ವಿಷಯಕ್ಕೆ ಹೋಗು

ವಸುಂಧರಾ ತಿವಾರಿ ಬ್ರೂಟಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಸುಂಧರಾ ತಿವಾರಿ ಬ್ರೂಟಾ

ವಸುಂಧರಾ ತಿವಾರಿ ಬ್ರೂಟಾರವರು ಆಲಂಕಾರಿಕ ವರ್ಣಚಿತ್ರಗಳನ್ನು, ಮಾಡುವ ಭಾರತೀಯ ವರ್ಣಚಿತ್ರಗಾರ್ತಿ , ಮಹಿಳೆಯ ಗ್ರಹಿಕೆಯ ಆಧಾರದ ಮೇಲೆ ಮತ್ತು ಹೆಣ್ಣಿನ ದೇಹದ ಸೈಕೋ-ರಾಜಕೀಯ ಅಸ್ತಿತ್ವ, ಸಾಂಪ್ರದಾಯಿಕ ಭೂದೃಶ್ಯಗಳು, ಇನ್ನೂ ಅತ್ಯಂತ ಆಕರ್ಷಕ ಅರ್ಥವನ್ನು ಹೊಂದಿರುವ ಜೀವನ.[೧]

ಜೀವನ[ಬದಲಾಯಿಸಿ]

ತಿವಾರಿಯವರು ಕೊಲ್ಕತ್ತಾದಲ್ಲಿ ೧೯೫೫ ರಲ್ಲಿ ಜನಿಸಿದರು[೨]. ಹದಿನೈದು ವರ್ಷವಿದ್ದಾಗ ಅವರು ಹೊಸ ದೆಹಲಿಗೆ ತೆರಳಿದರು. ದೆಹಲಿ ವಿಶ್ವವಿದ್ಯಾಲಯದಿಂದ ಸಾಹಿತ್ಯದಲ್ಲಿ ಪದವಿ ಪಡೆದು, ನವದೆಹಲಿಯ ತ್ರಿವೇಣಿ ಕಲಾ ಸಂಗಮದಲ್ಲಿ ಕಲೆಯನ್ನು ಅಭ್ಯಸಿಸಿದರು. ತ್ರಿವೇಣಿ ಕಲಾ ಸಂಗಮದಲ್ಲಿ ವರ್ಣಚಿತ್ರಕಾರ ಮತ್ತು ಕಲಾವಿದೆ ರಾಮೇಶ್ವರ ಬ್ರೂಟಾ ಅಡಿಯಲ್ಲಿ ತರಬೇತಿ ಪಡೆದಿದ್ದರು. ತಿವಾರಿಯವರು ಭಾರತೀಯ ವರ್ಣಚಿತ್ರಕಾರ ರಾಮೇಶ್ವರ ಬ್ರೂಟಾ ಅವರನ್ನು ೧೯೯೫ ರಲ್ಲಿ ವಿವಾಹವಾಗಿ, ನವದೆಹಲಿಯಲ್ಲಿ ವಾಸಿಸುತ್ತಿದ್ದಾರೆ ಮತ್ತು ಕೆಲಸ ಮಾಡುತ್ತಾರೆ.

ವೃತ್ತಿ[ಬದಲಾಯಿಸಿ]

ತಿವಾರಿಯವರು ತಮ್ಮ ಮೊದಲ ಸೋಲೋ ಪ್ರದರ್ಶನವನ್ನು ದೆಹಲಿಯ ಶ್ರೀಧರಣಿ ಗ್ಯಾಲರಿಯಲ್ಲಿ ೧೯೮೦ ರಲ್ಲಿ ನಡೆಸಿದರು. ೧೯೮೨-೮೪ ರ ಅವಧಿಯಲ್ಲಿ ಭಾರತ ಸರ್ಕಾರದ ಸಂಸ್ಕೃತಿ ಇಲಾಖೆ ನೀಡುವ ಸಾಂಸ್ಕೃತಿಕ ಪಾಂಡಿತ್ಯದ ಕೆಲಸ ಮಾಡಿದಳು. ಆಕೆ, ಜತಿನ್ ದಾಸ್ ಮತ್ತು ಇತರ ೨೯೮ ಕಲಾವಿದರು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ನಲ್ಲಿ ನಡೆದ ಪ್ರದರ್ಶನ ಕಮ್ ಸೇಲ್ ಮೂಲಕ ೨೦೧೮ ಕೇರಳ ಪ್ರವಾಹಕ್ಕೆ ಆರ್ಟ್ ವರ್ಕ್ ದಾನ ಮಾಡಿದ್ದರು.[೩] ೨ ಫೆಬ್ರುವರಿ ೨೦೧೯ ರಂದು ವರ್ಣಚಿತ್ರಕಾರ ಎಸ್. ಎಚ್. ರಝಾ ಸ್ಮರಣಾರ್ಥ ರಝಾ ಫೌಂಡೇಶನ್ ಆಯೋಜಿಸಿದ ಇತರ ೨೦ ಕಲಾವಿದರೊಂದಿಗೆ ಗುಂಪು ಪ್ರದರ್ಶನದಲ್ಲಿ ಭಾಗವಹಿಸಿ ತಮ್ಮ ೯೭ನೇ ಜಯಂತಿಯನ್ನು ಆಚರಿಸಲು ಆಗಮಿಸಿದ್ದರು. [೪]

ಪ್ರಶಸ್ತಿಗಳು[ಬದಲಾಯಿಸಿ]

  • ತಿವಾರಿಯವರು ೧ನೇ ಅಂತಾರಾಷ್ಟ್ರೀಯ ಬಿಯೆನ್ನೇಲ್ ಅಲ್ಗರ್ಸ್, ಸಂಸ್ಕತ ಪ್ರಶಸ್ತಿ,
  • ಅಖಿಲ ಭಾರತ ಫೈನ್ ಆರ್ಟ್ಸ್ ಮತ್ತು ಕ್ರಾಫ್ಟ್ಸ್ ಸೊಸೈಟಿ ಮತ್ತು ಸಾಹಿತ್ಯ ಕಲಾ ಪರಿಷತ್ ನಲ್ಲಿ ವಾರ್ಷಿಕ ಪ್ರಶಸ್ತಿಗಳನ್ನು ಬೆಳ್ಳಿಯ ಪದಕ.[೫]

ಉಲ್ಲೇಖಗಳು[ಬದಲಾಯಿಸಿ]