಯತ್ ಅವಧಿಯಲ್ಲಿ ನಾಶವಾದ ರಕ್ಷಕ ಕ್ರೈಸ್ತನ ಕ್ಯಾಥೆಡ್ರಲ್ ನ್ನು 1990-2000ದಲ್ಲಿ ಪುನರ್ ನಿರ್ಮಿಸಲಾಯಿತು.

ಕ್ರೈಸ್ತ ಮತ, ಇಸ್ಲಾಂ, ಬೌದ್ಧ ಧರ್ಮ ಮತ್ತು ಯಹೂದಿ ಆಚರಣೆಯಲ್ಲಿರುವ ಸಾಂಪ್ರದಾಯಿಕ ಪ್ರಮುಖ ಧರ್ಮಗಳೆಂದು ಎಂದು 1997ರಲ್ಲಿ ಜಾರಿಗೆ ತಂದ ರಷ್ಯಾ "ಐತಿಹಾಸಿಕ ಪರಂಪರೆ" ಕುರಿತ ಕಾನೂನಿನಲ್ಲಿ ಹೇಳಲಾಗಿದೆ.[೧೬೪] ನಂಬುವವರ ಅಂದಾಜು ಸಂಖ್ಯೆಗೂ ವಿವಿಧ ಮೂಲಗಳಿಗೂ ಸಾಮ್ಯತೆಯಿಲ್ಲ, ಮತ್ತು ರಷ್ಯಾ ಜನಸಂಖ್ಯೆಯಲ್ಲಿ ಅತಿ ಹೆಚ್ಚು 16-48% ರಷ್ಟು ಜನ ಯಾವುದೇ ಧರ್ಮವನ್ನು ನಂಬುವುದಿಲ್ಲ ಎಂದೂ ಕೆಲವು ವರದಿಗಳು ಹೇಳುತ್ತವೆ.[೧೬೫].ರಷ್ಯಾದ ಸಾಂಪ್ರದಾಯವೇ ರಷ್ಯಾದ ಪ್ರಮುಖ ಧರ್ಮ.[೧೬೬] ದಾಖಲಾಗಿರುವ 95% ಮಂದಿ ಸಾಂಪ್ರದಾಯಿಕ ಪಾದ್ರಿಗಳು ರಷ್ಯನ್ ಸಾಂಪ್ರದಾಯವಾದಿ ಚರ್ಚ್ ಗಳಿಗೆ ಸೇರಿದವರು. ಕೆಲವು ಸಣ್ಣ ಸಾಂಪ್ರದಾಯದ ಚರ್ಚ್ ಗಳೂ ಇವೆ.[೧೬೭] ಆದರೂ, ಸಾಂಪ್ರದಾಯಗಳನ್ನು ನಂಬುವ ಹೆಚ್ಚಿನ ಮಂದಿ ದಿನನಿತ್ಯ ಚರ್ಚ್ ಗಳಿಗೆ ಹೋಗುವುದಿಲ್ಲ. ಏನೇ ಇದ್ದರೂ, ನಂಬುವ ಮತ್ತು ನಂಬದೇ ಇರುವ ಎಲ್ಲಾ ಜನರು ಚರ್ಚ್ ಅನ್ನು ಗೌರವಿಸುತ್ತಾರೆ, ಅದು ರಷ್ಯಾದ ಸಂಸ್ಕೃತಿ ಮತ್ತು ಪರಂಪರೆಯ ದ್ಯೋತಕವೆಂದು ಅವರ ಅಂಬೋಣ.[೧೬೮] ರೋಮನ್ ಕ್ಯಾಥೊಲಿಕರು, ಅರ್ಮೇನಿಯಂ ಗ್ರೆಗೊರಿಯನ್ನರು ಮತ್ತು ಪ್ರೊಟೆಸ್ಟೆಂಟ್ ಅನುಸರಿಸುವ ಕ್ರೈಸ್ತರು ಸಣ್ಣ ಸಂಖ್ಯೆಯಲ್ಲಿ ನೆಲೆಸಿದ್ದಾರೆ.

ರಷ್ಯಾ ಪ್ರಜೆಗಳ ಪೂರ್ವಜರು 10ನೇ ಶತಮಾನದಲ್ಲಿ ಸಾಂಪ್ರದಾಯಿಕ ಕ್ರೈಸ್ತ ಧರ್ಮವನ್ನು ಆಚರಿಸುತ್ತಿದ್ದರು.[೧೬೮] ರಷ್ಯಾದಲ್ಲಿರುವ ಸುಮಾರು 100 ದಶಲಕ್ಷ ಜನರು ತಾವು ಸಾಂಪ್ರದಾಯಿಕ ಕ್ರೈಸ್ತರೆಂದು ಹೇಳಿಕೊಂಡಿದ್ದಾರೆಂದು, 2007ರಲ್ಲಿ ಅಮೆರಿಕದ ವಿದೇಶಾಂಗ ಸಚವಾಲಯ ಪ್ರಕಟಿಸಿದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿ ಹೇಳಿದೆ.[೧೬೯] ರಷ್ಯಾದ ಸಾರ್ವಜನಿಕ ಅಭಿಪ್ರಾಯ ಸಂಶೋಧನಾ ಕೇಂದ್ರ ನಡೆಸಿದ ಮತಗಣನೆ ಪ್ರಕಾರ, ಮತ ಹಾಕಿದ 63% ಮಂದಿ ತಾವು ರಷ್ಯಾ ಸಂಪ್ರದಾಯವಾದಿಗಳೆಂದು ಹೇಳಿಕೊಂಡಿದ್ದರೆ, 6% ರಷ್ಟು ಜನ ತಾವು ಮುಸ್ಲಿಮರೆಂದು ಹೇಳಿದ್ದಾರೆ, ಮತ್ತು 1% ಕ್ಕಿಂತಲೂ ಕಡಿಮೆ ಜನ ತಾವು ಬೌದ್ಧರು, ಕ್ಯಾಥೊಲಿಕರು, ಪ್ರೊಟೆಸ್ಟೆಂಟ್ ಅಥವಾ ಯಹೂದಿಗೆಳೆಂದು ಹೇಳಿಕೊಂಡಿದ್ದಾರೆ. 12% ರಷ್ಟು ಮಂದಿ ದೇವರನ್ನು ನಂಬುತ್ತೇವೆ ಎಂದಿದ್ದಾರೆ, ಆದರೆ ಅವರು ಯಾವುದೇ ಧರ್ಮವನ್ನು ಆಚರಿಸುತ್ತಿಲ್ಲ, ಮತ್ತು 16% ರಷ್ಟು ಮಂದಿ ದೇವರನ್ನು ನಂಬುವುದಿಲ್ಲ ಎಂದಿದ್ದಾರೆ.[೧೭೦]

ಸುಮಾರು 15ರಿಂದ 20 ದಶಲಕ್ಷ ಮುಸ್ಲಿಮರಿಗೆ ರಷ್ಯಾ ತವರು ಮನೆ.[೧೭೧][೧೭೨] ಆದರೆ ಸಮೀಕ್ಷೆ ಪ್ರಕಾರ ರಷ್ಯಾದಲ್ಲಿರುವ 7ರಿಂದ 9 ದಶಲಕ್ಷ ಮಂದಿ ಮುಸ್ಲಿಮರು ಮಾತ್ರ ಇಸ್ಲಾಂ ಧರ್ಮವನ್ನು ಅನುಸರಿಸುತ್ತಿದ್ದಾರೆ.[೧೭೩] ರಷ್ಯಾದಲ್ಲಿ ಹಿಂದಿನ ಸೋವಿಯತ್ ರಾಜ್ಯಗಳಿಂದ ವಲಸೆ ಬಂದ ಸುಮಾರು 3ರಿಂದ 4 ದಶಲಕ್ಷ ಮುಸ್ಲಿಮರಿದ್ದಾರೆ.[೧೭೪] ಹೆಚ್ಚಿನ ಮುಸ್ಲಿಮರು ವೋಲ್ಗಾ-ಊರಲ್ ಪ್ರಾಂತ್ಯ, ಉತ್ತರ ಕಾಕಸಸ್, ಮಾಸ್ಕೋ,[೧೭೫] ಸೇಂಟ್ ಪೀಟರ್ಸ್‌ಬರ್ಗ್‌ ಮತ್ತು ಪಶ್ಚಿಮ ಸೈಬೀರಿಯಾದಲ್ಲಿ ನೆಲೆಸಿದ್ದಾರೆ.[೧೭೬] ರಷ್ಯಾ ಒಕ್ಕೂಟದ: ಬುರ್ಯಾತಿಯಾ, ತುವಾ ಮತ್ತು ಕಲ್ಮಿಕಿಯಾ10}.[೧೭೭] 3 ಪ್ರಾಂತ್ಯಗಳಲ್ಲಿ ಬೌದ್ಧರ ಸಾಂಪ್ರದಾಯಗಳಿವೆ. ಸೈಬೀರಿಯಾ ಮತ್ತು ಈಶಾನ್ಯ ತುದಿಯ ಪ್ರಾಂತ್ಯಗಳಲ್ಲಿ, ಯಕುತಿಯಾ, ಛುಕೊತ್ಕ ಇತ್ಯಾದಿ ಕೆಲವು ನಿವಾಸಿಗಳು ಪ್ರಮುಖ ಧರ್ಮಗಳ ಜೊತೆಗೆ ಶ್ಯಾಮನ್ ಪಂಥ, ಸರ್ವದೇವತಾರಾಧನೆ ಮತ್ತು ನಿಸರ್ಗಾರಾಧನೆ ಕೂಡ ಮಾಡುತ್ತಾರೆ. ಜನಾಂಗೀಯತೆ ಯಾವುದೇ ಧರ್ಮಕ್ಕೆ ಸೇರಲು ಮೊದಲ ಮಾನದಂಡ.ಅಗಾಧ ಪ್ರಮಾಣದಲ್ಲಿರುವ ಜೀತದಾಳುಗಳು ಸಾಂಪ್ರದಾಯಿಕ ಕ್ರೈಸ್ತರು.ರಷ್ಯಾದಲ್ಲಿರುವ ಹಲವು ತುರ್ಕಿ ಗುಂಪುಗಳು ಮುಸ್ಲಿಂ ಹಿಂಬಾಲಕರಲ್ಲದಿದ್ದರೂ,ಹೆಚ್ಚಿನ ತುರ್ಕಿ ಭಾಷಿಕರು ಮುಸ್ಲಿಮರು.[೧೭೮]

ಸಂಸ್ಕೃತಿ

[ಬದಲಾಯಿಸಿ]

ಶಾಸ್ತ್ರೀಯ ಸಂಗೀತ ಮತ್ತು ಬ್ಯಾಲೆ

[ಬದಲಾಯಿಸಿ]
ಪ್ಯಾಟರ್ ಇಲಿಯಿಚ್ ತ್ಚಾಕೊವಿಸ್ಕಿ (1840-1893), ಸಂಗೀತಗಾರ

ರಷ್ಯಾದಲ್ಲಿನ ದೊಡ್ಡ ಸಂಖ್ಯೆಯ ಜನಾಂಗೀಯ ಗುಂಪುಗಳ ಜನಪದ ಸಂಗೀತದಲ್ಲಿ ವಿಶಿಷ್ಟ ಸಂಪ್ರದಾಯಗಳಿವೆ. 19ನೇ ಶತಮಾನದಲ್ಲಿ ಶಾಸ್ತ್ರೀಯ ಸಂಗೀತಗಾರ ಮಿಖಾಯಿಲ್ ಗ್ಲಿಂಕಾ ಮತ್ತು ಆತನ ಹಿಂಬಾಲಕರ ಮಧ್ಯೆ ಉದ್ಭವಿಸಿದ ಭಿನ್ನಾಭಿಪ್ರಾಯಗಳು ಹೊಸ ಸಂಗೀತ ಪ್ರಕಾರಕ್ಕೆ ನಾಂದಿ ಹಾಡಿದವು. ರಷ್ಯಾ ದೇಶದ ಸೊಗಡು, ಧಾರ್ಮಿಕತೆ ಮತ್ತು ಜನಪದ ಅಂಶಗಳನ್ನು ಗ್ಲಿಂಕಾನ ಹಿಂಬಾಲಕರು ತಮ್ಮ ಸಂಗೀತದಲ್ಲಿ ಅಳವಡಿಸಿಕೊಂಡರು. ಆಂಟನ್ ಮತ್ತು ನಿಕೊಲಾಯ್ ರುಬಿನ್ ಸ್ಟೈನ್ ನೇತೃತ್ವದ ರಷ್ಯನ್ ಮ್ಯೂಸಿಕಲ್ ಸೊಸೈಟಿಯ ಸಾಂಪ್ರದಾಯಿಕ ಸಂಗೀತವೂ ಇದಕ್ಕೆ ಪೂರಕವಾಯಿತು. ಯುರೋಪಿಯನ್ ಶಾಸ್ಟ್ರೀಯ ಸಂಗೀತದ ಪ್ರಣಯ ಶೈಲಿಯಲ್ಲಿ ಪ್ರಾವೀಣ್ಯತೆ ಸಾಧಿಸಿದ್ದ ಸೆರ್ಗೇಯ್ ರಾಚ್ನಿಯೋಫ್ ಅವರು ಪ್ರಣಯ ಲೋಕದ ಮಹಾನ್ ಸಂಗೀತಕಾರ ತ್ಚಾಯ್ ಕೋವಿಸ್ಕಿ ಅವರ ಸಂಗೀತವನ್ನು 20ನೇ ಶತಮಾನಕ್ಕೂ ಕರೆತಂದರು. ಅದಾಗಲೇ ಪ್ರಸಿದ್ಧಿಯಾಗಿದ್ದ ಕೋವಿಸ್ಕಿ ಸಂಗೀತದಲ್ಲಿ ರಷ್ಯಾದ ಸೊಗಡು, ಸಾಮರಸ್ಯತೆಯ ಶ್ರೀಮಂತಿಕೆ ಮತ್ತು ಕ್ರಿಯಾಶೀಲತೆಯಿಂದ ಕೂಡಿದ ಇಂಪಾದ ಗಾಯನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.[ಸಾಕ್ಷ್ಯಾಧಾರ ಬೇಕಾಗಿದೆ]

ಸ್ಕ್ರಿಯಾಬಿನ್, ಸ್ಟ್ರಾವಿನ್ ಸ್ಕಿ, ರಾಚ್ಮನಿನೋಫ್, ಪ್ರೊಕೊಫಿಯೇವ್ ಮತ್ತು ಶೋಸ್ತಕೋವಿಚ್ 20ನೇ ಶತಮಾನದ ಜಗತ್ಪ್ರಸಿದ್ಧ ಸಂಗೀತಕಾರರು. ಸೋವಿಯತ್ ಯುಗದ ಉದ್ದಕ್ಕೂ,ಸಂಗೀತವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿತ್ತು ಅಲ್ಲದೆ ಅದನ್ನು ಸಂಪ್ರದಾಯದ ಚೌಕಟ್ಟಿನೊಳಗೆ ಇಡಲಾಗಿತ್ತು, ಸ್ಟಾಲಿನ್ ನ ಸಮಾಜವಾದಿ ನಂಬಿಕೆಯ ನೆಲೆಗಟ್ಟಿನೊಂದಿಗೆ ಅವುಗಳನ್ನು ಹೋಲಿಸಿ ಸುಲಭವಾಗಿ ದೊರೆಯುವಂತೆಯೂ ಮಾಡಲಾಗಿತ್ತು.ಅಷ್ಟೊತ್ತಿಗೆ ಸೋವಿಯತ್ ಮತ್ತು ರಷ್ಯಾದ ಮನೆ ಆವರಣಗಳು ಜಗತ್ತಿನ ವಿಖ್ಯಾತ ಗಾಯಕರಿಗೆ ವೇದಿಕೆಯಾಗಿ ಪರಿವರ್ತನೆಯಾಗಿತ್ತು.ಪಿಟೀಲು ವಾದಕರಾದ ಡೇವಿಡ್ ಒಸ್ಟ್ರಾಕ್, ಗಿಡನ್ ಕ್ರೆಮೆರ್, ಚೆಲೋವಾದಕ ಮ್ಸ್ತಿಸ್ಲೇವ್ ರೊಶ್ಟ್ರೊವಿಚ್, ಪಿಯನ ವಾದಕರಾದ ವ್ಲಾಡಿಮಿರ್ ಹೊರೊವಿಟ್ಜ್, ಸ್ವೇಯಟೋಸ್ಲೇವ್ ರಿಕ್ಟರ್, ಮತ್ತು ಎಮಿಲ್ ಗಿಲೆಲ್ಸ್, ಹಾಗೂ ಹಾಡುಗಾರ ಗಲಿನಾ ವಿಷ್ಣೆವ್ ಸ್ಕಾಯ,ಇವರು ಈ ಪೈಕಿ ಪ್ರಸಿದ್ಧರು.[ಸಾಕ್ಷ್ಯಾಧಾರ ಬೇಕಾಗಿದೆ]

ಬೊಲ್ಶೊಯ್ ರಂಗ ಮಂದಿರ. ಪ್ರಸ್ತುತ, ನಾಲ್ಕನೇ ವರ್ಷದ ಹಾದಿಯಲ್ಲಿದ್ದು, $730 ದಶಲಕ್ಷ ನವೀಕರಣ [448]

ರಷ್ಯಾದ ಸಂಗೀತಕಾರ ಪ್ಯಾಟರ್ ಇಲಿಚ್ ತ್ಚಾಯ್ಕೊವಿಸ್ಕಿ ಅವರು ಜಗತ್ತಿನ ಪ್ರಸಿದ್ಧ ಬ್ಯಾಲೆಗಳಿಗೆ ಸಂಗೀತ ನೀಡಿದ್ದಾರೆ- ಸ್ವೇನ್ ಸರೋವರ, ದಿ ನಟ್ ಕ್ರೇಕರ್ ಮತ್ತು ಸ್ಲೀಪಿಂಗ್ ಬ್ಯೂಟಿ ಈ ಪೈಕಿ ಪ್ರಮುಖವಾದವುಗಳು. 20ನೇ ಶತಮಾನದ ಆದಿಯಲ್ಲಿ, ರಷ್ಯಾದ ನೃತ್ಯಗಾತಿಯರಾದ ಅನ್ನಾ ಪಾವ್ಲೋವಾ ಮತ್ತು ವಾಸ್ಲವ್ ನಿಜಿಂಸ್ಕಿ ಪ್ರಸಿದ್ಧಿಗೆ ಬಂದರು, ಮತ್ತು ಇಂಪ್ರೆಸಾರಿಯೊ ಸೆರ್ಗೆಯ್ ದಿಯಗಿಲೇವ್ ಮತ್ತು ಆತನ ಬ್ಯಾಲೆಟ್ಸ್ ರಸ್ಸೆಸ್ ನೃತ್ಯ ತಂಡ ವಿದೇಶದಲ್ಲೂ ಸಂಚರಿಸಿ ಜಗತ್ತಿನಾದ್ಯಂತ ನೃತ್ಯ ವಿಕಾಸನದ ಮೇಲೆ ಆಳವಾದ ಪ್ರಭಾವ ಬೀರಿತು.[೧೭೯] ಸೋವಿಯತ್ ಬ್ಯಾಲೆ 19ನೇ ಶತಮಾನದ ಸಂಪ್ರದಾಯಿಕ ನೃತ್ಯಗಳನ್ನು ಸಂರಕ್ಷಿಸಿತಲ್ಲದೆ, ಸೋವಿಯತ್ ಒಕ್ಕೂಟದ ನೃತ್ಯ ಶಾಲೆಗಳು ಒಬ್ಬರ ಹಿಂದೆ ಒಬ್ಬರಂತೆ ಅಂತರರಾಷ್ಟ್ರೀಯ ಖ್ಯಾತಿಯ ಕಲಾವಿದರನ್ನು ನೀಡಿತು. ಮಯಾ ಪ್ಲಿಸೆಟ್ಸಕಾಯ, ರುಡಾಲ್ಪ್ ನುರೆಯೇವ್ ಮತ್ತು ಮಿಖಾಯಿಲ್ ಬಾರಿಶ್ನಿಕೋವ್ ಈ ಪೈಕಿ ಪ್ರಮುಖರು. ಮಾಸ್ಕೊದಲ್ಲಿರುವ ಬೊಲ್ಶೋಯಿ ಬ್ಯಾಲೆಟ್ ಮತ್ತು ಸೈಂಟ್ ಪೀಟರ್ಸ್ಬರ್ಗ್ ನಲ್ಲಿರುವ ಕಿರೋವ್ ಜಗತ್ತಿನಾದ್ಯಂತ ಪ್ರಖ್ಯಾತಿ ಪಡೆದಿದೆ.[೧೮೦]

ಸಾಹಿತ್ಯ

[ಬದಲಾಯಿಸಿ]

ಜಗತ್ತಿನ ಸಾಹಿತ್ಯಕ್ಕೆ ಅಪಾರ ಕೊಡುಗೆ [೧೮೧] ನೀಡಿರುವ ರಷ್ಯನ್ ಸಾಹಿತ್ಯವನ್ನು ಜಗತ್ತಿನ ಅತ್ಯಂತ ಪ್ರಭಾವಿ ಮತ್ತು ಅಭಿವೃದ್ಧಿ ಹೊಂದಿದ ಸಾಹಿತ್ಯಗಳ ಪೈಕಿ ಒಂದೆಂದು ಪರಿಗಣಿಸಲಾಗಿದೆ. ರಷ್ಯಾದ ಸಾಹಿತ್ಯ ಇತಿಹಾಸ 10ನೇ ಶತಮಾನದಷ್ಟು ಹಿಂದಕ್ಕೆ ಸರಿಯುತ್ತದೆ. 19ನೇ ಶತಮಾನದಲ್ಲಿ ದೇಶೀಯ ಸಂಪ್ರದಾಯ ಬೆಳಕಿಗೆ ಬಂದಿತ್ತು. ಅಲ್ಲದೆ ಅದು ಸರ್ವಕಾಲೀಕ ಪ್ರಸಿದ್ಧ ಲೇಖಕರನ್ನೂ ಸೃಷ್ಟಿಸಿತು.ಆಧುನಿಕ ರಷ್ಯನ್ ಸಾಹಿತ್ಯದ ಜನಕ ಮತ್ತು ರಷ್ಯನ್ "ಶೇಕ್ಸ್ ಪೀಯರ್ " [೧೮೨] ಎಂದೇ ಖ್ಯಾತರಾದ ಅಲೆಕ್ಸಾಂಡರ್ ಪುಶ್ಕಿನ್ ಅವರೊಂದಿಗೆ ರಷ್ಯನ್ ಕಾವ್ಯದ ಸುವರ್ಣ ಯುಗ ಆರಂಭವಾಯಿತು. 19ನೇ ಶತಮಾನದ ಆಂಟನ್ ಚೆಕೋವ್, ಮಿಖಾಯಿಲ್ ಲೆರ್ಮೆಂಟೋವ್, ಲಿಯೋ ಟಾಲ್ ಸ್ಟಾಯ್, [[ನಿಕೊಲಾಯ್ ಗೊಗ್ಲ್|ನಿಕೊಲಯ್ ಗೊಗ್ಲ್/6}, ಇವಾನ್ ತುರ್ಗೆನೇವ್ ಮತ್ತು ಫ್ಯೋಡೊರ್ ದೊಸ್ತೊಯೋವ್ಸ್ಕಿ]]ಅವರ ಕಾಲದಲ್ಲೂ ಮುಂದುವರಿಯಿತು. ಇವಾನ್ ಗೊಂಚರೋವ್, ಮಿಖಾಯಿಲ್ ಸಾಲ್ಟಿಕೋವ್, ಅಲೆಕ್ಸೇ ಪಿಸೆಂಸ್ಕಿ, ನಿಕೊಲಾಯ್ ಲೆಸ್ಕೋವ್ ಅವರು ರಷ್ಯನ್ ಗದ್ಯ ಸಾಹಿತ್ಯಕ್ಕೆ ಗಣನೀಯ ಕೊಡುಗೆ ಸಲ್ಲಿಸಿದ್ದಾರೆ. ಲೇಖಕರ ಪೈಕಿ ಟಾಲ್ ಸ್ಟಾಯ್ ಮತ್ತು ದೊಸ್ಟೊಯ್ ವಿಸ್ಕಿ ಶಿಖರಪ್ರಾಯರು. ಸಾಹಿತ್ಯ ಜಗತ್ತು ಕಂಡ ಸರ್ವಕಾಲೀಕ ಕಾದಂಬರಕಾರರು ಎಂದು ವಿಮರ್ಶಕರು ಇವರನ್ನು ಬಣ್ಣಿಸಿದ್ದಾರೆ.[೧೮೩][೧೮೪]

ಲಿಯೋ ಟಾಲ್ ಸ್ಟಾಯ್ ((1828–1910), ಲೇಖಕ

1880ರ ವೇಳೆಗೆ ರಷ್ಯನ್ ಸಾಹಿತ್ಯ ಬದಲಾವಣೆಗಳನ್ನು ಕಾಣಲಾರಂಭಿಸಿತು. ಅದಾಗಲೇ ಪ್ರಸಿದ್ಧ ಕಾದಂಬರಿಕಾರರ ಕಾಲ ಮುಗಿದು ಹೋಗಿತ್ತು, ಮತ್ತು ಸಣ್ಣ ಕಥೆ ಮತ್ತು ಕವಿತೆಗಳೇ ರಷ್ಯನ್ ಸಾಹಿತ್ಯದ ಪ್ರಮುಖ ಪ್ರಕಾರವಾಗಿತ್ತು. ಅಲ್ಲದೆ ಅನೇಕ ದಶಕಗಳ ಕಾಲ ಈ ಪ್ರಕಾರ ರಷ್ಯನ್ ಸಾಹಿತ್ಯ ಜಗತ್ತನ್ನು ಆಳಿತು. ಈ ಕಾಲವನ್ನು ರಷ್ಯನ್ ಕಾವ್ಯದ ರಜತ ಪರ್ವ ಎಂದು ಕರೆಯಲಾಗಿದೆ. ರಷ್ಯನ್ ಸಾಹಿತ್ಯದ ಆರಂಭಿಕ ಹಂತದಲ್ಲಿ ವಾಸ್ತವವಾದವೇ ತುಂಬಿದ್ದರೆ, 1893 ಮತ್ತು 1914ರ ನಡುವೆ ಪ್ರತಿಮೆಗಳ ಮೂಲಕ ಭಾವನೆಗಳನ್ನು ಹೇಳುವ ಪ್ರತಿಮಾಪಂಥ ಆವರಿಸಿಕೊಂಡಿತು.ಆ ಕಾಲದ ಪ್ರಮುಖ ಲೇಖಕರೆಂದರೆ ವಾಲೆರಿ ಬ್ರ್ಯುಸೋವ್, ಆಂಡ್ರೇ ಬೆಲಿ, ವ್ಯಾಚೆಸ್ಲಾವ್ ಇವನೋವ್, ಅಲೆಕ್ಸಾಂಡರ್ ಬ್ಲಾಕ್, ನಿಕೊಲಾಯ್ ಗುಮಿಲೇವ್, ದಿತ್ರಿ ಮೆರೆಜ್ಕೋವಿಸ್ಕಿ, ಫ್ಯೋಡರ್ ಸೊಲೊಗುಬ್, ಅಣ್ಣಾ ಅಖ್ಮಾಟೋವಾ, ಒಸಿವ್ ಮಂಡೇಲ್ ಸ್ತಂ, ಮರಿನಾ ತ್ಸೆಟೆಯ್ವಾ, ಲಿಯೊನಿಡ್ ಆಂಡ್ರೆಯೆವ್, ಇವನ್ ಬುನಿನ್ ಮತ್ತು ಮಾಕ್ಸಿಂ ಗಾರ್ಕಿ.

1917ರ ರಷ್ಯಾ ಕ್ರಾಂತಿ ಮತ್ತು ಆ ನಂತರದ ಶೀತಲ ಸಮರದಿಂದಾಗಿ ರಷ್ಯಾದ ಸಾಂಸ್ಕೃತಿಕ ಜೀವನ ಸಂಪೂರ್ಣ ಅಸ್ತವ್ಯಸ್ತವಾಯಿತು.ಈಗಾಗಲೇ ಪ್ರಸಿದ್ಧಿಗೆ ಬಂದಿರುವ ಲೇಖಕರು ಸೋವಿಯತ್ ಒಕ್ಕೂಟವನ್ನು ಬಿಟ್ಟು ಹೊರ ನಡೆದರೆ, ಕ್ರಾಂತಿಯ ಧೋರಣೆಗಳ ಬಗ್ಗೆ ಅನುಕಂಪವುಳ್ಳ ಹೊಸ ತಲೆಮಾರಿನ ಕೆಲವು ಪ್ರತಿಭಾವಂತ ಲೇಖಕರು ಉಳಿದುಕೊಂಡರು. ಈ ಪೈಕಿ ಕೆಲವು ಉತ್ಸಾಹಿಗಳು, ಹೊಸ ರಾಜ್ಯ ವ್ಯವಸ್ಥೆಗೆ ಅನುಕೂಲವಾಗುವಂತಹ ಹೊಸ ಮತ್ತು ಕಾರ್ಮಿಕ ವರ್ಗದ ಸಂಸ್ಕೃತಿ ಹುಟ್ಟು ಹಾಕುವ ಉದ್ದೇಶದಿಂದ ಲೇಖಕರ ಸಂಸ್ಥೆಗಳಿಗೆ ಸೇರಿಕೊಂಡರು. 1920ರ ಉದ್ದಕ್ಕೂ ಲೇಖಕರು ಸಹನೆಯಿಂದ ಸಾಹಿತ್ಯ ನಿರ್ಮಾಣದಲ್ಲಿ ತೊಡಗಿದ್ದರು.1930ರಲ್ಲಿ ಜೋಸೆಫ್ ಸ್ಟಾಲಿನ್ ನ ಸಮಾಜವಾದಿ ನಂಬಿಕೆಯ ತಳಹದಿಯಲ್ಲಿ ಸಾಹಿತ್ಯದ ಮೇಲಿದ್ದ ನಿರ್ಬಂಧಗಳು ಮತ್ತಷ್ಟು ಬಿಗಿಗೊಂಡವು.ಆತನ ಮರಣಾನಂತರ ಸೌಹಾರ್ದ ವಾತಾವರಣ ನಿರ್ಮಾಣವಾಯಿತು ಮತ್ತು ನಿಯಮಗಳೂ ಸಡಿಲವಾದವು.1970 ಮತ್ತು 1980ರ ವೇಳೆಗೆ ಸಮಾಜವಾದಿ ನಂಬಿಕೆಯ ನೀತಿ ನಿಯಮಗಳನ್ನು ನಿರ್ಲಕ್ಷಿಸುವ ಲೇಖಕರ ಸಂಖ್ಯೆ ಹೆಚ್ಚಿತು.ಸೋವಿಯತ್ ಯುಗದಲ್ಲಿದ್ದ ಪ್ರಮುಖ ಲೇಖಕರೆಂದರೆ ಯೆವ್ಗೆನಿ ಝಾಮ್ಯಂಟಿನ್, ಇಸಾಕ್ ಬಾಬೆಲ್ , ಇಲ್ಫ್ ಮತ್ತು ಪೆಟ್ರೋವ್, ಯುರಿ ಒಲೆಶಾ, ವ್ಸಾಡಿಮಿರ್ ನಬೊಕೋವ್, ಮಿಖಾಯಿಲ್ ಬುಲ್ಗಕೊವ್, ಬೋರಿಸ್ ಪಾಸ್ಟರ್ನಾಕ್, ಅಲೆಕ್ಸಾಂಡರ್ ಸೊಲ್ಜೆನಿಟ್ಸಿನ್, ವ್ಲಾಡಿಮಿರ್ ಮಾಯಕೊವಿಸ್ಕಿ, ಮಿಖಾಯಿಲ್ ಶೊಲೊಕೊವ್, ಯೆವ್ಗೆನಿ ಯೆವ್ತುಶೆಂಕೊ ಮತ್ತು ಆಂಡ್ರೇ ವೊಜ್ನೆಸೆಂಸ್ಕಿ.

ಚಲನಚಿತ್ರ

[ಬದಲಾಯಿಸಿ]
ರಷ್ಯಾ ಚಲನಚಿತ್ರ ಕಲೆ ಸಂಸ್ಥೆ, ಜಗತ್ತಿನ ಹಳೇ ಚಲನಚಿತ್ರ ಶಾಲೆ,

ಚಲನಚಿತ್ರಗಳು ಅಗ್ಗದ ಮನರಂಜನೆ ಮತ್ತು ಕಾರ್ಮಿಕರ ವಿರಾಮಕ್ಕೆಂದೇ ಇರುವುದೆಂದು ಪಶ್ಚಿಮದ ಕೈಗಾರಿಕೀಕರಣಗೊಂಡ ದೇಶಗಳು ಮೊದಲು ಒಪ್ಪಿಕೊಂಡಿದ್ದ ವೇಳೆ, ೧೯೧೭ರ ಕ್ರಾಂತಿಯ ಬೆನ್ನಿಗೇ ರಷ್ಯಾದ ಚಿತ್ರ ನಿರ್ಮಾಣ ಪ್ರಸಿದ್ಧಿಗೆ ಬಂತು. ಚಲನಚಿತ್ರಗಳಲ್ಲಿ ಅಭಿವ್ಯಕ್ತಿಯ ಪ್ರಕಟಣೆಗೆ ತಿದ್ದುವಿಕೆ ಪ್ರಕ್ರಿಯೆ ಮೊದಲ ಹೆಜ್ಜೆ ಎಂದು ರಷ್ಯಾ ತಿಳಿಸಿಕೊಟ್ಟಿದ್ದೂ ಇದಕ್ಕೆ ಪ್ರಮುಖ ಕಾರಣ.[೧೮೫] ೧೯೧೭ರ ಕ್ರಾಂತಿಯ ಬೆನ್ನಲ್ಲೇ ರಷ್ಯಾ ಮತ್ತು ಬಳಿಕ ಸೋವಿಯತ್ ಚಲನಚಿತ್ರಗಳು ಅವಿಷ್ಕಾರಗಳ ತವರು ಮನೆಯಾದವು. ಇದರಿಂದಾಗಿ ವಿಶ್ವ ವಿಖ್ಯಾತಿ ಪಡೆದ ಬ್ಯಾಟಲ್ ಶಿಪ್ ಪೋಟ್ ಮ್ಕಿನ್ ಚಲನಚಿತ್ರ ಹೊರಬಂತು.[೧೮೬] ಸೋವಿಯತ್-ಯುಗದ ಚಿತ್ರ ನಿರ್ಮಾಪಕರ ಪೈಕಿ ಪ್ರಮುಖವಾಗಿ ಸೆರ್ಗೆಯ್ ಐನ್ ಸ್ಟ್ಟೈನ್‌ಮತ್ತು ಆಂಡ್ರೇ ತಾರ್ಕೊವಿಸ್ಕಿ ಅವರು ಜಗತ್ತಿನ ಪ್ರಖ್ಯಾತ ಸೃಜನಶೀಲ ಮತ್ತು ಪ್ರಭಾವಿ ನಿರ್ದೇಶಕರಾಗಿ ಹೆಸರು ಪಡೆದರು.

ಐನ್ ಸ್ಟೈನ್ ಕೂಡ ಚಿತ್ರ ನಿರ್ಮಾಪಕ ಹಾಗೂ ತಾತ್ವಿಕ ಸಿದ್ಧಾಂತಿ ಲೆವ್ ಕುಲೆಶೋವ್ ಅವರ ವಿದ್ಯಾರ್ಥಿ. ಮಾಸ್ಕೋದಲ್ಲಿರುವ ಜಗತ್ತಿನ ಮೊದಲ ಚಲನಚಿತ್ರ ಶಾಲೆ ರಷ್ಯಾ ಚಲನಚಿತ್ರ ಕಲೆ ಸಂಸ್ಥೆಯಲ್ಲಿ ತಿದ್ದುವಿಕೆ ಪ್ರಕ್ರಿಯೆಗೆ ಹೊಸ ಆಯಾಮವನ್ನೇ ನೀಡಿದ ಮಾಂಟೇಜ್ ಸೂತ್ರವನ್ನು ಪ್ರತಿಪಾದಿಸಿದ ಹೆಗ್ಗಳಿಕೆ ಕುಲೆಶೋವ್ ಅವರದ್ದು. ದ್ಜಿಗ ವೆರ್ಟೋವ್ ಅವರ ಕ್ಯಾಮೆರಾ ಕುರಿತ ಕಿನೊ-ಗ್ಲಾಸ್ ("ಚಲನಚಿತ್ರ-ಕಣ್ಣು")ಸಿದ್ದಾಂತ, ಚಲನಚಿತ್ರದ ದಿಕ್ಕನ್ನೇ ಬದಲಿಸಿತು. ಈ ಕ್ಯಾಮೆರಾ ಬಳಸಿ ನೈಜ ಜೀವನ ಕುರಿತ ನಡೆಸಿದ ಪರಿಶೋಧನಗಳು ಸಾಕ್ಷ್ಯಾಧಾರಿತ ಚಿತ್ರಗಳ ಅಭಿವೃದ್ಧಿ ಮತ್ತು ಚಲನಚಿತ್ರದ ವಾಸ್ತವತೆಯ ಮೇಲೆ ಭಾರಿ ಪರಿಣಾಮ ಬೀರಿದವು. ೧೯೩೨ರಲ್ಲಿ, ಸ್ಟಾಲಿನ್ ಸಮಾಜವಾದಿ ನಂಬಿಕೆಯನ್ನು ದೇಶದ ನೀತಿಯನ್ನಾಗಿ ಜಾರಿಗೆ ತಂದರು; ಇದು ಕ್ರಿಯಾಶೀಲತೆಗೆ ಕಡಿವಾಣ ಹಾಕಿದರೂ, ಈ ಅವಧಿಯಲ್ಲಿ ತೆರೆಕಂಡ ಚಪ್ಪೇವ್ , ದಿ ಕ್ರೇನ್ಸ್ ಆರ್ ಫ್ಲೈಯಿಂಗ್ ಮತ್ತು ಬಾಲ್ಲದ್ ಆಫ್ ಎ ಸೋಲ್ಜಿಯರ್ ಇತ್ಯಾದಿ ಅನೇಕ ಸೋವಿಯತ್ ಚಲನಚಿತ್ರಗಳು ಕಲಾತ್ಮಕವಾಗಿ ಯಶಸ್ಸು ಕಂಡಿವೆ.[೧೮೬] ಲಿಯೊನಿಡ್ ಗೈಡಾಯ್‌ಅವರ ಹಾಸ್ಯ ಚಿತ್ರಗಳು ೧೯೬೦ ಮತ್ತು ೧೯೭೦ರ ದಶಕದಲ್ಲಿ ಭಾರಿ ಜನಪ್ರಿಯತೆ ಪಡೆದಿದ್ದವು, ಅವುಗಳ ಕೆಲವು ಆಕರ್ಷಕ ಮಾತುಗಳನ್ನು ಇಂದೂ ಬಳಸಿಕೊಳ್ಳಲಾಗುತ್ತಿದೆ. ೧೯೬೯ರಲ್ಲಿ ವ್ಲಾಡಿಮಿರ್ ಮೊಟಿಲ್ ಅವರ ವೈಟ್ ಸನ್ ಆಫ್ ದಿ ಡೆಸರ್ಟ್ ಚಿತ್ರ ಬಿಡುಗಡೆಯಾಯಿತು, ಅಲ್ಲದೆ ಇದು ಒಸ್ಟರ್ನ್ ಎಂಬ ಹೊಸ ಪ್ರಕಾರಕ್ಕೆ ನಾಂದಿ ಹಾಡಿತು.ಗಗನಯಾತ್ರಿಗಳು ಕೂಡ ತಾವು ಬಾಹ್ಯಾಕಾಶಕ್ಕೆ ತೆರಳುವ ಮೊದಲು ಚಲನಚಿತ್ರ ವೀಕ್ಷಿಸುತ್ತಿದ್ದರು.

೧೯೮೦ರಿಂದ ೧೯೯೦ರವರೆಗಿನ ಅವಧಿಯನ್ನು ರಷ್ಯನ್ ಚಲನಚಿತ್ರದ ಬಿಕ್ಕಟ್ಟಿನ ಕಾಲವೆನ್ನಬಹುದು. ರಷ್ಯಾದ ಚಿತ್ರ ನಿರ್ಮಾಪಕರಿಗೆ ಮುಕ್ತವಾಗಿ ಹೇಳಿಕೊಳ್ಳುವ ಸ್ವಾತಂತ್ರ್ಯವಿದ್ದರೂ, ಸರ್ಕಾರದ ಅನುದಾನಗಳು ಗಣನೀಯವಾಗಿ ಇಳಿದ ಪರಿಣಾಮ, ಚಿತ್ರ ನಿರ್ಮಿಸುವವರ ಸಂಖ್ಯೆ ಕೂಡ ಇಳಿಮುಖಗೊಂಡಿತು. ೨೧ನೇ ಶತಮಾನದ ಆದಿಯಲ್ಲಿನ ಆರ್ಥಿಕ ಸುಧಾರಣೆಗಳಿಂದಾಗಿ ಚಲನಚಿತ್ರ ನೋಡುಗರ ಸಂಖ್ಯೆ ಹೆಚ್ಚಿದ್ದಲ್ಲದೆ, ಚಲನಚಿತ್ರ ಕ್ಷೇತ್ರವೂ ಅಭಿವೃದ್ಧಿ ಕಂಡಿತು, ಮತ್ತು ಚಿತ್ರ ನಿರ್ಮಾಣದಲ್ಲಿ ಅದಾಗಲೇ ಬ್ರಿಟನ್ ಮತ್ತು ಜರ್ಮನಿಯನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿತ್ತು.[೧೮೭] ೨೦೦೭ರಲ್ಲಿ ರಷ್ಯಾಕ್ಕೆ ಚಲನಚಿತ್ರ ಕ್ಷೇತ್ರದಿಂದ ಬಂದ ಒಟ್ಟು ಆದಾಯ ೫೬೫ ದಶಲಕ್ಷ $. ಇದು ಹಿಂದಿನ ವರ್ಷಕ್ಕಿಂತ[[೧೮೮] ೪೭% ರಷ್ಟು ಹೆಚ್ಚು.(ತುಲನೆ ಮಾಡಿ ನೋಡುವುದಿದ್ದಲ್ಲಿ ೧೯೯೬ರಲ್ಲಿ ಬಂದ ಆದಾಯ ೬ ದಶಲಕ್ಷ ಡಾಲರ್).[೧೮೭] ರಷ್ಯಾ ಚಲನಚಿತ್ರಗಳಿಗೆ ಅಂತರರಾಷ್ಟ್ರೀಯ ಮನ್ನಣೆ ಸಿಗುವುದು ಮುಂದುವರಿದಿದೆ. ರಷ್ಯನ್ ಆರ್ಕ್ (೨೦೦೨) ಒಂದೇ ಟೇಕ್ ನಲ್ಲಿ ತೆಗೆದ ರಷ್ಯಾದ ಮೊದಲ ಚಲನಚಿತ್ರ.

ಚಿತ್ರಕಲೆ

[ಬದಲಾಯಿಸಿ]

ರಷ್ಯಾದ ಚಿತ್ರಕಲೆ ಆರಂಭಿಕ ಹಂತದಲ್ಲಿ ವಿಗ್ರಹ ಕಲೆ ಮತ್ತು ಬೈಝಾಂಟಿಯಂನಿಂದ ಪಾರಂಪರಿಕವಾಗಿ ಬಂದ ರೋಮಾಂಚಕ ಹಸಿಚಿತ್ರಗಳಲ್ಲಿ ಕೇಂದ್ರೀಕೃತವಾಗಿತ್ತು.ಮಾಸ್ಕೊ ಅಧಿಕಾರಕ್ಕೆ ಬರುತ್ತಿದ್ದಂತೆ, ಗ್ರೀಕಿನ ಥಿಯೋಪಾನ್ಸ್ ಮತ್ತು ಆಂಡ್ರೇ ರುಬ್ಲೇವ್ ಅವರ ಹೆಸರುಗಳು ಆರಂಭದಲ್ಲಿ ರಷ್ಯಾದ ಚಿತ್ರಕಲೆಯೊಂದಿಗೆ ಕೇಳಿ ಬಂದವು. ರಷ್ಯಾದ ಕಲಾವಿದರಿಗೆ ಅಂತರರಾಷ್ಟ್ರೀಯ ಪಾತ್ರ ಮತ್ತು ಸ್ಥಾನಮಾನ ಕೊಡುವ ನಿಟ್ಟಿನಲ್ಲಿ 1757ರಲ್ಲಿ ರಷ್ಯಾ ಕಲಾ ಅಕಾಡೆಮಿ ಸ್ಥಾಪನೆಯಾಯಿತು.ಇವಾನ್ ಅರ್ಗುನೋವ್, {{1}2}ಫ್ಯೋಡರ್ ರೊಕೊಟೊವ್, ದ್ಮಿಟ್ರಿ ಲೆವಿಜ್ಕಿ ಮತ್ತು ವ್ಲಾಡಿಮಿರ್ ಬೊರೊವಿಕೊವಿಸ್ಕಿ ಅಕಾಡೆಮಿಯ ಪ್ರಮುಖ ಭಾವಚಿತ್ರ ಕಲಾವಿದರಾಗಿದ್ದಾರೆ. 19ನೇ ಶತಮಾನದಲ್ಲಿ ವಾಸ್ತವವಾದ ಏಳಿಗೆ ಕಂಡಿತು ಮತ್ತು ರಷ್ಯಾದ ಅನನ್ಯತೆ ವಾಸ್ತವವಾದಿಗಳ ಪಾಲಾಯಿತು.ರಷ್ಯಾ ಭೂಪ್ರದೇಶದ ಅಗಲವಾದ ನದಿಗಳು, ಅರಣ್ಯ ಮತ್ತು ಬರ್ಚ್ ಮರಗಳು ಮಾಯವಾಗಿ ನಾಡಾದ ಕಾಡು, ಕ್ರಿಯಾಶೀಲ ಜನಜೀವನ, ಸಮಕಾಲೀನರ ಬೃಹತ್ ಭಾವ ಚಿತ್ರಗಳು ಆ ದೇಶದ ಗುರುತಿನ ಪ್ರತೀಕವಾಗಿವೆ.ಇತರ ಕಲಾವಿದರು ಸಾಮಾಜಿಕ ವಿಮರ್ಶೆ, ಬಡವರ ಸ್ಥಿತಿಗತಿಯ ಪ್ರತಿಪಾದನೆ ಮತ್ತು ಅಧಿಕಾರಶಾಹಿಗಳ ವಂಗ್ಯ ಚಿತ್ರ ಬಿಡಿಸುವುದಕ್ಕೆ ಗಮನ ಕೇಂದ್ರೀಕರಿಸಿದರು. ಆದರೆ 2ನೇ ಅಲೆಕ್ಸಾಂಡರ್ ನ ಆಳ್ವಿಕೆಯಲ್ಲಿ ವಿಮರ್ಶಾತ್ಮಕ ವಾಸ್ತವವಾದ ಏಳಿಗೆ ಕಂಡಿತು.

ರಸ್': ಮಿಖಾಯಿಲ್ ನೆಸ್ಟೆರೋವ್ ಹೇಳಿದಂತೆ ಜನರ ಆತ್ಮ, ರಷ್ಯಾದ ಐತಿಹಾಸಿಕ ಅಧ್ಯಾತ್ಮದ ಸೂತ್ರ.
ಅಂಬರು ಕೋಣೆ

1861ರಲ್ಲಿ ಗುಲಾಮಗಿರಿಯನ್ನು ತೆಗೆದು ಹಾಕಿದ ಬಳಿಕ ಕೆಲವು ಕಲಾವಿದರು ಮಾನವನ ಸಂಕಷ್ಟಗಳ ಕುರಿತ ಚಿತ್ರಗಳನ್ನು ಬಿಡಿಸತೊಡಗಿದರು.ರಷ್ಯಾ ಇತಿಹಾಸದ ನಾಟಕೀಯ ಘಟನೆಗಳನ್ನು ಹೇಳುವ ಬೃಹತ್ ಕಲಾಕೃತಿಗಳನ್ನು ಕಲಾವಿದರು ರಚಿಸಿದ್ದೂ ಉಂಟು.ಪೆರಿದ್ವಿಜಿನಿಕಿ ನೇತೃತ್ವದ (ಅಲೆಮಾರಿಗಳು) ಕಲಾವಿದರ ಗುಂಪು ರಷ್ಯಾ ಅಕಾಡೆಮಿಯಿಂದ ಹೊರಬಂದು, ಅಕಾಡೆಮಿ ನಿಯಮಗಳಿಂದ ಮುಕ್ತವಾದ ಕಲಾ ಶಾಲೆಯನ್ನು ಸ್ಥಾಪಿಸಿತು. ಅವರ ಚಿತ್ರಗಳಲ್ಲಿ ಆಳವಾದ ಸಾಮಾಜಿಕ ಮತ್ತು ರಾಜಕೀಯ ತುಡಿತವಿತ್ತು.ಈ ಅವಧಿಯಲ್ಲಿ ಮುನ್ನಡೆಯಲ್ಲಿದ್ದ ವಾಸ್ತವವಾದಿಗಳೆಂದರೆ ಇವಾನ್ ಶಿಂಶ್ಕಿನ್, ಅರ್ಕಿಪ್ ಕ್ಯುಂದಿಜಿ, ಇವಾನ್ ಕ್ರಾಮೋಸ್ಕಿ, ವಾಸಿಲಿ ಪೊಲೆನೋವ್, ಇಸಾಕ್ ಲೆವಿಟಾನ್, ವಾಸಿಲಿ ಸುರಿಕೋವ್, ವಿಕ್ಟರ್ ವಾಸ್ನೆಟೋವ್, ಇಲ್ಯಾ ರೆಪಿನ್. 1830ರ ಹೊತ್ತಿಗೆ ಅಕಾಡೆಮಿಗಳು ಕಲಾಕಾರರನ್ನು ಅಭ್ಯಾಸಕ್ಕಾಗಿ ವಿದೇಶಕ್ಕೆ ಕಳುಹಿಸಲು ಆರಂಭಿಸಿದ್ದವು. ಹುಟ್ಟು ಪ್ರತಿಭೆಗಳೆಂದರೆ ಅಲೆಕ್ಸಾಂಡರ್ ಇವನೋವ್ ಮತ್ತು ಕಾರ್ಲ್ ಬ್ರುಲೋವ್, ಇವರಿಬ್ಬರು ಚಾರಿತ್ರಿಕ ಪ್ರೇಮಕತೆಗಳನ್ನು ಬಿಡಿಸುವುದರಲ್ಲಿ ನಿಷ್ಣಾತರಾಗಿದ್ದರು. 19ನೇ ಶತಮಾನದ ಕೊನೆಯಾರ್ಧದಲ್ಲಿ ರಷ್ಯಾದ ಅಪೂರ್ವ ಕಲಾ ಪ್ರಕಾರಗಳು ಬೆಳಕಿಗೆ ಬಂದವು ಅಲ್ಲದೆ ಅವು ರಷ್ಯಾ ಸಮಾಜದ ದಿನನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾದವು.

ಮಾಸ್ಕೋ ಮೆಟ್ರೋದ ಸುಂದರ ಅಲಂಕಾರ

ರಷ್ಯಾದ ಅವಂತ್-ಗಾರ್ಡ್ ಕೊಡೆಗೆ ಸಂಬಂಧಿಸಿದ ಪದ, ಇದಕ್ಕೆ ಬೃಹತ್ ಅಥವಾ ದೊಡ್ಡದು ಎಂಬರ್ಥವಿದೆ. 1890 ರಿಂದ 1930ರ ಅಂದಾಜು ಆಧುನಿಕ ಕಲಾ ಪ್ರಕಾರದ ಪ್ರಭಾವಿ ಅಲೆ ರಷ್ಯಾದಲ್ಲಿ ಏಳಿಗೆ ಕಂಡಿತು. ಪ್ರತ್ಯೇಕ, ಆದರೆ ತಪ್ಪಿಸಿಕೊಳ್ಳಲಾಗದ, ಆ ಕಾಲದ ಕಲೆಯ ಪ್ರಗತಿ ಈ ಪದದ ಅರ್ಥ; ಹೆಸರಿಸುವುದಿದ್ದರೆ ಹೊಸ ಅನುಕರಣೆ, ಪರಮಾಧಿಕಾರ, ರಚನಾತ್ಮಕತೆ, ಚಿತ್ತಗ್ರಾಹ್ಯ ಕಲೆ, ಭವಿಷ್ಯದ್ವಾದ.ಸೋವಿಯತ್ ಯುಗದ ಪ್ರಮುಖ ಕಲಾವಿದರ ಪೈಕಿ ಕೇಳಿ ಬರುವ ಹೆಸರುಗಳು; ಎಲ್ ಲಿಸ್ಸಿಟ್ಜಸ್ಕಿ, ಕಾಜಿಮಿರ್ ಮಾಲೆವಿಚ್, ವೇಸ್ಸಿಲಿ ಕಂಡಿನ್ಸ್ಕಿ , ವ್ಲಾಡಿಮಿರ್ ಟಾಟ್ಲಿನ್ , ಅಲೆಕ್ಸಾಂಡರ್ ರೋಡ್ಚೆಂಕೊ ಮತ್ತು ಮಾರ್ಕ್ ಚಾಗಲ್ . 1932 ಮತ್ತು 1917ರ ರಷ್ಯಾ ಕ್ರಾಂತಿಯ ಅವಧಿಯಲ್ಲಿ ಹೊಸತನ ತಂದವರ ಗುಂಪು ಕ್ರೀಯಾಶೀಲವಾಗಿತ್ತು ಮತ್ತು ಅವು ಜನಪ್ರಿಯತೆಯ ಉತ್ತುಂಗ ತಲುಪಿದ್ದವು. ಈ ಸಂದರ್ಭದಲ್ಲಿ ಹೊಸತನ ತಂದವರ ಗುಂಪಿನ ಕಲ್ಪನೆಗಳ ಜೊತೆ, ಹೊಸದಾಗಿ ಅಸ್ತಿತ್ವ ಕಂಡುಕೊಂಡ ಸಾಂಪ್ರದಾಯಿಕ ಸ್ಟಾಲಿನ್ ಪ್ರತಿಪಾದಿಸಿದ ಸಾಮಾಜಿಕ ನಂಬಿಕೆ ಯ ನಿಲುವುಗಳ ನಡುವೆ ಘರ್ಷಣೆ ಸಂಭವಿಸಿತು.

1920ರ ದಶಕದಲ್ಲಿ ಸಾಹಿತ್ಯ ಮತ್ತು ಚಲನಚಿತ್ರಗಳ ಮೇಲೆ ಸಾಮಾಜಿಕ ನಂಬಿಕೆಯ ಕಠಿಣ ನೀತಿ ಪರಿಣಾಮ ಬೀರಿದಂತೆ ಚಿತ್ರಕಲೆಯ ಮೇಲೂ ತನ್ನ ಪ್ರಭಾವ ಬೀರಿತು. ಇದರಿಂದಾಗಿ ಹೊಸತನ ತಂದವರು ತೆರೆಮರೆಗೆ ಸರಿದರು.ಸಾಮಾಜಿಕ ನಂಬಿಕೆಯಲ್ಲೂ ಹೊಸತನ ತಂದವರಲ್ಲಿ ಎರ್ನೆಸ್ಟ್ ನೈಜ್ವೆಸ್ಟ್ನಿ, ಇಲ್ಯಾ ಕವಕೋವ್, ಮಿಖಾಯಿಲ್ ಶೆಮ್ಯಾಕಿನ್, ಎರಿಕ್ ಬುಲಟೋವ್‌ಮತ್ತು ವೆರಾ ಮುಖಿನಾಪ್ರಮುಖರು.ಅವರಲ್ಲಿ ಅನುಕರಣೆ, ಅತಿ ವ್ಯಾವಹಾರಿಕತೆ, ವಿಚಿತ್ರ ವರ್ತನೆ, ಪ್ರತ್ಯೇಕತೆ ಮನೋಭಾವನೆಗಳಿದ್ದರೂ ಸಾಮಾಜಿಕ ನಂಬಿಕೆಯಲ್ಲಿರುವ ಕಾನೂನು, ಕಟ್ಟಳೆಗಳು ಅವರಿಗೆ ಅಸಹ್ಯ ಹುಟ್ಟಿಸುತ್ತಿದ್ದವು. 1940ರಲ್ಲಿ ಸೋವಿಯತ್ ಕಲಾವಿದರು ಚಿತ್ರಿಸಿದ ಚಿತ್ರಗಳಲ್ಲಿ ದೇಶಪ್ರೇಮ ಹಾಸುಹೊಕ್ಕಾಗಿದ್ದು, ಬಲ ಪಂಥೀಯ ಉಗ್ರವಾದ ವಿರೋಧಿ ನಿಲುವೂ ಇದಲ್ಲಿ ಅಡಕವಾಗಿತ್ತು.ಪ್ರಸಿದ್ಧ ಮಹಾ ಸಮರದ ಘಟನೆಗಳು ಮತ್ತು ಕದನಗಳನ್ನು ದೇಶಪ್ರೇಮ ಉಕ್ಕಿಸುವ ರೀತಿಯಲ್ಲಿ ಚಿತ್ರಿಸಲಾಗಿದೆ ಮತ್ತು ಸಮರಾನಂತರ ಶಿಲ್ಪಿಗಳು ಹುತಾತ್ಮರ ನೆನಪಿನಲ್ಲಿ ಪ್ರತಿಮೆಗಳನ್ನು ಕೆತ್ತಿದ್ದಾರೆ. ಅವುಗಳ ಪೈಕಿ ಹುತಾತ್ಮರು ತೋರಿದ ಪ್ರತಿರೋಧ, ಶೌರ್ಯ ಸಾಹಸಗಳನ್ನು ಮನಮುಟ್ಟುವಂತೆ ಹೇಳುವ ಚಿತ್ರಗಳು ಪ್ರಸಿದ್ಧಿ ಪಡೆದಿವೆ. 20ನೇ ಶತಮಾನದಲ್ಲಿ ನಡೆದ ಕ್ರಾಂತಿಯ ಪರಿಣಾಮ ರಷ್ಯಾದ ಅನೇಕ ಕಲಾವಿದರು ಪಶ್ಚಿಮ ಯುರೋಪ್ ಗೆ ವಲಸೆ ಬಂದು ವೃತ್ತಿ ಜೀವನ ನಡೆಸಿದರು.ರಷ್ಯಾ ಕಲಾವಿದರಾದ ವಾಸ್ಸಿಲಿ ಕಾಂಡಿನ್ ಸ್ಕಿ, ಮಾರ್ಕ್ ಚಾಗಲ್, ಮತ್ತು ನೌಮ್ ಗಾಬೊ ತಮ್ಮ ಚಿತ್ರಕಲೆ ಮತ್ತು ಕಲ್ಪನೆಗಳನ್ನು ಜಗತ್ತಿನಾದ್ಯಂತ ಪಸರಿಸಿದ್ದಾರೆ. ಪ್ಯಾರಿಸ್ ಮತ್ತು ಮುನಿಚ್ ನಲ್ಲಿ ಅಭ್ಯಾಸ ಮಾಡಿದ್ದ ರಷ್ಯಾ ಕಲಾವಿದರು ತೆರೆಮರೆಯಲ್ಲೇ ಉಳಿದದ್ದು ರಷ್ಯಾ ಮತ್ತು ಜಾಗತಿಕ ಚಿತ್ರಕಲೆ ಮೇಲೆ ಪರಿಣಾಮ ಬೀರಿತ್ತು.

ಕ್ರೀಡೆ

[ಬದಲಾಯಿಸಿ]
ಮರಿಯಾ ಶರಾಪೋವಾ, ಜಗತ್ತಿನಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಕ್ರೀಡಾಪಟು [481]

ರಷ್ಯಾದ ಕ್ರೀಡಾಪಟುಗಳು ಹಲವು ಕ್ರೀಡೆಗಳಲ್ಲಿ ಯಶಸ್ಸು ಪಡೆಯುತ್ತಾ ಬಂದಿದ್ದು ಮತ್ತು ಒಲಿಂಪಿಕ್ ಮತ್ತು ಇತರೇ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಅಗ್ರಸ್ಥಾನ ಪಡೆದು ಸ್ಥಿರತೆ ಕಾಯ್ದುಕೊಂಡಿದ್ದಾರೆ. ಸೋವಿಯತ್ ಯುಗದಲ್ಲಿ, ರಾಷ್ಟ್ರೀಯ ಒಲಿಂಪಿಕ್ ತಂಡ ತಾನು ಪಾಲ್ಗೊಂಡ 18 ಸ್ಪರ್ಧೆಗಳಲ್ಲಿ 14ರಲ್ಲಿ ಗೆದ್ದು ಪದಕ ಗೆದ್ದುಕೊಂಡಿತ್ತು; ಇದರಿಂದಾಗಿ USSR ಅಂದು ಒಲಿಂಪಿಕ್ ಕ್ರೀಡಾಕೂಟದಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿತ್ತು.1952ರ ಒಲಿಂಪಿಕ್ ಪಂದ್ಯಾವಳಿಯಿಂದ ಆರಂಭವಾಗಿ, ಬೇಸಿಗೆ ಒಲಿಂಪಿಕ್ ಕ್ರೀಡಾಕೂಟಗಳಲ್ಲೂ ರಷ್ಯಾದ ಕ್ರೀಡಾಪಟುಗಳು ಸದಾ ಹೆಚ್ಚು ಚಿನ್ನದ ಪದಕ ಗೆದ್ದ ದೇಶಗಳ ಪೈಕಿ ಮೊದಲ 3 ಸ್ಥಾನದಲ್ಲಿದ್ದಾರೆ. ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಸೋವಿಯತ್ ನ ಜಿಮ್ನಾಸ್ಟ್ ಪಟುಗಳು, ಟ್ರಾಕ್ ಮತ್ತು ಫೀಲ್ಡ್ ಕ್ರೀಡಾಳುಗಳು, ವೈಟ್ ಲಿಫ್ಟರ್ ಗಳು, ಕುಸ್ತಿ ಪಟುಗಳು, ಕ್ರಾಸ್ ಕಂಟ್ರಿ ಸ್ಕೈಯರ್ಸ್ ಮತ್ತ ಬಾಕ್ಸರ್ ಗಳು ಜಗತ್ತಿನಲ್ಲೇ ಅತ್ಯತ್ತುಮ ಕ್ರೀಡಾಳುಗಳೆನಿಸಿಕೊಂಡಿದ್ದಾರೆ, ಅಲ್ಲದೆ ಸೋವಿಯತ್ ಒಕ್ಕೂಟದ ಪತನದ ನಂತರವೂ ರಷ್ಯಾದ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪ್ರಾಬಲ್ಯ ಮೆರೆದಿದ್ದಾರೆ. ಮಾಸ್ಕೋದಲ್ಲಿ 1980 ಬೇಸಿಗೆ ಒಲಿಂಪಿಕ್ ನಡೆದಿದ್ದರೆ, 2014ರ ಚಳಿಗಾಲದ ಒಲಿಪಿಂಕ್ ನ ಆತಿಥ್ಯವನ್ನು ಸೋಚಿ ವಹಿಸಲಿದೆ.

ಅನೇಕ ಒಲಿಪಿಂಕ್ ಕ್ರೀಡಾಕೂಟಗಳು, ವಿಶ್ವ ಚಾಂಪಿಯನ್ ಶಿಪ್ ಮತ್ತು ಯುರೋ ಬಾಸ್ಕೆಟ್ ಗೆದ್ದುಕೊಂಡಿರುವ ರಷ್ಯಾ ಮತ್ತು ಸೋವಿಯತ್ ಒಕ್ಕೂಟ ಬಾಸ್ಕೆಟ್ ಬಾಲ್ ತಂಡ ಸಾಂಪ್ರದಾಯಿಕವಾಗಿ ಅತ್ಯಂತ ಬಲಿಷ್ಠ ತಂಡ. 2009ರವರೆಗೆ ತಂಡದಲ್ಲಿ NBA ಅನೇಕ ಆಟಗಾರರಿದ್ದರು, ಪ್ರಮುಖವಾಗಿ ಉತಾಹ್ ಜಾಜ್ , ಮುನ್ನಡೆ ಆಟಗಾರ ಆಂಡ್ರಿ ಕಿರಿಲೆಂಕೊ. ಇವರು ಬಾಸ್ಕೆಟ್ ಬಾಲ್ ಆಟದಲ್ಲಿ ಇಡೀ ಜಗತ್ತಿಗೆ ಚಿರಪರಿಚಿತ. 2007ರಲ್ಲಿ, ರಷ್ಯಾ ತಂಡ ವಿಶ್ವ ಚಾಂಪಿಯನ್ ಸ್ಪೇನ್ ತಂಡವನ್ನು ಸೋಲಿಸಿ Eurobasket 2007 ಅನ್ನು ಗೆದ್ದುಕೊಂಡಿತು.ರಷ್ಯಾ ಬಾಸ್ಕೆಟ್ ಬಾಲ್ ಕ್ಲಬ್ ಗಳಾದ PBC CSKA ಮಾಸ್ಕೋ (2006 ಮತ್ತು 2008 ಯುರೋ ಲೀಗ್ ಚಾಂಪಿಯನ್) ಯುರೋಪ್ ಪಂದ್ಯಾವಳಿಗಳಾದ ಯುರೋ ಲೀಗ್ ಮತ್ತು ULEB CupULEB ಕಪ್ ನಲ್ಲಿ ಭಾರಿ ಯಶಸ್ಸು ಕಂಡಿವೆ.

ಸೋವಿಯತ್ ಅವಧಿಯಲ್ಲಿ, ಸ್ಪರ್ಧಾತ್ಮಕ ಪುಟ್ಬಾಲ್ ಆಡುವ ದೇಶವಾಗಿದ್ದ ರಷ್ಯಾ, ಅನೇಕ ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಫೈನಲ್ ತಲುಪಿತ್ತು.ಐಸ್ ಹಾಕಿ ಮತ್ತು ಬಾಸ್ಕೆಟ್ ಬಾಲ್ ಜೊತೆಗೆ, ಇಂದು ಫುಟ್ಬಾಲ್ ಕೂಡ ರಷ್ಯಾದಲ್ಲಿ ಜನಪ್ರಿಯ ಕ್ರೀಡೆ. USSR ಅತ್ಯುತ್ತಮ ಆಟಗಾರರನ್ನು ಹೊಂದಿದ್ದೂ, ಅನೇಕ ಚಾಂಪಿಯನ್ ಶಿಪ್ ಗಳನ್ನು ಗೆದ್ದುಕೊಂಡಿದ್ದರೂ(ಯುರೋ 1960)ಮತ್ತು ಹಲವು ಪಂದ್ಯಗಳಲ್ಲಿ ಫೈನಲ್ ತಲುಪಿಯೂ (ಯುರೋ 1988) ಅಂತರರಾಷ್ಟ್ರೀಯ ಪುಟ್ಬಾಲ್ ನಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯವಾಗಿರಲಿಲ್ಲ.1991ರ ವಿಭಜನೆಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಭಾರಿ ಹಿನ್ನಡೆ ಅನುಭವಿಸಿದ್ದ ರಷ್ಯಾ ಫುಟ್ಬಾಲ್ ಇದೀಗ ನಿಧಾನವಾಗಿ ಪುನರುಜ್ಜೀವನ ಪಡೆಯುತ್ತಿದೆ.ರಷ್ಯಾ ಕ್ಲಬ್ ಗಳ ಪೈಕಿ(CSKA ಮಾಸ್ಕೊ,ಝೆನಿಟ್ ಸೈಂಟ್ ಪೀಟರ್ಸ್ಬರ್ಗ್, ಲೊಕೊಮೇಟಿವ್ ಮಾಸ್ಕೋ ಮತ್ತು ಸ್ಪಾರ್ಟಕ್ ಮಾಸ್ಕೊ- ಒಂಭತ್ತು ಬಾರಿಯ ಚಾಂಪಿಯನ್ ರಷ್ಯಾ) ಯುರೋಪ್ ಪಂದ್ಯಾವಳಿಗಳಲ್ಲಿ (CSKA ಮತ್ತು ಝೆನಿಟ್ UEFA 2005 ಮತ್ತು 2008) ಈಚೆಗೆ ಹೆಚ್ಚಾಗಿ ಯಶಸ್ಸು ಕಾಣುತ್ತಿವೆ. ರಷ್ಯಾದಲ್ಲಿ ಸಾಕಷ್ಟು ಫುಟ್ಬಾಲ್ ಪ್ರತಿಭೆಗಳಿರುವ ಹಿನ್ನೆಲೆಯಲ್ಲಿ (ಯುರೋ 2008 ಪಂದ್ಯಾವಳಿಯಲ್ಲಿ ಕಾಣಬಹುದು)ರಷ್ಯಾ ಲೀಗ್ ಯುರೋಪಿನಲ್ಲೇ ಬಲಿಷ್ಠವಾಗುವ ದಿನ ದೂರವಿಲ್ಲ ಎಂದು ಈಗಾಗಲೇ ಅನೇಕರು ಭವಿಷ್ಯ ನುಡಿದಿದ್ದಾರೆ, ಅಲ್ಲದೆ ಫುಟ್ಬಾಲ್ ಕ್ರೀಡೆಗೆ ರಷ್ಯಾ ಗಂಭೀರವಾಗಿ ಹಣ ತೊಡಗಿಸಿರುವುದೂ ಇದಕ್ಕೆ ಒಂದು ಕಾರಣ, ಇದರಿಂದಾಗಿ ಪ್ರಮುಖ ವಿದೇಶಿ ಆಟಗಾರರು ಆಕರ್ಷಿತರಾಗುತ್ತಿದ್ದಾರೆ. ಯುರೋ 2008ರ ಸೆಮಿಫೈನಲ್ಸ್ ಪಂದ್ಯದಲ್ಲಿ ಸ್ಪೇನ್ ಗೆ ಶರಣಾದ ರಷ್ಯಾ ರಾಷ್ಟ್ರೀಯ ಫುಟ್ಬಾಲ್ ತಂಡ, ಡಚ್ ವ್ಯವಸ್ಥಾಪಕ ಗುಸ್ ಹಿಡಿಂಕ್ ಮಾರ್ಗದರ್ಶನದಲ್ಲಿ ಅಂತರರಾಷ್ಟ್ರೀಯವಾಗಿ ಪ್ರಬಲ ಶಕ್ತಿಯಾಗಿ ಮತ್ತೆ ವೇಗದಿಂದ ಬೆಳೆಯುತ್ತಿದೆ.

ಸೋವಿಯತ್ ಯುಗದಲ್ಲೇ ಐಸ್ ಹಾಕಿಯನ್ನು ಪರಿಚಯಿಸಲಾಗಿತ್ತಾದರೂ, ರಷ್ಯಾ ತಂಡ ಸ್ಪರ್ಧಿಸಿದ ಎಲ್ಲಾ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಶಿಪ್ ಗಳಲ್ಲಿ ಚಿನ್ನ ಗೆಲ್ಲುವುದರೊಂದಿಗೆ ಅಂತರರಾಷ್ಟ್ರೀಯವಾಗಿ ಪಾರಮ್ಯ ಸಾಧಿಸಿತ್ತು.ಸೋವಿಯತ್ ಒಕ್ಕೂಟ ವಿಭಜನೆಯಾದ ನಂತರ ರಷ್ಯಾಕ್ಕೆ 15 ವರ್ಷಗಳ ಕಾಲ ಚಿನ್ನ ಗೆಲ್ಲಲಾಗಲಿಲ್ಲ. ಇದರಿಂದಾಗಿ ಇತರ ಕ್ರೀಡೆಗಳಂತೆ ರಷ್ಯಾದ ಐಸ್ ಹಾಕಿಗೂ ಹಿನ್ನಡೆಯಾಗಿತ್ತು.ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ಮತ್ತೆ ಪ್ರಬಲ ಹಾಕಿ ಶಕ್ತಿಯಾಗಿ ಬೆಳೆಯುತ್ತಿದ್ದಾರೆ,2008 ಮತ್ತು 2009 ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಒಂದರ ಮೇಲೊಂದು ಚಿನ್ನದ ಪದಕ ಗೆದ್ದುಕೊಂಡು, ಐಸ್ ಹಾಕಿಯಲ್ಲಿ ಅಗ್ರ ಸ್ಥಾನದಲ್ಲಿದ್ದ ಕೆನಡಾವನ್ನು ಹಿಂದಿಕ್ಕಿದ್ದಾರೆ.

ಫಿಗರ್ ಸ್ಕೇಟಿಂಗ್ ಇನ್ನೊಂದು ಜನಪ್ರಿಯ ಕ್ರೀಡೆ; 1960ರಲ್ಲಿ, ಸೋವಿಯತ್ ಒಕ್ಕೂಟ ಫಿಗರ್ ಸ್ಕೇಟಿಂಗ್ ನಲ್ಲಿ, ಅದರಲ್ಲೂ ಜೋಡಿ ಸ್ಕೇಟಿಂಗ್ ಮತ್ತು ಐಸ್ ನೃತ್ಯದಲ್ಲಿ ಪ್ರಬಲ ಶಕ್ತಿಯಾಗಿ ಬೆಳೆಯಿತು. 1964ರಿಂದ ಈವರೆಗೆ ಪ್ರತಿ ಚಳಿಗಾಲದ ಒಲಿಂಪಿಕ್ ನಲ್ಲೂ, ಸೋವಿಯತ್ ಅಥವಾ ರಷ್ಯಾದ ಜೋಡಿಗಳು ಆಗಾಗ್ಗೆ ಚಿನ್ನವನ್ನು ಗೆಲ್ಲುತ್ತಾ ಬಂದಿದ್ದಾರೆ, ಆಧುನಿಕ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಅಜೇಯವಾಗಿ ಉಳಿದ ಹೆಗ್ಗಳಿಕೆಯೂ ಅವರದ್ದು.ಸೋವಿಯತ್ ಯುಗದ ಅಂತ್ಯವಾಗುತ್ತಿದ್ದಂತೆಯೇ, ಟೆನಿಸ್ ಕೂಡ ಜನಪ್ರಿಯಗೊಳ್ಳುತ್ತಾ ಬಂತು ಮತ್ತು ರಷ್ಯಾ ಸಾಕಷ್ಟು ಖ್ಯಾತ ಟೆನಿಸ್ ಆಟಗಾರರನ್ನು ಸೃಷ್ಟಿಸಿದೆ.ಹಿಂದಿನಿಂದಲೂ ಚೆಸ್ ಕೂಡ ಸಾಕಷ್ಟು ಪ್ರಸಿದ್ಧಿಯಲ್ಲಿತ್ತು; 1927ರಿಂದ ಸೋವಿಯತ್ ಮತ್ತು ರಷ್ಯಾದ ಚೆಸ್ ಗ್ರಾಂಡ್ ಮಾಸ್ಟರ್ ಗಳು ಸತತವಾಗಿ ವಿಶ್ವ ಚಾಂಪಿಯನ್ ಶಿಪ್ ಗೆದ್ದುಕೊಂಡಿದ್ದಾರೆ.

ರಷ್ಯಾ ವಿಶ್ವ ಹೆವಿವೈಟ್ ಚಾಂಪಿಯನ್ ಗಳ ಮನೆಯೂ ಹೌದು. ರಷ್ಯಾದ ಫೆಡರ್ ಎಮಿಲಿಯಾನೆಂಕೊ (Фёдор Владимирович Емельяненко)ಸುಮಾರು ದಶಕದ ಕಾಲ MMA(ಮಿಶ್ರ ಮಾರ್ಷಲ್ ಆರ್ಟ್ಸ್ )ಕಿರೀಟ ಧರಿಸಿದ್ದ ಮತ್ತು ಆತನಿಗೆ ಎಂಎಂಎ ಇತಿಹಾಸ ಕಂಡ ಅತ್ಯುತ್ತಮ ಹೋರಾಟಗಾರ ಎಂಬ ಖ್ಯಾತಿಯಿದೆ.ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿರುವ ಫೆಡರ್ ಪ್ರತಿಸ್ಪರ್ಧಿಗಳನ್ನು ಗೌರವಿಸುವುದಕ್ಕೂ ಹೆಸರುವಾಸಿ, 2008 ಬೀಜಿಂಗ್ ಬೇಸಿಗೆ ಒಲಂಪಿಕ್ಸ್ ನಲ್ಲಿ ದೇಶದ ಪರವಾಗಿ ಒಲಿಂಪಿಕ್ ಜ್ಯೋತಿಯನ್ನು ಕೊಂಡೊಯ್ಯಲು ಅವರನ್ನು ಕೇಳಿಕೊಳ್ಳಲಾಗಿತ್ತು.

ಜಾಗತಿಕ ನಿರ್ವಹಣೆ ಸವಾಲು

[ಬದಲಾಯಿಸಿ]

ಎಪ್ರಿಲ್ 2009 ರಂದು ಲಿಸ್ಬನ್ನಿನಲ್ಲಿ ನಡೆದ ಜಾಗತಿಕ ನಿರ್ವಹಣೆ ಸವಾಲು ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ವಿಜಯಿಯಾಗಿರುವ ರಷ್ಯಾ, ಜಾಗತಿಕ ನಿರ್ವಹಣೆ ಸವಾಲಿನಲ್ಲಿ ಹಾಲಿ ವಿಶ್ವ ಚಾಂಪಿಯನ್.

ಆಕರಗಳು

[ಬದಲಾಯಿಸಿ]
  1. 2002 census
  2. ೨.೦ ೨.೧ "The Russian federation: general characteristics". Archived from the original on 2003-10-21. Retrieved 2008-04-05. {{cite web}}: Text "Federal State Statistics Service" ignored (help)
  3. ೩.೦ ೩.೧ ೩.೨ "Demography". Federal State Statistics Service. Archived from the original on 2008-02-25. Retrieved 2008-03-05.
  4. "Russian Census of 2002". Federal State Statistics Service. Archived from the original on 2008-04-13. Retrieved 2008-04-05.
  5. ೫.೦ ೫.೧ ೫.೨ ೫.೩ "Russia". International Monetary Fund. Retrieved 2009-04-22.
  6. ೬.೦೦ ೬.೦೧ ೬.೦೨ ೬.೦೩ ೬.೦೪ ೬.೦೫ ೬.೦೬ ೬.೦೭ ೬.೦೮ ೬.೦೯ ೬.೧೦ The World Factbook. "CIA". Central Intelligence Agency. Archived from the original on 2015-07-03. Retrieved 2007-12-26.
  7. (Russian) "Russia allowed to register Internet domains in Cyrillic". Interfax. Retrieved 2008-07-20.
  8. "The Human Development Index—Going Beyond Income". Human Development Report 2007. United Nations Development Program. Archived from the original on 2008-02-01. Retrieved 2008-01-27.
  9. "The Constitution of the Russian Federation". (Article 1). Retrieved 2009-06-25.
  10. "The CIA World Fact Book, "Russia"". Archived from the original on 2015-07-03. Retrieved 2009-06-25.
  11. ೧೧.೦ ೧೧.೧ ೧೧.೨ ೧೧.೩ "Russia". Encyclopedia Britannica. Retrieved 2008-01-31.
  12. Microsoft Encarta Online Encyclopedia 2007. ""Russia"". Archived from the original on 2009-10-28. Retrieved 2007-12-26.{{cite web}}: CS1 maint: numeric names: authors list (link)
  13. ೧೩.೦ ೧೩.೧ Library of Congress. "Topography and Drainage". Retrieved 2007-12-26.
  14. ೧೪.೦ ೧೪.೧ ೧೪.೨ ಉಲ್ಲೇಖ ದೋಷ: Invalid <ref> tag; no text was provided for refs named Curtis
  15. ೧೫.೦ ೧೫.೧ "Country Profile: Russia". Foreign & Commonwealth Office of the United Kingdom. Archived from the original on 2008-04-08. Retrieved 2007-12-27.
  16. ೧೬.೦ ೧೬.೧ "Status of Nuclear Powers and Their Nuclear Capabilities". Federation of American Scientists. Retrieved 2007-12-27.
  17. ೧೭.೦ ೧೭.೧ ೧೭.೨ "Russia::Climate and vegetation". Encyclopædia Britannica. Retrieved 2007-07-03.[ಶಾಶ್ವತವಾಗಿ ಮಡಿದ ಕೊಂಡಿ]
  18. UNESCO World Heritage Centre. "Russian Federation". Retrieved 2007-12-27.
  19. The World Network of Biosphere Reserves — UNESCO. "Russian Federation". Retrieved 2007-12-26.
  20. Walsh, Nick Paton. "It's Europe's lungs and home to many rare species. But to Russia it's £100bn of wood". Guardian (UK). Retrieved 2007-12-26.
  21. Fish Industry of Russia — Production, Trade, Markets and Investment. Eurofish, Copenhagen, Denmark. August 2006. p. 211. Archived from the original on 2007-11-23. Retrieved 2007-12-26.{{cite book}}: CS1 maint: date and year (link)
  22. "Oil prices drive the cost of food". RIA Novosti. Retrieved 2008-02-22.
  23. "Lake Baikal—A Touchstone for Global Change and Rift Studies". United States Geological Survey. Retrieved 2007-12-26.
  24. "Lake Baikal". UNESCO World Heritage Centre. Retrieved 2007-12-26.
  25. "Angara River". Encyclopædia Britannica. 2007. Retrieved 2007-12-26.
  26. ೨೬.೦ ೨೬.೧ "Russian Federation: Country Brief". The World Bank. Archived from the original on 2007-10-22. Retrieved 2007-12-26.
  27. ೨೭.೦ ೨೭.೧ "Climate". Library Of Congress. Retrieved 2007-12-26.
  28. Drozdov, V. A.; Glezer, O. B.; Nefedova, T. G.; Shabdurasulov, I. V. (1992). "Ecological and Geographical Characteristics of the Coastal Zone of the Black Sea". GeoJournal. 27.2, pp. 169–178: Springer Netherlands. 27 (2): 169–178. doi:10.1007/BF00717701. ISSN 0343-2521. S2CID 128960702.{{cite journal}}: CS1 maint: location (link)[ಶಾಶ್ವತವಾಗಿ ಮಡಿದ ಕೊಂಡಿ]
  29. ೨೯.೦ ೨೯.೧ Belinskij, Andrej (March–April 1999). "The 'Princess' of Ipatovo". Archeology. 52 (2). Archived from the original on 2008-06-10. Retrieved 2007-12-26. {{cite journal}}: Unknown parameter |coauthors= ignored (|author= suggested) (help)
  30. Drews, Robert (2004). Early Riders: The beginnings of mounted warfare in Asia and Europe. New York: Routledge. p. 50.
  31. Koryakova, Dr. Ludmila. "Sintashta-Arkaim Culture". The Center for the Study of the Eurasian Nomads (CSEN). Archived from the original on 2019-02-28. Retrieved 2007-07-20.
  32. "1998 NOVA documentary: "Ice Mummies: Siberian Ice Maiden"". Transcript. Retrieved 2007-12-26.
  33. Jacobson, Esther (1995). The Art of the Scythians: The Interpenetration of Cultures at the Edge of the Hellenic World. p. 38: Brill. ISBN 9004098569.{{cite book}}: CS1 maint: location (link)
  34. Tsetskhladze, Gocha R. (1998). The Greek Colonisation of the Black Sea Area: Historical Interpretation of Archaeology. p. 48: F. Steiner. ISBN 3515073027.{{cite book}}: CS1 maint: location (link)
  35. Turchin, Peter (2003). Historical Dynamics: Why States Rise and Fall. pp. 185–186: Princeton University Press. ISBN 0691116695.{{cite book}}: CS1 maint: location (link)
  36. Christian, David (1998). A History of Russia, Central Asia and Mongolia. pp. 286–288: Blackwell Publishing. ISBN 0631208143.{{cite book}}: CS1 maint: location (link)
  37. For a discussion of the origins of Slavs, see Barford, Paul M. (2001). The Early Slavs. pp. 15–16: Cornell University Press. ISBN 0801439779.{{cite book}}: CS1 maint: location (link)
  38. ೩೮.೦ ೩೮.೧ Christian, David (1998). A History of Russia, Central Asia and Mongolia. pp. 6–7: Blackwell Publishing.{{cite book}}: CS1 maint: location (link)
  39. Paszkiewicz, Henry K (1963). The Making of the Russian Nation. p. 262: Darton, Longman & Todd.{{cite book}}: CS1 maint: location (link)
  40. McKitterick, Rosamond (1995). The New Cambridge Medieval History. p. 497: Cambridge University Press. ISBN 0521364477.{{cite book}}: CS1 maint: location (link)
  41. Mongaĭt, Aleksandr Lʹvovich (1959). Archeology in the U.S.S.R. p. 335: Foreign Languages Publishing House.{{cite book}}: CS1 maint: location (link)
  42. See, for instance. "Viking (Varangian) Oleg". Encyclopaedia Britannica. Retrieved 2007-12-27.
  43. Obolensky, Dimitri (1994). Byzantium and the Slavs. p. 42: St Vladimir's Seminary Press. ISBN 088141008X.{{cite book}}: CS1 maint: location (link)
  44. Thompson, James Westfall (1937). An Introduction to Medieval Europe, 300–1500. p. 268: W. W. Norton & Co. ISBN 0415346991. {{cite book}}: Unknown parameter |coauthors= ignored (|author= suggested) (help)CS1 maint: location (link)
  45. Christian, David (1998). A History of Russia, Central Asia and Mongolia. p. 343: Blackwell Publishing. ISBN 0631208143.{{cite book}}: CS1 maint: location (link)
  46. "Ukraine: Security Assistance". U.S. Department of State. Retrieved 2007-12-27.
  47. Klyuchevsky, Vasily (1987). The course of the Russian history. v.1: "Myslʹ. ISBN 5-244-00072-1.{{cite book}}: CS1 maint: location (link)
  48. "ರಷ್ಯಾದ ಇತಿಹಾಸ - ಶುರುವಿನ ಸ್ಲಾವ್ಸ್ ಇತಿಹಾಸ ಮತ್ತು ಕಿವಾನ್‌ ರುಸ್‌ ಇಂದ ರೊಮನೊವ್ಸ್ ವಂಶಾವಳಿಯ ವರೆಗೆ". Archived from the original on 2018-02-01. Retrieved 2009-08-19.
  49. Рыбаков, Б. А. (1948). Ремесло Древней Руси. с.525–533,780–781.{{cite book}}: CS1 maint: location (link) CS1 maint: location missing publisher (link)
  50. Hamm, Michael Franklin (1995). Kiev: A Portrait, 1800–1917. Princeton University Press. ISBN 0691025851.
  51. nHeritage/4.PEAS/4.L/12.III.5.html ಕಿಯೆವ್‌ನ ನಿರ್ಮೂಲನೆ
  52. May, Dr. Timothy. "Khanate of the Golden Horde". Archived from the original on 2008-06-07. Retrieved 2007-12-27.
  53. Solovyov, Sergey (2001). History of Russia from the Earliest Times. pp.562–604, volume 6: AST. ISBN 5170021429.{{cite book}}: CS1 maint: location (link)
  54. Skrynnikov, R. (1981). Ivan the Terrible. p.58: Academic Intl Pr (March 1981). p. 219. ISBN 0875690394.{{cite book}}: CS1 maint: location (link)
  55. Solovyov, Sergey (2001). History of Russia from the Earliest Times. v.6, pp.751–908: AST. ISBN 5170021429.{{cite book}}: CS1 maint: location (link)
  56. ಬೊರಿಸೆನ್ಕೊವ್ ಇ, ಪಾಸೆಟ್ಸ್ಕಿ ವಿ. ಸಾವಿರ ವರ್ಷಗಳ ತೀವ್ರವಾದ ಉಲ್ಕಾಶಾಸ್ತ್ರ ವಿದ್ಯಮಾನಗಳ ಬಖೈರು. ISBN 5-244-00212-0, p.190
  57. Solovyov, Sergey (2001). History of Russia from the Earliest Times. v.6, pp.751–809: AST. ISBN 5170021429.{{cite book}}: CS1 maint: location (link)
  58. ಕ್ರಿಮಿಯನ್ ಟಾಟರ್‌ಗಳು ಮತ್ತು ಅವರ ರಷ್ಯನ್-ಬಂದಿ ಗುಲಾಮರು Archived 2013-01-15 ವೇಬ್ಯಾಕ್ ಮೆಷಿನ್ ನಲ್ಲಿ.. ಈಜೊ ಮಟ್ಸುಕಿ, ಹಿಟೊಟ್ಸುಬಷಿ ವಿಶ್ವವಿದ್ಯಾನಿಲಯದಲ್ಲಿನ ಮೆಡಿಟರೆನಿಯನ್ ಅಧ್ಯಯನ ಸಮೂಹ.
  59. 1558-1596 ನಡುವೆ ಮುಸ್ಕೊವೀ ಪ್ರಾಂತ್ಯಗಳೊಳಗೆ ಸುಮಾರು ಮೂವತ್ತು ಪ್ರಮುಖ ಟಾಟರ್ ಧಾಳಿಗಳನ್ನು ದಾಖಲಿಸಲಾದವುhttp://coursesa.matrix.msu.edu/~fisher/hst373/readings/inalcik6.html Archived 2017-05-04 ವೇಬ್ಯಾಕ್ ಮೆಷಿನ್ ನಲ್ಲಿ..
  60. ಎಲ್ಲಾ ಬೇಸಿಗೆಯ ತಿಂಗಳುಗಳಲ್ಲಿಯೂ ಇರುಳಿನ ತೀವ್ರ ಶೀತಲ ಹವಾಮಾನದ ಕಾರಣ ಫಸಲುಗಳು ಹಾಳಾದವು. ಬೊರಿಸೆನ್ಕೊವ್ ಇ, ಪಾಸೆಟ್ಸ್ಕಿ ವಿ. ಸಾವಿರ ವರ್ಷಗಳ ತೀವ್ರವಾದ ಉಲ್ಕಾಶಾಸ್ತ್ರ ವಿದ್ಯಮಾನಗಳ ಬಖೈರು. ISBN 5-244-00212-0, p.190
  61. Solovyov, Sergey (2001). History of Russia from the Earliest Times. v.7, pp.461–568: AST. ISBN 5170021429.{{cite book}}: CS1 maint: location (link)
  62. Solovyov, Sergey (2001). History of Russia from the Earliest Times. v.9, ch.1: AST. ISBN 5170021429. Retrieved 2007-12-27.{{cite book}}: CS1 maint: location (link)
  63. Solovyov, Sergey (2001). History of Russia from the Earliest Times. v.15, ch.1: AST.{{cite book}}: CS1 maint: location (link)
  64. "Ruling the Empire". Library of Congress. Retrieved 2007-12-27.
  65. [136] ^ ಅಂತರರಾಷ್ಟ್ರೀಯ ಮಾನವೀಯತಾ ಸಹಕಾರದ ಇತಿಹಾಸ Archived 2019-10-11 ವೇಬ್ಯಾಕ್ ಮೆಷಿನ್ ನಲ್ಲಿ.
  66. ೧೮೩೨ ಇಸವಿಯಲ್ಲಿ ನ್ಯೂಯಾರ್ಕ್ ರಾಜ್ಯದಲ್ಲಿ ಕಾಲರಾ ಸಾಂಕ್ರಾಮಿಕ, ಜಿ. ವಿಲಿಯಮ್ ಬಿಯರ್ಡ್ಸ್‌ಲೀ ಇಂದ
  67. ರಷ್ಯಾದಲ್ಲಿ ಕ್ಷಾಮ: 1921ರ ಗುಪ್ತ ದಿಗಿಲು Archived 2010-07-19 ವೇಬ್ಯಾಕ್ ಮೆಷಿನ್ ನಲ್ಲಿ., ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿ
  68. "World War II". Encyclopædia Britannica. Retrieved 2008-03-09.
  69. "Reconstruction and Cold War". Library of Congress. Retrieved 2007-12-27.
  70. ಉಲ್ಲೇಖ ದೋಷ: Invalid <ref> tag; no text was provided for refs named OECD
  71. "Russia pays off USSR's entire debt, sets to become crediting country". Pravda.ru. Retrieved 2007-12-27.
  72. Sokolov, Vsevolod (Spring 2004). "From Guns to Briefcases: The Evolution of Russian Organized Crime". World Policy Journal. XXI (1). Archived from the original on 2009-02-19.
  73. Treisman, Daniel. "Is Russia's Experiment with Democracy Over?". UCLA International Institute. Archived from the original on 2004-11-11. Retrieved 2007-12-31.
  74. Stone, Norman. "No wonder they like Putin". The Times. Archived from the original on 2010-05-25. Retrieved 2007-12-31.
  75. "The Constitution of the Russian Federation". (Article 80, para. 1). Retrieved 2007-12-27.
  76. "The Constitution of the Russian Federation". (Article 81, para. 1). Retrieved 2007-12-27.
  77. "The Constitution of the Russian Federation". (Article 81, para. 3). Retrieved 2007-12-27.
  78. "The Constitution of the Russian Federation". (Article 95, para. 3). Retrieved 2007-12-27.
  79. "The Constitution of the Russian Federation". (Article 65, para. 1) In 1993, when the Constitution was adopted, there were 89 subjects listed. Some of them were later merged. Retrieved 2007-12-27.
  80. "The Constitution of the Russian Federation". (Article 95, para.2). Retrieved 2007-12-27.
  81. "Общероссийский классификатор экономических регионов" (ОК 024–95) введённый 1 января 1997 г., в ред. Изменения № 05/2001. Секция I. Федеральные округа (ರಷ್ಯಾದ ಆರ್ಥಿಕ ವಲಯಗಳ ವಿಂಗಡನೆ (OK 024–95) 1 ಜನವರಿ 1997ರಂದು ತಿದ್ದುಪಡಿಯಡಿ, ತಿದ್ದುಪಡಿ #1/1998 ರಿಂದ #5/2001. ವಿಭಾಗ I. ಸಂಯುಕ್ತ ಜಿಲ್ಲೆಗಳು)
  82. ""News From Russia", Issue No. 4". The Embassy of the Russian Federation in the Republic of India. Archived from the original on 2004-12-27. Retrieved 2007-12-27.[ಮಡಿದ ಕೊಂಡಿ]
  83. Kosachev, Konstantin. "Russian Foreign Policy Vertical". Russia In Global Affairs. Archived from the original on 2008-01-21. Retrieved 2007-12-27.
  84. (Russian) "Interview of official Ambassador of Russian Foreign Ministry on relations with the EU". RIA Novosti. Retrieved 2008-06-30.
  85. "NATO-Russia relations". NATO. Archived from the original on 2007-04-11. Retrieved 2007-12-27.
  86. "Chapter 2—Investing In Russian Defense Conversion: Obstacles and Opportunities". Federation of American Scientists. Retrieved 2007-12-27.
  87. ೮೭.೦ ೮೭.೧ "Overview of the major Asian Powers (page 31)" (PDF). International Institute for Strategic Studies. Archived from the original (PDF) on 2018-12-26. Retrieved 2008-01-27.
  88. "US drives world military spending to record high". Australian Broadcasting Corporation. Archived from the original on 2006-06-13. Retrieved 2007-12-27.
  89. "Russia arms exports could exceed $7 bln in 2007 - Ivanov". RIA Novosti. Retrieved 2008-01-27.
  90. Russia: Assessment, Adam Baltin Interview, Opinion Poll on State of Armed Forces, FBIS: Informatsionno-Analiticheskoye Agentstvo Marketing i Konsalting, 14 March 2006
  91. "Russian defense spending to grow 20% in 2008, to $40 bln". RIA Novosti. Retrieved 2008-03-13.
  92. "Rice: Russia's Military Moves 'a Problem'". ABC News. Retrieved 2008-01-06.
  93. "World Wide Military Expenditures". Global Security. Retrieved 2008-01-06.
  94. "Big rise in Russian military spending raises fears of new challenge to west". Guardian. Retrieved 2008-01-06.
  95. ೯೫.೦ ೯೫.೧ ೯೫.೨ Ruslan, Pukhov (2009). "Serdyukov Cleans Up the Arbat". Moscow Defense Brief. Centre for Analysis of Strategies and Technologies (#1 (15) / 2009). Archived from the original on 2008-08-18. Retrieved 2009-05-19.
  96. Barabanov, Mikhail (2009-02-16). "The Army's Chief Destroyer". The Moscow Times. Retrieved 2009-05-19.
  97. ೯೭.೦ ೯೭.೧ Whewell, Tim (2009-03-17). "INSIDE RUSSIA - MILITARY REFORMS". BBC News. Retrieved 2009-05-19.
  98. “ಸಂಕ್ರಮಣದಲ್ಲಿರುವ ಆರ್ಥಿಕತೆಗಳು ಮೊದಲ ಹತ್ತು ವರ್ಷಗಳಿಂದ ಏನನ್ನು ಕಲಿಯಬಹುದು?ಹೊಸ ವಿಶ್ವ ಬ್ಯಾಂಕ್ ವರದಿ,” Transition Newsletter ನಲ್ಲಿ (http://worldbank.org/transitionnewsletter/janfeb2002). http://www.k-a.kg/?nid=5&value=6
  99. ೯೯.೦ ೯೯.೧ ರಾಬರ್ಟ್ ಡಿ. ಕಾಪ್ಲಾನ್. "ರಷ್ಯಾವನ್ನು ಕಳೆದುಕೊಂಡವರಾರು?". ದಿ ನ್ಯೂ ಯಾರ್ಕ್ ಟೈಮ್ಸ್. 8 ಅಕ್ಟೋಬರ್ 2000.
  100. "Russians weigh an enigma with Putin's protégé". MSNBC. Retrieved 2008-05-09.
  101. ೧೦೧.೦ ೧೦೧.೧ "Russia's economy under Vladimir Putin: achievements and failures". RIA Novosti. Retrieved 2008-05-09.
  102. ಉಲ್ಲೇಖ ದೋಷ: Invalid <ref> tag; no text was provided for refs named worldbank
  103. "Russia's unemployment rate down 10% in 2007 - report". RIA Novosti. Retrieved 2008-05-09.
  104. "Russia — Unemployment rate (%)". indexmundi.com. Retrieved 2008-05-09.
  105. "Russia fixed asset investment to reach $370 bln by 2010 - Kudrin". RIA Novosti. Retrieved 2007-12-27.
  106. "Russia: How Long Can The Fun Last?". BusinessWeek. Retrieved 2007-12-27.
  107. "CEE Biweekly (page 6)" (PDF). UNESCO Institute for Statistics, UniCredit New Europe Research Network. Archived from the original (PDF) on 2008-04-02. Retrieved 2008-03-28.
  108. Tavernise, Sabrina (23 March 2002). "Russia Imposes Flat Tax on Income, and Its Coffers Swell". The New York Times. Retrieved 2007-12-27.
  109. Rabushka, Alvin. "The Flat Tax at Work in Russia: Year Three". Hoover Institution. Archived from the original on 2008-01-25. Retrieved 2007-12-27.
  110. "Global personal taxation comparison survey – market rankings". Mercer (consulting firms). Archived from the original on 2011-04-27. Retrieved 2007-12-27.
  111. "International Reserves of the Russian Federation in 2008". The Central Bank of the Russian Federation. Retrieved 2008-07-30.
  112. "Russia's foreign debt down 31.3% in Q3—finance ministry". RIA Novosti. Retrieved 2007-12-27.
  113. (Russian) "Gross regional product by federal subjects of the Russian Federation 1998–2006". Federal State Statistics Service. Archived from the original on 2019-08-27. Retrieved 2008-06-30.
  114. "Russia: How Long Can The Fun Last?". BusinessWeek. Retrieved 2007-12-27.
  115. Robin Paxton. "A billion dollars not enough for Russian rich list". Forbes. Retrieved 2008-04-19.
  116. Lipsky, John. "Statement by John Lipsky, First Deputy Managing Director of the International Monetary Fund". Press Release No. 07/126. International Monetary Fund. Retrieved 2007-12-27.
  117. "Meeting Russia's Infrastructure Gap". The World Bank. Archived from the original on 2008-06-16. Retrieved 2008-07-31.
  118. "Russia to invest $1 trillion in infrastructure by 2020 - ministry". RIA Novosti. Retrieved 2008-07-31.
  119. "Russian Census of 2002". 4.1. National composition of population. Federal State Statistics Service. Archived from the original on 2020-06-22. Retrieved 2008-01-16.
  120. "1 June 2007: A great number of children in Russia remain highly vulnerable". United Nations Children's Fund. Archived from the original on 2008-01-03. Retrieved 2007-12-27.
  121. ಜನಸಂಖ್ಯಾ ಸಾಂಧ್ರತೆಯ ಪ್ರಕಾರ ದೇಶಗಳ ಪಟ್ಟಿ ನೋಡಿ.
  122. ೧೨೨.೦ ೧೨೨.೧ ೧೨೨.೨ ೧೨೨.೩ ಉಲ್ಲೇಖ ದೋಷ: Invalid <ref> tag; no text was provided for refs named gks
  123. "Russia cracking down on illegal migrants". International Herald Tribune. 15 January 2007. Archived from the original on 15 September 2008.
  124. ರಷ್ಯಾದಲ್ಲಿನ ಜನಾಂಗೀಯ ಸಮೂಹಗಳು , 2002 ಜನಗಣತಿ, ಡೆಮೊಸ್ಕೋಪ್ ವೀಕ್ಲಿ . ಪುನರ್ಪಡೆದದ್ದು 5 ಫೆಬ್ರುವರಿ 2009
  125. ಮಧ್ಯ ಏಷ್ಯಾದಲ್ಲಿ ಹಿಂದುಳಿದ ರಷ್ಯನ್ನರು, BBC ವಾರ್ತೆಗಳು, 23 ನವೆಂಬರ್ 2005.
  126. "Resident population". Federal State Statistics Service. Archived from the original on 2012-03-03. Retrieved 2007-12-27.
  127. "Demographics". Library of Congress. Retrieved 2008-01-16.
  128. "Russia's population down 0.17% in 2007 to 142 mln". RIA Novosti. Retrieved 2008-03-11.
  129. The World Factbook. "Rank Order — Birth rate". Central Intelligence Agency. Archived from the original on 2013-03-09. Retrieved 2009-04-25.
  130. The World Factbook. "Rank Order — Death rate". Central Intelligence Agency. Archived from the original on 2018-07-05. Retrieved 2009-04-25.
  131. "Russia's birth, mortality rates to equal by 2011 - ministry". RIA Novosti. Retrieved 2008-02-10.
  132. Cities with over 1 million population Rosstat
  133. Cities with population between 500,000 and 1 million Rosstat
  134. "The Constitution of the Russian Federation". (Article 43 para. 1). Retrieved 2007-12-27.
  135. Smolentseva, Anna. "Bridging the Gap Between Higher and Secondary Education in Russia". Archived from the original on 2007-11-23. Retrieved 2007-12-27.
  136. "Russia Country Guide". EUbusiness.com. Retrieved 2007-12-27.
  137. "Background Note: Russia". U.S. Department of State. Retrieved 2008-01-02.
  138. "The Constitution of the Russian Federation". (Article 43 para. 3). Retrieved 2007-12-27.
  139. ೧೩೯.೦ ೧೩೯.೧ "Higher education structure". State University Higher School of Economics. Retrieved 2007-12-27.
  140. "Higher Education Institutions". Federal State Statistics Service. Archived from the original on 2008-02-29. Retrieved 2008-01-01.
  141. "The Constitution of the Russian Federation". (Article 41). Retrieved 2007-12-27.
  142. "Russian ombudsman about propiska restrictions in modern Russia". Retrieved 2008-07-23.
  143. "Residency Restrictions in Moscow by Brad K. Blitz" (PDF). Archived from the original (PDF) on 2011-07-16. Retrieved 2008-07-23.
  144. "Highlights on Health in the Russian Federation" (PDF). World Health Organization. November 1999. Archived from the original (PDF) on 2007-07-29. Retrieved 2007-12-27.{{cite web}}: CS1 maint: date and year (link)
  145. Leonard, William R (April 2002). "Declining growth status of indigenous Siberian children in post-Soviet Russia". Human Biology. 74 (2): 197–209. doi:10.1353/hub.2002.0023. PMID 12030649. S2CID 19515028. Archived from the original on 2013-06-04. Retrieved 2007-12-27.{{cite journal}}: CS1 maint: date and year (link)
  146. "Продолжительность жизни россиян возросла с 2005 по 2007 г на 2,4 года, до 67,7 года". United Russia. Archived from the original on 2010-02-01. Retrieved 2008-05-01.
  147. "European Union". Central Intelligence Agency. Archived from the original on 2020-06-11. Retrieved 2008-01-20.
  148. ೧೪೮.೦ ೧೪೮.೧ "Heart disease kills 1.3 million annually in Russia — chief cardiologist". RIA Novosti. Retrieved 2007-12-27.
  149. "Corruption Pervades Russia's Health System". CBS News. Archived from the original on 2007-12-21. Retrieved 2007-12-27.
  150. "Third of Russians smoke, but half welcome public smoking ban". RIA Novosti. Retrieved 2007-12-27.
  151. "HIV/AIDS in the Russian Federation". The World Bank. Archived from the original on 2010-04-13. Retrieved 2007-12-27.
  152. "Russian regional HIV vaccine center seeks $40–50 mln from budget". RIA Novosti. Retrieved 2007-12-27.
  153. "Russian Federation". UNAIDS: The Joint United Nations Programme on HIV/AIDS. Archived from Russian Federation AIDS information the original on 2008-04-09. Retrieved 2008-03-11. {{cite web}}: Check |url= value (help)
  154. "119,000 TB cases in Russia — health official". RIA Novosti. Retrieved 2007-12-27.
  155. [393] ^ ಬರ್ಲಿಂಗ್ಟನ್ ಮುಕ್ತ ಪ್ರೆಸ್‌, 26 ಜೂನ್ 2009, ಪುಟ 2A, "ರಷ್ಯಾದಲ್ಲಿ ಅರ್ಧದಷ್ಟು ಸಾವುಗಳ ಕಾರಣಕ್ಕೆ ಕುಡಿತ ಕಾರಣ-ಆಧ್ಯಯನ"
  156. "Country Profile: Russia" (PDF). Library of Congress—Federal Research Division. October 2006. Archived from the original (PDF) on 2005-02-26. Retrieved 2007-12-27.{{cite web}}: CS1 maint: date and year (link)
  157. "Russian policies ignite unprecedented birth rate in 2007". The Economic Times. Retrieved 2008-03-11.
  158. "United Nations Expert Group Meeting On International Migration and Development" (PDF). Population Division; Department of Economic and Social Affairs; United Nations Secretariat. 6–8 July 2005. Retrieved 2007-12-27.
  159. "Russian Census of 2002". 4.3. Population by nationalities and knowledge of Russian; 4.4. Spreading of knowledge of languages (except Russian). Federal State Statistics Service. Archived from the original on 2020-06-22. Retrieved 2008-01-16.
  160. "The Constitution of the Russian Federation". (Article 68, para. 2). Retrieved 2007-12-27.
  161. "Russian". University of Toronto. Archived from the original on 2007-01-06. Retrieved 2007-12-27.
  162. Microsoft Encarta Online Encyclopedia 2007. "Russian language". Archived from the original on 2007-12-16. Retrieved 2007-12-27.{{cite web}}: CS1 maint: numeric names: authors list (link)
  163. "Russian language course". Russian Language Centre — Official Website, Moscow State University. Archived from the original on 2016-02-05. Retrieved 2007-12-27.
  164. Bell, Imogen. Eastern Europe, Russia and Central Asia. ISBN 9781857431377. Retrieved 2007-12-27.
  165. Zuckerman, Phil (2005). Atheism: Contemporary Rates and Patterns, chapter in The Cambridge Companion to Atheism, ed. by Michael Martin. Cambridge University Press.
  166. "Religion In Russia". Embassy of the Russian Federation. Archived from the original on 2001-02-08. Retrieved 2007-12-27.
  167. "(Russian)[[ವರ್ಗ:Articles with Russian-language external links]] Сведения о религиозных организациях, зарегистрированных в Российской Федерации По данным Федеральной регистрационной службы". December 2006. Archived from the original on 2009-03-25. Retrieved 2007-12-27. {{cite web}}: URL–wikilink conflict (help)
  168. ೧೬೮.೦ ೧೬೮.೧ Microsoft Encarta Online Encyclopedia 2007. "Russia". Archived from the original on 2008-01-09. Retrieved 2007-12-27.{{cite web}}: CS1 maint: numeric names: authors list (link)
  169. "Russia". Retrieved 2008-04-08.
  170. "(Russian)[[ವರ್ಗ:Articles with Russian-language external links]] Опубликована подробная сравнительная статистика религиозности в России и Польше". religare.ru. 6 June 2007. Archived from the original on 2018-12-25. Retrieved 2007-12-27. {{cite web}}: URL–wikilink conflict (help)
  171. "Fact Box: Muslims In Russia". Radio Free Europe. Retrieved 2007-12-27.[ಶಾಶ್ವತವಾಗಿ ಮಡಿದ ಕೊಂಡಿ]
  172. Page, Jeremy. "The rise of Russian Muslims worries Orthodox Church". The Times. Archived from the original on 2011-08-11. Retrieved 2007-12-27.
  173. "20Mln Muslims in Russia and mass conversion of ethnic Russians are myths — expert". Interfax. Retrieved 2008-04-01.
  174. "Russia's Islamic rebirth adds tension". Financial Times. Archived from the original on 2007-11-21. Retrieved 2007-12-27.
  175. ಜನಸಂಖ್ಯೆ ಸಂದಿಗ್ಧತೆ ಎದುರಿಸುತ್ತಿರುವ ರಷ್ಯಾ, VOA ವಾರ್ತೆಗಳು, 18 ಜೂನ್ 2007
  176. Mainville, Michael (19 November 2006). "Russia has a Muslim dilemma". Page A - 17. San Francisco Chronicle. Archived from the original on 2012-05-13. Retrieved 2007-12-27.
  177. Nettleton, Steve. "Prayers for Ivolginsky". CNN. Archived from the original on 2001-11-22. Retrieved 2007-12-27.
  178. "Russia::Religion". Encyclopædia Britannica Online. 2007. Retrieved 2007-12-27.
  179. Garafola, Lynn (1989). Diaghilev's Ballets Russes. Oxford University Press. p. 576. ISBN 0195057015.
  180. "A Tale of Two Operas". Petersburg City. Retrieved 2008-01-11.
  181. Microsoft Encarta Online Encyclopedia 2007. "Russian Literature". Archived from the original on 2009-08-20. Retrieved 2008-01-07.{{cite web}}: CS1 maint: numeric names: authors list (link)
  182. Kelly, Catriona (2001). Russian Literature: A Very Short Introduction (Very Short Introductions) (Paperback). Oxford Paperbacks. ISBN 0192801449.
  183. "Russian literature; Leo Tolstoy". Encyclopedia Britannica. Retrieved 2008-04-11.
  184. Otto Friedrich. "Freaking-Out with Fyodor". Time Magazine. Archived from the original on 2012-11-03. Retrieved 2008-04-10.
  185. "History of the motion picture: The Soviet Union". Encyclopædia Britannica. Retrieved 2008-01-07.
  186. ೧೮೬.೦ ೧೮೬.೧ "Russia::Motion pictures". Encyclopædia Britannica. 2007. Retrieved 2007-12-27.
  187. ೧೮೭.೦ ೧೮೭.೧ Dzieciolowski, Z. "Kinoeye: Russia's reviving film industry". Archived from the original on 2007-12-21. Retrieved 2007-12-27.
  188. "Russian Entertainment & Media Industry worth $27.9 bn by 2011". PricewaterhouseCoopers. Archived from the original on 2007-09-26. Retrieved 2007-12-27.

ಹೊರಗಿನ ಕೊಂಡಿಗಳು

[ಬದಲಾಯಿಸಿ]
ಇತರೆ

pnt:Ρουσία

"https://kn.wikipedia.org/w/index.php?title=ರಷ್ಯಾ&oldid=1246182" ಇಂದ ಪಡೆಯಲ್ಪಟ್ಟಿದೆ