ಪಾರ್ಶ್ವನಾಥ ಉಪಾಧ್ಯೆ
This article has multiple issues. Please help improve it or discuss these issues on the talk page. (Learn how and when to remove these template messages)
|
ಪಾರ್ಶ್ವನಾಥ ಉಪಾಧ್ಯೆ | |
---|---|
ಜನನ | ಪಾರ್ಶ್ವನಾಥ ಶಾಂತಿನಾಥ ಉಪಾಧ್ಯೆ ೨೬ ಮಾರ್ಚ್ ೧೯೮೨ |
ವೃತ್ತಿ | ನೃತ್ಯ ಕಲಾವಿದರು |
ಸಕ್ರಿಯ ವರ್ಷಗಳು | ೧೯೯೬ ರಿಂದ ಪ್ರಸ್ತುತ |
Dances | ಭರತನಾಟ್ಯ(ಮೈಸೂರು ಶೈಲಿ) |
ಜಾಲತಾಣ | www |
ಪಾಶ್ವನಾಥ ಉಪಾಧ್ಯೆ ಭರತನಾಟ್ಯ ಕಲಾವಿದ. ನೃತ್ಯ ಸಂಯೋಜಕ ಮತ್ತು ನೃತ್ಯ ಶಿಕ್ಷಕರೂ ಹೌದು. ಭರತನಾಟ್ಯದ ಸಾಂಪ್ರದಾಯಿಕ ಶೈಲಿಗಳಲ್ಲಿ ಒಂದಾದ ಮೈಸೂರು ಶೈಲಿಯಲ್ಲಿ ತರಬೇತಿ ಪಡೆದಿದ್ದಾರೆ.
ಜನನ
[ಬದಲಾಯಿಸಿ]ಪಾಶ್ವನಾಥ ಉಪಾಧ್ಯೆಯವರು ೧೯೮೨ರ ಮಾರ್ಚ್ ೨೬ರಂದು ಬೆಳಗಾವಿಯಲ್ಲಿ ಜನಿಸಿದರು.
ನೃತ್ಯ ಜೀವನ
[ಬದಲಾಯಿಸಿ]ಇವರು ಮೈಸೂರು ಶೈಲಿಯನ್ನು ೧೫ ವರ್ಷಗಳ ಕಾಲ ಅಭ್ಯಾಸ ಮಾಡಿ, ವಿದ್ವತ್ ಮತ್ತು ಅಲಂಕಾರ್ ಪರೀಕ್ಷೆಗಳನ್ನು ಗುರು ಶ್ರೀ ರವೀಂದ್ರ ಶರ್ಮಾರವರಲ್ಲಿ ಮಾಡಿದ್ದಾರೆ. ರಂಗಪ್ರವೇಶವನ್ನು ಕೂಡಾ ೧೯೯೬ರಲ್ಲಿ ಗುರು ಶ್ರೀ ರವೀಂದ್ರ ಶರ್ಮಾರಲ್ಲಿ ಮುಗಿಸಿದ್ದಾರೆ. ಪ್ರಸ್ತುತ ತಮ್ಮ ಭರತನಾಟ್ಯ ಅಭ್ಯಾಸವನ್ನು ಗುರು ಪದ್ಮಶ್ರೀ ಪ್ರೋ. ಸುಧಾರಾಣಿ ರಘುಪತಿಯವರಲ್ಲಿ ಮುಂದುವರೆಸುತ್ತಿದ್ದಾರೆ. ೧೯೯೬ರಲ್ಲಿ ಮಂಗಳೂರಿನಲ್ಲಿ ಡಾ. ಪದ್ಮಾ ಸುಬ್ರಮಣ್ಯಮ್ ರವರು ನೆಡೆಸಿದ ಕರಣಗಳ ಕಾರ್ಯಗಾರದಲ್ಲಿ ಭಾಗವಹಿಸಿದ್ದರು. ಇವರು ಬೆಂಗಳೂರು ದೂರದರ್ಶನದ ಎ ಗ್ರೇಡ್ ನೃತ್ಯಗಾರ.ಇವರು ಉಪಾಧ್ಯೆ ಸ್ಕೂಲ್ ಆಫ್ ಡ್ಯಾನ್ಸ್ ಎಂಬ ಭರತನಾಟ್ಯ ತರಗತಿಯನ್ನು ಆರಂಭಿಸಿದ್ದಾರೆ[೧].ಇವರ ಪತ್ನಿ ಶ್ರುತಿಯವರೊಂದಿಗೆ ಸೇರಿ ಉಪಾಧ್ಯೆ ಸ್ಕೂಲ್ ಆಫ್ ಡ್ಯಾನ್ಸ್ ಮತ್ತು ಪುಣ್ಯ ಕೃಷ್ಣಾ ಡ್ಯಾನ್ಸ್ ಕಂಪನಿಯ ಅಡಿಯಲ್ಲಿ ಹಲವಾರು ನೃತ್ಯಗಳನ್ನು ರಾಷ್ಟ್ರೀಯ ಮತ್ತು ಅಂತರ್-ರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತುತಿ ಪಡಿಸಿದ್ದಾರೆ.
ನೃತ್ಯ ಕಾರ್ಯಕ್ರಮಗಳು
[ಬದಲಾಯಿಸಿ]*ಚೆನೈನಲ್ಲಿ ನೆಡೆದಂತಹ ನರ್ತಕ ಮತ್ತು ಪುರುಷ್ ನಲ್ಲಿ, ಮೂಡಬಿದ್ರೆಯಲ್ಲಿ ನೆಡೆದ ಆಳ್ವಸ್ ನುಡಿಸಿರಿಯಲ್ಲಿ ಮತ್ತು ಮಲೆಷ್ಯಿಯಾದಲ್ಲಿ ನೆಡೆದ ನರ್ತಕ ಕಾರ್ಯಕ್ರಮಗಳಲ್ಲಿ ಏಕ ವ್ಯಕ್ತಿ ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ.
*೨೦೧೧ರಲ್ಲಿ ಭಾರತ ಮತ್ತು ಚೀನಾದ ನಡುವೆ ನೆಡೆದ ಯುವ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ನೃತ್ಯ ಸಂಯೋಜನೆ
[ಬದಲಾಯಿಸಿ]ಇವರು ೨೦೧೨ರಿಂದ ಪುಣ್ಯ ಕೃಷ್ಣ ಡ್ಯಾನ್ಸ ಕಂಪೆನಿಯಲ್ಲಿ ನೃತ್ಯ ಸಂಯೋಜನೆಯನ್ನು ಮಾಡಿದ್ದಾರೆ. ಹರ[೨] [೩], ಸದ್ಗತಿ[೪], ಪಾರ್ಥ ಪುಣ್ಯ ಕೃಷ್ಣ [೫] ಮತ್ತು ಆಭಾ[೬] [೭]ಪ್ರಮುಖವಾದವು.
ನೃತ್ಯ ಶಾಲೆ
[ಬದಲಾಯಿಸಿ]ಪಾರ್ಶ್ವನಾಥ ಉಪಾಧ್ಯೆರವರು ೧೯೯೬ರಲ್ಲಿ ಬೆಳಗಾವಿಯಲ್ಲಿ ಶಾರದಾ ಸಂಗೀತ ನೃತ್ಯ ಅಕಾದೆಮಿಯನ್ನು ಸ್ಥಾಪಿಸಿದ್ದರು. ೧೯೯೬ರಿಂದ ೨೦೦೦ದ ವರೆಗೆ ಅಲ್ಲಿಯೇ ನೃತ್ಯ ಪಾಠವನ್ನು ಹೇಳಿಕೊಡುತ್ತಿದ್ದರು. ೨೦೧೦ರಲ್ಲಿ ಉಪಾಧ್ಯೆ ಸ್ಕೂಲ್ ಎಂಬ ನೃತ್ಯ ಸಂಸ್ಥೆಯನ್ನು ಆರಂಭಿಸಿದ್ದರು.
ಪ್ರಶಸ್ತಿಗಳು
[ಬದಲಾಯಿಸಿ]- ಗಂಗುಬಾಯಿ ಹಾನಗಲ್ ಸಂಸ್ಥೆಯಿಂದ ನಾಟ್ಯ ಮಯೂರ ಪ್ರಶಸ್ತಿಯನ್ನು ಪಡೆದಿದ್ದಾರೆ.
- ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ ಸಮಿತಿಯಿಂದ ಉತ್ತಮ ಕಲಾಕಾರ್ ಎಂಬ ಬಿರುದು.
- ಬೆಂಗಳೂರಿನ ಬೆಳ್ಳಿಗೆಜ್ಜೆಯ ವತಿಯಿಂದ ನಾಟ್ಯನಿಪುಣ ಬಿರುದನ್ನು ಪಡೆದಿದ್ದಾರೆ.
- ಕರ್ನಾಟಕದ ಜೈನ ಪರಿಷತ್ತಿನಿಂದ ಜೈನ ರಾಷ್ಟ್ರೀಯ ಗೌರವವನ್ನು ಸ್ವೀಕರಿಸಿದ್ದಾರೆ.
- ಕೊಲಂಬೊದಲ್ಲಿ ಇರುವ ಅರು ಶ್ರೀ ಆಟ್ ಸೆಂಟರಿನಿಂದ ನಾಟ್ಯ ಕೀರ್ತಿ ಎಂಬ ಬಿರುದನ್ನು ಪಡೆದಿದ್ದಾರೆ.
- ರಸಿಕ ಹೃದಯ ಚೋರ ಬಿರುದನ್ನು ಚೆನೈನ ಶ್ರೀದೇವಿ ನೃತ್ಯಾಲಯದಿಂದ ಪಡೆದಿದ್ದಾರೆ.
- ಉತ್ತಮ ನೃತ್ಯಗಾರ ಎಂದು ೨೦೧೭ರಲ್ಲಿ ಚೆನೈನ ಸಂಗೀತ ಅಕಾದೆಮಿಯಿಂದ ಪ್ರಶಸ್ತಿ ಪಡೆದಿದ್ದಾರೆ. [೮]
- ೨೧೦೭ರ ಉಸ್ತಾದ್ ಬಿಸ್ಮಿಲಾ ಖಾನ್ ಯುವ ಪುರಸ್ಕಾರವನ್ನು ದೆಹಲಿಯ ಸಂಗೀತ ನಾಟಕ ಅಕಾದೆಮಿ ನೀಡಿ ಗೌರವಿಸಿದೆ.[೯]
ಉಲ್ಲೇಖಗಳು
[ಬದಲಾಯಿಸಿ]- ↑ http://www.parshwanathupadhye.com/upadhye-school-of-dance.php
- ↑ https://www.thehindu.com/entertainment/dance/The-stage-comes-alive/article17028593.ece
- ↑ https://narthaki.com/info/rev15/rev1807.html
- ↑ https://www.thehindu.com/entertainment/dance/in-idioms-classical-and-contemporary/article23512683.ece
- ↑ https://www.thedancecurrent.com/review/new-spin-old-classic
- ↑ https://narthaki.com/info/rev18/rev2280.html
- ↑ https://www.thehindu.com/entertainment/dance/abha-based-on-the-ramayana-presented-by-punyah-dance-company/article27896787.ece
- ↑ https://narthaki.com/info/rev18/rev2157.html
- ↑ "ಆರ್ಕೈವ್ ನಕಲು" (PDF). Archived from the original (PDF) on 2019-08-19. Retrieved 2020-04-26.
- Articles with topics of unclear notability from ಏಪ್ರಿಲ್ ೨೦೨೦
- Articles with invalid date parameter in template
- All articles with topics of unclear notability
- Articles with a promotional tone from ಏಪ್ರಿಲ್ ೨೦೨೦
- All articles with a promotional tone
- Articles lacking reliable references from ಏಪ್ರಿಲ್ ೨೦೨೦
- All articles lacking reliable references
- Articles with multiple maintenance issues
- Articles with hCards
- ನೃತ್ಯ ಕಲಾವಿದರು
- ಭಾರತೀಯ ಕಲಾವಿದರು