ವಿಷಯಕ್ಕೆ ಹೋಗು

ಟಿ.ಆರ್.ಮಹಾಲಿಂಗಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟಿ.ಆರ್.ಮಹಾಲಿಂಗಂ
ಜನನ(೧೯೨೬-೧೧-೦೬)೬ ನವೆಂಬರ್ ೧೯೨೬
ಮೂಲಸ್ಥಳತಿರುವಿದೈಮರುದೂರ್, ತಮಿಳುನಾಡು, ಭಾರತ
ಮರಣ31 May 1986(1986-05-31) (aged 59)
ಸಂಗೀತ ಶೈಲಿಕರ್ನಾಟಕ ಸಂಗೀತ -ಭಾರತೀಯ ಶಾಸ್ತ್ರೀಯ ಸಂಗೀತ
ವೃತ್ತಿಕರ್ನಾಟಕ ಸಂಗೀತ ಕೊಳಲು ವಾದಕ
ಸಕ್ರಿಯ ವರ್ಷಗಳು೧೯೩೮-೧೯೮೬

ಟಿ.ಆರ್.ಮಹಾಲಿಂಗಂ ಅವರು ಪ್ರೀತಿಯಿಂದ ಮಾಲಿ ಎಂದು ಪರಿಚಿತರಾಗಿದ್ದರು.ಇವರು ಕೊಳಲು ವಾದಕರಾಗಿ ತಮ್ಮದಾದ ಛಾಪನ್ನು ಕರ್ನಾಟಕ ಸಂಗೀತದ ಮೂಲಕ ಮೂಡಿಸಿದ್ದರು.

ಟಿ.ಆರ್.ಮಹಾಲಿಂಗಂ ಅವರು ತಮಿಳುನಾಡಿನ ತಿರುವಿದೈಮರುದುರ್ ,ತಂಜಾವೂರು ಜಿಲ್ಲೆಯಲ್ಲಿ ಜನಿಸಿದರು.[೧] ಇವರ ತಂದೆ ರಾಮಸ್ವಾಮಿ ಐಯರ್ ಮತ್ತು ತಾಯಿ ಬೃಹದಾಂಬಾಳ್.ಅವರ ತಂದೆ ತಾಯಿ ಶಿವನ ಅನನ್ಯ ಭಕ್ತರಾಗಿದ್ದರಿಂದ ಮಹಾಲಿಂಗಸ್ವಾಮಿ ಎಂದು ಹೆಸರಿಟ್ಟರು.ಅವರ ಅಕ್ಕನ ಹೆಸರು ದೇವಕಿ.ಜಾಲರ ಗೋಪಾಲ ಅಯ್ಯರ್ ಅವರ ಸೋದರ ಮಾವನ ಬಳಿ ಸಂಗೀತ ಕಲಿಕೆಯನ್ನು ಆರಂಭಿಸಿದರು.ಮಾಲಿ ಅವರು ಐದನೇ ವಯಸ್ಸಿನಲ್ಲಿ ಬೇರೆ ಹುಡುಗರ ಕೊಳಲುವಾದನವನ್ನು ನೋಡಿ,ತಂದೆಯ ಸಮ್ಮತಿಗೆ ವಿರುದ್ಧವಾಗಿ ಕೊಳಲನ್ನು ಹಿಡಿದು ಅಭ್ಯಾಸ ಮಾಡಿದರು. ಭೈರವಿ ರಾಗದಲ್ಲಿನ ವಿರಿಬೋಣಿ ವರ್ಣವನ್ನು ಪೂರ್ತಿಯಾಗಿ ಸ್ವತಃ ನುಡಿಸಲು ಕಲಿತರು. ಮಾಲಿ ಒಂದು ಸಾರಿ ಕೇಳಿಸಿಕೊಂಡರೆ ಬಹಳ ವೇಗವಾಗಿ ಕಲಿಯುತ್ತಿದ್ದರು.

ತಂತ್ರ[ಬದಲಾಯಿಸಿ]

ಮಾಲಿ ಅವರು ಕೊಳಲುವಾದನದ ತನ್ನದೇ ಆದ ಹೊಸ ಶೈಲಿಯನ್ನು ಆರಂಭಿಸಿದರು.ಇವರಿಗೆ ಉಸಿರಿನ ಮೇಲೆ ತುಂಬಾ ಹಿಡಿತವಿದ್ದ ಕಾರಣ ಕೆಳ ಮತ್ತು ಮೇಲು ಸ್ಥಾಯಿಗಳಲ್ಲಿ ಕೊಳಲು ಊದಲು ಸಹಾಯಕವಾಯಿತು.ಕೊಳಲಿನ ಮೇಲಿನ ಹಿಡಿತವನ್ನು ಪ್ಯಾರೆಟ್ ಕ್ಲಚ್ ಅಥವಾ ಕ್ರಾಸ್ ಫಿಂಗರ್ ಸ್ಟೈಲ್ಎಂದು ಪ್ರಸಿದ್ಧವಾಯಿತು.ಅವರು ಮಾನವನ ಸ್ವರವನ್ನು ನಕಲಿಮಾಡುವ ಕಲೆಯಲ್ಲಿ ಪರಿಣತಿ ಹೊಂದಿದ್ದರು.ಮಾಲಿಯವರ ಶೈಲಿಯಲ್ಲಿ ಕರ್ನಾಟಕ ಸಂಗೀತದ ಎಲ್ಲಾ ಸೂಕ್ಷ್ಮ ವ್ಯತ್ಯಾಸಗಳನ್ನು ಕೊಳಲಿನ ಮೂಲಕ ವ್ಯಕ್ತಪಡಿಸಲು ಸಾಧ್ಯವಾಯಿತು.ಮಾಲಿ ಅವರ ಸಂಗೀತ ಶೈಲಿ ಡಿಂಡಿಗಲ್ ,ಎಸ್.ವಿ.ನಟರಾಜನ್,ಟಿ.ಎಸ್.ಶಂಕರನ್,ಎನ್.ರಮಣಿ,ಬಿ.ಎನ್.ಸುರೇಶ್,ಎನ್.ಕೆಸಿ ಅವರಿಂದ ಮಾನ್ಯತೆ ಪಡೆಯಿತು.ಅನಂತರದ ದಿನಗಳಲ್ಲಿ ಶ್ರೀ.ವಿಶ್ವನಾಥನ್,ಪ್ರಪಂಚಮ್ ಸೀತಾರಾಮನ್,ಎಲ್.ಸುಂದರಾಚಾರಿ,ಬಿ.ಜಿ.ಶ್ರೀನಿವಾಸ,ಸಿ.ಎಮ್.ಮಧುರನಾಥ್,ಬಿ.ಶಂಕರ ರಾವ್ ಮತ್ತು ಬಿ.ಎಮ್.ಸುಂದರ ರಾವ್ ಅವರಿಂದ ಮುಂದುವರೆಸಿಕೊಂಡು ಹೋಗಲಾಯಿತು. ಟಿ.ಆರ್.ಮಹಾಲಿಂಗಂ ಅವರ ತಂತ್ರವು ಬಿದಿರಿನ ಕೊಳಲಿಗೆ ಹೊಸ ವಿನ್ಯಾಸವನ್ನು ತಂದುಕೊಟ್ಟಿತು.ಅವರು ತನ್ನ ಕೊಳಲಿನ ಸ್ವರ ನಳಿಗೆಯನ್ನು ದಪ್ಪ ಮಾಡಿದರು ಮತ್ತು ಅದರ ಗುಳಿಗಳನ್ನು ಸಣ್ಣದಾಗಿಸಿದರು.ಇದರಿಂದ ಸುಮಧುರವಾದ ಸ್ವರ ಮೂಡಲು ಸಹಾಯಕವಾಯಿತು.ಅವರು ಕೊಳಲಿನಲ್ಲಿ ವಿಭಿನ್ನವಾಗಿ ಎಂಟು ಗುಳಿ ಮಾಡಿದರು.ಇದು ಅವರ ಕೊಳಲಿನ ಮೇಲಿನ ಹಿಡಿತವನ್ನು ತೋರಿಸುತ್ತದೆ ಎಂದು ಸಂಗೀತ ತಜ್ಞ ಪ್ರೊ.ಪಿ.ಸಾಂಬಮೂರ್ತಿ ಅವರು ಹೇಳಿದರು.

ಸಂಗೀತ ಮತ್ತು ವೃತ್ತಿ ಜೀವನ[ಬದಲಾಯಿಸಿ]

ಏಳನೇ ವಯಸ್ಸಿನಲ್ಲಿ ೧೯೩೩ ರಲ್ಲಿ ಮೈಲಾಪೋರ್ ನಲ್ಲಿ ತ್ಯಾಗರಾಜರ ಹಬ್ಬದಂದು ಮಾಲಿ ಅವರ ಮೊದಲ ಸಂಗೀತ ಕಛೇರಿ ನಡೆಯಿತು.ಇಬ್ಬರು ಸಂಗೀತ ದಿಗ್ಗಜರು ಸುಂದರಾಮ ಐಯ್ಯರ್ ಮತ್ತು ಮುಸಿರಿ ಸುಬ್ರಹ್ಮಣ್ಯ ಐಯ್ಯರ್ ಅವರು ಭಾಗವಹಿಸಿದ್ದರು.ಅವರು ಮಾಲಿ ಅವರ ಸಂಗೀತವನ್ನು ಮೆಚ್ಚಿ ಕಛೇರಿ ನಡೆಯುತ್ತಿದ್ದಾಗ ಹುಡುಗನಿಗೆ ಸನ್ಮಾನ ಮಾಡಲು ಶಾಲು ತರಲು ಹೋದರು ಕರ್ನಾಟಕ ಸಂಗೀತಕ್ಕೆ ಹೆಮ್ಮೆಯನ್ನು ತಂದುಕೊಟ್ಟಿತು.ಈ ಸಫಲತೆಯ ನಂತರ ಸ್ವಲ್ಪ ಅವಧಿಯಲ್ಲೇ ಚೌಡಯ್ಯ,ಪಾಪಾ ವೆಂಕಟರಾಮಯ್ಯ,ಕುಂಭಕೋಣಂ ಅಝಗೀಯಾನಂಬಿ ಪಿಲೈ ಮತ್ತು ತಂಜಾವೂರು ವೈದ್ಯನಾಥ ಐಯ್ಯರ್ ಅವರೊಂದಿಗೆ ಒಡನಾಟ ಬೆಳೆಯಿತು. ಅನಂತರ ಮಾಲಿ ಅವರು ಪಾಲಘಟ ಮಣಿ ಐಯ್ಯರ್[ಶಾಶ್ವತವಾಗಿ ಮಡಿದ ಕೊಂಡಿ] ಮತ್ತು ಪಾಲಾನಿ ಸುಬ್ರಹ್ಮಣ್ಯ ಪಿಳೈ ಜೊತೆ ವೃತ್ತಿ ಜೀವನ ಪ್ರಾರಂಭಿಸಿದರು. ಮಾಲಿ ಅವರು ಹೇಳುತ್ತಿದ್ದರಂತೆ,ಕೊಳಲು ಊದಲು ಆರಂಭಿಸಿದ ಐದು ನಿಮಿಷ ದಲ್ಲೇ ದೇವರನ್ನು ಕಾಣುತ್ತಿದ್ದರು,ಅನಂತರ ಸಂಗೀತವನ್ನು ಮುಂದುವರಿಸುವುದು ಅರ್ಥಹೀನವೆಂದು ಭಾವಿಸುತ್ತಿದ್ದರು.ಇವರು ತಮ್ಮ ಜೊತೆ ವಾದಕರನ್ನು ಕ್ಲಿಷ್ಟಕರವಾದ ತಾಳಗಳಲ್ಲಿ ನುಡಿಸಲು ಪ್ರೇರೇಪಿಸುತ್ತಿದ್ದರು.

ಪ್ರಶಸ್ತಿಗಳು[ಬದಲಾಯಿಸಿ]

ಮಾಲಿ ಅವರು ಹಲವು ಬಾರಿ ಪ್ರಶಸ್ತಿಗಳಿಗೆ ನಾಮಾಂಕಿತರಾಗಿದ್ದರು.ಆದರೆ ಸಂಗೀತಕ್ಕಾಗಿ ಹೊಗಳಿಕೆ ಮತ್ತು ಪ್ರಶಸ್ತಿಗಳ ನಿರೀಕ್ಷೆಯಲ್ಲಿರಲಿಲ್ಲ.೧೯೮೬ ಜನವರಿಯಲ್ಲಿ ಅವರ ಸಾವಿಗಿಂತ ಮೊದಲು ಭಾರತದ ಹೆಮ್ಮೆಯ [http://%20ಪದ್ಮಭೂಷಣ ಪದ್ಮಭೂಷಣ] ಪ್ರಶಸ್ತಿಯನ್ನು ನೀಡಿದರು.ಆದರೆ ಅವರು ಈ ಪ್ರಶಸ್ತಿಯನ್ನು ಸಾರಸಗಾಟಾಗಿ ತಿರಸ್ಕರಿಸಿದರು.

೧೯೫೫ ರಲ್ಲಿ ಬೆಂಗಳೂರಿಗೆ ಬಂದ ನಂತರ ೧೯೫೮ರಲ್ಲಿ ಏಕಾಂತದ ಕಡೆ ನಡೆದರು.ಕೊಳಲುವಾದನವನ್ನು ನಿಧಾನಗೊಳಿಸಿದರು.೧೯೮೦ ರಿಂದ ೧೯೮೫ ರ ವರೆಗೆ ಅಮೇರಿಕಾದಲ್ಲಿ ಜೀವನ ನಡೆಸಿದರು.೧೯೮೫ ರಲ್ಲಿ ಟಿ.ಆರ್.ಮಹಾಲಿಂಗಂ ಭಾರತಕ್ಕೆ ಮರಳಿದರು. ೧೯೮೬ ರಲ್ಲಿ ೫೯ ನೆಯ ವಯಸ್ಸಿನಲ್ಲಿ ಮರಣ ಹೊಂದಿದರು.ಕರ್ನಾಟಕ ಸಂಗೀತದಲ್ಲಿ ಕೊಳಲುವಾದನದ ಮೂಲಕ ಭಿನ್ನವಾದ ಮುಖವನ್ನು ಸ್ಥಾಪಿಸಿ ಅಚ್ಚಳಿಯದ ನೆನಪಿನೊಂದಿಗೆ ಮರೆಯಾದರು.[೨]

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]