ರಾಷ್ಟ್ರೀಯ ಉತ್ಪನ್ನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ವಿವಿಧ ದೇಶಗಳ ತಲಾ ಒಬ್ಬರ ರಾಷ್ಟ್ರೀಯ ಉತ್ಪನ್ನವನ್ನು ತೋರಿಸುವ ಚಿತ್ರ

ರಾಷ್ಟ್ರೀಯ ಉತ್ಪನ್ನ (GDP) ಒಂದು ದೇಶದ ಅರ್ಥವ್ಯವಸ್ಥೆಯನ್ನು ಅಳೆಯುವ ಒಂದು ಮಾಪನ. ಆ ದೇಶದಲ್ಲಿ ಒಂದು ವರ್ಷದಲ್ಲಿ ಉತ್ಪನ್ನವಾಗುವ ಎಲ್ಲಾ ಸರಕುಗಳ ಮತ್ತು ಆರ್ಥಿಕ ಅನುಕೂಲಗಳ ಒಟ್ಟು ಮಾರುಕಟ್ಟೆಯ ಬೆಲೆಯು ಅದರ ರಾಷ್ಟ್ರೀಯ ಉತ್ಪನ್ನವಾಗುತ್ತದೆ. ಈ ಉತ್ಪನ್ನವನ್ನು ಆ ರಾಷ್ಟ್ರದ ಜನಸಂಖ್ಯೆಯಿಂದ ಭಾಗಿಸಿದರೆ, ಆ ಮಾಪನವನ್ನು ತಲಾ ರಾಷ್ಟ್ರೀಯ ಉತ್ಪನ್ನ ಎಂದು ಕರೆಯಲಾಗುತ್ತದೆ.[೧] ಅಥವಾ ಒಂದು ನಿರ್ದಿಷ್ಟ ಅವಧಿಯಲ್ಲಿ ದೇಶದ ಜನರ ಒಟ್ಟು ಆದಾಯ ಹಾಗೂ ಉತ್ಪಾದನೆ (ಸರಕು),ಉದ್ಯೋಗದ ಅಥವಾ ಸೇವಾಕ್ಷೇತ್ರದ ಮಾರುಕಟ್ಟೆ ಮೌಲ್ಯಾದಾಯ ಎಲ್ಲದರ ಒಟ್ಟು ಮೌಲ್ಯವೇ- ಜಿಡಿಪಿ(Gross domestic product- GDP)[೨]

ಅಳೆಯುವ ವಿಧಾನ[ಬದಲಾಯಿಸಿ]

  • ಸಾಧಾರಣವಾಗಿ ರಾಷ್ಟ್ರೀಯ ಉತ್ಪನ್ನವನ್ನು ಖರ್ಚುಗಳ ಮೂಲಕ ಅಳೆಯಲಾಗುತ್ತದೆ
ರಾಷ್ಟ್ರೀಯ ಉತ್ಪನ್ನ = ಬಳಕೆ + ಬಂಡವಾಳ ಹೂಡಿಕೆ + ಸರ್ಕಾರಿ ವೆಚ್ಚ + (ರಫ್ತುಗಳು − ಆಮದುಗಳು)
  • ಬಳಕೆ ಎಂಬುದು ದೇಶದ ಜನರು ತಮ್ಮ ದಿನನಿತ್ಯದ ಜೀವನಕ್ಕಾಗಿ ಉಪಯೋಗಿಸುವ ಸಾಮಗ್ರಿಗಳು ಮತ್ತು ಅನುಕೂಲಗಳನ್ನು ಒಳಗೊಳ್ಳುತ್ತದೆ. ಆಹಾರ, ಬಾಡಿಗೆ, ವೈದ್ಯಕೀಯ ವೆಚ್ಚಗಳು ಇತ್ಯಾದಿ ಇದರಲ್ಲಿ ಸೇರುತ್ತದೆ.
  • ಬಂಡವಾಳ ಹೂಡಿಕೆ ಉದ್ಯಮಗಳು ತಮ್ಮ ಕೆಲಸಗಳಿಗಾಗಿ ಉಪಯೋಗಿಸುವ ವೆಚ್ಚ. ಉದಾಹರಣೆಗೆ ಉದ್ಯಮವು ಯಂತ್ರಗಳನ್ನು ಅಥವಾ ತಂತ್ರಾಂಶಗಳನ್ನು ಕೊಳ್ಳಲು ಹೂಡುವ ಬಂಡವಾಳ. ಆರ್ಥಿಕ ಬಂಡವಾಳ ಹೂಡಿಕೆ (ಉದಾ. ಶೇರ್ಗಳ ಕೊಳ್ಳುವಿಕೆ) ಇದರಲ್ಲಿ ಸೇರುವುದಿಲ್ಲ.
  • ಸರ್ಕಾರಿ ವೆಚ್ಚ ಎಲ್ಲಾ ಸರ್ಕಾರಿ ವೆಚ್ಚಗಳನ್ನು ಒಳಗೊಳ್ಳುತ್ತದೆ. ತನ್ನ ಕೆಲಸಗಾರರ ವೇತನಗಳು, ಸೇನೆಗಾಗಿ ಕೊಳ್ಳುವ ಶಸ್ತ್ರಾಸ್ತ್ರಗಳು, ಇತ್ಯಾದಿ.
  • ರಫ್ತುಗಳು ದೇಶದಿಂದ ಹೊರಹೊಯ್ಯುವ ಸಂಪತ್ತನ್ನು ಉತ್ಪನ್ನದಿಂದ ತಗೆಯಲಾಗುತ್ತದೆ.
  • ಆಮದುಗಳು ದೇಶಕ್ಕೆ ತರುವ ಸಂಪತ್ತನ್ನೂ ಇದಕ್ಕೆ ಸೇರಿಸಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]