ಜ್ಯೋತ್ಸ್ನಾ ಶ್ರೀಕಾಂತ್

ವಿಕಿಪೀಡಿಯ ಇಂದ
Jump to navigation Jump to search
ಜ್ಯೋತ್ಸ್ನಾ ಶ್ರೀಕಾಂತ್
Jyotsna Srikanth.jpg
ಲೈವ್ ಕನ್ಸರ್ಟ್, ೨೦೧೧
Born
Nationalityಭಾರತ
Known forಕರ್ನಾಟಿಕ್ ಸಂಗೀತ, ಪಾಶ್ಚಾತ್ಯ ಸಂಗೀತ

ಜ್ಯೋತ್ಸ್ನಾ ಶ್ರೀಕಾಂತ್ ರವರು ಭಾರತೀಯ ಪಿಟೀಲು ವಾದಕರು ಹಾಗೂ ಸಂಯೋಜಕರು.ಅಲ್ಲದೇ ಅವರು ಕರ್ನಾಟಕ ಸಂಗೀತ ಮತ್ತು ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ ಪ್ರದರ್ಶನವನ್ನೂ ನೀಡುತ್ತಿದ್ದಾರೆ.[೧]

ಆರಂಭಿಕ ಜೀವನ[ಬದಲಾಯಿಸಿ]

ಜ್ಯೋತ್ಸ್ನಾ ಶ್ರೀಕಾಂತ್ ರವರು ಬೆಂಗಳೂರಿನಲ್ಲಿ ಜನಿಸಿದರು.ಅವರು ಆಂಧ್ರ ಸಂಗೀತ ಕುಟುಂಬಕ್ಕೆ ಸೇರಿದವರು.ಜ್ಯೋತ್ಸ್ನಾ ರವರ ತಾಯಿ ರತ್ನ ಶ್ರೀಕಂಠಯ್ಯರವರು ಸಂಗೀತಗಾರ್ತಿ ಮತ್ತು ಶಿಕ್ಷಕಿ.[೨]

ಸಂಗೀತದ ಜೀವನ[ಬದಲಾಯಿಸಿ]

ತರಬೇತಿ[ಬದಲಾಯಿಸಿ]

ಜ್ಯೋತ್ಸ್ನಾ ರವರ ಸಂಗೀತ ತರಬೇತಿಯು ಐದನೆಯ ವಯಸ್ಸಿನಲ್ಲಿಯೇ ಪ್ರಾರಂಭವಾಗಿತ್ತು.ಮೊದಲಿಗೆ ತನ್ನ ತಾಯಿ ರತ್ನ ಶ್ರೀಕಂಠಯ್ಯರವರಿಂದಲೇ ಕರ್ನಾಟಿಕ್ ಗಾಯನದ ತರಬೇತಿಯನ್ನು ಪಡೆದುಕೊಂಡರು.[೩]ಪ್ರತಿದಿನ ಆರು ಘಂಟೆಗಳ ಕಾಲ ಅಭ್ಯಾಸ ಮಾಡುವುದಲ್ಲದೇ ಹಬ್ಬದ ಅವಧಿಗಳಲ್ಲೆಲ್ಲ ಸಂಗೀತ ಕಚೇರಿಗಳಿಗೆ ಹಾಜರಾಗಿರುತ್ತಿದ್ದರು.ಅವರು ಆರನೇ ವಯಸ್ಸಿನಲ್ಲಿ, ಕುನ್ನಕ್ಕುಡಿ ವೈದ್ಯನಾಥನ್ ಎಂಬ ಕಲಾಭಿಜ್ಞರ ಪಿಟೀಲು ಪ್ರದರ್ಶನಕ್ಕೆ ಹಾಜರಾಗಿದ್ದರು.ಇದು ಅವರಿಗೆ ವಾದ್ಯದಲ್ಲಿ ತನ್ನದೇ ಆದ ಆಸಕ್ತಿಯನ್ನು ಹುಟ್ಟುಹಾಕಲು ಕಾರಣವಾಯಿತು.ನಂತರ ಅವರು ಶಾಸ್ತ್ರೀಯ ಭಾರತೀಯ ಪಿಟೀಲಿನ ಹಿರಿಯ ರಾಯಭಾರಿಯಾದಂತಹ ಆರ್.ಆರ್.ಕೇಶವಮೂರ್ತಿಯವರಿಂದ ತರಬೇತಿ ಪಡೆದರು.ಸಂಪೂರ್ಣ ಪಿಟೀಲು ವಾದಕರಾಗುವ ಸಲುವಾಗಿ ಅವರು ಬೆಂಗಳೂರಿನ ಸ್ಕೂಲ್ ಆಫ್ ಮ್ಯೂಸಿಕ್ನಲ್ಲಿ ತರಬೇತಿ ಪಡೆದು ಅಲ್ಲಿಂದ ಮುಂದಕ್ಕೆ ಉನ್ನತ ತರಬೇತಿಗಾಗಿ ಭಾರತದ ಪ್ರಸಿದ್ಧ ಸಂಯೋಜಕ ಇಳಯರಾಜ ರವರೊಂದಿಗೆ ಕೆಲಸ ಮಾಡುತ್ತಿದ್ದಂತಹ, ಪಿಟೀಲು ವಾದಕ ವಿ.ಎಸ್.ನರಸಿಂಹನ್ ಅವರೊಂದಿಗೆ ಅಧ್ಯಯನ ಮಾಡಲು ಚೆನ್ನೈ ಗೆ ಹೋದರು.ಅಲ್ಲದೇ ಅವರು ಲಂಡನ್ ನ ರಾಯಲ್ ಸ್ಕೂಲ್ ಆಫ್ ಮ್ಯೂಸಿಕ್ ನಿಂದ ಶ್ರೇಣಿಯನ್ನೂ ಪಡೆದುಕೊಂಡಿದ್ದಾರೆ.

ವೃತ್ತಿ[ಬದಲಾಯಿಸಿ]

ಜ್ಯೋತ್ಸ್ನಾ ರವರು ತಮ್ಮ ಮದುವೆಯ ನಂತರ ಲಂಡನ್ ಗೆ ತೆರಳಿದರು.ಅಲ್ಲಿ ಅವರು ತಮ್ಮ ಸಂಗ್ರಹವನ್ನು ಸಾಕ್ಷ್ಯಚಿತ್ರಗಳಿಗೆ (ಡಿಸ್ಕವರಿ ಮತ್ತು ನ್ಯಾಷನಲ್ ಜಿಯೋಗ್ರಾಫಿಕ್ ನಲ್ಲಿ) ವಿಸ್ತರಿಸಿದರು. ಜೊತೆಗೆ 'ರೆಡ್ ವಯಲಿನ್ ಫೆಸ್ಟಿವಲ್', 'ಕ್ಲೀವ್ಲ್ಯಾಂಡ್ ಮ್ಯೂಸಿಕ್ ಫೆಸ್ಟಿವಲ್' ನಂತಹ ಜಾಗತಿಕ ಸಂಗೀತ ಕಾರ್ಯಕ್ರಮಗಳಲ್ಲೂ ಪ್ರದರ್ಶನ ನೀಡಿದರು. ಜ್ಯೋತ್ಸ್ನಾ ರವರು 'ಫ್ಯೂಷನ್ ಡ್ರೀಮ್ಸ್' ಎಂಬ ತಂಡವನ್ನು ಸ್ಥಾಪಿಸಿದ್ದಾರೆ.ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ ಮತ್ತು ಲಿವರ್ಪೂಲ್ ವಿಶ್ವವಿದ್ಯಾನಿಲಯದಲ್ಲಿ , ಭಾರತೀಯ ಮತ್ತು ಪಾಶ್ಚಾತ್ಯ ಶಾಸ್ತ್ರೀಯ ಪಿಟೀಲು ನಡುವಿನ ತುಲನಾತ್ಮಕ ತಂತ್ರಗಳ ಕುರಿತು ಉಪನ್ಯಾಸ ನೀಡಿದ್ದಾರೆ. ಮುಂಬರುವ ಭಾರತೀಯ ಕಲಾವಿದರಿಗೆ ಯುನೈಟೆಡ್ ಕಿಂಗ್ಡಂನಲ್ಲಿ ಪ್ರದರ್ಶನ ನೀಡಲು 'ಧ್ರುವ' ಎಂಬ ಪ್ರತಿಷ್ಠಾನವನ್ನೂ ಸ್ಥಾಪಿಸಿದ್ದಾರೆ.ಅಲ್ಲದೇ ಅವರು ೨೦೧೨ ರಲ್ಲಿ, 'ಲಂಡನ್ ಇಂಟರ್ನ್ಯಾಷನಲ್ ಆರ್ಟ್ಸ್ ಫೆಸ್ಟಿವಲ್' ಸಮ್ಮೇಳನವನ್ನೂ ಆಯೋಜಿಸಿದ್ದಾರೆ.[೪] ಡಾ.ಎಂ.ಬಾಲಮುರಳಿಕೃಷ್ಣ,[೫] ಕದ್ರಿ ಗೋಪಾಲನಾಥ್, ಎನ್. ರವಿಕಿರಣ್, ರಂಜನಿ-ಗಾಯತ್ರಿ, ಸುಧಾ ರಘುನಾಥನ್, ಜಯಂತಿ ಕುಮಾರೇಶ್, ಸಂಜಯ್ ಸುಬ್ರಹ್ಮಣ್ಯನ್, ನಿತ್ಯಶ್ರೀ ಮಹಾದೇವನ್, ಆರ್.ಕೆ. ಶ್ರೀಕಂಠನ್,ಅರುಣಾ ಸಾಯಿರಾಮ್ ರಂತಹ ಹಲವಾರು ಕಲಾವಿದರೊಂದಿಗೆ ಜೊತೆಗೂಡಿ ಕೆಲಸ ಮಾಡಿದ್ದಾರೆ.

ಮೆಚ್ಚುಗೆ[ಬದಲಾಯಿಸಿ]

ಅವರ ಪಿಟೀಲು ನುಡಿಸುವಿಕೆ ಮತ್ತು ಸಂಗೀತ ಶೈಲಿಯನ್ನು "ಅದ್ಭುತ" ಎಂದು ಉಲ್ಲೇಖಿಸಲಾಗಿದೆ.[೬] ೨೦೦೮ ರಲ್ಲಿ ಅವರು ಲಂಡನ್ ನ ಟ್ರಿನಿಟಿ ಕಾಲೇಜ್ ಆಫ್ ಮ್ಯೂಸಿಕ್ ನಿಂದ ಕರ್ನಾಟಿಕ್ ಸಂಗೀತದಲ್ಲಿ ಫೆಲೋಶಿಪ್ ಪಡೆದುಕೊಂಡಿದ್ದಾರೆ.

ವೈಯಕ್ತಿಕ ಜೀವನ[ಬದಲಾಯಿಸಿ]

ಜ್ಯೋತ್ಸ್ನಾ ರವರು ಅಭ್ಯಾಸ ಮಾಡುವ ರೋಗಶಾಸ್ತ್ರಜ್ಞರಾಗಿದ್ದು, ಭಾರತದ ಬೆಂಗಳೂರು ವೈದ್ಯಕೀಯ ಕಾಲೇಜಿನಿಂದ ಕ್ಲಿನಿಕಲ್ ರೋಗಶಾಸ್ತ್ರದಲ್ಲಿ ಎಂಬಿಬಿಎಸ್ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ.ಅವರು ಕೆ.ವಿ ಶ್ರೀಕಾಂತ್ ಶರ್ಮಾರವರನ್ನು ಮದುವೆಯಾಗಿದ್ದಾರೆ.ಅವರಿಗೆ ಇಬ್ಬರು ಮಕ್ಕಳಿದ್ದು, ಲಂಡನ್ ನಲ್ಲಿ ವಾಸಿಸುತ್ತಿದ್ದಾರೆ.[೭]

ಧ್ವನಿ ಮುದ್ರಿಕೆ[ಬದಲಾಯಿಸಿ]

 • ಕರ್ನಾಟಿಕ್ ಲೌಂಜ್, ಟೈಮ್ಸ್ ಮ್ಯೂಸಿಕ್, ೨೦೧೧.
 • ಚಾಂಟ್ಸ್ ಫಾರ್ ಚಿಲ್ಡ್ರನ್, ಥೀಮ್ ಮ್ಯೂಸಿಕ್, ೨೦೧೧.
 • ಕರ್ನಾಟಿಕ್ ಜ್ಯಾಝ್, ಸ್ವಾತಿ ಸಂಸ್ಕೃತಿ, ೨೦೧೧.
 • ಅಲಾಯ್ಯ್ಪಾಯುದೆ, ಸಿಡಿ ಬೇಬಿ, ೨೦೧೦.
 • ಫ್ಯೂಷನ್ ಡ್ರೀಮ್ಸ್, ಸಿಡಿ ಬೇಬಿ, ೨೦೦೮
 • ಇನ್ಸೈಟ್, ಫೌಂಟೆನ್ ಮ್ಯೂಸಿಕ್, ೨೦೦೮.
 • ಲೈಫ್, ಅರ್ತನ್ಬೀಟ್, ೨೦೦೭.
 • ಕರ್ನಾಟಿಕ್ ಕನೆಕ್ಷನ್, ೨೦೧೬.

[೮]

ಉಲ್ಲೇಖಗಳು[ಬದಲಾಯಿಸಿ]

 1. https://www.darbar.org/artist/jyotsna-srikanth/86
 2. https://worldmusic.net/products/call-of-bangalore
 3. https://www.newindianexpress.com/cities/bengaluru/2012/nov/05/re-inventing-the-wheel-422628.html
 4. https://www.musicalorbit.com/musicians/Jyotsna-Srikanth
 5. "Balamuralikrishna flips 81, says he's 18". The Times of India. 7 January 2012. Retrieved 19 November 2012.
 6. https://www.pnmartists.com/jyotsna-srikanth
 7. http://chennaiyilthiruvaiyaru.com/jyotsna-srikanth/
 8. https://www.allmusic.com/artist/jyotsna-srikanth-mn0002047846