ವಿಷಯಕ್ಕೆ ಹೋಗು

ಕೀವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೀವ್
  • ಯುಕ್ರೇನಿನ ಭಾಷೆ: Київ (Kyiv)
  • ರಷ್ಯಾದ ಭಾಷೆ: Киев (Kiev)
From upper left: Golden Gate, Red University Building, Kiev Pechersk Lavra, St Andrew's Church, Berehynia on Maidan Nezalezhnosti and statue of Bohdan Khmelnytsky
Flag of ಕೀವ್
Coat of arms of ಕೀವ್
Map
Countryಉಕ್ರೇನ್
MunicipalityKiev City Municipality
Founded482 A.D. (officially)[]
City councilKiev City Council
Government
  Mayorವಿಟಾಲಿ ಕ್ಲಿಟ್ಸ್ಕೊ
  Head of City State Administrationವಿಟಾಲಿ ಕ್ಲಿಟ್ಸ್ಕೊ
Area
  City
೮೩೯ km2 (೩೨೪ sq mi)
Elevation
೧೭೯ m (೫೮೭ ft)
Population
 (15 July 2013)
  City
೨೮೪೭೨೦೦[]
  Density೩,೨೯೯/km2 (೮೫೪೦/sq mi)
  Metro
೩.೨೭೫.೦೦೦[]of the Kiev metropolitan area
DemonymKievan[]
Time zoneUTC+2 (EET)
  Summer (DST)UTC+3 (EEST)
Postal code
01xxx-04xxx
Area code+380 44
License plateAA (before 2004: КА, КВ, КЕ, КН, КІ, KT)
Websitekievcity.gov.ua


ಕೀವ್ (ಆಂಗ್ಲ:Kyiv; ಹಳೆಯ ಹೆಸರು: Kiev) ಉಕ್ರೇನ್ ದೇಶದ ರಾಜಧಾನಿ.ಇದು ಯುರೋಪಿನ ಎಂಟನೆಯ ದೊಡ್ಡ ನಗರವಾಗಿದೆ.

ಆಕರ್ಷಕ ನಗರ

[ಬದಲಾಯಿಸಿ]

ಉಕ್ರೇನಿಯನ್ ಸೋವಿಯತ್ ಸಮಾವಾದಿ ಗಣರಾಜ್ಯದ ರಾಜಧಾನಿ; ಅದೇ ಹೆಸರಿನ ಆಡಳಿತ ವಿಭಾಗದ (ಆಬ್ಲಾಸ್ಟ್) ಕೇಂದ್ರ. ನೀಪರ್ ನದಿಯ ದಂಡೆಯ ಮೇಲೆ, ಅದು ಡೆಸ್ನಾ ನದಿಯನ್ನು ಕೂಡುವೆಡೆಯಿಂದ ಕೆಲವು ಮೈಲಿಗಳ ಕೆಳಗೆ ಸ್ದಾಪಿತವಾಗಿದೆ. ನೀಪರ್ ನದಿಯ ಎಡದಂಡೆಯ ಮೇಲೆ ಆ ನದಿಯಿಂದ 300' ಎತ್ತರದಲ್ಲಿರುವ ಕೀವ್ ನಗರದ ಅನೇಕ ಉಪನಗರಗಳು ನದಿಯ ಎದುರು ದಡದ ಮೇಲೆ ತಗ್ಗಿನಲ್ಲಿ, ಹರಡಿವೆ. ಕೀಯೆಫಿನ ಜನಸಂಖ್ಯೆ 1897ರಲ್ಲಿ 2,48,000 ಇದ್ದದ್ದು 1959ರ ವೇಳೆಗೆ 11,04,334ಕ್ಕೆ ಏರಿತ್ತು. ಸೋವಿಯತ್ ದೇಶದಲ್ಲಿ ಇದಕ್ಕೆ ಮೂರನೆಯ ಸ್ಥಾನ ಲಭ್ಯವಾಗಿತ್ತು.ಪ್ರಸ್ತುತ ಇಲ್ಲಿಯ ಜನಸಂಖ್ಯೆ ೨೯,೫೨,೩೦೧.(೨೦೨೨),[]

ಇತಿಹಾಸ

[ಬದಲಾಯಿಸಿ]

ಇದು ಸೋವಿಯತ್ ದೇಶದ ಅತ್ಯಂತ ಪ್ರಾಚೀನ ಮತ್ತು ಇತಿಹಾಸ ಪ್ರಸಿದ್ಧ ನಗರ. ಇದನ್ನು ರಷ್ಯನ್ ಪಟ್ಟಣಗಳ ಮಾತೆ ಎಂದು ಕರೆಯುತ್ತಾರೆ. ಈ ಪಟ್ಟಣ 8ನೆಯ ಶತಮಾನದಲ್ಲಿ ಕೀ ಮತ್ತು ಸಹೋದರರಿಂದ ಸ್ಥಾಪಿತವಾಯಿತೆಂಬ ಐತಿಹ್ಯವಿದೆ. 9ನೆಯ ಶತಮಾನದ ದಾಖಲೆಗಳಲ್ಲಿ ಈ ಸ್ಥಳದ ಉಲ್ಲೇಖವಿದೆ. ನೀಪರ್ ನದಿಯ ಎತ್ತರದಂಡೆ ಮತ್ತು ಸುತ್ತಮುತ್ತಣ ಜವುಗು ನೆಲದಿಂದಾಗಿ ಈ ಪಟ್ಟಣಕ್ಕೆ ಸ್ವಾಭಾವಿಕ ರಕ್ಷಣೆ ಒದಗಿಬಂತು. ಕೀವ್ ಶೀಘ್ರವಾಗಿ ಬೆಳೆಯುವುದಕ್ಕೆ ಇದರ ಸನ್ನಿವೇಶ ಮುಖ್ಯ ಕಾರಣ. 9ನೆಯ ಶತಮಾನದ ಕೊನೆಯ ವೇಳೆಗೆ ಕೀಯೆಫಿನ ಅರಸರು ರಷ್ಯದ ಇತರ ಪ್ರದೇಶಗಳ ಮೇಲೆ ಒಡೆತನ ಸ್ಥಾಪಿಸಿದ್ದರು. ಮೊಟ್ಟಮೊದಲನೆಯ ರಷ್ಯನ್ ರಾಜ್ಯ ಜನ್ಮ ತಳೆಯಿತು. ಬೈಜಾಂಟಿಯಂನಿಂದ ಕೀವ್ ಮೂಲಕ ಇತರ ಪ್ರದೇಶಗಳ ವರೆಗೆ ಸಾಗುತ್ತಿದ್ದ ವ್ಯಾಪಾರಮಾರ್ಗಗಳಿಂದಾಗಿ ಇದರ ಪ್ರಾಮುಖ್ಯ ಬೆಳೆಯಿತು. ಆದರೆ ಕೀವ್‍ಗೂ ಅಲೆಮಾರಿ ಯೋಧರಿಗೂ ನಡುವೆ ಪದೇ ಪದೇ ಯುದ್ದಗಳು ಜರುಗುತ್ತಲೇ ಇದ್ದುವು. 12ನೆಯ ಶತಮಾನದಲ್ಲಿ ಇದರ ಶಕ್ತಿ ಕುಂದಿತು. 1240ರಲ್ಲಿ ಟಾಟರರು ಅದನ್ನು ಧ್ವಂಸ ಮಾಡಿದರು. ಅನಂತರ ಇದು ಕ್ರಮವಾಗಿ ಲಿಥೂವೇನಿಯ ಮತ್ತು ಪೋಲೆಂಡ್ ಗಳ ಅಧೀನಕ್ಕೆ ಬಂತು. 1648ರಲ್ಲಿ ಕಾಸ್ಯಾಕರು ನಡಿಸಿದ ದಂಗೆಯಲ್ಲಿ ಕೀವ್ ಕೂಡ ಪಾತ್ರ ವಹಿಸಿತ್ತು. ರಷ್ಯ-ಪೋಲೆಂಡ್ ಯುದ್ಥದ ಅನಂತರ ಇದು ಕಾಸ್ಯಾಕರ ಸ್ವಯಮಾಡಳಿತ ಪಟ್ಟಣವಾಗಿ ರಷ್ಯನರ ಆಶ್ರಯ ಗಳಿಸಿತು. 19ನೆಯ ಶತಮಾನದಲ್ಲಿ-ರೈಲ್ವೆಗಳು ಬಂದಮೇಲೆ-ಕೀಯೆಫಿನ ಪ್ರಾಮುಖ್ಯ ವಿಶೇಷವಾಗಿ ಬೆಳೆಯಿತು. ಉಕ್ರೇನಿಯನ್ ಸೊವಿಯತ್ ಸಮಾಜವಾದಿ ಗಣರಾಜ್ಯದ ಸ್ಥಾಪನೆಯಾದ (1917) ಮೇಲೆ, 1934ರಲ್ಲಿ, ಅದರ ರಾಜಧಾನಿಯನ್ನು ಖಾರ್ಕಾಫಿನಿಂದ ಕೀವ್‍ಗೆ ವರ್ಗಾಯಿಸಲಾಯಿತು. ಎರಡನೆಯ ಮಹಾಯುದ್ದಾನಂತರ ಈ ಪಟ್ಟಣದ ಅನೇಕ ಕಟ್ಟಡಗಳು ಹೊಸದಾಗಿ ನಿರ್ಮಾಣವಾದುವು. ವೃಕ್ಷರಾಜಿತ ರಸ್ತೆಗಳು ಮತ್ತು ಉದ್ಯಾನವನಗಳು ಈ ನಗರದ ಸೌಂದರ್ಯವನ್ನು ಹೆಚ್ಚಿಸಿವೆ. ಇಲ್ಲಿ ಕೃಷಿ ಕೈಗಾರಿಕೆಗಳ ಖಾಯಂ ವಸ್ತುಪ್ರದರ್ಶನವೊಂದುಂಟು. ಸೇಂಟ್ ಸೋಷಿಯಾ ಕೆಥೆಡ್ರಲ್, ಸೇಂಟ್ ಆಂಡ್ರ್ಯೂ ಚರ್ಚ್ ಮತ್ತು ಸೇಂಟ್ ವಾಲ್ದಿಮೀರ್ ಕೆಥೆಡ್ರಲ್-ಇವು ಇಲ್ಲಿಯ ಮುಖ್ಯವಾದ ಪ್ರಾಚೀನ ಕಟ್ಟಡಗಳಾಗಿವೆ.

A panoramic view of Mykhailiv Square (central Kiev). From left to right: the Diplomatic Academy, Ministry of Foreign Affairs (behind the monument to Princess Olga) and St. Michael's Golden-Domed Monastery.

ವಾಣಿಜ್ಯ

[ಬದಲಾಯಿಸಿ]

ಕೀವ್ ಕೈಗಾರಿಕಾ ಕ್ಷೇತ್ರದಲ್ಲೂ ಪ್ರಸಿದ್ಥಿ ಪಡೆದಿದೆ. ಯಂತ್ರದ ಭಾಗಗಳು, ಹಡಗು, ಮೋಟಾರ್ ಸೈಕಲ್, ವಿದ್ಯುತ್ ಉಪಕರಣ ಮತ್ತು ರೇಡಿಯೋಗಳು ಇಲ್ಲಿಯ ಮುಖ್ಯ ಕೈಗಾರಿಕೋತ್ಪನ್ನಗಳು. ಬಣ್ಣಗಳು, ಅರಗು, ಔಷಧಿಗಳು, ಛಾಯಾಚಿತ್ರದ ಉಪಕರಣಗಳು, ಹತ್ತಿಬಟ್ಟೆಗಳು, ಚರ್ಮದ ಸಾಮಾನುಗಳು, ಆಹಾರ ಪದಾರ್ಧಗಳು, ಮುದ್ರಣ ಮತ್ತು ಪೀಠೋಪಕರಣಗಳು ಇತರ ಉತ್ಪನ್ನಗಳು. ಕೀವ್ ಸಂಚಾರಮಾರ್ಗಗಳ ಕೇಂದ್ರ ಮಾಸ್ಕೋ, ಖಾರ್ಕಾಫ್, ವಿನಿಟ್ಸ ಮತ್ತು ಒಡೆಸ್ಸಾಗಳಿಗೆ ರೈಲುಮಾರ್ಗಗಳುಂಟು. ನೀಪರ್ ನದಿಗೆ ಅಡ್ದಲಾಗಿ ರೈಲು ಮತ್ತು ರಸ್ತೆ ಸೇತುವೆಗಳನ್ನು ನಿರ್ಮಿಸಲಾಗಿದೆ. ಸೋವಿಯತ್ ದೇಶ ಮತ್ತು ಪೂರ್ವ ಐರೋಪ್ಯ ಕೇಂದ್ರಗಳಿಗೆ ಇಲ್ಲಿಂದ ವಾಯುಮಾರ್ಗಗಳುಂಟು. ನೀಪರ್ ನದಿಯಲ್ಲಿ ವರ್ಷದಲ್ಲಿ 9 ತಿಂಗಳ ಕಾಲ ನೌಕಾಯಾನ ಮಾಡಬಹುದು. ಕೀವ್ ಉಕ್ರೇನಿನ ಮುಖ್ಯ ಸಾಂಸ್ಕ್ರತಿಕ ಕೇಂದ್ರ. ಇಲ್ಲಿ ಟಿ.ಜಿ. ಷೆವ್ಚೆಂಕೋ ವಿಶ್ವವಿದ್ಯಾಲಯ ಮತ್ತು ಇನ್ನೂ ಅನೇಕ ಉನ್ನತ ವಿದ್ಯಾಸಂಸ್ಥೆಗಳಿವೆ. ಷೆವ್ಚೆಂಕೊ ನಾಟಕಶಾಲೆ ಇಲ್ಲಿಯ ಪ್ರಮುಖ ಸಾಂಸ್ಕ್ರತಿಕ ಆಕರ್ಷಣೆ.

ಉಲ್ಲೇಖಗಳು

[ಬದಲಾಯಿಸಿ]
  1. Kyiv’s 1,530th birthday marked with fun, protest
  2. "Соціально-економічне становище м.Києва: Січень–липень 2013 року". Department of Statistics, Kiev City State Administration. July 2013. Archived from the original on 19 ಡಿಸೆಂಬರ್ 2013. Retrieved 1 September 2013.
  3. "Major Agglomerations of the World". Citypopulation.de. 2013-04-01. Retrieved 1 September 2013.
  4. kievan. (n.d.). Dictionary.com Unabridged, retrieved 29 May 2013 from Dictionary.com
  5. "Number of present population of Ukraine 1 January 2022" (PDF) (in ಉಕ್ರೇನಿಯನ್). UkrStat.gov.ua. 1 January 2022. Archived (PDF) from the original on 10 August 2022. Retrieved 20 February 2023.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕೀವ್&oldid=1371564" ಇಂದ ಪಡೆಯಲ್ಪಟ್ಟಿದೆ