ಅನುರಾಧಾ ಪೌಡ್ವಾಲ್

ವಿಕಿಪೀಡಿಯ ಇಂದ
Jump to navigation Jump to search
ಅನುರಾಧಾ ಪೌಡ್ವಾಲ್
ಅನುರಾಧಾ ಪೌಡ್ವಾಲ್
ಹುಟ್ಟು೨೭-೧೦-೧೯೫೪
ರಾಷ್ಟ್ರೀಯತೆಭಾರತೀಯ
ವೃತ್ತಿಹಿನ್ನೆಲೆ ಗಾಯಕಿ
ಜೀವನ ಸಂಗಾತಿ(ಗಳು)ಅರುಣ್ ಪೌಡ್ವಾಲ್‌
ಮಕ್ಕಳುಆದಿತ್ಯ ಪೌಡ್ವಾಲ್‌ ಮತ್ತು ಕವಿತಾ ಪೌಡ್ವಾಲ್‌

ಅನುರಾಧಾ ಪೌಡ್ವಾಲ್ ಹಿಂದಿ ಭಾಷೆಯ ಚಲನಚಿತ್ರಗಳ ಹಿನ್ನೆಲೆ ಗಾಯಕಿ. ಇವರಿಗೆ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಯನ್ನು ೨೦೧೭ರಲ್ಲಿ ಭಾರತ ಸರ್ಕಾರ ನೀಡಿ ಗೌರವಿಸಿದೆ. ಇವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರು ಮತ್ತು ನಾಲ್ಕು ಬಾರಿ ಫಿಲ್ಮ್ಫೇರ್ ಪ್ರಶಸ್ತಿ ವಿಜೇತರೂ ಆಗಿದ್ದಾರೆ. ಇವರು ಚಲನಚಿತ್ರ ಗೀತೆಗಳಲ್ಲದೆ ಭಜನೆಗಳನ್ನೂ ಹಾಡುತ್ತಾರೆ.

ಜನನ[ಬದಲಾಯಿಸಿ]

ಅನುರಾಧಾ ಅವರ ಹುಟ್ಟುಹೆಸರು ಅಲ್ಕಾ ನಾಡಕರ್ಣಿ. ೧೯೫೪ರ ಅಕ್ಟೋಬರ್ ೨೭ರಂದು ಕಾರವಾರದಲ್ಲಿ ಜನಿಸಿದರು.

ವೈಯಕ್ತಿಕ ಜೀವನ[ಬದಲಾಯಿಸಿ]

ಇವರು ಅರುಣ್ ಪೌಡ್ವಾಲ್‌ರವರನ್ನು ವಿವಾಹವಾಗಿದ್ದಾರೆ. ಇವರ ಪುತ್ರ ಆದಿತ್ಯ ಪೌಡ್ವಾಲ್‌ ಮತ್ತು ಪುತ್ರಿ ಕವಿತಾ ಪೌಡ್ವಾಲ್‌. ಕವಿತಾರವರು ಸಂಗೀತಗಾರ್ತಿಯಾಗಿದ್ದಾರೆ.[೧]

ಪ್ರಶಸ್ತಿ ಮತ್ತು ಮನ್ನಣೆಗಳು[ಬದಲಾಯಿಸಿ]

  1. ೨೦೧೭ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ.[೨]
  2. ೨೦೧೩ರಲ್ಲಿ ಮಹಾರಾಷ್ಟ್ರ ಸರ್ಕಾರದಿಂದ ಮೊಹಮ್ಮದ್ ರಫಿ ಪ್ರಶಸ್ತಿ ಪಡೆದಿದ್ದಾರೆ.
  3. ೨೦೧೧ರಲ್ಲಿ ಜೀವಮಾನದ ಸಾಧನೆಗಾಗಿ ಮದರ್ ತೆರೆಸಾ ಪ್ರಶಸ್ತಿ ಪಡೆದಿದ್ದಾರೆ.[೩]
  4. ೨೦೧೦ರಲ್ಲಿ ಮಧ್ಯಪ್ರದೇಶ ಸರ್ಕಾರದಿಂದ ಲತಾ ಮಂಗೇಶ್ಕರ್ ಪ್ರಶಸ್ತಿ ಪಡೆದಿದ್ದಾರೆ.[೪]

ಫಿಲ್ಮ್‌ಫೇರ್ ಪ್ರಶಸ್ತಿಗಳು[ಬದಲಾಯಿಸಿ]

ಗೆದ್ದ ಪ್ರಶಸ್ತಿಗಳು[ಬದಲಾಯಿಸಿ]

ವರ್ಷ ಪ್ರಶಸ್ತಿ ಹಾಡು ಚಲನಚಿತ್ರ
೧೯೮೬ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಮೇರೆ ಮ್ಯಾನ್ ಬಜೋ ಮೃದಾಂಗ್ ಉತ್ಸವ್
೧೯೯೧ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ನಜರ್ ಕೆ ಸಾಮ್ನೆ ಆಶಿಕಿ
೧೯೯೨ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ದಿಲ್ ಹೈ ಕೆ ಮಾಂತಾ ನಹಿನ್ ದಿಲ್ ಹೈ ಕೆ ಮಾಂತಾ ನಹಿನ್
೧೯೯೩ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ದಕ್ ದಕ್ ಕರ್ನೆ ಲಗಾ ಬೇಟಾ

ನಾಮನಿರ್ದೇಶನಗೊಂಡ ಪ್ರಶಸ್ತಿಗಳು[ಬದಲಾಯಿಸಿ]

ವರ್ಷ ಪ್ರಶಸ್ತಿ ಹಾಡು ಚಲನಚಿತ್ರ
೧೯೮೩ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಮೈನೆ ಏಕ್ ಗೀತ್ ಲಿಖಾ ಹೈ ಯೆಹ್ ನಜ್ಡೀಕಿಯನ್
೧೯೮೪ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ತು ಮೇರಾ ಹೀರೋ ಹೈ ಹೀರೋ
೧೯೮೯ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಕೆಹ್ ದೋ ಕಿ ತುಮ್ ತೇಜಾಬ್
೧೯೯೦ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ತೇರಾ ನಾಮ್ ಲಿಯಾ ರಾಮ್ ಲಖನ್
೧೯೯೦ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಬೆಕಬಾರ್ ಬೆವಾಫಾ ರಾಮ್ ಲಖನ್
೧೯೯೧ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಮುಜೆ ನೀಂದ್ ನಾ ಆಯೆ ದಿಲ್
೧೯೯೨ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಬಹುತ್ ಪ್ಯಾರ್ ಕಾರ್ಟೆ ಹೈ ಸಾಜನ್

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ[ಬದಲಾಯಿಸಿ]

ಅನುರಾಧಾರವರಿಗೆ ೧೯೮೯ರಲ್ಲಿರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಕಲಾಟ್ ನಕಲಾತ್ ಚಲನಚಿತ್ರದ ಹಿ ಏಕ್ ರೇಷಮಿ ಹಾಡಿಗೆ, ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಎಂದು ಪಡೆದರು.

ಒಡಿಶಾ ರಾಜ್ಯ ಚಲನಚಿತ್ರ ಪ್ರಶಸ್ತಿಗಳು[ಬದಲಾಯಿಸಿ]

ವರ್ಷ ಪ್ರಶಸ್ತಿ ಹಾಡು
೧೯೮೭ ಅತ್ಯುತ್ತಮ ಗಾಯಕಿ ತುಂಡಾ ಬೈಡಾ
೧೯೯೭ ಅತ್ಯುತ್ತಮ ಗಾಯಕಿ ಖಂಡೈ ಅಖಿ ರೆ ಲುಹಾ

ಗಿಲ್ಡ್ ಫಿಲ್ಮ್ ಅವಾರ್ಡ್ಸ್[ಬದಲಾಯಿಸಿ]

೨೦೦೪ರಲ್ಲಿ ಅತ್ಯುತ್ತಮ ಗಾಯಕಿ ಎಂದು ಅಪ್ಸರಾ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.

ಇತರ ಪ್ರಶಸ್ತಿ[ಬದಲಾಯಿಸಿ]

ಅನುರಾಧಾ ಪದ್ಮಶ್ರೀ ಡಾ ಡಿವೈ ಪಾಟೀಲ್ ವಿಶ್ವವಿದ್ಯಾಲಯವು ಡಿ ಲಿಟ್ ಪದವಿ ನೀಡಿ ಗೌರವಿಸಿತು.[೫]

ನೋಡಿ[ಬದಲಾಯಿಸಿ]

ಅನುರಾಧಾ ಪೌಡ್ವಾಲ್ ರವರ ಧ್ವನಿಮುದ್ರಿಸಿದ ಹಾಡುಗಳ ಪಟ್ಟಿ.

ಉಲ್ಲೇಖಗಳು[ಬದಲಾಯಿಸಿ]